04/03/2023
https://youtu.be/FgcskpQKPDM
ಹಬ್ಬುತ್ತಿರುವ ಕಾಡ್ಗಿಚ್ಚು ಆರಿಸುವುದು ಅಷ್ಟು ಸುಲಭವಲ್ಲ. ಬೆಂಕಿಯ ಕೆನ್ನಾಲಿಗೆಗೆ ದಿಕ್ಕು ತಪ್ಪಿ ಅಲೆಯುವ ವನ್ಯಜೀವಿಗಳ ಆರ್ತನಾದಕ್ಕೆ ಕಿವಿಯಾಗುವವರು ಯಾರು.? ಇಂತಹ ಹಲವು ದುರ್ಘಟನೆಗಳಿಗೆ ಹಲವಾರು ಬಾರಿ ಸಾಕ್ಷಿಯಾಗಿರುವ ಕರ್ನಾಟಕ ರಾಜ್ಯದಲ್ಲಿ ಕಾಡ್ಗಿಚ್ಚು ಅದು ಉಂಟು ಮಾಡಿದ ಸಾವುಗಳು,ನಾಶವಾದ ಪ್ರಾಕೃತಿಕ ಸಂಪತ್ತು ಮನಕಲುಕುವಂತಿದೆ. ಅರಣ್ಯ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಸುತ್ತಲೂ ಕಂದಕವನ್ನು ನಿರ್ಮಿಸಿ ಬೆಂಕಿಯನ್ನು ತಡೆಯುವ ಕ್ರಮ ಈ ಹಿಂದೆ ಜಾರಿಯಲ್ಲಿತ್ತು.ಈ ಪದ್ದತಿಯನ್ನು ಕ್ರಿ.ಶ 1870 ರಲ್ಲಿ ಬ್ರಿಟಿಷರು 'Forest Fire Line' ಯೋಜನೆಯಡಿ ಜಾರಿಗೆ ತಂದಿದ್ದರು, ಈ ನಿಯಮ ಇಂದಿಗೂ ಭಾರತದ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿದೆ.
ಈ ಕಾಡ್ಗಿಚ್ಚು ಅನ್ನೋ "ಬೆಂಕಿಯಾಟ" ನಮ್ಮ ಕಾಡನ್ನಷ್ಟೇ ಅಲ್ಲ ನಮ್ಮೆಲ್ಲರ ಬದುಕನ್ನು ಸುಡಲು ಶುರುವಾಗಿದೆ. ಅಪಾರ ಪ್ರಮಾಣದ ಅಮೂಲ್ಯ ಸಸ್ಯ-ಪ್ರಾಣಿ ಸಂಪತ್ತು ಬೆಂಕಿಯ ರೌದ್ರನರ್ತನದಲ್ಲಿ ಹೇಳ ಹೆಸರಿಲ್ಲದಂತೆ ಭಸ್ಮವಾಗುತ್ತಿರುವುದು, ನಾಳೆ ನಿಮಗೂ ಇದೇ ಸ್ಥಿತಿ ಅನ್ನೋದನ್ನ ಎಚ್ಚರಿಸುತ್ತಿದೆ. ಇಂತಹ ಕಾಡ್ಗಿಚ್ಚಿಗೆ ಪ್ರತ್ಯಕ್ಷವಾಗಿಯೋ-ಪರೋಕ್ಷವಾಗಿಯೋ ಹತ್ತಾರು ಡಿಗ್ರಿ ಓದಿಕೊಂಡ ನಾವೇ ಕಾರಣರು.!
ಗುಡ್ಡ ಹತ್ತಿ ಬೆಂಕಿ ಆರಿಸಲು ಹರ ಸಾಹಸ ಪಡುವುದೇನು ಹೊಸತಲ್ಲ. ಆದರೆ ಬೆಂಕಿ ನಂದಿಸುವ ವಿಚಾರದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ!ಬೆಂಕಿ ಬಿದ್ದ ಪ್ರದೇಶದ ಸುತ್ತಲೂ ಕೆಳಗೆ ಬಿದ್ದಿರುವ ಒಣಗೆಲೆ ಹಾಗೂ ಒಣಗಿದ ಯಾವುದೇ ವಸ್ತುಗಳನ್ನು ತೆರವುಗೊಳಿಸಿ, ತೀವ್ರ ಸ್ವರೂಪದಲ್ಲಿ ಬೆಂಕಿ ಇನ್ನಷ್ಟು ಹರಡದಂತೆ ಶ್ರಮವಹಿಸುವುದು ಹಾಗೂ ಬಿರುಬಿಸಿಲಿನ ಯಾತನೆಯ ನಡುವೆಯೂ ಉಸಿರುಗಟ್ಟಿಸಿಕೊಂಡು ಸಾಧ್ಯವಾದಷ್ಟು ಬೆಂಕಿ ನಂದಿಸಲು ಇಲಾಖೆಯ ಕೆಳಹಂತದ ಸಿಬ್ಬಂದಿಗಳ ಪ್ರಯತ್ನ ಶ್ಲಾಘನೀಯ. ಇದಿನ್ನೂ ಬೇಸಿಗೆಯ ಆರಂಭ. ಮುಂಬರುವ ದಿನಗಳಲ್ಲಿ ತಾಪಮಾನ ಹೆಚ್ಚಾಗುವ ಬಗ್ಗೆ ವರದಿಗಳು ಮುನ್ಸೂಚನೆ ನೀಡುತ್ತಿವೆ.
ಪರಿಸ್ಥಿತಿ ಹೀಗಿರುವಾಗ ಆಳುವ ಸರ್ಕಾರಗಳು ಮಾತ್ರ ಇತ್ತೀಚಿನ ದಿನಗಳಲ್ಲಿ ಜಿಲ್ಲಾ, ತಾಲ್ಲೂಕು ಉತ್ಸವಗಳಲ್ಲಿ ಜನಾಸಮಾನ್ಯರ ತೆರಿಗೆ ದುಡ್ಡಲ್ಲಿ ಜನ ಪ್ರತಿನಿಧಿಗಳು ಶೋಕಿಗಾಗಿ ಅನವಶ್ಯಕ ಹೆಲಿಕಾಪ್ಟರ್ ಬಳಕೆ ಸಾಮಾನ್ಯದ ವಿಚಾರವಾಗಿದೆ. ಮಳೆಗಾಲದಲ್ಲಿ ಬೀಜದುಂಡೆ ಕಾಡಿಗೆಸೆಯಲು ಇತ್ತಿಚೀಗೆ ಡ್ರೋನ್ ಕೂಡಾ ಬಳಸಲಾಗುತ್ತದೆ. ಹೊರ ದೇಶಗಳಲ್ಲಿ ಕಾಡ್ಗಿಚ್ಚು ನಂದಿಸಲು ನಿರಂತರವಾಗಿ Helicopter ಗಳಲ್ಲಿ ವಾರಗಟ್ಟಲೇ ನೀರನ್ನು ಮಳೆಯ ರೂಪದಲ್ಲಿ ಸಿಂಪಡಿಸಲಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ತ್ವರಿತವಾಗಿ ಹಬ್ಬಿದ ಜ್ವಾಲೆಯನ್ನು ನಂದಿಸಲು ಹರಸಾಹಸ ಪಡಲಾಗುತ್ತದೆ.
ಆದರೆ ವಿಶ್ವ ಗುರು ಭಾರತದಲ್ಲಿ ಮಾತ್ರ ಹೆಲಿಕಾಪ್ಟರ್,ಡ್ರೋಣ್,ವಿಮಾನ,ರಾಕೆಟ್ಗಳು ಮಾತ್ರ ಮರಿಚೀಕೆ.! ಅಥವಾ ಕರ್ನಾಟಕದ 31 ಜಿಲ್ಲೆಗಳ ನಡುವೆ ಅದು ಬೇಸಿಗೆಯಲ್ಲಿ ಬೆಂಕಿ ನಂದಿಸಲು ಕೇವಲ 2-3 ಹೆಲಿಕಾಪ್ಟರ್ ನೀಡಿದರು ಸಾಕು ಸಾಕಷ್ಟು ಪ್ರಮಾಣದಲ್ಲಿ ಕಾಡ್ಗಿಚ್ಚು ಕಡಿಮೆಯಾಗಿ, ಸಿಬ್ಬಂದಿಗಳು ಕಡಿಮೆಯಿರುವ ಇಲಾಖೆಯಲ್ಲಿ ಕಾಡು ಕಾಯುವ ನೌಕರರ ಪ್ರಾಣವಾದರು ಉಳಿದೀತು.
ಇದೆಕ್ಕೆಲ್ಲಾ ಅನುದಾನದ ಕೊರತೆಯೇ.?ಅಥವಾ ಇಚ್ಚಾಶಕ್ತಿಯ ಕೊರತೆಯೇ ದೇವರೇ ಬಲ್ಲ.! ಟೆಕ್ನಾಲಜಿ ಇಷ್ಟೊಂದು ಮುಂದುವರೆದಿರುವಾಗ, ಬೇರೆ ಧರ್ಮದ ದೇಶಗಳಿಗೆ ಸಾವಿರಾರು ಕೋಟಿ ಅನುದಾನ ಕೊಡುವ ಸರ್ಕಾರವು ತನ್ನದೇ ನೆಲದ,ದೇಶದ ಹಸಿರು,ಜೀವವೈವಿಧ್ಯತೆ ಸುಟ್ಟು ಕರಲಾಗುತ್ತಿದ್ದರು,ಈ ಜಾಣ ಕುರುಡುತನ ಯಾಕೆ.? ಚುನಾವಣೆ ಹತ್ತಿರವಾಗುತ್ತಿದೆ ಮಲೆನಾಡು,ಪಶ್ಚಿಮ ಘಟ್ಟ ಸುಂದರ ಭಾರತದ,ಕರ್ನಾಟಕದ ಮುಕಟ ಮಣಿ ಅಂತೆಲ್ಲಾ ಪುಂಗುವುದನ್ನು ಬಿಟ್ಟು ಓಟಿನ ನೆಪದಲ್ಲಾದರು ಬೆಂಕಿ ಆರಿಸುವ ನೂತನ ತಂತ್ರಜ್ಞಾನಗಳನ್ನು ಜಾರಿಗೆ ತಂದು ಈ ಡಬಲ್ ಇಂಜಿನ್ ಸರ್ಕಾರ ಹೊಸ ಚರೀಷ್ಮಾವನ್ನಾದರೂ ಬೆಳಸಿಕೊಳ್ಳಬಹುದು. ಪ್ರವಾಹ,ನೆರೆ-ಬರಗಾಲ ಬಂದಾಗಲೂ ಬರದ ಕೇಂದ್ರದವರು ಈಗ ಇಷ್ಟೊಂದು ದುಂದು ವೆಚ್ಚ ಮಾಡಿ ಪದೇ ಪದೇ ಕರ್ನಾಟಕಕ್ಕೆ ಬರುವ ಬದಲು ಅದೇ ದುಡ್ಡಿನಲ್ಲಿ ಒಂದೇ ಒಂದು ಹೆಲಿಕಾಪ್ಟರ್ ಕೊಡಿಸಬಹುದು.
ಇಡೀ ಭಾರತದ ಸಾರ್ವಭೌತ್ವದ ಚುಕ್ಕಾಣಿ ಹಿಡಿದಿರುವ ನೀವು ಅಧಿಕಾರ,ಹಕ್ಕು,ಒಪ್ಪಿಗೆ,ಇಶಾರೆ, ನಿಮ್ಮ ಬಳಿಯೇ ಇರುವಾಗ,ರಿಯಾಲಿಟಿ ಷೋಗಳಲ್ಲಿ ಕಾಡು ಸುತ್ತಿದ ಅನುಭವ ನಿಮಗಿದೆ.ಹೀಗಿರುವಾಗ ಕಾಡಿಗ್ಯಾಕೆ ನಿಮ್ಮ ಕಡೆಯಿಂದ ಈ ತಾರತಮ್ಯ.? ಒಂದೇ ಒಂದು ಕಾಡನ್ನುಳಿಸುವ ಯೋಜನೆ ತನ್ನಿ ನಿಮ್ಮಿಂದ ಅದು ಸಾಧ್ಯ. ಮಂದಿರ,ಪ್ರತಿಮೆಗಳನ್ನ ಕಟ್ಟುವ ಬದಲು ಅದೇ ದುಡ್ಡಲ್ಲಿ ಕಾಡು ಉಳಿಸಲು ಯೋಜನೆಗಳು ಬಂದರೆ ಮಂದಿರದಲ್ಲಿ ವಾಸ ಮಾಡುವ ದೇವರು ಈ ಪ್ರಕೃತಿಯಲ್ಲಿ ಕಾಣುತ್ತಾನೆ. ಪ್ರಕೃತಿ ಉಳಿದರೆ ಮಾತ್ರ ಧರ್ಮ,ಹೊಡೆದಾಟ,ರಾಮ,ಅಲ್ಲಾ ಎಲ್ಲಾ ಅದನ್ನು ಉಳಿಸಿಕೊಳ್ಳಬೇಕಾಗಿರುವುದು ನಮ್ಮ ಧರ್ಮ.
ಇಡೀ ಭಾರತದ ಕಾಡುಗಳು,ಅದು ನಂಬಿದ ಜನ,ಇಲಾಖೆ ಎಲ್ಲವೂ ನಿಮ್ಮನ್ನು "ವಿಶ್ವಗುರು" ಎಂದು ಕೊಂಡಾಡುತ್ತವೆ. ಅರಣ್ಯದ 'ಅಭಿವೃದ್ಧಿ'ಯ ಹೆಸರಿನಲ್ಲಿ ಲಕ್ಷ,-ಕೋಟಿಗಳ ಲೆಕ್ಕದಲ್ಲಿ ದಾಖಲೆ ತೋರಿಸುವ ಸರ್ಕಾರ, ಈ ಕಾಡ್ಗಿಚ್ಚು ವಿಚಾರದಲ್ಲಿ ಮಾತ್ರ ಯಾವುದೇ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ಇನ್ನೂ ಯಾಕೆ ಸಾಧ್ಯವಾಗುತ್ತಿಲ್ಲವೆಂಬುದು ಬೇಸರದ ಸಂಗತಿ.ಜನಪ್ರತಿನಿಧಿಗಳಾದರೂ ತಮ್ಮ ಕ್ಷೇತ್ರದ ಕಾಡುಗಳ ಬಗ್ಗೆ ಗಮನ ಹರಿಸಬೇಕು. ಹುಟ್ಟುಹಬ್ಬ,ಮರೆವಣಿಗೆಗೆ ಉದ್ರಿ ಉದ್ರಿ ರೋಡ್ ಷೋಗಳಿಗೆ ಸುರಿಯುವ ನಮ್ಮ ತೆರಿಗೆ ದುಡ್ಡನ್ನ ಕಾಡು ಸಂರಕ್ಷಿಸಲಾದರು ಬಳಸಿದರೆ ಜೀವಗಳು ಉಳಿಯುತ್ತವೆ.
🌿 Flame of The Forest
ಹಬ್ಬುತ್ತಿರುವ ಕಾಡ್ಗಿಚ್ಚು ಆರಿಸುವುದು ಅಷ್ಟು ಸುಲಭವಲ್ಲ. ಬೆಂಕಿಯ ಕೆನ್ನಾಲಿಗೆಗೆ ದಿಕ್ಕು ತಪ್ಪಿ ಅಲೆಯುವ ....