ಸಾವಯವ ಎಳ್ಳು ಬೆಲ್ಲ ನೀಡಿದ ಮಹೇಶ್ ಅಣ್ಣ. Contact +91 97408 08010
ಉದ್ದಿನ ಕೊಟ್ಟೆ ಕಡಬು ಅಥವಾ ಕರಾವಳಿ ಶೈಲಿಯ ಬಾಳೆ ಎಳೆ ಎಲೆ ಇಡ್ಲಿ. ಇತ್ತೀಚಿಗೆ ಇಡ್ಲಿ ಮಾಡಲು ತಳದಲ್ಲಿ ಬಟ್ಟೆ ಬದಲು ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಅದರ ಬದಲಿಗೆ ಈ ರೀತಿ ಬಾಳೆ ಎಲೆ, ಹಲಸಿನ ಎಲೆ, ತೇಗದ ಎಲೆ ಬಳಸಿದರೆ ಅವುಗಳಲ್ಲಿರುವ ಔಷಧಿಯ ಗುಣಗಳು ಇಡ್ಲಿಗೆ ಸೇರುತ್ತದೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಅಲ್ಲವೇ?
ವೈಕುಂಠ ಏಕಾದಶಿಯ ಶುಭದಿನದಂದು ಕಜೆ ವೃಕ್ಷಾಲಯದ ಕು ಪ್ರಚೇತ ರಾಮ ಸಂತ ತುಳಸಿದಾಸ ವಿರಚಿತ “ಶ್ರೀರಾಮಚಂದ್ರ ಕೃಪಾಲು” ಗೀತೆಯನ್ನು ವೈಯಲಿನ್ ಮೂಲಕ ನುಡಿಸಿದ ತುಣುಕನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಅಂದಹಾಗೆ ಪ್ರಚೇತ ರಾಜ್ಯಮಟ್ಟದ ಗಮಕ ವಾಚನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದು ಇದೇ ಭಾನುವಾರ ಬೆಂಗಳೂರಿನಲ್ಲಿ ಖ್ಯಾತ ಗಮಕಿ ಗಂಗಮ್ಮ ಕೇಶವಮೂರ್ತಿ ಅವರ ಸಮುಖದಲ್ಲಿ ಹಾಡಲಿದ್ದಾನೆ. ಬಾಲ ಪ್ರತಿಭೆ ಪ್ರಚೇತನಿಗೆ ಶುಭವಾಗಲಿ.
ತಾಯಿ ಮತ್ತು ತಾಯಿ ನಾಡು ಸ್ವರ್ಗಕ್ಕಿಂತ ಮಿಗಿಲಾದದ್ದು - ಶ್ರೀ ರಾಮ
ಕಜೆ ವೃಕ್ಷಾಲಯದ ಕಾಡಿನಲ್ಲಿ ಅಪರೂಪದ Frog mouth ಪಕ್ಷಿ. ಬೆಳಗಿನ ಸಮಯದಲ್ಲಿ ಅಲುಗಾಡದೆ ಗರ ಬಡಿದಂತೆ ಕೊಂಬೆಯ ಮೇಲೆ ಕುಳಿತಿರುತ್ತದೆ. ನಾವು ಅದರ ಸಮೀಪಕ್ಕೆ ಹೋದರೂ ಹಾರುವುದಿಲ್ಲ. ಆದರೆ ಧ್ವನಿ ಮಾತ್ರ ಭಯ ಹುಟ್ಟಿಸುವ ರೀತಿ ಇರುತ್ತದೆ. ಕಾಡಿದ್ದರೆ ಮಾತ್ರ ಇಂತಹ ಅಪರೂಪದ ಜೀವಿಗಳ ಉಳಿವು. ನಮ್ಮ ತೋಟಗಳಲ್ಲಿ ಸ್ವಲ್ಪವಾದರೂ ಕಾಡಿನ ಜಾತಿಯ ಮರಗಳನ್ನು ಬೆಳೆಸೋಣ ಅಳಿವಿನಂಚಿನಲ್ಲಿರುವ ಜೀವ ಸಂಕುಲವನ್ನು ಉಳಿಸೋಣ.
ಬಿಳಿ ಚಿತ್ರ ಮೂಲ ಔಷಧೀಯ ಸಸ್ಯ.
ಮೊಬೈಲ್ ನೋಡಿ ಕಣ್ಣು ಉರಿ ಬಂದರೆ ಅದಕ್ಕೆ ಸುಲಭ ಪರಿಹಾರ “ಹಾಡೆ ಬಳ್ಳಿ” ಎಲೆಯ ಜೆಲ್. ದೇಹ ತಂಪಾಗಿಸಲು, ಹೊಟ್ಟೆ ಹುಣ್ಣು ಗುಣಮಾಡಲು ಹಾಡೆ ಬಳ್ಳಿ ರಾಮಬಾಣ. ಇದರ ಎಲೆಯ ಜೆಲ್ ಕಣ್ಣಿನ ಮೇಲೆ ಇಟ್ಟುಕೊಂಡರೆ ಕಣ್ಣಿನ ಉರಿ, ಕೆಂಪಾಗುವುದು ಕಡಿಮೆಯಾಗುತ್ತದೆ. ಕರಾವಳಿ ಮಲೆನಾಡಿನಲ್ಲಿ ಹಾಡೆ ಬಳ್ಳಿಯನ್ನು ಹೆಚ್ಚು ಬಳಸುತ್ತಾರೆ. ಹಿತ್ತಲಲ್ಲಿರುವ ಗಿಡಕ್ಕೆ ಎಷ್ಟು ಔಷಧೀಯ ಗುಣಗಳಿವೆಯಲ್ಲವೇ?
ಭತ್ತ ಕುಟ್ಟುವುದು. ಒಣಕೆ ಮತ್ತು ಕಲ್ಲಿನಲ್ಲಿ ಸಾಂಪ್ರದಾಯಿಕ ಪದ್ದತಿಯಲ್ಲಿ ಭತ್ತ ಕುಟ್ಟುವ ಪ್ರಾತ್ಯಾಕ್ಷಿಕೆ. ಗೆಡ್ಡೆ ಗೆಣೆಸು ಮೇಳ ಮಂಗಳೂರು.
Team Gopals invites all to Walk2HEAL (Health Environment Agriculture Lifestyle) Date 5.01.2025 Sunday at cubbon park Bengaluru 6.30am. Register yourself https://tinyurl.com/w2h2025