24/09/2019
ಎಲ್ಲರಿಗೂ ನಮಸ್ಕಾರ , ಆಗಸ್ಟ್ ೩೦ಕ್ಕೆ, ಒಬ್ಬ ಮಹಾನುಭಾವನ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳ್ಬೇಕು ಅಂತ ಹೇಳಿದ್ದೆ ಆದರೆ ಕೆಲವು ಕಾರಣಗಳಿಂದ ಹೇಳೋಕೆ ಆಗಲಿಲ್ಲ. ಆ ನೀಚನಿಗೆ ಶುಭಾಶಯ ಹೇಳೋಕು ಮುಂಚೆ ಆತನಿಂದ ನೋವನ್ನು ಅನುಭವಿಸಿದವರಲ್ಲಿ ಇಬ್ಬರ ಬಗ್ಗೆ ಹೇಳಿ ಆಮೇಲೆ ಶುಭಾಶಯ ಹೇಳ್ತಿನಿ.
೧. ಒಬ್ಬ ಗೆಳೆಯನಿದ್ದಾನೆ, ಅವನಿಗೆ ೩ನೇ ವರ್ಷದಲ್ಲಿ ಅವನ ಕೆಲವು ಖಾಸಗಿ ಕಾರಣಗಳಿಂದಾಗಿ ಕಾಲೇಜಿಗೆ ಬರೋದಕ್ಕೆ ಆಗೋದಿಲ್ಲ, ಅದರಲ್ಲಿ ಮುಖ್ಯವಾದ ಕಾರಣಗಳು ಆರೋಗ್ಯ ಮತ್ತು ಹಣ, ಆರೋಗ್ಯ ಕೊಡೋಕೆ ಆಗೋಲ್ಲ ಆದರೆ ಹಣ ಕೊಡಬೇಕು ಅಂತ ನಾನು ಮತ್ತು ನನ್ನ ಕೆಲ ಗೆಳೆಯರು ಸೇರಿ ತೀರ್ಮಾನಿಸಿ ಅವನನ್ನ ಕಾಲೇಜಿಗೆ ಬರೋದಕ್ಕೆ ಹೇಳಿದ್ವಿ, ಇನ್ನೂ ಕಾಲೇಜು ಶುರು ಆಗಿರಲಿಲ್ಲ. ಕಾಲೇಜಿಗೆ ಬಂದ ಶುಲ್ಕ ಕಟ್ಟೋಕೆ ನಾನು ೩೦೦೦ ಮತ್ತು ಇನ್ನೊಬ್ಬ ಅವನ ಕೊರಳಲ್ಲಿ ಇದ್ದ ಚಿನ್ನದ ಸರವನ್ನ ಅಡವಿಟ್ಟು ಹಣ ಕೊಡ್ತೀನಿ ಕಾಲೇಜಿಗೆ ಬಾ ಎಂದಾಗ ಬರದೇ ಹಾಗೆ ಮನೆಗೆ ಹೋಗಿಬಿಟ್ಟ, ಬೆಂಗಳೂರಲ್ಲಿ ಬೆಳಗ್ಗೆ ಹೋಟೆಲಿನಲ್ಲಿ ನಿರ್ವಾಹಕನಾಗಿ ಮತ್ತು ರಾತ್ರಿಹೊತ್ತು ಓಲಾ ಕ್ಯಾಬ್ ಓಡಿಸುತ್ತಾ ಆರೋಗ್ಯಕ್ಕೂ, ಕಾಲೇಜಿಗೂ ಸ್ವಲ್ಪ ಹಣ ಸಂಪಾದಿಸಿ ಬಂದ. ಇವನು ಬರುವುದಕ್ಕೂ ಮುಂಚೆಯೇ ಇವನ ಬಗ್ಗೆ ಕಾಲೇಜಿನ ರಾಹು ಕೇತುಗಳಾದಂತಹ ನಾಗಭೂಷಣ್ ಮತ್ತು ಅರವಿಂದ್ ಇವನು ಕಾಲೇಜಿಗೆ ಬಂದಿರಲ್ಲ ನಾವೇ ಫೇಲ್ ಮಾಡಿದೀವಿ ಅಂತ ಸುಳ್ಳು ಹೇಳಿ ಹೀರೋಗಳಾಗಿ ಮಿಂಚಿದ್ದರು. ಅಷ್ಟಕ್ಕೇ ಸುಮ್ಮನಾಗಲಿಲ್ಲ, ಪ್ರತಿದಿನವೂ, ಪ್ರತಿ ತರಗತಿಯಲ್ಲೂ ಇವನದೇ ಉದಾಹರಣೆಗಳು. ಒಂದು ದಿನ ಊಟಕ್ಕೆ ಕೂತಾಗ ನಾನು ಸ್ವಲ್ಪ ಬಾಯಿ ಬಿಟ್ಟು ಮಾತಾಡೋ, ನೀನು ಅನುಭವಿಸಿರೋ ಕಷ್ಟಗಳನ್ನೆಲ್ಲಾ ಹೇಳೋ ಅಂದರೂ ಏನೂ ಹೇಳದೇ ಒಂದು ವರ್ಷ ಇವರಿಬ್ಬರಿಂದ ತುಂಬಾ ಅವಮಾನವನ್ನ ಅನುಭವಿಸಿಬಿಟ್ಟ. ಇವತ್ತು ಒಂದೊಳ್ಳೆ ಕಂಪನಿಯಲ್ಲಿ ಕೆಲಸ ಸಿಕ್ಕಿದೆ(ಅರವಿಂದ್ ಮಾಡುವ ನಕಲಿ ಉದ್ಯೋಗ ಸಂದರ್ಶನದಿಂದ ಅಲ್ಲ, ಅದಕ್ಕೂ ರಾತ್ರಿಯೆಲ್ಲ ಕ್ಯಾಬ್ ಓಡಿಸಿಯೇ ಕೆಲಸ ಪಡೆದಿದ್ದು).
೨. ಒಬ್ಬಳು ವಿದ್ಯಾರ್ಥಿನಿಗೆ ಅಪಘಾತ ಆಗಿ ಎಲ್ಲಾ ವೈದ್ಯಕೀಯ ದಾಖಲೆಗಳ ಜೊತೆ ಬಂದರೂ ಪರೀಕ್ಷೆಗೆ ಅನುಮತಿ ಕೊಡದೇ ದುರಹಂಕಾರ ತೋರಿ ಕಾಲೇಜಿಗೆ ಬಾರದ ಒಬ್ಬ ಹುಡುಗನಿಗೆ ಯಾವ ಪ್ರಶ್ನೆಯನ್ನೂ ಕೇಳದೆ ಅವನನ್ನು ಉತ್ತೀರ್ಣನಾಗುವಂತೆ ನೋಡಿಕೊಂಡ ಮಹಾನುಭಾವ ನಮ್ಮ ನಾಗಭೂಷಣ್.
ಈತ ಒಂದು ದಿನಕ್ಕೂ ಬೋರ್ಡಿನಲ್ಲಿ ಒಂದಕ್ಷರ ಬರೆಯದೇ ಪಾಠ ಮಾಡಿದಂತ ಮಹಾ ಅಜ್ಞಾನಿ, ಕೇಳಿದರೆ ವಿದ್ಯಾರ್ಥಿಗಳು ನಮ್ಮ ತಪ್ಪನ್ನು ಕಂಡು ಹಿಡಿಯುತ್ತಾರೆ ಅದಕ್ಕೆ ನಾನು ಬರೆಯೋದಿಲ್ಲ ಅಂತ ನಾಚಿಕೆಯಿಲ್ಲದೇ ನಮ್ಮ ಮುಂದೆಯೇ ಹೇಳುವಂತ ಗುಣವಂತ.
ಈತನ ಸುಳ್ಳುಗಳನ್ನ ಪಟ್ಟಿ ಮಾಡಬೇಕು.
೧. ಈತನಿಗೆ IBM ಕಂಪನಿಯಲ್ಲಿ GERMAN ದೇಶದಲ್ಲಿರುವ ಕಚೇರಿಗೆ ಕೆಲಸಕ್ಕಾಗಿ ಆಹ್ವಾನ ಬಂದಿತ್ತಂತೆ, ಈತ ಅಲ್ಲಿ ನೆಲ ಒರೆಸಲು ಲಾಯಕ್ಕಿಲ್ಲದಂತ ವ್ಯಕ್ತಿ.
೨. ಈತನ ಬಳಿ ಇಂದಿಗೂ ಅಳಿಯನೊಬ್ಬ ಅದು ಬೆಂಗಳೂರಿನಲ್ಲಿ IBM ನಲ್ಲಿ ಕೆಲಸಕ್ಕೆ ಇರುವವರೊಬ್ಬರು ಬಂದು ಪಾಠ ಹೇಳಿಸಿಕೊಂಡು ಹೋಗಿ ಅಲ್ಲಿ ಕೆಲಸ ಮಾಡುತ್ತಾರಂತೆ. ಬೋರ್ಡ್ ಮೇಲೆ ತಪ್ಪು ಬರೆಯುತ್ತೇನೆ ಅಂತ ಬೋರ್ಡ್ ಹತ್ತಿರವೂ ಹೋಗದ ಬಲೇ ಜಾಣನಿಂದ ಪಾಠ ಹೇಳಿಸಿಕೊಳ್ಳುವಷ್ಟು ದಡ್ಡರು ಈ ಪ್ರಪಂಚದಲ್ಲಿ ಯಾರು ಇಲ್ಲ.
೩. ಈತ ಅನುತ್ತೀರ್ಣನಾಗಿರುವ ಅಕ್ಷರ ಜ್ಞಾನವಿಲ್ಲದ ಅಜ್ಞಾನಿ. ನಕಲಿ ದಾಖಲೆಗಳನ್ನ ಇಟ್ಟುಕೊಂಡು ವಿದ್ಯಾರ್ಥಿಗಳ ಮೇಲೆ ದರ್ಪ ತೋರುವ ದುರಹಂಕಾರಿ.
೪. ಕಾಲೇಜಿನಲ್ಲಿ ಅದೆಷ್ಟು ಹಗರಣಗಳನ್ನ ಮಾಡಿದ್ದರೋ ಲೆಕ್ಕವೇ ಇರಲಿಕ್ಕಿಲ್ಲ ಅನ್ನಿಸುತ್ತೆ.
ನನಗೆ ಬೆದರಿಕೆ ಹಾಕಿದ ಸಂಪೂರ್ಣ ಮಾತುಕಥೆಯನ್ನ ಬರೆದಿದ್ದೇನೆ.
ನಮ್ಮ ಧಮ್ಕಿ ಸ್ಟಾರ್ ಜಗದೀಶ್ ಕರೆ ಮಾಡಿ ಬೆದರಿಕೆ ಹಾಕುವುದಕ್ಕೂ ಮುನ್ನ ನನಗೆ ಕರೆ ಮಾಡುತ್ತಾರೆ.
ನಕಲಿ ಸ್ಟಾರ್ : ಹಲೋ ಪವನ್ ಅಹ್?
ನಾನು : ಹೌದು, ನೀವು ಯಾರು?
ನಕಲಿ ಸ್ಟಾರ್ : ನಾನು ನಾಗಭೂಷಣ್ SJMIT ಇಂದ.
ನಾನು : ನಾನು ಒಂದು ಕಚೇರಿಯ ಸಭೆಯಲ್ಲಿ ಇದ್ದೀನಿ, ಸ್ವಲ್ಪ ಸಮಯದ ನಂತರ ಮಾತಾಡ್ತೀನಿ.
(ಎಷ್ಟು ಹೇಳಿದರು ಕೇಳದೆ ನಾಲ್ಕೈದು ಬಾರಿ ಕರೆ ಮಾಡಿದಾಗ ಆಮೇಲೆ ನಾನೇ ಮಾಡಿದೆ)
ನಾನು : ಹಾ ಹೇಳಿ.
ನಕಲಿ ಸ್ಟಾರ್ : ಏನು ಕಾಲೇಜಿನ ಬಗ್ಗೆ ತುಂಬಾ ಬರಿತಿದ್ದೀಯಾ?
ನಾನು : ಏನು ಇದೆಯೋ ಅದನ್ನೇ ಬರಿತಿದ್ದೀನಿ.
ನಕಲಿ ಸ್ಟಾರ್ : ಇದೆಲ್ಲಾ ಒಳ್ಳೇದಲ್ಲಾ ಬಿಟ್ಟುಬಿಡು.
ನಾನು : ಬೆದರಿಕೆ ನಾ? ನಾನು ಬರೆದಿರುವುದರಲ್ಲಿ ಒಂದನ್ನು ಸುಳ್ಳು ಅಂತ ನಿರೂಪಿಸಿ.
ನಕಲಿ ಸ್ಟಾರ್ : ಇದನ್ನೆಲ್ಲಾ ನೋಡಿಕೊಳ್ಳೋಕೆ ಇದ್ದಾರೆ. ನೀನು ಎಲ್ಲವನ್ನೂ ತೆಗೆದು ಹಾಕಿ, ನಿನ್ನ ಜೀವನ ನೋಡಿಕೋ.
ನಾನು : ಆಗೋದಿಲ್ಲ.
ನಕಲಿ ಸ್ಟಾರ್ : ಇದು ಒಳ್ಳೇದಲ್ಲ ಅತಿಯಾಗಿ ಆಡಬೇಡವೋ.
ನಾನು : ನೀವೆಲ್ಲ ಅಳತೆಮೀರಿ ಕಾಲೇಜನ್ನ ಹಾಳು ಮಾಡಿದ್ದೀರ ಅದಕ್ಕೆ ಬರೆಯೋದು ನಿಲ್ಲಿಸೋದಕ್ಕೆ ಆಗೋದಿಲ್ಲ.
ನಕಲಿ ಸ್ಟಾರ್ : ಇಲ್ಲಿಗೆ ನಿಲ್ಲಿಸು. ಸುಮ್ಮನೆ ದೊಡ್ಡದು ಮಾಡಿ ಜೀವನ ಹಾಳು ಮಾಡಿಕೊಳ್ಳಬೇಡ.
ನಾನು : ನೋಡೋಣ.
ಇನ್ನೂ ಜಾಸ್ತಿ ಮಾತುಕತೆ ನಡೆದು ನಮ್ಮ ಧಮ್ಕಿ ಸ್ಟಾರ್ ಜಗದೀಶ್ ಕರೆ ಮಾಡಿ ತುಂಬಾ ರೋಷಾವೇಶದಿಂದ ಮಾತಾಡಿ ಏನೂ ಆಗಲ್ಲ ಅಂದಾಗ ಅಲ್ಲೇ ಪಕ್ಕದಲ್ಲೇ ನಿಂತಿದ್ದ ನಮ್ಮ ನಕಲಿ ಸ್ಟಾರ್ ಕೈಯ್ಯಲ್ಲಿ ದಾವಣಗೆರೆಯಲ್ಲಿ ನಡೆಯುತ್ತಿರುವ ಮದುವೆಯಲ್ಲಿ ಇದ್ದೀನಿ ಅಂತ ಕರೆಮಾಡು ಅಂತ ಹೇಳಿಕೊಟ್ಟು ಕರೆ ಮಾಡಿಸುತ್ತಾರೆ.
ನಕಲಿ ಸ್ಟಾರ್ : ಹಲೋ ನಾನು ನಾಗಭೂಷಣ್ ಕಣಪ್ಪ.
ನಾನು : ಹೇಳಿ.
ನಕಲಿ ಸ್ಟಾರ್ : ಬರೆಯೋದು ನಿಲ್ಲಿಸು.
ನಾನು : ಆಗಲ್ಲ. ನಿಮ್ಮ ಕಾಲೇಜಿನಿಂದ ಯಾರೋ ಒಬ್ಬ ಕರೆ ಮಾಡಿ ನನ್ನ ಖಾಸಗಿ ಜೀವನ ಮಾಡುತ್ತೀನಿ ಅಂತ ಹೇಳಿದ್ದಾನೆ, ನಾನು ನಿಲ್ಲಿಸೋದಿಲ್ಲ. ಏನಾಗುತ್ತೆ ಅಂತ ನಾನು ನೋಡ್ತೀನಿ.
ನಕಲಿ ಸ್ಟಾರ್ : ಹೇ ಅದೆಲ್ಲಾ ಆಗಲ್ಲ ಬಿಡಪ್ಪ. ನೀನು ಬರೆಯೋದು ನಿಲ್ಲಿಸು ನಾನು ಅದನ್ನೆಲ್ಲಾ(ನಾನು ಬರೆದಿದ್ದನ್ನೆಲ್ಲಾ) ಮಾಡಿಸುತ್ತೀನಿ.
ನಾನು : ಮಾಡಿದರು ಮಾಡಿಸದೇ ಇದ್ದರು ನಾನು ಬರೆಯುತ್ತೇನೆ.
ನಕಲಿ ಸ್ಟಾರ್ : ಸುಮ್ಮನೆ ದ್ವೇಷ ಕಟ್ಟಿಕೊಳ್ಳಬೇಡವೋ, ನಮಗೆ ಎಲ್ಲಾ ವಿದ್ಯಾರ್ಥಿಗಳು ಒಂದೇ ಅನ್ನೋಥರ ನೋಡಿಕೊಂಡಿದ್ದೇವೆ.
ನಾನು : ಹಾಗಾದರೆ ನನ್ನ ಗೆಳೆಯನಿಗೆ ಕೊಟ್ಟ ಕಿರುಕುಳ? ಅಪಘಾತವಾದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯದ ಹಾಗೆ ಮಾಡಿ ಕಾಲೇಜಿಗೆ ಅಲೆದಾಡುವಂತೆ ಮಾಡಿದ್ದೂ?
ನಕಲಿ ಸ್ಟಾರ್ : (ಬಾಯಲ್ಲಿ ಮಾತು ಹೊರಡದೆ ಎರಡು ಸೆಕೆಂಡ್ ಸುಮ್ಮನೆ ಇದ್ದು) ಪವನ್ ಅದೆಲ್ಲಾ ಕಾಲೇಜಿನ ವಿಷಯ.
ನಾನು : ನಾನು ಬರೆದಿರೋದು ಅದನ್ನೇ. ನಿಮ್ಮ ಕೈಲಿ ಆದರೆ ಸರಿ ಪಡಿಸಿ, ಇಲ್ಲ ನಾನು ಸರಿಪಡಿಸುವ ಹಾಗೆ ಮಾಡ್ತೇನೆ.
ನಕಲಿ ಸ್ಟಾರ್ : ಇದರ ಮೇಲೆ ನಿನಗೆ ಬಿಟ್ಟಿದ್ದು.
ಇದಾದ ಕೆಲವೇ ದಿನಗಳಲ್ಲಿ ಕಾಲೇಜಿನ webpage ಬದಲಾಗುತ್ತೆ, ನಾನು ಯಾವುದನ್ನೂ ಉಲ್ಲೇಖಿಸಿದ್ದೇನೋ ಅದನ್ನ ತೆಗೆದು ಹಾಕ್ತಾರೆ. ಮತ್ತೆ ಹಾಕಿದ್ದಾರೆ ಕೂಡ.
ಕೆಲವು ತಿಂಗಳ ಹಿಂದೆ ಈಗಿರುವ ಶಾಂತಪ್ಪ ಎಂಬುವ ಪ್ರಾಂಶುಪಾಲರು ೧೬ಕೋಟಿ ಅಕ್ರಮವನ್ನೆಸಗಿದ್ದಾರೆ ಅಂತ ಸುದ್ದಿಯಾಗಿತ್ತು. ಬಂಧನ ಭೀತಿಯಿಂದ ಆತ ಓಡಿಹೋಗಿ ನಮ್ಮ ಕಾಲೇಜಿನ ಗೌರವವನ್ನ ಹೆಚ್ಚಿಸಿದ್ದಾಗ ನಮ್ಮ ನಕಲಿ ಸ್ಟಾರ್ ಅವರೇ ತಾತ್ಕಾಲಿಕ ಪ್ರಾಂಶುಪಾಲರಾಗಿ ಯಾವ ನಾಚಿಕೆಯಿಲ್ಲದೇ ಕುರ್ಚಿಮೇಲೆ ಕುಳಿತು ಸ್ವಲ್ಪ ದರ್ಪ ತೋರಿ ಇವಾಗ ಮಕಾಡೆ ಮಲಗಿದ್ದಾರೆ.
ಹೊಸ ಸುದ್ದಿ ಏನಂದರೆ ಕಾಲೇಜಿನಿಂದ ಅವರ ನಕಲಿ ಅಂಕಪಟ್ಟಿಗಳನ್ನ ತೆಗೆದುಕೊಂಡು ಹೋಗಿ ಮನೆಯಲ್ಲಿ ಒಲೆಗೆ ಹಾಕಲು ಹೇಳಿದ್ದರಂತೆ. ಇದೊಂದು ತುಂಬಾ ಖುಷಿಯ ವಿಚಾರ ನನಗೆ.
ಹೇಗೆಲ್ಲಾ ಬೆದರಿಕೆ ಹಾಕಿದ್ದಂತಹ, ಕಾಲೇಜಿನ ಬೆಳವಣಿಗೆಗೆ ಹಾಗೂ ಮಕ್ಕಳ ಭವಿಷ್ಯಕ್ಕೆ ರಾಹು ಕೇತುವಿನಂತಿದ್ದ ಅಣ್ಣ ತಮ್ಮಂದಿರಿಗೆ ಮನೆಗೆ ಹೋಗಲು ಹೇಳಿರುವುದು ಒಂದು ಒಳ್ಳೆಯ ಬೆಳವಣಿಗೆ.
ಇನ್ನಾದರೂ ವಿದ್ಯಾರ್ಥಿಗಳು ಅವರಿಗೆ ಪಾಠ ಮಾಡುವ ಅಧ್ಯಾಪಕರ ವಿದ್ಯಾರ್ಹತೆ ಎಲ್ಲವನ್ನೂ ತಿಳಿಯುವಂತಾಗಲಿ, ಅವರ ಆಸೆಗಳು ಈಡೇರುವಂತಾಗಲಿ.
ಕೊನೆಯಲ್ಲಿ ತಡವಾಗಿಯಾದರೂ ಶುಭಾಶಯ ಹೇಳದೇ ಇದ್ದರೆ ತಪ್ಪಾಗುತ್ತೆ.
"ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ನಕಲಿ ಅಂಕಪಟ್ಟಿಯ ಅಹಂಕಾರಿ ಅಜ್ಞಾನಿ ಅಧ್ಯಾಪಕರಿಗೆ"
ಇದನ್ನು ಓದಿದಮೇಲೆ ದಯವಿಟ್ಟು ಯಾರೂ ವಿದ್ಯೆ ಕಲಿಸಿದ ಗುರುಗಳು ಹಾಗೆ ಹೀಗೆ ಅಂತ ಉಪದೇಶ ಮಾಡಬೇಡಿ. ಅನುಭವಿಸಿದವರಿಗೆ ಮಾತ್ರ ಈ ನೋವುಗಳೆಲ್ಲಾ ಅರ್ಥ ಆಗೋದು. ಒಮ್ಮೆ ನನ್ನ ಗೆಳೆಯನ ಕಷ್ಟಗಳನ್ನ ಅವನ ಬಾಯಲ್ಲೇ ಕೇಳಿ.
ಇದೆಲ್ಲದರ ಜೊತೆಗೆ ಆಡಳಿತಾಧಿಕಾರಿಯವರನ್ನ ವಜಾ ಮಾಡಿರುವುದು ಒಂದು ಒಳ್ಳೆಯ ಸಂಗತಿ. ನಾನು ಅವರ ಬಳಿ ಇದೆಲ್ಲದನ್ನ ಹೇಳಿದಾಗ ಈ ರಾಹು ಕೇತುಗಳನ್ನ ಬೆಂಬಲಿಸಿಯೇ ಮಾತನಾಡಿದ್ದರು. ಏನೇ ಆಗಲಿ ಶಿಕ್ಷಣ ಸಂಸ್ಥೆಗಳಲ್ಲಿ ಹೊಲಸು ಕೆಲಸ ಮಾಡುವ ಕಳ್ಳರು ಅಂತ್ಯ ಕಾಣಲೇಬೇಕು.
Mr.Nagbhushan saved a person from the issue where culprit made a big mistake and main accused in the loss(It is enough if he understands it).
Very soon I will write a post about how Nagabhshan and Aravind are the reason behind the slow down of admission.