Alma News 24

Alma News 24 Alma Media School founded in the year 2018 is the brainchild of Gaurish Akki, the renowned Newsanchor
(1)

14/12/2024

ವಕ್ಫ್‌ ಕಲಹಕ್ಕೆ ಸದನ ತಲ್ಲಣ

14/12/2024

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿಗಳಿಗೆ ಜಾಮೀನು

14/12/2024

ಪಂಚಮಸಾಲಿ ಮೀಸಲಾತಿ ವಿಚಾರ- ಸಿ ಎಂ ಸ್ಪಷ್ಟನೆ

14/12/2024

ಕೋವಿಡ್‌ ಹಗರಣ: ಅಧಿವೇಶನದಲ್ಲಿ ಚರ್ಚೆ

As a student of  Alma Media School , I got the opportunity to visit Asianet Suvarna News channel. It is one of the popul...
10/12/2024

As a student of Alma Media School , I got the opportunity to visit Asianet Suvarna News channel. It is one of the popular news channels in Karnataka that offers live updates on finance, entertainment, politics, regional, and worldwide news.

I was indeed fascinated by the infrastructure of the newsroom. They had different departments for each, like MCR, recording room, production room, news live , etc. We also had an interaction session with the head of the channel. She explained to us how the channel works, the agenda to keep in mind while working in the news channel, and the pros and cons of the newsroom.

Then, we also interacted with the video editing head. She spoke about the demand for video editors, the importance of visuals to grab audience attention. Soon after this, I came across my favorite room, that is the live shooting room. We got a chance to watch it by standing aside. Anchor Swetha was on the set, providing live updates. I really loved her boldness, confidence, vocal, and the way she delivers news to the audience. She was so inspiring. I wish I could be there one day.

The head of the newsroom, Ms. MC Shobha, instructed us to develop the habit of reading newspapers, one English and one Kannada, and to develop the habit of writing. She also told us about how news channels hire candidates and the skills required to become a journalist.

Finally, we met Ajith Hanamakkanavar, the Editor-in-Chief of the Suvarna channel. He taught us how news plays a prominent role in day-to-day life, how quickly journalists have to contribute their work. Overall, I understood how the newsroom functions. It's not easy, hard work is the key quality to become a journalist. It is the combination of teamwork and their dedication to their work.

Malathi
Alma Media School Student

22/11/2024

ಜನರ ಮನಗೆದ್ದ ಆರಾಮ್‌ ಅರವಿಂದ ಸ್ವಾಮಿ..! |Arama Aravinda Swami |ALMA NEWS 24

ಕನ್ನಡ ಮತ್ತು ಕನ್ನಡೇತರ ಹಬ್ಬ: ʼವಿಕʼ ಕನ್ನಡ ಹಬ್ಬ  ಬಹು ನಿರೀಕ್ಷಿತ ʼವಿಕʼ ಕನ್ನಡ ಹಬ್ಬ-2024, ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಕ್ಯಾಂಪಸ್‌ನ ...
13/11/2024

ಕನ್ನಡ ಮತ್ತು ಕನ್ನಡೇತರ ಹಬ್ಬ: ʼವಿಕʼ ಕನ್ನಡ ಹಬ್ಬ

ಬಹು ನಿರೀಕ್ಷಿತ ʼವಿಕʼ ಕನ್ನಡ ಹಬ್ಬ-2024, ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಕ್ಯಾಂಪಸ್‌ನ ಜ್ಞಾನ ಜ್ಯೋತಿ ಆಡಿಟೋರಿಯಂನಲ್ಲಿ ನವೆಂಬರ್‌ 9 ಮತ್ತು 10ನೇ ಶನಿವಾರ ಮತ್ತು ಭಾನುವಾರದಂದು ನಡೆಯಿತು. ಈ ಹಬ್ಬದಲ್ಲಿ ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಆಕರ್ಷಣೆಯಾಗಿದ್ದವು.

ಮೊದಲ ದಿನ ಶನಿವಾರ ಬೆಳಗ್ಗೆ 10:30ಕ್ಕೆ ಉತ್ಸವದ ಉದ್ಘಾಟನೆ ನಡೆಯಿತು, ಈ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌, ಹರಿಹರ ಪಂಚಮಸಾಲಿ ಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ್‌ ಗಾಂಧಿ ,ವಿಜಯ ಕರ್ನಾಟಕದ ನೂತನ ಸಿ.ಇ.ಓ ದೀಪಕ್‌ ಸಲೂಜ ಸೇರಿದಂತೆ ಹಲವು ಸಿನಿಮಾ ತಾರೆಯರು ಪಾಲ್ಗೊಂಡಿದ್ದರು.

ಈ ಕನ್ನಡ ಹಬ್ಬದಲ್ಲಿ ಹುಲಿವೇಷ, ಡೊಳ್ಳುಕುಣಿತ, ವೀರಗಾಸೆಯ ಜೊತೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ಪುಸ್ತಕ ಮೇಳದಲ್ಲಿ ಕಲೆ, ಸಾಹಿತ್ಯ, ಕಾದಂಬರಿ, ರಂಗಭೂಮಿ, ಹೀಗೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಬೇಕಾಗುವ ಪುಸ್ತಕಗಳು ಲಭ್ಯವಿದ್ದವು. ನಾನಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರ ನೃತ್ಯ, ಪ್ಯಾಶನ್‌ ಷೋ, ನಾಟಕ, ಸಂಗೀತ ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.

ಚನ್ನಪಟ್ಟಣದ ಬೊಂಬೆಗಳು, ಗೃಹ ಅಲಂಕಾರಿಕ ವಸ್ತುಗಳು, ಜೈಪೂರ್‌ ಮತ್ತು ಕೊಲ್ಕತ್ತದ ಬ್ಯಾಗ್‌ಗಳು, ಸೀರೆಗಳು, ಮಹಿಳೆಯರಿಗಾಗಿ ಅಲಂಕಾರಿಕ ವಸ್ತುಗಳು ಹೀಗೆ ನಾನಾ ಬಗೆಯ ಮಳಿಗೆಗಳನ್ನು ಇಲ್ಲಿ ನೋಡಬಹುದಾಗಿತ್ತು.
ಕನ್ನಡ ಹಬ್ಬದ ಇನ್ನೊಂದು ವಿಶೇಷ, ಆಹಾರ ಮೇಳ. ರಾಜ್ಯದ ಅನೇಕ ಭಾಗದ ಪ್ರಸಿದ್ದ ಆಹಾರಗಳನ್ನು ಮೇಳದಲ್ಲಿ ನೋಡಬಹುದಾಗಿತ್ತು. ದಾವಣಗೆರೆಯ ಬೆಣ್ಣೆದೋಸೆ, ಕರಾವಳಿಯ ವೈವಿಧ್ಯಮಯ ತಿನಿಸುಗಳು ಹಬ್ಬವನ್ನು ನೋಡಿ ಬಂದ ಪ್ರೇಕ್ಷಕರಿಗೆ ಶುಚಿ ರುಚಿಯಾದ ಆಹಾರವನ್ನು ಉಣಬಡಿಸಿದವು.
ಎರಡನೇ ದಿನ ಭಾನುವಾರದಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾನುವಾರವೂ ಸಹ ಜನಸಾಗರವೇ ಹರಿದು ಬಂದಿತ್ತು. ಬೆಳಗ್ಗೆಯಿಂದ ರಾತ್ರಿಯವರೆಗೆ ನಡೆದ ಕನ್ನಡ ಹಬ್ಬದಲ್ಲಿ ಸಾಂಸ್ಕೃತಿಕ ಸೊಬಗು ಮೇಳೈಸಿತ್ತು. ಪುಸ್ತಕ ಪ್ರಿಯರು ಪುಸ್ತಕಗಳನ್ನು ಖರೀದಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಾಹಿತ್ಯ ಪ್ರಿಯರಿಗೆ ನಾಟಕ, ರಸಸಂಜೆ, ಯಕ್ಷಗಾನ, ನೃತ್ಯ, ಮಲ್ಲಕಂಬ ಸೇರಿದಂತೆ ನಾನಾ ಕಾರ್ಯಕ್ರಮಗಳು ಮನರಂಜನೆಯ ರಸದೌತಣ ಉಣಬಡಿಸಿದವು.

ಒಟ್ಟಾರೆಯಾಗಿ ವಿಜಯ ಕರ್ನಾಟಕದವರ 3ನೇ ಆವೃತ್ತಿಯ ಕನ್ನಡ ಹಬ್ಬವು ಎಲ್ಲಾ ವಯೋಮಾನದವರಿಗೂ ಸಾಂಸ್ಕೃತಿಕ ಸತ್ಕಾರವನ್ನು ನೀಡಿತು. ಕನ್ನಡ ಮತ್ತು ಕನ್ನಡೇತರ ಮನಸ್ಸುಗಳನ್ನು ಆಕರ್ಷಿಸಿತು.
ಹೇಮ ಎನ್‌.ಜೆ
ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

29/09/2024

ಬೈರಾದೇವಿ ಸೆಲೆಬ್ರಿಟಿಶೋನಲ್ಲಿ ನಡೆದ ನೈಜ ದೃಶ್ಯ

ಅದ್ಧೂರಿಯಾಗಿ ಜರುಗಿದ ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ 2024 ಫ್ಯಾಷನ್‌ ಶೋಬೆಂಗಳೂರು:  ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ 2024ರ 8ನೇ ಆವೃತ್ತ...
02/09/2024

ಅದ್ಧೂರಿಯಾಗಿ ಜರುಗಿದ ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ 2024 ಫ್ಯಾಷನ್‌ ಶೋ

ಬೆಂಗಳೂರು: ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ 2024ರ 8ನೇ ಆವೃತ್ತಿಯ ಗ್ಯ್ರಾಂಡ್‌ ಫಿನಾಲೆ ನಗರದಲ್ಲಿ ಅದ್ದೂರಿಯಾಗಿ ಜರುಗಿತು. ವಿವಾಹಿತ ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಿ ಹೊರಹೊಮ್ಮಿತು.

ನಗರದ ಕಿಂಗ್ಸ್‌ ಮೆಡೋಸ್‌ನಲ್ಲಿ ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ 2024ರ 8ನೇ ಆವೃತ್ತಿಯ ಫ್ಯಾಷನ್‌ ಶೋ ಅನ್ನು ಆ.29 ರಿಂದ ಮೂರು ದಿನಗಳ ಕಾಲ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ನಡೆಸಲಾಯಿತು. ಆ.31ರಂದು ಸಂಜೆ ಗ್ರ್ಯಾಂಡ್‌ ಫಿನಾಲೆ ನಡೆದಿದ್ದು, ಮಿಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ಗೆಲುವಿನ ಕಿರೀಟವನ್ನು ಡಾ.ಅಕ್ಷತಾ ಅಶೋಕ್ ಕುಲಕರ್ಣಿ, ಮಿಸೆಸ್ ಇಂಡಿಯಾ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ಕಿರೀಟವನ್ನು ಡಾ.ನಿಶಿತಾ ಶೆಟ್ಟಿಯಾನ್, ಮಿಸೆಸ್ ಇಂಡಿಯಾ ಅರ್ಥ್ ಇಂಟರ್‌ನ್ಯಾಶನಲ್ ಕಿರೀಟವನ್ನು ಡಾ. ಶ್ರುತಿ ಬಲ್ಲಾಳ್ ಮತ್ತು
ಕ್ಲಾಸಿಕ್ ಮಿಸೆಸ್ ಇಂಡಿಯಾ ಅರ್ಥ್ ಇಂಟರ್‌ನ್ಯಾಶನಲ್ ಗೆಲುವಿಗೆ ಪ್ರಗತಿ ಅನೂನ್ ಪಾತ್ರರಾದರು.

ರಾಜ್ಯದ ವಿವಿಧೆಡೆಗಳಿಂದ ಸುಮಾರು 35 ಸ್ಪರ್ಧಿಗಳು ಈ ಫ್ಯಾಷನ್‌ ಶೋ ನಲ್ಲಿ ಪಾಲ್ಗೊಂಡಿದ್ದು, ಮೂರು ದಿನಗಳ ಸ್ಪರ್ಧೆಯಲ್ಲಿ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ತೋರಿದರು. ಅಲ್ಲದೆ ಸ್ಪರ್ಧಿಗಳು ಲಗೋರಿ, ಖೋ ಖೋ ಮತ್ತು ಗಿಲ್ಲಿ ದಾಂಡು ಅಂತಹ ಸಾಂಪ್ರದಾಯಿಕ ಭಾರತೀಯ ಆಟಗಳಲ್ಲಿ ತೊಡಗಿಸಿಕೊಂಡು, ತಮ್ಮ ಕ್ರೀಡಾ ಮನೋಭಾವ ಪ್ರದರ್ಶಿಸಿದರು.

ಈ ಕುರಿತು ಕಾರ್ಯಕ್ರಮದ ಮುಖ್ಯ ಆಯೋಜಕರಾದ ಶ್ರೀಮತಿ ಪ್ರತಿಭಾ ಸೌಂಶಿಮಠ (ಮಿಸೆಸ್‌ ಇಂಡಿಯಾ - ಕರ್ನಾಟಕದ ನಿರ್ದೇಶಕಿ, ಮಿಸೆಸ್‌ ಇಂಡಿಯಾದ ರಾಷ್ಟ್ರೀಯ ನಿರ್ದೇಶಕಿ) ಅವರು ಮಾತನಾಡಿ, ‘ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ ಕಾರ್ಯಕ್ರಮವು ವೈವಿಧ್ಯತೆಯಲ್ಲಿ ಪ್ರತಿಭೆಯನ್ನು ಅರಸುವ ಏಕೈಕ ಸೌಂದರ್ಯ ಸ್ಪರ್ಧೆಯಾಗಿದೆ. ಕಳೆದ 9 ವರ್ಷಗಳಿಂದ ಈ ಸ್ಪರ್ಧೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಎಲ್ಲಾ ವಯೋಮಾನದ ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಒದಗಿಸಲಾಗಿದೆʼ ಎಂದರು.

ಕಾರ್ಯಕ್ರಮದ ತೀರ್ಪುಗಾರರಾದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಅವಿನಾಶ್‌, ಜಯಂತಿ ಬಲ್ಲಾಳ್‌, ಕರ್ನಲ್‌ ಡಾ. ಎಂ.ಸಿ ಶರ್ಮಾ ವಿಜೇತರನ್ನು ಆಯ್ಕೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀಡಿಯಾ ಕನೆಕ್ಟ್‌ ಸಿಇಒ ದಿವ್ಯಾ ರಂಗೇನಹಳ್ಳಿ, ಹಿರಿಯ ನಟ ಮೂಗು ಸುರೇಶ್, ಪ್ರೀಮಿಯಂ ಲಾಂಜ್‌ವೇರ್ ಬ್ರ್ಯಾಂಡ್ ಯೆಲ್ಲೊ ಬ್ಲೂಮ್‌ನ ಸ್ಥಾಪಕರಾದ ಶುಭ್ರ,
ಅಂತಾರಾಷ್ಟ್ರೀಯ ಡಾಗ್‌ ಬ್ರೀಡರ್‌ ಹಾಗೂ ಕಡಬಮ್‌ ಪ್ರತಿಷ್ಠಾನದ ಸಿಇಒ ಸತೀಶ್‌ ಕಡಬಮ್‌, ಪ್ರಭು ಮೇತಿಮಠ್‌, ಶ್ರೀಧರ್‌ ನಾಯಕ್‌, ನಟ ಭಾರ್ಗವ್‌, ನಿರ್ದೇಶಕ ಲೋಕೇಶ್‌ ಮತ್ತು ಆದತ್‌, ಕೊರಿಯೋಗ್ರಾಫರ್‌ ರಾಜ್‌ಕಮಲ್‌ ಹಾಗೂ ಕಿಂಗ್ಸ್‌ ಮೆಡೋಸ್‌ನ ಜೋಸೆಫ್‌ ಪ್ರಭು ಉಪಸ್ಥಿತರಿದ್ದರು.

ಮಿಸ್ & ಮಿಸೆಸ್ ಇಂಡಿಯಾ ಕರ್ನಾಟಕ 2024ರ ವಿಜೇತರ ಪಟ್ಟಿ

ಮಿಸ್ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ವಿಜೇತೆ ಡಾ.ಅಕ್ಷತಾ ಅಶೋಕ್ ಕುಲಕರ್ಣಿ
ಮಿಸೆಸ್ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ವಿಜೇತೆ ಡಾ.ನಿಶಿತಾ ಶೆಟ್ಟಿಯಾನ್
ಮಿಸೆಸ್ ಅರ್ಥ್ ಇಂಟರ್‌ನ್ಯಾಶನಲ್ - ಡಾ. ಶ್ರುತಿ ಬಲ್ಲಾಳ್
ಕ್ಲಾಸಿಕ್ ಮಿಸೆಸ್ ಅರ್ಥ್ ಇಂಟರ್‌ನ್ಯಾಶನಲ್ - ಪ್ರಗತಿ ಅನೂನ್

ಮಿಸ್ ಇಂಡಿಯಾ ಕರ್ನಾಟಕ 2024ರ ವಿಜೇತೆ ವಿನಯ ನಿತ್ಯಾನಂದ,
ಮೊದಲ ರನ್ನರ್ ಅಪ್ - ದೀಶಾಲ್ ಗ್ಲೋರಿಯಾ ಟೌರೊ
ಎರಡನೇ ರನ್ನರ್ ಅಪ್- ಕೀರ್ತಿ ಚಾಮರಾಜ

ಮಿಸೆಸ್ ಇಂಡಿಯಾ ಕರ್ನಾಟಕ 2024ರ ವಿಜೇತೆ ದೇವಿ ಶ್ರೀರಾಮ್,
ಮೊದಲ ರನ್ನರ್ ಅಪ್- ಡಾ. ರಶ್ಮಾ ಮೋಹಿತ್ ಶೆಟ್ಟಿ
ಎರಡನೇ ರನ್ನರ್ ಅಪ್- ವಿದ್ಯಾ ಸಂಪತ್ ಕರ್ಕೇರ
ಮೂರನೇ ರನ್ನರ್ ಅಪ್ - ಸ್ವಾತಿ ರಾವ್ ಶರತ್
ನಾಲ್ಕನೇ ರನ್ನರ್ ಅಪ್ - ಸಾಕ್ಷಿ ಧೀಮಾನ್

ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ 2024ರ ವಿಜೇತೆ ಸಬಿತಾ ರಂಜಿತಾ ರಾವ್,
ಮೊದಲ ರನ್ನರ್ ಅಪ್ - ಡಾ. ಶಾಂತ ಕುಮಾರಿ ಎಸ್‌,
ಎರಡನೇ ರನ್ನರ್ ಅಪ್ - ರೂಪತಾರಾ ಶಿವಾಜಿ ಸಾಂಗ್ಲಿಕರ್,
ಮೂರನೇ ರನ್ನರ್ ಅಪ್ - ಡಾ. ಅರ್ಚನಾ ಭುಟ್,
ನಾಲ್ಕನೇ ರನ್ನರ್ ಅಪ್- ಪ್ರಿಯಾ ರಾಜು ಅಯ್ಯಂಗಾರ್

ಸೂಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ 2024ರ ವಿಜೇತೆ ನಂದಿನಿ ವಿ. ಕಾಮತ್,
ಮೊದಲ ರನ್ನರ್-ಅಪ್ - ಸಿಎಂ ಕಾವೇರಮ್ಮ,
ಎರಡನೇ ರನ್ನರ್‌ ಅಪ್‌ - ಮಾಲಿನಿ ಸತೀಶ್ ಅನ್ವೇಕರ್

24/08/2024

OTT v/s ಕನ್ನಡ ಸಿನಿಮಾ| ಸ್ಟಾರ್‌ ನಟರ ಸಿನಿಮಾ ಯಾಕೆ ಬರ್ತಿಲ್ಲ..? |ALMA NEWS 24




24/08/2024

ಸಿನಿಮಾ,ಪ್ರೀತಿ, ಬದುಕು, ಸಮಾಜ ಸೇವೆ,ಹೋರಾಟ | ಮಗಳ ಕಳ್ಕೊಂಡ ಕರುಣಾಜನಕ ಕಥೆ |Arjun Muthappa ALMANEWS24




ನನ್ನ ಸ್ನೇಹಿತರ ಚಲನ ಚಿತ್ರದ trailer....ದಯವಿಟ್ಟು  ಎಲ್ಲರು support ಮಾಡಿ
22/08/2024

ನನ್ನ ಸ್ನೇಹಿತರ ಚಲನ ಚಿತ್ರದ trailer....ದಯವಿಟ್ಟು ಎಲ್ಲರು support ಮಾಡಿ

Presenting the official trailer of "Life Of Mrudula" Its time to tell a story, Starring Pooja Lokapur, Asha Sujay , Madhan Kumar C , Shashank, Kuldeep, Musi...

17/07/2024

Address


560070

Alerts

Be the first to know and let us send you an email when Alma News 24 posts news and promotions. Your email address will not be used for any other purpose, and you can unsubscribe at any time.

Contact The Business

Send a message to Alma News 24:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share