Channel coorg

Channel coorg The First "News & Entertainment Channel" In Kodagu - Since 2003 | Print Media - Coorg Express ᴋᴏᴅᴀɢᴜ ɴᴇᴛᴡᴏʀᴋ ᴍᴇᴅɪᴀ ɢʀᴏᴜᴘ.
(4)

The First News & Entertainment Channel in Kodagu, Since 2003.
ᴘʀɪɴᴛ ᴍᴇᴅɪᴀ �
COORG EXPRESS - Weekly Kannada Magazine.

09/08/2024

ಪುಣ್ಯಕ್ಷೇತ್ರವನ್ನು ಬಿಡದ ಕಳಪೆ ಕಾಮಗಾರಿ, ಭ್ರಷ್ಟಾಚಾರ. https://youtu.be/1TJuhHZ-DDo?si=FNd9-UbN5hgfmsL8ಭಾಗಮಂಡಲ ಉದ್ಯಾನವನ ನಿರ್ಮಾಣದಲ್ಲಿ ಕೋಟಿ ಕೋಟಿ ಹಣ ನೀರು ಪಾಲು. ಸಸಿಗಳು ಡ್ರಾಟ್ ಟಾಲರೆಂಟ್. ಉದ್ಯಾನವನ ಡ್ರಾಟ್ ಸೆನ್ಸಿಟಿವ್. Watch now⤵️https://youtu.be/1TJuhHZ-DDo?si=FNd9-UbN5hgfmsL8

ಪುಣ್ಯಕ್ಷೇತ್ರವನ್ನು ಬಿಡದ ಕಳಪೆ ಕಾಮಗಾರಿ, ಭ್ರಷ್ಟಾಚಾರ..... ಭಾಗಮಂಡಲ ಉದ್ಯಾನವನ ನಿರ್ಮಾಣದಲ್ಲಿ ಕೋಟಿ ಕೋಟಿ ಹಣ ನೀರು ಪಾಲು.... ಸಸಿಗಳು ಡ್ರ...
09/08/2024

ಪುಣ್ಯಕ್ಷೇತ್ರವನ್ನು ಬಿಡದ ಕಳಪೆ ಕಾಮಗಾರಿ, ಭ್ರಷ್ಟಾಚಾರ.....

ಭಾಗಮಂಡಲ ಉದ್ಯಾನವನ ನಿರ್ಮಾಣದಲ್ಲಿ ಕೋಟಿ ಕೋಟಿ ಹಣ ನೀರು ಪಾಲು....

ಸಸಿಗಳು ಡ್ರಾಟ್ ಟಾಲರೆಂಟ್. ಉದ್ಯಾನವನ ಡ್ರಾಟ್ ಸೆನ್ಸಿಟಿವ್....

Watch now⤵️
https://youtu.be/1TJuhHZ-DDo?si=FNd9-UbN5hgfmsL8

# # # # # # # # # # # # #

CHANNEL COORG /COORG EXPRESS NEWS UPDATE
# # # # # # # # # # # # #
ಕೊಡಗಿನ ಭಾಗಮಂಡಲ ಪ್ರದೇಶ ಇತ್ತೀಚಿಗೆ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತ ಹೋಗುತ್ತಿದೆ. ಇದೀಗ ಭಾಗಮಂಡಲದಲ್ಲಿ ಕಳೆದ ಏಳು ತಿಂಗಳ ಹಿಂದೆ ನಡೆದ ಉದ್ಯಾನವನ ಕಾಮಗಾರಿ ಅವೈಜ್ಞಾನಿಕ ಹಾಗೂ ತೀರಾ ಕಳಪೆ ಮಟ್ಟದಿಂದ ಕೂಡಿದು ಹಣ ದುರುಪಯೋಗದ ವಾಸನೆ ಇಲ್ಲಿನ ಸಾರ್ವಜನಿಕರ ಮೂಗಿಗೆ ಬಡಿಯುತ್ತಿದೆ*.

ಮುಜರಾಯಿ ಇಲಾಖೆಯಿಂದ 2 ಕೋಟಿ ಮಂಜುರಾಗಿ ಬಿಡುಗಡೆಗೊಂಡಿದ್ದು ಅದರಲ್ಲಿ ಕೇವಲ ಏಳು ತಿಂಗಳ ಒಳಗೆ ತರಾತುರಿಯಲ್ಲಿ 1ಕೋಟಿ 92 ಲಕ್ಷದ 80ಸಾವಿರದ ಕಾಮಗಾರಿ ನಡೆದು ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಹಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ (KRIDL ) ಗೆ ಪಾವತಿಯಾಗಿದೆ. ಇದೀಗ ನಿರ್ವಹಣೆಯನ್ನು ತಲಕಾವೇರಿ ಭಾಗಮಂಡಲ ವ್ಯವಸ್ಥಾಪನ ಸಮಿತಿಗೆ ಹಸ್ತಂತರಿಸಿ ಕೈ ತೊಳೆದುಕೊಂಡಿದೆ.

ಕಳೆದ ಜೂನ್ ತಿಂಗಳಿಂದ ಹೊಡೆದ ಮಳೆಗೆ ಎರಡು ಬಾರಿ ಭಾಗಮಂಡಲ ಜಲಾವೃತಗೊಂಡಿತು. ಈ ಸಂದರ್ಭ ಅವಜ್ಞಾನಿಕ ಉದ್ಯಾನವನದ ಮೇಲೆ ನೀರು ನಿಂತ ನಂತರ ನೋಡಿದಾಗ ಉದ್ಯಾನವನದ ಕಬ್ಬಿಣದ ಗ್ರಿಲ್ ಗೇಟ್ ಗಳು ನೆಲ ಕಚ್ಚಿವೆ , ನೀರು ನಿಂತು ಅಲ್ಲಿರುವ ಗಿಡಗಳು ಕೊಳೆತಿದೆ. ಅಳವಡಿಸಿದ ಅಲಂಕಾರಿಕ ವಿದ್ಯುತ್ ದೀಪದ ಒಳಗಡೆ ಮಣ್ಣು ಸೇರಿಕೊಂಡಿದೆ, ವಿದ್ಯುತ್ ತಂತಿಗಳು ತುಕ್ಕು ಹಿಡಿಯಲು ಆರಂಭವಾಗಿದೆ. ಮೆಟ್ಟುಲುಗಳ ಕೆಲವು ಟೈಲ್ಸ್ ಎಲ್ಲ ಕಳಚಿಕೊಂಡಿದೆ. ಕೆಸರು ಆವರಿಸಿಕೊಂಡು ಜನರಿಗೆ ನಡೆದಾಡಲು ಕಷ್ಟ ಸಾಧ್ಯವಾಗಿ ದೇವಾಲಯದ ಸಿಬ್ಬಂದಿಗಳು ಒಂದು ಬದಿ ಟೈಲ್ಸ್ ಮಣ್ಣುಗಳನ್ನು ತೆರವುಗೊಳಿಸಿ ನಡೆದಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ನೈಸರ್ಗಿಕವಾಗಿ ನೀರು ಹರಿಯಲು ಈ ಅವೈಜ್ಞಾನಿಕ ಉದ್ಯಾನವನದಿಂದ ತೊಂದರೆ ಉಂಟಾಗಿ ಅಲ್ಲಲ್ಲಿ ನಿರ್ಮಿಸಿದ ನೀರೆಲ್ಲವೂ ಹಿಂಬದಿಗೆ ಸರಿದು ಮತ್ತಷ್ಟು ಅನಾಹುತಕ್ಕೆ ಎಡೆ ಮಾಡಿ ಕೊಟ್ಟಿತ್ತು.

ಕಾಮಗಾರಿ ಆರಂಭವಾದಗಳೇ ಈ ಭಾಗದ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇವರ ಮಾತಿಗೆ ಸೊಪ್ಪು ಹಾಕಿಲ್ಲ.. 1997ರ ಅವಧಿಯಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷರಾಗಿದ್ದ ಮಾತಂಡ ಮೊನ್ನಪ್ಪನವರ ನೇತೃತ್ವದಲ್ಲಿ ರಚನೆಗೊಂಡಿದ್ದ ತಲಕಾವೇರಿ ಅಭಿವೃದ್ಧಿ ಹೋರಾಟ ಸಮಿತಿಯು ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಚಂದ್ರಕಲಾ ರವರ ಪ್ರಯತ್ನದಿಂದ ಅಂದಿನ ಮುಖ್ಯಮಂತ್ರಿಗಲಾದ ಎಸ್ ಎಂ ಕೃಷ್ಣ ಅವರು 10.30 ಕೋಟಿ ಇದರ ಅಭಿವೃದ್ಧಿಗಾಗಿ ಹಣ ಬಿಡುಗಡೆಗೊಳಿಸಿ ತಲಕಾವೇರಿ ಭಾಗಮಂಡಲ ಜೀರ್ಣೋದ್ಧಾರಕ್ಕೆ ಅವಕಾಶ ಮಾಡಿಕೊಟ್ಟರು . ನಂತರ ಬಂದ ಮುಖ್ಯಮಂತ್ರಿಗಳೆಲ್ಲ ಅನುದಾನವನ್ನು ಹೆಚ್ಚಿಸಿ ಇಂದು ಸುಸಜ್ಜಿತವಾಗಿ ಭಾಗಮಂಡಲ ತಲಕಾವೇರಿ ಜೀರ್ಣೋದ್ಧಾರವಾಗಿದೆ. ಪರಿಸರ ಸ್ನೇಹಿ ಅಭಿವೃದ್ಧಿ ಅಂದು ನಡೆದಿತ್ತು.

ಅಂದು ಈ ಪ್ರದೇಶದ ಲ್ಲಿ ಉದ್ಯಾನವನ ನಿರ್ಮಿಸಲು ಅಭಿವೃದ್ಧಿ ಕಾಮಗಾರಿಯ ಮೇಲ್ವಿಚಾರಣೆ ವಹಿಸಿಕೊಂಡಿದ್ದ ರಾಜ್ಯದ ಲೋಕೋಪಯೋಗಿ ಇಲಾಖೆಯ ಅಭ್ಯಂತರರು ಹಾಗೂ ತಲಕಾವೇರಿ ಅರ್ಚಕ ಕುಟುಂಬದ ಸದಸ್ಯರು ಆಗಿದ್ದ ಮನಮೋಹನ್ ರವರು ತ್ರಿವೇಣಿ ಸಂಗಮದ ಬಳಿ ಹೆಚ್ಚಿನ ಅಭಿವೃದ್ಧಿಯನ್ನು ನಿರಾಕರಿಸಿದ್ದರು. ನೈಸರ್ಗಿಕವಾಗಿ ನೀರು ಹರಿಯಲು ಅವಕಾಶ ಮಾಡಬೇಕೆನಃ ಅಭಿವೃದ್ಧಿಯ ಹೆಸರಲ್ಲಿ ನೀರನ್ನು ಅಡ್ಡಗಟ್ಟಿ ಮತ್ತಷ್ಟು ದುರಂತಕ್ಕೆ ಅವಕಾಶ ಮಾಡಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿ ಹೆಚ್ಚಿನ ಅಭಿವೃದ್ಧಿಯನ್ನು ಅಂದು ತ್ರಿವೇಣಿ ಸಂಗಮದ ಬಳಿ ನಡೆಸಿಲ್ಲ. ಆದರೆ ಇಂದು ಇಲ್ಲಿನ ಸ್ಥಿತಿ ಗತಿಯನ್ನು ಅರಿಯದೆ ಹಿಂದುಮುಂದು ನೋಡದೆ ಎರಡು ಕೋಟಿಯಷ್ಟ್ಟು ಸರ್ಕಾರದ ಹಣವನ್ನು ಅನವಶ್ಯಕವಾಗಿ ಪೋಲು ಮಾಡಿದನ್ನು ತಲಕಾವೇರಿ ಭಾಗಮಂಡಲ ಅಭಿವೃದ್ಧಿ ಹೋರಾಟ ಸಮಿತಿಯ ಪ್ರಮುಖರಲ್ಲಿ ಒಬ್ಬರಾದ ಹಾಗೂ ಸ್ಥಳೀಯರು ಮತ್ತು ಸಮಾಜ ಸೇವಕರಾದ ಕೆ. ಭಾರತ್ ರವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಚಾನಲ್ ಕೂರ್ಗ್ ಕಳೆದ ನಾಲ್ಕು ತಿಂಗಳ ಹಿಂದೆ ಈ ಬಗ್ಗೆ ವರದಿಯನ್ನು ಪ್ರಕಟಿಸಿತ್ತು. ನಿಗಮದ ಇಂಜಿನಿಯರ್ ಮದನ್ ಸ್ಥಳೀಯ ಕೇಬಲ್ ಮಾಧ್ಯಮ ಒಂದರಲ್ಲಿ ಡ್ರಾಟ್ ಟಾಲರೆಂಟ್ ( ಬರ ಸಹಿಷ್ಣು ಸಸ್ಯಗಳು) ಗಿಡಗಳನ್ನು ಇಲ್ಲಿ ಹಾಕಲಾಗಿದ್ದು ಇದರ ರೂಟ್ಸ್ ಏನು ಆಗಲ್ಲ ಎಲೆಗಳು ಹಾಳಾಗಬಹುದು ಅಷ್ಟೇ ಮತ್ತೆ ಬಿಸಿಲಿಗೆ ಚಿಗುರಿಕೊಳ್ಳುತ್ತದೆ ಎಂದಿದ್ದರು. ನಿಜ ಗಿಡ ಚಿಗುರಬಹುದೇನೋ ಆದರೆ ಸುತ್ತ ನಿರ್ಮಿಸಿ ಇದೀಗ ನೆಲ ಕಚ್ಚಿರುವ ಗ್ರಿಲ್ ಗೇಟ್ ಗಳು, ನೆಲಹಾಸಿನ ಟೈಲ್ಸ್ ಗಳು ಚಿಗುರುತದೆಯೇ ಎಂಬುದಕ್ಕೆ ಉತ್ತರಿಸಬೇಕಾಗಿದೆ. ವರದಿಯ ಬಗೆ ಕೆಲವರು ವಾಸ್ತವ ಅರಿಯದೆ ಏನೇನೋ ಗೀಚಿಕೊಂಡಿದ್ದರು. ಕೆಲವರು ಈ ಅಭಿವೃದ್ಧಿಯನ್ನು ಹಾಡಿ ಹೊಗಳಿದರು. ಆದರೆ ಇಂದು ಈ ಉದ್ಯಾನವನ ಹೇಗಾಗಿದ್ದೆ ನೋಡಿ *ಯಾರ ಹೊಟ್ಟೆ ತುಂಬಿಸಲು ಈ ಕಾಮಗಾರಿ ನಡೆದಿದೆ ಎಂಬುದನ್ನು ಹಲವರು ಪ್ರಶ್ನಿಸುತ್ತಿದ್ದಾರೆ*. ಈ ಪ್ರದೇಶದಲ್ಲಿ ಪ್ರತಿ ವರ್ಷವೂ ಕೂಡ ಜಲಾವೃತವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದ್ದರೂ ಕೂಡ ಈ ಕಾಮಗಾರಿ ನಡೆಸಿದ ಉದ್ದೇಶವೇನು, ಇದರ ಹಿಂದಿನ ಮರ್ಮವೇನು ಎಂಬುದು ಇದೀಗ ಅರಿಯಬೇಕಾಗಿದೆ.

*ಜನಪ್ರತಿನಿಧಿಗಳು ಇಂಥ ಬ್ರಷ್ಟಾಚಾರದ ಕೆಲಸಕ್ಕೆ ಕೈ ಹಾಕಬಾರದಿತ್ತು , ಬೇರೆ ರೀತಿಯಲ್ಲಿ ಬಿಂಬಿಸಿ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸವನ್ನು ನಿಲ್ಲಿಸಿ, ತಮ್ಮಗಳ ಸೇವೆಗೆ ಕಳಂಕ ತರುವಂತ ಕೆಲಸ ಮಾಡದಂತೆ ಎಚ್ಚರ ವಹಿಸಿಕೊಳ್ಳಬೇಕಾಗಿದೆ* ಎಂಬುದು ಎಲ್ಲರ ಆಶಯ ಕೂಡ ಆಗಿದೆ.

ಮಾಧ್ಯಮ ಕನ್ನಡಿಯಂತೆ ಕೆಲಸ ಮಾಡುತ್ತದೆ ಹೊರತು ಬೇರೆ ಉದ್ದೇಶದಿಂದಲ್ಲ. ಬಿಂಬ ಆಗಬೇಕಾಗಿದ್ದು ಯಾರು ಎಂಬುದನ್ನು ಎಲ್ಲರೂ ಅರಿತು ಕೊಳ್ಳಬೇಕಾಗಿದೆ.

Youtube
https://youtu.be/1TJuhHZ-DDo?si=FNd9-UbN5hgfmsL8

https://youtu.be/1TJuhHZ-DDo?si=FNd9-UbN5hgfmsL8

ಪುಣ್ಯಕ್ಷೇತ್ರವನ್ನು ಬಿಡದ ಕಳಪೆ ಕಾಮಗಾರಿ, ಭ್ರಷ್ಟಾಚಾರ....... ಭಾಗಮಂಡಲ ಉದ್ಯಾನವನ ನಿರ್ಮಾಣದಲ್ಲಿ ಕೋಟಿ ಕೋಟಿ ಹಣ ನೀರು ಪಾಲು...... ಸಸಿಗ...

ನಮ್ಮ‌ ಸಂಸ್ಥೆಯ ಪ್ರದಾನ ಸಂಪಾದಕರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ••
27/07/2024

ನಮ್ಮ‌ ಸಂಸ್ಥೆಯ ಪ್ರದಾನ ಸಂಪಾದಕರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.



20/07/2024
ಮಂಗಳೂರು ಮಡಿಕೇರಿ ರಸ್ತೆ ಸಂಚಾರ ರಾತ್ರಿ ವೇಳೆ ಬಂದ್. # # # # # # # # # # # # #CHANNEL COORG /COORG EXPRESS NEWS UPDATE  # # # #...
18/07/2024

ಮಂಗಳೂರು ಮಡಿಕೇರಿ ರಸ್ತೆ ಸಂಚಾರ ರಾತ್ರಿ ವೇಳೆ ಬಂದ್.
# # # # # # # # # # # # #

CHANNEL COORG /COORG EXPRESS NEWS UPDATE
# # # # # # # # # # # # #

ಇಂದು ರಾತ್ರಿಯಿಂದ ಜುಲೈ 22ರ ಬೆಳಿಗ್ಗೆ 6 ಗಂಟೆ ವರೆಗೆ* *ರಾತ್ರಿ ಎಂಟು ಗಂಟೆಯಿಂದ *ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇದ*.
*ಕೊಡಗು ಜಿಲ್ಲಾಧಿಕಾರಿಗಳ ಆದೇಶ*
ಕರ್ತೋಜಿ ಗ್ರಾಮ ಬಳಿ ಹೆದ್ದಾರಿ ದುರಸ್ತಿ ಕಾರ್ಯ ಹಿನ್ನಲೆ.
ಮಂಗಳೂರು ಮಡಿಕೇರಿ ಹೆದ್ದಾರಿ ಬಂದ್ ಮಾಡಲಾಗುವುದು.
ಇಂದು ರಾತ್ರಿ 8 ಗಂಟೆಯಿಂದ 22 ರ ಬೆಳಗ್ಗೆ 6 ಗಂಟೆವರೆಗೆ
ಹೆದ್ದಾರಿ ಯಲ್ಲಿ ಮಡಿಕೇರಿಯಿಂದ ಸಂಪಾಜೆ ವರೆಗೆ ರಾತ್ರಿ ವೇಳೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧ ಹೇರಿ
ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜಾ ಆದೇಶ ಹೊರಡಿಸಿದ್ದಾರೆ.

Rainfall forecast ••
15/07/2024

Rainfall forecast


ವಿರಾಜಪೇಟೆಯ ದಂತ ವೈದ್ಯರಾಗಿದ್ದ ಅನಿಲ್ ದವಾನ್ ಗೆ ಉತ್ತಮ ವೈದ್ಯ ಪ್ರಶಸ್ತಿ.  *ಮುಖ್ಯಮಂತ್ರಿಗಳಿoದ ಪ್ರಶಸ್ತಿ ಪ್ರಧಾನ* # # # # # # # # # #...
04/07/2024

ವಿರಾಜಪೇಟೆಯ ದಂತ ವೈದ್ಯರಾಗಿದ್ದ ಅನಿಲ್ ದವಾನ್ ಗೆ ಉತ್ತಮ ವೈದ್ಯ ಪ್ರಶಸ್ತಿ.

*ಮುಖ್ಯಮಂತ್ರಿಗಳಿoದ ಪ್ರಶಸ್ತಿ ಪ್ರಧಾನ*
# # # # # # # # # # # # #

*CHANNEL COORG /COORG EXPRESS NEWS UPDATE*

# # # # # # # # # # # # #

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ತಾಲೂಕು ಆಸ್ಪತ್ರೆಯ ದಂತ ವೈದ್ಯ ಚಿಕಿತ್ಸಕ್ಕರಾಗಿದ್ದ ಡಾ: ಅನಿಲ್ ದವಾನ್ ರವರಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಮತ್ತು ಅರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರು ಪ್ರಶಸ್ತಿ ಪ್ರದಾನ ಮಾಡಿದರು.

ಇವರು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಚಿಕಿತ್ಸಕರಾಗಿದ್ದರು. .ಪ್ರಸ್ತುತ ಕೊಡಗು ಮತ್ತು ಹಾಸನ ಜಿಲ್ಲೆಯ ಆಹಾರ ಮತ್ತು ಗುಣಮಟ್ಟದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೊಡಗು ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನೂತನ ಉಪ ನಿರ್ದೇಶಕ ( ಆಡಳಿತ ) ರಾಗಿ ರಂಗಧಾಮಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ.ನೂತನ ಡ...
26/06/2024

ಕೊಡಗು ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನೂತನ ಉಪ ನಿರ್ದೇಶಕ ( ಆಡಳಿತ ) ರಾಗಿ ರಂಗಧಾಮಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ.
ನೂತನ ಡಿಡಿಪಿಐ ರಂಗಧಾಮಪ್ಪ ಅವರು ಡಿಡಿಪಿಐ ಹುದ್ದೆಯ ಪ್ರಭಾರದಲ್ಲಿದ್ದ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ( ಡಯಟ್ ) ಯ ಪ್ರಾಂಶುಪಾಲ ಎಂ.ಚಂದ್ರಕಾಂತ್ ಅವರಿಂದ ಅಧಿಕಾರ ಸ್ವೀಕರಿಸಿದರು.
ತುಮಕೂರು ಜಿಲ್ಲಾ ಡಿಡಿಪಿಐ ಕಛೇರಿಯಲ್ಲಿ ‌ಉಪ ಯೋಜನಾ ಸಮನ್ವಯಾಧಿಕಾರಿ( ಡಿ.ವೈ.ಪಿ.ಸಿ.) ‍ಯಾಗಿ ಸೇವೆ ಸಲ್ಲಿಸುತ್ತಿದ್ದ ರಂಗಧಾಮಪ್ಪ ಅವರು ಮುಂಬಡ್ತಿ ಹೊಂದಿ ಕೊಡಗು ಜಿಲ್ಲೆಯ ಡಿಡಿಪಿಐ ಆಗಿ ಸರ್ಕಾರ ನೇಮಕ ಮಾಡಿದೆ.
ಸೇನಾ ಜಿಲ್ಲೆ ಎಂದು ಹೆಸರಾಗಿರುವ ಕೊಡಗಿನಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆಗಳಿಂದ ಕೂಡಿರುವ
ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಪ್ರಗತಿಯೊಂದಿಗೆ ಶಾಲೆಗಳ ಬಲವರ್ಧನೆಗೆ ವಿಶೇಷ ಗಮನ ಹರಿಸಲಾಗುವುದು ಎಂದು ನೂತನ ಡಿಡಿಪಿಐ ರಂಗಧಾಮಪ್ಪ ತಿಳಿಸಿದ್ದಾರೆ.

ವಿರಾಜಪೇಟೆ ಗಣಪತಿ ದೇವಾಲಯದಲ್ಲಿ ಶಾಸಕರ ಹೆಸರಿನಲ್ಲಿ ಪೂಜೆಗೈದ ಕಾಂಗ್ರೆಸ್ಸಿಗರು:...... # # # # # # # # # # # # #*CHANNEL COORG /COOR...
26/06/2024

ವಿರಾಜಪೇಟೆ ಗಣಪತಿ ದೇವಾಲಯದಲ್ಲಿ ಶಾಸಕರ ಹೆಸರಿನಲ್ಲಿ ಪೂಜೆಗೈದ ಕಾಂಗ್ರೆಸ್ಸಿಗರು:......
# # # # # # # # # # # # #

*CHANNEL COORG /COORG EXPRESS NEWS UPDATE*

# # # # # # # # # # # # #

ಬಿಜೆಪಿ ವತಿಯಿಂದ ಇತ್ತೀಚೆಗೆ ಪ್ರತಿಭಟನೆ ವೇಳೆಯಲ್ಲಿ ಶಾಸಕರು ಮತ್ತು ರಾಜ್ಯ ರಾಷ್ಟ್ರ ನಾಯಕರ ಪ್ರತಿಕೃತಿ ದಹನ ಮತ್ತು ಅಣುಕು ಶವ ಯಾತ್ರೆ ನಡೆಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಶಾಸಕರ ಧೀರ್ಘಆಯುಷ್ಯ ಲಭಿಸಲೆಂದು ಮತ್ತು ಶಾಸಕರಿಂದ ನಿರಂತರವಾಗಿ ಜನತೆಗೆ ಒದಗುತ್ತಿರುವ ಉತ್ತಮ ಸೇವೆ ಮುಂದುವರೆಯುವಂತಾಗಲಿ ಎಂದು ವಿರಾಜಪೇಟೆ ಕಾಂಗ್ರೆಸ್ ಕಾರ್ಯಕರ್ತರು ಪ್ರಾರ್ಥನೆಯೊಂದಿಗೆ ಪೂಜೆ ಸಲ್ಲಿಸಿದ್ದರು.

ವಿರಾಜಪೇಟೆ ಕಾಂಗ್ರೆಸ್ ವತಿಯಿಂದ ನಗರದ ಶ್ರೀ ಮಹಾಗಣಪತಿ ದೇವಾಲಯದಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ಹೆಸರಿನಲ್ಲಿ ವಕೀಲರು ಮತ್ತು ಮುಖಂಡರಾದ ಎನ್. ನರೇಂದ್ರ ಕಾಮತ್ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಸದಸ್ಯರಾದ ರಾಜೇಶ್ ಪದ್ಮನಾಭ, ರಜನಿಕಾಂತ್, ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಶಭರಿಶ್ ಶೆಟ್ಟಿ, ರವಿ , ದಿನೇಶ್, ಮಾದಂಡ ಪೂವಯ್ಯ, ಮತ್ತಿತರ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ನಂದಿನಿ ಹಾಲಿನ ಪ್ಯಾಕೇಟ್‌ ಗಳಲ್ಲಿ ಹಾಲಿನ ಪ್ರಮಾಣವನ್ನು 50 ಎಂ.ಎಲ್‌ ಹೆಚ್ಚಳ ಮಾಡಿ, ಹೆಚ್ಚುವರಿ ಹಾಲಿಗೆ 2ರೂ ದರ ನಿಗದಿಪಡಿಸಿ ಗ್ರಾಹಕರಿಂದ ಸಂ...
25/06/2024

ನಂದಿನಿ ಹಾಲಿನ ಪ್ಯಾಕೇಟ್‌ ಗಳಲ್ಲಿ ಹಾಲಿನ ಪ್ರಮಾಣವನ್ನು 50 ಎಂ.ಎಲ್‌ ಹೆಚ್ಚಳ ಮಾಡಿ, ಹೆಚ್ಚುವರಿ ಹಾಲಿಗೆ 2ರೂ ದರ ನಿಗದಿಪಡಿಸಿ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆಯೇ ವಿನಃ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿಲ್ಲ. ಅರ್ಧಲೀಟರ್‌ ಹಾಲಿನ ಪ್ಯಾಕೇಟ್‌ ನಲ್ಲಿ ಮುಂದೆ 550 ಎಂಎಲ್‌ ಹಾಲು ಹಾಗೂ ಲೀಟರ್‌ ಪ್ಯಾಕೇಟ್‌ ನಲ್ಲಿ 1,050 ಎಂಎಲ್‌ ಹಾಲು ಸಿಗಲಿದೆ. ಹಾಲು ಸಂಗ್ರಹಣಾ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ರೈತರು ಹೆಚ್ಚುವರಿಯಾಗಿ ತರುತ್ತಿರುವ ಹಾಲನ್ನು ನಿರಾಕರಿಸಬಾರದು ಎಂಬ ಸದುದ್ದೇಶದಿಂದ ಕೆಎಂಎಫ್‌ ಸಂಸ್ಥೆ ಪ್ಯಾಕೇಟ್‌ ಗಳಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಳ ಮಾಡುವ ತೀರ್ಮಾನ ಮಾಡಿದೆ. - ಮುಖ್ಯಮಂತ್ರಿ ಸಿದ್ದರಾಮಯ್ಯ

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಈ ಬಾರಿ ಹಾಲಿನ ಉತ್ಪಾದನೆ ಶೇ.15 ಹೆಚ್ಚಳವಾಗಿದೆ. ಹಿಂದಿನ ವರ್ಷಗಳಲ್ಲಿ ಈ ವೇಳೆಗೆ ನಿತ್ಯ ಸರಾಸರಿ 90 ಲಕ್ಷ ಲೀಟರ್‌ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣ ಈ ಬಾರಿ ಸರಾಸರಿ 99 ಲಕ್ಷ ಲೀಟರ್‌ ಗೆ ಏರಿಕೆಯಾಗಿದೆ. ಹೀಗೆ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ಹಾಲನ್ನು ರೈತರಿಂದ ಖರೀದಿ ಮಾಡಬೇಕು, ಯಾವುದೇ ಕಾರಣಕ್ಕೂ ಅವರಿಂದ ಹಾಲು ಪಡೆಯಲು ನಿರಾಕರಿಸಬಾರದು ಎಂಬ ಸದುದ್ದೇಶದಿಂದ ಒಂದು ಲೀಟರ್‌ ಹಾಲಿನ ಪ್ಯಾಕೇಟಿಗೆ ಹೆಚ್ಚುವರಿಯಾಗಿ 50 ಮಿ.ಲೀ ಹಾಲನ್ನು ಸೇರಿಸಿ, ಈ ಹೆಚ್ಚುವರಿ ಹಾಲಿನ ಬೆಲೆ 2 ರೂಪಾಯಿಯನ್ನು ಮಾತ್ರ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆ. ಹಾಲಿನ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿರುವುದಿಲ್ಲ.

ಈ ವರೆಗೆ 1,000 ಮಿ.ಲೀ ಹಾಲಿಗೆ ರೂ.42 ಹಾಗೂ 500 ಮಿ.ಲೀ ಹಾಲಿಗೆ ರೂ.22 ದರವನ್ನು ನಿಗದಿಪಡಿಸಲಾಗಿತ್ತು, ಇನ್ನು ಮುಂದೆ 1,050 ಮಿ.ಲೀ ಹಾಗೂ 550 ಮಿ.ಲೀ ಹಾಲಿನ ಪ್ಯಾಕೇಟ್‌ ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಅದಕ್ಕೆ ಕ್ರಮವಾಗಿ ರೂ.44 ಹಾಗೂ ರೂ.24 ದರ ನಿಗದಿಪಡಿಸಲಾಗುತ್ತದೆ. ಇದು ನಾಡಿನ ಲಕ್ಷಾಂತರ ಹೈನುಗಾರರ ಹಿತದೃಷ್ಟಿಯಿಂದ ಕೆ.ಎಂ.ಎಫ್‌ ಸಂಸ್ಥೆಯು ತೆಗೆದುಕೊಂಡ ನಿರ್ಣಯವಾಗಿದ್ದು, ಹೆಚ್ಚುವರಿಯಾಗಿ ಉದ್ಪಾದನೆಯಾಗುತ್ತಿರುವ ಹಾಲನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ ಸದುದ್ದೇಶವನ್ನು ಹೊಂದಿದೆ.

ಈಗಾಗಲೇ ಗರಿಷ್ಟ ಪ್ರಮಾಣದ ಹಾಲನ್ನು ಹಾಲಿನ ಪೌಡರ್‌ ತಯಾರಿಕೆ ಮಾಡುವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ನಿತ್ಯ ಸುಮಾರು 30 ಲಕ್ಷ ಲೀಟರ್‌ ಹಾಲು ಪೌಡರ್‌ ತಯಾರಿಕೆಗಾಗಿ ಬಳಸಲ್ಪಡುತ್ತಿದ್ದು, 250 ಮೆಟ್ರಿಕ್‌ ಟನ್‌ ಹಾಲಿನ ಪೌಡರ್‌ ತಯಾರಿಸಲಾಗುತ್ತಿದೆ. ಇದು ಹಾಲಿನ ಪೌಡರ್‌ ಗೆ ಇರುವ ಬೇಡಿಕೆಗೆ ಅನುಗುಣವಾಗಿದೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ರಾಜ್ಯದಲ್ಲಿ ನಿತ್ಯ ಸರಾಸರಿ 72 ಲಕ್ಷ ಲೀಟರ್‌ ಗಳಷ್ಟು ಹಾಲು ಸಂಗ್ರಹವಾಗುತ್ತಿತ್ತು. ಈ ಹಿಂದೆ ಹಾಲಿನ ಬೆಲೆಯಲ್ಲಿ ರೂ.3 ಹೆಚ್ಚಳ ಮಾಡಿ ಆ ಹೆಚ್ಚುವರಿ ಹಣವನ್ನು ರೈತರಿಗೆ ನೇರವಾಗಿ ವರ್ಗಾಯಿಸುವ ಪ್ರೋತ್ಸಾಹದಾಯಕ ಕ್ರಮ ಕೈಗೊಂಡಿದ್ದರಿಂದ ಹೈನೋದ್ಯಮವು ಹಿಂದಿಗಿಂತ ಲಾಭ ತಂದುಕೊಡುವ ಉದ್ಯೋಗವಾಯಿತು ಜೊತೆಗೆ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಜಾನುವಾರುಗಳಿಗೆ ಹಸಿರು ಮೇವು ಲಭ್ಯವಾಗುತ್ತಿದೆ. ಈ ಎರಡು ಕಾರಣಗಳಿಂದಾಗಿ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಇಂದು ನಿತ್ಯ ಸರಿಸುಮಾರು 1 ಕೋಟಿ ಲೀಟರ್‌ ತಲುಪುವ ಹಂತಕ್ಕೆ ಬಂದಿದೆ.

ನಾಳಿನ ಕಂದಾಯ ಸಚಿವರ ಭೇಟಿಯಿಂದ ಜಿಲ್ಲೆಯ  ಜ್ವಲಂತ  ಕಂದಾಯ ಇಲಾಖೆಯ  ಸಮಸ್ಯೆಗಳು ಬಗೆಹರಿಯಬಹುದೇ....????ಇಲ್ಲಿದೆ ಸಚಿವರಿಗೆ ಜಿಲ್ಲೆಯ ಸಮಸ್ಯೆಗ...
04/02/2024

ನಾಳಿನ ಕಂದಾಯ ಸಚಿವರ ಭೇಟಿಯಿಂದ ಜಿಲ್ಲೆಯ ಜ್ವಲಂತ ಕಂದಾಯ ಇಲಾಖೆಯ ಸಮಸ್ಯೆಗಳು ಬಗೆಹರಿಯಬಹುದೇ....????

ಇಲ್ಲಿದೆ ಸಚಿವರಿಗೆ ಜಿಲ್ಲೆಯ ಸಮಸ್ಯೆಗಳ ಮಾಹಿತಿ.
Krishna Byre Gowda A.S Ponnanna Mantar Gowda
••••••••••••••••••••••••
CHANNEL COORG /COORG EXPRESS NEWS UPDATE....
••••••••••••••••••••••••

ನಾಳೆ ಸೋಮವಾರ ಕೊಡಗು ಜಿಲ್ಲೆಗೆ ಕಂದಾಯ ಸಚಿವರಾದ ಮಾನ್ಯ ಕೃಷ್ಣ ಬೈರೇಗೌಡರವರು ಭೇಟಿ ನೀಡಿ ಬೆಳಿಗ್ಗೆ 11 ಗಂಟೆಯಿಂದ 3 ಗಂಟೆ ತನಕ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನ ಸಭೆಯನ್ನು ನಡೆಸಲಿದ್ದಾರೆ. ಜಿಲ್ಲೆಗೆ ಆಗಮಿಸುವ ಕಂದಾಯ ಸಚಿವರಿಗೆ ಕೊಡಗು ಜಿಲ್ಲೆಯ ಜನತೆಯ ಪರವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವು ದಶಕಗಳಿಂದ ಇತ್ಯರ್ಥವಾಗದೆ ಇರುವ ಸಮಸ್ಯೆಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು "ಚಾನಲ್ ಕೂರ್ಗ್" ಅವರ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ.

*ಸಮಸ್ಯೆಗಳು*........

*ಜಿಲ್ಲೆಯಲ್ಲಿ ಎಲ್ಲಾ ವಿಧದ ಬಾಣೇ ಜಾಗಗಳನ್ನು ಸ್ವಯಂ ಪ್ರೇರಿತವಾಗಿ ಸರ್ಕಾರ ಕಂದಾಯ ನಿಗದಿಗೊಳಿಸಬೇಕು.

*ಬಹುತೇಕ ಜಾಗಗಳ ಆರ್ ಟಿ.ಸಿ. ಪಟ್ಟೆದಾರರ ಹೆಸರುಗಳು ನಮೂದಾಗಿದ್ದು ಅವರುಗಳ ಹೆಸರನ್ನು ತೆಗೆದು,, ಜಾಗದಲ್ಲಿ ಅನುಭವ ಸ್ವಾಧೀನದಲ್ಲಿರುವರ ಹೆಸರನ್ನು ಆರ್‌.ಟಿ.ಸಿ ಯಲ್ಲಿ ನಮೂದಿಸಬೇಕು.

* ಜಾಗದ ದೊರಸ್ತಿ. ಪೈಕಿ ಆರ್. ಟಿ.ಸಿ ದುರಸ್ತಿಯಾಗಬೇಕು

*ಜಾನುವಾರು ಗಣತಿ ಅನುಗುಣವಾಗಿ ಎಲ್ಲಾ ಗ್ರಾಮಗಳಲ್ಲಿ ಗೋಮಾಳ ಜಾಗ ಮೀಸಲು ಇಡುವಂತೆ ಕ್ರಮವಹಿಸುವುದು.

*ಕುಟುಂಬದ ಹಲವು ಜನರ ಹೆಸರು ಇರುವ ಜಾಗಕೆ ಸಾಲ, ಬೆಳೆ ಪರಿಹಾರ ಇನ್ನಿತರ ಸೌಲಭ್ಯ ದೊರೆಯದೆ ಇರುವುದನ್ನು ಬಗೆಹರಿಸುವುದು.

*ಭೂ ಪರಿವರ್ತನೆ ಸಂದರ್ಭ ಇಳಿಜಾರು, ಜಲ ಮೂಲಗಳ ಸಂರಕ್ಷಣೆ ನಿಯಮಗಳನ್ನು ಪಾಲಿಸದೆ ಭೂ ಪರಿವರ್ತನೆ ಆದೇಶವನ್ನು ನೀಡುವುದರ ಬಗ್ಗೆ ಪರಿಶೀಲಿಸುವುದು.

*ಉಪ ನೊಂದಾವಣೆ ಕಚೇರಿಯಲ್ಲಿ ಆಗಾಗ ಕಾಡುತ್ತಿರುವ ಸರ್ವರ್ ಸಮಸ್ಯೆ ಬಗೆಹರಿಸುವುದು.

*ಕಾವೇರಿ ನದಿ, ಲಕ್ಷ್ಮಣ ತೀರ್ಥ ನದಿ ,ರಾಜ ಕಾಲುವೆಯಗಳನ್ನು ಒತ್ತುವರಿ ತೆರುವುಗೊಳಿಸಲು ಕೂಡಲೆ ಕ್ರಮ ವಹಿಸುವುದು

*ಪೊನ್ನಂಪೇಟೆ ಹಾಗೂ ಕುಶಾಲನಗರದಲ್ಲಿ ಪ್ರತ್ಯೇಕ ತಾಲೂಕು ಆಗಿದ್ದರು ಮೂಲಭೂತ ಸೌಕರ್ಯ, ಕಟ್ಟಡ, ವಿವಿಧ ಇಲಾಖೆಗಳ ಸ್ಥಾಪನೆ ಬಗ್ಗೆ ಗಮನ ಹರಿಸುವುದು.

*ಜಿಲ್ಲೆಯಲ್ಲಿ ಸರ್ಕಾರಿ ಭೂಮಾಪಕರ ಹುದ್ದೆ ಭರ್ತಿ ಮಾಡಿ ಹಲವು ದಶಕಗಳಿಂದ ಜನರು ಅನುಭವಿಸುತ್ತಿರುವ ಯಾತನೆಯನ್ನು ನೀಗಿಸುವುದು.

*ಕೊಡಗು ಜಿಲ್ಲೆಯ
ಐದು ತಾಲೂಕುಗಳಿಗೆ ಹೆಚ್ಚುವರಿಯಾಗಿ ಇನ್ನೊಂದು ಉಪ ವಿಭಾಗಾಧಿಕಾರಿಗಳ ಹುದ್ದೆಯನ್ನು ಸೃಷ್ಟಿಸಿ ಸಮಸ್ಯೆಗಳನ್ನು ಬಗೆಹರಿಸುವುದು.

*ಸೋಮಾವಾರಪೇಟೆ ತಾಲೂಕಿನ
ಯಲಕನೂರು, ಹೊಸಳ್ಳಿ ಭಾಗದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜಿಲ್ಲೆಯ ವಿವಿಧಡೆ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ಕಾನೂನನ್ನು ಬಿಗಿಗೊಳಿಸುವುದು.

*ಕಂದಾಯ ಇಲಾಖೆಯಲ್ಲಿ ಕಾಡುತ್ತಿರುವ ಸಿಬ್ಬಂದಿಗಳ ಕೊರತೆ ನೀಗಿಸುವುದು.

*ತಾಲೂಕು ಕೇಂದ್ರ ಮಡಿಕೇರಿಯಲ್ಲಿ ಮಿನಿ ವಿಧಾನಸೌಧದ ಕಟ್ಟಡ ಕಾಮಗಾರಿ ಆರಂಭಗೊಂಡು ಐದು ವರ್ಷ ಕಳೆದರೂ ಪೂರ್ಣಗೊಳ್ಳದ ಬಗ್ಗೆ ಕ್ರಮವಹಿಸುವುದು.

*ಪರಿಶಿಷ್ಟ ಪಂಗಡ, ಜಾತಿಗಳ ವಸತಿ ಉದ್ದೇಶಕೆ ಪೈಸಾರಿ ಜಾಗ ನೀಡಲು ವಿಳಂಬ ಧೋರಣೆ ಅನುಸರಿಸುವುದನ್ನು ತಪ್ಪಿಸುವುದು.

*ಅಕ್ರಮ ಸಕ್ರಮ ಅಧ್ಯಕ್ಷರ ನೇಮಕ ವಾಗದೆ ಅರ್ಜಿಗಳು ವಿಲೇವಾರಿಯಾಗದೆ ಸಮಸ್ಯೆಯ ಸುಳಿಯಲ್ಲಿ ಹಲವರು ಸಿಲುಕಿರುವುದನ್ನು ತಪ್ಪಿಸುವುದು.

*ಮಾಜಿ ಸೈನಿಕರಿಗೆ ಸರ್ಕಾರಿ ಜಾಗ ಮಂಜೂರು ಮಾಡದೆ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಮುಂದುವರಿಸದಂತೆ ನೋಡಿಕೊಳ್ಳುವುದು.

*ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡವರು ಫಾರಂ 57 ರಲ್ಲಿ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡದಿರುವ ಬಗ್ಗೆ ಕ್ರಮ ವಹಿಸುವುದು.

*ಪೈಸಾರಿ ಜಾಗದಲ್ಲಿ ಮನೆ ನಿರ್ಮಿಸಿ 94 ಸಿ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳನ್ನು ಕೂಡಲೆ ಪರಿಶೀಲಿಸಿ ಹಕ್ಕು ಪತ್ರ ನೀಡಲು ಕ್ರಮವಹಿಸುವುದು.

* ಜನಸ್ಪಂದನ, ಜನತಾದರ್ಶನ ಕಾರ್ಯಕ್ರಮದ ಮೂಲ ಉದ್ದೇಶ ಜಾರಿಯಾಗುವಂತೆ ನೋಡಿಕೊಳ್ಳುವುದು.

* ಭ್ರಷ್ಟಚಾರ ಹಾಗೂ ಮಧ್ಯವರ್ತಿಗಳ ಸಹವಾಸದಿಂದ ಮುಕ್ತವಾದ ಕಂದಾಯ ಇಲಾಖೆಯ ಕೆಲಸ ಕಾರ್ಯಗಳು ನಡೆಯುವಂತಾಗಬೇಕು

~~~~~~~~~~~~

ಇವಿಷ್ಟು ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಕಾಡುತ್ತಿರುವ ಪ್ರಮುಖ ಸಮಸ್ಯೆಗಳು. ಕೆಲವು ಸಮಸ್ಯೆಗಳಿಗೆ ಅರ್ಧ ಶತಮಾನ ಕಳೆದರೂ ಮುಕ್ತಿ ದೊರಕಿಲ್ಲ. ಇನ್ನು ಕೆಲವು ಸಮಸ್ಯೆಗಳಿಗೆ ಎರಡು ದಶಕಗಳು ಪೂರೈಸಿದರು ಸಮಸ್ಯೆ ಬಗೆಹರಿದಿಲ್ಲ. ಈಗಿನ ಕಂದಾಯ ಸಚಿವರಾದ ಮಾನ್ಯ ಕೃಷ್ಣ ಬೈರೇಗೌಡರವರು ಜಿಲ್ಲೆಯ ಜನತೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ನಂಬಿಕೆ ಇಬ್ಬರು ಶಾಸಕರು ಹಾಗೂ ಜಿಲ್ಲೆಯ ಜನತೆ ಅಭಿಲಾಷೆ ಹೊಂದಿದ್ದಾರೆ.

ನಾಳಿನ ಪ್ರಗತಿ ಪರಿಶೀಲನ ಸಭೆಯಲ್ಲಿ ಜನತೆಯ ಪರವಾಗಿ ನಾವು ಮುಂದಿಟ್ಟಿರುವ ಬೇಡಿಕೆಗಳನ್ನು ಬಗೆಹರಿಸುತ್ತಾರೋ ಅಥವಾ ಹಿಂದಿನ ಸಚಿವರಗಳಂತೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟು ತೆರಳುತ್ತಾರೋ ಎಂಬುದನ್ನು ಕಾದುನೋಡಬೇಕಾಗಿದೆ.

(ಸೂಚನೆ... ಈ ಬೇಡಿಕೆಗಳನ್ನು ಸಚಿವರಿಗೆ ತಲುಪುವಂತೆ ವಿವಿಧ ಸಂಘಟನೆಗಳು ಹಾಗೂ ಪಕ್ಷದ ಪ್ರಮುಖರು ಕ್ರಮ ಕೈಗೊಂಡರೆ ಸಚಿವರಿಂದ ಉತ್ತಮ ಫಲಿತಾಂಶ ದೊರಕುವ ನಿರೀಕ್ಷೆ ಇದೆ. SHARE ಮಾಡಿ ಸಹಕರಿಸಿ..)

ವಿಶ್ವದ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟ ನಮ್ಮ ಕೊಡಗಿನ - ಮಚ್ಚಂಡ ರೋಹನ್ ಬೋಪಣ್ಣ••••••••••••••••••••••••••••••••CHANNEL COORG //COORG ...
24/01/2024

ವಿಶ್ವದ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟ ನಮ್ಮ ಕೊಡಗಿನ - ಮಚ್ಚಂಡ ರೋಹನ್ ಬೋಪಣ್ಣ
••••••••••••••••••••••••••••••••
CHANNEL COORG //COORG EXPRESS NEWS UPDATE
••••••••••••••••••••••••••••••••

ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್​ನ ಪುರುಷರ ಡಬಲ್ಸ್​ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಸೆಮಿಫೈನಲ್​ಗೆ ಪ್ರವೇಶಿಸಿದ್ದಾರೆ. ಈ ಗೆಲುವಿನೊಂದಿಗೆ ATP ಡಬಲ್ಸ್​ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಬೋಪಣ್ಣ ಪಾಲಾಗಿದೆ.

ಮೂಲತಃ ಕೊಡಗಿನವರಾದ ರೋಹನ್ ಬೋಪಣ್ಣ ತಮ್ಮ 43ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಮೂಲತಃ ಕೊಡಗಿನ ಮಾದಪುರ ಗ್ರಾಮದ ನಿವಾಸಿಯಾದ ಮಚ್ಚಂಡ ಭೂಪಣ್ಣ ಹಾಗೂ ಮಲ್ಲಿಕಾ ದಂಪತಿಯ ಪುತ್ರನಾಗಿದ್ದಾನೆ. ಮಚ್ಚಂಡ ರೋಹನ್ ಬೋಪಣ್ಣನವರ ಪತ್ನಿ ಚೂಡುಮಾಡ ಸುಪ್ರಿಯ ಅಣ್ಣಯ್ಯ ಪೊನ್ನಂಪೇಟೆ ತಾಲೂಕು ಬೇಗುರು ಗ್ರಾಮದ ನಿವಾಸಿ. ಇದಕ್ಕೂ ಮುನ್ನ ಎಟಿಪಿ ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಯುಎಸ್​ಎ ಆಟಗಾರ ಆಸ್ಟಿನ್ ಕ್ರಾಜಿಸೆಕ್ ಅಗ್ರಸ್ಥಾನದಲ್ಲಿದ್ದರು. ಆದರೆ ಆಸ್ಟ್ರೇಲಿಯನ್ ಓಪನ್​ ಡಬಲ್ಸ್​ನಲ್ಲಿ ಕ್ರಾಜಿಸೆಕ್ ಮತ್ತು ಅವರ ಕ್ರೊಯೇಷಿಯಾದ ಜೊತೆಗಾರ ಇವಾನ್ ಡೋಡಿಗ್ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದಾರೆ. ಇತ್ತ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಸೆಮಿಫೈನಲ್​ಗೇರುವ ಮೂಲಕ ರೋಹನ್ ಬೋಪಣ್ಣ ಟೆನಿಸ್ (ಡಬಲ್ಸ್​) ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ವಿಶ್ವ ಟೆನಿಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿದ ಭಾರತದ ನಾಲ್ಕನೇ ಟೆನಿಸ್ ತಾರೆ ಎಂಬ ಹೆಗ್ಗಳಿಕೆಗೂ ರೋಹನ್ ಬೋಪಣ್ಣ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಮಹೇಶ್ ಭೂಪತಿ, ಲಿಯಾಂಡರ್ ಪೇಸ್ ಮತ್ತು ಸಾನಿಯಾ ಮಿರ್ಝಾ ಡಬಲ್ಸ್‌ನಲ್ಲಿ ನಂ.1 ಸ್ಥಾನ ಅಲಂಕರಿಸಿದ್ದರು.

ಇದೀಗ ತಮ್ಮ ಹಿರಿಯ ವಯಸ್ಸಿನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ರೋಹನ್ ಬೋಪಣ್ಣ ಡಬಲ್ಸ್​ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

🇮🇳 🎾

31/12/2023

‎Follow the on WhatsApp for daily news:

09/11/2023

ನಿಮ್ಮ ಚಾನಲ್ ಕೂರ್ಗ್ ವಾಟ್ಸಾಪ್ ಚಾನಲ್ ಉಚಿತ ಸದಸ್ಯತ್ವ ಪಡೆಯಲು ಈ ಕೆಳಗಿನ ಲಿಂಕ್ ಫಾಲೋ ಮಾಡಿ.

ಕೊಡಗಿನ ಪ್ರತಿದಿನದ ತಾಜಾ ಸುದ್ದಿಗಳು ನಿಮ್ಮ ಸ್ನೇಹಿತರು ಬಂಧು ಬಳಗದವರು ವೀಕ್ಷಿಸಲು ಈ ಲಿಂಕ್ ಅನ್ನು ಅವರಿಗೆ ಕಳುಹಿಸಿಕೊಟ್ಟು ಸಹಕರಿಸಿ.

Follow the Channel Coorg digital channel on WhatsApp for daily news updates:

https://whatsapp.com/channel/0029VaEE85oHVvTjs5ILoQ04

Click the follow button on the top right corner to subscribe to our channel

https://whatsapp.com/channel/0029VaEE85oHVvTjs5ILoQ04

Address

Channel Coorg, College Road, Madikeri
Kodagu
571201

Alerts

Be the first to know and let us send you an email when Channel coorg posts news and promotions. Your email address will not be used for any other purpose, and you can unsubscribe at any time.

Contact The Business

Send a message to Channel coorg:

Videos

Share


Other News & Media Websites in Kodagu

Show All