Bellitere Film

  • Home
  • Bellitere Film

Bellitere Film Contact information, map and directions, contact form, opening hours, services, ratings, photos, videos and announcements from Bellitere Film, Film/Television studio, .
(1)

"4 ಎನ್ 6"  ಫಸ್ಟ್ ಗ್ಲಿಂಪ್ಸ್ ಟೀಸರ್ ಬಿಡುಗಡೆ       ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಪ್ರೀತಿ ಎನ್. ಅವರು  ನಿರ್ಮಿಸಿರು...
27/02/2024

"4 ಎನ್ 6" ಫಸ್ಟ್ ಗ್ಲಿಂಪ್ಸ್ ಟೀಸರ್ ಬಿಡುಗಡೆ


ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಪ್ರೀತಿ ಎನ್. ಅವರು ನಿರ್ಮಿಸಿರುವ, ಮರ್ಡರ್‌ ಮಿಸ್ಟ್ರಿ ಜೊತೆಗೆ ಇನ್ ವೆಸ್ಟಿಗೇಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ 4 ಎನ್ 6. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಲವ್ ಮಾಕ್ಟೇಲ್ ಹಾಗೂ ಲವ್ 360 ಖ್ಯಾತಿಯ ರಚನಾ ಇಂದರ್ ಭವಾನಿಪ್ರಕಾಶ್ ಹಾಗೂ ನವೀನ್ ಕುಮಾರ್, ಆದ್ಯಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ "4 ಎನ್ 6" ಚಿತ್ರಕ್ಕೆ ದರ್ಶನ್ ಶ್ರೀನಿವಾಸ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕೊಲೆಯೊಂದರ ತನಿಖೆಯ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ರಚನಾ ಇಂದರ್ ಇದೇ ಮೊದಲ ಬಾರಿಗೆ ಫಾರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವೇದಿಕೆಯಲ್ಲಿ ಮಾತನಾಡಿದ ನಿರ್ದೇಶಕ ದರ್ಶನ್ ಈ ಹಿಂದೆ ೨ ಕಿರುಚಿತ್ರಗಳನ್ನು ನಿರ್ದೇಶಿಸಿದ್ದೆ. ನನ್ನ ಪ್ರಥಮ ನಿರ್ದೇಶನದ ಚಿತ್ರ ಇದಾಗಿದ್ದು ಕೊಲೆ ಪ್ರಕರಣ ಪತ್ತೆ ಹಚ್ಚುವಲ್ಲಿ ಫೋರೆನ್ಸಿಕ್ ರಿಪೋರ್ಟ್ ಇಂಪಾರ್ಟೆಂಟ್ ಆಗಿರುತ್ತದೆ. ೪ ಪ್ರಮುಖ ಪಾತ್ರಗಳ ಸುತ್ತ ಕಥೆ ನಡೆಯುತ್ತದೆ. ಕಥೆ ಮಾಡುವಾಗ ಫೋರೆನ್ಸಿಕ್ ತಜ್ಞರ ಸಲಹೆ ತೆಗೆದುಕೊಂಡೆ. ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ 30 ದಿನ ಚಿತ್ರೀಕರಿಸಲಾಗಿದ್ದು ಈಗಾಗಲೇ ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ ಎಂದು ಹೇಳಿದರು.
ನಂತರ ನಿರ್ಮಾಪಕಿ ಸಾಯಿಪ್ರೀತಿ ಮಾತನಾಡಿ ತುಂಬಾ ಟ್ಯಾಲೆಂಟ್ ಇರೋ ತಂಡವಿದು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಏಪ್ರಿಲ್ ಗೆ ರಿಲೀಸ್ ಮಾಡೋ ಪ್ಲಾನಿದೆ ಎಂದರು. ಕಾರ್ಯಕಾರಿ ನಿರ್ಮಾಪಕರಾದ ಕರಣ್ ಸಿಂಗ್ ಮಾತನಾಡಿ ದರ್ಶನ್ ಶಾರ್ಟ್ ಫಿಲಂ ಮಾಡುವಾಗ ನನಗೆ ಪರಿಚಯವಾದರು. ಅವರಲ್ಲಿ ಓಳ್ಳೊಳ್ಳೆ ಕಥೆಗಳಿದ್ದವು. ಕೋವಿಡ್ ನಂತರ ಜನ ಸಿನಿಮಾನೋಡುವ ದೃಷ್ಟಿಕೋನ ಬದಲಾಗಿದೆ. ಕ್ರೈಂ‌ ಕಥೆಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ ಅಂತ ಈ ಕಾನ್ಸೆಪ್ಟ್ ಕೈಗೆತ್ತಿಕೊಂಡೆವು ಎಂದರು.
ನಾಯಕಿ ರಚನಾ ಇಂದರ್ ಮಾತನಾಡಿ ಮೊದಲಬಾರಿಗೆ ಇಂಥ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹೆಚ್ಚು ಮಾತಿಲ್ಲ. ಮುಖದಲ್ಲೇ
ಎಕ್ಸ್ ಪ್ರೆಶನ್ಸ್ ತೋರಿಸಬೇಕಿತ್ತು ಎಂದರು.
ಭವಾನಿ ಪ್ರಕಾಶ್ ಮಾತನಾಡಿ ಬೇರೊಬ್ಬರು ಮಾಡಬೇಕಿದ್ದ ಪಾತ್ರ ನನಗೆ ಬಂತು. ಇದು ಬರೀ ಮರ್ಡರ್ ಇನ್ವೆಸ್ಟಿಗೇಶನ್ ಸುತ್ತ ನಡೆವ ಕಥೆಯಲ್ಲ, ಸೈಕಲಾಜಿಕಲ್ ಚಿತ್ರವೂ ಹೌದು, ಶೂಟಿಂಗ್ ಅನುಭವ ತುಂಬಾ ಚೆನ್ನಾಗಿತ್ತು. ಸ್ಲಂನಲ್ಲೂ ಓಡಾಡಿದ್ದೇವೆ ಎಂದರು. ನಾಯಕ ನವೀನ್ ಕುಮಾರ್ ಮಾತನಾಡಿ ನಾನು ಚಿತ್ರರಂಗಕ್ಕೆ ಹೊಸಬ. ಈ ಸಿನಿಮಾದಿಂದ ಸಾಕಷ್ಟು ಕಲಿತಿದ್ದೇನೆ.
ಎಲ್ಲಾ ಪಾತ್ರಗಳು ತುಂಬಾ ಪ್ರಾಮಿಸಿಂಗ್ ಆಗಿವೆ ಎಂದರು.
ಇನ್ನು‌ ಈ ಚಿತ್ರಕ್ಕೆ ನಿರ್ದೇಶಕರೇ ಎಡಿಟರ್ ಆಗಿದ್ದು ಮುತ್ತುರಾಜ್ ಸಾಥ್ ನೀಡಿದ್ದಾರೆ. ಚರಣ್ ತೇಜ್ ಅವರ ಛಾಯಾಗ್ರಹಣ, ಸತ್ಯಕಹಿ ಅವರ ಸಂಭಾಷಣೆ ಹಾಗೂ ಸಾಯಿ ಸೋಮೇಶ್ ಅವರ ಸಂಗೀತ ನಿರ್ದೇಶನವಿದೆ. ಅರ್ಜುನ್, ಆಶಿತಾ ಅಲ್ವಾ, ಮುಕ್ತಿ ಅಲ್ವಾ, ಆರ್ ನಿಕ್ಸಾನ್, ಪ್ರಶಾಂತ್, ಸಂಜಯ್ ನಾಯಕ್, ಸೌರವ್, ಸತ್ಯ ಕಹಿ, ಬೇಬಿ ವಂಶಿಕಾ, ಬೇಬಿ ರೇಯನ್ಸ್ ಇತರರು ಚಿತ್ರದಲ್ಲಿ‌ ಅಭಿನಯಿಸಿದ್

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಬಹು ನಿರೀಕ್ಷಿತ `ಗೌರಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಖ್ಯಾತ ಸಾಹಿತಿ ಪಿ.ಲಂಕೇಶ್ ಅವರ ಮೊಮ್ಮಗ...
14/02/2024

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಬಹು ನಿರೀಕ್ಷಿತ `ಗೌರಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಖ್ಯಾತ ಸಾಹಿತಿ ಪಿ.ಲಂಕೇಶ್ ಅವರ ಮೊಮ್ಮಗ; ಲಂಕೇಶ್ ಕುಟುಂಬದ ಮೂರನೇ ತಲೆಮಾರು ಸಮರ್ಜಿತ್ ಲಂಕೇಶ್ ನಾಯಕ ನಟನಾಗಿದ್ದು; ಸಾನ್ಯಾ ಅಯ್ಯರ್ ನಾಯಕಿಯಾಗಿದ್ದಾರೆ.
ಬಹುದೊಡ್ಡ ತಾರಾಗಣವಿರುವ `ಗೌರಿ’ ಚಿತ್ರದ ಅಪರೂಪದ; ವಿಭಿನ್ನ; ವಿಶಿಷ್ಠ ಶೈಲಿಯ ಫೋಟೋ ಶೂಟ್ ಬುಕ್ ಮೈ ಕ್ಯಾಪ್ಚರ್ ನಲ್ಲಿ ಯಶಸ್ವಿಯಾಗಿ ನಡೆದಿದೆ. ಖ್ಯಾತ ಛಾಯಾಗ್ರಾಹಕ ಕೆನಡಾದ ರೋಹಿತ್ ಅವರ ಕ್ಯಾಮೆರಾ ಕೈಚಳಕ, ದೀಪಿಕಾ ಪಡುಕೋಟೆ ಸೇರಿದಂತೆ ಅನೇಕ ಖ್ಯಾತ ಸೆಲಬ್ರೆಟಿಗಳ ಮೇಕಪ್ ಆರ್ಟಿಸ್ಟ್ ಗೌರಿ ಕಪೂರ್ ಅವರ ಮೇಕಪ್ ಮೋಡಿ ಮಾಡಿದೆ.
ಪ್ರೇಮಿಗಳ ದಿನಕ್ಕೆ ಭಾವನೆಗಳ ಸಂಗಮದ ಫೋಟೋ ಶೂಟ್ ನಿಮಗಾಗಿ..

ರೊಮ್ಯಾಂಟಿಕ್ ಡ್ರಾಮಾ ಮೂಲಕ ಹೀರೋ ಆಗಿ ಜಾಯ್  ಜೊತೆಯಲೆ ಇರಲೇ ಸಾಂಗ್ ರಿಲೀಸ್   ಈ ಹಿಂದೆ ಜೆ.ಜೆ. ಮೂವೀಸ್ ಬ್ಯಾನರ್  ಮೂಲಕ  ನಾನೊಂಥರಾ ಎಂಬ ಆಕ್...
12/02/2024

ರೊಮ್ಯಾಂಟಿಕ್ ಡ್ರಾಮಾ ಮೂಲಕ ಹೀರೋ ಆಗಿ ಜಾಯ್
ಜೊತೆಯಲೆ ಇರಲೇ ಸಾಂಗ್ ರಿಲೀಸ್

ಈ ಹಿಂದೆ ಜೆ.ಜೆ. ಮೂವೀಸ್ ಬ್ಯಾನರ್ ಮೂಲಕ ನಾನೊಂಥರಾ ಎಂಬ ಆಕ್ಷನ್ ಚಿತ್ರವನ್ನು ನಿರ್ಮಿಸಿದ್ದ ಡಾ.ಜಾಕ್ವೆಲಿನ್ ಫ್ರಾನ್ಸಿಸ್ ಅವರು ಇದೀಗ ತಮ್ಮ‌ ಪುತ್ರನನ್ನು ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಇಂಟ್ರಡ್ಯೂಸ್ ಮಾಡುತ್ತಿದ್ದಾರೆ. ಸದ್ಯ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಜಾಯ್ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಯುವ ನಿರ್ದೇಶಕ ಆರ್ಯನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಯಲೇ ಇರಲೇ ಎಂಬ ರೊಮ್ಯಾಂಟಿಕ್ ವೀಡಿಯೋ ಸಾಂಗ್ ರಿಲೀಸ್ ಮಾಡುವ ಮೂಲಕ ಜಾಯ್ ನಟನೆಯ ನೂತನ ಚಿತ್ರದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.
ಈ ಸಂದರ್ಭದಲ್ಲಿ ನಿರ್ದೇಶಕ ಆರ್ಯನ್ ಮಾತನಾಡುತ್ತ ಪ್ರೊಡಕ್ಷನ್ ನಂ.2 ಚಿತ್ರದ ಮೂಲಕ. ಜಾಯ್ ಅವರನ್ನು ನಾಯಕನಾಗಿ ಪರಿಚಯಿಸುತ್ತಿದ್ದೇವೆ. ಅವರು ಆಕ್ಷನ್, ಡ್ಯಾನ್ಸ್, ಆಕ್ಟಿಂಗ್ ಎಲ್ಲಾ ಕಲಿತು ಫಿಟ್ ನೆಸ್ ಮೇಂಟೇನ್ ಮಾಡಿಕೊಂಡು ಬಂದಿದ್ದಾರೆ. ಇದೊಂದು ರೊಮ್ಯಾಂಟಿಕ್ ಯೂತ್ಫುಲ್
ಡ್ರಾಮಾ ಸಬ್ಜೆಕ್ಟ್ ಆಗಿದ್ದು, ವ್ಯಾಲೆಂಟೆನ್ಸ್ ಡೇ ಪ್ರಯುಕ್ತ ಈ ರೊಮ್ಯಾಂಟಿಕ್ ಸಾಂಗನ್ನು ರಿಲೀಸ್ ಮಾಡುತ್ತಿದ್ದೇವೆ. ಗೌಸ್ ಪೀರ್ ಅವರು ಸಾಹಿತ್ಯ ಬರೆದಿರುವ ಈ ಹಾಡನ್ನು ರೋಣದ ಬಕ್ಕೇಶ್ ಅವರು ಅದ್ಭುತವಾಗಿ ಕಂಪೋಸ್ ಮಾಡಿಕೊಟ್ಟಿದ್ದಾರೆ. ಅಷ್ಟೇ ಚೆನ್ನಾಗಿ ಛಾಯಾಗ್ರಾಹಕ ಅಲನ್ ಭರತ್ ಅವರು ಹಾಡನ್ನು ಸೆರೆ ಹಿಡಿದುಕೊಟ್ಟಿದ್ದಾರೆ. ಹರಿಚರಣ್ ಅವರು ಚೆನ್ನೈನಿಂದ ಬಂದು ಹಾಡಿದ್ದಾರೆ. ನಾನು ಈ ಹಿಂದೆ ಕಿಲ್ಲಿಂಗ್ ವೀರಪ್ಪನ್ ಸೇರಿದಂತೆ ಒಂದಷ್ಟು ಚಿತ್ರಗಳಿಗೆ ಅಸೋಸೊಯೇಟ್ ಆಗಿ ಕೆಲಸ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಮಾರ್ಚ್ ಎಂಡ್ ನಿಂದ ಚಿತ್ರದ ಟಾಕಿ ಪೋರ್ಷನ್ ಶುರು ಮಾಡಿ ಗೋವಾ ಸಿರ್ಸಿ, ಹೊನ್ನಾವರ, ಗೋಕರ್ಣ ಸುತ್ತಮುತ್ತ ಚಿತ್ರೀಕರಣ ನಡೆಸಲಿದ್ದೇವೆ. ಡಿಸೆಂಬರ್ ವೇಳೆಗೆ ಚಿತ್ರವನ್ನು ರಿಲೀಸ್ ಮಾಡೋ ಯೋಜನೆಯಿದೆ. ಚಿತ್ರದಲ್ಲಿ ಲವ್ ಸ್ಟೋರಿ ಜೊತೆಗೆ ಮದರ್ ಸೆಂಟಿಮೆಂಟ್, ಸಿಸ್ಟರ್ ಸೆಂಟಿಮೆಂಟ್, ಎಮೋಷನ್ ಸೇರಿದಂತೆ ಎಲ್ಲಾ ರೀತಿಯ ಕಮರ್ಷಿಯಲ್ ಅಂಶಗಳೂ ಇರುತ್ತವೆ. ಚಿತ್ರದಲ್ಲಿ ನಾಯಕಿಯಾಗಿ ಸ್ನಿಗ್ಧಾ ಶೆಟ್ಟಿ ಅವರು ಅಭಿನಯಿಸುತ್ತಿದ್ದಾರೆ, ಅವರಿಗೂ ಇದು ಮೊದಲ ಚಿತ್ರ ಎಂದರು.
ನಂತರ ನಿರ್ಮಾಪಕಿ ಡಾ.ಜಾಕ್ವೆಲಿನ್ ಫ್ರಾನ್ಸಿಸ್ ಮಾತನಾಡುತ್ತ ನಮ್ಮ ಮೊದಲ ಚಿತ್ರಕ್ಕೆ ನೀವೆಲ್ಲ ತುಂಬಾ ಸಪೋರ್ಟ್ ಮಾಡಿದ್ದೀರಿ. ಬೇರೆಯವರ ಮೇಲೆ ಬಂಡವಾಳ ಹಾಕುವ ಬದಲು ನಮ್ಮ ಮಗನ ಪ್ರತಿಭೆಯನ್ನು ಬೆಳಕಿಗೆ ತರಬೇಕೆಂದು ಈ ಸಿನಿಮಾ ಮಾಡುತ್ತಿದ್ದೇನೆ. ಈಗಿನ ಕಾಲದ ಯೂತ್ ಬೇಸ್ ಮಾಡಿಕೊಂಡು ನಿರ್ದೇಶಕರು ಉತ್ತಮವಾದ ಕಥೆಯನ್ನು ರಡಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ನಾಯಕ ನಟ ಜಾಯ್ ಮಾತನಾಡಿ ಈ ಹಿಂದೆ ಸಪೋರ್ಟಿವ್ ಕ್ಯಾರೆಕ್ಟರ್ ಮಾಡಿದ್ದೆ. ನಂತರ ಮಾಡೆಲಿಂಗ್ ಕಡೆ ಗಮನ ಹರಿಸಿದೆ. ಈಗ ಸಿನಿಮಾಗೆ ಬೇಕಾದ ಎಲ್ಲಾ ರೀತಿಯ ಟ್ರೈನಿಂಗ್ ಮಾಡಿಕೊಂಡು ಮತ್ತೆ ತೆರೆಮೇಲೆ ಬರುತ್ತಿದ್ದೇನೆ. ಸಪೋರ್ಟ್ ಮಾಡಿ ಎಂದರು. ಸಾಹಿತಿ ಗೌಸ್ ಪೀರ್ ಮಾತನಾಡಿ ನಾವೆಲ್ಲ ಡಿಸ್ಕಸ್ ಮಾಡಿ ಒಂದೊಳ್ಳೆ ಸಬ್ಜೆಕ್ಟ್ ರೆಡಿ ಮಾಡಿಕೊಂಡಿದ್ದೇವೆ. ಟೀನೇಜರ್ ಕಥೆ. ಕಾಲೇಜಿನಲ್ಲಿ ಹುಡುಗ ಹುಡುಗಿ ಮಧ್ಯೆ ನಡೆ

PRANAYAM MOVIE REVIEW. ಪ್ರಣಯಂ’ ಚಿತ್ರ ರೊಮ್ಯಾಂಟಿಕ್‍, ಮತ್ತು ಥ್ರಿಲ್ಲರ್ ಚಿತ್ರ . ಚಿತ್ರ: ಪ್ರಣಯಂನಿರ್ದೇಶನ: ದತ್ತಾತ್ರೇಯನಿರ್ಮಾಣ: ಪರಮ...
11/02/2024

PRANAYAM MOVIE REVIEW. ಪ್ರಣಯಂ’ ಚಿತ್ರ ರೊಮ್ಯಾಂಟಿಕ್‍, ಮತ್ತು ಥ್ರಿಲ್ಲರ್ ಚಿತ್ರ .

ಚಿತ್ರ: ಪ್ರಣಯಂ
ನಿರ್ದೇಶನ: ದತ್ತಾತ್ರೇಯ
ನಿರ್ಮಾಣ: ಪರಮೇಶ್‍
ತಾರಾಗಣ: ರಾಜವರ್ಧನ್‍, ನೈನಾ ಗಂಗೂಲಿ, ಗೋವಿಂದೇಗೌಡ ಮುಂತಾದವರು.
Rating - 3/5

ಪ್ರಣಯಂ’ ಚಿತ್ರ ಟೈಟಲ್ ಕೇಳುತ್ತಿದ್ದಂತೆ ಇದೊಂದು ಶುದ್ಧ ರೊಮ್ಯಾಂಟಿಕ್‍ ಸಿನಿಮಾ ಎನ್ನುವುದು ಅರ್ಥವಾಗುತ್ತದೆ. ಹಾಗೆ ಚಿತ್ರದಲ್ಲಿ ಥ್ರಿಲ್ಲರ್ ಅಂಶಗಳಿವೆ.

ಚಿತ್ರದ ನಾಯಕ ನಾಯಕಿ ಇಬ್ಬರಿಗೂ ಮದುವೆಯಾಗುತ್ತದೆ. ಇಬ್ಬರೂ ಹನಿಮೂನಿಗೆ ಹೊರಡುತ್ತಾರೆ. ಆದರೆ ಹನಿಮೂನ್ಹೊ ಯಾರೊಂದಿಗೆ ಆಗುತ್ತದೆ ಎನ್ನುವುದು ಕುತೂಹಲ ಮತ್ತು ನಿಗೂಡ. ಮೊದಲ ರಾತ್ರಿ ರೂಂ ಲಾಕ್ ಆಗುತ್ತದೆ ಚಿಲಕ ತೆಗೆದು ನೋಡಿದರೆ, ಮದುಮಗ ಒಳಗೆ ಲಾಕ್‍ ಆಗಿರುತ್ತಾನೆ. ಹಾಗಿರುವಾಗ, ಮದುಮಗಳು ಹನಿಮೂನ್‍ಗೆ ಹೋಗಿದ್ದು ಯಾರ ಜೊತೆಗೆ? ಇದೇ ಚಿತ್ರದ ಮೂಲ ತಿರುವು.
ಇಲ್ಲಿಂದ ತಣ್ಣಗೆ ಸಾಗುವ ‘ಪ್ರಣಯಂ’ ಚಿತ್ರ ಮತ್ತೊಂದು ಮಗ್ಗಲಿನಿಂದ ಬೇರೆಯದೇ ರೀತಿಯಲ್ಲಿ ವೇಗ ತೆಗೆದು ಕೊಳ್ಳುತ್ತದೆ.
ಈ ಘಟನೆಯಿಂದ ಪ್ರೇಕ್ಷಕ ನಿಗೆ ಸೀಟಿನ ಅಂಚಿಗೆ ಬಂದು ಕೂರುವಂತಾಗುತ್ತದೆ.
‘ವಿದೇಶದಲ್ಲಿ ನೆಲೆಸಿರುವ ಯುವಕನೊಬ್ಬ ಸ್ವದೇಶಕ್ಕೆ ಬಂದು ತನ್ನ ಮಾವನ ಮಗಳನ್ನೇ ಮದುವೆಯಾಗುತ್ತಾನೆ. ನಂತರ ಮೊದಲ ರಾತ್ರಿ ಆಗುವ ಘಟನೆಯಿಂದ ನಾಯಕಿಯನ್ನು ಕರೆದೊಯ್ದಿದ್ದು ಯಾರು? ಆಕೆ ಹೋಗಿದ್ದು ಎಲ್ಲಿಗೆ? ನಂತರ ನಾಯಕ ಏನು ಮಾಡುತ್ತಾನೆ? ಮುಂತಾದ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದ್ದರೆ ‘ಪ್ರಣಯಂ’ ಚಿತ್ರ ನೋಡಬೇಕು. ಬಿಚ್ಚುಗತ್ತಿ’ ಎಂಬ ಐತಿಹಾಸಿಕ ಚಿತ್ರದ ನಂತರ ರಾಜವರ್ಧನ್‍ ತುಂಬಾ ರೊಮ್ಯಾಂಟಿಕ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಇದು ಬೇರೆ ತರಹದ ಸಿನಿಮಾ. ಇಲ್ಲಿ ಅವರು ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ನೈನಾ ಗಂಗೂಲಿ ತಮ್ಮ ಅಭಿನಯಕ್ಕಿಂತ ಗಮನಸೆಳೆಯುವುದು ಬಹಳ ಗ್ಲಾಮರಸ್‍ ಆಗಿ. ಬಹುಶಃ ಕನ್ನಡದ ಯಾವ ನಟಿಯೂ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆ ತರಹದ್ದೊಂದು ಪಾತ್ರದಲ್ಲಿ ನೈನಾ ಇಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ನಾಯಕ ಮತ್ತು ನಾಯಕಿ ಅಭಿನಯಕ್ಕೆ ಮತ್ತಷ್ಟು ಗಮನ ಹರಿಸಿದರೆ ಒಳಿತು ಎನ್ನುವುದು ಚಿತ್ರ ನೋಡಿದವರ ಅಭಿಪ್ರಾಯ. ಒಂದೆರಡು ಹಾಡುಗಳು, ಫೈಟುಗಳು, ಕಾಮಿಡಿ, ನಾಯಕ-ನಾಯಕಿಯ ನಡುವೆ ಪ್ರಣಯ ದೃಶ್ಯಗಳು ಪ್ರೇಕ್ಷಕನ ಮೈ ನವಿರೇಳಿಸುತ್ತದೆ. ನಾಯಕಿ ಕಿಡ್ನಾಪ್ ಆದಾಗ ಕೈಯಲ್ಲಿ ಮೊಬೈಲ್ ಇರುವುದು ನಿರ್ದೇಶಕ ಮರೆತಂತಿದೆ. ಚಿತ್ರಕಥೆಯಲ್ಲಿ ಹಲವು ಓರೆಕೋರೆಗಳಿದ್ದರೂ ಅವೆಲ್ಲವನ್ನೂ ಬದಿಗಿಟ್ಟು ಮರೆಸುವುದು ಮನೋಮೂರ್ತಿ ಯವರ ಮೊಹಕ ಹಾಡುಗಳು ಮತ್ತು ನಾಗೇಶ್‍ ಆಚಾರ್ಯ ಅವರ ಛಾಯಾಗ್ರಹಣ.
ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಗಮನಸೆಳೆಯುತ್ತದೆ.
‘ಮಿಕ್ಕಂತೆ ಹಲವು ಪೋಷಕ ನಟರಿದ್ದಾರೆ ಮತ್ತು ಎಲ್ಲರೂ ತಮ್ಮ ಕೆಲಸ ಮಾಡಿದ್ದಾರೆ. ಗೋವಿಂದೇಗೌಡರ ಕಾಮಿಡಿಯಂತೂ 80ರ ದಶಕದ ಎನ್‍.ಎಸ್‍. ರಾವ್‍ ಮತ್ತು ಉಮಾಶ್ರೀ ಅವರ ಹಾಸ್ಯಮಯ ದೃಶ್ಯಗಳನ್ನು ನೆನಪಿಸುತ್ತವೆ. ಒಟ್ಟಿನಲ್ಲಿ ಒಂದು ಕಮರ್ಷಿಯಲ್ ಗ್ಲಾಮರಸ್ ಆದಂತ ಚಿತ್ರವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಬರಲೇ ಬೇಕು.

ಮಾರಿಗೋಲ್ಡ್‌  ಚಿತ್ರದ ಟೀಸರ್ ಬಿಡುಗಡೆಆ‌ರ್.ವಿ. ಕ್ರಿಯೇಶನ್ಸ್ ಬ್ಯಾನರ್ ಅಡಿ‌  ರಘುವರ್ದನ್ ನಿರ್ಮಾಣ ಮಾಡಿ  ರಾಘವೇಂದ್ರ ಎಂ. ನಾಯ್ಕ. ಆಕ್ಷನ್ ...
10/02/2024

ಮಾರಿಗೋಲ್ಡ್‌ ಚಿತ್ರದ ಟೀಸರ್ ಬಿಡುಗಡೆ

ಆ‌ರ್.ವಿ. ಕ್ರಿಯೇಶನ್ಸ್ ಬ್ಯಾನರ್ ಅಡಿ‌ ರಘುವರ್ದನ್ ನಿರ್ಮಾಣ ಮಾಡಿ ರಾಘವೇಂದ್ರ ಎಂ. ನಾಯ್ಕ. ಆಕ್ಷನ್ ಕಟ್ ಹೇಳಿರುವ " ಮಾರಿ ಗೋಲ್ಡ್ " ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಬಳಿಕ ಮಾತಿಗಿಳಿದ ನಿರ್ಮಾಪಕ ರಘುವರ್ಧನ್, ಗುಣವಂತ ಸೇರಿ ಹಲವು ಚಿತ್ರ ನಿರ್ದೇಶನ ಮಾಡಿದ್ದೇನೆ. ರಾಘವೇಂದ್ರ ನಾಯ್ಕ್ ಹೇಳಿದ ಕಥೆ ಇಷ್ಟವಾಯಿತು. ನಾನು ನಿರ್ಮಾಣ ಮಾಡುತ್ತೇನೆ. ನೀವೇ ನಿರ್ದೇಶನ ಮಾಡಿ ಎಂದು ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಚಿತ್ರ ಅಂದುಕೊಂಡದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ. ನಾಯಕ ದಿಗಂತ್, ನಾಯಕಿ ಸಂಗೀತ ಸಹಕಾರ ಅದ್ಬುವಾಗಿತ್ತು. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಎರಡನೇ ಅಥವಾ ಮೂರನೇ ವಾರ ಚಿತ್ರ ತೆರೆಗೆ ತರುವ ಉದ್ದೇಶವಿದೆ ಸಹಕಾರವಿರಲಿ ಎಂದರು
ನಿರ್ದೇಶಕ ರಾಘವೇಂದ್ರ ಎಂ, ನಾಯ್ಕ್ ಮಾತನಾಡಿ, ಮಾರಿ ಗೋಲ್ಡ್ ಗೋಲ್ಡ್ ಬಿಸ್ಕಟ್ ಮಾರಲು ಹೋದವರ 4 ಜನರ ಹುಡುಗರ ಕಥೆ, ಚಿತ್ರದುರ್ಗ, ಬೆಂಗಳೂರು ಸಕಲೇಶಪುರ ಮತ್ತಿತರ ಕಡೆ ಚಿತ್ರಿಕರಣ ಮಾಡಲಾಗಿದೆ. ಕೋವಿಡ್ ಆದ ಮೇಲೆ ಆ ನಂತರದ ಬೆಳವಣಿಗೆಗಳು ಚಿತ್ರ ವಿಳಂಬಕ್ಕೆ ಕಾರಣವಾಯಿತು. ಈಗ ಬಿಡುಗಡೆಗೆ ಸಜ್ಜಾಗಿದೆ. ಟೀಸರ್ ಮೂಲಕ ಪ್ರಚಾರ ಆರಂಬಿಸಿದ್ದೇವೆ ಎಂದು ಹೇಳಿದರು.
ಶುದ್ದ ಮನರಂಜನೆಗೆ ಒತ್ತು ನೀಡಿ ಚಿತ್ರ ಮಾಡಲಾಗಿದೆ. ಚಿತ್ರದ ಮೂಲಕ ದಿಗಂತ ಅವರನ್ನು ಬೇರೆ ರೀತಿ ತೋರಿಸುವ ಪ್ರಯತ್ನ ಮಾಡಲಾಗಿದೆ‌. ಚಿತ್ರೀಕರಣಕ್ಕೂ ಮುನ್ನ ದಿಗಂತ್ ಅವರಿಗೆ ರಿಹಸರ್ಲ್ ಮಾಡಲಾಗಿದೆ. ಮನರಂಜನೆ ಡ್ರಾಮ ಮತ್ತು ಥ್ರಿಲ್ಲರ್ ಕಥೆ ಹೊಂದಿದೆ ಎಂದು ಮಾಹಿತಿ ನೀಡಿದರು

ನಟ ದಿಗಂತ್, ಮಾತನಾಡಿ ಹೆಸರಾಂತ ನಿರ್ಮಾಪಕ. ಹಣ ನೀಡಿದ್ದು ಆದರೆ ಅದು ಅಲ್ಲಿಯೇ ನಿಂತಿದೆ. ಮಾರಿ ಗೋಲ್ಡ್ ಮೇಲೆ ನಿರ್ದೇಶಕರ ಜೊತೆ ಸಿನಿಮಾ ಮಾಡಬಹುದು, ಕಥೆ ಇಷ್ಡವಾಯಿತು, ಯಶ್ ಶೆಟ್ಟಿ,ಸಂಗೀತ ಶೆಟ್ಟಿ, ಸಂಪತ್, ಕಾಕ್ರೋಚ್ ಸುಧಿ, ಟ್ರೈಲರ್ ಇಷ್ಟವಾದರೆ ಎಲ್ಲರಿಗೂ ಹೇಳಿ, ಸಿನಿಮಾ ಗೆದ್ದರೆ ಮತ್ತಷ್ಟು ಮಾಡೋಣ ಎಂದಿದ್ದಾರೆ. ಚಿತ್ರದಲ್ಲಿ ಬುದ್ದಿವಂತ ಸ್ಕಾಮರ್ ಪಾತ್ರ ಎಂದು ಮಾಹಿತಿ ಹಂಚಿಕೊಂಡರು
ನಟಿ ಸಂಗೀತ ಶೃಂಗೇರಿ, ನಟ ದಿಗಂತ್ ನನ್ನ ಚೇಲ್ಡ್ ವುಡ್ ಕ್ರಷ್, ಅದನ್ನು ಅವರಿಗೂ ಹೇಳಿದ್ದೇನೆ. ಎಲ್ಲವೂ ಊಹೆ ಮಾಡಿಕೊಂಡು ಸಿನಿಮಾ ಮಾಡಿದ್ಸಾರೆ, ಛಾಯಾಗ್ರಾಹಕ ಚಂದ್ರಶೇಖರ್ ಉತ್ತಮವಾಗಿ ತೋರಿಸಿದ್ದಾರೆ‌.ಚಿತ್ರದಿಂದ ಸುಮಾರು‌ ವರ್ಷದ ಕನಸು ಕನಸಾಗಿದೆ ಎಂದರು
ಕಲಾವಿದ ಭಜರಂಗ ಶೆಟ್ಟಿ ಮಾತನಾಡಿ, ಮಾರಿ ಗೋಲ್ಡ್ ನಲ್ಲಿ ನಟಿಸಲು ಗೆಳೆಯ ಯಶ್ ಶೆಟ್ಟಿ ಕಾರಣ ಕೋವಿಡ್ ಸಮಯದಲ್ಲಿ ಊರಲ್ಲಿ‌ಮೀನು ಹಿಡಿಯುತ್ತಿದ್ದೆಮಮ ಬಳಿಕ ಕಾಕ್ ರೋಚ್ ಸುಧಿ ಮಾತನಾಡಿದರು ನಂತರ ನಿರ್ದೇಶಕರು ಮಾತನಾಡಿದ ಬಳಿಕ ಮಾಹಿತಿ ಹಂಚಿಕೊಂಡರು
ಸಂಭಾಷಣೆ ಬರೆದಿರುವ ರಘು ನಿಡವಳ್ಳಿ ವಿಭಿನ್ನ ಸಂಭಾಷಣೆ ಇದೆ ಎಂದರೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ , ಚಿತ್ರದಲ್ಲಿ ಎರಡೆ ಹಾಡು ಇವೆ. ಇದೊಂದು ಥ್ರಿಲ್ಲರ್ ಸಿನಿಮಾ ಆಕ್ಷನ್ ಸಿನಿಮಾ, ಸಿನಿಮಾ‌ಹಿಟ್ ಆದರೆ ದಿಗಂತ್ ಆಕ್ಷನ್ ಹೀರೋ ಆಗಲಿದ್ಸಾರೆ. ಯೋಗರಾಜ್ ಭಟ್, ವಿಜಯ್ ಭರಮಸಾಗರ, ಕವಿರಾಜ್ ಹಾಡು ಬರೆದಿದ್ದಾರೆ, ಗೆಲವಿನ ಆಶಾಕಿರಣ ಇದೆ ಎಂದರು.
ಛಾಯಾಗ್ರಾಹಕ ಚಂದ್ರಶೇಖರ್ ಹೊಸ ಜಾನರ್ ಸಿನಿಮಾ , ಥ್ರಿಲ್ಲರ್ ಸಿನಿಮಾ ಮಾಡಿರಲಿಲ್ಲ. ನಿರ್ಮಾಪಕ ರಘುವರ್ಧನ

dhairyam sarvatra sadhnam movie released on February 23rd. "ಧೈರ್ಯಂ ಸರ್ವತ್ರ ಸಾಧನಂ" ಚಿತ್ರ ಇದೇ ಫೆಬ್ರವರಿ 23ರಂದು ತೆರೆ ಕಾಣಲು ಸ...
08/02/2024

dhairyam sarvatra sadhnam movie released on February 23rd. "ಧೈರ್ಯಂ ಸರ್ವತ್ರ ಸಾಧನಂ" ಚಿತ್ರ ಇದೇ ಫೆಬ್ರವರಿ 23ರಂದು ತೆರೆ ಕಾಣಲು ಸಜ್ಜಾಗಿದೆ.

*ಮತ್ತೆ ಶುರುವಾಗಿದೆ ನಗೆಯ ರಸದೌತಣದ “ಗಿಚ್ಚಿ ಗಿಲಿಗಿಲಿ”*  *ಶನಿವಾರ, ಭಾನುವಾರ ರಾತ್ರಿ ಒಂಭತ್ತಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರ* ಬಿಗ್‌ಬಾ...
03/02/2024

*ಮತ್ತೆ ಶುರುವಾಗಿದೆ ನಗೆಯ ರಸದೌತಣದ “ಗಿಚ್ಚಿ ಗಿಲಿಗಿಲಿ”*

*ಶನಿವಾರ, ಭಾನುವಾರ ರಾತ್ರಿ ಒಂಭತ್ತಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರ*

ಬಿಗ್‌ಬಾಸ್‌ ಸೀಸನ್‌ ಹತ್ತರ ಅಭೂತಪೂರ್ವ ಯಶಸ್ಸಿನ ನಂತರ ಕಲರ್ಸ್‌ ಕನ್ನಡ ಇದೀಗ ವಾರಾಂತ್ಯದ ಮನರಂಜನೆಯನ್ನು ಇನ್ನೊಂದು ಹಂತಕ್ಕೆ ಏರಿಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ರಾಜ್ಯದ ಎಲ್ಲೆಡೆ ಮನೆಮಾತಾಗಿರುವ, ಹಾಸ್ಯಗಾರರು ಮತ್ತು ಹಾಸ್ಯಗಾರರಲ್ಲದವರು ಜೋಡಿಯಾಗಿ ವೀಕ್ಷಕರನ್ನು ರಂಜಿಸುವ ವಿನೂತನ ಆಲೋಚನೆಯ ಟಿ ವಿ ಶೋ “ಗಿಚ್ಚಿಗಿಲಿಗಿಲಿ”ಯ ಎರಡು ಸೂಪರ್‌ ಹಿಟ್‌ ಸೀಸನ್‌ಗಳ ನಂತರ ಭರ್ಜರಿ ಮೂರನೇ ಸೀಸನ್ ಫೆಬ್ರವರಿ 3 ರಿಂದ ಆರಂಭವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಈ ಕಾಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಟಿ ಶ್ರುತಿ ಹಾಗೂ ಹಾಸ್ಯನಟ ಸಾಧು ಕೋಕಿಲ ಈವರೆಗೆ ಈ ಶೋನ ತೀರ್ಪುಗಾರರಾಗಿದ್ದರು. ಈಗ ಇವರಿಬ್ಬರ ಜೊತೆಗೆ ಮೂರನೇ ತೀರ್ಪುಗಾರರಾಗಿ ಜನಪ್ರಿಯ ಕಾಮಿಡಿ ನಟ ಕೋಮಲ್ ಜತೆಗೂಡಿರುವುದು ಮೂರನೇ ಸೀಸನ್ನಿನ ವಿಶೇಷ ಆಕರ್ಷಣೆ.

ಹೊಸ ಸೀಸನ್ನಿನಲ್ಲಿ ಹತ್ತು ಹೊಸ ಜೋಡಿಗಳು ಭಾಗವಹಿಸಲಿದ್ದು ಗಿಚ್ಚಿಗಿಲಿಗಿಲಿಗೆ ಹೊಸ ರಂಗು ತುಂಬಲಿವೆ. “ಬಿಗ್‌ಬಾಸ್‌ ಗ್ರಾಂಡ್‌ ಫಿನಾಲೆಯಲ್ಲಿ ಬಿಗ್‌ಬಾಸ್‌ ಅಣಕು ಪ್ರಹಸನ ಮಾಡಿ ರಂಜಿಸಿದ್ಧ ಗಿಚ್ಚಿ ಗಿಲಿಗಿಲಿ ತಂಡದ ಶೋ ಇದೀಗ ಬಿಗ್‌ಬಾಸ್‌ ಪ್ರಸಾರ ಆಗುತ್ತಿದ್ದ ಸಮಯದಲ್ಲಿ ಪ್ರಸಾರವಾಗಲಿದೆ. ಕಲರ್ಸ್‌ ಕನ್ನಡದ ಅದ್ಭುತ ಕಾಮಿಡಿಯನ್‌ಗಳ ಜೊತೆಗೆ ಬಿಗ್‌ಬಾಸ್‌ನ ಈ ಸೀಸನ್‌ ಸೇರಿದಂತೆ ವಿವಿಧ ಸೀಸನ್‌ಗಳಲ್ಲಿ ಭಾಗವಹಿಸಿದ್ದ ಹಲವು ಸ್ಪರ್ಧಿಗಳು ಈ ಬಾರಿಯ ಗಿಚ್ಚಿ ಗಿಲಿಗಿಲಿಯಲ್ಲಿ ಭಾಗವಹಿಸಿರುವುದು ಈ ಬಾರಿಯ ವಿಶೇಷಗಳಲ್ಲಿ ಒಂದು” ಎನ್ನುತ್ತಾರೆ ಕಲರ್ಸ್‌ ಕನ್ನಡದ ಬ್ಯುಸಿನೆಸ್‌ ಹೆಡ್‌ ಪ್ರಶಾಂತ್‌ ನಾಯಕ್.

ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತೀರ್ಪುಗಾರರಾದ ಶೃತಿ, ಸಾಧುಕೋಕಿಲ, ಕೋಮಲ್ ಕುಮಾರ್, ಶೋ ನ ನಿರ್ದೇಶಕ ಪ್ರಕಾಶ್, ನಿರ್ಮಾಪಕರಾದ ಶಿವಧ್ವಜ್, ಪ್ರಶಾಂತ್ ರೈ ಹಾಗೂ ನಿರೂಪಕ ನಿರಂಜನ್ ದೇಶಪಾಂಡೆ ಉಪಸ್ಥಿತರಿದ್ದರು.

ನಾನು ಹಾಸ್ಯ ಕಲಾವಿದನಾಗಿ, ನಿರ್ದೇಶಕನಾಗಿ ಎಲ್ಲರಿಗೂ ಪರಿಚಯನಾಗಿದ್ದೆ‌. ಆದರೆ "ಕನ್ನಡ ಕೋಗಿಲೆ" ಶೋ ಮೂಲಕ ಎಲ್ಲರಿಗೂ ನಾನು ಸಂಗೀತ ನಿರ್ದೇಶಕ ಎಂದು ಗೊತ್ತಾಯಿತು. ಈಗ ಜನರು ಕಿರುತೆರೆಯನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. "ಗಿಚ್ಚಿ ಗಿಲಿಗಿಲಿ" ಈಗಾಗಲೇ ಎರಡು ಸೀಸನ್ ಯಶಸ್ವಿಯಾಗಿದೆ. ಮೂರನೇ ಸೀಸನ್ ಕೂಡ ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದರು ಸಾಧುಕೋಕಿಲ.

"ಗಿಚ್ಚಿ ಗಿಲಿಗಿಲಿ" ಶೋ ನ ಮೂಲಕ ಸಾಕಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಸಿಕ್ಕಿದ್ದಾರೆ. ಇಂತಹ ಶೋ ಆಯೋಜಿಸಿರುವ ಕಲರ್ಸ್ ಕನ್ನಡ ವಾಹಿನಿಗೆ ನನ್ನ ಧನ್ಯವಾದ. ಎರಡು ಸೀಸನ್ ಗಳಿಗೆ ನಾನು ಹಾಗೂ ಸಾಧುಕೋಕಿಲ ಅವರು ತೀರ್ಪುಗಾರರಾಗಿದ್ದೆವು. ಈಗ ನಮ್ಮೊಂದಿಗೆ ಕೋಮಲ್ ಕುಮಾರ್ ಸೇರ್ಪಡೆಯಾಗಿದ್ದಾರೆ ಎಂದು ನಟಿ ಶ್ರುತಿ ತಿಳಿಸಿದರು.

ನಾನು ಈ ಹಿಂದೆ ಒಂದು ಕಾಮಿಡಿ ಶೋ ನ ನಿರ್ಮಾಣ ಮಾಡಿದ್ದೆ‌ ಎಂದು ಮಾತನಾಡಿದ ನಟ ಕೋಮಲ್ ಕುಮಾರ್, ಕಲರ್ಸ್ ವಾಹಿನಿಯ ಅನುಬಂಧ ಅವರ್ಡ್ಸ್ ನಲ್ಲಿ ಸಿಕ್ಕ ಈ ಕಾರ್ಯಕ್ರಮದ ನಿರ್ಮಾಪಕರು "ಗಿಚ್ಚಿ ಗಿಲಿಗಿಲಿ" ಶೋ ಬಗ್ಗೆ ಹೇಳಿದರು.

ಸದ್ದಿಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ನಿರ್ಮಾಪಕ ಆನಂದ ಬಾಬು.ಒಂದು ಕಾಲದಲ್ಲಿ ಆಫೀಸ್ ಬಾಯ್  ಆಗಿ ದುಡಿಯುತ್ತಿದ್ದ ಒಬ್ಬ ಸಾಮ...
03/02/2024

ಸದ್ದಿಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ನಿರ್ಮಾಪಕ ಆನಂದ ಬಾಬು.

ಒಂದು ಕಾಲದಲ್ಲಿ ಆಫೀಸ್ ಬಾಯ್ ಆಗಿ ದುಡಿಯುತ್ತಿದ್ದ ಒಬ್ಬ ಸಾಮಾನ್ಯ ಹುಡುಗ
ಈಗ ಒಂದು ದೊಡ್ಡ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಸ್ಥಾಪಿಸಿ ಮಾಲಿಕನಾಗಿ ಚಿತ್ರದ ನಿರ್ಮಾಪಕನಾಗುವುದು ಸಾಧ್ಯವೇ?
ಸಾಧ್ಯ ಅಂತಾ ಸಾಧಿಸಿಯೇ ಬಿಟ್ಟಿದ್ದಾರೆ..ಇವರು

ಹಾಸನ ಜಿಲ್ಲೆಯ ಅರಸೀಕೆರೆಯ ಮೂಲದ
ಆನಂದ್ ಯಾವಾಗಲೂ ಮಾತು ಕಡಿಮೆ, ಕೆಲಸ ಜಾಸ್ತಿ..
ಯಾವುದರ ಉಸಾಬರಿಗೂ ಹೋಗದ ಆನಂದ್ ಸಿನಿಮಾ ಪ್ರೇಮಿ,

ಸಿನಿಮಾ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಉದ್ದೇಶದಿಂದ ಡಿಗ್ರಿ ಮುಗಿಸಿದ ನಂತರ ಓದಿಗೆ ಗುಡ್ ಬೈ ಹೇಳಿ ಬೆಂಗಳೂರಿಗೆ ಹೊರಟು
ಕಷ್ಟಪಟ್ಟು ಒಂದು ಪ್ರೊಡಕ್ಷನ್ ಯೂನಿಟ್ ನಲ್ಲಿ ಆಫೀಸ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ
ನಂತರ ಅಲ್ಲೇ "ಲೈಟ್ ಬಾಯ್" ಆಗಿ ಸೇರುತ್ತಾರೆ..
ಲೈಟ್ ಬಾಯ್ ಕೆಲಸವನ್ನು ಮಾಡಿಕೊಂಡೆ ಶೂಟಿಂಗ್ ವಿಚಾರಗಳನ್ನು ಕೆಲಸಗಳನ್ನು ಕಲಿಯುತ್ತಾ ಹೋಗುತ್ತಾರೆ..
ಇವರಿಗೆ ನಿರ್ದೇಶಕನಾಗಿ ಹೆಸರು ಮಾಡಬೇಕು ಎಂಬ ಬಹು ದೊಡ್ಡ ಆಸೆ ಇರುತ್ತದೆ..

ಒಂದು ದಿನ ಖ್ಯಾತ ನಿರ್ದೇಶಕ ಶಿವಮಣಿಯವರ "ಅಕ್ಕ" ಧಾರಾವಾಹಿಗೆ ಆನಂದ್ ಲೈಟ್ ಹಿಡಿಯುತ್ತಾರೆ..
ಬ್ರೇಕ್ ನಲ್ಲೂ ಸೆಟ್ ನಲ್ಲೇ ಇರುತ್ತಿದ್ದ, ಪ್ರತಿಯೊಂದು ವಿಷಯವನ್ನು ಗಮನಿಸುತ್ತಿದ್ದ ಇವರ ಆಸಕ್ತಿಯನ್ನು ಗಮನಿಸಿದ ಶಿವಮಣಿಯವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿಯಾ ಅಂತ ಕೇಳುತ್ತಾರೆ.
ಇಷ್ಟು ದಿನ ಇದೇ ಸಮಯವನ್ನು ಕಾಯುತ್ತಿದ್ದ ಆನಂದ್ ಲೈಟ್ ಬಾಯ್ ನಿಂದ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಡ್ತಿ ಪಡೆಯುತ್ತಾರೆ..

ಈ ಸೀರಿಯಲ್ ನಂತರ ಎಸ್. ನಾರಾಯಣ್‌ ಅವರ ಸೇವಂತಿ ಸೇವಂತಿ
ಚೆಲುವಿನ ಚಿತ್ತಾರ, ಚಂಡ, ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಾರೆ,

ನಂತರದ ದಿನಗಳಲ್ಲಿ ಝೀ ಕನ್ನಡ ವಾಹಿನಿಯ "ಯಾರಿಗುಂಟು ಯಾರಿಗಿಲ್ಲಾ" ಕುಣಿಯೋಣು ಬಾರ, ಸೈ, ಬಾಳೇ ಬಂಗಾರ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ಮಾಡಿ ಅಸೋಸಿಯೇಟ್ ಅನ್ನಿಸಿಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಆನಂದ್ ಕೆಲಸವನ್ನು ಗುರುತಿಸಿದ "ಶ್ರೀ ಶಂಕರ" ಟಿವಿಯ ಮಾಲೀಕರಾದ "ಜಿ.ಶ್ರೀನಿವಾಸ್ ಹಾಗೂ ಹರಿಕೃಷ್ಣ" ರವರು "ಶ್ರೀ ಶಂಕರ ಟಿವಿ" ಗೆ ಆನಂದ್ ಅವರನ್ನು ಕಾರ್ಯಕ್ರಮ ನಿರ್ಮಾಪಕನಾಗಿ ಬಡ್ತಿ ನೀಡುತ್ತಾರೆ,

ಕೆಲಸವನ್ನು ಮಾಡಿಕೊಂಡೆ ಜೊತೆಗೆ ಇನ್ನೂ ಕಲಿಕೆಯ ದೃಷ್ಟಿಯಿಂದ ಸಂಜೆಯ ವೇಳೆಯಲ್ಲಿ ಅಭಿನಯ ತರಂಗ ಎಂಬ ರಂಗಭೂಮಿಗೆ ಸೇರಿ ಒಂದು ವರ್ಷದ ಕೋರ್ಸ್ ಮಾಡುತ್ತಾರೆ, ನೂರಾರು ಬೀದಿ ನಾಟಕ, ನೂರಾರು ಬೇರೆ ಬೇರೆ ನಾಟಕ ಪ್ರದರ್ಶನಗಳಲ್ಲಿ ಭಾಗಿಯಾಗಿ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಒಂದು ಸಂಧರ್ಭದಲ್ಲಿ ನಿರ್ದೇಶಕನಾಗಬೇಕಿದ್ದ ಆನಂದ್ ಅನಿವಾರ್ಯ ಕಾರಣದಿಂದ ನಿರ್ಮಾಪಕನಾಗಿಬಿಡುತ್ತಾರೆ..

2016 ರಲ್ಲಿ ಒಂದು ಚಿತ್ರ ನಿರ್ಮಾಣ ಮಾಡಲು ಹೋಗಿ ಕೈ ಸುಟ್ಟು ಕೊಳ್ಳುತ್ತಾರೆ. ಸೋಲನ್ನು ಅನುಭವಿಸುತ್ತಾರೆ,
ಮೈ ತುಂಬ ಸಾಲದ ಹೊರೆ ಬೀಳುತ್ತದೆ.. ಸಾಮಾನ್ಯವಾಗಿ ಸೋಲೋಪ್ಪದ ಆನಂದ ನಂತರ ಛಲ ಬಿಡದೆ

2018 ರಲ್ಲಿ "ಕಮರೊಟ್ಟು ಚೆಕ್ ಪೋಸ್ಟ್" ಎಂಬ ಯಶಸ್ವಿ ಚಿತ್ರವನ್ನು ನಿರ್ಮಿಸುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕ ನಾಗುತ್ತಾರೆ.

2020 ರಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿಷಯಾಧಾರಿತ

ಮಂಡ್ಯಹೈದನ ಮಾಸ್ ಟ್ರೈಲರ್ ಬಿಗ್‌ಬಾಸ್ ಕಾರ್ತೀಕ್‌ ಮಹೇಶ್- ಮಂಡ್ಯ ಶಾಸಕ ರವಿಕುಮಾರ್‌ಗೌಡ, ಪುಟ್ಟರಾಜು ಬಿಡುಗಡೆ   ಮಂಡ್ಯ ಭಾಗದ ಕಥೆಗಳು ಯಾವತ್ತ...
01/02/2024

ಮಂಡ್ಯಹೈದನ ಮಾಸ್ ಟ್ರೈಲರ್

ಬಿಗ್‌ಬಾಸ್ ಕಾರ್ತೀಕ್‌ ಮಹೇಶ್- ಮಂಡ್ಯ ಶಾಸಕ ರವಿಕುಮಾರ್‌ಗೌಡ, ಪುಟ್ಟರಾಜು ಬಿಡುಗಡೆ

ಮಂಡ್ಯ ಭಾಗದ ಕಥೆಗಳು ಯಾವತ್ತೂ ಸೌಂಡ್ ಮಾಡುತ್ತಲೇ ಬಂದಿವೆ. ಅದೇರೀತಿ ಈಗ ಮತ್ತೊಂದು ಚಿತ್ರ ಸುದ್ದಿಯಲ್ಲಿದೆ. ಆ ಚಿತ್ರದ ಹೆಸರೇ ಮಂಡ್ಯಹೈದ. ಅಭಯ್ ಚಂದ್ರಶೇಖರ್ ನಾಯಕನಾಗಿ ನಟಿಸಿರುವ ಮಂಡ್ಯ ಗ್ರಾಮೀಣ ಶೈಲಿಯ ಸಾಹಸಮಯ ಪ್ರೇಮಕಥೆ ಇರುವ ಈ ಚಿತ್ರ ಇದೇ ತಿಂಗಳ ೧೬ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಬುಧವಾರ ಸಂಜೆ ಎಸ್.ಆರ್.ವಿ. ಥಿಯೇಟರಿನಲ್ಲಿ ನೆರವೇರಿತು. ಈ ವರ್ಷದ ಬಿಗ್‌ಬಾಸ್ ವಿಜೇತ ಕಾರ್ತೀಕ್ ಮಹೇಶ್, ಮಂಡ್ಯ ಶಾಸಕ ರವಿಕುಮಾರ್‌ಗೌಡ ಹಾಗೂ ನಿರ್ಮಾಪಕ ಪುಟ್ಟರಾಜು ಸೇರಿ ಮಂಡ್ಯ ಹೈದನ ಟ್ರೈಲರನ್ನು ಬಿಡುಗಡೆ ಮಾಡಿದರು.
ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಸಾಹಸಿ ಯುವಕನೊಬ್ಬ ಏನೇನೆಲ್ಲ ಸಾಹಸ ಕಾರ್ಯ ಮಾಡುತ್ತಾನೆ ಎಂದು ಈ ಚಿತ್ರ ಹೇಳುತ್ತದೆ, ಯುವನಟ ಅಭಯ್ ಚಂದ್ರಶೇಖರ್ ಮಂಡ್ಯದ ಹೈದನಾಗಿ ಕಾಣಿಸಿಕೊಂಡಿದ್ದು, ಭೂಮಿಕಾ ಭೂಮೇಶ್‌ಗೌಡ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ ಮನಸಾಗಿದೆ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದ, ಅಭಯ್, ತಮ್ಮ ಎರಡನೇ ಚಿತ್ರದಲ್ಲಿ ಪಕ್ಕಾ ಮಂಡ್ಯ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ವಿ.ಶ್ರೀಕಾಂತ್ ಆಕ್ಷನ್ ಕಟ್ ಹೇಳಿದ್ದಾರೆ.
ಶಾಸಕ ರವಿಕುಮಾರ್‌ಗೌಡ ಮಾತನಾಡುತ್ತ ಅಭಯ್ ನಮ್ಮೂರಿನ ಹುಡುಗ, ನಮ್ಮ ಭಾಗದಲ್ಲಿ ಸಿನಿಮಾ ನೋಡೋರ ಸಂಖ್ಯೆ ಜಾಸ್ತಿ. ಮಂಡ್ಯದಿಂದ ಬಂದ ಸಾಕಷ್ಟು ಜನ ಸಿನಿಮಾ, ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ, ಮಂಡ್ಯ ಜನರ ರಕ್ತದಲ್ಲೇ ಸಿನಿಮಾ ಇದೆ. ಯಾವುದೇ ಸಿನಿಮಾ ಮಂಡ್ಯದಲ್ಲಿ ಗೆದ್ರೆ, ಅದು ಇಡೀ ಇಂಡಿಯಾದಲ್ಲೇ ಗೆಲ್ಲುತ್ತೆ ಅನ್ನೋ ಮಾತಿದೆ. ನಾಯಕ ಅಭಯ್ ಅದ್ಭುತವಾಗಿ ಅಭಿನಯಿಸಿದ್ದಾನೆ. ಆತನಿಗೆ ಮುಂದೆ ಉತ್ತಮ ಭವಿಷ್ಯವಿದೆ. ನಮ್ಮ ಜನ ಹೆಚ್ಚಾಗಿ ಫೈಟ್ಸ್, ಕಾಮಿಡಿ ಇಷ್ಟಪಡುತ್ತಾರೆ, ಅವೆರಡೂ ಈ ಚಿತ್ರದಲ್ಲಿದೆ, ಮಂಡ್ಯದಲ್ಲೇ ಈ ಚಿತ್ರದ ಶತದಿನ ಸಮಾರಂಭವನ್ನು ಆಚರಿಸೋಣ ಎಂದು ಶುಭ ಹಾರೈಸಿದರು.
ನಂತರ ಬಿಗ್ ಬಾಸ್ ಕಾರ್ತೀಕ್‌ ಮಹೇಶ್ ಮಾತನಾಡುತ್ತ ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಅಟೆಂಡ್ ಮಾಡುತ್ತಿರುವ ಮೊದಲ ಇವೆಂಟ್ ಇದು, ನಾನು ಕೂಡ ಹಿಂದೆ ಡೊಳ್ಳು ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದೆ, ಈ ಚಿತ್ರದ ಟ್ರೈಲರ್ ತುಂಬಾ ಚೆನ್ನಾಗಿದೆ. ಅಭಯ್ ನನ್ನ ಸ್ನೇಹಿತ, ಆತನಲ್ಲಿ ಮಾಸ್ ಹೀರೋ ಆಗುವ ಎಲ್ಲಾ ಲಕ್ಷಣಗಳಿವೆ. ನಾನು ಕೂಡ ಮೈಸೂರಿನವನು. ಹುಟ್ಟಿದ್ದ ಚಾಮರಾಜನಗರದಲೇ ಆದರೂ ಬೆಳೆದಿದ್ದೆಲ್ಲ ಮೈಸೂರಲ್ಲೇ. ಚಿತ್ರತಂಡಕ್ಕೆ ಒಳ್ಳೇದಾಗಲಿ ಎಂದು ಹಾರೈಸಿದರು.
ಮತ್ತೊಬ್ಬ ಅತಿಥಿ ಪುಟ್ಟರಾಜು ಮಾತನಾಡಿ ನಿರ್ಮಾಪಕರ ೫ನೇ ಚಿತ್ರ ಇದು, ಅವರು ಇನ್ನೂ ೫೦ ಸಿನಿಮಾ ಮಾಡುವಂತಾಗಲಿ ಎಂದು ಶುಭ ಕೋರಿದರು. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ ಚಿತ್ರದಲ್ಲಿ ಮೂರು ಭರ್ಜರಿ ಆಕ್ಷನ್ ಇದೆ. ಅಭಯ್ ತುಂಬಾ ಲವಲವಿಕೆಯಿಂದ ಆಕ್ಟ್ ಮಾಡಿದ್ದಾರೆ ಎಂದರು. ನಿರ್ಮಾಪಕ ಚಂದ್ರಶೇಖರ್ ಮಾತನಾಡಿ ನಮ್ಮ ಶಾಸಕರು, ಕಾರ್ತೀಕ್ ತುಂಬಾ ಬ್ಯುಸಿ ಇದ್ದರೂ ಬಂದು ಹರಸಿದರು. ವೆಂಕಟ್ ಗೌಡ್ರು ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ ಎಂದರು. ನಾಯಕ ಅಭಯ್ ಮಾತನಾಡಿ ನಾನು ಶಿವ ಎಂಬ ಪ

*ವಿನಯ್ ಅಭಿನಯದ ಒಂದು ಸರಳ ಪ್ರೇಮಕಥೆಯ ಮತ್ತೊಂದು  ಸೂಫಿ ಶೈಲಿಯ ಗೀತೆ ಮೆಚ್ಚಿಕೊಂಡ ಮೋಹಕ ತಾರೆ ರಮ್ಯಸಿಂಪಲ್ ಸುನಿ ಸಾರಥ್ಯದ ಒಂದು ಸರಳ ಪ್ರೇಮಕಥ...
01/02/2024

*ವಿನಯ್ ಅಭಿನಯದ ಒಂದು ಸರಳ ಪ್ರೇಮಕಥೆಯ ಮತ್ತೊಂದು ಸೂಫಿ ಶೈಲಿಯ ಗೀತೆ ಮೆಚ್ಚಿಕೊಂಡ ಮೋಹಕ ತಾರೆ ರಮ್ಯ

ಸಿಂಪಲ್ ಸುನಿ ಸಾರಥ್ಯದ ಒಂದು ಸರಳ ಪ್ರೇಮಕಥೆ ಆಗಮನಕ್ಕೆ ದಿನಗಣೆಯಷ್ಟೇ ಬಾಕಿ ಇದೆ. ಫೆಬ್ರವರಿ 8ಕ್ಕೆ ತೆರೆಗೆ ಬರ್ತಿರುವ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗ್ತಿದೆ. ಕ್ಯಾರೆಕ್ಟರ್ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿರುವ ಸುನಿ ಈಗ ಒಂದೊಂದೇ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರಪ್ರೇಮಿಗಳಿಗೆ ಆಮಂತ್ರಣ ನೀಡುತ್ತಿದ್ದಾರೆ.

ಒಂದು ಸರಳ ಪ್ರೇಮಕಥೆ ಸಿನಿಮಾದ ಮತ್ತೊಂದು ಮೆಲೋಡಿ ಮಸ್ತಿ ಅನಾವರಣಗೊಂಡಿದೆ. ಸೂಫಿ ಶೈಲಿ ಸರಳ ಗೀತೆಯನ್ನು ಮೋಹಕ ತಾರೆ ರಮ್ಯಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಎಲ್ಲಾ ಮಾತನ್ನು ಎಂಬ ಹಾಡಿಗೆ
ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು, ವೀರ್ ಸಮರ್ಥ್ ಸಂಗೀತ ಒದಗಿಸುವುದರ ಜೊತೆಗೆ ಶಿವಾನಿ ಸ್ವಾಮಿ ಜೊತೆಗೂಡಿ ಧ್ವನಿಯಾಗಿದ್ದಾರೆ. ದೊಡ್ಮನೆ ಕುವರ ವಿನಯ್ ರಾಜ್ ಕುಮಾರ್ ಹಾಗೂ ನಾಯಕಿ ‌ಮಲ್ಲಿಕಾ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ವಿನಯ್ ರಾಜ್ ಕುಮಾರ್ ಆತಿಷಯ ಎಂಬ ಪಾತ್ರದಲ್ಲಿ ‌ನಟಿಸಿದ್ದು, ಅವರಿಗೆ ಜೋಡಿಯಾಗಿ
ಮಲ್ಲಿಕಾ ಸಿಂಗ್ ಹಾಗೂ ಸ್ವಾತಿಷ್ಠಾ ಕೃಷ್ಣನ್ ಅಭಿನಯಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಧುಕೋಕಿಲಾ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಸರಳ ಪ್ರೇಮಕಥೆಗೆ ಮೈಸೂರು ರಮೇಶ್ ನಿರ್ಮಾಣ ಹಣ ಹಾಕಿದ್ದಾರೆ. ಒಂದು ಸರಳ ಪ್ರೇಮಕಥೆಗೆ ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ.

ಯೋಗರಾಜ್ ಭಟ್ಟರ  ಉಡಾಳ ಚಿತ್ರಕ್ಕೆ  ಟೀಂ ಜೊತೆ ಟೋಪಿ ಧರಿಸುವ ಮೂಲಕ ಚಿತ್ರಕ್ಕೆ ಸಾಥ್ ನೀಡಿದ ಹಿರಿಯ ಛಾಯಾಗ್ರಾಹಕ  ಮೋಕ್ಷೆಂದ್ರ
01/02/2024

ಯೋಗರಾಜ್ ಭಟ್ಟರ ಉಡಾಳ ಚಿತ್ರಕ್ಕೆ ಟೀಂ ಜೊತೆ ಟೋಪಿ ಧರಿಸುವ ಮೂಲಕ ಚಿತ್ರಕ್ಕೆ ಸಾಥ್ ನೀಡಿದ ಹಿರಿಯ ಛಾಯಾಗ್ರಾಹಕ ಮೋಕ್ಷೆಂದ್ರ

ಮಂಡ್ಯಹೈದ ಚಿತ್ರದ ಹಾಡುಗಳು ಚಿತ್ರದ ನಟ ಅಭಯಚಂದ್ರ ರವರ ಜನ್ಮದಿನದಂದು ನಾಳೆ ಲೋಕಾರ್ಪಣೆಯಾಗಲಿದೆ.ನೋಡಿ ಹರಸಿ ಹಾರೈಸಿ ಹೊಸ ಪ್ರತಿಭೆಗಳಿಗೆ ಕೈ ಹಿ...
09/01/2024

ಮಂಡ್ಯಹೈದ ಚಿತ್ರದ ಹಾಡುಗಳು ಚಿತ್ರದ ನಟ ಅಭಯಚಂದ್ರ ರವರ ಜನ್ಮದಿನದಂದು ನಾಳೆ ಲೋಕಾರ್ಪಣೆಯಾಗಲಿದೆ.
ನೋಡಿ ಹರಸಿ ಹಾರೈಸಿ ಹೊಸ ಪ್ರತಿಭೆಗಳಿಗೆ ಕೈ ಹಿಡಿದು ಮುನ್ನೆಡೆಸಿ.

ಮಿಸ್ ಕಾಲ್ ಪ್ರೇಮಕಥೆ "ಜೊತೆಯಾಗಿರು" ಟ್ರೈಲರ್ ಬಿಡುಗಡೆ      ರೇಣು ಮೂವೀಸ್ ಮೂಲಕ ಒಂದಷ್ಟು ಸ್ನೇಹಿತರೇ ಸೇರಿ ನಿರ್ಮಿಸಿರುವ ಚಿತ್ರ ಜೊತೆಯಾಗಿರ...
06/01/2024

ಮಿಸ್ ಕಾಲ್ ಪ್ರೇಮಕಥೆ
"ಜೊತೆಯಾಗಿರು" ಟ್ರೈಲರ್ ಬಿಡುಗಡೆ

ರೇಣು ಮೂವೀಸ್ ಮೂಲಕ ಒಂದಷ್ಟು ಸ್ನೇಹಿತರೇ ಸೇರಿ ನಿರ್ಮಿಸಿರುವ ಚಿತ್ರ ಜೊತೆಯಾಗಿರು. ಅಜರಾಮರ, ನಾನೊಬ್ನೆ ಒಳ್ಳೇವ್ನು ಸೇರಿದಂತೆ ಹಲವಾರು ಸಿನಿಮಾಗಳಿಗೆ ಸಹಾಯಕ ನಿರ್ದೇಶಕ, ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿದ ಸತೀಶ್ ಕುಮಾರ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ 3 ಹಾಡುಗಳ ಪ್ರದರ್ಶನ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

2009ರಲ್ಲಿ ನಡೆದ ನೈಜ ಘಟನೆಯಿಂದ ಪ್ರೇರಿತವಾದ ಕಥೆ ಈ ಚಿತ್ರದಲ್ಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸತೀಶ್ ಕುಮಾರ್, ಆಗ ನನ್ನ ಸ್ನೇಹಿತನ ಜೀವನದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಈ ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದೇನೆ.‌ ಜೊತೆಗೆ ಒಂದು ಫ್ರೆಂಡ್ ಷಿಪ್ ಟ್ರ್ಯಾಕ್ ಕೂಡ ಬರುತ್ತದೆ. ಚಿತ್ರದಲ್ಲಿ ಎರಡು ಲವ್ ಸ್ಟೋರಿಗಳು ಬರುತ್ತದೆ. ಸೋಷಿಯಲ್ ಮೀಡಿಯಾ ಇಲ್ಲದ ಕೀಪ್ಯಾಡ್ ಕಾಲದಲ್ಲಿ ಮಿಸ್ ಕಾಲ್ ನಿಂದ ಹುಟ್ಟಿದ ಪ್ರೇಮಕಥೆಯೊಂದು ಫ್ಲ್ಯಾಷ್ ಬ್ಯಾಕ್ ನಲ್ಲಿ ಬರುತ್ತದೆ. ಇನ್ನೊಂದು ಕಥೆಯಲ್ಲಿ ಹಣದ ಆಸೆಗೆ ಬಿದ್ದ ಹುಡುಗಿಯನ್ನು ಹುಡುಗ ಲವ್ ಮಾಡಿದರೆ ಏನಾಗುತ್ತೆ ಎಂಬುದನ್ನು ಹೇಳಿದ್ದೇವೆ. ಬೆಂಗಳೂರು, ಕನಕಪುರದಲ್ಲಿ ಮಾತಿನ ಭಾಗ ಹಾಗೂ ಕಳಸ, ಸಕಲೇಶಪುರ, ಕುಂದಾಪುರ, ಸುತ್ತಮುತ್ತ ಹಾಡುಗಳನ್ನು ಚಿತ್ರೀಕರಿಸಿದ್ದೇವೆ. ಮಿಸ್ ಕಾಲ್ ನಿಂದ ಹುಟ್ಟಿದ ಪ್ರೇಮಕಥೆಯಲ್ಲಿ ವೆಂಕಟೇಶ್ ಹೆಗಡೆ, ರಶ್ಮಿಗೌಡ ಹಾಗೂ ಸುನಿಲ್ ಕಾಂಚನ್, ಪೂಜಾ ಆಚಾರ್ ಇನ್ನೊಂದು ಕಥೆಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದು ಸೆನ್ಸಾರ್ ನಿಂದ ಯು/ಎ ಪ್ರಮಾಣಪತ್ರವೂ ಸಿಕ್ಕಿದೆ. ಸ್ನೇಹಿತರು ಸೇರಿ ಈ ಸಿನಿಮಾ ಮಾಡಿದ್ದೇವೆ ಎಂದರು.
ನಂತರ ನಾಯಕ ವೆಂಕಟೇಶ್ ಹೆಗ್ಡೆ ಮಾತನಾಡಿ ನಾವೆಲ್ಲ ಹೊಸಬರು. ಮಿಸ್ ಕಾಲ್ ನಿಂದ ಪ್ರಾರಂಭವಾಗುವ ಲವ್ ಮುಂದೆ ಏನೇನಾಗುತ್ತೆ, ಯಾವ ತಿರುವು ತಗೊಳ್ಳುತ್ತೆ ಅನ್ನೋದು ಚಿತ್ರದಲ್ಲಿದೆ ಎಂದು ಹೇಳಿದರು.
ನಾಯಕಿ ರಶ್ಮಿಗೌಡ ಮಾತನಾಡಿ ಐಟಿಯಲ್ಲಿ ವರ್ಕ್ ಮಾಡ್ತಿದ್ದ ನಾನು ನಿರೂಪಕಿಯಾಗೂ ಕೆಲಸ ಮಾಡಿದ್ದೇನೆ. ಹಿಂದೆ ರಾಜಲಕ್ಷ್ಮಿ ಚಿತ್ರದಲ್ಲಿ ನಟಿಸಿದ್ದೆ. ಮಿಸ್ ಕಾಲ್ ಲವ್ ಸ್ಟೋರಿಯಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದರು. ಮತ್ತೊಬ್ಬ ನಾಯಕನಟ ಸುನಿಲ್ ಕಾಂಚನ್ ಮಾತನಾಡಿ ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು. ಉಳಿದಂತೆ ಶಂಕರ ನಾರಾಯಣ್, ಸಂತೋಷ್, ಸುಧಾ ತಮ್ಮ ಪಾತ್ರಗಳ ಕುರಿತಂತೆ ಹೇಳಿಕೊಂಡರು. ರಾಜಶೇಖರ್ ಅವರ ಸಂಭಾಷಣೆ, ವಿನು ಮನಸು ಅವರ ಸಂಗೀತ,ಕೆ ಕಲ್ಯಾಣ್,ಮನ್ವರ್ಷಿ,ಸತೀಶ್ ಕುಮಾರ್ ಸಾಹಿತ್ಯ, ಸತೀಶ್ ಚಂದ್ರಯ್ಯ ಸಂಕಲನ, ವಿ ನಾಗೇಶ್ ನೃತ್ಯ, ಲಯನ್ ಗಂಗರಾಜ್ ಸಾಹಸ,ರಾಜ ಶಿವಶಂಕರ್, ಆನಂದ್ ಇಳಯರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಈ ವಾರ ತೆರೆಗೆ'ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ' ಅಪ್ಸರ ಮೂವೀಸ್ ಲಾಂಛನದಲ್ಲಿ ವೇಂಪಲ್ಲಿ ಬಾವಾಜಿ ನಿರ್ದೇಶನದಲ್ಲಿ 'ಆನ್ ಲೈನ್ ಮದುವೆ, ಆಫ್ ಲ...
02/01/2024

ಈ ವಾರ ತೆರೆಗೆ
'ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ'

ಅಪ್ಸರ ಮೂವೀಸ್ ಲಾಂಛನದಲ್ಲಿ ವೇಂಪಲ್ಲಿ ಬಾವಾಜಿ ನಿರ್ದೇಶನದಲ್ಲಿ 'ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ' ಹಾಸ್ಯ ಪ್ರಧಾನ ಕಥಾಹಂದರದ ಚಿತ್ರ ಈ ವಾರ ಬಿಡುಗಡೆಗೆಯಾಗಲಿದೆ.
ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ನಿರ್ದೇಶಕ ಬಾವಾಜಿ ಅವರೇ ಬರೆದಿದ್ದಾರೆ.
ಈಗಿನ ಟ್ರೆಂಡ್ ಗೆ ತಕ್ಕಂತೆ ಕಾಮಿಡಿ, ಫ್ಯಾಮಿಲಿ ಎಂಟರ್ ಟೈನರ್, ಕಥಾಹಂದರ ಹೊಂದಿರುವ ಚಿತ್ರ ಇದಾಗಿದ್ದು, ಕುಟುಂಬ ಸಮೇತ ಕುಳಿತು ವೀಕ್ಷಿಸುವಂಥ ಅನ್ ಲಿಮಿಟೆಡ್ ಕಾಮಿಡಿ ಜೊತೆಗೆ ಡಿಫರೆಂಟ್ ಕಾನ್ಸೆಪ್ಟ್ ಇದರಲ್ಲಿದೆ.
ಜಗಪ್ಪ, ಸುಶ್ಮಿತ, ಸೀರುಂಡೆ ರಘು, ಗಜೇಂದ್ರ, ಗಜೇಂದ್ರ, ರಾಘವಿ ಸೇರಿದಂತೆ ಗಿಚ್ಚಿ ಗಿಲಿ ಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು, ಕಾರ್ಯಕ್ರಮದ ಅನೇಕ ಕಲಾವಿದರು ಅಲ್ಲದೆ ಯಶಸ್ವಿನಿ, ಚಂದನ, ಶರಣ್ಯರೆಡ್ಡಿ ಮುಂತಾದವರು ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ' ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬಾಲು ಕ್ಯಾಮೆರಾ ವರ್ಕ್, ಅಲೆಕ್ಸ್ ಕಲಾವಿದರ ಸಂಗೀತ, ಅರುಣ ಪ್ರಸಾದ್, ವೇಂಪಲ್ಲಿ ಬಾಲಾಜಿ ಸಾಹಿತ್ಯ, ಗಣೇಶ್, ಸದಾಶಿವ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

10 ವರ್ಷದ ಪೋರಿ 4 ಅಂತರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ಪಡೆದು ಈಗ ನಟಿಯಾಗಿ "ಟೇಕ್ವಾಂಡೋ ಗರ್ಲ್" ಆಗಿ ಬೆಳ್ಳಿತೆ...
10/09/2023

10 ವರ್ಷದ ಪೋರಿ 4 ಅಂತರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ಪಡೆದು ಈಗ ನಟಿಯಾಗಿ "ಟೇಕ್ವಾಂಡೋ ಗರ್ಲ್" ಆಗಿ ಬೆಳ್ಳಿತೆರೆಗೆ ಎಂಟ್ರಿ

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಕುಲಕ್ಕೆ ಕಂಟಕಪ್ರಾಯವಾದ ಕೃತ್ಯಗಳು ನಡೆಯುತ್ತಲೇ ಬಂದಿದೆ.
ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಅತೀ ಮುಖ್ಯವಾದ ವಿಚಾರ ಈ ನಿಟ್ಟಿನಲ್ಲಿ ಸದ್ದಿಲ್ಲದೆ ಒಂದು ಸಿನಿಮಾ ತಯಾರಾಗಿದೆ. ಚಿತ್ರದ ಹೆಸರು "ಟೇಕ್ವಾಂಡೋ ಗರ್ಲ್".

ಈ ಚಿತ್ರದಲ್ಲಿ ಒಂದು ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ ಎಷ್ಟು ಕಷ್ಟ ಪಡುತ್ತಾಳೆ, ಓದುವುದೇ ಕಷ್ಟ ಇರುವಂತ ಸಮಯದಲ್ಲಿ ಇದರ ಮದ್ಯೆ ಟೇಕ್ವಾಂಡೋ ಸಮರ ಕಲೆ ಹೇಗೆ ಕಲಿಯುತ್ತಾಳೆ, ಈ ವಿದ್ಯೆಯ ಮುಖಾಂತರ ಸಮಾಜಕ್ಕೆ ಹೇಗೆ ಮಾದರಿಯಾಗುತ್ತಾಳೆ ಎನ್ನುವುದೇ ಈ ಚಿತ್ರದ ಮುಖ್ಯ ಸಾರಾಂಶ.
5ನೇ ತರಗತಿಯಲ್ಲಿ ಓದುತ್ತಿರುವ ಋತು ವರ್ಷ 3ನೇ ವಯಸ್ಸಿನಿಂದ ಈ ಕಲೆಯನ್ನು ಅಭ್ಯಾಸ ಮಾಡಿದ್ದಾಳೆ. ಒಟ್ಟು ಎಂಟು ಪರೀಕ್ಷೆಗಳನ್ನು ಎದುರಿಸಿ ಈಗ ಬ್ಲಾಕ್ ಬೆಲ್ಟ್ ಪಡೆದು 4 ಅಂತರಾಷ್ಟ್ರೀಯ ಚ್ಯಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಹೆಮ್ಮೆಯ ಟೇಕ್ವಾಂಡೋ ಪಟು ಆಗಿದ್ದಾಳೆ ಋತು ವರ್ಷ.

ಈಕೆಯ ಸಾಧನೆಗೆ ಮೂಲ ಪ್ರೇರಣೆ ತಾಯಿ ಡಾ,, ಸುಮೀತಾ ಪ್ರವೀಣ್.
ಮಗಳಿಗೆ ಸ್ವಯಂ ರಕ್ಷಣೆ ಮುಖ್ಯ ಎನ್ನುವುದನ್ನು ತಿಳಿ ಹೇಳಿ ಆಕೆಯನ್ನು 3ನೇ ವಯಸ್ಸಿನಿಂದ ತಯಾರಿ ಮಾಡಿದ್ದಾರೆ.
ಇದು ಮಗಳಿಗಷ್ಟೇ ಸೀಮಿತ ವಾಗಬಾರದು ಎಂದು ಅದನ್ನೇ ಒಂದು ಸಿನಿಮಾ ಮುಖಾಂತರ ಸಮಾಜಕ್ಕೆ ಹೇಳಲು
ಟೇಕ್ವಾಂಡೋ ಗರ್ಲ್
ಸಿನಿಮಾ ನಿರ್ಮಾಪಕರಾಗಿ ಚಿತ್ರವನ್ನು ನಿರ್ಮಿಸಿದ್ದಾರೆ
ಈ ಚಿತ್ರಕ್ಕೆ ಅವರ ಪತಿ ಪ್ರವೀಣ್ ಭಾನು ಕೂಡ ಸಾಥ್ ನೀಡಿ ಮಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ.
ಮಗಳ ಹುಟ್ಟುಹಬ್ಬದ ದಿನವೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಗಳನ್ನು ಖುಷಿ ಪಡಿಸಿದ್ದಾರೆ. ಇದೇ ಸಮಯದಲ್ಲಿ ಮಗಳಿಗಾಗಿ ಸಿನಿಮಾ ಮಾಡಿ ಅವಳ ಪ್ರತಿಭೆಯನ್ನು ನೋಡಿ ವೇದಿಕೆಯ ಮೇಲೆ ಅವಳ ತಾಯಿ ಭಾವುಕರಾಗಿ ಕಣ್ಣೀರಾಕಿದರು. ತಾಯಿ ತಂದೆಯರ ಶ್ರಮ ಸಾರ್ಥಕತೆಯ ಭಾವ ಅವರಲ್ಲಿತ್ತು.
ನನ್ನ ಮಗಳಷ್ಟೇ ಅಲ್ಲ ಎಲ್ಲಾ ಹೆಣ್ಣು ಮಕ್ಕಳು ಟೇಕ್ವಾಂಡೋ ಕಲೆ ಕಲಿಯ ಬೇಕು ಎಂದರು.
ಜೊತೆಗೆ ಮಾತಾಡಿದ ಋತು ವರ್ಷ ತಂದೆ ಪ್ರವೀಣ್ ನನ್ನ ಮಗಳಲ್ಲಿ ಇಷ್ಟೊಂದು ಪ್ರತಿಭೆ ಇದೆ ಎಂದು ಗೊತ್ತಿರಲಿಲ್ಲ ಎಂದು ಭಾವುಕರಾದರು.

ಚಿತ್ರಕ್ಕೆ ರವೀಂದ್ರ ವಂಶಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಪುಟಾಣಿ ಸಫಾರಿ ಚಿತ್ರವನ್ನು ನಿರ್ದೇಶನ ಮಾಡಿದ್ದ ಇವರು ಟೇಕ್ವಾಂಡೋ ಚಿತ್ರ ನಿರ್ದೇಶನಕ್ಕೆ 25 ದಿನ ತರಬೇತಿ ಪಡೆದು ಅದರ ಬಗ್ಗೆ ತಿಳಿದುಕೊಂಡು ನಂತರ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಇದು ಮಕ್ಕಳ ಚಿತ್ರ ನಿಜ ಆದರೆ ಮಕ್ಕಳಿಂದ ದೊಡ್ಡವರಿಗಾಗಿ ನಿರ್ಮಿಸಿರುವ ಚಿತ್ರ ಇದಾಗಿದ್ದು ಈ ಚಿತ್ರವನ್ನು ಸ್ಕೂಲ್ ಮಕ್ಕಳಿಗೆ ತೋರಿಸಲು ನಿರ್ದರಿಸಿದ್ದೇವೆ ಎಂದು ಹೇಳಿದರು.
ಚಿತ್ರದಲ್ಲಿ ಸುಮಾರು ಇನ್ನೂರು ಟೇಕ್ವಾಂಡೋ ವಿಧ್ಯಾರ್ಥಿಗಳು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಸುಮಾರು ನೂರೈವತ್ತು ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿರುವ ಸಂಗೀತ ನಿರ್ದೇಶಕ M.S. ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಈ ಸಮಯದಲ್ಲಿ ಮಾತಾಡಿದ ಇವರು ಇದು ಚೆಕ್ ದೇ ಇಂಡಿಯಾ, ದಂಗಲ್ ನಂತಹ ಚಿತ್ರ ಇದಾಗಿದ್ದು ಎಲ್ಲರೂ ಇಂತಹ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ನಟ ಗಣೇಶ್ ರಾವ್ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು.
ಚಿತ್ರ ಇದೇ ತಿಂಗಳು ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸುತ್ತಿದೆ.

ರಮೇಶ್ ಅರವಿಂದ್ - ಗೋಲ್ಡನ್ ಸ್ಟಾರ್ ಗಣೇಶ್   ಜೋಡಿಯ ಹೊಸ ಚಿತ್ರಕ್ಕೆ ವಿಖ್ಯಾತ್ ನಿರ್ದೇಶನ   ಕನ್ನಡ ಚಿತ್ರರಂಗಕ್ಕೆ ವಿಖ್ಯಾತ್ ಚಿತ್ರ  ಪ್ರೊಡಕ...
10/09/2023

ರಮೇಶ್ ಅರವಿಂದ್ - ಗೋಲ್ಡನ್ ಸ್ಟಾರ್ ಗಣೇಶ್
ಜೋಡಿಯ ಹೊಸ ಚಿತ್ರಕ್ಕೆ ವಿಖ್ಯಾತ್ ನಿರ್ದೇಶನ

ಕನ್ನಡ ಚಿತ್ರರಂಗಕ್ಕೆ ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಮೂಲಕ ಪುಷ್ಪಕ ವಿಮಾನ, ಇನ್ಸ್ ಪೆಕ್ಟರ್ ವಿಕ್ರಂ, ಮಾನ್ಸೂನ್ ರಾಗದಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ ನಿರ್ಮಾಪಕ ವಿಖ್ಯಾತ್ ತಮ್ಮ ಸಂಸ್ಥೆಯ ನಿರ್ಮಾಣದ ಆರನೇ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ತಮ್ಮ ಪ್ರಥಮ ಪ್ರಯತ್ನದಲ್ಲೇ ಮಲ್ಟಿ ಸ್ಟಾರ್ ‌ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ.
ಸ್ಟಾರ್ ನಟರಾದ ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರನ್ನೂ ನಾಯಕರನ್ನಾಗಿಟ್ಟುಕೊಂಡು ದೇಶ ಕಾಯುವ ವೀರಯೋಧರ ಕುರಿತಾಗಿ ಒಂದಷ್ಟು ಮಹತ್ವದ ವಿಚಾರಗಳನ್ನು ಹೇಳಲು ಹೊರಟಿದ್ದಾರೆ. ನಟ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಹೊಸ ಪೋಸ್ಟರನ್ನು ಬಿಡುಗಡೆ ಮಾಡಲಾಗಿದ್ದು, ಈ ಪೋಸ್ಟರ್ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ. ಇದರಲ್ಲಿ ವೀರ ಸೇನಾನಿಗಳ ನಡುವೆ ನಾಯಕರಿಬ್ಬರೂ ವಿದೂಷಕರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಈಗ ಉದ್ಭವಿಸಿರುವ ಎಲ್ಲಾ ಕುತೂಹಲಗಳಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ವಿಖ್ಯಾತ್ ಅವರೇ ಉತ್ತರ ನೀಡಬೇಕಿದೆ.

*ಅಮೇರಿಕಾದಲ್ಲಿ "ಮೈ ಹೀರೋ" ಚಿತ್ರಕ್ಕೆ ಮೂರನೇ ಹಂತದ ಚಿತ್ರೀಕರಣ ಮುಕ್ತಾಯ* . *ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಹಾಲಿವುಡ್ ನ ಖ್ಯಾ...
10/09/2023

*ಅಮೇರಿಕಾದಲ್ಲಿ "ಮೈ ಹೀರೋ" ಚಿತ್ರಕ್ಕೆ ಮೂರನೇ ಹಂತದ ಚಿತ್ರೀಕರಣ ಮುಕ್ತಾಯ* .

*ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಹಾಲಿವುಡ್ ನ ಖ್ಯಾತ ನಟ ಎರಿಕ್ ರಾಬರ್ಟ್ಸ್ ನಟನೆ* .


ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸುತ್ತಿರುವ " ಮೈ ಹೀರೋ" ಚಿತ್ರದ ಚಿತ್ರೀಕರಣ
ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋ, ಲಾಸ್ ಎಂಜಲೀಸ್ , ಬಿಗ್ ಸರ್ ಇನ್ನು ಮುಂತಾದ ಕಡೆ ಸುಮಾರು ಹದಿನೈದು ದಿನಗಳ ಕಾಲ ನಡೆದಿದೆ‌. ಇದರೊಂದಿಗೆ ಮೂರನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಹಾಲಿವುಡ್ ನ ಖ್ಯಾತ ತಂತ್ರಜ್ಞರು ಕೂಡ ಈ ಚಿತ್ರದಲ್ಲಿ ಕೆಲಸ ಮಾಡಿರುವುದು ಚಿತ್ರದ ವಿಶೇಷಗಳೊಲದಲ್ಲೊಂದು. ಜೊತೆಗೆ ಹಾಲಿವುಡ್‍ನ ಖ್ಯಾತ ನಟರಾದ “ಎರಿಕ್ ರಾಬರ್ಟ್ಸ್” ಹಾಗೂ ಹಾಲಿವುಡ್‍ನ ಮತ್ತಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಅಷ್ಟೇ ಅಲ್ಲದೆ ಈ ಚಿತ್ರದ ಮತ್ತೊಂದು ವಿಶೇಷತೆಯ ಬಗ್ಗೆ ನಿರ್ದೇಶಕರಾದ ಅವಿನಾಶ್ ವಿಜಯಕುಮಾರ್ ಅವರು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.
ಎರಿಕ್ ರಾಬರ್ಟ್ಸ್, ಮಿಸ್ಸಿಸ್ಸಿಪ್ಪಿಯ ಬಿಲೋಕ್ಸಿಯಲ್ಲಿ ಜನಿಸಿದರು‌. ಅಟ್ಲಾಂಟಾ ಪ್ರದೇಶದ ಸುತ್ತಮುತ್ತ ಬೆಳೆದರು. ಅವರು ನ್ಯೂಯಾರ್ಕ್ ನಗರದಲ್ಲಿ ರಂಗಭೂಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅಲ್ಲಿ ಅವರು ಬರ್ನ್ ದಿಸ್‍ನಲ್ಲಿ ಬ್ರಾಡ್‍ವೇಯಲ್ಲಿನ ಪಾತ್ರಕ್ಕಾಗಿ ಥಿಯೇಟರ್ ವಲ್ಡ್ ಪ್ರಶಸ್ತಿಯನ್ನು ಗೆದ್ದರು.
“ರನ್‍ ಅವೇ ಟ್ರೈನ್” ಚಿತ್ರದಲ್ಲಿನ ಪಾತ್ರಕ್ಕಾಗಿ ಎರಿಕ್ ರಾಬರ್ಟ್ಸ್ ರವರು ಅಕಾಡೆಮಿ ಪ್ರಶಸ್ತಿ ಮತ್ತು “ಸ್ಟಾರ್ 80” ಮತ್ತು “ಕಿಂಗ್ ಆಫ್ ದಿ ಜಿಪ್ಸಿ” ಚಿತ್ರದಲ್ಲಿನ ಪಾತ್ರಕ್ಕಾಗಿ ಮೂರು ಬಾರಿ ಗೋಲ್ಡನ್ ಗ್ಲೋಬ್ ನಾಮಿನಿಯಾಗಿದ್ದಾರೆ.
ಇದರ ಜೊತೆಗೆ, “ಎ ಗೈಡ್ ಟು ರೆಕಗ್ನೈಸಿಂಗ್” “ಯುವರ್ ಸೇಂಟ್ಸ್” ಮತ್ತು “ಇಟ್ಸ್ ಮೈ ಪಾರ್ಟಿ”ಯಲ್ಲಿನ ಪಾತ್ರಕ್ಕಾಗಿ ರಾಬರ್ಟ್ಸ್ ಸನ್‍ಡಾನ್ಸ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಮೆಚ್ಚುಗೆಯನ್ನು ಪಡೆದರು. ಆಸ್ಟಿನ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದು, ಮತ್ತು ಅದೇ ವರ್ಷ ನ್ಯೂಯಾರ್ಕ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ರಾಬರ್ಟ್ಸ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.
ದಿ ಡಾರ್ಕ್ ನೈಟ್, ಫೈನಲ್ ಅನಾಲಿಸಿಸ್, ಮತ್ತು ಪಾಲ್ ಥೋಮನ್ ಆಂಡರ್ಸನ್ ಅವರ ಇನ್ಹೆರೆಂಟ್ ವೈಸ್ ಫಾರ್ ವಾರ್ನರ್ ಬ್ರದರ್ಸ್, ಮಿಲೇನಿಯಮ್ ಫಿಲ್ಮ್ಸ್ ಲವ್ಲೇಸ್ ಮತ್ತು ದಿ ಎಕ್ಸ್‍ಪೆಂಡಬಲ್ಸ್ ಫಾರ್ ಲಯನ್ಸ್‍ಗೇಟ್‍ನಲ್ಲಿನ ಅವರ ಪಾತ್ರಗಳು ಇತರ ಗಮನಾರ್ಹ ಪ್ರದರ್ಶನಗಳನ್ನು ಒಳಗೊಂಡಿವೆ.
ವಾರ್ನರ್ ಬ್ರದರ್ಸ್ ಜರ್ಮನಿ ನಿರ್ಮಾಣದ “ಹೆಡ್ ಫುಲ್ ಆಫ್ ಹನಿ”ಯಲ್ಲಿ ರಾಬರ್ಟ್ಸ್, “ಮ್ಯಾಟ್ ದಿಲ್ಲನ್” ಅವರ ವೈದ್ಯರ ಪಾತ್ರ ಮಾಡಿದ್ದಾರೆ.

"ಮೈ ಹೀರೋ" ಚಿತ್ರಕ್ಕೆ ಅವಿನಾಶ್ ವಿಜಯಕುಮಾರ್ ಹಾಗೂ ಮುತ್ತುರಾಜ್ ಟಿ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಗಗನ್ ಬಡೇರಿಯಾ ಸಂಗೀತ ನಿರ್ದೇಶನ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಮುತ್ತುರಾಜ್ ಟಿ ಅವರ ಸಂಕಲನ 'ಮೈ ಹೀರೋ" ಚಿತ್ರಕ್ಕಿದೆ. ಜಿಲಾಲಿ ರೆಜ್ ಕಲ್ಲಾಹ್, ಮಾಸ್ಟರ್ ವೇದಿಕ್, ಎರಿಕ್ ರಾಬರ್ಟ್ಸ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಸತ್ಯಘಟನೆ ಆಧಾರಿತ "ಭೀಮಾ ಕೋರೇಗಾಂವ"  ಶೀರ್ಷಿಕೆ ಅನಾವರಣ    ಇತ್ತೀಚೆಗಷ್ಟೇ ಸಂಜು ವೆಡ್ಸ್ ಗೀತಾ-2 ಚಿತ್ರಕ್ಕೆ ಚಾಲನೆ ನೀಡಿದ್ದ ನಿರ್ದೇಶಕ ನಾಗ...
10/09/2023

ಸತ್ಯಘಟನೆ ಆಧಾರಿತ
"ಭೀಮಾ ಕೋರೇಗಾಂವ"
ಶೀರ್ಷಿಕೆ ಅನಾವರಣ

ಇತ್ತೀಚೆಗಷ್ಟೇ ಸಂಜು ವೆಡ್ಸ್ ಗೀತಾ-2 ಚಿತ್ರಕ್ಕೆ ಚಾಲನೆ ನೀಡಿದ್ದ ನಿರ್ದೇಶಕ ನಾಗಶೇಖರ್, ಅದರ ಬೆನ್ನಲ್ಲೇ ಮತ್ತೊಂದು ಬಿಗ್ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ. ರೆವಲ್ಯೂಷನರಿ ಸಬ್ಜೆಕ್ಟ್ ಇಟ್ಟುಕೊಂಡು ನೈಜ ಘಟನೆಯನ್ನು ತೆರೆಯ ಮೇಲೆ ಹೇಳಹೊರಟಿದ್ದಾರೆ. ಅದಕ್ಕೆ ಕೊಟ್ಟಿರುವ ಹೆಸರು ಭೀಮಾ ಕೋರೇಗಾಂವ.
ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಛಲವಾದಿ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಹು ಸೂಕ್ಷ್ಮ ವಿಚಾರ ಇಟ್ಟುಕೊಂಡು ಮಾಡುತ್ತಿರುವ ಚಲನಚಿತ್ರ ಇದಾಗಿದ್ದು, ಬೆಂಗಳೂರಿನ ಅಶೋಕಾ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಶೀರ್ಷಿಕೆಯನ್ನು ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು ಬಿಡುಗಡೆ ಮಾಡಿದರು.
ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡುತ್ತ ಸಂಜು ವೆಡ್ಸ್ ಗೀತಾ ಚಿತ್ರದ ಬಗ್ಗೆ ಚರ್ಚೆ ನಡೆಸುವಾಗ ಈ ವಿಷಯ ಪ್ರಸ್ತಾಪಕ್ಕೆ ಬಂತು. ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಘಟನೆಯನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ನಿರ್ಧರಿಸಿ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದರು.
ನಂತರ ನಾಗಶೇಖರ್ ಮಾತನಾಡಿ 1818 ರ ಜ.1 ರಂದು ನಡೆದ ರೆವಲ್ಯೂಷನರಿ ಸಬ್ಜೆಕ್ಟ್. ಶೋಷಿತರ ಬದುಕಿಗೆ ಬೆಳಕು ಹಚ್ಚುವ ಕೆಲಸಕ್ಕೆ ದೀಪ ಹಚ್ಚುವ ಮೂಲಕ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ಇದು ಬಹಳ ದೊಡ್ಡ ವಿಚಾರವಾಗಿದೆ ಎಂದರು.
ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡುತ್ತ ಪೂನಾ ನದಿಯ ದಡದಲ್ಲಿ ಡಿ.31ರಿಂದ ಜ.1ರವರೆಗೆ ಸ್ವಾಭಿಮಾನಿ ಬದುಕಿಗೋಸ್ಕರ. ನಡೆದ ಘನಘೋರ ಯುದ್ಧ. 2ನೇ ಬಾಜೀರಾಯನ ಘೋರ ಕೃತ್ಯಗಳನ್ನು ವಿರೋಧಿಸಿ ಮೆಹರ್ ಸೈನಿಕರು ನಡೆಸಿದ ಯುದ್ದ, ಭಾರತದ ನೆಲದಲ್ಲಿ ಬಾಜೀರಾಯ ಅಸ್ಪೃಶ್ಯರನ್ನು ಹೇಗೆ ನಡೆಸಿಕೊಂಡಿದ್ದ, ಯಾವರೀತಿ ನೋಡಿಕೊಂಡಿದ್ದ ಯಾವ ಉದ್ದೇಶಕ್ಕೆ ಈ ಯುದ್ದ ನಡೆಯಿತು ಅನ್ನೋದನ್ನು ಈ ಸಿನಿಮಾದಲ್ಲಿ ದಾಖಲು ಮಾಡಲಾಗುತ್ತೆ ಎಂದರು.
ಮುಖ್ಯ ಅತಿಥಿಯಾಗಿದ್ದ ಚಿಂತಕ ಗೋಪಾಲ್ ಮಾತನಾಡುತ್ತ ಅಸಮಾನತೆಯ ವಿರುದ್ದ ನಡೆದ ಹೋರಾಟವಿದು. 500 ಜನ ಸೈನಿಕರು 30 ಸಾವಿರ ಪೇಶ್ವೆ ಬಾಜೀರಾಯನ ಸೈನಿಕರನ್ನು 12 ಗಂಟೆಗಳಲ್ಲಿ ಧ್ವಂಸ ಮಾಡಿದ ಘಟನೆ. ಮೆಹರ್ಸ್ ಅಂದರೆ ಗುಲಾಮರು. ಬಾಜೀರಾಯ ಅಸ್ಪೃಶ್ಯರ ವಿರುದ್ದ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದ. ಇದನ್ನು ವಿರೋಧಿಸಿ ನಡೆದ ಯುದ್ದವಿದು. ಹಾಲಿವುಡ್ ಶೈಲಿಯ ಸಿನಿಮಾ ಆಗಲಿದೆ‌ ಎಂದರು. ಉಳಿದಂತೆ ನೆಹರು ಓಲೇಕಾರ್, ಚಕ್ರವರ್ತಿ ಚಂದ್ರಚೂಡ್, ಈ ಘಟನೆಯ ಬಗ್ಗೆ ಒಂದಷ್ಟು ಮಾಹಿತಿ‌ ನೀಡಿದರು.
ಕೊನೆಯಲ್ಲಿ ಮಾತು ಮುಂದುವರೆಸಿದ ನಾಗಶೇಖರ್, ಈ ಸಿನಿಮಾ ಮಾಡುವಂತೆ ನನಗೆ ಪ್ರೇರೇಪಿಸಿದ್ದು ರೈಟರ್ ಚಂದ್ರಚೂಡ್, ಜಾಸ್ತಿ ಬಂಡವಾಳ ಕೇಳುತ್ತೆ. ಚಿತ್ರದ ಬಜೆಟ್ 120 ಕೋಟಿ ಆಗಬಹುದು. ನಿರ್ಮಾಪಕ ಕುಮಾರ್ ಎಷ್ಟೇ ಆದರೂ ಖರ್ಚು ಮಾಡಲು ರೆಡಿ ಇದ್ದಾರೆ. ಕನ್ನಡದ ಸೂಪರ್ ಸ್ಟಾರ್ ಒಬ್ಬರು ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದಾರೆ. ನಟಿ ದೀಪಿಕಾ ಪಡುಕೋಣೆ ಅವರನ್ನು ನಾಯಕಿ ಪಾತ್ರಕ್ಕೆ ಕರೆತರುವ ಉದ್ದೇಶವಿದೆ. 54 ಕೋಟಿ ಶೋಷಿತರಿಗೆ ಬೆಳಕಾಗುವ ಕಥಾನಕವಿದು. ಚಂದ್ರಚೂಡ್ ನೇತೃತ್ವದಲ್ಲಿ ಬರಹಗಾರರ ತಂಡ ಕಟ್ಟಿ ಭಾಗ-1, ಭಾಗ-2 ಮಾಡುವ ಯೋಚನೆಯಿದೆ. ಪ್ರೀ ಪ್ರೊಡಕ್ಷನ್ ಗೆ 365 ದಿನ ತೆಗೆದುಕೊಂಡಿದ್ದೇನೆ. ಈ ಕಥೆಯನ್ನು ಕಣ್ಣಿಗೆ ಕಟ್ಟುವ ಹಾಗೆ ಮನಸಿಗೆ ಮುಟ್ಟುವ ಹಾಗೆ ಕಟ್ಟಿಕೊಡುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

ಆಂಜನೇಯನ ಸನ್ನಿದಿಯಲ್ಲಿ ಯೋಗಿ ನೃತ್ಯ       ’ವಜ್ರಕಾಯ’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆ ಸ್ಟಾರ್ ಕಲಾವಿದರು ದೇವರ ಹಾಡಿ...
09/09/2023

ಆಂಜನೇಯನ ಸನ್ನಿದಿಯಲ್ಲಿ ಯೋಗಿ ನೃತ್ಯ
’ವಜ್ರಕಾಯ’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆ ಸ್ಟಾರ್ ಕಲಾವಿದರು ದೇವರ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಇದರಿಂದ ಪ್ರೇರಿತಗೊಂಡ ’ರಾಜರಾಣಿ’ ಚಿತ್ರದ ನಾಯಕ ಮತ್ತು ನಿರ್ದೇಶಕ ಬಳ್ಳಾರಿಯ ರಣಧೀರ್ ಇದೇ ತರಹದ ಗೀತೆಯನ್ನು ಸೃಷಿಸಿದ್ದಾರೆ. ’ಇಟ್ಟಿಗೆ ಗೂಡಿನಲ್ಲಿ ರಾಜರಾಣಿ’ ಎಂಬ ಅಡಿಬರಹವಿದೆ. ರಾಜನಕುಂಟೆ ಬಯಲು ಭೂಮಿಯಲ್ಲಿ ಬೃಹದಕಾರದ ಕಲರ್‌ಫುಲ್ ಸೆಟ್‌ನಲ್ಲಿ ಹತ್ತು ಅಡಿ ಎತ್ತರದ ಆಂಜನೇಯನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗಿತ್ತು. ಮಾಧ್ಯಮದವರು ಸೆಟ್‌ಗೆ ಭೇಟಿ ನೀಡಿದಾಗ ರವಿತಪಸ್ವಿ ಸಾಹಿತ್ಯ, ಪ್ರಭು ನೃತ್ಯ ಸಂಯೋಜನೆಯಲ್ಲಿ ಲೂಸ್‌ಮಾದ ಯೋಗಿ ಹಾಗೂ ರಣಧೀರ್ ನೃತ್ಯಕಲಾವಿದರೊಂದಿಗೆ ’ತಳ ತಳ, ಎಲ್ಲಾ ಕಡೆ ನಿನ್ನ ಹಾಡೇ, ತುಂಬೋಗಿರೆ ನಾಡು ನಾಡೇ, ಏನಿಟ್ಟರೇ ನಿನ್ನ ಕಡೆ, ನಿತ್ಯಾ ಜನ ನಿನ್ನಾ ಎಡೆ’ ಸಾಲಿನ ಗೀತೆಗೆ ಮಾರುತಿ ಎದುರು ಹೆಜ್ಜೆ ಹಾಕುತ್ತಿದ್ದರು. ಬಿಡುವು ಮಾಡಿಕೊಂಡು ತಂಡವು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿತು.
ನಿರ್ದೇಶಕರು ಮಾತನಾಡಿ ನಾನು ಮೂಲತ: ಫೋಟೋಗ್ರಾಫರ್. ಒಂದು ಸಂದರ್ಭದಲ್ಲಿ ಕಿರುಚಿತ್ರಕ್ಕೆ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿ ಸೈಕಲ್ ಹೊಡೆದುದರಿಂದ ಅವಮಾನವಾಯಿತು. ಇದನ್ನೆ ಛಾಲೆಂಜ್ ಆಗಿ ತೆಗೆದುಕೊಂಡಿದ್ದರಿಂದಲೇ ಮುಂದೆ ’ಪುದಿಯವರುಗಳ್’ ತಮಿಳು ಚಿತ್ರಕ್ಕೆ ನಾಯಕನಾಗಿ ಅವಕಾಶ ಒದಗಿಬಂತು. ನಂತರ ಕನ್ನಡದಲ್ಲಿ ಮೂರು ಚಿತ್ರಗಳಲ್ಲಿ ಅಭಿನಯಸಿದೆ. ಇದರ ಅನುಭವದಿಂದಲೇ ಈ ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಯೋಗಿ ಸರ್ ಅವರನ್ನು ಕೇಳಿಕೊಂಡಾಗ ಸಂತೋಷದಿಂದ ಒಪ್ಪಿಕೊಂಡಿದ್ದು ಅಲ್ಲದೆ, ತುಂಬಾ ಸಹಕಾರ ನೀಡುತ್ತಿದ್ದಾರೆ. ವಿರಾಮದ ತರುವಾಯ ಹೀರೋ ಪರಿಚಯದ ಗೀತೆಯಲ್ಲಿ ಇವರು ಕಾಣಿಸಿಕೊಳ್ಳುವರು. ಇನ್ನಿಬ್ಬರು ಹೀರೋಗಳು ಬರುವರಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ತಿಳಿಸಲಾಗುವುದು. ಇದು ಮುಗಿದರೆ ಕುಂಬಳಕಾಯಿ ಒಡೆಯಲಾಗುವುದು.
ಹದಿನೈದು ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದಂತ ಸತ್ಯ ಘಟನೆಯನ್ನು ಚಿತ್ರರೂಪಕ್ಕೆ ತರಲಾಗಿದೆ. ಇಬ್ಬರು ನಾಯಕರುಗಳ ನಡುವೆ ಕಾಣೆಯಾದ ಹುಡುಗಿಯ ಸುತ್ತ ಚಿತ್ರವು ಸಾಗುತ್ತದೆ. ಸೆಸ್ಪೆನ್ಸ್ ಹಾಗೂ ಪ್ರೀತಿಯನ್ನು ಒಳಗೊಂಡ ಕುಟುಂಬ ಸಮೇತ ನೋಡಬಹುದಾದ ದೃಶ್ಯಗಳು ಇರಲಿದೆ. ಕಾಣೆಯಾದವಳು ಯಾರಿಗೆ ಒಲಿಯುತ್ತಾಳೆ? ಎನ್ನುವ ನಿಗೂಢ ಅಂಶಗಳು ಇರಲಿದೆ. ಬೆಂಗಳೂರು, ಮಾಲೂರು, ಕೋಲಾರ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ ಕಡೆಗಳಲ್ಲಿ 56 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಮಂಡ್ಯ ಮೂಲದ ರಿತನ್ಯಶೆಟ್ಟಿ ನಾಯಕಿ. ಜೀವನ್ ಉಪನಾಯಕ. ಉಳಿದಂತೆ ಗಿರಿಜಾಲೋಕೇಶ್, ಶೋಭರಾಜ್, ಬಿರಾದಾರ್, ಕಿಲ್ಲರ್‌ವೆಂಕಟೇಶ್, ಗಿರೀಶ್‌ಜತ್ತಿ, ಮಂಜುಳಾನಾಯ್ಡು, ಚಂದ್ರಪ್ರಭ ಮುಂತಾದವರು ನಟಿಸಿದ್ದಾರೆ. ನಮ್ಮ ಕೆಲಸ ಮುಗಿದಿದೆ. ಮಾಧ್ಯಮದವರ ಸಹಕಾರ ಬೇಕೆಂದು ಕೋರಿದರು.
ಹಾಡಿನಲ್ಲಿ ಮಾತ್ರ ಬರುತ್ತೇನೆ. ನಿರ್ದೇಶಕರು ಬಂದು ಸನ್ನಿವೇಶ ತಿಳಿಸಿದರು. ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬರಿಗೊಬ್ಬರು ಆಗಬೇಕು. ಆಗ ತಾನೆ ಉದ್ಯಮ ಬೆಳೆಯುತ್ತದೆ. ನಮಗೂ ಇನ್ನೋಬ್ಬರ ಸಪೋರ್ಟ್ ಅಗತ್ಯ ಇರುತ್ತದೆ. ಇದು ಒಳ್ಳೆಯ ಬೆಳವಣಿಗೆ ಎನ್ನಬಹುದು. ಗೆಳೆಯ ಪ್ರಭು, ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ಪರಿಚಯ. ಅವರ ಸಲುವಾಗಿ ಬಂದಿರುವೆ. ನನ್ನ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದರಿಂದ ಅದೇ ತರಹದ ಸ್ಟೆಪ್ಸ್ ಹಾಕಿಸುತ್ತಾರೆ. ’ಸಿದ್ಲಿಂಗು-2’ಗೆ ಅಣಿಯಾಗುತ್ತಿದ್ದೇನೆ. ಗ್ಯಾಪ್‌ನಲ್ಲಿ ಇದನ್ನು ಮುಗಿಸಿಕೊಡುತ್ತಿರುವೆ ಎಂದು ಲೂಸ್ ಮಾದಯೋಗಿ ಹೇಳಿದರು.
ಹದಿನೈದು ವರ್ಷಗಳ ನಂತರ ಯೋಗಿ ಅವರೊಂದಿಗೆ ನಟಿಸುತ್ತಿರುವ ಪುಂಗ ಖಳನ ಪಾತ್ರ ನಿಭಾಯಿಸುತ್ತಿರುವೆ ಎಂದರು. ರಣಧೀರ್ ಅವರೊಂದಿಗಿನ ಸ್ನೇಹಕ್ಕಾಗಿ ಬಂಡವಾಳ ಹೂಡುತ್ತಿದ್ದೇನೆ ಅಂತಾರೆ ನೇತ್ರಾವತಿ ಮಲ್ಲೇಶ್. ಒಟ್ಟು ನಾಲ್ಕು ಗೀತೆಗಳ ಪೈಕಿ ಎರಡು ಹಾಡು ಬರೆದು ಸಂಗೀತ ಒದಗಿಸಿರುವುದು ಸುಧನ್‌ಪ್ರಕಾಶ್. ಛಾಯಾಗ್ರಹಣ ಮಧು-ಶರತ್, ಸಾಹಸ ಥ್ರಿಲ್ಲರ್‌ಮಂಜು, ಸಂಕಲನ ನಿಶಿತ್‌ಪೂಜಾರಿ ಅವರದಾಗಿದೆ. ಶ್ರೀ ಚಾಮುಂಡೇಶ್ವರಿ ಮೂವಿ ಮೇಕರ‍್ಸ್ ಅಡಿಯಲ್ಲಿ ವಿಜಯ್‌ಬಳ್ಳಾರಿ ಪಾಲುದಾರರಾಗಿದ್ದಾರೆ. ಇವರೊಂದಿಗೆ ಮಧುಸುದನ್, ಲೀಲಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

Address


Website

Alerts

Be the first to know and let us send you an email when Bellitere Film posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share