Kattar Hindu Kannada

Kattar Hindu Kannada ಸೋಶಿಯಲ್ ಮೀಡಿಯಾ ಈಗ ಸೈನಿಕನ
ಕೈಯಲ್ಲಿರುವ ಬಂದೂಕಿನ ಹಾಗೆ, ಪ್ರತಿಯೊಬ್ಬರು ತಮ್ಮ ಮಾತು,ಅನುಭವ ಹಂಚಿಕೊಳ್ಳುವ ವೇದಿಕೆ

https://youtu.be/zeh6CJzmgXQ?si=uFRBi0sydA02BW5-
25/02/2024

https://youtu.be/zeh6CJzmgXQ?si=uFRBi0sydA02BW5-

ರಾಮಾಯಣ ಶ್ರೀರಾಮ ನಿಜ ಸುಳ್ಳು ಕಲ್ಪನೆ [proof] #ರಾಮಾಯಣರಾಮಾಯಣ ಒಂದು ಕಲ್ಪನೆ, ಸುಳ್ಳು, ಅಂತ ಹೇಳುವವರಿಗೆ ಈ ವಿಡಿ....

ರಾಮಾಯಣ ಡೀಕೋಡೆಡ್ a2+b2+2ab=(a+b)2
21/01/2024

ರಾಮಾಯಣ ಡೀಕೋಡೆಡ್ a2+b2+2ab=(a+b)2

29/11/2023

Hi everyone! 🌟 You can support me by sending Stars – they help me to keep making content that you love.

Whenever you see the Stars icon, you can send me Stars.

26/11/2023

Hi

...ರಾವಣನಿಂದ ಭಯಪಡಿಸಲ್ಪಟ್ಟ ದೇವಕನ್ಯೆಯಂತಿದ್ದ ಆ ಸೀತಾದೇವಿಯು ರಾಕ್ಷಸಸ್ತ್ರೀಯರ ಮಧ್ಯದಲ್ಲಿ ಬಿಕ್ಕಿ-ಬಿಕ್ಕಿ ಅಳುತ್ತಾ ದುಃಖಾರ್ತೆಯಾಗಿ ಶಾಂತಿ...
10/12/2022

...ರಾವಣನಿಂದ ಭಯಪಡಿಸಲ್ಪಟ್ಟ ದೇವಕನ್ಯೆಯಂತಿದ್ದ ಆ ಸೀತಾದೇವಿಯು ರಾಕ್ಷಸಸ್ತ್ರೀಯರ ಮಧ್ಯದಲ್ಲಿ ಬಿಕ್ಕಿ-ಬಿಕ್ಕಿ ಅಳುತ್ತಾ ದುಃಖಾರ್ತೆಯಾಗಿ ಶಾಂತಿಯನ್ನು ಕಳೆದುಕೊಂಡಿದ್ದಳು....

ಶ್ಲೋಕ :

ಸಾ ರಾಕ್ಷಸೀಮಧ್ಯಗತಾ ಸೀತಾ ಸುರಸುತೋಪಮಾ|
ನ ಶರ್ಮ ಲೇಭೇ ದುಃಖಾರ್ತಾ ರಾವಣೇನ ಚ ತರ್ಜಿತಾ||4||

ವೇಪತೇ ಸ್ಮಾಧಿಕಂ ಸೀತಾ ವಿಶಂತೀವಾಂಗಮಾತ್ಮನಃ|
ವನೇ ಯೂಥ ಪರಿಭ್ರಷ್ಟಾ ಮೃಗೀ ಕೋಕೈರಿವಾರ್ದಿತಾ||5||

ಸಾತ್ವಶೋಕಸ್ಯ ವಿಪುಲಾಂ ಶಾಕಾಮಾಲಂಬ್ಯ ಪುಷ್ಪಿತಾಮ್|
ಚಿಂತಯಾಮಾಸ ಶೋಕೇನ ಭರ್ತಾರಂ ಭಗ್ನಮಾನಸಾ||6||

ಅರ್ಥ :

ರಾವಣನಿಂದ ಭಯಪಡಿಸಲ್ಪಟ್ಟ ದೇವಕನ್ಯೆಯಂತಿದ್ದ ಆ ಸೀತಾದೇವಿಯು ರಾಕ್ಷಸಸ್ತ್ರೀಯರ ಮಧ್ಯದಲ್ಲಿ ಬಿಕ್ಕಿ-ಬಿಕ್ಕಿ ಅಳುತ್ತಾ ದುಃಖಾರ್ತೆಯಾಗಿ ಶಾಂತಿಯನ್ನು ಕಳೆದುಕೊಂಡಿದ್ದಳು.||4||

ಅರಣ್ಯದಲ್ಲಿ ಗುಂಪಿನಿಂದ ತಪ್ಪಿಸಿ ಕೊಂಡು ತೋಳಗಳ ಮಧ್ಯದಲ್ಲಿ ಸಿಕ್ಕಿ ಪೀಡಿಸಲ್ಪಡುವ ಜಿಂಕೆಯಂತೆ ಸೀತಾದೇವಿಯು ತನ್ನ ಶರೀರವನ್ನು ಮುದುಡಿಸಿಕೊಂಡು ಗಡ-ಗಡನೆ ನಡುಗುತ್ತಿದ್ದಳು.||5||

ಶೋಕಾಭಿಭೂತೆಯಾಗಿ, ಭಗ್ನಮಾನಸಳಾದ ಸೀತಾದೇವಿಯು ಚೆನ್ನಾಗಿ ಅರಳಿದ ಹೂವು ಗಳಿಂದೊಡಗೊಂಡ ಅಶೋಕ ವೃಕ್ಷದ ಒಂದು ದೊಡ್ಡ ಟೊಂಗೆ ಯನ್ನು ಆಧರಿಸಿಕೊಂಡು ಪತಿಯನ್ನು ಚಿಂತಿಸುತ್ತಾ ಇದ್ದಳು.||6||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತೈನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಸೀತಾದೇವಿಯು ರಾಕ್ಷಸಿಯರ ಮಾತುಗಳನ್ನು ತಿರಸ್ಕರಿಸುತ್ತಾ ಶೋಕಸಂತಪ್ತಳಾಗಿ ವಿಲಪಿಸಿದುದನ್ನು ಸುಂದರಕಾಂಡದ 25ನೇ ಅಧ್ಯಾಯದಲ್ಲಿ ಕಾಣಬಹುದು.......
08/12/2022

....ಸೀತಾದೇವಿಯು ರಾಕ್ಷಸಿಯರ ಮಾತುಗಳನ್ನು ತಿರಸ್ಕರಿಸುತ್ತಾ ಶೋಕಸಂತಪ್ತಳಾಗಿ ವಿಲಪಿಸಿದುದನ್ನು ಸುಂದರಕಾಂಡದ 25ನೇ ಅಧ್ಯಾಯದಲ್ಲಿ ಕಾಣಬಹುದು....

ಶ್ಲೋಕ :

ತಥಾ ತಾಸಾಂ ವದಂತೀನಾಂ ಪರುಷಂ ದಾರುಣಂ ಬಹು|
ರಾಕ್ಷಸೀನಾಮಸೌಮ್ಯಾನಾಂ ರುರೋದ ಜನಕಾತ್ಮಜಾ||1||

ಏವಮುಕ್ತಾ ತು ವೈದೇಹೀ ರಾಕ್ಷಸೀಭಿರ್ಮನಸ್ವಿನೀ|
ಉವಾಚ ಪರಮತ್ರಸ್ತಾ ಬಾಷ್ಪಗದ್ಗದಯಾ ಗಿರಾ||2||

ನ ಮಾನುಷೀ ರಾಕ್ಷಸಸ್ಯ ಭಾರ್ಯಾ ಭವಿತುಮರ್ಹತಿ|
ಕಾಮಂ ಖಾದತ ಮಾಂ ಸರ್ವಾ ನ ಕರಿಷ್ಯಾಮಿ ವೋವಚಃ||3||

ಅರ್ಥ :

ಕ್ರೂರಸ್ವಭಾವದ ಆ ರಾಕ್ಷಸಿಯರು ಹೆಚ್ಚಾಗಿ ಭಯಪಡಿಸುವ ಕಠೋರವೂ, ದಾರುಣವೂ ಆದ ಮಾತುಗಳನ್ನು ಕೇಳಿ ಜಾನಕಿಯು ಅಳತೊಡಗಿದಳು.||1||

ಭಯಗ್ರಸ್ತಳಾಗಿದ್ದರೂ ಪಾತಿವ್ರತ್ಯದಲ್ಲಿ ದೃಢಚಿತ್ತಳಾಗಿದ್ದ ಸೀತಾದೇವಿಯು ಕಣ್ಣೀರಿಡುತ್ತಾ ಗದ್ಗದವಾದ ಸ್ವರದಿಂದ ಕೊಡಿ ತಡವರಿಸುತ್ತಾ ಹೀಗೆ ಹೇಳಿದಳು - ||2||

ರಾಕ್ಷಸಸ್ತ್ರೀಯರೇ! ಮನುಷ್ಯ ಸ್ತ್ರೀಯು ರಾಕ್ಷಸನ ಭಾರ್ಯೆಯಾಗಲು ಖಂಡಿತವಾಗಿ ಅರ್ಹಳಲ್ಲ. ನೀವು ಬಯಸುವಿರಾದರೆ ಎಲ್ಲರೂ ನನ್ನನ್ನು ತಿಂದು ಬಿಡಿ. ನಾನು ಮಾತ್ರ ನಿಮ್ಮ ಮಾತಿನಂತೆ ಎಂದಿಗೂ ನಡೆದು ಕೊಳ್ಳುವುದಿಲ್ಲ.||3||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತೈದನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಇಂದಿಗೆ ಸುಂದರಕಾಂಡದ ಇಪ್ಪತ್ತನಾಲ್ಕನೇ ಅಧ್ಯಾಯ ಮುಗಿಯಿತು.... ಶ್ಲೋಕ :ತತಃ ಶೂರ್ಪಣಖಾ ನಾಮ ರಾಕ್ಷಸೀ ವಾಕ್ಯಮಬ್ರವೀತ್|ಅಜಾಮುಖ್ಯಾ ಯದುಕ್ತಂ...
07/12/2022

....ಇಂದಿಗೆ ಸುಂದರಕಾಂಡದ ಇಪ್ಪತ್ತನಾಲ್ಕನೇ ಅಧ್ಯಾಯ ಮುಗಿಯಿತು....

ಶ್ಲೋಕ :

ತತಃ ಶೂರ್ಪಣಖಾ ನಾಮ ರಾಕ್ಷಸೀ ವಾಕ್ಯಮಬ್ರವೀತ್|
ಅಜಾಮುಖ್ಯಾ ಯದುಕ್ತಂ ಹಿ ತದೇವ ಮಮ ರೋಚತೇ||46||

ಸುರಾ ಚಾನೀಯತಾಂ ಕ್ಷಿಪ್ರಂ ಸರ್ವಶೋಕವಿನಾಶಿನೀ|
ಮಾನುಷಂ ಮಾಂಸಮಾಸ್ವಾದ್ಯ ನೃತ್ಯಾಮೋಥನಿಕುಂಭಿಲಾಮ್||47||

ಏವಂ ಸಂಭರ್ತ್ಸ್ಯಮಾನಾ ಸಾ ಸೀತಾ ಸುರಸುತೋಪಮಾ|
ರಾಕ್ಷಸೀಭಿಃ ಸುಘೋರಾಭಿರ್ಧೈರ್ಯಮುತ್ಸೃಜ್ಯರೋದಿತಿ||48||

ಇತ್ಯಾರ್ಷೇ ಶ್ರೀಮದ್ರಾಮಾಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಚತುರ್ವಿಂಶಃ ಸರ್ಗಃ||24||

ಅರ್ಥ :

ಆಗ ಶೂರ್ಪನಖಿ ಎಂಬ ರಕ್ಕಸಿಯು ಹೇಳುತ್ತಾಳೆ ಸಖಿಯರೇ! ಅಜಾಮುಖಿಯು ಹೇಳುತ್ತಿರುವುದು ನನಗೂ ಸಮ್ಮತವಾಗಿದೆ. ಸರ್ವಶೋಕವನ್ನು ವಿನಾಶ ಗೊಳಿಸುವ ಮದ್ಯವನ್ನು ಬೇಗನೇ ತನ್ನಿರಿ. ಮದ್ಯದೊಡನೆ ಮನುಷ್ಯ ಮಾಂಸವನ್ನು ಭಕ್ಷಿಸಿ ನಿಕುಂಭಿಳೆಯೆಂಬ ಭದ್ರಕಾಲಿಯ ಸನ್ನಿಧಿಯಲ್ಲಿ ನರ್ತಿಸೋಣ.||46-47||

ವಿಕಾರರೂಪಿಣಿಯರಾದ ರಾಕ್ಷಸಿಯರು ದೇವಕನ್ಯೆಯಂತಿದ್ದ ಸೀತಾದೇವಿಯನ್ನು ಹೀಗೆ ಭಯಗೊಳಿಸುತ್ತಿರುವಾಗ ಸೀತೆಯು ಧೈರ್ಯವನ್ನು ಕಳಕೊಂಡು ಅಳತೊಡಗಿದಳು.||48||

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಇಪ್ಪತ್ತನಾಲ್ಕನೆಯ ಸರ್ಗವು ಮುಗಿಯಿತು.||24||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

...."ಗೆಳತಿಯರೇ! ನಾವೆಲ್ಲ ಸೇರಿ ಇವಳನ್ನು ಕತ್ತರಿಸಿ ಚೂರು-ಚೂರುಮಾಡಿ ಮಾಂಸಖಂಡಗಳೆಲ್ಲವನ್ನೂ ಉಂಡೆಗಳನ್ನಾಗಿಮಾಡಿ ಸಮಾನವಾಗಿ ಹಂಚಿಕೊಂಡು ಔತಣವನ್...
05/12/2022

...."ಗೆಳತಿಯರೇ! ನಾವೆಲ್ಲ ಸೇರಿ ಇವಳನ್ನು ಕತ್ತರಿಸಿ ಚೂರು-ಚೂರುಮಾಡಿ ಮಾಂಸಖಂಡಗಳೆಲ್ಲವನ್ನೂ ಉಂಡೆಗಳನ್ನಾಗಿಮಾಡಿ ಸಮಾನವಾಗಿ ಹಂಚಿಕೊಂಡು ಔತಣವನ್ನು ಮಾಡೋಣ ಎಂದು ಸೀತೆಯನ್ನು ಹೆದರಿಸಲು ಪ್ರಯತ್ನಿಸಿದ ರಾಕ್ಷಸಿಯರು"....

ಶ್ಲೋಕ :

ನಿವೇದ್ಯತಾಂ ತತೋ ರಾಜ್ಞೇ ಮಾನುಷೀ ಸಾ ಮೃತೇತಿ ಹ|
ನಾತ್ರ ಕಶ್ಚನ ಸಂದೇಹಃ ಖಾದತೇತಿ ಸ ವಕ್ಷ್ಯತಿ||43||

ತತಸ್ತ್ವಜಾಮುಖೀ ನಾಮ ರಾಕ್ಷಸೀ ವಾಕ್ಯಮಬ್ರವೀತ್|
ವಿಶಸ್ಯೇಮಾಂ ತತಃ ಸರ್ವಾಃ ಸಮಾನ್ ಕುರುತ ಪಿಂಡಕಾನ್||44||

ವಿಭಜಾಮ ತತಃ ಸರ್ವಾಃ ವಿವಾದೋ ಮೇ ನ ರೋಚತೇ|
ಪೇಯಮಾನೀಯತಾಂ ಕ್ಷಿಪ್ರಂ ಲೇಹ್ಯಮುಚ್ಚಾವಚಂ ಬಹು||45||

ಅರ್ಥ :

ಆಗ ನಮ್ಮ ರಾಜನು ನಮಗೆ 'ಅವಳನ್ನು ತಿಂದುಬಿಡಿ' ಎಂದು ಆಜ್ಞಾಪಿಸುವನು. ಇದರಲ್ಲಿ ಸಂದೇಹವೇ ಇಲ್ಲ.||43||

ಅನಂತರ ಅಜಾಮುಖಿ ಎಂಬ ರಾಕ್ಷಸಿಯು ಇಂತು ಅರುಹಿದಳು - "ಗೆಳತಿಯರೇ! ನಾವೆಲ್ಲ ಸೇರಿ ಇವಳನ್ನು ಕತ್ತರಿಸಿ ಚೂರು-ಚೂರುಮಾಡಿ ಮಾಂಸಖಂಡಗಳೆಲ್ಲವನ್ನೂ ಉಂಡೆಗಳನ್ನಾಗಿಮಾಡಿ ಸಮಾನವಾಗಿ ಹಂಚಿಕೊಳ್ಳೋಣ. ಹಂಚಿಕೆಯ ವಿಷಯದಲ್ಲಿ ವಿವಾದ ಉಂಟಾಗುವುದು ನನಗೆ ರುಚಿಸುವುದಿಲ್ಲ. ಇವಳ ಮಾಂಸದ ಜೊತೆಗೆ ಕುಡಿಯಲು ಮದ್ಯವನ್ನು, ವಿಧ - ವಿಧವಾದ ಲೇಹ್ಯ - ಚೋಷ್ಯಗಳನ್ನು ತಂದು ನಾವೆಲ್ಲರೂ ಔತಣವನ್ನು ಮಾಡೋಣ.||44-45||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

.... "ವ್ಯರ್ಥವಾಗಿ ಆಲೋಚಿಸುತ್ತಾ ಸುಮ್ಮನೆ ಏಕೆ ಕುಳಿತಿರುವಿರಿ? ಮೂರ್ಖಳಾದ ಇವಳ ಕತ್ತನ್ನು ಹಿಸುಕಿ ಕೊಂದುಬಿಡೋಣ ಮತ್ತೆ ಈ ಮಾನವ ಕಾಂತೆಯು ಸತ್ತ...
02/12/2022

.... "ವ್ಯರ್ಥವಾಗಿ ಆಲೋಚಿಸುತ್ತಾ ಸುಮ್ಮನೆ ಏಕೆ ಕುಳಿತಿರುವಿರಿ? ಮೂರ್ಖಳಾದ ಇವಳ ಕತ್ತನ್ನು ಹಿಸುಕಿ ಕೊಂದುಬಿಡೋಣ ಮತ್ತೆ ಈ ಮಾನವ ಕಾಂತೆಯು ಸತ್ತುಹೋದಳೆಂದು ರಾವಣನ ಬಳಿಗೆ ಹೋಗಿ ಹೇಳಿಬಿಡೋಣ ಎಂದ ರಾಕ್ಷಸಿಯರು....

ಶ್ಲೋಕ :

ಇಮಾಂ ಹರಿಣಲೋಲಾಕ್ಷೀಂ ತ್ರಾಸೋತ್ಕಂಪಿಪಯೋಧರಾಮ್|
ರಾವಣೇನ ಹೃತಾಂ ದೃಷ್ಟ್ವಾದೌಹೃದೋಮೇಮಹಾನಭೂತ್||40||

ಯಕೃತ್ ಪ್ಲೀಹ ಮಥೋತ್ಪೀಡಂ ಹೃದಯಂ ಚ ಸಬಂಧನಮ್ |
ಅಂತ್ರಾಣ್ಯಪಿ ತಥಾ ಶೀರ್ಷಂ ಖಾದೇಯಮಿತಿ ಮೇ ಮತಿಃ||41||

ತತಸ್ತು ಪ್ರಘಸಾ ನಾಮ ರಾಕ್ಷಸೀ ವಾಕ್ಯಮಬ್ರವೀತ್|
ಕಂಠಮಸ್ಯಾ ನೃ ಶಂಸಾಯಾಃ ಪೀಡಯಾಮ ಕಿಮಾಸ್ಯತೇ||42||

ಅರ್ಥ :

ಭಯದಿಂದ ಕಂಪಿಸುತ್ತಿರುವ ವಕ್ಷಸ್ಥವುಳ್ಳವಳೂ, ಜಿಂಕೆ ಯಂತೆ ಹೆದರಿದ ಚಂಚಲ ಕಣ್ಣುಗಳುಳ್ಳವಳೂ, ರಾವಣನಿಂದ ಅಪಹರಿಸಿ ತಂದಿರುವ ಈ ಸೀತೆಯನ್ನು ನೋಡಿ ಗರ್ಭಿಣಿಯರಂತೆ ನನಗೆ ಮಹತ್ತರವಾದೊಂದು ಬಯಕೆ ಉಂಟಾಗಿದೆ.||40||

ಇವಳ ಹೃದಯದ ಬಲಭಾಗದಲ್ಲಿರುವ ಕಾಲಖಂಡ (ಯಕೃತ್ತು) ಎಂಬ ಮಾಂಸಖಂಡವನ್ನು ಎಡಭಾಗದಲ್ಲಿರುವ ಗುಲ್ಮ (ಪ್ಲೀಹ) ಎಂಬ ಮಾಂಸ ಖಂಡವನ್ನು ಎದೆಯ ಮೇಲಿರುವ ಮಾಂಸವನ್ನು ಕರುಳುಗಳನ್ನು, ತಲೆಯನ್ನು ತಿಂದುಹಾಕಿಬಿಡಬೇಕೆಂಬ ಬುದ್ಧಿಯು ನನಗೆ ಉಂಟಾಗಿದೆ.||41||

ಬಳಿಕ ಪ್ರಘಸಾ ಎಂಬ ರಾಕ್ಷಸಿಯು ಹೀಗೆ ಹೇಳಿದಳು- "ವ್ಯರ್ಥವಾಗಿ ಆಲೋಚಿಸುತ್ತಾ ಸುಮ್ಮನೆ ಏಕೆ ಕುಳಿತಿರುವಿರಿ?
ಮೂರ್ಖಳಾದ ಇವಳ ಕತ್ತನ್ನು ಹಿಸುಕಿ ಕೊಂದುಬಿಡೋಣ ಮತ್ತೆ ಈ ಮಾನವ ಕಾಂತೆಯು ಸತ್ತುಹೋದಳೆಂದು ರಾವಣನ ಬಳಿಗೆ ಹೋಗಿ ಹೇಳಿಬಿಡೋಣ.||42||

ಮುಂದುವರೆಯುತ್ತದೆ....

#ಸನಾತನಧರ್ಮ

#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಸರ್ವರಾಕ್ಷಸರಿಗೆ ಸ್ವಾಮಿಯಾದ ರಾವಣನಿಗೆ ನೀನು ಭಾರ್ಯೆ ಯಾಗಿ ಅವನನ್ನು ಸೇವಿಸು. ಹೇಳಿದಂತೆ ನಡೆದುಕೊಳ್ಳದಿದ್ದರೆ ನಿನ್ನ ಎದೆಯನ್ನು ಸೀಳಿ ನಿ...
01/12/2022

....ಸರ್ವರಾಕ್ಷಸರಿಗೆ ಸ್ವಾಮಿಯಾದ ರಾವಣನಿಗೆ ನೀನು ಭಾರ್ಯೆ ಯಾಗಿ ಅವನನ್ನು ಸೇವಿಸು. ಹೇಳಿದಂತೆ ನಡೆದುಕೊಳ್ಳದಿದ್ದರೆ ನಿನ್ನ ಎದೆಯನ್ನು ಸೀಳಿ ನಿನ್ನನ್ನು ತಿಂದು ಹಾಕುತ್ತೇವೆ ಎಂದು ಸೀತೆಯನ್ನು ಹೆದರಿಸಲು ಪ್ರಯತ್ನಿಸಿದ ರಾಕ್ಷಸಿಯರು....

ಶ್ಲೋಕ :

ಸ್ತ್ರೀ ಸಹಸ್ರಾಣಿ ತೇ ಸಪ್ತ ವಶೇ ಸ್ಥಾಶ್ಯಂತಿ ಸುಂದರಿ|
ರಾವಣಂ ಭಜ ಭರ್ತಾರಂ ಭರ್ತಾರಂ ಸರ್ವರಕ್ಷಸಾಮ್||37||

ಉತ್ಪಾಟ್ಯ ವಾ ತೇ ಹೃದಯಂ ಭಕ್ಷಯಿಷ್ಯಾಮಿ ಮೈಥಿಲಿ|
ಯದಿ ಮೇ ವ್ಯಾಹೃತಂ ವಾಕ್ಯಂ ನ ಯಥಾವತ್ ಕರಿಷ್ಯಸಿ||38||

ತತಶ್ಚಂಡೋದರೀ ನಾಮ ರಾಕ್ಷಸೀ ಕ್ರೋಧಮೂರ್ಛಿತಾ|
ಭ್ರಾಮಯಂತೀ ಮಹಚ್ಛೂಲಮಿದಂ ವಚನಮಬ್ರವೀತ್||39||

ಅರ್ಥ :

ಆದುದರಿಂದ ಓ ಸುಂದರೀ! ರಾವಣೇಶ್ವ ರನೊಡನೆ ರಮ್ಯವಾದ ಉದ್ಯಾನವನಗಳಲ್ಲಿಯೂ, ಪರ್ವತದ ಉಪವನಗಳಲ್ಲಿಯೂ, ಆಮೋದದಿಂದ ವಿಹರಿಸು. ಅಗ ಏಳು ಸಾವಿರ ನಮ್ಮಂತಹ ಪರಿಚಾರಿಕೆಯರು ನಿನ್ನ ಅಧೀನದಲ್ಲಿರುತ್ತಾರೆ.||37||

ಸರ್ವರಾಕ್ಷಸರಿಗೆ ಸ್ವಾಮಿಯಾದ ರಾವಣನಿಗೆ ನೀನು ಭಾರ್ಯೆ ಯಾಗಿ ಅವನನ್ನು ಸೇವಿಸು. ನಾನು ಈಗ ಹೇಳಿದಂತೆ ನೀನು ನಡೆದುಕೊಳ್ಳದಿದ್ದರೆ ನಿನ್ನ ಎದೆಯನ್ನು ಸೀಳಿ ನಿನ್ನನ್ನು ತಿಂದು ಹಾಕುತ್ತೇವೆ.||38||

ಅನಂತರ ಅತ್ಯಂತ ಕ್ರೂರಿಯಾಗಿ ಕಾಣುತ್ತಿದ್ದ ಚಂಡೋದರಿ ಎಂಬ ರಾಕ್ಷಸಿಯು ಮಹಾಶೂಲವನ್ನು ಎತ್ತಿಕೊಂಡು ಗರ-ಗರನೆ ತಿರುಗಿಸುತ್ತಾ ಇಂತು ಹೇಳಿದಳು -||39||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ನೀನು ರಾವಣನಿಗೆ ವ್ಯತಿರೇಕವಾಗಿ ನಡೆದುಕೊಳ್ಳದೆ, ಅವನಿಗೆ ಅನುಕೂಲಳಾಗಿ ಇದ್ದರೆ ನಿನಗೆ ಸುಖಗಳು ದಕ್ಕುವುವು ಎಂದು ಸೀತೆಯ ಮನವೊಲಿಸಲು ಯತ್ನಿಸ...
30/11/2022

....ನೀನು ರಾವಣನಿಗೆ ವ್ಯತಿರೇಕವಾಗಿ ನಡೆದುಕೊಳ್ಳದೆ, ಅವನಿಗೆ ಅನುಕೂಲಳಾಗಿ ಇದ್ದರೆ ನಿನಗೆ ಸುಖಗಳು ದಕ್ಕುವುವು ಎಂದು ಸೀತೆಯ ಮನವೊಲಿಸಲು ಯತ್ನಿಸಿದ ರಾಕ್ಷಸಿಯರು....

ಶ್ಲೋಕ :

ಭಜ ಪ್ರೀತಿಂ ಪ್ರಹರ್ಷಂ ಚ ತ್ಯಚೈತಾಂ ನಿತ್ಯದೈನ್ಯತಾಮ್|
ಸೀತೇ ರಾಕ್ಷಸರಾಜೇನ ಸಹ ಕ್ರೀಡ ಯಥಾಸುಖಮ್||34||

ಜಾನಾಸಿ ಹಿ ಯಥಾ ಭೀರು ಸ್ತ್ರೀಣಾಂ ಯೌವನಮಧ್ರುವಮ್|
ಯಾವನ್ನ ತೇ ವ್ಯತಿಕ್ರಾಮೇತ್ತಾವತ್ ಸುಖಮವಾಪ್ನು ಹಿ||35||

ಉದ್ಯಾನಾನಿ ಚ ರಮ್ಯಾಣಿ ಪರ್ವತೋಪವನಾನಿ ಚ|
ಸಹ ರಾಕ್ಷಸರಾಜೇನ ಚರ ತ್ವಂ ಮದಿರೇಕ್ಷಣೇ||36||

ಅರ್ಥ :

ಎಲೈ ಸೀತಾದೇವೀ! ಅಳುವನ್ನು ನಿಲ್ಲಿಸು. ವ್ಯರ್ಥವಾದ ಶೋಕವನ್ನು ಪರಿತ್ಯಜಿಸು. ನಿತ್ಯದೈನ್ಯವನ್ನು ದೂರಮಾಡು. ಸುಪ್ರೀತಳಾಗು. ಉಲ್ಲಾಸದಿಂದಿರು. ಭಯಸ್ವಭಾವದವಳಾದ ಓ ಸೀತಾ! ಸ್ತ್ರಿಯರ ಯೌವನವೂ ಸ್ಥಿರವಾಗಿ ನಿಲ್ಲಲಾರದು. ಅದರ ಶೋಭೆಯು ಕ್ರಮವಾಗಿ ಕ್ಷಿಣಿಸುವುದು. ಅದು ಕಳೆದುಹೋಗುವುದರೊಳಗೆ ನೀನು ವಿಚಾರಮಾಡಿ ರಾಕ್ಷಸರಾಜನಾದ ರಾವಣನೊಡನೆ ಹಾಯಾಗಿ ರಮಿಸಿ ಸುಖವನ್ನು ಅನುಭವಿಸು.||34-35||

ನೀನು ರಾವಣನಿಗೆ ವ್ಯತಿರೇಕವಾಗಿ ನಡೆದುಕೊಳ್ಳದೆ, ಅವನಿಗೆ ಅನುಕೂಲಳಾಗಿ ಇದ್ದರೆ ನಿನಗೆ ಸುಖಗಳು ದಕ್ಕುವುವು.||36||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಸಾಕ್ಷಾತ್ ಆ ದೇವೇಂದ್ರನೂ ಕೂಡ ನಿನ್ನನ್ನು ರಕ್ಷಿಸಲು ಸಮರ್ಥನಲ್ಲ ಆದುದರಿಂದ ಹಿತಕರವಾದ ನನ್ನ ಮಾತಿನಂತೆ ನಡೆದುಕೊ ಎಂದು ಸೀತಾದೇವಿಯನ್ನು ಹೆ...
29/11/2022

....ಸಾಕ್ಷಾತ್ ಆ ದೇವೇಂದ್ರನೂ ಕೂಡ ನಿನ್ನನ್ನು ರಕ್ಷಿಸಲು ಸಮರ್ಥನಲ್ಲ ಆದುದರಿಂದ ಹಿತಕರವಾದ ನನ್ನ ಮಾತಿನಂತೆ ನಡೆದುಕೊ ಎಂದು ಸೀತಾದೇವಿಯನ್ನು ಹೆದರಿಸಲು ಪ್ರಯತ್ನಿಸಿದ ರಾಕ್ಷಸಿಯರು....

ಶ್ಲೋಕ :

ಆನೀತಾಸಿ ಸಮುದ್ರಸ್ಯ ಪಾರಮನ್ಯೈ ರ್ದುರಾಸದಮ್|
ರಾವಣಾಂತಃಪುರಂ ಘೋರಂ ಪ್ರವಿಷ್ಟಾ ಚಾಸಿ ಮೈಥಿಲಿ||31||

ರಾವಣಸ್ಯ ಗೃಹೇ ರುದ್ಧಾಮಸ್ಮಾಭಿಸ್ತು ಸುರಕ್ಷಿತಾಮ್|
ನ ತ್ವಾಂ ಶಕ್ತಃ ಪರಿತ್ರಾತುಮಪಿ ಸಾಕ್ಷಾತ್ ಪುರಂದರಃ||32||

ಕುರುಷ್ವ ಹಿತವಾದಿನ್ಯಾ ವಚನಂ ಮಮ ಮೈಥಿಲಿ|
ಅಲಮಶ್ರುಪ್ರಪಾತೇನ ತ್ಯಜ ಶೋಕಮನರ್ಥಕಮ್||33||

ಅರ್ಥ :

ಎಲೈ ಸೀತೆ! ಕಾಲಾನುಗುಣವಾಗಿ ನಿನಗೆ ಅತ್ಯಂತ ಹಿತಕರವಾದ ನಮ್ಮ ಮಾತಿನಂತೆ ನೀನು ನಡೆದು ಕೊಳ್ಳುತ್ತಿಲ್ಲ. ಇತರರಿಂದ ದಾಟಲು ಅಶಕ್ಯವಾದ ಸಮುದ್ರದ ದಕ್ಷಿಣ ತೀರಕ್ಕೆ ರಾವಣನು ನಿನ್ನನ್ನು ಕರೆದು ತಂದಿರುವನು.||31||

ಓ ಮೈಥಿಲೀ! ನೀನೀಗ ಅತಿಘೋರವಾಗಿ ಕಾಣುವ ರಾವಣನ ಅಂತಃಪುರದಲ್ಲಿ ಬಂಧಿತಳಾಗಿರುವೆ. ನಿನ್ನನ್ನು ನಾವೆಲ್ಲರೂ ಕಾವಲು ಕಾಯುತ್ತಿದ್ದೇವೆ. ಸಾಕ್ಷಾತ್ ಆ ದೇವೇಂದ್ರನೂ ಕೂಡ ನಿನ್ನನ್ನು ರಕ್ಷಿಸಲು ಸಮರ್ಥನಲ್ಲ. ಆದುದರಿಂದ ಹಿತಕರವಾದ ನನ್ನ ಮಾತಿನಂತೆ ನಡೆದುಕೊ.||32-33||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ನಾನು ಹೇಳುವ ಮಾತಿನಂತೆ ನೀನು ನಡೆದುಕೊಳ್ಳದಿದ್ದರೆ, ಈ ಕ್ಷಣದಲ್ಲೇ ನಿನ್ನನ್ನು ನಾವೆಲ್ಲರೂ ತಿಂದುಬಿಡುತ್ತೇವೆ ಎಂದು ಸೀತಾದೇವಿಯನ್ನು ಹೆದರಿ...
28/11/2022

....ನಾನು ಹೇಳುವ ಮಾತಿನಂತೆ ನೀನು ನಡೆದುಕೊಳ್ಳದಿದ್ದರೆ, ಈ ಕ್ಷಣದಲ್ಲೇ ನಿನ್ನನ್ನು ನಾವೆಲ್ಲರೂ ತಿಂದುಬಿಡುತ್ತೇವೆ ಎಂದು ಸೀತಾದೇವಿಯನ್ನು ಹೆದರಿಸಲು ಪ್ರಯತ್ನಿಸಿದ ರಾಕ್ಷಸಿಯರು....

ಶ್ಲೋಕ :

ಅಸ್ಮಿನ್ ಮುಹೂರ್ತೇ ಸರ್ವಾಸ್ತ್ವಾಂ ಭಕ್ಷಯಿಷ್ಯಾಮಹೇವಯಮ್|
ಅನ್ಯಾತು ವಿಕಟಾ ನಾಮ ಲಂಬಮಾನಪಯೋಧರಾ||28||

ಅಬ್ರವೀತ್ ಕುಪಿತಾ ಸೀತಾಂ ಮುಷ್ಟಿಮುದ್ಯಮ್ಯ ಗರ್ಜತೀ|
ಬಹೂನ್ಯಪ್ರಿಯರೂಪಾಣಿ ವಚನಾನಿ ಸುದುರ್ಮತೇ||29||

ಅನುಕ್ರೋಶಾನ್ಮೃದುತ್ವಾಚ್ಚ ಸೋಢಾನಿ ತವ ಮೈಥಿಲಿ|
ನ ಚ ನಃ ಕುರುಷೇ ವಾಕ್ಯಂ ಹಿತಂ ಕಾಲಪುರಃ ಸರಮ್||30||

ಅರ್ಥ :

ನಾನು ಹೇಳುವ ಮಾತಿನಂತೆ ನೀನು ನಡೆದುಕೊಳ್ಳದಿದ್ದರೆ, ಈ ಕ್ಷಣದಲ್ಲೇ ನಿನ್ನನ್ನು ನಾವೆಲ್ಲರೂ ತಿಂದುಬಿಡುತ್ತೇವೆ."||28||

ಜೋತುಬಿದ್ದ ಸ್ತನಗಳ್ಳುಳ್ಳ ವಿಕಟೆಯೆಂಬ ಮತ್ತೊಬ್ಬ ರಕ್ಕಸಿಯು ಕುಪಿತಳಾಗಿ ಮುಷ್ಟಿಯನ್ನು ಮೇಲೆತ್ತಿ ಸೀತಾದೇವಿಯನ್ನು ಭಯಪಡಿಸುತ್ತಾ ಇಂತು ನುಡಿದಳು -||29||

ಬುದ್ಧಿಹೀನಳಾದ ಎಲೈ ಮೈಥಿಲಿ! ಅಪ್ರಿಯವಾದ ನಿನ್ನ ಎಲ್ಲ ಮಾತುಗಳನ್ನು ತಾಳ್ಮೆಯಿಂದ ನಾವು ಕೇಳಿದೆವು. ಆದರೆ ನಿನ್ನ ಕುರಿತು ಕರುಣೆಯುಂಟಾಗುತ್ತಿದೆ. ಅದರಿಂದ ನಾನು ಹೇಳುವ ಮಾತನ್ನು ಕೇಳು.||30||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಇಂದ್ರನಿಗೆ ಶಚೀದೇವಿಯಂತೆ ನೀನು ರಾವಣೇಶ್ವರನಿಗೆ ಪತ್ನಿಯಾಗು. ಅಲ್ಪಾಯುವೂ, ದೀನನೂ ಆದ ಆ ರಾಮನಿಂದ ನಿನಗೆ ಏನಾಗ ಬೇಕಾಗಿದೆ? ಎಂದು ಸೀತಾದೇವಿ...
27/11/2022

....ಇಂದ್ರನಿಗೆ ಶಚೀದೇವಿಯಂತೆ ನೀನು ರಾವಣೇಶ್ವರನಿಗೆ ಪತ್ನಿಯಾಗು. ಅಲ್ಪಾಯುವೂ, ದೀನನೂ ಆದ ಆ ರಾಮನಿಂದ ನಿನಗೆ ಏನಾಗ ಬೇಕಾಗಿದೆ? ಎಂದು ಸೀತಾದೇವಿಯನ್ನು ಪ್ರಶ್ನಿಸಿದ ರಾಕ್ಷಸಿಯರು....

ಶ್ಲೋಕ :

ಮಾನುಷಂ ಕೃಪಣಂ ರಾಮಂ ತ್ಯಕ್ತ್ವಾ ರಾವಣಮಾಶ್ರಯ|
ದಿವ್ಯಾಂಗರಾಗಾ ವೈದೇಹೀ ದಿವ್ಯಾಭರಣಭೂಷಿತಾ||25||

ಅದ್ಯ ಪ್ರಭುತಿ ಸರ್ವೇಷಾಂ ಲೋಕಾನಾಮೀಶ್ವರೀ ಭವ|
ಅಗ್ನೇಃ ಸ್ವಾಹಾ ಯಥಾ ದೇವೀ ಶಚೀವೇಂದ್ರಸ್ಯ ಶೋಭನೇ||26||

ಕಿಂ ತೇ ರಾಮೇಣ ವೈದೇಹಿ ಕೃಪಣೇನ ಗತಾಯುಷಾ|
ಏತದುಕ್ತಂ ಚ ಮೇ ವಾಕ್ಯಂ ಯದಿ ತ್ವಂ ನ ಕರಿಷ್ಯಸಿ||27||

ಅರ್ಥ :

ಸಮರ್ಥನೂ, ತ್ಯಾಗಶೀಲನೂ, ಪ್ರಿಯದರ್ಶಿಯೂ ಆದ ರಾವಣೇಶ್ವರನನ್ನು ಆಶ್ರಯಿಸು. ಕೃಪಣನೂ, ತುಚ್ಛಮಾನವನೂ ಆದ ರಾಮನನ್ನು ತ್ಯಜಿಸಿಬಿಡು.||25||

ಎಲೈ ವೈದೇಹಿಯೇ! ಇಂದಿನಿಂದ ಲೋಕೇಶ್ವರ ನಾದ ರಾವಣನನ್ನು ವರಿಸಿ, ದಿವ್ಯವಾದ ಅಂಗರಾಗಗಳನ್ನು ಪೂಸಿಕೊಂಡು, ದಿವ್ಯಭರಣಗಳಿಂದ ಅಲಂಕೃತಳಾಗಿ ಎಲ್ಲ ಲೋಕಗಳಿಗೂ ಒಡತಿಯಾಗು.||26||

ಎಲೈ ಮಂಗಳ ಸ್ವರೂಪಳೇ! ಅಗ್ನಿದೇವನಿಗೆ ಸ್ವಾಹಾದೇವಿಯಂತೆ, ಇಂದ್ರನಿಗೆ ಶಚೀದೇವಿಯಂತೆ ನೀನು ರಾವಣೇಶ್ವರನಿಗೆ ಪತ್ನಿಯಾಗು. ಅಲ್ಪಾಯುವೂ, ದೀನನೂ ಆದ ಆ ರಾಮನಿಂದ ನಿನಗೆ ಏನಾಗ ಬೇಕಾಗಿದೆ?||27||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಎಲೈ ಸೀತೆ! ದೇವತೆಗಳ ಒಡೆಯನಾದ ಇಂದ್ರನಷ್ಟೇ ಪರಾಕ್ರಮಿಯೂ, ರೂಪವಂತನೂ, ಎಲ್ಲ ರಾಕ್ಷಸರಿಗೆ ಒಡೆಯನೂ ಆದ ರಾವಣನನ್ನು ಪತಿಯಂತೆ ಸೇವಿಸು ಎಂದ ರಾ...
25/11/2022

....ಎಲೈ ಸೀತೆ! ದೇವತೆಗಳ ಒಡೆಯನಾದ ಇಂದ್ರನಷ್ಟೇ ಪರಾಕ್ರಮಿಯೂ, ರೂಪವಂತನೂ, ಎಲ್ಲ ರಾಕ್ಷಸರಿಗೆ ಒಡೆಯನೂ ಆದ ರಾವಣನನ್ನು ಪತಿಯಂತೆ ಸೇವಿಸು ಎಂದ ರಾಕ್ಷಸಿ....

ಶ್ಲೋಕ :

ಸರ್ವತ್ರಾತಿಕೃತಂ ಭದ್ರೇ ವ್ಯಸನಾಯೋಪಕಲ್ಪತೇ|
ಪರಿತುಷ್ಟಾಸ್ಮಿ ಭದ್ರಂ ತೇ ಮಾನುಷಸ್ತೇ ಕೃತೋ ವಿಧಿಃ||22||

ಮಮಾಪಿ ತು ವಚಃ ಪಥ್ಯಂ ಬ್ರುವಂತ್ಯಾಃ ಕುರು ಮೈಥಿಲಿ|
ರಾವಣಂ ಭಜ ಭರ್ತಾರಂ ಭರ್ತಾರಂ ಸರ್ವರಕ್ಷಸಾಮ್||23||

ವಿಕ್ರಾಂತಂ ರೂಪವಂತಂ ಚ ಸುರೇಶಮಿವ ವಾಸವಮ್|
ದಕ್ಷಿಣಂ ತ್ಯಾಗಶೀಲಂ ಚ ಸರ್ವಸ್ಯ ಪ್ರಿಯದರ್ಶನಮ್||24||

ಅರ್ಥ :

"ಎಲೈ ಸೀತೆ! ನಿನ್ನ ಗಂಡನ ವಿಷಯದಲ್ಲಿ ನಿನಗಿರುವ ಪ್ರೀತಿಯನ್ನು ಇಷ್ಟರವರೇಗೆ ಪ್ರದರ್ಶಿಸಿದ್ದನ್ನು ಸಾಕುಮಾಡು. ಮಂಗಳಾಂಗಿಯೇ! ಯಾವ ವಿಷಯದಲ್ಲೇ ಆಗಲೀ, ಯಾವಾಗಲೂ ಅತಿಯಾಗಿ ವರ್ತಿಸುವುದು ವ್ಯಸನಕ್ಕೆ ಕಾರಣ ವಾಗಿದೆ.||22||

ಎಲೈ ಸೀತೆ! ಓರ್ವ ಮಾನವಸ್ತ್ರೀಯ ಧರ್ಮವನ್ನು ನೀನು ಚೆನ್ನಾಗಿ ಆಚರಿಸಿದ್ದಿಯೇ. ಇದರಿಂದ ನನಗೆ ಸಂತೋಷವಾಗಿದೆ. ನಿನಗೆ ಮಂಗಳವಾಗಲಿ. ಆದರೆ ನಿನಗೆ ಹಿತವಾಗುವುದನ್ನು ನಾನು ಹೇಳುತ್ತೇನೆ. ಅದರಂತೆ ನಡೆ.||23||

ದೇವತೆಗಳ ಒಡೆಯನಾದ ಇಂದ್ರನಂತೆ ಪರಾಕ್ರಮಿಯೂ, ರೂಪವಂತನೂ, ಎಲ್ಲ ರಾಕ್ಷಸರಿಗೆ ಒಡೆಯನೂ ಆದ ರಾವಣನನ್ನು ಪತಿಯಂತೆ ಸೇವಿಸು.||24||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಸೀತೆಯು ರಾಮವಿಯೋಗ ವ್ಯಸನದಿಂದ ಅತ್ಯಂತ ಕೃಶಕಾಯಳಾಗಿದ್ದಳು. ದೀನವದನೆಯಾಗಿದ್ದಳು. ಮಲಿನವಾದ ವಸ್ತ್ರವನ್ನುಟ್ಟಿದ್ದ ಸೀತಾದೇವಿಯನ್ನು ಸುತ್ತಲೂ...
24/11/2022

....ಸೀತೆಯು ರಾಮವಿಯೋಗ ವ್ಯಸನದಿಂದ ಅತ್ಯಂತ ಕೃಶಕಾಯಳಾಗಿದ್ದಳು. ದೀನವದನೆಯಾಗಿದ್ದಳು. ಮಲಿನವಾದ ವಸ್ತ್ರವನ್ನುಟ್ಟಿದ್ದ ಸೀತಾದೇವಿಯನ್ನು ಸುತ್ತಲೂ ಕುಳಿತ್ತಿದ್ದ ಭಯಂಕರಾಕಾರದ ರಕ್ಕಸಿಯರು ಭಯಪಡಿಸುತ್ತಲೇ ಇದ್ದರು....

ಶ್ಲೋಕ :

ಅಭಿಗಮ್ಯ ವಿಶಾಲಾಕ್ಷೀ ತಸ್ಥಾಶೋಕಪರಿಪ್ಲುತಾ|
ತಾಂ ಕೃಶಾಂದೀನವದನಾಂ ಮಲಿನಾಂಬರಧಾರಿಣೀಮ್||19 ||

ಭರ್ತ್ಸಯಾಂಚಕ್ರಿರೇ ಸೀತಾಂ ರಾಕ್ಷಸ್ಯಸ್ತಾಂ ಸಮಂತತಃ|
ತತಸ್ತುಂ ವಿನತಾ ನಾಮ ರಾಕ್ಷಸೀ ಭೀಮದರ್ಶನಾ||20||

ಅಬ್ರವೀತ್ ಕುಪಿತಾಕಾರಾ ಕರಾಲಾ ನಿರ್ಣತೋದರೀ |
ಸೀತೇ ಪರ್ಯಾಪ್ತಮೇತಾವದ್ಭರ್ತುಃ ಸ್ನೇಹೋ ನಿದರ್ಶಿತಃ||21||

ಅರ್ಥ :

ಹೀಗೆ ಶಿಂಶುಪಾವೃಕ್ಷದ ಬಳಿಗೆ ಹೋದ ಸೀತಾದೇವಿಯನ್ನು ಆ ರಾಕ್ಷಸಸ್ತ್ರೀಯರು ಸುತ್ತುವರಿದರು. ಆಗ ವಿಶಾಲಾಕ್ಷಿಯಾದ ಅವಳು ಶೋಕ ಮಗ್ನಳಾದಳು. ಸೀತೆಯು ರಾಮವಿಯೋಗ ವ್ಯಸನದಿಂದ ಅತ್ಯಂತ ಕೃಶಕಾಯಳಾಗಿದ್ದಳು. ದೀನವದನೆಯಾಗಿದ್ದಳು. ಮಲಿನವಾದ ವಸ್ತ್ರವನ್ನುಟ್ಟಿದ್ದಳು. ಸುತ್ತಲೂ ಕುಳಿತ್ತಿದ್ದ ಭಯಂಕರಾಕಾರದ ರಕ್ಕಸಿಯರು ಅವಳನ್ನು ಭಯಪಡಿಸುತ್ತಲೇ ಇದ್ದರು.||19-20||

ಅತ್ಯಂತ ಭಯಂಕರರಾಗಿ ಕಾಣುತ್ತಿದ್ದು, ಕೋಪಗೊಂಡಿದ್ದ, ಉಬ್ಬುಹಲ್ಲುಗಳಿದ್ದ, ಹಳ್ಳದಂತೆ ಹೊಟ್ಟೆಯಿದ್ದ, 'ವಿನತಾ' ಎಂಬ ರಕ್ಕಸಿಯು ಪುನಃ ಸೀತೆಗೆ ಹೇಳತೊಡಗಿದಳು.||21||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ರಾಕ್ಷಸಿಯರು ಭಯಪಡಿಸುತ್ತಿರುವಾಗ ವರಾಂಗನೆಯಾದ ಸೀತಾದೇವಿಯು ಕಣ್ಣೀರನ್ನು ಒರೆಸಿಕೊಳ್ಳುತ್ತಾ ಹನುಮಂತನು ಅವಿತುಕೊಂಡಿದ್ದ ಶಿಂಶುಪಾ ವೃಕ್ಷದ ಬ...
23/11/2022

....ರಾಕ್ಷಸಿಯರು ಭಯಪಡಿಸುತ್ತಿರುವಾಗ ವರಾಂಗನೆಯಾದ ಸೀತಾದೇವಿಯು ಕಣ್ಣೀರನ್ನು ಒರೆಸಿಕೊಳ್ಳುತ್ತಾ ಹನುಮಂತನು ಅವಿತುಕೊಂಡಿದ್ದ ಶಿಂಶುಪಾ ವೃಕ್ಷದ ಬಳಿಗೆ ಹೋದಳು....

ಶ್ಲೋಕ :

ಭೃಶಂ ಸಂಲಿಲಿಹುರ್ದೇಪ್ತಾನ್ ಪ್ರಲಂಬಾನ್ ದಶನಚ್ಛದಾನ್|
ಊಚುಶ್ಚ ಪರಮಕ್ರುದ್ಧಾಃ ಪ್ರಗೃಹ್ಯಾಶು ಪರಶ್ವಧಾನ್||16||

ನೇಯಮರ್ಹತಿ ಭರ್ತಾರಂ ರಾವಣಂ ರಾಕ್ಷಸಾಧಿಪಮ್|
ಸಂಭರ್ತ್ಸ್ಯಮಾನಾ ಭೀಮಾಭೀ ರಾಕ್ಷಸೀಭಿರ್ವರಾನನಾ||17||

ಸಾ ಬಾಷ್ಪಮಪಮಾರ್ಜಂತೀ ಶಿಂಶಪಾಂ ತಾಮುಪಾಗಮತ್|
ತತಸ್ತಾ ಶಿಂಶಪಾಂ ಸೀತಾ ರಾಕ್ಷಸೀಭಿಃ ಸಮಾವೃತಾ||18||

ಅರ್ಥ :

ಪರಮ ಕ್ರುದ್ಧೆಯರಾಗಿದ್ದ ಆ ರಾಕ್ಷಸಿಯರು ಗಂಡುಕೊಡಲಿಗಳನ್ನು ಮೇಲೆತ್ತಿಕೊಂಡು, ರಾಕ್ಷಸಾಧಿಪನಾದ ರಾವಣನನ್ನು ಪತಿಯಾಗಿ ವರಿಸಲು ಇವಳು ಖಂಡಿತವಾಗಿ ಯೋಗ್ಯಳಲ್ಲ. ಆದುದರಿಂದ ಇವಳನ್ನು ಸಂಹರಿಸುವುದೇ ಯುಕ್ತವಾಗಿದೆ ಎಂದು ಗಟ್ಟಿಯಾಗಿ ಕೊಗಿಕೊಳ್ಳುತ್ತಿದ್ದರು.||16-17||

ಭಯಂಕರರಾದ ರಾಕ್ಷಸಿಯರು ಹೀಗೆ ಭಯಪಡಿಸು ತ್ತಿರುವಾಗ ವರಾಂಗನೆಯಾದ ಸೀತಾದೇವಿಯು ಕಣ್ಣೀರನ್ನು ಒರೆಸಿಕೊಳ್ಳುತ್ತಾ ಹನುಮಂತನು ಅವಿತುಕೊಂಡಿದ್ದ ಶಿಂಶುಪಾ ವೃಕ್ಷದ ಬಳಿಗೆ ಹೋದಳು.||18||

ಮುಂದುವರೆಯುತ್ತದೆ.....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಶಿಂಶುಪಾವೃಕ್ಷದಲ್ಲಿ ಮೌನವಾಗಿ ಹುದುಗಿಕೊಂಡು ಸೀತಾದೇವಿಯನ್ನು ಭಯಪಡಿಸುತ್ತಿದ್ದ ರಾಕ್ಷಸಿಯರ ಮಾತುಗಳನ್ನು ಶಾಂತವಾಗಿ ಕೇಳುತ್ತಿದ್ದ ಹನುಮಂತ....
22/11/2022

....ಶಿಂಶುಪಾವೃಕ್ಷದಲ್ಲಿ ಮೌನವಾಗಿ ಹುದುಗಿಕೊಂಡು ಸೀತಾದೇವಿಯನ್ನು ಭಯಪಡಿಸುತ್ತಿದ್ದ ರಾಕ್ಷಸಿಯರ ಮಾತುಗಳನ್ನು ಶಾಂತವಾಗಿ ಕೇಳುತ್ತಿದ್ದ ಹನುಮಂತ....

ಶ್ಲೋಕ :

ತಥಾ ಹಮಿಕ್ಷ್ವಾಕುವರಂ ರಾಮಂ ಪತಿಮನುವ್ರತಾ|
ಸೀತಾಯಾ ವಚನಂ ಶ್ರುತ್ವಾ ರಾಕ್ಷಸ್ಯಃ ಕ್ರೋಧಮೂರ್ಛಿತಾಃ||13||

ಭರ್ತ್ಸಯಂತಿ ಸ್ಮ ಪರುಷೈರ್ವಾಕ್ಯೈ ರಾವಣಚೋದಿತಾಃ|
ಅವಲೀನಃ ಸ ನಿರ್ವಾಕ್ಯೋ ಹನುಮಾನ್ ಶಿಂಸಪಾದ್ರುಮೇ||14||

ಸೀತಾಂ ಸಂತರ್ಜಯಂತೀಸ್ತಾ ರಾಕ್ಷಸೀರಶೃಣೋತ್ ಕಪಿಃ|
ತಾಮಭಿಕ್ರಮ್ಯ ಸಂಕ್ರುದ್ಧಾ ವೇಪಮಾನಾಂ ಸಮಂತತಃ||15||

ಅರ್ಥ :

ಸೀತಾದೇವಿಯು ಹೇಳಿದ ಮಾತನ್ನು ಕೇಳಿ, ರಾವಣನಿಂದ ಪ್ರೇರಿತರಾದ ರಾಕ್ಷಸ ಸ್ತ್ರೀಯರು ಕೋಪೋದ್ರಿಕ್ತರಾಗಿ ಕಠೋರ ವಾದ ಮಾತುಗಳಿಂದ ಅವಳನ್ನು ಭಯಪಡಿಸುತ್ತಲೇ ಇದ್ದರು.||13||

ಶಿಂಶುಪಾವೃಕ್ಷದಲ್ಲಿ ಮೌನವಾಗಿ ಹುದುಗಿಕೊಂಡಿದ್ದ ಹನುಮಂತನು ಸೀತಾದೇವಿಯನ್ನು ಭಯಪಡಿಸುತ್ತಿದ್ದ ರಾಕ್ಷಸಿಯರ ಮಾತುಗಳನ್ನು ಶಾಂತವಾಗಿ ಕೇಳುತ್ತಿದ್ದನು.||14||

ಕೋಪಗೊಂಡಿದ್ದ ಆ ರಾಕ್ಷಸಿಯರು ಭಯದಿಂದ ನಡುಗುತ್ತಿದ್ದ ಸೀತಾದೇವಿಯನ್ನು ಸುತ್ತುವರಿದು ಕುಳಿತು ಪ್ರದೀಪ್ತವಾಗಿಯೂ, ಜೋಲಾಡುತ್ತಲೂ ಇದ್ದ ತುಟಿಗಳನ್ನು ಆಗಾಗ ನೆಕ್ಕಿಕೊಳ್ಳುತ್ತಾ ಅವಳನ್ನು ತಿಂದುಬಿಡುವಂತೆ ಪ್ರವರ್ತಿಸುತ್ತಿದ್ದರು.||15||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಮಹಾ ಪತಿವ್ರತೆಯರು ತನ್ನ ಪತಿಯರನ್ನು ಅನುಸರಿಸಿದಂತೆ ನಾನು ನನ್ನ ಪತಿಯಾದ ಇಕ್ಷ್ವಾಕು ಕುಲತಿಲಕನಾದ ಶ್ರೀರಾಮನನ್ನೇ ಅನುಸರಿಸಿಕೊಂಡಿರುತ್ತೇನೆ...
20/11/2022

....ಮಹಾ ಪತಿವ್ರತೆಯರು ತನ್ನ ಪತಿಯರನ್ನು ಅನುಸರಿಸಿದಂತೆ ನಾನು ನನ್ನ ಪತಿಯಾದ ಇಕ್ಷ್ವಾಕು ಕುಲತಿಲಕನಾದ ಶ್ರೀರಾಮನನ್ನೇ ಅನುಸರಿಸಿಕೊಂಡಿರುತ್ತೇನೆ ಸೀತಾದೇವಿ....

ಶ್ಲೋಕ :

ಯಥಾ ಶಚೀ ಮಹಾಭಾಗಾ ಶಕ್ರಂ ಸಮುಪತಿಷ್ಠತಿ|
ಅರುಂಧತೀ ವಸಿಷ್ಠಂ ಚ ರೋಹಿಣೀ ಶಶಿನಂ ಯಥಾ||10||

ಲೋಪಾಮುದ್ರಾ ಯಥಾಗಸ್ತ್ಯಂಸುಕನ್ಯಾ ಚ್ಯವನಂ ಯಥಾ|
ಸಾವಿತ್ರೀ ಶತ್ಯವಂತಂ ಚ ಕಪಿಲಂ ಶ್ರೀಮತೀ ಯಥಾ||11||

ಸೌದಾಸಂ ಮದಯಂತೀವ ಕೇಶಿನೀ ಸಗರಂ ಯಥಾ|
ನೈಷಧಂ ಮಮಯಂತೀವ ಭೈಮಿ ಪತಿಮನುವ್ರತಾ||12||

ಅರ್ಥ :

ಶುಚಿದೇವಿಯು ಇಂದ್ರನನ್ನು ಅನುಸರಿಸುವಂತೆ, ಮಹಾಸಾಧ್ವಿ ಅರುಂಧತಿಯು ವಸಿಷ್ಠರನ್ನೂ, ರೋಹಿಣಿಯು ಚಂದ್ರನನ್ನೂ, ಲೋಪಾಮುದ್ರೆಯು ಅಗಸ್ತ್ಯರನ್ನೂ, ಸುಕನ್ಯೆಯು ಚ್ಯವನನನ್ನೂ, ಸಾವಿತ್ರಿಯು ಸತ್ಯ ವಂತನನ್ನೂ, ಶ್ರೀಮತಿಯು ಕಪಿಲ ಮಹರ್ಷಿಯನ್ನೂ, ಮದಯಂತಿಯು ಸೌದಾಸನನ್ನೂ. ಕೇಶಿನಿಯು ಸಗರನನ್ನೂ, ಭೀಮರಾಜನ ಮಗಳಾದ ಪತಿವ್ರತೆಯಾದ ದಮಯಂತಿಯು ನಳನನ್ನೂ, ಅನುಸರಿಸುವಂತೆ ನಾನು ನನ್ನ ಪತಿಯಾದ ಇಕ್ಷ್ವಾಕು ಕುಲತಿಲಕನಾದ ಶ್ರೀರಾಮನನ್ನೇ ಅನುಸರಿಸಿಕೊಂಡಿರುತ್ತೇನೆ. "||10-12||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

19/11/2022

ಓಂ ಹನುಮತೇ ನಮಃ 🙏

ಎಲ್ಲರಿಗೂ ಈ ಶುಭ ಶನಿವಾರ ಹನುಮಂತನ ಅನುಗ್ರಹ ದೊರೆಯಲಿ. ಜೈಭಜರಂಗಿ ✊

#ಸನಾತನ_ಧರ್ಮ
#ಜೈಭಜರಂಗಿ
#ಹಿಂದು_ಜಾಗರಣ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಮಾನವ ಕಾಂತೆಯಾದ ನಾನು ರಾಕ್ಷಸನ ಪತ್ನಿಯಾಗಲಾರೆ. ನೀವೆಲ್ಲರೂ ಸೇರಿ ನನ್ನನ್ನು ಇಷ್ಟ ಬಂದಂತೆ ತಿಂದುಹಾಕಿರಿ. ನಾನು ನಿಮ್ಮ ಮಾತಿನಂತೆ ನಡೆಯಲಾ...
18/11/2022

....ಮಾನವ ಕಾಂತೆಯಾದ ನಾನು ರಾಕ್ಷಸನ ಪತ್ನಿಯಾಗಲಾರೆ. ನೀವೆಲ್ಲರೂ ಸೇರಿ ನನ್ನನ್ನು ಇಷ್ಟ ಬಂದಂತೆ ತಿಂದುಹಾಕಿರಿ. ನಾನು ನಿಮ್ಮ ಮಾತಿನಂತೆ ನಡೆಯಲಾರೆನು ಎಂದ ಸೀತಾದೇವಿ....

ಶ್ಲೋಕ :

ಯದಿದಂ ಲೋಕವಿದ್ವಿಷ್ಟಮುದಾಹರಥ ಸಂಗತಾಃ|
ನೈ ತನ್ಮನಸಿ ವಾಕ್ಯಂ ಮೇ ಕಿಲ್ಬಷಂ ಪ್ರತಿಭಾತಿ ವಃ||7||

ನ ಮಾನುಷೀ ರಾಕ್ಷಸಸ್ಯ ಭಾರ್ಯಾ ಭವಿತುಮರ್ಹತಿ|
ಕಾಮಂ ಖಾದತ ಮಾಂ ಸರ್ವಾನ ಕರಿಷ್ಯಾಮಿ ವೋವಚಃ||8||

ದೀನೋ ವಾ ರಾಜ್ಯಹೀನೋವಾ ಯೋಮೇಭರ್ತಾಸಮೇ ಗುರುಃ|
ತಂ ನಿತ್ಯಮನುರಕ್ತಾಸ್ಮಿ ಯಥಾ ಸೂರ್ಯಂ ಸುವರ್ಚಲಾ||9||

ಅರ್ಥ :

"ರಾಕ್ಷಸಿಯರೇ! ನೀವೆಲ್ಲರೂ ಸೇರಿ ಹೇಳುತ್ತಿರುವ ಮಾತುಗಳು ಲೋಕಮರ್ಯಾದೆಗೆ ವಿರುದ್ಧವೂ, ಪಾಪಯುಕ್ತವೂ ಆಗಿದೆ. ಇವು ನನ್ನ ಮನಸ್ಸಿಲ್ಲಿ ಕ್ಷಣಕಾಲವೂ ಉಳಿಯುವುದಿಲ್ಲ. ನೀವು ಹೇಳುವ ಯಾವ ಮಾತೂ ನನ್ನ ಮನಸ್ಸಿಗೆ ಹಿಡಿಸುವುದಿಲ್ಲ.||7||

ಮಾನವ ಕಾಂತೆಯಾದ ನಾನು ರಾಕ್ಷಸನ ಪತ್ನಿಯಾಗಲಾರೆ. ನೀವೆಲ್ಲರೂ ಸೇರಿ ನನ್ನನ್ನು ಇಷ್ಟ ಬಂದಂತೆ ತಿಂದುಹಾಕಿರಿ. ನಾನು ನಿಮ್ಮ ಮಾತಿನಂತೆ ನಡೆಯಲಾರೆನು.||8||

ನನ್ನ ಪತಿಯು ದೀನನಾಗಿರಲೀ, ರಾಜ್ಯಹೀನನಾಗಿರಲೀ, ಅವನೇ ನನಗೆ ಗುರುವು. ಸುವರ್ಚಲಾ ದೇವಿಯು ಸೂರ್ಯನಲ್ಲಿರುವಂತೆ ನಾನು ಸದಾ ಕಾಲ ಪತಿಯಲ್ಲೇ ಅನುರಕ್ತಳಾಗಿರುವವಳು.||9||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಮೂರು ಲೋಕಗಳ ಐಶ್ವರ್ಯವನ್ನು ಉಪಭೋಗಿಸುತ್ತಿರುವ ರಾಕ್ಷಸೇಶ್ವರನಾದ ರಾವಣನನ್ನು ಪತಿಯನ್ನಾಗಿಸಿಕೊಂಡು ಸುಖವಾಗಿ ಅವನೊಡನೆ ವಿಹರಿಸು ಎಂದ ರಾಕ್ಷ...
16/11/2022

....ಮೂರು ಲೋಕಗಳ ಐಶ್ವರ್ಯವನ್ನು ಉಪಭೋಗಿಸುತ್ತಿರುವ ರಾಕ್ಷಸೇಶ್ವರನಾದ ರಾವಣನನ್ನು ಪತಿಯನ್ನಾಗಿಸಿಕೊಂಡು ಸುಖವಾಗಿ ಅವನೊಡನೆ ವಿಹರಿಸು ಎಂದ ರಾಕ್ಷಸಿಯರು....

ಶ್ಲೋಕ :

ತ್ರೃಲೋಕ್ಯವಸುಭೋಕ್ತಾರಂ ರಾವಣಂ ರಾಕ್ಷಸೇಶ್ವರಮ್|
ಭರ್ತಾರಮುಪಸಂಗಮ್ಯ ವಿಹರಸ್ವ ಯಥಾಸುಖಮ್||4||

ಮಾನುಷೀ ಮಾನುಷಂ ತಂ ತು ರಾಮಮಿಚ್ಛಸಿ ಶೋಭನೇ|
ರಾಜ್ಯಾದ್ಭ್ರಷ್ಟಮಸಿದ್ಧಾರ್ಥಂ ವಿಕ್ಲವಂ ತ್ವಮನಿಂದಿತೇ||5||

ರಾಕ್ಷಸೀನಾಂ ವಚಃ ಶ್ರುತ್ವಾ ಸೀತಾ ಪದ್ಮನಿಭೇಕ್ಷಣಾ|
ನೇತ್ರಾಭ್ಯಾಮಶ್ರುಪೂರ್ಣಾಭ್ಯಾಮಿದಂ ವಚನಮಬ್ರವೀತ್||6||

ಅರ್ಥ :

ಮೂರು ಲೋಕಗಳ ಐಶ್ವರ್ಯವನ್ನು ಉಪಭೋಗಿಸುತ್ತಿರುವ ರಾಕ್ಷಸೇಶ್ವರನಾದ ರಾವಣನನ್ನು ಪತಿಯನ್ನಾಗಿಸಿಕೊಂಡು ಸುಖವಾಗಿ ಅವನೊಡನೆ ವಿಹರಿಸು.||4||

ಎಲೈ ಮಂಗಳ ಸ್ವರೂಪಳೆ! ಪೂಜ್ಯಳೇ! ಮನುಷ್ಯ ಮಾತ್ರವಳಾಗಿರುವ ನಿನಗೆ ಇಂತಹ ಸುವರ್ಣಾವಕಾಶ ದೊರೆತಾಗ, ಹುಲು ಮನುಜನಾದ ರಾಜ್ಯಭ್ರಷ್ಟನಾದ, ಅಪ್ರಯೋಜಕನಾದ, ಶಕ್ತಿಹೀನನಾದ ಆ ರಾಮನನ್ನೇ ಪುನಃ ಸೇರಲು ಬಯಸುತ್ತಿರುವೆ. ನಿಶ್ಚಯವಾಗಿಯೂ ನೀನು ಮೂಢಳೇ ಸರಿ ".||5||

ಕಮಲಲೋಚನೆಯಾದ ಸೀತಾದೇವಿಯು ರಾಕ್ಷಸಿಯರ ಕರ್ಣ ಕರ್ಕಶವಾದ ಮಾತುಗಳನ್ನು ಕೇಳಿ ಕಣ್ಣಿರನ್ನು ತುಂಬಿಕೊಂಡು ಹೀಗೆಂದಳು - ||6||

ಮುಂದುವರೆಯುತ್ತದೆ.....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಇಂದಿನಿಂದ ವಾಲ್ಮೀಕಿ ರಾಮಾಯಣ ಸುಂದರಕಾಂಡದ ಇಪ್ಪತ್ತನಾಲ್ಕನೆಯ ಅಧ್ಯಾಯ ಆರಂಭ.... ಶ್ಲೋಕ :ತತಃ ಸೀತಾಂ ಸಮಸ್ತಾಸ್ತಾ ರಾಕ್ಷಸ್ಯೋ ವಿಕೃತಾನನಾಃ...
14/11/2022

....ಇಂದಿನಿಂದ ವಾಲ್ಮೀಕಿ ರಾಮಾಯಣ ಸುಂದರಕಾಂಡದ ಇಪ್ಪತ್ತನಾಲ್ಕನೆಯ ಅಧ್ಯಾಯ ಆರಂಭ....

ಶ್ಲೋಕ :

ತತಃ ಸೀತಾಂ ಸಮಸ್ತಾಸ್ತಾ ರಾಕ್ಷಸ್ಯೋ ವಿಕೃತಾನನಾಃ|
ಪರುಷಂ ಪರುಷಾ ನಾರ್ಯ ಊಚುಸ್ತಾಂ ವಾಕ್ಯಮಪ್ರಿಯಮ್||1||

ಕಿಂ ತ್ವಮಂತಃಪುರೇ ಸೀತೇ ಸರ್ವಭೂತಮನೋಹರೇ|
ಮಹಾರ್ಹಶಯನೋಪೇತೇ ನ ವಾಸಮನುಮನ್ಯಸೇ||2||

ಮಾನುಷೀ ಮಾನುಷಸ್ಯೈವ ಭಾರ್ಯಾತ್ವಂ ಬಹು ಮನ್ಯಸೇ|
ಪ್ರತ್ಯಾಹರ ಮನೋ ರಾಮಾನ್ನ ತ್ವಂ ಜಾತು ಭವಿಷ್ಯಸಿ||3||

ಅರ್ಥ :

ವಿಕೃತಾನನೆಯರಾದ ಆ ರಾಕ್ಷಸ ಸ್ತ್ರೀಯರು ಸೀತಾದೇವಿಯ ಹತ್ತಿರ ಸರಿದು ಕಠೋರವಾದ ಮಾತುಗಳು ತಟ್ಟದೇ ಇರುವ ಆ ಸುಕುಮಾರಿಯನ್ನು ಗದರಿಸಿ ಅಪ್ರಿಯವಾದ ಮಾತುಗಳನ್ನು ಪುನಃ ಹೇಳತೊಡಗಿದರು - ||1||

ಎಲೈ ಸೀತೆ! ರಾವಣನ ಅಂತಃಪುರವು ಎಲ್ಲರಿಗೂ ಆಹ್ಲಾದ ಕರವಾಗಿದ್ದು ಮನೋಹರವಾಗಿದೆ. ಅತ್ಯುತ್ತಮವಾದ ಹಂಸ ತೂಲಿಕಾತಲ್ಪಯುಕ್ತವಾದ ಅದರಲ್ಲಿ ವಾಸಿಸಲು ನೀನೇಕೆ ಒಪ್ಪಿ ಕೊಳ್ಳುವುದಿಲ್ಲ?||2||

ಮಾನವ ಕಾಂತೆಯಾದ ನೀನು ಸಾಮಾನ್ಯ ಮನುಷ್ಯನೊಬ್ಬನ ಹೆಂಡತಿಯಾಗಿರುವುದನ್ನು ದೊಡ್ಡದೆಂದು ತಿಳಿದುಕೊಂಡಿರುವೆ. ಇದು ಸರಿಯಲ್ಲ. ನೀನು ಎಂದೂ, ಯಾವ ವಿಧದಿಂದಲೂ ಪುನಃ ರಾಮನನ್ನು ಸೇರಲಾರೆ. ಆದುದರಿಂದ ನಿನ್ನ ಮನಸ್ಸು ಅವನಿಂದ ಹಿಂದಿರುಗಿಸು.||3||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತನಾಲ್ಕನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಇಂದಿಗೆ ವಾಲ್ಮೀಕಿ ರಾಮಾಯಣದ ಇಪ್ಪತ್ತಮೂರನೆಯ ಸರ್ಗ ಮುಕ್ತಾಯಗೊಂಡಿತು.... ಶ್ಲೋಕ :ನ ವಾತಿ ಚಾಸಿತಾಪಾಂಗಿ ಕಿಂ ತ್ವಂ ತಸ್ಯ ನ ತಿಷ್ಠಸಿ |ಪುಷ...
13/11/2022

....ಇಂದಿಗೆ ವಾಲ್ಮೀಕಿ ರಾಮಾಯಣದ ಇಪ್ಪತ್ತಮೂರನೆಯ ಸರ್ಗ ಮುಕ್ತಾಯಗೊಂಡಿತು....

ಶ್ಲೋಕ :

ನ ವಾತಿ ಚಾಸಿತಾಪಾಂಗಿ ಕಿಂ ತ್ವಂ ತಸ್ಯ ನ ತಿಷ್ಠಸಿ |
ಪುಷ್ಪವೃಷ್ಟಂ ಚ ತರವೋ ಮುಮುಚುರ್ಯಸ್ಯ ವೈ ಭಯಾತ್ ||19||

ಶೈಲಾಶ್ಚ ಸುಭ್ರು ಪಾನೀಯಂ ಜಲದಾಶ್ಚ ಯದೇಚ್ಛತಿ |
ತಸ್ಯ ನೈರ್ಋತರಾಜಸ್ಯ ರಾಜರಾಜಸ್ಯ ಭಾಮಿನಿ ||20||

ಕಿಂ ತ್ವಂ ನ ಕುರುಷೇ ಬುದ್ಧಿಂ ಭಾರ್ಯಾರ್ಥೆ ರಾವಣಸ್ಯ ಹಿ|
ಸಾಧು ತೇ ತತ್ತತೋ ದೇವಿ ಕಥಿತಂ ಸಾಧು ಭಾಮಿನಿ |
ಗೃಹಾಣ ಸುಸ್ಮಿತೇ ವಾಕ್ಯಮನ್ಯಥಾ ನ ಭವಿಷ್ಯಸಿ ||21||

ಇತ್ಯಾರ್ಷೇ ಶ್ರೀಮದ್ರಾಮಾಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ತ್ರಯೋವಿಂಶಃ ಸರ್ಗಃ||23||

ಓ ವಿಶಾಲಾಕ್ಷಿ! ಅಂತಹ ಪ್ರಭುವಿನ ಬಳಿಯಲ್ಲಿರಲು ನೀನೇಕೆ ಬಯಸುತ್ತಿಲ್ಲ? ಅವನಿಗೆ ಭಯಪಟ್ಟು ವೃಕ್ಷಗಳೂ ಕೂಡ ಅವನ ಬಯಕೆಯಂತೆ ಹೂವುಗಳನ್ನು ಸುರಿಸುತ್ತವೆ. ಹಾಗೆಯೇ ಪರ್ವತಗಳೂ, ಮೇಘಗಳೂ, ಕೂಡ ಅವನು ಬಯಸಿದಾಗ ಮಧುರ ಜಲವನ್ನು ಸುರಿಸುತ್ತವೆ. ಎಲೈ ಭಾಮಿನೀ! ಅಂತಹ ರಾಕ್ಷಸ ಚಕ್ರವರ್ತಿಯಾದ ರಾವಣೇಶ್ವರನ ಭಾರ್ಯೆಯಾಗಲು ನೀನೇಕೆ ಮನಸ್ಸು ಮಾಡುತ್ತಿಲ್ಲ? ಅವನ ಪತ್ನಿಯಾಗಲು ಏಕೆ ಸಿದ್ಧಳಾಗುವುದಿಲ್ಲ?||19-20||

ಮಂದಸ್ಮಿತೆಯಾದ ಎಲೈ ಭಾಮಿನೀ! ದೇವೀ! ಒಳ್ಳೆಯ ರೀತಿಯಿಂದ ಹೇಳುತ್ತಿರುವ ನಮ್ಮ ಮಾತನ್ನು ಚೆನ್ನಾಗಿ ಪರಿಗ್ರಹಿಸು. ಹಾಗೇನಾದರೂ ನಮ್ಮ ಮಾತುಗಳನ್ನು ಕೇಳದಿದ್ದರೆ ನೀನು ಖಂಡಿತವಾಗಿ ಉಳಿಯಲಾರೆ.||21||

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಇಪ್ಪತ್ತಮೂರನೆಯ ಸರ್ಗವು ಮುಗಿಯಿತು.||23||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತಮೂರನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಸರ್ವ ಸಮೃದ್ಧಿಯನ್ನು ಹೊಂದಿರುವ ಮಹಾತ್ಮನಾದ ರಾಕ್ಷಸೇಂದ್ರನಿಗೆ ಭಾರ್ಯೆಯಾಗಲು ಬಯಸದೆ ಇರುವ ನೀನು ನಿಜವಾಗಿ ಅಧಮಳಾಗಿರುವೆ.... ಶ್ಲೋಕ :ಅಸಕೃ...
11/11/2022

....ಸರ್ವ ಸಮೃದ್ಧಿಯನ್ನು ಹೊಂದಿರುವ ಮಹಾತ್ಮನಾದ ರಾಕ್ಷಸೇಂದ್ರನಿಗೆ ಭಾರ್ಯೆಯಾಗಲು ಬಯಸದೆ ಇರುವ ನೀನು ನಿಜವಾಗಿ ಅಧಮಳಾಗಿರುವೆ....

ಶ್ಲೋಕ :

ಅಸಕೃದ್ದೇವತಾ ಯುದ್ಧೇ ನಾನಗಂಧರ್ವದಾನವಾಃ|
ನಿರ್ಜಿತಾಃ ಸಮರೇ ಯೇನ ಸ ತೇ ಪಾರ್ಶ್ವಮುಪಾಗತಃ||16||

ತಸ್ಯ ಸರ್ವಸಮೃದ್ಧಸ್ಯ ರಾವಣಸ್ಯ ಮಹಾತ್ಮನಃ|
ಕಿಮದ್ಯ ರಾಕ್ಷಸೇಂದ್ರಸ್ಯ ಭಾರ್ಯಾತ್ವಂ ನೇಚ್ಛಸೇಧಮೇ||17||

ತತಸ್ತು ದುರ್ಮುಖೀ ನಾಮ ರಾಕ್ಷಸೀ ವಾಕ್ಯಮಬ್ರವೀತ್|
ಯಸ್ಯ ಸೂರ್ಯೋನತಪತಿ ಭೀತೋ ಯಸ್ಯ ಚ ಮಾರುತಃ||18||

ಅರ್ಥ :

ರಾವಣನು ಸಮರಾಂಗಣದಲ್ಲಿ ದೇವತೆಗಳನ್ನು ನಾಗರನ್ನು, ಗಂಧರ್ವರನ್ನು, ಹಲವಾರು ಬಾರಿ ಪರಾಭವಗೋಳಿಸಿರುವನು. ಅಂತಹ ಮಹಾಭಯಂಕರ ಪರಾಕ್ರಮಿಯಾದ, ಮಹಾಶೂರನಾದ, ರಾವಣೇಶ್ವರನು ಪ್ರಣಯಭಿಕ್ಷೆಯನ್ನು ಬೇಡುತ್ತಾ ನಿನ್ನ ಬಳಿಗೆ ಬಂದಿರುವನು. ಸರ್ವ ಸಮೃದ್ಧಿಯನ್ನು ಹೊಂದಿರುವ ಮಹಾತ್ಮನಾದ ರಾಕ್ಷಸೇಂದ್ರನಿಗೆ ಭಾರ್ಯೆಯಾಗಲು ಬಯಸದೆ ಇರುವ ನೀನು ನಿಜವಾಗಿ ಅಧಮಳಾಗಿರುವೆ.||16-17||

ಬಳಿಕ 'ದುರ್ಮುಖಿ' ಎಂಬ ರಾಕ್ಷಸಿಯು ಸೀತೆಗೆ ಹೀಗೆ ಉಪದೇಶಿಸತೊಡಗಿದಳು - ಎಲೈ ಸುಂದರೀ! ರಾವಣನಿಗೆ ಭಯಪಟ್ಟು ಸೂರ್ಯನು ಕೂಡ ತೀಕ್ಷ್ಣವಾದ ಕಿರಣಗಳನ್ನು ಪಸರಿಸುವುದಿಲ್ಲ. ವಾಯುವು ಮಂದವಾಗಿ ಬೀಸುತ್ತಿರುವನು.||18||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತಮೂರನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

ಓಂ ಹನುಮತೇ ನಮಃ 🙏ಎಲ್ಲರಿಗೂ ಹನುಮಂತನ ಅನುಗ್ರಹ ದೊರೆಯಲಿ ಜೈಭಜರಂಗಿ ✊ #ಸನಾತನ_ಧರ್ಮ #ಜೈಭಜರಂಗಿ #ಹಿಂದು_ಜಾಗರಣ_ವೇದಿಕೆ #ಹನುಮ_ಬಂಟರು_ಮಾಲೂರು_...
10/11/2022

ಓಂ ಹನುಮತೇ ನಮಃ 🙏

ಎಲ್ಲರಿಗೂ ಹನುಮಂತನ ಅನುಗ್ರಹ ದೊರೆಯಲಿ ಜೈಭಜರಂಗಿ ✊

#ಸನಾತನ_ಧರ್ಮ
#ಜೈಭಜರಂಗಿ
#ಹಿಂದು_ಜಾಗರಣ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಅಮೂಲ್ಯವಾದ ರತ್ನಗಳಿಂದ ಶೋಭಿಸುತ್ತಿರುವ ಸಾವಿರಾರು ಕಾಂತೆಯರು ರಾವಣನ ಅಂತಃಪುರದಲ್ಲಿ ಇದ್ದಾರೆ. ಅಂತಹ ತರುಣೀಮಣಿಗಳನ್ನು ಕಡೆಗಣಿಸಿದ ರಾವಣನು...
09/11/2022

....ಅಮೂಲ್ಯವಾದ ರತ್ನಗಳಿಂದ ಶೋಭಿಸುತ್ತಿರುವ ಸಾವಿರಾರು ಕಾಂತೆಯರು ರಾವಣನ ಅಂತಃಪುರದಲ್ಲಿ ಇದ್ದಾರೆ. ಅಂತಹ ತರುಣೀಮಣಿಗಳನ್ನು ಕಡೆಗಣಿಸಿದ ರಾವಣನು ನಿನ್ನನ್ನು ಸೇರಲು ತವಕಿಸುತ್ತಿದ್ದಾನೆ ಎಂದ ರಾಕ್ಷಸಿ....

ಶ್ಲೋಕ :

ಬಲಿನೋ ವೀರ್ಯಯುಕ್ತಸ್ಯ ಭಾರ್ಯಾತ್ವಂ ಕಿಂ ನ ಲಪ್ಸಸೇ|
ಪ್ರಿಯಾಂ ಬಹುಮತಾಂ ಭಾರ್ಯಾಂತ್ಯಕ್ತ್ವಾರಾಜಾ ಮಹಾಬಲಃ||13||

ಸರ್ವಾಸಾಂ ಚ ಮಹಾಭಾಗಾಂ ತ್ವಾಮುಪೈಷ್ಯತಿ ರಾವಣಃ|
ಸಮೃದ್ಧಂ ಸ್ತ್ರೀಸಹಸ್ರೇಣ ನಾನಾರತ್ನೋಪಶೋಭಿತಮ್||14||

ಅಂತಃಪುರಂ ಸಮುತ್ಸೃಜ್ಯ ತ್ವಾಮುಪೈಷ್ಯತಿ ರಾವಣಃ|
ಅನ್ಯಾತು ವಿಕಟಾ ನಾಮ ರಾಕ್ಷಸೀ ವಾಕ್ಯಮಬ್ರವೀತ್||15||

ಅರ್ಥ :

ಎಲ್ಲ ಶ್ರೇಷ್ಠ ನಾರಿಯರಲ್ಲಿ ಅತ್ಯಂತ ಪ್ರಿಯಳಾದ, ಎಲ್ಲರಿಂದ ಗೌರವಿಸಲ್ಪಡುತ್ತಿರುವ, ಮಹಾಭಾಗ್ಯಶಾಲಿನಿಯಾದ ಮಂಡೋದರಿಯನ್ನು ಕೂಡ ಪರಿತ್ಯಜಿಸಿ ಮಹಾಬಲನಾದ ರಾವಣನು ನಿನ್ನನ್ನು ಪಡೆಯಲು ಅಪೇಕ್ಷಿಸಿದ್ದಾನೆ.||13||

ಅಮೂಲ್ಯವಾದ ರತ್ನಗಳಿಂದ ಶೋಭಿಸುತ್ತಿರುವ ಸಾವಿರಾರು ಕಾಂತೆಯರು ರಾವಣನ ಅಂತಃಪುರದಲ್ಲಿ ಇದ್ದಾರೆ. ಅಂತಹ ತರುಣೀಮಣಿಗಳನ್ನು ಕಡೆಗಣಿಸಿದ ರಾವಣನು ನಿನ್ನನ್ನು ಸೇರಲು ತವಕಿಸುತ್ತಿದ್ದಾನೆ.||14||

ಅವರು ಹೇಳುತ್ತಿದ್ದುದನ್ನು ಕೇಳುತ್ತಾ ಸುಮ್ಮನೆ ಕುಳಿತಿರುವ ಸೀತೆಗೆ 'ವಿಕಟಾ' ಎಂಬ ಮತ್ತೋರ್ವ ರಕ್ಕಸಿಯು ಹೀಗೆ ಹೇಳುತ್ತಾಳೆ - ||15||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತಮೂರನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ರಾವಣನು ದೇವೇಂದ್ರನ ಸಹಿತ ಮೂವತ್ತಮೂರು ಕೋಟಿ ಪ್ರಮುಖ ದೇವತೆಗಳನ್ನು ತನ್ನ ಅತುಲಪರಾಕ್ರಮದಿಂದ ಜಯಿಸಿರುವನು ಅಂತಹ ರಾಕ್ಷಸೇಂದ್ರನಿಗೆ ಮಡದಿಯಾ...
08/11/2022

....ರಾವಣನು ದೇವೇಂದ್ರನ ಸಹಿತ ಮೂವತ್ತಮೂರು ಕೋಟಿ ಪ್ರಮುಖ ದೇವತೆಗಳನ್ನು ತನ್ನ ಅತುಲಪರಾಕ್ರಮದಿಂದ ಜಯಿಸಿರುವನು ಅಂತಹ ರಾಕ್ಷಸೇಂದ್ರನಿಗೆ ಮಡದಿಯಾಗಲು ನೀನು ಅರ್ಹಳಾಗಿರುವೆ ಎಂದ ರಾಕ್ಷಸಿ ಹರಿಜಟಾ....

ಶ್ಲೋಕ :

ವಿವರ್ತ್ಯ ನಯನೇ ಕೋಪಾನ್ಮಾರ್ಜಾರಸದೃಶೇಕ್ಷಣಾ|
ಯೇನ ದೇವಾಸ್ತ್ರಯಸ್ತ್ರಿಂಶದ್ದೇವರಾಜಶ್ಚ ನಿರ್ಜಿತಾಃ||10||

ತಸ್ಯ ತ್ವಂ ರಾಕ್ಷಸೇಂದ್ರಸ್ಯ ಭಾರ್ಯಾ ಭವಿತುಮರ್ಹಸಿ|
ತತಸ್ತು ಪ್ರಘಸಾ ನಾಮ ರಾಕ್ಷಸೀ ಕ್ರೋಧಮೂರ್ಛಿತಾ||11||

ಬರ್ತ್ಸಯಂತೀ ತದಾ ಘೋರಮಿದಂ ವಚನಮಬ್ರವೀತ್|
ವೀರ್ಯೋತ್ತಿಸ್ಯ ಶೂರಸ್ಯ ಸಂಗ್ರಾಮೇಷ್ವನಿವರ್ತಿನಃ||12||

ಅರ್ಥ :

ರಾವಣನು ದೇವೇಂದ್ರನ ಸಹಿತ ಮೂವತ್ತಮೂರು ಕೋಟಿ ಪ್ರಮುಖ ದೇವತೆಗಳನ್ನು ತನ್ನ ಅತುಲಪರಾಕ್ರಮದಿಂದ ಜಯಿಸಿರುವನು. ಅಂತಹ ರಾಕ್ಷಸೇಂದ್ರನಿಗೆ ಮಡದಿಯಾಗಲು ನೀನು ಅರ್ಹಳಾಗಿರುವೆ. ರಾವಣನು ಗರ್ವದಿಂದ ಉಬ್ಬಿಹೋದ ಮಹಾಪರಾಕ್ರಮಿಯು. ಶೂರನೂ, ಯುದ್ಧದಲ್ಲಿ ಎಂದೂ ಬೆನ್ನುತೋರದಿರುವವನೂ, ಮಹಾಬಲಶಾಲಿಯೂ, ಮಹಾವೀರ್ಯವಂತನೂ ಆದ ಅವನಿಗೆ ಭಾರ್ಯೆಯಾಗಲು ನೀನೇಕೆ ಅಪೇಕ್ಷಿಸುವುದಿಲ್ಲ?||10-11||

ಆಗಲೂ ಸೀತಾದೇವಿಯು ಮೌನದಿಂದಿರುವಾಗ - 'ಪ್ರಘಸಾ' ಎಂಬ ರಾಕ್ಷಸಿಯು ಕೋಪೋದ್ರಿಕ್ತಳಾಗಿ ಸೀತೆಯನ್ನು ಬೆದರಿಸುತ್ತಾ ಕಠೋರವಾದ ಈ ಮಾತುನ್ನು ಹೇಳಿದಳು - ||12||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತಮೂರನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

....ಎಲೈ ವಿಶಾಲಾಕ್ಷಿಯೇ! ಸುಪ್ರಸಿದ್ಧನಾದ ವಿಶ್ರವಸುವಿನ ಮಗನು, ಅರಿವೀರ ಭಯಂಕರನೂ, ರಾಕ್ಷಸರಿಗೆಲ್ಲ ಪ್ರಭುವೂ ಆದ ರಾವಣನಿಗೆ ಭಾರ್ಯೆಯಾಗಲು ನೀನು...
07/11/2022

....ಎಲೈ ವಿಶಾಲಾಕ್ಷಿಯೇ! ಸುಪ್ರಸಿದ್ಧನಾದ ವಿಶ್ರವಸುವಿನ ಮಗನು, ಅರಿವೀರ ಭಯಂಕರನೂ, ರಾಕ್ಷಸರಿಗೆಲ್ಲ ಪ್ರಭುವೂ ಆದ ರಾವಣನಿಗೆ ಭಾರ್ಯೆಯಾಗಲು ನೀನು ಯೋಗ್ಯಳಾಗಿರುವೆ ಎಂದ ರಾಕ್ಷಸಿಯರು....

'ಪುಲಸ್ತ್ಯಸ್ಯ ತು ತೇಜಸ್ವೀ ಮಹರ್ಷಿರ್ಮಾನಸಃ ಸುತಃ|
ನಾಮ್ನಾಸ ವಿಶ್ರವಾ ನಾಮ ಪ್ರಜಾಪತಿಸಮಪ್ರಭಃ||7||

ತಸ್ಯ ಪುತ್ರೋ ವಿಶಾಲಾಕ್ಷಿ ರಾವಣಃ ಶತ್ರುರಾವಣಃ|
ತಸ್ಯ ತ್ವಂ ರಾಕ್ಷಸೇಂದ್ರಸ್ಯ ಭಾರ್ಯಾ ಭವಿತುಮರ್ಹಸಿ||8||

ಮಯೋಕ್ತಂ ಚಾರುಸರ್ವಾಂಗಿ ವಾಕ್ಯಕಿಂ ನಾನುಮನ್ಯಸೇ|
ತತೋ ಹರಿಜಟಾ ನಾಮ ರಾಕ್ಷಸೀ ವಾಕ್ಯಮಬ್ರವೀತ್||9||

ಅರ್ಥ :

ತೇಜಸ್ವಿಯಾದ ವಿಶ್ರವಸನು ಮಹರ್ಷಿ ಪುಲಸ್ತ್ಯನಿಗೆ ಮಾನಸಪುತ್ರನು. ಅವನು ತೇಜಸ್ಸನಲ್ಲಿ ಬ್ರಹ್ಮನಂತೆ ಇರುವವನು.||7||

ಎಲೈ ವಿಶಾಲಾಕ್ಷಿಯೇ! ಸುಪ್ರಸಿದ್ಧನಾದ ವಿಶ್ರವಸುವಿನ ಮಗನೇ ರಾವಣನು. ಅವನು ಅರಿವೀರ ಭಯಂಕರನೂ, ರಾಕ್ಷಸರಿಗೆಲ್ಲ ಪ್ರಭುವೂ ಆದ ಅವನಿಗೆ ಭಾರ್ಯೆಯಾಗಲು ನೀನು ಯೋಗ್ಯಳಾಗಿರುವೆ.||8||

ಸುಂದರಾಂಗಿಯೇ! ನನ್ನ ಈ ಮಾತನ್ನು ನೀನು ಏಕೆ ಅನುಮೋದಿಸುವುದಿಲ್ಲ? ಆಗ ಸೀತೆಯು ಉತ್ತರಿಸದಿದ್ದಾಗ, ಬೆಕ್ಕಿನ ಕಣ್ಣಿನವಳಾದ 'ಹರಿಜಟಾ' ಎಂಬ ರಾಕ್ಷಸಿಯು ಕೋಪದಿಂದ ಕಣ್ಣುಗಳನ್ನು ಅರಳಿಸಿಕೊಂಡು ಹೀಗೆ ನುಡಿದಳು - ||9||

ಮುಂದುವರೆಯುತ್ತದೆ....

#ಸನಾತನಧರ್ಮ
#ಸುಂದರಕಾಂಡ #ಇಪ್ಪತ್ತಮೂರನೆಯಸರ್ಗ
#ಜೈಭಜರಂಗಿ
#ಹಿಂದು_ಜಾಗರಣಾ_ವೇದಿಕೆ
#ಹನುಮ_ಬಂಟರು_ಮಾಲೂರು_ಘಟಕ

Address

Malur
563130

Website

Alerts

Be the first to know and let us send you an email when Kattar Hindu Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Kattar Hindu Kannada:

Videos

Share

Category

Nearby media companies


Other Video Creators in Malur

Show All