ಸರ್ಕಾರಿ ಶಾಲೆಗೆ ಬಂತು ಹೊಸ ಕಳೆ: ಶಾಲಾ ವ್ಯಾನ್ಗೆ ಶಿಕ್ಷಕಿಯೇ ಚಾಲಕಿ !
ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ವಾಹನ ವ್ಯವಸ್ಥೆ, ಶಿಕ್ಷಕಿಯೇ ಈ ವಾಹನದ ಚಾಲಕಿ. ತಮ್ಮ ಮಕ್ಕಳಂತೆ ಈ ಶಾಲೆಯನ್ನು ಪೋಷಿಸುತ್ತಿರುವ ಸಮುದಾಯ. ಇದರಿಂದಾಗಿ ಮಾದರಿಯಾಗಿ ರೂಪುಗೊಂಡಿದೆ ಕೋಲ್ಚಾರು ಗ್ರಾಮದ ಸರ್ಕಾರಿ ಶಾಲೆ. ಕೋಲ್ಚಾರು ಗ್ರಾಮ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ. ಕೇರಳ ಗಡಿಗೆ ಹೊಂದಿಕೊಂಡಿರುವ ದಟ್ಟಾರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಈ ಸುಂದರ ಶಾಲೆ.
Jalajakshi Teacher- Black board to steering wheel
#dakshinakannada #governmentschool #modelschool #hightechgovernmentschool #kolcharuschool #jalajakshi #teacherdriver #sulliakolcharuschool #karnatakagovernmentschools #kannadamediumschoolstudent #bestteacherjalajakshi #ಕೊಲ್ಚಾರುಶಾಲೆ #ಕೊಲ್ಚಾರುಸರ್ಕಾರಿಶಾಲೆ #ಕನ್ನಡಮಾಧ್ಯಮಶಾಲೆ #ಶಿಕ್ಷಕಿಜಲಜಾಕ್ಷಿ #ದಕ್ಷಿಣಕನ್ನಡಶಾಲೆಗಳು #ಮಾದರಿಶಾಲೆ #ಶಿಕ್ಷಕಿಯೇಚಾಲಕಿ #ಪ್ರಜಾವಾಣಿವಿಡಿಯೊ
ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ ನಾಲ್ಕರ ನೆಲಮಂಗಲದ ಬಳಿ ಕಂಟೇನರ್ವೊಂದು ವೋಲ್ವೋ ಕಾರಿನ ಮೇಲೆ ಬಿದ್ದು ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿ ಮೃತಪಟ್ಟಿದ್ದಾರೆ.
#Nelamangala #accident
ಕಪ್ಪೆಚಿಪ್ಪು ಸಂಗ್ರಹಕಾರರಿಗೂ ಮೀನುಗಾರರ ಸೌಲಭ್ಯ ದೊರಕಿಸಿಕೊಟ್ಟ ಮಾರುತಿ ಗೌಡ
ಉತ್ತರ ಕನ್ನಡದ ಅಘನಾಶಿನಿಯ ನಿವಾಸಿ ಮಾರುತಿ ಗೌಡ, ಕಪ್ಪೆಚಿಪ್ಪು ಸಂಗ್ರಹಕಾರರ ಪರ ಹೋರಾಡಿದವರು. ಕಪ್ಪೆ ಚಿಪ್ಪು ಸಂಗ್ರಹಿಸಲು ಹೋದಾಗ ಅಪಘಾತಕ್ಕೆ ಈಡಾಗುತ್ತಿದ್ದವರ ಕುಟುಂಬಗಳು ಬೀದಿಗೆ ಬರುತ್ತಿದ್ದುದನ್ನು ಕಂಡ ಅವರು, ಕಪ್ಪೆಚಿಪ್ಪು ಸಂಗ್ರಹಕಾರರಿಗೂ ಮೀನುಗಾರರ ಸ್ಥಾನ–ಮಾನ ಸಿಗುವಂತೆ ಮಾಡಿ, ಸರ್ಕಾರದಿಂದ ಸೌಲಭ್ಯ ಅಥವಾ ಪರಿಹಾರ ದೊರಕುವಂತೆ ಮಾಡಿದವರು. ಕಪ್ಪೆಚಿಪ್ಪು ಸಂಗ್ರಹವನ್ನೇ ಮೂಲ ಕಸುಬನ್ನಾಗಿ ಮಾಡಿಕೊಂಡಿರುವ 3,500ಕ್ಕೂ ಹೆಚ್ಚು ಕುಟುಂಬಗಳಿಗೆ ಆಸರೆಯಾಗುವಂತಹ ಕೆಲಸವನ್ನು ಮಾರುತಿಗೌಡ ಮಾಡಿದ್ದಾರೆ. ಕೇವಲ 1.19 ಎಕರೆ ಜಾಗವನ್ನು ಭೋಗ್ಯಕ್ಕೆ ಪಡೆದು, 64 ಎಕರೆ ಕೃಷಿ ಭೂಮಿಯಲ್ಲಿ ಚಿಪ್ಪಿ ಗಣಿಗಾರಿಕೆ ಮಾಡುತ್ತಿದ್ದ ಗಣಿ ಕಂಪನಿಯ ಅಕ್ರಮವನ್ನು ಮಾಹಿತಿ ಹಕ್ಕು ಕಾಯ್ದೆ ಮೂಲಕ ತಿಳಿದುಕೊಂಡು, ಆ ಕೃಷಿ ಭೂಮಿ ಮತ್ತೆ ರೈತರಿಗೆ ಸೇರುವಂತೆ ಮಾಡಿದವರು ಮಾರುತಿ ಗೌಡ. ಅವರ ಸ್ಫೂರ್ತಿದಾಯಕ ಕಥನವೇ ಈ ವಿಡಿಯೊ.
Clam collectors on the banks of river Aghanashini
#uttarkannada #aghanashiniriver #clamcollectors #fishingcommunity #maruthigouda #aghanashini #climatechange #livelihoods #inspiringstories #successstories #realstories #realheroe
ಸಿ.ಟಿ. ರವಿ ಬಿಡುಗಡೆ: ಸತ್ಯ ಮೇವ ಜಯತೆ ಎಂದ ಬಿಜೆಪಿ ನಾಯಕರು
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಅವಾಚ್ಯ ಪದ ಬಳಸಿ ನಿಂದಿಸಿದ ಆರೋಪದಡಿ ಪೊಲೀಸ್ ಬಂಧನದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಶಾಸಕ ಸಿ.ಟಿ ರವಿ ಅವರನ್ನು ತಕ್ಷಣವೇ ಎಲ್ಲಿದ್ದಾರೊ ಅಲ್ಲಿಂದಲೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಆದೇಶ ಮಾಡುತ್ತಿದ್ದಂತೆ, ಸಿ.ಟಿ. ರವಿ ಅವರನ್ನು ದಾವಣಗೆರೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ನಾಯಕರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
#lakshmihebbalkar #ctravi #ctraviunparliamentaryword #belagavi #karnatakalegislativecouncil #vidhanaparishat #bjpprotest #womenandchilddevelopmentminister #ಲಕ್ಷ್ಮಿಹೆಬ್ಬಾಳಕರಕಣ್ಣೀರು #ಸಚಿವೆಲಕ್ಷ್ಮಿಹೆಬ್ಬಾಳಕರ #ಬೆಳಗಾವಿಅಧಿವೇಶನ #ಕರ್ನಾಟಕವಿಧಾನಪರಿಷತ್ತು #ಕರ್ನಾಟಕವಿಧಾನಸಭೆ #ಬಸವರಾಜಹೊರಟ್ಟಿ #ಸಿಟಿರವಿ #ಬಿಜೆಪಿಸಿಟಿರವಿಅವಹೇಳನಕಾರಿಪದ #ಅಶ್ಲೀಲಪದ #ಬೆಳಗಾವಿ
ಸಿ.ಟಿ ರವಿ ಅವರ ಬಂಧನದ ವಿರುದ್ಧ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಡಿ.ಕೆ. ಶಿವಕುಮಾರ್ ವಿರುದ್ಧ ಗುಡುಗಿದರು.
#CTRavi_BJP
ನನ್ನ ಕೊಲೆಗೆ ಯತ್ನ: ಸಿ.ಟಿ. ರವಿ- ಪ್ರಕರಣ ಬೆಂಗಳೂರಿಗೆ ವರ್ಗಾವಣೆ
ಸಿ.ಟಿ. ರವಿ ಅವರ ಬಂಧನ ಮತ್ತು ಅವರ ಮೇಲಿನ ಹಲ್ಲೆ ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿ ನಾಯಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಇನ್ನೊಂದೆಡೆ, ಸಿ.ಟಿ. ರವಿ ಅವರನ್ನು ಬೆಳಗಾವಿಯ 5ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ತಮ್ಮನ್ನು ಕೊ*ಲೆ ಮಾಡಲು ಯತ್ನಿಸಲಾಗಿದೆ ಎಂದು ಸಿ.ಟಿ.ರವಿ ಹೇಳಿಕೆ ನೀಡಿದರು. ರವಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸ್ಪರ್ಶ ಡಿಸೋಜಾ ಅವರು ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದರು. ಮಧ್ಯಾಹ್ಮ 2.40ರ ವೇಳೆಗೆ ರವಿ ಅವರನ್ನು ಪೊಲೀಸರು ಬೆಂಗಳೂರಿನತ್ತ ಕರೆದೊಯ್ದರು.
#lakshmihebbalkar #ctravi #ctraviunparliamentaryword #belagavi #karnatakalegislativecouncil #vidhanaparishat #bjpprotest #womenandchilddevelopmentminister #ಲಕ್ಷ್ಮಿಹೆಬ್ಬಾಳಕರಕಣ್ಣೀರು #ಸಚಿವೆಲಕ್ಷ್ಮಿಹೆಬ್ಬಾಳಕರ #ಬೆಳಗಾವಿಅಧಿವೇಶನ #ಕರ್ನಾಟಕವಿಧಾನಪರಿಷತ್ತು #ಕರ್ನಾಟಕವಿಧಾನಸಭೆ #ಬಸವರಾಜಹೊರಟ್ಟಿ #ಸಿಟಿರವಿ #ಬಿಜೆಪಿಸಿಟಿರವಿಅವಹೇಳನಕಾರಿಪದ #ಅಶ್ಲೀಲಪದ #ಬೆಳಗಾವಿ
ಪರಿಷತ್ನಲ್ಲಿ ರವಿ ‘ಆ’ ಮಾತು ಆಡುತ್ತಿದ್ದರೆ ಎಲ್ಲರೂ ಧೃತರಾಷ್ಟ್ರನಂತಿದ್ದರು: ಹೆಬ್ಬಾಳಕರ ಕಣ್ಣೀರು
‘ವಿಧಾನ ಪರಿಷತ್ತು ಹಿರಿಯರ ಚಾವಡಿ, ಬುದ್ಧವಂತರ ವೇದಿಕೆ. ಆ ವೇದಿಕೆಯಲ್ಲಿ ಬಹಳಷ್ಟು ಪ್ರಬುದ್ಧವಾಗಿ ಮಾತನಾಡಬೇಕು. ಅಂಥಲ್ಲೇ ಆ ಮಾತು ಹೇಳಿದ್ದಾರೆ. ಕೇಳಿದ ಕೆಲವರು ನನ್ನ ಬಳಿ ಬಂದು ಸಾರಿ ಅವರು ಹಾಗೆ ಅನ್ನಬಾರದಿತ್ತು ಎನ್ನುತ್ತಾರೆ. ಆದರೆ, ಒಬ್ಬರೂ ನೇರವಾಗಿ ಸಿ.ಟಿ. ರವಿ ಅವರು ಆಡಿದ ಮಾತನ್ನು ಖಂಡಿಸಲಿಲ್ಲ. ಎಲ್ಲರೂ ಧೃತರಾಷ್ಟ್ರನಂತಿದ್ದರು ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶುಕ್ರವಾರ ಬೆಳಗಾವಿಯಲ್ಲಿ ನೋವಿನಿಂದ ಹೇಳಿದರು.
#lakshmihebbalkar #ctravi #ctraviunparliamentaryword #belagavi #karnatakalegislativecouncil #vidhanaparishat #bjpprotest #womenandchilddevelopmentminister #ಲಕ್ಷ್ಮಿಹೆಬ್ಬಾಳಕರಕಣ್ಣೀರು #ಸಚಿವೆಲಕ್ಷ್ಮಿಹೆಬ್ಬಾಳಕರ #ಬೆಳಗಾವಿಅಧಿವೇಶನ #ಕರ್ನಾಟಕವಿಧಾನಪರಿಷತ್ತು #ಕರ್ನಾಟಕವಿಧಾನಸಭೆ #ಬಸವರಾಜಹೊರಟ್ಟಿ #ಸಿಟಿರವಿ #ಬಿಜೆಪಿಸಿಟಿರವಿಅವಹೇಳನಕಾರಿಪದ #ಅಶ್ಲೀಲಪದ #ಬೆಳಗಾವಿ
ಸಿ.ಟಿ. ರವಿ 12 ಬಾರಿ 'ಪ್ರಾಸ್ಟಿಟ್ಯೂಟ್’ ಅಂದಿದ್ದಾನೆ: ಡಿಕೆಶಿ
ಸಿ.ಟಿ. ರವಿ 12 ಬಾರಿ 'ಪ್ರಾಸ್ಟಿಟ್ಯೂಟ್’ ಅಂದಿದ್ದಾನೆ: ಡಿಕೆಶಿ
ಅಶ್ಲೀಲ ಪದ ಬಳಕೆ: ಲಕ್ಷ್ಮಿ ಹೆಬ್ಬಾಳಕರ ದೂರು – ಗಲಾಟೆ ನಡುವೆ ಸಿ.ಟಿ.ರವಿ ಬಂಧನ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ‘ಅಶ್ಲೀಲ’’ ಪದ ಬಳಕೆ ಮಾಡಿದ ಆರೋಪದ ಮೇಲೆ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಹಿರೇಬಾಗೇವಾಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ದೂರಿನಲ್ಲಿ ‘ಆಕ್ಷೇಪಾರ್ಹ’ ಪದವನ್ನೂ ಕನ್ನಡದಲ್ಲಿ ಉಲ್ಲೇಖಿಸಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಮಧ್ಯಾಹ್ನ 1 ಗಂಟೆಗೆ ದೂರು ನೀಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 75 ಮತ್ತು 79ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
#ctravi #bjpmlcctravi #lakshmihebbalkar #belagavisession #unparliamentaryremark #belagavi #ctraviissue #karnatakaministerlakshmihebbalkar #ಸಿಟಿರವಿಆಕ್ಷೇಪಾರ್ಹಪದಬಳಕೆ #ಅಶ್ಲೀಲಪದಬಳಕೆ #ಲಕ್ಷ್ಮಿಹೆಬ್ಬಾಳಕರ #ಬೆಳಗಾವಿ #ಸಿಟಿರವಿಬಂಧನ
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಸಜ್ಜು: 140 ಆಹಾರ ಕೌಂಟರ್, 1500 ಅಡುಗೆ ಸಿಬ್ಬಂದಿ
30 ವರ್ಷಗಳ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಮಂಡ್ಯ ಜಿಲ್ಲೆಗೆ ಸಿಕ್ಕಿದೆ. 1974 ಮತ್ತು 1994ರಲ್ಲಿ ಯಶಸ್ವಿಯಾಗಿ ಸಮ್ಮೇಳನವನ್ನು ನಡೆಸಿಕೊಟ್ಟ ‘ಸಕ್ಕರೆ ನಗರ’ ಈಗ ಮೂರನೇ ಬಾರಿಗೆ ನುಡಿಜಾತ್ರೆಯ ತೇರು ಎಳೆಯಲು ಸಜ್ಜಾಗಿದೆ. ‘ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವವರ ಜಿಲ್ಲೆ’ ಎಂಬ ಖ್ಯಾತಿ ಹೊಂದಿರುವ ಮಂಡ್ಯದಲ್ಲಿ ಡಿ.20ರಿಂದ 22ರವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಬಾಡೂಟ ಕುರಿತ ಪರ–ವಿರೋಧದ ಚರ್ಚೆಗಳ ನಡುವೆಯೇ, ಹಿಂದಿನ ಸಮ್ಮೇಳನಗಳಂತೆ ಊಟದ ಮೆನುವನ್ನು ಸಿದ್ಧಗೊಳಿಸಲಾಗುತ್ತಿದೆ.
#mandya #kannadasahithyasammelana #akhilabharathakannadasahithyasammelana #goruchannabasappa #gorucha #mandya #baduta #baadoota #cmsiddaramaiah #chiefministerofkarnataka #cheluvarayaswamy #dkshivakumar #hdkumaraswamy #kasapa #kannadasahithyaparishath #ಮಂಡ್ಯಸಾಹಿತ್ಯಸಮ್ಮೇಳನ #ಮಂಡ್ಯಕನ್ನಡಸಾಹಿತ್ಯಸಮ್ಮೇಳನ #ಅಖಿಲಭಾರತಕನ್ನಡಸಾಹಿತ್ಯಸಮ್ಮೇಳನ #ಗೊರುಚನ್ನಬಸಪ್ಪ #ಗೊರುಚ #ಮಂಡ್ಯಸಮ್ಮೇಳನಊಟದವಿವರ #ಮಂಡ್ಯಬಾಡೂಟ #ಕವಿಗೋಷ್ಠಿ #ಪ್ರ
ಪರಿಸರ ಕಾಳಜಿಯ ‘ಕಟ್ಲೆರಿ ಬ್ಯಾಂಕ್’ : ಸಮಾರಂಭಗಳಿಗೆ ಪಾತ್ರೆಗಳು ಇಲ್ಲಿ ಉಚಿತ
ಏಕ ಬಳಕೆಯ ಪ್ಲಾಸ್ಟಿಕ್ನಿಂದ ಭೂಮಿ, ಜಲಚರಗಳ ಮೇಲಾಗುವ ಗಂಭೀರ ದುಷ್ಪರಿಣಾಮಗಳು ಹಲವು. ಇಂಚಿಂಚಾಗಿ ಭೂಮಿಯನ್ನು ನುಂಗುತ್ತಿರುವ ಏಕ ಬಳಕೆಯ ಪ್ಲಾಸ್ಟಿಕ್ ಲೋಟ, ತಟ್ಟೆ, ಹಾಳೆಗಳು ಮೊದಲಾದ ಸಾಮಗ್ರಿಗಳ ಬಳಕೆಯನ್ನು ಕಡಿಮೆ ಮಾಡಿ ಸ್ಟೀಲ್ ಪಾತ್ರೆಗಳನ್ನು ಉಪಯೋಗಿಸುವಂತೆ ಮೂಡುಬಿದಿರೆಯ ಉಪನ್ಯಾಸಕಿ ಸಂಧ್ಯಾ ಜಾಗೃತಿ ಮೂಡಿಸುತ್ತಿದ್ದಾರೆ. ದಾನಿಗಳು, ಊರವರ ಸಹಕಾರದಿಂದ ತಮ್ಮದೇ ಆದ ಕಟ್ಲೆರಿ ಬ್ಯಾಂಕ್ ಅಂದರೆ ಪರಿಸರ ಸ್ನೇಹಿ ಸ್ಟೀಲ್ ಪಾತ್ರೆಗಳ ಭಂಡಾರವನ್ನು ಪ್ರಾರಂಭಿಸಿದ್ದಾರೆ. ಸಭೆ, ಸಮಾರಂಭಗಳಿಗೆ ಈ ಪಾತ್ರೆಗಳನ್ನು ಅವರು ಉಚಿತವಾಗಿ ಕೊಡುತ್ತಾರೆ. ಅವರು ನಡೆಸುತ್ತಿರುವ ಕಲ್ಪವೃಕ್ಷ ಕಟ್ಲೆರಿ ಬ್ಯಾಂಕ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
#cutlerybank #kalpavrukshacutlerybank #kalpavrikshacutlerybank #cutlerybandinmangaluru #cutlerybankinmudubidire #plasticfreeparties #ಕಟ್ಲೆರಿಬ್ಯಾಂಕ್ #ಪಾತ್ರೆಗಳಭಂಡಾರ #ಕಲ್ಪವೃಕ್ಷಕಟ್ಲೆರಿಬ್ಯಾಂಕ್ #ಮಂಗಳೂರು #ಮೂಡುಬಿದಿರೆಕಟ್ಲೆರಿಬ್ಯಾಂಕ್ #ಸಂಧ್ಯಾ #ದಕ್ಷಿಣಕನ್ನಡ #ಪ್ರಜಾವಾಣಿವಿಡಿಯೊ
ಮಾದಿಗ ಸಮಾವೇಶ: 3 ತಿಂಗಳಲ್ಲಿ ಒಳಮೀಸಲಾತಿ ಜಾರಿ– ಸಚಿವ ಮಹದೇವಪ್ಪ ಭರವಸೆ
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧ ಮುತ್ತಿಗೆ ಹಾಕಲು ಉದ್ದೇಶಿಸಿದ್ದ ಮಾದಿಗ ಹಾಗೂ ಉಪಜಾತಿ ಸಂಘಟನೆಗಳ ಒಕ್ಕೂಟದ ಸದಸ್ಯರು, ರಾಜ್ಯ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಹೋರಾಟ ಕೈಬಿಟ್ಟರು. ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡ ಮಾದಿಗ ಹಾಗೂ ಉಪಜಾತಿ ಸಂಘಟನೆಗಳ ಒಕ್ಕೂಟದ ಪ್ರಮುಖರು, ‘ಚಳಿಗಾಲದ ಅಧಿವೇಶನದಲ್ಲಿ ಒಳಮೀಸಲಾತಿ ಅನುಷ್ಠಾನ ಮಾಡಲೇಬೇಕು’ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ಸಚಿವ ಮಹದೇವಪ್ಪ, ‘ಒಳಮೀಸಲಾತಿ ನೀಡಲು ಸುಪ್ರೀಂಕೋರ್ಟ್ ಕೂಡ ನಿರ್ದೇಶಿಸಿದೆ. ಅದರಂತೆ ಅಗತ್ಯ ದತ್ತಾಂಶ ಸಂಗ್ರಹಿಸಿ ಅನುಷ್ಠಾನ ಮಾಡಬೇಕು. ಇಲ್ಲದಿದ್ದರೆ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಮತ್ತೆ ಸಮಸ್ಯೆಯಾಗುತ್ತದೆ. ಅದಕ್ಕಾಗಿ ಮೂರು ತಿಂಗಳ ಕಾಲಾವಕಾಶ ಬೇಕು’ ಎಂದರು. ಇದಕ್ಕೆ ಸಚಿವರಾದ ಆರ್.ಬಿ.ತಿಮ್ಮಾಪುರ, ಸತೀಶ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ ಕೂಡ ಇದಕ್ಕೆ ಧ್ವನಿಗೂಡಿಸಿದರು.
#dalithreservation #subcategorisation #subclassification #reservationsubclassification #madigacommunityprotest #supremecourt #karnatakagovernment #chiefministerofkarnataka #siddara