Garuda TV Karnataka

Garuda  TV Karnataka All about Entertainment & News and Art News media
(2)

"ಹಂದಿಗಳ ಡೆಲಿವರಿ ವಾರ್ಡ ಬಸ್‌ಗೆ ಮುಕ್ತಿ". 2018ರಿಂದ .ಗರುಡ ಟಿವಿ FOLLOWUP ಫಲಶೃತಿ!KGN TRAVELS ಬಸ್‌ KA01 9969!ಅಬಕಾರಿ ಇಲಾಖೆಯಿಂದ 19...
05/04/2024

"ಹಂದಿಗಳ ಡೆಲಿವರಿ ವಾರ್ಡ ಬಸ್‌ಗೆ ಮುಕ್ತಿ". 2018ರಿಂದ .ಗರುಡ ಟಿವಿ FOLLOWUP ಫಲಶೃತಿ!
KGN TRAVELS ಬಸ್‌ KA01 9969!ಅಬಕಾರಿ ಇಲಾಖೆಯಿಂದ 1996ರಲ್ಲಿ ಸೀಜ್‌ ಆದ ಬಸ್‌!
24ವರ್ಷ ವಿದ್ಯಾಗಿರಿ ಪೋಲಿಸ್ ಈ ಬಸ್‌ ಕಾದಿದ್ದಾರೆ ಪಾಪ!ಹಂದಿಗಳ ಡೆಲಿವರಿ ವಾರ್ಡ ಆಗಿ ದುರ್ನಾತ ಸಹಿಸಿದ ಪೊಲೀಸರು,ನಾಗರಿಕರು!
HATSOFF!ಗರುಡ 2018, 2020 ,2022 ಮೂರು ಬಾರಿ followup... ಕೇಸ್‌ ಅಪೀಲ್‌ ತೀರ್ಪಿಗಾಗಿ ಕಾದಿತ್ತು!ಇಂದು ಪ್ರದಿಕೃತ ಅಧಿಕಾರಿಗಳು Dy. ಕಮೀಷನರ್‌ ಎಕ್ಸೈಜ್‌ ಧಾರವಾಡ ಗರುಡನ ಜೊತೆ ಮಾತಾಡಿ ಭೇಷ್‌ ಎಂದರು!ಎಲೆಕ್ಷನ್‌ ನಂತರ ಈ ಬಸ್‌ ಹರಾಜು!ಈ ಎಪಿಸೋಡ್‌ ವಿದ್ಯಾಗಿರಿ ಪೋಲಿಸ್ ಠಾಣೆಯ ಎಲ್ಲ ಸಿಬ್ಬಂದಿಗೆ ಸಮರ್ಪಣೆ!. ಕೃಷ್ಣಮೂರ್ತಿ ಎಲ್‌ ಕುಲಕರ್ಣಿ 8088625320

"ಬೀದಿ ಹೊಡೆದಾಟ..ಪಬ್ಲಿಕ್‌ ನ್ಯೂಸೆನ್ಸ & COMPROMISE"!ನಮ್‌ದು ಧಾರವಾಡ ಹೆಚ್ಚಗಿ ಮಾತು ಬ್ಯಾಡ!ನಿನ್ನೆ Food Island ಪಕ್ಕದಲಿ ಪಾರ್ಕಿಂಗ್‌ ಏ...
03/04/2024

"ಬೀದಿ ಹೊಡೆದಾಟ..ಪಬ್ಲಿಕ್‌ ನ್ಯೂಸೆನ್ಸ & COMPROMISE"!ನಮ್‌ದು ಧಾರವಾಡ ಹೆಚ್ಚಗಿ ಮಾತು ಬ್ಯಾಡ!
ನಿನ್ನೆ Food Island ಪಕ್ಕದಲಿ ಪಾರ್ಕಿಂಗ್‌ ಏರಿಯಾದಲ್ಲಿ ಬೈಕ್‌ ಟಚ್‌- ಪಂಚ್‌ ಏಟು!
ಹಿರಿಯರು? ಮಾಡಿಸಿದರು COMPROMISE!?ಆಹಾ!
3+10 =13 ಪಡ್ಡೆ ಹೈಕಳು!1)Afroz,2)Gutter raju son3)Noor halabhavi...!ರಯೀಸ್‌ ಮುಲ್ಲಾ ಆಸ್ಪತ್ರೆಯಲ್ಲಿ admit...ಆದರೂ NO COMPLAINT!
ಪೊಲೀಸ್‌ಗೆ ಕೆಲಸ ಕೊಡೋ ಕಿರಿಕ್‌ ಪಾರ್ಟಿಗಳು!
ಎಲೆಕ್ಷನ್‌ಗೆ ಓಡ್ಯಾಡೋಕೆ ಜನ ಬೇಕಪಾ compromise ಮಾಡದಿದ್ರೆ ಹ್ಯಾಂಗಪಾ?
Public ನಲ್ಲಿ ಹೊಡೆದಾಡಿ! ನಮ್ಮಲ್ಲಿ ಬನ್ನಿ compromise ಮಾಡಿಸ್ತೀವಿ!good message to public.. It happens only in......!?.. ಕೃಷ್ಣಮೂರ್ತಿ ಎಲ್‌ ಕುಲಕರ್ಣಿ 8088625320

ಗರುಡ ಟಿವಿ ಕರ್ನಾಟಕ ನ್ಯೂಸ್‌ ಬೆಂಗಳೂರು (3/4/2024 )ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಗಳ ಎದುರಿಗೇ ಬ್ಲೇಡ್‌ನಿಂದ ಕತ್ತು ಕುಯ್ದುಕೊಂಡ ವ್ಯಕ್ತಿ!ಇ...
03/04/2024

ಗರುಡ ಟಿವಿ ಕರ್ನಾಟಕ ನ್ಯೂಸ್‌ ಬೆಂಗಳೂರು (3/4/2024 )ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಗಳ ಎದುರಿಗೇ ಬ್ಲೇಡ್‌ನಿಂದ ಕತ್ತು ಕುಯ್ದುಕೊಂಡ ವ್ಯಕ್ತಿ!
ಇಂದು ಮಧ್ಯಾಹ್ನ ಹೈಕೋರ್ಟ್ನನಲ್ಲಿ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಚ್‌. ಪಿ. ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಎದಿರು ಕೇಸ್‌ ನಡೀತಿತ್ತು ಸುಮಾರು 1. 15ರ ಸಮಯ ಸಿರೀಯಲ್‌ ನಂಬರ್‌ 26ರ ಪ್ರಕರಣವನ್ನು ಕೋರ್ಟ್‌ ಆಫೀಸರ್‌ ಕೂಗುತ್ತಿದ್ದರು,ಕೇಸ್‌ಗೆ ಸಂಬಂಧ ಪಟ್ಟ ಆ ವ್ಯಕ್ತಿ, ಕೈಯಲ್ಲಿ ಫೈಲ್‌ ಹಿಡಿದು ನಿಂತ,ನಂತರ ಇದ್ದಕ್ಕಿದ್ದಂತೆ ಜೇಬಿನಿಂದ ಬ್ಲೇಡ್‌ ತೆಗೆದು ಕತ್ತು ಕುಯ್ದುಕೊಂಡ!
ಒಂದು ಕ್ಷಣ ಕೋರ್ಟನಲ್ಲಿ ಗಲಿಬಿಲಿ,ಅದರಲ್ಲೂ ಇಂದು ಎಚ್‌. ಪಿ. ಪ್ರಭಾಕರ ಶಾಸ್ತ್ರಿಯವರ ನೀವೃತ್ತಿ ದಿನ!ಅವರು ಪೊಲಿಸರನ್ನು ಕರೆಸಿ ಈ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಸಾಗಿಸಲು ಹೇಳಿದರು,ಇದು ಸೆಕ್ಯುರಿಟಿ ನಿರ್ಲಕ್ಷ್ಯ ಇದರಲ್ಲಿ ಯಾವುದೇ ಸಂಶಯ ಇಲ್ಲ!ತನಿಖೆ ನಡೆದಿದೆ!ಕಾಲಾಯ ತಸ್ಮಯೇ ನಮಃ .. ಕೃಷ್ಣಮೂರ್ತಿ ಎಲ್‌ ಕುಲಕರ್ಣಿ ಗರುಡ ಟಿವಿ ಕರ್ನಾಟಕ ನ್ಯೂಸ್‌ ಬೆಂಗಳೂರು 8088625320

ಗರುಡ ಟಿವಿ ಕರ್ನಾಟಕ ನ್ಯೂಸ್‌ ಧಾರವಾಡ (2/4/2024 )ಪ್ರಹ್ಲಾದ ಜೋಶಿಯವರ ವಿರುದ್ಧ ಹೋರಾಟ ಆರಂಭ! ನ್ಯಾಯ ಸಿಗೋತನಕ ನಾ ಕೊರಳಲ್ಲಿ ಮಾಲೆ‌ ಹಾಕಲ್ಲ!...
02/04/2024

ಗರುಡ ಟಿವಿ ಕರ್ನಾಟಕ ನ್ಯೂಸ್‌ ಧಾರವಾಡ (2/4/2024 )ಪ್ರಹ್ಲಾದ ಜೋಶಿಯವರ ವಿರುದ್ಧ ಹೋರಾಟ ಆರಂಭ! ನ್ಯಾಯ ಸಿಗೋತನಕ ನಾ ಕೊರಳಲ್ಲಿ ಮಾಲೆ‌ ಹಾಕಲ್ಲ!ಗುರಿ ಮುಟ್ಟೋವರೆಗೂ ರಾಜ್ಯದ ಜನತೆ ನನಗೆ ಮಾಲೆ ಹಾಕಬೇಡಿ-ಭಕ್ತರಿಗೆ ದಿಂಗಾಲೇಶ್ವರ ಸ್ವಾಮೀಜಿ ಮನವಿ!
ನಾವು ಮಠದಲ್ಲಿದ್ರು ಅಷ್ಟೇ,ಬಯಲಿನಲ್ಲಿದ್ದರೂ ಅಷ್ಟೇ! ಎಂದು ತಿಳಿದು ಈ ಹೋರಾಟ ಮಾಡ್ತಿದೀನಿ, ಮಠಾಧಿಪತಿಗಳು ಸ್ವಾಭಿಮಾನ ಬಿಟ್ಟು ಬದುಕುಬಾರದು,ನೊಂದವರ ಬೆನ್ನಿಗೆ ಸ್ವಾಮೀಜಿಗಳು ನಿಲ್ಲಬೇಕು ಎಂದು ಫಕೀರ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು!
ಇಂದು ಧಾರವಾಡದ ಸಾಧನಕೇರಿಯ ರಸ್ತೆಯ ಸೇವಾಲಯದಲ್ಲಿ ಭಕ್ತರ,ಹಿತ ಚಿಂತಕರ ಸಭೆಯಲ್ಲಿ ಮಾತಾಡಿದ ದಿಂಗಾಲೇಶ್ವರ ಸ್ವಾಮಿಗಳು,ನಾನು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ವಿರುದ್ಧ ಹೋರಾಟವನ್ನ ಈಗ ಆರಂಭ ಮಾಡಿದ್ದೇನೆ ನ್ಯಾಯ ಸಿಗುವವರೆಗೂ ನಾ ಕೊರಳಲ್ಲಿ ಮಾಲೆ‌ ಹಾಕಲ್ಲ!
ನನ್ನ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಾನಿರುವ ವೇದಿಕೆಯಲ್ಲಿ ಮಾಲೆ ಹಾಕಲು ಬೀಡುವದಿಲ್ಲ,ಗುರಿ ಮುಟ್ಟೋತನಕ ರಾಜ್ಯದ ಜನತೆ ನನಗೆ ಮಾಲೆ ಹಾಕಬೇಡಿ,ಎಂದು ಭಕ್ತರಿಗೆ ದಿಂಗಾಲೇಶ್ವರ ಸ್ವಾಮೀಜಿ ಮನವಿ ಮಾಡಿಕೊಂಡರು.!
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಈಗಾಗಲೇ ನಮ್ಮ ನಿಲುವು ಕೇಂದ್ರದವರೆಗೂ ಮುಟ್ಟಿದೆ.ನನ್ನ ಹೋರಾಟ ಈಗಿನಿಂದ ಆರಂಭವಾಗಿಲ್ಲ, ಮೊದಲನೆಯ ಹೋರಾಟ ಐದು ವರ್ಷ ಮುಗುವಿದ್ದಾಗ ಮೊದಲು ತಾಯಿಯೊಂದಿಗೆ ಹೋರಾಟ ಮಾಡಿದವನು ನಾ, ಹತ್ತು ವರ್ಷದವನಿದ್ದಾಗ ಹೋರಾಟ ಮಾಡಿ ಮನೆ ಬಿಟ್ಟು, ಸನ್ಯಾಸಿಯಾದವನು ನಾ,
ವ್ಯಕ್ತಿಯ ಹಿತಕ್ಕಾಗಿ ಎಂದೂ ಹೋರಾಟ ಮಾಡಿದವನು ನಾನಲ್ಲ..ವೀರಶೈವ ಲಿಂಗಾಯತ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವನು ನಾ,ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂದು ಹೋರಾಟ ಮಾಡುತ್ತಿದ್ದಾಗ, ಅವೆರಡೂ ಒಂದೇ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೆ,ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಬಿಜೆಪಿ ಹೈಕಮಾಂಡ್ ವಿರುದ್ಧ ಹೋರಾಟ ಮಾಡಿದ್ದೆ ಹಿಂದಿನ ಸರ್ಕಾರದಲ್ಲಿ 40% ಕಮಿಷನ್ ವಿರುದ್ಧ ಹೋರಾಟ ಮಾಡಿದ್ದೆ ಎಂದರು!
ನಮ್ಮ ಹೋರಾಟಕ್ಕೆ ಜ‌ಯ ಸಿಕ್ಕ ಮೇಲೆ ಧಾರವಾಡ ಲೋಕಸಭಾ ಕ್ಷೇತ್ರದ ಜನರಿಗೆ ಮಾಲೆ ಹಾಕಬೇಕು. ಜಾತಿ ಮತ್ತು ಪಕ್ಷದ ಪರವಾದ ಹೋರಾಟ ನನ್ನದ್ದಲ್ಲ ನಮ್ಮ ಮಠ ಜಾತ್ಯಾತೀತ ಮಠ ಜೋಶಿಯವರನ್ನ ನಮ್ಮ ಸಮಾಜದದವರು ಗೆಲ್ಲಿಸಿದ್ರು ಗೆಲ್ಲಿಸಿದವರನ್ನೇ ಜೋಶಿ ಮರೆತರು,ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮೂರು ಜನರಿಗೆ ಟಿಕೆಟ್ ಆಮಿಷ ತೋರಿಸಿದ್ರು ಡಾ.ಮಹೇಶ ನಾಲವಾಡರನ್ನು ಬಳಕೆ ಮಾಡಿಕೊಂಡು ಬೀಸಾಕಿದ್ದಾರೆ. ಅಂಗಡಿ, ಕಾಂತೇಶ ಅವರನ್ನ ಸಹ ಜೋಶಿಯವರು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಪ್ರಚಾರ ಮಾಡಲು ಕಳಿಸಿದರು,ಈಶ್ವರಪ್ಪನವರಿಗೂ ಜೋಷಿ ಮೋಸ ಮಾಡಿದವರು ಎಂದು ಹರಿಹಾಯ್ದರು!
ಯಾವಾಗಲೂ ನರೇಂದ್ರ ಮೋದಿ ಪಕ್ಕದಲ್ಲಿರೋ ಜೋಶಿ ನಮ್ಮ ನಾಡಿಗಾಗಿ ಏನ್‌ ಮಾಡಿದ್ರು?? ಸಣ್ಣಪುಟ್ಟ ಕೆಲಸಕ್ಕಾಗಿ ನಾನು ವಿದ್ಯಾರ್ಥಿಗಳನ್ನ ಜೋಶಿ ಹತ್ತಿರ ಕಳಿಸಿದ್ರೆ, ಅವರ ಕೆಲಸ ಮಾಡಿಲ್ಲ! ಇವರು ಸಂಸದರಾಗಿದ್ದು ಜನರ ಕೆಲಸ ಮಾಡಲಿಕ್ಕೆ ಜೋಶಿ ಪ್ರಧಾನ ಮಂತ್ರಿ ಪಕ್ಕ ಇದ್ದಾಗ ನಮ್ಮ ನಾಡಿಗೆ ಏನಾದ್ರೂ ತಂದು ಹಾಕ್ತಾರೆಂದು ಕಾಯ್ದು ನೋಡಿದ್ವಿ ಆದ್ರೆ ಜೋಶಿ ಏನೂ ತಂದು ಹಾಕಲಿಲ್ಲ,ಬದಲಾಗಿ ಎಲ್ಲವನ್ನೂ ತಿಂದು ಹಾಕಿದ್ದಾರೆ.! ಸ್ವಾಮೀಜಿಗಳಿಗೆ ರಾಜಕಾರಣ ಏಕೆ ಬೇಕೆಂದು ಜೋಶಿ ಹಿಂಬಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಕ್ತಾರೆ ಮತ್ತು ಮಾತನಾಡುತ್ತಾರೆ. ನಿಮ್ಮ ಕಾರ್ಯಕ್ರಮ ವೇದಿಕೆ ಹಂಚಿಕೆಕೊಂಡು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲು ಸ್ವಾಮೀಜಿಗಳು ಬೇಕಾಗಿತ್ತಾ..?ನಾನು ಮಠದಲ್ಲಿ ಇದ್ರು ಅಷ್ಟೇ, ಬಯಲಿನಲ್ಲಿ ಇದ್ದರು ಅಷ್ಟೇ ಎಂದು ತಿಳಿದು ಈ ಹೋರಾಟ ಮಾಡುತ್ತಿದ್ದೆನೆ ಮಠಾಧಿಪತಿಗಳು ಸ್ವಾಭಿಮಾನ ಬಿಟ್ಟು ಬದುಕುಬಾರದು ನೊಂದವರ ಬೆನ್ನಿಗೆ ಸ್ವಾಮೀಜಿಗಳ ನಿಲ್ಲಬೇಕು ಎಂದರು!ಮುಂದಿನ ಹೋರಾಟ ಬೆಂಗಳೂರಲ್ಲಿ ಎಂಬಂತೆ ಮಾತನಾಡಿದ ಶ್ರೀಗಳು,ಕರ್ನಾಟಕದಾದ್ಯಂತ ಜೋಷಿಯವರ ವಿರುದ್ಧ ಅಲೆ ಎಬ್ಬಿಸೋ ಮಾತು ಕೇಳಿ ಬಂತು!.ಕೃಷ್ಣಮೂರ್ತಿ ಎಲ್‌ ಕುಲಕರ್ಣಿ ಗರುಡ ಟಿವಿ ಕರ್ನಾಟಕ ನ್ಯೂಸ್‌ ಧಾರವಾಡ 8088625320

"ಬಂಜರು ಬೂಮಿಯಲಿ ಹನಿ ನೀರ ನಾ  ಕಾಣದಿರಲೂ!ಭಾವುಕ ಕಣ್ಣಲಿ ಬತ್ತದಾ ಕಣ್ಣೀರ ಸೆಲೆಯುಂಟು! ಭಾವನಾಜೀವಿಗೆ ಭಾವುಕತೆಯೇ ಶಾಪವೇ? ಕೇಳಲು ಇನಿಯ  ಕೊಂಕು...
02/04/2024

"ಬಂಜರು ಬೂಮಿಯಲಿ ಹನಿ ನೀರ ನಾ ಕಾಣದಿರಲೂ!
ಭಾವುಕ ಕಣ್ಣಲಿ ಬತ್ತದಾ ಕಣ್ಣೀರ ಸೆಲೆಯುಂಟು!
ಭಾವನಾಜೀವಿಗೆ ಭಾವುಕತೆಯೇ ಶಾಪವೇ? ಕೇಳಲು ಇನಿಯ ಕೊಂಕು ಮಾತನಾಡುತಿಹ!
ನೋಡೇ ನೀ ಕಾಗೆಯಂತೆ ಆಡಬೇಡ:-
"ಕಾಗೆ ಅತ್ತರೂ ಅದೇ ಸದ್ದು ಕಾವ್!ಕಾವ್!
ಕಾಗೆ ನಕ್ಕರೂ ಅದೇ ಸದ್ದು ಕಾವ್!ಕಾವ್!"
ನೀ ಸಂತೋಷಕೂ ಅಳುವೆ!ನೋವಿಗೂ ಅಳುವೆ!
ಕೋಪದಲಿ ಮನ ಬೈದು ನುಡಿದಿದೆ:-
"ಮನವರಿಯದ ಗಂಡನೂ ನೆರೆಮನೆಯವನಂತೆ"!!!!...ಕೃಷ್ಣಮೂರ್ತಿ ಎಲ್‌ ಕುಲಕರ್ಣಿ 8088625320

"ಕೆಟ್ಟ ದಿನಗಳು ರಾಕ್ಷಸರಂತೆ ಅವು ಒಳ್ಳೆಯ ದಿನಗಳನು ತಿಂದು ತೇಗಿ ಕೊನೆಗೆ ಬರೀ ನೆನಪೆಂಬ ಅಸ್ತಿಪಂಜರವನು ಮಾತ್ರ ಉಳಿಸಿಹೋಗ್ತವೆ"!!!. ಕೃಷ್ಣಮೂರ್...
02/04/2024

"ಕೆಟ್ಟ ದಿನಗಳು ರಾಕ್ಷಸರಂತೆ ಅವು ಒಳ್ಳೆಯ ದಿನಗಳನು ತಿಂದು ತೇಗಿ ಕೊನೆಗೆ ಬರೀ ನೆನಪೆಂಬ ಅಸ್ತಿಪಂಜರವನು ಮಾತ್ರ ಉಳಿಸಿಹೋಗ್ತವೆ"!!!. ಕೃಷ್ಣಮೂರ್ತಿ ಎಲ್‌ ಕುಲಕರ್ಣಿ 8088625320

"ನನ್ನ ಹೃದಯವೊಂದು ಹೂ ತೋಟ!ಅಲ್ಲಿ ದಿನವೂ "ಆಸೆಯೆಂಬ ಹೂಗಳು ಅರಳುವವು!ಬಿಡಿಸಿ ಮುಡಿಸಲಾರೆ... ಮರೆತು ಮೌನದಿ ಇರಲಾರೆ!ಕೈಗೆಟುಕದಾ ಹೂಗಳನು ಒಮ್ಮೊಮ...
02/04/2024

"ನನ್ನ ಹೃದಯವೊಂದು ಹೂ ತೋಟ!
ಅಲ್ಲಿ ದಿನವೂ "ಆಸೆಯೆಂಬ ಹೂಗಳು ಅರಳುವವು!
ಬಿಡಿಸಿ ಮುಡಿಸಲಾರೆ... ಮರೆತು ಮೌನದಿ ಇರಲಾರೆ!
ಕೈಗೆಟುಕದಾ ಹೂಗಳನು ಒಮ್ಮೊಮ್ಮೆ ನೋಡುತ ನಗುವೆ"!!!
ಕೃಷ್ಣಮೂರ್ತಿ ಎಲ್‌ ಕುಲಕರ್ಣಿ 8088625320

ಬಂಗಾರದ। ಲೋಟದಲ್ಲಿ ಕೊಟ್ಟ ಮಾತ್ರಕ್ಕೆ ವಿಷ ಹಾಲಾದೀತೆ?ಕೆಟ್ಟ ಯೋಚನೆ ಹೊತ್ತ ದೇಹ ಕಾಶಿ ರಾಮೇಶ್ವರ ತಿರುಗಲು ಮನ ನೆಮ್ಮದಿಯನು ಕೊನೆತನಕ ಪಡೆದೀತೆ?...
02/04/2024

ಬಂಗಾರದ। ಲೋಟದಲ್ಲಿ ಕೊಟ್ಟ ಮಾತ್ರಕ್ಕೆ ವಿಷ ಹಾಲಾದೀತೆ?
ಕೆಟ್ಟ ಯೋಚನೆ ಹೊತ್ತ ದೇಹ ಕಾಶಿ ರಾಮೇಶ್ವರ ತಿರುಗಲು ಮನ ನೆಮ್ಮದಿಯನು ಕೊನೆತನಕ ಪಡೆದೀತೆ?
ಬದಲಾಗು ಓ ಮನುಜ ನಿನ್ನ ಕಲ್ಪನೆಯೇ ಅಸಲೀ ವಾಸ್ತವ ಎಂಬ ಭ್ರಮೆ ಬೇಡ "!!!.. ಕೃಷ್ಣಮೂರ್ತಿ ಎಲ್‌ ಕುಲಕರ್ಣಿ 8088625320

"ಬದುಕಿನಾ ದಡದಲ್ಲಿ ಕುಳಿತೊಮ್ಮೆ ಯೋಚಿಸಿದೆ...ನಾ ಈಜು ಕಲಿಯಲೇಬೇಕು.. ನಡು ನೀರಲ್ಲಿ ಕೈ ಬಿಡೋ ಜನರ ನಡುವೆನೇ ನಾ ಬದುಕುತಿರುವೆ ".. ಕೃಷ್ಣಮೂರ್ತ...
02/04/2024

"ಬದುಕಿನಾ ದಡದಲ್ಲಿ ಕುಳಿತೊಮ್ಮೆ ಯೋಚಿಸಿದೆ...
ನಾ ಈಜು ಕಲಿಯಲೇಬೇಕು.. ನಡು ನೀರಲ್ಲಿ ಕೈ ಬಿಡೋ ಜನರ ನಡುವೆನೇ ನಾ ಬದುಕುತಿರುವೆ ".. ಕೃಷ್ಣಮೂರ್ತಿ ಎಲ್‌ ಕುಲಕರ್ಣಿ 8088625320

ಗರುಡ ಟಿವಿ ಕರ್ನಾಟಕ ನ್ಯೂಸ್‌ ಬೆಂಗಳೂರು (1/4/2024 )ಪೊಲೀಸರಿಂದ ನ್ಯಾಯ ಸಿಕ್ಕಿಲ್ಲ ಎಂಬ ಆರೋಪ,ಠಾಣೆಯಲ್ಲೇ ಎಎಸ್‌ಐ ಬಲಗೈಗೆ  ಗಾಜಿನ ಬಾಟಲಿಂದ ...
01/04/2024

ಗರುಡ ಟಿವಿ ಕರ್ನಾಟಕ ನ್ಯೂಸ್‌ ಬೆಂಗಳೂರು (1/4/2024 )ಪೊಲೀಸರಿಂದ ನ್ಯಾಯ ಸಿಕ್ಕಿಲ್ಲ ಎಂಬ ಆರೋಪ,ಠಾಣೆಯಲ್ಲೇ ಎಎಸ್‌ಐ ಬಲಗೈಗೆ ಗಾಜಿನ ಬಾಟಲಿಂದ ಚುಚ್ಚಿದಳು ಓರ್ವ ಮಹಿಳೆ!ಬೆಂಗಳೂರು ಗಂಗಮ್ಮಗುಡಿ ಪೊಲೀಸ ಠಾಣೆಯಲ್ಲಿ ಈ ಘಟನೆ ನಡೆದಿದೆ,ಗರುಡ ಟಿವಿ ಈ ವಿಚಾರದಲಿ ಇನ್ಸಪೆಕ್ಟರ್‌ನ್ನು ಪ್ರಶ್ನಿಸಿದಾಗ"ಹೌದು ಸರ್‌ ಆಕೆ ಯಾವುದೋ ವ್ಯಾಜ್ಯದ ಸಲುವಾಗಿ ಆಗಾಗ ಠಾಣೆಗೆ ಬರತಾ ಇದ್ದಳು,ಕೊಂಚ ಮಾನಸಿಕ ಸಮಸ್ಯೆಯಿಂದ ಇರೋ ಮಹಿಳೆ ಆಕೆ.. ಇಂದು ಎಎಸ್‌ಐ ನಾಗರಾಜ್‌ಗೆ ಹೀಗಾಗಿದೆ,ಮಹಿಳಾ ಪಿಸಿಗಳು ಆಕೆಯನ್ನು ಸಮಾಧಾನ ಮಾಡಿ ಆಕೆಯ ಮನೆಯವರನ್ನು ಕರೆಸಿದ್ದು ಆಕೆಯನ್ನು DIMHANS ನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಿದೆ,ಆಕೆಯ ಪರಿಸ್ಥಿತಿ ಅರಿತು ಯಾವುದೇ ಕ್ರಮ ಜರುಗಿಸಿಲ್ಲ ಎಂದು ನುಡಿದರು... ಕೃಷ್ಣಮೂರ್ತಿ ಎಲ್‌ ಕುಲಕರ್ಣಿ ಗರುಡ ಟಿವಿ ಕರ್ನಾಟಕ ನ್ಯೂಸ್‌ ಬೆಂಗಳೂರು 8088625320

ಗರುಡ ಟಿವಿ ಕರ್ನಾಟಕ ನ್ಯೂಸ್‌  ಬೆಂಗಳೂರು (1/4/2024 )ಅರ್ಜುನ್ ಸರ್ಜಾರ ʻಪ್ರೇಮ ಬರಹ’ ಚಿತ್ರದ ವಿತರಕ ಮಲ್ಲಿಕಾರ್ಜುನ್‌ರಿಂದ ಅರ್ಜುನ್‌ಗೆ 1 ಕ...
01/04/2024

ಗರುಡ ಟಿವಿ ಕರ್ನಾಟಕ ನ್ಯೂಸ್‌ ಬೆಂಗಳೂರು (1/4/2024 )ಅರ್ಜುನ್ ಸರ್ಜಾರ ʻಪ್ರೇಮ ಬರಹ’ ಚಿತ್ರದ ವಿತರಕ ಮಲ್ಲಿಕಾರ್ಜುನ್‌ರಿಂದ ಅರ್ಜುನ್‌ಗೆ 1 ಕೋಟಿ ಮೋಸ!ಚೆಕ್‌ ಬೌನ್ಸ್- 7ವರ್ಷದಿಂದ ನಾಪತ್ತೆ!ದರ್ಶನ್‌ ಮಾಜಿ ಪಿಎ ಮಲ್ಲಿಕಾರ್ಜುನ್‌ ಡಿಬಾಸ್‌ಗೂ 2ಕೋಟಿ ನೀಡಬೇಕಂತೆ!
ನಟ ದರ್ಶನ್ ಅವರ ಮಾಜಿ ಆಪ್ತ ಸಹಾಯಕ ಮಲ್ಲಿಕಾರ್ಜುನ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದು.ನಟ ಅರ್ಜುನ್ ಸರ್ಜಾರ ʻಪ್ರೇಮ ಬರಹ’ ಚಿತ್ರದ ವಿತರಣೆ ಹಣದ ವಿಚಾರವಾಗಿ ಮಲ್ಲಿಕಾರ್ಜುನ್ ವಿರುದ್ಧ ಕೇಸ್ ದಾಖಲಿಸಿದ್ದಾರೆ!. ಮಲ್ಲಿಕಾರ್ಜುನ್ ವಿರುದ್ಧ 1 ಕೋಟಿ ರೂ. ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದ್ದು, ಕಳೆದ 7 ವರ್ಷಗಳಿಂದ ಆತ ನಾಪತ್ತೆ! . ಶ್ರೀ ಕಾಲಕಾಲೇಶ್ವರ ಎಂಟರ್​ಪ್ರೈಸಸ್ ಕಂಪನಿ ಒಡೆಯರಾಗಿದ್ದ ಮಲ್ಲಿಕಾರ್ಜುನ್, ಗಾಂಧಿನಗರದಲ್ಲಿ 11 ಕೋಟಿ ರೂ. ಮೋಸ ಮಾಡಿರುವುದಾಗಿ ತಿಳಿದು ಬಂದಿದೆ!ಛಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ 2 ಕೋಟಿ ರೂ. ಮೋಸ ಮಾಡಿ ನಾಪತ್ತೆಯಾಗಿದ್ದಾನಂತೆ!
ಪ್ರೇಮ ಬರಹ ಸಿನಿಮಾ ಪ್ರಕರಣ ಇದು, ಮಲ್ಲಿಕಾರ್ಜುನ ಹಣೇಬರಹ:ಅರ್ಜುನ್ ಸರ್ಜಾ ನಿರ್ದೇಶನ ಮತ್ತು ನಿರ್ಮಾಣದ ಚಿತ್ರ ʻಪ್ರೇಮ ಬರಹʼ ಚಿತ್ರವನ್ನ ಮಲ್ಲಿಕಾರ್ಜುನ್ (ಮಲ್ಲಿ) ರಾಜ್ಯಾದ್ಯಂತ ವಿತರಣೆ ಮಾಡಿದ್ದರು. 2018 ಫೆಬ್ರವರಿ 9ನೇ ತಾರೀಖು ರಾಜ್ಯಾದ್ಯಂತ ʻಪ್ರೇಮ ಬರಹʼ ಸಿನಿಮಾ ರಿಲೀಸ್ ಆಗಿತ್ತು. ಚಂದನ್ ಕುಮಾರ್ ಹಾಗೂ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ ಐಶ್ವರ್ಯ ಅರ್ಜುನ್ ಮುಖ್ಯಭೂಮಿಕೆಯಲ್ಲಿನ ಚಿತ್ರವಿದು!ಈ ಚಿತ್ರದಲ್ಲಿ ಡಿಬಾಸ್‌ ದರ್ಶನ್‌ ಹಾಗೂ ಧ್ರುವ ಸರ್ಜಾ ಮತ್ತು ದಿವಂಗತ ಚಿರು ಸರ್ಜಾ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು!ಪ್ರೇಮ ಬರಹ ಸಿನಿಮಾ ವಿತರಣೆಯ ಹಣದ ವಿಚಾರದಲ್ಲಿ ಮಲ್ಲಿಕಾರ್ಜುನ್ ಮತ್ತು ನಟ-ನಿರ್ಮಾಪಕ-ನಿರ್ದೇಶಕ ಅರ್ಜುನ್ ಸರ್ಜಾರಲ್ಲಿ ವೈಮನಸ್ಸು ಶುರುವಾಗಿತ್ತು!
ಅರ್ಜುನ್ ಸರ್ಜಾ ಮತ್ತು ಮಲ್ಲಿಕಾರ್ಜುನ್ ನಡುವೆ ʻಪ್ರೇಮ ಬರಹʼ ಸಿನಿಮಾದ ವಿತರಣೆಯ ವಿಚಾರವಾಗಿ ಬರೋಬ್ಬರಿ 1 ಕೋಟಿ ರೂ. ಕೊಡುವ ಒಪ್ಪಂದವಾಗಿತ್ತು!ಈ ವಿಚಾರವಾಗಿ ಸ್ವತಃ ಮಲ್ಲಿಕಾರ್ಜುನ್ ಅವರ ಸಂಸ್ಥೆ ಶ್ರೀ ಕಾಲಕಾಲೇಶ್ವರ ಎಂಟರ್​ಪ್ರೈಸಸ್ ಬುಕ್​ಲೆಟ್‌​ನಲ್ಲಿ ವಿತರಣೆಯ ಹಣದ ವಿಚಾರವನ್ನು ಬರೆದುಕೊಟ್ಟಿದ್ದರು!
ಪ್ರೇಮ ಬರಹದ ಕಲೆಕ್ಷನ್ ಹಣ ಕೊಡಲೇ ಇಲ್ಲ?
9/2/2018ರಂದು ರಿಲೀಸ್‌ "ಪ್ರೇಮ ಬರಹʼದ ಕಲೆಕ್ಷನ್ ಅಮೌಂಟ್ ಮಲ್ಲಿಕಾರ್ಜುನ್ ಕೊಟ್ಟಿರಲಿಲ್ಲ! ಆರೇಳು ತಿಂಗಳಲ್ಲಿ ಹಣ ಕೊಡುವುದಾಗಿ ಹೇಳಿ ನಾಪತ್ತೆಯಾದ ಮಲ್ಲಿಕಾರ್ಜುನ್‌!
ಈ ವಿಚಾರವಾಗಿ ನಟ ದರ್ಶನ್ ಅವರನ್ನು ಕೇಳಿದಾಗ ‘‘ನನಗೆ 2 ಕೋಟಿ ಕೊಡಬೇಕಿತ್ತು ಮಲ್ಲಿ‘, ನನ್ನ ಹೆಸರಿನಲ್ಲಿ ಅನೇಕರಿಗೆ ಮೋಸ ಮಾಡಿದ್ದಾನೆ ಎನ್ನುವ ವಿಚಾರ ಕೇಳಿದ್ದೇನೆ. ಆತ ಎಲ್ಲಿಗೆ ಹೋಗಿದ್ದಾನೆ ಎಂದು ನನಗೆ ಗೊತ್ತಿಲ್ಲ ಎಂದಿದ್ದರುʼʼ
ಮೂಲತಃ ಗದಗ ಜಿಲ್ಲೆಯವನಾದ ಮಲ್ಲಿಕಾರ್ಜುನ್ ಏಳು ವರ್ಷದಿಂದ ಯಾರಿಗೂ ಸಿಕ್ಕಿಲ್ಲ. 2018ರಲ್ಲಿ ಮಲ್ಲಿಕಾರ್ಜುನ್ ನಾಪತ್ತೆಯಾದಾಗ ಅರ್ಜುನ್ ಸರ್ಜಾ ಟೀಮ್ ಅವರ ಊರಿಗೂ ಹೋಗಿದ್ದರು!ಮಲ್ಲಿಯವರ ಪತ್ನಿ ಕೊಪ್ಪಳ ಮೂಲದವರು ಅವರ ಮನೆ ಹುಡುಕಿಕೊಂಡು ಹೋದಾಗ ಮಲ್ಲಿಕಾರ್ಜುನ್ ಪತ್ನಿ ತೇಜಸ್ವಿನಿ ”ನಮ್ಮ ಮನೆಗೂ ನನ್ನ ಗಂಡ ಬಂದಿಲ್ಲ. ಇದೊಂದು ಪತ್ರ ಬರೆದು ಹೊರಟು ಹೋಗಿದ್ದಾರೆʼʼ ಎಂದು ಹೇಳಿದ್ದರು.
ಪತ್ರದಲ್ಲಿ ಏನಿದೆ?
ಪ್ರೀತಿಯ ತೇಜಸ್ವಿನಿಗೆ,
ಮೊದಲನೆದಾಗಿ ದಯವಿಟ್ಟು ನನ್ನನ್ನು ಕ್ಷಮಿಸು. ನಾನು ನನ್ನ ವೈಯಕ್ತಿಕ ವ್ಯವಹಾರಕ್ಕಾಗಿ ತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇನೆ. ನನ್ನ ಈ ಕೆಲಸದಿಂದ ನಾನು ಯಾರಿಗೂ ಮುಖ ತೋರಿಸಲಾಗದ ಪರಿಸ್ಥಿತಿಯಲ್ಲಿದ್ದೇನೆ. ಆದ ಕಾರಣ ನಾನು ಎಲ್ಲೋ ಕಷ್ಟಪಟ್ಟು ದುಡಿದು ವಾಪಸ್ಸು ಬಂದು ಸಾಲ ತೀರಿಸಿ, ನನಗಂಟಿರುವ ಕಳಂಕ ಹೋಗಲಾಡಿಸಿ ಮತ್ತೆ ಧೈರ್ಯವಾಗಿ ತಲೆಯತ್ತಿ ಎಲ್ಲರ ಮುಂದೆ ಜೀವನ ನಡೆಸಬೇಕೆಂದುಕೊಂಡಿದ್ದೇನೆ.ಅಲ್ಲಿಯವರಿಗೆ ನಿಮ್ಮ ಎದುರಿಗೆ ಬರುವ ಶಕ್ತಿ ನನಗಿಲ್ಲ. ನನ್ನನ್ನು ಯಾವುದೇ ಕಾರಣಕ್ಕೂ ಹುಡುಕುವ ಪ್ರಯತ್ನ ಮಾಡಬೇಡಿ. ನನ್ನ ಸಮಸ್ಯೆಯಿಂದ ನಿನ್ನನ್ನು, ಮಗನನ್ನು ಹಾಗೂ ಮನೆಯವರನ್ನೂ ಬಿಟ್ಟು ಹೋಗುವ ಪರಿಸ್ಥಿತಿ ಬಂದೊದಗಿದೆ. ದಯವಿಟ್ಟು ನನ್ನನ್ನು ಕ್ಷಮಿಸುʼʼ ಎಂದು ಬರೆದಿದ್ದಾರೆ!
ವಾರಂಟ್ ಜಾರಿ ಮಾಡುವಂತೆ ಆದೇಶ
ಇದೀಗ ಅರ್ಜುನ್ ಸರ್ಜಾ ಒಂದು ಕೋಟಿ ರೂ. ವಸೂಲಿಗಾಗಿ ಆರೋಪಿ ಮಲ್ಲಿಕಾರ್ಜುನ್ ವಿರುದ್ಧ ದೂರು ದಾಖಲಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿದ್ದು ಈಗ ಸದರೀ ಪ್ರಕರಣ ಮತ್ತೊಂದು ಹಂತಕ್ಕೆ ಹೋಗಿದೆ. ಮಲ್ಲಿಕಾರ್ಜುನ್ ಹಾಜರಾಗದೆ ಇದ್ದರೇ ವಾರಂಟ್ ಜಾರಿ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ!ಏನೇ ಅನ್ನಿ ಪ್ರೇಮ ಬರಹದಿಂದ ಮಲ್ಲಿಕಾರ್ಜುನ್‌ ಹಣೆಯ ಬರಹ ಹಿಂಗಾಗಿದೆ!..ಕೃಷ್ಣಮೂರ್ತಿ ಎಲ್‌ ಕುಲಕರ್ಣಿ ಗರುಡ ಟಿವಿ ಕರ್ನಾಟಕ ಬೆಂಗಳೂರು 8088625320

"ಕರಗಿದಾ ಮೇಣದಂಥ ಕ್ಷಣಗಳನು ಕೂಡಿಸಲು ಹೊರಟೇ ಈ ಮನುಜ ಸೊರಗಿದಾ"...!ವಾಸ್ತವತೆ ಅರಿವಿಲ್ಲದೆ ಬರೀ ಕಲ್ಪನೆಯಲೇ ಅವ ಮರುಗಿದ!ಸಿಹಿ ಕಲ್ಪನೆಯೆಂಬ ಸಕ್...
01/04/2024

"ಕರಗಿದಾ ಮೇಣದಂಥ ಕ್ಷಣಗಳನು ಕೂಡಿಸಲು ಹೊರಟೇ ಈ ಮನುಜ ಸೊರಗಿದಾ"...!
ವಾಸ್ತವತೆ ಅರಿವಿಲ್ಲದೆ ಬರೀ ಕಲ್ಪನೆಯಲೇ ಅವ ಮರುಗಿದ!
ಸಿಹಿ ಕಲ್ಪನೆಯೆಂಬ ಸಕ್ಕರೆ ಮುಕ್ಕುತಾ ನಡೆದ..!
ಕಹಿ ಎಂಬ ಕಾರಣಕ್ಕೆ ಕಟು ವಾಸ್ತವದ ಔಷಧಿಯನೇ ದೂರ ತಳ್ಳುತಾ ನಡೆದ!ಬರೀ ನಲಿವನೇ ಅರಸಿ ನೋವು ಪಡೆಯುತಾ ಬಂದ!ಭೂಮಿಗಿಲ್ಲ ಯಾವ ವಾಸ್ತು!ಭೂಮಿಗೆ ಎಲ್ಲವೂ ಬರೀ ವಸ್ತು!ರಾಜಮಾರ್ಗ ತೊರೆದು ಕವಲು ದಾರಿಯಲೇ ಮನುಜ ಹೊರಟ..!
ಹಣ ಸಿಕ್ಕಾಗ ಮೆರೆದ!ಹೆಣ್ಣು ತನ್ನವಳೆಂದು ಉರಿದ!
ಇಷ್ಟು ಆಸ್ತಿ ಇಷ್ಟು ಭೂಮಿ ತನ್ನದೇ ಎಂದು ಬೀಗಿದ!
ಹೆಣ್ಣು! ಹೊನ್ನು! ಮಣ್ಣು! ಯಾರ ಕೈಗೆ ಕೊನೆತನಕ ಉಳಿದಾತೋ ಓ ಮನುಜ?
ಅವನ ನಿಜ ನೋವಿಗೆ ಅವನ ಬಯಕೆಗಳೇ ಮೂಲ!
ಯಾವ ದಿಕ್ಕಿನಿಂದ ನಡೆದರೂ ಕೊನೆಯ ಪಯಣ ಮಸಣದೆಡೆಗೆ ಎಂಬುದನೇ ಮನುಜ ಮರೆತ"!!!
ಕೃಷ್ಣಮೂರ್ತಿ ಎಲ್‌ ಕುಲಕರ್ಣಿ 8088625320

"ಅವಳೊಂದು ಕವಿತೆ....ಈ ಕವಿಯ ಕಂಡರೇ ಅವಳಿಗೇನೋ ನಾಚಿಕೆ....!ಅವಳು ಅಡಗಿ ಕುಳಿತುಕೊಳ್ಳೋದು ಮಾತ್ರ ನನ್ನ ಪದಗಳಲ್ಲಿ!... ಕೃಷ್ಣಮೂರ್ತಿ ಎಲ್‌ ಕುಲ...
01/04/2024

"ಅವಳೊಂದು ಕವಿತೆ....
ಈ ಕವಿಯ ಕಂಡರೇ ಅವಳಿಗೇನೋ ನಾಚಿಕೆ....!
ಅವಳು ಅಡಗಿ ಕುಳಿತುಕೊಳ್ಳೋದು ಮಾತ್ರ ನನ್ನ ಪದಗಳಲ್ಲಿ!... ಕೃಷ್ಣಮೂರ್ತಿ ಎಲ್‌ ಕುಲಕರ್ಣಿ 8088625320

ಗರುಡ ಟಿವಿ ಕರ್ನಾಟಕ ನ್ಯೂಸ್‌ ಬೆಳಗಾವಿ (31/3/2024 )ಬೆಳಗಾವಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರಿಂದ ಹಿಂಡಲಗಾ ಜೈಲಿನ...
31/03/2024

ಗರುಡ ಟಿವಿ ಕರ್ನಾಟಕ ನ್ಯೂಸ್‌ ಬೆಳಗಾವಿ (31/3/2024 )ಬೆಳಗಾವಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರಿಂದ ಹಿಂಡಲಗಾ ಜೈಲಿನ ಮೇಲೆ ದಾಳಿ! ಒಳಗೆ ಬ್ಲೂಟೂತ್‌, ಚಾರ್ಜರ್‌...,ಸಿಗರೇಟ್‌.ತಂಬಾಕು .ಅದು!ಇದು.. ಬಂದದ್ದು ಹ್ಯಾಂಗಪಾ?
ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತ ರೋಹನ್ ಜಗದೀಶ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿ ಕೈದಿಗಳಿಂದ ಮಹತ್ವದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ!ತಾಸುಗಟ್ಟಲೆ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ನಡೆದಿದೆ!
ಗರುಡ ಟಿವಿಯೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ರೋಹನ ಜಗದೀಶ್‌ ಅವರು, ಐವರು ಸಹಾಯಕ ಪೊಲೀಸ್ ಆಯುಕ್ತರು ಮತ್ತು ಸಿಬ್ಬಂದಿಗಳೊಂದಿಗೆ ಹಿಂಡಲಗಾ ಜೈಲಿನ ಮೇಲೆ ದಾಳಿ ಮಾಡಲಾಗಿದೆ. ಕೈದಿಗಳಿಂದ ತಂಬಾಕು, ಸಿಗರೇಟ್ ಪ್ಯಾಕುಗಳು ದೊರೆಕಿವೆ. ಭದ್ರತೆ ಇದ್ದರೂ ಇವೆಲ್ಲ ವಸ್ತುಗಳು ಒಳಗೆ ಹೇಗೆ ಹೋಗುತ್ತವೆ? ಎಂಬ ಬಗ್ಗೆ ತನಿಖೆ ಮಾಡಬೇಕಾಗಿದೆ. ಕೈದಿಗಳ ಬಳಿ ಮೊಬೈಲ್ ಏನೂ ಸಿಕ್ಕಿಲ್ಲ, ಆದರೆ, ಮೊಬೈಲ್ ಚಾರ್ಜರ್ ದೊರಕಿವೆ.ಬ್ಲೂಟೂತ್ ಡಿವೈಸ್ ಸಿಕ್ಕಿದ್ದು ಎಲ್ಲವನ್ನೂ ವಶಕ್ಕೆ ಪಡೆದುಕೊಂಡಿದ್ದೇವೆ ಎಂದರು!
ಇನ್ನು ಹಿಂಡಲಗಾ ಜೈಲಿನ ಯಾವ ಅಧಿಕಾರಿಗಳ ಮೇಲೆ ಯಾವ ಕ್ರಮ ಆಗುತ್ತೋ ಶಿವನೇ!ಜೈಲು ಡ್ಯೂಟಿ ಅಷ್ಪು ಸುಲಭ ಅಲ್ಲರೀಪಾ...!..ಕೃಷ್ಣಮೂರ್ತಿ ಎಲ್‌ ಕುಲಕರ್ಣಿ ಗರುಡ ಟಿವಿ ಕರ್ನಾಟಕ ನ್ಯೂಸ್‌ ಬೆಳಗಾವಿ 8088625320

ಗರುಡ ಟಿವಿ ಕರ್ನಾಟಕ ನ್ಯೂಸ್‌ ಹುಬ್ಬಳ್ಳಿ:(31/3/2024 )ಜೋಷಿಯವರ ಬದಲಾವಣೆ ಕೊಟ್ಟ ಸಮಯ ಮುಗೀತು!ನಮ್‌ ನಿರ್ಧಾರ ಅಚಲ!ಪ್ರಲ್ಹಾದ್ ಜೋಶಿ ಸೋಲಿಸೋದ...
31/03/2024

ಗರುಡ ಟಿವಿ ಕರ್ನಾಟಕ ನ್ಯೂಸ್‌ ಹುಬ್ಬಳ್ಳಿ:(31/3/2024 )ಜೋಷಿಯವರ ಬದಲಾವಣೆ ಕೊಟ್ಟ ಸಮಯ ಮುಗೀತು!ನಮ್‌ ನಿರ್ಧಾರ ಅಚಲ!ಪ್ರಲ್ಹಾದ್ ಜೋಶಿ ಸೋಲಿಸೋದು ಶ್ರೀಗಳ ಗುರಿಯೇ?ಕ್ಷೇತ್ರದ ಎಲ್ಲ ಮತದಾರರು ಶ್ರೀಗಳ ಹೇಳಿಕೆಯಂತೆಯೇ ಮತ ಚಲಾಯಿಹಸ್ತಾರಾ?ಮತದಾರರ ಪ್ರಶ್ನೆ!?
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲಿಂಗಾಯತ ಸಮುದಾಯ ಸೇರಿದಂತೆ ಇತರ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ!ಹೀಗಾಗಿ ಅವರ ಬದಲಾವಣೆಗೆ ಪಟ್ಟು ಹಿಡಿದು ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಶ್ರೀಗಳು ಚಿಂತನ-ಮಂಥನ ಸಭೆ ನಡೆಸಿ, ಬಿಜೆಪಿ ಹೈಕಮಾಂಡಗೆ ಮಾ.31 ರೊಳಗೆ ಜೋಶಿ ಅವರನ್ನು ಬೇರೆಡೆ ಬದಲಾವಣೆ ಮಾಡಬೇಕು. ಆ ಕ್ಷೇತ್ರಕ್ಕೆ ಲಿಂಗಾಯತ ಸಮೂದಾಯದ ನಾಯಕನನ್ನು ನಿಲ್ಲಿಸಿ ಗೆಲ್ಲಿಸಬೇಕೆಂದು ಪಟ್ಟು ಹಿಡಿದಿದ್ದರು!ಹೇಳಿಕೆ ನೀಡಿದ್ದರು,ಈ ವಿಚಾರಕ್ಕೆ ಸಂಬಂಧಿಸಿದಂತೆ ಮುರುಘಾಮಠದ ಶ್ರೀಗಳ ದಿನಕ್ಕೂಂದು ಹೇಳಿಕೆಗೆ ಜನ ರೋಸಿ ಹೋಗಿ ಮೌನವಾಗಿದ್ದರು,ಕೆಲವು ಮಠಾಧಿಪತಿಗಳು, ಲಿಂಗಾಯತ ನಾಯಕರು ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದಿದ್ದರು! ಕೆಲವರು ದಿಂಗಾಲೇಶ್ವರ ಶ್ರೀಗಳ ಪರವಾಗಿ ಬೆಂಬಲ ಸೂಚಿಸಿದ್ದರು!
ಯಡಿಯೂರಪ್ಪನವರು ಜೋಷಿ ಬದಲಾವಣೆ ಮಾತೆ ಇಲ್ಲ ಅಂದರು,ಸ್ವತಃ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ದಿಂಗಾಲೇಶ್ವರ ಶ್ರೀಗಳಿಗೆ ತಪ್ಪು ಕಲ್ಪನೆ ಆಗಿದೆ.ಅವರ ಹೇಳಿಕೆಗಳು ನಮಗೆ ಆರ್ಶೀವಾದ ಎಂದಿದ್ದರು! ಹೀಗಾಗಿ ದಿಂಗಾಲೇಶ್ವರ ಶ್ರೀಗಳು ತಮ್ಮ ಹೇಳಿಕೆಯಿ‌ಂದ ಹಿಂದೆ ಸರಿಯಬಹುದಾ?ಅವರೇ ನೇರವಾಗಿ ಸ್ಪರ್ಧೆ ಮಾಡಬಹುದು ಎಂಬ ಮಾತುಗಳು ಕೇಳಿ ಬಂದಾಗ,ಸ್ಪರ್ಧೆಯನ್ನು ಅಲ್ಲಗಳೆದ ಶ್ರೀಗಳು,ಜೋಷಿ ಕ್ಷೇತ್ರ ಬದಲು ಹೇಳಿಕೆಗೆ ಈಗಲೂ ನನ್ನ ಮಾತು ನಿಲುವು ಅದೇ ಎಂದಿದ್ದಾರೆ!ಜೋಶಿ ಬದಲಾವಣೆಗೆ ಕೊಟ್ಟ ಗಡುವು ಮುಗಿದ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಶ್ರೀಗಳು ಪತ್ರಿಕಾಗೋಷ್ಠಿ ನಡೆಸಿ ಮಾತನ್ನಾಡಿದ್ದಾರೆ!
ಪಟ್ಟು ಸಡಿಲಿಕೆಗೆ ಬೆದರಿಕೆ ಬಂದಾವಂತೆ:!?-ಪ್ರಲ್ಹಾದ್ ಜೋಶಿ ಬದಲಾವಣೆಗೆ ಪಟ್ಟು ಹಿಡಿದಾದ ನಂತರ ಬಹುಸಂಖ್ಯಾತ ನಾಯಕರು ದೂರವಾಣಿ, ಪ್ರತ್ಯೇಕವಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದರು! ಅಚಲ ನಿರ್ಧಾರ ಬದಲಿಸಲು ಬೆದರಿಕೆ ಕರೆಗಳು ಬಂದಿವೆ. ಮಾನ, ಪ್ರಾಣ ಹಾನಿ ಮಾಡುವ ಬೆದರಿಕೆ ಹಾಕಿದ್ದಾರೆ.!ಏನೇ ಆಗಲಿ ಕೇಂದ್ರ ಸಚಿವರಿಂದ ಅನ್ಯಾಯಕ್ಕೊಳಗಾದ ಜನರಿಗೆ ಸಾಂತ್ವನ ಹೇಳಲು ನಮ್ಮ ಪ್ರಾಣ, ಮಾನ ಹೋದರು ಚಿಂತಿಲ್ಲ ಏ. 2 ರಂದು ಧಾರವಾಡದಲ್ಲಿ ಭಕ್ತರ ಸಭೆಯನ್ನು ಕರೆಯಲಾಗಿದ್ದು ಅಂದು ತೆಗೆದುಕೊಳ್ಳುವ ನಿರ್ಧಾರದ ಆಧಾರದ ಮೇಲೆ ನಮ್ಮ ನಡೆ ಎಂದಿದ್ದಾರೆ.!
ಪ್ರಲ್ಹಾದ್ ಜೋಶಿ ಸೋಲಿಸೋದು ಶ್ರೀಗಳ ಗುರಿಯೇ?ಕ್ಷೇತ್ರದ ಎಲ್ಲ ಮತದಾರರು ಶ್ರೀಗಳ ಹೇಳಿಕೆಯಂತೆಯೇ ಮತ ಚಲಾಯಿಹಸ್ತಾರಾ?ಇದು ಹಲವು ಮತದಾರರ ಪ್ರಶ್ನೆ!?ಕೆಲವರು ಕೇಳಿದರು ಅಲ್ಲಾ ಸಾರ್‌...ಶ್ರೀಗಳ ನಿರ್ಧಾರ,ಭಾಷಣ ಹೇಳಿಕೆ ಏನೇ ಇರಲಿ,ಈ ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು!ಅವರವರ ನಿರ್ಧಾರ ಅವರವರಿಗೆ ಸೇರಿದ್ದು,ಎಲ್ಲ ಪಕ್ಷದ ಅಬ್ಯರ್ಥಿಗಳು ಮತಯಾಚನೆಗೆ ಬಂದಾಗ ನಮಗೆ ಮತ ಹಾಕಿ ಎಂದಾಗ ಸರಿ ನಿಮಗೇ ನಮ್ಮ ಮತ ಅಂತ ಹೇಳತಾರೆ ವಿನ಼ಃ ಯಾರೂ ಬಾಂಡ್‌ ಬರೆದು ಕೊಡಲ್ಲ!ಮತದಾರರ ನಿರ್ಧಾರ ಮತದಾರರಿಗೆ "ಈ ಶ್ರೀಗಳು ಜೋಷಿಯವರನ್ನು ಬದಲಾಯಿಸಿಯೇ ಬದಲಾಯಿಸುವೆ...ಸೋಲಿಸಿಯೇ ಸೋಲಿಸುವೆ ಎಂದರೇ ಮತದಾರರು ಅವರ ನಿರ್ದೇಶನದಂತೆ ಹೋಗಬೇಕಾ ಸಾರ್‌?ಏನ್‌ ಸಾರ್‌? ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕನ್ನು ನಮಗೆ ಬಿಡಲಾರರಾ?ಎಂದರು!ಕಾಲಾಯ ತಸ್ಮಯೇ ನಮಃ!ಚುನಾವಣೆಯೇ ತಸ್ಮಯೇ ನಮಃ!.ಕೃಷ್ಣಮೂರ್ತಿ ಎಲ್‌ ಕುಲಕರ್ಣಿ ಗರುಡ ಟಿವಿ ಕರ್ನಾಟಕ ನ್ಯೂಸ್‌ ಧಾರವಾಡ 8088625320

"ತನುವರಿತ ಪ್ರಾಣಿಯಾಗಬೇಡ ಓ ಹುಡುಗಾ!ಮನವರಿತು ನೀ ನನ್ನ ಪ್ರಾಣವಾಗು!ಎಷ್ಟು ದಿನ ಇರಬಲ್ಲನೋ ಕಾಮ ನನ್ನ ನಿನ್ನ ಆ ಬಾಡಿಗೆ ದೇಹದಲಿ?ಹೊಸಮನೆ ಸಿಕ್ಕಮ...
31/03/2024

"ತನುವರಿತ ಪ್ರಾಣಿಯಾಗಬೇಡ ಓ ಹುಡುಗಾ!
ಮನವರಿತು ನೀ ನನ್ನ ಪ್ರಾಣವಾಗು!
ಎಷ್ಟು ದಿನ ಇರಬಲ್ಲನೋ ಕಾಮ ನನ್ನ ನಿನ್ನ ಆ ಬಾಡಿಗೆ ದೇಹದಲಿ?
ಹೊಸಮನೆ ಸಿಕ್ಕಮೇಲೆ ಹೇಳದೇ ಕೇಳದೇ ಮನೆ ಖಾಲಿ ಮಾಡುವ ಒಮ್ಮೆ!
ಸೊಕ್ಕಿದ ದೇಹ ಸುಕ್ಕಾದ ಸಮಯಕೆ ಕಾಮನೂ ಕೈಕೊಡುವ... ನೀಯತ್ತಿಲ್ಲ.. ಮುಲಾಜಿಲ್ಲ ಅವನಿಗೆ!
ಹರೆಯ ಕಾಮನ ಮಿತ್ರ.. ಹಿರಿತನ ಅವನ ವೈರಿ ನೀ ಕೇಳು!
ಬರೀ ಬಾಹ್ಯ ಸೌಂದರ್ಯ ನೋಡಿ ಅಪ್ಪಿಕೊಳ್ಳದಿರು...
ಆಂತರಿಕ ಸೌಂದರ್ಯ ನೋಡಿ ನೀ ನನ್ನ ಒಪ್ಪಿಕೋ"!
ಕೃಷ್ಣಮೂರ್ತಿ ಎಲ್‌ ಕುಲಕರ್ಣಿ 8088625320

"ಬಿಡು ಬಿಡೋ ಇನಿಯಾ ಇದ್ಯಾವ ಗೃಹಬಂಧನ? ಲಾಕ್‌ ಡೌನ  ನನಗೆ.?!ನಿನ್ನ ಪ್ರೀತಿಯೇ ತೋರಿಕೆ ಎಂದರಿತ ದಿನವೇ ಮನಸ್ಸಿನ ಬಾಗಿಲು ಮುಚ್ಚಿರುವೆ...!ಈಗ ಮನ...
31/03/2024

"ಬಿಡು ಬಿಡೋ ಇನಿಯಾ ಇದ್ಯಾವ ಗೃಹಬಂಧನ? ಲಾಕ್‌ ಡೌನ ನನಗೆ.?!
ನಿನ್ನ ಪ್ರೀತಿಯೇ ತೋರಿಕೆ ಎಂದರಿತ ದಿನವೇ ಮನಸ್ಸಿನ ಬಾಗಿಲು ಮುಚ್ಚಿರುವೆ...!
ಈಗ ಮನೆಯ ಬಾಗಿಲು ಮುಚ್ಚಿರಲಿ ತೆಗೆದಿರಲಿ ಚಿಂತೆಬೇಡ!
ನೀ ದೂರವಾದಮೇಲೆ ಯಾರನೂ ನಾ ಪ್ರೀತಿಸಲಾರೆ ಎಂದುಕೊಳ್ಳುವ ಜಂಭವೂ ನಿನಗೆ ಬೇಡ!
ನಿನಗಿಂತ ಹೆಚ್ಚು ಪ್ರೀತಿಸುತಿರುವೆ ನಾನಿಂದು "ಒಂಟಿತನವನ್ನ"!!!!...ಕೃಷ್ಣಮೂರ್ತಿ ಎಲ್‌ ಕುಲಕರ್ಣಿ 8088625320

"ಒಂದಮಾವಾಸ್ಯೆ ಇರುಳಲಿ ಚಂದಿರ ಕೇಳಿದ ನನ್ನ!ಲೋ ಕಿಟ್ಟೀ...ಎಲ್ಲೆಡೆ ಕತ್ತಲು! ಮುಗಿಲೇ ಕತ್ತಲನು ಹೊದ್ದು ಮಲಗಿರುವಾಗ ಅದು ಹ್ಯಾಗೋ ನಿನ್ನಂಗಳದಲಿ ...
31/03/2024

"ಒಂದಮಾವಾಸ್ಯೆ ಇರುಳಲಿ ಚಂದಿರ ಕೇಳಿದ ನನ್ನ!
ಲೋ ಕಿಟ್ಟೀ...ಎಲ್ಲೆಡೆ ಕತ್ತಲು! ಮುಗಿಲೇ ಕತ್ತಲನು ಹೊದ್ದು ಮಲಗಿರುವಾಗ ಅದು ಹ್ಯಾಗೋ ನಿನ್ನಂಗಳದಲಿ ಆ ನೈಜ ಬೆಳಕು?????
ನಾ ಮುಗುಳು ನಗುತಾ ಹೇಳಿದೆ.."ನನ್ನಂಗಳದಲಿ ನನ್ನ ಹುಡುಗಿ ನಗುತಿಹಳು ಕಣೋ.. ಅದಕೇ"!!!
ಕೃಷ್ಣಮೂರ್ತಿ ಎಲ್‌ ಕುಲಕರ್ಣಿ 8088625320

Address

Dharwad
580004

Telephone

+919743290793

Website

Alerts

Be the first to know and let us send you an email when Garuda TV Karnataka posts news and promotions. Your email address will not be used for any other purpose, and you can unsubscribe at any time.

Videos

Share


Other Dharwad media companies

Show All