Coorg the Kashmir of Karnataka

Coorg the Kashmir of Karnataka Coorg's No 1 social media channel...Follow us for news updates, Subscribe us on YouTube and watch our videos. Support us
(401)

You can follow our Instagram profile, follow us on Threads and Twitter too ..

ನಮ್ಮ ಹೆಮ್ಮೆಯ ಸೈನಿಕರಿಗೆ ಭಾರತೀಯ ಸೇನಾ ದಿನಾಚರಣೆಯ ಶುಭಾಶಯಗಳು. 🙏🙏            🇮🇳🇮🇳🇮🇳
15/01/2025

ನಮ್ಮ ಹೆಮ್ಮೆಯ ಸೈನಿಕರಿಗೆ ಭಾರತೀಯ ಸೇನಾ ದಿನಾಚರಣೆಯ ಶುಭಾಶಯಗಳು. 🙏🙏

🇮🇳🇮🇳🇮🇳

 #ಅನಾಥ_ವ್ಯಕ್ತಿಗೆ_ಆಸರೆ. ಸುಂಟಿಕೊಪ್ಪದಲ್ಲಿ ಅನಾಥರಾಗಿ ನೆಲೆಸಿದ್ದ ತಮಿಳುನಾಡು ಮೂಲದ ವಯೋವೃದ್ಧ ವ್ಯಕ್ತಿಯ ನೆರವಿಗೆ ಧಾವಿಸಿದ ಸಮಾಜ ಸೇವಕ ಅಮೀ...
15/01/2025

#ಅನಾಥ_ವ್ಯಕ್ತಿಗೆ_ಆಸರೆ.

ಸುಂಟಿಕೊಪ್ಪದಲ್ಲಿ ಅನಾಥರಾಗಿ ನೆಲೆಸಿದ್ದ ತಮಿಳುನಾಡು ಮೂಲದ ವಯೋವೃದ್ಧ ವ್ಯಕ್ತಿಯ ನೆರವಿಗೆ ಧಾವಿಸಿದ ಸಮಾಜ ಸೇವಕ ಅಮೀರ್ ಅಬ್ಬಾಸ್ ಹಾಗೂ ಇತರರು ಆಹಾರೋಪಚಾರ ಒದಗಿಸಿ ಮಡಿಕೇರಿ ವಿಕಾಸ್ ಜನಸೇವಾ ಟ್ರಸ್ಟ್ ನ ಜೀವನಾದಾರಿ ಆಶ್ರಮಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸುಂಟಿಕೊಪ್ಪದಿಂದ ಹಿರಿಜೀವವನ್ನು ಬೀಳ್ಕೊಡುವ ಸಂದರ್ಭ ಅಮೀರ್ ಅಬ್ಬಾಸ್, ಆಟೋ ಚಾಲಕರಾದ ಶರೀಫ್ ಹಾಗೂ ಮುಧಾಸ್ಸಿರ್, ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ಎಂ.ಪಿ. ಮಂದಣ್ಣ, ಖಾದರ್ ಹಾಗೂ ಇತರರು ಇದ್ದರು.

14/01/2025

 #ಶಶಿ_ಸೋಮಯ್ಯಗೆ_ಕೆಯುಡಬ್ಲ್ಯುಜೆ_ಪ್ರಶಸ್ತಿ.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು ಪ್ರಶಸ್ತಿಗಳ ...
14/01/2025

#ಶಶಿ_ಸೋಮಯ್ಯಗೆ_ಕೆಯುಡಬ್ಲ್ಯುಜೆ_ಪ್ರಶಸ್ತಿ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು ಪ್ರಶಸ್ತಿಗಳ ಪೈಕಿ "ಶಕ್ತಿ" ದಿನಪತ್ರಿಕೆಯ ಕಾಯಪಂಡ ಶಶಿ ಸೋಮಯ್ಯ ಅವರಿಗೆ ಅತ್ಯುತ್ತಮ ಕ್ರೀಡಾ ವರದಿಗಾಗಿ ಎ. ನೆಟ್ಟಕಲಪ್ಪ ಪ್ರಶಸ್ತಿ ಲಭಿಸಿದೆ.

 #ಉದಿಯಂಡ_ಜಯಂತಿ_ಅವರಿಗೆ_ನಾರಾಯಣಪ್ಪ_ಸ್ಮಾರಕ_ಪ್ರಶಸ್ತಿಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ)ದಿಂದ ಕೊಡಮಾಡುವ ಯಜಮಾನ್ ಟಿ. ನಾರಾಯಣಪ್ಪ ಸ...
14/01/2025

#ಉದಿಯಂಡ_ಜಯಂತಿ_ಅವರಿಗೆ_ನಾರಾಯಣಪ್ಪ_ಸ್ಮಾರಕ_ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ)ದಿಂದ ಕೊಡಮಾಡುವ ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಜಿಲ್ಲಾಮಟ್ಟದ ಅತ್ಯುತ್ತಮ ಕೃಷಿ ವರದಿಗೆ ಭಾಜನರಾದ ಉದಿಯಂಡ ಜಯಂತಿ .

14/01/2025

ಾಳುಮಾಡುವ_ಹುನ್ನಾರ

ಮಡಿಕೇರಿ ನಗರದ NH275 ರಸ್ತೆ ಬದಿ ನೀರಿನ ಬಾಟಲಿಗಳನ್ನು ಎಸದಿರುವ ಕಿಡಿಗೇಡಿಗಳು.

#ಅಕ್ಕಪಕ್ಕದಲ್ಲೆಲ್ಲಾದರೂ_ಸಿಸಿಟಿವಿಯ_ವಿಡಿಯೋ_ಸಿಕ್ಕಿದ್ರೆ_ಯಾರು_ಈರೀತಿ_ಮಾಡುತ್ತಾರೆ_ಅನ್ನೋದು_ಗೊತಾಗುತ್ತೆ.

14/01/2025

#ಶಬರಿಮಲೆ_ಪೊನ್ನಂಬಲ_ಮೇಡು_ಬೆಟ್ಟದಲ್ಲಿ_ಪ್ರಜ್ವಲಿಸಿದ_ಮಕರ_ಜ್ಯೋತಿ.

ಸ್ವಾಮಿಯೇ ಶರಣಂ ಅಯ್ಯಪ್ಪ

 #ಮಡಿಕೇರಿ_ನಗರ_ಬಿಜೆಪಿಗೆ_ನೂತನ_ಸಾರಥಿ ಮಡಿಕೇರಿ ನಗರ ಬಿಜೆಪಿಯ ಅಧ್ಯಕ್ಷರಾಗಿ ಮುಂದಿನ 3 ವರ್ಷಗಳ ಅವಧಿಗೆ ಉಮೇಶ್ ಸುಬ್ರಮಣಿ ಅವರು ಆಯ್ಕೆಯಾಗಿದ್...
14/01/2025

#ಮಡಿಕೇರಿ_ನಗರ_ಬಿಜೆಪಿಗೆ_ನೂತನ_ಸಾರಥಿ

ಮಡಿಕೇರಿ ನಗರ ಬಿಜೆಪಿಯ ಅಧ್ಯಕ್ಷರಾಗಿ ಮುಂದಿನ 3 ವರ್ಷಗಳ ಅವಧಿಗೆ ಉಮೇಶ್ ಸುಬ್ರಮಣಿ ಅವರು ಆಯ್ಕೆಯಾಗಿದ್ದಾರೆ.

14/01/2025

#ಮಡಿಕೇರಿಯ_ಕೆಲವು_ಭಾಗಗಳಲ್ಲಿ_ಮಂಜಿನಂತೆ_ಹನಿಯುತ್ತಿರುವ_ಮಳೆ

 #ಮಡಿಕೇರಿಯಲ್ಲಿ_ಮೋಡ_ಕವಿದ_ವಾತಾವರಣ
14/01/2025

#ಮಡಿಕೇರಿಯಲ್ಲಿ_ಮೋಡ_ಕವಿದ_ವಾತಾವರಣ

 #ಸರ್ವರಿಗೂ_ಮಕರ_ಸಂಕ್ರಾಂತಿ_ಹಬ್ಬದ_ಶುಭಾಶಯಗಳು
14/01/2025

#ಸರ್ವರಿಗೂ_ಮಕರ_ಸಂಕ್ರಾಂತಿ_ಹಬ್ಬದ_ಶುಭಾಶಯಗಳು

 #ನಕಲಿ_ಅಂಕಪಟ್ಟಿ_ನೀಡಿ_ಕೆಲಸ_ಗಿಟ್ಟಿಸಿಕೊಂಡ_ಆರೊಪ_ಅಪರಾಧಿಗೆ_7ವರ್ಷ_ಶಿಕ್ಷೆನಕಲಿ ಅಂಕಪಟ್ಟಿಯನ್ನು ಸೃಷ್ಟಿಸಿ ಅಂಚೆ ಇಲಾಖೆಯಲ್ಲಿ ನೌಕರಿ ಪಡೆದು...
14/01/2025

#ನಕಲಿ_ಅಂಕಪಟ್ಟಿ_ನೀಡಿ_ಕೆಲಸ_ಗಿಟ್ಟಿಸಿಕೊಂಡ_ಆರೊಪ_ಅಪರಾಧಿಗೆ_7ವರ್ಷ_ಶಿಕ್ಷೆ

ನಕಲಿ ಅಂಕಪಟ್ಟಿಯನ್ನು ಸೃಷ್ಟಿಸಿ ಅಂಚೆ ಇಲಾಖೆಯಲ್ಲಿ ನೌಕರಿ ಪಡೆದು ಸರ್ಕಾರಕ್ಕೆ ವಂಚಿಸಿರುವ ಅಪರಾಧಕ್ಕಾಗಿ ವ್ಯಕ್ತಿಯೊಬ್ಬನಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1.25ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಕಾರೆಕಾಡು ಗ್ರಾಮದ ಎಂ.ಬಿ.ಸಂದೇಶ (32) ಎಂಬಾತನೇ ಶಿಕ್ಷೆಗೆ ಗುರಿಯಾದವನಾಗಿದ್ದಾನೆ. ಅಂಚೆ ಇಲಾಖೆಯಲ್ಲಿ 2019ನೇ ಸಾಲಿನಲ್ಲಿ ನಡೆದ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆ ನೇಮಕಾತಿಯಲ್ಲಿ ಆನ್‌ಲೈನ್‌ ಮುಖಾಂತರ ಎಂ.ಬಿ.ಸಂದೇಶ ಎಂಬಾತ ಅರ್ಜಿಯೊಂದಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ನಕಲಿ ಅಂಕಪಟ್ಟಿಯನ್ನು ಇಟ್ಟಿರುವುದು ದಾಖಲೆ ಪರಿಶೀಲನೆ ವೇಳೆ ಕಂಡುಬಂದಿತ್ತು.

ನಕಲಿ ಅಂಕಪಟ್ಟಿಯನ್ನು ಸೃಷ್ಟಿಸಿ ಇಲಾಖೆಗೆ ಸಲ್ಲಿಸಿ ಅಂಚೆ ಇಲಾಖೆಯಲ್ಲಿ ನೌಕರಿ ಪಡೆದು ಸರ್ಕಾರಕ್ಕೆ ಮೋಸ ಮಾಡಿರುವ ಬಗ್ಗೆ ಆತನ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 465, 468, 471, 417, 420 ಐಪಿಸಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು 2022ರ ಫೆ.25ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ತನಿಖಾಧಿಕಾರಿಯಾದ ಮಡಿಕೇರಿ ನಗರ ಠಾಣೆ ಪಿಎಸ್ಐ ಶ್ರೀನಿವಾಸ್, ತನಿಖಾ ಸಹಾಯಕಿಯಾದ ಹೆಚ್.ಸಿ.ದಿವ್ಯಾ ಅವರು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಆರೋಪಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪಣ ಪತ್ರದ ವಿಚಾರಣೆ ನಡೆಸಿದ ಮಡಿಕೇರಿಯ ಸಿನಿಯರ್ ಸಿವಿಲ್ ಜಡ್ಜ್ ಮತ್ತು ಸಿಜೆಎಂ. ನ್ಯಾಯಾಲಯದ ನ್ಯಾಯಾಧೀಶೆ ಎನ್.ಬಿ. ಜಯಲಕ್ಷ್ಮಿ ಅವರು ಆರೋಪಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಸರಕಾರಿ ಅಭಿಯೋಜಕ‌ ಬಿ.ಎಸ್. ಸಂತೋಷ್‌ ಅವರು ಸರಕಾರದ ಪರ ವಾದ ಮಂಡಿಸಿದರು.

 #ಸ್ನಾನ_ಮಾಡುತ್ತಿದ್ದ_ವೇಳೆ_ತೀವ್ರ_ಹೃದಯಾಘಾತ_ಮಹಿಳೆ_ಸಾವು.ಸ್ನಾನ ಮಾಡುತ್ತಿದ್ದ ವೇಳೆ ತೀವ್ರ ಹೃದಯಾಘಾತ ಸಂಭವಿಸಿ ಮಹಿಳೆ ಮೃತಪಟ್ಟ ಘಟನೆ ಹಾಸನ...
14/01/2025

#ಸ್ನಾನ_ಮಾಡುತ್ತಿದ್ದ_ವೇಳೆ_ತೀವ್ರ_ಹೃದಯಾಘಾತ_ಮಹಿಳೆ_ಸಾವು.

ಸ್ನಾನ ಮಾಡುತ್ತಿದ್ದ ವೇಳೆ ತೀವ್ರ ಹೃದಯಾಘಾತ ಸಂಭವಿಸಿ ಮಹಿಳೆ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ವೆಂಕಟಹಳ್ಳಿ ಗ್ರಾಮದಲ್ಲಿ ನಡೆದಿದೆ. ದೀಪಾ (35) ಹೃದಯಾಘಾತದಿಂದ ಸಾವನ್ನಪ್ಪಿದ ಮಹಿಳೆ ಎಂದು ತಿಳಿದಿದೆ.

ದೀಪಾ ರವರು ತಾಲ್ಲೂಕಿನ ವೀರಶೈವ ಸಮಾಜದ ಯುವ ವೇದಿಕೆಯ ಅಧ್ಯಕ್ಷ ಶಶಿಕುಮಾರ್ ಅವರ ಪತ್ನಿಯಾಗಿದ್ದಾರೆ‌. ದೀಪಾ ಹಾನುಬಾಳು ಹೊಬಳಿ ವೆಂಕಟಹಳ್ಳಿ ಗ್ರಾಮದವರೆಂದು ತಿಳಿದುಬಂದಿದೆ. ದೀಪಾರವರು ಸ್ನಾನ ಮಾಡುತ್ತಿದ್ದ ವೇಳೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದದ್ದು ಬಳಿಕ ಸಕಲೇಶಪುರ ತಾಲ್ಲೂಕಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ದೀಪಾರವರು ಪತಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದು ಮನೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 #ದೆಹಲಿ_ಗಣರಾಜ್ಯೋತ್ಸವ_ಕಾರ್ಯಕ್ರಮಕ್ಕೆ_ವಿಶೇಷ_ಅತಿಥಿಯಾಗಿ_ಹೆಚ್_ಎ_ಹಂಸ.ಇದೇ ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಗಣರಾಜ್ಯೋತ...
13/01/2025

#ದೆಹಲಿ_ಗಣರಾಜ್ಯೋತ್ಸವ_ಕಾರ್ಯಕ್ರಮಕ್ಕೆ_ವಿಶೇಷ_ಅತಿಥಿಯಾಗಿ_ಹೆಚ್_ಎ_ಹಂಸ.

ಇದೇ ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆಗಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ನ ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ ಅವರು ಆಯ್ಕೆಗೊಂಡಿದ್ದಾರೆ. ಭಾರತ ಸರ್ಕಾರದ ಪಂಚಾಯತ್ ರಾಜ್ಯ ಸಚಿವಾಲಯದ ನಿರ್ದೇಶನದ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರ ಹಂಸ ಅವರನ್ನು ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಯ್ಕೆ ಮಾಡಿದೆ.

ಹಂಸ ಅವರು ದೆಹಲಿ ಗಣರಾಜ್ಯೋತ್ಸವ ವಿಶೇಷ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯಿಂದ ಆಯ್ಕೆಗೊಂಡ ಏಕೈಕ ಜನನಾಯಕರಾಗಿದ್ದಾರೆ.
ಕಳೆದ 25 ವರ್ಷಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಚುನಾಯಿತ ಜನಪ್ರತಿನಿಧಿಯಾಗಿ ಜನಾನುರಾಗಿರುವ ಹಂಸ ಅವರು, ಗ್ರಾಮಾಭಿವೃದ್ಧಿಯಲ್ಲಿ ಸಾಬೀತುಪಡಿಸಿದ ಅತ್ಯುತ್ತಮ ಮಾದರಿ ಆಡಳಿತ, ಕ್ರಿಯಾಶೀಲತೆ ಹಾಗೂ ಜನೋಪಯೋಗಿ ಯೋಜನೆಗಳ ಮೂಲಕ ವಿಶೇಷ ಛಾಪು ಮೂಡಿಸಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಂಸ ಅವರಿಗೆ ಮತ್ತು ಅವರ ಗ್ರಾಮ ಪಂಚಾಯಿತಿಗೆ ಹಲವಾರು ರಾಜ್ಯ ಮತ್ತು ಜಿಲ್ಲಾಮಟ್ಟದ ಪ್ರಶಸ್ತಿಗಳು ಲಭಿಸಿತ್ತು.

13/01/2025

#ಮಡಿಕೇರಿಯಿಂದ_ಗಾಳಿಬೀಡು ಕಡೆ ತೆರಳುವ ರಸ್ತೆಯಲ್ಲಿ ಕಸ ಎಸೆದಿರುವ ಅನಾಗರಿಕರು. ಕುಡಿದ ಖಾಲಿ ಬಾಟಲಿಗಳು ಮತ್ತಿತರ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಎಸೆಯಲಾಗಿದೆ. ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕಿದೆ. ಆರ್ಡರ್ ಮಾಡಿರುವ ಕೋಡ್, ಪಾರ್ಸೆಲ್ ಪೊಟ್ಟಣದ ಮೇಲೆ ಲಭ್ಯವಿದೆ.

13/01/2025

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವವರೆಲ್ಲಾ ಮಾನಸಿಕ ಅಸ್ವಸ್ಥರಾಗುತ್ತಿದ್ದಾರೆ...ಹೇಗೆ?

13/01/2025

ಕೊಡಗು ಸೇರಿ ಕರ್ನಾಟಕದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಜ.14ರಿಂದ ಮಳೆ ಸಾಧ್ಯತೆ .
ವರ್ಷದ ಮೊದಲ ಚಂಡಮಾರುತ ಆಗಮನ.

Address

Madikeri
Kushalnagar
571201

Telephone

+919900280819

Website

Alerts

Be the first to know and let us send you an email when Coorg the Kashmir of Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Coorg the Kashmir of Karnataka:

Videos

Share