ಹಾಸನಾಂಬೆ ದರ್ಶನೋತ್ಸವ 8.72 ಕೋಟಿ ರೂ ಸಂಗ್ರಹ
ವಿಶೇಷ ದರ್ಶನ ಟಿಕೆಟ್ ಮಾರಾಟ- ಕಾಣಿಕೆ ಹುಂಡಿಯಿಂದ ದಾಖಲೆ ಹಣ ಸಂಗ್ರಹ
ಹಾಸನ :ಶ್ರೀ ಹಾಸನಾಂಬೆ ದರ್ಶನೋತ್ಸವ ಸಂದರ್ಭದಲ್ಲಿ ವಿಶೇಷ ದರ್ಶನದ ಟಿಕೆಟ್ ಹಾಗೂ ಕಾಣಿಕೆಹುಂಡಿ ಎಣಿಕೆಯಿಂದ ಸುಮಾರು 8,72,41,531 ಹಣ ಸಂಗ್ರಹದೊಂದಿಗೆ ದಾಖಲೆ ನಿರ್ಮಿಸಿದೆ.
ಶ್ರೀ ಹಾಸನಾಂಬೆ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ನವೆಂಬರ್ 15ರಂದು ಮುಕ್ತಾಯಗೊಂಡಿದ್ದು ಇಂದು ಬೆಳಿಗ್ಗೆ 9 ರಿಂದಲೇ ಜಿಲ್ಲಾಧಿಕಾರಿ ಸಿ ಸತ್ಯಭಾಮ ಉಪಯುಭಾಗಾಧಿಕಾರಿ ಮಾರುತಿ ಉಸ್ತುವಾರಿಯಲ್ಲಿ 53 ಬ್ಯಾಂಕ್ ಸಿಬ್ಬಂದಿ, ಕಂದಾಯ ಇಲಾಖೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ 200 ಕ್ಕೂ ಹೆಚ್ಚು ಮಂದಿ ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು .
ಈ ಬಾರಿ ವಿಶೇಷವಾಗಿ ಇಡಲಾಗಿದ್ದ ಇ- ಹುಂಡಿ ಮೂಲಕ 4,64,000 ರೂ ಸಂಗ್ರಹವಾಗಿದೆ, ಹಾಗೂ ಕಾಣಿಕೆ ಹುಂಡಿಯಿಂದ 2,50,77,497 ರೂ ಕಾಣಿಕೆ ಹಣ ಸಂಗ್ರಹವಾಗಿದೆ ಹಾಗೂ 62 ಗ್ರಾಂ ಚಿನ್ನ , 161 ಗ್ರಾಂ ಬೆಳ್ಳಿ ಕಾಣಿಕೆ ಬಂದಿದೆ.
ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ವರ್ಲ್ಡ್ ಕಪ್ ಫೈನಲ್ ಪ್ರವೇಶಿಸಿದ ಭಾರತ ಕ್ರಿಕೆಟ್ ತಂಡ... ಈ ಜಯದೊಂದಿಗೆ ಸತತ 10ನೇ ಗೆಲುವನ್ನು ದಾಖಲಿಸಿದ ಭಾರತ ತಂಡ...
ಶ್ರೀ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಹಾಕುವ ಸಂದರ್ಭದಲ್ಲಿ ಪ್ರಜ್ವಲಿಸುತ್ತಿರುವ ಹಣತೆ...💥🙏💐
ಶ್ರೀ ಹಾಸನಾಂಬೆ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ
ಮಹೋತ್ಸವ ೨೦೨೩ ನ.೧೫ ರಂದು ವಿದ್ಯುಕ್ತವಾಗಿ ತೆರೆ.
2024. ಅಕ್ಟೋಬರ್ 24 ರಿಂದ ನವಂಬರ್ 3ರವರೆಗೆ ೧೧ ದಿನ ಹಾಸನಾಂಬೆ ದರ್ಶನೋತ್ಸವ ಜರುಗಲಿದೆ.
ಚಿಕ್ಕಮಗಳೂರಿನ ಮಲ್ಲೇನಹಳ್ಳಿಯ ಬಿಂಡಿಗ ದೇವಿರಮ್ಮ 🙏🙏🙏೧೨-೧೧-೨೩
ಪ್ರತಿ ವರ್ಷದೀಪಾವಳಿ ಸಮಯದಲ್ಲಿ ಮಾತ್ರ ಭಕ್ತರಿಗೆ ದರ್ಶನ ನೀಡುವ ಬೆಟ್ಟದ ದೇವಿರಮ್ಮ ದೇವಸ್ಥಾನ ತೆರೆಯಲಾಗಿದ್ದು, ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ದೀಪಾವಳಿ ಅಂಗವಾಗಿ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ 3 ಸಾವಿರ ಅಡಿಗಳಷ್ಟು ಎತ್ತರದ ಗುಡ್ಡದಲ್ಲಿರುವ ಬಿಂಡಿಗ ದೇವಿರಮ್ಮ ದೇವಸ್ಥಾನದಲ್ಲಿ ದೇವರಿಗೆ ಮೂರು ದಿನಗಳ ಕಾಲ ವಿಶೇಷ ಪೂಜೆ ಇದ್ದು, ದೇವಿಯನ್ನು ನೋಡಲು ಜನಸಾಗರವೇ ಹರಿದು ಬಂದಿದೆ.
ಹಾಸನಾಂಬೆ ದರ್ಶನ ವೇಳೆ ಕರೆಂಟ್ ಶಾಕ್.. ಭಕ್ತಾದಿಗಳ ನೂಕುನುಗ್ಗಲು.. ಕೆಲವರಿಗೆ ಗಾಯ....
ಅಧಿದೇವತೆ ಶ್ರೀ ಹಾಸನಾಂಬೆ ಸನ್ನಿಧಿಯಲ್ಲಿ ಮಳೆ ಸುರಿದರು ಆರದ ಕರ್ಪೂರ. 🙏💐
ಸುರಿಯುತ್ತಿದ್ದ ಮಳೆಯ ನಡುವೆಯೂ ಆರದೆ ಪ್ರಜ್ವಲಿಸುತ್ತಾ ಸಂಪೂರ್ಣ ಉರಿದ ಕರ್ಪೂರ.🙏💐
ಶ್ರೀ ಹಾಸನಾಂಬೆ ದೇವಿಯ ಮಹಿಮೆ ಮತ್ತೊಮ್ಮೆ ಸಾಬೀತು.🙏💐
ಕಳೆದ ಬಾರಿಯೂ ದೇವಾಲಯದ ಗರ್ಭಗುಡಿಯ ಬಾಗಿಲಿನ ಎದುರು ಹಚ್ಚಿದ್ದ ದೀಪ ಮಳೆ ಸುರಿಯುತ್ತಿದ್ದರು ಆರಿರಲಿಲ್ಲ🙏💐
ನ.೧೫ ರವರೆಗೆ ನಡೆಯುವ ಶ್ರೀ ಹಾಸನಾಂಬೆ, ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಭಕ್ತಾಧಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ.
-ಸ್ವರೂಪ್ ಪ್ರಕಾಶ್,ಶಾಸಕರು
ಹಾಸನ ವಿಧಾನಸಭೆ ಕ್ಷೇತ್ರ
ಹಾಸನಾಂಬೆ ದರ್ಶನ ಆರಂಭ...ಇಂದಿನಿಂದ ನವೆಂಬರ್ ೧೫ ರವರೆಗೆ ದರ್ಶನ...
ಮನೆಯ ಅಂಗಳಕ್ಕೆ ಎಂಟ್ರಿ ಕೊಟ್ಟ ಒಂಟಿ ಸಲಗ
ಕಾಡಾನೆಗೆ ಸೈರನ್ ಹಾಕಿ ಎಸ್ಕಾರ್ಟ್ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಬೆಳ್ಳಂಬೆಳಿಗ್ಗೆ ಒಂಟಿಸಲಗವೊಂದು ಮನೆಯ ಅಂಗಳಕ್ಕೆ ಎಂಟ್ರಿ ಕೊಟ್ಟಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಕೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಂತೋಷ್ ಶೆಟ್ಟಿ ಎಂಬುವವರ ಮನೆಯ ಕಾಂಪೌಂಡ್ ಒಳಗೆಲ್ಲಾ ಮನಸೋಇಚ್ಛೆ ಓಡಾಡಿದೆ. ಕಾಡಾನೆ ಕಂಡ ಕೂಡಲೇ ಸತೀಶ್ ಶೆಟ್ಟಿ ಮನೆಯವರು ಗಾಬರಿಯಿಂದ ಮನೆಯೊಳಗೆ ಓಡಿ ಹೋಗಿದ್ದಾರೆ. ಮನೆಯ ಸಮೀಪ ಓಡಾಡಿದ ನಂತರ ಒಂಟಿಸಲಗ ರಸ್ತೆಗೆ ಬಂದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಒಂಟಿಸಲಗಕ್ಕೆ ಸೈರನ್ ಹಾಕಿ ಎಸ್ಕಾರ್ಟ್ ನೀಡಿದ್ದು, ರಸ್ತೆ ದಾಟಿ ಕಾಫಿ ತೋಟದೊಳಗೆ ಹೋಗಿದೆ. ಕೊಲ್ಲಹಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆ ಸಂಚರಿಸುತ್ತಿದ್ದು ಎಚ್ಚರಿಕೆಯಿಂದ ಓಡಾಡುವಂತೆ ಸ್ಥಳೀಯರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.
ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಕಾಡಾನೆ ಹಾವಳ
ಹಾಸನದ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಂದ ಅಧಿಕಾರ ಸ್ವೀಕರಿಸಿದರು
ಭೀಮಾ " ದಾಳಿ ; ಅರಣ್ಯ ಸಿಬ್ಬಂದಿ ಸಾವು
ಚಿಕಿತ್ಸೆ ವೇಳೆ ಅರವಳಿಕೆ ನೀಡುವಾಗ ಏಕಾಏಕಿ ದಾಳಿ ನಡೆಸಿದ ಭೀಮಾ
ಹಾಸನ : ಗಾಯಗೊಂಡು ನರಳಾಡುತ್ತಿದ್ದ ಕಾಡಾನೆ (ಭೀಮಾ)ಯನ್ನು ಸೆರೆಹಿಡಿದು ಚಿಕಿತ್ಸೆ ನೀಡಲು ಮುಂದಾದ ಅರಣ್ಯ ಸಿಬ್ಬಂದಿಗಳ ಮೇಲೆ ಏಕಾಏಕಿ ದಾಳಿ ನಡೆಸಿ ಅರಣ್ಯ ರಕ್ಷಕ ( ಅರಿವಳಿಕೆ ಶೂಟರ್) ವೆಂಕಟೇಶ ಅವರನ್ನು ತುಳಿದು ಸಾಯಿಸಿರುವ ಘಟನೆ ಹಳ್ಳಿಯೂರಿನಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಸಮೀಪ ನಿಂತಿದ್ದ ಕಾಡಾನೆಗೆ ಅರಿವಳಿಕೆ ಔಷಧಿ ಕೊಡಲು ಹತ್ತಿರ ಹೋದ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿ ಕೊಂದಿದೆ.
೭೬ನೇ ಸ್ವಾತಂತ್ರೋತ್ಸವ ಸಂಭ್ರಮದ ಒಂದು ಭಾಗವಾಗಿ ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ ಎಂಬ ಘೋಷವಾಕ್ಯದೊಂದಿಗೆ 2023 ರ ಆಗಸ್ಟ್ 13 ರಿಂದ 15 ರ ವರೆಗೆ ದೇಶದ ಪ್ರತಿ ಮನೆ ಮನೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶ ಭಕ್ತಿ, ದೇಶಭಿಮಾನ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರ ಪ್ರೇಮ ವನ್ನು ಅಭಿವ್ಯಕ್ತಗೊಳಿಸಿ ದಾಖಲಿಸುವಂತೆ ಕರೆ ನೀಡಿ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿ ಕೊಂಡಿದೆ ಎಂದು
ಜಿಲ್ಲಾಧಿಕಾರಿ ಸತ್ಯಭಾಮ ಅವರು ತಿಳಿಸಿದ್ದಾರೆ.#DCHassan
ಶ್ರವಣಬೆಳಗೊಳ....ಇಂದ್ರಗಿರಿ ....
ಶ್ರೀ ಕ್ಷೇತ್ರ ಶ್ರವಣಬೆಳಗೊಳದ ವಿಹಂಗಮ ನೋಟ.....