Ritam ಕನ್ನಡ

  • Home
  • Ritam ಕನ್ನಡ

Ritam ಕನ್ನಡ ವಾಸ್ತವ ಸುದ್ದಿಗಳ ಆದ್ಯತೆಯೊಂದಿಗೆ.. Ritam brings you timely Updates & In-depth Analysis. Stay Informed!

06/07/2024

ಅಡ್ವಾಣಿ ಅವರ ರಾಮಮಂದಿರ ನಿರ್ಮಾಣ ಚಳುವಳಿಯನ್ನು ಸೋಲಿಸಿದ್ದೇವೆ ಎಂದ ರಾಹುಲ್ ಗಾಂಧಿ.

ಅಯೋಧ್ಯಾವನ್ನು ಕೇಂದ್ರವಾಗಿಸಿ ಅಡ್ವಾಣಿ ಅವರು ಆರಂಭಿಸಿದ ಚಳವಳಿಯನ್ನು ಐಎನ್‌ಡಿಐಎ ಮೈತ್ರಿಕೂಟವು ಅಯೋಧ್ಯಾದಲ್ಲಿಯೇ ಮಣಿಸಿದೆ ಎಂದ ರಾಹುಲ್ ಗಾಂಧಿ

ಜುಲೈ 23ರಂದು 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಜುಲೈ 23 ರಂದು ಮಂಡಿಸಲಾಗುವುದ...
06/07/2024

ಜುಲೈ 23ರಂದು 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ

2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಜುಲೈ 23 ರಂದು ಮಂಡಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ

ಜುಲೈ 22 ರಂದು ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ಆಗಸ್ಟ್ 12 ರಂದು ಮುಕ್ತಾಯಗೊಳ್ಳಲಿದೆ

06/07/2024

ಉರುಮ್ಚಿ ಹತ್ಯಾಕಾಂಡದ ವಾರ್ಷಿಕೋತ್ಸವ | ಚೀನಾ ವಿರುದ್ಧ ಪ್ರತಿಭಟಿಸಿದ ಉಯ್ಘರ್ ಮುಸ್ಲಿಮರು

ಇರಾನ್ : ಮೂಲಭೂತವಾದಿ ಜಲಿಲಿಯನ್ನು ಸೋಲಿಸಿದ ಮಸೂದ್ ಪೆಝೆಶ್ಕಿಯಾನ್ಎಣಿಕೆಯಾದ ಮೂರು ಕೋಟಿ ಮತಗಳಲ್ಲಿ ಡಾ. ಮಸೂದ್ ಪೆಜೆಶ್ಕಿಯಾನ್ ಅವರು 53.3 ರಷ್...
06/07/2024

ಇರಾನ್ : ಮೂಲಭೂತವಾದಿ ಜಲಿಲಿಯನ್ನು ಸೋಲಿಸಿದ ಮಸೂದ್ ಪೆಝೆಶ್ಕಿಯಾನ್

ಎಣಿಕೆಯಾದ ಮೂರು ಕೋಟಿ ಮತಗಳಲ್ಲಿ ಡಾ. ಮಸೂದ್ ಪೆಜೆಶ್ಕಿಯಾನ್ ಅವರು 53.3 ರಷ್ಟು ಮತಗಳನ್ನು ಪಡೆದರೆ, ಜಲಿಲಿ 44.3 ರಷ್ಟು ಮತಗಳನ್ನು ಪಡೆದಿದ್ದಾರೆ.

ಪ್ರಖರ ರಾಷ್ಟ್ರೀಯವಾದಿ, ದೇಶದ ಅಖಂಡತೆಗಾಗಿ ಶ್ರಮಿಸಿದ ಮಹಾನ ನಾಯಕ, ಶಿಕ್ಷಣ ತಜ್ಞ ಜನಸಂಘದ ಸ್ಥಾಪಕರು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ರವರ ಜನ್ಮ ...
06/07/2024

ಪ್ರಖರ ರಾಷ್ಟ್ರೀಯವಾದಿ, ದೇಶದ ಅಖಂಡತೆಗಾಗಿ ಶ್ರಮಿಸಿದ ಮಹಾನ ನಾಯಕ, ಶಿಕ್ಷಣ ತಜ್ಞ ಜನಸಂಘದ ಸ್ಥಾಪಕರು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ರವರ ಜನ್ಮ ದಿನದಂದು ಶತ ಶತ ನಮನಗಳು.

ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ದಲಿತರ 14 ಸಾವಿರ ಕೋಟಿ ರೂ. ವರ್ಗಾವಣೆ.ದಲಿತ ಸಮುದಾಯದ ಅಭಿವೃದ್ಧಿಗಾಗಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಮೀಸಲಿಟ್ಟಿದ...
05/07/2024

ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ದಲಿತರ 14 ಸಾವಿರ ಕೋಟಿ ರೂ. ವರ್ಗಾವಣೆ.

ದಲಿತ ಸಮುದಾಯದ ಅಭಿವೃದ್ಧಿಗಾಗಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಮೀಸಲಿಟ್ಟಿದ್ದ 39,171 ಕೋಟಿ ರೂಪಾಯಿ ಅನುದಾನದಲ್ಲಿ 14,282 ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದ ಸಿದ್ದರಾಮಯ್ಯ.

05/07/2024

ಆತಂಕ ಮೂಡಿಸುತ್ತಿದೆ ಮೆದುಳು ತಿನ್ನುವ ಅಮೀಬಾ! | ಸೋಂಕಿನಿಂದ ಕೇರಳದಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರು ಸಾವು! |

ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಸುತ್ತೋಲೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾ...
05/07/2024

ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಸುತ್ತೋಲೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಬಿ. ಅವರು ಸುತ್ತೋಲೆ ಹೊರಡಿಸಿದ್ದಾರೆ.

UK General Elections 2024: ಸೋಲಿನತ್ತ ರಿಷಿ ಸುನಕ್‌ ಪಕ್ಷ, ಪ್ರಚಂಡ ಜಯದತ್ತ ಲೇಬರ್‌ ಪಾರ್ಟಿಪ್ರಧಾನಿ ರಿಷಿ ಸುನಕ್‌ ಅವರ ಕನ್ಸರ್ವೇಟಿವ್‌ ಪ...
05/07/2024

UK General Elections 2024: ಸೋಲಿನತ್ತ ರಿಷಿ ಸುನಕ್‌ ಪಕ್ಷ, ಪ್ರಚಂಡ ಜಯದತ್ತ ಲೇಬರ್‌ ಪಾರ್ಟಿ

ಪ್ರಧಾನಿ ರಿಷಿ ಸುನಕ್‌ ಅವರ ಕನ್ಸರ್ವೇಟಿವ್‌ ಪಕ್ಷಕ್ಕೆ ಹೀನಾಯ ಸೋಲು.

ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು 14 ವರ್ಷಗಳ ಬಳಿಕ ಅಧಿಕಾರಕ್ಕೆ ಬರಲಿದೆ.

ಮಾರ್ನಿಂಗ್ ಪಾಸಿಟಿವ್ ವಿಚಾರ - ಋತಮ್ ಕನ್ನಡ
05/07/2024

ಮಾರ್ನಿಂಗ್ ಪಾಸಿಟಿವ್ ವಿಚಾರ - ಋತಮ್ ಕನ್ನಡ

ವಿಶ್ವಕಪ್ ವಿಜೇತರ ವಿಜಯಯಾತ್ರೆ - ಮುಂಬೈ
04/07/2024

ವಿಶ್ವಕಪ್ ವಿಜೇತರ ವಿಜಯಯಾತ್ರೆ - ಮುಂಬೈ

04/07/2024

ಕಿಕ್ಕಿರಿದ ಜನಸಂದಣಿ ನಡುವೆಯೂ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಭಾರತದ ಕ್ರಿಕೆಟ್ ಅಭಿಮಾನಿಗಳು.

04/07/2024

ಝಾನ್ಸಿ ರಾಣಿ ಲಕ್ಷ್ಮೀಬಾಯಿ : ನಿಮಗೆ ತಿಳಿದಿಲ್ಲದ ಒಂದು ಅಜ್ಞಾತ ಕಥೆ

ಅಗ್ನಿವೀರ್‌ ಬಗ್ಗೆ ಸುಳ್ಳು ಹೇಳಿದ ರಾಹುಲ್‌ ಗಾಂಧಿಗೆ ಭಾರತೀಯ ಸೇನೆಯ ತೀಕ್ಷ್ಣ ಪ್ರತ್ಯುತ್ತರಕರ್ತವ್ಯದ ಸಾಲಿನಲ್ಲಿ ಹುತಾತ್ಮರಾದ ಅಗ್ನಿವೀರ್ ಅಜ...
04/07/2024

ಅಗ್ನಿವೀರ್‌ ಬಗ್ಗೆ ಸುಳ್ಳು ಹೇಳಿದ ರಾಹುಲ್‌ ಗಾಂಧಿಗೆ ಭಾರತೀಯ ಸೇನೆಯ ತೀಕ್ಷ್ಣ ಪ್ರತ್ಯುತ್ತರ

ಕರ್ತವ್ಯದ ಸಾಲಿನಲ್ಲಿ ಹುತಾತ್ಮರಾದ ಅಗ್ನಿವೀರ್ ಅಜಯ್ ಕುಮಾರ್ ಅವರಿಗೆ ನೀಡಲಾದ ಪರಿಹಾರದ ಬಗ್ಗೆ ಸ್ಪಷ್ಟನೆ ನೀಡಿದೆ.

ಅಜಯ್ ಕುಟುಂಬಕ್ಕೆ ಈಗಾಗಲೇ 98 ಲಕ್ಷ 39 ಸಾವಿರ ರೂಪಾಯಿ ಪಾವತಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

Crazy scenes from Marine Drive | Mumbai |
04/07/2024

Crazy scenes from Marine Drive | Mumbai |

04/07/2024

ವಿಶ್ವಕಪ್ ವಿಜೇತ ಟೀಮ್ ಇಂಡಿಯಾ ಸ್ವಾಗತಕ್ಕೆ ಮುಂಬೈ ಬೀದಿಯಲ್ಲಿ ಸೇರಿದ ಲಕ್ಷಾಂತರ ಅಭಿಮಾನಿಗಳು.

Crazy scenes from Marine Drive| Mumbai |

04/07/2024

ಪ್ರಧಾನಿ ಮೋದಿ ಭೇಟಿಯಾದ ಟಿ 20 ವಿಶ್ವಕಪ್ ವಿಜೇತ ಭಾರತೀಯ ತಂಡ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತೀಯ ಕ್ರಿಕೆಟ್‌ ತಂಡದ ಆಟಗಾರರನ್ನು ತಮ್ಮ ನಿವಾಸದಲ್ಲಿ ಭೇಟಿಯಾಗಿ ಅಭಿನಂದಿಸಿದರು.

04/07/2024

ನಮ್ಮ ರಾಷ್ಟ್ರಧ್ವಜದ ವಿನ್ಯಾಸಕಾರ ಪಿಂಗಲಿ ವೆಂಕಯ್ಯ | Pingali Venkayya |

ಪಿಂಗಲಿ ವೆಂಕಯ್ಯ ಪುಣ್ಯಸ್ಮರಣೆಯ ದಿನವಾದ ಇಂದು ಅವರಿಗೊಂದು ನುಡಿನಮನ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ T 20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡ
04/07/2024

ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ T 20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡ

ನಿಯಮಕ್ಕೆ ತಿದ್ದುಪಡಿ:‌ ಪ್ರಮಾಣವಚನದ ವೇಳೆ ಘೋಷಣೆ ಕೂಗಲು ನಿರ್ಬಂಧ ವಿಧಿಸಿದ ಸ್ಪೀಕರ್ಈ ಬಾರಿ ಲೋಕಸಭೆಯ ಹಲವು ಚುನಾಯಿತ ಸದಸ್ಯರು ಪ್ರಮಾಣ ವಚನ ಸ...
04/07/2024

ನಿಯಮಕ್ಕೆ ತಿದ್ದುಪಡಿ:‌ ಪ್ರಮಾಣವಚನದ ವೇಳೆ ಘೋಷಣೆ ಕೂಗಲು ನಿರ್ಬಂಧ ವಿಧಿಸಿದ ಸ್ಪೀಕರ್

ಈ ಬಾರಿ ಲೋಕಸಭೆಯ ಹಲವು ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರ ಕೆಲವು ಘೋಷಣೆಗಳನ್ನು ಕೂಗಿ ದೊಡ್ಡ ಮಟ್ಟದಲ್ಲಿ ವಿವಾದ ಎಬ್ಬಿಸಿದ ನಂತರ ಸ್ಪೀಕರ್‌ ಅವರು ಈ ಷರತ್ತುಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ.

04/07/2024

ಟಿ-20 ವಿಶ್ವಕಪ್‌ನೊಂದಿಗೆ ದೆಹಲಿಗೆ ಬಂದಿಳಿದ ಭಾರತೀಯ ಕ್ರಿಕೆಟ್ ತಂಡ

ಹರ್ಷೋದ್ಘಾರಗಳ ನಡುವೆ ಭರ್ಜರಿ ಸ್ವಾಗತ.



CC: BCCI

04/07/2024

ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು – ಇಂದು ಬೆಳಿಗ್ಗಿನ ಜಾವ ಒಂದೂವರೆಗೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯ ಚರಣಸ್ಪರ್ಶ ಮಾಡಿದ ಕುಬ್ಜಾ ನದಿ.

(ಜುಲೈ 4. ಸ್ವಾಮಿ ವಿವೇಕಾನಂದರು ದೇಹತ್ಯಾಗ ಮಾಡಿದ ದಿನ. ಜಗತ್ತು ಕಂಡ ಅತ್ಯದ್ಭುತ ಸಂತನೊಬ್ಬ ತನ್ನ ಸಾವಿನ ಮುನ್ಸೂಚನೆಗಳನ್ನು ನೀಡುತ್ತಾ ಕೊನೆಗೆ...
04/07/2024

(ಜುಲೈ 4. ಸ್ವಾಮಿ ವಿವೇಕಾನಂದರು ದೇಹತ್ಯಾಗ ಮಾಡಿದ ದಿನ. ಜಗತ್ತು ಕಂಡ ಅತ್ಯದ್ಭುತ ಸಂತನೊಬ್ಬ ತನ್ನ ಸಾವಿನ ಮುನ್ಸೂಚನೆಗಳನ್ನು ನೀಡುತ್ತಾ ಕೊನೆಗೆ ತಾನೇ ಆರಿಸಿಕೊಂಡ ದಿನವೇ ದೇಹತ್ಯಾಗ ಮಾಡಿದ ಆ ರೋಮಹರ್ಷಕ ಘಟನಾವಳಿಗಳನ್ನು ಮೆಲುಕು ಹಾಕುವುದಕ್ಕಾಗಿ ಈ ಬರಹ. ಸ್ವಾಮಿ ಪುರುಷೋತ್ತಮಾನಂದ ಅವರು ಬರೆದಿರುವ 'ವಿಶ್ವಮಾನವ ವಿವೇಕಾನಂದ' ಪುಸ್ತಕದ ಕೊನೆಯ ಭಾಗದಿಂದ ಈ ಬರಹವನ್ನು ಆರಿಸಿಕೊಳ್ಳಲಾಗಿದೆ. ದಯವಿಟ್ಟು ಓದಿ...)

ಸ್ವಾಮಿ ವಿವೇಕಾನಂದರೊಮ್ಮೆ ಮಿಸ್ ಮೆಕ್ ಲಾಡಳಿಗೆ ಹೇಳಿದ್ದರು, "ನಾನು ನನ್ನ ನಲವತ್ತನೇ ವರ್ಷವನ್ನು ನೋಡುವುದಿಲ್ಲ."

ಆಗ ಅವರಿಗೆ 39 ವರ್ಷ ನಡೆಯುತ್ತಿತ್ತು. ಮಿಸ್ ಮೆಕಲಾಡ್ ಮರು ಪ್ರಶ್ನೆ ಹಾಕಿದಳು..

"ಸ್ವಾಮೀಜೀ ಬುದ್ಧ ತನ್ನ ಮಹಾಕಾರ್ಯವನ್ನು ಸಾಧಿಸಿದ್ದು ತನ್ನ 40-80 ರ ನಡುವಿನ ಅವಧಿಯಲ್ಲಲ್ಲವೇ.?"

"ನಾನು ನನ್ನ ಸಂದೇಶವನ್ನು ನೀಡಿಯಾಯಿತು ನಾನಿನ್ನು ಹೋಗಬೇಕು"

"ಏಕೆ ಹೋಗಬೇಕು ಎನ್ನುತ್ತೀರಿ?"

"ದೊಡ್ಡ ಮರದ ನೆರಳಲ್ಲಿ ಇತರ ಗಿಡಗಳು ಬೆಳೆದು ದೊಡ್ಡವಾಗಲಾರವು. ಚಿಕ್ಕವರಿಗೆ ಬೆಳೆಯಲು ಅವಕಾಶ ಮಾಡಿಕೊಡಬೇಕಾದರೆ ನಾನು ಹೋಗಬೇಕು.!"

1902 ಜುಲೈ 2 ರಂದು ಸೋದರಿ ನಿವೇದಿತಾ ಸ್ವಾಮೀಜಿಯವರನ್ನು ಭೇಟಿಯಾಗಲು ಬಂದಿದ್ದಳು. ಆಕೆಯ ವಾದವೊಂದಕ್ಕೆ ಉತ್ತರಿಸಿದ ವಿವೇಕಾನಂದರು "ಬಹುಶಃ ನೀನೆನ್ನುವುದೇ ಸರಿ ಮ್ಯಾರ್ಗಟ್, ಆದರೆ ಈಗ ನನ್ನ ಮನಸ್ಸು ಇತರ ಚಿಂತನೆಯಲ್ಲಿ ಮುಳುಗಿಹೋಗಿದೆ. ನಾನೀಗ ಸಾವಿಗೆ ಸಿದ್ಧನಾಗುತ್ತಿದ್ದೇನೆ." ಇದನ್ನು ಕೇಳಿ ನಿವೇದಿತಾ ದುಃಖಿತಳಾದಳು.

ಆ ದಿನ ಸ್ವಾಮೀಜಿ ತಮ್ಮ ಕೈಯಾರೆ ಆಕೆಗೆ ಉಣಬಡಿಸಿದರು. ಊಟದ ನಂತರ ತಾವೇ ಆಕೆಗೆ ಕೈತೊಳೆಯಲು ನೀರು ಸುರಿದು ಟವೆಲ್ಲಿನಿಂದ ಕೈ ಒರೆಸಿದರು.! ನಿವೇದಿತಾ ಸಂಕೋಚದಿಂದ ಕುಗ್ಗಿ ಹೋದಳು. "ಸ್ವಾಮೀಜಿ, ಈ ರೀತಿಯ ಸೇವೆಯನ್ನು ನಾನು ನಿಮಗೆ ಮಾಡಬೇಕೇ ಹೊರತು ನೀವು ನನಗೆ ಮಾಡಬಾರದು.!" ಎಂದು ಆಕೆಯೆಂದಾಗ ಸ್ವಾಮೀಜಿ ಗಂಭೀರವಾಗಿ ನುಡಿದರು..

"ಏಸುಕ್ರಿಸ್ತ ತನ್ನ ಶಿಷ್ಯರ ಪಾದವನ್ನೇ ತೊಳೆದ.!"

"ಆದರೆ ಅದು ಅವನ ಜೀವನದ ಕಟ್ಟಕಡೆಯ ಬಾರಿ...." ಎಂಬ ಉತ್ತರ ನಿವೇದಿತೆಯ ನಾಲಿಗೆಯ ತುದಿಗೆ ಬಂದಿತ್ತು, ಆದರೆ ಅದೇನೋ ಒತ್ತಿ ಹಿಡಿದಂತಾಗಿ ಒಳಗೇ ಉಳಿದುಕೊಂಡಿತು.

"ನರೇಂದ್ರ ತನ್ನ ಕೆಲಸವನ್ನು ಮುಗಿಸಿದ ಮೇಲೆ, ತಾನು ಯಾರು, ಎಲ್ಲಿಂದ ಬಂದೆ ಎಂಬುದು ಅರಿವಾದಾಗ, ಅವನು ಶರೀರದಲ್ಲಿ ಒಂದು ಕ್ಷಣವೂ ಇರಬಯಸದೆ ನಿರ್ವಿಕಲ್ಪ ಸಮಾಧಿಯಲ್ಲಿ ಲೀನನಾಗಿಬಿಡುತ್ತಾನೆ"
.ಎಂಬ ಶ್ರೀರಾಮಕೃಷ್ಣರ ಮಾತುಗಳು ಸ್ವಾಮೀಜಿಯವರ ಗುರುಭಾಯಿಗಳ ಕಿವಿಯಲ್ಲಿ ಒಂದೇ ಸಮನೆ ಪ್ರತಿಧ್ವನಿಸುತ್ತಿತ್ತು. ಗುರುಭಾಯಿಗಳಲ್ಲೊಬ್ಬರು ಸುಮ್ಮನೆ ಕೇಳಿದರು...

"ಶ್ರೀರಾಮಕೃಷ್ಣರು ಹೀಗೆ ಹೇಳಿದ್ದರಲ್ಲಾ, ಈಗ ನಿಮಗೆ ನೀವು ಯಾರೆಂಬುದು ಗೊತ್ತಾಗಿದೆಯೇ..?!"

ಅತ್ಯಂತ ಗಂಭೀರ ದನಿಯಲ್ಲಿ ನುಡಿದರು ಸ್ವಾಮೀಜಿ..‌.

"ಹೌದು, ಈಗ ನನಗೆ ಗೊತ್ತಾಗಿದೆ.!"

ಸಿಡಿಲಿನಂತ ಉತ್ತರಕ್ಕೆ ಎಲ್ಲರೂ ಮೂಕವಿಸ್ಮಿತರಾದರು.

ಜೂನ್ ಕೊನೆಯ ವಾರ ಸ್ವಾಮೀಜಿಯವರು ಬಂಗಾಳಿ ಪಂಚಾಂಗವನ್ನು ತೆರೆದು ಯಾವುದೋ ಕಾರ್ಯಕ್ಕಾಗಿ ಶುಭಮುಹೂರ್ತವನ್ನು ಹುಡುಕುತ್ತಿದ್ದಂತೆ ತೋರಿತು. ಯಾವುದಿರಬಹುದು ಅಂತಹ ಕಾರ್ಯ? ಯಾರಿಗೂ ಏನೂ ತೋಚಲಿಲ್ಲ. ಸ್ವಾಮೀಜಿಯವರ ಮಹಾಸಮಾಧಿಯ ನಂತರವೇ ಸೋದರ ಸಂನ್ಯಾಸಿಗಳಿಗೆಲ್ಲಾ ಅವರು ಪಂಚಾಂಗವನ್ನು ನೋಡುತ್ತಿದ್ದುದರ ರಹಸ್ಯ ಅರಿವಾದದ್ದು.!

ಅವರು ಹುಡುಕಾಡಿ ಆರಿಸಿಕೊಂಡ ದಿನ ಜುಲೈ 4, ಶುಕ್ರವಾರ..!

ಸ್ವಾಮೀಜಿಯವರ ಮಹಾಪ್ರಸ್ಥಾನಕ್ಕೆ ಮೂರು ದಿನಕ್ಕೆ ಮೊದಲು ಸ್ವಾಮಿ ಪ್ರೇಮಾನಂದರ ಜೊತೆ ಮಾತನಾಡುತ್ತಾ ಗಂಗೆಯ ದಡದ ಮೇಲೊಂದು ಸ್ಥಳದತ್ತ ಬೆರಳು ಮಾಡಿ ತೋರಿಸಿ ಗಂಭೀರವಾಗಿ ನುಡಿದರು....

"ನಾನು ಶರೀರ ಬಿಟ್ಟ ಮೇಲೆ ಇಲ್ಲಿ ದಹನ ಮಾಡಿ!"

ಅಂದು 1902 ಜುಲೈ 4. ಸ್ವಾಮೀಜಿಯವರ ಅಂತಿಮ ದಿನ. ಎಂದಿನಂತೆ ಬೇಗ ಎದ್ದ ಸ್ವಾಮೀಜಿ ತಮ್ಮ ಗುರುಭಾಯಿಗಳೊಂದಿಗೆ ಹಿಂದಿನ ದಿನಗಳ ಮಧುರ ಸ್ಮೃತಿಗಳನ್ನು ಮೆಲುಕು ಹಾಕಿದರು‌. ಎಂಟು ಗಂಟೆಯ ವೇಳೆಗೆ ದೇವಾಲಯಕ್ಕೆ ಹೋಗಿ ಕಿಟಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ ಮೂರು ಗಂಟೆಗಳ ಕಾಲ ಅಪೂರ್ವ ಧ್ಯಾನದಲ್ಲಿ ಮುಳುಗಿಹೋದರು.! ಒಳಗೆ ಏನು ನಡೆಯುತ್ತಿದೆಯೆಂದು ಯಾರು ತಾನೇ ಅರಿಯಬಲ್ಲರು?

ದೇವಮಂದಿರದಿಂದ ಕೆಳಗಿಳಿದು ಬಂದು ವಿಶಾಲವಾದ ಹುಲ್ಲು ಹಾಸಿನ ಮೇಲೆ ಭಾರವಾದ ಹೆಜ್ಜೆಗಳನ್ನಿಡುತ್ತಾ ನಡೆದಾಡತೊಡಗಿದ ಸ್ವಾಮೀಜಿಯವರು ಇದ್ದಕ್ಕಿದ್ದಂತೆಯೇ ನಿಂತುಬಿಟ್ಟರು.! ಅವರ ಅಂತರಾಳದ ಭಾವನೆಯೊಂದು ಮೌನವನ್ನು ಸೀಳಿಕೊಂಡು ಪಿಸುದನಿಯಾಗಿ ಕೇಳಿಬಂದಿತು,

"ಇನ್ನೊಬ್ಬ ವಿವೇಕಾನಂದನಿದ್ದಿದ್ದರೆ ಅವನಿಗೆ ತಿಳಿಯುತ್ತಿತ್ತು ಈ ವಿವೇಕಾನಂದ ಏನು ಮಾಡಿದ್ದಾನೆ ಎಂದು..! ಇರಲಿ.. ಕಾಲಾಂತರದಲ್ಲಿ ಮತ್ತೆಷ್ಟು ಮಂದಿ ವಿವೇಕಾನಂದರು ಉದಿಸಲಿರುವರೋ..!?"

ಆ ದಿನ ಮಧ್ಯಾಹ್ನದ ವಿಶ್ರಾಂತಿಯ ನಂತರ ಬ್ರಹ್ಮಚಾರಿಗಳಿಗೆ ಮೂರು ಗಂಟೆಗಳಷ್ಟು ದೀರ್ಘಕಾಲ ಸಂಸ್ಕೃತ ವ್ಯಾಕರಣ ತರಗತಿ ನಡೆಸಿದರು. ಸಂಜೆಯಾಗುತ್ತಿದ್ದಂತೆ ಸ್ವಾಮೀಜಿಯವರ ಮನಸ್ಸು ಹೆಚ್ಚು ಹೆಚ್ಚು ಅಂತರ್ಮುಖವಾಗುತ್ತಾ ಬಂದಿತು. ಸಂಜೆಯ ಆರತಿಯ ಘಂಟಾನಾದ ಕೇಳುತ್ತಿದ್ದಂತೆಯೇ ಅವರು ತಮ್ಮ ಕೋಣೆಗೆ ತೆರಳಿ ಕಿಟಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ ಜಪಮಾಲೆಯನ್ನು ಹಿಡಿದು ಗಂಗೆಗೆ ಅಭಿಮುಖವಾಗಿ (ಹಿಂದೆಂದೂ ಆ ರೀತಿ ಕುಳಿತಿರಲಿಲ್ಲ) ಜಪಕ್ಕೆ ಕುಳಿತರು. ಒಂದು ಗಂಟೆಯ ಬಳಿಕ ತಮ್ಮ ಪರಿಚರ್ಯೆ ಮಾಡುತ್ತಿದ್ದ ಬ್ರಹ್ಮಚಾರಿಯನ್ನು ಒಳಕರೆದು ಸ್ವಲ್ಪ ಗಾಳಿ ಹಾಕುವಂತೆ ಹೇಳಿ ಜಪಮಾಲೆ ಹಿಡಿದೇ ಮಲಗಿಕೊಂಡರು, ಸ್ವಲ್ಪ ಹೊತ್ತಾದ ಮೇಲೆ, "ಗಾಳಿ ಹಾಕಿದ್ದು ಸಾಕು, ಈ ಪಾದಗಳನ್ನು ಸ್ವಲ್ಪ ತಿಕ್ಕು" ಎಂದು ಹೇಳಿ ನಿದ್ರೆಯಲ್ಲಿ ಮುಳುಗಿದರು‌. ಹೀಗೆಯೇ ಮತ್ತೆ ಒಂದು ಗಂಟೆ ಕಳೆಯಿತು. ಬಳಿಕ ಅವರ ಕೈ ಸ್ವಲ್ಪ ಮಾತ್ರ ಅಲುಗಿತು‌. ಆಗ ಅವರು ಒಂದು ದೀರ್ಘವಾದ ಉಸಿರೆಳೆದರು. ಮತ್ತೆರಡು ನಿಮಿಷಗಳ ಕಾಲ ನಿಶ್ಯಬ್ದ. ಮತ್ತೊಮ್ಮೆ ಅವರು ದೀರ್ಘವಾಗಿ ಉಸಿರೆಳೆಯುತ್ತಿದ್ದಂತೆ ಅವರ ದೃಷ್ಟಿ ಎರಡೂ ಹುಬ್ಬುಗಳ ನಡುವೆ ಕೇಂದ್ರಿತವಾಯಿತು. ಮುಖದಲ್ಲಿ ಅಲೌಕಿಕ ದಿವ್ಯತೆಯೊಂದು ಮೂಡಿ ಬರುತ್ತಿದ್ದಂತೆಯೇ ಅವರು ಇನ್ನಿಲ್ಲವಾದರು.!

ಸುದ್ದಿ ತಿಳಿದು ಬಂದ ‌ಸ್ವಾಮಿ ಬ್ರಹ್ಮಾನಂದರು ಬಿಕ್ಕುತ್ತಾ ನುಡಿದರು "ಓಹ್, ಹಿಮಾಲಯವು ನಮ್ಮಿಂದ ಕಣ್ಮರೆಯಾಯಿತು.!"

ಅಂದಿಗೆ ಸ್ವಾಮೀಜಿಯವರ ವಯಸ್ಸು ಕೇವಲ 39 ವರ್ಷ, 5 ತಿಂಗಳು, 24 ದಿನ..!

"ನಾನು 40 ನೆಯ ವರ್ಷವನ್ನು ಕಾಣುವುದಿಲ್ಲ" ಎಂಬ ಅವರ ಭವಿಷ್ಯವಾಣಿ ಸತ್ಯವಾಗಿತ್ತು.!

ಸ್ವಾಮೀಜಿಯವರು ನಿರ್ದೇಶಿಸಿದ್ದ ಸ್ಥಳದಲ್ಲಿ ನಿರ್ಮಿಸಲಾದ ಚಿತಾವೇದಿಕೆಯಲ್ಲಿ ಅವರ ದೇಹವನ್ನಿರಿಸಿ ಅಗ್ನಿಸ್ಪರ್ಶ ಮಾಡಲಾಯಿತು. ಅಗ್ನಿದೇವ ತನ್ನ ಧಗಧಗಿಸುವ ಜ್ವಾಲೆಗಳಿಂದ ಚಿತೆಯನ್ನಾವರಿಸಿದ. ಸನಿಹದಲ್ಲೇ ನಿಂತಿದ್ದ ನಿವೇದಿತಾ ಮುಖವನ್ನು ಮುಚ್ಚಿಕೊಂಡಳು. ಅವಳ ಮನದಲ್ಲಿ ಒಂದೇ ಒಂದು ಆಸೆಯಿತ್ತು - ಅದು 'ಸ್ವಾಮೀಜಿಯವರ ಮಂಚವನ್ನು ಮುಚ್ಚಿದ್ದ ಕಾಷಾಯವಸ್ತ್ರದ ಒಂದು ತುಂಡನ್ನು ತೆಗೆದಿರಿಸಿಕೊಳ್ಳಬೇಕು' ಎಂಬುದು.! ಸ್ವಾಮಿ ಶಾರದಾನಂದರು ಅದನ್ನು ತೆಗೆದುಕೊಡಲು ಮುಂದಾಗಿದ್ದರು, ಆದರೆ ಅದೇಕೋ ಆಕೆ ಅದನ್ನು ತೆಗೆದುಕೊಳ್ಳಲು ಹಿಂಜರಿದಳು. ಈಗ ನಿವೇದಿತಾ ತನ್ನ ಮುಖವನ್ನು ಮುಚ್ಚಿಕೊಂಡು ನಿಂತಿದ್ದಾಗ ಆಕೆಯ ತೋಳಿಗೆ ಏನೋ ತಗುಲಿತು‌.! ಏನದು? ಅದು 'ಚಿತಾಗ್ನಿಯಿಂದ ಹಾರಿಬಂದ ಅರ್ಧ ಸುಟ್ಟ ಕಾಷಾಯವಸ್ತ್ರದ ಒಂದು ತುಂಡು..!!' ಅದನ್ನವಳು ಕಣ್ಣಿಗೊತ್ತಿಕೊಂಡು ಇಟ್ಟುಕೊಂಡಳು‌.

ಜುಲೈ 5 ರಂದು, ಅಂದರೆ ಸ್ವಾಮೀಜಿಯವರು ಶರೀರವನ್ನು ತ್ಯಜಿಸಿದ ಮರುದಿನ ಬೆಳಿಗ್ಗೆ ಇತ್ತ ಮದ್ರಾಸು ಮಠದಲ್ಲಿದ್ದ ಸ್ವಾಮಿ ರಾಮಕೃಷ್ಣಾನಂದರಿಗೆ ಬಾಗಿಲು ತಟ್ಟಿದ ಸದ್ದು ಕೇಳಿತು..!

"ಯಾರು..?"

ಎನ್ನುವಷ್ಟರಲ್ಲೇ ಒಂದು ಧ್ವನಿ ನುಡಿಯಿತು..

"...ಶಶಿ, ನಾನು ನನ್ನ ಶರೀರವನ್ನು ಉಗಿದುಬಿಟ್ಟೆ.‌!"

ರಾಮಕೃಷ್ಣಾನಂದರಿಗೆ ಈ ಧ್ವನಿಯ ಪರಿಚಯವಿದೆ..! ಹೌದು... ಇದು ತಮ್ಮ ಪರಮಪ್ರಿಯ ಸೋದರ ವಿವೇಕಾನಂದರದೇ ಸರಿ...! ಆದರೆ ಏನಿರಬಹುದು ಇದರ ಅರ್ಥ..?

ಕೆಲವೇ ಗಂಟೆಗಳಲ್ಲಿ ತಂತಿ ವಾರ್ತೆ ತಲುಪಿತು.

'ತಮ್ಮ ಪ್ರಿಯ ನಾಯಕ, ನೆಚ್ಚಿನ ನರೇನ್ ಇಹಲೋಕವನ್ನು ತ್ಯಜಿಸಿಬಿಟ್ಟಿದ್ದಾನೆ‌‍‌..!!'

ಸಂಗ್ರಹ: ಉದಯಭಾಸ್ಕರ್ ಸುಳ್ಯ

ಸನಾತನ ಭಾರತೀಯ ಪರಂಪರೆ, ಸಂಸ್ಕೃತಿಯ ಘನತೆಯನ್ನು ವಿಶ್ವಕ್ಕೆ ತೋರ್ಪಡಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರ ಸ್ಮೃತಿ ದಿನದ ಶತ ಪ್ರಣಾಮಗಳು....
04/07/2024

ಸನಾತನ ಭಾರತೀಯ ಪರಂಪರೆ, ಸಂಸ್ಕೃತಿಯ ಘನತೆಯನ್ನು ವಿಶ್ವಕ್ಕೆ ತೋರ್ಪಡಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರ ಸ್ಮೃತಿ ದಿನದ ಶತ ಪ್ರಣಾಮಗಳು.

ಮೊದಲ ಬಾರಿಗೆ 80,000 ಗಡಿ ತಲುಪಿದ ಸೆನ್ಸೆಕ್ಸ್, ಸಾರ್ವಕಾಲಿಕ ಉತ್ತುಂಗದಲ್ಲಿ ನಿಫ್ಟಿBSE ಸೆನ್ಸೆಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ 80,000 ಗಡ...
03/07/2024

ಮೊದಲ ಬಾರಿಗೆ 80,000 ಗಡಿ ತಲುಪಿದ ಸೆನ್ಸೆಕ್ಸ್, ಸಾರ್ವಕಾಲಿಕ ಉತ್ತುಂಗದಲ್ಲಿ ನಿಫ್ಟಿ

BSE ಸೆನ್ಸೆಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ 80,000 ಗಡಿಯನ್ನು ಮುಟ್ಟಿತು. ಎನ್‌ಎಸ್‌ಇ ನಿಫ್ಟಿ ಕೂಡ ಹಸಿರು ಬಣ್ಣದಲ್ಲಿ ಇಂದು ಏರಿತು.

ಮೌನಕ್ಕೆ ಜಾರಿದ ಹಳದಿ ಹಕ್ಕಿ !ಟ್ವಿಟ್ಟರ್​ಗೆ ಪರ್ಯಾಯ ಸೋಷಿಯಲ್ ಮೀಡಿಯಾ ಆ್ಯಪ್ ಎಂದು ಪರಿಗಣಿತವಾಗಿದ್ದ ಕೂ ಸ್ಥಗಿತ.ಕೂ ಅನ್ನು ಮಾರುವ ಅವರ ಸತತ ...
03/07/2024

ಮೌನಕ್ಕೆ ಜಾರಿದ ಹಳದಿ ಹಕ್ಕಿ !

ಟ್ವಿಟ್ಟರ್​ಗೆ ಪರ್ಯಾಯ ಸೋಷಿಯಲ್ ಮೀಡಿಯಾ ಆ್ಯಪ್ ಎಂದು ಪರಿಗಣಿತವಾಗಿದ್ದ ಕೂ ಸ್ಥಗಿತ.

ಕೂ ಅನ್ನು ಮಾರುವ ಅವರ ಸತತ ಪ್ರಯತ್ನಗಳು ಫಲಕೊಡದೇ ಹೋದ್ದರಿಂದ ಅಂತಿಮವಾಗಿ ವಿದಾಯ ಹೇಳಲಾಗಿದೆ.

03/07/2024

ಸತ್ಸಂಗದ ವೇಳೆ ಭೀಕರ ಕಾಲ್ತುಳಿತ | ಯಾರು ಈ ಸ್ವಯಂಘೋಷಿತ ದೇವಮಾನವ? |

03/07/2024

ಸದನದ ವೇಳೆ ರಾಹುಲ್ ಗಾಂಧಿಯಿಂದ ಗಲಾಟೆ ಎಬ್ಬಿಸಲು ಸಂಸದರಿಗೆ ಪ್ರಚೋದನೆ, ವಿಡಿಯೋ ವೈರಲ್

50 ಬಡ ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿದ ಅಂಬಾನಿ ದಂಪತಿ!ಅನಂತ್‌ ಅಂಬಾನಿ ಮದುವೆಗೆ ಪೂರ್ವಭಾವಿಯಾಗಿ ಸಾಮೂಹಿಕ ವಿವಾಹ; ಪ್ರತಿ ವಧುವಿ...
03/07/2024

50 ಬಡ ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿದ ಅಂಬಾನಿ ದಂಪತಿ!

ಅನಂತ್‌ ಅಂಬಾನಿ ಮದುವೆಗೆ ಪೂರ್ವಭಾವಿಯಾಗಿ ಸಾಮೂಹಿಕ ವಿವಾಹ; ಪ್ರತಿ ವಧುವಿಗೆ ವಿವಿಧ ಚಿನ್ನಾಭರಣ, 1 ಲಕ್ಷ ರೂ, ಗೃಹೋಪಯೋಗಿ ವಸ್ತುಗಳು, ಮಾತ್ರವಲ್ಲ ಪ್ರತಿ ಜೋಡಿಗೆ ಒಂದು ವರ್ಷಕ್ಕೆ ಅಗತ್ಯವಾದ ದಿನಸಿ ಸಾಮಗ್ರಿಗಳನ್ನೂ, ವಿತರಿಸಲಾಗಿದೆ.

Address


Alerts

Be the first to know and let us send you an email when Ritam ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to Ritam ಕನ್ನಡ:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share