Panchami Media Publications, Bangalore

Panchami Media Publications, Bangalore Contact information, map and directions, contact form, opening hours, services, ratings, photos, videos and announcements from Panchami Media Publications, Bangalore, Media/News Company, Bangalore.

ಆತ್ಮೀಯರೇ,ಲೇಖಕರಾದ ಶ್ರೀ ಸುರೇಶ ವಿ ಭಾಗವತ್ ಅವರು ರಚಿಸಿರುವ `ಶ್ರೀಮದ್ ಭಗವದ್ಗೀತಾ' ಕೃತಿಯ ಕುರಿತಾದ ವಿಮರ್ಶೆ ಇವತ್ತಿನ ವಿಶ್ವವಾಣಿ ಪತ್ರಿಕೆಯ...
17/03/2024

ಆತ್ಮೀಯರೇ,
ಲೇಖಕರಾದ ಶ್ರೀ ಸುರೇಶ ವಿ ಭಾಗವತ್ ಅವರು ರಚಿಸಿರುವ `ಶ್ರೀಮದ್ ಭಗವದ್ಗೀತಾ' ಕೃತಿಯ ಕುರಿತಾದ ವಿಮರ್ಶೆ ಇವತ್ತಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ನಮ್ಮ ಪಂಚಮಿ ಸಂಸ್ಥೆಯು ಪ್ರಕಟಿಸಿರುವ ಈ ಕೃತಿಯ ಕುರಿತಾದ ವಿಶೇಷವಾದ ಲೇಖನಕ್ಕೆ `ವಿಶ್ವವಾಣಿ' ಪತ್ರಿಕೆಯ ಸಂಪಾದಕೀಯ ಮಂಡಳಿಗೆ ಹೃತ್ಪೂರ್ವಕ ಧನ್ಯವಾದಗಳು. ವಿಶೇಷವಾಗಿ ಶಶಾಂಕ್ ಮುದೂರಿ ಅವರಿಗೆ ಕೃತಜ್ಞತೆಗಳು.

ಆಸಕ್ತರು ಕೃತಿಗಾಗಿ ಸಂಪರ್ಕಿಸಬಹುದು.
097400 69123

ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯ ಮಂಡಳಿಗೆ ಆಯ್ಕೆಯಾದ ಆತ್ಮೀಯರಾದ ಶ್ರೀ ಮಹದೇವ ಬಸರಕೋಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಶ್ರೀಯುತ ...
16/03/2024

ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯ ಮಂಡಳಿಗೆ ಆಯ್ಕೆಯಾದ ಆತ್ಮೀಯರಾದ ಶ್ರೀ ಮಹದೇವ ಬಸರಕೋಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಶ್ರೀಯುತ ಮಹದೇವ ಬಸರಕೋಡ ಅವರು ನಾಡಿನ ಖ್ಯಾತ ಅಂಕಣಕಾರರು, ಲೇಖಕರು, ಕವಿಗಳು, ವ್ಯಕ್ತಿತ್ವ ವಿಕಸನ ತರಬೇತುದಾರರು, ಉತ್ತಮ ಶಿಕ್ಷಕರೂ ಆಗಿದ್ದಾರೆ. ನಮ್ಮ ಪಂಚಮಿ ಸಂಸ್ಥೆಯು ಮಹದೇವ ಬಸರಕೋಡ ಅವರ `ಆರದಿರಲಿ ಬೆಳಕು' ಹಾಗೂ `ಇರುವ ಭಾಗ್ಯವ ನೆನೆದು' ಕೃತಿಗಳನ್ನು ಪ್ರಕಟಿಸಿದೆ.

ಶ್ರೀ ಮಹದೇವ ಬಸರಕೋಡ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ತಮ್ಮ ಸೇವೆಯು ಹೀಗೆ ಮುಂದುವರೆಯಲಿ ಎಂಬ ಶುಭ ಹಾರೈಕೆ ನಮ್ಮದು.

ಆತ್ಮೀಯರೇ, ವೀರಲೋಕ ಪುಸ್ತಕ ಪ್ರಕಾಶನ‌ ಸಂಸ್ಥೆಯವರು ಹೆಚ್ ಎಸ್ ಆರ್ ಲೇಔಟ್ ನಲ್ಲಿ  ಹಮ್ಮಿಕೊಂಡಿರುವ 'ಪುಸ್ತಕ ಸಂತೆ' ಯಲ್ಲಿ ನಮ್ಮ ಪಂಚಮಿ‌ ಸಂಸ್...
10/02/2024

ಆತ್ಮೀಯರೇ,
ವೀರಲೋಕ ಪುಸ್ತಕ ಪ್ರಕಾಶನ‌ ಸಂಸ್ಥೆಯವರು ಹೆಚ್ ಎಸ್ ಆರ್ ಲೇಔಟ್ ನಲ್ಲಿ ಹಮ್ಮಿಕೊಂಡಿರುವ 'ಪುಸ್ತಕ ಸಂತೆ' ಯಲ್ಲಿ ನಮ್ಮ ಪಂಚಮಿ‌ ಸಂಸ್ಥೆಯ ಪುಸ್ತಕಗಳು ಕದಂಬ ಪ್ರಕಾಶನದ ಮಳಿಗೆಯಲ್ಲಿ ಲಭ್ಯವಿವೆ.
ಆಸಕ್ತರು ಸಂಪರ್ಕಿಸಬಹುದು.
ನಾಗೇಶ್ ಕದಂಬ : +917795506693
ಪುಸ್ತಕಗಳನ್ನು ಕೊಂಡು ಓದಿ ಪ್ರೋತ್ಸಾಹಿಸಿ.

ಧನ್ಯವಾದಗಳು
ಶ್ರೀಧರ ಬನವಾಸಿ



ಪಂಚಮಿ ಸಂಸ್ಥೆ ಪ್ರಕಟಿಸಿರುವ ಧಾರ್ಮಿಕ ಚಿಂತಕರಾದ ಶ್ರೀ ಸುರೇಶ ವಿ ಭಾಗವತ ಅವರು ರಚಿಸಿರುವ ಶ್ರೀಮದ್ ಭಗವದ್ಗೀತೆಯ ಪರಿಚಯವು ನಾಡಿನ ಜನಪ್ರಿಯ `ಹೊ...
20/01/2024

ಪಂಚಮಿ ಸಂಸ್ಥೆ ಪ್ರಕಟಿಸಿರುವ ಧಾರ್ಮಿಕ ಚಿಂತಕರಾದ ಶ್ರೀ ಸುರೇಶ ವಿ ಭಾಗವತ ಅವರು ರಚಿಸಿರುವ ಶ್ರೀಮದ್ ಭಗವದ್ಗೀತೆಯ ಪರಿಚಯವು ನಾಡಿನ ಜನಪ್ರಿಯ `ಹೊಸದಿಗಂತ’ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಪತ್ರಿಕೆಯ ಈ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಕೃತಿಗಾಗಿ ಸಂಪರ್ಕಿಸಿ. 097400 69123

ಆತ್ಮೀಯರೇ,ಪಂಚಮಿ ಸಂಸ್ಥೆಯ ಪ್ರಕಾಶನದಲ್ಲಿ ಖ್ಯಾತ ಲೇಖಕಿ ಜಯಶ್ರೀ ದೇಶಪಾಂಡೆ ಅವರ ನೂತನ ಕಥಾಗುಚ್ಛ `ಬಿಂಬ’ ಕೃತಿ ಪ್ರಕಟಗೊಂಡಿದೆ.  ಸಾಹಿತ್ಯದ ವಿ...
20/01/2024

ಆತ್ಮೀಯರೇ,
ಪಂಚಮಿ ಸಂಸ್ಥೆಯ ಪ್ರಕಾಶನದಲ್ಲಿ ಖ್ಯಾತ ಲೇಖಕಿ ಜಯಶ್ರೀ ದೇಶಪಾಂಡೆ ಅವರ ನೂತನ ಕಥಾಗುಚ್ಛ `ಬಿಂಬ’ ಕೃತಿ ಪ್ರಕಟಗೊಂಡಿದೆ.

ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಹತ್ತು ಹಲವು ಕೃತಿಗಳನ್ನು ಓದುಗರಿಗೆ ನೀಡುತ್ತಾ ಬಂದು ಅಪಾರ ಓದುಗ ವಲಯವನ್ನು ಹೊಂದಿರುವ ಜಯಶ್ರೀ ದೇಶಪಾಂಡೆಯವರ ನೂತನ ಕತೆಗಳು ಅಷ್ಟೇ ಓದುಗರಿಗೆ ಇಷ್ಟವಾಗಲಿವೆ.
`ಬಿಂಬ’ ಕೃತಿ ಸದ್ಯದಲ್ಲೇ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯವಾಗಲಿದೆ.

`ಬಿಂಬ' ಕೃತಿಗಾಗಿ ಸಂಪರ್ಕಿಸಿ.
ಮೊ: 097400 69123
__________________________________________________________________

ಶ್ರೀಮತಿ ಜಯಶ್ರೀ ದೇಶಪಾಂಡೆಯವರು ಸಾಹಿತ್ಯ ಕ್ಷೇತ್ರದ ಹಳೆಯ ಹುಲಿ. ಎಷ್ಟೋ ವರ್ಷಗಳ ಹಿಂದೆಯೇ ತಮ್ಮ ಲೇಖಕಿ ಪಟ್ಟಕ್ಕೆ ಒಂದು ಸ್ಥಾಯೀ ಸ್ಥಾನ ಒದಗಿಸಿ ಕೊಟ್ಟವರು. ಅವರು ಕೈಯಾಡಿಸದ ಸಾಹಿತ್ಯ ಕ್ಷೇತ್ರವೇ ಇಲ್ಲವೆನ್ನಬಹುದು. ಕಾದಂಬರಿ, ಕವನ, ಕಥೆಗಳು, ಪ್ರವಾಸ ಕಥನಗಳು, ಲಘು ಹಾಸ್ಯದ ಬರಹಗಳು, ಕಾಕಾ-ಉವಾಚಗಳೆಂಬ ಮನೆತನದ ಹಿರಿಯರು ನಡೆದು ಬಂದ ಹಾದಿಯ ಹೆಗ್ಗುರುತುಗಳನ್ನು ಬಿಂಬಿಸುವ ಲಘು ಬರಹಗಳ ಸಂಗ್ರಹಗಳು... ಏನುಂಟು! ಏನಿಲ್ಲ!
ಎಲ್ಲ ಸ್ತರದ ಓದುಗರನ್ನೂ ಸಂತುಷ್ಟಗೊಳಿಸುವ ತಾಕತ್ತು ಜಯಶ್ರೀ ಅವರ ಪೆನ್ನಿಗಿದೆ. ಒಂದೇ ಲೇಖನದಲ್ಲಿ ಹಲವು ದೇಶಗಳನ್ನು ವಿವಿಧ ಭಾಷೆಗಳನ್ನು ಬದುಕಿನ ವಿವಿಧ ಮಜಲುಗಳನ್ನು ಬದುಕಿನ ಹೊಸಹೊಸ ಬಣ್ಣಗಳನ್ನು ಚಿತ್ರಿಸಿ ಅದನ್ನು ಅದ್ಭುತವಾಗಿ ಅಂದಗೊಳಿಸುವ ಅವರ ಪರಿ ನನಗೊಂದು ತೀರದ ಅಚ್ಚರಿ. ಮನುಷ್ಯ ಪಾತ್ರಗಳನ್ನೂ ಮೀರಿ ನಿಲ್ಲುವ ಪ್ರಾಣಿ ಪ್ರಪಂಚ ಅವರ ಲೇಖನಿಗಳಲ್ಲಿ ಬಿಚ್ಚಿಕೊಳ್ಳುವ ಪವಾಡ ನೋಡಬೇಕು. ಪ್ರಪಂಚದ ಮೂಲೆ ಮೂಲೆಗಳು ಬಸ್ಸು, ರೇಲ್ವೆಗಳು, ಗದ್ದಲ- ಮೌನಗಳೂ ಒಟ್ಟಿನಲ್ಲಿ ಕಣ್ಣಿಗೆ ಕಾಣಿಸಿಕೊಳ್ಳುವ ಒಂದು ಕಡ್ಡಿ ಕೂಡ ಅವರ ಅಚ್ಚಿನಲ್ಲಿ ಹೊಕ್ಕು ಏನೋ ಹೊಸ ರೂಪದಲ್ಲಿ ಹೊಸ ವೇಷದಲ್ಲಿ ನಮ್ಮ ಮುಂದೆ ಬಂದು ನಿಲ್ಲುತ್ತದೆ.
ಕಥನ ಶೈಲಿ ಸಿದ್ಧಿಸಿರುವ ಜಯಶ್ರೀ ದೇಶಪಾಂಡೆ ಅವರ ‘ಬಿಂಬ’ ಕಥಾಸಂಕಲನದ ಈ ಹತ್ತು ಕಥೆಗಳು ಕೈಗೆತ್ತಿಕೊಂಡು ಓದಿದವರ ಮನಸ್ಸನ್ನು ನೂರಾರು ಬಗೆಯ ಚಿಂತನೆಗಳಿಗೆ ಪ್ರೇರೇಪಿಸುವುದು ನಿಶ್ಚಿತ.
- ಕೃಷ್ಣಾ ಕೌಲಗಿ
(ಮುನ್ನುಡಿಯಿಂದ)

ಆತ್ಮೀಯರೇ,ಪಂಚಮಿ ಸಂಸ್ಥೆಯ ಮೂಲಕ ಪ್ರಕಾಶನಗೊಂಡ `ಆಹಾರ ಚರಿತೆ’ ಕೃತಿಯು ಚೆನ್ನೈನಲ್ಲಿ ನಡೆಯುತ್ತಿದ್ದ ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕೋತ್ಸವದಲ್...
20/01/2024

ಆತ್ಮೀಯರೇ,

ಪಂಚಮಿ ಸಂಸ್ಥೆಯ ಮೂಲಕ ಪ್ರಕಾಶನಗೊಂಡ `ಆಹಾರ ಚರಿತೆ’ ಕೃತಿಯು ಚೆನ್ನೈನಲ್ಲಿ ನಡೆಯುತ್ತಿದ್ದ ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕೋತ್ಸವದಲ್ಲಿ (CIBF) ಬಿಡುಗಡೆಯಾಯಿತು. ತಮಿಳುನಾಡು ಸರ್ಕಾರದ ಅನುವಾದ ಯೋಜನೆಯ (TNTB) ಸಹಯೋಗದೊಂದಿಗೆ ಈ ಕೃತಿಯು ಪ್ರಕಟವಾಗಿದೆ. `ಉಣವು ಚರಿತ್ರಂ' ಕೃತಿಯು ಕನ್ನಡದಲ್ಲಿ `ಆಹಾರ ಚರಿತೆ' ಹೆಸರಿನಲ್ಲಿ ಪ್ರಕಟವಾಗಿದೆ.
ಕೃತಿಯ ಮೂಲ ಲೇಖಕರಾದ ಶ್ರೀ ಮುಗಿಲ್, ಕನ್ನಡ ಅನುವಾದಕರಾದ ಶ್ರೀ ಕೆ ನಲ್ಲತಂಬಿ, ಅನುವಾದ ಯೋಜನೆಯ ಕನ್ನಡ ಸಂಯೋಜಕರಾದ ಶ್ರೀ ವಿಎಸ್ ಶ್ರೀಧರ್ ಹಾಗೂ ಪಂಚಮಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀಧರ ಬನವಾಸಿ ಅವರು ಈ ಪುಸ್ತಕ ಅನಾವರಣದಲ್ಲಿ ಪಾಲ್ಗೊಂಡಿದ್ದರು.

`ಆಹಾರ ಚರಿತೆ' ಕೃತಿಯು ಸದ್ಯದಲ್ಲೇ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.
ಕೃತಿಗಾಗಿ ನಮ್ಮನ್ನು ಸಂಪರ್ಕಿಸಬಹುದು: 097400 69123

ಆತ್ಮೀಯರೇ, ನಮ್ಮ ಪಂಚಮಿ‌ ಸಂಸ್ಥೆಯ ಮೂಲಕ ಪ್ರಕಾಶನಗೊಂಡ  'ಬ್ರಿಟಿಷ್ ಬಂಗ್ಲೆ' ಕೃತಿಯ ಪರಿಚಯ ಇವತ್ತಿನ ವಿಶ್ವವಾಣಿ ಪತ್ರಿಕೆಯ ಪುರವಣಿ 'ಆರಾಮ‌'ದ...
19/01/2024

ಆತ್ಮೀಯರೇ,
ನಮ್ಮ ಪಂಚಮಿ‌ ಸಂಸ್ಥೆಯ ಮೂಲಕ ಪ್ರಕಾಶನಗೊಂಡ 'ಬ್ರಿಟಿಷ್ ಬಂಗ್ಲೆ' ಕೃತಿಯ ಪರಿಚಯ ಇವತ್ತಿನ ವಿಶ್ವವಾಣಿ ಪತ್ರಿಕೆಯ ಪುರವಣಿ 'ಆರಾಮ‌'ದಲ್ಲಿ ಪ್ರಕಟವಾಗಿದೆ. ಕೃತಿಗೆ ಪ್ರೋತ್ಸಾಹ ನೀಡಿದ ಪತ್ರಿಕೆಯ ಸಂಪಾದಕ ಮಂಡಳಿಗೆ ಧನ್ಯವಾದಗಳು.

ಪಂಚಮಿ ಸಂಸ್ಥೆ ‌ಪ್ರಕಟಿಸಿರುವ 'ಅರಮನೆಯಿಂದ ಅರಿವಿನರಮನೆಗೆ' ಕೃತಿಗೆ ಕಸಾಪ ದತ್ತಿ ಪ್ರಶಸ್ತಿ ಲಭಿಸಿದ ಸುದ್ದಿಯು ಪ್ರಜಾವಾಣಿ ಹಾಗೂ ಕನ್ನಡಪ್ರಭ ಪ...
14/01/2024

ಪಂಚಮಿ ಸಂಸ್ಥೆ ‌ಪ್ರಕಟಿಸಿರುವ 'ಅರಮನೆಯಿಂದ ಅರಿವಿನರಮನೆಗೆ' ಕೃತಿಗೆ ಕಸಾಪ ದತ್ತಿ ಪ್ರಶಸ್ತಿ ಲಭಿಸಿದ ಸುದ್ದಿಯು ಪ್ರಜಾವಾಣಿ ಹಾಗೂ ಕನ್ನಡಪ್ರಭ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.‌ ಮಾಧ್ಯಮದವರ ಈ ಪ್ರೋತ್ಸಾಹಕ್ಕೆ ಧನ್ಯವಾದಗಳು.

'ಸರಸವಾಣಿಯ ಗಿಣಿಗಳು'  ಕೃತಿಯ ಮುನ್ನುಡಿ ಮಾತುಗಳು ಬುಕ್ ಬ್ರಹ್ಮ ದಲ್ಲಿ ಪ್ರಕಟವಾಗಿದೆ. ಬುಕ್ ಬ್ರಹ್ಮ‌ ಸಂಸ್ಥೆಗೆ ಧನ್ಯವಾದಗಳು.ಕೃತಿಗಾಗಿ ಸಂಪರ...
14/01/2024

'ಸರಸವಾಣಿಯ ಗಿಣಿಗಳು' ಕೃತಿಯ ಮುನ್ನುಡಿ ಮಾತುಗಳು ಬುಕ್ ಬ್ರಹ್ಮ ದಲ್ಲಿ ಪ್ರಕಟವಾಗಿದೆ.
ಬುಕ್ ಬ್ರಹ್ಮ‌ ಸಂಸ್ಥೆಗೆ ಧನ್ಯವಾದಗಳು.

ಕೃತಿಗಾಗಿ ಸಂಪರ್ಕಿಸಿ: 097400 69123

Book Brahma - One stop solution for all Kannada books and reviews. Global Kannada Literary Platform, connecting writers, readers, publishers & critics. Learn More!

'ಸರಸವಾಣಿಯ ಗಿಣಿಗಳು' ಕೃತಿಯ ಕುರಿತು ಬುಕ್ ಬ್ರಹ್ಮ ದಲ್ಲಿಕೃತಿಗಾಗಿ ಸಂಪರ್ಕಿಸಿ: 097400 69123
14/01/2024

'ಸರಸವಾಣಿಯ ಗಿಣಿಗಳು' ಕೃತಿಯ ಕುರಿತು ಬುಕ್ ಬ್ರಹ್ಮ ದಲ್ಲಿ

ಕೃತಿಗಾಗಿ ಸಂಪರ್ಕಿಸಿ: 097400 69123

ಪ್ರಸ್ತುತ ತಮಿಳಿನಿಂದ ಕನ್ನಡಕ್ಕೆ ಬಂದ ಕೆ. ನಲ್ಲತಂಬಿಯವರ ಎ

ಆತ್ಮೀಯರೇ ಒಂದು ಸಂತಸದ ಸುದ್ದಿ!ನಮ್ಮ ಪಂಚಮಿ ಸಂಸ್ಥೆಯು  2022ರಲ್ಲಿ ಪ್ರಕಟಿಸಿದ `ಅರಮನೆಯಿಂದ ಅರಿವಿನರಮನೆಗೆ’ ಕಾವ್ಯಕೃತಿಗೆ ಕನ್ನಡ ಸಾಹಿತ್ಯ ಪ...
11/01/2024

ಆತ್ಮೀಯರೇ ಒಂದು ಸಂತಸದ ಸುದ್ದಿ!

ನಮ್ಮ ಪಂಚಮಿ ಸಂಸ್ಥೆಯು 2022ರಲ್ಲಿ ಪ್ರಕಟಿಸಿದ `ಅರಮನೆಯಿಂದ ಅರಿವಿನರಮನೆಗೆ’ ಕಾವ್ಯಕೃತಿಗೆ ಕನ್ನಡ ಸಾಹಿತ್ಯ ಪರಿಷತ್ ನೀಡುವ ಬೆಳಗಾವಿ ಜಿಲ್ಲೆಯ ಬರಹಗಾರರ ಉತ್ತಮ ಕವನ ಸಂಕಲನಕ್ಕೆ ನೀಡುವ ಡಾ|| ಆರ್.ಜೆ. ಗಲಗಲಿ ದತ್ತಿ ಪ್ರಶಸ್ತಿ ಲಭಿಸಿದೆ. ಕೃತಿಯ ಲೇಖಕರಾದ ಪ್ರೊ.ಸುರೇಶ ಮುದ್ದಾರ ಅವರಿಗೆ ಅಭಿನಂದನೆಗಳು. ಉತ್ತಮ ಕೃತಿಯನ್ನು ಪ್ರಕಟಿಸಿದ ಹೆಮ್ಮೆ, ಖುಷಿ ನಮ್ಮದು.

ಪ್ರಶಸ್ತಿಗೆ ಭಾಜನರಾದ ಕವಿ ಸುರೇಶ ಮುದ್ದಾರ ಅವರಿಗೂ, ಆಯ್ಕೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥೆಗೂ ಹೃತ್ಪೂರ್ವಕ ಧನ್ಯವಾದಗಳು.

ಆತ್ಮೀಯರೇ,ಪಂಚಮಿ ಸಂಸ್ಥೆಯ ಪ್ರಕಾಶನದಲ್ಲಿ ಖ್ಯಾತ ಲೇಖಕಿ ಜಯಶ್ರೀ ದೇಶಪಾಂಡೆ ಅವರ ನೂತನ ಕೃತಿ `ಬಿಂಬ' (ಕತೆಗಳು)ಸದ್ಯದಲ್ಲೇ ನಿರೀಕ್ಷಿಸಿ…
04/01/2024

ಆತ್ಮೀಯರೇ,
ಪಂಚಮಿ ಸಂಸ್ಥೆಯ ಪ್ರಕಾಶನದಲ್ಲಿ
ಖ್ಯಾತ ಲೇಖಕಿ ಜಯಶ್ರೀ ದೇಶಪಾಂಡೆ ಅವರ ನೂತನ ಕೃತಿ

`ಬಿಂಬ' (ಕತೆಗಳು)

ಸದ್ಯದಲ್ಲೇ ನಿರೀಕ್ಷಿಸಿ…

ಆತ್ಮೀಯರೇ,ಕತೆಗಾರ ಜಂಗಮಕೋಟೆ ಪುರುಷೋತ್ತಮ ಅವರ ಕಥಾಸಂಕಲನ `ಕೊಟ್ಟು ಹುಟ್ಟದವರ ಬದುಕು’  ಕೃತಿ ಈಗ ಟೋಟಲ್ ಕನ್ನಡದಲ್ಲಿ  ಲಭ್ಯವಿದೆ.ಕೃತಿಯನ್ನುಕೊ...
04/01/2024

ಆತ್ಮೀಯರೇ,
ಕತೆಗಾರ ಜಂಗಮಕೋಟೆ ಪುರುಷೋತ್ತಮ ಅವರ ಕಥಾಸಂಕಲನ `ಕೊಟ್ಟು ಹುಟ್ಟದವರ ಬದುಕು’ ಕೃತಿ ಈಗ ಟೋಟಲ್ ಕನ್ನಡದಲ್ಲಿ
ಲಭ್ಯವಿದೆ.
ಕೃತಿಯನ್ನುಕೊಳ್ಳುವವರು ಈ ಕೊಂಡಿಯನ್ನು ಸಂಪರ್ಕಿಸಬಹುದು.

Kannada Books Kannada Literature Books Kannada T Shirts Kannada TEE Shirts Kannada Clocks Kannada DVDs Kannada VCDs Kannada Greeting Cards Kannada Watches Kannada Flags Kannada Wrist Bands Karnataka Rajyothsava Jnaanapeeta Kannada Audio CDs Kannada MP3s Kannada Shalyas Kannada Peta Karnataka Peta My...

ಆತ್ಮೀಯರೇ,ಕತೆಗಾರ ಜಂಗಮಕೋಟೆ ಪುರುಷೋತ್ತಮ ಅವರ ಕಥಾಸಂಕಲನ `ಕೊಟ್ಟು ಹುಟ್ಟದವರ ಬದುಕು’  ಕೃತಿ ಈಗ ಅಮೆಜಾನ್ ನಲ್ಲಿ ಲಭ್ಯವಿದೆ.ಕೃತಿಯನ್ನು ಕೊಳ್ಳ...
04/01/2024

ಆತ್ಮೀಯರೇ,
ಕತೆಗಾರ ಜಂಗಮಕೋಟೆ ಪುರುಷೋತ್ತಮ ಅವರ ಕಥಾಸಂಕಲನ `ಕೊಟ್ಟು ಹುಟ್ಟದವರ ಬದುಕು’ ಕೃತಿ ಈಗ ಅಮೆಜಾನ್ ನಲ್ಲಿ ಲಭ್ಯವಿದೆ.

ಕೃತಿಯನ್ನು ಕೊಳ್ಳುವವರು ಈ ಕೊಂಡಿಯನ್ನು ಸಂಪರ್ಕಿಸಬಹುದು.

ಸಮಕಾಲೀನ ಕಥಾ ಚಿತ್ರಣದ ಜೊತೆಗೆ ಕಲ್ಪನೆ ಹಾಗೂ ನವ್ಯಕಾಲದ ಆಶೋತ್ತರಗಳನ್ನು ಸೇರಿಸಿ ಕತೆಗಳನ್ನು ಬರೆಯುವುದು ಜಂಗಮಕೋಟೆ ಪುರುಷೋತ್ತಮ...

ಆತ್ಮೀಯರೇ,ಮಹಾದೇವ ಬಸರಕೋಡ ಅವರ ಜನಪ್ರಿಯ ಲೇಖನಗಳ  ಸಂಕಲನ `ಇರುವ ಭಾಗ್ಯವ ನೆನೆದು’ಕೃತಿ ಟೋಟಲ್ ಕನ್ನಡದಲ್ಲಿ ಲಭ್ಯವಿದೆ.ಕೃತಿಯನ್ನುಕೊಳ್ಳುವವರು ...
04/01/2024

ಆತ್ಮೀಯರೇ,
ಮಹಾದೇವ ಬಸರಕೋಡ ಅವರ ಜನಪ್ರಿಯ ಲೇಖನಗಳ ಸಂಕಲನ `ಇರುವ ಭಾಗ್ಯವ ನೆನೆದು’
ಕೃತಿ ಟೋಟಲ್ ಕನ್ನಡದಲ್ಲಿ ಲಭ್ಯವಿದೆ.
ಕೃತಿಯನ್ನುಕೊಳ್ಳುವವರು ಈ ಕೊಂಡಿಯನ್ನು ಸಂಪರ್ಕಿಸಬಹುದು.

Kannada Books Kannada Literature Books Kannada T Shirts Kannada TEE Shirts Kannada Clocks Kannada DVDs Kannada VCDs Kannada Greeting Cards Kannada Watches Kannada Flags Kannada Wrist Bands Karnataka Rajyothsava Jnaanapeeta Kannada Audio CDs Kannada MP3s Kannada Shalyas Kannada Peta Karnataka Peta My...

ಆತ್ಮೀಯರೇ,ಮಹಾದೇವ ಬಸರಕೋಡ ಅವರ ಜನಪ್ರಿಯ ಲೇಖನಗಳ  ಸಂಕಲನ `ಇರುವ ಭಾಗ್ಯವ ನೆನೆದು’ಕೃತಿ ಅಮೆಜಾನ್ ನಲ್ಲಿ ಲಭ್ಯವಿದೆ.ಕೃತಿಯನ್ನು ಕೊಳ್ಳುವವರು ಈ ...
04/01/2024

ಆತ್ಮೀಯರೇ,
ಮಹಾದೇವ ಬಸರಕೋಡ ಅವರ ಜನಪ್ರಿಯ ಲೇಖನಗಳ ಸಂಕಲನ `ಇರುವ ಭಾಗ್ಯವ ನೆನೆದು’
ಕೃತಿ ಅಮೆಜಾನ್ ನಲ್ಲಿ ಲಭ್ಯವಿದೆ.
ಕೃತಿಯನ್ನು ಕೊಳ್ಳುವವರು ಈ ಕೊಂಡಿಯನ್ನು ಸಂಪರ್ಕಿಸಬಹುದು.

ನಿತ್ಯ ಬದುಕಿಗೆ ಸರಳ ಅಧ್ಯಾತ್ಮದ ಸವಿ.... ಮಹಾದೇವ ಬಸರಕೋಡ ಅವರು ನಾಡಿನಾದ್ಯಂತ ತಮ್ಮ ಅಂಕಣ ಬರೆಹಗಳ ಮೂಲಕ ಜನಪ್ರಿಯರಾದವರು. ಅದರಲ್ಲೂ ಮ....

ಆತ್ಮೀಯರೇ,ಕೆ ನಲ್ಲತಂಬಿ ಅವರ `ಸರಸವಾಣಿಯ ಗಿಣಿಗಳು’ ಕೃತಿ ಅಮೆಜಾನ್ ನಲ್ಲಿ ಲಭ್ಯವಿದೆ.ಕೃತಿಯನ್ನುಕೊಳ್ಳುವವರು ಈ ಕೊಂಡಿಯನ್ನು ಸಂಪರ್ಕಿಸಬಹುದು.
04/01/2024

ಆತ್ಮೀಯರೇ,
ಕೆ ನಲ್ಲತಂಬಿ ಅವರ `ಸರಸವಾಣಿಯ ಗಿಣಿಗಳು’ ಕೃತಿ ಅಮೆಜಾನ್ ನಲ್ಲಿ ಲಭ್ಯವಿದೆ.
ಕೃತಿಯನ್ನುಕೊಳ್ಳುವವರು ಈ ಕೊಂಡಿಯನ್ನು ಸಂಪರ್ಕಿಸಬಹುದು.

ಈ ಸಂಕಲನದ ಪ್ರತಿ ಕತೆಯೂ ತನ್ನಂತರಾಳದ ಸರಳ ಸೌಂದರ್ಯದಿಂದಲೇ ನಮ್ಮ ಗಮನವನ್ನು ವಿಶೇಷವಾಗಿ ಸೆಳೆಯುವಂತಿವೆ. ಹೊಸ ನಮೂನಿಯ ರಚನೆ, ಪ್ರಯೋ.....

`ಸರಸವಾಣಿಯ ಗಿಣಿಗಳು' ಕೃತಿ ಟೋಟಲ್ ಕನ್ನಡದಲ್ಲಿ ಲಭ್ಯವಿದೆ.ಕೃತಿಯನ್ನುಕೊಳ್ಳುವವರು ಈ ಕೊಂಡಿಯನ್ನು ಸಂಪರ್ಕಿಸಬಹುದು.
04/01/2024

`ಸರಸವಾಣಿಯ ಗಿಣಿಗಳು' ಕೃತಿ ಟೋಟಲ್ ಕನ್ನಡದಲ್ಲಿ ಲಭ್ಯವಿದೆ.
ಕೃತಿಯನ್ನುಕೊಳ್ಳುವವರು ಈ ಕೊಂಡಿಯನ್ನು ಸಂಪರ್ಕಿಸಬಹುದು.

Kannada Books Kannada Literature Books Kannada T Shirts Kannada TEE Shirts Kannada Clocks Kannada DVDs Kannada VCDs Kannada Greeting Cards Kannada Watches Kannada Flags Kannada Wrist Bands Karnataka Rajyothsava Jnaanapeeta Kannada Audio CDs Kannada MP3s Kannada Shalyas Kannada Peta Karnataka Peta My...

ಸರ್ವರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾ...ಪಂಚಮಿ ಸಂಸ್ಥೆಯ ನೂತನ ಕೃತಿ......ಆಹಾರದ ಹಿಂದಿನ ಬಹುದೊಡ್ಡ ಇತಿಹಾಸ!ಆ ಚರಿತ್ರೆಯ ಕೌತುಕವನ್...
01/01/2024

ಸರ್ವರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾ...

ಪಂಚಮಿ ಸಂಸ್ಥೆಯ ನೂತನ ಕೃತಿ......

ಆಹಾರದ ಹಿಂದಿನ ಬಹುದೊಡ್ಡ ಇತಿಹಾಸ!
ಆ ಚರಿತ್ರೆಯ ಕೌತುಕವನ್ನೊಳಗೊಂಡ ಕೃತಿ

ಆಹಾರ ಚರಿತೆ
ತಮಿಳು: ಮುಗಿಲ್
ಕನ್ನಡಕ್ಕೆ : ಕೆ ನಲ್ಲತಂಬಿ

ಸದ್ಯದಲ್ಲೇ ನಿರೀಕ್ಷಿಸಿ...





ಸರ್ವರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾ...ಪಂಚಮಿ ಸಂಸ್ಥೆಯ ನೂತನ ಕೃತಿ       `Masculine ಜಗತ್ತಿನಲ್ಲೊಂದು  ರೋಚಕ ಕತೆ!' ಅಮೀಬಾ(ಕಾದ...
01/01/2024

ಸರ್ವರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾ...
ಪಂಚಮಿ ಸಂಸ್ಥೆಯ ನೂತನ ಕೃತಿ

`Masculine ಜಗತ್ತಿನಲ್ಲೊಂದು ರೋಚಕ ಕತೆ!'

ಅಮೀಬಾ
(ಕಾದಂಬರಿ)
ಲೇಖಕ: ಭಗೀರಥ

ಸದ್ಯದಲ್ಲೇ ನಿರೀಕ್ಷಿಸಿ...





`

New year—a new chapter, new verse, or just the same old story? Ultimately we write it. The choice is ours. - Alex Morrit...
01/01/2024

New year—a new chapter, new verse, or just the same old story? Ultimately we write it. The choice is ours. - Alex Morritt

ನಮ್ಮ ಪಂಚಮಿ ಸಂಸ್ಥೆಯ ಪ್ರಕಾಶನದಲ್ಲಿಕತೆಗಾರ ಜಂಗಮಕೋಟೆ ಪುರುಷೋತ್ತಮ ಅವರ ನೂತನ ಕೃತಿ`ಕೊಟ್ಟು ಹುಟ್ಟದವರ ಬದುಕು' ಕೃತಿಗಾಗಿ ಸಂಪರ್ಕಿಸಿ: 09740...
26/12/2023

ನಮ್ಮ ಪಂಚಮಿ ಸಂಸ್ಥೆಯ ಪ್ರಕಾಶನದಲ್ಲಿ
ಕತೆಗಾರ ಜಂಗಮಕೋಟೆ ಪುರುಷೋತ್ತಮ ಅವರ
ನೂತನ ಕೃತಿ
`ಕೊಟ್ಟು ಹುಟ್ಟದವರ ಬದುಕು'
ಕೃತಿಗಾಗಿ ಸಂಪರ್ಕಿಸಿ: 097400 69123
------------------------------------------------------
ಸಮಕಾಲೀನ ಕಥಾ ಚಿತ್ರಣದ ಜೊತೆಗೆ ಕಲ್ಪನೆ ಹಾಗೂ ನವ್ಯಕಾಲದ ಆಶೋತ್ತರಗಳನ್ನು ಸೇರಿಸಿ ಕತೆಗಳನ್ನು ಬರೆಯುವುದು ಜಂಗಮಕೋಟೆ ಪುರುಷೋತ್ತಮರ ಕಥನ ಶೈಲಿಯಾಗಿದೆ. ನಿರೂಪಣೆಯಲ್ಲಿ ಹೊಸ ಹೊನಲಿನ ಗೋಜಿಗೆ ಹೋಗದೇ ಸಾಂಪ್ರದಾಯಿಕ ಅಡಿಪಾಯದಲ್ಲೇ ಕತೆ ಕಟ್ಟುವುದು ಅವರ ಬರವಣಿಗೆಯ ಮೂಲ ಉದ್ದೇಶವೆಂಬAತೆ ತೋರುತ್ತದೆ. `ಕೊಟ್ಟು ಹುಟ್ಟದವರ ಬದುಕು' ಕೃತಿ ನಗರ ಪರಿಸರದಲ್ಲಿನ ಮಧ್ಯಮ, ಉನ್ನತಸ್ತರದವರ ನಡುವಿನ ಒಮ್ಮತದ ಬದುಕು, ಅದರ ನಡುವಿನ ಒಳಾಂತರಗಳ ನಡುವಿನ ಸುಳಿವುಗಳನ್ನು ಬಿಚ್ಚಿಡುತ್ತದೆ. ಕತೆಗಾರರು ತಮ್ಮ ಪಾತ್ರಗಳ ಮೂಲಕ ಲೌಕಿಕ ಪಟ್ಟಾಂಗದ ನಡುವೆ ವಿಸ್ತೃತವಾದ ವಿಚಾರಗಳನ್ನು ಹೇಳಿಸುತ್ತಾ ಇಷ್ಟವಾಗುತ್ತಾರೆ. ಕತೆಗಳಲ್ಲಿನ ವಿಷಾದ ಮತ್ತು ವಿನೋದದ ಬದುಕಿನ ಸುದೀರ್ಫ ಒಳನೋಟವು ಓದುಗರ ಚಿಂತನೆಗೆ ಕಾರಣವಾಗುತ್ತದೆ.

-ಶ್ರೀಧರ ಬನವಾಸಿ

ನಮ್ಮ ಪಂಚಮಿ ಸಂಸ್ಥೆಯ ಪ್ರಕಾಶನದಲ್ಲಿಖ್ಯಾತ ಅನುವಾದಕರಾದ ಕೆ. ನಲ್ಲತಂಬಿ ಅವರ ನೂತನ ಕೃತಿ`ಸರಸವಾಣಿಯ ಗಿಣಿಗಳು'ಕೃತಿಗಾಗಿ ಸಂಪರ್ಕಿಸಿ: 097400 6...
26/12/2023

ನಮ್ಮ ಪಂಚಮಿ ಸಂಸ್ಥೆಯ ಪ್ರಕಾಶನದಲ್ಲಿ
ಖ್ಯಾತ ಅನುವಾದಕರಾದ
ಕೆ. ನಲ್ಲತಂಬಿ ಅವರ ನೂತನ ಕೃತಿ
`ಸರಸವಾಣಿಯ ಗಿಣಿಗಳು'

ಕೃತಿಗಾಗಿ ಸಂಪರ್ಕಿಸಿ: 097400 69123
-----------------------------------------

ಈ ಸಂಕಲನದ ಪ್ರತಿ ಕತೆಯೂ ತನ್ನಂತರಾಳದ ಸರಳ ಸೌಂದರ್ಯದಿಂದಲೇ ನಮ್ಮ ಗಮನವನ್ನು ವಿಶೇಷವಾಗಿ ಸೆಳೆಯುವಂತಿವೆ. ಹೊಸ ನಮೂನಿಯ ರಚನೆ, ಪ್ರಯೋಗಗಳಿದ್ದರೂ, ಹೇರಿಕೆಯಾಗುವಷ್ಟು ತಂತ್ರಗಾರಿಕೆಯಾಗಲೀ, ಭಾಷಾ ಆಡಂಬರವಾಗಲೀ ಅಷ್ಟಾಗಿ ಕಾಣದೇ, ತನ್ನ ಸಹಜತೆ ಹಾಗೂ ಆತ್ಮೀಯ ಧಾಟಿಯ ಆಪ್ತತೆಯಿಂದ ‘ಇವು ನಮ್ಮ ಕತೆ’ ಎನ್ನುವಷ್ಟು ಸಲೀಸಾಗಿ ನಮ್ಮೊಳಗೆ ಇಳಿದುಬಿಡುತ್ತವೆ. ಈಗಾಗಲೇ ಅನೇಕ ಕತೆ, ಕಾದಂಬರಿಗಳನ್ನು ಕನ್ನಡದಿಂದ ತಮಿಳಿಗೂ, ತಮಿಳಿನಿಂದ ಕನ್ನಡಕ್ಕೂ ಅನುವಾದಿಸುತ್ತಾ ಬಂದಿರುವ ಕೆ. ನಲ್ಲತಂಬಿಯವರ ಅಕ್ಷರ ಪ್ರೀತಿ ಪುಟ ಪುಟದಲ್ಲೂ ತುಂಬಿದೆ. ಅನುವಾದವೆಂಬ ಅಸಾಧಾರಣ ಕಾರ್ಯವನ್ನೇ ಸದಾ ಧೇನಿಸುತ್ತಾ ಪ್ರತಿ ಅಕ್ಷರವನ್ನೂ ಅತ್ಯಂತ ಅಕರಾಸ್ಥೆಯಿಂದ ಅವಾಹಿಸಿಕೊಂಡು ಒಂದೊಂದು ಹೂವಿನ ಸುಗಂಧವನ್ನು ಜೋಪಾನದಲ್ಲಿ ಕಾಪಿಟ್ಟು ಸುಮಧುರ ದಂಡೆಯನ್ನೇ ಕಟ್ಟಿ ನಮ್ಮ ಮುಂದಿಟ್ಟು ಬಿಟ್ಟಿದ್ದಾರೆ.

-ಜಯಶ್ರೀ ಕಾಸರವಳ್ಳಿ.

__________________________________________

ದೇವೋತ್ತಮನು ಬೋಧಿಸಿದ ಪರಮೋಚ್ಛ ಜ್ಞಾನ!ಶ್ರೀಮದ್ ಭಗವದ್ಗೀತೆಯ ಕುರಿತಾಗಿ ಈ ಮಾತು ಪ್ರಸಿದ್ಧ- "ಪಾರ್ಥೋ ವತ್ಸಃ ಸುಧೀರ್ಭೋಕ್ತಾ" ಭಗವದ್ಗೀತೆಯ ಉಪದ...
26/12/2023

ದೇವೋತ್ತಮನು ಬೋಧಿಸಿದ ಪರಮೋಚ್ಛ ಜ್ಞಾನ!

ಶ್ರೀಮದ್ ಭಗವದ್ಗೀತೆಯ ಕುರಿತಾಗಿ ಈ ಮಾತು ಪ್ರಸಿದ್ಧ- "ಪಾರ್ಥೋ ವತ್ಸಃ ಸುಧೀರ್ಭೋಕ್ತಾ" ಭಗವದ್ಗೀತೆಯ ಉಪದೇಶ ಒಬ್ಬ ಅರ್ಜುನನಿಗಲ್ಲ, ಜಗಕೆಲ್ಲ ಅರ್ಜುನನನ್ನು ನಿಮಿತ್ತನನ್ನಾಗಿ ಮಾಡಿಕೊಂಡು ಶ್ರೀಕೃಷ್ಣ ಜಗತ್ತಿಗೇನೇ ಸಂದೇಶ ಕೊಟ್ಟಿದ್ದಾನೆ. ಹಾಗಾಗಿ ಆ ಭಗವದ್ಗೀತೆಯ ಸ್ಫೂರ್ತಿಯನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯ. ಶ್ರೀಯುತ ಸುರೇಶ ವಾಸುದೇವ ಭಾಗವತ ಇವರು, ತಾವು ಈ ಶ್ರೀಮದ್ ಭಗವದ್ಗೀತೆಯನ್ನು ಹೇಗೆ ಅರ್ಥಮಾಡಿಕೊಂಡಿದ್ದೇವೆ ಎನ್ನುವುದನ್ನು "ಶ್ರೀಮದ್ ಭಗವದ್ಗೀತಾ- ಸಮೃದ್ಧ ಜೀವನದ ಮೌಲ್ಯಗಳ ಗೀತೋಪದೇಶ" ಎನ್ನುವ ಈ ಶೀರ್ಷಿಕೆಯಲ್ಲಿ ಅವನ್ನೆಲ್ಲ ಸಂಗ್ರಹಿಸಿದ್ದಾರೆ.

-ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥಶ್ರೀಪಾದರು
ಶ್ರೀ ಪೇಜಾವರ ಅಧೋಕ್ಷಜ ಮಠ , ಉಡುಪಿ

ಕೃತಿಗಾಗಿ ಸಂಪರ್ಕಿಸಿ: 097400 69123

ನಮ್ಮ ಪಂಚಮಿ ಸಂಸ್ಥೆಯ ನೂತನ ಪುಸ್ತಕಗಳುಕವಯಿತ್ರಿ ವಿಜಯಲಕ್ಷ್ಮೀ ನಾಗೇಶ್ ಅವರ ಒಂಟಿ ನಾನಲ್ಲ (ಕವಿತೆಗಳು)ಕೃತಿಗಾಗಿ ಸಂಪರ್ಕಿಸಿ: 097400 69123_...
26/12/2023

ನಮ್ಮ ಪಂಚಮಿ ಸಂಸ್ಥೆಯ ನೂತನ ಪುಸ್ತಕಗಳು

ಕವಯಿತ್ರಿ ವಿಜಯಲಕ್ಷ್ಮೀ ನಾಗೇಶ್ ಅವರ
ಒಂಟಿ ನಾನಲ್ಲ (ಕವಿತೆಗಳು)

ಕೃತಿಗಾಗಿ ಸಂಪರ್ಕಿಸಿ: 097400 69123
________________________________________

ಸುದೀರ್ಘ ಬದುಕಿನಲ್ಲಿ ಜೀವನದ ನಿರಂತರ ಪಯಣದಲ್ಲಿ ಕಲ್ಲೆದೆ ಮಾಡಿಕೊಂಡರೂ ಮನುಷ್ಯ ಸಹಜವಾದ ಸಾಂತ್ವನದ ಬೆಚ್ಚನೆಯ ಸಾಂಗತ್ಯದ ಶುಭ ನಿರೀಕ್ಷೆಯೊಂದು ಎದೆಯೊಳಗೆ ಹುದುಗಿದುವುದು ವೇದ್ಯವಾಗಿದೆ. ನೀಳ ಕವಿತೆಗಳಿಂದ ಆರಂಭವಾದ ಇವರ ಕವಿತೆಗಳು ಆ ನಂತರ ಜೀವನದಲ್ಲಿ ಮಾಗಿದಂತೆ “ಕಿರಿದರೋಳ್ ಪಿರಿದರ್ಥ” ತುಂಬುವಂತೆ ಚಿಕ್ಕ ಚಿಕ್ಕ ಕವಿತೆಗಳಲ್ಲಿ ಅನುಭವ ಜನ್ಯ ಮಾತುಗಳನ್ನ ಪುಟಾಣಿ ಕವಿತೆಗಳಲ್ಲಿ ಕಟ್ಟಿ ಅದರಲ್ಲೇ ಸಾಂಗತ್ಯ ಹೊಂದಿ ತನ್ಮಯಳಾದಂತೆ ಕಾಣುತ್ತದೆ. ಆರೈಕೆ ಮಾಡುವ ಶುಶ್ರೂಶಕ ಕೈ, ಲೇಖನಿ ಹಿಡಿದು ಕಾವ್ಯ ಸಾಹಿತ್ಯ ಸೃಜನೆಯ ಕೈಂಕರ್ಯ ಮಾಡುತ್ತಿರುವ ಕವಯತ್ರಿಯವರು ತಮ್ಮ ಅನುಭವವನ್ನೇ ಪದಗಳಲ್ಲಿ ಕಟ್ಟಿ ಪದ್ಯವಾಗಿಸಿದ್ದಾರೆ.

26/12/2023

ನಮ್ಮ ಪಂಚಮಿ ಸಂಸ್ಥೆಯ ನೂತನ ಪುಸ್ತಕಗಳು :

ಕವಯಿತ್ರಿ ಶುಭ ಕೀರ್ತನಾ ಆಚಾರ್ಯ ಅವರ
`ಸಹಿ ಹಾಕಲು ನೀ ಬೇಕಿದೆ '(ಕವಿತೆಗಳು)

ಕೃತಿಗಾಗಿ ಸಂಪರ್ಕಿಸಿ: 097400 69123
________________________________________

ಕವಯಿತ್ರಿ ಶ್ರೀಮತಿ ಶುಭಕೀರ್ತನಾ ತಮ್ಮ ಅನುಭವಗಳಿಗೆ ಅಭಿವ್ಯಕ್ತಿ ನೀಡುವಾಗ ಲೀಲಾಜಾಲವಾಗಿ ಪದ ಪ್ರಯೋಗ ಮಾಡುತ್ತಾರೆ. ಜಡೆ ಹೆಣೆದ ಹಾಗೆ, ಕೈಗಳಿಗೆ ಮೆಹಂದಿ ಹಾಕಿಸಿಕೊಂಡ ಹಾಗೆ!ಇಲ್ಲಿಯ ರಾಗಾಭಿವ್ಯಕ್ತಿಯಲ್ಲಿ ತಾನ ವಿತಾನದ ನುಡಿ-ನರ್ತನ ಕಾವ್ಯಾಸಕ್ತರ ಗಮನ ಸೆಳೆಯುತ್ತದೆ. ಕನ್ನಡ ಕವಿಗಳು ಈಗಾಗಲೇ ಪ್ರೀತಿಯಂಥಾ ವಸ್ತುವಿನ ಸಹಸ್ರ ಪಾದ ಮುಟ್ಟಿ ಕಾವ್ಯದ ಔನ್ನತ್ಯವನ್ನು ತಟ್ಟಿ ಹೃದಯಗಳಲ್ಲಿ ಅರಿವು ಮೂಡಿಸಿದ್ದಾರೆ. ಸರಳವಾದ ಭಾಷೆ, ಮಧ್ಯಮ ವರ್ಗದ ಬದುಕಿನ ಚಿತ್ರಣ, ಬಾಳಿಗೆ ಹತ್ತಿರವಾಗುವ ಭಾವಗಳಿಂದ ಶುಭಕೀರ್ತನಾ ಹತ್ತಿರಾಗುತ್ತಾರೆ. ವಾಙ್ಮಯ ದಿಗಂತದಲ್ಲಿ ಕವಯತ್ರಿ ಎಂಬ ಮಿನುಗು ತಾರೆ ಉದಯವಾಗಿದೆ.

ಡಾ.ದೊಡ್ಡರಂಗೇಗೌಡರು

26/12/2023
ನಮ್ಮ ಪಂಚಮಿ ಸಂಸ್ಥೆಯ ನೂತನ ಪುಸ್ತಕಗಳು  ಖ್ಯಾತ ಅಂಕಣಕಾರರಾದ ಮಹಾದೇವ ಬಸರಕೋಡ ಅವರ ನೂತನ ಕೃತಿ`ಇರುವ ಭಾಗ್ಯವ ನೆನೆದು'ಕೃತಿಗಾಗಿ ಸಂಪರ್ಕಿಸಿ: 0...
26/12/2023

ನಮ್ಮ ಪಂಚಮಿ ಸಂಸ್ಥೆಯ ನೂತನ ಪುಸ್ತಕಗಳು

ಖ್ಯಾತ ಅಂಕಣಕಾರರಾದ
ಮಹಾದೇವ ಬಸರಕೋಡ ಅವರ ನೂತನ ಕೃತಿ
`ಇರುವ ಭಾಗ್ಯವ ನೆನೆದು'

ಕೃತಿಗಾಗಿ ಸಂಪರ್ಕಿಸಿ: 097400 69123

__________________________________________
ನಿತ್ಯ ಬದುಕಿಗೆ ಸರಳ ಅಧ್ಯಾತ್ಮದ ಸವಿ....

ಮಹಾದೇವ ಬಸರಕೋಡ ಅವರು ನಾಡಿನಾದ್ಯಂತ ತಮ್ಮ ಅಂಕಣ ಬರೆಹಗಳ ಮೂಲಕ ಜನಪ್ರಿಯರಾದವರು. ಅದರಲ್ಲೂ ಮುಖ್ಯವಾಗಿ ಸತ್‌ಚಿಂತನೆ, ಸದ್ಭಾವನೆಯ ವಿಚಾರಗಳುಳ್ಳ ಅವರ ಲೇಖನಗಳು ಸದ್ಧರ್ಮದ ನಡೆಯಲ್ಲಿ ಸಾಗುವವರಿಗೆ ದಾರಿದೀಪವಾಗಿವೆ. ಈ ನಿಟ್ಟಿನಲ್ಲಿ ಅವರ ಕೃತಿಗಳು ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಗಳಿಸಿವೆ. ಕಳೆದ ವರ್ಷ ನಮ್ಮ ಪ್ರಕಾಶನ ಸಂಸ್ಥೆಯಿಂದ ಅವರ ಸ್ಫೂರ್ತಿದಾಯಕ ಲೇಖನಗಳ ಸಂಕಲನ `ಆರದಿರಲಿ ಬೆಳಕು' ಕೃತಿಯನ್ನು ಹೊರತಂದಿದ್ದೆವು. ಸಮಾಜಕ್ಕೆ ಅತ್ಯವಶ್ಯಕವಾದ, ಉತ್ತಮವಾದ ಚಿಂತನೆಗಳನ್ನೊಳಗೊಂಡ ಕೃತಿಗಳನ್ನು ನೀಡಬೇಕಾದುದು ನಮ್ಮ ಮೂಲ ಆಶಯಗಳಲ್ಲಿ ಒಂದಾಗಿದ್ದುದರಿಂದ ಲೇಖಕರ `ಆರದಿರಲಿ ಬೆಳಕು' ಕೃತಿ ನಮ್ಮ ಉದ್ದೇಶಕ್ಕೆ ಪೂರಕವಾಗಿತ್ತು. ಅದರಂತೆ ಈ ಕೃತಿ ಓದುಗರಿಂದ ಉತ್ತಮ ಪ್ರಶಂಸೆಯನ್ನು ಕೂಡ ಪಡೆದಿತ್ತು.
ನಮ್ಮ ಮುಂದುವರೆದ ಪ್ರಯತ್ನವೆಂಬಂತೆ ಮಹಾದೇವ ಬಸರಕೋಡ ಅವರು `ವಿಶ್ವವಾಣಿ' ದಿನಪತ್ರಿಕೆಯಲ್ಲಿ ಕಗ್ಗದ ಕುರಿತಾಗಿ ನಿರಂತರವಾಗಿ ಅಂಕಣ ರೂಪದಲ್ಲಿ ಬರೆದಿದ್ದ ಲೇಖನಗಳನ್ನು ಸೇರಿಸಿ ಕೃತಿಯನ್ನು ಈ ವರ್ಷ ಪ್ರಕಟಿಸುವ ಪ್ರಯತ್ನವನ್ನು ಮಾಡಿದ್ದೇವೆ. `ಇರುವ ಭಾಗ್ಯವ ನೆನೆದು' ಡಿವಿಜಿ ಅವರ ಅದ್ಭುತ ಚಿಂತನೆಗಳಲ್ಲಿನ ಒಂದು ಸಾಲು. ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವಂತಹ ಸಾಲಿದು. ಇದನ್ನೇ ಕೃತಿಯ ಶೀರ್ಷಿಕೆಯನ್ನಾಗಿ ಬಳಸಿಕೊಂಡು, `ಮಂಕುತಿಮ್ಮನ ಕಗ್ಗ' ಕೃತಿ ಸಾರವನ್ನು ಸಾಮಾನ್ಯರಿಗೂ ಅತ್ಯಂತ ಸರಳವಾಗಿ ತಿಳಿಸುವ ಪ್ರಯತ್ನವಿದು. ಲೇಖಕರಾದ ಮಹಾದೇವ ಬಸರಕೋಡ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದರಿಂದ, ಮಕ್ಕಳಿಗೆ ಪಾಠವನ್ನು, ತಿಳಿವನ್ನು ನಾಜೂಕಾಗಿ ಹೇಳುವಂತೆ ಇಲ್ಲಿಯೂ ಕೂಡ ಡಿವಿಜಿ ಅವರ ಜೀವನ ದರ್ಶನದ ಪಾಠವನ್ನು ಅತ್ಯಂತ ಸರಳವಾಗಿ ಕೃತಿಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಕಗ್ಗ ದರ್ಶನದ ಲೇಖನಗಳನ್ನು ವಿಶ್ವವಾಣಿ ಪತ್ರಿಕೆಯಲ್ಲಿ ಓದಿದವರಿಗೂ, ಓದದವರಿಗೂ ಈ ಕೃತಿಯು ಸಮಷ್ಟಿಯಾದ ಸದ್ಭಾವನೆಯನ್ನು ಮೂಡಿಸುತ್ತದೆ. ಮಕ್ಕಳಿಗೂ ಕೂಡ ಅತ್ಯಂತ ಸ್ಫೂರ್ತಿದಾಯಕವಾಗಲಿದೆ.

-ಶ್ರೀಧರ ಬನವಾಸಿ

Address

Bangalore
560085

Telephone

+919739561334

Website

Alerts

Be the first to know and let us send you an email when Panchami Media Publications, Bangalore posts news and promotions. Your email address will not be used for any other purpose, and you can unsubscribe at any time.

Share


Other Media/News Companies in Bangalore

Show All