Belagavi Darpana

Belagavi Darpana "Life isn't about finding yourself. Life is about creating yourself.”

https://youtu.be/beN7md-ybss
04/03/2023

https://youtu.be/beN7md-ybss

best relaxing music | best relaxing music on alexaLooking for the best relaxing music to unwind after a long day? Look no further! In this video, we've compi...

"Life isn't about finding yourself. Life is about creating yourself.”
13/01/2023

"Life isn't about finding yourself. Life is about creating yourself.”

Mind Relaxing Music| Anytime Relaxing MusicA slower tempo can quiet your mind and relax your muscles, making you feel soothed while releasing the stress of t...

https://youtu.be/tV2NXsD-y5o
11/11/2022

https://youtu.be/tV2NXsD-y5o

Bullet Juicer Jars - Compatible with any Mixer (Free Sipper and Cover Caps), 300ml & 500ml you want buy it at the below mentione...

03/11/2022

02/11/2022

Karnataka Rajyotsava 2022 😍😍
Channama Circle, Belagavi...
VC & Edit

01/11/2022

ಜೈ ಕರ್ನಾಟಕ

01/11/2022
31/10/2022

ಬೆಳಗಾವಿಗೆ ಸುಸ್ವಾಗತ

https://youtu.be/UJQ6B5aqfps
12/06/2022

https://youtu.be/UJQ6B5aqfps

Some times whether we are interested or not we face the harassment from police but no need to worry about this, every one is equal in front of law. so we hav...

https://youtu.be/A7W1MfknAIY
10/06/2022

https://youtu.be/A7W1MfknAIY

If false or fake FIR filed against you, you need to take further actions under law.1.You can approach senior officer2.Consult Your lawyer3.Apply for anticipa...

https://youtu.be/w_Kdqm0A7os
08/06/2022

https://youtu.be/w_Kdqm0A7os

ಕಾನೂನು ಹೋರಾಟದಲ್ಲಿ ಗೆದ್ದವ ಸೋತ ಸೋತವ ಸತ್ತ, ಅನ್ನೋ ಮಾತು ಹಿಂದೆ ಬಹಳ ಪ್ರಚಲಿತದಲ್ಲಿತ್ತು. ಆದರೆ ಈಗ ಮಧ್ಯಸ್ಥಿಕೆ ಮತ್ತು ಲೋಕ ಅದಾಲ...

24/01/2022

#ಅಮ್ಮ_ಹೆಂಡತಿ_ಮಕ್ಕಳು Must Read 👇

"ನಿವೃತ್ತಿಯಾದ ಮೊದಲ ದಿನ ನಾನು ಮೊದಲು ಮಾಡುವ ಕೆಲಸವೆಂದರೆ ನನ್ನ ಅಮ್ಮನನ್ನು
ವೃಧ್ಧಾಶ್ರಮಕ್ಕೆ ಸೇರಿಸುವುದು..."

ನನ್ನ ಮನೆಯಲ್ಲಿ ನಾನು ಈ ಮಾತುಗಳನ್ನು ಹೇಳುತ್ತ ಹೇಳುತ್ತ ಒಂದು ವರುಷವಾಯಿತು.....

ಇನ್ನು ಈ ಕೆಲಸವನ್ನು ಮುಂದು ಹಾಕುವಂತಿಲ್ಲ...

ಯಾಕೆಂದರೆ ನಿನ್ನೆ ನನಗೆ ನಿವೃತ್ತಿ ಯಾಯಿತು...

ನನ್ನ ಹೆಂಡತಿ ಮಕ್ಕಳೆಲ್ಲ ಈ ದಿನಕ್ಕಾಗಿಯೇ ಕಾದು ಕುಳಿತವರಂತೆ ಇದ್ದಾರೆ..

ನನ್ನ ಅಮ್ಮ ಆರೊಗ್ಯವಾಗಿಯೇ ಇದ್ದವಳು,ಸುಮಾರು ಎರಡೂವರೆ ವರುಷಗಳಿಂದ ಅನಾರೋಗ್ಯಕ್ಕೆ ಬಿದ್ದಳು...

ಇತ್ತೀಚೆಗೆ ಒಂದು ವರುಷದಿಂದ
ಮಲ ಮೂತ್ರ ವಿಸರ್ಜನೆಯ ಮೇಲೆ ಕೂಡಾ ಅವಳಿಗೆ ನಿಯಂತ್ರಣವಿಲ್ಲ...

ಬೆಳಗ್ಗೆ ರಾತ್ರಿ ಅವಳನ್ನು ನಾನು ನೋಡಿ ಕೊಳ್ಳಬಲ್ಲೆ...

ಆದರೆ ನಾನು ಕೆಲಸಕ್ಕೆ ಹೋದಾಗ ಅವಳನ್ನು ನೋಡಿ ಕೊಳ್ಳಬೇಕಾದವಳು ಇವಳೇ ... ಅಂದರೆ ನನ್ನ ಹೆಂಡತಿಯೇ...

ನನಗಾದರೂ ಅವಳು
ತಾಯಿ..ನನ್ನವಳಿಗೆ ಅವಳು ತಾಯಿಯಾ..?

ನನ್ನ ಸಿಡುಕಿನ ನೋಟಕ್ಕೆ ಬೆದರಿ ಇವಳು ಅತ್ತೆಯ ಚಾಕರಿ ಮಾಡುತ್ತಿದ್ದಾಳೆ.

ಆದರೆ ಇವಳ ಮುಖದಲ್ಲೊಂದು ತಿರಸ್ಕಾರದ ನೋಟ ಚಿರ ಸ್ಥಾಯಿಯಾಗಿ ನಿಂತ ಹಾಗೆ ನನಗೆ ಕಾಣಿಸುತ್ತಿದೆ..

ಇವಳಿಗಾದರೂ ಈ ಭಾವ ಸಹಜವೇ... ಹೊರಗಿನಿಂದ ಬಂದವಳು....

ಆದರೆ ನನ್ನ
ಮಕ್ಕಳಿಗೂ ಅನಾರೋಗ್ಯದ ಅಜ್ಜಿ ಬೇಡವೆನ್ನಿಸುವುದು ನನಗೆ ದಿಗಿಲು ಹುಟ್ಟಿಸುವುದು.....

ಅಭಿಲಾಷ್ ಆದರೂ ಹುಡುಗ... ಮುಲಾಜಿಲ್ಲದೆ ಹೇಳಿದ್ದ"ಅಮ್ಮಾ ನನ್ನ ಫ್ರೆಂಡ್ಸ್ ಇರುವಾಗ ಅಜ್ಜಿಯನ್ನು ಹೊರಗೆ ಬಿಡಬೇಡ"

ಆದರೆ ನನ್ನ ಮಗಳು ಶಿಶಿರ "ಅಬ್ಬಾ ,ಅಜ್ಜಿ ಗಬ್ಬು ನಾತ...ವ್ಯಾಕ್" ಅಂದಾಗ ಸಿಟ್ಟು ನೆತ್ತಿಗೇರಿತ್ತು...

"ಮಕ್ಕಳೇ.. ಸ್ವಲ್ಪ ಕಾಲ ಸಹಿಸಿ.. ನನ್ನ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ " ಅಂದಿದ್ದೆ...

ಹೆಂಡತಿ ಮಕ್ಕಳೇನೋ ಸುಮ್ಮನಾದರು...

ಆದರೆ ಅಮ್ಮ ಅಂದಿನಿಂದ ಮತ್ತಷ್ಟು ಮೌನಿಯಾದಳು...
*************************
ಇಂದು ನನ್ನ ನಿವೃತ್ತಿಯ ಮೊದಲ ದಿನ .

ಅಮ್ಮನ ಪ್ರಾಃತ ವಿಧಿಗಳನೆಲ್ಲ
ಮುಗಿಸಿ ನಾವು ಹೊರಟು ನಿಂತೆವು...

ಯಾಕೋ ಹೆಂಡತಿ ಮಕ್ಕಳೂ ಹೊರಟು ನಿಂತರು...

ಅಮ್ಮನ ಮುಖದಲ್ಲಿ ಕಳೆ ಇಲ್ಲ...

"ವೃಧ್ಧಾಶ್ರಮಕ್ಕೆ ಸೇರಿಸುತ್ತೇನೆ " ಎಂದ ಮಗನ ಮಾತು ಇವಳ ಕಿವಿಗೂ ಬಿದ್ದಿರಬೇಕು.

ಬಲಿ ಪೀಠಕ್ಕೆ ಕರೆದೊಯ್ಯುವ ಮೇಕೆಯಂತೆ ಉಸಿರೆತ್ತದೆ ಮಗ ಕರೆದಲ್ಲಿ ಬರುತ್ತಾಳೆ.

ನಾವೆಲ್ಲರೂ ಕಾರಿನಲ್ಲಿ ಕುಳಿತೆವು.

ಮಗರಾಯ ಕಾರನ್ನು ಚಲಾಯಿಸುತ್ತೇನೆ ಅಂದ.

ಅವನಿಗೆ ಕೊಡದೆ ನಾನೇ ಕಾರನ್ನು ಚಲಾಯಿಸಿಕೊಂಡು ಬಂದೆ..

ಒಂದು ಹಂಚಿನ ಮನೆಯ ಬಳಿ ಕಾರು ನಿಲ್ಲಿಸಿದೆ..

ಹಾರನ್ ಮಾಡಿದೆ..

ಮನೆಯೊಳಗಿನಿಂದ ನನ್ನ ಗೆಳೆಯ ಓಡೋಡಿ ಬಂದ..

ನಾನು ಕಾರಿನ ಬಾಗಿಲು ತೆಗೆದು ಅಮ್ಮನನ್ನು ಕೆಳಗಿಳಿಸಿದೆ..

"ವೃದ್ಧಾಶ್ರಮ ಅಲ್ವಾ..?" ಹೆಂಡತಿ
ಬಾಯಿ ತೆಗೆದಳು...

ನಾನು ಮಾತನಾಡದೆ ಅಮ್ಮನನ್ನು ಕರೆದು ಕೊಂಡು ಮನೆಯ ಒಳಗೆ ಕರೆದು ಕೊಂಡು ಬಂದೆ...

ಒಂದು ಬೆಡ್ ರೂಂ... ಒಂದು ಹಾಲ್ ಒಂದು ಕಿಚನ್.... ನನ್ನ ಗೆಳೆಯ ಸರಿಯಾದ ಚಿಕ್ಕ ಮನೆಯನ್ನೇ ಆಯ್ದು ಕೊಂಡಿದ್ದ.
.ಬಾಡಿಗೆಯ ಮನೆ... ಗೆಳೆಯ ಮನೆಯ ಕೀಲಿ ಕೈ ಕೊಟ್ಟು ಹೊರಟ..

"ಏನಿದು ಆವಾಂತರ... ಅತ್ತೆಯನ್ನು ಇಲ್ಲಿ ನೋಡಿ ಕೊಳ್ಳುವವರು ಯಾರು?"
ನನ್ನವಳ ಪ್ರಶ್ನೆ..

"ಅವಳ ಮಗ ನಾನು ಜೀವದಲ್ಲಿ ಇದ್ದೇನೆ" ನನ್ನ ಉತ್ತರ.

"ಅಂದರೆ ನೀವು ಇಲ್ಲಿ ನಿಂತು ಅಮ್ಮನನ್ನು ನೋಡಿ ಕೊಳ್ಳುತ್ತೀರಾ?"

"ಹಾಗೆಂದು ಕೊಳ್ಳಬಹುದು" ಎಂದೆ...

"ನಮ್ಮ ಗತಿ..?" ಹೆಂಡತಿಯ ಪ್ರಶ್ನೆ...

"ಮನೆಯ ಖರ್ಚು ನನ್ನದೇ" ನನ್ನ ಉತ್ತರ.

"ಮನೆಯಲ್ಲಿ ನೀವಿಲ್ಲದೆ ಇದ್ದರೆ ಭಯ ಅಗುತ್ತೆ".

"ಮಗ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ.ಏನು ಭಯವೇ" ಅಂದೆ.

"ಅಯ್ಯೋ ನೀವಿಲ್ಲದ ಮನೆಯೆ".
ಇವಳ ಕಣ್ಣಲ್ಲಿ ಗಂಗಾ ಪ್ರವಾಹ..

ಅಮ್ಮನ ಕಣ್ಣಲ್ಲಿ ಅಶ್ರುಧಾರೆ..

ಅವಳನ್ನು ವೃದ್ದಾಶ್ರಮಕ್ಕೆ ಸೇರಿಸುತ್ತೇನೆ ಅಂದು ಕೊಂಡಿರಬೇಕು..
ಈಗ ಅವಳ ಕಣ್ಣಲ್ಲಿ ಸಂತೋಷ ಉಕ್ಕಿ ಹರಿಯುತ್ತಿದೆ.

ಅವಳನ್ನು ಮಂಚದ ಮೇಲೆ ಮಲಗಿಸಿದೆ...

ಮಗ, ಮಗಳು, ಇವಳು ಎಲ್ಲರು
ಸ್ಥಭ್ದ ಚಿತ್ರದ ಹಾಗೆ ಮೂಗರಾಗಿದ್ದಾರೆ..

ಮಗ ಬಾಯಿ ತೆಗೆದ" ಅಪ್ಪಾ ಇದೆಲ್ಲ ಏನು nonsence...?

ನಾನೆಂದೆ"ಮಗಾ ನಿನಗೆ ನಿನ್ನ ಫ್ರೆಂಡ್ಸ್ ಮನೆಗೆ ಬರುವಾಗ ನನ್ನ ಅಮ್ಮ ಮನೆಯಲ್ಲಿದ್ದರೆ..ಅದು shame.... ಅನ್ನಿಸುತ್ತಿತ್ತಲ್ಲ... ಅದು nonsense...

ನಾನೂ ಅಮ್ಮ ಇಲ್ಲಿರುತ್ತೇವೆ.. ನೀವು ಮನೆಗೆ ಹೋಗಿ ಮಗೂ.. ಚೆನ್ನಾಗಿರಿ".

"ಅಪ್ಪಾ "
ಮಗಳು ಮಾತಿಲ್ಲದೆ ನಿಂತ ಅಣ್ಣನ ಸಹಾಯಕ್ಕೆ ಬರುತ್ತಾಳೆ, "ಅಜ್ಜಿಗೆ ನೀನೊಬ್ಬನೇ ಮಗನಾ. ಮೂರು ಮಂದಿ ಮಕ್ಕಳಲ್ವಾ... ನೀನೆ ಯಾಕೆ ಅಜ್ಜಿಯನ್ನು ನೋಡಿಕೊಳ್ಳ ಬೇಕು...?"

ಇದು ಇವಳ ಮಾತಲ್ಲ... ಯಾವತ್ತೋ ಇವಳ ಅಮ್ಮನಾಡಿದ ಮಾತು.. ಅದನ್ನೇ
ಉರು ಹೊಡೆದು ಹೇಳುತ್ತಿದ್ದಾಳೆ... ನನ್ನವಳು ಏನೂ ತಿಳಿಯದ ಹಾಗೆ ಕುಳಿತಿದ್ದಾಳೆ.

"ಮಗಳೇ... ನನಗಾಗ ಆರೇಳು ವರ್ಷ ಇರಬಹುದು. ಅಪ್ಪ ತೀರಿ ಹೋಗಿ ಎರಡೋ ಮೂರೋ ವರ್ಷಗಳಾಗಿತ್ತು. ... ನನಗೆ ವಾಂತಿ ಬೇಧಿ ಆರಂಭವಾಯಿತು... ನಮ್ಮದು ಹಳ್ಳಿ... ವಾಹನದ ಸೌಕರ್ಯ ಇರಲಿಲ್ಲ ಮಗಾ... ಹಳ್ಳಿಯ ನಾಟಿ ಮದ್ದು ನಾಟಲಿಲ್ಲ.

ಮಗೂ... ನಾನು ಬದುಕುವ ಆಸೆ ಯಾರಿಗೂ ಇರಲಿಲ್ಲವಂತೆ.

ಅರೆ ನಿರ್ಜೀವ ಸ್ಥಿತಿಯಲ್ಲಿದ್ದ ನನ್ನನ್ನು ಇದೇ ನನ್ನ ಅಮ್ಮ ಆ ಹೆಗಲ ಮೇಲೆ ಹಾಕಿ ಆರು ಮೈಲು ನಡೆದು ವೈದ್ಯರ ಹತ್ತಿರ ಕೊಂಡು ಹೋಗಿ ಇಂಜೆಕ್ಷನ್ ಚುಚ್ಚಿಸಿ ಮತ್ತೆ ಆರು ಮೈಲು ಹೊತ್ತು ನಡೆದು. ಬದುಕಿಸಿದಳು.

ದೇವಾ... ಇಂತಹ ಅಮ್ಮನಿಗೆ ಈಗಮಲಮೂತ್ರದ ಮೇಲೆ ನಿಯಂತ್ರಣ ಇಲ್ಲ ಮಗೂ.

ಹೆಣ್ಣಾದ ನಿನಗೂ ನಿನ್ನಮ್ಮನಿಗೂ ಇದು ಅಸಹ್ಯ ಅಂತ ಆದರೆ ,ನನ್ನ ಅಣ್ಣಂದಿರ ಹೆಂಡಂದಿರಿಗೂ ನನ್ನ ಅಮ್ಮ ಈ ವೃಧ್ದಾಪ್ಯದಲ್ಲಿ ಅಸಹ್ಯವೇ ಆಗುವಳು ಮಗೂ....

ಈ ಪ್ರಾಯದಲ್ಲಿ ಅವಳು ಯಾರಿಗಾದರೂ ಅಸಹ್ಯ ಅನ್ನಿಸಿದರೆ ಅವಳ ಮಗನಾದ ನನಗೆ ಹೇಗಾಗಬೇಡ...?

ಬೇಡ ಮಗೂ ,ನನ್ನ ಅಮ್ಮ ನನಗೆ ಅಸಹ್ಯವಲ್ಲ... ಸಾಯುವವರೆಗೆ ನಾನು ಅವಳಿಗೆ ಮಗನಂತೆ ಅಲ್ಲ... ಮಗಳಂತೆ ಅವಳ ಸೇವೆ ಮಾಡುತ್ತೇನೆ.. ನೀವು ಹೋಗಿ... ನಾನು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತೇನೆ.... ಅಮ್ಮನಿರುವ ವರೆಗೆ ಮಾತ್ರ..."

ಹೆಂಡತಿ ಕೈ ಜೋಡಿಸುತ್ತಾಳೆ.." ಬನ್ನಿ ನಮ್ಮದು ತಪ್ಪಾಯ್ತು,ಅತ್ತೆಯನ್ನು ಅಮ್ಮ ಅಂತ ತಿಳಿದು ಕೊಳ್ಳುತ್ತೇನೆ. ನೀವಿಲ್ಲದ ಮನೆ ನನಗೆ ಮನೆಯೇ... ಹೋಗುವ ಬನ್ನಿ.. "ಅವಳಿಗೆ ಗಾಬರಿಯಾಗಿದೆ.

"ಮಕ್ಕಳೇ "
ನಾನು ಹೇಳುತ್ತೇನೆ" ಈ ಮಲ ಮೂತ್ರಗಳೆಲ್ಲ ಮಾನವನ ಜೀವನದ ಅನಿವಾರ್ಯ ಸಂಗತಿಗಳು... ಅದು ಬೇಡ ಅನ್ನಿಸಿದರೆ ಯಾವ ಹೆಣ್ಣೂ ಹೆರಲಾರಳು... ಯಾವ ದಾದಿಯೂ ಕೂಡಾ ಸೇವೆ ಸಲ್ಲಿಸಲಾರಳು .. ಯಾವ ಡಾಕ್ಟರ್ ಕೂಡಾ ಡಾಕ್ಟರ್ ಅಗಲಾರ.....

ಇನ್ನು ಬದುಕಿ ಉಳಿದರೆ ನಾನೂ ಮುದುಕನಾಗುತ್ತೇನೆ... ಆರೋಗ್ಯದ ವಿಷಯ ನನ್ನ ಕೈಯಲ್ಲಿ ಇಲ್ಲ.. ನನ್ನಮ್ಮನಿಗಾದರೂ ನಾನಿದ್ದೆ... ಈಗಿನ ಮಕ್ಕಳು ನಮ್ಮ ಕೊನೆಗಾಲದಲ್ಲಿ ನಮ್ಮ ಸೇವೆ
ಮಾಡಬೇಕೆಂಬ ನಿರೀಕ್ಷೆಯೂ ತಪ್ಪೆ...

ನೀವು ಮನೆಗೆ ಹೋಗಿ... ವೃದ್ಧರಿಲ್ಲದ ಮನೆ ಸ್ವಚ್ಛ ಸುಂದರ ಮತ್ತು ನೆಮ್ಮದಿಯದ್ದು ಹೋಗಿ ಬನ್ನಿ"

ಮಗ ಕದಲಿ ಹೋದ

"ಅಪ್ಪಾ ಮಕ್ಕಳು ತಪ್ಪು ಮಾಡಿದರೆ ಕ್ಷಮಿಸಬೇಕಾದುದು,ತಪ್ಪಿದ್ದರೆ ಸರಿ ದಾರಿಯಲ್ಲಿ ನಡೆಸಬೇಕಾದುದು ಹಿರಿಯರ ನೀತಿಯಲ್ಲವೇನಪ್ಪ... ನೀವು ನಮ್ಮ ಕಣ್ಣ ತೆರೆಸಿದಿರಿ... ನಿಮ್ಮ ಅಮ್ಮನನ್ನು ನೀವು ನೋಡಿಕೊಂಡಂತೆ ನಾವು ಕೂಡ ಅಜ್ಜಿಯನ್ನೂ , ನಿಮ್ಮಿಬ್ಬರನ್ನೂ ಕೊನೆ ಕಾಲದ ವರೆಗೆ ಪ್ರೀತಿ.. ಗೌರವದಿಂದ ನೋಡಿ ಕೊಳ್ಳುತ್ತೇವೆ.."

ಮೂವರೂ ಅಳುತ್ತಾ ನನ್ನ ಕಾಲಿಗೆ ಬಿದ್ದರು... ನಾನೆಂದೆ "ನೀವು ಬೀಳಬೇಕಾದುದು ಈ ಕಾಲುಗಳಿಗಲ್ಲ..ಆ ಕಾಲುಗಳಿಗೆ".

ಅಮ್ಮನಿಗೆ ಎಷ್ಟು ಅರ್ಥವಾಯಿತೋ... ಅವಳ ಸೊಸೆಯೂ ಮೊಮ್ಮಕ್ಕಳೂ ಅವಳ ಕಡ್ಡಿಯಂತಿರುವ ಕಾಲಿಗೆ ಬೀಳುವಾಗ ಅವಳ ಒಣ ಕಣ್ಣುಗಳು ಒದ್ದೆಯಾಗಿದ್ದವು..

ಇದು ಕಥೆಯಲ್ಲ..
ನಮ್ಮ ಮುಂದಿರುವ ಹಿರಿಯ ಜೀವಗಳ ವ್ಯಥೆ.

ಬರಹ ಕೃಪೆ:
ಬರೆದವರು ಯಾರೆಂದು ತಿಳಿದಿಲ್ಲ.

ಇಂತಹ ಕಣ್ಣುತೆರೆಸುವ ಬರಹಕ್ಕೆ ನಿಮಗಿದೋ ನನ್ನ ಅನಂತಾನಂತ ಧನ್ಯವಾದಗಳು. *ವ್ಯಾಟ್ಸಪ್ ಗ್ರೂಪ್ ನಲ್ಲಿ ಷೇರ್ ಆಗಿದ್ದು ಮನ ಮುಟ್ಟಿದ ಹೃದಯ ತಟ್ಟುವ ಸಂದೇಶ ವನ್ನು ಯಥಾವತ್ತಾಗಿ ನಿಮ್ಮೊಡನೆ ಹಂಚಿಕೊಳ್ಳುವ ಇಚ್ಚೆಯಿಂದ ಅಷ್ಟೆ*
Must Read☝

07/01/2022
02/01/2022

ನಾಡದ್ರೋಹಿಗಳ ಮುಖಕ್ಕೆ ಮಸಿ ಬಳಿದ ಹೆಮ್ಮೆಯ ಕನ್ನಡಿಗರನ್ನಾ, ಇನ್ನೂ ಕೂಡ ಬಿಡುಗಡೆಗೊಳಿಸಿಲ್ಲಾ. ಅದಲ್ಲಾಗಿ ಕರುನಾಡು ಸೇವಕರು ತಂಡದಿಂದ ಇದೇ ಮೂರರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

01/01/2022

ಆತ್ಮೀಯರೇ ಮುಂದಿನ 365 ಸುಂದರ ದಿನಗಳ ಅದ್ಭುತ ವರ್ಷಕ್ಕೆ ಹಾರ್ದಿಕ ಶುಭಾಶಯಗಳು 💐🎂

30/12/2021
30/12/2021

Hi
What would you like to see from us next?

29/12/2021

Happiness is free... Feel it... Perform it...Enjoy the movements...

27/12/2021

ಮತ್ತೆ ಮಹಾರಾಷ್ಟ್ರದಲ್ಲೇ ಹಾರಿತು ಕನ್ನಡ ಬಾವುಟ 😍.

ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿರುವ ಜೂನಿಯರ್ ಕಿಕ್ ಬಾಕ್ಸಿಂಗ್ ನಲ್ಲಿ ಮೈಸೂರು ಜಿಲ್ಲೆ ನಂಜನಗೂಡು ನಗರದ ಹೃತಿಕ್ ಪ್ರಥಮ ಬಹುಮಾನವನ್ನು ಗಳಿಸಿ ಅಲ್ಲಿ ನಮ್ಮ ಹೆಮ್ಮೆಯ ಕನ್ನಡನಾಡ ಬಾವುಟ ಹಿಡಿದು ಹೆಮ್ಮೆಯಿಂದ ಸಂಭ್ರಮಿಸಿದ್ದಾರೆ 💛❤️🔥💐💐💐

.

*ಮನೋವಿಜ್ಞಾನ*ಎಂದೋ ನಡೆದುಹೋದ ಕಹಿ ಗಳಿಗೆಗಳನ್ನು ಪ್ರತೀ ಬಾರಿ ನೆನೆದಾಗಲೂ ಶರೀರದಲ್ಲಿ ಅಂದು ಅನುಭವಿಸಿದ ಕೋಪ, ಕ್ರೋಧ, ವ್ಯಥೆ, ನಿರಾಶೆ, ಹತಾಶೆ...
27/12/2021

*ಮನೋವಿಜ್ಞಾನ*

ಎಂದೋ ನಡೆದುಹೋದ ಕಹಿ ಗಳಿಗೆಗಳನ್ನು ಪ್ರತೀ ಬಾರಿ ನೆನೆದಾಗಲೂ ಶರೀರದಲ್ಲಿ ಅಂದು ಅನುಭವಿಸಿದ ಕೋಪ, ಕ್ರೋಧ, ವ್ಯಥೆ, ನಿರಾಶೆ, ಹತಾಶೆ ಈ ರೀತಿಯ ನೆಗಟಿವ್ ಎಮೋಷನ್ ಗಳು ಮತ್ತೆ ಅದೇ ರೀತಿ ಮರುಕಳಿಸುತ್ತವೆ. ಪ್ರತಿ ಬಾರಿಯ ನೆನಪಿನಲ್ಲಿಯೂ ನಿಮ್ಮ ಶರೀರ ಮನಸ್ಸು ಮತ್ತೆ ಕೆಟ್ಟ ಸನ್ನಿವೇಶದ ಪ್ರಭಾವವನ್ನು ಮತ್ತೊಮ್ಮೆ ಅನುಭವಿಸುತ್ತಾ ಜರ್ಜರಿತವಾಗುತ್ತಾ ಹೋಗುತ್ತದೆ.

ಇದು ನಮ್ಮ ಮಿದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯ ಪರಿಣಾಮ. ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳಿಗೆ ತಕ್ಕಂತೆ ಮಿದುಳಿಗೆ ಸೂಚನೆಗಳು ಹೋಗುತ್ತವೆ. ಮಿದುಳು ಅದಕ್ಕೆ ಅನುಗುಣವಾಗಿ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡಲು ನಿರ್ದೇಶನ ನೀಡುತ್ತದೆ.

ಈ ಹಾರ್ಮೋನ್ ಗಳೇ ಶರೀರವನ್ನು ದುರ್ಬಲಗೊಳಿಸುತ್ತವೆ. ನಮ್ಮ ದೇಹದಲ್ಲಿ 60 ಟ್ರಿಲಿಯನ್ ಗೂ ಅಧಿಕ ಜೀವಕೋಶ ಗಳಿವೆ. ಈ ಜೀವ ಕೋಶಗಳು ಆರೋಗ್ಯಕರವಾಗಿ ಇರಬೇಕೆಂದರೆ ಅವುಗಳಿಗೆ ಆರೋಗ್ಯಕರ ವಾತಾವರಣವೂ ಇರಬೇಕು. ಜೀವಕೋಶಗಳಿಗೆ ಬೇಕಾದ ಪ್ರೊಟೀನ್, ವಿಟಮಿನ್, ಮಿನರಲ್ಸ್, ಅಮಿನೊ ಆಸಿಡ್ ಗಳ ಜೊತೆಗೆ ಉಲ್ಲಾಸದ ಮನಸ್ಸು ಅಷ್ಟೇ ಮುಖ್ಯ. ಸರಿಯಾದ ಆರೈಕೆ ಇಲ್ಲದೆ ಜೀವಕೋಶಗಳು ಹಾಳಾಗುವುದಕ್ಕಿಂತ, ಹತ್ತು ಪಟ್ಟು ಹೆಚ್ಚು ಕೆಟ್ಟ ಯೋಚನೆಗಳಿಂದ, ನೆಗಟಿವ್ ಎಮೋಷನ್ ಗಳಿಂದ ಹಾನಿ ಒಳಗಾಗುತ್ತವೆ.

ಇದೇ ಮನಸ್ಥಿತಿಯಲ್ಲಿ ಶರೀರವಿದ್ದಲ್ಲಿ ಜೀವಕೋಶಗಳು ಕೆಡಲು ಶುರುವಾಗುತ್ತವೆ. ಹೀಗೆ ಹಾಳಾದ ಜೀವಕೋಶಗಳು ತಮ್ಮ ಸುತ್ತಮುತ್ತಲಿನ ಆರೋಗ್ಯವಂತ ಕೋಶಗಳನ್ನು ನಾಶ ಮಾಡಲು ತೊಡಗುತ್ತವೆ. ಶರೀರ ಬಹಳ ಸುಲಭವಾಗಿ ಕಾಯಿಲೆಗಳಿಗೆ ತುತ್ತಾಗುತ್ತದೆ. ಬೇಗ ಕೃಶವಾಗುತ್ತದೆ.

ಮನುಷ್ಯನೆಂದ ಮೇಲೆ "ಸಿಟ್ಟು ಕೋಪ ದುಃಖ" ಇತ್ಯಾದಿ ಭಾವನೆಗಳು ಇರುವುದು ಸಹಜ. ಅವೆಲ್ಲವೂ ಬರದಂತೆ ಸದಾ ನಗು ನಗುತ್ತಲೇ ಇರಬೇಕು ಅಂದರೆ ಕಷ್ಟವೇ ಹೌದು. ಎಲ್ಲರೂ ನಿತ್ಯ ಆನಂದವಾಗಿರಲು ಸಾಧ್ಯವಿಲ್ಲ.

ಸಂಸ್ಕೃತದಲ್ಲಿ ಒಂದು ಮಾತಿದೆ ”ಯದ್ಭಾವಮ್ ತದ್ಭವತಿ” ನಾವು ಏನು ಯೋಚನೆ ಮಾಡುತ್ತೇವೆಯೋ ನಾವು ಅದೇ ಆಗುತ್ತೇವೆ. "ಯಥಾ ಪಿಂಡೆ ತಥಾ ಬ್ರಹ್ಮಾಂಡೇ" ಎಂಬಂತೆ "ಅಣು ಹೇಗಿರುತ್ತದೆಯೋ ಆಗೆಯೇ ಈ ಬ್ರಹ್ಮಾಂಡವೂ.

ಸನ್ನಿವೇಶಗಳಿಗೆ ತಕ್ಕ ಹಾಗೆ ನಾವು ಪ್ರತಿಕ್ರಿಯೆ ನೀಡಲೇ ಬೇಕು. ಅದು ಸಹಜ. ಹೆದರಿಕೆ ಭಯ ಇಲ್ಲದೆ ನಾವು ಬದುಕಲಾರೆವು. ಜೀವ ರಕ್ಷಣೆಗೆ ನಾವು ಹೆದರಲೇ ಬೇಕು. ಹಾಗೆ ಕೋಪಗೊಳ್ಳಲೂ ಬೇಕು. ಆಗ ಸ್ರವಿಸುವ ಹಾರ್ಮೋನ್ ಗಳು ದೇಹ ರಕ್ಷಣೆಗೆ ಬೇಕಾದ ಅಧಿಕ ಹಾರ್ಮೋನ್ ಗಳನ್ನು ಸ್ರವಿಸಿ ಆ ಕ್ಷಣದಿಂದ ನಮ್ಮನ್ನು ಪಾರು ಮಾಡುತ್ತದೆ. ಆದರೆ ಅದೇ ಎಮೋಷನ್ ಗಳನ್ನು ಸದಾ ಕಾಲ ನಾವು ಮನಸಿನಲ್ಲಿ ಪೋಷಿಸಬಾರದು ಅಷ್ಟೇ. ನಮ್ಮನ್ನು ದ್ವೇಷಿಸುವರನ್ನು ನಾವು ಕ್ಷಮಿಸಬೇಕು. ಅದು ದೊಡ್ಡ ಗುಣ ಅಂತ ಅಲ್ಲ "ನಮ್ಮ ಒಳಿತಿಗಾಗಿ. ನಮ್ಮ ಆರೋಗ್ಯಕ್ಕಾಗಿ" ಮಾತ್ರ.

👉 *ನಮ್ಮ ದೇಹದಲ್ಲಿ ನಾಲ್ಕು ಹಾರ್ಮೋನ್ ಗಳು ಮನಸ್ಸಿಗೆ ಸಂತೋಷವನ್ನು ಉಂಟು ಮಾಡುವಂತವು.*

👉1. ಎಂಡೋರ್ಫಿನ್.

👉2. ಡೋಪಮಿನ್.

👉3. ಸೇರೋಟಾನಿನ್.

👉4. ಆಕ್ಸಿಟೋಸಿನ್ ಇವೇ ನಾಲ್ಕು.

ನಾವು ವ್ಯಾಯಾಮ ಮಾಡಿದಾಗ ಶರೀರದಲ್ಲಿ *"ಎಂಡೋರ್ಫಿನ್"* ಉತ್ಪತ್ತಿಯಾಗುತ್ತದೆ. ವ್ಯಾಯಾಮದ ನೋವನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಕಸರತ್ತಿನ ನೋವೂ ಹಿತ ಎನಿಸುವುದು ಇದರಿಂದಲೇ. ಜೋರಾಗಿ ನಗುವುದರಿಂದಲೂ ಎಂಡೋರ್ಫಿನ್ ಬಿಡುಗಡೆ ಆಗುತ್ತದೆ. ನಿತ್ಯ 30 ನಿಮಿಷ ವ್ಯಾಯಾಮ ಮಾಡಿದರೆ , ಮತ್ತು ನಗು ಬರುವಂತಹ ಲಘು ಓದು, ಸಿನೆಮಾ, ಹರಟೆ ಇವುಗಳಿಂದ ಅಂದಿನ ಎಂಡೋರ್ಫಿನ್ ಕೋಟಾ ವನ್ನು ನಾವು ಪಡೆಯಬಹುದು.

ಯಾರಾದರೂ ನಮ್ಮನ್ನು ಹೊಗಳಿದಾಗ, ನಮ್ಮ ಕೆಲಸಗಳನ್ನು ಮೆಚ್ಚಿ ಮಾತಾನಾಡಿದಾಗ ನಮ್ಮ ಶರೀರದಲ್ಲಿ *"ಡೋಪಮಿನ್"* ಉತ್ಪತ್ತಿ ಆಗುತ್ತದೆ. ಅಡುಗೆ ಕೆಲಸ ಮಾಡುವ ಮನೆಯ ಹೆಣ್ಣು ಮಕ್ಕಳಿಗೆ ಈ ಡೋಪಮಿನ್ ಸಿಗುವುದು ಕಷ್ಟ ಮತ್ತು ಅದರ ಪ್ರಮಾಣವು ಕಡಿಮೆ ಇದಕ್ಕೆ ಕಾರಣ ಅವರು ಕಷ್ಟ ಪಟ್ಟು ಅಡುಗೆ ಮಾಡಿದರು ಅಥವಾ ಯಾವುದೆ ಸಾಧನೆ ಮಾಡಿದರೂ ಅದಕ್ಕೆ ತಪ್ಪು ಹಿಡಿಯುವರೆ ಜಾಸ್ತಿ. ದಯ ಮಾಡಿ ನಿಮ್ಮ ಮನೆಯವರ ಅಡುಗೆಯನ್ನು ನೀವು ಕಡ್ಡಾಯವಾಗಿ ಹೊಗಳಿರಿ ಮತ್ತು ಅವರ ಸಾಧನೆಗೆ ಮೆಚ್ಚುಗೆ ಸೂಚಿಸಿ. ಏಕೆಂದರೆ ಇದರಿಂದ ಡೋಪಮಿನ್ ಪ್ರಮಾಣ ಹೆಚ್ಚುತ್ತದೆ. ನಾವು ಏನಾದರೂ ಹೊಸ ವಸ್ತು ಖರೀದಿಸಿದಾಗ ಖುಷಿ ಆಗುವುದು ಈ ಡೋಪಮಿನ್ ನಿಂದಲೇ. ಹಾಗಾದರೇ ಶಾಪಿಂಗ್ ಮಾಡಿದಾಗ ಸಂತೋಷವಾಗುವುದು ಏಕೆ ಎಂದು ನಿಮಗೆ ಗೊತ್ತಾಗಿರಬೇಕು.

ನಾವು ಬೇರೆಯವರಿಗೆ ಸಹಾಯ ಮಾಡಿದಾಗ ನಮ್ಮಲ್ಲಿ ಉಂಟಾಗುವ ಧನ್ಯತಾ ಭಾವಕ್ಕೆ ಕಾರಣ *"ಸೇರೋಟಿನ್"* ಎನ್ನುವ ಹಾರ್ಮೋನ್. ಇದು ನಮ್ಮ ಮನಸ್ಸನ್ನು ಮುದಗೊಳಿಸುತ್ತೆ. ಅಷ್ಟೇ ಅಲ್ಲ ನಮ್ಮ ಜೀವ ಕೋಶಗಳನ್ನು ಉತ್ತೇಜಿಸುತ್ತದೆ. ಅಡ್ರೆಸ್ ಕೇಳುವ ದಾರಿಹೋಕರಿಗೆ ಮಾಹಿತಿ ನೀಡಿದರೆ, ಅಂಧರಿಗೆ ರಸ್ತೆ ದಾಟಲು ಸಹಾಯ ಮಾಡಿದರೆ ಇತ್ಯಾದಿ ಸಣ್ಣಪುಟ್ಟ ಸಹಾಯ ಹಸ್ತ ಚಾಚುವ ಕೆಲಸಗಳಿಂದ ಈ ಹಾರ್ಮೋನ್ ನಮ್ಮನ್ನು ಖುಷಿಯಾಗಿ ಇಡುತ್ತದೆ.

ನಾವು ಬೇರೆಯವರಿಗೆ ಆತ್ಮೀಯತೆ ತೋರಿದಾಗ *"ಆಕ್ಸಿಟೋಸಿನ್"* ಉತ್ಪತ್ತಿ ಆಗುತ್ತದೆ. ಅಳುವ ಮಗುವನು ರಮಿಸುವಾಗ ನಮ್ಮ ಸ್ಪರ್ಶ ಅಪ್ಪುಗೆ ನಮ್ಮಲ್ಲಿ ಮತ್ತು ಮಗುವಿನಲ್ಲೂ ಆಕ್ಸಿಟೋಸಿನ್ ನಿಂದಾಗಿ ಮನಸು ಸಮಾಧಾನ ಗೊಳ್ಳುತ್ತದೆ. ಕೈ ಕುಲುಕುವುದರಿಂದ (thanks) ಆತ್ಮೀಯ ಆಲಿಂಗನದಿಂದ ಮನಸ್ಸು ಪ್ರಫುಲ್ಲಿತ ವಾಗುತ್ತದೆ.

**ಹೀಗಾಗಿ**

ನಮ್ಮ ಆರೋಗ್ಯದ ದೃಷ್ಟಿಯಿಂದ, ನಮ್ಮ ಜೀವನವನ್ನು ಸುಖಮಯವಾಗಿಸುವ ದೃಷ್ಟಿಯಿಂದ ದಯವಿಟ್ಟು ಪ್ರತಿದಿನ ವ್ಯಾಯಾಮ ಮಾಡಿ, ನಗುತ್ತ ಇರಿ, ಬೇರೆಯವರ ಪ್ರಯತ್ನಗಳನ್ನು ಹೊಗಳಿ, ಅಗತ್ಯ ಇರುವವರಿಗೆ ಕೈಲಾದಷ್ಟು ಸಣ್ಣ ಪುಟ್ಟ ಸಹಾಯ ಮಾಡಿ. ಸಹಾಯ ಮಾಡಲು ಸಾಧ್ಯವಾಗದಿದ್ದರೆ ಪರವಾಗಿಲ್ಲ ಮಾತಿನಲ್ಲಿ ಆತ್ಮೀಯತೆ ಇರಲಿ. ಆದಷ್ಟೂ ಎಲ್ಲರೊಂದಿಗೆ ಪ್ರೀತಿಯಿಂದ ಜೀವಿಸಿ. ಕೊನೆಯದಾಗಿ ಆದಷ್ಟು ಬೇರೆಯವರ ತಪ್ಪುಗಳನ್ನು ಕ್ಷಮಿಸಿಬಿಡಿ. ಇಲ್ಲದಿದ್ದರೆ, ಸಂಬಂಧದಿಂದಲೇ ದೂರವಿದ್ದುಬಿಡಿ.

**ಇರುವುದೊಂದೇ ಜೀವನ*

ಚಂದವಾಗಿ ಬಾಳೋಣ ಬದುಕೋಣ..
ಶ್ರೀ ಎಸ್.ಆರ್.ಕಂಬಾರ.

26/12/2021
25/12/2021
ಝೆರಾಕ್ಸ್  ಚಪಾತಿ, ರೊಟ್ಟಿ ಮಸ್ತ್ ಇರತಾವ್ 😀😀
23/12/2021

ಝೆರಾಕ್ಸ್ ಚಪಾತಿ, ರೊಟ್ಟಿ ಮಸ್ತ್ ಇರತಾವ್ 😀😀

"ಕನ್ನಡ" ಇದು ಮಹಾರಾಷ್ಟ್ರದಲ್ಲಿ ಇರುವ ಒಂದು ನಗರ... ನೋಡ್ರಿ ನಾವು ಮಹಾರಾಷ್ಟ್ರದಲ್ಲಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ನೆಲೆನಿಂತಿರುವುದು ಅದು...
23/12/2021

"ಕನ್ನಡ" ಇದು ಮಹಾರಾಷ್ಟ್ರದಲ್ಲಿ ಇರುವ ಒಂದು ನಗರ... ನೋಡ್ರಿ ನಾವು ಮಹಾರಾಷ್ಟ್ರದಲ್ಲಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ನೆಲೆನಿಂತಿರುವುದು ಅದು ನಮ್ಮ ಅರಸರು ಆಳಿದ ಪ್ರದೇಶ ಅನ್ನುವುದಕ್ಕೆ ಇದೊಂದು ಸಾಕ್ಷಿ ಅಲ್ಲವೇ ಇಂಥ ಹಲವು ನಿದರ್ಶನಗಳಿವೆ ನಮ್ಮ ಆಳ್ವಿಕೆಯ ಪ್ರತೀಕವಾಗಿ.... ಸುಮ್ಮನೆ ಹೋಟಿಗಾಗಿ ರಾಜಕೀಯ ಮಾಡುತ್ತಿರುವ ಪುಂಡ ಶವಸೇನಾದ ಅಜಂಡಾ ನಮಗೇನು ತಿಳಿಯದೆ.... ಜೈ ಕರ್ನಾಟಕ

ಬೆಳಗಾವಿ ದರ್ಪಣ ವಿಶೇಷವಾಗಿ ಮೂಡಿಬರುತ್ತಿದ್ದು ನಿಮ್ಮ ಮತ್ತು ನಿಮ್ಮ ಮಕ್ಕಳ ಎಳ್ಗಿಗೆ ಒಂದು ದೊಡ್ಡ ಕೊಡುಗೆ ಆಗುತ್ತದೆ ಅಂತ ನಾವು ಬಲ...

23/12/2021

ಸರ್ಕಾರಕ್ಕೆ ಅಭಿನಂದನೆಗಳು

23/12/2021
22/12/2021

ಮಾನ್ಯ ಶ್ರೀ ವಾಟಾಳನಾಗರಾಜ ಮತ್ತು ಎಲ್ಲ ಕನ್ನಡ ಸಂಘಟನೆಗಳ ಆವ್ಹಾಣದ ಪ್ರಕಾರ ಕನ್ನಡಿಗರಾದ ನಮ್ಮೆಲ್ಲರ ಬೆಂಬಲ ಕೊಡಲೇಬೇಕು... ಕನ್ನಡದ ಶಕ್ತಿ ಪ್ರದರ್ಶನ ಆಗಲೇಬೇಕು....

ಖದರ್ ಅಂದ್ರೆ ಇದು... ನಮಗೆ ಬೇಕಾಗಿರೋದೇ ಇಂಥ ದಿಟ್ಟ ಹೆಜ್ಜೆಗಳು.... CM ಸಾಹೇಬ್ರಿಗೆ ಅಭಿನಂದನೆಗಳು...ಯಾರಾಪ್ಪಂದ್ ಏನೈತಿ... ಜತ್ತ ನಮ್ದ್ ಆಗ...
22/12/2021

ಖದರ್ ಅಂದ್ರೆ ಇದು... ನಮಗೆ ಬೇಕಾಗಿರೋದೇ ಇಂಥ ದಿಟ್ಟ ಹೆಜ್ಜೆಗಳು.... CM ಸಾಹೇಬ್ರಿಗೆ ಅಭಿನಂದನೆಗಳು...
ಯಾರಾಪ್ಪಂದ್ ಏನೈತಿ... ಜತ್ತ ನಮ್ದ್ ಆಗತೈತಿ ಅನ್ನೋದೇ....

Address

H. No. 1975. Anjaneya Nagar, M. M. Extension, Belagavi.
Belgaum
590016

Telephone

+919480717727

Website

Alerts

Be the first to know and let us send you an email when Belagavi Darpana posts news and promotions. Your email address will not be used for any other purpose, and you can unsubscribe at any time.

Contact The Business

Send a message to Belagavi Darpana:

Videos

Share

Belagavi Darpana

Belagavi Darpana is a Kannada magazine publishing from K***a nagari Belagavi of Karnataka. Nurturing positivism in society and building value-based ecosystem for the community is focused area to publish this magazine. lighten more on to community masters who took whole leadership for betterment of the society is the main passion of this magazine.

ಬೆಲಗಾವಿ ದರ್ಪಣವು ಕರ್ನಾಟಕದ ಕುಂದ ನಗರಿ ಬೆಲಗಾವಿಯಿಂದ ಪ್ರಕಟವಾದ ಕನ್ನಡ ಪತ್ರಿಕೆ. ಸಮಾಜದಲ್ಲಿ ಸಕಾರಾತ್ಮಕತೆಯನ್ನು ಪೋಷಿಸುವುದು ಮತ್ತು ಸಮುದಾಯಕ್ಕೆ ಮೌಲ್ಯಾಧಾರಿತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಈ ಪತ್ರಿಕೆಯನ್ನು ಪ್ರಕಟಿಸಲು ಕೇಂದ್ರೀಕೃತ ಪ್ರದೇಶವಾಗಿದೆ. ಸಮಾಜದ ಸುಧಾರಣೆಗಾಗಿ ಸಂಪೂರ್ಣ ನಾಯಕತ್ವವನ್ನು ವಹಿಸಿಕೊಂಡ ಸಮುದಾಯ ಮಾಸ್ಟರ್ಸ್ಗೆ ಹೆಚ್ಚು ಹಗುರಗೊಳಿಸಿ ಈ ಪತ್ರಿಕೆಯ ಮುಖ್ಯ ಉತ್ಸಾಹ.


Other Digital creator in Belgaum

Show All