08/12/2024
ಸುಕ್ಷೇತ್ರ ಎಲ್ಲಮ್ಮ ದೇವಸ್ಥಾನ ಶಿವಪುರ ಗಲ್ಲಿ ಇದರ ಸರ್ವಾಂಗೀಣ ಅಭಿವೃದ್ಧಿ ಗೆ ನಿರ್ಧಾರ
ಹುಮನಾಬಾದ್ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಗೆ ಹೊಂದಿಕೊಂಡಿರುವ ಐತಿಹಾಸಿಕ ಸುಕ್ಷೇತ್ರ ಎಲ್ಲಮ್ಮ ದೇವಸ್ಥಾನ ಶಿವಪುರ ಗಲ್ಲಿ. ಇದರ ಸರ್ವಾಂಗೀಣ ಅಭಿವೃದ್ಧಿಗೆ ಒಮ್ಮತದ ನಿರ್ಣಯವನ್ನು ಭಾನುವಾರ ತೆಗೆದುಕೊಳ್ಳಲಾಯಿತು.
ದೇವಸ್ಥಾನದ ಮಹಾದ್ವಾರ, ರಸ್ತೆ, ಚರಂಡಿ, ಭಕ್ತರಿಗೆ ಅಸನದ ವ್ಯವಸ್ಥೆ, ಸ್ನಾನದ ಕೋಠಡಿ, ಕಲ್ಯಾಣ ಮಂಟಪ, ಹಾಗೂ ಸೌದತ್ತಿ ಎಲ್ಲಮ ದೇವಿಯ ಹಾಗೆ ಗರ್ಭಗುಡಿ. ಸೇರಿದಂತೆ ಇತರೆ ಮೊಲಭೊತ ಸೌಕರ್ಯಗಳನ್ನು ಒದಗಿಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಅನುದಾನಕ್ಕಾಗಿ, ಜಿಲ್ಲೆಯ ಸಚಿವರುಗಳು,ಶಾಸಕರುಗಳು,ಮಾಜಿ ಸಚಿವರು, ಮಾಜಿ ಶಾಸಕರು,ಪುರಸಭೆ, ಸೇರಿದಂತೆ ಇತರರಿಂದ ಪಕ್ಷಬೇಧ ಎನ್ನದೆ ಅನುದಾನಕ್ಕೆ ಮೊರೆ ಹೊಗಲು ನಿರ್ಧರಿಸಲಾಯಿತು.
ಇದರ ಅಭಿವೃದ್ಧಿ ಗೆ ರು.2 ರಿಂದ 3 ಕೋಟಿಯ ನೀಲಿ ನಕ್ಷೆ ತೈಯಾರಿಸಿ. ಅದರ ಅನುಗುಣವಾಗಿ ಕೆಲಸ ನಿರ್ವಹಣೆ ಮಾಡ ಬೇಕು ಎಂದು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಈ ಸಭೆಯಲ್ಲಿ, ಶರಣರಡ್ಡಿ ಕನಕಟಕರ್, ಶಿವಾರಡ್ಡಿ ಮುಡಬಿ, ರಮೇಶರಡ್ಡಿ ಉಸ್ತೇಲಿ, ಬ್ಯಾಂಕ್ ರಡ್ಡಿ ಮುಡಬಿ,ಮಾಣಿಕರಡ್ಡಿ ಕರಣಿ, ರವಿರಡ್ಡಿ ಮಂಡಾ, ಜಗನ್ನಾಥರಾವ ಧುಮಾಳೆ, ಸಿದ್ದಾರಡ್ಡಿ, ಮುಡಬಿ, ಮಚೇಂದ್ರರಡ್ಡಿ ಯನಪುಸಿ,ಭೊಜರಡ್ಡಿ ವಾಂಜರಿ, ವಿರಾರರಡ್ಡಿ ಪೇದ್ಮಲ್, ಪ್ರಭುರಡ್ಡಿ ಕರ್ಣಿ,ರಾಜರಡ್ಡಿ ಕರಣಿ, ರಾಮರಡ್ಡಿ ಕಂಚಟಿ, ಜಯಕಾಂತರಡ್ಡಿ ಕೌಡಿಯಾಳ, ಮಾಣಿಕರಡ್ಡಿ ಕೇಶುಲ,ಶ್ರೀನಿವಾಸರಡ್ಡಿ, ಸುಬ್ಬಾರಡ್ಡಿ ಮುಡಬಿ, ನಿಂಗಾರಡ್ಡಿ, ಮುಡಬಿ ಗೊಂದಳಿ ಸಮಾಜದ ರಾಜ್ಯಾಧ್ಯಕ್ಷ ಸಿದ್ರಾಮ ವಾಘಮಾರೆ, ಮಲ್ಲಿಕಾರ್ಜುನ ರಡ್ಡಿ ಕೇಶುಲ್, ಪ್ರಬುರಡ್ಡಿ, ರಮೇಶ ಜಾಧವ,ನಾಗಿಂದರ ಜಾಧವ, ಸೇರಿದಂತೆ ಇತರರಿದ್ದರು