Dharwad People's Voice ಧಾರವಾಡ ಜನಧ್ವನಿ

  • Home
  • India
  • Dharwad
  • Dharwad People's Voice ಧಾರವಾಡ ಜನಧ್ವನಿ

Dharwad People's Voice ಧಾರವಾಡ ಜನಧ್ವನಿ Contact information, map and directions, contact form, opening hours, services, ratings, photos, videos and announcements from Dharwad People's Voice ಧಾರವಾಡ ಜನಧ್ವನಿ, Media, Dharwad.
(2)

23/09/2024
20/09/2024


 ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎ. ಐ. ಎಂ. ಎಸ್. ಎಸ್)                                   ವಿಷಯ :  ಭಾರತದ ನವೋದಯದ ಮಹಾನ್ ಚೇತ...
29/08/2024


ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎ. ಐ. ಎಂ. ಎಸ್. ಎಸ್)

ವಿಷಯ : ಭಾರತದ ನವೋದಯದ ಮಹಾನ್ ಚೇತನ ಈಶ್ವರಚಂದ್ರ ವಿದ್ಯಾಸಾಗರವರ 133 ನೇ ಸ್ಮರಣ ಮಾಸಾಚರಣೆಯ ಸಂಧರ್ಭದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಇಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ AIMSS ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

AIMSS ನ ಜಿಲ್ಲಾ ಕಾರ್ಯದರ್ಶಿ ಗಂಗೂಬಾಯಿ ಕೊಕರೆ ಮಾತನಾಡಿ "ಈ ಯುಗದ ಪ್ರತಿಯೊಬ್ಬ ಅಕ್ಷರಸ್ಥ ಸ್ತ್ರೀ ಅತ್ಯಂತ ಕೃತಜ್ಞತೆಯಿಂದ ಸ್ಮರಿಸಬೇಕಾದ ಮಹಾನ್ ವ್ಯಕ್ತಿ ಈಶ್ವರ್ ಚಂದ್ರ ವಿದ್ಯಾಸಾಗರ್. ಮಹಿಳೆಯರಿಗೆ ಶಿಕ್ಷಣದ ಹಕ್ಕಿದೆ ಎಂದು ಸಾರಿ ಸಾಧಿಸಿದವರು ವಿದ್ಯಾಸಾಗರ್. ಬಾಲ್ಯ ವಿವಾಹ, ಬಹುಪತ್ನಿತ್ವ ಹಾಗೂ ಆಜೀವ ವೈಧವ್ಯದಂತಹ ಮೌಢ್ಯಗಳ ವಿರುದ್ಧ ಹೋರಾಟವನ್ನು ಕಟ್ಟಿದರು. ಅನ್ಯಾಯ ಶೋಷಣೆಯ ವಿರುದ್ಧ ಸಾಮಾಜಿಕ ಸಾಂಸ್ಕೃತಿಕ ರಾಜಕೀಯ ಹೋರಾಟಗಳ ಅಲೆಯನ್ನೇ ಎಬ್ಬಿಸಿದರು. ಧರ್ಮನಿರಪೇಕ್ಷ, ವೈಜ್ಞಾನಿಕ ಮನೋಭಾವನೆಗಳ ಆಧಾರದ ಮೇಲೆ ಮಾನವತಾವಾದಿ ಚಳುವಳಿಯನ್ನು ಹುಟ್ಟುಹಾಕಿದರು ಹಾಗೂ ಆಧುನಿಕ ಶಿಕ್ಷಣಕ್ಕೆ ಬುನಾದಿಯನ್ನು ಹಾಕಿದ್ದಾರೆ ಎಂದರು.
ಆದರೆ ಇಂದಿಗೂ ಸಮಾಜದಲ್ಲಿ ಮಹಿಳೆಯರ ಮೇಲೆ ವಿವಿಧ ಸ್ವರೂಪಗಳಲ್ಲಿ ದೌರ್ಜನ್ಯ ಮುಂದುವರೆದಿದೆ. ಪುರುಷ ಪ್ರಧಾನ ಧೋರಣೆಯ ಅಟ್ಟಹಾಸ, ವ್ಯಾಪಾಕವಾಗಿ ಹರಡುತ್ತಿರುವ ಅಶ್ಲೀಲ ಸಿನೆಮಾ -ಸಾಹಿತ್ಯ, ಮದ್ಯ -ಮಾದಕದ ಹಾವಳಿ, ಆಸಿಡ್ ದಾಳಿ, ಅತ್ಯಾಚಾರ-ಗುಂಪು ಅತ್ಯಾಚಾರ, ಹೆಣ್ಣುಮಕ್ಕಳ ಕಳ್ಳಸಾಗಾಣಿಕೆ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯವಿವಾಹ ಮೊದಲಾದ ಅನ್ಯಾಯ-ದೌರ್ಜನ್ಯಗಳು ದಿನೇ-ದಿನೇ ಹೆಚ್ಚುತ್ತಿವೆ ಎಂದರು".
ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷರಾದ ದೇವಮ್ಮ ದೇವತ್ಕಲ್ ಅವರು "UNFPA(ಯುನೈಟೆಡ್ ನೇಷನ್ಸ್ ಪಾಪುಲೇಷನ್ ಫಂಡ್) 2020ರ ವರದಿಯ ಪ್ರಕಾರ ಭಾರತದಲ್ಲಿ 45.08% ಮಿಲಿಯನ್ ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ. 2023 NCRB ವರದಿ ಪ್ರಕಾರ ಮಹಿಳೆಯರ ಮೇಲೆ ನಡೆಯುವ ಅಪರಾಧಗಳು ಶೇಕಡ 4 ರಷ್ಟು ಏರಿಕೆಯಾಗಿದೆ. NFHS(ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ)ನ 2023 ರ ವರದಿಯಂತೆ ಕರ್ನಾಟಕ ಬಾಲ್ಯ ವಿವಾಹದಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಬಾಲ ಗರ್ಭಿಣಿಯರ ಸಂಖ್ಯೆ ನಿರಂತರವಾಗಿ ಏರಿಕೆ ಕಾಣುತ್ತಿದೆ.
ವಿದ್ಯಾಸಾಗರರ ಆಶೋತ್ತರಗಳಿಗೆ ವಿರುದ್ಧವಾದ ವಾತಾವರಣ ನಿರ್ಮಾಣವಾಗಿದೆ. ಅವರು ಕಂಡಿದ್ದ ಮಹಿಳಾ ವಿಮುಕ್ತಿಯ ಕನಸ್ಸು ನನಸಾಗದೇ ಉಳಿದಿದೆ. ಹಾಗಾಗಿ ಅವರ 133ನೇ ಸ್ಮರಣ ಮಾಸಾಚರಣೆಯ ಈ ಸಂಧರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಸಾಮಾಜಿಕ ದೌರ್ಜನ್ಯಗಳನ್ನು ವಿರೋಧಿಸಿ ಮಹಿಳೆಯರು ಹಾಗೂ ದೇಶದ ಜನತೆ ಒಕ್ಕೊರೊಲಿನಿಂದ ಇಂತ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಕರೆ ನೀಡಿದರು".
ಈ ಸಂದರ್ಭದಲ್ಲಿ AIMSS ನ ಜಿಲ್ಲಾ ಅಧ್ಯಕ್ಷರಾದ ಮಧುಲತಾ ಗೌಡರ್, ಅರುಣ ದಾದುಗೋಳ್, ಪವಿತ್ರ ಮಾಳಾಪುರ,ನಿಲ್ಲಮ್ಮ ಕಬಾಡಗಿ, ಪಕ್ಕೀರವ್ವ ಸಾರಾವರಿ, ಸಿದ್ದಮ್ಮ ಹುಬ್ಬಳ್ಳಿ, ಅನುಸೂಯ,ಮುಂತಾದವರು ಭಾಗವಹಿಸಿದ್ದರು.

20/08/2024
                               ಕಲ್ಕತ್ತಾದಲ್ಲಿ ನಡೆದ ಕಿರಿಯ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಎಐಎಂಎಸ್ಎಸ್,...
17/08/2024




ಕಲ್ಕತ್ತಾದಲ್ಲಿ ನಡೆದ ಕಿರಿಯ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಎಐಎಂಎಸ್ಎಸ್, ಎಐಡಿವೈಓ, ಎಐಡಿಎಸ್ಓ ಪ್ರತಿಭಟನೆ

ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಕಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನಿರತ ಕಿರಿಯ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಘಟನೆಯನ್ನು ಖಂಡಿಸಿ ಇಂದು ಧಾರವಾಡದಲ್ಲಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್ಎಸ್), ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಹಾಗೂ ಆಲ್ ಇಂಡಿಯಾ ಡೆಮೊಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್ಓ) ಸಂಘಟನೆಗಳು ಪ್ರತಿಭಟನಾ ರ್ಯಾಲಿ ನಡೆಸಿದವು. ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡಾಗಳು ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನಾಕಾರರು ಕಲಾಭವನ ಮೈದಾನದಿಂದ ವಿವೇಕಾನಂದ ವೃತ್ತದ ವರೆಗೆ ರ್ಯಾಲಿ ನಡೆಸಿ ಪ್ರತಿಭಟನಾ ಸಭೆ ನಡೆಸಿದರು.

 ಗುಳೇದಕೊಪ್ಪ ಗ್ರಾಮಕ್ಕೆ ನರೇಗಾ ಕೆಲಸ ನೀಡಬೇಕೆಂದು ಆಗ್ರಹಿಸಿ ಇಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯ (AIKKMS) ವತಿಯಿಂದ ಪ್ರತಿಭಟನೆ ...
13/08/2024


ಗುಳೇದಕೊಪ್ಪ ಗ್ರಾಮಕ್ಕೆ ನರೇಗಾ ಕೆಲಸ ನೀಡಬೇಕೆಂದು ಆಗ್ರಹಿಸಿ ಇಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯ (AIKKMS) ವತಿಯಿಂದ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು

ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿಯಿಂದ ಭಾರತದಲ್ಲಿ ಯುವಜನರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಕೂಡಲೇ ಖಾಲಿ ಇ...
12/08/2024

ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿಯಿಂದ ಭಾರತದಲ್ಲಿ ಯುವಜನರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಕೂಡಲೇ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಪ್ರತಿಭಟನಾ ದಿನಕ್ಕೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನಮಂತ್ರಿಗಳು, ಭಾರತ ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

 ಹಳೇ ತೇಗೂರು ಗ್ರಾಮದಲ್ಲಿ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೇಡ್ ಶಿವದಾಸ್ ಘೋಷ್ ರ 48ನೇ ಸ್ಮರಣ ದಿನವನ್ನು ಧಾರವಾಡ ಗ್ರಾಮೀಣ ಸ್ಥಳೀಯ ಸಮಿತಿ ...
05/08/2024


ಹಳೇ ತೇಗೂರು ಗ್ರಾಮದಲ್ಲಿ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೇಡ್ ಶಿವದಾಸ್ ಘೋಷ್ ರ 48ನೇ ಸ್ಮರಣ ದಿನವನ್ನು ಧಾರವಾಡ ಗ್ರಾಮೀಣ ಸ್ಥಳೀಯ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು

 #48ನೇ_ಸ್ಮರಣ_ದಿನ #ಕಾ_ಶಿವದಾಸ್_ಘೋಷ್  ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೆಡ್ ಶಿವದಾಸ್ ಘೋಷ್ ರವರ 48ನೇ ಸ್ಮರಣ ದಿನವನ್ನು ಪಕ್ಷದ ಕಚೇರಿಯಲ್...
05/08/2024

#48ನೇ_ಸ್ಮರಣ_ದಿನ
#ಕಾ_ಶಿವದಾಸ್_ಘೋಷ್

ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೆಡ್ ಶಿವದಾಸ್ ಘೋಷ್ ರವರ 48ನೇ ಸ್ಮರಣ ದಿನವನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.

  ನಿಂದ  ಧಾರವಾಡದ ಕೆ. ಇ. ಬೋರ್ಡ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಜಗತ್ತಿನ ಮಹಾನ್ ಚೇತನ ಮೇಡಂ ಕ್ಯೂರಿಯವರ ಸ್ಮರಣ ದಿನದ ಅಂಗವಾಗಿ ಕಾರ್ಯಕ...
10/07/2024

ನಿಂದ ಧಾರವಾಡದ ಕೆ. ಇ. ಬೋರ್ಡ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಜಗತ್ತಿನ ಮಹಾನ್ ಚೇತನ ಮೇಡಂ ಕ್ಯೂರಿಯವರ ಸ್ಮರಣ ದಿನದ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

             ಕಟ್ಟಡ ಕಾರ್ಮಿಕರ ರಾಜ್ಯ ಸಮ್ಮೇಳನಇಂದು ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ವತಿ...
09/07/2024


ಕಟ್ಟಡ ಕಾರ್ಮಿಕರ ರಾಜ್ಯ ಸಮ್ಮೇಳನ
ಇಂದು ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕಟ್ಟಡ ಕಾರ್ಮಿಕರ ರಾಜ್ಯ ಸಮ್ಮೇಳನ ಧಾರವಾಡದ ಸರ್ಕಾರಿ ನೌಕರರ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಧ್ವಜಾರೋಹಣ ಹಾಗೂ ಕಾರ್ಮಿಕ ಹೋರಾಟದಲ್ಲಿ ಮಡಿದ ಹುತಾತ್ಮರಿಗೆ ಗೌರವ ನಮನವನ್ನು ಸಲ್ಲಿಸಲಾಯಿತು. ಸಭೆಗೆ ಮುನ್ನ ವಿವಿಧ ಜಿಲ್ಲೆಗಳಿಂದ ಬಂದ ನೂರಾರು ಕಾರ್ಮಿಕರ ಪ್ರತಿನಿಧಿಗಳು ಕಲಾ ಭವನದಿಂದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸರ್ಕಾರಿ ನೌಕರರ ಭವನದತ್ತ ಹೊರಟರು.

*ರಾಜ್ಯ ಸಮ್ಮೇಳನ ಉದ್ಘಾಟನೆಯನ್ನು ಎಐಯುಟಿಯುಸಿ ರಾಜ್ಯ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷರಾದ ಕಾ.ಕೆ.ಸೋಮಶೇಖರ್* ಅವರು ನೆರವೇರಿಸಿದರು. ಅವರು ಮಾತನಾಡುತ್ತಾ " ಕಟ್ಟಡ ಕಾರ್ಮಿಕರ ನಿರಂತರ ಹೋರಾಟಗಳ ಒತ್ತಡದಿಂದ ಕರ್ನಾಟಕ ರಾಜ್ಯ ಸರ್ಕಾರವು "ಕರ್ನಾಟಕ ಕಟ್ಟಡ ಕಾರ್ಮಿಕರ ಕಾಯ್ದೆ"ಯನ್ನು ರೂಪಿಸಿತು. ಅದರ ಅಡಿಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇನ್ನಿತರ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸಹ ಸ್ಥಾಪಿಸಿತು. ಇದರ ಮೂಲಕ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ಆರೋಗ್ಯ ಸೌಲಭ್ಯ, ಮದುವೆಗೆ ಸಹಾಯಧನ, ಮಕ್ಕಳಿಗೆ ಶೈಕ್ಷಣಿಕ ಸಹಾಯ ಧನ ಯೋಜನೆಗಳು ಪ್ರಾರಂಭದಲ್ಲಿ ಕಾರ್ಮಿಕರಿಗೆ ಸಹಾಯವಾಗಿದ್ದರೂ, ನಂತರದ ದಿನಗಳಲ್ಲಿ ಕಾರ್ಮಿಕರಿಗೆ ಪ್ರಯೋಜನಗಳು ತಲುಪುವುದು ಕಷ್ಟವಾಗುತ್ತಾ ಹೋಯಿತು. ಮಂಡಳಿಯು, ಏಕಪಕ್ಷೀಯ ನಿರ್ಧಾರಗಳ ಮೂಲಕ ಅನಾವಶ್ಯಕ, ಅಸಮಂಜಸ ಆರೋಗ್ಯ ತಪಾಸಣೆ , ದುಬಾರಿ ಲ್ಯಾಪಟಾಪ್ ಹಾಗೂ ಕಳಪೆ ಕಿಟ್ ವಿತರಣೆಗಳ ಮೂಲಕ ಮಂಡಳಿಯ ಹಣ ಪೋಲು ಮಾಡುತ್ತಿದೆ. ಈಗಾಗಲೇ ಹಲವಾರು ಹಗರಣಗಳು, ಭ್ರಷ್ಟಾಚಾರಗಳು ಬೆಳಕಿಗೆ ಬಂದಿವೆ. ಹೆಚ್ಚುತ್ತಿರುವ ಬೋಗಸ್ ಕಾರ್ಡ್ಗಳು, ಮಂಡಳಿಯ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಹಿಂದೆ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಸ್ಕಾಲರ್ಷಿಪ್ ಹಣವನ್ನು ೬೦ ರಿಂದ ೮೦ ಶೇಖಡಾ ಕಡಿತ ಮಾಡಿರುವುದರಿಂದ ಉನ್ನತ ಶಿಕ್ಷಣ ಮಾಡುತ್ತಿದ್ದ ಕಟ್ಟಡ ಕಾರ್ಮಿಕರ ಮಕ್ಕಳು ತಮ್ಮ ಶಿಕ್ಷಣವನ್ನು ಕೈಬಿಡುವ ಅನಿವಾರ್ಯತೆಗೆ ಒಳಗಾಗಿದ್ದಾರೆ" ಎಂದರು.
ಮುಂದುವರೆಯುತ್ತಾ "ಇಂದು ಕಾರ್ಮಿಕರ ಈ ದುಸ್ಥಿತಿಗೆ ಬಂಡವಾಳಶಾಹಿ ವ್ಯವಸ್ಥೆಯೇ ಕಾರಣವಾಗಿದೆ. ಲಾಭದ ಮೇಲೆ ನಿಂತಿರುವ ಈ ವ್ಯವಸ್ಥೆ, ಗರಿಷ್ಠ ಲಾಭಕ್ಕಾಗಿ ಕಾರ್ಮಿಕರನ್ನು ಶೋಷಿಸುತ್ತದೆ. ಅತ್ಯಂತ ಕಡಿಮೆ ಕೂಲಿ ಕೊಟ್ಟು ಅತಿ ಹೆಚ್ಚು ದುಡಿಸಿಕೊಳ್ಳಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಕಾರ್ಮಿಕರ ಶ್ರಮಕ್ಕೆ ಬೆಲೆಯೇ ಇಲ್ಲ. ಹಾಗಾಗಿ ಕಾರ್ಮಿಕರು ಜೀವನದಲ್ಲಿ ನಿಜವಾದ ನೆಮ್ಮದಿ ಕಾಣುವುದೇ ಇಲ್ಲ. ಆಳುವ ಸರ್ಕಾರಗಳು ಕೂಡ ಕಾರ್ಮಿಕರನ್ನು ಬೀದಿಗೆ ತಳ್ಳಿ ಕೈಗಾರಿಕಾಪತಿಗಳ ಕೈ ಹಿಡಿಯುತ್ತವೆ. ಇಂತಹ ಸಂದರ್ಭದಲ್ಲಿ ಪ್ರಬಲ ಕಾರ್ಮಿಕರ ಚಳುವಳಿಯನ್ನು ರೂಪಿಸುತ್ತಾ, ಕಾರ್ಮಿಕ ಕ್ರಾಂತಿಗೆ ಸಜ್ಜಾಗಬೇಕಾದ ಅವಶ್ಯಕತೆಯಿದೆ. ಆಗ ಮಾತ್ರ ಕಾರ್ಮಿಕರು ತಮ್ಮ ಜೀವನದಲ್ಲಿ ಮೂಲಭೂತ ಬದಲಾವಣೆ ಕಾಣಲು ಸಾಧ್ಯ " ಎಂದರು.

*ಮುಖ್ಯ ಭಾಷಣಕಾರರಾಗಿ ಆಗಮಿಸಿದ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿಗಳಾದ ಕಾ.ಸೋಮಶೇಖರ್ ಯಾದಗಿರಿ* ಅವರು " ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರ ಜೀವನ ಇಂದು ಅಭದ್ರತೆಯಿಂದ ಕೂಡಿದೆ. ಬೆಲೆ ಏರಿಕೆ, ನಿರುದ್ಯೋಗ, ದುಬಾರಿ ಆರೋಗ್ಯ ಹಾಗೂ ಶಿಕ್ಷಣ ಸೌಲಭ್ಯಗಳು ಮುಂತಾದ ಸಮಸ್ಯೆಗಳು ಕಾರ್ಮಿಕರ ಬದುಕನ್ನು ಯಾತನಮಯವಾಗಿಸಿವೆ. ಇಂತಹ‌ ಸಂದರ್ಭದಲ್ಲಿ ಆಳುವ ಸರ್ಕಾರಗಳಿಂದ ಕಾರ್ಮಿಕರ ಸಂಕಷ್ಟಗಳನ್ನು ಕೊಂಚ ಮಟ್ಟಿಗಾದರೂ ಕಡಿಮೆ ಮಾಡುವ ಯೋಜನೆಗಳಿಲ್ಲ. ಬದಲಿಗೆ ಎಲ್ಲಾ ಸರ್ಕಾರಗಳು ಕಾರ್ಮಿಕರಿಗೆ ಇರುವ ಸೌಲಭ್ಯಗಳನ್ನು ಕಿತ್ತುಕೊಳ್ಳುವಲ್ಲಿ ನಿರತವಾಗಿವೆ. ಮತ್ತೊಂದೆಡೆ ಇದೇ ಸರ್ಕಾರಗಳು ದೊಡ್ಡ ದೊಡ್ಡ ಉದ್ಯಮಪತಿಗಳ ತ್ರಿಜೋರಿ ತುಂಬಿಸುವ ನಿಟ್ಟಿನಲ್ಲಿ ನೀತಿಗಳನ್ನು ಜಾರಿಗೆ ತರುತ್ತಿವೆ. ಹೋಗಾಗಿ ಎಲ್ಲಾ ಸರ್ಕಾರಗಳು ಕಾರ್ಮಿಕ ವಿರೋಧಿ ಹಾಗೂ ಬಂಡವಾಳಶಾಹಿ ಪರ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಕಾರ್ಮಿಕರು ಸಂಘಟಿತರಾಗಿ ಬಲಿಷ್ಠವಾದ ಹೋರಾಟ ಬೆಳೆಸುವ ತುರ್ತು ಅವಶ್ಯಕತೆ ಇದೆ. ಇದೊಂದೇ ಕಾರ್ಮಿಕರಿಗೆ ಇರುವ ಏಕೈಕ ಮಾರ್ಗ.

*ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ರ ಕಾ.ಷಣ್ಮುಗಂ ಪಿ.ಎಸ್* ಮಾತನಾಡುತ್ತಾ " ಕಟ್ಟಡ ಕಾರ್ಮಿಕರ ಈ ಪ್ರಥಮ ರಾಜ್ಯ ಸಮ್ಮೇಳನವು ಮುಂದಿನ ದಿನಗಳಲ್ಲಿ ಪ್ರಬಲವಾದ ಹೋರಾಟಕ್ಕೆ ಸ್ಫೂರ್ತಿ ತುಂಬಲಿ ಹಾಗೂ ಎಲ್ಲಾ ಹಂತಗಳಲ್ಲಿ ನಾಯಕತ್ವವು ಮತ್ತಷ್ಟು ಸದೃಢಗೊಳ್ಳುವುದಕ್ಕೆ ಪ್ರೇರಣೆಯಾಗಲಿ" ಎಂದರು.

ಈ ಕಾರ್ಯಕ್ರಮದ *ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಕಾ.ಎ.ದೇವದಾಸ್* ಅವರು ವಹಿಸಿದ್ದರು.

ಪ್ರಾಸ್ತಾವಿಕವಾಗಿ ಸಂಘದ ರಾಜ್ಯ ಸಮಿತಿ ಸದಸ್ಯರಾದ ಕಾ.ಗಂಗಾಧರ ಬಡಿಗೇರ ಅವರು ಮಾತನಾಡಿದರು

ಸಮ್ಮೇಳನದ ಕೊನೆಯಲ್ಲಿ ನೂತನ ರಾಜ್ಯ ಸಮಿತಿಯನ್ನು ಚುನಾಯಿಸಲಾಯಿತು.

ವೇದಿಕೆಯಲ್ಲಿ ವಿವಿಧ ಜಿಲ್ಲೆಗಳ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

04/07/2024


ಸ್ನೇಹಿತರೆ, NTAಯನ್ನು ರದ್ದುಪಡಿಸಲು ಮತ್ತು NEET -UG ಹಾಗೂ NET ಪರೀಕ್ಷೆ ಹಗರಣಗಳ ವಿರುದ್ಧ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಲು ಆಗ್ರಹಿಸಿ ಎಐಡಿಎಸ್ಓ ಅಖಿಲ ಭಾರತ ಸಮಿತಿಯು ಕರೆ ಕೊಟ್ಟಿರುವ ಪ್ರತಿಭಟನಾ ದಿನದ ಅಂಗವಾಗಿ ಇಂದು AIDSO ನೇತೃತ್ವದಲ್ಲಿ ಧಾರವಾಡದ ವಿವೇಕಾನಂದ ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.!! ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ರವಿಕಿರಣ್ ಜೆಪಿ ಅವರು ಮಾತನಾಡಿದರು.!!

 ಇಂದು ಆಲ್ ಇಂಡಿಯಾ ಕರೆಯ ಮೇರೆಗೆ AIDSO  ವತಿಯಿಂದ ಧಾರವಾಡದ ವಿವೇಕಾನಂದ ವೃತ್ತದಲ್ಲಿ NEET-UC & NET ಹಗರಣವನ್ನು ಖಂಡಿಸಿ ವಿದ್ಯಾರ್ಥಿಗಳ ಪ್ರ...
04/07/2024


ಇಂದು ಆಲ್ ಇಂಡಿಯಾ ಕರೆಯ ಮೇರೆಗೆ AIDSO ವತಿಯಿಂದ ಧಾರವಾಡದ ವಿವೇಕಾನಂದ ವೃತ್ತದಲ್ಲಿ NEET-UC & NET ಹಗರಣವನ್ನು ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

  ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್‌ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ತಕ್ಷಣವೇ ದರ ಏರಿಕೆಯನ್ನು...
02/07/2024


ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್‌ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ತಕ್ಷಣವೇ ದರ ಏರಿಕೆಯನ್ನು ಹಿಂಪಡೆಯಲು ಆಗ್ರಹಿಸಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಅಖಿಲ ಭಾರತ ಸಮಿತಿಯ ಕರೆಯ ಮೇರೆಗೆ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಖಾಸಗಿ ಕಂಪನಿಗಳ ಮೊಬೈಲ್ ರೀಚಾರ್ಜ್ ದರ ಏರಿಕೆಯ ಪಟ್ಟಿಯನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯ ಸಚಿವರಿಗೆ ಹಾಗೂ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

 *ಇಂದು ಅಮ್ಮಿನಭಾವಿಯಲ್ಲಿ ರಾಜ್ಯಮಟ್ಟದ ಕಟ್ಟಡ ಕಾರ್ಮಿಕರ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಮಾಡಲಾಯಿತು.*
01/07/2024


*ಇಂದು ಅಮ್ಮಿನಭಾವಿಯಲ್ಲಿ ರಾಜ್ಯಮಟ್ಟದ ಕಟ್ಟಡ ಕಾರ್ಮಿಕರ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಮಾಡಲಾಯಿತು.*

  ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷದ ಸ್ಥಳೀಯ ಸಮಿತಿಯಿಂದ ನಿನ್ನೆ ನಡೆದ ಹೋರಾಟದ ಫಲವಾಗಿ ಇಂದು ಸರಸ್ವತಪುರಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು...
29/06/2024


ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷದ ಸ್ಥಳೀಯ ಸಮಿತಿಯಿಂದ ನಿನ್ನೆ ನಡೆದ ಹೋರಾಟದ ಫಲವಾಗಿ ಇಂದು ಸರಸ್ವತಪುರಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಚರಂಡಿ ಸ್ವಚ್ಛತೆ ಕಾರ್ಯ ಮಾಡಿಸಿದರು, ಕಸದ ಗಾಡಿ ಕೂಡ ಬಂದಿತ್ತು. ಕೆಲವೇ ದಿನಗಳಲ್ಲಿ ಹೊಸ ಯುಜಿಡಿ ಅಳವಡಿಕೆ ಕಾರ್ಯ ಶುರು ಮಾಡುತ್ತೇವೆಂದು ಹೇಳಿದರು.

 ಸರಸ್ವತಪುರದಲ್ಲಿ ಕಸ ವಿಲೇವಾರಿ, ಗಟಾರ ಸ್ವಚ್ಛತೆ, ಹೊಸ ಒಳಚರಂಡಿ ಅಳವಡಿಕೆಗೆ ಆಗ್ರಹಿಸಿ ಇಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ - ಕಮ್...
28/06/2024


ಸರಸ್ವತಪುರದಲ್ಲಿ ಕಸ ವಿಲೇವಾರಿ, ಗಟಾರ ಸ್ವಚ್ಛತೆ, ಹೊಸ ಒಳಚರಂಡಿ ಅಳವಡಿಕೆಗೆ ಆಗ್ರಹಿಸಿ ಇಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ - ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ಸಮಿತಿಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ಮಾಡಲಾಯಿತು.

 #ರಕ್ತದಾನ_ಶಿಬಿರ   #59ನೇ ಸಂಸ್ಥಾಪನಾ_ದಿನಇಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್- ಎಐಡಿವೈಓ ಯುವಜನ ಸಂಘಟನೆಯ 59ನೇ ಸಂಸ್ಥಾಪನಾ ...
26/06/2024

#ರಕ್ತದಾನ_ಶಿಬಿರ

#59ನೇ ಸಂಸ್ಥಾಪನಾ_ದಿನ
ಇಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್- ಎಐಡಿವೈಓ ಯುವಜನ ಸಂಘಟನೆಯ 59ನೇ ಸಂಸ್ಥಾಪನಾ ದಿನದ ಅಂಗವಾಗಿ ಕಲಕೇರಿ ಗ್ರಾಮ ಪಂಚಾಯತ್ ಆವರಣದಲ್ಲಿ ಎಐಡಿವೈಓ ಧಾರವಾಡ ಜಿಲ್ಲಾ ಸಮಿತಿ, ಭಗತ್ ಸಿಂಗ್ ಯುವಜನ ಸಮಿತಿ ಕಲಕೇರಿ, ರೋಟರಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಭಾರತ ದೇಶದ ಕ್ರಾಂತಿಕಾರಿ ಯುವ ಜನ ಸಂಘಟನೆಯಾದ ಎಐಡಿವೈಓ ದೇಶವ್ಯಾಪಿ ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಸಾಂಸ್ಕೃತಿಕದ ಅಧಃಪತನಗಳಂತಹ ಸಾಮಾಜಿಕ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಯುವಜನ ಚಳುವಳಿಗಳನ್ನು ಬೆಳೆಸುತ್ತಾ ಬರುತ್ತಿದೆ.

ಇನ್ನೊಂದೆಡೆ ಯುವಜನರಲ್ಲಿ ಉನ್ನತ ಸಂಸ್ಕೃತಿ, ಉನ್ನತ ಮೌಲ್ಯಗಳನ್ನು ಬೆಳೆಸುವ ದಿಕ್ಕಿನಲ್ಲಿ ಸ್ವತಂತ್ರ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳು, ನವೋದಯ ಕಾಲದ ಹರಿಕಾರರ ಹಾಗೂ ಮಹಾನ್ ವಿಜ್ಞಾನಿಗಳು ಸೇರಿದಂತೆ ಮಹಾನ್ ವ್ಯಕ್ತಿಗಳ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ಹಳ್ಳಿ ಮತ್ತು ಕೊಳಗೇರಿ ಪ್ರದೇಶಗಳಲ್ಲಿ ವೈದ್ಯಕೀಯ ಶಿಬಿರಗಳು, ರಕ್ತದಾನ ಶಿಬಿರಗಳನ್ನು ಮಾಡುತ್ತಿದೆ. ಜೊತೆಗೆ ಪ್ರಕೃತಿ ವಿಕೋಪಗಳಾದಾಗ ಪರಿಹಾರ ಕಾರ್ಯಗಳನ್ನು ಮಾಡುತ್ತಾ ಯುವಜನರಲ್ಲಿ ಸೇವಾ ಮನೋಭಾವವನ್ನು ಬೆಳೆಸುತ್ತಿದೆ.

ಇಂದು ನಡೆದ ರಕ್ತದಾನ ಶಿಬಿರದಲ್ಲಿ ಎಐಡಿವೈಓ ಜಿಲ್ಲಾಧ್ಯಕ್ಷರಾದ ಭವಾನಿಶಂಕರ ಗೌಡ, ಜಿಲ್ಲಾ ಕಾರ್ಯದರ್ಶಿ ರಣಜಿತ್ ಧೂಪದ, ಸಂಘಟಣಾಕಾರರಾದ ಪ್ರೀತಿ, ಪ್ರತಾಪ್, ಸಿಮೋನ್, ಕಲಕೇರಿಯ ಭಗತ್ ಸಿಂಗ್ ಯುವಜನ ಸಮಿತಿ ಸಂಚಾಲಕ ದರ್ಶನ್ ಬೆಟಗೇರಿ, ಸದಸ್ಯರಾದ ಯುವರಾಜ್ ರಾಠೋಡ್, ಅಭಿಷೇಕ್, ವಿಕಾಸ್ , ನಾಗರಾಜ್ ಬೆಟಗೇರಿ, ರೋಟರಿ ಬ್ಲಡ್ ಬ್ಯಾಂಕ್‌ನ ‌ಪದಾಧಿಕಾರಿಗಳಾದ ಶ್ರೀಕಾಂತ್ ಆಪ್ಟೆ, ವೀರೇಶ್ ಕುನ್ನೂರ, ಅರುಣ್ ನಾಯಕ್, ನಿಂಗನಗೌಡ, ಮಂಜುನಾಥ್ ಹಾಗೂ ಕಲಕೇರಿ ಗ್ರಾಮದ ಯುವಜನರು ಭಾಗವಹಿಸಿದ್ದರು. ಕಲಕೇರಿ ಗ್ರಾಮ ಪಂಚಾಯತಿಯಿಂದ ಸಹಕಾರ ನೀಡಿದರು.

  ಇಂದು AIDSO ಮತ್ತು AIKKMS ನೇತೃತ್ವದಲ್ಲಿ ಹಳೇ ತೇಗೂರು ಗ್ರಾಮಕ್ಕೆ ನೇರ ಬಸ್ ಸೌಲಭ್ಯ ಒದಗಿಸಲು ಆಗ್ರಹಿಸಿ ಇಂದು ಧಾರವಾಡದಲ್ಲಿ ಹಳೆ ಬಸ್ ನಿಲ...
26/06/2024



ಇಂದು AIDSO ಮತ್ತು AIKKMS ನೇತೃತ್ವದಲ್ಲಿ ಹಳೇ ತೇಗೂರು ಗ್ರಾಮಕ್ಕೆ ನೇರ ಬಸ್ ಸೌಲಭ್ಯ ಒದಗಿಸಲು ಆಗ್ರಹಿಸಿ ಇಂದು ಧಾರವಾಡದಲ್ಲಿ ಹಳೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಲಾಯಿತು.

ಹೋರಾಟಕ್ಕೆ ಮಣಿದು ಸ್ಥಳಕ್ಕೆ ಬಂದ DTO ಅಧಿಕಾರಿಗಳು ಇಂದಿನಿಂದಲೇ ನೇರ ಬಸ್ ಬಿಡುವುದಾಗಿ ಹೇಳಿದರು.

 ಎ ಐ ಡಿ ಎಸ್ ಓ  ಸದಸ್ಯತ್ವ ಅಭಿಯಾನ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ AIDSO ಸದಸ್ಯತ್ವವನ್ನು ಕೊಡಲಾಯಿತು.
25/06/2024


ಎ ಐ ಡಿ ಎಸ್ ಓ ಸದಸ್ಯತ್ವ ಅಭಿಯಾನ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ AIDSO ಸದಸ್ಯತ್ವವನ್ನು ಕೊಡಲಾಯಿತು.

  ಕಟ್ಟಡ ಕಾರ್ಮಿಕರ ಹಕ್ಕುಗಳನ್ನು ಖಾತ್ರಿಪಡಿಸಲು ಅಗ್ರಹಿಸಿ.... #ರಾಜ್ಯಮಟ್ಟದ_ ಕಟ್ಟಡ_ಕಾರ್ಮಿಕರ_ಸಮ್ಮೇಳನ    ಯಶಸ್ವಿಗೊಳಿಸಿಸ್ಥಳ: ಸರ್ಕಾರಿ ...
25/06/2024


ಕಟ್ಟಡ ಕಾರ್ಮಿಕರ ಹಕ್ಕುಗಳನ್ನು ಖಾತ್ರಿಪಡಿಸಲು ಅಗ್ರಹಿಸಿ....
#ರಾಜ್ಯಮಟ್ಟದ_ ಕಟ್ಟಡ_ಕಾರ್ಮಿಕರ_ಸಮ್ಮೇಳನ ಯಶಸ್ವಿಗೊಳಿಸಿ
ಸ್ಥಳ: ಸರ್ಕಾರಿ ನೌಕರರ ಭವನ ಎಲ್ಐಸಿ ಹತ್ತಿರ ಧಾರವಾಡ
ಮೆರವಣಿಗೆ ಪ್ರಾರಂಭ ಕಲಾಭವನ ಮೈದಾನ ಬೆಳಗ್ಗೆ 10 ಗಂಟೆಗೆ
9 ಜುಲೈ 2024 ಧಾರವಾಡ
ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ (ರಿ)

26/06/2024ರಂದು ಎಐಡಿವೈಒ 59ನೇ ಸ್ಥಾಪನ ದಿನದ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ರಕ್ತದಾನ ಶಿಬಿರ.
25/06/2024

26/06/2024ರಂದು ಎಐಡಿವೈಒ 59ನೇ ಸ್ಥಾಪನ ದಿನದ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ರಕ್ತದಾನ ಶಿಬಿರ.






 # ಯಶಸ್ವಿಗೊಳಿಸಿ
25/06/2024

# ಯಶಸ್ವಿಗೊಳಿಸಿ

  *ರಾಜ್ಯ ಸರ್ಕಾರವು ಮಾಡಿದ ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆ ಹೆಚ್ಚಳಕ್ಕೆ ಖಂಡನೆ* ಎಸ್‌ಯುಸಿಐ(ಸಿ)  ಪಕ್ಷದ ವತಿಯಿಂದ ಧಾರವಾಡದ ವಿವೇಕಾನಂದ ವೃ...
18/06/2024


*ರಾಜ್ಯ ಸರ್ಕಾರವು ಮಾಡಿದ ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆ ಹೆಚ್ಚಳಕ್ಕೆ ಖಂಡನೆ*

ಎಸ್‌ಯುಸಿಐ(ಸಿ) ಪಕ್ಷದ ವತಿಯಿಂದ ಧಾರವಾಡದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.

*ಜೂನ್ 18ರಂದು ರಾಜ್ಯವ್ಯಾಪಿ ಹೋರಾಟಕ್ಕೆ ಕರೆ*

ಚುನಾವಣೆಗಳು ಮುಗಿಯುತ್ತಿದ್ದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಮಾಡಿ ಲೀಟರಿಗೆ ತಲಾ ರೂ. 3 ಏರಿಕೆಗೆ ಕಾರಣವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಇದರಿಂದ ರಾಜ್ಯ ಖಜಾನೆಗೆ ಈ ಆರ್ಥಿಕ ವರ್ಷದಲ್ಲಿ ಸುಮಾರು ರೂ.3000 ಕೋಟಿ ಹೆಚ್ಚುವರಿ ತೆರಿಗೆ ವಸೂಲಿಯಾಗಲಿದೆ. ಇದರಿಂದ ಸಾರಿಗೆ, ಸರಕು ಸಾಗಾಣಿಕೆ ವೆಚ್ಚ ಏರಿಕೆಯಾಗಿ ಬೆಲೆ ಏರಿಕೆಯ ಮೇಲೆ ಸರಣಿ ಪರಿಣಾಮ ಉಂಟಾಗಲಿದೆ. ತರಕಾರಿ, ದವಸಧಾನ್ಯಗಳ ಬೆಲೆಏರಿಕೆಯಿಂದ ಕಂಗಾಲಾದ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.

ಈಗಾಗಲೇ ಪ್ರತಿ ಲೀಟರ್ ಬೆಲೆಯಲ್ಲಿ ಅರ್ಧದಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿರುವ ತೆರಿಗೆಯೇ ಇದೆ. ಲೋಕಸಭಾ ಚುನಾವಣೆಗೆ ಸ್ವಲ್ಪ ಮುಂಚೆ ಕೇಂದ್ರ ಬಿಜೆಪಿ ಸರ್ಕಾರವು ಮತದಾರರನ್ನು ಓಲೈಸಲು 2ರೂ. ಕಡಿತ ಮಾಡಿತ್ತು. ರಷ್ಯಾ - ಉಕ್ರೇನ್ ಯುದ್ಧದ ಲಾಭ ಪಡೆದು ಭಾರತ ಸರ್ಕಾರವು ಜಾಗತಿಕ ದರಕ್ಕಿಂತ ಸುಮಾರು ಶೇ. 35ರಷ್ಟು ಕಡಿಮೆಗೆ ಕಚ್ಚಾ ತೈಲವನ್ನು ಖರೀದಿ ಮಾಡಿದರೂ, ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ. ಲಕ್ಷಾಂತರ ಕೋಟಿ ರೂಪಾಯಿಗಳನ್ನು ಭಾರತದ ತೈಲ ಕಂಪನಿಗಳು ಕೊಳ್ಳೆ ಹೊಡೆದಿವೆ. ಈ ಸಾರ್ವಜನಿಕ ತೆರಿಗೆಯನ್ನು ಮೋದಿ ಸರ್ಕಾರವು ಕಾರ್ಪೊರೇಟ್ ಬಂಡವಾಳಶಾಹಿಗಳ ಅನುಕೂಲಕ್ಕೆ ಬಳಸಿಕೊಂಡಿದೆ.
ಇನ್ನೊಂದೆಡೆ ಒಂದು ದೇಶ- ಒಂದು ತೆರಿಗೆ ಘೋಷಣೆಯೊಂದಿಗೆ ಬಂದ ಜಿಎಸ್‌ಟಿಯನ್ನು ಅತ್ಯಂತ ಮಹತ್ವದ ಪೆಟ್ರೋಲಿಯಂ ಉತ್ಪನ್ನಗಳಿಗೆ ಅನ್ವಯ ಮಾಡಿಲ್ಲ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮಗಿಷ್ಟ ಬಂದಂತೆ ತೆರಿಗೆಗಳನ್ನು ಹೇರುತ್ತಿವೆ.

ಅದೇ ದಾರಿಯಲ್ಲಿ ಈಗ ರಾಜ್ಯ ಕಾಂಗ್ರೆಸ್ ಸರ್ಕಾರವು ಕೂಡ ಈ ಜನವಿರೋಧಿ ತೀರ್ಮಾನವನ್ನು ಕೈಗೊಂಡಿದೆ. ಬೆಲೆ ಏರಿಕೆಯ ಕುರಿತು ಮಾತನಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಈ ಕ್ರಮವು ತಮಗೆ ಮಾಡಿದ ವಂಚನೆಯೆಂದು ಜನತೆ ಭಾವಿಸುತ್ತಾರೆ. ಆದ್ದರಿಂದ ಜನರ ಮೇಲಿನ ಈ ಬೆಲೆ ಏರಿಕೆಯ ಹೊಡೆತವನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ನಾವು ಒತ್ತಾಯಿಸುತ್ತೇವೆ.

ಇಂದು   ಧಾರವಾಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ   -UG ಪರೀಕ್ಷೆಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ನಿಷ್ಪಕ್ಷಪಾತವಾದ ನ್ಯಾಯಾಂಗ ತನಿಕೆ ಮತ್ತು...
12/06/2024

ಇಂದು ಧಾರವಾಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ -UG ಪರೀಕ್ಷೆಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ನಿಷ್ಪಕ್ಷಪಾತವಾದ ನ್ಯಾಯಾಂಗ ತನಿಕೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಒದಗಿಸಬೇಕೆಂದು ನಗರದ ಕಲಾಭವನ ಮೈದಾನದಿಂದ ವಿವೇಕಾನಂದ ವೃತ್ತದ ವರೆಗೆ ಪ್ರತಿಭಟನೆ ಮೆರವಣಿಗೆಯನ್ನು ಮಾಡಲಾಯಿತು.

Address

Dharwad

Website

Alerts

Be the first to know and let us send you an email when Dharwad People's Voice ಧಾರವಾಡ ಜನಧ್ವನಿ posts news and promotions. Your email address will not be used for any other purpose, and you can unsubscribe at any time.

Videos

Share

Category


Other Media in Dharwad

Show All