02/02/2025
1994 ರಲ್ಲಿ ಶ್ರೀ ಬಸನಗೌಡ ಪಾಟೀಲ ಯತ್ನಾಳರು ಮೊದಲ ಬಾರಿಗೆ ಶಾಸಕರಾದರು ತದನಂತರ ಸಂಸದರಾಗಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಯವರ ಸರ್ಕಾರದಲ್ಲಿ ಮಂತ್ರಿಯಾದರು ಅಂದಿನಿಂದಲೂ ಲಿಂಗಾಯತ ನಾಯಕರನ್ನು ಯಡಿಯೂರಪ್ಪನವರು ತುಳಿಯುತ್ತಲೆ ಬಂದರು ಅಂದಿನಿಂದಲೂ ಯತ್ನಾಳ ರನ್ನು ತುಳಿಯುತ್ತಲೆ ಬಂದರು ಯಾಕಂದರೆ ಲಿಂಗಾಯತರಲ್ಲಿ ಪ್ರಬಲ ಪ್ರತಿಸ್ಪರ್ಧಿ ಅದರಲ್ಲಿ ಉತ್ತರ ಕರ್ನಾಟಕದವರು ಲಿಂಗಾಯತರಲ್ಲೆ ಪ್ರಬಲ ಸಮುದಾಯದವರು ನನಗೆ ಮುಂದೊಂದು ದಿನ ಪ್ರತಿ ಸ್ಪರ್ಧಿಯಾಗುತ್ತಾರೆ ಎಂದು ಯಡಿಯೂರಪ್ಪನವರು ಯಾವ ಯಾವ ನಾಯಕರನ್ನು ಮುಗಿಸಬೇಕು ಎಂದರು ಅವರೆಲ್ಲರೂ ಮುಗಿಸುತ್ತಲೆ ಬಂದರು ಹಾಗೆ ಯತ್ನಾಳರನ್ನು ರಾಜಕೀಯವಾಗಿ ಮುಗಿಸಬೇಕೆಂದು 2010 ರ ಲೋಕಸಭಾ ಚುನಾವಣೆ ನಂತರ ಪಕ್ಷದಿಂದ ಉಚ್ಚಾಟನೆಮಾಡಿದರು ಆದರೂ ಯತ್ನಾಳರು ಹೇದರಲಿಲ್ಲ ಮಂದೆ 2016 ರಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಕರ್ನಾಟಕದಲ್ಲೆ ಹೆಚ್ಚು ಮತದಿಂದ ವಿಜಯಪುರ ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಶಾಲಿಯಾದರು ಮುಂದೆ 2018 ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷ ಲಿಂಗಾಯತ ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಚುನಾವಣೆ ಎದುರಿಸಲು ನಿಂತಾಗ ಬಿಜೆಪಿಯಲ್ಲಿ ಲಿಂಗಾಯತ ನಾಯಕರು ಗಟ್ಟಿಯಾಗಿ ನಿಂತು ಅದರ ವಿರುದ್ಧ ಮಾತನಾಡುನ ಧೈರ್ಯ ಯಾರು ಮಾಡಲೆ ಇಲ್ಲಾ ಆಗಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ಅಮಿತ್ ಶಾ ರವರು ಯತ್ನಾಳವರನ್ನು ದಿಲ್ಲಿಗೆ ಕರೆಸಿಕೊಂಡು ಬಿಜೆಪಿ ಪ್ರವೇಶ ಮಾಡಬೇಕು ಎಂದು ಹೇಳಿದಾಗ ಯತ್ನಾಳರು ಒಪ್ಪಿಕೊಂಡರು ಇಲ್ಲಿ ಕೇಲವು ಚೇಲಾಗಳು ಯತ್ನಾಳ ರನ್ನ ಬಿಜೆಪಿಗೆ ಕರೆದುಕೊಂಡು ಬಂದವರು ಯಡಿಯೂರಪ್ಪನವರು ಎಂದು ಬೊಬ್ಬೆ ಹೊಡೆಯುತ್ತಿರುತ್ತಾರೆ ಪಾಪ ನಿಜ ಸಂಗತಿ ಅವರಿಗೆ ಗೊತ್ತಿಲ್ಲ ಮುಂದೆ 2018 ರ ಚುನಾವಣೆಯಲ್ಲಿ ವಿಜಯಪುರ ನಗರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗುತ್ತಾರೆ ಆಗ ಕಾಂಗ್ರೆಸ್ - ಜೆಡಿಎಸ್ ಸಮಿಸ್ರ ಸರ್ಕಾರ ರಚನೆಯಾಗಿ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿ ವಿಜಯಪುರ ನಗರದ ಅನುದಾನ ಸಲುವಾಗಿ 125 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಾರೆ ತದನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ 17 ಶಾಸಕರು ರಾಜಿನಾಮೆ ಕೊಟ್ಟ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪನವರು ಮುಖ್ಯಮಂತ್ರಿ ಯಾಗುತ್ತಾರೆ ಆಗ ಕುಮಾರಸ್ವಾಮಿ ಯವರು ಬಿಡುಗಡೆ ಮಾಡಿದ 125 ಕೋಟಿ ರೂಪಾಯಿಗಳನ್ನು ಹಿಂಪಡೆಯುತ್ತಾರೆ ಅಂದಿನಿಂದ ಯಡಿಯೂರಪ್ಪನವರ ಹಾಗೂ ಯತ್ನಾಳರು ಮಧ್ಯೆ ಇನಷ್ಟು ಜಗಳ ಸುರುವಾಗುತ್ತೆ ಯಡಿಯೂರಪ್ಪನವರ ಮುಖ್ಯಮಂತ್ರಿ ಇದ್ದಾಗ ವಿಜಯಪುರ ನಗರದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಾರೆ ಆದರೆ ಕೇಲ್ ಚೇಲಾಗಳು ಯಡಿಯೂರಪ್ಪನವರು ಯತ್ನಾಳರನ್ನ ಮಂತ್ರಿ ಮಾಡಲಿಲ್ಲ ಎನ್ನುವ ಕಾರಣಕ್ಕೆ ಜಗಳಕ್ಕೆ ನಿಂತಿರು ಎಂದು ಬರೆದು ಕೊಳ್ಳುತ್ತಾರೆ ಮಂದೆ 2023 ರ ಚುನಾವಣೆಯಲ್ಲಿ ಯತ್ನಾಳ ರನ್ನು ಸೋಲಿಸಲು ರಾಜ್ಯದ ವಿವಿಧ ಕಡೆಯಿಂದ ಹಣ ವಿಜಯಪುರ ನಗರಕ್ಕೆ ಹರಿದು ಬಂದಿತು ಆ ಹಣ ಯಾರು ಕಳುಹಿಸಿ ಕೊಟ್ಟಿದ್ದು ಯಾರೆಂದು ಇಡಿ ಕರ್ನಾಟಕದ ಜನತೆಗೆ ಗೊತ್ತಿದೆ ಆದರೆ ವಿಜಯಪುರ ನಗರದ ಜನತೆ ಯತ್ನಾಳರು ಮೇಲೆ ಇಟ್ಟ ನಂಬಿಕೆ ವಿಶ್ವಾಸ ಕಳೆದುಕೊಳ್ಳದೆ ಅವರು ವಿಜಯಪುರ ನಗರದಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನು ನೊಡಿ ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡುತ್ತಾರೆ 2023 ರ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 65 ಶಾಸಕರು ಆಯ್ಕೆಯಾಗುತ್ತಾರೆ ಮುಂದೆ ವಿರೋಧ ಪಕ್ಷದ ನಾಯಕರು ಯಾರೆಂದು ಚರ್ಚೆ ಯಾಗುತ್ತೆ ಆಗ ಎಲ್ಲರೂ ಸೂಚಿಸಿದ ಹೆಸರು ಬಸನಗೌಡ ಪಾಟೀಲ ಯತ್ನಾಳರು ಎಂದು ಆಗ ಯಡಿಯೂರಪ್ಪನವರು ಹಟ ಹಿಡಿದು ತನ್ನ ಮಗನನ್ನು ರಾಜ್ಯ ಅಧ್ಯಕ್ಷರನ್ನಾಗಿ ಮಾಡಿಕೊಂಡರು ಯಾಕೆ ಕರ್ನಾಟಕದಲ್ಲಿ ಬೆರೆ ಲಿಂಗಾಯತ ನಾಯಕರು ಇರಲಿಲ್ಲವೆ ತಮ್ಮ ಸ್ವಾರ್ಥ ರಾಜಕೀಯಕ್ಕೆ ಎಲ್ಲ ನಾಯಕರನ್ನು ಮುಗಿಸುತ್ತಲೆ ಬಂದರು ಆದರೆ ಯತ್ನಾಳರನ್ನು ತುಳಿದಷ್ಟು ಮೇಲೆ ಎದ್ದು ಬಂದರು ಇದು ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪನವರು ಮಾಡಿದ ದ್ರೋಹ ಚಿಕ್ಕ ಸ್ವರೂಪದಲ್ಲಿ ವಿವರಿಸಿದ್ದೆನೆ