KA-07

KA-07 ನಮ್ಮ ಚಿನ್ನದ ನಾಡು ಕೋಲಾರದ ಬಗ್ಗೆ ಚೆಂದವಾ?
(11)

ಭಾರತದ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ – 18ನೇ ವಯಸ್ಸಿಗೆ ಸಾಧನೆ
13/12/2024

ಭಾರತದ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ – 18ನೇ ವಯಸ್ಸಿಗೆ ಸಾಧನೆ

ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು 🙏🏻🙏🏻ಜೈ ಶ್ರೀರಾಮ್॥ಜೈ ಆಂಜನೇಯ 🙏🏻
13/12/2024

ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು 🙏🏻🙏🏻

ಜೈ ಶ್ರೀರಾಮ್॥ಜೈ ಆಂಜನೇಯ 🙏🏻

ನಮ್ಮ ಕೋಲಾರ ಜಿಲ್ಲೆಯ ಮುಳಬಾಗಿಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಹೋಗಿದ್ದ ಒಟ್ಟು 46 ವಿದ್ಯಾರ್ಥಿಗಳು ಹಾಗ...
11/12/2024

ನಮ್ಮ ಕೋಲಾರ ಜಿಲ್ಲೆಯ ಮುಳಬಾಗಿಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಹೋಗಿದ್ದ ಒಟ್ಟು 46 ವಿದ್ಯಾರ್ಥಿಗಳು ಹಾಗು 7 ಮಂದಿ ಶಿಕ್ಷಕರ ಪೈಕಿ ನೀರಿಗಿಳಿದ ಏಳು ವಿದ್ಯಾರ್ಥಿಗಳ ಪೈಕಿ ನಾಲ್ಕು ವಿದ್ಯಾರ್ಥಿನಿಯರು ಶ್ರವಂತಿ ಗೋಪಾಲಪ್ಪ (15), ದೀಕ್ಷಾ(15), ಲಾವಣ್ಯಾ(15), ಲಿಪಿಕಾ(15) ಮೃತಪಟ್ಟಿದ್ದಾರೆ.

ಪೋಷಕರು ಶಿಕ್ಷಕರನ್ನು ನಂಬಿ ಮಕ್ಕಳನ್ನು ಪ್ರವಾಸಕ್ಕೆ ಕಳಿಸುತ್ತಾರೆ. ಇದ್ರಲ್ಲಿ ನೀರಿಗಿಳಿದ ಮಕ್ಕಳ ತಪ್ಪೋ ಅಥವಾ ಶಿಕ್ಷಕರ ತಪ್ಪೋ ಆದ್ರೆ 4 ಜೀವ ಅನ್ಯಾಯವಾಗಿ ಹೋಗಿದೆ.

ಎಲ್ಲರಿಗೂ ಭಾವಪೂರ್ಣ ಶ್ರದ್ದಾಂಜಲಿ 💐 ಅವರ ಕುಟುಂಬಗಳಿಗೆ ದೇವರು ಈ ದುಖಃವನ್ನು ಭರಿಸುವ ಶಕ್ತಿ ನೀಡಲಿ 🙏🏻

ಶ್ರೀ ಮಹಾಕೈಲಾಸಗಿರಿ ಕ್ಷೇತ್ರ, ಚಿಂತಾಮಣಿ 🙏🏻
11/12/2024

ಶ್ರೀ ಮಹಾಕೈಲಾಸಗಿರಿ ಕ್ಷೇತ್ರ, ಚಿಂತಾಮಣಿ 🙏🏻

ನಾಳೆ ನಮ್ಮ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
10/12/2024

ನಾಳೆ ನಮ್ಮ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕರ್ನಾಟಕದ ಹತ್ತನೇ ಮುಖ್ಯಮಂತ್ರಿಯಾಗಿ, ದೇಶದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಮತ್ತು ಭಾರತದ ರಾಜಕಾರಣದಲ್ಲಿ ಇನ್ನೂ ಅನೇಕ ಜವ...
10/12/2024

ಕರ್ನಾಟಕದ ಹತ್ತನೇ ಮುಖ್ಯಮಂತ್ರಿಯಾಗಿ, ದೇಶದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಮತ್ತು ಭಾರತದ ರಾಜಕಾರಣದಲ್ಲಿ ಇನ್ನೂ ಅನೇಕ ಜವಾಬ್ದಾರಿಗಳನ್ನು ವಹಿಸಿ ಛಾಪು ಮೂಡಿಸಿದ್ದ ಹಾಗು ಬೆಂಗಳೂರು ಸಿಲಿಕಾನ್ ಸಿಟಿ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಸ್​​ಎಂ ಕೃಷ್ಣ ರವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಭಾವಪೂರ್ಣ ಶ್ರದ್ದಾಂಜಲಿ ಸರ್ 💐🙏🏻

09/12/2024

ನಮ್ಮ ಕೋಲಾರದಲ್ಲಿ WeatherSeal Doors and Windows by Asian Paints॥ಸಾಯಿ ಸೆಲ್ಯೂಷನ್ಸ್॥ಏಷಿಯನ್ ಪೈಂಟ್ಸ್ ರವರ ವೆದರ್ ಸೀಲ್ ಬಾಗಿಲುಗಳು ಹಾಗು ಕಿಟಕಿಗಳುAddress- WeatherSeal, Sai Solutions, Next to SaiDham Hotel, Near New BusStand, Kuvempunagar, Antharagange road, Kolara

ನಮ್ಮ ಕೋಲಾರದ ಪುರಾಣಪ್ರಸಿದ್ದ ಅಂತರಗಂಗೆ ಕ್ಷೇತ್ರದಲ್ಲಿ ಡಿಸೆಂಬರ್ 13ನೇ ತಾರೀಖು ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿದೆ 🙏🏻🙏🏻ನಮ್ಮ ಸಂಸ್ಕೃತಿ ನ...
08/12/2024

ನಮ್ಮ ಕೋಲಾರದ ಪುರಾಣಪ್ರಸಿದ್ದ ಅಂತರಗಂಗೆ ಕ್ಷೇತ್ರದಲ್ಲಿ ಡಿಸೆಂಬರ್ 13ನೇ ತಾರೀಖು ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿದೆ 🙏🏻🙏🏻

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 🙏🏻

45 ಬೋಗಿ॥Goods Train in Kolar॥Traffic problem॥Sanitorium railway gate॥Kolar-Bangarpet roadಮ್ಮ ಕೋಲಾರದಲ್ಲಿ ಇಂದು ನಾನು ಕಂಡಂತಹ...
07/12/2024

45 ಬೋಗಿ॥Goods Train in Kolar॥Traffic problem॥Sanitorium railway gate॥Kolar-Bangarpet road

ಮ್ಮ ಕೋಲಾರದಲ್ಲಿ ಇಂದು ನಾನು ಕಂಡಂತಹ ದೊಡ್ಡ ಗೂಡ್ಸ್ ರೈಲನ್ನು ತೋರಿಸುವ ಪ್ರಯತ್ನ 😍

ಕೋಲಾರ-ಬಂಗಾರಪೇಟೆ ರಸ್ತೆಯ ಸ್ಯಾನಿಟೋರಿಯಂ ರೈಲ್ವೆ ಗೇಟ್ ಬಳಿ ತುಂಬಾ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು ದಯವಿಟ್ಟು ಇಲ್ಲಿ ಅಂಡರ್ ಪಾಸ್ ನಿರ್ಮಿಸಿದರೆ ಜನತೆಗೆ ಉಪಯೋಗವಾಗುತ್ತದೆ 🙏🏻

#ಸ್ಯಾನಿಟೋರಿಯಂ_ರೈಲ್ವೇ_ಗೇಟ್ #ದಯವಿಟ್ಟು_ಶೇರ್_ಮಾಡಿ

ನಮ್ಮ ಕೋಲಾರದಲ್ಲಿ ಇಂದು ನಾನು ಕಂಡಂತಹ ದೊಡ್ಡ ಗೂಡ್ಸ್ ರೈಲನ್ನು ತೋರಿಸುವ ಪ್ರಯತ್ನ 😍 ಕೋಲಾರ-ಬಂಗಾರಪೇಟೆ ರಸ್ತೆಯ ಸ್ಯಾನಿಟೋರಿಯಂ ರ.....

ಫೆಂಗಲ್ ಚಂಡಮಾರುತ ಎಫೆಕ್ಟ್‌ : ನಮ್ಮ ಕೋಲಾರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಮಂಗಳವಾರವೂ(December 3,2024) ರಜೆ ಘೋಷಣೆ..!                  ...
02/12/2024

ಫೆಂಗಲ್ ಚಂಡಮಾರುತ ಎಫೆಕ್ಟ್‌ : ನಮ್ಮ ಕೋಲಾರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಮಂಗಳವಾರವೂ(December 3,2024) ರಜೆ ಘೋಷಣೆ..!

ನಮ್ಮ ಕೋಲಾರದ ಹುಡುಗಿ ನಾಗಶ್ರೀ ರವರು ಸರಿಗಮಪ ಗೆ ಆಯ್ಕೆಯಾಗಲು ಪ್ರಯತ್ನಿಸುತ್ತಿದ್ದಾರೆ ಒಳ್ಳೆಯದಾಗಲಿ 👍🏻🙏🏻
02/12/2024

ನಮ್ಮ ಕೋಲಾರದ ಹುಡುಗಿ ನಾಗಶ್ರೀ ರವರು ಸರಿಗಮಪ ಗೆ ಆಯ್ಕೆಯಾಗಲು ಪ್ರಯತ್ನಿಸುತ್ತಿದ್ದಾರೆ ಒಳ್ಳೆಯದಾಗಲಿ 👍🏻🙏🏻

Antharagange Jathre and Kannada Rajyotsava Celebrations in Kolara॥ಅಂತರಗಂಗೆ ಜಾತ್ರೆ॥ಕನ್ನಡ ರಾಜ್ಯೋತ್ಸವ ❤️💛ದಯವಿಟ್ಟು KA-07 ಯೂಟ...
01/12/2024

Antharagange Jathre and Kannada Rajyotsava Celebrations in Kolara॥ಅಂತರಗಂಗೆ ಜಾತ್ರೆ॥ಕನ್ನಡ ರಾಜ್ಯೋತ್ಸವ ❤️💛

ದಯವಿಟ್ಟು KA-07 ಯೂಟ್ಯೂಬ್ ಚಾನಲ್ ಗೆ Subscribe ಆಗಿ ಪ್ರೋತ್ಸಾಹಿಸಿ ಸ್ನೇಹಿತರೆ 👍🏻🙏🏻

...

ಕೋಲಾರದ ಪುರಾಣಪ್ರಸಿದ್ದ ದಕ್ಷಿಣ ಕಾಶೀ ಕ್ಷೇತ್ರ ಅಂತರಗಂಗೆ ಶ್ರೀ ಕಾಶೀ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯು...
25/11/2024

ಕೋಲಾರದ ಪುರಾಣಪ್ರಸಿದ್ದ ದಕ್ಷಿಣ ಕಾಶೀ ಕ್ಷೇತ್ರ ಅಂತರಗಂಗೆ ಶ್ರೀ ಕಾಶೀ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ ದೇವರಿಗೆ ಇಂದು ಮಾಡಿರುವ ವಿಶೇಷ ಅಲಂಕಾರ 🙏

ಓಂ ನಮಃ ಶಿವಾಯ 🙏

#ಅಂತರಗಂಗೆ #ದಕ್ಷಿಣಕಾಶೀಕ್ಷೇತ್ರ #ಕೋಲಾರ

ಈ ಮಹಾನ್ ವಿಜ್ಞಾನಿಯ ಬಗ್ಗೆ ನಿಮ್ಮ ಅಭಿಪ್ರಾಯ ಸ್ನೇಹಿತರೆ?
22/11/2024

ಈ ಮಹಾನ್ ವಿಜ್ಞಾನಿಯ ಬಗ್ಗೆ ನಿಮ್ಮ ಅಭಿಪ್ರಾಯ ಸ್ನೇಹಿತರೆ?

“ಹುಂಡಿಯಲ್ಲಿ ಹಾಕಿದ ಹಣ ದೇವರಿಗೆ” ಅಂತೆ 🤦🏻‍♂️😡ನಾವು ಭಕ್ತಿಯಿಂದ ಹುಂಡಿಯಲ್ಲಿ ಹಾಕೋ ಕಾಣಿಕೆ ಸಮಾಜದ ಒಳ್ಳೆಯ ಕೆಲಸಕ್ಕೆ ಉಪಯೋಗವಾಗಲಿ ಎಂದು ನಾವ...
21/11/2024

“ಹುಂಡಿಯಲ್ಲಿ ಹಾಕಿದ ಹಣ ದೇವರಿಗೆ” ಅಂತೆ 🤦🏻‍♂️😡

ನಾವು ಭಕ್ತಿಯಿಂದ ಹುಂಡಿಯಲ್ಲಿ ಹಾಕೋ ಕಾಣಿಕೆ ಸಮಾಜದ ಒಳ್ಳೆಯ ಕೆಲಸಕ್ಕೆ ಉಪಯೋಗವಾಗಲಿ ಎಂದು ನಾವೇನೋ ಖುಷಿಪಡುತ್ತೇವೆ ಆದರೆ ಇದೇ ಮನಸ್ಥಿತಿ ಬೇರೆ ಧರ್ಮದವರಿಗೂ ಇದ್ದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ?

“ಹುಂಡಿಯಲ್ಲಿ ಹಾಕೋ ಕಾಣಿಕೆ ದೇವರಿಗೆ”

ಮಂತ್ರಾಲಯ ವಕ್ಫ್ ಆಸ್ತಿ ಎಂಬ ಇಬ್ರಾಹಿಂ ರವರ ಹೇಳಿಕೆಗೆ ಪ್ರತಾಪ್ ಸಿಂಹ ರವರು ಕೆಂಡಾಮಂಡಲ. ಮಂತ್ರಾಲಯ ಹಾಗು ಶೃಂಗೇರಿ ಮಠದ ಆಸ್ತಿಯಲ್ಲೂ ವಕ್ಫ್ ಪ...
20/11/2024

ಮಂತ್ರಾಲಯ ವಕ್ಫ್ ಆಸ್ತಿ ಎಂಬ ಇಬ್ರಾಹಿಂ ರವರ ಹೇಳಿಕೆಗೆ ಪ್ರತಾಪ್ ಸಿಂಹ ರವರು ಕೆಂಡಾಮಂಡಲ. ಮಂತ್ರಾಲಯ ಹಾಗು ಶೃಂಗೇರಿ ಮಠದ ಆಸ್ತಿಯಲ್ಲೂ ವಕ್ಫ್ ಪಾಲಿದೆ ಎಂದೂ ಇಬ್ರಾಹಿಂ ಹೇಳಿಕೆ ಕೊಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

ನಮ್ಮ ಕೋಲಾರದ ಪುರಾಣಪ್ರಸಿದ್ದ ಕ್ಷೇತ್ರ ಅಂತರಗಂಗೆಯಲ್ಲಿ ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಪ್ರತಿವರ್ಷದಂತೆ ಈ ವರ್ಷವೂ ಅಂತರಗಂಗೆ ಜಾತ್ರೆ ಹಮ್ಮ...
20/11/2024

ನಮ್ಮ ಕೋಲಾರದ ಪುರಾಣಪ್ರಸಿದ್ದ ಕ್ಷೇತ್ರ ಅಂತರಗಂಗೆಯಲ್ಲಿ ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಪ್ರತಿವರ್ಷದಂತೆ ಈ ವರ್ಷವೂ ಅಂತರಗಂಗೆ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ 🙏🏻

ನಮ್ಮ ಕೋಲಾರ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 🙏🏻

#ಭಜರಂಗದಳ #ವಿಶ್ವಹಿಂದೂಪರಿಷದ್

ಪುರಾಣಪ್ರಸಿದ್ದ ಶ್ರೀ ಪಾದರಾಜರ ಮಠ, ನರಸಿಂಹತೀರ್ಥ, ಮುಳಬಾಗಿಲು, ಕೋಲಾರ ಜಿಲ್ಲೆ 🙏🏻“ಶ್ರೀಪಾದರಾಜರು ಸಶರೀರವಾಗಿ ವೃಂದಾವನವನ್ನು ಪ್ರವೇಶಿಸಿದ ಸ್...
20/11/2024

ಪುರಾಣಪ್ರಸಿದ್ದ ಶ್ರೀ ಪಾದರಾಜರ ಮಠ, ನರಸಿಂಹತೀರ್ಥ, ಮುಳಬಾಗಿಲು, ಕೋಲಾರ ಜಿಲ್ಲೆ 🙏🏻

“ಶ್ರೀಪಾದರಾಜರು ಸಶರೀರವಾಗಿ ವೃಂದಾವನವನ್ನು ಪ್ರವೇಶಿಸಿದ ಸ್ಥಳ”

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾಗಿ, ಅವರ ನಂತರ ವೇದಾಂತ ಸಾಮ್ರಾಜ್ಯವನ್ನು ಆಳಿದವರೇ ಶ್ರೀ ಪದ್ಮನಾಭ ತೀರ್ಥರು. ಇವರು ಪ್ರತಿಷ್ಠಾಪಿಸಿದ ಮಠವೇ ಶ್ರೀ ಪಾದರಾಜ ಮಠ.

ಶ್ರೀ ಪದ್ಮನಾಭ ತೀರ್ಥರ ನಂತರ ಏಳನೆಯವರಾಗಿ, ಈ ಮಠಕ್ಕೆ ಪೀಠಾಧಿಪತಿಗಳಾದವರು, ಶ್ರೀ ಲಕ್ಷ್ಮೀನಾರಾಯಣ ಮುನಿಗಳು, ಇವರೇ ಶ್ರೀಪಾದರಾಜರು ಎಂದು ಪ್ರಸಿದ್ಧಿ ಪಡೆದವರು. ಇವರ ವಿದ್ಯಾಗುರುಗಳು ಶ್ರೀ ವಿಭುದೆಂದ್ರ ತೀರ್ಥರು ಮತ್ತು ಆಶ್ರಮ ಗುರುಗಳು ಶ್ರೀ ಸ್ವರ್ಣವರ್ಣತೀರ್ಥರು (ಶ್ರೀರಂಗದಲ್ಲಿ ಇವರ ವೃಂದಾವನ ಇದೆ).

ಶ್ರೀಪಾದರಾಜರು “ವಾಗ್ವ್ರಜ” ಎಂಬ ಸಂಸ್ಕೃತ ಗ್ರಂಥವನ್ನು ರಚಿಸಿದ್ದಾರೆ. ಹರಿದಾಸ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ. ‘ರಂಗವಿಠ್ಠಲ’ ಎಂಬ ಅಂಕಿತದಡಿ ಇವರು ಸುಮಾರು 80 ಕೀರ್ತನೆಗಳು, 17 ಉಗಾಭೋಗಗಳು, 3 ಸುಳಾದಿಗಳು, 1 ವೃತ್ತಾನಾಮ, ಹಾಗೂ 1 ದಂಡಕ ಗಳನ್ನು ರಚಿಸಿದ್ದಾರೆ. ಜ್ಯೇಷ್ಠ ಶುದ್ಧ ಚತುರ್ದಶೀ ದಿನದಂದು ಸಶರೀರವಾಗಿ ವೃಂದಾವನವನ್ನು ಪ್ರವೇಶಿಸಿದರು.

ಈ ಮಠವು, ಈಗಿನ ಕೋಲಾರ ಜಿಲ್ಲೆಯ ಮುಳಬಾಗಿಲಿನ ನರಸಿಂಹತೀರ್ಥದಲ್ಲಿದೆ.

ಈ ಕ್ಷೇತ್ರದಲ್ಲಿ ಶ್ರೀಪಾದರಾಜರ ಮೂಲ ಬೃಂದಾವನವಿದೆ. ಇವರು ವ್ಯಾಸತೀರ್ಥರ ವಿದ್ಯಾ ಗುರುಗಳಾಗಿದ್ದಾರೆ. ಶ್ರೀಪಾದರಾಜರನ್ನು ಧ್ರುವ ರಾಜರ ಅವತಾರವೆಂದು ಹೇಳುತ್ತಾರೆ. ಇಲ್ಲಿ, ಶ್ರೀ ಅಕ್ಷೋಭ್ಯ ತೀರ್ಥರು ಪ್ರತಿಷ್ಠಾಪಿಸಿರುವ ಶ್ರೀ ನರಸಿಂಹ ದೇವರು ಹಾಗೂ ಶ್ರೀ ವ್ಯಾಸ ತೀರ್ಥರು ಪ್ರತಿಷ್ಠಾಪಿಸಿರುವ ಶ್ರೀ ಮುಖ್ಯಪ್ರಾಣ ದೇವರನ್ನು ಕಾಣಬಹುದಾಗಿದೆ.

ನೀವೂ ಒಮ್ಮೆ ಈ ಪುರಾಣಪ್ರಸಿದ್ದ ಸ್ಥಳಕ್ಕೆ ಭೇಟಿ ನೀಡಿ...🙏🏻

#ಶ್ರೀಪಾದರಾಜರಮಠ #ಮುಳಬಾಗಿಲು #ಕೋಲಾರಜಿಲ್ಲೆ #ನೋಡಲೇಬೇಕಾದ_ಸ್ಥಳ #ಪುರಾಣಪ್ರಸಿದ್ದ_ಕ್ಷೇತ್ರ

Address

Kolar

Website

Alerts

Be the first to know and let us send you an email when KA-07 posts news and promotions. Your email address will not be used for any other purpose, and you can unsubscribe at any time.

Contact The Business

Send a message to KA-07:

Videos

Share


Other News & Media Websites in Kolar

Show All