Public Varthe

Public Varthe Contact information, map and directions, contact form, opening hours, services, ratings, photos, videos and announcements from Public Varthe, Publisher, Bangalore.

02/09/2021

ಬ್ಯಾಂಕ್ ದರೋಡೆ ಮಾಡಿ ಬ್ಯಾಂಕಿನಲ್ಲಿ ಸಿಲುಕಿಕೊಂಡ
ಮೂವರು ಆರೋಪಿಗಳನ್ನು ಬಂದಿಸಿದ್ದ ಅಮದ್ ಬಾದ್ ಪೊಲೀಸರು

30/08/2021
 #ಬೆಂಗಳೂರು: ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ 7.5 ಕಿ ಮೀ ಮೆಟ್ರೋ ನೇರಳೆ ಮಾರ್ಗವನ್ನು ಇಂದು ಬೆಂಗಳೂರ...
29/08/2021

#ಬೆಂಗಳೂರು: ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ 7.5 ಕಿ ಮೀ ಮೆಟ್ರೋ ನೇರಳೆ ಮಾರ್ಗವನ್ನು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ‌ ಹಾಗೂ ಕೇಂದ್ರ ವಸತಿ, ನಗರ ವ್ಯವಹಾರ, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದಿಪ್ ಸಿಂಗ್ ಪುರಿ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್, ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ, ಕೆ.ಗೋಪಾಲಯ್ಯ, ಮುನಿರತ್ನ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ಮುನಿರಾಜುಗೌಡ, ಲೆಹರ್ ಸಿಂಗ್ ಸಿರೋಯಾ, ಹಿರಿಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

20/08/2021

ನಾಡಿನ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು🌹🙏

 #ದೆಹಲಿ: ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆಯಾಗಿ ನಿನ್ನೆ ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ, ದೆಹಲಿಯ ಕೃಷಿಭವನದಲ್ಲಿ ಇ...
08/07/2021

#ದೆಹಲಿ: ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆಯಾಗಿ ನಿನ್ನೆ ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ, ದೆಹಲಿಯ ಕೃಷಿಭವನದಲ್ಲಿ ಇಂದು ಪದಗ್ರಹಣ ಮಾಡಿದ್ದು, ಹಸಿರು ಶಾಲು ಧರಿಸಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸಚಿವರ ಕಾರ್ಯಭಾರ ವಹಿಸಿಕೊಂಡರು.

30/04/2021

#ಆನೇಕಲ್: ಮಾಸ್ಕ್ ಮತ್ತು ಸಾಮಾಜಿಕ ಮರೆತು ನಿಂತಿರುವ ಜನ.

23/04/2021

#ಮಧ್ಯಪ್ರದೇಶದಲ್ಲಿ ನಡೆದ ಘಟನೆ ಇದು. ಕೊರೊನಾಕ್ಕೆ ತುತ್ತಾಗಿ ಮರಣ ಹೊಂದಿದ ವೆಕ್ತಿಯನ್ನು ಆಂಬ್ಯುಲೆನ್ಸ್ ನಲ್ಲಿ ಶವ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವ ದಾರಿಯಲ್ಲಿ ಆಂಬ್ಯುಲೆನ್ಸ್ ನಿಂದ ಬಾಗಿಲು ಮುರಿದು ಬಿದ್ದ ಪರಿಣಾಮ ಹೊರಗೆ ಬಿದ್ದ ಶವ ಸ್ಥಳೀಯ ಜನರು ಆಂಬ್ಯುಲೆನ್ಸ್ ಡ್ರೈವರ್ ಗೆ ತರಾಟೆಗೆ ತೆಗೆದುಕೊಂಡರು

22/04/2021

ರಾಜ್ಯ ಸರ್ಕಾರಕ್ಕೆ ತರಾಟೆ ತೆಗೆದುಕೊಂಡ HDK

 #ಬೆಂಗಳೂರು ಕೋವಿಡ್ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್...
22/04/2021

#ಬೆಂಗಳೂರು ಕೋವಿಡ್ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೋನಾ ನಿಯಂತ್ರಿಸಲು ಮಾಸ್ಕ್ ಧಾರಣೆ,ಭೌತಿಕ ಅಂತರ, ಶುಚಿತ್ವ ಪಾಲನೆ ತಪ್ಪದೇ ಮಾಡಿ, ಅನಗತ್ಯವಾಗಿ ಹೊರಗೆ ಬರದೆ ಸರ್ಕಾರದೊಂದಿಗೆ ಸಹಕರಿಸಿ ಎಂದು ಮುಖ್ಯಮಂತ್ರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

21/04/2021

#ಉತ್ತರ ಪ್ರದೇಶದಲ್ಲಿ ಜೀವಂತ ವ್ಯಕ್ತಿಯನ್ನು ಪ್ಯಾಕ್ ಮಾಡಿ ಹೆಣ ಎಂದ ವೈದ್ಯರು.😢😢

 #ಬೆಂಗಳೂರು :ಆಸ್ಪತ್ರೆಯಿಂದಲೇ ಆನ್‌ಲೈನ್ ಆಲ್-ಪಾರ್ಟಿ ಮೀಟ್‌ಗೆ ಹಾಜರಾದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ
20/04/2021

#ಬೆಂಗಳೂರು :ಆಸ್ಪತ್ರೆಯಿಂದಲೇ ಆನ್‌ಲೈನ್ ಆಲ್-ಪಾರ್ಟಿ ಮೀಟ್‌ಗೆ ಹಾಜರಾದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ

ಪೇಜಾವರ ಶ್ರೀಗಳು ಇನ್ನಿಲ್ಲ
29/12/2019

ಪೇಜಾವರ ಶ್ರೀಗಳು ಇನ್ನಿಲ್ಲ

 #ಉಡುಪಿ: ಮಣಿಪಾಲ್​ ಆಸ್ಪತ್ರೆಯಿಂದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರನ್ನು ಪೇಜಾವರ ಮಠಕ್ಕೆ ಸ್ಥಳಾಂತರಿಸಲಾಗಿದ್ದು, ಉಡುಪಿ ಮಠದ ಸುತ್ತಮುತ್ತ...
29/12/2019

#ಉಡುಪಿ: ಮಣಿಪಾಲ್​ ಆಸ್ಪತ್ರೆಯಿಂದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರನ್ನು ಪೇಜಾವರ ಮಠಕ್ಕೆ ಸ್ಥಳಾಂತರಿಸಲಾಗಿದ್ದು, ಉಡುಪಿ ಮಠದ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಇಂದು ಬೆಳಗ್ಗೆ 6.55ಕ್ಕೆ ಆಂಬ್ಯುಲೆನ್ಸ್ ಮೂಲಕ ಶ್ರೀಗಳನ್ನು ವೈದ್ಯರ ತಂಡ ಮಠಕ್ಕೆ ಕರೆತಂದಿದೆ. ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಸಂಪೂರ್ಣ ವೈದ್ಯಕೀಯ ವ್ಯವಸ್ಥೆಯೊಂದಿಗೆ‌ ಮಠದಲ್ಲಿ ಇರಿಸಲಾಗಿದೆ. ವೈದ್ಯರು ನರ್ಸ್​ಗಳು ಜತೆಗಿದ್ದಾರೆ. ‌ಪರಿಸ್ಥಿತಿ ಕ್ಷೀಣ ಆಗುತ್ತಿದೆ. ಕೊನೇ ಕ್ಷಣವನ್ನು ಮಠದಲ್ಲಿ ಕಳೆಯಬೇಕು ಎನ್ನುವ ಸ್ವಾಮೀಜಿ ಇಚ್ಛೆಯಂತೆ ಮಠಕ್ಕೆ ಕರೆತರಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು. ಈ ವೇಳೆ ಶಾಸಕ ರಘುಪತಿ ಭಟ್ ಹಾಗೂ ಉಮಾಭಾರತಿ ಸಹ ಉಪಸ್ಥಿತರಿದ್ದರು.

ರಥಬೀದಿಯಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಆದರೆ, ಶ್ರೀಗಳ ದರ್ಶನಕ್ಕಾಗಿ ಭಕ್ತರು ಹಾತೊರೆಯುತ್ತಿದ್ದು, ಎಲ್ಲೆಡೆ ಮೌನದ ವಾತಾವರಣ ಆವರಿಸಿದೆ.

 #ಶಿವಮೊಗ್ಗ: ಭದ್ರಾವತಿ ತಾಲೂಕಿನ ಕಲ್ಲಿಹಾಳ – ಅರಬೀಳಚಿ ನಡುವೆ ಶಾಲಾ ಪ್ರವಾಸಕ್ಕೆ ತೆರಳಿ ವಾಪಾಸ್ ಬರುತ್ತಿದ್ದ ಬಸ್ ರಸ್ತೆಬದಿಯ ಮರಕ್ಕೆ ಡಿಕ್ಕ...
25/12/2019

#ಶಿವಮೊಗ್ಗ: ಭದ್ರಾವತಿ ತಾಲೂಕಿನ ಕಲ್ಲಿಹಾಳ – ಅರಬೀಳಚಿ ನಡುವೆ ಶಾಲಾ ಪ್ರವಾಸಕ್ಕೆ ತೆರಳಿ ವಾಪಾಸ್ ಬರುತ್ತಿದ್ದ ಬಸ್ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ದೈಹಿಕ ಶಿಕ್ಷಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೂಡ್ಲಿಗೆರೆ ಗ್ರಾಮದ ಶಿಕ್ಷಕ ಹರಿಕೃಷ್ಣ(40) ಸಾವನ್ನಪ್ಪಿದ ದುರ್ದೈವಿ. ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮದ ಮಂಜುನಾಥ ಪ್ರೌಢಶಾಲೆಯ ಮಕ್ಕಳು ಕಳೆದ ಮೂರು ದಿನಗಳ ಹಿಂದೆ ಪ್ರವಾಸಕ್ಕೆ ಹೋಗಿದ್ದರು.

ಇಂದು ಬೆಳಗಿನ ಜಾವ ಮಕ್ಕಳನ್ನ ಗ್ರಾಮಕ್ಕೆ ಬಿಟ್ಟು ಶಿಕ್ಷಕರನ್ನು ಕೋಡ್ಲಿಗೆರೆ ಕ್ಯಾಂಪ್ ಗೆ ಬಿಟ್ಟುಬರಲು ಹೋಗುವ ವೇಳೆ ಅವಘಡ ನಡೆದಿದೆ. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 #ರಾಯಚೂರು: ಕುಡಿದ ಮತ್ತಿನಲ್ಲಿ ಚಲಿಸುತ್ತಿದ್ದ ಟ್ರೈನ್ ನಿಂದ ಬಿದ್ದು, ಯುವಕನೋರ್ವ ತನ್ನ ಬಲಗೈ ಕಳೆದುಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ...
25/12/2019

#ರಾಯಚೂರು: ಕುಡಿದ ಮತ್ತಿನಲ್ಲಿ ಚಲಿಸುತ್ತಿದ್ದ ಟ್ರೈನ್ ನಿಂದ ಬಿದ್ದು, ಯುವಕನೋರ್ವ ತನ್ನ ಬಲಗೈ ಕಳೆದುಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ನಗರದ ಜಿಲ್ಲಾ ಕ್ರೀಡಾಂಗಣದ ಬಳಿಯ ರೈಲ್ವೆ ಹಳಿಯ ಬಳಿ ಈ ದುರ್ಘಟನೆ ಸಂಭವಿಸಿದೆ. ಕೈ ಕಳೆದಕೊಂಡು ಯುವಕನನ್ನು ಯಕ್ಲಾಸಪುರ ಗ್ರಾಮದ ಗೋಪಿ ಎಂದು ಗುರುತಿಸಲಾಗಿದೆ. ಸಂಜೆ ಟ್ರೈನ್ ನಲ್ಲಿ ಏರಿ ಫುಟ್ ಗಾರ್ಡ್ ಮೇಲೆ ಕುಳಿತ್ತಿದ್ದಾನೆ. ಈ ವೇಳೆ ರೈಲ್ವೆ ನಿಲುಗಡೆಯಾಗಿದೆ ಎಂದು ತಿಳಿದು ಇಳಿಯಲು ಹೋಗಿ ಬಿದ್ದಿದ್ದರಿಂದ ತನ್ನ ಬಲಗೈ ಕಳೆದುಕೊಂಡಿದ್ದಾನೆ.

ಗಾಯಗೊಂಡ ಯುವಕನನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

 #ಬೆಂಗಳೂರು ಡಿಸೆಂಬರ್‌ 23: ರಾಜ್ಯದ ಎರಡನೇ ಹಂತದ ನಗರಗಳು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾ...
23/12/2019

#ಬೆಂಗಳೂರು ಡಿಸೆಂಬರ್‌ 23: ರಾಜ್ಯದ ಎರಡನೇ ಹಂತದ ನಗರಗಳು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಕೈಗಾರಿಕಾ ಇಲಾಖೆ ಸಚಿವ ಜಗದೀಶ್‌ ಶೆಟ್ಟರ್‌ ಮತ್ತು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಅವರ ನೇತೃತ್ವದಲ್ಲಿಂದು ದೇಶದ ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ಸರಣಿ ಸಭೆಯನ್ನು ನಡೆಸಲಾಯಿತು.

ಟಾಟಾ ಗ್ರೂಪಿನ ಅಧ್ಯಕ್ಷರಾದ ಚಂದ್ರಶೇಖರನ್‌, ಮಹೀಂದ್ರ & ಮಹೀಂದ್ರ ಲಿಮಿಟೆಡ್‌ನ ಅಧ್ಯಕ್ಷರಾದ ಆನಂದ್‌ ಮಹೀಂದ್ರ, ಗೋದ್ರೇಜ್‌ ಲಿಮಿಟೆಡ್‌ ಸಂಸ್ಥೆಯ ಅಧ್ಯಕ್ಷರಾದ ಆದಿ ಗೋದ್ರೇಜ್‌ ಸೇರಿದಂತೆ ಹಲವಾರು ಪ್ರಮುಖ ಕೈಗಾರಿಕೋದ್ಯಮಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಚರ್ಚೆ ನಡೆಸಲಾಯಿತು.

ಇನ್‌ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ ಸಮಾವೇಶ – 2020 ದ ಮೂಲಕ ಉತ್ತರ ಕರ್ನಾಟದಲ್ಲೂ ಬಂಡವಾಳ ಹೂಡಿಕೆ ಮಾಡಲು ಮೂಲಭೂತ ಸೌಕರ್ಯಗಳಿವೆ ಎನ್ನುವುದನ್ನು ಕೈಗಾರಿಕೋದ್ಯಮಿಗಳಿಗೆ ತಿಳಿಸಿಕೊಡುವುದು ನಮ್ಮ ಉದ್ದೇಶವಾಗಿದೆ. ದೇಶದ ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಿದಾಗ ಇದರ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಲಾಗಿದ್ದು, ರಾಜ್ಯದಲ್ಲಿ ಹೂಡಿಕೆಯನ್ನು ಮಾಡುವಂತೆ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದರು.

ಸಂಜೆ ನಾರಿಮನ್‌ ಪಾಯಿಂಟ್‌ ನಲ್ಲಿರುವ ಟ್ರಿಡೆಂಟ್‌ ಹೋಟೇಲ್‌ ನಲ್ಲಿ ರೋಡ್‌ ಶೋ ನಡೆಯಿತು. ರಾಜ್ಯದಲ್ಲಿರುವ ಕೈಗಾರಿಕೆಗೆ ಪೂರಕವಾದ ವಾತಾವರಣ ಹಾಗೂ ಸೌಲಭ್ಯಗಳ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಮಾಹಿತಿಯನ್ನು ನೀಡಲಾಯಿತು.

Address

Bangalore

Alerts

Be the first to know and let us send you an email when Public Varthe posts news and promotions. Your email address will not be used for any other purpose, and you can unsubscribe at any time.

Contact The Business

Send a message to Public Varthe:

Videos

Share

Category