Anudhinada Ahara - ಅನುದಿನದ ಆಹಾರ

Anudhinada Ahara - ಅನುದಿನದ ಆಹಾರ Through this Daily Bread in Kannada, this magazine is ordained by God our Saviour to Send the Good News of Life to the People Of Karnataka. Monthly Magazine

📖  *_ಅನುದಿನದ ಆಹಾರ_*  📖⏰ _ನವೆಂಬರ್ *18* 2024_ ⏰👉🏽  *ಚಪಲಚಿತ್ತ!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆಹೆ. 11, 12, 13🌠 *...
18/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *18* 2024_ ⏰

👉🏽 *ಚಪಲಚಿತ್ತ!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆಹೆ. 11, 12, 13
🌠 *ಸಂಜೆ* : ಯಾಕೋಬ 1

“ಚಪಲ ಚಿತ್ತರನ್ನು ದ್ವೇಷಿಸುತ್ತೇನೆ; ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುತ್ತೇನೆ.” (ಕೀರ್ತ.119:113).

ಮನುಷ್ಯನ ಎಲ್ಲಾ ಕೆಲಸ ಕಾರ್ಯಗಳೂ ಚಿಂತನೆಯಲ್ಲಿ ಪ್ರಾರಂಭವಾಗುತ್ತದೆ. ಚಿಂತಿಸುತ್ತಾನೆ, ಮಾತಾಡುವನು, ಕಾರ್ಯ ನಡಿಸುತ್ತಾನೆ. ಚಿಂತನೆ ಉತ್ತಮವಾಗಿದ್ದರೆ ಅವನ ಕಾರ್ಯವೂ ಉತ್ತಮವಾಗಿರುವದು. ಈ ಚಿಂತನೆ ಎಲ್ಲಿ ಆರಂಭವಾಗುವದು? ಕೆಲವರು ಮನಸ್ಸಿನಲ್ಲಿ ಎಂದೂ, ಕೆಲವರು ಹೃದಯದಲ್ಲಿ ಎಂದು, ಕೆಲವರು ಬುದ್ಧಿಯಿಂದ ಎನ್ನುತ್ತಾರೆ. ಆದರೆ ಇದು ಎಲ್ಲಿಂದ ಬರುವದೆಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಒಬ್ಬ ಮನುಷ್ಯನಿಗೆ ತನ್ನ ಚಿಂತನೆಯನ್ನು ಹತೋಟಿಯಲ್ಲಿಡಲು ತಿಳಿದಿರಬೇಕು. ಮರದ ಬೇರಿನಂತೆ ಚಿಂತನೆಯೂ ಆಳವಾದ ಚಿಂತನೆಯಲ್ಲಿ ತೊಡಗುವದು. ಜನಾಂಗಗಳು ವ್ಯರ್ಥವಾದ ಕಾರ್ಯಗಳನ್ನೇ ಯೋಚಿಸುವವರಿಂದ (ಕೀರ್ತ.2:1). ಕೆಡುಕನ್ನು ಮಾಡಲು ತೀವ್ರವಾಗಿ ಓಡುತ್ತಾರೆ. ಭೂಪತಿಗಳಿಗೆ ಯಾವಾಗಲೂ ಯುದ್ಧದ ಚಿಂತೆಯಾದರೆ, ಅಧಿಕಾರಿಗಳೂ ಅವರೊಂದಿಗೆ ಸೇರಿಕೊಳ್ಳುತ್ತಾರೆ. ಪ್ರಪಂಚವನ್ನು ವ್ಯರ್ಥಕಾರ್ಯಗಳಿಂದ ತುಂಬಿಸಿದ್ದಾರೆ. ಈ ದಿನಗಳಲ್ಲಿ ಇದನ್ನು ನಾವು ಕಾಣುತ್ತೇವೆ.

ಇಸ್ರಾಯೇಲ್ಯರ ಅರಸನಾದ ದಾವೀದನು, ಚಪಲ ಚಿತ್ತರನ್ನು ದ್ವೇಷಿಸುವದು ಮಾತ್ರವಲ್ಲದೆ ಎರಡು ತೀರ್ಮಾನಗಳನ್ನು ಮಾಡಿಕೊಳ್ಳುತ್ತಾನೆ. ನೀತಿ ನ್ಯಾಯಗಳಿಂದ ಕೂಡಿದ ಧರ್ಮಶಾಸ್ತ್ರವನ್ನು ಪ್ರೀತಿಸುವದಾಗಿಯೂ, ತನ್ನನ್ನು ಶೋಧಿಸಿ ಆಲೋಚನೆಗಳನ್ನು ಗೊತ್ತುಮಾಡಿ ತನ್ನನ್ನು ಸನ್ಮಾರ್ಗದಲ್ಲಿ ನೀನೇ ನಡಿಸು ಎಂದು ಬೇಡಿಕೊಳ್ಳುತ್ತಾನೆ. ಕೆಟ್ಟ ಆಲೋಚನೆಗಳು, ಚಪಲಬುದ್ಧಿ ಉಂಟಾಗುವಾಗಲೆಲ್ಲಾ ಪವಿತ್ರಾತ್ಮನ ಸಹಾಯಕ್ಕಾಗಿ ಬೇಡಿಕೊಳ್ಳುವಾಗ, ಪವಿತ್ರಾತ್ಮನು ಬೇಡದ ಚಿಂತನೆಯಿಂದ ನಮ್ಮನ್ನು ಅಗಲಿಸಿ ಪರಲೋಕ ಚಿಂತನೆಯೊಳಗೆ ನಡಿಸುತ್ತಾನೆ. ಶರೀರ ಭಾವದವುಗಳ ಮೇಲೆ ಮನಸ್ಸಿಡುವದು ಮರಣ. ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು ಜೀವವೂ ಮನಶ್ಯಾಂತಿಯೂ ಆಗಿದೆ. ವ್ಯರ್ಥ ಆಲೋಚನೆಗಳಿಗೆ ಆಸ್ಪದ ಕೊಡದೆ ಇರಲು ಉತ್ತಮವಾದ ಮಾರ್ಗ ಸತ್ಯವೇದ ವಾಕ್ಯವನ್ನು ಪ್ರೀತಿಸಿ, ಧ್ಯಾನಿಸಿ ಆ ವಾಕ್ಯದಂತೆ ನಡೆಯಲು ತೀರ್ಮಾನಿಸಿಕೊಳ್ಳುವದು ಅಗತ್ಯ. ಇಲ್ಲವಾದರೆ ವ್ಯರ್ಥ ಚಿಂತನೆಗಳೂ, ವ್ಯರ್ಥ ಆಲೋಚನೆಗಳು ಕೇಡನ್ನೇ ಹಿಂಬಾಲಿಸಿ ಓಡುವಾಗ ಅದು ಅಂತ್ಯದಲ್ಲಿ ನರಕದ ಹಾದಿಗೆ ನಡಿಸುತ್ತದೆ ಎಂಬದನ್ನು ಮರೆಯಬಾರದು.

_*ನೆನಪಿಗೆ* : “ಯಾರಾರು ದೇವರ ಆತ್ಮನಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಮಕ್ಕಳು.” (ರೋಮಾ.8:14).

Kannada Song
*ಅಗ್ನಿ ಸುರಿಸಲು ಬಂದ ಅತ್ಮನಾಯಕಾ*

👁‍🗨 Watch and be Blessed.
https://youtu.be/flv8sSFx-F8

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖

📖  *_ಅನುದಿನದ ಆಹಾರ_*  📖⏰ _ನವೆಂಬರ್ *17* 2024_ ⏰👉🏽  *ಮಾತು ಕೇಳಿ ಆಲೋಚನೆ!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆಹೆ. 8, 9,...
16/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *17* 2024_ ⏰

👉🏽 *ಮಾತು ಕೇಳಿ ಆಲೋಚನೆ!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆಹೆ. 8, 9, 10
🌠 *ಸಂಜೆ* : ಇಬ್ರಿ. 13

“ಎಲೌ ಕುಮಾರಿಯೇ, ನನ್ನ ಮಾತನ್ನು ಕೇಳಿ ಆಲೋಚಿಸು. ಸ್ವಜನರನ್ನೂ ತೌರಮನೆಯನ್ನೂ ಮರೆತುಬಿಡು. ಆಗ ರಾಜನು ನಿನ್ನ ಲಾವಣ್ಯವನ್ನು ನೋಡಲಪೇಕ್ಷಿಸುವನು.” (ಕೀರ್ತ.45:10,11).

ಒಮ್ಮೆ ಒಬ್ಬ ರಾಜಪುತ್ರನು ತನ್ನ ದೇಶದ ನಿವಾಸಿಗಳನ್ನು ಕಾಣಲು ಹೊರಟನು. ಅವನು ಬರುವ ದಾರಿಯನ್ನೆಲ್ಲಾ ಸೇವಕರು ಸಿದ್ಧಗೊಳಿಸಿದ್ದರು. ಅಲ್ಲಿ ಒಬ್ಬ ಬಡ ಹೆಣ್ಣುಮಗಳು ಅರಸಕುಮಾರನನ್ನು ಕಾಣುವ ಅಪೇಕ್ಷೆಯಿಂದ ಕಾದಿದ್ದಳು. ಆದರೆ ಸೈನಿಕರು ಅವಳನ್ನು ದೂರ ಕಳಿಸಿಬಿಟ್ಟರು. ಅವಳು ಒಂದು ಮರದ ಮರೆಯಲ್ಲಿ ನಿಂತು ರಾಜಕುಮಾರನನ್ನು ಕಾಣಲು ಕಾದಿದ್ದಳು. ಆಗ ರಾಜಪುತ್ರನು ತನ್ನ ಸಕಲ ವೈಭವದೊಂದಿಗೆ ರಥದಲ್ಲಿ ಬರುವಾಗ, ಮರೆಯಲ್ಲಿ ನಿಂತು ಕಾಯುತ್ತಿದ್ದ ಹೆಣ್ಣುಮಗಳನ್ನು ಅವನ ಕಣ್ಣು ಕಂಡಿತು. ಆ ಕೂಡಲೇ ಅವನು ತನ್ನ ಮಂತ್ರಿಯನ್ನು ಕಳುಹಿಸಿ ಅವಳನ್ನು ರಾಜಮರ್ಯಾದೆಯಿಂದ ಕರೆತರಿಸಿ, ತನ್ನ ಪಟ್ಟದ ಅರಸಿಯನ್ನಾಗಿ ಮಾಡಿಕೊಂಡನು.

ಸತ್ಯವೇದದಲ್ಲಿ ರೂತಳನ್ನು, ಎಸ್ತೇರಳನ್ನು ಕುರಿತು ನೋಡುತ್ತೇವೆ. ಎಸ್ತೇರಳು ಒಬ್ಬ ಅನಾಥ ಹೆಣ್ಣುಮಗಳು. ಅವಳನ್ನು ಕರ್ತನು ಆರಿಸಿದ್ದರಿಂದ ಅವಳು ಅರಮನೆಗೆ ಕೊಂಡೊಯ್ಯಲ್ಪಟ್ಟಳು. ಅವಳು ತನ್ನ ಸ್ವಜನರನ್ನು ಮರೆತಳು. ತೌರುಮನೆಯನ್ನು, ತನ್ನ ಕುಲವನ್ನು ಸಹ ಮರೆಯಬೇಕಾಯಿತು. ಅವಳು ಅರಸಿಯಾಗಿ ಪಟ್ಟಕ್ಕೆ ಬಂದು ನಿಂತಾಗ, ಅವಳು ತನ್ನ ಕುಲಕ್ಕಾಗಿ, ದೇವಜನರಿಗಾಗಿ ಮಾಡಿದ ತ್ಯಾಗ, ಉಪವಾಸ, ಪ್ರಾರ್ಥನೆಗಳು, ಪರಲೋಕದ ದೇವರನ್ನು ಮುಟ್ಟಿತು, ಅರಸನನ್ನು ಪ್ರೇರಿಸಿತು. ಅವಳು ತನ್ನ ಜನರನ್ನೂ, ತನ್ನ ಕುಲವನ್ನೂ ಕಾಪಾಡಿದಳು ಎಂದು ಎಸ್ತೇರಳ ಚರಿತ್ರೆಯು ಹೇಳುತ್ತದೆ. (ಎಸ್ತೇರಳು 2,3 ಅಧ್ಯಾಯ).

ದೇವಮಕ್ಕಳೇ, ಅಂದು ಎಲ್ಲೋ ಅನಾಥಳಾಗಿ ಬೆಳೆದ ಎಸ್ತೇರಳನ್ನು ಸಿದ್ಧಗೊಳಿಸಿ, ರಾಜಪುತ್ರಿಯ ಸ್ಥಾನಕ್ಕೆ ಏರಿಸಿ ಉನ್ನತಗೊಳಿಸಿದ ಪವಿತ್ರಾತ್ಮನು ನಿಮ್ಮನ್ನು ಕ್ರಿಸ್ತನೆಂಬ ಮದಲಿಂಗನಿಗೆ, ಶುದ್ಧ ಕನ್ಯೆಯಂತೆ ಒಪ್ಪಿಸಲ್ಪಡಲು ಸಿದ್ಧಗೊಳಿಸುವಂತೆ ಒಪ್ಪಿಸಿಕೊಡಿರಿ. ಆತನು ಆತ್ಮದಾಪ್ತನಾಗಿ ನಿಮ್ಮೊಂದಿಗಿರುವನು, ಆದ್ದರಿಂದ ನೀವು ಪರಿಶುದ್ಧರಾಗಿ ಜೀವಿಸಬೇಕಾದದು ಎಷ್ಟು ಅವಶ್ಯವಲ್ಲವೇ. “ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಪಾತಿವ್ರತ್ಯವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವುಂಟು” ಎಂದು ಅಪೊ.ಪೌಲನು ಹೇಳುತ್ತಾನೆ. (2ಕೊರಿ.11:2,3).

_*ನೆನಪಿಗೆ* : “ನನ್ನ ಪ್ರಿಯಳು, ನನ್ನ ಮದಲಗಿತ್ತಿಯು, ಅಗುಳಿ ಹಾಕಿದ ಉದ್ಯಾನ, ಬೇಲಿಯೊಳಗಿನ ಬುಗ್ಗೆ, ಮುಚ್ಚಿ ಮುದ್ರಿಸಿದ ಬಾವಿ ಆಗಿದ್ದಾಳೆ.” (ಪರಮ.4:22).

Kannada Song
*ಯೇಸುವೇ ರಕ್ಷಕನೇ ಪ್ರೀತಿಯ ಎನ್ ಪಿತನೇ*

👁‍🗨 Watch and be Blessed.
https://youtu.be/WLqGxSE3Gjs

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖  *_ಅನುದಿನದ ಆಹಾರ_*  📖⏰ _ನವೆಂಬರ್ *14* 2024_ ⏰👉🏽  *ಮನಸ್ಸಿನ ಚಿಂತನೆ!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆಹೆ. 1, 2🌠 *...
13/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *14* 2024_ ⏰

👉🏽 *ಮನಸ್ಸಿನ ಚಿಂತನೆ!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆಹೆ. 1, 2
🌠 *ಸಂಜೆ* : ಇಬ್ರಿ. 11:1-19

“ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ.” (ಹಗ್ಗಾ.1:5).

ಕರ್ತನು ಇಸ್ರಾಯೇಲ್ಯರ ಬಳಿ, “ಐಗುಪ್ತದೇಶದಿಂದ ನಾನು ನಿಮ್ಮನ್ನು ನಡಿಸಿಕೊಂಡು ಬಂದಂಥ ಮಾರ್ಗಗಳನ್ನೆಲ್ಲಾ ಮರೆತುಬಿಡದೆ ನೆನಪಿನಲ್ಲಿಡಿ” ಎಂದು ಹೇಳುತ್ತಾನೆ. ಹಿಂದೆ ನಡೆದುಬಂದ ದಾರಿಯಲ್ಲಿ ಕರ್ತನು ನಡಿಸಿದ್ದನ್ನು ಮನಸ್ಸಿಗೆ ತಂದುಕೊಳ್ಳುವಾಗ, ಮುಂದೆ ನಡೆಯಬೇಕಾದ ಜೀವಿತ ಮಾರ್ಗವನ್ನು ಕುರಿತು ಎಚ್ಚರವಹಿಸಲು ಅದು ಸಹಾಯಕವಾಗುತ್ತದೆ. ದಾವೀದನು ಕರ್ತನು ಮಾಡಿದ ಮಹೋಪಕಾರಗಳನ್ನು ಮನಸ್ಸಿಗೆ ತಂದುಕೊಂಡವನಾಗಿ ಕೀರ್ತ.103:2ರಲ್ಲಿ, “ಆದ್ದರಿಂದ ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ” ಎಂದು ಹೇಳಿ ಯೆಹೋವನನ್ನು ಕೊಂಡಾಡುತ್ತಾನೆ.

ಈ ಕಡೇ ದಿನಗಳಲ್ಲಿ ವಾಸಿಸುವ ನಾವೂ ಸಹ, ಪ್ರಪಂಚದ ಅಂತ್ಯವನ್ನು, ಅಂತ್ಯಕಾಲದಲ್ಲಿ ನಡೆಯುವ ಕಾರ್ಯಗಳನ್ನು ಕುರಿತು ಸತ್ಯವೇದದಲ್ಲಿ ಹೇಳಿರುವದನ್ನೆಲ್ಲಾ ನೆನಸಿಕೊಳ್ಳುವವರಾಗಿದ್ದೇವೆ; ಆತನು ಹೇಳಿರುವದೆಲ್ಲಾ ನೆರವೇರುತ್ತಿರುವದರಿಂದ ಕರ್ತನ ಬರೋಣವು ಬಹು ಸಮೀಪವಾಗಿದೆ ಎಂಬದನ್ನೂ ನಾವು ಮನಸ್ಸಿಗೆ ತಂದುಕೊಳ್ಳಬೇಕಾಗಿದೆ. ಕ್ರೈಸ್ತ ಜೀವಿತದಲ್ಲಿ ನಾವು ಹೇಗೆ ಓಡಿದ್ದೇವೆ, ಅಂತ್ಯದಲ್ಲಿ ಜಯಮಾಲೆಯನ್ನು ಹೊಂದಲು ನಾವು ಅರ್ಹರೇ? ಕರ್ತನು ನಮ್ಮಲ್ಲಿ ನಿರೀಕ್ಷಿಸುವ ಪರಿಶುದ್ಧತೆ, ನೀತಿ, ಪ್ರಾರ್ಥನಾ ಜೀವಿತ, ಆತ್ಮನ ಫಲಗಳು ಇವೆಯೇ? ಅಥವಾ ತಪ್ಪಿತಸ್ಥ ಮನೋಭಾವದಿಂದ ಬಿಡುಗಡೆ ಇಲ್ಲದವರಾಗಿ, ಗೊತ್ತುಗುರಿ ಇಲ್ಲದೆ ಓಡುತ್ತಿರುವಿರಾ? ಇದು ಚಿಂತನೆ ಮಾಡುವ ಕಾಲವಾಗಿದೆಯಲ್ಲವೇ?

ವರ್ಷಾಂತ್ಯಕ್ಕೆ ಬಂದಿರುವ ನಾವು ನಮ್ಮ ಲೌಕೀಕ ಕರ್ತವ್ಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದ್ದೇವೆಯೇ? ಅಥವಾ ಕ್ರಿಸ್ತೇಸುವು ಅಪೇಕ್ಷಿಸುವಂಥಾ ಆತ್ಮೀಕ ಜೀವಿತದಲ್ಲಿ ನಮ್ಮನ್ನು ತೊಡಗಿಸಿಕೊಂಡು ಸಿದ್ಧರಾಗಿದ್ದೇವೆಯೇ? “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣ ನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು? ಒಬ್ಬನು ತನ್ನ ಪ್ರಾಣಕ್ಕೆ ಏನು ಈಡು ಕೊಡಬಹುದು? (ಮಾರ್ಕ.8:36) ಎಂದು ಕರ್ತನೇ ಹೇಳಿರುವದನ್ನು ಚಿಂತನೆ ಮಾಡೋಣ. ದೇವಜನವೇ, ವರ್ಷಾರಂಭಕ್ಕಿಂತಲೂ, ವರ್ಷಾಂತ್ಯವು ಬಹು ವಿಶೇಷವಾಗಿರಬೇಕು.

_*ನೆನಪಿಗೆ* : “ಆದರೆ ಕಡೇವರೆಗೂ ತಾಳುವವನು ರಕ್ಷಣೆ ಹೊಂದುವನು. ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು. ಆಗ ಅಂತ್ಯ ಬರುವದು.” (ಮತ್ತಾ.24:13,14).

Kannada Song
*ಗಾಡಾಂಧಕಾರದಲ್ಲಿ ನಾ ನಡೆಯುವ ವೇಳೆಯಲಿ*

👁‍🗨 Watch and be Blessed.
https://youtu.be/uRXq7HvMD1I

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖

📖  *_ಅನುದಿನದ ಆಹಾರ_*  📖⏰ _ನವೆಂಬರ್ *12* 2024_ ⏰👉🏽  *ಪ್ರಾರ್ಥನೆಯ ಯೋಚನೆ!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಪ್ರಲಾಪ 1, 2...
11/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *12* 2024_ ⏰

👉🏽 *ಪ್ರಾರ್ಥನೆಯ ಯೋಚನೆ!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಪ್ರಲಾಪ 1, 2
🌠 *ಸಂಜೆ* : ಇಬ್ರಿ. 10:1-18

“ಯಾವ ಸಂಬಂಧವಾಗಿಯೂ ಚಿಂತೆ ಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನಾ ವಿಜ್ಞಾಪನೆಗಳನ್ನೂ ಮಾಡುತ್ತಾ...” (ಫಿಲಿ.4:6,7).

ನೀವು ತೀವ್ರವಾದ ಪ್ರಾರ್ಥನೆಯ ಮೂಲಕವಾಗಿ, ಆಳವಾದ ನಂಬಿಕೆಯುಳ್ಳವರಾಗಿ, ಕರ್ತನಲ್ಲಿ ನಿಮ್ಮ ಭಾರವನಿಡುವದರ ಮೂಲಕ ದೇವಶಾಂತಿಯನ್ನು ಹೊಂದಿಕೊಳ್ಳುವಿರಿ. “ಪ್ರಾರ್ಥನಾ ಜೀವಿತ” ಎಂಬದು ಸಮಾಧಾನ ಪ್ರಭುವಿನ ಹತ್ತಿರ ಸೇರುವದೇ ಆಗಿದೆ. ಕ್ರಿಸ್ತನಲ್ಲಿ ಪ್ರಾರ್ಥನೆ ಮಾಡಿ, ಎಲ್ಲರೊಂದಿಗಿನ ಸಮಾಧಾನವನ್ನು ಕಂಡುಕೊಳ್ಳಬೇಕು. ಪ್ರಾರ್ಥನೆಯ ವಿಶೇಷತೆಯನ್ನೂ ಪ್ರಾರ್ಥನಾ ಆತ್ಮವನ್ನೂ ಕರ್ತನೇ ನಿಮಗೆ ಅನುಗ್ರಹಿಸಿರುವದರಿಂದ, ನೀವು ಎಲ್ಲಾ ಸಮಸ್ಯೆಗಳನ್ನೂ, ಚಿಂತನೆಗಳನ್ನೂ ಕರ್ತನಿಗೆ ತಿಳಿಯಪಡಿಸಿದ ನಂತರ ಆತನ ಉತ್ತರಕ್ಕಾಗಿ ಕಾಯ್ದಿರಬೇಕು.

“ದೇವರ ಚಿತ್ತಕ್ಕೆ ಒಡಂಬಟ್ಟು ಸಮಾಧಾನ ಹೊಂದು, ಇದರಿಂದ ನಿಮಗೆ ಶುಭವಾಗುವದು” ಎಂದು ಯೋಬ.22:21ರಲ್ಲಿ ಓದುತ್ತೇವೆ. ಒಬ್ಬರೊಂದಿಗೆ ಒಬ್ಬರು ಮನ ತೆರೆದು ಮಾತಾಡುವಾಗ ಸಮಾಧಾನವುಂಟಾಗುವದಾದರೆ, ದೇವಪ್ರಭುವಿನೊಂದಿಗೆ ಪ್ರಾರ್ಥನೆಯಲ್ಲಿ ಮಾತನಾಡುತ್ತಾ ಸಂಪರ್ಕಿಸುವಾಗ, ಎಂಥಾ ಅದ್ಭುತವಾದ ಸಮಾಧಾನವೂ ನಿಮ್ಮಲ್ಲಿ ಉಕ್ಕುವದನ್ನು ನೀವು ಅನುಭವಿಸುವಿರಿ. ಪ್ರಾರ್ಥನೆಯು ದೇವಸಮಾಧಾನವನ್ನು ನಿಮ್ಮೊಳಗೆ ತರುವದು. “ತನ್ನ ಉನ್ನತಲೋಕದಲ್ಲಿ ಸಮಾಧಾನವನ್ನು ಸ್ಥಾಪಿಸಿದವನು ಆತನೇ” ಎಂದು ಯೋಬ.25:2ರಲ್ಲಿ ನೋಡುತ್ತೇವೆ. ಆ ಸಮಾಧಾನವನ್ನೇ ಕರ್ತನು ತನ್ನ ಶಿಷ್ಯರಿಗೆ ಒಂದು ಆಸ್ತಿಯಾಗಿ ನೀಡಿದನು. (ಯೋಹಾ.14:27). ಅದೇ ಆತನ ಸಮಾಧಾನ!

ಕರ್ತನ ಬಳಿ ನಿಮ್ಮನ್ನು ನಿಮ್ಮ ಸಮಸ್ಯೆಗಳನ್ನು ಕೊಂಡೊಯ್ಯುವಾಗ ಗುಣುಗುಟ್ಟದಿರಿ. ನಿಮ್ಮ ಭಿನ್ನಹಗಳನ್ನು, ಬೇಡಿಕೆಗಳನ್ನು ಸ್ತೋತ್ರಸಲ್ಲಿಸುತ್ತಾ ತಿಳಿಯಪಡಿಸಿರಿ. ಇದುವರೆಗೂ ಕರ್ತನು ನಿಮಗೆ ಮಾಡಿದ ಮಹೋಪಕಾರಗಳಿಗೆ ವಂದನೆ ಸಲ್ಲಿಸುವದೇ ಸ್ತೋತ್ರವಾಗಿದೆ. ನೀವು ಪ್ರಾರ್ಥಿಸುವಂತೆ ಕರ್ತನು ತಾನೇ ನಿಮ್ಮೊಳಗೆ ಭಿನ್ನವಿಸುವ ಆತ್ಮನನ್ನೂ, ಮೊರೆಯಿಡುವ ಆತ್ಮನನ್ನೂ ಸ್ತುತಿಸಿ ಸ್ತೋತ್ರ ಸಲ್ಲಿಸುವ ಆತ್ಮನನ್ನೂ ನಿಮ್ಮಲ್ಲಿ ತುಂಬಿಸಲಿ. ಕರ್ತನ ಪಾದದಲ್ಲಿ ನಿಮ್ಮನ್ನು ತಗ್ಗಿಸಿ ದೀನತೆಯಿಂದ ಕಣ್ಣೀರಿನಿಂದ ಪ್ರಾರ್ಥಿಸುವ ಪ್ರಾರ್ಥನೆಯನ್ನು ಆಲಿಸಿ, ನಿಮ್ಮ ಬಳಿ ಸಾಗಿಬಂದು ನಿಮ್ಮನ್ನು ದೈವಿಕ ಸಮಾಧಾನದಿಂದ ತುಂಬಿಸುವನು.

_*ನೆನಪಿಗೆ* : “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು.” (ಕೀರ್ತ.55:22).

Kannada Song
*ಎಲೀಯನ ದೇವರೇ ನಮ್ಮ ದೇವರು*

👁‍🗨 Watch and be Blessed.
https://youtu.be/Bna1vMrmGlo

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖

📖  *_ಅನುದಿನದ ಆಹಾರ_*  📖⏰ _ನವೆಂಬರ್ *10* 2024_ ⏰👉🏽  *ತಿರಸ್ಕಾರ!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆರೆ. 50🌠 *ಸಂಜೆ* : ...
09/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *10* 2024_ ⏰

👉🏽 *ತಿರಸ್ಕಾರ!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆರೆ. 50
🌠 *ಸಂಜೆ* : ಇಬ್ರಿ. 8

“ನೆರೆಯವನನ್ನು ತಿರಸ್ಕರಿಸುವವನು ದೋಷಿ; ದರಿದ್ರನನ್ನು ಕನಿಕರಿಸುವವನು ಧನ್ಯನು.” (ಜ್ಞಾನೋ.14:21).

ದಾವೀದನು ಸೌಲನಿಂದ ತಿರಸ್ಕರಿಸಲ್ಪಟ್ಟವನಾಗಿ, ಗುಹೆಗಳಲ್ಲಿಯೂ ಅರಣ್ಯದಲ್ಲೂ ಅವಿತುಕೊಂಡು ಜೀವಿಸಬೇಕಾದ ಪರಿಸ್ಥಿತಿ ಉಂಟಾಯಿತು. ಈ ಸಮಯದಲ್ಲಿ ಅನೇಕರು ಅವನ ಮೇಲೆ ದಯೆ ತೋರಿಸಿ ಸಹಾಯಮಾಡಿ ಅದನ್ನು ದಾವೀದನು ಸ್ಮರಿಸುತ್ತಾ, “ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು, ಯೆಹೋವನು ಆಪತ್ಕಾಲದಲ್ಲಿ ಅವನನ್ನು ರಕ್ಷಿಸುವನು” ಎಂದು ಕೊಂಡಾಡುತ್ತಾನೆ. (ಕೀರ್ತ.41:1).

ಕೆಲವರಿಗೆ ವ್ಯಾಧಿಯ ಕಷ್ಟವಿರಬಹುದು, ಕೆಲವರಿಗೆ ಬಡತನ, ದರಿದ್ರ, ಸಾಲಗಳ ತೊಂದರೆ ಇರಬಹುದು. ಮತ್ತೂ ಕೆಲವರನ್ನು ಕ್ರೂರಿಗಳಾದ ಮನುಷ್ಯರು ಬಾಧಿಸುತ್ತಿರಬಹುದು. ಇವೆಲ್ಲಕ್ಕಿಂತಲೂ ಅಘೋರವಾದ ಯಾತನೆ ಎಂದರೆ ಸೈತಾನನು ಮಾನವರನ್ನು ಪ್ರೇರಿಸಿ, ಪಾಪಕ್ಕೆ ಎಳೆದೊಯ್ದು, ಅವರ ಜೀವಿತವನ್ನೇ ಹಾಳುಮಾಡಿ, ಅವರನ್ನು ತಿರಸ್ಕಾರಕ್ಕೆ ಗುರಿಮಾಡಿ, ಕೊನೆಗೆ ನರಕಕ್ಕೆ ಎಳೆದುಕೊಂಡು ಹೋಗುವದೇ ಅಘೋರವಾದದ್ದು. ಇಂಥವರಿಗಾಗಿ ನಿಮ್ಮ ಹೃದಯ ಮರುಗುವದೇ? ಇವೆಲ್ಲವುಗಳಿಂದ ನಿಮ್ಮನ್ನು ಬಿಡಿಸಿ ಕಾಪಾಡುವಾತನು ಇದ್ದಾನೆಂಬ ಸತ್ಯವನ್ನು ಅವರಿಗೆ ಹೇಳಿ, ಸುವಾರ್ತೆಯ ಮೂಲಕ ಅವರಿಗೆ ವಿಮೋಚನೆಯನ್ನು ಸಾರಲು ಸಿದ್ಧವೇ? ಪಾಪದ ಗುಲಾಮತನದಿಂದ ತಿರಸ್ಕಾರಕ್ಕೆ ಒಳಗಾಗಿ, ದಿಕ್ಕಿಲ್ಲದವರನ್ನು ಪರಾಂಬರಿಸಲು ಮುಂದೆ ಬರುವಿರಾ?

ಒಂದು ದಿನ ಯೇಸುಸ್ವಾಮಿಯು ಸಭಾಮಂದಿರದೊಳಗೆ ಉಪದೇಶ ಮಾಡುತ್ತಿರುವಾಗ, ದೆವ್ವ ಬಡಿದು ನಡು ಬೊಗ್ಗಿಹೋದ ಸ್ತ್ರೀಯನ್ನು ಸಂಧಿಸಿದನು. ಕರ್ತನು ಅವಳನ್ನು ಕನಿಕರಿಸಿ, ಅವಳ ಮೇಲೆ ತನ್ನ ಕೈಗಳನ್ನಿಟ್ಟು “ಅಮ್ಮಾ, ನಿನಗೆ ರೋಗ ಬಿಡುಗಡೆಯಾಯಿತು” ಎಂದು ಹೇಳಿ ಅವಳನ್ನು ಸ್ವಸ್ಥಪಡಿಸಿದನಲ್ಲವೇ? (ಲೂಕ.13:12). ಬಾಧೆಕಷ್ಟಗಳಿಗೆ ಒಳಗಾದವರ ಮೇಲೆ ದಯೆ ತೋರಿಸುವವರಿಗೆ ಕರ್ತನು ಅನುಗ್ರಹ ಮಾಡುವ ಆಶೀರ್ವಾದಗಳು ಅನೇಕ; ಮೊದಲನೆಯದಾಗಿ, ಆಪತ್ಕಾಲದಲ್ಲಿ ಅವರನ್ನು ರಕ್ಷಿಸುವನು; ಎರಡನೆಯದಾಗಿ ಅವನ ಪ್ರಾಣವನ್ನು ಉಳಿಸಿ ಕಾಪಾಡುವನು; ದಯಾದೃಷ್ಟಿಯುಳ್ಳವನು ಆಶೀರ್ವಾದವನ್ನು ಪಡೆಯುವನು; ಅವನು ತನ್ನ ಅನ್ನವನ್ನು ಬಡವರಿಗೆ ಕೊಡುತ್ತಾನಲ್ಲಾ. (ಜ್ಞಾನೋ.22:9). ನಾಲ್ಕನೆಯದಾಗಿ, ಶತ್ರುಗಳ ಅಧೀನಕ್ಕೆ ಕೊಡದೆ ತಪ್ಪಿಸುವನು. ದೇವಮಕ್ಕಳೇ, ಈ ಆಶೀರ್ವಾದಗಳಿಗೆ ನೀವೂ ಪಾತ್ರರಾಗಿರಿ.

_*ನೆನಪಿಗೆ* : “ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು.” (1ಯೋಹಾ.3:8).

Kannada Song
*ಅಭಿಷೇಕಿಸುವ ನನ್ನ ಯೇಸು*

👁‍🗨 Watch and be Blessed.
https://youtu.be/x25_ccxkseg

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖

📖  *_ಅನುದಿನದ ಆಹಾರ_*  📖⏰ _ನವೆಂಬರ್ *09* 2024_ ⏰👉🏽  *ಮನಸ್ಸಾಕ್ಷಿ!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆರೆ. 48, 49🌠 *ಸಂ...
08/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *09* 2024_ ⏰

👉🏽 *ಮನಸ್ಸಾಕ್ಷಿ!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆರೆ. 48, 49
🌠 *ಸಂಜೆ* : ಇಬ್ರಿ. 7

“ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಯೋಚನೆಗಳು ವಾದಿ ಪ್ರತಿವಾದಿಗಳಂತೆ, ಇದು ತಪ್ಪೆಂದು ತಪ್ಪಲ್ಲವೆಂದು ಸೂಚಿಸುತ್ತವೆ.” (ರೋಮಾ.2:15).

ಎಲ್ಲಾ ಮಾನವ ವರ್ಗದವರೇ ಆದರೂ, ಅವರು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ, ಕರ್ತನು ಅವರಲ್ಲಿ “ಮನಸ್ಸಾಕ್ಷಿ”ಯನ್ನಿಟ್ಟಿರುವನು. ಅವರನ್ನೇ ಅಪೊ.ಪೌಲನು “ಧರ್ಮಶಾಸ್ತ್ರವಿಲ್ಲದ ಅನ್ಯಜನರು” ಎಂದು ಹೇಳುತ್ತಾನೆ. ಈ ಮನಸ್ಸಾಕ್ಷಿ ಎಂಬದು ಯೋಚನೆಗಳಲ್ಲೂ, ಕ್ರಿಯೆಗಳಲ್ಲೂ, ತೀರ್ಪು ಹೇಳುತ್ತಲೇ ಇರುತ್ತದೆ. ತಪ್ಪು ಮಾಡುವಾಗ ಅವರ ಮನಸ್ಸಾಕ್ಷಿಯು ಅವನನ್ನು ಚುಚ್ಚುತ್ತದೆ. ಅವನಿಗೆ ಅವನ ತಪ್ಪನ್ನು ಅವನ ಮನಸ್ಸು ಹೇಳುವವರಿಂದ ಅವನು ತವಕಗೊಳ್ಳುತ್ತಾನೆ.

ಕ್ರಿಸ್ತನನ್ನು ಅರಿತವರು ಧರ್ಮಶಾಸ್ತ್ರದ ಪ್ರಕಾರ ನ್ಯಾಯತೀರಿಸಲ್ಪಡುವರು. ಕರ್ತನನ್ನು ಅರಿಯದವರು ತಮ್ಮಲ್ಲಿರುವ ಮನಸ್ಸಾಕ್ಷಿಯ ಪ್ರಕಾರ ನ್ಯಾಯತೀರಿಸಲ್ಪಡುವರು. ಬಿಳಿಯ ಸಿಂಹಾಸನದ ನ್ಯಾಯತೀರ್ಪಿನಲ್ಲಿ ಪ್ರತಿಯೊಬ್ಬ ಮನುಷ್ಯನು ಅವನವನ ಜೀವಿತದಲ್ಲಿ ಮಾಡಿದ ಒಳ್ಳೆಯದು ಕೆಟ್ಟದ್ದು ಎಂಬದೆಲ್ಲವೂ ಒಂದು ಪುಸ್ತಕದಂತೆ ತೆರೆದಿಡಲ್ಪಡುವದು. ಕರ್ತನೇ ಮಾನವನನ್ನು ಉಂಟುಮಾಡಿದ್ದರಿಂದ ಇದಕ್ಕೆ ಪ್ರತಿ ಮಾನವನೂ ಬದ್ಧನು.

ಆಫ್ರಿಕಾ ದೇಶದ ವಿಶ್ವಾಸಿಗಳು ಮನಸ್ಸಾಕ್ಷಿಯನ್ನು “ಮುಮ್ಮೂಲೆಯ ಕತ್ತಿ”ಗೆ ಹೋಲಿಸಿದ್ದಾರೆ. ಒಬ್ಬ ಮನುಷ್ಯನು ಪಾಪ ಮಾಡುವಾಗ, ಅವನ ಹೃದಯದಲ್ಲಿರುವ ಮುಮ್ಮೂಲೆಯ ಕತ್ತಿ ಸುತ್ತಲಾರಂಭಿಸುದು. ದೊಡ್ಡ ಪಾಪ ಮಾಡಿದವನಾದರೆ ಆ ಕತ್ತಿ ವೇಗವಾಗಿ ಸುತ್ತಿ ಹರಿಯುವದು. ಆದರೆ ಅದನ್ನೂ ಮೀರಿ ಪಾಪದಲ್ಲಿಳಿದರೆ, ಆ ಮುಮ್ಮೂಲೆಯ ಕತ್ತಿ ಮೊಂಡಾಗಿಬಿಡುವದು ಎಂಬದೇ ಮನಸ್ಸಾಕ್ಷಿ ಎಂಬದಕ್ಕೆ ಆ ಜನರು ಕೊಡುವ ವಿವರಣೆಯಾಗಿದೆ.

ಒಬ್ಬ ಮನುಷ್ಯನ ಮನಸ್ಸಾಕ್ಷಿಯನ್ನು ಶುದ್ಧೀಕರಿಸುವಂಥದ್ದು ಯೇಸುಕ್ರಿಸ್ತನ ಪವಿತ್ರ ರಕ್ತವೇ. ಪಾಪವನ್ನು ಒಪ್ಪಿಕೊಂಡು ಅರಿಕೆ ಮಾಡದಿದ್ದಲ್ಲಿ ಅವನಿಗೆ ಸಮಾಧಾನ ಇರುವದಿಲ್ಲ. “ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ, ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು.” (1ಯೋಹಾ.1:9).

_*ನೆನಪಿಗೆ* : “ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಮ್ಮನ್ನು ನಿರ್ಜೀವ ಕರ್ಮಗಳಿಂದ ಬಿಡಿಸಿ ನಾವು ಜೀವವುಳ್ಳ ದೇವರನ್ನು ಆರಾಧಿಸುವವರಾಗುವಂತೆ....ಶುದ್ಧೀಕರಿಸುವದಲ್ಲವೇ.” (ಇಬ್ರಿ.9:14).

Kannada Song
*ಕ್ರಿಸ್ತನೇ ಮಾರ್ಗ ಸತ್ಯ ಜೀವವು*

👁‍🗨 Watch and be Blessed.
https://youtu.be/dJ2LIzwPZfk

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖

📖  *_ಅನುದಿನದ ಆಹಾರ_*  📖⏰ _ನವೆಂಬರ್ *08* 2024_ ⏰👉🏽  *ಅಭಿಪ್ರಾಯ!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆರೆ. 46, 47🌠 *ಸಂಜೆ...
07/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *08* 2024_ ⏰

👉🏽 *ಅಭಿಪ್ರಾಯ!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆರೆ. 46, 47
🌠 *ಸಂಜೆ* : ಇಬ್ರಿ. 6

“ಯಾವದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನೂ ದೇವರು ನಿಮಗೆ ತೋರಿಸಿಕೊಡುವನು.” (ಫಿಲಿ.3:15).

ಚಿಂತನೆಯು ಜ್ಞಾನವನ್ನು ಬಿತ್ತುತ್ತದೆ. ತಿಳುವಳಿಕೆ ಉಂಟಾಗಿ ಕ್ರಿಯೆನಡೆಯುತ್ತದೆ. ನಿಮ್ಮ ಚಿಂತನೆಗಳಲ್ಲಿ ಒಳ್ಳೆಯ ಅಭಿಪ್ರಾಯಗಳು ಮೂಡುವಾಗ, ನಿಮ್ಮ ಕಾರ್ಯಗಳೆಲ್ಲವೂ ಒಳ್ಳೆಯವುಗಳಾಗಿ, ಉತ್ತಮವಾದದ್ದಾಗಿ ಇತರರಿಗೆ ಉಪಯುಕ್ತವಾಗಿರುವವು. ಒಬ್ಬ ವ್ಯಕ್ತಿಯನ್ನು ಕುರಿತು, ಒಂದು ಪರಿಸ್ಥಿತಿಯನ್ನು ಕುರಿತು, ಒಂದು ಸಮಸ್ಯೆಯನ್ನು ಕುರಿತು ಆಲೋಚಿಸಿ ಆ ವಿಷಯದಲ್ಲಿ ಒಂದು ಒಳ್ಳೆಯ ಅಭಿಪ್ರಾಯಕ್ಕೆ ಬರಲು ನಿಮಗೆ ಜ್ಞಾನ ಅವಶ್ಯ.

ರಕ್ಷಣಾ ಇಲಾಖೆಗಳು, ಇತರೆ ದೇಶದ ಸೈನ್ಯಗಳ ಬಲಾಬಲಗಳನ್ನು ತಿಳಿಯಲು ಯತ್ನಿಸುತ್ತವೆ. ಇದರಂತೆ ತಾವೂ ತಮ್ಮ ಸೈನ್ಯದ ಬಲವನ್ನು ಹೆಚ್ಚಿಸಿಕೊಳ್ಳಬಹುದೆಂಬದು ಅವರ ಅಭಿಪ್ರಾಯವಷ್ಟೆ. ಅದಕ್ಕಾಗಿ ಗೂಢಾಚಾರರನ್ನೂ, ರಹಸ್ಯದಳಗಳನ್ನೂ ನೇಮಿಸುತ್ತಾರೆ. ತಮಗೆ ಯುದ್ಧ ಸಂಭವಿಸಿದರೆ ತಾವು ಜಯಿಸಬಹುದೆಂಬದು ಅವರ ಅಭಿಪ್ರಾಯ. ಆದರೆ ಕರ್ತನು, ಪ್ರವಾದಿಯಾದ ಎಲೀಷನಿಗೆ ಕೊಟ್ಟಂಥ ಜ್ಞಾನವನ್ನು ನೋಡಿರಿ, ಅರಿವನ್ನು ಹೊಂದುವ ಜ್ಞಾನದ ವರದ ಮೂಲಕ ಎಲೀಷನಿಗೆ ಶತ್ರುವಿನ ಸೈನ್ಯದ ರಹಸ್ಯವನ್ನು ತಿಳಿಸಿಕೊಟ್ಟನು. ಆದ್ದರಿಂದ ಇಸ್ರಾಯೇಲ್ಯರು ಕಾಪಾಡಲ್ಪಟ್ಟರು. ಅರಾಮ್ಯರ ಸೈನ್ಯವು ಎಲ್ಲೆಲ್ಲಿ ಹೊಂಚುಹಾಕಿ ಕಾಯುತ್ತಿದೆ ಎಂಬದನ್ನೆಲ್ಲಾ ಎಲೀಷನು ಇಸ್ರಾಯೇಲ್ಯರ ಅರಸನಿಗೆ ಹೇಳಿ ಕಳುಹಿಸುತ್ತಿದ್ದನು. ಇದರಿಂದ ಕಳವಳಗೊಂಡ ಅರಾಮ್ಯರ ಅರಸನು, ತನ್ನವರಲ್ಲಿ ಯಾರೋ ಇಸ್ರಾಯೇಲ್ಯರ ಪಕ್ಷದವರಿದ್ದಾರೆ ಎಂದು ಸಂಶಯಪಟ್ಟನು. ಆಗ ಅವನ ಸೇವಕನು “ಅರಸನೇ ಹಾಗಲ್ಲ, ಇಸ್ರಾಯೇಲ್ಯರಲ್ಲಿ ಎಲೀಷನೆಂಬ ಒಬ್ಬ ಪ್ರವಾದಿ ಇದ್ದಾನೆ, ಅವನು ನೀನು ಮಲಗುವ ಕೋಣೆಯಲ್ಲಿ ಆಡುವ ಮಾತುಗಳನ್ನೂ ಸಹ ಅರಿತುಕೊಂಡು ಇಸ್ರಾಯೇಲ್ಯರ ಅರಸನಿಗೆ ಎಚ್ಚರಿಕೆ ಕೊಡುತ್ತಾನೆ.” (2ಅರ.6:11,12) ಎಂದು ಹೇಳಿದನು.

ದೇವಮಕ್ಕಳೇ, ಅನೇಕ ವೇಳೆ ನೀವು ಕೆಲಸ ಮಾಡುವ ಕಡೆಗಳಲ್ಲಿ ನಿಮಗೆ ವಿರೋಧವಾಗಿ ಸಂಚು ನಡೆದಿರಬಹುದು ಅಥವಾ ಮಾಂತ್ರಿಕ ಮುಂತಾದವುಗಳ ಉಪಟಳವಿರಬಹುದು. ಆದರೆ ಭಯಪಡಬೇಡಿರಿ. ವಿರೋಧಿಯಿಂದ ತಪ್ಪಿಸಿಕೊಳ್ಳುವ ಜ್ಞಾನವನ್ನೂ ದೇವಬಲವನ್ನೂ ಕರ್ತನು ನಿಮಗೆ ಕೊಡುವನು.

_*ನೆನಪಿಗೆ* : “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು... ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿ ಎಂದು ನೀನು ಖಂಡಿಸುವಿ.” (ಯೆಶಾ.54:17).

Kannada Song
*ಬಾಳು ಬೆಳಗಲಿ*

👁‍🗨 Watch and be Blessed.
https://youtu.be/3Bh2RsdULo0

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖

📖  *_ಅನುದಿನದ ಆಹಾರ_*  📖⏰ _ನವೆಂಬರ್ *07* 2024_ ⏰👉🏽  *ಚಪಲ ಬುದ್ಧಿ!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆರೆ. 43, 44, 45🌠...
06/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *07* 2024_ ⏰

👉🏽 *ಚಪಲ ಬುದ್ಧಿ!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆರೆ. 43, 44, 45
🌠 *ಸಂಜೆ* : ಇಬ್ರಿ. 5

“ಚಪಲಚಿತ್ತರನ್ನು ದ್ವೇಷಿಸುತ್ತೇನೆ; ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುತ್ತೇನೆ.” (ಕೀರ್ತ.119:113).

ಚಲಪಚಿತ್ತ, ಚಪಲ ಬುದ್ಧಿ ಬಹಳ ಕೆಟ್ಟ ಗುಣ. ಅದನ್ನು ಆರಂಭದಲ್ಲೇ ಕಂಡುಹಿಡಿದು ಬಿಡುಗಡೆ ಹೊಂದಬೇಕು. ಕೆಲವರು ಲೌಕೀಕ ಕಾರ್ಯಗಳನ್ನೇ ಚಿಂತಿಸುತ್ತಾ, ಮನಸ್ಸಿನಲ್ಲೇ ಕಲ್ಪನಾಕೋಟೆಯನ್ನು ಕಟ್ಟಿ ಹಾರಾಡುತ್ತಾ ವ್ಯರ್ಥವಾದ ಚಿಂತನೆಯೊಳಗೆ ತೂರಿಕೊಳ್ಳುತ್ತಾರೆ ಮತ್ತು ಸಂದೇಹಪಡುವವರಾಗಿ ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆಯುತ್ತಿರುತ್ತಾರೆ. “ಎರಡು ಮನಸ್ಸುಳ್ಳವನೂ ತನ್ನ ನಡತೆಯಲ್ಲೆಲ್ಲಾ ಚಂಚಲನೂ ಆಗಿದ್ದಾನೆ” ಎಂದು ಯಾಕೋ.1:8ರಲ್ಲಿ ಹೇಳಿದೆ.

ಕಾಲೇಜಿನಲ್ಲಿ ಕಲಿಯಲು ಹೋದವನು, ವ್ಯರ್ಥವಾದ ಯೋಚನೆಯಲ್ಲಿ ಮುಳುಗಿದರೆ, ಅವನು ಅಂತ್ಯದಲ್ಲಿ “ಪ್ರೇಮ, ಮೋಹ” ಎಂಬ ಮಾಯೆಯೊಳಗೆ ಸಿಕ್ಕಿಕೊಂಡು, ಹೊರಬರಲಾರದೆ ತನ್ನ ಭವಿಷ್ಯವನ್ನೇ ಹಾಳುಮಾಡಿಕೊಳ್ಳುವನು. ಆದಕಾರಣ ಚಿಂತನೆಯನ್ನು ಹತೋಟಿಯಲ್ಲಿಡಬೇಕು. ಒಂದು ಬಸ್ ವಾಹನ ಚಾಲಕನು ತನ್ನ ಹಾಗೂ ಪ್ರಯಾಣಿಸುವವರೆಲ್ಲರ ಪ್ರಾಣಕ್ಕೆ ತಾನು ಹೊಣೆ ಎಂಬದನ್ನು ಮನಸ್ಸಿನಲ್ಲಿಟ್ಟುಕೊಂಡು, ಗಮನವಾಗಿ ಬಸ್ಸನ್ನು ಚಲಾಯಿಸಬೇಕು. ತನ್ನ ಚಿಂತನೆಯನ್ನು ಎಲ್ಲಿಯೋ ಹರಿಯಬಿಟ್ಟು ಏನೋ ಯೋಚನೆಯಲ್ಲಿ ಬಸ್ಸನ್ನು ನಡಿಸಿದರೆ ಅದು ದೊಡ್ಡ ಆಪತ್ತಿಗೆ ಗುರಿಯಾಗುವದು.

ಇಂದು ಅನೇಕರು ವ್ಯರ್ಥವಾದ ಚಿಂತನೆಗೆ ಆಸ್ಪದ ಕೊಡುತ್ತಾರೆ. ಒಬ್ಬ ಯುವಕನು ಹೀಗೆ ಹೇಳಿದನು, “ನನ್ನ ಎದುರುಮನೆಯಲ್ಲಿರುವವನು ತನ್ನ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡು ಸಂತೋಷವಾಗಿರಿಸಲಿಲ್ಲ; ನಾನು ಆ ಹೆಣ್ಣಿಗೂ ಮಕ್ಕಳಿಗೂ ಒಳ್ಳೆಯ ಬಾಳನ್ನು ಕೊಡಲು ಆಶಿಸುತ್ತೇನೆ. ಅವಳನ್ನೂ, ಆ ಮಕ್ಕಳನ್ನೂ ಕರೆದುಹೋಗಿ, ಅವಳನ್ನು ವಿವಾಹಮಾಡಿಕೊಂಡು ಅವಳನ್ನೂ ಅವಳ ಮಕ್ಕಳನ್ನೂ ಸಂತೋಷವಾಗಿರಿಸಲು ಬಯಸುತ್ತೇನೆ” ಎಂದನು. ಇದು ಒಂದು ದುರ್ನಡತೆ, ಅಕ್ರಮವಾದ ಚಿಂತನೆ. ಅವರು ಕುಟುಂಬವಾಗಿ ಚೆನ್ನಾಗಿರಲೆಂದು ಪ್ರಾರ್ಥಿಸಬೇಕೇ ಹೊರತು, ಬೇರೆ ಚಿಂತನೆ ಕೂಡದು.

ಒಬ್ಬ ಮನುಷ್ಯನು ತನ್ನ ಆತ್ಮವನ್ನೂ ಚಿಂತನೆಗಳನ್ನೂ ಕರ್ತನ ಆಶ್ರಯದಲ್ಲಿ, ಕರ್ತನ ರಕ್ತದ ಕೋಟೆಯಲ್ಲಿರಿಸಿ ಕಾಪಾಡಿಕೊಳ್ಳದಿದ್ದರೆ, ಅವನು ಗೋಡೆ ಬಿದ್ದ ಹಾಳೂರಿಗೆ ಸಮಾನ.

_*ನೆನಪಿಗೆ* : “ಜ್ಞಾನಿಯು ಕೇಡಿಗೆ ಭಯಪಟ್ಟು ಓರೆಯಾಗುವನು; ಜ್ಞಾನಹೀನನು ಸೊಕ್ಕೇರಿ ಭಯವನ್ನು ಲಕ್ಷಿಸನು.” (ಜ್ಞಾನೋ.14:16).

Kannada Song
*ಜೀವ ಜಲವೇ ನನ್ನ ದೇವರಾತ್ಮನೇ*

👁‍🗨 Watch and be Blessed.
https://youtu.be/HMjDfdhu15U

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖

📖  *_ಅನುದಿನದ ಆಹಾರ_*  📖⏰ _ನವೆಂಬರ್ *06* 2024_ ⏰👉🏽  *ಯೋಚನೆಗಳನ್ನು ಕಾಯುವದು!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆರೆ. 40...
05/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *06* 2024_ ⏰

👉🏽 *ಯೋಚನೆಗಳನ್ನು ಕಾಯುವದು!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆರೆ. 40, 41, 42
🌠 *ಸಂಜೆ* : ಇಬ್ರಿ. 4

“ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತಯೇಸುವಿನಲ್ಲಿ ಕಾಯುವದು.” (ಫಿಲಿ.4:7).

ಕರ್ತನ ಪ್ರಸನ್ನತೆಯಲ್ಲಿ ದೈವಿಕ ಶಾಂತಿಯುಂಟು. ಆ ದೈವಿಕ ಶಾಂತಿಯು ಒಂದು ನದಿಯಂತೆ ಪರಲೋಕದ ದೇವರಿಂದ ಇಳಿದು ಬಂದು ನಮ್ಮ ಹೃದಯವನ್ನು ಆವರಿಸಿಕೊಳ್ಳುವದು. ಇದು ಒಂದು ಉನ್ನತ ಅನುಭವ. ಪ್ರತಿನಿತ್ಯವೂ ಮುಂಜಾನೆಯಲ್ಲಿ ದೇವಪ್ರಸನ್ನತೆಯನ್ನು ನೀವು ಗ್ರಹಿಸುವಾಗ, ಎಲ್ಲಾ ಗ್ರಹಿಕೆಗೂ ಮೇಲಾದ ದೇವಸಮಾಧಾನವು ನಿಮ್ಮ ಹೃದಯದ ಚಿಂತನೆಗಳನ್ನು ಕ್ರಿಸ್ತನಲ್ಲಿ ಕಾಯುವದು. ಅದು ನಿಮ್ಮ ಭಯವನ್ನೂ ಕಳವಳವನ್ನೂ ಅಗಲಿಸುವದು.

ಸತ್ಯವೇದವು “ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ.” (2ತಿಮೊ.1:7) ಎಂದು ಹೇಳುತ್ತದೆ. ಆದ್ದರಿಂದಲೇ ನಾವು ಸಮಾಧಾನವಾಗಿರಲು ಸಾಧ್ಯವಾಗಿದೆ. ಇಲ್ಲದಿದ್ದಲ್ಲಿ ಈ ಅಂತ್ಯದಿನಗಳಲ್ಲಿ ಮಾನವನಲ್ಲಿ ಇರಬೇಕಾದ ಶಾಂತಿ ಸಮಾಧಾನ ಎಲ್ಲಿ ಹೋಯಿತು ಎಂದು ಯೋಚಿಸುವಂಥ ಕಾರ್ಯಗಳನ್ನು ನೋಡಿ ತವಕಪಡದೆ ಇರುವದು ಸಾಧ್ಯವೇ ಇಲ್ಲವಾಗಿದೆ. ಸಮಾಧಾನವನ್ನು ಕೆಡಿಸುವ ಕಹಿತನ, ಕೋಪ, ಇವನ್ನೆಲ್ಲಾ ಬೇರುಸಮೇತ ಕಿತ್ತು ಬಿಸಾಡಿರಿ. ಅಸಾಧ್ಯ ಕಾರ್ಯಗಳಿಗೆ ದೂರವಿದ್ದುಕೊಳ್ಳಿರಿ. ಇತರರಿಗಾಗಿ ಹೊಣೆಯಾಗದಿರಿ. ಕರ್ತನನ್ನೇ ಆತುಕೊಂಡು ಆತನ ಚಿತ್ತವನ್ನು ನೆರವೇರಿಸಿರಿ. ಆಗ ನೀವು ಎಂದೆಂದೂ ವಂಚಿತರಾಗುವದಿಲ್ಲ. “ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ.” (ಯೆಶಾ.26:3).

ದೇವಸಮಾಧಾನವು ನಿಮ್ಮ ಹೃದಯಗಳನ್ನು ಕಾಯಬೇಕಾದಲ್ಲಿ, ನಿಮ್ಮ ಜೀವಿತದಲ್ಲಿ ಸಕಲವೂ ಒಳ್ಳೆಯದಕ್ಕಾಗಿಯೇ ನಡೆಯುತ್ತದೆ ಎಂದು ನಂಬಿರಿ. “ಯಾವ ಸಂಬಂಧವಾಗಿಯೂ ಚಿಂತನೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನಾಗಿ ಪ್ರಾರ್ಥನೆ ವಿಜ್ಞಾಪನೆಯನ್ನೂ ಸಲ್ಲಿಸಿರಿ.” (ಫಿಲಿ.4:6). ದೇವಮಕ್ಕಳೇ, ನೀವು ಹಾಗೆ ಎಲ್ಲವನ್ನೂ ಕರ್ತನಿಗೆ ತಿಳಿಯಪಡಿಸುವಾಗ, ಆ ಸಮಾಧಾನವು ನಿಮ್ಮಲ್ಲಿ ಬರುವದು.

_*ನೆನಪಿಗೆ* : “ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ. ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ.” (ಯೋಹಾ.14:27).

Kannada Song
*ನನ್ ಯೇಸುವೇ ಓ ನನ್ನ ಪ್ರಭುವೇ*

👁‍🗨 Watch and be Blessed.
https://youtu.be/81BG2VotTfE

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖

📖  *_ಅನುದಿನದ ಆಹಾರ_*  📖⏰ _ನವೆಂಬರ್ *05* 2024_ ⏰👉🏽  *ಒಳಗಿನ ಯೋಚನೆ!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆರೆ. 37, 38, 39...
04/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *05* 2024_ ⏰

👉🏽 *ಒಳಗಿನ ಯೋಚನೆ!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆರೆ. 37, 38, 39
🌠 *ಸಂಜೆ* : ಇಬ್ರಿ. 3

“ಅವನು ತನ್ನ ಒಳಗಿನ ಯೋಚನೆಯಂತೆಯೇ ಇದ್ದಾನೆ.” (ಜ್ಞಾನೋ.23:7).

ನೀವು ನಿಮ್ಮ ಯೋಚನೆಗಳಲ್ಲಿ ಸಹ ಜಾಗ್ರತೆಯಿಂದಿರಬೇಕು. ಒಬ್ಬ ಮನುಷ್ಯನ ಮನಸ್ಸು, ಮಾತು, ಕ್ರಿಯೆ ಇವು ಮೂರು ಅವನ ಜೀವಿತವನ್ನೇ ನಿರ್ಣಯಿಸುವದು. ಯೋಚನೆಗಳೇ ಮಾತುಗಳಾಗಿ ಬರುತ್ತವೆ. ನಂತರ ಮಾತುಗಳು ಕಾರ್ಯವಾಗಿ ಬದಲಾಗುವದು. ಎಲ್ಲಾ ಯೋಚನೆಗಳನ್ನೂ ಕ್ರಿಸ್ತನಲ್ಲಿ ವಿಧೇಯವಾಗುವಂತೆ ಸೆರೆಹಿಡಿಯುವವರಾಗಿರಬೇಕು. (2ಕೊರಿ.10:5). ಒಳಗಿನ ಆಲೋಚನೆಗಳಲ್ಲಿ ಜಯಶಾಲಿಯಾದವನೇ ತನ್ನ ಜೀವಿತದಲ್ಲಿ ಪರಿಶುದ್ಧತೆಯನ್ನು ಕಾಯ್ದುಕೊಳ್ಳುವನು. ಯೋಚನೆಗಳಲ್ಲೂ, ಚಿಂತನೆಗಳಲ್ಲೂ ನೀವು ಸತ್ಯವಂತರಾಗಿದ್ದು, ಮನದಲ್ಲೂ, ನೆನಪುಗಳಲ್ಲೂ ನಿಷ್ಠಾವಂತರಾಗಿರಬೇಕೆಂದು ಕರ್ತನು ಬಯಸುತ್ತಾನೆ. ಪ್ರತಿಯೊಬ್ಬನ ಯೋಚನೆಗಳನ್ನೂ ಆತನು ದೂರದಿಂದಲೇ ತಿಳಿದಿರುವನು.

ಯೇಸುಕ್ರಿಸ್ತನ ದಿನಗಳಲ್ಲಿ ಫರಿಸಾಯರ, ಸದ್ದುಕಾಯರ, ಯಾಜಕರ ಆಲೋಚನೆಗಳನ್ನು ತಿಳಿದಿದ್ದನು ಎಂದು ಮತ್ತಾ.9:4ರಲ್ಲಿ ನಾವು ಓದುತ್ತೇವೆ. ಅದೇ ರೀತಿ ನೋಹನ ದಿನಗಳಲ್ಲಿಯೂ ಸಹ ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವೂ ಬರೀ ಕೆಟ್ಟದ್ದೇ ಎಂದು ಯೆಹೋವನು ನೋಡಿದನು ಎಂದು ಆದಿ.6:5ರಲ್ಲಿ ನೋಡುತ್ತೇವೆ. ಆದ್ದರಿಂದ ನಿಮ್ಮ ಆಲೋಚನೆಗಳನ್ನು ಕುರಿತು ಜಾಗ್ರತೆಯಾಗಿರಬೇಕು.

ಇಂದು ಅನೇಕರು ಪಾಪದಲ್ಲಿ ಬೀಳುವದನ್ನು ಕಾಣುತ್ತೇವೆ. ಯೋಚನೆಗಳಲ್ಲಿ ಪಾಪ ಸಂತೋಷಗಳನ್ನು ಕಲ್ಪಿಸಿಕೊಳ್ಳುತ್ತಾರೆ. ಅದಕ್ಕೆ ಸೆಲ್‍ಫೋನ್ ಸಹಾಯಕವಾಗಿದೆ. ಸಿನಿಮಾ ಮೋಹವುಳ್ಳವರು, ಅದರಲ್ಲಿನ ಸಂಭವಗಳನ್ನೆಲ್ಲಾ ಮನದಲ್ಲಿ ಕಲ್ಪನೆ ಮಾಡಿಕೊಂಡು, ವ್ಯರ್ಥಚಿಂತನೆಗೂ, ಆಸೆ ಇಚ್ಛೆಗಳಿಗೆ ಗುಲಾಮರಾಗಿ ಸಂದರ್ಭ ಸಿಕ್ಕುವಾಗ ದುಡುಕುತನದಿಂದ ಪಾಪಕೃತ್ಯಗಳಲ್ಲಿ ಮುಳುಗಿಹೋಗುತ್ತಾರೆ. “ಅಯ್ಯೋ, ಇಂಥಾ ಪಾಪಮಾಡಿದೆನಲ್ಲಾ” ಎಂದು ಗೋಳಾಡುತ್ತಾರೆ. ಆದ್ದರಿಂದ ಪಾಪದ ಚಿಂತನೆಗಳನ್ನು ಆರಂಭದಲ್ಲೇ ಚಿವುಟಿಹಾಕಬೇಕು. ದೇವಮಕ್ಕಳೇ, ಪಾಪಚಿಂತನೆಗಳಿಗೆ ಕಾವಲು ಇಟ್ಟುಕೊಳ್ಳಿರಿ.

_*ನೆನಪಿಗೆ* : “ಯಾವನಾದರೂ ಪಾಪಮಾಡುವದಕ್ಕೆ ಪ್ರೇರೇಪಿಸಲ್ಪಡುವಾಗ ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು.” (ಯಾಕೋ.1:13,14).

Kannada Song
*ಸರ್ವ ಸೃಷ್ಟಿಶನು*

👁‍🗨 Watch and be Blessed.
https://youtu.be/Ja9jiGL0ygM

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖

📖  *_ಅನುದಿನದ ಆಹಾರ_*  📖⏰ _ನವೆಂಬರ್ *04* 2024_ ⏰👉🏽  *ಕ್ಷಮಾಭಾವ!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆರೆ. 34, 35, 36🌠 *...
03/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *04* 2024_ ⏰

👉🏽 *ಕ್ಷಮಾಭಾವ!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆರೆ. 34, 35, 36
🌠 *ಸಂಜೆ* : ಇಬ್ರಿ. 2

“ಏಳು ಸಾರಿ ಎಂದಲ್ಲ; ಎಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ.” (ಮತ್ತಾ.18:22).

ಕ್ಷಮಿಸುವ ಮನಸ್ಸೆಂಬದು ಒಂದು ವಿಶೇಷವಾದದ್ದು. ಅದು ದೈವಿಕ ಸ್ವಭಾವ. ನಿಮಗೆ ವಿರೋಧವಾಗಿ ತಪ್ಪುಮಾಡಿದವರನ್ನು ನೀವು ಮನಃಪೂರ್ವಕವಾಗಿ ಕ್ಷಮಿಸುವಾಗ, ನೀವು ಮಾಡುವ ತಪ್ಪನ್ನು ಕರ್ತನು ನಿಮಗೆ ಕ್ಷಮಿಸುವನು. ಯಾವ ಒಬ್ಬ ಮನುಷ್ಯನು ಮತ್ತೊಬ್ಬನನ್ನು ಕ್ಷಮಿಸಲು ಮುಂದಾಗುವನೋ ಅವನಿಂದ ಕ್ಷಮೆಯ ಐಕ್ಯವುಂಟಾಗುವದು. ಯಾರು ಕ್ಷಮಿಸುವದಿಲ್ಲವೋ ಅವನ ಮೂಲಕ ಕಹಿತನವೂ ಅಗಲಿಕೆಯೂ ಉಂಟಾಗುವದು. ಇಂದು ಅನೇಕ ಸಭೆಗಳು ಒಡೆದುಹೋಗುವ ಕಾರಣವೇನು? ಕುಟುಂಬಗಳಲ್ಲಿಯೂ ಒಡಕು ಏಕೆ? ಪ್ರೀತಿಯ ಅನ್ಯೋನ್ಯತೆ ಇಲ್ಲವಾಗಲು ಕಾರಣವೇನು? ಸೈತಾನನು ವಿಶ್ವಾಸಿಗಳ ಮಧ್ಯೆ ಬೋಧಕರಲ್ಲಿ ಹೊಕ್ಕು ಅವರಲ್ಲಿ ಒಡಕುಗಳನ್ನು ಉಂಟುಮಾಡಿ ಹಾಳುಗೆಡುವುತ್ತಿರುವ ಕಾರಣವೇನು? ಈ ಕ್ಷಮಾಭಾವ ಇಲ್ಲದಿರುವದೇ ಕಾರಣ.

ಒಮ್ಮೆ ಒಬ್ಬ ದೇವಸೇವಕರು, ಮತ್ತೊಂದು ಊರಿನಲ್ಲಿ ವ್ಯಾಧಿಯುಳ್ಳವರಿಗಾಗಿ ಪ್ರಾರ್ಥಿಸಲು ಕರೆಯಲ್ಪಟ್ಟರು. ಅಲ್ಲಿ, ಏಳು ಅಶುದ್ಧ ಆತ್ಮನಿಂದ ಬಾಧಿಸಲ್ಪಟ್ಟು ಒಬ್ಬನನ್ನು ಸಂಧಿಸಿದರು. ಅಶುದ್ಧಾತ್ಮಗಳಿಗೆಲ್ಲಾ ನಾಯಕನಾದ ಆ ದೆವ್ವ, ಸೇವಕರ ಬಳಿ “ನಾನೇ ಕ್ರಿಸ್ತವಿರೋಧಿ” ಎಂದಿತು. ನೀನು ಏಕೆ ಬಂದಿದ್ದೀ? ಎನ್ನಲು, ನಾನು ಸಭೆಗಳನ್ನು ಒಡೆದು ಹಾಳುಮಾಡಿ, ಕಹಿತನದ ಬೀಜವನ್ನು ವೈರಾಗ್ಯದ ಬೀಜವನ್ನೂ ಬಿತ್ತನೆ ಮಾಡಲು ಬಂದಿದ್ದೇನೆ ಎಂದಿತು. ಇಂದು ಆ ದುರಾತ್ಮನು ಎಲ್ಲಾ ಸಭೆಗಳಲ್ಲಿ ಕ್ರಿಯೆಮಾಡುತ್ತಿದ್ದಾನೆ.

ಕ್ರೈಸ್ತಸಭೆ ಎಂದು ಕರೆಯಲ್ಪಡುವ ಪ್ರಿಯ ಸಹೋದರರೇ, ನಿಮ್ಮ ಕ್ಷಮಿಸಲಾರದ ಸ್ವಭಾವದಿಂದಲೂ, ಹೆಮ್ಮೆಯಿಂದಲೂ ಭೇದಭಾವದಿಂದಲೂ, ಒಣಹೆಮ್ಮೆಗೆ ಒಳಗಾಗಿ ಹಗೆತನದ ಬೀಜವನ್ನು ಬಿತ್ತದಿರಿ. ಕಕ್ಷಬೇಧ, ಭಿನ್ನಮತ, ಮತ್ಸರಗಳನ್ನು ಬೆಳೆಸಬೇಡಿರಿ. (ಗಲಾ.5:19). ಅಂಥವರು ದೇವರಾಜ್ಯವನ್ನು ಪ್ರವೇಶಿಸುವದಿಲ್ಲ. ದೇವಮಕ್ಕಳೇ, ಕ್ಷಮಿಸುವ ಸ್ವಭಾವ ನಿಮ್ಮಲ್ಲಿದ್ದರೆ ದೈವಿಕತ್ವವೂ ನಿಮ್ಮೊಂದಿಗಿರುವದು. ನಿಮ್ಮ ಮೂಲಕ ಉಜ್ಜೀವನದ ಬೆಂಕಿ ಹರಡುವದು. ಕ್ಷಮಾಭಾವವನ್ನು ಕಳೆದುಕೊಂಡು ಸೈತಾನನಿಗೆ ಆಸ್ಪದ ಕೊಡದಿರಿ.

_*ನೆನಪಿಗೆ* : “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು.” (ಕೀರ್ತ.133:1).

Kannada Song
*ಪಾಪ ಕ್ಷಮಾಪಣೆ ನಿಶ್ಚಯವನ್ನು ಹೊಂದಿಕೊಳ್ಳಬೇಕು*

👁‍🗨 Watch and be Blessed.
https://youtu.be/v2IX45Mux88

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖

📖  *_ಅನುದಿನದ ಆಹಾರ_*  📖⏰ _ನವೆಂಬರ್ *03* 2024_ ⏰👉🏽  *ಆಲೋಚನೆಗಳ ಶೋಧನೆ!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆರೆ. 32, 33🌠...
02/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *03* 2024_ ⏰

👉🏽 *ಆಲೋಚನೆಗಳ ಶೋಧನೆ!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆರೆ. 32, 33
🌠 *ಸಂಜೆ* : ಇಬ್ರಿ. 1

“ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು.” (ಕೀರ್ತ.139:23).

“ಕರ್ತನೇ, ನಾನು ನನ್ನನ್ನು ಪರೀಕ್ಷಿಸಿದ್ದು ಸಾಲದು, ನೀನೇ ನನ್ನನ್ನು ಪರೀಕ್ಷೆಮಾಡು. ನನ್ನ ದೃಷ್ಟಿಯಲ್ಲಿ ನನ್ನ ತಪ್ಪು ದೋಷಗಳು ಮನೆಯಾಗಿರಬಹುದು. ಆದರೆ ನಿನ್ನ ದೃಷ್ಟಿಯಲ್ಲಿ ಅದು ಮರೆಯಾಗಲಾರದು ಸ್ವಾಮೀ” ಎಂದು ದಾವೀದನು ಬೇಡುವದನ್ನು ನೋಡುತ್ತೇವೆ.

ಹೃದಯವನ್ನು ಮನಸ್ಸಿನ ಆಲೋಚನೆಗಳನ್ನು ಶೋಧಿಸಿ ತಿಳಿಯುವದಾದರೆ, ಬಾಧೆಗಳು ಉಂಟಾಗುವ ಕಾರಣಗಳನ್ನು ತಿಳಿದು ಬಗೆಹರಿಸಿಕೊಳ್ಳಬಹುದು. ಆ ಕುರಿತು ಕೆಲವು ಆಲೋಚನೆಗಳು.

1. ಕೆಟ್ಟತನದ ಯೋಚನೆ: “ನಾನು ಕೆಟ್ಟತನದ ಮೇಲೆ ಮನಸ್ಸಿಟ್ಟಿದ್ದರೆ, ಸ್ವಾಮಿಯು ನನ್ನ ವಿಜ್ಞಾಪನೆಯನ್ನು ಕೇಳುತ್ತಿರಲಿಲ್ಲ.” (ಕೀರ್ತ.66:18). ಕ್ರಮಕ್ಕೆ, ನಿಯಮಕ್ಕೆ ಒಳಪಡದ ಚಿಂತನೆಗಳೆಲ್ಲವೂ ಕೆಟ್ಟತನವೇ. ಮತ್ತಾ.7:23ರಲ್ಲಿ ಕರ್ತನು, “ಧರ್ಮವನ್ನು ಮೀರಿ ನಡೆಯುವವರೇ, ನನ್ನಿಂದ ತೊಲಗಿ ಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು” ಎಂದು ಹೇಳಿರುವದನ್ನು ತಿಳಿದು ಎಚ್ಚರವಾಗಿರಿ.

2. ಶರೀರಭಾವ: “ಶರೀರಭಾವದವುಗಳ ಮೇಲೆ ಮನಸ್ಸಿಡುವದು ಮರಣ” (ರೋಮಾ.8:6). ಶರೀರಭಾವವೆಂದರೆ ಏನು? ಪವಿತ್ರಾತ್ಮನಿಗೆ ಆಸ್ಪದ ಕೊಡದೆ ಸ್ವೇಚ್ಛೆಯಾದ ಮನೋಭಾವವನ್ನು ತಾಳುವದು. ಅಪೊ.ಪೌಲನು “ಇನ್ನೂ ಶರೀರಾಧೀನ ಸ್ವಭಾವವುಳ್ಳವರಾಗಿದ್ದೀರಿ. ನಿಮ್ಮೊಳಗೆ ಹೊಟ್ಟೆಕಿಚ್ಚು ಜಗಳಗಳು ಇರುವಲ್ಲಿ ಕೇವಲ ನರಪ್ರಾಣಿಗಳಂತೆ ನಡೆಯುತ್ತೀರಲ್ಲವೇ” ಎಂದು 1ಕೊರಿ.3:3ರಲ್ಲಿ ಹೇಳುತ್ತಾನೆ. ಆದ್ದರಿಂದ ಶರೀರಭಾವಕ್ಕೆ ದೂರವಾಗಿರಿ.

3. ಹೆಮ್ಮೆ, ಅಹಂಭಾವ: “ದೊಡ್ಡಸ್ತಿಕೆಯ ಮೇಲೆ ಮನಸ್ಸಿಡದೆ ದೀನರ ಸಂಗಡ ಬಳಕೆಯಾಗಿರ್ರಿ.” (ರೋಮಾ.12:16). ಕರ್ತನಿಗೆ ವಿರೋಧವಾದ ಮತ್ತೊಂದು ಪಾಪವೆಂದರೆ ಅದು ಹೆಮ್ಮೆ, ಅಹಂಭಾವ, ಗರ್ವ ಇವೆಲ್ಲಾವೂ ಮಹಾ ಪಾಪವಾಗಿದೆ. ಕರ್ತನು ಅಂಥವರನ್ನು ಎದುರಿಸುತ್ತಾನೆ. ನಿಮ್ಮಲ್ಲಿ ಇಂಥ ಸ್ವಭಾವಕ್ಕೆ ಆಸ್ಪದ ಕೊಡದೆ ಎಚ್ಚರವಾಗಿರ್ರಿ.

4. ದುರ್ನಡತೆ: “ಅನ್ಯಜನರು ನಡೆದುಕೊಳ್ಳುವ (ದುರ್ನಡತೆ) ಪ್ರಕಾರ ನೀವು ಇನ್ನು ಮೇಲೆ ನಡೆದುಕೊಳ್ಳಬಾರದು.” (ಎಫೆ.4:17). ಇದು ಉಪಯೋಗವಲ್ಲದ ಒಂದು ಸ್ವಭಾವ. ಒಳ್ಳೇ ನಡತೆಯುಳ್ಳವರಾಗಿದ್ದು, ದೇವಚಿತ್ತಕ್ಕೆ ನಿಮ್ಮನ್ನು ಒಪ್ಪಿಸಿಕೊಟ್ಟು ನಡೆದುಕೊಳ್ಳಿರಿ.

_*ನೆನಪಿಗೆ* : “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ.” (ರೋಮಾ.12:2).

Kannada Song
*ಯಾವುದೂ ಅಸಾಧ್ಯವಿಲ್ಲವೋ*

👁‍🗨 Watch and be Blessed.
https://youtu.be/38dx_l4X8dU

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖  *_ಅನುದಿನದ ಆಹಾರ_*  📖⏰ _ನವೆಂಬರ್ *02* 2024_ ⏰👉🏽  *ನಿರ್ಮಲ ಮನಸ್ಸು!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆರೆ. 30, 31🌠 ...
01/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *02* 2024_ ⏰

👉🏽 *ನಿರ್ಮಲ ಮನಸ್ಸು!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆರೆ. 30, 31
🌠 *ಸಂಜೆ* : ಫಿಲೆ. 1

“ಎರಡು ಮನಸ್ಸುಳ್ಳವರೇ ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ.” (ಯಾಕೋ.4:8).

ಮಾನವನ ಮನದಲ್ಲಿ ಹರಿದಾಡುವ ಆಲೋಚನೆಗಳೂ ಚಿಂತನೆಗಳೂ ಅವನ ಕ್ರಿಯೆಗಳನ್ನು ಬಂಧಿಸುತ್ತವೆ. ಮನಸ್ಸಿನಾಳದಲ್ಲಿ ಆತ್ಮೀಕ ಯುದ್ಧಗಳು ನಡೆಯುತ್ತಲೇ ಇರುತ್ತವೆ. ನರಭಾವದ ಚಿಂತನೆಗಳು ದೇವರಿಗೆ ವಿರೋಧವಾದ ಹಗೆತನ. ದೇವರ ವಾಕ್ಯವನ್ನು ಕೈಕೊಂಡು ಮನಸ್ಸನ್ನು ನೂತನಗೊಳಿಸುವದೇ ಹೃದಯದ ಶುದ್ಧತೆಯಾಗಿದೆ. ನೀವು ಈ ಭಾಗವನ್ನು ಓದುತ್ತಾ ಧ್ಯಾನಿಸುತ್ತಾ ಇರುವಾಗ ಒಂದು ಚೇಳು ನಿಮ್ಮ ಕೋಣೆಯೊಳಗೆ ಬರುವದನ್ನು ಕಂಡರೆ ಏನು ಮಾಡುವಿರಿ? ಆ ಕೂಡಲೇ ನಿಮ್ಮ ಕಾರ್ಯವನ್ನು ನಿಲ್ಲಿಸಿ ಆ ಚೇಳನ್ನು ಹೊಡೆದು ಹೊರಗೆ ಎಸೆಯುವಿರಲ್ಲವೇ? ಅದೇ ರೀತಿ ನಿಮ್ಮ ಮನಸ್ಸಿನಲ್ಲಿ ತಲೆ ಎತ್ತುವ ಯೋಚನೆಗಳನ್ನು ತಡೆಗಟ್ಟಿ ಹೊರತಳ್ಳಬೇಕು, ಇಲ್ಲವಾದರೆ ಅದು ನಿಮ್ಮನ್ನು ಆಳವಾದ ಗುಣಿಯೊಳಗೆ ದೊಬ್ಬಿಬಿಡುವದು. “ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿಯಲು ಮುಂದಾಗಬೇಕು.” (2ಕೊರಿ.10:5).

ಯೋಚನೆಗಳಲ್ಲಿ ಕಂಡುಬರುವ ಪರಿಶುದ್ಧತೆಯೇ ಹೃದಯದಲ್ಲೂ ಇರುವದು. ಅದನ್ನು ಹಿಂಬಾಲಿಸಿ ದೃಷ್ಟಿಯಲ್ಲಿ, ಶುದ್ಧತೆ, ಕ್ರಿಯೆಯಲ್ಲಿ ಶುದ್ಧತೆ, ಯೋಚನೆಯಲ್ಲಿ ಶುದ್ಧತೆಯನ್ನು ಅಭ್ಯಾಸಿಸಿರಿ.

1. ನೂತನ ಮನಸ್ಸು: “ನೀವು ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕ ಭಾವದವರಾಗಿರಿ.” (ರೋಮಾ.12:2).

2. ಕ್ರಿಸ್ತೇಸುವಿನ ಮನಸ್ಸು: “ಕ್ರಿಸ್ತನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.” (ಫಿಲಿ.2:5). ಅದು ಪರಿಶುದ್ಧವಾದದ್ದು, ಕೇಡನ್ನು ನೆನಸದ್ದು, ಅಂಥಾ ಚಿಂತನೆ ನಿಮ್ಮೊಳಗೆ ಬರಲಿ.

3. ಉಪದ್ರವಗಳನ್ನು ಕುರಿತು: “ಕ್ರಿಸ್ತನು ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವೂ ಸಹ ಆತನಿಗಿದ್ದ ಭಾವವನ್ನೇ ಹಿಡಿದುಕೊಳ್ಳಿರಿ.” (1ಪೇತ್ರ.4:1). ಶ್ರಮೆ ಸಂಕಷ್ಟಗಳು ನಿಮ್ಮನ್ನು ಪುಟಕ್ಕೆ ಹಾಕಿ ರೂಪಾಂತರಗೊಳಿಸುತ್ತದೆ.

4. ಏಕಮನಸ್ಸು: “ನಿಮ್ಮ ನಿಮ್ಮೊಳಗೆ ಏಕಮನಸ್ಸುಳ್ಳವರಾಗಿರ್ರಿ.” (ರೋಮಾ.12:16). ಕ್ರಿಸ್ತಯೇಸುವನ್ನು ಅನುಸರಿಸುವವರಾದ ನೀವು ಒಂದೇ ಮನಸ್ಸುಳ್ಳವರಾಗಿರ್ರಿ. ನಿಮ್ಮ ಯೋಚನೆಗಳೆಲ್ಲಾ ಕ್ರಿಸ್ತೇಸುವಿನಲ್ಲಿ ಒಂದೇ ಆಗಿರಲಿ.

_*ನೆನಪಿಗೆ* : “ಶರೀರಭಾವದವುಗಳ ಮೇಲೆ ಮನಸ್ಸಿಡುವದು ಮರಣ; ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು ಜೀವವೂ ಮನಶ್ಯಾಂತಿಯೂ ಆಗಿದೆ.” (ರೋಮಾ.8:6).

Kannada Song
*ಚಲಿಸುವಾ ಆತ್ಮನೇ ಪರಿಶುದ್ಧ ಆತ್ಮನೇ*

👁‍🗨 Watch and be Blessed.
https://youtu.be/TbCzMhHaSPs

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖

📖  *_ಅನುದಿನದ ಆಹಾರ_*  📖⏰ _ನವೆಂಬರ್ *01* 2024_ ⏰👉🏽  *ಯೋಚನೆ!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆರೆ. 26, 27, 28, 29🌠 ...
01/11/2024

📖 *_ಅನುದಿನದ ಆಹಾರ_* 📖
⏰ _ನವೆಂಬರ್ *01* 2024_ ⏰

👉🏽 *ಯೋಚನೆ!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆರೆ. 26, 27, 28, 29
🌠 *ಸಂಜೆ* : ತೀತ 2, 3

“ಮರಿಯಳು ಆ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿಟ್ಟುಕೊಂಡು ಯೋಚಿಸುತ್ತಿದ್ದಳು” (ಲೂಕ.2:19).

ಕರ್ತನು ಮನುಷ್ಯರಿಗೆ ಮಾತ್ರವೇ ಯೋಚಿಸುವ ಒಂದು ಸ್ವಭಾವವನ್ನು ಕೊಟ್ಟಿರುವನು. ಮುಂದಾಲೋಚನೆ ಇಲ್ಲದೆ ಕಾರ್ಯವನ್ನು ಮಾಡಿದರೆ, ಅನಂತರ ಅದರ ಫಲಗಳನ್ನು ಅನುಭವಿಸಿ ನೊಂದುಕೊಳ್ಳಬೇಕಾಗುವದು. ದೇವಚಿತ್ತಕ್ಕೆ ಅನುಗುಣವಾಗಿ ಒಳ್ಳೆಯ ಆಲೋಚನೆಗಾಗಿ ಪ್ರಾರ್ಥನೆ ಮಾಡಬೇಕು. ಯಾಕೆಂದರೆ, “ದೇವರೇ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಪ್ರಯತ್ನವನ್ನೂ ಉಂಟುಮಾಡುವವನಾಗಿದ್ದಾನೆ.” (ಫಿಲಿ.2:13) ಎಂದು ಸತ್ಯವೇದವು ಹೇಳುತ್ತದೆ.

ಆದಕಾರಣ, ನೀವು ವ್ಯರ್ಥವಾದ ಆಲೋಚನೆಗಳಿಗೆ ಒಳಗಾಗದಂತೆ, (ಮಾರ್ಕ.7:21-23) ಮಾರ್ಕನ ಸುವಾರ್ತೆಯಲ್ಲಿ ಹೇಳಿರುವ ಮನುಷ್ಯನನ್ನು ಹೊಲೆಮಾಡುವ ಕೆಟ್ಟ ಆಲೋಚನೆಗಳಿಗೆ ದೂರವಿರಿ. ಕೆಟ್ಟ ವಿಷಯಗಳೆಲ್ಲಾ ಮನುಷ್ಯನೊಳಗಿಂದ ಹೊರಟು ಅವನನ್ನು ಹೊಲೆಮಾಡುತ್ತದೆ ಎಂದು ಯೇಸುಸ್ವಾಮಿಯೇ ಹೇಳಿರುವನು. ಈ ಎಲ್ಲಾ ಕೆಟ್ಟ ಯೋಚನೆಗಳನ್ನು ಬಿಟ್ಟು ಹೊರಬರುವದು ಹೇಗೆ? ಅನಗತ್ಯವಾದ ಕೆಟ್ಟ ಆಲೋಚನೆಗಳನ್ನು ಕ್ರಿಸ್ತನಲ್ಲಿ ಸೆರೆಹಿಡಿಯುವವರಾಗಬೇಕು. ಅದಕ್ಕೆಂದು ಕೆಲವು ಆಯುಧಗಳನ್ನು ಅಪೊ.ಪೌಲನು ಎಫೆ.6ರಲ್ಲಿ ಹೇಳಿರುವನು. (ಎಫೆ.6:13-18 ಓದಿನೋಡಿರಿ).

ಪ್ರಾರ್ಥನೆ ಒಂದು ಆಯುಧ. ಸತ್ಯವೇದ ವಾಕ್ಯವಾದ ಆತ್ಮನ ಖಡ್ಗವೆಂಬ ಆಯುಧ. ಕುರಿಮರಿಯಾದಾತನ ರಕ್ತ; ಆಯುಧ ಸಾಕ್ಷಿಯ ವಚನ. ಇವನ್ನು ಉಪಯೋಗಿಸುವಾಗ ವ್ಯರ್ಥಚಿಂತನೆ ನಿಮ್ಮನ್ನು ಜಯಿಸುವದಿಲ್ಲ.

ಎರಡನೆಯದಾಗಿ, ನಿಮ್ಮ ಆಲೋಚನೆಗಳನ್ನು ಹತೋಟಿಯಲ್ಲಿಡಲು, ನಿಮ್ಮ ತುಟಿಗಳಲ್ಲಿ ಯಾವಾಗಲೂ ಕರ್ತನನ್ನು ಸ್ತುತಿಸುವ ಸ್ತುತಿ ಇರಬೇಕು. ಮೂರನೆಯದಾಗಿ, ನಿಮ್ಮ ನರಭಾವವನ್ನು ಜಯಿಸಲು ಕರ್ತನ ವಾಕ್ಯಗಳನ್ನು ವಾಗ್ದಾಗಳನ್ನು ಎತ್ತಿಹಿಡಿಯಲು ಉಪಯೋಗಿಸಲು ಮುಂದಾಗಬೇಕು. ದೇವಮಗುವೇ, ಕೆಡುಕನ್ನು ಅಗಲಿಸಲು ಕರ್ತನಲ್ಲಿ ಪ್ರಾರ್ಥಿಸಿ, ದೇವವಾಕ್ಯವನ್ನು ಧ್ಯಾನಿಸಿರಿ.

_*ನೆನಪಿಗೆ* : “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತಯೇಸುವಿನಲ್ಲಿ ಕಾಯುವದು.” (ಫಿಲಿ.4:7).

Kannada Song
*ಆನಂದದಿಂದ ಉಲ್ಲಾಸದಿಂದ*

👁‍🗨 Watch and be Blessed.
https://youtu.be/xA7qhXQuQvc

👁️ *View* 👍 *Like*
🤝 *Share* 🔖 *Subscribe*
💦Share it with your friends 😇
ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ

📖

📖  *_ಅನುದಿನದ ಆಹಾರ_*  📖⏰ _ಅಕ್ಟೋಬರ್ *31* 2024_ ⏰👉🏽  *ಜ್ಞಾನವಿದ್ಯಾ ನಿಕ್ಷೇಪಗಳು!*🔖 _ಇಂದಿನ ಸತ್ಯವೇದ ಓದುವ ಭಾಗ_🌅 *ಬೆಳಿಗ್ಗೆ* : ಯೆರೆ...
30/10/2024

📖 *_ಅನುದಿನದ ಆಹಾರ_* 📖
⏰ _ಅಕ್ಟೋಬರ್ *31* 2024_ ⏰

👉🏽 *ಜ್ಞಾನವಿದ್ಯಾ ನಿಕ್ಷೇಪಗಳು!*

🔖 _ಇಂದಿನ ಸತ್ಯವೇದ ಓದುವ ಭಾಗ_
🌅 *ಬೆಳಿಗ್ಗೆ* : ಯೆರೆ. 24, 25
🌠 *ಸಂಜೆ* : ತೀತ 1

“ತನ್ನಲ್ಲೇ (ಕ್ರಿಸ್ತನಲ್ಲೇ) ಜ್ಞಾನವಿದ್ಯಾ ಸಂಬಂಧವಾದ ನಿಕ್ಷೇಪಗಳನ್ನೆಲ್ಲಾ ಅಡಗಿಸಿಕೊಂಡಿರುವ ಕ್ರಿಸ್ತನನ್ನು ತಿಳುಕೊಂಡವರಾಗಿ...” (ಕೊಲೊ.2:3).

ಕರ್ತನಾದ ಕ್ರಿಸ್ತೇಸುವಿನಲ್ಲಿರುವ ಜ್ಞಾನವಿದ್ಯೆ ಎಂಬ ನಿಕ್ಷೇಪಗಳನ್ನೆಲ್ಲಾ ಆತನು ತನಗೆ ಮೆಚ್ಚಿಕೆಯಾದವರಿಗೆ ಅನುಗ್ರಹಿಸುತ್ತಾನೆ. ಕರ್ತನು ಎಲ್ಲವನ್ನೂ ಬಲ್ಲಾತನಾದ ಸರ್ವಜ್ಞನು. ಮನುಷ್ಯನ ನೆನಪುಗಳು, ಉದ್ದೇಶಗಳು, ಆಲೋಚನೆಗಳನ್ನೆಲ್ಲಾ ಆತನು ತಿಳಿದಿದ್ದಾನೆ. ಆದ್ದರಿಂದ ಅಪೊ.ಪೌಲನು “ಆಹಾ ದೇವರ ಐಶ್ವರ್ಯವೂ, ಜ್ಞಾನವೂ ವಿವೇಕವೂ ಎಷ್ಟೋ ಅಗಾಧ” ಎಂದು ಬರೆದಿದ್ದಾನೆ. (ರೋಮಾ.11:33).

ಈ ದಿನಗಳಲ್ಲಿ ಮಾನವನ ತಿಳುವಳಿಕೆಗೆ ಮಿತಿ ಇಲ್ಲದಾಗಿದೆ; ಕಂಪ್ಯೂಟರ್ ಕಾರ್ಯಗಳು ಪ್ರಪಂಚಕ್ಕೆ ಅಚ್ಚರಿ ಮೂಡಿಸಿದೆ. ಅದೇ ಸಮಯದಲ್ಲಿ ವಿಜ್ಞಾನಿಗಳ ಸಂಶೋಧನೆಗಳೂ, ಕಂಡುಹಿಡಿಯುವಿಕೆಯೂ ಮಾನವನನ್ನು ಆಪತ್ತಿಗೂ ಅಳಿವಿಗೂ ಕೊಂಡೊಯ್ಯುತ್ತಿದೆ. ಆದರೆ ಕರ್ತನಾದರೋ, ತನ್ನ ಮಕ್ಕಳಿಗೆ ಆತ್ಮೀಕ ಅರಿವನ್ನು ಅನುಗ್ರಹಿಸಿ, ನಿತ್ಯರಾಜ್ಯದ ಪರಲೋಕದ ವಿಷಯವಾದ ಹೆಚ್ಚಿನ ಗ್ರಹಿಕೆಯನ್ನು ಉಂಟುಮಾಡಿ ತನ್ನೆಡೆಗೆ ಎಳೆದುಕೊಳ್ಳುತ್ತಿದ್ದಾನೆ. ಈ ತಿಳುವಳಿಕೆಯು ಆರು ವಿಧಗಳಲ್ಲಿ ನಿಮಗೆ ಉಪಯುಕ್ತವಾಗಿರುವದು.

ಮೊದಲನೆಯದಾಗಿ, ಕರ್ತನನ್ನು ಕುರಿತ ತಿಳುವಳಿಕೆ. ಎರಡನೆಯದಾಗಿ, ಸತ್ಯವೇದದ ಆಳವಾದ ಸತ್ಯಗಳನ್ನೂ, ರಹಸ್ಯಗಳನ್ನೂ ಕುರಿತು ಅರಿವು. ಮೂರನೆಯದಾಗಿ, ನಿಮ್ಮನ್ನು ನೀವೇ ಅರಿತುಕೊಳ್ಳುವಿಕೆ. ನಾಲ್ಕನೆಯದಾಗಿ, ಆತ್ಮೀಕವಾದ ಉನ್ನತ ಸ್ಥಿತಿಗಳು. ಐದನೆಯದಾಗಿ, ಒಬ್ಬ ವ್ಯಕ್ತಿಯನ್ನು ಕುರಿತು, ಒಂದು ಸ್ಥಳವನ್ನು, ಪರಿಸ್ಥಿತಿಗಳನ್ನು ತಿಳಿಯುವ ತಿಳುವಳಿಕೆ. ಆರನೆಯದಾಗಿ, ಪರಲೋಕವನ್ನೂ ಪಾತಾಳವನ್ನೂ, ಆತ್ಮಗಳ ಪ್ರಪಂಚವನ್ನೂ ತಿಳಿಯುವ ಒಂದು ದೈವಿಕ ಜ್ಞಾನ. ಇವೆಲ್ಲವೂ ಪವಿತ್ರಾತ್ಮನ ಮೂಲಕ ಪಡೆಯುವ ನಿಧಿಯಾಗಿದೆ. “ಆತನು ಪ್ರತಿ ಮನುಷ್ಯನ ಆಂತರ್ಯವನ್ನು ತಿಳಿದವನಾದ ಕಾರಣ ಯಾವನೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿಕೊಡಬೇಕಾದ ಅವಶ್ಯವಿರಲಿಲ್ಲ.” (ಯೋಹಾ.2:25) ಎಂದು ಕ್ರಿಸ್ತನನ್ನು ಕುರಿತು ಹೇಳಿದೆ. ಆ ಕ್ರಿಸ್ತನನ್ನು ಅರಿಯುವದೇ ನಿಮ್ಮ ತಿಳುವಳಿಕೆಯ ಮೂಲ.

_*ನೆನಪಿಗೆ* : “ರಾಜರನ್ನು ತಳ್ಳುತ್ತಾನೆ, ನಿಲ್ಲಿಸುತ್ತಾನೆ; ಜ್ಞಾನಿಗಳ ಜ್ಞಾನವೂ ವಿವೇಕಿಗಳ ವಿವೇಕವೂ ಆತನ ವರವೇ.” (ದಾನಿ.2:21,22).

ಕನ್ನಡ ಸ್ತುತಿ ಸ್ತೋತ್ರ ಆರಾಥನ ಹಾಡುಗಳಿಗೆ *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ
👁‍🗨 Subscribe to our YouTube channel
https://www.youtube.com/c/AnudhinadaAhara

👁️ *View* 👍 *Like*
🤝 *Share* 🔖 *Subscribe*
💦Share it with your friends 😇

📖

Address

1, 24th Cross Dead End, Ejipura
Bangalore
560047

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 3pm - 5pm

Telephone

+91 80 25712448

Alerts

Be the first to know and let us send you an email when Anudhinada Ahara - ಅನುದಿನದ ಆಹಾರ posts news and promotions. Your email address will not be used for any other purpose, and you can unsubscribe at any time.

Contact The Business

Send a message to Anudhinada Ahara - ಅನುದಿನದ ಆಹಾರ:

Videos

Share

Category