Nammadu Chikkaballapura/ನಮ್ಮದು ಚಿಕ್ಕಬಳ್ಳಾಪುರ

Nammadu Chikkaballapura/ನಮ್ಮದು ಚಿಕ್ಕಬಳ್ಳಾಪುರ Catch the latest updates about Chikkaballapur District at your fingertips. Indeed we here for you as
(3)

ಚಿಕ್ಕಬಳ್ಳಾಪುರ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಮುಂಚೆ ಕೋಲಾರ ಜಿಲ್ಲೆಯಲ್ಲಿನ ಒಂದು ತಾಲೂಕು ಆಗಿದ್ದ ಇದು ೨೦೦೮ ರಲ್ಲಿ ಜಿಲ್ಲಾ ಅಡಳಿತ ಕೇಂದ್ರವಾಯಿತು. ಈ ಜಿಲ್ಲೆಗೆ ಸರ್. ಎಮ್. ವಿಶ್ವೇಶ್ವರಯ್ಯ ಜಿಲ್ಲೆ ಎಂದು ನಾಮಕರಣ ಮಾಡುವ ಅಪೇಕ್ಷೆ ಜನರಲ್ಲಿದೆ. ಇಲ್ಲಿಗೆ ಹತ್ತಿರ ಇರುವ ನಂದಿ ದೇವಸ್ಥಾನ ಬಹಳ ಪ್ರಾಚೀನ ದೇವಸ್ಥಾನ. ಇಲ್ಲಿ ಶಿವನ ಲಿಂಗಗಳೆರಡು ಇವೆ. ಗಂಗ, ಕದಂಬರಿಗಿಂತ ಹಳೆಯ ಶಿಲಾಶಾಸನಗಳನ್ನು ಇಲ್ಲಿ ನಾವು ಕಾಣಬಹುದು. ಅಂಗ್ಲರಲ್ಲಿನ ಪ್ರಮುಖರಾದ ಲಾರ್ಡ ಕಾರ್ನ್ವಾಲಿಸ್ ಸಹ ಇಲ್ಲಿ ಕೆಲ

ವು ದಿನ ಇದ್ದ ಎನ್ನುವ ಶಾಸನಗಳನ್ನು ಕಾಣಬಹುದು. ಇಲ್ಲಿಗೆ ಸಮೀಪ (೨೫ ಕಿ.ಮಿ.) ಇರುವ ಮಾಕಿರೆಡ್ಡಿಪಲ್ಲಿಯಲ್ಲಿ ಮುತರಾಯಸ್ವಾಮಿ ದೇವಸ್ಥಾನವು ಸಹ ಬಹಳ ಪ್ರಾಚೀನವಾದ ದೇವಸ್ಥಾನ. ಇಲ್ಲಿ ಶ್ರೀರಾಮ ನವಮಿಯ ದಿನ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ನಂದಿ ಬೆಟ್ಟ ಇಲ್ಲಿಯ ಪ್ರಮುಖ ಗಿರಿಧಾಮ. ಚಿಕ್ಕಬಳ್ಳಾಪುರ ಮೆಣಸಿನಕಾಯಿ ತುಂಬ ಪ್ರಸಿದ್ಧಿ. ಇಲ್ಲಿನ ರೈತ ಸಮುದಾಯ ಬಹಳ ಪ್ರಗತಿ ಪರ ರೈತರನ್ನು ಹೊಂದಿದೆ.
೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೧೨,೫೫,೧೦೪. ಇದರಲ್ಲಿ ಪುರುಷರು ೬,೩೬,೪೩೭ ಹಾಗೂ ಮಹಿಳೆಯರು ೬,೧೮,೬೬೭. ಲಿಂಗಾನುಪಾತ ೯೭೨ ಸಾಂದ್ರತೆ ೨೯೬.ಸಾಕ್ಷರತೆ ಪ್ರಮಾಣ ೬೯.೭೬.
೧. ಬಾಗೇಪಲ್ಲಿ ೨. ಚಿಕ್ಕಬಳ್ಳಾಪುರ ೩. ಚಿಂತಾಮಣಿ ೪. ಗೌರಿಬಿದನೂರು ೫. ಗುಡಿಬಂಡೆ. ೬.ಶಿಡ್ಲಘಟ್ಟ.
ಚಿಂತಾಮಣಿ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಕೈವಾರ, ಮುರುಗಮಲ್ಲ, ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿವೆ. ಪ್ರತಿ ಭಾನುವಾರ ಚಿಂತಾಮಣಿ ಸಂತೆಯಲ್ಲಿ ಕೋಟ್ಯಂತರ ವಹಿವಾಟು ನಡೆಯುತ್ತದೆ. ಕೃಷಿ ಉತ್ಪನ್ನಗಳಿಂದ ಹಿಡಿದು ಜಾನುವಾರುಗಳವರೆಗೆ ಭಾರೀ ವಹಿವಾಟು ನಡೆಯುತ್ತದೆ. ತಾಲೂಕಿನಲ್ಲಿ ಸಾಹಿತ್ಯಪ್ರೇಮ ಅಷ್ಟಾಗಿ ಕಂಡು ಬರದಿದ್ದರೂ ಖ್ಯಾತ ಕವಿ ಬಿ.ಆರ್. ಲಕ್ಷ್ಮಣರಾವ್ ಚಿಂತಾಮಣಿಯವರಾಗಿರುವುದು ಹೆಮ್ಮೆಯ ಸಂಗತಿ. ಪಟ್ಟಣಕ್ಕೆ ಚಿಂತಾಮಣಿ ಎಂಬ ಆಕರ್ಷಕ ಹೆಸರು ಬಂದಿರುವುದರ ಹಿಂದೆ ಸ್ವಾರಸ್ಯಕರ ಕಥೆಯಿದೆ. ಈ ಪ್ರಾಂತ್ಯ ಹಿಂದೆ ಮರಾಠರ ಆಳ್ವಿಕೆಯಲ್ಲಿತ್ತು. ಆಗಿನ ರಾಜ ಚಿಂತಾಮಣಿರಾವ್ ಪಟ್ಟಣವನ್ನು ನಿರ್ಮಿಸಿದ. ಹಾಗೆಯೇ ಪಟ್ಟಣಕ್ಕೆ ತುಸು ದೂರದಲ್ಲಿರುವ ದೊಡ್ಡ ಬೆಟ್ಟಗಳಿಗೆ ಅಂಬಾಜಿ ದುರ್ಗ ಎಂದು ಹೆಸರಿಡಲಾಗಿದೆ. ಈ ಅಂಬಾಜಿ ರಾವ್ ಸಹ ಮರಾಠ ರಾಜನಾಗಿದ್ದ. ಪಟ್ಟಣದ ಹೃದಯ ಭಾಗದಲ್ಲಿರುವ ವರದಾಂಜನೇಯ ಬೆಟ್ಟ ಊರಿಗೆ ಕಳಶ ಪ್ರಾಯವಾಗಿದೆ. ಚಿಕ್ಕಬಳಾಪುರ ಜಿಲ್ಲೆ ಯ ಬಗ್ಗೆ ಮಾಹಿತಿ ಗಾಗಿ: http://www.chikballapur.nic.in

Address

Chik Ballapur
562101

Alerts

Be the first to know and let us send you an email when Nammadu Chikkaballapura/ನಮ್ಮದು ಚಿಕ್ಕಬಳ್ಳಾಪುರ posts news and promotions. Your email address will not be used for any other purpose, and you can unsubscribe at any time.

Contact The Business

Send a message to Nammadu Chikkaballapura/ನಮ್ಮದು ಚಿಕ್ಕಬಳ್ಳಾಪುರ:

Share


Other News & Media Websites in Chik Ballapur

Show All