18-6-24
ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಲಾದ ಹೇಳಿಕೆ...
ಶಿಳ್ಳೆಕ್ಯಾತ ಸಮುದಾಯಗಳಿಗೆ ಉಚಿತ ಮನೆ ನಿವೇಶನ ಸಹಿತ ಮೂಲಭೂತ ಸೌಕರ್ಯಗಳ ಒದಗಿಸಲು ಒತ್ತಾಯ.
ಉಡುಪಿ, ಕುಂದಾಪುರದ ಹಾಲಾಡಿ, ಬ್ರಹ್ಮಾವರ, ಮಲ್ಪೆ, ಕಟ್ ಬೆಳ್ತೂರು, ಕಟಪಾಡಿ, ಪಾಂಗಾಳ ಭಾಗದ ನದಿ ತೀರಗಳಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯವೆಂದು ಘೋಷಿಸಲಾಗಿರುವ ಶಿಳ್ಳೆಕ್ಯಾತ ಸಮುದಾಯದ ಸುಮಾರು 25 ಕುಟುಂಬಗಳು ಕಳೆದ ಹಲವು ವರುಷಗಳಿಂದ ತೆಪ್ಪಗಳ ಮೂಲಕ ನದಿಯಲ್ಲಿ ಬಲೆ ಬೀಸಿ ಮೀನು ಹಿಡಿದು ಮಾರಾಟ ಮಾಡುವ ಕಷ್ಟದಾಯಕ ಮತ್ತು ಅಪಾಯಕಾರಿ ವೃತ್ತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಸಮುದಾಯಗಳು ಯಾವುದೇ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದ ಗುಡಿಸಲುಗಳಲ್ಲಿ ವಾಸಿಸುತ್ತಿರುವುದು ಮಾತ್ರವಲ್ಲದೆ ಸ್ಥಳೀಯರಿಂದ ಶೋಷಣೆಗೂ ಒಳಗಾಗುತ್ತಿದ್ದಾರೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಕ್ಕೆ ಸೇರಿರುವ ಶಿಳ್ಳೆಕ್ಯಾತ ಅಲೆಮಾರಿ ಕುಟುಂಬಗಳಿಗೆ ಉಚಿತ ಮನೆ ನಿವೇಶನ ಸಹಿತ ಸರಕಾರದ ವಿವಿಧ ಸವಲತ್ತುಗಳನ್ನು ಒದಗಿಸಿಕೊಡುವಂತೆ ಮಾಡುವುದು ಜಿಲ್ಲಾಡಳಿತದ ಕರ್ತವ್ಯ. ಅಲೆ
ಭಜನೆಯಿಂದ ವಿಭಜನೆಗೆ ಅವಕಾಶ ಇಲ್ಲವೇ ಇಲ್ಲ!
ಉಡುಪಿ: ಬ್ರಹ್ಮಾವರ ಕೃಷಿ ಕಾಲೇಜು ಮುಚ್ಚುವುದನ್ನು ವಿರೋಧಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ ನಡೆಸಲಾಯಿತು.
ಧರಣಿ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಉಡುಪಿ ಜಿಲ್ಲಾ ಉಸ್ತುವಾರಿ ಲಕ್ಷೀ ಹೆಬ್ಬಾಳ್ಕರ್ ಹಾಗೂ ಎಮ್.ಎಲ್.ಸಿ.ಮಂಜುನಾಥ ಭಂಡಾರಿ ಬಂದು ಮನವಿ ಸ್ವೀಕರಿಸಿದರು.
ಹೋರಾಟ ಸಮಿತಿ ನಿಯೋಗ ಬೆಂಗಳೂರಿಗೆ ತೆರಳಲಿ, ಜೂನ್ 13 ರಂದು ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಿಸುವುದಾಗಿ ಉಸ್ತುವಾರಿ ಮಂತ್ರಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಉಡುಪಿ: ಬ್ರಹ್ಮಾವರ ಕೃಷಿ ಕಾಲೇಜು ಮುಚ್ಚುವುದನ್ನು ವಿರೋಧಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ ನಡೆಸಲಾಯಿತು.
ಧರಣಿ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಉಡುಪಿ ಜಿಲ್ಲಾ ಉಸ್ತುವಾರಿ ಲಕ್ಷೀ ಹೆಬ್ಬಾಳ್ಕರ್ ಹಾಗೂ ಎಮ್.ಎಲ್.ಸಿ.ಮಂಜುನಾಥ ಭಂಡಾರಿ ಬಂದು ಮನವಿ ಸ್ವೀಕರಿಸಿದರು.
ಹೋರಾಟ ಸಮಿತಿ ನಿಯೋಗ ಬೆಂಗಳೂರಿಗೆ ತೆರಳಲಿ, ಜೂನ್ 13 ರಂದು ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಿಸುವುದಾಗಿ ಉಸ್ತುವಾರಿ ಮಂತ್ರಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಿಪಿಐ(ಎಂ) ಒತ್ತಾಯ
ಮಂಗಳೂರು: ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ನಿರ್ಮಾಣ ಕಾರ್ಯ ಕಳೆದ ಮೂರು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದ ಪರಿಣಾಮ ಉಳ್ಳಾಲ, ತೊಕ್ಕೋಟ್ಟು, ಬಜಾಲ್, ಜಪ್ಪಿನಮೊಗರು ಸೇರಿದಂತೆ ಆಸುಪಾಸಿನ ಸಾವಿರಾರು ಜನತೆ ತೀರಾ ಸಂಕಷ್ಟಕ್ಕೊಳಗಾಗಿ ದಿನನಿತ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.ರೈಲ್ವೆ ಇಲಾಖೆ ಕೆಳಸೇತುವೆ (ಅಂಡರ್ ಪಾಸ್) ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಮುಗಿಸಿ ಜನರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್ವಾದಿ)ಕೇಂದ್ರ ವಿಭಾಗ ಸಮಿತಿಯು ಒತ್ತಾಯಿಸಿದ್ದು, ಈ ಬಗ್ಗೆ ಜೂನ್ ರಂದು ಪಕ್ಷದ ಉನ್ನತ ಮಟ್ಟದ ನಿಯೋಗವೊಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿಯನ್ನು ಅರ್ಪಿಸಿತು.
ಕೇರಳ ರಾಜ್ಯದಿಂದ ಹಿಡಿದು ಉಳ್ಳಾಲ, ತಲಪಾಡಿ, ತೊಕ್ಕೋಟು, ಕೋಣಾಜೆ, ಬಜಾಲ್, ಜಪ್ಪಿನಮೊಗರು ಸೇರಿದಂತೆ ಆ ಭಾಗದ ಸಾವಿ
ಮಂಗಳೂರು-ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ಸಾಣೂರು ಚಿಲಿಂಬಿ ಎಂಬಲ್ಲಿ ವರ್ಷಪೂರ್ತಿ ತೊರೆಯಿಂದ ಬರುವ ನೀರನ್ನು ಕೆಲವರು ತಮ್ಮ ಪಾಲಿಗೆ ಪಂಚಮೃತ ಎಂಬಂತೆ ಬಾಟಲಿಗಳಲ್ಲಿ ಸಂಗ್ರಹಿಸಿ ಕುಡಿಯಲು ಕೊಂಡು ಹೋಗುತ್ತಾರೆ.
ಇನ್ನೂ ಕೆಲವರು ಸ್ನಾನ ಮಾಡುತ್ತಾರೆ, ಬಟ್ಟೆ ಒಗೆಯುತ್ತಾರೆ.
ಇದು ಸರ್ವೇ ಸಾಮಾನ್ಯವೂ ಆಗಿದೆ.
ಕೆಂಪುಕಲ್ಲು ಸಾಗಾಟ ಮಾಡುವ ಲಾರಿಯೊಂದರಲ್ಲಿ ದುಡಿಯುವ ಕಾರ್ಮಿಕರಿಬ್ಬರು ತಾವು ಧರಿಸಿದ ಬಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ತೊಳೆದು, ತೊರೆಯಿಂದ ಸುರಿಯುತ್ತಿದ್ದ ನೀರಿನಲ್ಲಿ ಸ್ನಾನ ಮಾಡುವ ದೃಶ್ಯಾವಳಿ ಕಂಡುಬಂದಿದೆ.
ಮಂಗಳೂರು : ಕಲ್ಲಾಪು ಬಳಿಯಿರುವ ಗ್ಲೋಬಲ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ ಸಂಭವಿಸಿ 5 ದೊಡ್ಡ ಹಾಗೂ 20 ಸಣ್ಣ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿ , ವ್ಯಾಪಾರಸ್ಥರಿಗೆ ಕೋಟ್ಯಂತರ ರೂ ನಷ್ಟ ಉಂಟಾಗಿದೆ.
ಕಾರ್ಕಳ ಮೂಲದ ಡಾ. ಅಶ್ವಥ್ ಎಂಬವರಿಗೆ ಮಂಗಳೂರಿನ ಉರ್ವಸ್ಟೋರಿನಲ್ಲಿ
BHUVINA
MULTI-SPECIALITY DENTAL CLINIC
ಇದೆ.
ಚಿತ್ರ ನಟಿ ಹಾಗೂ ವಾಹಿನಿಯೊಂದರ ನಿರೂಪಕಿ ಅನುಶ್ರೀ ಶಾಲೆಗೆ ಹೋಗುತ್ತಿದ್ದಾಗ ಸಂಜೆ ವೇಳೆಗೆ ಅದೇ ಕ್ಲಿನಿಕ್ ನಲ್ಲಿ ಕೆಲಸ ಮಾಡಿಕೊಂಡಿದ್ದರು... ಅದರ ಕುರಿತು ತನ್ನ ಅನುಭವ ಹಂಚಿಕೊಂಡ ಅನುಶ್ರೀ....
*ವಿಡಿಯೋ*
ಮಂಗಳೂರಿನ ಬಲ್ಮಠ ಬಳಿ ಕಾಯುತ್ತಿದೆ ಮರಣ ಗುಂಡಿ ನರ ಬಲಿಗಾಗಿ....
ಜಿಲ್ಲಾಡಳಿತ ಎಚ್ಚೆತ್ತುಗೊಳ್ಳಬೇಕು....
ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಅವರು ಹೇಳಿಕೆ ಇದಾಗಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿ ಈ ಬಗ್ಗೆ ಗಮನ ಹರಿಸಿ ಇಸ್ವೀಟ್ ದಂಧೆಗೆ ಕಡಿವಾಣ ಹಾಕುವುದು ಅತ್ಯಗತ್ಯ ಎಂಬ ಆಗ್ರಹವೂ ಆಗಿದೆ.
ಕಾರ್ಕಳ ಹಾಳೆಕಟ್ಟೆ ಕಲ್ಯಾ ಮಲಯ್ಯಬೆಟ್ಟು ಎಂಬಲ್ಲಿ ಹಾಡುಹಗಲೇ ಕಾಣಿಸಿಕೊಂಡಿದೆ ಎನ್ನಲಾದ ಚಿರತೆ ಇದಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದ ಮಾಡುತ್ತಿದ್ದು, ಅರಣ್ಯ ಇಲಾಖೆ ಎಚ್ಚತ್ತುಕೊಂಡು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂಬ ಮಾಹಿತಿಯನ್ನು ಹಂಚಲಾಗಿದೆ.
ಕಾರ್ಕಳ ಹಾಳೆಕಟ್ಟೆ ಕಲ್ಯಾ ಮಲಯ್ಯಬೆಟ್ಟು ಎಂಬಲ್ಲಿ ಹಾಡುಹಗಲೇ ಕಾಣಿಸಿಕೊಂಡಿದೆ ಎನ್ನಲಾದ ಚಿರತೆ ಇದಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದ ಮಾಡುತ್ತಿದ್ದು, ಅರಣ್ಯ ಇಲಾಖೆ ಎಚ್ಚತ್ತುಕೊಂಡು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂಬ ಮಾಹಿತಿಯನ್ನು ಹಂಚಲಾಗಿದೆ.
ಉಡುಪಿಯಲ್ಲಿ ತಲ್ವಾರ್ ಹಿಡಿದು ಸಿನಿಮಾರೀತಿಯಲ್ಲಿ ಗ್ಯಾಂಗ್ ವಾರ್...🤦🏻♂️
ಮಾರಿಹಬ್ಬಕ್ಕೆ ಮಳೆ....
ಕಾರ್ಕಳ: ಮೇ 21 ಮಾರಿಹಬ್ಬ. ಐತಿಹಾಸಿಕ ಹಿನ್ನಲೆಯ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುತ್ತಿರುವ ಮಾರಿಪೂಜೆ ಅಥವಾ ಮಾರಿಹಬ್ಬದ ಸಂಭ್ರಮ, ಸಡಗರ. ಭಕ್ತ ಸಮೂಹವೂ ಇಡೀ ನಗರದಲ್ಲಿ ಕಾಣುತ್ತಿತ್ತು.
ಮೂರು ಮಾರ್ಗದಲ್ಲಿ ಶ್ರೀ ಮಾರಿಯಮ್ಮ ದೇವಿಯ ವಿಗ್ರಹವನ್ನು ಇರಿಸಿ ಪೂಜಿಸಲಾಗಿತ್ತು. ಅಸಂಖ್ಯಾತ ಭಕ್ತರು ತಮ್ಮ ಇಷ್ಟಾರ್ಥವಾಗಿ ಶ್ರೀಮಾರಿಯಮ್ಮ ದೇವಿಗೆ ಮಲ್ಲಿಗೆ, ಹಣ್ಣುಕಾಯಿ, ಬಳೆ, ಲಿಂಬೆ ಸಮರ್ಪಿಸಿ ಕೃತಾರ್ಥರಾದರು.
ಜಾತಿ-ಧರ್ಮ-ಬಾಷೆ ಇವೆಲ್ಲವನ್ನು ಮೀರಿ ಮಾರಿಹಬ್ಬ ಜಾತ್ರೆಯಲ್ಲಿ ರಾಜ್ಯದ ವಿವಿದೆಡೆಗಳಿಂದ ವ್ಯಾಪಾರಸ್ಥರು ವ್ಯಾಪಾರ ಮಳಿಗೆಗಳು ತೆರೆದರು.
ಮಧ್ಯಾಹ್ನ 2.30ರ ವೇಳೆಯಾಗುತ್ತಿದ್ದಂತೆ ಮೋಡ ಕವಿದ ವಾತಾವರಣದ ನಡುವೆ ಗುಡುಗು, ಸಿಡಿಲು ನಡುವೆ ಒಮ್ಮಿದೊಮ್ಮೆಲೆ ಸುರಿದ ಭಾರೀ ಮಳೆ.
ಕಾರ್ಕಳ ಪ್ರವಾಸಿಮಂದಿರದಲ್ಲಿ ಸೆರೆಹಿಡಿದ ವಿಡಿಯೋ ಇದಾಗಿದೆ.
ಕಾರ್ಕಳ ಮೇ: 19: ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು ಠಾಣಾ ವ್ಯಾಪ್ತಿಯ ಶಿರ್ಲಾಲು ಎಂಬಲ್ಲಿ ನಡೆದಿದೆ.
ಶಿರ್ಲಾಲು ನಿವಾಸಿಗಳಾದ ಹರೀಶ್ ಪೂಜಾರಿ (48) ಹಾಗೂ ಅವರ ಸಹೋದರಿ ಪುತ್ರ ರಿತೇಶ್ (18) ಎಂಬವರು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದವರು.
ಸ್ಥಳೀಯ ಶಿರ್ಲಾಲು ಗ್ರಾಮದ ಉಬೈಲು ಗುಂಡಿ ಕೆರೆಗೆ ಮೀನು ಹಿಡಿಯಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದ್ದು ಮೀನು ಹಿಡಿಯುತ್ತಿದ ರಿತೇಶ್ ಮುಳುಗುವುದು ಕಂಡು ಅತನನ್ನು ರಕ್ಷಿಸಲು ಹೋದ ಹರೀಶ್ ಪೂಜಾರಿ ಅವರೂ ನೀರಿನಲ್ಲಿ ಮುಳುಗಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಕುರುಡುತನ ಪ್ರದರ್ಶಿಸುತ್ತಿರುವ ಉಡುಪಿ ಜಿಲ್ಲಾಡಳಿತ
ಕಾರ್ಕಳ : ಉಡುಪಿ ಜಿಲ್ಲಾಡಳಿತ ಕುರುಡುತನ ಪ್ರದರ್ಶಿಸುತ್ತಿದೆ. ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿ ದೂರು ನೀಡಿದ್ದರೂ ಸಕಾರಾತ್ಮಕ ವಾಗಿ ಸ್ವಂದಿಸದೇ ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಕಾರ್ಕಳ ಪುರಸಭಾ ಸದಸ್ಯ ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳುಕೆಯೊಂದನ್ನು ಬಿಡುಗಡೆ ಮಾಡಿರುವ ಕಾರ್ಕಳ ಪುರಸಭಾ ಸದಸ್ಯ ಶುಭದರಾವ್, ಐತಿಹಾಸಿಕ ಹಿನ್ನಲೆಯುಳ್ಳ ರಾಮಸಮುದ್ರ ಪರಿಸರ ನೈರ್ಮಲ್ಯ ಹಾಳಾಗುತ್ತಿದೆ.
ಕಾರ್ಕಳ ಪುರಸಭಾ ಜನತೆಗೆ ಸಮಗ್ರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುವ ರಾಮಸಮುದ್ರ ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನಲ್ಲೆಯುಳ್ಳದಾಗಿದೆ.
ಇದರ ಪರಿಸರದಲ್ಲಿ ಭಾರೀ ಗಾತ್ರದ ಕಬ್ಬಿಣ ಪೈಪ್ ಗಳಿಗೆ ಸಿಮೆಂಟ್ ಹೊದಿಕೆ ನಿರ್ಮಾಣದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಕಡುಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿಗೆ ತಾತ್ವಾರ ಎದುರಾಗಿದ್ದರೂ, ಮೇಲಿನ ಕಾಮಗಾರಿಗೆ ರಾಮಸಮುದ್ರದ ಕುಡಿಯುವ ನೀರನ್ನೇ ದುರ್ಬ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಯಾವ ರೀತಿಯಲ್ಲಿ ವರ್ತಿಸಿದ್ದರೆಂದು ಈ ವಿಡಿಯೋದಲ್ಲಿ ಕಾಣಬಹುದು.
ಕಾನೂನು ಸುವ್ಯವಸ್ಥೆಗೆ ಪೊಲೀಸ್ ಠಾಣೆ ಸ್ಥಾಪನೆಗೊಂಡಿದೆ. ಅಲ್ಲಿರುವ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಗೌರವಿಸುವುದು ಭಾರತೀಯ ನಾಗರಿಕರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ.
ಪೊಲೀಸ್ ಠಾಣೆ ಎಂದಿಗೂ ರಾಜಕೀಯ ಪಡಸಾಲೆಯಾಗಬಾರದು.