ಮಾಜಿ ಶಾಸಕ ಮೊಯ್ದೀನ್ ಬಾವ ಸಹೋದರ, ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್‌ಮನ್ ಮಮ್ತಾಜ್ ಅಲಿ ಮೃತದೇಹ ಪತ್ತೆ
ಹನಿ ಟ್ರ್ಯಾಪ್/ ಬ್ಲ್ಯಾಕ್ ಮೇಲ್: ಆತ್ಮಹತ್ಯೆ ಶಂಕೆ
ಹೊಚ್ಚ ಹೊಸ BMW ಕಾರು ಬಸ್ಸಿಗೆ ಗುದ್ದಿಸಿ ಬಳಿಕ ಕೂಳೂರು ಸೇತುವೆ ಬಳಿ ಕೀ ಸಮೇತ ಇಟ್ಟಿದ್ದರು. ಪ್ರಭಾವಿ, ಶ್ರೀಮಂತ ಉದ್ಯಮಿಯ ಸಾವಿಗೆ ಹನಿ ಟ್ರ್ಯಾಪ್/ ಬ್ಲ್ಯಾಕ್ ಮೇಲ್ ಶಂಕೆ
ಮುಡಾ ಸೈಟ್ ಮರಳಿಸಿದರೂ ಸಿದ್ದರಾಮಯ್ಯ ಮೇಲಿನ ತನಿಖೆ ನಿಲ್ಲಲ್ಲ: ಕಾನೂನು ತಜ್ಞರು
ಮುಡಾದಿಂದ ಪಡೆದ 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಹಿಂದಿರುಗಿಸಿದ್ದರೂ ಸದ್ಯದ ಮಟ್ಟಿಗೆ ತನಿಖೆಯಿಂದ ಪಾರಾಗಲು ಸಾಧ್ಯವಿಲ್ಲ.
ಒಂದು ವೇಳೆ ಆರೋಪಗಳು ಸಾಬೀತಾದರೆ ಶಿಕ್ಷೆ ಪ್ರಮಾಣ ಕಡಿತಕ್ಕೆ ಸೀಮಿತವಾಗಿ ನಿವೇಶನ ವಾಪಸಾತಿ ಸಹಾಯಕವಾಗಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಿವೇಶನ ವಾಪಸ್ ನೀಡುವ ದಿಢೀರ್ ನಿರ್ಧಾರವನ್ನು ಪಾರ್ವತಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ತೀರ್ಮಾನ ತನಿಖೆ ಮೇಲೆ ಯಾವ ಪರಿಣಾಮ ಬೀರುತ್ತದೆ, ಕಾನೂನು ಏನು ಹೇಳುತ್ತದೆ ಎಂಬ ಬಗ್ಗೆ ಹೈಕೋರ್ಟ್ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ನಿವೇಶನ ವಾಪಸ್ ನೀಡಿರುವುದು ಮುಡಾ ಪ್ರಕರಣದ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಿದ್ದರಾಮಯ್ಯ ದಂಪತಿಗೆ ಯಾವುದೇ ಅನುಕೂಲವಾಗುವುದೂ ಇಲ್ಲ. ಮುಡಾ ಹೆಸರಿಗೆ ನಿವೇಶನಗಳನ್ನು ನೋಂದಣಿ ಮಾಡಿಕೊಟ್ಟರೂ ತನಿಖೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ತಿಳಿಸಿದರು.
ಇಸ್ರೇಲ್ vs ಇರಾನ್ ; ಯುದ್ದೋನ್ಮಾದ ತೀವ್ರ ಹೆಚ್ಚಳ: ಇರಾನ್‌ಗೆ ಅಮೆರಿಕ ಎಚ್ಚರಿಕೆ.
ಟೆಹರಾನ್ : ಯುದ್ದೋನ್ಮಾದ ತೀವ್ರವಾಗಿ ಹೆಚ್ಚಾಗಿದ್ದು ಇರಾನ್ ಬುಧವಾರ(ಅ2 )ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್‌ಗೆ ಅಮೆರಿಕ ಎಚ್ಚರಿಕೆ ನೀಡಿದೆ.
ಇಸ್ರೇಲ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿ ಇರಾನ್‌ನ ದಾಳಿಯನ್ನು ನಿಷ್ಪರಿಣಾಮಕಾರಿ ಎಂದು ಬಣ್ಣಿಸಿದರು. ಇಸ್ರೇಲ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ.
ಅಮೆರಿಕ ಸೇನಾ ಪಡೆಗಳು ಇಸ್ರೇಲ್ ಮೇಲಿನ ದಾಳಿಯನ್ನು ಸೋಲಿಸಲು ಸಹಾಯ ಮಾಡಿದ್ದು, ಬೈಡೆನ್ ಆಡಳಿತವು ಇಸ್ರೇಲಿ ಅಧಿಕಾರಿಗಳೊಂದಿಗೆ ಮುಂದಿನ ಕ್ರಮಗಳ ಕುರಿತು ಸಮಾಲೋಚನೆ ನಡೆಸುತ್ತಿದೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಹೇಳಿದ್ದಾರೆ.
ಡಿಕೆಶಿ - ಪರಮೇಶ್ವರ್ ರಹಸ್ಯ ಸಭೆ! ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಚರ್ಚೆ?
ಬೆಂಗಳೂರು: ಮುಡಾ ಹಗರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಸೋಮವಾರ ರಹಸ್ಯ ಸಭೆ ನಡೆಸಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಹಾಗೂ ಪರಮೇಶ್ವರ್ ಸೋಮವಾರ ಸಭೆ ನಡೆಸಿದ್ದಾರೆ. ಮುಡಾ ಹಗರಣದಲ್ಲಿ ಲೋಕಾಯುಕ್ತ ಎಫ್‌ಐಆರ್ ದಾಖಲು ಮಾಡಿರುವುದರಿಂದ ಇನ್ನು ಸಿದ್ದರಾಮಯ್ಯ ಅವರನ್ನು ಸಮರ್ಥನೆ ಮಾಡಲು ಆಗುವುದಿಲ್ಲ. ಅವರು ರಾಜೀನಾಮೆ ಕೊಡಬೇಕು ಅಂತ ಅವರಿಬ್ಬರೂ ಚರ್ಚೆ ಮಾಡಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ ಎಂದರು.
ಸೋಮವಾರ ಸದಾಶಿವ ನಗರದಲ್ಲಿರುವ ಪರಮೇಶ್ವರ್ ಮನೆಗೆ ಡಿಕೆ ಶಿವಕುಮಾರ್ ಆಗಮಿಸಿದ್ದರು. ಇಬ್ಬರೂ ಕೆಲ ಹೊತ್ತು ಚರ್ಚೆ ನಡೆಸಿದ್ದರು. ಎತ್ತಿನಹೊಳೆ ವಿಚಾರವಾಗಿ ಚರ್ಚೆ ನಡೆಸಲಾಗಿದೆ ಎಂದು ಪರಮೇಶ್ವರ್ ಹೇ
ದರ್ಶನ್ಗೆ ಕಗ್ಗಂಟಾದ ಜಾಮೀನು; ಸಿಕ್ಕರೆ ಮನೆಯಲ್ಲಿ ದಸರಾ.. ಇಲ್ಲದಿದ್ದರೆ ಜೈಲಿನಲ್ಲೇ ಆಯುಧ ಪೂಜೆ
ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಇತ್ತು. ಇಬ್ಬರಿಗೂ ನ್ಯಾಯಾಲಯದಿಂದ ಸಿಹಿ ಸುದ್ದಿ ಸಿಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಅದು ಮತ್ತೊಮ್ಮೆ ನಿರಾಸೆಯಾಗಿದೆ. ಈ ಬಾರಿ ನ್ಯಾಯಾಧೀಶರು ಇವರ ಜಾಮೀನು ಅರ್ಜಿಯನ್ನು ಮುಂದೂಡುವುದಕ್ಕೆ ಕಾರಣ ದರ್ಶನ್ ಪರ ವಕೀಲರೇ ಕಾರಣ.
ಪವಿತ್ರಾ ಗೌಡ ಜಾಮೀನು ಅರ್ಜಿ ಸಲ್ಲಿಸಿದ ಎಷ್ಟೋ ದಿನಗಳ ಬಳಿಕ ದರ್ಶನ್ ಬೇಲ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡಗೆ ಇನ್ನೂ ಜಾಮೀನು ಅರ್ಜಿ ಸಿಕ್ಕಿಲ್ಲ. ಅಲ್ಲದೆ ದರ್ಶನ್, ಪವಿತ್ರಾ ಗೌಡ ಹಾಗೂ ಉಳಿದ ಆರೋಪಿಗಳ ಜಾಮೀನು ಅರ್ಜಿಯನ್ನು ಒಂದೇ ದಿನ ವಿಚಾರಣೆ ಮಾಡಲಾಗುತ್ತಿದೆ.
ಅಂದ್ಹಾಗೆ ಈ ಬಾರಿ ದರ್ಶನ್ ಜಾಮೀನು ಅರ್ಜಿ ಮುಂದೂಡಿಕೆಗೆ ಅವರ ವಕೀಲರೇ ಕಾರಣ. ಕಳೆದ ಬಾರಿ ವಿಚಾರಣೆ ವೇಳೆ ವಿಶೇಷ ಅಭಿಯೋಜಕರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೇಳಿದ್ದರು. ಅದರಂತೆ ಇಂದು (ಸೆಪ್ಟಂಬರ್ 30) ಆಕ್ಷೇಪಣೆಯನ್ನು
ಸಾರ್ವಜನಿಕ ಸ್ಥಳಗಳಲ್ಲಿರುವ ದೇವಸ್ಥಾನ, ಮಸೀದಿ, ಚರ್ಚ್ ಗಳನ್ನು ನೆಲಸಮ ಮಾಡಬೇಕು: ಸುಪ್ರೀಂ ಕೋರ್ಟ್
ನವದೆಹಲಿ: ಆಸ್ತಿ ಧ್ವಂಸ ವಿಚಾರದಲ್ಲಿ ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಮೀಸಲಾಗಿರದೆ ಎಲ್ಲಾ ಧರ್ಮದ ನಾಗರಿಕರಿಗೆ ಅನ್ವಯವಾಗುವ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಕೋರ್ಟ್ ನಿರ್ದೇಶನಗಳು ಭಾರತದಾದ್ಯಂತ ಅನ್ವಯಿಸುತ್ತವೆ ಹೊರತು ಒಬ್ಬ ವ್ಯಕ್ತಿ ಆರೋಪಿ ಅಥವಾ ಅಪರಾಧಿ ಎಂಬ ಕಾರಣಕ್ಕೆ ಅದು ಆಸ್ತಿ ಧ್ವಂಸಕ್ಕೆ ಆಧಾರವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ನಮ್ಮದು ಜಾತ್ಯತೀತ ರಾಷ್ಟ್ರ. ಇಲ್ಲಿ ನ್ಯಾಯಾಲಯ ಹೊರಡಿಸುವ ಆದೇಶ ಎಲ್ಲಾ ನಾಗರಿಕರಿಗೂ, ಸಂಸ್ಥೆಗಳಿಗೂ ಅನ್ವಯವಾಗುತ್ತವೆ ಹೊರತು ನಿರ್ದಿಷ್ಟ ಸಮುದಾಯಕ್ಕೆ ಅಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಒಂದು ನಿರ್ದಿಷ್ಟ ಧರ್ಮಕ್ಕೆ ವಿಭಿನ್ನ ಕಾನೂನು ಇರಬಾರದು ಎಂದು ಗಮನಿಸಿದ ನ್ಯಾಯಪೀಠ, ಸಾರ್ವಜನಿಕ ರಸ್ತೆಗಳು, ಸರ್ಕಾರಿ ಭೂಮಿ ಅಥವಾ ಅರಣ್ಯಗಳಲ್ಲಿ ಯಾವುದೇ ಅನಧಿಕೃತ ನಿರ್ಮಾಣಗಳು ತಲೆಯೆತ್ತುವಂತಿಲ್ಲ ಮತ್ತು ಅವುಗಳನ್ನು ರಕ್ಷಿಸಲೂಬಾರ
ಗನ್ನಿಂದ ಕಾಲಿಗೆ ಶೂಟ್ ಮಾಡಿಕೊಂಡ ನಟ ಗೋವಿಂದ, ಐಸಿಯುಗೆ ದಾಖಲು;
ಇದು ಆಕಸ್ಮಿಕವಾಗಿ ನಡೆದಿರೋ ಘಟನೆ. ಬುಲೆಟ್ ಫೈಯರ್ ಆಗಿದ್ದು, ಅವರ ಕಾಲಿಗೆ ತಾಗಿದೆ. ಮುಂಜನೆ 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಅವರನ್ನು ಅಂಧೇರಿಯ ಕೃತಿ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಟ ಗೋವಿಂದ ಅವರು ತಮ್ಮದೇ ಗನ್ನಿಂದ ಕಾಲಿಗೆ ಶೂಟ್ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿರುವ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸದ್ಯ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಂಡಿನ ಶಬ್ದ ಕೇಳಿದ ಬಳಿಕ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಗೋವಿಂದ ಅವರ ಗನ್ನ ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ‘ನಟ ಹಾಗೂ ಶಿವಸೇನಾ ಮುಖ್ಯಸ್ಥ ಗೋವಿಂದ ಕೋಲ್ಕತ್ತಾ ತೆರಳಲು ರೆಡಿ ಆಗುತ್ತಿದ್ದರು. ಅವರು ತಮ್ಮ ಪರವಾನಗಿ ಗನ್ನ ಇಟ್ಟುಕೊಳ್ಳುತ್ತಿದ್ದರು. ಅದು ಅವರ ಕೈ ತಪ್ಪಿದ್ದು, ಬುಲೆಟ್ ಸಿಡಿದಿದೆ. ಅವರ ಕಾಲಿಗೆ ಗುಂಡು ತಾಗಿದೆ. ವೈದ್ಯರು ಬುಲೆಟ್ನ ತೆಗೆದಿದ
ಬರುತ್ತಿದೆ ಭೀಕರ ಚಂಡಮಾರುತ; ಇಲ್ಲೆಲ್ಲಾ ಭಾರೀ ಮಳೆ ಸಾಧ್ಯತೆ, ಎಲ್ಲೋ ಅಲರ್ಟ್ ಘೋಷಣೆ!
ಈಶಾನ್ಯ ರಾಜ್ಯಗಳಿಗೆ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ನೀಡಿದೆ. ಮುಂದಿನ 4 ರಿಂದ 5 ದಿನಗಳ ಕಾಲ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ತ್ರಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಕೇರಳದಂತಹ ಪೆನಿನ್ಸುಲರ್ ಭಾರತದ ಕೆಲವು ರಾಜ್ಯಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಕೇರಳ ಮತ್ತು ತಮಿಳುನಾಡಿನಲ್ಲಿ ಮಂಗಳವಾರ ಭಾರೀ ಮಳೆಯಾಗಬಹುದು ಎಂದು ಐಎಂಡಿ ತಿಳಿಸಿದ್ದು, ಈ ಭಾಗದಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.ಅಲ್ಲದೆ, ಈಶಾನ್ಯ ರಾಜ್ಯಗಳಿಗೆ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ನೀಡಿದೆ. ಮುಂದಿನ 4 ರಿಂದ 5 ದಿನಗಳ ಕಾಲ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ತ್ರಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಮಂಗಳವಾರ ಗುಡುಗು ಸಹಿತ ಮಳೆಯಾಗುವ
ರೋಹ್ಟಾಂಗ್ ಪಾಸ್ ಮೇಲೆ ಐಎಎಫ್ ವಿಮಾನ ಅಪಘಾತಕ್ಕೀಡಾದ 56 ವರ್ಷಗಳ ನಂತರ, ಇನ್ನೂ 4 ಬಲಿಪಶುಗಳ ಪಾರ್ಥಿವ ಶರೀರ ಪತ್ತೆ
ನವದೆಹಲಿ, ಸೆ 30 (ಪಿಟಿಐ) ಹಿಮಾಚಲ ಪ್ರದೇಶದ ರೋಹ್ಟಾಂಗ್ ಪಾಸ್ ಮೇಲೆ ಭಾರತೀಯ ವಾಯುಪಡೆಯ ದುರದೃಷ್ಟಕರ ಎಎನ್ -12 ವಿಮಾನವು 56 ವರ್ಷಗಳ ಹಿಂದೆ ಪತನಗೊಂಡಿತು, ಈದೀಗ ನಾಲ್ಕು ಬಲಿಪಶುಗಳ ಪಾರ್ಥಿವ ಶರೀರವನ್ನು ಪತ್ತೆಹಚ್ಚಲಾಗಿದೆ, ಇದು ಗಮನಾರ್ಹ ಯಶಸ್ಸನ್ನು ಸೂಚಿಸುತ್ತದೆ. ಭಾರತದ ದೀರ್ಘಾವಧಿಯ ಶೋಧ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.
ಭಾರತೀಯ ಸೇನೆಯ ಡೋಗ್ರಾ ಸ್ಕೌಟ್ಸ್ ಮತ್ತು ತಿರಂಗಾ ಮೌಂಟೇನ್ ಪಾರುಗಾಣಿಕಾ ಸಿಬ್ಬಂದಿಯನ್ನು ಒಳಗೊಂಡ ಜಂಟಿ ತಂಡವು ಮೃತ ದೇಹಗಳನ್ನು ಪತ್ತೆ ಮಾಡಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
102 ಜನರನ್ನು ಹೊತ್ತಿದ್ದ ಅವಳಿ-ಎಂಜಿನ್ ಟರ್ಬೊಪ್ರಾಪ್ ಸಾರಿಗೆ ವಿಮಾನವು ಫೆಬ್ರವರಿ 7, 1968 ರಂದು ಚಂಡೀಗಢದಿಂದ ಲೇಹ್‌ಗೆ ಹಾರುತ್ತಿದ್ದಾಗ ನಾಪತ್ತೆಯಾಗಿತ್ತು.
"ಅಸಾಧಾರಣ ಬೆಳವಣಿಗೆಯಲ್ಲಿ, 1968 ರಲ್ಲಿ ರೋಹ್ಟಾಂಗ್ ಪಾಸ್ನಲ್ಲಿ ಅಪಘಾತಕ್ಕೀಡಾದ AN-12 ವಿಮಾನದಿಂದ ಸಿಬ್ಬಂದಿಗಳ ಅವಶೇಷಗಳನ್ನು ಮರುಪಡೆಯಲು ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ" ಎಂದ
ಸೂಪರ್ ಸ್ಟಾರ್ ರಜಿನಿಕಾಂತ್ ಅಸ್ವಸ್ಥ; ಆಸ್ಪತ್ರೆಗೆ ದಾಖಲು.
ಚೆನ್ನೈ: ಕಾಲಿವುಡ್ ನಟ ರಜಿನಿಕಾಂತ್ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ(ಸೆ.30ರಂದು) ತಡರಾತ್ರಿ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ರಜಿನಿಕಾಂತ್ ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ಅವರ ಆರೋಗ್ಯದಲ್ಲಿ ಏರುಪೇರಾಗಿದೆ.ಕೂಡಲೇ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲಾಗಿದೆ ಎಂದು ವರದಿ ಆಗಿದೆ. ಮೂಲಗಳ ಪ್ರಕಾರ ರಜಿನಿಕಾಂತ್ ಅವರಿಗೆ ಹೃದಯ ಸಂಬಂಧಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸದ್ಯ ಅವರ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಆದರೆ ಇದುವರೆಗೆ ಆಸ್ಪತ್ರೆ ಅಥವಾ ಕುಟುಂಬದವರಿಂದ ಅಧಿಕೃತ ಹೇಳಿಕೆ ಬಂದಿಲ್ಲ. ಆ ಕಾರಣದಿಂದ ರಜಿನಿ ಅಭಿಮಾನಿಗಳು ಆತಂಕದಲ್ಲಿದ್ದಾರೆ. ದಶಕದ ಹಿಂದೆ ಸೂಪರ್‌ಸ್ಟಾರ್ ಸಿಂಗಾಪುರದಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ರಾಜಕೀಯ ರಂಗಕ್ಕೆ ಪ್ರವೇಶ ಪಡೆಯುವ ನಿರ್ಧಾರದಲ್ಲಿದ್ದ ಅವರು ಆರೋಗ್ಯ ಸಮಸ್ಯೆಯ ಕಾರಣ ಕೊಟ್ಟು ರಾಜಕೀಯದಿಂದ ದೂರ ಉಳಿದಿದ್ದಾರೆ.
ರಜಿನಿಕಾಂತ
ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್‌ಲೈನ್ ಕಣ್ಣು !
ಬೆಂಗಳೂರು: ನೋವು ನಿವಾರಕ (ಪೇನ್ ಕಿಲ್ಲರ್) ಔಷಧಗಳ ಮೇಲೆ ಕಣ್ಣಿಟ್ಟಿರುವ ಮಾದಕ ವ್ಯಸನಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅತೀ ಹೆಚ್ಚಾಗಿ ಬಳಕೆಯಾಗುವ ನೋವು ನಿವಾರಕ ಮಾತ್ರೆಗಳನ್ನೇ “ನಶೆ’ ಏರಿಸಿ ಕೊಳ್ಳಲು ಬಳಸಲಾಗುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಇದಕ್ಕೆ ಅಂಕೆ ಹಾಕಲು ಕರ್ನಾಟಕ ಔಷಧ ನಿಯಂತ್ರಕ ಇಲಾಖೆಯು “ಆನ್‌ಲೈನ್ ಟ್ರ್ಯಾಕಿಂಗ್’ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಇದರಿಂದಾಗಿ ನೀವು ವೈದ್ಯರ ಚೀಟಿ ಇಲ್ಲದೆ ನಿರ್ದಿಷ್ಟ ನೋವು ನಿವಾರಕಗಳನ್ನು ಖರೀದಿಸುವ ಹಾಗಿಲ್ಲ ಹಾಗೂ ನಿಮ್ಮ ವಿವರಗಳನ್ನು ಔಷಧ ಅಂಗಡಿಯವರಿಗೆ ನೀಡಬೇಕಾಗುತ್ತದೆ. ಅಂದರೆ ಈ ನೋವು ನಿವಾರಕ ಮಾತ್ರೆಗಳ ನೈಜ ದತ್ತಾಂಶ
ಆಧಾರಿತ ಮಾಹಿತಿಯ ನಿರ್ವಹಣೆ ಮಾಡಲಾಗುತ್ತಿದೆ.ರಾಜ್ಯದಲ್ಲಿ ಟಪೆಂಟಾಡಾಲ್ ಜನರಿಕ್ ಹೆಸರಿನ 30ರಿಂದ 40 ಕಂಪೆನಿಗಳ ನೋವು ನಿವಾರಕ ಮಾತ್ರೆಗಳು ವೈದ್ಯರ ಸಲಹೆ ಚೀಟಿ ಇಲ್ಲದೆಯೂ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿವೆ.
ಮೊದಲ ಹಂತದಲ್
ಉತ್ತರಾಖಂಡ: ಮನೆಯ ಹೊರಗೆ ಆಟವಾಡುತ್ತಿದ್ದ 3 ವರ್ಷದ ಮಗುವನ್ನು ಎಳೆದೊಯ್ದ ಚಿರತೆ
ನರಭಕ್ಷಕ ಚಿರತೆಯೊಂದು ಮನೆಯ ಹೊರಗೆ ಆಟವಾಡುತ್ತಿದ್ದ 3 ವರ್ಷದ ಮಗುವನ್ನು ಎಳೆದೊಯ್ದಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಮಕ್ಕಳೆಲ್ಲರೂ ಮಗುವಿನ ಜತೆ ಆಟವಾಡುತ್ತಿದ್ದರು, ಆಗ ದಾಳಿ ಮಾಡಿದ ಚಿರತೆ ಮಗುವನ್ನು ಬಾಯಲ್ಲಿ ಕಚ್ಚಿಕೊಂಡು ಓಡಿದೆ. ಬಳಿಕ ಕೊಂದಿದೆ, ವಿರೂಪಗೊಂಡಿರುವ ಮಗುವಿನ ದೇಹ ಮನೆಯ ಹತ್ತಿರದ ಪೊದೆಯೊಂದರಲ್ಲಿ ಪತ್ತೆಯಾಗಿದೆ.ಅಂಕಿತ್ ಕುಮಾರ್ ಅವರ ಮಗ ರಾಜ್ ಕುಮಾರ್ ತನ್ನ ತಾಯಿಯ ಚಿಕ್ಕಪ್ಪನ ಮಕ್ಕಳೊಂದಿಗೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಸಂಜೆ 5 ಗಂಟೆ ಸುಮಾರಿಗೆ ಪುರ್ವಾಲ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ತೆಹ್ರಿ ಅರಣ್ಯ ವಿಭಾಗದ ಭಿಲಾಂಗನಾ ರೇಂಜ್ ಆಫೀಸರ್ ಆಶಿಶ್ ನೌಟಿಯಾಲ್ ಮತ್ತು ಪುರ್ವಾಲ್ ಗ್ರಾಮದ ಮುಖ್ಯಸ್ಥ ಸಂಜಯ್ ತಿವಾರಿ ಮಾತನಾಡಿ, ಮಗು ಆಟವಾಡುತ್ತಿದ್ದಾಗ ಮನೆಯ ಹಿಂದೆ ಚಿರತೆ ಹೊಂಚುಹಾಕಿ ಕುಳಿತಿತ್ತು.
ಮನೆಯಲ್ಲಿ ಮಗನನ್ನು ಕಾಣದ ಮಂಜು ದೇವಿ ಹುಡುಕಾಟ ಆರಂಭಿಸಿದರು. ಬಳಿಕ ಆಕೆಯ ನೆರೆಹೊರೆಯವರು ಕೂಡ ಹುಡುಕಿದರೂ ಎಲ್ಲೂ ಮಗು ಪತ್ತೆಯಾ