25/09/2023
ಶ್ರೀ ಪಂಚಮುಖಿ ಪ್ರಾಣದೇವರ ಸ್ವಯಂ ಉದ್ಭವ ಶಿಲೆ, ಗಾಣಧಾಳ, ರಾಯಚೂರು ಜಿಲ್ಲೆ.
'ಸ್ವಾಮಿ'ಯ ವಿವರಗಳು ತಿಳಿದು ಬಂದದ್ದು :
ಹಿಂದೆ ಗಾಣಧಾಳ ಗ್ರಾಮದಲ್ಲಿ ಅನಂತಾಚಾರ್ ಎಂಬ ಬ್ರಾಹ್ಮಣರಿದ್ದರು. ಆಂಜನೇಯನೊಂದು ದಿನ ಅವರಿಗೆ ಕನಸಿನಲ್ಲಿ ಕಾಣಿಸಿಕೊಂಡು ತಾನು ಆ ಗ್ರಾಮದ ಅಡವಿಯಲ್ಲಿ ಗುಡ್ಡದ ಗುಹೆಯಲ್ಲಿ ಐದುಮುಖಗಳಿಂದ ಉದ್ಭವಿಸಿರುವದಾಗಿಯೂ, ಪೂಜಾದಿಗಳನ್ನು ಕೈಗೊಳ್ಳಬೇಕೆಂದು ಆಜ್ಞಾಪಿಸುತ್ತಾರೆ. ಆ ಬ್ರಾಹ್ಮಣನು ಸಂತೋಷದಿಂದ ಬೆಳಿಗ್ಗೆ ಎದ್ದು ಸಮೀಪದ ಕಾಡಿಗೆ ಹೋಗುತ್ತಾನೆ. ಆದರೆ ದಟ್ಟವಾದ ಕಾಡು, ತಿರುಗಾಡಲು
ದಾರಿಯೇಯಿಲ್ಲದ ಗುಡ್ಡ ಬೆಟ್ಟಗಳಿಂದ ಕೂಡಿದ, ಕಲ್ಲು ಮುಳ್ಳುಗಳಿಂದ ಕೂಡಿದ ಕಾಡಿನಲ್ಲಿಎಲ್ಲೆಂದು – ಎಷ್ಟೊಂದು ಹುಡುಕುವದು? ನಿರಾಶೆಯಿಂದ ಮನೆಗೆ ಬರುತ್ತಾನೆ ಯಥಾ ರೀತಿ ರಾತ್ರಿ ಶ್ರೀ ಅಂಜನೇಯನನ್ನು ಧ್ಯಾನಿಸುತ್ತ ಮಲಗುತ್ತಾನೆ. ಮುರನೇ ದಿನ ಒಬ್ಬ ಬ್ರಾಹ್ಮಣನು ಅನಂತಾಚಾರ್ಯರ ಹತ್ತಿರ ಬಂದು, ಅವರ ಕೈ ಹಿಡಿದು ಕರೆದುಕೊಂಡು ಅಡವಿಯಲ್ಲಿರುವ ಕೆರೆಯ ಹತ್ತಿರ ಇರುವ ಗುಡ್ಡದ ಕೆಳಗಿರುವ ಗುಹೆಯಲ್ಲಿರುವ ಆಕಾರವನ್ನು ತೋರಿಸಿ ಆ ಬ್ರಾಹ್ಮಣನು ಸ್ವಲ್ಪ ಹೊತ್ತಿನ ನಂತರ ಕಾಣಿಸಲಿಲ್ಲ. ಈ ರೀತಿ' ಆಂಜನೇಯನ ಅನುಗ್ರಹಕ್ಕೆ ಪಾತ್ರರಾದ ಅನಂತಾಚಾರ್ ಗ್ರಾಮಕ್ಕೆ ಬಂದು ಪೂಜಾ ಸಾಮಾಗ್ರಿಗಳನ್ನು ತಂದು ಪೂಜೆ ಮಾಡಿ ಹೋಗುತ್ತಾರೆ. ಮಾರುತಿ ತನ್ನ ಇರುವಿಕೆಯನ್ನು ಜಗತ್ತಿಗೆ ತೋರಿಸಿಕೊಳ್ಳಲು ತನ್ನನ್ನು ಒಂದು ಸಾಧನವಾಗಿ ಉಪಯೋಗಿಸಿ ಕೊಂಡಿದ್ದಾನೆಂದು ಆಚಾರ್ಯರು ಭಾವಿಸುತ್ತಾರೆ. ಸಂಶೋಷ ಭೂತರಾದ ಆಚಾರ್ಯರು ಪ್ರತಿದಿನ ಮುರುತಿಯನ್ನು ಸೇವಿಸುತ್ತಿದ್ದರು, ಕೆಲವು ದಿನಗಳಾದ ನಂತರ ಅನಂತಾ ಚಾರ್ಯರು ಶ್ರೀ ರುದ್ರದೇವರನ್ನು ಅಲ್ಲಿ ಪ್ರತಿಷ್ಠಿಸುತ್ತಾರೆ. ಆಚಾರ್ಯರು ಶ್ರೀ ರಾಘವೇಂದ್ರ ಸ್ವಾಮಿಗಳ ಸಮಕಾಲೀನರು ಇದರಿಂದ 370 ವರ್ಷಗಳ ಹಿಂದೆಯೇ ರುದ್ರದೇವರ ಪ್ರತಿಷ್ಠಾಪನೆ ಆದಂತೆ ತಿಳಿಯಬಹುದಾಗಿದೆ. ಮುಂದೆ ಅನಂತಾಚಾರ್ಯರು ತಮ್ಮ ಮನೆಯಲ್ಲಿಯೇ ಪಂಚಮುಖಿ ಪ್ರಾಣದೇವರ ಉತ್ಸವ ಮೂತಿಯನ್ನು ಪ್ರಸಿ ನಿತ್ಯವು ಆ ಮೂರ್ತಿಗೆ ಪೂಜೆ ಮಾಡುತ್ತಾ ಪ್ರತಿ ಶನಿವಾರ ಪಂಚಮುಖಾಂಜನೇಯನ ಮೂಲ ಮೂರ್ತಿಗೆ ಪೂಜೆ ಸಲ್ಲಿಸುತ್ತಿದ್ದರು.
https://youtu.be/tjnOtpiAOPg?si=qpdOvQ5ZrOzE82wv
MP Blogs kannada Karnataka ನಿಮ್ಮ ಎಂಪಿ