23/11/2024
*ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು. ಕೆಸಿ ರೋಡ್ ಜಂಕ್ಷನ್ ನಲ್ಲಿ ಸಿಹಿ ಹಂಚಿ ಕಾರ್ಯಕರ್ತರಿಂದ ಸಂಭ್ರಮಾಚರಣೆ*
ತಲಪಾಡಿ ( ನ 23) : ಕರ್ನಾಟಕ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯಸಾಧಿಸಿದ ಹಿನ್ನಲೆಯಲ್ಲಿ ತಲಪಾಡಿ ವಲಯ ಕಾಂಗ್ರೆಸ್ ವತಿಯಿಂದ ಇಂದು ಕೆಸಿ ರೋಡ್ ಜಂಕ್ಷನ್ ನಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು ಕೆಸಿ ರೋಡ್ ನಿಂದ ಕೆಸಿ ನಗರದ ವರೆಗೆ ವಾದ್ಯಗೋಷ್ಠಿಗಳೊಂದಿಗೆ ವಿಜಯೋತ್ಸವ ಮೆರವಣಿಗೆ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಮೂರೂ ಕ್ಷೇತ್ರದ ಗೆಲುವು ಸಿದ್ದರಾಮಯ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಗೆಲುವು. ಮೂಡ ಎಂಬ ಗುಮ್ಮ ತೋರಿಸಿ, ವಖ್ಫ್ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ವಿಭಜಿಸಿ ಮತ ಪಡೆಯಲು ಹೊಂಚುಹಾಕಿದ್ದ ಬಿಜೆಪಿಗೆ ಪ್ರಜ್ಞಾವಂತ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಸುರೇಖಾ ಚಂದ್ರಹಾಸ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ, ವಲಯ ಕಾಂಗ್ರೆಸ್ ಉಪಾಧ್ಯಕ್ಷ ಸಲಾಂ ಕೆಸಿ ರೋಡ್, ಶಾಸಕರ ಆಪ್ತ ಕಾರ್ಯದರ್ಶಿ ಮನ್ಸೂರ್ ಮಂಚಿಲ, ಗ್ರಾಪಂ ಸದಸ್ಯ ವೈಭವ್ ಶೆಟ್ಟಿ ತಲಪಾಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಉಸ್ಮಾನ್ ಕಲ್ಲಾಪು, ಜಿಯಾದ್ ಮುಕ್ಕಚ್ಚೇರಿ, ಇಬ್ರಾಹಿಂ ಟಿ. ಎಂ, ಸಲಾಂ ಪಿಲಿಕೂರು, ಕೋಟೆಕಾರ್ ಪಂಚಾಯತ್ ಕೌನ್ಸಿಲರ್ ಅಹಮದ್ ಅಜ್ಜಿನಡ್ಕ, ಇಸಾಕ್ ಕೋಟೆಕಾರ್, ವಲಯ ಉಪಾಧ್ಯಕ್ಷರಾದ ವಿನಯ್ ಕುಮಾರ್ ಶೆಟ್ಟಿ, ವಸಂತಿ ತಲಪಾಡಿ, ಕಾರ್ಯದರ್ಶಿಗಳಾದ ಅಬ್ಬಾಸ್ ಪಂಜಳ, ರಾಜೇಶ್ ಕೊಟ್ಟಾರಿ, ಬಿ. ಎಸ್ ಇಸ್ಮಾಯಿಲ್, ಕೋಶಾಧಿಕಾರಿ ಯಾಕೂಬ್ ಪಿಲಿಕೂರು. ಸಚ್ಚಿದಾನಂದ ಶೆಟ್ಟಿ, ಅಬ್ದುಲ್ ಖಾದರ್ ಮಕ್ಯಾರ್,ಲತಾ ವಿಶ್ವನಾಥ್, ಗೋಪಾಲ್ ತಚ್ಚಾನಿ, ರವೀಂದ್ರ ಟಿ. ಎಂ, ಬಶೀರ್ ಕೊಳಂಗರೆ ಮತ್ತಿತರರು ಭಾಗವಹಿಸಿದ್ದರು.