Sudha & Sandeep Manjunath

Sudha & Sandeep Manjunath S4 Naturals - Simple Sustainable Self- reliant Society Promoting Desi cow based natural farming.
(2)

ಸಾವಯವ ಫಿಜ್ಜಾ ಮತ್ತು ಸ್ಯಾಂಡವಿಚ್. ಮಂಡ್ಯದ ದೇಸಿ ಅಂಗಡಿ ಮತ್ತು ಸಿರಿಧಾನ್ಯ ಕೆಫೆಯಲ್ಲಿ ಆರೋಗ್ಯ ಸ್ನೇಹಿ ತಿನಿಸು. ಯುವಕರಿಗೆ ಆರೋಗ್ಯಯುತ ಆಹಾರ...
15/12/2024

ಸಾವಯವ ಫಿಜ್ಜಾ ಮತ್ತು ಸ್ಯಾಂಡವಿಚ್. ಮಂಡ್ಯದ ದೇಸಿ ಅಂಗಡಿ ಮತ್ತು ಸಿರಿಧಾನ್ಯ ಕೆಫೆಯಲ್ಲಿ ಆರೋಗ್ಯ ಸ್ನೇಹಿ ತಿನಿಸು. ಯುವಕರಿಗೆ ಆರೋಗ್ಯಯುತ ಆಹಾರ ನೀಡಬೇಕೆಂಬ ದೃಷ್ಠಿಯಲ್ಲಿ ಮಂಡ್ಯದ ಶ್ರೀ ಮಹೇಶ್ ಮತ್ತು ಶ್ರೀಮತಿ ಸೌಮ್ಯಾ ದಂಪತಿಗಳು ಜವೆ ಗೋಧಿ ಬಳಸಿ Pizza ಮತ್ತು Sandwich ಸಿದ್ದಪಡಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆ. ನಿಮಗೂ ಬೇಕಿದ್ದರೆ ಭೇಟಿಕೊಡಿ : https://maps.app.goo.gl/mBrQL998HJ3UxuSD9
ಸಂಪರ್ಕ ಸಂಖ್ಯೆ 9845382600. ಇಂತಹ ಹೋಟೆಲ್ ಗಳು ಪ್ರತಿ ಊರಿನಲ್ಲಿ ಪ್ರಾರಂಭಿಸಿದರೆ ಆರೋಗ್ಯವಂತ ಸಮಾಜ ಸೃಷ್ಠಿಯಾಗುತ್ತದಲ್ಲವೇ?

15/12/2024
ಮಂಡ್ಯದ ಮಹೇಶ್ ಅಣ್ಣನ “ಸಿರಿಧಾನ್ಯ ಕೆಫೆ” ಯಲ್ಲಿ ಸಂಜೆ ಸಾವಯವ “ಜವೆ ಗೋಧಿ ಫಿಜ್ಜಾ” (organic Jave Godi Pizza) ಮತ್ತು Sandwich ರುಚಿ ನೋಡ...
15/12/2024

ಮಂಡ್ಯದ ಮಹೇಶ್ ಅಣ್ಣನ “ಸಿರಿಧಾನ್ಯ ಕೆಫೆ” ಯಲ್ಲಿ ಸಂಜೆ ಸಾವಯವ “ಜವೆ ಗೋಧಿ ಫಿಜ್ಜಾ” (organic Jave Godi Pizza) ಮತ್ತು Sandwich ರುಚಿ ನೋಡುವ ಅವಕಾಶವಾಯಿತು. ಮೈದಾ ಬದಲು ಜವೆ ಗೋಧಿ, ಮನೆಯಲ್ಲೇ ಮಾಡಿದ ಟಮೋಟಾ ಸಾಸ್, ಸಾವಯವ ತರಕಾರಿ ಬಳಸಿ ಫಿಜ್ಜಾ ಮತ್ತು ಸ್ಯಾಂಡ್ ವಿಚ್ ಮಾಡುತ್ತಾರೆ ದೇಸಿ ಅಂಗಡಿಯ ಶ್ರೀ ಮಹೇಶ್ ಮತ್ತು ಶ್ರೀಮತಿ ಸೌಮ್ಯಾ ದಂಪತಿಗಳು. ರುಚಿಯಲ್ಲಿ ಯಾವ ವಿದೇಶಿ ಕಂಪೆನಿಯ ಫಿಜ್ಜಾ ಗೂ ಕಡಿಮೆಯಿಲ್ಲ. ಮಂಡ್ಯ ನಗರಕ್ಕೆ ಭೇಟಿ ಕೊಟ್ಟಾಗ ಖಂಡಿತ ನೀವು ರುಚಿ ನೋಡಲೇ ಬೇಕು. ವಿಳಾಸ: https://maps.app.goo.gl/mBrQL998HJ3UxuSD9
ಸಂಪರ್ಕ ಸಂಖ್ಯೆ 9845382600

ಹದಿನಾಲ್ಕು ವರ್ಷಗಳ ನಂತರ ನಮ್ಮ ಹಳೆಯ ಸ್ನೇಹಿತರನ್ನು ಮತ್ತು ಗುರುಗಳನ್ನು ಪುನಃ ಅದೇ ಕಾಲೇಜಿನಲ್ಲಿ ಭೇಟಿಯಾಗುವ ಅವಕಾಶವಾಯಿತು. ಬೆಂಗಳೂರಿನ ಜಿಕೆ...
15/12/2024

ಹದಿನಾಲ್ಕು ವರ್ಷಗಳ ನಂತರ ನಮ್ಮ ಹಳೆಯ ಸ್ನೇಹಿತರನ್ನು ಮತ್ತು ಗುರುಗಳನ್ನು ಪುನಃ ಅದೇ ಕಾಲೇಜಿನಲ್ಲಿ ಭೇಟಿಯಾಗುವ ಅವಕಾಶವಾಯಿತು. ಬೆಂಗಳೂರಿನ ಜಿಕೆವಿಕೆ ಕೃಷಿ ಕಾಲೇಜಿನಲ್ಲಿ ನಾವೆಲ್ಲಾ 2006-10ರ ವರೆಗೆ ಬಿಎಸ್ಸಿ ಕೃಷಿ ಪದವಿ ಓದಿದೆವು. 2026ಕ್ಕೆ ನಮ್ಮ ಸ್ನೇಹಕ್ಕೆ 20 ವರ್ಷ ಆಗುತ್ತದೆ. ನಮ್ಮ ಜೀವನದ ಅಮೂಲ್ಯ ಸಮಯವನ್ನು ನಾವು ಜಿಕೆವಿಕೆಯಲ್ಲಿ ಕಳೆದಿದ್ದೇವೆ. ನಮ್ಮ ಇಂದಿನ ಸ್ಥಿತಿಗೆ ಕಾರಣಕರ್ತರಾದ ಎಲ್ಲ ಗುರುಗಳನ್ನು ಸ್ಮರಿಸಿಕೊಂಡೆವು. ಕೆಲವರನ್ನು ಆಹ್ಮಾನಿಸಿ ಅವರಿಗೆ ಗೌರವ ಸೂಚಿಸಿದೆವು. ನಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿ ಸಂತಸಪಟ್ಟೆವು. ಬದುಕಿನಲ್ಲಿ ನೆನೆಪಿಗಿಂತ ಮಧುರ ಭಾವ ಮತ್ತಾವುದಿದೆ ಹೇಳಿ? ಈ ಕಾರ್ಯಕ್ರಮ ಆಯೋಜಿಸಿದ ಎಲ್ಲ ಆಯೋಜಕರಿಗೆ ಮತ್ತು ಭಾಗವಹಿಸಿದ ಎಲ್ಲ ನಮ್ಮ ಸ್ನೇಹಿತರಿಗೆ ಧನ್ಯವಾದಗಳು. ಮತ್ತೆ ಮತ್ತೆ ಈ ರೀತಿ ಸೇರುವಂತಾಗಲಿ.

ಈ ವರ್ಷ ಹಿರಿ ಮಗಳು ಸುಪದಳ ಹುಟ್ಟಹಬಕ್ಕೆ “ಪ್ರದ್ಯಾ ಪುಡ್ಸ್” ಅವರ ಹೋಮ್ ಮೇಡ್ ಚಾಕಲೇಟ್ ಖರೀದಿಸಿದೆವು. ಪ್ರತಿ ಸಲ ನಮಗೆ ಪರಿಚಿತರಿಂದಲೇ ಸಿಹಿ ತ...
15/12/2024

ಈ ವರ್ಷ ಹಿರಿ ಮಗಳು ಸುಪದಳ ಹುಟ್ಟಹಬಕ್ಕೆ “ಪ್ರದ್ಯಾ ಪುಡ್ಸ್” ಅವರ ಹೋಮ್ ಮೇಡ್ ಚಾಕಲೇಟ್ ಖರೀದಿಸಿದೆವು. ಪ್ರತಿ ಸಲ ನಮಗೆ ಪರಿಚಿತರಿಂದಲೇ ಸಿಹಿ ತಿಂಡಿ ಖರೀದಿಸಿ ಮಕ್ಕಳಿಗೆ ಹಂಚುತ್ತೇವೆ. ಹಾಗೇ ಈ ಸಲ ಶ್ರೀಮತಿ ವಿದ್ಯಾ ಮತ್ತು ಶ್ರೀ ಪ್ರದೀಪ್ ದಂಪತಿಗಳು ಮನೆಯಲ್ಲೇ ಮಾಡಿದ ಚಾಕಲೇಟ್ ಗಳನ್ನು ಖರೀದಿಸಿದೆವು. ನಿಮಗೂ ಈ ರೀತಿ ಮನೆಯಲ್ಲಿ ತಯಾರಿಸಿದ ಚಾಕಲೇಟ್ ಬೇಕಿದ್ದರೆ 9036226822 ಸಂಖ್ಯೆಗೆ ಕರೆ ಮಾಡಿ ಬೇಡಿಕೆ ಸಲ್ಲಿಸಬಹುದು. ಸ್ಥಳೀಯ ಉದ್ದಿಮೆಗಳನ್ನು ಉತ್ತೇಜಿಸುವುದು ನಮ್ಮ ಕರ್ತವ್ಯವಲ್ಲವೇ?

ಮೈಸೂರಿನ ವಿಜಯನಗರದ “ಸಖತ್ ಸೊಪ್ಪು” ಸಂತೆಗೆ ಭೇಟಿ ಕೊಟ್ಟು ಸಾವಯವ ರೈತರಿಂದ ನೇರವಾಗಿ ಕೆಲ ಸೊಪ್ಪು ತರಕಾರಿ ಖರೀದಿಸಿದೆವು. ಸಾವಯವ ಕೃಷಿಕರಾದ ಕಾ...
15/12/2024

ಮೈಸೂರಿನ ವಿಜಯನಗರದ “ಸಖತ್ ಸೊಪ್ಪು” ಸಂತೆಗೆ ಭೇಟಿ ಕೊಟ್ಟು ಸಾವಯವ ರೈತರಿಂದ ನೇರವಾಗಿ ಕೆಲ ಸೊಪ್ಪು ತರಕಾರಿ ಖರೀದಿಸಿದೆವು. ಸಾವಯವ ಕೃಷಿಕರಾದ ಕಾಳಪ್ಪ +91 94806 47369 ಯೋಗೇಶ್ +91 80884 09339, ರವಿ +91 6360-581237 ಮತ್ತು ಹಲವು ರೈತರು ಇಲ್ಲಿ ತಾವು ಬೆಳೆದ ಸೊಪ್ಪು ತರಕಾರಿ ಮಾರಾಟ ಮಾಡುತ್ತಾರೆ. ಆಸಕ್ತರು ಇವರನ್ನು ಸಂಪರ್ಕಿಸಿ ನೇರವಾಗಿ ರೈತರಿಂದ ಖರೀದಿಸಬಹುದು. ಪ್ರತಿ ನಗರದಲ್ಲಿ ಈ ರೀತಿ ಸಂತೆ ನಡೆದರೆ ಎಷ್ಟು ಚೆಂದ ಅಲ್ಲವೇ?

🌿 Join Walk2HEAL 2025! 🌿Kickstart your New Year with a step towards sustainability!📅 Date: January 5, 2025📍 Venue: Cubbo...
13/12/2024

🌿 Join Walk2HEAL 2025! 🌿
Kickstart your New Year with a step towards sustainability!

📅 Date: January 5, 2025
📍 Venue: Cubbon Park
⏰ Flag-off: 7:30 AM

🎯 4K Walkathon to foster a healthier lifestyle, sustainable environment, and community empowerment.

Highlights:
✅ Exciting Goodies
✅ E-Certificate
✅ Breakfast

💡 Special Discount: Use the coupon code *SAAS*
📲 Register Now: www.tinyurl.com/W2H2025

For details, contact:
📞 99008 97956 | 90361 87992

Let’s take a step towards a sustainable future together! 🌍

ಮೈಸೂರಿನ ಸಸ್ಯಧಾಮದಲ್ಲಿ “ಜೇನು ಕೃಷಿ” ತರಬೇತಿ. ದಿನಾಂಕ : 22.12.2024 (ಭಾನುವಾರ) ಶುಲ್ಕ : 150ರೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 90...
13/12/2024

ಮೈಸೂರಿನ ಸಸ್ಯಧಾಮದಲ್ಲಿ “ಜೇನು ಕೃಷಿ” ತರಬೇತಿ.
ದಿನಾಂಕ : 22.12.2024 (ಭಾನುವಾರ) ಶುಲ್ಕ : 150ರೂ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 9035290746

ಈ ರೀತಿ ಗೂಡು ಕಟ್ಟಿ ನೀವು ಆಟವಾಡಿದ್ದೀರಾ? ಈ ರೀತಿ ಬಾಲ್ಯದಲ್ಲಿ ಮುಗ್ದವಾಗಿ ಆಡಿದ ಆಟವೇ ಚೆಂದ ಅಲ್ಲವೇ? ಮಕ್ಕಳಿಂದ ನಮ್ಮ ಬಾಲ್ಯ ಮತ್ತೆ ನೆನಪಾಗ...
13/12/2024

ಈ ರೀತಿ ಗೂಡು ಕಟ್ಟಿ ನೀವು ಆಟವಾಡಿದ್ದೀರಾ? ಈ ರೀತಿ ಬಾಲ್ಯದಲ್ಲಿ ಮುಗ್ದವಾಗಿ ಆಡಿದ ಆಟವೇ ಚೆಂದ ಅಲ್ಲವೇ? ಮಕ್ಕಳಿಂದ ನಮ್ಮ ಬಾಲ್ಯ ಮತ್ತೆ ನೆನಪಾಗಿ ಆನಂದಾನುಭವವಾಗುತ್ತಿದೆ.

13/12/2024

ದೇಸಿರಿ ನವೀನ್ ಅವರ ತೋಟದ ಸುಭಾಷ್ ಪಾಳೇಕರ್ ಪದ್ದತಿಯಲ್ಲಿ ಬೆಳೆದ Five Layer model ಪಂಚತರಂಗಿಣಿ ಮಾದರಿ. ಮನೆಗೆ ಬೇಕಾದ ಹತ್ತಾರು ಹಣ್ಣಿನ ಗಿಡಗಳು, ಕಾಫೀ, ಅರಿಶಿಣ, ಗೆಣಸು ಇತ್ಯಾದಿಗಳು.

13/12/2024

ವಿಶ್ವ ಚಾಂಪಿಯನ್ ಆದ ನಂತರ ಚದುರಂಗದ ಮಣೆಗೆ ನಮಸ್ಕರಿಸಿ ನಂತರ ಸಂಭ್ರಮಿಸಿದ್ದು ನೋಡಿ ನಿಜಕ್ಕೂ ಗುಕೇಶ್ ಅವರ ಮೇಲಿನ ಅಭಿಮಾನ ಇಮ್ಮಡಿಯಾಯಿತು. ಶುಭವಾಗಲಿ. ನಮ್ಮ ಕಾಲದಲ್ಲಿ ಭಾರತೀಯ ಕ್ರೀಡಾಪಟುಗಳು ಈ ರೀತಿ ಸಾಧನೆ ಮಾಡುತ್ತಿರುವುದು ನಮ್ಮ ಅದೃಷ್ಠವೇ ಸರಿ.

ಎಷ್ಟು ಜನ ಈ ರೀತಿ ಕೊಡಗಿನ ಕಿತ್ತಳೆ ತಿಂದಿದ್ದೀರಿ? ಉಪ್ಪು ಖಾರಾ ಹಾಕಿ ಕಿತ್ತಳೆ ತಿನ್ನುವ ಮಜವೇ ಬೇರೆ ಅಲ್ಲವೇ?
12/12/2024

ಎಷ್ಟು ಜನ ಈ ರೀತಿ ಕೊಡಗಿನ ಕಿತ್ತಳೆ ತಿಂದಿದ್ದೀರಿ? ಉಪ್ಪು ಖಾರಾ ಹಾಕಿ ಕಿತ್ತಳೆ ತಿನ್ನುವ ಮಜವೇ ಬೇರೆ ಅಲ್ಲವೇ?

ವೃತ್ತಿಯಿಂದ ಸಿವಿಲ್ ಇಂಜಿನಿಯೇರ್ ಆದರೂ ಸಾವಯವ ಕೃಷಿ ಮತ್ತು ನಾಟಿ ಹಸುಗಳ ಸಾಕಾಣಿಕೆ ಪ್ರಾರಂಭಿಸಿ ತಮ್ಮದೇ ಸ್ವಂತ “ಸರಳ ಡೈರಿ” ಫಾರ್ಮ್ ಸ್ಥಾಪಿಸ...
12/12/2024

ವೃತ್ತಿಯಿಂದ ಸಿವಿಲ್ ಇಂಜಿನಿಯೇರ್ ಆದರೂ ಸಾವಯವ ಕೃಷಿ ಮತ್ತು ನಾಟಿ ಹಸುಗಳ ಸಾಕಾಣಿಕೆ ಪ್ರಾರಂಭಿಸಿ ತಮ್ಮದೇ ಸ್ವಂತ “ಸರಳ ಡೈರಿ” ಫಾರ್ಮ್ ಸ್ಥಾಪಿಸಿ 30ಕ್ಕೂ ಹೆಚ್ಚು ಸಾಹಿವಾಲ್ ಹಸುಗಳನ್ನು ಸಾಕಿ ನಿತ್ಯ ನೂರಾರು ಲೀ ದೇಸಿ ಹಸು ಹಾಲನ್ನು ಮೈಸೂರು ನಗರಕ್ಕೆ ಸರಬರಾಜು ಮಾಡುತ್ತಿರುವ ಭೇರ್ಯ ಗ್ರಾಮದ ಶ್ರೀ ಶ್ರೀನಿವಾಸ್ ಅವರ ಕುರಿತು ಬರೆದ ಲೇಖನ ಈ ವಾರದ ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ. ಆಸಕ್ತರು ಓದಿ ಇತತರೊಂದಿಗೆ ಹಂಚಿಕೊಳ್ಳಿ. ಶ್ರೀನಿವಾಸ್ ಅವರ ಸಂಪರ್ಕ ಸಂಖ್ಯೆ +91 91482 54609

ವಿಕ್ರಮ ಪತ್ರಿಕೆ ಚಂದಾದಾರರಾಗಲು ಸಂಪರ್ಕಿಸಿ +91 88929 23338

ಸಿವಿಲ್ ಇಂಜಿನಿಯರ್ ಶ್ರೀನಿವಾಸ್ ಅವರು”ಸರಳ ಡೈರಿ” ಎನ್ನುವ ಸ್ವಂತ ಉದ್ದಿಮೆ ಪ್ರಾರಂಭಿಸಿ ನಾಟಿ ಹಸುಗಳ ಸಂವರ್ಧನೆ ಮಾಡುತ್ತಿದ್ದಾರೆ. ನಿತ್ಯ ನೂರಾರು ಲೀ ಹಾಲನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸಿ ಗ್ರಾಹಕರ ಮನೆಗೆದ್ದಿರುವ ಕುರಿತು ತಿಳಿಯೋಣ.

ಮೂಲತಃ ಮೈಸೂರು ಜಿಲ್ಲೆ ಕೆ ಆರ್ ನಗರ ತಾ ಭೇರ್ಯ ಪಕ್ಕದ ಬಟಿಗನ ಹಳ್ಳಿ ಗ್ರಾಮದ ನಿವಾಸಿಯಾಗಿರುವ ಶ್ರೀನಿವಾಸ್ ಅವರ ತಂದೆ ಶಾಲಾ ಶಿಕ್ಷಕರಾಗಿದ್ದವರು. 1998ರಲ್ಲಿ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಸಿವಿಲ್ ಇಂಜಿನೇಯರಿಂಗ್ ಪದವಿ ಪಡೆದು ಒಂದೆರಡು ವರ್ಷ ಕೆಲಸಕ್ಕೆ ಸೇರಿ ನಂತರ ಕಟ್ಟಡ ನಿರ್ಮಾಣ ಕ್ಷೇತ್ರದ ಸ್ವಂತ ಉದ್ದಿಮೆ ಪ್ರಾರಂಬಿಸಿತ್ತಾರೆ. ಸಣ್ಣ ಗೋಡೆಯಿಂದ ಹಿಡಿದು ಬಹುಮಹಡಿ ಕಟ್ಟಡ, ಸೇತುವೆ, ಗಣಿಗಾರಿಕೆ, ದೊಡ್ಡ ಕೈಗಾರಿಕೆಗಳವರೆಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಯೋಜನೆಗಳನ್ನು ಯಶ್ಸವಿಯಾಗಿ ನಿರ್ವಹಿಸಿರುತ್ತಾರೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಎತ್ತರಕ್ಕೆ ಏರಿದರೂ ಮನ್ನಸಿನಲ್ಲಿ ಸದಾ ವ್ಯವಸಾಯ ಮಾಡಬೇಕು ಊರಿನಲ್ಲಿ ತೋಟಕಟ್ಚಬೇಕು ಎನ್ನುವ ಹಂಬಲವಿರುತ್ತದೆ. ಪಿತ್ರಾರ್ಜಿತವಾಗಿ ಸುಮಾರು 9 ಎಕರೆ ಜಮೀನಿದ್ದರೂ ಮೊದಲು ಸ್ವಲ್ಪ ಜಾಗದಲ್ಲಿ ಪ್ರಯೋಗ ಪ್ರಾರಂಬಿಸಿ ಕೃಷಿಯಲ್ಲಿ ಅನುಭವ ಪಡೆಯಬೇಕೆಂದು ನಿಶ್ಚಯಿಸುತ್ತಾರೆ. 2010 ರಲ್ಲಿ ಸುಭಾಷ್ ಪಾಳೇಕರ್ ಪದ್ದತಿ ಅನ್ವಯ 1 ಎಕರೆಯಲ್ಲಿ ಮೆಣಸಿನಕಾಯಿ ಬೆಳೆಯಲು ಭೂಮಿ ಹದಗೊಳಿಸುತ್ತಾರೆ. ಆ ಸಮಯದಲ್ಲಿ ಶ್ರೀನಿವಾಸ್ ಅವರಲ್ಲಿ ನಾಟಿ ಹಸುಗಳಿರುವುದಿಲ್ಲ. ಇಡೀ ಹಳ್ಳಿಯಲ್ಲಿ ಸುಮಾರು 150 ಮನೆಗಳಿದ್ದರೂ ನಾಟಿ ಹಸುಗಳಿದದ್ದು ಮಾತ್ರ ಕೇವಲ ಮೂರು ಮನೆಗಳಲ್ಲಿ ಮಾತ್ರ. ಅವರಿಂದಲೇ ಹೇಗೋ ಒಂದಿಷ್ಟು ಸಗಣಿ ಗಂಜಲ ಸಂಗ್ರಹಿಸಿ ಜೀಮಾವೃತ ಮತ್ತಿತ್ತರ ಪರಿಕರಗಳನ್ನು ಸಿದ್ದಪಡಿಸಿ ಮೆಣಸಿನಕಾಯಿ ಬೆಳೆಯುತ್ತಾರೆ. ತಂದೆಯೂ ಸೇರಿದಂತೆ ಹಳ್ಳಿಗರೆಲ್ಲರೂ ಹೀಗೆ ಬೆಳೆದರೆ ಬೆಳೆ ಆಗುತ್ತದೆಯೇ ಒಮ್ಮೆ ಯೋಚನೆ ಮಾಡು ಎಂದು ಸಲಹೆ ನೀಡುತ್ತಾರೆ. ಆದರೆ ಇಳುವರಿ ನೋಡಿ ಎಲ್ಲರೂ ನಿಬ್ಬೆರೆಗಾಗುತ್ತಾರೆ. ನಿರಿಕ್ಷೆಗೂ ಮೀರಿ ಮೆಣಸಿನ ಫಸಲು ದೊರೆಯುತ್ತದೆ. ಮಾರಾಟ ಮಾಡಲು ಮುಂದಾದಾಗ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುತ್ತದೆ. ದಲ್ಲಾಳಿಗಳು ಪ್ರತಿ ಕೆಜಿಗೆ 5ರೂಗಳಿಗೆ ಮೆಣಸಿನಕಾಯಿ ಖರೀದಿಸಿದ್ದರಿಂದ ಸಾಕಷ್ಟು ಬೇಸರವಾಗುತ್ತದೆ.
ಇದೇ ಸಮಯದಲ್ಲಿ ಮೈಸೂರಿನ ಅಕ್ಕನ ಮನೆಗೆ ಒಂದಿಷ್ಟು ಮೆಣಸಿನಕಾಯಿ ನೀಡಲು ಹೋದಾಗ ಅಲ್ಲಿ ತಳ್ಳುವ ಗಾಡಿಯ ತರಕಾರಿ ವ್ಯಾಪಾರಿ ಒಂದು ಕೆಜಿ ಮೆಣಸಿನಕಾಯಿಯನ್ನು 50 ರೂಗೆ ಮಾರುತ್ತಿರುತ್ತಾನೆ. ಇದು ಅವನ ವ್ಯಾಪಾರ ಧರ್ಮ. ಬಹುಶಃ ಅವನ ಕೈಗೆ ಸಿಗುವಾಗ ಇಷ್ಟು ದುಬಾರಿಯಾಗುತ್ತದೆ ಎಂದು ತಮಗೆ ತಾವೇ ಸಾಂತ್ವಾನ ಹೇಳಿಕೊಳ್ಳುತ್ತಾರೆ. ಕೇವಲ ವ್ಯವಸಾಯ ಮಾಡಿದರೆ ಸಾಲದು ರೈತರು ಬೆಳೆದ ಉತ್ಪನ್ನ ನೇರವಾಗಿ ಗ್ರಾಹಕರಿಗೆ ತಲುಪಿಸಿದರೆ ಮಾತ್ರ ರೈತರಿಗೆ ಉಳಿಗಾಲ. ರೈತರಿಂದ ಗ್ರಾಹಕರಿಗೆ ಎಷ್ಟು ಕಡಿಮೆ ಕೈಗಳ ಬದಲಾವಣೆಯಾಗುತ್ತದೋ ಅಷ್ಟು ಪ್ರಮಾಣದ ಲಾಭ ರೈತ ಮತ್ತು ಗ್ರಾಹಕರಿಬ್ಬರೂ ಪಡೆಯಬಹುದು ಈ ನಿಟ್ಟಿನಲ್ಲಿ ಏನಾದರೂ ಮಾಡಬೇಕೆಂದು ಆಲೋಚಿಸುತ್ತಾರೆ.

ಹೈನುಗಾರಿಕೆಯಿಂದ ಗ್ರಾಹಕರನ್ನು ತುಲುಪಲು “ಸರಳ” ಉಪಾಯ: ಕೃಷಿಕ ಮತ್ತು ಗ್ರಾಹಕರನ್ನು ಬೆಸೆಯಲು ಹೈನುಗಾರಿಕೆಗಿಂತ ಮತ್ತೊಂದು ಸರಳ ಉಪಯಾವಿಲ್ಲ ಎಂದು ಬಹುಬೇಗ ಅರ್ಥವಾಯಿತು. ಏಕೆಂದರೆ ಹಾಲು ಸರಬರಾಜು ಪ್ರತಿನಿತ್ಯದ ಕೆಲಸ. ಇದರಲ್ಲಿ ಸಾಕಷ್ಟು ಗ್ರಾಹಕರನ್ನು ತಲುಪಬಹುದು. ಆದರೆ ನಮ್ಮೂರಿನಲ್ಲಿ ಕೇವಲ ಮೂವರ ಬಳಿ ನಾಟಿ ಹಸುಗಳಿವೆ. ಇವರಿಂದ ಹಾಲು ಸಂಗ್ರಹಿಸಿ ಗ್ರಾಹಕರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮೊದಲಿಗೆ ಕಲಬೆರೆಕೆ ರಹಿತ ಆಂಟಿ ಬಯೋಟಿಕ್ ಮುಕ್ತವಾದ ಹಾಲನ್ನು ಜನರಿಗೆ ತಲುಪಿಸೋಣವೆಂದು ನಮ್ಮ ಊರಿನಲ್ಲಿ “ಸರಳ” ಎನ್ನುವ ಹೆಸರಿನಲ್ಲಿ ಡೇರಿ ಪ್ರಾರಂಬಿಸಿದೆವು. ರಾಜ್ಯದ ಹಾಲು ಒಕ್ಕೂಟದ ರೀತಿ ನಾವು ಸಹ ರೈತರಿಗೆ ಎಲ್ಲ ರೀತಿಯ ಮಾರ್ಗದರ್ಶನ ಸಲಹೆ ಸಹಕಾರ ನೀಡಲು ಮುಂದಾದೆವು. ಅವರಿಗಿಂತ ಒಂದಿಷ್ಟು ಖರೀದಿ ಬೆಲೆಯನ್ನು ಹೆಚ್ಚು ಮಾಡಿದೆವು.
ನನ್ನ ಪರಿಚಿತರೊಬ್ಬರು ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆಯಲ್ಲಿ (NDRI) ಪಶು ವಿಜ್ಞಾನಿಗಳಾಗಿದ್ದಾರೆ. ಅವರ ಸಹಾಯದಿಂದ ಹಾಲನ್ನು ಪರೀಕ್ಷಿಸಲು ಸರಳ ಉಪಕರಣಗಳನ್ನು ಖರೀದಿಸಿದೆವು. ಎಸ್ ಎನ್ ಎಫ್ ಮತ್ತು ಫ್ಯಾಟ್ ಪರೀಕ್ಷೆ, ಲ್ಯಾಕ್ಟೋಮೀಟರ್ ರೀಡಿಂಗ್, ಆಂಟಿಬಯೋಟಿಕ್ ಪರೀಕ್ಷೆ ಹೀಗೆ ಹಲವಾರು ರೀತಿಯ ಪರೀಕ್ಷೆಗಳನ್ನು ನಮ್ಮಲ್ಲೇ ಮಾಡಲು ಪ್ರಾರಂಭಿಸಿದೆವು. ಪ್ರತಿಯೊಬ್ಬ ರೈತ ಮತ್ತು ಅವರ ಬಳಿಯಿರುವ ಹಸುಗಳ ಕುರಿತಾದ ಮಾಹಿತಿಯನ್ನು ದಾಖಲಿಸುತ್ತೇವೆ. ಅದರಲ್ಲೂ ವಿಶೇಷವಾಗಿ ಹಾಲಿನಲ್ಲಿ ಕಲಬೆರೆಕೆ ಅಥವಾ ಹಸುವಿಗೆ ಕಾಯಿಲೆ ಇದ್ದರೆ ಅದನ್ನು ಪತ್ತೆಹಚ್ಚಿ ಅಂತಹ ಹಾಲನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ.

ಸಮೀಪದ ಕೆಆರ್ ನಗರ ಮತ್ತು ಮೈಸೂರು ನಗರಗಳಿಗೆ ನಿತ್ಯ 300 ಲೀ ಹಾಲನ್ನು ಶೀತಲೀಕರಣ ವಾಹನಗಳಲ್ಲಿ ಸರಬರಾಜು ಮಾಡುತ್ತಿದ್ದೇವೆ. ಇಂದು ಸಂಜೆ ಕರೆದ ಹಾಲನ್ನು ಮರುದಿನ ಮುಂಜಾನೆ 7ಗಂಟೆ ಒಳಗೆ ಮನೆಬಾಗಿಲೆಗೆ ತಲುಪಿಸುವುದರಿಂದ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಮುಂಜಾನೆ ಕರೆದ ಹಾಲನ್ನು ಪತ್ನಿ ಶ್ರೀಮತಿ ಅಶ್ವಿನಿ ಮೌಲ್ಯವರ್ಧಿತ ಉತ್ಪನ್ನ ತಯಾರಿಸಲು ಉಪಯೋಗಿಸುತ್ತಾರೆ. ಇನ್ನು ಹೆಚ್ಚಾದರೆ ಸ್ಥಳೀಯ ಹೋಟೆಲ್ಗಳಿಗೆ ಕೊಡುತ್ತೇವೆ. ಹೀಗೆ ಹಾಲಿನ ಮೂಲಕ ನೂರಾರು ಗ್ರಾಹಕರ ಪರಿಚಯವಾಗಿದೆ ಎನ್ನುತ್ತಾರೆ ಶ್ರೀನಿವಾಸ್.

ಹೆಚ್ ಎಫ್ ಜರ್ಸಿ ಹಸುಗಳನ್ನು ಮೀರಿಸುತ್ತದೆ ನಮ್ಮ ಭಾರತೀಯ ಗೋ ತಳಿ ಸಾಹಿವಾಲ್ : ಡೈರಿ ಉದ್ಯಮ ದೊಡ್ಡದಾದ ಮೇಲೆ ಹಾಲೇ ಪ್ರಮುಖವಾಗುತ್ತದೆ. ನಾವು ಎಷ್ಟೇ ಭಾರತೀಯ ಗೋತಳಿ ಉಳಿಸಬೇಕೆಂದು ಪ್ರಯತ್ನಪಟ್ಟರೂ ಹಾಲು ಕಡಿಮೆ ನೀಡುತ್ತದೆಂದು ಕಾರಣ ಹೇಳಿ ರೈತರು ನಮ್ಮ ಸ್ಥಳೀಯ ತಳಿಗಳನ್ನು ಸಾಕಲು ಮುಂದಾಗುವುದಿಲ್ಲ. ಆದರೆ ಕಾಲಕ್ರಮೇಣ ವಿದೇಶಿ ಆಕಳ ಹಾಲು ಆರೋಗ್ಯಕ್ಕೆ ಹಾನಿಕಾರಕ ಎಂದು ಅರೆತ ಗ್ರಾಹಕರು ಬೆಲೆಹೆಚ್ಚಾದರೂ ತೊಂದರೆಯಿಲ್ಲ ದೇಸಿ ಹಸುವಿನ ಹಾಲೇ ಬೇಕೆಂದು ಬೇಡಿಕೆ ಇಡುತ್ತಿದ್ದಾರೆ. ಇದರ ಪರಿಣಾಮ ದೂರದ ಗುಜರಾತ್ ರಜಾಸ್ಥಾನ ಮತ್ತು ಪಂಜಾಬ್ ನಿಂದ ಗೀರ್, ಕಾಂಕ್ರೇಜ್, ತಾರ್ಪಾರ್ಕರ್ ಮತ್ತು ಸಾಹಿವಾಲ್ ರೀತಿಯ ಹೆಚ್ಚು ಹಾಲು ನೀಡುವ ತಳಿಗಳನ್ನು ಸಾಕಲು ಆನೇಕರು ಮುಂದಾಗಿದ್ದಾರೆ. ಒಂದೆರಡು ವರ್ಷ ದೇಸಿ ಗೊಸಾಕಾಣಿಕೆ ಉತ್ತಮ ಎನಿಸಿದರೂ ನಂತರ ಅನೇಕ ಕಾರಣಗಳಿಗೆ ಡೈರಿ ಮುಚ್ಚಿರುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಮೊದಲಿಗೆ ನಮ್ಮ ಪ್ರಾಂತಕ್ಕೆ ಹೊಂದುವ ತಳಿಯನ್ನು ಆಯ್ಕೆ ಮಾಡಬೇಕು. ಉತ್ತರ ಭಾರತಕ್ಕೆ ಸ್ವತಃ ಭೇಟಿಕೊಟ್ಟು ಅಲ್ಲಿ ಹಸು ಎಷ್ಟು ಹಾಲು ನೀಡುತ್ತಿದೆ ಯಾವ ರೀತಿ ಅವರು ಪಾಲನೆ ಮಾಡುತ್ತಾರೆ ಎಂದಿತ್ಯಾದಿ ವಿಷಯಗಳನ್ನು ತಿಳಿಯಬೇಕು. ನಂತರ ಹಸುಗಳ ಸಾಗಾಣಿಕೆ ಸಮಯದಲ್ಲಿ ರಾತ್ರಿ ವೇಳೆಯಲ್ಲಿ ಪ್ರಯಾಣ ಮಾಡಿಸಬೇಕು. ಪ್ರತಿ ದಿನ 400 ಕೀಮೀ ಮೀರದಂತೆ ನಿಧಾನವಾಗಿ ವಾಹನ ಚಲಾಯಿಸಬೇಕು. ಬೆಳಗಿನ ಸಮಯದಲ್ಲಿ ಮೇವು, ಹಿಂಡಿ ನೀರು ಚೆನ್ನಾಗಿ ಕೊಡಬೇಕು. ವಾಹನದ ಸಾಮರ್ಥ್ಯದ ಮೇಲೆ ಎಷ್ಟು ಹಸುಗಳನ್ನು ಸಾಗಿಸಬೇಕು ಎಲ್ಲವನ್ನು ಪೂರ್ವ ನಿರ್ಧರಿಸಬೇಕು. ಎರಡು ಮೂರು ದಿನ ಪ್ರಯಾಣ ಮಾಡಿದ ಮೇಲೆ ನಮ್ಮ ಪ್ರದೇಶದಲ್ಲಿ ಉತ್ತಮ ಆರೈಕೆ ಮುಖ್ಯವಾಗುತ್ತದೆ. ಇನ್ನು ಸಾಹೀವಾಲ್ ತಳಿಯು ಗೀರ್ ಮತ್ತು ಇತರೆ ಭಾರತೀಯ ತಳಿಗಳಿಗೆ ಹೋಲಿಸಿದರೆ ಕರ್ನಾಟದಲ್ಲಿ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಹೆಚ್ ಎಫ್ ನಷ್ಟೇ ಬೆಲೆ ಮತ್ತು ಅದಕ್ಕಿಂತ ಉತ್ತಮ ಗುಣಮಟ್ಟದ ಹಾಲು ನೀಡುತ್ತದೆ. ಸರಾಸರಿ ಒಂದು ಹಸು 10-14ತಿಂಗಳು ನಿರಂತರ ಹಾಲು ನೀಡಿರುವ ಉದಾಹರಣೆಗಳಿವೆ. ಗೀರ್ ನಂತೆ ಗರ್ಭಧಾರೆಣೆ ಕಷ್ಟವಲ್ಲ. ವರ್ಷಕ್ಕೆ ಒಂದು ಕರು ನಿರೀಕ್ಷಿಸಬಹುದು. ಹೆಚ್ಚಿನ ಹಸುಗಳು ಮೃದು ಸ್ವಭಾವದವಾಗಿದೆ. ದೇಸಿ ತಳಿಯಾಗಿರುವುದರಿಂದ ರೋಗ ಭಾದೆಯೂ ಕಡಿಮೆ. 2018ರಲ್ಲಿ 4 ಸಾಹೀವಾಲ್ ಹಸುಗಳಿಂದ ಪ್ರಾರಂಭವಾದ ನಮ್ಮ ಡೈರಿಯಲ್ಲಿ ಪ್ರಸ್ತುತ 30 ಸಾಹಿವಾಲ್ ಹಸುಗಳು ಮತ್ತು ಒಂದು ಹೋರಿಯಿದೆ. ಇಲ್ಲಿಯವರೆಗೆ ಒಂದೆರಡು ಹಸುಗಳಿಗೆ ಕೆಚ್ಚಲು ಬಾವು ಬಿಟ್ಟರೆ ಮತ್ತಾವ ಕಾಯಿಲೆ ಕಾಣಿಸಿಲ್ಲ. ಶತಾವರಿ ಬೇರನ್ನು ಸ್ವಲ್ಪ ತಿನ್ನಿಸಿದರೆ ಸಾಕು ಕೆಚ್ಚಲು ಬಾವು ನಿವಾರಣೆಯಾಯಿತು. ಈರೀತಿ ನಾಟಿ ವೈದ್ಯದಿಂದ ಹಸುಗಳ ಕಾಯಿಲೆ ಗುಣಪಡಿಸಬಹುದು.

ಕಡಿಮೆ ಖರ್ಚು ಮಾಡಿದರೆ ಮಾತ್ರ ಹೆಚ್ಚು ಲಾಭ : ಬೇರೆ ರಾಜ್ಯಗಳಿಂದ ಹಸುಗಳನ್ನು ತರುವುದರಿಂದ ಸಾಮಾನ್ಯವಾಗಿ ಅದರ ಬೆಲೆ ದುಬಾರಿಯಾಗಿರುತ್ತದೆ. ಇನ್ನು ಕೊಟ್ಟಿಗೆಯನ್ನು ಹೆಚ್ಚು ಬಂಡವಾಳ ಹೂಡಿ ನಿರ್ಮಿಸಿದರೆ ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಹಾಗಾಗಿ ನಾವು ನಮ್ಮಲ್ಲಿ ಸುಮಾರು 100ಅಡಿ ಉದ್ದ 10 ಅಡಿ ಅಗಲಕ್ಕೆ ಸೀಮೆಂಟ್ ಹಾಕಿಸಿದ್ದೇವೆ. ನಂತರ ಮೇಲ್ಭಾಗಕ್ಕೆ ತೆಂಗಿನ ಗರಿಯಿಂದ ಚಪ್ಪರಹಾಕಿದ್ದೇವೆ. ಇದರಿಂದ ಒಂದು ಲಕ್ಷದೊಳಗೆ ಕೊಟ್ಟಿಗೆ ನಿರ್ಮಿಸಿದೆವು. 2-3ಎಕರೆಯಲ್ಲಿ ಮೇವು ಬೆಳೆಯುವ ಪ್ರಯತ್ನವಾದರೂ ಇಷ್ಟು ಹಸುಗಳಿಗೆ ನಿತ್ಯ ಮೇವು ಒದಗಿಸವುದು ಕಷ್ಟ. ಹಾಗಾಗಿ ಮೇವು ಬೆಳೆಯುವ ರೈತರಿಂದ ಖರೀದಿಸುತ್ತೇವೆ. ಚಾಫ್ ಕಟರ್ ಯಂತ್ರದ ಸಹಾಯದಿಂದ ಮೇವನ್ನು ಕತ್ತರಿಸಿ ದಿನಕ್ಕೆ ಎರಡು ಸಲ ನೀಡುತ್ತೇವೆ. ಹಸುಗಳು ಓಡಾಡುವುದಕ್ಕೆ 1 ಎಕರೆ ಸ್ಥಳಾವಕಾಶವಿದೆ. ಎಲ್ಲರಿಗೂ ಇರುವ ಹಾಗೆ ನಮ್ಮಲ್ಲೂ ಕೂಲಿ ಆಳುಗಳ ಸಮಸ್ಯೆಯಿದೆ. ಉತ್ತರ ಭಾರತದಿಂದಲೇ ಎರಡು ಕುಟುಂಬಳನ್ನು ಕೆಲಸಕ್ಕೆ ನೇಮಿಸಿದ್ದೇವೆ. ಪ್ರಸ್ತುತ 50-60 ಲೀ ಹಾಲು ನಮ್ಮ ಡೈರಿಯಿಂದ ಲಭಿಸುತ್ತಿದ್ದು ಮುಂದೆ 300ಲೀ ಸಿಗುವ ನಿರೀಕ್ಷೆಯಿದೆ. ನಾವಷ್ಟೇ ಅಲ್ಲದೆ ನಮ್ಮ ರೀತಿ ಉತ್ತಮ ಪದ್ದತಿಗಳನ್ನು ಅಳವಡಿಸಿಕೊಂಡು ಪ್ರಾಮಾಣಿಕವಾಗಿ ದೇಸಿ ಗೋಸಾಕಾಣಿಕೆ ಮಾಡುವ ರೈತರ ಹಾಲನ್ನು ಖರೀದಿಸಿ ನಗರಗಳಿಗೆ ಈಗಾಗಲೇ ತಲುಪಿಸುತ್ತುದ್ದೇವೆ. ಮುಂದೆ ಹಾಲಿನ ಜೊತೆ ರೈತರು ಬೆಳೆದ ಇತರ ಕೃಷಿ ಉತ್ಪನ್ನಗಳನ್ನು ನಮ್ಮ ಗ್ರಾಹಕರಿಗೆ ತಲುಪಿಸುವ ಯೋಜನೆಯಿದೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಾರೆ ಶ್ರೀನಿವಾಸ್.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8050919850

-ಸಂದೀಪ್ ಮಂಜುನಾಥ್ ಎಂ.ಎಸ್ಸಿ ಕೃಷಿ ಹುಣಸೂರು

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ || ಸರ್ವರಿಗೂ ಗೀತಾ ಜಯಂತಿ ಶುಭಾಶಯಗಳು. ಭಗವಾನ್ ಕ...
11/12/2024

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||
ಸರ್ವರಿಗೂ ಗೀತಾ ಜಯಂತಿ ಶುಭಾಶಯಗಳು. ಭಗವಾನ್ ಕೃಷ್ಣನ ಆದರ್ಶಗಳನ್ನು ನಾವೆಲ್ಲರೂ ಸಾೊದ್ಯವಾದಷ್ಟು ಅಳವಡಿಸಿಕೊಂಡು ಸ್ವಸ್ಥ್ಯ ಸಮಾಜ ನಿರ್ಮಿಸುವಲ್ಲಿ ಪಾತ್ರರಾಗೋಣ.

Address

S4 Naturals. Opposite Hunsur Plywood Factory BM Road Hunsur
Hunsur
571105

Alerts

Be the first to know and let us send you an email when Sudha & Sandeep Manjunath posts news and promotions. Your email address will not be used for any other purpose, and you can unsubscribe at any time.

Contact The Business

Send a message to Sudha & Sandeep Manjunath:

Videos

Share


Other Digital creator in Hunsur

Show All