VK Readers

VK Readers 'ವಿಕ ಕರುನಾಡ ಕೊಟ್ಟೋಣ ಬನ್ನಿ' ಎಂಬ ಈ ಅಭಿಯಾ?

ಮಂಗಳವಾರ ಸಂಕ್ರಾಂತಿ ಹಬ್ಬ ನಗರಾದ್ಯಂತ  ಸಂಕ್ರಾಂತಿಯ ಸುಗ್ಗಿ ಮನೆ ಮಾಡಿದೆ. ಎಲ್ಲೆಲ್ಲೂ ಕಬ್ಬು, ಕಡ್ಲೆ, ಗೆಣಸುಗಳ ರಾಶಿ ಮತ್ತೊಂದೆಡೆ ಸಿದ್ದ ಎಳ...
14/01/2025

ಮಂಗಳವಾರ ಸಂಕ್ರಾಂತಿ ಹಬ್ಬ ನಗರಾದ್ಯಂತ ಸಂಕ್ರಾಂತಿಯ ಸುಗ್ಗಿ ಮನೆ ಮಾಡಿದೆ. ಎಲ್ಲೆಲ್ಲೂ ಕಬ್ಬು, ಕಡ್ಲೆ, ಗೆಣಸುಗಳ ರಾಶಿ ಮತ್ತೊಂದೆಡೆ ಸಿದ್ದ ಎಳ್ಳು- ಬೆಲ್ಲಗಳ ಘಮ. ಸಕ್ಕರೆ ಅಚ್ಚುಗಳ ಆಕರ್ಷಣೆ. ಹೀಗೆ ಸಂಭ್ರಮದ ಭರಾಟೆ ನಗರದಲ್ಲಿ ಸೋಮವಾರ ಜೋರಾಗಿತ್ತು. ದರ ಏರಿಕೆ ನಡುವೆಯೂ ಖರೀದಿ ರಂಗೇರಿತ್ತು.

ವಿಜಯಕರ್ನಾಟಕದ ಸೂಪರ್ ಸ್ಟಾರ್ ರೈತ ಕಾರ್ಯಕ್ರಮದ 7ನೇ ಆವೃತ್ತಿಯ ಲಾಂಛನವನ್ನು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಶನಿವಾರ ವಿಕೆ ಕಚೇರಿಯಲ್ಲ...
13/01/2025

ವಿಜಯಕರ್ನಾಟಕದ ಸೂಪರ್ ಸ್ಟಾರ್ ರೈತ ಕಾರ್ಯಕ್ರಮದ 7ನೇ ಆವೃತ್ತಿಯ ಲಾಂಛನವನ್ನು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಶನಿವಾರ ವಿಕೆ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ವಿಕೆ ಕಚೇರಿಯಲ್ಲಿ ಶನಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಲೋಗೊ ಅನಾವರಣಗೊಳಿಸಿ ಮಾತನಾಡಿದ ಸಚಿವರು ಕೃಷಿ ದೇಶದ ಆರ್ಥಿಕ ಪ್ರಗತಿಗೆ ಮತ್ತು ಉದ್ಯೋಗ ಸೃಷ್ಟಿಗೆ ಸಹಕಾರಿ ಯಾದದು . ಜೊತೆಗೆ ಭವಿಷ್ಯದಲ್ಲಿನ ಆಹಾರ ಕೊರತೆಯನ್ನು ನೀಗಿಸುವ ವಿಶೇಷ ಕ್ಷೇತ್ರವಾಗಿದೆ ಹೀಗಾಗಿ ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಹೊಸಪೇಟೆ, ಜನವರಿ 06: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ರೈಲು ಯೋಜನೆಗಳ ಕುರಿತು ನೈಋತ್ಯ ರೈಲ್ವೆಗೆ ಮನವಿಯನ್ನು ಸಲ್ಲಿಕೆ ಮಾಡಲಾಗಿದೆ. ಹಲವು ...
12/01/2025

ಹೊಸಪೇಟೆ, ಜನವರಿ 06: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ರೈಲು ಯೋಜನೆಗಳ ಕುರಿತು ನೈಋತ್ಯ ರೈಲ್ವೆಗೆ ಮನವಿಯನ್ನು ಸಲ್ಲಿಕೆ ಮಾಡಲಾಗಿದೆ. ಹಲವು ಹೊಸ ರೈಲುಗಳ ಸಂಚಾರ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಡಲಾಗಿದೆ. ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಹೊಸ ರೈಲು ಸೇವೆಗಳಿಗೆ ಅನುಮತಿ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.

ನಮ್ಮ ಮೆಟ್ರೋ ಬೆಂಗಳೂರಿನಿಂದ ತುಮಕೂರುವರೆಗೂ ವಿಸ್ತರಣೆಯಾಗಬೇಕು ಎಂಬುದು ಸುತ್ತಮುತ್ತಲ ಜಿಲ್ಲೆಗಳ ಜನರ ಆಶಯ. ಇದಕ್ಕೆ ಅಗತ್ಯ ಸಿದ್ಧತೆಗಳು ನಡೆಯು...
11/01/2025

ನಮ್ಮ ಮೆಟ್ರೋ ಬೆಂಗಳೂರಿನಿಂದ ತುಮಕೂರುವರೆಗೂ ವಿಸ್ತರಣೆಯಾಗಬೇಕು ಎಂಬುದು ಸುತ್ತಮುತ್ತಲ ಜಿಲ್ಲೆಗಳ ಜನರ ಆಶಯ. ಇದಕ್ಕೆ ಅಗತ್ಯ ಸಿದ್ಧತೆಗಳು ನಡೆಯುತ್ತಿದ್ದು, ಫೆಬ್ರವರಿಯಲ್ಲಿ ಮಾರ್ಗ ನಿರ್ಮಾಣ ಕಾರ್ಯ ಸಾಧ್ಯತಾ ವರದಿಯು ಕರ್ನಾಟಕ ಸರ್ಕಾರದ ಕೈ ಸೇರಲಿದೆ. ನಮ್ಮ ಮೆಟ್ರೋ ಹಸಿರು ಮಾರ್ಗ ಸದ್ಯ ಬೆಂಗಳೂರಿನ ದಕ್ಷಿಣದಿಂದ ಉತ್ತರಕ್ಕೆ 33 ಕಿ.ಮೀ ವಿಸ್ತರಿಸಿದೆ. ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆಯಿಂದ (ಸಿಲ್ಕ್‌ ಇನ್ಸ್ಟಿಟ್ಯೂಟ್‌) ಮಾದಾವರದವರೆಗೂ ರೈಲು ಸಂಚಾರ ನಡೆಸುತ್ತಿದೆ. ಈ ಹಸಿರು ಮಾರ್ಗವನ್ನೇ ಮಾದಾವರದಿಂದ ತುಮಕೂರಿಗೆ ವಿಸ್ತರಣೆ ಮಾಡಬೇಕು ಎಂದು ಸರ್ಕಾರ ನಿರ್ಧರಿಸಿ ಈ ಬಗ್ಗೆ 2024 -25 ಬಜೆಟ್‌ನಲ್ಲಿಯೂ ಘೋಷಣೆ ಮಾಡಿದೆ.

ಪ್ರತೀಕ್ ವೈಕರ್ ಭಾರತೀಯ ಪುರುಷರ ತಂಡದ ನಾಯಕರಾಗಿ ನೇಮಕಗೊಂಡಿದ್ದರೆ, ಪ್ರಿಯಾಂಕಾ ಇಂಗ್ಲೆ ಮಹಿಳಾ ತಂಡವನ್ನು ಮುನ್ನಡೆಸಲಿದ್ದಾರೆ, ಆತಿಥೇಯ ಭಾರತವ...
10/01/2025

ಪ್ರತೀಕ್ ವೈಕರ್ ಭಾರತೀಯ ಪುರುಷರ ತಂಡದ ನಾಯಕರಾಗಿ ನೇಮಕಗೊಂಡಿದ್ದರೆ, ಪ್ರಿಯಾಂಕಾ ಇಂಗ್ಲೆ ಮಹಿಳಾ ತಂಡವನ್ನು ಮುನ್ನಡೆಸಲಿದ್ದಾರೆ, ಆತಿಥೇಯ ಭಾರತವು ಜನವರಿ 13 ರಂದು ಪ್ರಾರಂಭವಾಗಲಿರುವ ಚೊಚ್ಚಲ ಖೋ ಖೋ ವಿಶ್ವಕಪ್‌ಗೆ ತಮ್ಮ ತಂಡವನ್ನು ಪ್ರಕಟಿಸಿದೆ. ಕರ್ನಾಟಕದ ಚೈತ್ರ. ಆರ್ ಮತ್ತು ಗೌತಮ್. ಎಮ್ ಕೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದು ರಾಜ್ಯಕ್ಕೆ ಹೆಸರು ತಂದಿದ್ದಾರೆ.

ಕಳೆದ ವರ್ಷವಷ್ಟೇ ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನಗೊಳಿಸಿದ ಬೆಂಗಳೂರು ಜಲಮಂಡಳಿ, ಈಗ ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ಕಾವೇರಿ 6ನೇ ಹಂತದ ...
09/01/2025

ಕಳೆದ ವರ್ಷವಷ್ಟೇ ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನಗೊಳಿಸಿದ ಬೆಂಗಳೂರು ಜಲಮಂಡಳಿ, ಈಗ ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ಕಾವೇರಿ 6ನೇ ಹಂತದ ಯೋಜನಾ ಪ್ರಕ್ರಿಯೆಯತ್ತ ಮುಂದಡಿಯಿಟ್ಟಿದೆ. ಈ ತಿಂಗಳ ಅಂತ್ಯದೊಳಗೆ ಈ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌)ಯೊಂದಿಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಯೋಜನೆಯ ಡಿಪಿಆರ್‌ ತಯಾರಿಕೆಗೆ ಗುತ್ತಿಗೆ ಪಡೆದಿದ್ದ 'ಟಾಟಾ ಕನ್ಸಲ್ಟೆನ್ಸಿ' ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಮಂಡಳಿಗೆ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ ಮಂಡಳಿ ಡಿಪಿಆರ್‌ಗೆ ಅನುಮೋದನೆ ನೀಡಿದ್ದು, ಈ ತಿಂಗಳಾಂತ್ಯದೊಳಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮಂಡಳಿ ನಿರ್ಧರಿಸಿದೆ.

ಐಸಿಸಿ ಡಿಸೆಂಬರ್‌ ತಿಂಗಳ ಆಟಗಾರನ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು ನಾಮ ನಿರ್ದೇಶಗೊಂಡಿದೆ. ಕಳೆದ ಬೋರ್ಡರ್‌-ಗಾವಸ್ಕರ್‌ ಟ್ರೋಫಿ ಸರಣ...
08/01/2025

ಐಸಿಸಿ ಡಿಸೆಂಬರ್‌ ತಿಂಗಳ ಆಟಗಾರನ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು ನಾಮ ನಿರ್ದೇಶಗೊಂಡಿದೆ. ಕಳೆದ ಬೋರ್ಡರ್‌-ಗಾವಸ್ಕರ್‌ ಟ್ರೋಫಿ ಸರಣಿಯಲ್ಲಿ ಬುಮ್ರಾ ಅಮೋಘ ಬೌಲಿಂಗ್‌ ಪ್ರದರ್ಶಿಸಿ 32 ವಿಕೆಟ್‌ ಉರುಳಿಸಿದ್ದರು. ಡಿಸೆಂಬರ್‌ನಲ್ಲಿ ಆಡಲಾದ 3 ಟೆಸ್ಟ್‌ಗಳಲ್ಲಿ 22 ವಿಕೆಟ್‌ ಕೆಡವಿದ ಸಾಧನೆ ಇವರದಾಗಿದೆ.

ತಿಂಗಳ ಆಟಗಾರ ಪ್ರಶಸ್ತಿಗೆ ಸೂಚಿಸ ಲ್ಪಟ್ಟ ಮತ್ತಿಬ್ಬರೆಂದರೆ ಆಸ್ಟ್ರೇಲಿಯದ ನಾಯಕ ಪ್ಯಾಟ್‌ ಕಮಿನ್ಸ್‌ ಮತ್ತು ದಕ್ಷಿಣ ಆಫ್ರಿಕಾದ ಸೀಮರ್‌ ಡೇನ್‌ ಪ್ಯಾಟರ್ಸನ್‌.

'ಸರ್ವ ಜನಾಂಗದ ಶಾಂತಿಯ ತೋಟ' ಥೀಮ್ ಅಡಿ ಈ ವರ್ಷ ಮಾರ್ಚ್ 1 ರಿಂದ 8 ರವರೆಗೆ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ ಎಂದು ಮು...
07/01/2025

'ಸರ್ವ ಜನಾಂಗದ ಶಾಂತಿಯ ತೋಟ' ಥೀಮ್ ಅಡಿ ಈ ವರ್ಷ ಮಾರ್ಚ್ 1 ರಿಂದ 8 ರವರೆಗೆ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ ಕುರಿತು ಪತ್ರಿಕಾಗೋಷ್ಠಿ ನಡೆಯಿತು. '16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್‌ 1ರಿಂದ 8ರ ವರೆಗೆ ನಡೆಯಲಿದೆ.

ಈ ವರ್ಷದ ಚಲನಚಿತ್ರೋತ್ಸವದ ಥೀಮ್‌ ʻಸರ್ವ ಜನಾಂಗದ ಶಾಂತಿಯ ತೋಟʼ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ʻಸಾಮಾಜಿಕ ನ್ಯಾಯʼ ಥೀಮ್​ನಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗಿತ್ತು ಎಂದರು.2006ರಲ್ಲಿ ಆರಂಭವಾದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೀಗ 16ನೇ ಆವೃತ್ತಿಗೆ ಪ್ರವೇಶಿಸುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದು, ಚಲನಚಿತ್ರೋತ್ಸವದಲ್ಲಿ ಪ್ರತಿ ವರ್ಷ 60ಕ್ಕೂ ಹೆಚ್ಚು ದೇಶಗಳಿಂದ ಬಂದ ಸುಮಾರು 200ಕ್ಕೂ ಅಧಿಕ ಚಲನಚಿತ್ರಗಳನ್ನು, 13 ಚಿತ್ರಮಂದಿರಗಳಲ್ಲಿ ಸುಮಾರು 400 ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ.

ಪ್ರತಿ ಆವೃತ್ತಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಚಲಚಿತ್ರೋತ್ಸವಕ್ಕೆ ಯಾರನ್ನು ರಾಯಭಾರಿಯಾಗಿ ಆಯ್ಕೆ ಮಾಡಬೇಕು ಎಂಬುದನ್ನು ಸಮಿತಿ ನಿರ್ಧರಿಸಲಿದೆ.

ಬೆಂಗಳೂರಿನಲ್ಲಿ 22ನೇ ವರ್ಷದ ಚಿತ್ರಸಂತೆ ನಡೆಯಿತು. 22 ರಾಜ್ಯಗಳಿಂದ 1500 ಕಲಾವಿದರು ಭಾಗವಹಿಸಿದ್ದರು. 40,000ಕ್ಕೂ ಹೆಚ್ಚು ಚಿತ್ರಗಳನ್ನು ಪ್ರ...
06/01/2025

ಬೆಂಗಳೂರಿನಲ್ಲಿ 22ನೇ ವರ್ಷದ ಚಿತ್ರಸಂತೆ ನಡೆಯಿತು. 22 ರಾಜ್ಯಗಳಿಂದ 1500 ಕಲಾವಿದರು ಭಾಗವಹಿಸಿದ್ದರು. 40,000ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಬಾರಿ ಮಹಿಳೆಯರಿಗೆ ಅರ್ಪಿತವಾದ ಈ ಸಂತೆಯಲ್ಲಿ, ಹೆಣ್ಣುಮಕ್ಕಳ ಜೀವನದ ವಿವಿಧ ಅಂಶಗಳನ್ನು ಚಿತ್ರಿಸುವ ಕಲಾಕೃತಿಗಳು ಪ್ರಮುಖ ಆಕರ್ಷಣೆಗಳಾಗಿದ್ದವು. ಚಿತ್ರಗಳ ಜೊತೆಗೆ, ಮಣ್ಣಿನ ಮಡಿಕೆ, ಫೇಸ್ ಪೇಂಟಿಂಗ್ ಮುಂತಾದ ಇತರ ಕಲಾಕೃತಿಗಳು ಜನರನ್ನು ಆಕರ್ಷಿಸಿದವು.

ಶಿವಾನಂದ ವೃತ್ತದಿಂದ ವಿಡ್ಸರ್ ಮ್ಯಾನರ್​ವರೆಗೂ 22ನೇ ವರ್ಷದ ಚಿತ್ರ ಸಂತೆ ಆಯೋಜಿಸಲಾಗಿತ್ತು. ಚಿತ್ರ ಸಂತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವಿವಾರ ಚಾಲನೆ ನೀಡಿದ್ದರು. ಈ‌ ಬಾರಿಯ ಚಿತ್ರಸಂತೆಯನ್ನು ಹೆಣ್ಣು ಮಗುವಿಗೆ ಅರ್ಪಣೆ ಮಾಡಲಾಗಿತ್ತು. ಈ ಹಿನ್ನೆಲೆ ಚಿತ್ರ ಕಲಾಪರಿಷತ್ತಿನ ಮುಂಭಾಗದಲ್ಲಿ ಪೇಪರ್ ಬೈಂಡಿಂಗ್‌ನಿಂದ ಬೃಹತ್ ಹೆಣ್ಣು ಮಗುವಿನ ಕಲಾಕೃತಿ ಮಾಡಲಾಗಿತ್ತು.

🌟 ಜಾನ್ಸನ್‌ಸ್‌ ಬೇಬಿ "ಫ್ರಮ್ ಡೇ ವನ್" ವರ್ಕ್‌ಶಾಪ್ 🌟📅 ದಿನಾಂಕ: ಜನವರಿ 9 📍 ಸ್ಥಳ: ಚಿಕ್ಕಮಗಳೂರುಹೊಸ ತಾಯಂದಿರಿಗಾಗಿ ವಿಶೇಷವಾಗಿ ವಿನ್ಯಾಸಗೊಳ...
05/01/2025

🌟 ಜಾನ್ಸನ್‌ಸ್‌ ಬೇಬಿ "ಫ್ರಮ್ ಡೇ ವನ್" ವರ್ಕ್‌ಶಾಪ್ 🌟
📅 ದಿನಾಂಕ: ಜನವರಿ 9
📍 ಸ್ಥಳ: ಚಿಕ್ಕಮಗಳೂರು

ಹೊಸ ತಾಯಂದಿರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವರ್ಕ್‌ಶಾಪ್‌ಗೆ ನಮಸ್ಕಾರ! ತಜ್ಞರಿಂದ ತಿಳಿದುಕೊಳ್ಳಿ:

🍼 ಶಿಶು ಮತ್ತು ಚರ್ಮದ ಕಾಳಜಿ
🍎 ತಾಯಂದಿರ ಮತ್ತು ಶಿಶುಗಳ ಪೋಷಣೆ
🌸 ಪ್ರಸವೋತ್ತರ ಕಾಳಜಿ
🚑 ಪ್ರಥಮ ಚಿಕಿತ್ಸೆ ಮತ್ತು ಸಿಪಿಆರ್
💖 ಏಕೆ ಭಾಗವಹಿಸಬೇಕು?
ತಜ್ಞರೊಂದಿಗೆ ಮತ್ತು ಇತರ ತಾಯಂದಿರೊಂದಿಗೆ ಸಂಪರ್ಕ ಸಾಧಿಸಲು ಅದ್ಭುತ ಅವಕಾಶ!

ನಿಮ್ಮ ಪುಟ್ಟಮಗಳ/ಮಗನ ಅತ್ಯುತ್ತಮ ಆರಂಭಕ್ಕಾಗಿ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ದಿನಾಂಕವನ್ನು ಗಮನಿಸಿ ಮತ್ತು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ!

ಭಾರತದ ಅಧ್ಯಕ್ಷರು ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಯನ್ನು ಉದ್ಘಾಟಿಸಿದರು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜನವರಿ 3, ...
04/01/2025

ಭಾರತದ ಅಧ್ಯಕ್ಷರು ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಯನ್ನು ಉದ್ಘಾಟಿಸಿದರು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜನವರಿ 3, 2025) ಕರ್ನಾಟಕದ ಬೆಳಗಾವಿಯಲ್ಲಿ KLE ಕ್ಯಾನ್ಸರ್ ಆಸ್ಪತ್ರೆಯನ್ನು ಉದ್ಘಾಟಿಸಿದರು. ಅಧ್ಯಕ್ಷ ತೆ ವಹಿಸಿ ಮಾತನಾಡಿ, ಜಾಗತಿಕ ಅಧ್ಯಯನದ ಪ್ರಕಾರ ವಿಶ್ವದಲ್ಲಿ ಸಾವಿಗೆ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ.

ಡಬಲ್ ಒಲಿಂಪಿಕ್ ಪದಕ ವಿಜೇತ ಮನು ಭಾಕರ್ ಮತ್ತು ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್ ಸೇರಿದಂತೆ ಒಟ್ಟು 4 ಜನರಿಗೆ ಮೇಜರ್ ಧ್ಯಾನ್​ಚಂದ್​ ಖೇಲ್​ ರ...
03/01/2025

ಡಬಲ್ ಒಲಿಂಪಿಕ್ ಪದಕ ವಿಜೇತ ಮನು ಭಾಕರ್ ಮತ್ತು ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್ ಸೇರಿದಂತೆ ಒಟ್ಟು 4 ಜನರಿಗೆ ಮೇಜರ್ ಧ್ಯಾನ್​ಚಂದ್​ ಖೇಲ್​ ರತ್ನ ಪ್ರಶಸ್ತಿಯನ್ನು ಕ್ರೀಡಾ ಇಲಾಖೆ ಘೋಷಿಸಿದೆ.

ಇಂದು(ಜ.02) ಕ್ರೀಡಾ ಇಲಾಖೆ ಖೇಲ್​ ರತ್ನ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಿಸಿದ್ದು. ಒಲಂಪಿಕ್​ನಲ್ಲಿ ಎರಡು ಪದಕಗಳನ್ನು ಗೆದ್ದು ಸಾಧನೆ ಮಾಡಿದ ಮನು ಭಾಕರ್ ಮತ್ತು ಇತ್ತೀಚೆಗೆ ವಿಶ್ವ ಚೆಸ್​ ಚಾಂಪಿಯನ್​ಷಿಪ್​ನಲ್ಲಿ ಗೆಲುವು ಸಾಧಿಸಿ ವಿಶ್ವದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್​ ಎಂಬ ಬಿರುದಿಗೆ ಪಾತ್ರರಾಗಿದ್ದ ಗುಕೇಶ್​ ದೊಮ್ಮರಾಜು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಯನ್ ಪ್ರವೀಣ್ ಕುಮಾರ್ ಎಂಬುವವರು ಕೂಡ ಖೇಲ್​ ರತ್ನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಜನವರಿ 17ರಂದು ರಾಷ್ಟ್ರಪ್ರಶಸ್ತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್.ವೈಶಾಲಿ ಅವರು ವಿಶ್ವ ಚೆಸ್‌ ಬ್ಲಿಟ್ಸ್‌ ಚಾಂಪಿಯನ್‌ಷಿಪ್‌ ಮಹಿಳಾ ವಿಭಾಗದಲ್ಲಿ ಬುಧವಾರ ಕಂಚಿನ ಪದಕ ಗೆದ್ದುಕೊ...
02/01/2025

ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್.ವೈಶಾಲಿ ಅವರು ವಿಶ್ವ ಚೆಸ್‌ ಬ್ಲಿಟ್ಸ್‌ ಚಾಂಪಿಯನ್‌ಷಿಪ್‌ ಮಹಿಳಾ ವಿಭಾಗದಲ್ಲಿ ಬುಧವಾರ ಕಂಚಿನ ಪದಕ ಗೆದ್ದುಕೊಂಡರು. ಮೂರು ದಿನಗಳ ಹಿಂದೆ ಕೋನೇರು ಹಂಪಿ ರ‍್ಯಾಪಿಡ್ ವಿಭಾಗದ ಕಿರೀಟ ಧರಿಸಿದ್ದರು.

‌ವೈಶಾಲಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 2.5–1.5 ರಿಂದ ಚೀನಾದ ಝು ಜಿನರ್ ಅವರನ್ನು ಸೋಲಿಸಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಚೀನಾದ ಇನ್ನೊಬ್ಬ ಆಟಗಾರ್ತಿ ಜು ವೆನ್‌ಜುನ್ ಎದುರು 0.5–1.5 ರಿಂದ ಸೋಲನುಭವಿಸಿದರು.

ಅತಿ ವೇಗದ ಚೆಸ್‌ ಆಟದಲ್ಲಿ ಚೀನಾ ಆಟಗಾರ್ತಿಯರ ಪಾರಮ್ಯ ಸಾಧಿಸಿದರು. ಚೀನಾದ ಜು ವೆನ್‌ಜುನ್‌ ಫೈನಲ್‌ನಲ್ಲಿ ಸ್ವದೇಶದ ಲೀ ಟಿಂಗ್ಜೀ ಅವರನ್ನು 3.5–2.5 ರಿಂದ ಮಣಿಸಿದರು.

ಹೊಸ ವರ್ಷವು ನಿಮಗೆ ಹೊಸ ಗುರಿ, ಹೊಸ ಸಾಧನೆ, ಹೊಸ ಯಶಸ್ಸಿಗೆ ದಾರಿಯಾಗಲಿ. ನೀವು ಸಾಗುವ ದಾರಿ ಹೂವಿನ ಹಾಸಿಗೆಯಂತಿರಲಿ ಎಂಬ ಹಾರೈಕೆ ನಮ್ಮದು. ತಮಗ...
01/01/2025

ಹೊಸ ವರ್ಷವು ನಿಮಗೆ ಹೊಸ ಗುರಿ, ಹೊಸ ಸಾಧನೆ, ಹೊಸ ಯಶಸ್ಸಿಗೆ ದಾರಿಯಾಗಲಿ. ನೀವು ಸಾಗುವ ದಾರಿ ಹೂವಿನ ಹಾಸಿಗೆಯಂತಿರಲಿ ಎಂಬ ಹಾರೈಕೆ ನಮ್ಮದು. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹೃದಯಪೂರ್ವಕ ಶುಭಾಶಯಗಳು.

ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು ರಾಜಧಾನಿಯಲ್ಲಿ 10 ಸಾವಿರಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಖಣ್ಗಾವಲು ಇಡಲಾಗಿದೆ. ಡಿಸೆಂಬರ್ 31ರ ಮ...
31/12/2024

ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು ರಾಜಧಾನಿಯಲ್ಲಿ 10 ಸಾವಿರಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಖಣ್ಗಾವಲು ಇಡಲಾಗಿದೆ. ಡಿಸೆಂಬರ್ 31ರ ಮಧ್ಯರಾತ್ರಿ ಒಂದು ಗಂಟೆವರೆಗೆ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅನುಮತಿ ನೀಡಲಾಗಿದ್ದು ಹೊಸ ವರ್ಷದ ಸಂಭ್ರಮಕ್ಕೆ ಸಿಲಿಕಾನ್ ಸಿಟಿ ಸಜ್ಜಾಗಿದೆ.

ಹೊಸ ವರ್ಷದ ಹಿಂದಿನ ದಿನ(ಡಿ.31) ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

31/12/2024

Address

Sanjana Plaza, #74/2, Elephant Rock Road, 4th Floor, Jayanagar 3rd Block
Bangalore
560011

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6am
Friday 10am - 6pm

Alerts

Be the first to know and let us send you an email when VK Readers posts news and promotions. Your email address will not be used for any other purpose, and you can unsubscribe at any time.

Videos

Share