24/06/2020
ಮೂಕದನಿ
ಮೂಕದನಿ
ಒಂದು ಸುಂದರವಾದ ಅಪಾರ್ಟ್ಮೆಂಟ್, ಅಲ್ಲಿ ನೂರಾರು ಫ್ಲ್ಯಾಟ್ಸ್, ಸುಂದರ ಸಂಸಾರಗಳಿರುವ ಸಂತೆ. ಎಲ್ಲ ಮನೆಯವರೂ ಭಯವಿಲ್ಲದೆ ನಿರಾತಂಕವಾಗಿದ್ದರೂ, ಯಾವುದೇ ತೊಂದರೆ ಇದ್ದರೂ , ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ ಕೇಳುವ ಮುನ್ನವೇ ಆ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದ ಗೂರ್ಖಾ, ಯಾರೇ ತೊಂದರೆಯಲ್ಲಿದ್ದರೂ ತಾನಾಗೇ ಮುಂದೆ ನಿಂತು ಎಲ್ಲವನ್ನೂ ಬಗೆಹರಿಸುತ್ತಿದ್ದ, ಆತನನ್ನು ಕಂಡರೆ ಎಲ್ಲರಿಗೂ ಹೆಮ್ಮೆ ಅಭಿಮಾನ, ಇವರ ಅಭಿಮಾನ ಗೂರ್ಖ ಎಂಜಾಯ್ ಮಾಡುತ್ತಾ, ತಾನು ಇವರಲೊಬ್ಬ ಎಂಬಂತಿದ್ದ. ಇಂತಹ ಗೂರ್ಖ ಕಾರಣಾಂತರಗಳಿಂದ ಕೆಲವು ದಿನ ಕಾಣದಾದ, ಪ್ರತಿಯೊಬ್ಬರು ಗೂರ್ಖ ಬರುತ್ತಿಲ್ಲ ಎಂದು ಮುನಿಸಿಕೊಂಡರು, ಎಲ್ಲರೂ ಅವನ ದೂಷಿಸತೊಡಗಿದರು, ಗೂರ್ಖ ಮರಳಿ ಬಂದಾಗ ಅವನಿಗೆ ಸಲಹೆ ಸೂಚನೆ ನೀಡಿದರೆ ಹೊರತು ಯಾರೊಬ್ಬರೂ ಅವನು ಯಾವ ಕಾರಣಕ್ಕೆ ಬರಲಿಲ್ಲ, ಅವನು ಯಾವುದಾದರೂ ಸಮಸ್ಯೆಗೀಡಾಗಿದ್ದನೆ ಯಾರೂ ಕೇಳಲಿಲ್ಲ.
ಭ್ರಮನಿರಸಗೊಂಡ ಗೂರ್ಖ ಕ್ರಮೇಣ ಎಲ್ಲಾ ಗೂರ್ಖರಂತೆ ತನ್ನ ಕೆಲಸ ಮಾತ್ರ ಮಾಡುತ್ತಿದ್ದ, ಎಲ್ಲರೂ ಈತ ಬದಲಾಗಿದ್ದಾನೆ ನಿಷ್ಪ್ರಯೋಜಕ ಎಂಬಂತೆ ಕಂಡರು.
ಆ ಗೂರ್ಖ ನಾವು , ಅಪಾರ್ಟ್ಮೆಂಟ್ ನಮ್ಮ ಕುಟುಂಬ, ಅಲ್ಲಿನ ಜನ ನಮ್ಮ ಬಂಧು ಬಾಂಧವರು, ಎಲ್ಲರೂ ನಮ್ಮವರೆಂಬ ಕಾಳಜಿವಹಿಸುವ ಭರದಲ್ಲಿ ನಮ್ಮತನವ ಮರೆತು ನಮ್ಮವರಿಗಾಗಿ ದುಡಿವ ಮುರ್ಖ ಗೂರ್ಖರಾಗಿರುತ್ತೇವೆ.
ಎಲ್ಲ ಮೂರ್ಖ ಗೂರ್ಖರಿಗೆ ಜೈ ಜೈ ಜೈ