JanathaMadhyama

JanathaMadhyama Janatha Madhyama, a daily newspaper launched four decades ago & published from Hassan is a unique ne
(3)

ಹಾಸನದಲ್ಲಿ ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಭೀಕರ ಹತ್ಯೆ----ಹಾ ರಾ ನಾಗರಾಜ್ ಪುತ್ರ , ನಗರಸಭೆ ಸದಸ್ಯ ಪ್ರಶಾಂತ್ ಅವರನ್ನು ನಗರದಲ್ಲಿ ಕೊಚ್ಚ...
01/06/2022

ಹಾಸನದಲ್ಲಿ ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಭೀಕರ ಹತ್ಯೆ
----

ಹಾ ರಾ ನಾಗರಾಜ್ ಪುತ್ರ , ನಗರಸಭೆ ಸದಸ್ಯ ಪ್ರಶಾಂತ್ ಅವರನ್ನು ನಗರದಲ್ಲಿ ಕೊಚ್ಚಿ ಕೊಲೆಗೈಯಲಾಗಿದೆ. ಸಂಜೆ 6.30ರಲ್ಲಿ ಬೈಕ್ ನಲ್ಲಿ ಪ್ರಶಾಂತ್ ಲಕ್ಷ್ಮೀ ಪುರ ಬಡಾವಣೆಯಲ್ಲಿ ತೆರಳುತ್ತಿದ್ದಾಗ, ಆಟೋದಲ್ಲಿ ಹಿಂಬಾಲಿಸಿದ ಹಂತಕರು ಪ್ರಶಾಂತ್ ನನ್ನು ತಡೆದು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹಾಸನ ನಗರದ 16ನೇ ವಾರ್ಡ್ ನಿಂದ ಜೆಡಿಎಸ್ ಪಕ್ಷದಿಂದ ಗೆಲುವು ಸಾಧಿಸಿ ನಗರಸಭೆ ಸದಸ್ಯರಾಗಿದ್ದರು ಪ್ರಶಾಂತ್. ಹಾಸನ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಧ್ಯ ಕೊಲೆಯ ಹಿನ್ನೆಲೆ ಹಾಗೂ ಕೊಲೆಗೈದವರ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.

| | |

30/04/2022

ತಾಕತ್ತಿದ್ರೆ ನನ್ನ ವಿರುದ್ಧ ರೇವಣ್ಣ ಸ್ಪರ್ದಿಸಲಿ,
5೦ ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ.

ಎಷ್ಟೆ ರಾಜಕೀಯ ಬೆಸೆದರೂ ನಾ ಜಗ್ಗುವುದಿಲ್ಲ: ಶಾಸಕ ಪ್ರೀತಂ ಗೌಡ ಸವಾಲು

ಹಾಸನ: ನಾನು ಇಂದೇ ಹೇಳುತ್ತಿದ್ದೇನೆ ಬರೆದಿಟ್ಟುಕೊಳ್ಳಿ, ನನ್ನ ವಿರುದ್ಧ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸ್ಪರ್ದೆ ಮಾಡುವುದಾದರೇ 5೦ ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. ನನ್ನ ವಿರುದ್ಧ ಎಷ್ಟೆ ರಾಜಕೀಯ ಬೆಸೆದರೂ ನಾ ಜಗ್ಗವುದಿಲ್ಲ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಅವರು ಸವಾಲೇಸೆದರು.

​ ​ ​ ​ ​ ​ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡು ನಂತರ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಇಂದೇ ಹೇಳುತ್ತೇನೆ ಬರೆದಿಟ್ಟುಕೊಳಿ ನನ್ನ ವಿರುದ್ಧ ರೇವಣ್ಣ ನಿಂತರೆ ನಾನು ೫೦,೦೦೦ ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ೫೦ ಸಾವಿರಕ್ಕಿಂತ ಒಂದು ಮತ ಕಡಿಮೆ ಬಂದರು ಅಂದೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರೀ ಎಲೆಕ್ಷನ್ಗೆ ಹೋಗುತ್ತೇನೆ ಎಂದು ಸವಾಲು ಹಾಕಿದರು. ತಾಕತ್ತಿದ್ದರೆ ನೀವು ಘೋಷಣೆ ಮಾಡಿ, ಪ್ರೀತಮ್ ಗೌಡ ವಿರುದ್ಧ ಹಾಸನದಿಂದ ಸ್ಪರ್ಧಿಸುತ್ತೇನೆ ಎಂದು ಸವಾಲೆಸೆದ ಪ್ರೀತಂ, ಹಾಸನದಲ್ಲಿ ಬಂದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಅವರಿಗೆ ಇಲ್ಲ, ಆದ್ದರಿಂದ ಹತಾಶರಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಅಭಿವೃದ್ಧಿಗೆ ತೊಡಕು ಉಂಟುಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ನಾನು ದಾರಿಯಲ್ಲಿ ಹೋಗುವ ದಾಸಯ್ಯ ಅಲ್ಲ. ರೇವಣ್ಣ ಅವರು ಮಕ್ಕಳಂತೆ ಮಾತನಾಡುವುದನ್ನು ಬಿಟ್ಟು ಅವರ ಹುದ್ದೆಗೆ ಗಂಭೀರವಾಗಿ ನಡೆದುಕೊಳ್ಳಬೇಕು. ಡಿಸಿ ಆಫೀಸಿನಲ್ಲಿ ಅಧಿಕಾರಿಗಳನ್ನು ಬಯ್ಯುವ ಇವರು ನಂತರ ಕ್ಷಮೆ ಕೇಳುತ್ತಾರೆ. ಇಂತಹ ವರ್ತನೆ ಅವರದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಚಿವ ಹೆಚ್.ಡಿ. ರೇವಣ್ಣಅವರಿಗೆ ೨೦೨೩ಕ್ಕೆ ಬಡ್ಡಿ ಸಮೇತ ತೀರಿಸುತ್ತೇನೆ. ಮೊದಲು ಅಸಲು ಎಲ್ಲಿದೆ ಅಂತ ಹುಡುಕಲು ಹೇಳಿ ಎಂದು ಟೀಕಿಸಿದ ಪ್ರೀತಂ, ಹಾಸನದಲ್ಲಿ ಚುನಾವಣೆಗೆ ನಿಂತು ಎರಡನೇ ಸ್ಥಾನ ಇರಲಿ, ಮೂರನೇ ಸ್ಥಾನಕ್ಕೆ ಹೋಗುತ್ತಾರೆ. ಗ್ರಾಮ ಪಂಚಾಯಿತಿ ಮೆಂಬರ್ ಗಳು ಇವರಿಗಿಂತ ಚೆನ್ನಾಗಿ ನಡೆದುಕೊಳ್ಳುತ್ತಾರೆ. ಏಳನೇ, ೧೦ನೇ ತರಗತಿ ಓದಿರೋರು.. ಇದೇ ತರ ಆಡುವುದು ವಿದ್ಯಾಭ್ಯಾಸ ಮಾಡುವುದರಲ್ಲಿ ಎಂತಹ ಕಷ್ಟ ಇದೆ ಅಂತ ಗೊತ್ತಿರುವುದಿಲ್ಲ ...!! ಅದಕ್ಕೆ ಅಧಿಕಾರಿಗಳೊಂದಿಗೆ ಇಂತಹ ವರ್ತನೆ ಅವರದು ಎಂದು ಟೀಕಿಸಿದರು.

​ ​ ​ ​ ​ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೆಸರು ಹೇಳಿ ರಾಜಕಾರಣ ಮಾಡುವವರು ಗಾಳಿಯಲ್ಲಿ ಗುಂಡು ಹೊಡೆಯುವವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದ ಪ್ರೀತಮ್, ನನಗೂ ಒಂದು ಶಕ್ತಿ ಇದೆ ರಾಷ್ಟ್ರೀಯ ಪಕ್ಷದಿಂದ ಶಾಸಕನಾಗಿದ್ದೇನೆ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಕಾರ್ಯಕರ್ತರು ಎಲ್ಲಿದ್ದಾರೆ ....!! ಅವರು ಬಹಳ ಹತಾಶರಾಗಿದ್ದಾರೆ ಇರುವವರನ್ನು ಕಾಪಾಡಿಕೊಂಡು ಹೋಗುವುದು ನಿಮಗೆ ಒಳ್ಳೆಯದು ಎಂದು ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಅಸಲು ಬಡ್ಡಿ ಇಲ್ಲದಂತೆ ಖಾಲಿ ಮಾಡಬೇಕಾಗುತ್ತದೆ. ಈ ಹೇಳಿದ ಹಿಟ್ಲರ್, ನಢಾಫ್ ಎಲ್ಲಾ ಕಳೆದು ಹೋಗಿದ್ದಾರೆ ನನಗೆ ರೇವಣ್ಣ ಯಾವ ಲೆಕ್ಕ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರೀತಮ್ ಗೌಡ ಕೆ.ಆರ್ ಪೇಟೆ , ಶಿರಾದಲ್ಲಿ ಅವರೇ ಉಸ್ತುವಾರಿ ಏನಾಯ್ತು ....!!! ಹಾಸನಕ್ಕೆ ಬಂದರೂ ಇದೇ ಕಥೆಯಾಗುತ್ತದೆ. ಬುಟ್ಟೀಲಿ ಹಾವಿದೆ ಅಂತಾರೆ ಅದರಲ್ಲಿ ಹಾವ್ರಾಣಿನೂ. ಇರುವುದಿಲ್ಲ ಎಂದು ಲೇವಡಿ ಮಾಡಿದರು. ಕಾಲೇಜಿಗೆ ಹೋಗುವ ಹುಡುಗ ಮಾತನಾಡಿದರೆ ಉತ್ತರ ಕೊಡ್ತೀನಿ ಆಚಾರ-ವಿಚಾರ ಸಂಸ್ಕಾರ-ಸಂಸ್ಕೃತಿ ಇಲ್ಲದಂತೆ ಮಾತನಾಡುತ್ತಿರುವವರಿಗೆ ಉತ್ತರ ನೀಡಲು ಸಾಧ್ಯವಿಲ್ಲ.. ದೇವೇಗೌಡರ ಮಗ ಅನ್ನೋದು ಬಿಟ್ಟರೆ ಅವರಿಗೆ ಇನ್ಯಾವ ಅರ್ಹತೆಯಿದೆ ಏಳು? ೧೦ನೇ ತರಗತಿ ಪಾಸಾದವರಿಗೆ ಗೌರವದಿಂದ ನಡೆದುಕೊಳ್ಳಲು ಎಲ್ಲಿ ಬರುತ್ತೆ . ನಾನು ಅವನಲ್ಲ ದೇವರ ದಯೆಯಿಂದ ಡಬಲ್ ಡಿಗ್ರಿ ಪಡೆದಿದ್ದೇನೆ. ಇನ್ನಾದರೂ ರೇವಣ್ಣ ಅವರು ಗೌರವದಿಂದ ಇರಲಿ ಎಂದು ಪ್ರೀತಮ್ ವ್ಯಂಗ್ಯವಾಡಿದರು.

​ ​ ​ ​ ಜೆಡಿಎಸ್ ನ ಮಾಜಿ ಸಚಿವರು ಮ್ಯೂಸಿಯಂ ಮಾಡ್ತೀವಿ ಅಂತ ಹೇಳಿ ಹುಡಾದಿಂದ ಜಾಗ ತೆಗೆದುಕೊಳ್ಳುತ್ತಾರೆ ನಂತರ ಅಲ್ಲಿ ಎರಡು ಕಲ್ಯಾಣ ಮಂಟಪ ಕಟ್ಟಿ ತಿಂಗಳಿಗೆ ೫೦ಲಕ್ಷ ದುಡಿಮೆ ಮಾಡುತ್ತಿದ್ದಾರೆ .....ಆದರೆ ಇದೀಗ ನನ್ನ ಅಭಿವೃದ್ಧಿ ಕೆಲಸಕ್ಕೆ ವಿರೋಧ ಮಾಡುತ್ತಿರುವುದು ಎಷ್ಟು ಸರಿ ಎಂದು ಕಿಡಿಕಾರಿದ ಪ್ರೀತಂ, ಗಾಜಿನಮನೆಯಲ್ಲಿ ಕೂತಿದ್ದೀರಾ ಸಮಾಧಾನವಾಗಿ ಇದ್ದರೆ ಒಳ್ಳೆಯದು ಇಲ್ಲ ಎಂದರೆ ಎಲ್ಲಾ ಹಗರಣಗಳನ್ನು ಬಿಚ್ಚ ಬೇಕಾಗುತ್ತದೆ ಎಚ್ಚರಿಸಿದರು.

​ ​ ​ ​ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಬಾರದು ಅಂತ ಹೇಳಲು ರೇವಣ್ಣ ಯಾರು ತಿho is he....!? ಹಾಸನ ವಿಧಾನಸಭಾ ಕ್ಷೇತ್ರಕ್ಕೂ ರೇವಣ್ಣಂಗೋ ಏನು ಸಂಬಂಧ ಎಂದು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡ ಕಿಡಿಕಾರಿದರು. ಕಳೆದ ಕೆಲ ದಿನದಿಂದ ಟ್ರಕ್ ಟರ್ಮಿನಲ್ ನಿರ್ಮಾಣ ವಿಚಾರವಾಗಿ ಮಾಜಿ ಸಚಿವ ಎಚ್ ಡಿ ರೇವಣ್ಣ ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಗೌಡ ನಡುವಿನ ವಾಕ್ಸಮರ ಮುಂದುವರೆದಿದ್ದು, ರೇವಣ್ಣ ಅವರ ವಿರುದ್ಧ ಪ್ರೀತಂ ಇಂದು ಹಿಗ್ಗಾ-ಮುಗ್ಗ ವಾಗ್ದಾಳಿ ನಡೆಸಿದ್ರು. ಎಲ್ಲವನ್ನು ಪರಿಶೀಲನೆ ಮಾಡಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಜೆಡಿಎಸ್ ನವರು ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜಕೀಯವನ್ನು ಬೆರೆಸುತ್ತಿದ್ದಾರೆ ನಾನು ಯಾವುದಕ್ಕೂ ಜಗ್ಗುವುದಿಲ್ಲ. ಕುಗ್ಗುವುದಿಲ್ಲ ಎಂದು ಸವಾಲು ಹಾಕಿದರು.

;;;;;;;;;;;;;;;;;;; ;;;;;;;;;;;;;

28/02/2022

ಹಾಸನ ನಗರಸಭೆಯಲ್ಲಿ ಹಗಲು ದರೋಡೆ:
ಸಿ. ಓ .ಡಿ ತನಿಖೆಗೆ ಹೆಚ್ .ಡಿ .ರೇವಣ್ಣ ಆಗ್ರಹ
--
*ಹಾಸನ ನಗರಸಭೆಯಲ್ಲಿ ಹಗಲು ದರೋಡೆ ನಡೆಯತ್ತಿದೆ.
*ಈ ಮುಂಚೆ ಇದ್ದ ಆಯುಕ್ತರು ಹಾಗು ಈಗಿನ ಆಯುಕ್ತರಿಬ್ಬರನ್ನೂ ಕೂಡಲೆ ಅಮಾನತುಗೊಳಿಸಬೇಕೆಂದು ಮಾಜಿ ಸಚಿವ ಎಚ್ .ಡಿ .ರೇವಣ್ಣ ಅವರು ನಗರಾಭಿವೃದ್ಧಿ ಕಾರ್ಯದರ್ಶಿಗಳನ್ನು ಒತ್ತಾಯಸಿದ್ದಾರೆ.

*ನಗರ ಸಭೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅವ್ಯವಹಾರಗಳನ್ನು ಲೋಕಾಯುಕ್ತ ಅಥವಾ ಸಿಓಡಿ ಯಿಂದ ಸರ್ಕಾರ ತನಿಖೆ ನಡೆಸಬೇಕು.

*ಇಲ್ಲದಿದ್ದಲ್ಲಿ ಮಾರ್ಚ್ 4ರಂದು ವಿಧಾನಸಭೆಯಲ್ಲಿ ಈ ಕುರಿತು ತನಿಖೆಗೆ ಆಗ್ರಹಿಸುತ್ತೇನೆ ಎಂದು ಪತ್ರಿಕಾಗೋಷ್ಟಿಯಲ್ಲಿ ರೇವಣ್ಣ ಅವರು ಹೇಳಿದರು.

24/02/2022

*ಹಠಮಾರಿ ಶಾಸಕರಿಂದ ಮಹರಾಜ ಪಾರ್ಕ್ ಗೆ ಕುತ್ತು*

ಹಾಸನ: ನಗರದ ಹೃದಯ ಭಾಗದಲ್ಲಿರುವ ಮಹಾರಾಜ ಪಾರ್ಕ್ ಕಾಂಕ್ರೀಟೀಕರಣ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಲು ಆಗ್ರಹಿಸಿ ಪರಿಸರ ಪ್ರೇಮಿಗಳು, ವಿವಿಧ ಸಂಘಟನೆಗಳು, ಎರಡು ರಾಜಕೀಯ ಪಕ್ಷಗಳು ಸೇರಿ ಪಾರ್ಕ್ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಪಾರ್ಕ್ ಒಳಗೆ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

​ಪರಿಸರ ಪ್ರೇಮಿ ಚ.ನಾ. ಅಶೋಕ್ ಹಾಗೂ ಇತರರು ಗಿಡಕ್ಕೆ ನೀರು ಹಾಕುವುದರ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ನಗರದ ಐತಿಹಾಸಿಕ ಹಿನ್ನೆಲೆಯ ಮಹರಾಜ ಪಾರ್ಕ್ ಮುಂದೆಯೂ ಪಾರ್ಕ್ ಆಗಿಯೇ ಉಳಿಯಬೇಕು ಎನ್ನುವುದು ಮಹಾರಾಜ ಪಾರ್ಕ್ ಉಳಿಸಿ ಹೋರಾಟ ಸಮಿತಿಯ ಒಮ್ಮತದ ಒತ್ತಾಯವಾಗಿದೆ. 14 ಕೋಟಿ 36 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಹೊರಟಿರುವ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಹಾಸನದ ಮಹರಾಜ ಪಾರ್ಕ್ನಲ್ಲಿ ಯಾವುದೇ ರೀತಿಯ ಕಟ್ಟಡದ ಕಾಮಗಾರಿಗಳನ್ನು ನಾವು ವಿರೋಧಿಸುತ್ತೇವೆ ಮತ್ತು ಅದನ್ನು ಕಾನೂನಾತ್ಮವಾಗಿ ಮತ್ತು ಪ್ರಜಾಸತ್ತಾತ್ಮಕವಾದ ಹೋರಾಟಗಳ ಮುಖಾಂತರ ತಡೆಯಲು ಸಮಿತಿಯು ಸಿದ್ಧವಾಗಿದೆ ಎಂದು ಪ್ರತಿಭಟನಾಕಾರರು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು..

ಹಾಸನದ ಮಹಾರಾಜ ಪಾರ್ಕ್ ಮೈಸೂರು ಮಹಾರಾಜರ ಕಾಲದಿಂದ ಇರುವ ಏಕೈಕ ದೊಡ್ಡ ಉದ್ಯಾನವನವಾಗಿದೆ. ನಗರದ ಮಧ್ಯಭಾಗದಲ್ಲಿ ಇರುವ ಇದು ಹಾಸನ ನಗರದ ಹೆಗ್ಗುರುತಾಗಿದೆ. ನಿತ್ಯ ಹಸಿರಿನ ಸಸ್ಯ ವೈವಿಧ್ಯತೆ ಹೊಂದಿರುವ ನಗರದ ಅತ್ಯಂತ ಹಳೆಯ ಉದ್ಯಾನ ವನವಾಗಿದೆ. ಜನರು ದಣಿವಾರಿಸಿ ಕೊಳ್ಳುವ ವಿಶ್ರಾಂತಿ ಪಡೆಯುವ ಹಾಗೂ ಮಕ್ಕಳ ಆಟಗಳಿಗೆ ಮತ್ತು ದೊಡ್ಡವರ ವಾಯು ವಿಹಾರ, ನಡಿಗೆ ವ್ಯಾಯಾಮಗಳಿಗೆ ನೆಚ್ಚಿನ ಅತ್ಯಂತ ಸ್ಥಳವಾಗಿದೆ. ಮಹಾರಾಜ ಉದ್ಯಾನವನ ಜಿಲ್ಲೆಯಲ್ಲಿ ಐತಿಹಾಸಿಕ ಮಹತ್ವ ಪಡೆದಿದೆ . ಸಾರ್ವಜನಿಕ ಉದ್ಯಾನ ವನಗಳಲ್ಲಿ ಈ ರೀತಿಯ ಯಾವುದೇ ಕಾಮಗಾರಿಗಳನ್ನು ಮಾಡುವುದು ೧೯೭೫ರ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಮಹಾರಾಜ ಪಾರ್ಕ್ ನಲ್ಲಿ ಈಗ ನಡೆಸುತ್ತಿರುವ ಅಭಿವೃದ್ಧಿ ಹೆಸರಿನ ಕಾಮಗಾರಿಗಳಿಗೆ ಸರ್ಕಾರದ ಮತ್ತು ಇಲಾಖೆಗಳ ಯಾವುದೇ ರೀತಿಯ ಸ್ಪಷ್ಟವಾದ ಆದೇಶ ಕ್ರಿಯಾ ಯೋಜನೆ ಮತ್ತು ಕಾರ್ಯಾ ದೇಶಗಳನ್ನು ಇದುವರೆಗೂ ಸಾರ್ವಜನಿಕವಾಗಿ ಬಹಿರಂಗ ಪಡಿಸಿರುವುದಿಲ್ಲ. ಈ ಕಾಮಗಾರಿಗಳ ಸಂಬಂಧ ಸರ್ಕಾರದ ಯಾವುದೇ ಅಧಿಕಾರಿಗಳು ಸರಿಯಾದ ಸ್ಪಷ್ಟನೆ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಹಾಸನ ನಗರದಲ್ಲಿ ಅಭಿವೃದ್ಧಿ ಎಂಬ ಕಟ್ಟುಕತೆಗಳಿಗೆ ಮರುಳಾಗಿ ಹಾಸನದ ನಾಗರಿಕರು ಈಗಾಗಲೇ ಚನ್ನಪಟ್ಟಣ ಕೆರೆ ಹೈಸ್ಕೂಲ್, ದೊಡ್ಡ ಮೈದಾನ ಮತ್ತು ಐತಿಹಾಸಿಕ ಗಂಧದ ಕೋಠಿಯನ್ನು ಕಳೆದು ಕೊಂಡಿದ್ದೇವೆ. ಆ ಸಂದರ್ಭದಲ್ಲಿ ಉಂಟಾದ ಸಾರ್ವಜನಿಕ ಪ್ರತಿರೋಧ ಮತ್ತು ಸಂಘಟನೆಗಳ ಹೋರಾಟಗಳನ್ನೂ ಲೆಕ್ಕಿಸದೆ ಅಂದಿನ ಸರ್ಕಾರ ಮತ್ತು ಜನ ಪ್ರತಿನಿಧಿಗಳು ಅಭಿವೃದ್ಧಿಯ ಹೆಸರಿನಲ್ಲಿ ನಗರದಲ್ಲಿನ ಕೆರೆ, ಮೈದಾನ ಮತ್ತು ಉದ್ಯಾನವನಗಳಲ್ಲಿ ನಡೆಸಿದ ಕಾಮಗಾರಿಗಳ ಪರಿಣಾಮಗಳನ್ನು ನಗರದ ಜನರು ಈಗಲೂ ಅನುಭವಿಸುತ್ತಿದ್ದಾರೆ. ಈಗ ನಗರದ ದೊಡ್ಡ ಉದ್ಯಾನವನವನ್ನೇ ಶಾಸಕರು ಮುಗಿಸಲು ಹೊರಟಿರುವಂತಿದೆ. ಕೂಡಲೇ ಎಚ್ಚೆತ್ತುಕೊಂಡು ಮಹಾರಾಜ ಉದ್ಯಾನವನವನ್ನು ಹಸಿರೀಕರಣ ಮಾಡಲು ಹೆಚ್ಚಿನ ಗಿಡ-ಮರಗಳನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

​ಪ್ರತಿಭಟನೆಯಲ್ಲಿ ಮಹಾರಾಜ ಪಾರ್ಕ್ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ಬಿ.ಕೆ. ಮಂಜುನಾಥ್, ಕಾರ್ಯಾಧ್ಯಕ್ಷ ಧರ್ಮೇಶ್, ಗೌರವಾಧ್ಯಕ್ಷ ಕೆ.ಟಿ. ಶಿವಪ್ರಸಾದ್, ಉಪಧ್ಯಕ್ಷರಾದ ನಾಗರಾಜ್ ಹೆತ್ತೂರ್, ನಿರ್ದೇಶಕ ಸಿ. ಸುವರ್ಣ, ವೆಂಕಟೇಶ್, ಎಂ.ಜಿ. ಪೃಥ್ವಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡರಾದ ಬನವಾಸೆ ರಂಗಸ್ವಾಮಿ, ಹೆಚ್.ಕೆ. ಮಹೇಶ್, ಬಾಗೂರು ಮಂಜೇಗೌಡ, ಬಿ.ಕೆ. ರಂಗಸ್ವಾಮಿ, ಜೆಡಿಎಸ್ ಮುಖಂಡರಾದ ಹೆಚ್.ಪಿ. ಸ್ವರೂಪ್, ಅಗಿಲೆ ಯೋಗೀಶ್, ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್ ಅಹಮದ್, ಸಂಘಟನೆಯ ಮುಖಂಡ ರಘುಗೌಡ, ರಾಜೇಶ್ ಇತರರು ಉಪಸ್ಥಿತರಿದ್ದರು.

;;;;;;;;;;;;;;;;;; ;;;;;;;;;;;;;;; ;;;;;;;;;;;;;;;; ;;;;;;;;;;;;;;;; ;;;;;;;;;;;;;;; ;;;;;;;;;;;;;;;;

14/02/2022

ಮಾರ್ಚ್ ತಿಂಗಳಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಘೋಷಣೆ: ಹೆಚ್.ಡಿ. ಕುಮಾರಸ್ವಾಮಿ



​ ​ ​ ​ ​ ​ ​ ನಗರದ ರಿಂಗ್ ರಸ್ತೆಯಲ್ಲಿ ದಿವಂಗತ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಪುತ್ರ ಹೆಚ್.ಪಿ. ಸ್ವರೂಪ್ ಅವರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ನಂತರ ಮಾಧ್ಯಮದೊಂದಿಗೆ ಮಾತನಾಡುತ್ತಾ,


​ ​ ​ ​ ​ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಿಕೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇದುವರೆಗೂ ನಾನು ಹಾಸನ ಜಿಲ್ಲೆಯ ರಾಜಕೀಯ ಬಗ್ಗೆ ಮೂಗು ತೂರಿಸಿಲ್ಲ. ಈ ಭಾರಿ ಹಾಸನ ವಿಧಾನಸಭಾ ಕ್ಷೇತ್ರ ಒಂದನ್ನು ಸೂಕ್ಷ್ಮವಾಗಿ ತೆಗೆದುಕೊಳ್ಳುತ್ತೇನೆ. ಆದರೆ ನಾನು ಸಿಎಂ ಆಗಿದ್ದ ವೇಳೆ ಹಾಸನ ಜಿಲ್ಲೆಗೆ ದೊಡ್ಡಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ನಾನೇ ಸಲಹೆ ನೀಡುತ್ತೇನೆ. ನಮ್ಮ ಕುಟುಂಬದವರು ಸ್ಪರ್ಧಿಸುತ್ತಾರೆ ಎನ್ನುವುದು ಊಹಾಪೋಹ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ನಿಷ್ಠಾವಂತ ಮುಖಂಡರಿದ್ದಾರೆ. ಅವರೊಟ್ಟಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಒಂದುವರೆ ತಿಂಗಳಿನಲ್ಲಿ ಮೊದಲ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಅನೌನ್ಸ್ ಮಾಡುತ್ತೇನೆ.

ಅದರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸುತ್ತೇನೆ. ಹಾಸನದಲ್ಲಿ ಯಾವ ರೀತಿ ವ್ಯವಸ್ಥೆ ಇದೆ ಎಲ್ಲರಿಗೂ ತಿಳಿದಿದೆ. ಎಚ್.ಎಸ್.ಪ್ರಕಾಶ್ ಇದ್ದ ಕಾಲದಲ್ಲಿ ಈ ರೀತಿ ವ್ಯವಸ್ಥೆ ಇರಲಿಲ್ಲಾ. ಅದನೆಲ್ಲದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕರ್ತರ ಜೊತೆ ಚರ್ಚಿಸಿ ಟಿಕೆಟ್ ನೀಡುತ್ತೇನೆ ಎಂದು ಹೇಳಿಕೆ ನೀಡಿದರು.

​ ​ ​ ​ ​ ​
ಹಾಸನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತ್ರ ನನ್ನ ಸಹಲೆ ಕೊಡುತ್ತೇನೆ. ಇಲ್ಲಿನ ಜನರ ಭಾವನೆಗಳಿಗೆ ತಕ್ಕಂತೆ ತೀರ್ಮಾನ ಮಾಡಬೇಕಾಗುತ್ತೆ. ಬೇರೆ ತಾಲ್ಲೂಕಿನ ಬಗ್ಗೆ ನಾನು ತಲೆ ಹಾಕಲ್ಲ. ನೆನ್ನೆ ಅರಕಲಗೂಡು ಕ್ಷೇತ್ರದ ಬಗ್ಗೆ ಮಾತನಾಡಿದ್ದ ಮಾಜಿ ಪ್ರಧಾನಿ ದೇವೇಗೌಡ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ಸಹಕಾರ ಕೊಟ್ಟಿದ್ದೇನೆ. ಈ ಮಣ್ಣಿನಲ್ಲಿ ಹುಟ್ಟಿದ ಮಗನಾಗಿ ಅಭಿವೃದ್ಧಿಗೆ ನೆರವಾಗಿದ್ದೇನೆ. ಕಾಂಗ್ರೆಸ್ ನಾಯಕ ಇಬ್ರಾಹಿಂ ಜೆಡಿಎಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ಅವರು ಇನ್ನೂ ಪ್ರವಾಸ ಮಾಡುತ್ತಿದ್ದಾರೆ. ಅವರ ಹಿತೈಷಿಗಳಿಂದ ಅಭಿಪ್ರಾಯ ಪಡೆಯುತ್ತಿದ್ದಾರೆ. ಅಂತಿಮ ಅಭಿಪ್ರಾಯ ಏನು ಹೇಳ್ತಾರೆ ನೋಡೋಣ.

ಅವರ ಜೊತೆ ಮಾತಾಡಿದ್ದೇನೆ, ಪಕ್ಷಕ್ಕೆ ಸ್ವಾಗತಕೋರಿದ್ದೇನೆ ಆದರೆ ಸಂದರ್ಭ ಬಂದಾಗ ಮತ್ತೆ ಮಾತಾಡುತ್ತೇನೆ ಎಂದು

05/02/2022

ಹಾಸನ ಕ್ಷೇತ್ರಕ್ಕೆ ನಮ್ಮ ಕುಟುಂಬದ ನಿರೀಕ್ಷೆ ಮಾಡ್ತಿದ್ದಾರೆ ಹಾಲಿ ಶಾಸಕ:MLC ಸೂರಜ್ ರೇವಣ್ಣ
----

ಹಾಸನ: ನಮ್ಮ ಕುಟುಂಬದವರು ಹಾಸನ ಕ್ಷೇತ್ರದಲ್ಲಿ ಸ್ಪರ್ದೆ ಮಾಡಬೇಕೆಂದು ಇಲ್ಲಿನ ಸ್ಥಳೀಯ ಶಾಸಕರ ಅಪೇಕ್ಷೆಯಿದೆ ಎಂದು ವಿಧಾನ ಪರಿಷತ್ತು ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ.

ಈ‌ ಕುರಿತು ಶಾಸಕ ಪ್ರೀತಂಗೌಡ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿ ಮಾತನಾಡಿದ ಅವರು, ಹೊಳೆನರಸೀ ಪುರದಲ್ಲಿ ನನ್ನ ತಂದೆ ಶಾಸಕರು, ಹಾಸನದಲ್ಲಿ ಜೆಡಿಎಸ್ ಸಂಘಟನೆ ಮುಂದುವರೆಸಬೇಕು. ಈ ನಿಟ್ಟಿನಲ್ಲಿ ಹಾಸನ ತಾಲೂಕನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದು ಕೊಳ್ಳಲು ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದರು. ನನ್ನ ತಾಯಿಯನ್ನು ಕೆ.ಆರ್. ಪೇಟೆಯಲ್ಲಿ, ಚಾಮುಂಡೇಶ್ವರಿಯಲ್ಲೂ, ಹುಣಸೂರಿನಲ್ಲೂ ಅಭ್ಯರ್ಥಿ ಆಗುತ್ತಿದ್ದಾರೆಂದು ಹೇಳಿದ್ದರು.​ ಈಗ ಹಾಸನದಲ್ಲಿ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ ಎಲ್ಲೆಲ್ಲಿ ಎಂದು ಊಹ-ಪೋಹಗಳನ್ನು ಹಬ್ಬಿಸುತ್ತಾರೆ ಹಬ್ಬಿಸಲಿ ನಮಗೇನು ಬೇಸರವಿಲ್ಲ. ನಮ್ಮ ಕುಟುಂಬದವರು ಹಾಸನದ ಅಭ್ಯರ್ಥಿಯಾಗಿ ಬರಲಿ ಎಂದು ನಮ್ಮ ಮೇಲೆ ಸವಾಲು ಹಾಕಿರುವವರಿಗೆ ಅಪೇಕ್ಷೆಯಿದೆ. ಆದರೇ ನಮ್ಮ ಅಪೇಕ್ಷೆಯನ್ನು ಯಾರು ತಿಳಿಸಿಲ್ಲ ಎಂದು ಶಾಸಕ ಪ್ರೀತಮ್ ಜೆ. ಗೌಡರ ಸವಾಲಿಗೆ ಉತ್ತರಿಸಿದರು. ಈ ಬಗ್ಗೆ ಚರ್ಚೆ ಮಾಡಲು ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಇದ್ದು, ಅವರ ತೀರ್ಮಾನದಂತೆ ಆಯ್ಕೆ ನಡೆಯಲಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಹಿಜಾಬ್ ಪ್ರಕರಣವನ್ನು ನಾನು ಬಹಿರಂಗ ಪಡಿಸಬಾರದು ಎಂದುಕೊಂಡಿದ್ದೇನೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಮೌನತಾಳಿದರು..

29/01/2022

ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕುಟುಂಬಕ್ಕೆ
ತೊಡೆತಟ್ಟಿದ ಶಾಸಕ ಪ್ರೀತಂ ಜೆ. ಗೌಡ



ಹಾಸನ : ಹೊಳೆನರಸೀಪುರದ ಶಾಸಕರ ಕುಟುಂಬದವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಬರುವ ಬಗ್ಗೆ ಮಾಹಿತಿಯಿದ್ದು, ನಾನು ಖಂಡಿತವಾಗಿಯೂ ಅವರನ್ನು ಸ್ವಾಗತ ಮಾಡುತ್ತೇನೆ. ಜನರಿಗೆ ಪ್ರೀತಂ ಗೌಡರ ಯೋಚನೆ, ಯೋಜನೆ ಒಪ್ಪಿದೆಯೋ, ಇಲ್ಲವೇ ರೇವಣ್ಣರವರ ಅಭಿವೃದ್ಧಿ ಶೈಲಿ ಇಷ್ಡವಾಗಿದಿಯೋ ಎಂಬ ಬಗ್ಗೆ ಒಂದು ಸ್ಪರ್ಧೆ ನಡೆದುಬಿಡಲಿ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಅವರು ತೊಡೆತಟ್ಟಿ ಹೀಗೊಂದು ಸವಾಲು ಹಾಕಿದ ಪ್ರಸಂಗ ನಡೆದಿದೆ.

​ ​ ​ ​ ​ ​ ​ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ಅಭಿವೃದ್ಧಿ ವಿಚಾರದಲ್ಲಿ ಮತ್ತು ಬೇರೆ ವಿಚಾರದಲ್ಲಿ ನಮಗೆ ನಿಮಗೆ ಸಂಘರ್ಷ ನಡೆಯುತ್ತಿರುತ್ತದೆ.​ ಹಾಸನ ಜನರಿಗೆ ಪ್ರೀತಂಗೌಡರ ಯೋಚನೆ, ಯೋಜನೆ ಒಪ್ಪಿದೆಯೋ, ರೇವಣ್ಣ ಅವರ ಅಭಿವೃದ್ಧಿ ಶೈಲಿ ಇಷ್ಠವಾಗಿದಿಯೋ ಎಂಬ ಬಗ್ಗೆ ಒಂದು ಸ್ಪರ್ಧೆಯು ನಡೆದುಬಿಡಲಿ. ನೀವೇ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಮಾಡಿ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರಿಗೆ ಆಹ್ವಾನಿಸಿದ ಅವರು, ನಿಮ್ಮ ಆಲೋಚನೆ ಸರಿ ಎಂದರೆ ನಿಮಗೆ ಮತ ಹಾಕುತ್ತಾರೆ, ಪ್ರೀತಂಗೌಡನ ಅಭಿವೃದ್ಧಿ ಕಾರ್ಯ ಇಷ್ಟವಾದರೆ ಪ್ರೀತಂಗೌಡಗೆ ಓಟು ಹಾಕುವ ಮೂಲಕ ಪ್ರೀತಂಗೌಡ ಗೆಲ್ಲಬೇಕೋ, ರೇವಣ್ಣ ಗೆಲ್ಲಬೇಕೋ ತೀರ್ಮಾನವಾಗಲಿ ಎಂದರು. ಒಬ್ಬ ಮಗ ಎಂ.ಎಲ್.ಸಿ., ಮತ್ತೊಬ್ಬ ಮಗ ಸಂಸದರಾಗಿದ್ದಾರೆ. ಹೆಚ್.ಡಿ. ರೇವಣ್ಣ ಅವರು ಸ್ಪರ್ದೆಗೆ ಬಂದರು ಸಂತೋಷ, ಭವಾನಿ ಅಕ್ಕ ಅವರು ಬಂದರು ಸಂತೋಷ. ಯಾರೂ ಬರ್ತರೆ ಅಂಥಾ ತೀರ್ಮಾನ ಮಾಡಿ ಅವರ ಕಾರ್ಯಕರ್ತರಿಗೆ ತಿಳಿಸಬೇಕು. ಈಗಾಗಲೇ ಯಾರು ಅಭ್ಯರ್ಥಿ ಎಂದು ಜೆಡಿಎಸ್ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಭವಾನಿ ಅಕ್ಕ ಅಭ್ಯರ್ಥಿ ಅನ್ನೋದಾದರೆ ನಾಳೇನೇ ಘೋಷಣೆ ಮಾಡಲಿ! ನಾನು ಚುನಾವಣೆ ಎದುರಿಸಲು ಸಿದ್ದನಾಗಿದ್ದೇನೆ.

ರೇವಣ್ಣನವರ ಮನೇಯಲ್ಲಿ ಯಾರೋ ಜ್ಯೋತಿಷಿಯನ್ನು ಕೇಳ್ಕಂಡಿದ್ದಾರಂತೆ. ಬಹಳ ಒಳ್ಳೆಯ ಚುನಾವಣೆ ನಡೆದು ಕನಿಷ್ಠ ೨೫ ಸಾವಿರ ಮತಗಳ ಅಂತರದಲ್ಲಿ ಪ್ರೀತಂಗೌಡ ಗೆಲ್ತಾರೆ ಎಂದು ಹೇಳಿದಲ್ಲದೇ, ಹೋಗಿ ನೀವು ಪ್ರಯತ್ನ ಮಾಡಿ ಅಂಥಾ ಹೇಳಿದ್ದಾರಂತೆ. ಜ್ಯೋತಿಷ್ಯ, ಭವಿಷ್ಯವಾಣಿಲಿ ನಂಬಿಕೆಯಿದೆ ಅಂದರೆ ಅವರು ಬಂದು ಸಂಘಟನೆ ಮಾಡಲಿ.

ನಾಳೆಯಿಂದ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡು ಚುನಾವಣೆ ಮಾಡಲಿ ಎಂದು ಟೀಕಿಸಿದ ಅವರು, ಕುಟುಂಬ ಸದಸ್ಯರೆಲ್ಲರೂ ಹಾಸನ ಜಿಲ್ಲೆಯಲ್ಲಿ ಜನಪ್ರತಿನಿಧಿ ಆಗಬೇಕೆಂದು ತೀರ್ಮಾನ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ನಾನು ಎಂ.ಎಲ್.ಎ. ಹಾಕ್ತಿನಿ ನಮ್ಮ ಭವಾನಿ ಅಕ್ಕ ಬಂದು ಹೇಳಿದ್ರೆ ಅದು ಸಂತೋಷ.

ಅವರು ಯಾವ ರೀತಿ ಬಂದು ಹೇಳ್ತಾರೆ ಅನ್ನೋದನ್ನ ಹೇಳಿದರೆ, ನಾವು ಯಾವ ರೀತಿ ಜನಕ್ಕೆ ಹೇಳಬೇಕು ಅನ್ನೋದನ್ನ ತೀರ್ಮಾನ ಮಾಡ್ತಿವಿ ಎಂದು ಟಾಂಗ್ ನೀಡಿದರು. ಚುನಾವಣೆ ಸಂದರ್ಭದಲ್ಲಿ ಬಂದರೆ ಕಾರ್ಯಕರ್ತರಿಗೆ ಗೊಂದಲ ಆಗುತ್ತದೆ. ದಯಮಾಡಿ ನಿಮ್ಮ ಮೂಲಕ ಮನವಿ ಮಾಡುತ್ತೇನೆ. ಯಾರೂ ಅಭ್ಯರ್ಥಿ ಅನ್ನುವುದನ್ನು ಹೇಳಿದರೆ ನಮ್ಮ ಕಾರ್ಯಕರ್ತರಿಗೆ ಅನುಕೂಲ ಆಗುತ್ತದೆ. ಜೊತೆಗೆ ಈಗಿಲಿಂದನೆ ನಮ್ಮ ಅಭಿವೃದ್ಧಿ ಕೆಲಸವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ನನ್ನನ್ನು ಯಾರೂ ಅವಿರೋಧವಾಗಿ ಆಯ್ಕೆ ಮಾಡುವುದಿಲ್ಲ ಎಂದ ಅವರು, ಸಂಕ್ರಾಂತಿ ಮುಗಿತು ಈಗ ಹೊಸ ಪರ್ವ ಪ್ರಾರಂಭವಾಗಿದೆ. ಈ ಮೂಲಕ ಅವರು ರಾಜಕಾರಣವನ್ನು ಶುರು ಮಾಡಲಿ ಎಂದು ಜೆಡಿಎಸ್-ಕಾಂಗ್ರೆಸ್ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

24/01/2022

ಜಾಗ ಒತ್ತುವರಿಗಾಗಿ ಅವೈಜ್ಞಾನಿಕ ಒಳ ಚರಂಡಿ ಕಾಮಗಾರಿ

ಆರೋಪಿಸಿ ಹೆಚ್.ಪಿ. ಸ್ವರೂಪ್ ಆಕ್ರೋಶ

ಹಾಸನ: ಜಾಗ ಒತ್ತುವರಿ ಮಾಡುವ ನಿಟ್ಟಿನಲ್ಲಿ ಅವೈಜ್ಞಾನಿಕ ಒಳ ಚರಂಡಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಹೆಚ್.ಪಿ. ಸ್ವರೂಪ್ ಇಂಜಿನಿಯರ್ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.

​ ​ ​ ​ ಮೊದಲು ಕಾಮಗಾರಿ ನಡೆಯುತ್ತಿರುವ ಜಾಗಕ್ಕೆ ಬಂದ ಸ್ವರೂಪ್ ಹಾಗೂ ಇತರರು ಸಾಲಗಾಮೆ ರಸ್ತೆ, ಆಕಾಶವಾಣಿ ಬಳಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿ ಬಗ್ಗೆ ಆಕ್ಷೇಪವ್ಯಕ್ತಪಡಿಸಿದರು. ನಂತರ ಸ್ಥಳಕ್ಕೆ ಬಂದ ಇಂಜಿನಿಯರ್ ಬಳಿಗೆ ಮತ್ತೆ ಬಂದ ಸ್ವರೂಪ್ ಅವರು ತೀವ್ರ ವಿರೋಧವ್ಯಕ್ತಪಡಿಸಿದರು. ಇದೆ ವೇಳೆ ತನಿಖೆಗೆ ಹಾಕಿ ಧರಣಿ ಮಾಡುವ ಎಚ್ಚರಿಕೆ ಕೂಡ ಕೊಟ್ರು.

​ ​ ​ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ಮಾಧ್ಯಮದೊಂದಿಗೆ ಮಾತನಾಡಿ, ಸಾಲಗಾಮೆ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಡ್ರೈನೆಜ್ ನಿರ್ಮಿಸುತ್ತಿದ್ದು, ರಸ್ತೆಯಿಂದ ಇನ್ನು ಹಿಂದೆ ಹೋಗಬೇಕಾಗಿದ್ದು, ನಾವುಗಳು ಕಾನೂನು ಹೋರಾಟ ಮಾಡುತ್ತೇವೆ. ಲೋಕಾಯುಕ್ತ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರುತ್ತೇವೆ. ಡ್ರೈನೇಜ್ ಸಮರ್ಪಕವಾಗಿ ಮಾಡುವವರೆಗೂ, ನ್ಯಾಯ ಸಿಗುವವರೆಗೂ ಇದೆ ಜಾಗದಲ್ಲಿ ಶಾಮಿಯಾನ ಹಾಕಿಕೊಂಡು ಕುಳಿತು ಧರಣಿ ಮಾಡುತ್ತೇವೆ ಎಂದರು. ಡ್ರೈನೇಜ್ ಬಗ್ಗೆ ಕೇಳಿದರೇ ಎಂಸಿಎಫ್ ವೈರಿಂಗ್ ಹಾಗೂ ಇತರೆ ಕೇಬಲ್ ಗಳು ಹಾದು ಹೋಗಿದೆ ಎಂದು ನಮಗೆ ಉತ್ತರ ನೀಡುತ್ತಿದ್ದು, ಬೇರೆ ಭಾಗದಲ್ಲಿ ಹಾದು ಹೊಗಿದ್ದರೂ ಡ್ರೈನೇಜ್ ಮಾಡಿಲ್ಲವೇ? ನಾವುಗಳು ನಮ್ಮ ಮನೆಗೆ ಕೇಳುತ್ತಿಲ್ಲ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಲ್ಲಿ ಅನ್ಯಾಯವಾಗಿರವ ಬಗ್ಗೆ ಪ್ರಶ್ನೆ ಮಾಡುತ್ತಿದ್ದು, ನಿಯಮದ ಪ್ರಕಾರ ಕಾಮಗಾರಿ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಛರಿಸಿದರು.

​ ​ ​ ​ ​ ಸ್ಥಳೀಯ ಮಂಜುನಾಥ್ ಮಾತನಾಡಿ, ೩೦ ಮೀಟರ್ ನಲ್ಲಿ ಎರಡು ಕಡೆ ಒಂದೊಂದು ರಸ್ತೆಗೆ ೧೫ ಮೀಟರ್ ಬರುತ್ತದೆ. ಸಿಐಟಿಬಿ ಮತ್ತು ನಗರಸಭೆಯಿಂದಲೂ ೧೫ ಮೀಟರ್ ಲೆಕ್ಕವನ್ನೆ ತೆಗೆದುಕೊಂಡಿದ್ದು, ಕೆಲಸ ಮಾಡುವಾಗಲೇ ನಾನು ಹೇಳಿದರೂ ೧೫ ಮೀಟರ್ ಗೆ ತೆಗೆದುಕೊಂಡು ಡ್ರೈನೇಜ್ ನಿರ್ಮಿಸಿ ಎಂದು ಹೇಳಿದರೂ ಪಿಡಬ್ಲ್ಯೂಡಿ ನಲ್ಲಿ ೬ ಮೀಟರ್ ಗೆ ಮಾತ್ರ ಮಾಡಿರುವುದಾಗಿ ಗುತ್ತಿಗೆದಾರರು ಹೇಳಿದರು. ಇಂಜಿನಿಯರ್ ಸ್ಥಳಕ್ಕೆ ಕರೆಯಿಸುವಂತೆ ಹೇಳಿದರೂ ಇದುವರೆಗೂ ಕರೆಯಿಸಲಿಲ್ಲ. ರಸ್ತೆಯ ಡ್ರೈನೇಜ್ ಕಾಮಗಾರಿಯಲ್ಲಿ ಏನಾದರೂ ವ್ಯತ್ಯಾವಾದರೇ ಪಿಡಬ್ಲ್ಯೂಡಿ ಇಂಜಿನಿಯರ್ ಇವರುಗಳು ಹೊಣೆಗಾರರು ಎಂದು ಆಕ್ರೋಶವ್ಯಕ್ತಪಡಿಸಿದರು. ಇಲ್ಲಿ ಮಾಡಲಾಗುತ್ತಿರುವ ಕಾಮಗಾರಿ ಸಾರ್ವಜನಿಕರ ದುಡ್ಡು. ಈ ಇಲಾಖೆಯಲ್ಲಿ ಹೆಚ್ಚು ಮೋಸವಾಗುತ್ತಿದ್ದು, ಯಾರ ಕೈವಾಡವಿದೆ ಎಂಬುದು ಗೊತ್ತಿರುವುದಿಲ್ಲ. ಬಲಮುರಿ ಗಣಪತಿ ಬಳಿಯ ಜಾಗವು ಹೈಕೋರ್ಟಿನಲ್ಲಿದ್ದು, ಒಂದು ಮಕ್ಕಳ ಪ್ಲೇ ಗ್ರೌಂಡ್ ಗೆ ಇತರೆ ಚಟುವಟಿಕೆಗೆ ಉಪಯೋಗಿಸಿಕೊಳ್ಳಲು ಆದೇಶವಾಗಿದೆ. ಈ ಬಗ್ಗೆ ರಾಜೀ ಮಾಡಿಕೊಳ್ಳೊಣ ಎಂದು ಶಾಸಕ ಪ್ರೀತಮ್ ಗೌಡ ಅವರು ಕೂಡ ನನ್ನ ಬಳಿ ಹೇಳಿದ್ದರೂ ಇದುವರೆಗೂ ಅವರು ಯಾವ ಮಾತುಕತೆ ನಡೆಸಿರುವುದಿಲ್ಲ ಎಂದು ದೂರಿದರು. ೨೦೧೧ ರಲ್ಲಿ ಶಾಸಕರಾಗಿದ್ದ ಹೆಚ್.ಎಸ್. ಪ್ರಕಾಶ್ ಅವರು ನ್ಯಾಯಾಲಯಕ್ಕೆ ಹಾಕಿದ್ದಾಗ ಅದನ್ನು ವಾಪಸ್ ತೆಗೆಸಿ ರಾಜೀಮಾಡಲಾಯಿತು. ಈಗ ಮತ್ತೆ ಈ ಜಾಗವನ್ನು ಸರಿ ಮಾಡದಿದ್ದರೇ ನನ್ನ ಬಳಿ ಇರುವ ದಾಖಲೆ ತೆಗೆದುಕೊಂಡು ಲೋಕಾಯುಕ್ತಕ್ಕೆ ಹೋಗುತ್ತೇನೆ ಎಂದು ಹೇಳಿದರು.

​ ​ ​ ​ ಇಂಜಿನಿಯರ್ ಮಾಧ್ಯಮದೊಂದಿಗೆ ಮಾತನಾಡಿ, ಸರ್ವೆ ಪ್ರಕಾರ ಬಾಗೇಡರ ಕೊಪ್ಪಲು ಹತ್ತಿರ ರಸ್ತೆ ೧೬ ಮೋಟರ್ ಇದ್ದು, ರಸ್ತೆ ಮುಂದೆ ಹೋಗುತ್ತಾ ೩೬ ಮೀಟರ್ ಗಳಿದೆ. ಈ ಕಾರಣಕ್ಕೆ ರಸ್ತೆ ಬ್ರೌಂಡ್ರಿಗೆ ಡ್ರೈನೇಜ್ ಮಾಡಿದ್ದು, ಡ್ರೈನೇಜ್ ಒಳಗೆ ನೀರು ಈ ಭಾಗದಿಂದ ಹರಿಯಲು ಪ್ರಾರಂಭವಾಗುವುದರಿಂದ ಡ್ರೈನ್ ಸೆಕ್ಷೆನ್ ಕಡಿಮೆ ಇದ್ದು, ಹೋಗುತ್ತ ಹೆಚ್ಚಾಗುತ್ತದೆ. ಎಲ್ಲಾವನ್ನು ನೋಡಿಕೊಂಡೆ ಡ್ರೈನೇಜ್ ಮಾಡಿರುವುದಾಗಿ ತಿಳಿಸಿದರು.

ಹಾಸನ ನಗರ ಪಾಲಿಕೆ, ಮಹಾ ನಗರ ಪಾಲಿಕೆಯಾಗುವತ್ತ ಹೆಜ್ಜೆ....
03/01/2022

ಹಾಸನ ನಗರ ಪಾಲಿಕೆ, ಮಹಾ ನಗರ ಪಾಲಿಕೆಯಾಗುವತ್ತ ಹೆಜ್ಜೆ....

17/12/2021

*'ನನ್ ಚುನಾವಣೆಗೆ ಬರ್ಲಿ, ರಾಜಕಾರಣ ಅಂದ್ರೆ ಏನೂಂತ ತೋರಿಸ್ತೀನಿ' : ಶಾಸಕ ಪ್ರೀತಂಗೌಡ ಸವಾಲ್!*

ಖಾದ್ರಿ ಶಾಮಣ್ಣ ಪತ್ರಿಕೋಧ್ಯಮ ಪ್ರಶಸ್ತಿಯ ಗೌರವ ಪಡೆದ , ಜಿಲ್ಲೆ ಜನಮನದ ಪ್ರತಿಷ್ಠಿತ ಪತ್ರಿಕೆ ' ಜನತಾ ಮಾಧ್ಯಮ' ಸಂಪಾದಕರಾದ ಶ್ರೀ ಆರ್ ಪಿ ವೆಂ...
13/11/2021

ಖಾದ್ರಿ ಶಾಮಣ್ಣ ಪತ್ರಿಕೋಧ್ಯಮ ಪ್ರಶಸ್ತಿಯ ಗೌರವ ಪಡೆದ , ಜಿಲ್ಲೆ ಜನಮನದ ಪ್ರತಿಷ್ಠಿತ ಪತ್ರಿಕೆ ' ಜನತಾ ಮಾಧ್ಯಮ' ಸಂಪಾದಕರಾದ ಶ್ರೀ ಆರ್ ಪಿ ವೆಂಕಟೇಶ ಮೂರ್ತಿ.

20/10/2021

ಯಾರು ಆಕಸ್ಮಿಕವಾಗಿ ಏನೆನು ಆಗಿದ್ದಾರೆ ಬಗ್ಗೆ ಇತಿಹಾಸದ ಪುಟ ತೆರೆದರೇ ತಿಳಿಯುತ್ತೆ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಶಾಸಕ ಪ್ರೀತಂ ಜೆ. ಗೌಡ ತಿರುಗೇಟು

ಹಾಸನ : ನಾನು ಗೆಲುವು ಪಡೆದಿರುವುದು ಒಂದೆ ಚುನಾವಣೆಯಲ್ಲಿ ಆಕಸ್ಮಿಕವಾಗಿ ಮಂತ್ರಿಯೂ ಆಗಿಲ್ಲ, ಮುಖ್ಯಮಂತ್ರಿಯೂ ಆಗಿಲ್ಲ. ಯಾರು ಆಕಸ್ಮಿಕವಾಗಿ ಏನೆನು ಆಗಿದ್ದಾರೆ ಎಂಬುದನ್ನು ಇತಿಹಾಸ ಪುಟ ತೆರೆದು ನೋಡಿದರೇ ತಿಳಿಯುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ತಿರುಗೇಟು ನೀಡಿದರು.

​ ​ ​ ​ ನಗರದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಆಕಸ್ಮಿಕ ಶಾಸಕನೆಂದು ಹೇಳಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕುಮಾರಣ್ಣನವರು ಏನೇ ಮಾತನಾಡಿದರೂ ನನಗೆ ಅದು ಆಶೀರ್ವಾದ ಎಂದುಕೊಳ್ಳುತೇನೆ. ಕುಮಾರಣ್ಣ ನನ್ನ ಹಿತೈಷಿ, ಯಾವಾಗಲೂ ನನ್ನ ಒಳಿತನ್ನೇ ಬಯಸುತ್ತಾರೆ ಎಂದು ನಂಬಿದ್ದೇನೆ. ಪಕ್ಷ ಬೇರೆ ಇದ್ದರೂ ಪ್ರೀತಂಗೌಡ ಬಗ್ಗೆ ಅವರಿಗೆ ಇರುವ ಕಾಳಜಿ ಹೆಚ್ಚಿದೆ ಎಂದು ವ್ಯಂಗ್ಯವಾಡಿದರು. ಮೊದಲ ಬಾರಿ ಶಾಸಕನಾಗಿರುವ ನನ್ನ ಬಗ್ಗೆ ಎರಡು ಬಾರಿ ಸಿಎಂ ಆಗಿದ್ದವರು ನನ್ನ ಬಗ್ಗೆ ಮಾತನಾಡಿದ್ದಾರೆ ಎಂದರೆ ನನ್ನ ಶಕ್ತಿ ಏನೆಂದು ಗೊತ್ತಾಗುತ್ತದೆ. ಅವರ ಆಶೀರ್ವಾದವನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ನಾನು ಯಾವ ಸ್ಪೀಡಲ್ಲೂ ಬಂದಿಲ್ಲ, ಮೂರುವರೆ ವರ್ಷ ಕಷ್ಟಪಟ್ಟು ಜನರ ಮಧ್ಯೆ ಇದ್ದು, ಜನರ ಸೇವೆ ಮಾಡಿಕೊಂಡು ಚುನಾವಣೆಯಲ್ಲಿ ಜನರ ಆಶೀರ್ವಾದ ಪಡೆದುಕೊಂಡು ಶಾಸಕನಾಗಿದ್ದೇನೆ ವರತು ಯಾವುದೇ ಕಾರಣಕ್ಕೂ ಆಕಸ್ಮಿಕವಾಗಿ ಶಾಸಕನೂ ಆಗಿಲ್ಲ, ಮಂತ್ರಿಯೂ ಆಗಿಲ್ಲ, ಮುಖ್ಯಮಂತ್ರಿಯೂ ಆಗಿಲ್ಲ. ಆಕಸ್ಮಿಕವಾಗಿ ಅನೇಕ ಜನ ಮಂತ್ರಿಗಳಾಗಿದ್ದಾರೆ, ಮುಖ್ಯಮಂತ್ರಿಗಳಾಗಿದ್ದಾರೆ. ಯಾರಾರು ಯಾವಾವ ಸಂದರ್ಭದಲ್ಲಿ ಆಕಸ್ಮಿಕವಾಗಿ ಏನೇನು ಆಗಿದ್ದಾರೆ ಎಂದು ಇತಿಹಾಸ ಪುಟ ತೆರೆದು ನೋಡಿದ್ರೆ ಗೊತ್ತಾಗುತ್ತದೆ. ಆಕಸ್ಮಿಕ ಎಂಬ ಪದ ಯಾರಿಗೆ ಸಮಂಜಸ ಎಂದು ಜನರು ತೀರ್ಮಾನಿಸುತ್ತಾರೆ. ಯಾರು ಆಕಸ್ಮಿಕವಾಗಿ ಯಾರ ನಾಮಬಲದಲ್ಲಿ ಶಾಸಕರಾದ್ರು, ಸಚಿವರಾದ್ರು, ಯಾವ ಸ್ಟಾಟರ್ಜಿ ಬಳಸಿ ಸಿಎಂ ಆದ್ರು ಇಡೀ ರಾಜ್ಯದ ಜನರಿಗೆ ತಿಳಿದಿರುವ ವಿಚಾರವಾಗಿದೆ ಎಂದು ಟಾಂಗ್ ನೀಡಿದರು.

​ ​ ​ ​ ​ ಮಹರ್ಶಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚನೆ ಮಾಡಿದರು. ರಾಮಾಯಣದಲ್ಲಿ ಆದರ್ಶ ಪುರುಷ ಎಂದರೇ ಶ್ರೀರಾಮಚಂದ್ರ ಎಂದು ಇಡೀ ಜಗತ್ತು ನಂಬಿದೆ. ಭಾರತದ ಪರಂಪರೆ ತಿಳಿಸಿಕೊಟ್ಟಿರುವ ಮಹರ್ಷಿಗಳಿಂದ ಪ್ರೇರಣೆ ಪಡೆದ ಸಂಘ ಇಲ್ಲವೇ ಸಂಘಟನೆ ಇದ್ದರೇ ಅದು ಆರ್ಎಸ್ಎಸ್ ಮಾತ್ರ. ನಾವುಗಳೆಲ್ಲಾ ಆದರ್ಶವನ್ನು ಹಿಂಬಾಲಿಸುವ ಕಾರ್ಯಕರ್ತರಾಗಿದ್ದೇವೆ. ಯಾರೋ ಒಬ್ಬರು ಸಂಘಟನೆ ಬಗ್ಗೆ ಮಾತನಾಡಿದ ತಕ್ಷಣ ಅವರ ಶಕ್ತಿ ಕುಗ್ಗುವುದಿಲ್ಲ. ಮಾತನಾಡುವವರ ಬಾಯಿ ಚಪಲ ತೀರುತ್ತದೆಯೇ ಹೊರತು ಸಂಘಟನೆಗೆ ಯಾವ ಪರಿಣಾಮ ಬೀರುವುದಿಲ್ಲ ಎಂದ ಅವರು, ಇಡೀ ಪ್ರಪಂಚದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನ ಅಸ್ತಿತ್ವ ಇಟ್ಟುಕೊಂಡು ಮುನ್ನೇಡೆಯುತ್ತಿದೆ ಎಂದು ಆರ್ಎಸ್ಎಸ್ ಕಲಿಸಿಕೊಟ್ಟಿರುವುದೇ ನೀಲಿಚಿತ್ರ ನೋಡುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಶಾಸಕ ಪ್ರೀತಮ್ ನೇರವಾಗಿ ಉತ್ತರಿಸಿದರು. ಚುನಾವಣಾ ಮತಕ್ಕಾಗಿ, ರಾಜಕಾರಣಕ್ಕಾಗಿ ಏನು ಬೇಕಾದ್ರು ಮಾತನಾಡಬಹುದು ಎಂದು ರಾಜಕೀಯ ಪಕ್ಷಗಳು ಅಂದುಕೊಂಡಿದ್ರೆ ದು ದುರ್ದೈವ ಎಂದರು. ನಮ್ಮ ದೇಶದ ಸಂಸ್ಕೃತಿ ಪರಂಪರೆ ಉಳಿಸುವ ಸಂಘಟನೆ ಬಗ್ಗೆ ಎಂದು ಹಗುರವಾಗಿ ಮಾತನಾಡಬಾರದು ಎಂದು ಹಿರಿಯರಾದ ಹೆಚ್.ಡಿ. ಕುಮಾರಸ್ವಾಮಿಗೆ ಮನವಿ ಮಾಡುವುದಾಗಿ ಹೇಳಿದರು. ನಾವುಗಳು ಆದರ್ಶ ಪುರುಷರಾದ ಶ್ರೀರಾಮಚಂದ್ರರನ್ನು ಭಕ್ತರು. ಆದ್ದರಿಂದಲೇ ಅಯುಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಅದರ ಮೌಲ್ಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಎಲ್ಲಾರೂ ಮಾಡೋಣ ಎಂದು ಕೋರಿದರು.



;;;;;;;;;;;;;; ;;;;;;;;;;;;; ;;;;;;;;;;;; ;;;;;;;;;;;;;;;

16/10/2021

ತಪ್ಪು ಮಾಡಿದ ಚಾಲಕನಿಗೆ ಶಿಕ್ಷೆ ನೀಡಿ, ನಮ್ಗೆ ಕೆಲಸ ಕೊಡಿ

ಹೆಚ್.ಪಿ.ಸಿ.ಎಲ್. ಕಂಪನಿಯ ೬೦ ಜನ ಚಾಲಕರಿಂದ ಮುಷ್ಕರ

ಹಾಸನ: ತಪ್ಪು ಮಾಡಿದ ಓರ್ವ ಚಾಲಕನಿಗೆ ಬೇಕಾದರೇ ಶಿಕ್ಷೆ ನೀಡಿ ಆದರೇ ಉಳಿದವರಿಗೆ ಕೆಲಸ ಕೊಡಿ. ವಾಹನ ಓಡಿಸಲು ಗುರುತಿನ ಚೀಟಿ ನೀಡುವಂತೆ ಆಗ್ರಹಿಸಿ ಶನಿವಾರ ಬೆಳಿಗ್ಗೆ ಹೆಚ್.ಪಿ.ಸಿ.ಎಲ್. ೬೦ ಜನರು ನಮ್ಮ ಚಾಲಕರ ಟ್ರೇಡ್ ಯೂನಿಯನ್ ನಿಂದ ನಗರದ ಬೈಪಾಸ್, ರಾಜೀವ್ ಕಾಲೇಜು ಬಳಿ ಇರುವ ಕೇಂದ್ರದಲ್ಲಿ ಶಾಂತಿಯುತ ಮುಷ್ಕರ ನಡೆಸಿದರು.

​ ​ ​ ಹೆಚ್.ಪಿ.ಸಿ.ಎಲ್ ಡಿಪೋದ ಪೆಟ್ರೋಲ್ - ಡಿಸೇಲ್ ಲಾರಿಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿತ್ತಿದ್ದು, ಹೀಗಿರುವಾಗ ನಮ್ಮಲ್ಲಿ ಒಬ್ಬ ಚಾಲಕನ ಮಾಡಿದ ತಪ್ಪಿನಿಂದಾಗಿ ಉಳಿದ ೬೦ ಚಾಲಕರು ಕೆಲಸ ಮಾಡದಂತೆ ನಿರ್ಬಂಧಿಸಿದ್ದಾರೆ. ಯಾರೋ ಓರ್ವನು ಮಾಡಿದ ತಪ್ಪಿಗಾಗಿ ಎಲ್ಲರಿಗೂ ಶಿಕ್ಷೆ ಕೊಡುವುದು ಯಾವ ನ್ಯಾಯ. ಬೇಕಾದರೇ ಆತನನ್ನು ಕೆಲಸದಿಂದ ತೆಗೆದು ಹಾಕಿ, ನಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಕೊರಿದರು. ನಾವುಗಳು ವಾಹನ ಓಡಿಸಲು ಗುರುತಿನ ಚೀಟಿಯ ಅಗತ್ಯವಿದ್ದು, ಗುರುತಿನ ಚೀಟಿಯನ್ನು ಮಾಡಿಸಲು ನಾವುಗಳು ಹೆಚ್.ಪಿ.ಸಿ.ಎಲ್. ಬಳಿ ದಾಖಲಾತಿಗಳನ್ನು ನೀಡಿದ್ದೇವೆ ಎಂದರು. ಆದರೂ ಇದುವರೆಗೂ ಗುರುತಿನ ಚೀಟಿಯನ್ನು ನಿರಾಕರಿಸಿದ್ದಾರೆ. ಇನ್ನು ಮುಂದೆ ಕೊಡುವುದಿಲ್ಲ ಎಂಬುದಾಗಿ ಹೇಳಿರುವುದರಿಂದ ನಮಗೆ ತುಂಬಾ ತೊಂದರೆಯಾಗಿದೆ. ಈಗ ಕೆಲಸವಿಲ್ಲದೆ ನಮ್ಮ ಕುಟುಂಬದವರು ಬೀದಿ ಪಾಲಾಗುವ ಸಾಧ್ಯತೆ ಇದ್ದು, ಹೆಚ್.ಪಿ.ಸಿ.ಎಲ್ ಕಂಪನಿಯವರು ಹಿಗೆ ೩ ತಿಂಗಳಿಂದ ನಮಗೆ ಕೆಲಸವನ್ನು ಕೊಡದೇ ನಮ್ಮಗಳಿಗೆ ತುಂಬಾ ನಷ್ಟವನ್ನು ಉಂಟುಮಾಡುತ್ತಿರುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡರು. ನಮಗೆ ನ್ಯಾಯ ಕೊಡುವಂತೆ ಒತ್ತಾಯಿಸಿ ಹೆಚ್.ಪಿ.ಸಿ.ಎಲ್ ಕಂಪನಿಯ ಎಲ್ಲಾ ಚಾಲಕರುಗಳು ಮುಷ್ಕರಕ್ಕೆ ಒಪ್ಪಿಗೆ ನೀಡಿದಂತೆ ಶಾಂತಿಯುತವಾಗಿ ಮುಷ್ಕರ ಮಾಡುತ್ತಿರುವುದಾಗಿ ಹೇಳಿದರು. ಚಾಲಕರ ಕುಟುಂಬದವರಿಗೆ ತೊಂದರೆಯಾದಲ್ಲಿ ಅದಕ್ಕೆ ಹೆಚ್.ಪಿ.ಸಿ.ಎಲ್ ಕಂಪನಿಯವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳು ಹೆಚ್.ಪಿ.ಸಿ.ಎಲ್. ಕಂಪನಿಯವರು ನಮಗೆ ವಾಹನ ಓಡಿಸಲು ಗುರುತಿನ ಚೀಟಿಯನ್ನು ಜರೂರಾಗಿ ಚಾಲಕರಾದ ನಮ್ಮಗಳಿಗೆ ಗುರುತಿನ ಚೀಟಿಯನ್ನು ಕೊಡಿಸಿಕೊಡಬೇಕಾಗಿ ಕೋರಿದರು. ಚಾಲಕರಾದ ನಮಗಳಿಗೆ ಗುರುತಿನ ಚೀಟಿಯನ್ನು ನೀಡದಿದ್ದಲ್ಲಿ ನಾವುಗಳು ಮುಷ್ಕರವನ್ನು ಮುಂದುವರೆಸಲಾಗುವುದು ಮತ್ತು ಇತರೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕೆಂದು ನಮ್ಮ ಚಾಲಕರ ಟ್ರೇಡ್ ಯೂನಿಯನ್ ನಿಂದ ಚಾಲಕರು ಒತ್ತಾಯಿಸಿದರು. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಂದು ನಮಗೆ ನ್ಯಾಯ ಕೊಡುವವರೆಗೂ ಮುಷ್ಕರ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

​ ​ ​ ​ ​ ಈ ವೇಳೆ ಹೆಚ್.ಪಿ.ಸಿ.ಎಲ್. ಕಂಪನಿಗೆ ಬರುವ ವಾಹನಗಳನ್ನು ತಡೆದು ಚಾಲಕರು ಮುಂದೆ ಹೋಗದಂತೆ ತಿಳಿಸುತ್ತಿದ್ದರು. ಮುನ್ನೇಚ್ಚರಿಕ ಕ್ರಮವಾಗಿ ಮುಷ್ಕರ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದು ಬಸ್ತು ಮಾಡಲಾಗಿತ್ತು.

​ ​ ​ ​ ಮುಷ್ಕರದಲ್ಲಿ ನಮ್ಮ ಚಾಲಕರ ಟ್ರೇಡ್ ಯೂನಿಯನ್ ಹಾಸನ ಜಿಲ್ಲಾ ಘಟಕದ ದೇವರಾಜು, ರಘು, ನವೀನ್, ಲೋಕೇಶ್, ಕರಣ್ ಕುಮಾರ್, ಸಾಗರ್, ರಾಕೇಶ್, ಉಮೇಶ್, ಮನು, ಮದನ್, ಕಿರಣ್, ಕುಮಾರ್ ಇತರರು ಉಪಸ್ಥಿತರಿದ್ದರು.

;;;;;;;;;;;;;;; ;;;;;;;;;;;;; ;;;;;;;;;;;;; ;;;;;;;;;;;;;

ಆರ್.ಎಸ್.ಎಸ್. ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ, ಹೊಳೆನರಸೀಪುರ ನಾಯಕರಿಗೆ ಎಚ್ಚರಿಕೆ: ತುಮಕೂರು ವಿಭಾಗದ ಪ್ರಚಾರಕ ಅಕ್ಷಯ್ ಬೌದ್ದ...
10/10/2021

ಆರ್.ಎಸ್.ಎಸ್. ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ, ಹೊಳೆನರಸೀಪುರ ನಾಯಕರಿಗೆ ಎಚ್ಚರಿಕೆ: ತುಮಕೂರು ವಿಭಾಗದ ಪ್ರಚಾರಕ ಅಕ್ಷಯ್ ಬೌದ್ದಿಕ್

ಹಾಸನ: ಆರ್.ಎಸ್.ಎಸ್. ಬಗ್ಗೆ ಮಾತನಾಡುವವರು ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು ಎಂದು ಹೊಳೆನರಸೀಪುರದ ನಾಯಕರಿಗೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರ್.ಎಸ್.ಎಸ್)ದ ತುಮಕೂರು ವಿಭಾಗದ ಪ್ರಚಾರಕ ಅಕ್ಷಯ್ ಬೌದ್ದಿಕ್ ಎಚ್ಚರಿಕೆ ನೀಡಿದರು.

​ ​ ​ ​ ​ ಪ್ರತಿ ವರ್ಷದಂತೆ ಈ ವರ್ಷವೂ ವಿಜಯದಶಮಿ ಹಬ್ಬದ ಅಂಗವಾಗಿ ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಆವರಣದಿಂದ ಹೊರಟ ಆಕರ್ಷಕ ಆರ್.ಎಸ್.ಎಸ್. ಪಥಸಂಚಲನ ಮೆರವಣಿಗೆಯು ಸಾಲಗಾಮೆ ರಸ್ತೆಯಿಂದ ಕಾರ್ಮಲ್ ಆಶ್ರಮ, ಶಾಂತಿನಗರ, ಹೇಮಾವತಿ ನಗರ, ಜವೇನಹಳ್ಳಿ ಕೆರೆ, ಸಂಗಮೇಶ್ವರ ದೇವಸ್ಥಾನ ಬನ್ನಿಮಂಟಪ, ಸರಸ್ವತಿ ದೇವಸ್ಥಾನ, ನಗರದ ಮುಖ್ಯ ರಸ್ತೆಯಲ್ಲಿ ಪಥಸಂಚಲನ ಸಾಗಿ ಬಂದು ಪುನಹ ನಗರದ ಇಂಜಿನಿಯರ್ ಮಲೆನಾಡು ಕಾಲೇಜಿನಲ್ಲಿ ಕೊನೆಗೊಂಡಿತು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿ ಮಾತನಾಡಿದ ಅವರು, ಹೊಳೆನರಸೀಪುರದ ನಾಯಕರು ಮಾತನಾಡುವಾಗ ಜಾಗೃತರಾಗಿ ಮಾತನಾಡಬೇಕು. ನಾಳೆ ಹೊಳೆನರಸೀಪುರದವರು ಬಂದು ನಮ್ಮ ಸಂಘಟನೆಗೆ ಬಂದರೆ ಸೇರಿಸಿಕೊಳ್ಳುತ್ತೆವೆ. ಆರ್.ಎಸ್.ಎಸ್ ಬಗ್ಗೆ ಮಾತನಾಡುವರು ಹಿಂದೂ ಸಮಾಜಕ್ಕೆ ಭಾರವಿದ್ದಂತೆ. ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು. ನೀವು ಹೆಚ್ಚಾಗಿ ಮಾತನಾಡಿದಷ್ಟು ಆರ್.ಎಸ್.ಎಸ್.ಗೆ ಲಾಭ ಎಂದು ಜೆಡಿಎಸ್ ಕುಟುಂಬದವರ ವಿರೋಧದ ಹೇಳಿಕೆಗೆ ಭಾಷಣದಲ್ಲಿ ಆಕ್ರೋಶವ್ಯಕ್ತಪಡಿಸಿದರು. ಆರ್.ಎಸ್.ಎಸ್ ನಿಂದ ಹೆಚ್ಚು ಐ.ಎ.ಎಸ್., ಐ.ಪಿ.ಎಸ್ ಗೆ ಹೆಚ್ಚು ಆಯ್ಕೆಯಾಗಿದ್ದಾರೆ. ಎಲ್ಲಾ ಜನರು ಆರ್.ಎಸ್.ಎಸ್ ಶಾಖೆಗೆ ಭೇಟಿ ನೀಡುತ್ತಾರೆ ಎಂದು ಸಲಹೆ ನೀಡಿದರು. ನಿಮ್ಮ ರಾಜಕೀಯ ನಿಮ್ಮ ಮನೆಯಲ್ಲಿಯೇ ಚಪ್ಪಲಿ ಬಳಿ ಬಿಟ್ಟು ಬನ್ನಿ. ಇಲ್ಲೆ ಹುಟ್ಟಿದ ಮುಸ್ಲಿಂರು ಹಾಗು ಕ್ರಿಶ್ಚಿಯನ್ ರು ಹಿಂದೂ ಧರ್ಮಕ್ಕೆ ಸೇರಿದವರು. ದೇಶಾದ್ಯಂತ ಆರ್.ಎಸ್.ಎಸ್. ೧.೬೩.೫೦೦ ಚಟುವಟಿಕೆ ನಡೆಸುತ್ತಿದೆ. ಮದರ್ ಥೆರಸಾ ಅವರು ನಾನಾ ಚಟುವಟಿಕೆಗಳನ್ನು ನಡೆಸಿ ದೇಶದ ಜನರನ್ನು ಮತಾಂತರ ಮಾಡಿದರು. ಮತಾಂತರ ಮಾಡಿ ವಾಪಸು ಆದವರನ್ನು ಹಿಂದೂ ಸಮಾಜಕ್ಕೆ ಮತ್ತೆ ವಾಪಸು ತರುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. .

​ ​ ​ ​ ​ ಮುಸ್ಲಿಮರು ನಾನಾ ರಾಷ್ಟ್ರಗಳ ಮೇಲೆ ಅನೇಕ ಬಾರಿ ದಾಳಿ ಮಾಡಿದರು. ಪೃಥ್ವಿರಾಜ್ ಚೌಹಣ್ಣ್ ಅವರು ಮಹಮದ್ ಘೋರಿ ಯುದ್ದದಲ್ಲಿ ಸೋಲಿಸಿ ಕ್ಷಮಧಾನ ನೀಡಿರುವುದು ಹಿಂದೂ ರಾಜರ ಕ್ಷಮಾರ್ಪಣೆ ಗುಣವಾಗಿದೆ ಎಂದರು. ಪೃಥ್ವಿರಾಜ್ ಚೌಹಣ್ಣ ಕ್ಷಮೆ ಕೊಡದಿದ್ದರೆ. ಮುಸ್ಲಿಂರು ನಮ್ಮ ದೇಶದಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮಹಮದ್ ಘೋರಿ ದೇಶದ ಮೇಲೆ ೧೬ ಬಾರಿ ದಾಳಿ ನಡೆಸಿ, ೧೭ ನೇ ಬಾರಿ ಪೃಥ್ವಿರಾಜ್ ಚೌಹಾಣ್ಣ ಮಂತ್ರಿ ಜೊತೆ ಒಪ್ಪಂದ ಮಾಡಿಕೊಂಡು ಹಣದ ಆಮಿಷ ತೋರಿಸಿ ವಂಚನೆಯಿಂದ ಯುದ್ಧದಲ್ಲಿ ಜಯಗಳಿಸಿದ್ದನು. ೧೦೦ ವರ್ಷಗಳ ನಮ್ಮ ಸಾಮರಸ್ಯ ಕಾರಣ ಮುಸ್ಲಿಂರು ಭಾರತ ದೇಶವನ್ನು ಆಳಿ ಮತಾಂತರ ಮಾಡಿದರು. ೧೫೨೬ ರಲ್ಲಿ ಉಜ್ವೈಕಿಸ್ತಾನದಿಂದ ಬಂದ ಬಾಬರ್ ಎರಡು ವರ್ಷಗಳ ಕಾಲ ದೇಶ ಅಧ್ಯಯನ ಮಾಡಿ, ದೇಶದಲ್ಲಿ ರಾಜರ ವಿಕನೇಷಗಳನ್ನು ತಿಳಿದುಕೊಂಡು ೧೫೨೮ ರಲ್ಲಿ ರಾಮಮಂದಿರ ಧ್ವಂಸ ಮಾಡಿದ್ದನು. ಬ್ರಿಟಿಷ್ರರು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದವರೆ ವರತು ಯುದ್ಧದ ಮೂಲಕ ಅಲ್ಲ. ಹಿಂದೂಗಳನ್ನು ಸಂಘಟನೆ ಮಾಡುವ ಉದ್ದೇಶದಿಂದ ಆರ್.ಎಸ್.ಎಸ್. ಸ್ಥಾಪನೆ ಮಾಡಲಾಯಿತು. ಹಿಂದೂಗಳು ಸಂಘಟಿತರಾದರೆ ದೇಶ ಶಾಂತಿಯುತವಾಗುತ್ತದೆ ಎಂದು ತಿಳಿಸಿದರು.

​ ​ ​ ​ ​ ​ ಇದೆ ವೇಳೆ ನಗರದ ಮುಖ್ಯ ರಸ್ತೆಯಲ್ಲಿ ಪಥಸಂಚಲನ ಮಾಡುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕರ ಸಂಘ ( ಆರ್.ಎಸ್.ಎಸ್.) ಗಣವೇಶದಲ್ಲಿದ್ದವರಿಗೆ ಮೆರವಣಿಗೆ ಉದ್ದಕ್ಕೂ ರಂಗೋಲಿ ಬಿಡಿಸಿದ್ದರು. ಇವರ ಮೇಲೆ ಹೂ ಮಳೆ ಸುರಿಸಲಾಯಿತು. ಮುನ್ನೇಚ್ಚರಿಕ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಿಗಿ ಬಂದು ಬಸ್ತು ಮಾಡಲಾಗಿತ್ತು.

​ ​ ​ ಈ ಸಂದರ್ಭದಲ್ಲಿ ಆರ್.ಎಸ್.ಎಸ್. ನಗರ ಸಂಚಾಲಕ ನಾಗೇಶ್, ಜಿಲ್ಲಾ ಮಾಧ್ಯಮ ಮುಖಂಡರಾದ ಮೋಹನ್, ಹಿರಿಯರಾದ ಪಾರಸ್ ಮಲ್, ಹುಲ್ಲಳ್ಳಿ ಸುರೇಶ್, ವೇಣುಗೋಪಾಲ್, ರಾಜಗೋಪಾಲ್ ಇತರರು ಉಪಸ್ಥಿತರಿದ್ದರು.

08/10/2021

ಬಿಜೆಪಿಯವರು ಕುಮಾರಸ್ವಾಮಿ ಫೋಟೋ ಪೂಜೆ ಮಾಡಬೇಕು: ಜೆಡಿಎಸ್ ನಂಬಿ ಎಂದು
ಬಿಜೆಪಿ ಮನೆ ಬಾಗಿಲಿಗೆ ನಾವು ಯಾರೂ ಹೋಗಿಲ್ಲ.

ಶಾಸಕ ಪ್ರೀತಂ ಗೌಡರ ಹೇಳಿಕೆಗೆ ಹೆಚ್.ಡಿ. ರೇವಣ್ಣ ತಿರುಗೇಟು .

ಹಾಸನ: ಜೆಡಿಎಸ್ ಪಕ್ಷವನ್ನು ನಂಬಿ ಎಂದು ಬಿಜೆಪಿಯವರ ಮನೆ ಬಾಗಿಲಿಗೆ ನಾವು ಯಾರೂ ಹೋಗಿಲ್ಲ ಎಂದು ಹಾಸನದ ಶಾಸಕ ಪ್ರೀತಮ್ ಜೆ. ಗೌಡರ ಹೇಳಿಕೆಗೆ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರು ತಿರುಗೇಟು ನೀಡಿದರು.

​ ​ ​ ​ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ನಂಬಿ ಅಂತ ಬಿಜೆಪಿಯವರ ಮನೆ ಬಾಗಿಲಿಗೆ ನಾವು ಯಾರು ಹೋಗಿಲ್ಲ. ನಮಗೆ ಅವರ ಅವಶ್ಯಕತೆಯೂ ಇರುವುದಿಲ್ಲ ಎಂದರು. ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಕಳೆದಿದೆ. ಈ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ನೀರಾವರಿ ಇಲಾಖೆಯಲ್ಲಿ ಕಳೆದ ಎರಡು ವರ್ಷದಲ್ಲಿ ಸುಮಾರು ಸಾವಿರಾರು ಕೋಟಿ ಅಪ್ರೂವಲ್ ನೀಡಿದ್ದಾರೆ. ಆದರೆ ಕಾವೇರಿ ಬೇಸಿನ್ ಪ್ರದೇಶದಲ್ಲಿ ಯಾವುದೇ ಹೊಸ ಯೋಜನೆಗಳ ಘೋಷಣೆ ಮಾಡಿಲ್ಲ. ಮುಖ್ಯಮಂತ್ರಿ ಹಾಗು ಸರ್ಕಾರದ ಸಚಿವರು ರಾಜ್ಯದ 6 ಕೋಟಿ ಜನರ ಪ್ರತಿನಿಧಿಯಾಗಿ ರಾಜ್ಯಪಾಲರಿಂದ ಪ್ರತಿಜ್ಞಾವಿಧಿ ತೆಗೆದುಕೊಂಡಿರುತ್ತಾರೆ. ಹಾಸನ ಜಿಲ್ಲೆಯ ನೀರಾವರಿ ಕೆಲಸಗಳನ್ನು ಬಿಜೆಪಿ ಸರ್ಕಾರದವರು ಪಕ್ಷಬೇದದ ಕಾರಣ ತಡೆಹಿಡಿದಿದ್ದಾರೆ. ಬಿಜೆಪಿ ಸರ್ಕಾರ ನೀರಾವರಿ ಕೆಲಸ ಮಾಡದೆ ಹೋದರೆ ನಾನು ಶಾಸಕರು ಹಾಗು ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

​ ​ ​ ​ ಮಾಜಿ ಸಿಎಂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಏನು ಮಾಡಿದ್ದಾರೆ? ಹಾಸನ ಜಿಲ್ಲೆಗೆ ಬಿಜೆಪಿ ಕೊಡುಗೆ ಏನಿದೆ? ಯಡಿಯೂರಪ್ಪ ಅಧಿಕರದಲ್ಲಿದ್ದಾಗ ಜಿಲ್ಲೆಯಲ್ಲಿ 60 ಸಿ.ಎಲ್. 7 ಬಾರ್ ಗಳನ್ನು ಹಳ್ಳಿಗಳಲ್ಲಿ ಜನ ಆರೋಗ್ಯ ಕಾಪಾಡಿಕೊಳ್ಳಲಿ ಎಂದು ರಸ್ತೆ ರಸ್ತೆಗೆ ಮಂಜೂರು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.ಯಡಿಯೂರಪ್ಪ ಅವರು ಹಾಸನ ಜಿಲ್ಲೆಗೆ ಮಾಡಿರುವ ಅನ್ಯಾಯವನ್ನು ಮಂಬರುವ ದಿನಗಳಲ್ಲಿ ಎಳೆ ಎಳೆಯಾಗಿ ಬಿಡಿಸಿ ಜನರ ಮುಂದೆ ಇಡುತ್ತೇನೆ. ಹಾಸನಕ್ಕೆ ಪ್ಲೈ ಒವರ್, ಹಾಸನ ದುದ್ದ ಸಿಮೆಂಟ್ ರಸ್ತೆ, ಹಾಸನ ನಗರದ ರಿಂಗ್ ರಸ್ತೆ ಹಾಗೂ 80 ಅಡಿ ರಸ್ತೆ ಮಾಡಲು ನಾನೇ ಅಧಿಕಾರಕ್ಕೆ ಬರಬೇಕಾಯಿತು. ಬಿಜೆಪಿಯವರ ಯೋಗತ್ಯಗೆ ಜಿಲ್ಲೆಗೆ ಒಂದು ಬಡವರ ಹಾಸ್ಟೆಲ್ ಕೂಡ ಮಂಜೂರು ಮಾಡಿರುವುದಿಲ್ಲ ಎಂದು ಕಿಡಿಕಾರಿದರು. ಯಡಿಯೂರಪ್ಪ ಅಧಿಕಾರದಿಂದ ಇಳಿಯುವಾಗ ಅಪ್ಪ ಮಕ್ಕಳು ಏನು ಕೆಲಸ ಮಾಡಿಲ್ಲ ಎಂದಿದ್ದರು. ನಾವು ಯಾರಿಗೂ ಹೆದರಿ ಒಡಿ ಹೋಗಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಗಳಿಸಲು ಹೆಚ್.ಡಿ. ಕುಮಾರಸ್ವಾಮಿ ಕಾರಣ ಎಂಬುದನ್ನು ಮರೆಯಬಾರದು. ಬಿಜೆಪಿಯವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪೋಟೊ ಇಟ್ಟುಕೊಂಡು ಪೂಜೆ ಮಾಡಲಿ ಎಂದು ಟಾಂಗ್ ನೀಡಿದರು. ದೇವೇಗೌಡರು ಅಧಿಕಾರ ಕೊಡಲಿಲ್ಲ ಎಂದು ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದರೇ ವಿನಃ ಯಾವುದೇ ಅಭಿವೃದ್ಧಿ ಕೆಲಸ ಮಾಡಿ ಅಧಿಕಾರಗಳಿಸಿಲ್ಲ. ಪ್ರಸ್ತುತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅನುದಾನ ಕೊಡುವ ಬರವಸೆ ಕೊಟ್ಟಿದ್ದಾರೆ. ಕೊಡದಿದರೆ ನಾನು ಏನು ಮಾಡಕಾಗಲ್ಲ. ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ವಂತತ್ರವಾಗಿ ಅಧಿಕಾರ ಪಡೆಯಲಿದೆ. ಸಿಂಧಗಿ ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಡೆಯಲಾಗಿಲ್ಲ. ಸಿಂಧಗಿಯಲ್ಲಿ 40 ಸಾವಿರ ಮುಸ್ಲಿಂ ಸಮುದಾಯದ ಮತದಾರರಿದ್ದಾರೆ. ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ನೋಡಲಾಗುತ್ತಿಲ್ಲ. ಜಿಲ್ಲೆಯ ರೈತರ ಬಗ್ಗೆ ಸ್ಥಳೀಯ ಶಾಸಕರಿಗೆ ಚಿಂತೆ ಇಲ್ಲ. ಇನ್ನು ಮೆಕ್ಕೆಜೋಳ, ಆಲೂಗಡ್ಡೆ ಸಮಸ್ಯೆ ರೇವಣ್ಣ ಹೇಳಬೇಕಾ. ಹಾಸನ ಜಿಲ್ಲೆಯ ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಬಗ್ಗೆ ಯಾರು ಹೇಳಬೇಕಿಲ್ಲ ಎಂದರು.
ಡಿಸೇಲ್. ಪೆಟ್ರೋಲ್ ಬೇಲೆ ಏರಿಕೆ ಆದರೂ ರಾಷ್ಟ್ರೀಯ ಪಕ್ಷದವರು ಏನು ಮಾಡಿದ್ದಾರೆ? ಇದರ ಬಗ್ಗೆ ಯಾವ ಬಿಜೆಪಿಯವರು ಮಾತನಾಡುವುದಿಲ್ಲ. ಹಾಸನಾಂಭ ದೇವರ ದರ್ಶನ ಮಾಡಲು ಸಾರ್ವಜನಿಕರ ನಿರ್ಭಂದ ಕುರಿತು ಮಾತನಾಡಿ, ಕೊರೋನಾ ಅಂತ ಎಣ್ಣೆ ಅಂಗಡಿ ನಿಲ್ಲಿಸಿದ್ದಾರೆಯೇ?ಎಂದು ಪ್ರಶ್ನೆ ಮಾಡಿದರು. ಮುಂಜಾಗ್ರತಾ ಕ್ರಮ ತೆಗೆದುಕೊಂಡು ಸಾರ್ವಜನಿಕರಿಗೆ ದೇವರ ದರ್ಶನ ಮಾಡಿಕೊಳ್ಳಲು ಜಿಲ್ಲಾಡಳಿತ ಅವಕಾಶ ನೀಡಬೇಕು. ಹೆಣ್ಣುಮಕ್ಕಳು ಹರಕೆ ಹೊತ್ತಿರುತ್ತಾರೆ. ಅವರಿಗಾದರೂ ಅವಕಾಶ ಕೊಡಿಸಲಿ. ಈ ದಿನ ಚಾಮುಂಡೇಶ್ವರಿ ದೇವರ ದರ್ಶನ ಕೂಡ ಪಡೆಯುತ್ತೇನೆ. ಮಂಡ್ಯದಲ್ಲಿ ಶಾಸಕ ಪುಟ್ಟರಾಜು ಮನೆ ಮೇಲೆ ಕಲ್ಲು ಎಸೆತ ದಾಳಿಯನ್ನು ಖಂಡಿಸಿದ ಅವರು ಸರಕಾರವು ಶಾಸಕ ಪುಟ್ಟರಾಜುಗೆ ರಕ್ಷಣೆ ಕೊಡಬೇಕು ಎಂದು ಹೇಳಿದರು.

07/10/2021

ಜೆ. ಡಿ. ಎಸ್. ನವರು ನಂಬಿಕೆಗೆ ಅರ್ಹರಲ್ಲ ಬಂದು ಅವರೇ ಸಾಬೀತು ಮಾಡಿದ್ದಾರೆ : ಶಾಸಕ ಪ್ರೀತಮ್

ಬಿಜೆಪಿ ನೋ ,ಕಾಂಗ್ರೆಸ್ಸೋ, ಅವರಿಗೆ ಅಧಿಕಾರ ಸಿನ ಬೇಕಷ್ಟೇ. ಕುಮಾರಸ್ವಾಮಿ ಮತ್ತವರ ಜೆ ಡಿ ಎಸ್. ಪಕ್ಷ ಯಾವುದೇ ಪಕ್ಷ ಬಹುಮತ ಗಳಿಸಿವುದನ್ನು ಬಯಸುವುದಿಲ್ಲ ಪರಿಸ್ಥಿತಿ ಅತಂತ್ರವಿದ್ದಾಗ ಯಾವುದಾದರೂ ಒಂದು ಪಕ್ಷಕ್ಕೆ ಬೆಂಬಲ ಸೂಚಿಸಿ ಅಧಿಕಾರ ನಡೆಸುವ ತಂತ್ರ ಅವರದು ಎ೦ದು ಶಾಸಕ ಪ್ರೀತಂ .ಜೆ. ಗೌಡ ಅವರು ವಾಗ್ದಾಳಿ ನಡೆಸಿದರು.
ನಗರದ ಹಿ ಮ್ಸ್ ಆಸ್ಪತ್ರೆ ಅವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜೆ ಡಿ ಎಸ್ ನೊಂದಿಗೆ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಅವರ ಮರ್ಜಿಯಂತೆ ಕೆಲಸ ಮಾಡುವುದು ನಮಗಾಗಲಿ, ನಮ್ಮ ಪಕ್ಷಕ್ಕಾಗಲೀ ಅಗತ್ಯವಿಲ್ಲ.
ಆರ್. ಎಸ್.ಎಸ್. ದೇಶ ಕಟ್ಟುವಂತ ಯುವಕರನ್ನು ಬೆಳಸುವ ಕಾಖಾ೯ನೆ. ಕುಮಾರಸ್ವಾಮಿಯವರು ಅದನ್ನೇ ವಿರೋಧಿಸುತ್ತಾರೆಂದರೆ ಅವರ ಮನಸ್ಥಿತಿ ಏನು ಎಂಬುದು ಗೊತ್ತಾಗುತ್ತಿದೆ. ಈಗ ಅವರ ಮುಖವಾಡ ಕಳಚಿ ಬಿದ್ದಿದೆ. ಅವರ ಜೆ. ಡಿ. ಎಸ್. ಪಕ್ಷವನ್ನು ರಾಜಕೀಯವಾಗಿ ದೂರ ಇಡಬೇಕು. ಅಧಿಕಾರ ಹಿಡಿಯಲು 10 ವರ್ಷ ಬೇಕಾದರೂ ಕಾಯೋಣ. ನಾವು ಅವರೊಂದಿಗೆ ಗುಲಬರ್ಗ ಅಥವ ಮೈಸೂರಿನಲ್ಲಿ ಹೊಂದಾಣಿಕೆ ಮಾಡಿಕೊಂಡರೆ ನಮ್ಮ ಹೆಸರಲ್ಲಿ ಅವರ ಬೇಳೆ ಬೇಯಿಸಿಕೊಳ್ಳುತ್ತಾರೆ.
ಅವರಿಗೆ ಕಾಂಗ್ರೆಸ್ ಆದರೂ ಸರಿ ,ಬಿಜೆಪಿ ಆದರೂ ಸರಿ. 100 ಕ್ಕಿಂತ ಕಡಿಮೆ ಬಂದರೆ ಇವರು ಬೆಂಬಲ ಕೊಡುತ್ತಾರೆ. ಪ್ರೀತಂ ಗೌಡ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಕೆಲವರು ಹೇಳುತ್ತಾರೆ. ಈ ಪ್ರೀತಂ ಗೌಡ ಅಡ್ಜಸ್ಟ್ ಮಾಡಿಕೊಳ್ಳುವವನಲ್ಲ . ನನಗೆ ಹೊಂದಾಣಿಕೆ ರಾಜಕೀಯ ಬೇಡ ಎ೦ದು ತಮ್ಮ ನಿಲುವು ಪ್ರಕಟಿಸಿದರು

17/09/2021

ಲಸಿಕೆ ನೀಡುವ ಸ್ಥಳದ ವಿಚಾರವಾಗಿ ಯತೀಂದ್ರ ಕಾಲೇಜು ಮಾಲೀಕರಿಗೂ-ನಗರಸಭೆ ಆಯುಕ್ತರ ನಡುವೆ ವಾಗ್ವಾದ, ಹಲ್ಲೆ ವಿಡಿಯೋ ವೈರಲ್

ಹಾಸನ: ಲಸಿಕೆ ನೀಡುವ ಜಾಗದ ವಿಚಾರವಾಗಿ ಯತೀಂದ್ರ ಪ್ಯಾರಾ ಮೆಡಿಕಲ್ ಕಾಲೇಜ್ ಮಾಲೀಕರಿಗೂ ಮತ್ತು ನಗರಸಭೆ ಆಯುಕ್ತರ ನಡುವೆ ನಡೆದ ವಾಗ್ವಾದವು ಹಲ್ಲೆ ನಡೆಯುವ ಮಟ್ಟಕ್ಕೆ ತಿರುಗಿರುವ ವಿಡಿಯೋ ಎಲ್ಲೆಡೆ ಸಕತ್ ವೈರಲ್ ಆಗಿದೆ.

​ ​ ​ ​ ಕೊವೀಡ್ ವ್ಯಾಕ್ಸಿನೇಷನ್ ಮಾಡಲು ನಗರಸಭೆ ಸಿಬ್ಬಂದಿಯವರು ಹಾಸನ ನಗರದ ಹೇಮಾವತಿ ಬಡಾವಣೆಯಲ್ಲಿ ಯತೀಂದ್ರ ಪ್ಯಾರಾ ಮೆಡಿಕಲ್ ಕಾಲೇಜ್ ಉಪಯೋಗಿಸಿ ಕೊಂಡಿದ್ದು, ಬೆಳಿಗ್ಗೆ ೭ ರಿಂದ ಸಂಜೆ ೭ ಗಂಟೆ ಸಮಯದ ಅವಧಿಗೆ ವ್ಯಾಕ್ಸಿನೇಷನ್ ಅವಧಿ ಇದ್ದು, ಅಲ್ಲಿವರೆಗೂ ವ್ಯಾಕ್ಸಿನೇಷನ್ ಮಾಡುವುದಕ್ಕೆ ಕಾಲೇಜು ನೀಡಲು ಸಾಧ್ಯವಿಲ್ಲ ಎಂದು ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ಯವರಿಗೆ ಕಾಲೇಜು ಮುಖ್ಯಸ್ಥರಾದ ಹಾಗು ವೈದ್ಯರಾದ ಡಾ. ಯತೀಂದ್ರರವರು ತಿಳಿಸಿದ್ದಾರೆ. ನಗರಸಭೆ ಆಯುಕ್ತರು ಮಾತನಾಡಿ, ಜಿಲ್ಲಾಡಳಿತದ ಆದೇಶದಂತೆ​ ಸಂಜೆ ೪ ಗಂಟೆ ಸಮಯದವರಿಗಾದರೂ ಅವಕಾಶ ನೀಡಿ ಎಂದು ಕಾಲೇಜು ಆಡಳಿತ ಮಂಡಳಿಗೆ ಕೋರಿದ್ದು, ಇದನ್ನು ದಿಕ್ಕರಿಸಿದ ಕಾಲೇಜು ಆಡಳಿತ ಮಂಡಳಿಯ ಸಿಬ್ಬಂದಿಯವರು ಸ್ಥಳದಲ್ಲಿದ್ದ ನಗರಸಭೆ ಆಯುಕ್ತರು ಮತ್ತು ಸಿಬ್ಬಂದಿಯವರಿಗೆ ಅವ್ಯಾಚ ಪದಗಳಿಂದ ನಿಂದನೆ ಮಾಡಿರುವುದಾಗಿ ತಿಳಿದು ಬಂದಿದೆ. ಕಾಲೇಜು ಮಾಲಿಕರಾದ ಡಾ. ಯತೀಂದ್ರ ಮತ್ತು ಕಾಲೇಜು ಸಿಬ್ಬಂದಿ ನಡುವೆ ಹಾಗು ನಗರಸಭೆ ಆಯುಕ್ತರು ಮತ್ತು ಸಿಬ್ಬಂದಿ ನಡುವೆ ಪರಸ್ಪರ ಮಾತುಕತೆ ನಡೆದು ಮಾತಿಗೆ ಮಾತು ಬೆಳೆದಿದೆ. ಈ ವೇಳೆ ನಗರಸಭೆ ಸಿಬ್ಬಂದಿ ಮೇಲೆ ಯತೀಂದ್ರ ಮತ್ತು ಕಾಲೇಜು ಸಿಬ್ಬಂದಿಯವರು ಸೇರಿ ದೈಹಿಕ ಹಲ್ಲೆ ನಡೆಸಿದ್ದು. ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಸಕತ್ ವೈರಲ್ ಆಗಿದೆ. ಈ ಬಗ್ಗೆ ನಗರಸಭೆ ಆಯುಕ್ತರು ಯಾವುದೇ ದೂರು ನೀಡಿರುವುದಿಲ್ಲ. ಇನ್ನು ಯತೀಂದ್ರ ಪ್ಯಾರಾ ಮೆಡಿಕಲ್ ಕಾಲೇಜು ಸಿಬ್ಬಂದಿವರು ದೂರು ನೀಡುವುದಾಗಿ ತಿಳಿದು ಬಂದಿದು, ಸದ್ಯ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ ಎಂದು ಮೂಲಗಳು ತಿಳಿಸಿದೆ. ಪ್ರಕರಣ ದಾಖಲಾಗಿ ಇನ್ನು ಹೆಚ್ಚಿನ ಸತ್ಯಾಂಶಗಳು ಹೊರಬರಬೇಕಾಗಿದೆ.

;;;;;;;;;;;;;;;;; ;;;;;;;;;;;;;;; ;;;;;;;;;;;;;; ;;;;;;;;;;;;;; ;;;;;;;;;;;;;; ;;;;;;;;;;;;;;;

Address

Race Course Road
Hassan
573201

Opening Hours

Monday 9am - 12:30am
Tuesday 9am - 12:30am
Wednesday 9am - 12:30am
Thursday 9am - 12:30am
Friday 9am - 12:30am
Saturday 9am - 12:30am
Sunday 9am - 12:30am

Telephone

+919449852494

Alerts

Be the first to know and let us send you an email when JanathaMadhyama posts news and promotions. Your email address will not be used for any other purpose, and you can unsubscribe at any time.

Contact The Business

Send a message to JanathaMadhyama:

Videos

Share

Category

Nearby media companies