08/11/2024
ಪರಮ ಸತ್ಪುರುಷಾರ್ಥ ರೂಪನು ॥ಹರಿಯು ಲೋಕಕೆ ಎಂದು ಪರಮಾ | ದರದಿ ಸದುಪಾಸನೆಯ ಗೈವರಿಗಿತ್ತನು ತನ್ನ ||ಮರೆದು ಧರ್ಮಾರ್ಥಗಳ |ಕಾಮಿಸು ವರಿಗೆ ನಗುತತಿ ಶೀಘ್ರದಿಂದಲಿ | ಸುರಪತನಯ ಸುಯೋಧನರಿಗಿತ್ತಂತೆ ಕೊಡುತಿಪ್ಪ ||7||
ಶ್ರೀ ಹರಿಯು ಕೊಡುಗೈ ದಾನಿ. ಪರಮ ಸತ್ಪುರುಷಾರ್ಥ ರೂಪನು ಅವನು ಎಂದು ನಂಬಿ ಪರಮಾದರದಿಂದ ಸದುಪಾಸನೆ ಮಾಡಿದವರಿಗೆ ತನ್ನನ್ನೇ ಅರ್ಪಿಸಿಕೊಳ್ಳುವನು. ಇದಕ್ಕೆ ಅರ್ಜುನನೇ ಉದಾಹರಣೆ. ಶ್ರೀ ಕೃಷ್ಣನಲ್ಲಿ ಬೇಡಲು ಹೋದಾಗ ಅವನ ಪಾದ ಬಳಿ ಕುಳಿತದ್ದಲ್ಲದೇ ಅವನನ್ನೇ ಬೇಡಿ ಕೊಂಡದ್ದಕ್ಕೆ ಅವನಿಗೆ ಎಲ್ಲವೂ ದೊರಕಿತು. ಸುಯೋಧನನು ಕೇವಲ ಸೈನ್ಯ ಸಹಾಯವನ್ನಷ್ಟೇ ಬೇಡಿದನು, ಅವನಿಗೆ ಸಕಲ ಸೈನ್ಯ ಕಾಳಗಕ್ಕೆ ಸಿದ್ಧವಾಗದ ಸೇವೆ ಕರುಣಿಸಿದರೂ, ತನ್ನ ಒಲುಮೆಯನ್ನು ನೀಡಲಿಲ್ಲ.