90.4 Sarathi Jhalak

  • Home
  • 90.4 Sarathi Jhalak

90.4 Sarathi Jhalak Visibility, Image building, spreading information throug radio and video.How Radio can be a catalyst?

https://youtu.be/3kGY0Lc4zGk?si=N8zYmxrGca6-SUXmKavita Reddy Sharing her thoughts on podcost Share With Shamantha...ಕವಿತ...
16/11/2024

https://youtu.be/3kGY0Lc4zGk?si=N8zYmxrGca6-SUXm

Kavita Reddy Sharing her thoughts on podcost Share With Shamantha...

ಕವಿತ ರೆಡ್ಡಿ - ಕರ್ನಾಟಕ ರಾಜಕೀಯದಲ್ಲಿ ಸ್ವತಂತ್ರವಾಗಿ ಯೋಚಿಸೋ ಮಹಿಳೆ ಅನ್ನೋ ಕಾರಣಕ್ಕೆ ಪ್ರತಿ ಬಾರಿಯೂ ಆಕೆಗೆ ಚುನಾವಣೆಯಲ್ಲಿ ಅವಕಾಶವೇ ಸಿಗುತ್ತಿಲ್ಲ ಅನ್ನೋದು ಒಂದು ಸುದ್ದಿ.

ಆದರೆ ಇದು ಕವಿತ ರೆಡ್ಡಿ ಗೆ ಮಾತ್ರವಲ್ಲ ಈ ತರಹ Bold, Independent women hardly get opportunities in the politics. Then, what is the meaning of Women Empowerment???

ಕವಿತ ರೆಡ್ಡಿ - ಕರ್ನಾಟಕ ರಾಜಕೀಯದಲ್ಲಿ ಬೋಲ್ಡ್, ಸ್ವತಂತ್ರವಾಗಿ ಯೋಚಿಸೋ ಮಹಿಳೆ ಅನ್ನೋ ಕಾರಣಕ್ಕೆ ಪ್ರತಿ ಬಾರಿಯೂ ಆಕೆಗೆ ಚುನಾವಣೆಯ.....

https://youtu.be/mBf-uSVOTOMಐವತ್ತು ಪ್ಲಸ್ ವರ್ಷಗಳಿಂದ ಸುಶೀಲ ಸುಭ್ರಹ್ಮಣ್ಯರವರ Southern Economist ಪತ್ರಿಕೆ ನಿರಂತರವಾಗಿ ಪ್ರಕಟ ಆಗ್ತ...
09/11/2024

https://youtu.be/mBf-uSVOTOM
ಐವತ್ತು ಪ್ಲಸ್ ವರ್ಷಗಳಿಂದ ಸುಶೀಲ ಸುಭ್ರಹ್ಮಣ್ಯರವರ Southern Economist ಪತ್ರಿಕೆ ನಿರಂತರವಾಗಿ ಪ್ರಕಟ ಆಗ್ತಿದೆ ಅನ್ನೋದೇ ಒಂದು ಬ್ರೇಕಿಂಗ್ ನ್ಯೂಸ್. ಮೇಡಮ್, ಅಮ್ಮ ಅಂತಲೇ ನಮ್ಮೆಲ್ಲರಿಗೂ ಆತ್ಮೀಯ ಆಗಿರೋ ಪಬ್ಲಿಷ್ ರ್, ಎಡಿಟರ್ ಸುಶೀಲ ಅವರ ಬಡಕು ಪತ್ರಿಕೋದ್ಯಮ ಬಗ್ಗೆ ಒಂದು ಕಥೆ ಇದು.
ಸಾಧ್ಯವಾದಲ್ಲಿ 🙂‍↕️ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.
And support this Crowd Funding Project...

Pls Watch Full Video | https://youtu.be/SqQpJN76nwo ಐವತ್ತು ಪ್ಲಸ್ ವರ್ಷಗಳಿಂದ ಸುಶೀಲ ಸುಬ್ರಮಣ್ಯರವರ Southern Economist ಪತ್ರಿಕೆ ನಿರಂತರವ...

https://youtu.be/NaM9tGwJRjM
28/10/2024

https://youtu.be/NaM9tGwJRjM

SHARE WITH SHAMANTHA - VARALAKSHMI..ಇವತ್ತು ಅಂಗನವಾಡಿ ಕಾರ್ಯಕರ್ತೆಯರ ಪರಿಸ್ಥಿತಿ, ಗತಿ ಬಗ್ಗೆ ಏನಾದ್ರು ಬದಲಾವಣೆ ಬರ್ತಾ ಇದೆ ಅಂದ್ರೆ ಅಂಗನವಾಡಿ ಮತ್ತ.....

15/10/2024

#ರೋಟರಿಕ್ಲಬ. #ಬೆಂಗಳೂರು #ಗ್ರಾಮೀಣಹೆರಿಗೆಆಸ್ಪತ್ರೆಗಳಲ್ಲಿ #ಸೌರಶಕ್ತಿ #ಸೌಲಭ್ಯ #ಕಲ್ಪಿಸಿದೆ
ರೋಟರಿ ಕ್ಲಬ್ ಬೆಂಗಳೂರು, ಅಧ್ಯಕ್ಷೆ ಗೌರಿ ಓಜಾ ಇತ್ತೀಚೆಗೆ ನಮ್ಮ ಸಾರಥಿ ಕಮ್ಯುನಿಕೇಶನ್ ಸ್ಟುಡಿಯೋ ಗೆ ಭೇಟಿ ನೀಡಿ, ಅವರ ಹಲವು ಕಾರ್ಯಕ್ರಮ ವಿವರ ನೀಡಿರೋ ಡೀಟೇಲ್ ಟಾಕ್ ಸಧ್ಯದಲ್ಲೇ ಕೇಳ್ತಿರಿ, ನೋಡ್ತೀರಿ....👍👍

https://www.youtube.com/watch?v=wimD74T95s4ಕಥೆ ಹಿಂದಿನ ಕಥೆ - ಈ ಬಾರಿ ವೃತ್ತಿ ಜೀವನದ ಕಥೆ ಕೇಳಲಿದ್ದೀರಿ ಪ್ರಜಾವಾಣಿ ಪತ್ರಿಕೆಯು ನಿವೃ...
30/09/2024

https://www.youtube.com/watch?v=wimD74T95s4

ಕಥೆ ಹಿಂದಿನ ಕಥೆ - ಈ ಬಾರಿ ವೃತ್ತಿ ಜೀವನದ ಕಥೆ ಕೇಳಲಿದ್ದೀರಿ ಪ್ರಜಾವಾಣಿ ಪತ್ರಿಕೆಯು ನಿವೃತ್ತ ಕಾರ್ಯ ನಿರ್ವಾಹಕ ಸಂಪಾದಕರಾದ ರಾಜ ಶೈಲೇಶ್ ಚಂದ್ರ ಗುಪ್ತ ರವರ ಅನುಭವ, ಅನಿಸಿಕೆ.
ರಾಜಕೀಯ, ಸಾಹಿತ್ಯದಿಂದ ಸಿನಿಮ, ತಂತ್ರಜ್ಞಾನದ ತನಕ ಜನರಿಗೆ ಮಾಹಿತಿ ನೀಡೋ ನಮ್ಮ ಪತ್ರಕರ್ತರ ಜರ್ನಿ ಒಂಥರ ರೋಲರ್ ಕೋಸ್ಟರ್ ಅನ್ನಬಹುದು. ಹಲವಾರು ಬದಲಾವಣೆ, ಟ್ರೆನ್ಡ್ ಸೆಟ್ಟಿಂಗ್ ಗಳ ಕಾರ್ಯಕರ್ತರಿವರು. ಅನೇಕ ಪರಿಕಲ್ಪನೆ, ಚಿಂತನೆ, ಅಭಿಪ್ರಾಯ, ವರದಿ.... ಇತ್ಯಾದಿ ಸ್ಟೋರಿಗಳನ್ನು ಫೈಲ್ ಮಾಡೋ ಜರ್ನಲಿಸ್ಟ್ ಜರ್ನಿಯೇ ಈ ಕಥೆ ಹಿಂದಿನ ಕಥೆ.....

#ಹೊಸಪರಿಕಲ್ಪನೆ
#ಈ
#ಕಥೆಹಿಂದಿನಕಥೆ
#ನೋಡಿ #ನಿಮ್ಮ #ಅಭಿಪ್ರಾಯಹಂಚಿಕೊಳ್ಳಿ

Pls Watch Full Video https://youtu.be/iclPI9pTbQE ಕಥೆ ಹಿಂದಿನ...

https://youtu.be/dOxiZrc-koA
03/09/2024

https://youtu.be/dOxiZrc-koA

ಸೋಲಾರ್ ವಿದ್ಯುತ್ ಬಗ್ಗೆ ಎಲ್ಲರಿಗೂ ಗೊತ್ತು ಆದ್ರೆ ಇದ್ಯಾಕೆ ಎಲ್ಲರ ಮನೆ, ಮಠ, ಕಚೇರಿಗೇಕೆ ಇನ್ನೂ ತಲಪುತ್ತಾ ಇಲ್ಲ? ಈ ಪ್ರಶ್ನೆಗೆ ಮ್.....

 ... National Centre for Biological Sciences, ಇದೊಂದು  #ಟಾಟ ಸಮೂಹದ ಸಂಶೋಧನಾ ಕೇಂದ್ರ. ಎಲ್ಲಿದೆ ಗೊತ್ತಾ? ನಮಗೆಲ್ಲರಿಗೂ ಪರಿಚಯ ಇರೋ ಜ...
04/08/2024

... National Centre for Biological Sciences, ಇದೊಂದು #ಟಾಟ ಸಮೂಹದ ಸಂಶೋಧನಾ ಕೇಂದ್ರ. ಎಲ್ಲಿದೆ ಗೊತ್ತಾ? ನಮಗೆಲ್ಲರಿಗೂ ಪರಿಚಯ ಇರೋ ಜಿ ಕೆ ವಿ ಕೆ complex ಆವರಣದಲ್ಲಿ.
ನಿಮ್ಗೆ ಒಂದು ಗಳಿಗೆ ಅಭಿವೃದ್ದಿ, ಸಾಮಾಜ ವಿಜ್ಞಾನ ಅನ್ನೊಳು ಎಲ್ಲಾ ಬಿಟ್ಟು ಈ biological sciences - ಜೈವಿಕ🧚🏾‍♂️ ವಿಜ್ಞಾನ ಕೇಂದ್ರಕ್ಕೆ ಯಾಕೆ ಹೋದ್ಲು ಅಂತ.

ವಿಷ್ಯ ವೇ ಹಾಗಿದೆ. ನನ್ನ ಗೆಳತಿ ಶ್ರೀಮತಿ ಮಗಳು🙋🏽‍♂️ ಆರ್ಟ್ಸ್ ಓದಿ, ಸೃಷ್ಟಿ ಸ್ಕೂಲ್ನಲ್ಲಿ ಕಮ್ಯುನಿಕೇಶನ್ ಮಾಸ್ಟರ್ಸ್ ಮಾಡಿ ಈ ಜೈವಿಕ ವಿಜ್ಞಾನ ಕೇಂದ್ರದಲ್ಲಿ ಅರ್ಚೀವ್ಸ್ ವಿಭಾಗದಲ್ಲಿ ಕೆಲ್ಸ ಮಾಡ್ತಾ ಇರೋ ಸಂಗತಿ ಸ್ವಲ್ಪ ಕುತೂಹಲ ಹುಟ್ಟಿಸಿತ್ತು. ಒಂಥರಾ ಗೋಕುಲಾಷ್ಟಮಿ ಇಮಾಮ್🔥 ಸಾಬ್ ಗೆ ಇರೋ ಸಂಭಂದ ಅಂತ ಅನ್ನಿಸ್ತಾ ಇತ್ತು.

ಆದ್ರೆ, ಕೇಂದ್ರಕ್ಕೆ ಶ್ರೀಮತಿ ಜೊತೆ ಆಸ್ಟ್ರಿಯಾ ರೂಪಾ ಮತ್ತು ಆಕೆ ಮಗ ರಿಶೀಲ್ ಜೊತೆ ಕ್ಯಾಂಪಸ್ಗೆ ಹೋದಾಗ , ಅಲ್ಲಿಯ ಲೈಬ್ರರಿ, ಪ್ರಯೋಗಾಲಯ, ಇಪ್ಪತ್ನಾಲ್ಕು ಗಂಟೆ ಕೆಲ್ಸ 🫢ಮಾಡೋ ವಿಜ್ಞಾನಿಗಳನ್ನ ನೋಡ್ದಾಗ,
" ಅಯ್ಯೋ ಸೈನ್ಸ್ ಇಷ್ಟೋಂದು ಕುತೂಹಲವಾಗಿದೆ ಅಂತ ಮುಂಚೆನೇ ಗೊತ್ತಿದ್ರೆ, ನಾನು ವಿಜ್ಞಾನ ತಗೋತಿದ್ದೆ" ಅಂತ ಅನ್ನಿಸಿತು ಅನ್ನಿ. ಬಹಳ ಕಷ್ಟ ಪಟ್ಟು ಹೈಸ್ಕೂಲ್ ಮುಗಿಸಿದೋಳು ನಾನು.

ಟಾಟ ಸಮೂಹದ ಸಂಶೋಧನಾ ಕೇಂದ್ರ ಅಂದಮೇಲೆ ಕೇಳ್ಬೇಕಾ? ಈ ಕೇಂದ್ರ ಮೊದ್ಲು ನಮ್ಮ ಭಾರತೀಯ ವಿಜ್ಞಾನ ಸಂಸ್ಥೆ ಜೊತೆ ಇತ್ತಂತೆ. ಆಮೇಲೆ ನಿದಾನವಾಗಿ ಪ್ರತ್ಯೇಕವಾಗಿ ಕೋಡಿಗೆ ಹಳ್ಳಿ ಸಹಕಾರ ನಗರದ 1992ನಲ್ಲಿ ಶುರು ಆಯ್ತಂತೆ. ಮರ ಗಿಡ ಅನ್ನೊದು ನಮ್ಮೂರಿಗೆ ಮರೀಚಿಕೆ ಆಗ್ತಾ ಇರೋ ಈ ನಮ್ಮುರಿನಲ್ಲಿ ಎಕರೆ ಗಟ್ಟಲೆ ಹಸಿರು ಅದೂ ಈ 🐏 ಮಳೆ ನಡುವೆ ನೋಡೋ ದು ಒಂದೂ ಅನುಭವ ತಾನೆ?!

ವಿಜ್ಞಾನ ಅಂದ್ರೆ #ವೈಜ್ಞಾನಿಕ ಮನೋಭಾವ ಬೆಳ್ಸಿಕೊಳ್ಳೋದು ಅಂತ ಹೆಚ್ಚನ್ ಹೇಳ್ತಾ ಇದ್ರು. ಆ ದೃಷ್ಟಿಯಿಂದ ಈ ತುಂಬಾ ಇಂಟರೆಸ್ಟಿಂಗ್. ನಿಮ್ಗೆ ಅರ್ಧಂಬರ್ಧ ವಿಷ್ಯ ಗೊತ್ತಿದ್ರೂ ನಿಮ್ಗೆ ಸ್ವಲ್ಪವಾದ್ರು ಸಂಶಯ ಹುಟ್ಟುತ್ತೆ.

ಯಾಕೆ ಅಂತೀರಾ??

#ವಿಜ್ಞಾನ ಅಂದ್ರೆ #ಪ್ರಯೋಗಾಲಯ ಅನ್ನೋದು ಎಲ್ಲರಿಗೂ ಗೊತ್ತಿರೋ ಹಳೇ ವಿಷ್ಯ. ಆದ್ರೆ ಈ ವಿಜ್ಞಾನದ ಹಿಂದೆ ಒಂದು ಚರಿತ್ರೆ ಇದೆ, ಮಾನವ ಅಭಿವೃದ್ಧಿ ಬಗ್ಗೆ ವಿಜ್ಞಾನ ಯಾವ ರೀತಿ ಕೆಲ್ಸ ಮಾಡ್ತಾ ಇದೆ ಅನ್ನೊದನ್ನ ವಿಜ್ಞಾನಿ ಎಮ್ ಎಸ್ ಸ್ವಾಮಿನಾಥನ್ ತರದೋರು, ಸಿ ವಿ ರಾಮನ್, ಬಿ ಎಸ್ ಮಾಧವ ರಾವ್ ತರದೋರು ಆಯಾ ಕ್ಷೇತ್ರದಲ್ಲಿ ಕೆಲ್ಸ ಮಾಡಿರೋ ಮೂಲ ದಾಖಲೆ ಇವೆ. ಅವರೇ ಬರೆದಿರೋ ಟಿಪ್ಪಣಿ, ಪತ್ರ, ಕಚೇರಿ ವ್ಯವಹಾರ 🥸 ಇವೆಲ್ಲ ಸುಮಾರು ಇಪ್ಪತ್ತನೇ ಶತಮಾನದ ಆರಂಭದ ದಿನಗಳ ದಾಖಲೆ ಈ ಕೇಂದ್ರ ದಲ್ಲಿದೆ.

" ನಮ್ಮ #ಆರ್ಕೈವ್ ತುಂಬಾ ಎಜುಕೇಟಿವ್ . ಇಲ್ಲಿಗೆ ಬರೋಕೆ ನೀವು ವಿಜ್ಞಾನ ದ ವಿಧ್ಯಾರ್ಥಿನೇ ಆಗಬೇಕಿಲ್ಲ. ನಮ್ಮ ವೆಬ್ಸೈಟ್ ನಲ್ಲಿ ಕೂಡಾ ನಿಮ್ಗೆ ಮಾಹಿತಿ ಸಿಗುತ್ತೆ. ಇಲ್ಲಿಗೆ ಬಂದ್ರೆ ನಾವು ನಿಮ್ಗೆ 🦮 ಗೈಡ್ ಮಾಡ್ತೀವಿ. ನಾವು ಇದ್ರ ಬಗ್ಗೆ ಸ್ಕೂಲ್ ಕಾಲೇಜಿನಲ್ಲಿ ಜಾಗೃತಿ ಅಭಿಯಾನ ನಡೆಸುತ್ತಲೇ ಇರ್ತೀವಿ. ಜೊತೆಗೆ , ನಮ್ಗೆ ಸಿಕ್ಕಿರೋ ಎಲ್ಲಾ ಮಾಹಿತಿ, ಪತ್ರ , ಚಿತ್ರಗಳು ಹಾಳಾಗದೆ ಇರೋ ರೀತಿ ಅವನ್ನು ರಕ್ಷಿ ಸ್ತೀವಿ" ಅಂತ ಧಾತ್ರಿ ಅವಳ ಸಹೋದ್ಯೋಗಿ ಓಜಾಸ್ ಹೇಳ್ತಾರೆ.

NCBS ಕ್ಯಾಂಪಸ್ ಒಳಗೆ ಹೋದಾಗ, ಅಲ್ಲಿಯ ♎ ಲೈಬ್ರರಿ, ದಿನವಿಡೀ ಓದೋಕೆ, ತಿನ್ನೋಕೆ ಕ್ಯಾಂಟೀನ್ ಸೌಲಭ್ಯ ಇವೆಲ್ಲ 🙂‍↕️ ನೋಡ್ತಾ ಇದ್ದರೆ ಒಂದು ಗಳಿಗೆ ನಿಮ್ಗೂ 🫓 ನಾನು ಮತ್ತೊಮ್ಮೆ ವಿದ್ಯಾರ್ಥಿ ಆಗೋ ಅವಕಾಶ ಸಿಕ್ಕಿದ್ರೆ...... ಅಂತ ಅನ್ನಿಸಿದರೂ ಆಶ್ಚರ್ಯ 🤧 ಇಲ್ಲ.

ಇಲ್ಲಿ ಸಂಪೂರ್ಣ ಯೋಗ್ಯತೆ, ಮೆರಿಟ್ ಆಧಾರದಲ್ಲಿ ಕೆಲ್ಸ ನಡೀತಿದೆ. ಈ 🖥️ ಕಂಪ್ಯೂಟರ್ ಸೈನ್ಸ್, JEE, IIT ಗಲಾಟೆಗಳ ಮಧ್ಯೆ ವಿಜ್ಞಾನ ಅನ್ನೋದು ಮೂಲೆ ಗುಂಪಾಗಿ ಹೋಗಿದೆ. ಪಟ್ಟಣದಲ್ಲೀ ಈ ಪರಿಸ್ಥಿತಿ ಇದೆ ಅಂದ್ರೆ ಇನ್ನು ಹಳ್ಳಿಗಳಲ್ಲಿ ವಿಜ್ನಾನ ವಿಭಾಗ ಹೇಗಿರಬಹುದು ಅಂತ ನೀವೇ ಊಹಿಸಿ ಕೊಳ್ಳಿ.
#ವಿಜ್ಞಾನ #ಅನ್ನೋದು #ಒಂದು #ಮನಸ್ಥಿತಿ
#ನಮ್ಮ #ಮಾಧ್ಯಮ #ಕೊಡ #ಸಂಶೋಧನೆಗೆ #ಸೇರಿದ್ರೆ #......

ಕೆಲವು ವರ್ಷಗಳ ಹಿಂದೆ ನಮ್ಮ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಖಿನ್ನತೆ, ಡಿಪ್ರೆಶನ್ ಬಗ್ಗೆ ಮಾತಾಡೋಕೆ ನಟಿ ದೀಪಿಕಾ ಪಡುಕೋಣೆ ತನ್ನ ಮೇಕಪ್ ಆರ್ಟಿಸ್...
22/06/2024

ಕೆಲವು ವರ್ಷಗಳ ಹಿಂದೆ ನಮ್ಮ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಖಿನ್ನತೆ, ಡಿಪ್ರೆಶನ್ ಬಗ್ಗೆ ಮಾತಾಡೋಕೆ ನಟಿ ದೀಪಿಕಾ ಪಡುಕೋಣೆ ತನ್ನ ಮೇಕಪ್ ಆರ್ಟಿಸ್ಟ್, ಬೌನ್ಸರ್ಸ್, ಮುಂಬೈ ಟು ಬೆಂಗಳೂರು ಬರೋಕೆ ಇವರೆಲ್ಲರಿಗೂ ನಮ್ಮ ಕರ್ನಾಟಕ ಸರ್ಕಾರ ಒಟ್ಟು ಇಪ್ಪತ್ತ ನಾಲ್ಕು ಲಕ್ಷ ಖರ್ಚು ಮಾಡಿತ್ತು. ಕಡೆಗೆ ಆಯಮ್ಮ ಡಿಪ್ರೆಶನ್ ಬಗ್ಗೆ ಮಾತನಾಡಿದ್ದು ಕೇವಲ ಐದಾರು ನಿಮಿಷಗಳಷ್ಟ್ಟೆ... ಯಾವ ಸೀಮೆ ಸಬ್ಜೆಕ್ಟ್ expert ಅಂತ ಸರ್ಕಾರ ಆಯಮ್ಮನ್ನ ಕರೆಸಿ ಜಾಗೃತ ಕಾರ್ಯ ಕ್ರಮ ಮಾಡಬೇಕಿತ್ತು ಅಂತ ಇದರ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿ ನಡೆದಿತ್ತು.
#ಸಿನಿಮಕಲಾವಿದರು #ಶಾಲಕಾಲೇಜುಗಳಿಗೆ #ಅವಶ್ಯವೇ

ಅನ್ನೋ ಪ್ರಶ್ನೆಗೆ ಸಧ್ಯ ಶಾಲಾ ಕಾಲೇಜು ಮಂಡಲಿ ಸರಿಯಾದ ಉತ್ತರ ಕೊಟ್ಟಿದೆ.

"ಇನ್ಮುಂದೆ ಶಾಲಾ ಕಾಲೇಜು ಪ್ರೋಗ್ರಾಮ್ ಗಳಿಗೆ ಸಿನಿಮ, ಟಿವಿ ಅವರನ್ನು ಕರಿಬೇಕಾದ್ರೆ ಹುಷಾರಾಗಿರಿ" ಅಂತ ಪ್ರೈಮರಿ, ಸೆಕೆಂಡರಿ ಶಾಲಾ ಆಡಳಿತ ಮಂಡಳಿ ಸೆಕ್ರೆಟರಿ ಡಿ ಶಶಿ ಕುಮಾರ್ ಹೇಳಿದ್ದಾರೆ.

ನನ್ಗೆ ಇವತ್ತು ಈ ಸುದ್ದಿನ ಬೆಳಿಗ್ಗೆ ಟೈಮ್ಸ್ ನಲ್ಲಿ ಓದಿದ ಕೂಡಲೆ ತುಂಬ ಖುಷಿ ಆಯ್ತು. ನಮ್ಮಲ್ಲಿ ಸಿನಿಮಾದವರನ್ನು ಎಲ್ಲಾ ಶುಭ ಅಶುಭ ಕಾರ್ಯ ಕ್ರಮ ಗಳಿಗೂ ಆಹ್ವಾನಿಸೋದು ತುಂಬಾ ಸಾಮಾನ್ಯ ಆಗಿ ಬಿಟ್ಟಿದೆ.

#ಸಿನಿಮಾದವರೇನು #ಸಮಾಜಸೇವೆ #ಅಂತಬಿಟ್ಟೀಬರೋಲ್ಲ

ನೀವು ಸಿನಿಮ, ಟಿವಿಯವರನ್ನು ನಿಮ್ಮ ಪ್ರೋಗ್ರಾಂ ಗೆ ಆಹ್ವಾನಿಸಬೇಕು ಅನ್ನೋದಾದ್ರೆ, ಮೊಟ್ಟ ಮೊದಲಿಗೆ.....

1. ಅವರವರ ಸ್ಟೇಟಸ್ ಪ್ರಕಾರ ದುಡ್ಡು ಕೊಡ್ಬೇಕು.

2. ಮಸ್ಕ ಹೊಡಿಬೇಕು

3. ಏನು ಮಾತಾಡಬೇಕು ಅನ್ನೊದನ್ನ ನೀವೇ ಹೇಳಿಕೊಡಬೇಕು ಅಂದ್ರೆ ನೀವೇ ಸ್ಕ್ರಿಪ್ಟ್ ರೆಡಿ ಮಾಡಿ ಕೊಡ್ಬೇಕು.

4. ಫೀಸ್ ಬೇರೆ , ಇತರ ಖರ್ಚುಗಳು ಬೇರೆ. ಫೀಸ್ ಜೊತೆ ಪ್ರೋಗ್ರಾಂ ಗೆ ಅವರವರ ಸ್ಟೇಟಸ್ ಗೆ ಸರಿ ಹೋಗೋ ಹಾಗೆ ಕಾರ್, ಡ್ರೈವರ್ ರೆಡಿ ಮಾಡ್ಬೇಕು

5. ಪಬ್ಲಿಸಿಟಿ ಖರ್ಚು

6. ರೆಫ್ರೆಷ್ಮೆಂಟ್ಸ್ ಖರ್ಚು.

7. ಅವರೆದುರು ಹಲ್ಲು ಗಿಂಜುತ್ತಾ ನಿಲ್ಲಬೇಕು.

ಇಷ್ಟೆಲ್ಲಾ ಗಲಾಟೆ ಮುಗಿಯೋ ಹೊತ್ತಿಗೆ ಟೀಚೆರ್ಸ್ ಸುಸ್ತಾಗಿ ಬಿಟ್ಟಿರ್ತಾರೆ. ಮ್ಯಾನೇಜ್ಮೆಂಟ್ ಮನೆಯೋರು ಸೋಶಿಯಲ್ ಮೀಡಿಯಾ ಗಳಲ್ಲಿ ಮೆರೆಯುತ್ತಿರುತ್ತಾರೆ. ಇನ್ನು ಸ್ಟೂಡೆಂಟ್ಸ್
" ಎನ್ ಬುಲ್ ಬುಲ್ ನನ್ನ್ ಜೊತೆ ಬರ್ತೀಯಾ" ಅಂತ ಹುಡ್ಗೀರನ್ನ ಟೀಸ್ ಮಾಡ್ತಾ ಇರ್ತಾರೆ....

#ಸಿನಿಮಾದವರು #ಸೆಲೆಬ್ರಿಟಿ #ಅಂತಹೇಳೋದು
#ಮೊದ್ಲುನಿಲ್ಲಿಸ್ಬೇಕು

ಅಂತರರಾಷ್ಟ್ರೀಯ ಯೋಗಕ್ಕೆ ಆಗಲೇ ಹತ್ತು ವರ್ಷಗಳು..... ಎಷ್ಟು ಬೇಗ ಅನ್ನಿಸುತ್ತೆ ಅಲ್ಲವಾ? Time just fliesಮೋದಿ ಪ್ರಧಾನಿ ಆದ ಬಳಿಕ ಯೋಗಕ್ಕೊಂ...
21/06/2024

ಅಂತರರಾಷ್ಟ್ರೀಯ ಯೋಗಕ್ಕೆ ಆಗಲೇ ಹತ್ತು ವರ್ಷಗಳು..... ಎಷ್ಟು ಬೇಗ ಅನ್ನಿಸುತ್ತೆ ಅಲ್ಲವಾ? Time just flies
ಮೋದಿ ಪ್ರಧಾನಿ ಆದ ಬಳಿಕ ಯೋಗಕ್ಕೊಂಡು ಬ್ರಾಂಡ್ ಮನ್ನಣೆ ಸಿಕ್ಕಿದೆ...
BKS ಅಯ್ಯಂಗಾರ್ ನೇರ ಶಿಷ್ಯ HS ಅರುಣ್ ಶಿಷ್ಯೆ ಯಾಗಿ ಯೋಗ ಜರ್ನಿ ಶುರು ಮಾಡಿದ್ದೇನೆ, ಈಗ ರಾಷ್ಟ್ರೋತ್ಥಾನ ಸಂಸ್ಥೆ ಯಲ್ಲಿ ಮುಂದುವರೆಸ್ತಾ ಇದ್ದೀನಿ...

ಒಂದೊಂದ್ಸಲ ವಿಪರೀತ ಮಾರ್ಕೆಟಿಂಗ್ ಆಗ್ತಾ ಇದೆಯಾ ಅಂತ ಸಹ ಅನ್ನಿಸುತ್ತೆ.

ಹೌದು ರಾಷ್ಟ್ರೋತ್ಥಾನ ಸಂಸ್ಥೆ ನಡೆಸ್ತಿರೋ ಈ ಯೋಗ ದಿನದ ಲ್ಲಿ ಯೋಗಾಭ್ಯಾಸ ಮಾಡ್ತಾ ಇರೋ ಪ್ರತಿನಿತ್ಯ ಅಭ್ಯಸಿಗಳು

#ಯೋಗಒಂದುಬ್ರಾಂಡಾಗಿದೆಯೇ
#ವಿಷಮಾಸನಸಾಹಉಂಟು

https://youtu.be/oAt4wpyzrEA" ಶಮಂತ ಏನೇ ಮಾಡಿದ್ರೂ ರಿಸರ್ಚ್ ಮಾಡಿ, ಒಳ್ಳೇ ಪ್ರಾಜೆಕ್ಟ್ ಮಾಡ್ತಾಳೆ. ಈ ಕಥೆ ಹಿಂದಿನ ಕಥೆ ಕೂಡ ಅಷ್ಟೆ ಚೆನ್...
14/06/2024

https://youtu.be/oAt4wpyzrEA
" ಶಮಂತ ಏನೇ ಮಾಡಿದ್ರೂ ರಿಸರ್ಚ್ ಮಾಡಿ, ಒಳ್ಳೇ ಪ್ರಾಜೆಕ್ಟ್ ಮಾಡ್ತಾಳೆ. ಈ ಕಥೆ ಹಿಂದಿನ ಕಥೆ ಕೂಡ ಅಷ್ಟೆ ಚೆನ್ನಾಗಿ ಬರುತ್ತೆ. ಗುಡ್ ಲಕ್ ಸಾರಥಿ..... ನಮ್ಮ ಮಾಧ್ಯಮ ಮಿತ್ರರ ಬಗ್ಗೆ ಮಾಡ್ತ ಇರೋ ಈ ಪ್ರಾಜೆಕ್ಟ್ ಗೆ ಶುಭವಾಗಲಿ ಅಂತ ಹೇಳ್ತಾ ಇದ್ದೀನಿ. ಒಬ್ಬೊಬ್ಬ ಪತ್ರಕರ್ತರ ಅನುಭವ ಸಹ ದೊಡ್ಡ ಗ್ರಂಥ ಆಗಬಹುದು..." ಅಂತ ಲೇಖಕಿ ಗೆಳತಿ BU ಗೀತಾ ಹೇಳಿದ್ದಾಳೆ. ..
#ಥಾಂಕ್ಸ್ #ಗೀತ
ಈ ಟಿವಿ ಕನ್ನಡ ಚಾನಲ್ ಗೆ ಶ್ರೀಮತಿ ಡಾಟ್ ಕಾಮ್ ಪ್ರೋಗ್ರಾಂ ರೆಕಾರ್ಡಿಂಗ್ ಸಂದರ್ಭದಲ್ಲಿ ಗೀತಳನ್ನು ಮೊಟ್ಟ ಮೊದಲಿಗೆ ಭೇಟಿ ಆದದ್ದು. ಅದಿನ್ನೂ ನೆನ್ನೆ ಮೊನ್ನೆ ಅನ್ನೋ ಹಾಗೆ ಅನಿಸುತ್ತೆ.
#ಕಥೆಕೇಳಿ
#ಲೈಕ್ಮಾಡಿ
#ಶೇರ್ಮಾಡಿ
#ಫಾರ್ವರ್ಡ್ಮಾಡಿ

ನಮ್ಮ ಭಾರತೀಯ ಮಾಧ್ಯಮ ದಲ್ಲೇ ಯಾರೂ ಯೋಚಿಸದ ಪರಿಕಲ್ಪನೆ ಈ ಕಥೆ ಹಿಂದಿನ ಕಥೆ . ಒಬ್ಬೊಬ್ಬ ಪತ್ರಕರ್ತರ ಅನುಭವ ಸಹ ದೊಡ್ಡ ಗ್ರಂಥ ಆಗಬಹುದ.....

https://youtu.be/khJvPJTGa4oಹೆಚ್ ಎನ್ ನಾಗಮೋಹನ್ ದಾಸ್ ನಮ್ಮ ಕಾನೂನು ಅರಿವು ನೆರವು ಸಂದರ್ಭದಲ್ಲಿ ನಿರಂತರ ಸುದ್ದಿಯಲ್ಲಿರುತ್ತಾರೆ. ಸುದ್ಧ...
10/06/2024

https://youtu.be/khJvPJTGa4o
ಹೆಚ್ ಎನ್ ನಾಗಮೋಹನ್ ದಾಸ್ ನಮ್ಮ ಕಾನೂನು ಅರಿವು ನೆರವು ಸಂದರ್ಭದಲ್ಲಿ ನಿರಂತರ ಸುದ್ದಿಯಲ್ಲಿರುತ್ತಾರೆ. ಸುದ್ಧಿ ಅಂದ ಕ್ಷಣ ಪತ್ರಿಕೆ, ಆಕಾಶವಾಣಿ ಕಣ್ಮುಂದೆ ಬರುತ್ತದೆ. ಪತ್ರಕರ್ತರೊಂದಿಗೆ ಇವರ ನಿಕಟ ಸಂಪರ್ಕ, ಕಾನೂನು ದೃಷ್ಟಿಯಿಂದ ಪತ್ರಕರ್ತರು.... ನಮ್ಮ ಕಥೆ ಹಿಂದಿನ ಕಥೆ, Story Behind Story- ಸಂಧರ್ಭದಲ್ಲಿ ಬಹು ಮುಖ್ಯ ಎನಿಸುತ್ತದೆ...
ಸ್ವತಂತ್ರ ಪೂರ್ವದ ಹಿನ್ನಲೆಯಲ್ಲಿ ಮಾತಾಡಿರುವ ನಾಗಮೋಹನ್ ದಾಸ್ ಮಾತು ಬಹು ಮುಖ್ಯ...
#ಕಥೆಬಗ್ಗೆ
#ಲೈಕ್ಮಾಡಿ
#ಶೇರ್ಮಾಡಿ

#ಸಪೋರ್ಟ್ಮಾಡಿ

ಹೆಚ್. ಎನ್. ನಾಗಮೋಹನ್ ದಾಸ್ ನಮ್ಮ ಕಾನೂನು ಅರಿವು ನೆರವು ಸಂದರ್ಭದಲ್ಲಿ ನಿರಂತರ ಸುದ್ದಿಯಲ್ಲಿರುತ್ತಾರೆ. ಸುದ್ಧಿ ಅಂದ ಕ್ಷಣ ಪತ್ರಿಕ....

https://youtu.be/l4D_r6r23U4ಬಿ ಸುರೇಶ್ ನದು ಒಂಥರ ಪ್ಯಾಕೇಜ್ ವ್ಯಕ್ತಿತ್ವ. ಯಾಕೆ ಅಂತೀರಾ? ಒಂದಿನ ರಂಗಭೂಮಿ, ಇನ್ನೊಂದು ದಿನ ಸಿನಿಮ, ಮತ್ತ...
28/05/2024

https://youtu.be/l4D_r6r23U4

ಬಿ ಸುರೇಶ್ ನದು
ಒಂಥರ ಪ್ಯಾಕೇಜ್ ವ್ಯಕ್ತಿತ್ವ. ಯಾಕೆ ಅಂತೀರಾ? ಒಂದಿನ ರಂಗಭೂಮಿ, ಇನ್ನೊಂದು ದಿನ ಸಿನಿಮ, ಮತ್ತೊಂದು ದಿನ ಟಿವಿ, ಮಗದೊಂದು ದಿನ ಕ್ಯಾಮರ ಮುಂದೆ ಡೈಲಾಗ್ ಹೇಳ್ತಾ ಇರ್ತಾರೆ.. ಹಾಗೆ ಹೇಗೋ ಟೈಮ್ ಹೊಂದಿಸಿಕೊಂಡು ಆಗಾಗ್ಗೆ ಪ್ರೊಟೆಸ್ಟ್ ಮಾಡ್ತಾ ಟೌನ್ಹಾಲ್, ಕಲಾಕ್ಷೇತ್ರ ಕಟ್ಟೆಯಲ್ಲಿ ಕುಳಿತು ಕೊಳ್ಳೋ ಈ ಸುರೇಶ ನಮ್ಮೆಲ್ಲರ ಪ್ರೀತಿಯ ಡಾಕ್ಟರ್ ವಿಜಯಾ ಮೇಡಂ ನ ಪ್ರೀತಿಯ ಸುಪುತ್ರ.

ಸ್ವಂತ ಅಮ್ಮನೇ ಯಶಸ್ವಿ ಪತ್ರಕರ್ತೆ ಎಂದಮೇಲೆ ಸುರೇಶ ನ ಒಂದು ಝಲಕ್ ನಮ್ಮ ಕಥೆ ಹಿಂದಿನ ಕಥೆ - Story Behind Story ಗೆ ತುಂಬಾ ಸೂಕ್ತ ಅಲ್ಲವೇ??

ಬಿ ಸುರೇಶ್ ನದು ಒಂಥರ ಪ್ಯಾಕೇಜ್ ವ್ಯಕ್ತಿತ್ವ. ಯಾಕೆ ಅಂತೀರಾ? ಒಂದಿನ ರಂಗಭೂಮಿ, ಇನ್ನೊಂದು ದಿನ ಸಿನಿಮ, ಮತ್ತೊಂದು ದಿನ ಟಿವಿ, ಮಗದೊಂದು...

https://youtu.be/9SLTs-6MtsIಎಂ ಬಿ ಜಯರಾಮ್ ಹೆಸರು ಮತ್ತು ಪಬ್ಲಿಕ್ ರಿಲೇಷನ್ಸ್ ಅನ್ನೋದು ಒಂದಕ್ಕೊಂದು ಬೆಸೆದು ಕೊಂಡಿವೆ ಅಂದ್ರೆ ಯಾರೂ ಹುಬ...
24/05/2024

https://youtu.be/9SLTs-6MtsI
ಎಂ ಬಿ ಜಯರಾಮ್ ಹೆಸರು ಮತ್ತು ಪಬ್ಲಿಕ್ ರಿಲೇಷನ್ಸ್ ಅನ್ನೋದು ಒಂದಕ್ಕೊಂದು ಬೆಸೆದು ಕೊಂಡಿವೆ ಅಂದ್ರೆ ಯಾರೂ ಹುಬ್ಬೇರಿಸೊಲ್ಲ. ಇದೇ ರೀತಿ
ಪತ್ರಿಕೆ ಮತ್ತು ಪಬ್ಲಿಸಿಟಿ - ಒಂದಕ್ಕೊಂದು ಪೂರಕವಾಗಿ ಇರೋ ಕ್ಷೇತ್ರ ಅಂದ್ರೆ ಅತಿಶಯವೂ ಆಗೋಲ್ಲ.
PRO, ಸಾರ್ವಜನಿಕ ಸಂಪರ್ಕ ಅಧಿಕಾರಿ ಅನ್ನೊ ಸಂಘ ಕಟ್ಟಿ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ PRCI - Public Relations Council of India ಅನ್ನೋ ಸಂಸ್ಧೆ ಹುಟ್ಟು ಹಾಕಿರೋದೇ ಈ ಜಯರಾಂ ರವರು. ಹಾಗಾಗಿ ಇವ್ರು ನಮ್ಮ ಕಥೆ ಹಿಂದಿನ ಕಥೆ, Story Behind Story ಬಗ್ಗೆ ಖುಶಿ ಯಿಂದ ಮಾತಾಡಿದ್ದಾರೆ.
" ನಮ್ಮ ಪತ್ರಕರ್ತರನ್ನು ಬಹು ಹತ್ತಿರದಿಂದ ನೋಡಿದ್ದೇನೆ...." ಅಂತ ಹೇಳ್ತಾ ರೆ ಇವ್ರು.

ಹೌದು, ನಾವು ಪ್ರತೀ ದಿನಾ ಪತ್ರಿಕೆ, ಟಿವಿ, ರೇಡಿಯೊ ಅಷ್ಟೇಕೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಒಳಗೊಂಡಂತೆ ಆಯಾ ಕಂಪನಿ, ಸಂಘ ಸಂಸ್ಥೆಗಳ ಕುರಿತು ನೀಡೋ ಮಾಹಿತಿ ಮಾಧ್ಯಮಕ್ಕೆ ಕೊಡೋದೇ ಈ PRಗಳು.

ಇಂಥಹ ವೃತ್ತಿಗೊಂದು ಘನತೆ, ಗೌರವ ಅಷ್ಟೇಕೆ ಹೊಸ ಹುದ್ದೆ ಪ್ರತಿಯೊಂದು ಕಚೇರಿಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಹುದ್ದೆ ಸೃಷ್ಟ್ಟಿ ಆಗಿವೆ. ಹೀಗಾಗಿ ಜಯರಾಮ್ ರವರು ನಮ್ಮ ಕಥೆ ಹಿಂದಿನ ಕಥೆ, STORY BEHIND STORY ಪ್ರೊಜೆಕ್ಟ್ ಬಗ್ಗೆ ಅವರ ಅಭಿಪ್ರಾಯ, ಅನಿಸಿಕೆ ತಿಳಿಸಿದ್ದಾರೆ.

ಅದು ಏನೂ ಅನ್ನೋದು ನೀವೇ ಕೇಳೋದು ವಾಸಿ.

#ಮಾತುಕೇಳಿ #ಕಥೆಬಗ್ಗೆ #ಲೈಕ್ಮಾಡಿ #ಶೇರ್ಮಾಡಿ #ಪ್ರೊಜೆಕ್ಟ್ #ಸಪೋರ್ಟ್ಮಾಡಿ

https://www.youtube.com/watch?v=0M5NmxRhh8k*Just a Minute with Ramesh....ಹೌದು, ನಮ್ಮ ಕಥೆ ಹಿಂದಿನ ಕಥೆ ಪ್ರಾಜೆಕ್ಟ್ ಬಗ್ಗೆ ಒಂದೆ...
19/05/2024

https://www.youtube.com/watch?v=0M5NmxRhh8k

*Just a Minute with Ramesh....

ಹೌದು, ನಮ್ಮ ಕಥೆ ಹಿಂದಿನ ಕಥೆ ಪ್ರಾಜೆಕ್ಟ್ ಬಗ್ಗೆ ಒಂದೆರಡು ಮಾತು ಅಂದಾಗ ಓಹ್ ಶ್ಯೂರ್ ಅಂತ ತಕ್ಷಣ ಒಪ್ಪಿಗೆ ಕೊಟ್ರು, ಫಟಾಫಟ್ ಅಂತ ಒಂದೈದು ನಿಮಿಷದಲ್ಲಿ ರಿಟೇಕ್ ಇಲ್ಲದೆ ನಮ್ಮ ಪ್ರಾಜೆಕ್ಟ್ ಗೆ ಶುಭ ಕೋರಿ ಬಿಟ್ರು.

ರಮೇಶ್ ರವರನ್ನ ಭೇಟಿ ಮಾಡಿದ್ದು ಸರ್ಕಾರದ ಕಂಠೀರವ ಸ್ಟುಡಿಯೋದಲ್ಲಿ. ಎಷ್ಟೋ ವರ್ಷಗಳ ನಂತರ ಆ ಸ್ಟುಡಿಯೋನಲ್ಲಿ ರಮೇಶ್ ಅರವಿಂದ್ ಭೇಟಿ ನನಗೆ ವೈಯಕ್ತಿಕವಾಗಿ Going Back to the School ಅನ್ನೋ ಭಾವನೆ. ಇದಕ್ಕೆ ಪೂರಕವಾಗಿ ರಮೇಶ್ ನಮ್ಮ ಜರ್ನಲಿಸ್ಟ್ ಬಗ್ಗೆ ಅಂತರಾಳದಿಂದ ಮಾತಾಡಿ ದ್ದು ಕೇಳ್ತಾ ಇದ್ದಾಗ ನನ್ನ ಸಿನಿಮ ಜರ್ನಲಿಸಂ ದಿನಗಳು ಜ್ಞಾಪಕಕ್ಕೆ ಬರ್ತಾ ಇತ್ತು.

ಇನ್ನು ರಮೇಶ್ ಅವರ ಭಾಷೆಯಲ್ಲಿ ಹೇಳೋದಾದ್ರೆ Stright from the Heart 🔥 ಮಾತಾಡಿದ್ರು. ಅದು ಅವರ USP. ಅವ್ರು ಮಾತಾಡಿದ್ದನ್ನ
ನೀವೇ ಕೇಳಿ..
#ಕೇಳಿದ್ಮೇಲೆ
#ಲೈಕ್ಮಾಡಿ
#ಶೇರ್ಮಾಡಿ


ಟಿ ವೆಂಕಟೇಶ್ ಅವರ ಅಭಿಮಾನಿ ಪ್ರಕಾಶನ ಸಂಸ್ಥೆ ಒಂದು ರೀತಿಯಲ್ಲಿ On Job Training School ಆಗಿತ್ತು..... ಆಗ .... ಅಂದ್ರೆ ಖಂಡಿತ ಹೊಗಳಿಕೆ ಮ...
15/05/2024

ಟಿ ವೆಂಕಟೇಶ್ ಅವರ ಅಭಿಮಾನಿ ಪ್ರಕಾಶನ ಸಂಸ್ಥೆ ಒಂದು ರೀತಿಯಲ್ಲಿ On Job Training School ಆಗಿತ್ತು..... ಆಗ .... ಅಂದ್ರೆ ಖಂಡಿತ ಹೊಗಳಿಕೆ ಮಾತಾಗೋಲ್ಲ.

ಪತ್ರಿಕೋದ್ಯಮ ಅನ್ನೋದು ಒಂದು ಧರ್ಮ, ಬದಲಾವಣೆಗೆ ಕಾರಣ, ಜನರಿಗೆ ಸರಿಯಾದ ಸುದ್ದಿ ಕೊಡ್ಬೇಕು ಇತ್ಯಾದಿ ಇತ್ಯಾದಿ ಅನ್ನೊ ದಿನಗಳಲ್ಲಿ ಅಂದ್ರೆ, ಕೇವಲ ಒಂದು ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಅಭಿಮಾನಿ ಪ್ರಕಾಶನ ಹತ್ತು ಹಲವು ಜರ್ನಲಿಸ್ಟ್ಗಳನ್ನು ತಯಾರು ಮಾಡಿದೆ.
ಜರ್ನಲಿಸಂ ಶಾಲೆ, ಟ್ರೈನಿಂಗ್ ಸೆಂಟರ್ ತೀರ ಕಡಿಮೆ ಇದ್ದ ದಿನಗಳಲ್ಲಿ ಒಂದಿಷ್ಟು ಸಾಹಿತ್ಯ, ಸಾಂಸ್ಕೃತಿಕ , ಸಾಮಜಿಕ ಚಳುವಳಿ, ಬರೆವಣಿಗೆ ಇದ್ದವರು ಜರ್ನಲಿಸ್ಟ್ ಆಗೋಕೆ ಲಾಯಕ್ಕು ಅನ್ನೋದೇ ಒಂದು ಅರ್ಹತೆ ಆಗಿತ್ತು. ಅಂಥಹ
ದಿನಗಳಲ್ಲಿ ಪ್ರಾರಂಭ ಆದ ಅಭಿಮಾನಿ ಪ್ರಕಾಶನ ಒಂದಲ್ಲ ಎರಡಲ್ಲ ಬರೋಬ್ಬರಿ ಆರೆಂಟು ಪತ್ರಿಕೆ, ಮುದ್ರಣದ ಯೂನಿಟ್ ಮಾತ್ರವಲ್ಲ ಪತ್ರಿಕೋದ್ಯಮಕ್ಕೆ ಅಗತ್ಯವಾದ ಸಿಂಗಲ್ ವಿಂಡೋ ಕೇಂದ್ರ ಶುರುಮಾಡಿದ್ದಾರೆ. ಹತ್ತಾರು ನೂರಾರು ಜರ್ನಲಿಸ್ಟ್ ಗಳು ಇಲ್ಲಿಂದ ತಮ್ಮ ಭವಿಷ್ಯ ಕಂಡು ಕೊಂಡಿದ್ದಾರೆ. ನಿಜವಾದ ಅರ್ಥದಲ್ಲಿ ಅಭಿಮಾನಿ ಪ್ರಕಾಶನ ಅರ್ಥಪೂರ್ಣ ಜರ್ನಲಿಸಂ ಶಾಲೆ. ಎಂಥೆಂಥ ಘಟಾನುಘಟಿಗಳು ಇದ್ರು ಅನ್ನೊದನ್ನ ಇಲ್ಲಿ ಇದ್ರು ನೆನಪಿಸಿ ಕೊಳ್ಳಲಾಗಿದೆ.

ಹೀಗಾಗಿ ನಮ್ಮ ಸೂಪರ್ ಸೀನಿಯರ್ ಜರ್ನಲಿಸ್ಟ್ ಕುರಿತ ಕಥೆ ಹಿಂದಿನ ಕಥೆ - Story behind Story ಹಿನ್ನಲೆಯಲ್ಲಿ ಟಿ ವೆಂಕಟೇಶರವರು ಮಾತಾಡಿರೋದನ್ನ ನೀವೇ ಕೇಳೀ, ನೋಡಿ.
ಲೈಕ್ ಮಾಡಿ ಶೇರ್ ಮಾಡಿ

ಇತ್ತೀಚೆಗೆ ಮಹಿಳಾ ಆಯೋಗ ಕುರಿತು ನಡೆದ ಮೊಟ್ಟ ಮೊದಲ ಸಭೆಯ ವರದಿ
13/05/2024

ಇತ್ತೀಚೆಗೆ ಮಹಿಳಾ ಆಯೋಗ ಕುರಿತು ನಡೆದ ಮೊಟ್ಟ ಮೊದಲ ಸಭೆಯ ವರದಿ

11/05/2024

Story Behind Story
ಕಥೆ ಹಿಂದಿನ ಕಥೆ
ಪ್ರತಿಯೊಬ್ಬರ ಕಥೆ ಹೇಳೋ ಪತ್ರಕರ್ತರ ಕಥೆ ಹೇಳೋಕೆ ಹೊರಟಿದ್ದೇವೆ ನಾನು ಶಮಂತ ಡಿ ಎಸ್ ಮತ್ತು ಶರಣ್.
ಕನ್ನಡ ಪತ್ರಕರ್ತರ ಸ್ಟೋರಿ - ಕಥೆ ಹಿಂದಿನ ಕಥೆ ಯಲ್ಲಿ ದಾಖಲಾಗುತ್ತಿವೆ. ನಮ್ಮ ಹಿರಿಯ ಪತ್ರಕರ್ತರ ಅನುಭವ, ಅನಿಸಿಕೆ, ಬದುಕಿನ ದಾಖಲೆ ಇದು.

ನಮ್ಮ ಈ ಹೊಸ ಪ್ರಯತ್ನಕ್ಕೆ Rtd ಡಿಐಜಿ, ರಾಜ್ಯ ಸಭಾ ಸದಸ್ಯರು ಕೆ ಸಿ ರಾಮಮೂರ್ತಿ ಪತ್ರಕರ್ತರನ್ನು ಹತ್ತಿರದಿಂದ ಕಂಡಿದ್ದಾರೆ ಮತ್ತು ಮುನ್ನುಡಿ ಬರೆದಿದ್ದಾರೆ.

ಇಗೋ ಕೇಳಿ

"ಮಹಿಳಾ ಆಯೋಗ ಅಂದ್ರೆ ಎಷ್ಟೋ ಜನಕ್ಕೆ ಗೊತ್ತಿಲ್ಲ "" ಅನ್ನೋದೇ ಒಂದು ವಿಷಯ ವಾಗಿ ಒಂದು Group Of Concerned Women's Collective  ಇತ್ತೀಚೆಗ...
09/05/2024

"ಮಹಿಳಾ ಆಯೋಗ ಅಂದ್ರೆ ಎಷ್ಟೋ ಜನಕ್ಕೆ ಗೊತ್ತಿಲ್ಲ "" ಅನ್ನೋದೇ ಒಂದು ವಿಷಯ ವಾಗಿ ಒಂದು Group Of Concerned Women's Collective ಇತ್ತೀಚೆಗೆ ಸ್ವಲ್ಪ ಗಂಭೀರ ವಾಗಿಯೇ ಯೋಚಿಸ್ತು ಅಂತ ಹೇಳ್ಬಾದು.

ಆಫ್ ಕೋರ್ಸ್, ಈ ಮೀಟಿಂಗ್ನ ಸಂಘಟಿಸಿದ್ದು ಸಾರಥಿ. ನಮ್ಮ ಜೊತೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮಹಿಳಾ ಸದಸ್ಯರು ಇರೋ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಶನಿ ಗೌಡ, ಉಪಾಧ್ಯಕ್ಷೆ ಡಾಕ್ಟರ್ ಶೀಲಾ ಕೃಷ್ಣ ಮೂರ್ತಿ, ಜನರಲ್ ಸೆಕ್ರೆಟರಿ ಶಶಿ ಕಲಾ, ಮಹಿಳಾ ಅಧ್ಯಯನ ಪ್ರೊಫೆಸರ್ ಡಾಕ್ಟರ್ ಶ್ರೀಮತಿ, ಡಾಕ್ಟರ್ ಶೋಭಾ ರಾಣಿ, ಆರ್ ವಿ ಲಾ ಯುನಿವರ್ಸಿಟಿ ಪ್ರೊಫೆಸರ್ ಡಾಕ್ಟರ್ ಯುಕ್ತಿ, ಆಯೋಗದ ಸದಸ್ಯರಲ್ಲಿ ಒಬ್ಬರಾದ ಗೌರಮ್ಮ ಹಾಗು ಇನ್ನು ಒಂದಿಷ್ಟು ಮಹಿಳೆಯರು ಇದ್ರು ಅನ್ನಿ.
ಈ ಗ್ರೂಫ್ನಲ್ಲಿ ಯಾರ್ಯಾರು ಇದ್ರು ಅನ್ನೋಕೆ ಇದೊಂದು ಝಲಕ್.

ಓಕೆ , ಇಷ್ಠ್ತು ಪೀಠಿಕೆ ಜೊತೆ ಒಂದು ವೇಳೆ ಆಯೋಗದ ಬಗ್ಗೆ ಗೊತ್ತಿದ್ರೆ ಆಯೋಗ ಹೇಗಿರಬೇಕು ಅಂತೀರಿ?

ಈ ಆಯೋಗ ಕೇವಲ ಕೌಟಂಬಿಕ ಕಲಹ, ದೌರ್ಜನ್ಯ ಗಳಿಗೆ ಮಾತ್ರ ಲಿಮಿಟ್ ಆಗ್ಬೇಕಾ? ಅಥವಾ, ಕಾಲ ಕಳೆದಂತೆ ಹೊಸ ಹೊಸ ಪ್ರಾಬ್ಲಮ್ಮು ಇದರೊಳಗೆ ಸೇರಿಸ್ಕೋಬೇಕಾ?

ಅಲ್ದೆ, ಆಯೋಗ ಎಂದ ಕೂಡಲೆ ತುಂಬಾ ಜನಕ್ಕೆ ಅದ್ರಲ್ಲೂ ಗ್ರಾಮಾಂತರ ಜನ್ರಿಗೆ ನೆನಪಿಗೆ ಬರೋದು ಗಂಡ ಹೆಂಡ್ತಿ ಜಗಳ ಅಂತ.

ಇಷ್ಟು ಸಾಲದು ಎಂಬಂತೆ ದರ್ಶನ್, ಜಾರಕಿಹೊಳಿ, ಪ್ರಜ್ವಲ್, ರೇವಣ್ಣ ತರಹ ಜನರ s*x scandals ಅನಾವಶ್ಯಕವಾಗಿ ಮನೆ ಮನೆಯೊಳಗೆ ಹೊಕ್ಕಿಬಿಟ್ಟಿದೆ. ಹೀಗಾಗಿ ಜನ ಸಾಮಾನ್ಯರಿಗೆ
ಆಯೋಗ ಅಂದ್ರೆ ತಪ್ಪು ಕಲ್ಪನೆ ಗಳಿವೆ. ಇಷ್ಟಾದರೂ ವ್ಯವಸ್ಥಿತವಾಗಿ ಜನರಿಗೆ ಜಾಗ್ರತಿ ಮುಡಿಸೋ ಪ್ರಯತ್ನ ಕೂಡ ಆಯೋಗ ಮಾಡಿಲ್ಲ.... ಹೇಗಿದ್ರು ನಮ್ಮ ಟಿವಿ ಚಾನಲ್ ಗಳು ದಿನವಿಡೀ ಸಿನಿಮ , ರಾಜಕಾರಣಿ ಗಳಿಂದ ಆಗೋ ಕೊಲೆ, ರೇಪ್, ಶೋಷಣೆ ಇತ್ಯಾದಿ ಇತ್ಯಾದಿ ಹೇಳೋದ್ರಿಂದ ನಾವ್ಯಾಕೆ ಪ್ರತ್ಯೇಕವಾಗಿ ಆಯೋಗದ ಬಗ್ಗೆ ಹೇಳ್ಬೇಕು ಅನ್ನೊ ಧೋರಣೆಯಲ್ಲಿ ಅದು ಸಹ ಮೌನವಾಗಿಬಿಟ್ಟಿರ ಬಹುದು.

ಇದಕ್ಕೂ ಹೆಚ್ಚಿನ ಇತಿಹಾಸ ಇರೋ ಆಯೋಗದ ಡ್ಯೂಟಿ, ಜವಾಬ್ದಾರಿಗಳಾದ್ರು ಏನು? ಇದರ ಕೆಲ್ಸ ಏನು? ನಮ್ಮ ಕಾನೂನು, ಸಂವಿಧಾನದಲ್ಲಿ ಇರೋ ಸಲಹೆ ಸೂಚನೆಗಳನ್ನ ಆಯೋಗ ಪಾಲಿಸ್ತಾ ಇದ್ಯಾ? ಅನ್ನೊ ಪ್ರಶ್ನೆ ಗಳಿಗೆ ಉತ್ತರ ಸೊನ್ನೆ. ಆಯೋಗ ಒಂದು Quasi Judiciary ಅಂದ್ರೆ ಅರೆ ನ್ಯಾಯಾಂಗ ಅಂತ. ಆದ್ರೆ ಇದು ಒಂದು ನ್ಯಾಯಾಂಗ ಅನ್ನೊ ರೀತಿ ಕೆಲ್ಸ ಮಾಡ್ತಾ ಇದೆಯಾ? ಅನ್ನೋ ಪ್ರಶ್ನೆಗಳಿಗೆ ಉತ್ತರ ಹುಡುಕೋ ಪ್ರಯತ್ನವೇ ಮೊನ್ನೆಯ ಮೀಟಿಂಗ್ನಲ್ಲಿ ನಡೆದದ್ದು . ಒಟ್ಟಾರೆಯಾಗಿ ಹೇಳುವುದಾದರೆ ಬರೀ ಪ್ರಶ್ನೆಗಳೇ ಒಂದಾದ ಮೇಲೊಂದರಂತೆ ಹುಟ್ಟಿಕೊಂಡವೇ ಹೊರತು ಸ್ಪಷ್ಟ ಚಿತ್ರಣವೇ ದೊರಕಲಿಲ್ಲ.

ಈ ಮೀಟಿಂಗ್ ಏರ್ಪಾಡು ಮಾಡಿದ್ದಕ್ಕೂ ಸಹ ಕೆಲವು ಬಲವಾದ ಕಾರಣಗಳಿವೆ. ಅವುಗಳಲ್ಲಿ ಕೆಲವು ಉದಾಹರಣೆ ಅನ್ನೋದಾದ್ರೆ ನಮ್ಮ NCRB - National Crime Report Buero ಪ್ರಕಾರ ಇತ್ತಿಚಿನ ವರ್ಷಗಳಲ್ಲಿ ಓದಿರೋ, ಆರ್ಥಿಕ ಒಾಗಿ ಚೆನ್ನಾಗಿರೋ ಹೆಣ್ಣು ಮಕ್ಕಳು ಆತ್ಮ ಹತ್ಯೆ ಪ್ರಮಾಣ ಹೆಚ್ಚಾಗ್ತಿದೆ, ಮಾನಸಿಕ ಒತ್ತಡ , ಆರ್ಥಿಕ ಅಪರಾಧ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ, ಸೆಕ್ಸ ವರ್ಕರ್ಸ್ ಬಗ್ಗೆಯಾಗಲೀ, ಹಿರಿಯ ಮಹಿಳೆಯರ ಸುರಕ್ಷತೆ, ಒಟ್ಟಾರೆ ಆರೋಗ್ಯ, ಶಿಕ್ಷಣ ಇತ್ಯಾದಿ ವಿಷಯಗಳ ಕುರಿತು ಆಯೋಗ ಒಂಚೂರು ಯೋಚಿಸಿದೆಯಾ???

ಈ ಎಲ್ಲಾ ಕಾರಣದಿಂದಲೆ ಸಮಾನ ಮನಸ್ಸಿನ ಸ್ನೇಹಿತರು ಆಯೋಗದ ಬಗ್ಗೆ ಚರ್ಚೆ ಮಾಡೋಕೆ ಅಂತ ಸೇರಿದ್ವಿ, Group Of Concerned Women's Collective ಒಟ್ಟಿಗೆ ಯೋಚಿಸೋ ಹಾಗಾಯಿತು, ಮುಂದೆ ಯಾವ ರೀತಿ ಕಾರ್ಯ ಕ್ರಮ ಕೈಗೊಳ್ಳ ಬೇಕು ಎಂಬುದು ಮುಖ್ಯ ಾಗಿ ಚರ್ಚೆ ಆಯಿತು.

ಈ ಕಲೆಕ್ಟಿವ್ ಹುಟ್ಟಿಕೊಳ್ಳಲು ಮತ್ತೂಂದು ಬಲವಾದ ಕಾರಣ ಅಂದ್ರೆ ಈ ಬಾರಿಯ ನಮ್ಮ ಲೋಕಸಭಾ ಚುನಾವಣೆ. ಈ ಬಾರಿ ಚುನಾವಣೆಯಂತೂ ತೀರಾ ಅಸಹ್ಯ ರಾಜಕಾರಣ, ಗಲಾಟೆ, ರೇಪ್, ಮರ್ಡರ್ ಒಳ್ಳೇ ಕ್ರೈಂ ವೆಬ್ ಸೀರೀಸ್ ತರಹ ಇತ್ತು. ಹೀಗಾಗಿ ನಾವು ಕೆಲವು ಫ್ರೆಂಡ್ಸ್ ಮಹಿಳಾ ಆಯೋಗ ಏನು ಮಾಡ್ತಾ ಇದೆ ಅಂತ ಮಾತಾಡ್ತಾ ಇದ್ದೆವು. ಇನ್ನು ಕೆಲವ್ರು ಮಹಿಳಾ ಆಯೋಗ ಅಂದ್ರೇನು? ಅಂತ ಕೇಳಿದ್ರು. ಇಂಥಹ ಟೈಂ ನಲ್ಲೆ ನಾನು ಈ ಸರ್ವೇ ಶುರು ಮಾಡಿದ್ದು.
ಕೇವಲ ಇಪ್ಪತ್ತು ಮೂವತ್ತು ಪರ್ಸೆಂಟ್ ಜನಕ್ಕೆ ಮಾತ್ರ ಗೊತ್ತಿದೆಯಾ? ಆಯೋಗದ ಬಗ್ಗೆ ಓದು ಬರಹ ಗೊತ್ತಿರೋ ಜನರಿಗೂ ಗೊತ್ತಿಲ್ಲ ಅನ್ನೋ ವಿಷಯ ಸಹ ಕ್ರಮೇಣ ತಿಳಿದು ಬಂತು. ಹಾಗಿದ್ರೆ ಸರ್ಕಾರ ಈ ಆಯೋಗನ ಯಾಕೆ ಬೆಳೆಸುತ್ತಿದೆ? 1995 ರಿಂದ ಈ ಬಿಳಿ ಆನೆ ಮಹಿಳೆ ಗೋಸ್ಕರ ಅಂತ ಏನು ಘನಂದಾರಿ ಕೆಲಸ ಮಾಡ್ತಾ ಇದೆ? ರಾಜಕಾರಣಿ , ಸಿನಿಮದವರಿಂದ ರೇಪ್, ಲೈಂಗಿಕ ಅನ್ಯಾಯ ಆದ್ರೆ ಮಾತ್ರ ದೊಡ್ಡ ಸುದ್ದಿ ಮಾಡಿ ಕ್ರಮೇಣ ಅದು ಮೌನ ತಾಳುತ್ತೆ . ಮೂರು ಕಾಸಿನ ಕಿಮ್ಮತ್ತೂ ಇಲ್ಲದಿರೊ ಈ ಆಯೋಗ ಆಯಾ ರಾಜಕೀಯ ಪಕ್ಷ ಗಳ ಮೌತ್ ಪೀಸ್ ಆಗಿಬಿಟ್ಟಿದೆಯೇ,?

ಇಂಥಹ ಮಹಿಳಾ ಆಯೋಗ ಬಗ್ಗೆ ಒಂದು ರಿವ್ಯೂ, ಪರಿಶೀಲನೆ ಅಗತ್ಯವಿದೆ ಅಲ್ಲವೇ???

Address


Alerts

Be the first to know and let us send you an email when 90.4 Sarathi Jhalak posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share