Daivajna Brahmanara Sangha Gonikoppal

  • Home
  • Daivajna Brahmanara Sangha Gonikoppal

Daivajna Brahmanara Sangha Gonikoppal Engineer's day The Portuguese referred these people as Xete (cf. Xett, Xete) or sometimes Chatim (cf.

The Daivajña or Daivadnya is an ethno-religious community and a Hindu Brahmin sub-caste of the west coast of India, predominantly residing in the states of Goa, coastal Karnataka, and coastal Maharashtra. Goa is considered the homeland of Daivadnyas; they are believed to have flourished and prospered in Goa and hence sometimes they are called Gomantaka Daivajña. Due to many socioeconomic reasons,

they emigrated to different parts of India within the last few centuries.[a][1]
They are commonly known as Śeṭ in the coastal region. The word Śeṭ is a corrupt form of the word Śreṣṭha or Śreṣṭhin, which could mean excellent, distinguished, or superior.[2][3] Over time the word was transformed from Śreṣṭha to Śeṭ.[4] Most of the older generation from the Daivajña community in Goa call themselves Śeṭī Bāmaṇ, which is a corrupt form of Śreṣṭhi Brāhmaṇa. Xatim), which is now Cyātī in the Konkani language; the word was a Portuguese appellation for "trader" derived from the local word Śreṣṭhin.[5] Śeṭs are often called Daivajña Suvarṇakāra (cf. Svarṇakāra).[l] Daivajña Brāhmaṇa and Gomantaka Daivajña Brāhmaṇa are sometimes abbreviated as DB and GDB respectively.

ನಿಧನ ವಾರ್ತೆ...ಗೋಣಿಕೊಪ್ಪಲಿನ  ಹಿರಿಯ ಚಿನ್ನ ಬೆಳ್ಳಿ ವರ್ತಕರು, ಕಾವೇರಿ ದಸರಾ ಸಮಿತಿಯ ಸ್ಥಾಪಕ ಸದಸ್ಯರು, ಹಿಂದೂ ರುದ್ರ ಭೂಮಿ ಸಮಿತಿಯ ಮಾಜಿ ...
15/03/2024

ನಿಧನ ವಾರ್ತೆ...

ಗೋಣಿಕೊಪ್ಪಲಿನ ಹಿರಿಯ ಚಿನ್ನ ಬೆಳ್ಳಿ ವರ್ತಕರು, ಕಾವೇರಿ ದಸರಾ ಸಮಿತಿಯ ಸ್ಥಾಪಕ ಸದಸ್ಯರು, ಹಿಂದೂ ರುದ್ರ ಭೂಮಿ ಸಮಿತಿಯ ಮಾಜಿ ಉಪಾಧ್ಯಕ್ಷರು, ದಕ್ಷಿಣ ಕೊಡಗು ದೈವಜ್ಞ ಬ್ರಾಹ್ಮಣರ ಸಂಘದ ಮಾಜಿ ಪದಾಧಿಕಾರಿ ಚಿನ್ನ ಬೆಳ್ಳಿ ವರ್ತಕರ ಸಂಘದ ಮಾಜಿ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವೆಯನ್ನು ಗೈದ ಗೋಣಿಕೊಪ್ಪಲಿನ ಪ್ರಭಾಕರ್ ಶೇಟ್(85) ಇಂದು ರಾತ್ರಿ ಅವರ ನಿವಾಸವಾದ ಗೋಣಿಕೊಪ್ಪಲಿನ ಮೈಸೂರು ರಸ್ತೆಯ ಅಚ್ಚಪ್ಪ ಲೇಔಟಿನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರ ಅಂತಿಮ ಸಂಸ್ಕಾರ ನಾಳೆ ನಡೆಯಲಿದೆ.

22/01/2024
H.H Param Poojya Swamiji performed special pooja at kashi Vishwanath temple on their ongoing yatra to Ayodhya for the pr...
21/01/2024

H.H Param Poojya Swamiji performed special pooja at kashi Vishwanath temple on their ongoing yatra to Ayodhya for the prathisthapan of prabhu Shree Ramchandra 🕉❤🙏🏻

ಗುರುಗಳ ಸೀಮೋಲಂಘನ ಕಾರ್ಯಕ್ರಮದಲ್ಲಿ ಕರ್ಕಿ ಮಹಿಳಾ ಮಂಡಳಿ ಸದಸ್ಯ ರೊಂದಿಗೆ ಭಾಗವಹಿಸಿರುವುದು.
30/09/2023

ಗುರುಗಳ ಸೀಮೋಲಂಘನ ಕಾರ್ಯಕ್ರಮದಲ್ಲಿ ಕರ್ಕಿ ಮಹಿಳಾ ಮಂಡಳಿ ಸದಸ್ಯ ರೊಂದಿಗೆ ಭಾಗವಹಿಸಿರುವುದು.

ಪೊನ್ನಂಪೇಟೆಯ ಕೆ.ಪಿ.ಎಸ್‌.ಸಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಬಿ.ಎಸ್ ಕೀರ್ತಿ 605 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದುಕ...
08/05/2023

ಪೊನ್ನಂಪೇಟೆಯ ಕೆ.ಪಿ.ಎಸ್‌.ಸಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಬಿ.ಎಸ್ ಕೀರ್ತಿ 605 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ.ಶೇಕಡ 96.8% ಈಕೆ ಪೊನ್ನಂಪೇಟೆಯ ನಿಸರ್ಗ ನಗರದ ಬಿ.ಆರ್ ಸುಧಾಕರ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರಿ ಆಗಿದ್ದಾಳೆ.
ದೈವಜ್ಞ ಬ್ರಾಹ್ಮಣರ ಸಂಘ ಗೋಣಿಕೊಪ್ಪಲ್ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

21/03/2023
ದೈವಜ್ಞ ಬ್ರಾಹ್ಮಣರಶ್ರೀ ಗಣಪತಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನಸೋನಾರಕೇರಿ, ಭಟ್ಕಳದಿನಾಂಕ 11-3-2023ರಂದುಶ್ರೀ ಲಲಿತ ಹೋಮ ಹಾಗೂ ಪರಮಪೂಜ್ಯ...
13/03/2023

ದೈವಜ್ಞ ಬ್ರಾಹ್ಮಣರ
ಶ್ರೀ ಗಣಪತಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ
ಸೋನಾರಕೇರಿ, ಭಟ್ಕಳ

ದಿನಾಂಕ 11-3-2023ರಂದು
ಶ್ರೀ ಲಲಿತ ಹೋಮ ಹಾಗೂ ಪರಮಪೂಜ್ಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳ ಆಗಮನ

*ಇಂದು ಬೆಳಿಗ್ಗೆ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ  ರಾಜ್ಯಾಧ್ಯಕ್ಷರಾದ    ಶ್ರೀ ರಾಮರಾವ್ ರಾಯಕರ ಅವರ ನೇತೃತ್ವದಲ್ಲಿ ದೈವಜ್ಞ ಗುರುಪೀಠದ...
06/03/2023

*ಇಂದು ಬೆಳಿಗ್ಗೆ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ರಾಮರಾವ್ ರಾಯಕರ ಅವರ ನೇತೃತ್ವದಲ್ಲಿ ದೈವಜ್ಞ ಗುರುಪೀಠದ ಕಾರ್ಯಾಧ್ಯಕ್ಷರಾದಂತಹ ಶ್ರೀ ಆರ್ ಎಸ್ ರಾಯಕರ್ ಉಪ್ಪೋಣಿ ಇವರ* ಜೊತೆ

*ಸಮಾಜದ ಪ್ರಮುಖರ ನಿಯೋಗವೊಂದು ಮಾನ್ಯ *ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ* ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ

*ದೈವಜ್ಞರ ಪ್ರಪ್ರಥಮ ಗುರುಪೀಠದ ಅಭಿವೃದ್ಧಿಗಾಗಿ 10 ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು* ಮನವಿಯ ಮುಖಾಂತರ ಕೇಳಿಕೊಳ್ಳಲಾಯಿ ತು.

ಅದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುತ್ತೇನೆಂದು ಭರವಸೆಯ ನೀಡಿರುತ್ತಾರೆ .

ಸಮಾಜದ ಪ್ರಮುಖರು ಇ ನಿಯೋಗದ ಜೊತೆ ಹಾಜರಿದ್ದರು.

ದೈವಜ್ಞ ಕ್ರಿಕೆಟ್ ಗೆಳೆಯರ ಬಳಗದೈವಜ್ಞ ಬ್ರಾಹ್ಮಣ ಸಂಘ ಗಾಂಧಿಬಜಾರ್ ಶಿವಮೊಗ್ಗರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸ...
04/03/2023

ದೈವಜ್ಞ ಕ್ರಿಕೆಟ್ ಗೆಳೆಯರ ಬಳಗ
ದೈವಜ್ಞ ಬ್ರಾಹ್ಮಣ ಸಂಘ ಗಾಂಧಿಬಜಾರ್ ಶಿವಮೊಗ್ಗ
ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ
ದಿನಾಂಕ:7-4-2023 ಶುಕ್ರವಾರದಿಂದ 9-4-2023 ಭಾನುವಾರದವರೆಗೆ
ಸ್ಥಳ:ಎನ್ಇಎಸ್ ಮೈದಾನ ಕುವೆಂಪು ರಂಗಮಂದಿರ ಹಿಂಭಾಗ,ಶಿವಮೊಗ್ಗ

ದಿನಾಂಕ 26ರಂದು  ಶಿವಮೊಗ್ಗ ನಗರದ ಭಾವಸಾರ ಸಮಾಜದ ವತಿಯಿಂದ  ಕಲೆಯನ್ನು ಗುರುತಿಸಿ ಸಚಿನ್ ಮೋಹನ್ ವರ್ಣೇಕರ್ ಅವರಿಗೆ  "ಸೇವಾರತ್ನ"  ಪ್ರಶಸ್ತಿಯನ...
28/02/2023

ದಿನಾಂಕ 26ರಂದು ಶಿವಮೊಗ್ಗ ನಗರದ ಭಾವಸಾರ ಸಮಾಜದ ವತಿಯಿಂದ ಕಲೆಯನ್ನು ಗುರುತಿಸಿ ಸಚಿನ್ ಮೋಹನ್ ವರ್ಣೇಕರ್ ಅವರಿಗೆ "ಸೇವಾರತ್ನ" ಪ್ರಶಸ್ತಿಯನ್ನು ನೀಡಿ ಗೌರವಸಲಾಯಿತು....

ಸರ್ವರಿಗೂ ಮಹಾಶಿವರಾತ್ರಿಯ ಹಾರ್ಧಿಕ ಶುಭಾಶಯಗಳು ಈ ಬಾರಿಯ ಮಹಾಶಿವರಾತ್ರಿ ಪ್ರಯುಕ್ತ  ಚಿನ್ನದ ಪ್ರಭಾವಳಿ ಹಾಗೂ ಶಿವಲಿಂಗದ ರಚನೆ....
18/02/2023

ಸರ್ವರಿಗೂ ಮಹಾಶಿವರಾತ್ರಿಯ ಹಾರ್ಧಿಕ ಶುಭಾಶಯಗಳು ಈ ಬಾರಿಯ ಮಹಾಶಿವರಾತ್ರಿ ಪ್ರಯುಕ್ತ ಚಿನ್ನದ ಪ್ರಭಾವಳಿ ಹಾಗೂ ಶಿವಲಿಂಗದ ರಚನೆ....

ಸರ್ವ ಸಮಾಜ ಬಾಂಧವರಲ್ಲಿ ವಿನಂತಿ,ದೈವಜ್ಞ ಸಖೀ ಸಂಘ,  ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ "🌹ಸಾಹಿತ್ಯ ಸಂಭ್ರಮ 2023🌹"ಸಾಹಿತ್ಯ ಮೇಳದ ಬಗ್ಗೆ ಇಡ...
15/02/2023

ಸರ್ವ ಸಮಾಜ ಬಾಂಧವರಲ್ಲಿ ವಿನಂತಿ,

ದೈವಜ್ಞ ಸಖೀ ಸಂಘ, ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ "🌹ಸಾಹಿತ್ಯ ಸಂಭ್ರಮ 2023🌹"
ಸಾಹಿತ್ಯ ಮೇಳದ ಬಗ್ಗೆ ಇಡಲಾದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗೆ ಈ ಕೆಳಗಿನ ವಿಷಯ ಇಡಲಾಗಿದೆ.

🌹 *ದೈವಜ್ಞಬ್ರಾಹ್ಮಣರ ಸಾಂಸ್ಕೃತಿಕ ಸಂಘಟನೆಯಲ್ಲಿ ಸಾಹಿತ್ಯದ ಪಾತ್ರ.* 🌹
2ಪುಟಗಳ ಪ್ರಬಂಧ ಬರೆದು ನಮ್ಮವರ,ಪ್ರಬುದ್ಧತೆ ಎಲ್ಲೆಡೆ ಪಸರಿಸುವಂತೆ ಮಾಡುವಿರಾಗಿ ನಂಬಿರುತ್ತೇವೆ, ಎಲ್ಲರೂ ದಯಮಾಡಿ ಪ್ರಯತ್ನಿಸಿ.

ಪ್ರಬಂಧ ಬರೆದು ಈ ಕೆಳಗಿನ ವಿಳಾಸಕ್ಕೆ ಫೆಬ್ರುವರಿ 15 ರೊಳಗೆ ಕೆಳೆಗೆ ಕೊಟ್ಟಿರುವ ವಿಳಾಸಕ್ಕೆ ಕಳಿಸಬೇಕಾಗಿ ವಿನಂತಿ.

ಶ್ರೀಮತಿ ಪುಷ್ಪಾ . ಪಿ.ವೆರ್ಣೇಕರ್.
720 .1 F cross.
3d Stage .
15th main road.
Basaveshwar nagar
Bangalore 560 079.
9880212138.

Sri Sri Scachidanand Jnaneshwar Bharthi Mahaswamiji at Shree Maarikambha  temple  ( Sagar)
13/02/2023

Sri Sri Scachidanand Jnaneshwar Bharthi Mahaswamiji at Shree Maarikambha temple ( Sagar)

ಸಾಗರದಲ್ಲಿ ನಡೆಯುತ್ತಿರುವ ಶ್ರೀ  ಮಾರಿಕಾಂಬಾ ಜಾತ್ರೆಯಲ್ಲಿ  ಅರ್ಧ ಕೆ.ಜಿ ಗಿಂತಲೂ ಹೆಚ್ಚಿನ ತಾಳಿ ಗುಂಡುಗಳ ಅರ್ಪಣೆ.ಸಾಗರದ ಪ್ರತಿಷ್ಠಿತ  ಎಸ್....
09/02/2023

ಸಾಗರದಲ್ಲಿ ನಡೆಯುತ್ತಿರುವ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಅರ್ಧ ಕೆ.ಜಿ ಗಿಂತಲೂ ಹೆಚ್ಚಿನ ತಾಳಿ ಗುಂಡುಗಳ ಅರ್ಪಣೆ.

ಸಾಗರದ ಪ್ರತಿಷ್ಠಿತ ಎಸ್.ಕೆ ಜ್ಯುವೇಲರ್ಸ್ 70 ಗ್ರಾಂ ನಲ್ಲಿ ತಾಳಿಗುಂಡುಗಳನ್ನು ಸೇವೆಯನ್ನಾಗಿ ನೀಡುವ ಸಂಕಲ್ಪ ಮಾಡಿ, ಸ್ಥಳಿಯ ಚಿನ್ನದ ಆಭರಣ ಕುಶಲಕರ್ಮಿಗಳು ಸಾಗರದ ದೈವಜ್ಞ ಸಮಾಜದ ವರ್ತಕರು ಆಭರಣ ತಯಾರಿಕರಲ್ಲಿ ಮನವಿ ಮಾಡಿದಾಗ ಹೆಚ್ಚಿನ ಸುವರ್ಣವು ದೇಣಿಗೆಯಾಗಿ ಹರಿದು ಬಂದಿತು.

ಸಾಗರದ ಭಕ್ತ ಮಹಾಜನರು ಈ ಸಂಧರ್ಭಕ್ಕೆ ಮೆರುಗು ನೀಡುವಂತೆ ತಮ್ಮ ಕೈಲಾದ ಸಹಕಾರ ಕೊಟ್ಟು 567.890 ಮೀ ಲೆಕ್ಕದಲ್ಲಿ ತಾಳಿಗಳು 130.00. ಗ್ರಾಂಗಳ ಗುಂಡಿನ ಸಮೇತ ಸಿದ್ಧವಾಗಿ ಶ್ರೀ ದೇವಿಗೆ ಅರ್ಪಿಸಲಾಯಿತು.

ಸ್ಥಳೀಯ ಚಿನ್ನ ಬೆಳ್ಳಿಯ ಕುಶಲಕರ್ಮಿಗಳಾದ ಗಣೇಶ ಶೇಟ್, ವೆಂಕಟೇಶ ರೇವಣಕರ ಅವರು ತಾಳಿಗಳು 567 890 ಏರಿಕೆಯ ತೂಕದಲ್ಲಿ ತಯಾರಾಗಿದ್ದರ ಬಗ್ಗೆ ಶ್ರೀ ದೇವಿಯ ಕೃಪೆಯ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು.

ಅಭಿನಂದನೆಗಳು ಶ್ರೀ ಎಸ್ ಪ್ರಶಾಂತ್ ಶೇಟ್, ಮಂಗಳೂರು, ಇವರು ವಿಶ್ವ ಕೊಂಕಣಿ ಕೇಂದ್ರದ Round Table Conference ಗೆ ಆಯ್ಕೆ.ದೈವಜ್ಞ ಸೌರಭ ಮಾಸ ಪ...
08/02/2023

ಅಭಿನಂದನೆಗಳು ಶ್ರೀ ಎಸ್ ಪ್ರಶಾಂತ್ ಶೇಟ್, ಮಂಗಳೂರು, ಇವರು ವಿಶ್ವ ಕೊಂಕಣಿ ಕೇಂದ್ರದ Round Table Conference ಗೆ ಆಯ್ಕೆ.

ದೈವಜ್ಞ ಸೌರಭ ಮಾಸ ಪತ್ರಿಕೆಯ ಸಂಪಾದಕರ ಇವರಿಗೆ ವಿಶ್ವ ಕೊಂಕಣಿ ಕೇಂದ್ರ (World Konkani Centre) ದ ವಿಶ್ವಕೊಂಕಣಿ ಸಮಾರೋಹ್ (8th and 9th ಫೆಬ್ರವರಿ 2023) ಕಾರ್ಯಕ್ರಮದಲ್ಲಿ ಶ್ರೀ ಟಿ.ವಿ. ಮೋಹನ್ ದಾಸ್ ಪೈ (Infosys), ಶ್ರೀ ಸಿಎ. ನಂದಗೋಪಾಲ್ ಶೆಣೈ (ಅಧ್ಯಕ್ಷರು, ವಿಶ್ವಕೊಂಕಣಿ ಕೇಂದ್ರ),ಡಾ. ರವೀಂದ್ರನಾಥ್ ಶಾನುಭಾಗ್ (ಹಿರಿಯ ಲೇಖಕರು), ಶ್ರೀ ಬಿ. ಆರ್. ಭಟ್ (ಕಾರ್ಪೊರೇಷನ್ ಬ್ಯಾಂಕ್/ಯೂನಿಯನ್ ಬ್ಯಾಂಕ್ GM), ಡಾ. ವೈ.ಆರ್.ರಾವ್, ಡಾ. ಶಾಂತಾರಾಂ ಬಾಳಿಗಾ (ವಿಶ್ವಕೊಂಕಣಿ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರು) ಮುಂತಾದ ಗಣ್ಯರು ಹಾಗೂ ಸಾಧಕರೊಂದಿಗೆ Round Table Conference ಗೆ ದೈವಜ್ಞ ಬ್ರಾಹ್ಮಣ ಸಮಾಜದಿಂದ ಆಯ್ಕೆ ಆಗಿರುವುದು ತುಂಬಾ ಸಂತೋಷದ ವಿಷಯ.

8th and 9th ಫೆಬ್ರುವರಿಯ ಅತೀ ದೊಡ್ಡ ಕಾರ್ಯಕ್ರಮದಲ್ಲಿ ಕೊಂಕಣಿ ಭಾಷಿಗ ಗೋವಾದ ಗೌರವಾನ್ವಿತ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಡಾ. ಪಿ. ದಯಾನಂದ ಪೈ ಬೆಂಗಳೂರು, ಕೊಂಕಣಿ ಭಾಷಿಗ ಅನೇಕ ಶಾಸಕರು, ಸಂಸದರು, ವಿದ್ವಾಂಸರು, ಕಲಾವಿದರು, ಸಾಹಿತಿಗಳು, ಸಾಧಕರು ಮುಂತಾದವರು ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಪ್ರಶಸ್ತಿ ಪ್ರದಾನ, ದಿ. ಶ್ರೀ ಬಸ್ತಿ ವಾಮನ್ ಶೆಣೈ ಮಾಮ್ (ಸ್ಥಾಪಕ ಅಧ್ಯಕ್ಷರು, ವಿಶ್ವ ಕೊಂಕಣಿ ಕೇಂದ್ರ ) ಇವರ ಕಂಚಿನ ಪುತ್ಥಳಿ ಉದ್ಘಾಟನೆ, ದಿ. ಶ್ರೀ ಮನೋಹರ ಪಾರೀಕರ್ (ಮಾಜಿ ಮುಖ್ಯಮಂತ್ರಿ ಗೋವಾ ಹಾಗೂ ಕೇಂದ್ರ ರಕ್ಷಣಾ ಮಂತ್ರಿ) ಅವರ Hall of Fame ಭಾವಚಿತ್ರ ಅನಾವರಣ, ನೂತನ ಕಾನ್ಫರೆನ್ಸ್ ಹಾಲ್ ಉದ್ಘಾಟನೆ ಮುಂತಾದ ಅಭೂತಪೂರ್ವ ಕಾರ್ಯಕ್ರಮ ನಡೆಯಲಿದೆ.

ದೈವಜ್ಞ ಬ್ರಾಹ್ಮಣ ಸಮಾಜದಿಂದ ದುಂಡು ಮೇಜಿನ ಪರಿಷತ್ (Round Table Conference) ಗೆ ಆಯ್ಕೆಯಾದ ಶ್ರೀ ಎಸ್ ಪ್ರಶಾಂತ್ ಶೇಟ್, ಮಂಗಳೂರು ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ದೈವಜ್ಞ ಪ್ರತಿಭಾರಂಗ ಶಿವಮೊಗ್ಗ ಮತ್ತು ಸುವರ್ಣ ಕಲಾಕಾರರ ಸಂಘ ದೈವಜ್ಞ ಬ್ರಾಹ್ಮಣ ಸಮಾಜ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿಋಣಾನುಬಂಧ- 2023ರಾಜ್ಯಮ...
07/02/2023

ದೈವಜ್ಞ ಪ್ರತಿಭಾರಂಗ ಶಿವಮೊಗ್ಗ ಮತ್ತು ಸುವರ್ಣ ಕಲಾಕಾರರ ಸಂಘ
ದೈವಜ್ಞ ಬ್ರಾಹ್ಮಣ ಸಮಾಜ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ

ಋಣಾನುಬಂಧ- 2023
ರಾಜ್ಯಮಟ್ಟದ ವಧು ವರರ ಅನ್ವೇಷಣೆ ಮತ್ತು ಜಾತಕ ವಿನಿಮಯ ಸಮಾವೇಶ
ದಿನಾಂಕ:26-2-2023
ಸಮಯ:ಬೆಳಗ್ಗೆ 9ರಿಂದ ಸಂಜೆ 5ರವರೆಗೆ
ಸ್ಥಳ: ದೈವಜ್ಞ ಕಲ್ಯಾಣ ಮಂದಿರ ಅಗಸೇ ಬಾಗಿಲು,ಶಿರಸಿ

ಅಖಿಲ ಕರ್ನಾಟಕ ದೈವಜ್ಞ ಮಹಿಳಾ ಮಂಡಳಿಯ  ಕಾರ್ಯಕಾರಿ ಮಂಡಳಿ ಸಭೆ ಕರ್ಕೀಮಠದ ಸಭಾಂಗಣದಲ್ಲಿ ನಡೆಯಿತು.
07/02/2023

ಅಖಿಲ ಕರ್ನಾಟಕ ದೈವಜ್ಞ ಮಹಿಳಾ ಮಂಡಳಿಯ ಕಾರ್ಯಕಾರಿ ಮಂಡಳಿ ಸಭೆ ಕರ್ಕೀಮಠದ ಸಭಾಂಗಣದಲ್ಲಿ ನಡೆಯಿತು.

Jai Jnaneshwari PoornahutiRamaTaraknama  japa mahayagna
05/02/2023

Jai Jnaneshwari
Poornahuti
RamaTaraknama japa mahayagna

ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ಮುಗ್ವಾ. ದೇವಸ್ಥಾನಕ್ಕೆ. ಶ್ರೀ ಗಣಪತಿ ಮುಖ ಕವಚ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ, 3Kg_500ಗ್ರಾಂ ಚಿನ್ನದ ಕವಚವನ...
05/02/2023

ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ಮುಗ್ವಾ. ದೇವಸ್ಥಾನಕ್ಕೆ.
ಶ್ರೀ ಗಣಪತಿ ಮುಖ ಕವಚ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ, 3Kg_500ಗ್ರಾಂ ಚಿನ್ನದ ಕವಚವನ್ನು.
ಶ್ರೀಯುತ ಸತೀಶ್ ಸುರೇಶ್ ಶೇಟ್, ಕುಮುಟ, ಇವರು ತಯಾರಿಸಿಸುತ್ತಾರೆ.
ಇವರ ಈ ಕಲೆಗೆ ನಿಮ್ಮ ಮೆಚ್ಚುಗೆ ಇರಲಿ.
ಶ್ರೀ ಗಣಪತಿ ಹಾಗೂ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಕೃಪಾಆಶೀರ್ವಾದ ಇವರ ಮೇಲೆ ಇರಲಿ ಎಂದು ಪ್ರಾರ್ಥನೆ.

ಶ್ರೀ ಲಕ್ಕ ಮದೇವಿ ಕಲಾ ಪೋಷಕ ಸಂಘ (‌ರಿ)ಇವರ ಸಾರಥ್ಯದಲ್ಲಿ5ನೇ ವಾರ್ಷಿಕೋತ್ಸವದ ಪ್ರಯುಕ್ತತಾರೀಕು:22-1-2023 ರಂದು ನಡೆದಅಖಂಡ ಕರ್ನಾಟಕ ಸಾಧಕರ ...
24/01/2023

ಶ್ರೀ ಲಕ್ಕ ಮದೇವಿ ಕಲಾ ಪೋಷಕ ಸಂಘ (‌ರಿ)
ಇವರ ಸಾರಥ್ಯದಲ್ಲಿ
5ನೇ ವಾರ್ಷಿಕೋತ್ಸವದ ಪ್ರಯುಕ್ತ
ತಾರೀಕು:22-1-2023 ರಂದು ನಡೆದ
ಅಖಂಡ ಕರ್ನಾಟಕ ಸಾಧಕರ ಸಮಾವೇಶ 2023
ಶ್ರೀ ಪ್ರಸಾದ್ ಜಿ ರೇವಣಕರ್ ಇವರಿಗೆ National achievement Global award ಅನ್ನು ಕೊಟ್ಟು ಸನ್ಮಾನಿಸಿದ್ದಾರೆ.

Address

Karnataka

571213

Alerts

Be the first to know and let us send you an email when Daivajna Brahmanara Sangha Gonikoppal posts news and promotions. Your email address will not be used for any other purpose, and you can unsubscribe at any time.

Contact The Business

Send a message to Daivajna Brahmanara Sangha Gonikoppal:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share