Chapter: 02
Shloka : 47
कर्मण्येवाधिकारस्ते
मा फलेषु कदाचन।
मा कर्मफल-हेतुर्भूः
मा ते सङ्गोस्त्वकर्मणि॥૪७॥
Shloka 2.47
karmaNyevaadhikaaraste
maa phaleShu kadaachana!
maa karmaphala- heturbhoohu
maate sangostvakarmaNi !!
Meaning of Shloka 2.47
(When you decide to be in yoga state, then) you never expect the result of your deeds (since the expectation leads to bondage, and to be in yoga means to overcome the bondage).
(If someone works with the great hope of results then they have to be responsible for the result, so...) don't be responsible for the result.
Being so one can not do bad work and get rid of its results (hence one should not do a work which should not be done). Or out of no interest in the result one cannot avoid the duties to be done.
ಶ್ಲೋಕ ೨.೪೭
ಕರ್ಮಣ್ಯೇವಾಧಿಕಾರಸ್ತೇ
ಮಾ ಫಲೇಷು ಕದಾಚನ!
ಮಾ ಕರ್ಮಫಲಹೇತುರ್ಭೂಃ
ಮಾ ತೇ ಸಂಗೋಸ್ತ್ವಕರ್ಮಣಿ!!
ಶ್ಲೋಕ ೨.೪೭ರ ಅರ್ಥ
(ಯೋಗಸ್ಥಿತಿಯಲ್ಲಿ ಸ್ಥಿರವಾಗಿ ಇರಲು ನಿರ್ಧರಿಸಿದ ಮೇಲೆ...) ನೀನು ಮಾಡುವ ಕರ್ತವ್ಯ ಕರ್ಮಗಳ ಫಲದ ಅಪೇಕ್ಷೆ ಇಟ್ಟುಕೊಳ್ಳಬೇಡ (ಏಕೆಂದರೆ ಕರ್ಮಫಲದ ಅಪೇಕ್ಷೆಯು ಕರ್ಮಬಂಧನಕ್ಕೆ ಕಾರಣವಾಗುತ್ತದೆ. ಯೋಗಸ್ಥಿತಿಯಲ್ಲಿ ಇರುವುದೆಂದರೆ ಕರ್ಮಬಂಧನದಿಂದ ಬಿಡುಗಡೆ). (ಫಲದ ಅಪೇಕ್ಷೆಯಿಂದಲೇ ಕರ್ಮ ಮಾಡಿದವರು ಕರ್ಮಫಲದ ಕಾರಣಕರ್ತರಾಗುತ್ತಾರೆ. ಮಾಡಿದ್ದುಣ್ಣೋ ಮಹರಾಯ ಎಂಬಂತೆ
Chapter: 02
Shloka : 13
देहिनोस्मिन् यथा देहे
कौमारं यौवनं जरा।
तथा देहान्तर-प्राप्तिः
धीरस्तत्र न मुह्यति॥१३॥
Shloka 2.13
dehinosmin yathaa dehe
kaumaarañ yauvanañ jaraa!
tathaa dehaantar- praaptihi
dheerastatra na muhyati !!
Meaning of Shloka 2.13
The 'person' in the body experiences childhood, youth and old age in a 'body'. In the same way one gets a different body.
So wise people never get disturbed (by the changes).
ಶ್ಲೋಕ ೨.೧೩
ದೇಹಿನೋಸ್ಮಿನ್ ಯಥಾ ದೇಹೇ
ಕೌಮಾರಂ ಯೌವನಂ ಜರಾ!
ತಥಾ ದೇಹಾಂತರ-ಪ್ರಾಪ್ತಿಃ
ಧೀರಸ್ತತ್ರ ನ ಮುಹ್ಯತಿ!!
ಶ್ಲೋಕ ೨.೧೩ ರ ಅರ್ಥ
ಈ 'ದೇಹ'ವನ್ನು ಹೊಂದಿರುವ 'ವ್ಯಕ್ತಿ'ಯು ಈ ದೇಹದಲ್ಲಿ ಬಾಲ್ಯ, ಯೌವನ, ಮುಪ್ಪುಗಳನ್ನು ಕಾಣುತ್ತಾನೆ. ಹಾಗೆಯೇ ಬೇರೆ ದೇಹವನ್ನು ಕೂಡ ಪಡೆಯುತ್ತಾನೆ. ತಿಳಿದವರು (ದೇಹದ ಬದಲಾವಣೆಗಳಿಂದ) ಗೊಂದಲಗೊಳ್ಳುವುದಿಲ್ಲ.
#bhagavadgita #krishna #motivation #spirituality #god #believer #bhakti #hindu #sanatandharma #Hinduism #karma #Arjun #ayodhyarammandir #jaishriram #Gyanvapi #omnamahshivaya #mathuravrindavan #jaishreekrishna #yogi #Namo
Chapter: 02
Shloka : 08
न हि प्रपश्यामि ममापनुद्यात्
यच्छोकमुच्छोषणमिन्द्रियाणाम्।
अवाप्यभूमावसमपत्नमृद्धम्
राज्यं सुराणामपि चाधिपत्यम्॥
Shloka 2.8
na hi prapashyaami mamaapanudyaat,
yachchokamuchchoShaNamindriyaaNaam!
avaapya bhoomaavasaptnamrddham
raajañ suraaNaamapi chaadhipatyam!!
Meaning of Shloka 2.8
I don't know how would I get rid of this highly disturbing sorrow. Even after getting rich kingdom on the earth having no enemies or even if I become king of the heavens, (I don't think I can get rid of this despondence)
ಶ್ಲೋಕ ೨.೮
ನ ಹಿ ಪ್ರಪಶ್ಯಾಮಿ ಮಮಾಪನುದ್ಯಾತ್,
ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಮ್!
ಅವಾಪ್ಯಭೂಮಾವಸಪತ್ನಮೃದ್ಧಮ್
ರಾಜ್ಯಂ ಸುರಾಣಾಮಪಿ ಚಾಧಿಪತ್ಯಮ್!!
ಶ್ಲೋಕ ೨.೮
ನನ್ನ ದೇಹ ಮನಸ್ಸುಗಳನ್ನು ಆವರಿಸಿರುವ ಈ ದಾರುಣ ದುಃಖದಿಂದ ಬಿಡುಗಡೆ ಹೇಗೆ ಎಂದೇ ನನಗೆ ತೋಚುತ್ತಿಲ್ಲ. ಶತೃಗಳೇ ಇಲ್ಲದ ಸಮೃದ್ಧವಾದ ಸಾಮ್ರಾಜ್ಯವೇ ಈ ಭೂಮಿಯ ಮೇಲೆ ದೊರೆತರೂ ಅಥವಾ ಸ್ವರ್ಗದ ಆಧಿಪತ್ಯವೇ ಸಿಕ್ಕಿದರೂ (ನನಗೆ ಈ ದುಃಖದಿಂದ ಬಿಡುಗಡೆ ಸಿಗಲ್ಲ ಅನಿಸುತ್ತೆ.)
#bhagavadgita #hinduism #krishna #karma #Arjun #ayodhyarammandir #jaishriram #Gyanvapi #omnamahshivaya #mathuravrindavan #jaishreekrishna #yogi #Namo #vedic #illusion #spiritual #self
Chapter: 02
Shloka : 07
कार्पण्यदोषोपहत- स्वभावः
पृच्छामि त्वां धर्मसम्मूढचेताः।
यच्छ्रेयस्स्यान्निश्चितं ब्रूहि तन्मे
शिष्यस्तेहं शाधि मां त्वां प्रपन्नम्॥७॥
Shloka 2.7
kaarpaNya- doShopahata- svabhaavaha,
prchchaami tvaan dharma-sammooDhachetaaha!
yachchreyasyaannishchitam broohi tanme
shiShyasteham shaadhi maan tvaam prapannam!!
Meaning of shloka 2.7
I think my nature is affected by mean thinking. I'm totally confused as to what to do and what is right. I am your disciple and I surrender myself to you, please tell me clearly what is right!
ಶ್ಲೋಕ ೨.೭
ಕಾರ್ಪಣ್ಯದೋಷೋಪಹತ- ಸ್ವಭಾವಃ
ಪೃಚ್ಛಾಮಿ ತ್ವಾಂ ಧರ್ಮಸಂಮೂಢಚೇತಾಃ!
ಯಚ್ಛ್ರೇಯಸ್ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ
ಶಿಷ್ಯಸ್ತೇಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್!!
ಶ್ಲೋಕ ೨.೭ ರ ಅರ್ಥ
ನನ್ನ ಸ್ವಭಾವ ವಿರುದ್ಧವಾಗಿ ಸಂಕುಚಿತವಾಗಿ ಯೋಚಿಸುತ್ತಿರುವಂತೆ ಕಾಣುತ್ತಿದೆ. ಸರಿ ಯಾವುದು ಎಂದು ಗೊತ್ತಾಗದಷ್ಟು ಗೊಂದಲಕ್ಕೆ ಒಳಗಾಗಿದ್ದೇನೆ. ನಾನು ನಿನ್ನ ಶಿಷ್ಯ. ನಿನಗೇ ಶರಣಾಗಿದ್ದೇನೆ. ಏನು ಮಾಡಿದರೆ ಒಳ್ಳೆಯದು ಎಂದು ಸ್ಪಷ್ಟವಾಗಿ ತಿಳಿಸಿಕೊಡು ಎಂದು ನಿನ್ನನ್ನು ಪ್ರಾರ್ಥಿಸುತ್ತೇನೆ.
#bhagavadgita #krishna #motivation #spirituality #god #believer #bhakti #hindu #sanatandharma #Hinduism #karma #Arjun
Chapter: 02
Shloka : 06
न चैतद्विद्मः कतरन्नो गरीयः
यद्वा जयेम यदि वा नो जयेयुः।
यानेव हत्वा न जिजीविषामः
तेवस्थिताः प्रमुखे धार्तराष्ट्राः॥
Shloka 2.6
na chaitadvidmah kataranno gareeyaha,
ydvaa jayema yadi va no jayeyuhu!
yaaneva hatvaa na jijeeviShaamaha,
tevasthitaaf pramukhe dhaartaraaShTraaha!!
Meaning of Shloka 2.6
We don't know which chance is higher, we are going to win or they are going to win over us. After killing whom, we don't want to live, those Dhrirarashtra's sons are here to fight.
ಶ್ಲೋಕ ೨.೬
ನ ಚೈತದ್ವಿದ್ಮಃ ಕತರನ್ನೋ ಗರೀಯಃ
ಯದ್ವಾ ಜಯೇಮ ಯದಿ ವಾ ನೋ ಜಯೇಯುಃ!
ಯಾನೇವ ಹತ್ವಾ ನ ಜಿಜೀವಿಷಾಮಃ
ತೇವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ!!
ಶ್ಲೋಕ ೨.೬ ರ ಅರ್ಥ
ಯಾವ ಸಾಧ್ಯತೆ ಹೆಚ್ಚು ಅಂತ ನಮಗೆ ಗೊತ್ತಿಲ್ಲ. ನಾವೇ ಗೆಲ್ಲುತ್ತೇವೆಯೋ, ಅವರೇ ನಮ್ಮನ್ನು ಗೆಲ್ಲುತ್ತಾರೋ!!
ಯಾರನ್ನು ಸಾಯಿಸಿದ ಮೇಲೆ, ನಾವು ಬದುಕಿರಲು ಬಯಸುವುದಿಲ್ಲವೋ ಆ ಧೃತರಾಷ್ಟ್ರನ ಮಕ್ಕಳು ಯುದ್ಧಮಾಡಲು ಇಲ್ಲಿ ಸೇರಿದ್ದಾರೆ.
#bhagavadgita #krishna #motivation #spirituality #god #believer #bhakti #hindu #sanatandharma #Hinduism #karma #Arjun #ayodhyarammandir #jaishriram #Gyanvapi #omnamahshivaya #mathuravrindavan #jaishreekrishna #yogi #Namo
Chapter: 02
Shloka : 03
क्लैब्यं मा स्म गमः पार्थ
नैतत्त्वय्युपपद्यते।
क्षुद्रं हृदय-दौर्बल्यम्
त्यक्त्वोत्तिष्ठ परन्तप॥३॥
Shloka 2.3
klaibyam maa sma gamaf paartha,
naitattvayyupapadyaté!
kShudrañ hrdaya- daurbalyam
tyaktvottiShTha parantapa!!
Meaning of shloka 2.3
O! Paartha (Arjuna), don't be timid like this, it doesn't befit you. Overcome this silly faint heartedness, and stand up, you are terrible to the enemies!
ಶ್ಲೋಕ ೨.೩
ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ,
ನೈತತ್ವೈಯ್ಯುಪಪದ್ಯತೇ!
ಕ್ಷುದ್ರಂ ಹೃದಯ-ದೌರ್ಬಲ್ಯಮ್
ತ್ಯಕ್ತ್ವೋತ್ತಿಷ್ಠ ಪರಂತಪ!!
ಶ್ಲೋಕ ೨.೩ ರ ಅರ್ಥ
ಹೇ ಪಾರ್ಥ(ಅರ್ಜುನ)! ಈ ರೀತಿ ನೀನು ನಿಷ್ಕ್ರಿಯನಾಗಬೇಡ, ನಿನ್ನ ಸ್ವಭಾವಕ್ಕದು ಸರಿ ಹೊಂದುವುದಿಲ್ಲ. ಇಂಥ ಕ್ಷುಲ್ಲಕವಾದ ಭಾವನೆಗಳ ದೌರ್ಬಲ್ಯವನ್ನು ಬಿಟ್ಟು, ಎದ್ದು ನಿಲ್ಲು. ನೀನೆಂದರೆ ಶತ್ರುಗಳು ಹೆದರಿ ನಡುಗುತ್ತಾರೆ!
#bhagavadgita #krishna #motivation #spirituality #god #believer #bhakti #hindu #sanatandharma #Hinduism #karma #Arjun #ayodhyarammandir #jaishriram #Gyanvapi #omnamahshivaya #mathuravrindavan #jaishreekrishna #yogi #Namo
Chapter: 02
Shloka : 02
श्री भगवान् उवाच -
कुतस्त्वा कश्मलमिदम्
विषमे समुपस्थितम्।
अनार्यजुष्टमस्वर्ग्यम्
अकीर्तिकरमर्जुन ॥२॥
Shloka 2.2
shree bhagavaan uvaacha -
kutastvaa kashmalamidam,
viShame samupasthitam!
anaaryajuShTamasvargyam
akeertikaramarjuna!!
Meaning of Shloka 2.2
Krishna said -
O! Arjuna, from where are you getting these "impure" thoughts, in this critical situation?
Noble people never appreciate this. This won't lead to heaven. It will make you infamous.
ಶ್ಲೋಕ ೨.೨
ಶ್ರೀ ಭಗವಾನ್ ಉವಾಚ -
ಕುತಸ್ತ್ವಾ ಕಶ್ಮಲಮಿದಮ್
ವಿಷಮೇ ಸಮುಪಸ್ಥಿತಮ್!
ಅನಾರ್ಯಜುಷ್ಟಮಸ್ವರ್ಗ್ಯಮ್
ಅಕೀರ್ತಿಕರಮರ್ಜುನ!!
ಶ್ಲೋಕ ೨.೨ ರ ಅರ್ಥ
ಹೇ ಅರ್ಜುನ! ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ, ನಿನಗೆ ಇಂಥ ಕೊಳಕು ಆಲೋಚನೆಗಳು ಎಲ್ಲಿಂದ ಬರುತ್ತಿವೆ?
ಇದು ಯೋಗ್ಯವ್ಯಕ್ತಿಗಳಾರೂ ಮೆಚ್ಚುವಂತದ್ದಲ್ಲ. ಇದು ಸ್ವರ್ಗಪ್ರಾಪ್ತಿ ಯಾಗುವಂತದಲ್ಲ. ಅಲ್ಲದೇ ನಿನಗೆ ಇದು ಕೆಟ್ಟ ಹೆಸರನ್ನೂ ತರುತ್ತದೆ.
#bhagavadgita #krishna #motivation #spirituality #god #believer #bhakti #hindu #sanatandharma #Hinduism #karma #Arjun #ayodhyarammandir #jaishriram #Gyanvapi #omnamahshivaya #mathuravrindavan #jaishreekrishna #yogi #Namo
Chapter: 02
Shloka : 01
सञ्जय उवाच -
तं तथा कृपयाविष्टम्
अश्रुपूर्णाकुलेक्षणम्।
विषीदन्तमिदं वाक्यम्
उवाच मधुसूदनः॥१॥
Shloka 2.1
tan tathaa krpayaaviShTam
ashrupoorNaakulekShaNam!
viSheedantamidam vaakyam
uvaacha madhusoodanaha!!
Meaning of Shloka 2.1
Sanjaya said (to Dhritarashtra) -
Madhusoodana (Krishna) said the following words to grieving Arjuna who was filled with the feeling of pity in such a way that his eyes are full of tears!
ಶ್ಲೋಕ ೨.೧
ತಂ ತಥಾ ಕೃಪಯಾವಿಷ್ಟಮ್
ಅಶ್ರುಪೂರ್ಣಾಕುಲೇಕ್ಷಣಮ್!
ವಿಷೀದಂತಮಿದಂ ವಾಕ್ಯಮ್
ಉವಾಚ ಮಧುಸೂದನಃ!!
ಶ್ಲೋಕ ೨.೧ ರ ಅರ್ಥ
ಸಂಜಯ ಹೇಳಿದ (ಧೃತರಾಷ್ಟ್ರನಿಗೆ) -
ಆ ರೀತಿಯಲ್ಲಿ ಅತ್ಯಂತ ಕನಿಕರ, ಅನುಕಂಪದಿಂದ ಕೂಡಿ, ದುಃಖಿಸುತ್ತಿದ್ದ ಅರ್ಜುನನಿಗೆ ಮಧುಸೂದನನು (ಕೃಷ್ಣನು) ಈ ಮಾತುಗಳನ್ನು ಹೇಳಿದನು!
#bhagavadgita #krishna #motivation #spirituality #god #believer #bhakti #hindu #sanatandharma #Hinduism #karma #Arjun #ayodhyarammandir #jaishriram #Gyanvapi #omnamahshivaya #mathuravrindavan #jaishreekrishna #yogi #Namo
Chapter: 1
Shloka : 47
सञ्जय उवाच -
एवमुक्त्वार्जुनस् सङ्ख्ये
रथोपस्थ उपाविशत्।
विसृज्य सशरं चापम्
शोक-संविग्न-मानसः॥
Shloka 1.47
sañjaya uvaacha -
evamuktvaarjunas sañkhye
rathopastha upaavishat!
visrjya sasharañ chaapam
shoka-samvigna- maanasaha!!
Meaning of Shloka 1.47
Sanjaya said -
In the battle-field, saying this much, Arjuna, being overwhelmed with grief, threw aside his bow and arrows, and sank into his seat in the chariot.
ಶ್ಲೋಕ ೧.೪೭
ಸಂಜಯ ಉವಾಚ -
ಏವಮುಕ್ತ್ವಾರ್ಜುನಸ್ ಸಂಖ್ಯೇ
ರಥೋಪಸ್ಥ ಉಪಾವಿಶತ್!
ವಿಸೃಜ್ಯ ಸಶರಂ ಚಾಪಮ್
ಶೋಕ-ಸಂವಿಗ್ನ-ಮಾನಸಃ!!
ಶ್ಲೋಕ ೧.೪೭ ರ ಅರ್ಥ
ಸಂಜಯ ಹೇಳಿದ -
ಅತ್ಯಂತ ಶೋಕದಿಂದ ಬಳಲುತ್ತಿದ್ದ ಅರ್ಜುನ ಆ ಯುದ್ಧಭೂಮಿಯಲ್ಲಿ ಹೀಗೆಲ್ಲಾ ಹೇಳಿ, ತನ್ನ ಧನುರ್ಬಾಣಗಳನ್ನು ದೂರವಿಟ್ಟು, ರಥದಲ್ಲೇ ಕುಳಿತುಬಿಟ್ಟ.
#bhagavadgita #krishna #motivation #spirituality #god #believer #bhakti #hindu #sanatandharma #Hinduism #karma #Arjun #ayodhyarammandir #jaishriram #Gyanvapi #omnamahshivaya #mathuravrindavan #jaishreekrishna #yogi #Namo
Chapter: 1
Shloka : 46
यदि मामप्रतीकारम्
अशस्त्रं शस्त्रपाणयः।
धार्तराष्ट्रा रणे हन्युः
तन्मे क्षेमतरं भवेत्॥
Shloka 1.46
yadi maamaprateekaaram
ashastrañ shastrapaaNayaha!
dhaarataraaShTraa raNe hanyuhu
tanme kShemataram bhavet!!
Meaning if Shloka 1.46
This would be better for me, if armed Dhritarashtra's sons kill, unarmed and not resisting me.
ಶ್ಲೋಕ ೧.೪೬
ಯದಿ ಮಾಮಪ್ರತೀಕಾರಮ್
ಅಶಸ್ತ್ರಂ ಶಸ್ತ್ರಪಾಣಯಃ!
ಧಾರ್ತರಾಷ್ಟ್ರಾ ರಣೇ ಹನ್ಯುಃ
ತನ್ಮೇ ಕ್ಷೇಮತರಂ ಭವೇತ್!!
ಶ್ಲೋಕ ೧.೪೬ ರ ಅರ್ಥ
ಶಸ್ತ್ರವನ್ನೂ ಹಿಡಿಯದೇ, ಪ್ರತಿರೋಧವನ್ನೂ ತೋರದೇ ಇರುವ ನನ್ನನ್ನು ಶಸ್ತ್ರಧಾರಿಗಳಾದ ಧೃತರಾಷ್ಟ್ರನ ಮಕ್ಕಳು ಕೊಂದರೆ, ಅದೇ ನನಗೆ ಒಳ್ಳೆಯದು ಎಂದು ಅನಿಸುತ್ತದೆ.
#bhagavadgita #krishna #motivation #spirituality #god #believer #bhakti #hindu #sanatandharma #Hinduism #karma #Arjun #ayodhyarammandir #jaishriram #Gyanvapi #omnamahshivaya #mathuravrindavan #jaishreekrishna #yogi #Namo
Chapter: 1
Shloka : 45
अहो बत महत्पापम्
कर्तुं व्यवसिता वयम्।
यद्राज्य-सुख-लोभेन
हन्तुं स्वजनमुद्यताः॥
Shloka 1.45
aho bata mahatpaapam,
kartum vyavasitaa vayam!
yadraajya-sukha- lobhena
hantuñ svajana-mudyataaha!!
Meaning of Shloka 1.45
Alas! We are regrettably involved in committing the worst sin!! Motivated by greed for power and wealth we got ready to kill our 'own people'!
ಶ್ಲೋಕ ೧.೪೫
ಅಹೋ ಬತ ಮಹತ್ಪಾಪಮ್
ಕರ್ತುಂ ವ್ಯವಸಿತಾ ವಯಮ್!
ಯದ್ರಾಜ್ಯ-ಸುಖ- ಲೋಭೇನ
ಹಂತುಂ ಸ್ವಜನಮುದ್ಯತಾಃ!!
ಶ್ಲೋಕ ೧.೪೫ ರ ಅರ್ಥ
ಅಯ್ಯೋ! ಎಂಥ ಮಹಾಪಾಪ ಮಾಡಲು ಹೊರಟಿದ್ದೇವೆ, ನಾವು!!
ರಾಜ್ಯ ಹಾಗು ಸುಖದ ದುರಾಸೆಯಿಂದ ಸ್ವಜನರನ್ನೇ ಕೊಲ್ಲಲು ಸಿದ್ಧರಾಗಿಬಿಟ್ಟಿದ್ದೇವೆ!
#bhagavadgita #krishna #motivation #spirituality #god #believer #bhakti #hindu #sanatandharma #ayodhya #jaishreeram #gyanavapi #omnamahshivaya #mathura #jaishreekrishna #yogi #namo
Chapter: 1
Shloka : 44
उत्सन्न-कुलधर्माणाम्
मनुष्याणां जनार्दन।
नरके नियतं वासः
भवतीत्यनुशुश्रुम॥
Shloka 1.44
utsanna- kuladharmaaNaam
manuShyaaNaañ janaardana!
narake niyatam vaasaha
bhavateetyanushushruma!!
Meaning of Shloka 1.44
All those people who fail to perform their family's traditional duties, O! Janardana (Krishna), as per my knowledge, they will go to hell.
ಶ್ಲೋಕ ೧.೪೪
ಉತ್ಸನ್ನ- ಕುಲಧರ್ಮಾಣಾಮ್
ಮನುಷ್ಯಾಣಾಂ ಜನಾರ್ದನ!
ನರಕೇ ನಿಯತಂ ವಾಸಃ
ಭವತೀತ್ಯನುಶುಶ್ರುಮ!!
ಶ್ಲೋಕ ೧.೪೪ ರ ಅರ್ಥ
ಹೇ ಜನಾರ್ದನ!(ಕೃಷ್ಣ), ನನಗೆ ಗೊತ್ತಿರುವ ಮಟ್ಟಿಗೆ, ಕುಲಧರ್ಮವನ್ನು ಪಾಲಿಸಲಾಗದ ಜನರೆಲ್ಲರೂ ನರಕಕ್ಕೆ ಹೋಗುತ್ತಾರೆ.
#bhagavadgita #krishna #motivation #spirituality #god #believer #bhakti #hindu #sanatandharma #ayodhya #jaishreeram #gyanavapi #omnamahshivaya #mathuravrindavan #jaishreekrishna #yogi #namo #om
Chapter: 1
Shloka : 43
दोषैरेतैः कुलघ्नानाम्
वर्णसङ्कर-कारकैः।
उत्साद्यन्ते जातिधर्माः
कुलधर्माश्च शाश्वताः॥
Shloka 1.43
doShairetaih kulaghnaanaam
varNasankara- karkaihi!
utsaadyante jaatidharmaaha
kuladharmaashcha shaashvataaha!
Meaning of Shloka 1.43
Due to the mistake done by destroyers of family fabric, which leads to the corruption in varna system, the duties being done by people by their nature and duties of family tradition will perish.
(* During Mahabharata time around five thousand years ago the meaning of "jaati" was not caste, but it meant "svabhava" nature, or one's own inclination)
ಶ್ಲೋಕ ೧.೪೩
ದೋಷೈರೇತೈಃ ಕುಲಘ್ನಾನಾಮ್
ವರ್ಣಸಂಕರಕಾರಕೈಃ!
ಉತ್ಸಾದ್ಯಂತೇ ಜಾತಿಧರ್ಮಾಃ
ಕುಲಧರ್ಮಾಶ್ಚ ಶಾಶ್ವತಾಃ!!
ಶ್ಲೋಕ ೧.೪೩ ರ ಅರ್ಥ
ವರ್ಣಸಂಕರಕ್ಕೆ ಕಾರಣವಾಗುವ ಕುಲನಾಶಕರ ತಪ್ಪಿನಿಂದಾಗಿ ಸ್ವಭಾವಸಹಜ ಕರ್ತವ್ಯಗಳೂ, ಕುಲದ ಪರಂಪರೆಯ ಕರ್ತವ್ಯಗಳೂ ನಶಿಸುತ್ತವೆ.
(*ಮಹಾಭಾರತಕಾಲದಲ್ಲಿ "ಜಾತಿ" ಪದಕ್ಕೆ ಈಗ ನಾವು ಬಳಸುವ ಅರ್ಥ ಇರಲಿಲ್ಲ. ಆಗ ಜಾತಿ ಎಂದರೆ ಸ್ವಭಾವ ಎಂದರ್ಥ ಇತ್ತು, ಅದು ವ್ಯಕ್ತಿಯ ಸಹಜ ಆಸಕ್ತಿಯನ್ನು ತೋರಿಸುತ್ತದೆ)
#bhagavadgita #krishna #motivation #spirituality #god #believer #bhakti #hindu #sanatandharma #ayodhya #jaishreeram #gyanavapi #omnamahshivaya #om #mathura #jaishreekrishna #radhakrishna
Chapter: 1
Shloka : 42
सङ्करो नरकायैव
कुलघ्नानां कुलस्य च।
पतन्ति पितरो ह्येषाम्
लुप्तपिण्डोदक-क्रियाः॥
Shloka 1.42
sankaro narakaayaiva
kulaghnaanaam kulasya cha!
patanti pitaro hyeShaam
luptapiNDodaka kriyaaha!!
Meaning of Shloka 1.42
Those families (eclipsed by adharma) and those who destroyed the families, due to corrupted varna system, all will fall into hell. The ancestors, due to lack of after-death rituals, will fall (loosing their position in pitrloka, will be reborn in this world).
ಶ್ಲೋಕ ೧.೪೨
ಸಂಕರೋ ನರಕಾಯೈವ
ಕುಲಘ್ನಾನಾಂ ಕುಲಸ್ಯ ಚ!
ಪತಂತಿ ಪಿತರೋ ಹ್ಯೇಷಾಮ್
ಲುಪ್ತಪಿಂಡೋದಕ-ಕ್ರಿಯಾಃ!!
ಶ್ಲೋಕ ೧.೪೨
ಆ (ಅಧರ್ಮಕ್ಕೆ ಒಳಗಾದ) ಕುಲಗಳೂ, ಕುಲಗಳನ್ನು ನಾಶಮಾಡಿದವರೂ, ವರ್ಣಸಂಕರದಿಂದಾಗಿ ನರಕಕ್ಕೆ ಹೋಗುತ್ತಾರೆ.
ಪಿತೃಗಳು ಶ್ರಾದ್ಧಗಳು ನಡೆಯದೆ, (ಪಿತೃಲೋಕದಿಂದ) ಪತಿತರಾಗುತ್ತಾರೆ. (ಮತ್ತೆ ಈ ಲೋಕದಲ್ಲಿ ಹುಟ್ಟಿ ಬರುವಂತಾಗುತ್ತದೆ.)
#bhagavadgita #krishna #motivation #spirituality #god #believer #bhakti #hindu #sanatandharma #ayodhya #jaishreeram #gyanavapi #omnamahshivaya #mathuravrindavan #jaishreekrishna #yogi #namo
Chapter: 1
Shloka : 41
अधर्माभिभवात् कृष्ण
प्रदुष्यन्ति कुलस्त्रियः।
स्त्रीषु दुष्टासु वार्ष्णेय
जायते वर्णसङ्करः॥
Shloka 1.41
adharmaabhibhavaat krShNa,
praduShyanti kulastriyaha!
streeShu duShTaasu vaarShNeya
jaayate varNasankaraha!!
Meaning of Shloka 1.41
When Adharma (misdeeds and bad effects) eclipses the society, women of the "families" will be spoilt. O! Varneya (Krishna, born in Vrishni lineage of Yadavas) when women are spoilt "varna-system" gets currupted.
ಶ್ಲೋಕ ೧.೪೧
ಅಧರ್ಮಾಭಿಭವಾತ್ ಕೃಷ್ಣ
ಪ್ರದುಷ್ಯಂತಿ ಕುಲಸ್ತ್ರಿಯಃ!
ಸ್ತ್ರೀಷು ದುಷ್ಟಾಸು ವಾರ್ಷ್ಣೇಯ
ಜಾಯತೇ ವರ್ಣಸಂಕರಃ!!
ಶ್ಲೋಕ ೧.೪೧ ರ ಅರ್ಥ
ಅಧರ್ಮ ಆವರಿಸಿಕೊಂಡಾಗ "ಕುಲ"ಸ್ತ್ರೀಯರು ಹಾಳಾಗುತ್ತಾರೆ. ಹೇ ವಾರ್ಷ್ಣೇಯ!(ಯಾದವರಲ್ಲಿ ವೃಷ್ಣಿವಂಶದಲ್ಲಿ ಹುಟ್ಟಿದ ಕೃಷ್ಣ) ಕುಲಸ್ತ್ರೀಯರು ಹಾಳಾದರೆಂದರೆ ಸಮಾಜದ ವರ್ಣವ್ಯವಸ್ಥೆ ಹಾಳಾಗುತ್ತದೆ.
#bhagavadgita #krishna #motivation #spirituality #god #believer #bhakti #hindu #sanatandharma #jaishreeram #yogi #namo #ayodhya #mathuravrindavan #gyanavapi #om
Chapter: 1
Shloka : 40
कुलक्षये प्रणश्यन्ति
कुलधर्मास् सनातनाः।
धर्मे नष्टे कुलं कृत्स्नम्
अधर्मोभिभवत्युत॥
Shloka 1.40
kulakShaye praNashyanti,
kuladharmaas sanaatanaaha!
dharme naShTe kulañ krtsnam
adharmobhibhavatyuta!!
Meaning of Shloka 1.40
If families are destroyed, the heritage developed and preserved across generations may face extinction. In such a scenario, chaos can pervade the remaining members of the family, potentially leading to misdeeds.
ಶ್ಲೋಕ ೧.೪೦
ಕುಲಕ್ಷಯೇ ಪ್ರಣಶ್ಯಂತಿ
ಕುಲಧರ್ಮಾಸ್ ಸನಾತನಾಃ!
ಧರ್ಮೇ ನಷ್ಟೇ ಕುಲಂ ಕೃತ್ಸ್ನಮ್
ಅಧರ್ಮೋಭಿಭವತ್ಯುತ!!
ಶ್ಲೋಕ ೧.೪೦ ರ ಅರ್ಥ
ಕುಲಕ್ಷಯವಾದರೆ ತಲತಲಾಂತರಗಳಿಂದ ಬೆಳೆದು ಬಂದ ಹಾಗು ಸಂರಕ್ಷಿಸಲ್ಪಟ್ಟ ಕುಲದ ಪರಂಪರೆ ನಾಶವಾಗಿಬಿಡುತ್ತದೆ. ಹಾಗೇನಾದರೂ ಆದರೆ ಕುಲದ ಅಳಿದುಳಿದ ಜನರನ್ನು ಅಧರ್ಮ ಆವರಿಸಿಕೊಂಡು ಬಿಡುತ್ತದೆ.
#bhagavadgita #krishna #motivation #spirituality #god #hindu #believer #bhakti #sanatandharma #jaishreekrishna #radhakrishna #mahabharat #om #yogi #namo
Chapter: 1
Shloka : 39
कथं न ज्ञेयमस्माभिः
पापादस्मान्निवर्तितुम्।
कुलक्षयकृतं दोषम्
प्रपश्यद्भिर् जनार्दन॥
Shloka 1.39
kathan na jñeyamasmaabhihi
paapaadasmaan nivartitum!
kulakShayakrtan doSham
prapshyadbhir janaardana!!
Meaning of Shloka 1.39
Why we should not understand that we must stop committing this sin, since we know very well, what's going to be wrong if family is destroyed.
ಶ್ಲೋಕ ೧.೩೯
ಕಥಂ ನ ಜ್ಞೇಯಮಸ್ಮಾಭಿಃ
ಪಾಪಾದಸ್ಮಾನ್ ನಿವರ್ತಿತುಮ್!
ಕುಲಕ್ಷಯಕೃತಂ ದೋಷಮ್
ಪ್ರಪಶ್ಯದ್ಭಿರ್ ಜನಾರ್ದನ!!
ಶ್ಲೋಕ ೧.೩೯ ರ ಅರ್ಥ
ನಾವಾದರೋ ಏಕೆ ಇಂಥ ಪಾಪಕೃತ್ಯವನ್ನು ಮಾಡಬಾರದು ಅಂತ ಅರ್ಥಮಾಡಿಕೊಳ್ಳಬಾರದು? ಕುಲಕ್ಷಯದಿಂದ ಆಗುವ ದೋಷ ಏನು ಅಂತ ನಮಗೆ ಗೊತ್ತಲ್ಲ ಕೃಷ್ಣ!
#bhagavadgita #krishna #motivation #spirituality #god #bhakti #hindu #sanatandharma #believer #jaishreekrishna #jaishreeram #mahabharat #quotes
Chapter: 1
Shloka : 38
यद्यप्येते न पश्यन्ति
लोभोपहतचेतसः।
कुलक्षय-कृतं दोषम्
मित्रद्रोहे च पातकम्॥
Shloka 1.38
yadyapyete na pashyanti,
lobhopahatachetasaha!
kulakShaya- krtan doSham
mitradrohe cha paatakam!!
Meaning of Shloka 1.38
If they have lost their mind due to greed, and not understanding the wrong in destroying the family, and sin in cheating on friends....
(to next shloka)
ಶ್ಲೋಕ ೧.೩೮
ಯದ್ಯಪ್ಯೇತೇ ನ ಪಶ್ಯಂತಿ
ಲೋಭೋಪಹತಚೇತಸಃ!
ಕುಲಕ್ಷಯ-ಕೃತಂ ದೋಷಮ್
ಮಿತ್ರದ್ರೋಹೇ ಚ ಪಾತಕಮ್!!
ಶ್ಲೋಕ ೧.೩೮ ರ ಅರ್ಥ
ಮನದಲ್ಲಿ ದುರಾಸೆಯೇ ತುಂಬಿದ ಅವರು ಕುಲನಾಶದಿಂದ ಆಗುವ ದೋಷ, ಮಿತ್ರದ್ರೋಹದಿಂದ ಬರುವ ಪಾಪಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲವಾದರೆ.....
(ಮುಂದಿನ ಶ್ಲೋಕಕ್ಕೆ)
#bhagavadgita #krishna #motivation #spirituality #god #believer #bhakti #hindu #sanatandharma #jaishreekrishna #mahabharat
Chapter: 1
Shloka : 37
तस्मान्नार्हा वयं हन्तुम्
धार्तराष्ट्रान् स्वबान्धवान्।
स्वजनं हि कथं हत्वा
सुखिनस् स्याम माधव॥
Shloka 1.37
tasmaannaarhaa vayañ hantum
dhaartaraaShTraan svabaandhavaan!
svajanañ hi kathañ hatvaa
Sukhinas syaama maadhava!!
Meaning of Shloka 1.37
So its not right for us to kill Dhritarashtra's sons, who are our own people.
O! Madhava(Krishna), tell me, how can we be happy by killing our own people?
ಶ್ಲೋಕ ೧.೩೭
ತಸ್ಮಾನ್ನಾರ್ಹಾ ವಯಂ ಹಂತುಮ್
ಧಾರ್ತರಾಷ್ಟ್ರಾನ್ ಸ್ವಬಾಂಧವಾನ್!
ಸ್ವಜನಂ ಹಿ ಕಥಂ ಹತ್ವಾ
ಸುಖಿನಸ್ ಸ್ಯಾಮ ಮಾಧವ!!
ಶ್ಲೋಕ ೧.೩೭ ರ ಅರ್ಥ
..ಆದ್ದರಿಂದ ನಮ್ಮ ಬಂಧುಗಳೇ ಆದ ಧೃತರಾಷ್ಟ್ರನ ಮಕ್ಕಳನ್ನು ನಾವು ಸಾಯಿಸುವುದು ಸರಿಯಲ್ಲ. ಹೇ ಮಾಧವ (ಕೃಷ್ಣ)! ನೀನೇ ಹೇಳು, ನಮ್ಮ ಸ್ವಂತ ಬಂಧುಗಳನ್ನೇ ಕೊಂದು, ನಾವು ಹೇಗೆ ಸುಖವಾಗಿ ಇರಲು ಸಾಧ್ಯ?
#bhagavadgita #krishna #motivation #spirituality #god #believer #bhakti #hindu #sanatandharma #jaishreekrishna #mahabharat #jaishreeram
Chapter: 1
Shloka : 36
निहत्य धार्तराष्ट्रान् नः
का प्रीतिस् स्याज्जनार्दन।
पापमेवाश्रयेदस्मान्
हत्वैतानाततायिनः॥
Shloka 1.36
nihatya dhaartaraaShTraan naha,
kaa preetis syaajjanaardana!
paapamevaashrayedasmaan
hatvaitaan aatataayinaha!!
Meaning of Shloka 1.36
What pleasure can we get by killing Dhritarashtra's sons, tell me O! Janardana (Krishna)?
By killing these "criminals" we just accumulate sins.
ಶ್ಲೋಕ ೧.೩೬
ನಿಹತ್ಯ ಧಾರ್ತರಾಷ್ಟ್ಟರಾನ್ ನಃ
ಕಾ ಪ್ರೀತಿಸ್ ಸ್ಯಾಜ್ಜನಾರ್ದನ!
ಪಾಪಮೇವಾಶ್ರಯೇದಸ್ಮಾನ್
ಹತ್ವೈತಾನಾತತಾಯಿನಃ!!
ಶ್ಲೋಕ ೧.೩೬ ರ ಅರ್ಥ
ಈ ಧೃತರಾಷ್ಟ್ರನ ಮಕ್ಕಳನ್ನು ಕೊಂದದ್ದರಿಂದ ನಮಗೆ ಸಿಗುವ ಖುಶಿಯಾದರೂ ಏನು, ಹೇಳು, ಜನಾರ್ದನ (ಕೃಷ್ಣ).
ಈ "ಮಹಾಪಾಪಿಗಳನ್ನು" ಸಾಯಿಸುವುದರಿಂದ ನಮಗೆ ಪಾಪವೇ ಬರುತ್ತದೆ, ಅಷ್ಟೇ!
#bhagavadgita #krishna #motivation #spirituality #god #believer #bhakti #hindu #sanatandharma #radhakrishna
#jaishreekrishna