
01/08/2025
Dheeksh*th Shetty | Full Episode | Bench Talk | Web Sambhashane | Maadhyama Aneka
Watch here: https://youtu.be/bjmvy8i0k3Q
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ದಿಟ್ಟ ಪ್ರಯೋಗಗಳನ್ನು ಮಾಡುತ್ತಿರುವ ಯುವ ಪ್ರತಿಭೆಗಳಲ್ಲಿ ಎದ್ದು ಕಾಣುವ ಹೆಸರು ಧೀಕ್ಷಿತ್ ಶೆಟ್ಟಿ. ಕಾನೂನು ಪದವೀಧರ. ರಂಗಭೂಮಿಯ ಹಿನ್ನೆಲೆಯಿಂದ ಕಿರುತೆರೆಯೆಡೆಗೆ ಹೊರಳಿದ ಧೀಕ್ಷಿತ್ ತಮ್ಮ ನಟನಾ ಪಯಣವನ್ನು ಪ್ರಾರಂಭಿಸಿದ್ದು - 'ಪ್ರೀತಿ ಎಂದರೇನು' (Star Suvarna), 'ಸಾಕ್ಷಿ' (Udaya TV), ಮತ್ತು 'ನಾಗಿಣಿ' (Zee Kannada) ಧಾರಾವಾಹಿಗಳ ಮೂಲಕ. ನಾಗಿಣಿ ಯಲ್ಲಿ ದೀಪಿಕಾ ದಾಸ್ ಅವರೊಂದಿಗೆ ಮಾಡಿದ ಅರ್ಜುನ್ ಪಾತ್ರದ ಮೂಲಕ ಮನೆಮನೆಯಲ್ಲೂ ಚಿರಪರಿಚಿತರಾದರು.
ಇವರ ಬೆಳ್ಳಿತೆರೆ ಬ್ರೇಕ್ 'ದಿಯಾ' ಚಿತ್ರದಿಂದ. ನಂತರ ತೆರೆಕಂಡ KTM ಮತ್ತು 'Blink' ಇವರ ನಟನಾಸಾಮರ್ಥ್ಯವನ್ನು ಇನ್ನಷ್ಟು ತೆರೆಗೆ ತಂದುಕೊಟ್ಟವು. ಇದೀಗ 'ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು', 'Strawberry', 'Bank of Bhagyalakshmi' ಇವರ ಮುಂಬರುವ ಕನ್ನಡ ಚಿತ್ರಗಳು. ಇದಲ್ಲದೆ 'ವಿಡಿಯೋ' ಎಂಬ ವಿಭಿನ್ನ ಕಥಾಹಂದರದ ಚಿತ್ರವೊಂದನ್ನು ತಮ್ಮದೇ ಬ್ಯಾನರ್ 'ಧೀ ಪ್ರೋಡ್ಯೂಕ್ಷನ್ಸ್' ನ ಚೊಚ್ಚಲ ನಿರ್ಮಾಣ ಮಾಡಿ ಬಿಡುಗಡೆ ಮಾಡುವ ಹಂತದಲ್ಲಿದ್ದಾರೆ ಧೀಕ್ಷಿತ್.
ತೆಲುಗುವಿನಲ್ಲಿ ‘‘ಮುಗ್ಗುರು ಮೊನಗಾಳ್ಳು’ ಹಾಸ್ಯ ಪ್ರಧಾನ ಥ್ರಿಲ್ಲರ್ ಚಿತ್ರ, ‘The Rose Villa’, ಹೆಸರಾಂತ ನಟರಾದ ನಾಣಿ, ಕೀರ್ತಿ ಸುರೇಶರೊಂದಿಗೆ ನಟಿಸಿದ 'ದಸರಾ' ದಲ್ಲಿ ಪ್ರಮುಖ ಪಾತ್ರ ಹೀಗೆ ವಿಭಿನ್ನ ಪಾತ್ರನಿರ್ವಹಣೆಯ ಮೂಲಕ ಅಲ್ಲಿನ ಪ್ರೇಕ್ಷಕರನ್ನು ಗೆದ್ದರು. ರಶ್ಮಿಕಾ ಮಂದಣ್ಣನವರ ಜೊತೆ The Girlfriend ಮತ್ತು KJK ಇವರ ಮುಂಬರುವ ತೆಲುಗು ಚಿತ್ರಗಳು. ಮಲಯಾಳಂನ Oppees ಚಿತ್ರ ಇಷ್ಟರಲ್ಲೇ ತೆರೆಕಾಣಲಿದೆ.
ತನ್ನ ಪಾತ್ರಗಳಲ್ಲಿ ಸದಾ ವಿಭಿನ್ನತೆಯನ್ನು ಹುಡುಕುವ, ಸದಾ ಹೊಸತೊಂದನ್ನು ತೆರೆಯ ಮೇಲೆ ತರುವ ಹುಮ್ಮಸಿನ, ಪ್ರತಿಭಾವಂತ ನಟ-ನಿರ್ಮಾಪಕ ಧೀಕ್ಷಿತ್ ಶೆಟ್ಟಿ ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ Bench Talk ಕಾರ್ಯಕ್ರಮದ ಅತಿಥಿ.
Subscribe for Maadhyama Aneka Channel to get updates and notification on more entertainment and infotainment content. https://www.youtube.com/channel/UCYnLZEzdWg-WSoiJNCPxUIQ?sub_confirmation=1
Please leave your feedback and comments.
Follow Maadhyama Aneka on :
Facebook : https://www.facebook.com/maadhyama/
Instagram : https://www.instagram.com/maadhyama.aneka/
Twitter : https://twitter.com/MaadhyamaA
Website : www.maadhyama-aneka.com
© Maadhyama Aneka Pvt. Ltd. | 2025