18/03/2024
:ಪುಲ್ವಾಮ ದಾಳಿ, ಎಲೆಕ್ಟ್ರೋಲ್ ಬಾಂಡ್ ಮತ್ತು ಪಾಕಿಸ್ತಾನದ ಹಬ್ಕೋ ಕಂಪೆನಿ:
ಮೋದಿ ಸರಕಾರ ಇರೋವಾಗಲೇ... ಪುಲ್ವಾಮಾ ದಾಳಿ ನಡೆಯುತ್ತೆ. ಸೈನಿಕರ ಜೀವಗಳ ಮೇಲೆ ಕ್ರೌರ್ಯ ನಡೆಯುತ್ತೆ. ಇದುವರೆಗೆ ಹೇಗೆ ಅಷ್ಟು ಬಂದೋಬಸ್ತ್ ಇರೋ ಬಾರ್ಡರ್ ನ್ನು ದಾಟಿ ಒಳ ನುಗ್ಗಿದ್ರು ಅನ್ನುವ ಪ್ರಶ್ನೆ ಆಗಲೇ ಎದ್ದಿತ್ತು. BJP ಅದನ್ನು ತನ್ನ ಚುನಾವಣಾ ಅಸ್ತ್ರವಾಗಿ ಉಪಯೋಗಿಸಿತು. ಮತ್ತೆ ಅಧಿಕಾರವೇರಿದರೂ ಮೋದಿ ಅವರು ದೀಪಾವಳಿಗೆ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರೋ ಹೊರತು ಪುಲ್ವಮ ದಾಳಿಯ ಕುರಿತು ಇದುವರೆಗೆ ಸಾ ಸೂ ಅಂದಿಲ್ಲ. ತನಿಖೆ ಏನಾಯ್ತು ಇದರ ಹಿಂದಿನ ಶಕ್ತಿ ಯಾರೂ ಇದು ಯಾವುದನ್ನೂ ಮೋದಿಸರ್ಕಾರ ಇದುವರೆಗೆ ದೇಶದ ಜನರ ಮುಂದಿಟ್ಟಿಲ್ಲ. ಆ ದಾಳಿಯಂತೂ ಬಿಜೆಪಿಗೆ ಚುನಾವಣೆಯಲ್ಲಿ ಉಪಯೋಗವಾಯಿತು. ಚುನಾವಣೆ ಸಂದರ್ಭದಲ್ಲಿಯೇ ದಾಳಿ ನಡೆದಿರುವುದರಿಂದ ಇದರ ಹಿಂದೆ ಬಿಜೆಪಿಗೆ ಇರುವ ಕೈವಾದವೇನು.
ಇದೇ ರೀತಿ ಪುಲ್ವಾಮ ದಾಳಿ ವಿಚಾರದಲ್ಲಿ ಮೋದಿ ಸರ್ಕಾರದ ವೈಫಲ್ಯದ ಕುರಿತು ಹಲವು ಸಂಶಯವನ್ನು ಎತ್ತಿದ ಕಾರಣಕ್ಕೆನೇ ಸತ್ಯಪಾಲ್ ಮಲಿಕ್ ರನ್ನು ಟಾರ್ಗೆಟ್ ಮಾಡಿ ತನಿಖಾ ಸಂಸ್ಥೆಗಳು ದಾಳಿಗಳನ್ನು ನಡೆಸುತ್ತಿರುವಂತಹದ್ದು.
ಈಗ ದೇಶದಲ್ಲಿ ಎಲೆಕ್ಟ್ರೋಲ್ ಬಾಂಡ್ ದೊಡ್ಡ ಶಬ್ದವನ್ನು ಮಾಡುತ್ತಿದೆ. ಸುಪ್ರೀಂ ಕೋರ್ಟ್ ಎಲೆಕ್ಟ್ರೋಲ್ ಬಾಂಡ್ ನ್ನು ನಿಷೇಧಿಸಿದ ನಂತರ SBI ಕೋರ್ಟ್ಗೆ ನೀಡಿದ ಎಲೆಕ್ಟ್ರೋಲ್ ಬಾಂಡ್ ಪಡೆದವರ ಪಟ್ಟಿಯಲ್ಲಿ ಪಾಕಿಸ್ತಾನ್ ಮೂಲದ ಹಬ್ಕೊ ಕಂಪೆನಿ ಕೂಡ ಇರುವುದು ಬಿಜೆಪಿಯ ಪಾಕಿಸ್ತಾನ್ ಪ್ರೇಮವನ್ನು ಎತ್ತಿ ತೋರಿಸಿದೆ. ಬಾಯಿ ತೆರೆದರೆ ಪಾಕಿಸ್ತಾನಕ್ಕೆ ಬಯ್ಯುವ ಯಾರಾದರೂ ಮೋದಿಯನ್ನು ಸರ್ಕಾರವನ್ನು ಪ್ರಶ್ನೆ ಮಾಡಿದರೇ ಪಾಕಿಸ್ತಾನಕ್ಕೆ ಹೋಗಿ ಅನ್ನುವ ಬಿಜೆಪಿ ಸಂಘಪರಿವಾರ ಮೋದಿಯವರಿಗೇ ಪಾಕಿಸ್ತಾನ ಮೂಲದ ಕಂಪೆನಿ ಎಲೆಕ್ಟ್ರೋಲ್ ಬಾಂಡ್ ಕುರಿತು ಕೊಡಲಿಕ್ಕಿರುವ ಸ್ಪಷ್ಟತೆ ಏನು?
‘ಇಲ್ಲಿ ಜೀವಂತ ಇರುವ ವಿಪಕ್ಷಗಳಿದ್ದಿದ್ದರೆ‘ ಶಕ್ತವಾಗಿ ಸರಕಾರದ ವಿರುದ್ಧ ಹೋರಾಡ ಬಹುದಿತ್ತು. ಮೋದಿಯವರು ಪಾಕಿಸ್ತಾನದ ಕಂಪೆನಿಯಿಂದ ಪುಲ್ವಾಮ ದಾಳಿ ನಡೆದ ನಂತರ ಈ ಖರೀದಿಗೆ ಅವಕಾಶ ಮಾಡಲು ಕಾರಣವೇನು?
ಮೋದಿ ಬಿಜೆಪಿಗೆ ಪಾಕಿಸ್ತಾನದ ಹಬ್ಕೋ ಕಂಪೆನಿ ಜೊತೆಗಿರುವ ಸಂಬಂಧವೇನು?
ಬಿಜೆಪಿಗೆ ಸಂಘಪರಿವಾರಕ್ಕೆ ಪಾಕಿಸ್ತಾನದ ಯಾವ ಯಾವ ಮೂಲೆಗಳಿಂದ ಯಾವ ಯಾವ ಭಯೋತ್ಪಾದಕ ಸಂಘಟನೆಗಳ ಹಿನ್ನೆಲೆ ಇರುವ ಕಂಪನಿಗಳಿಂದ ದುಡ್ಡು ಬರುತ್ತಿದೆ. ಪಾಕಿಸ್ತಾನಕ್ಕೆ ಹೋಗಿ ಇದರ ಕುರಿತು ಕೆಲಸ ಮಾಡುವ ಬಿಜೆಪಿ RSS ನ ನಾಯಕರು ಯಾರೂ? ಇಂದ್ರೇಶ್ ಕುಮಾರ್ ಈ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆಯೇ? ಹೀಗೆ ಹಲವು ಪ್ರಶ್ನೆಗಳಿವೆ?
ಇಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಹಾಕಿದ್ದೀರಿ, ಪಾಕಿಸ್ತಾನದವರ ಜೊತೆ ಸಂಪರ್ಕ ಇದೆ ಎಂದೆಲ್ಲಾ ಸುಳ್ಳು ಹೇಳಿ ಮುಸ್ಲಿಮ್ ಯುವಕರನ್ನು UAPA ಹಾಕಿ ಜೈಲು ಕಲಿಸುವ ಮೋದಿ ಸರ್ಕಾರಕ್ಕೆ ಪಾಕಿಸ್ತಾನ್ ಅಫ್ಘಾನಿಸ್ಥಾನ ಜೊತೆ ಎಲ್ಲಾ ಇಷ್ಟೊಂದು ಬಾಂಧವ್ಯ ಇಟ್ಟಿರೋದು ಯಾಕೆ? ಮತ್ತೆ ಲೋಕ ಸಭಾ ಚುನಾವಣೆ ಬರ್ತಿದೆ. ಈ ಸಂದರ್ಭದಲ್ಲಿ ಪಾಕ್ ಜೊತೆ ಗೂಡಿ ಏನು ಮಾಡಿಸಕ್ಕಿದೆ? ಇದ್ಕೆಲ್ಲ ಉತ್ತರ ಮೋದಿ ಸರ್ಕಾರ ನೀಡಬೇಕಿದೆ.
✍️ರಿಯಾಝ್ ಕಡಂಬು