M2B News TV

M2B News TV Now a day’s digital media playing an effective role in the print media, some peopled taking advant

24/10/2023
15/09/2023

Prakash Rai with Suvarna News

M2B News: ಈ ಸಂಚಿಕೆಯ ಸಾರಾಂಶ:''ಹಮ್ ದೋ  ನೋ  ಕಿತನಾ ಮಿಸ್ ಕರ್ ತೆ ಥೆನಾ...?'''ಅಂಕಲ್! ರಫೀಯಾಳ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಅವಳಿಗೆ ...
15/02/2021

M2B News: ಈ ಸಂಚಿಕೆಯ ಸಾರಾಂಶ:
''ಹಮ್ ದೋ ನೋ ಕಿತನಾ ಮಿಸ್ ಕರ್ ತೆ ಥೆನಾ...?''

'ಅಂಕಲ್! ರಫೀಯಾಳ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಅವಳಿಗೆ ತಾನು ಹೆಚ್ಚು ಓದಿಕೊಂಡಿದ್ದೇನೆ ಎಂಬ ಅಹಂಕಾರವಿದೆ. ಅದು ಅವಳ ನಡವಳಿಕೆಯಿಂದ ಗೊತ್ತಾಗುತ್ತಿದೆ. ಇದರಿಂದ ನನಗೆ ತುಂಬಾ ಹಿಂಸೆಯಾಗುತ್ತಿದೆ. ಅದಕ್ಕೆ ಒಂದೇಟು ಹೊಡೆದೆ. ಅಷ್ಟಕ್ಕೇ ಮನೆ ಬಿಟ್ಟು ಹೋಗುವುದಾ?' ಸೈಯದ್ ನ ಮಾತುಗಳಲ್ಲಿ ರಫೀಯಾಳ ಬಗ್ಗೆ ತಾತ್ಸಾರವಿತ್ತು. '
ಎಲ್ಲರ ಕಣ್ಣಲ್ಲೀಗ ಯುದ್ಧ ಗೆದ್ದ ಸಂಭ್ರಮವಿತ್ತು. ;ಸಾಗರ್ ಭಯಾ ನಿನಗೆ ಹೆಣ್ಣು ಮಕ್ಕಳು ಇಲ್ಲದಿದ್ದರೂ ಹೆಣ್ಣು ಮಕ್ಕಳ ಭಾವನೆ, ಬದುಕಿನ ಬಗ್ಗೆ ಇಷ್ಟೊಂದು ತಿಳಿಯಲು ನಿಮಗೆ ಹೇಗೆ ಸಾಧ್ಯ..? ಎನ್ನುವ ಪ್ರಶ್ನೆ ಈಗಲೂ ನನ್ನನ್ನು ಕಾಡುತ್ತಿದೆ. ಅದನ್ನು ನನಗೂ ಸ್ವಲ್ಪ ಕಲಿಸಿಕೊಡಿ ಪ್ಲೀಸ್.. ಅವತ್ತು ನಿಮ್ಮ ಮಾತನ್ನು ನಾನು ಕೇಳದೇ ಇದ್ದಿದ್ದರೆ ನನ್ನ ಮಗಳ ಬದುಕು ಚಿಂದಿ ಚಿಂದಿಯಾಗಿರುತ್ತಿತ್ತೇನೋ' ಎಂದು ಹೇಳುತ್ತಿದ್ದ ರಶೀದ್ ಕಣ್ಣಿನಲ್ಲಿ ಅವರಿಗೇ ಗೊತ್ತಾಗದಂತೆ ತುಂಗೆ ತುಳುಕುತ್ತಿದ್ದಳು. ಅವರ ಕೈಯಲ್ಲಿ ಯಥಾ ರೀತಿ ಕಾಗದದ ಪೊಟ್ಟಣವಿತ್ತು. 'ಏನಿದು ದುಡ್ಡಾ?' ನಾನು ಕೇಳಿದೆ. 'ಅಲ್ಲ, ಧಾರವಾಡ ಪೇಡಾ' ಅಂದ ರಶೀದ್. ಎಲ್ಲರ ಮುಖದಲ್ಲಿ ಸಣ್ಣದೊಂದು ನಗು ಮಿಂಚಿ ಮರೆಯಾಯಿತು. 'ಈ ಪೇಡಾದಷ್ಟೇ ನಿಮ್ಮ ಮಗಳ ದಾಂಪತ್ಯ ಜೀವನ ಸವಿಯಾಗಲಿ' ಎಂದು ಹೇಳಿ ರಶೀದ್ ನನ್ನು ಬೀಳ್ಕೊಟ್ಟೆ.
ಈ ಎಮೋಷನಲ್ ಸ್ಟೋರಿ ನೋಡಿ ಗೆಳೆಯರೇ.

https://youtu.be/4V3PMX4c-nQ

ಇಂತಿ
ನಿಮ್ಮವ
ರಮಾನಂದ್ ಸಾಗರ್.

M2B News: ಈ ಸಂಚಿಕೆಯ ಸಾರಾಂಶ:''ಹಮ್ ದೋ ನೋ ಕಿತನಾ ಮಿಸ್ ಕರ್ ತೆ ಥೆನಾ...?'''ಅಂಕಲ್! ರಫೀಯಾಳ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಅವಳಿಗೆ ತಾನು ಹೆಚ...

M2B News: ಅಜ್ಜಿಯ ಸಾವಿನ ಮುನ್ಸೂಚನೆ ನನ್ನವಳಿಗೆ ಮೊದಲೇ ಗೊತ್ತಿತ್ತಾ?ಈ ಸಂಚಿಕೆಯ ಸಾರಾಂಶ:ಆ ದಿನ ನನ್ನಾಕೆ ಫೋನ್ ಮಾಡಿ 'ಇವತ್ತು 5 ಗಂಟೆಯ ಹೊತ...
08/02/2021

M2B News: ಅಜ್ಜಿಯ ಸಾವಿನ ಮುನ್ಸೂಚನೆ ನನ್ನವಳಿಗೆ ಮೊದಲೇ ಗೊತ್ತಿತ್ತಾ?

ಈ ಸಂಚಿಕೆಯ ಸಾರಾಂಶ:
ಆ ದಿನ ನನ್ನಾಕೆ ಫೋನ್ ಮಾಡಿ 'ಇವತ್ತು 5 ಗಂಟೆಯ ಹೊತ್ತಿಗೆ ಮನೆಗೆ ಬಂದು ಬಿಡ್ರಿ. ದೇವಸ್ಥಾನಕ್ಕೆ ಹೋಗಬೇಕು' ಎಂದಳು. ನಾನು ತಮಾಷೆಯಾಗಿ 'ಸಾಧ್ಯವಿಲ್ಲ. ಅಜ್ಜಿ ಬೋಂಡಾ, ವಡೆ ಮಾಡುವುದು 6 ಗಂಟೆಗೆ. ನಾನು ವಡೆ ತಿಂಡುಕೊಂಡೆ ಬರಬೇಕು. ಹಾಗಾಗಿ ನಾನು 7 ಗಂಟೆಯ ನಂತರ ಮನೆಗೆ ಬರುತ್ತೇನೆ' ಎಂದಿದ್ದೆ. ನನ್ನಾಕೆ 'ನಾಳೆಯಿಂದ ಆ ಅಜ್ಜಿ ವಡೆ ಮಾಡುವುದು ನಿಲ್ಲಿಸುವಂತಾಗಲಿ. ಆ ಕಾರಣದಿಂದಲಾದರೂ ನೀವು ಬೇಗ ಮನೆ ಸೇರುವಂತಾಗಲಿ' ಎಂದು ಪ್ರತಿಯಾಗಿ ತಮಾಷೆ ಮಾಡಿದ್ದಳು.

ಸುಮಾರು 50 ವರ್ಷಗಳ ಕಾಲ ನನ್ನೊಂದಿಗಿದ್ದ ಅಜ್ಜಿ ನನ್ನನ್ನು ಬಿಟ್ಟು ಮರಳಿ ಬಾರದ ಊರಿಗೆ ಶಾಶ್ವತವಾಗಿ ಪ್ರಯಾಣ ಬೆಳೆಸಿದ್ದಳು. ಇನ್ನು ಮೇಲೆ ನಾನು ಬೋಂಡಾ, ವಡೆ ಮಾಡುವುದಿಲ್ಲ. ಏಕೆಂದರೆ ಅದಕ್ಕೆ ಮಸಾಲೆಯನ್ನು ಸಿದ್ದಪಡಿಸುತ್ತಿದ್ದ ಅಜ್ಜಿ ಈಗ ಬದುಕುಳಿದಿಲ್ಲ. ಕಾಂಡಿಮೆಂಟ್ ಸ್ಟೋರ್ ಅಜ್ಜಿಯ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು. ನಾನು ಅವಳಿಗೊಂದು ಸಮಾಧಾನ ಹೇಳಿ ಆಫೀಸಿಗೆ ಬಂದೆ. ಎಷ್ಟೋ ಹೊತ್ತು ಮನಸ್ಸು ಸಮಾಧಾನವೇ ಆಗಲಿಲ್ಲ. ಅಜ್ಜಿಯ ಸಾವಿನ ಮುನ್ಸೂಚನೆ ನನ್ನವಳಿಗೆ ಮುಂಚೆಯೇ ಗೊತಿತ್ತಾ? ಇಲ್ಲದಿದ್ದರೆ ಅವಳೇಕೆ ಅಂದು ಹಾಗೆ ಮಾತಾಡಿದ್ದಳು? ಅಜ್ಜಿಯ ವಡೆ ನಿನಗೆ ಸಿಗದೇ ಹೋಗಲಿ ಅಂತ ನನ್ನಾಕೆ ಹೇಳಿದ್ದು ಕೇವಲ ತಮಾಷೆಯಾ? ಅಥವಾ ಅವಳಿಗೆ ಅರಿವಿಲ್ಲದೇ ಹೊರಬಿದ್ದ ಭವಿಷ್ಯದ ವಾಣಿಯಾ? ಉತ್ತರ ಗೊತ್ತಾಗದೇ ಒದ್ದಾಡುತ್ತಿದ್ದೇನೆ. ಪ್ರತೀ ಸಾಯಂಕಾಲ ಆಫೀಸಿನ ಮೆಟ್ಟಿಲಿಳಿಯುವಾಗ ಅಜ್ಜಿ ನನ್ನನ್ನು ಕಾಡುತ್ತಾಳೆ. ಅವಳ ಅತ್ಮಕ್ಕೆ ಶಾಂತಿ ಸಿಗಲಿ.
https://youtu.be/1kzjwbmEpPU

ನಿಮ್ಮವ
ರಮಾನಂದ್ ಸಾಗರ್

M2B News: ಅಜ್ಜಿಯ ಸಾವಿನ ಮುನ್ಸೂಚನೆ ನನ್ನವಳಿಗೆ ಮೊದಲೇ ಗೊತ್ತಿತ್ತಾ?ಈ ಸಂಚಿಕೆಯ ಸಾರಾಂಶ:ಆ ದಿನ ನನ್ನಾಕೆ ಫೋನ್ ಮಾಡಿ 'ಇವತ್ತು 5 ಗಂಟೆಯ ಹೊ....

ಸಾಗರ್ ಡೈರಿ13 ನೇ ಸಂಚಿಕೆ ನಿಮ್ಮ M2B NEWS TV ಯಲ್ಲಿ ಪ್ರತಿ ಸೋಮವಾರ ಬೆಳಗೆ 9.00 ಗಂಟೆಗೆ ತಪ್ಪದೇ ವೀಕ್ಷಿಸಿ.ನಿಮ್ಮ ಅಮ್ಮಂದಿರನ್ನು ಸಾಧ್ಯವಾ...
01/02/2021

ಸಾಗರ್ ಡೈರಿ13 ನೇ ಸಂಚಿಕೆ ನಿಮ್ಮ M2B NEWS TV ಯಲ್ಲಿ ಪ್ರತಿ ಸೋಮವಾರ ಬೆಳಗೆ 9.00 ಗಂಟೆಗೆ ತಪ್ಪದೇ ವೀಕ್ಷಿಸಿ.
ನಿಮ್ಮ ಅಮ್ಮಂದಿರನ್ನು ಸಾಧ್ಯವಾದಷ್ಟು ಪ್ರಿತಿಸಿ ಆದರೆ ನೋಯಿಸಬೇಡಿ ತಾಯಿಯ ಮಮತೆ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ಇರುತ್ತದೆ. ಮೂಕ ಪ್ರಾಣಿಗಳ ಮಮತೆಯನ್ನು ವರ್ಣಿಸಲು ಪದಗಳು ಸಾಲದು, ಮನುಷ್ಯನಿಗಿಂತ ಪ್ರಾಣಿ-ಪಕ್ಷಿಯೇ ಮೇಲು, ಪ್ರಾಣಿ-ಪಕ್ಷಿಗಳಿಗೆ ಇರುವ ದೊಡ್ಡ ಮನಸ್ಸು ಮನುಷ್ಯನಿಗಿಲ್ಲ ಆದ್ದರಿಂದ ಮನುಷ್ಯರಷ್ಟೇ ಪ್ರಾಣಿ-ಪಕ್ಷಿಗಳನ್ನು ಪ್ರೀತಿಸಿ ಅದು ಸಹ ಒಂದು ಜೀವವೆಂದು ಮರೆಯದಿರಿ. ಈ ಎಮೋಷನಲ್ ಸ್ಟೋರಿ ನೋಡಲು ಈ ಲಿಂಕ್ ನ್ನು ಕ್ಲಿಕ್ ಮಾಡಿ ಗೆಳೆಯರೇ.
https://youtu.be/xZkSkden9ss

ಇಂತಿ
ನಿಮ್ಮವ
ರಮಾನಂದ್ ಸಾಗರ್.

M2B News: ನಿಮ್ಮ ಅಮ್ಮಂದಿರನ್ನು ಸಾಧ್ಯವಾದಷ್ಟು ಪ್ರೀತಿಸಿ ಆದರೆ ನೋಯಿಸಬೇಡಿ ತಾಯಿಯ ಮಮತೆ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗ...

20/01/2021

M2B News' ಮನಸ್ಸು ಗೊಂದಲಕ್ಕೆ ಬಿದ್ದಿದೆ. ಅದೇಕೋ ಗೊತ್ತಿಲ್ಲ. ಆತ್ಮೀಯರೊಬ್ಬರು ಪದೇ ಪದೇ ನೆನಪಾಗುತ್ತಿದ್ದಾರೆ. ಸಾಮಾನ್ಯವಾಗಿ ನನ್ನನ್ನು ಹಳೆಯ ನೆನಪುಗಳು ಕಾಡದಂತೆ ಸಿದ್ಧತೆ ನಡೆಸುತ್ತೇನೆ. ಯಾರೋ ಒಬ್ಬರು, ಯಾವುದೋ ಒಂದು ಘಟನೆ ನನ್ನನ್ನು ತುಂಬಾ ಕಾಡತೊಡಗಿದಂತೆ ನಾನು ಸಂಗೀತದ ಮೊರೆ ಹೋಗುತ್ತೇನೆ.
'ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು' ಇದು ಮಹದೇವಸ್ವಾಮಿ ಸೆಲ್ ಫೋನ್ ನಂಬರಿಗೆ ಸೆಟ್ ಮಾಡಿದ ಕಾಲರ್ ಟ್ಯೂನ್. 'ನೀನು ರಿಸೀವ್ ಮಾಡದಿದ್ರೂ ನಾನು ಕಾಲ್ ಮಾಡ್ತಾನೇ ಇರ್ತೀನಿ' ಅಂದಂಗಿತ್ತು ಆ ಹಾಡಿನ ಅರ್ಥ. ಆಮೇಲೆ ಅವರ ಕಾಲ್ ಬರಲೇ ಇಲ್ಲ. ಡೆಲ್ಲಿಯ ಕಾರ್ಯಕ್ರಮ ಮುಗಿಸಿ ಏರ್ಫೋರ್ಟಿನತ್ತ ಕಾಲ್ಕಿತ್ತೆ. ಏರ್ಫೋರ್ಟಿನಲ್ಲಿ ಸೆಕ್ಯುರಿಟಿ ಚೆಕಿಂಗಿಗೆ ನನ್ನ ಸೆಲ್ ಫೋನ್ ತೆಗೆದಾಗ 15 ಮಿಸ್ ಕಾಲ್ ಇತ್ತು. ಅದರಲ್ಲಿ 10 ಮಿಸ್ ಕಾಲ್ ಮಹದೇವಸ್ವಾಮಿಯದಾಗಿತ್ತು. ಏಕೋ ಮನಸ್ಸು ತಡೆಯಲಿಲ್ಲ. ನಾನೇ ಕಾಲ್ ಮಾಡಿ Sorry ಕೇಳೋಣವೆಂದು ಅವರ ನಂಬರಿಗೆ ಕಾಲ್ ಮಾಡಿದೆ.
'ನಮಸ್ಕಾರ ಅಣ್ಣ, ನಾನು ರಮಾನಂದ್ ಸಾಗರ್ ಮಾತಾಡೋದು. ಏನಣ್ಣ ಫೋನ್ ಮಾಡಿದ್ದು?' ಎಂದೆ. ಮಹದೇವಸ್ವಾಮಿ ಬದಲಿಗೆ ಫೋನ್ ರಿಸೀವ್ ಮಾಡಿದ್ದು ಅವರ ಮಗ. ಅಪ್ಪನಿಗೆ ಫೋನ್ ಕೊಡು ಎಂದ ನನ್ನ ಮಾತಿಗೆ ಆ ಕಡೆಯಿಂದ 'ಅಪ್ಪ ಇನ್ನೆಲ್ಲಿ ಸಿಗ್ತಾರೆ ಅಣ್ಣಾ... ಮುಂಜಾನೆ ತೀರಿ ಹೋದ್ರು.. ಈಗಷ್ಟೇ ಮಣ್ಣು ಮಾಡಿ ಬರ್ತಾ ಇದ್ದೀವಿ. ಈ ವಿಷಯವನ್ನೇ ತಿಳಿಸಲು ನಿಮಗೆ ಫೋನ್ ಮಾಡಿದ್ದೆ ಆದರೆ ನೀವು ಫೋನ್ ರಿಸೀವ್ ಮಾಡಲೇ ಇಲ್ಲ' ಅವರ ಮಗ ಮಾತನಾಡುತ್ತಲೇ ಇದ್ದ. ನಾನು ಗರಬಡಿದವನಂತೆ ಹಾಗೆಯೇ ಇದ್ದೆ. ಮಾತಾಡಲು ನನ್ನಲ್ಲಿ ಶಬ್ದಗಳೇ ಇರಲಿಲ್ಲ. ಒಂದು ಕ್ಷಣ ನನ್ನ ಎದೆ ಧಸಕ್ ಎಂದು ಬಿಟ್ಟಿತು.
ಸಾಮಾನ್ಯವಾಗಿ ನಾನು ಸಾವಿನ ನಂತರ ಯಾವುದೇ ವ್ಯಕ್ತಿಗಳನ್ನು ವಿನಾಕಾರಣ ಹೊಗಳಲು ಇಷ್ಟಪಡುವುದಿಲ್ಲ. ನಾನೇ ಎಷ್ಟೋ ಬಾರಿ ಈ ಬಗ್ಗೆ ಆತ್ಮೀಯ ವಲಯದಲ್ಲಿ ಚರ್ಚೆಗೆ ಬಿದ್ದಿದ್ದೇನೆ. 'ಬದುಕಿರುವಾಗ ನಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಆತನ ಆತ್ಮ ಸಾವಿನ ನಂತರವೂ ಸಂತುಷ್ಟ ಪಡುತ್ತದೆ. ಮನುಷ್ಯ ಸತ್ತ ಮೇಲೆ ಆತನ ಗೋರಿಯ ಮೇಲೆ ನಾವು ಚೆಲ್ಲುವ ಹೂವಿನ ಗಂಧ ಆತನಿಗೆ ತಲುಪಲಾರದು' ಅಂತ ಅನೇಕರಿಗೆ ಬುದ್ಧಿ ಹೇಳಿದ್ದೇನೆ. ಆದರೆ, ಮಹದೇವಸ್ವಾಮಿಯ ವಿಷಯದಲ್ಲಿ ಅವರೆಡನ್ನು ನನ್ನ ಕೈಯಿಂದ ಮಾಡಲಾಗಲಿಲ್ಲ. ದುಃಖ ತಡೆಯಲಾರದೇ ಡೆಲ್ಲಿಯ ಏರ್ ಫೋರ್ಟಿನಲ್ಲಿರುವ ರೆಸ್ಟ್ ರೂಮಿನೊಳಗೆ ಹೋಗಿ ಅಳತೊಡಗಿದೆ.
ಅಷ್ಟರಲ್ಲಿ ನನ್ನ ಸೆಲ್ ಫೋನಿನಿಂದ ಮೆಸೇಜ್ ಟೋನ್ ಬಡಿದುಕೊಳ್ಳಲು ಆರಂಭಿಸಿತು. ನೋಡಿದರೆ ಅದ್ಯಾವುದೋ service message ಆಗಿತ್ತು. ಆಮೇಲೆ ನನಗೆ ನೆನಪಾಗಿದ್ದು ಒಂದು ವಾರದ ಹಿಂದೆಯಷ್ಟೇ ಮಹದೇವಸ್ವಾಮಿ ಕಳಿಸಿದ ಮೆಸೇಜ್. ಆತ ಕಳಿಸಿದ ಮೆಸೇಜ್ ಹೀಗಿತ್ತು. 'ಒಂದು ವೇಳೆ ನಾನು ಸತ್ತು ಹೋದರೆ, ನನ್ನ ಶವದ ಮುಂದೆ ಕುಳಿತು ಕಣ್ಣೀರಿಡಬೇಡ. ನಿನ್ನ ಕಣ್ಣೀರು ಒರೆಸಲು ನನ್ನ ಕೈಬೆರಳು ಮತ್ತೆ ಜೀವಂತವಾದೀತೂ! ಏನೋ ಯಾರಿಗೊತ್ತು...!?!' ಸಾವಿನ ಮುನ್ಸೂಚನೆ ಅವರಿಗೆ ಮೊದಲೇ ಗೊತ್ತಿತ್ತಾ? ಗೊತ್ತಿಲ್ಲ... ಅದಕ್ಕೇ ಏನೋ ಆತ್ಮೀಯನೂ ಪದೇ ಪದೇ ನನಗೆ ನೆನಪಾಗುತ್ತಿದ್ದ. ಈ ಅಪರಾಧಿ ಪ್ರಜ್ಞೆ ನನ್ನನ್ನು ಈಗಲೂ ಕಾಡುತ್ತಿದೆ. ಇಂಥದ್ದು ನಿಮ್ಮನ್ನು ಕಾಡದಿರಲಿ.

ಸಾಗರ್ ಡೈರಿ 11-ನೇ ಸಂಚಿಕೆ ನಿಮ್ಮ ತಂದೆ-ತಾಯಿ, ಗಂಡ, ಮಕ್ಕಳನ್ನು ಬೇರೆಯವರಿಗೆ ಹೋಲಿಸದಿರಿ.ಐಸ್‌ಕ್ರೀಂ ತಿಂದರು ಕರಗುತ್ತದೆ, ತಿನ್ನದೇ ಇದ್ದರು ...
20/01/2021

ಸಾಗರ್ ಡೈರಿ 11-ನೇ ಸಂಚಿಕೆ
ನಿಮ್ಮ ತಂದೆ-ತಾಯಿ, ಗಂಡ, ಮಕ್ಕಳನ್ನು ಬೇರೆಯವರಿಗೆ ಹೋಲಿಸದಿರಿ.

ಐಸ್‌ಕ್ರೀಂ ತಿಂದರು ಕರಗುತ್ತದೆ, ತಿನ್ನದೇ ಇದ್ದರು ಕರಗುತ್ತದೆ !
"ನಮ್ಮ ಜೀವನ ಸಹ ಹಾಗೇ" ಎಂಜಾಯ್ ಮಾಡಿದರು ಕರಗುತ್ತದೆ, ಮಾಡದಿದ್ದರೂ ಕರಗುತ್ತದೆ.

ಸ್ವರ್ಗ, ನರಕ ....ಅವು ಇದ್ದಾವೋ ಇಲ್ಲವೊ ಗೊತ್ತಿಲ್ಲ. ನಾವು ಮತ್ತೆ ಹುಟ್ಟುತ್ತೀವೋ ಇಲ್ಲವೋ ಅದೂ ಗೊತ್ತಿಲ್ಲ .....!!

ಕುಡಿಯೋನು "ಮೂರ್ಖನಲ್ಲ, ಕುಡಿಯದವನು ಪವಿತ್ರನಲ್ಲ.
ಇಲ್ಲ್ಯಾರು ನೂರುವರ್ಷ ಬದುಕುವ ಭರವಸೆಯೇನು ಇಲ್ಲ.... ಅವರವರ ಲೆಕ್ಕಾಚಾರ ಅವರದು.

"FINAL JUDGMENT IS"
ಹೊತ್ತೊತ್ತಿಗೆ ಊಟಮಾಡಿ‌, ಹೊತ್ತಿಗೆ ಸರಿಯಾಗಿ ನಿದ್ದೆಮಾಡಿ, ಸರಿಯಾದ ಕೆಲಸ ಮಾಡಿ, ಯಾವುದಕ್ಕೂ ತಲೆಕೆಡಿಸ್ಕೊಬೇಡಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿರಲಿ,

ಖುಷಿಯಾಗಿರಿ,ಬೇರೆಯವರಿಗೂ ಖುಷಿಕೊಡಿ 😊
ಜೀವನ ಆನಂದಮಯವಾಗಿರಲಿ 😊
https://youtu.be/BKVq10Ojeiw

M2B News:ಸಾಗರ್ ಡೈರಿ 11-ನೇ ಸಂಚಿಕೆ ನಿಮ್ಮ ತಂದೆ-ತಾಯಿ, ಗಂಡ, ಮಕ್ಕಳನ್ನು ಬೇರೆಯವರಿಗೆ ಹೋಲಿಸದಿರಿ.ಐಸ್‌ಕ್ರೀಂ ತಿಂದರು ಕರಗುತ್ತದೆ, ತಿನ್ನ....

ಸಾಗರ್ ಡೈರಿ ಸಂಚಿಕೆ 10  'ನೀನು ರಿಸೀವ್ ಮಾಡದಿದ್ರೂ, ನಾನು ಕಾಲ್ ಮಾಡ್ತಾನೇ ಇರ್ತೀನಿ...''https://youtu.be/v3RAsFX35qs
12/01/2021

ಸಾಗರ್ ಡೈರಿ ಸಂಚಿಕೆ 10 'ನೀನು ರಿಸೀವ್ ಮಾಡದಿದ್ರೂ, ನಾನು ಕಾಲ್ ಮಾಡ್ತಾನೇ ಇರ್ತೀನಿ...''
https://youtu.be/v3RAsFX35qs

M2B News

Address

M2B NEWS>TV, No:62, 31st A Cross, 22nd Main, Thilaka Nagar
Bangalore
560041

Alerts

Be the first to know and let us send you an email when M2B News TV posts news and promotions. Your email address will not be used for any other purpose, and you can unsubscribe at any time.

Contact The Business

Send a message to M2B News TV:

Videos

Share

Category


Other TV Channels in Bangalore

Show All