ENews Udupi

ENews Udupi Contact information, map and directions, contact form, opening hours, services, ratings, photos, videos and announcements from ENews Udupi, Media/News Company, .

ನಿಂತಿದ್ದ ಲಾರಿಗೆ ಕಾರು ಢಿಕ್ಕಿ : ಕಾರು ಚಾಲಕ ಮೃತ್ಯುಕಾಪು : ಕಾಪುವಿನ ಪಾಂಗಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಳಾಗಿ ನಿಂತಿದ್ದ ಲಾರಿಗೆ ಕಾರೊಂ...
29/02/2024

ನಿಂತಿದ್ದ ಲಾರಿಗೆ ಕಾರು ಢಿಕ್ಕಿ : ಕಾರು ಚಾಲಕ ಮೃತ್ಯು

ಕಾಪು : ಕಾಪುವಿನ ಪಾಂಗಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಳಾಗಿ ನಿಂತಿದ್ದ ಲಾರಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಕಾರು ಚಾಲಕ ನಾಗೇಶ್ (70) ಮೃತ ದುರ್ದೈವಿ.

ಕಾಪುವಿನ ಮೆಸ್ಕಾಂಗೆ ಗುತ್ತಿಗೆ ಆಧಾರಿತ ಕಾರನ್ನು ಚಲಾಯಿಸುತ್ತಿದ್ದ ಇವರು, ಸಂಜೆ ಪಾಂಗಾಳದಿಂದ ಕಾಪು ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಸ್ಥಳಕ್ಕೆ ಕಾಪು ಎಸೈ ಅಬ್ದುಲ್ ಖಾದರ್, ಕ್ರೈಂ ಎಸೈ ಪುರುಷೋತ್ತಮ್ ಹಾಗೂ ಪೋಲಿಸರು, ಹೆದ್ದಾರಿ ಗಸ್ತು ಪಡೆ ಆಗಮಿಸಿದ್ದು, ಕಾರು ಹಾಗು ಲಾರಿಯನ್ನು ತೆರವುಗೊಳಿಸಿದ್ದಾರೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14/02/2024

ಅಶ್ವಥ ಎಲೆಯಲ್ಲಿ ಮೂಡಿ‌ ಬಂದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ

ಉಡುಪಿ : ಕರ್ನಾಟಕ ಸರಕಾರವು ಈಬಾರಿ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದೆ.ಈ ಹಿನ್ನೆಲೆಯಲ್ಲಿ ಅರಳಿ ಮರದಎಲೆ (ಅಶ್ವಥ ಎಲೆಯಲ್ಲಿ) ಕಾಯಕವೇ ಕೈಲಾಸ ಎಂದ ವಚನ ಗುರು ವಿಶ್ವಗುರು ಬಸವಣ್ಣನವರ ರೇಖಾಚಿತ್ರವನ್ನು ಗಣೇಶ ರಾಜ್ ಸರಳೇಬೆಟ್ಟು ತಮ್ಮ ಕೈಚಳಕದಲ್ಲಿ ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಅಶ್ವಥ ಎಲೆಯು ಸುಮಾರು 11"ಇಂಚು ಎತ್ತರ 7"50ಇಂಚು ಅಗಲ ಹೊಂದಿದ್ದು ,ಬಾರ್ಕೂರಿನ ಬೆಣ್ಣೆ ಕುದುರು ಕುಲ ಮಾಸ್ತಿ ಅಮ್ಮನವರ ದೇವಾಲಯದ ಆವರಣದಲ್ಲಿ ಇರುವ ಅರಳಿ ಮರದ ದೊಡ್ಡಗಾತ್ರದ ಎಲೆಯನ್ನು ಆಯ್ಕೆ ಮಾಡಿಬಳಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

01/02/2024

ಕಿದಿಯೂ‌ರ್ ನಾಗಮಂಡಲದಲ್ಲಿ 108 ವೈಣಿಕರ ವೀಣಾವಾದನಕ್ಕೆ ಜನತೆ ಮಂತ್ರಮುಗ್ದ!

ಕಿದಿಯೂ‌ರ್ ಹೊಟೇಲ್‌ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ನಡೆದ ನಾಗಮಂಡಲೋತ್ಸವ ಸಂದರ್ಭದಲ್ಲಿ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ವಿಶೇಷವಾಗಿ ವಿ। ಪವನಾ ಬಿ. ಆಚಾರ್ ಮಣಿಪಾಲ ಅವರ ನಿರ್ದೇಶನದಲ್ಲಿ ಏಕಕಾಲದಲ್ಲಿ 108 ವೀಣೆಗಳ
ವಾದನ ಸಂಪನ್ನಗೊಂಡಿತು. ಹಳದಿ ಮತ್ತು ಕೆಂಪು ಬಣ್ಣದ ಸೀರೆಯ ಸಮವಸ್ತ್ರಧಾರಿ 108 ವೈಣಿಕರು ವೀಣಾ ವಾದನದಿಂದ ಸ್ತೋತ್ರಗಳನ್ನು ಮಂತ್ರಮುಗ್ಧಗೊಳಿಸಿದರು. ಕಛೇರಿಯಲ್ಲಿ ರಿದಂ ಪ್ಯಾಡ್, ತಾಳ, ತಂಬೂರಿ ವಾದಕರು ಸಾಥ್ ನೀಡಿದ್ದರು. ನಾಗದೇವರ 108 ಸ್ತೋತ್ರಗಳು, ನವನಾಗ ಸ್ತುತಿ ಸೇರಿದಂತೆ ನಾಗದೇವರ ವಿವಿಧ ನಾಮಾವಳಿಗಳನ್ನು ವಿಶೇಷವಾಗಿ ಪ್ರಸ್ತುತಪಡಿಸಿ ನೆರೆದವರನ್ನು ರಂಜಿಸಿದರು.

Festival Performance B. Achar Music Chants Event Traditions Ceremony

31/01/2024

ಅಷ್ಟಪವಿತ್ರ ನಾಗಮಂಡಲೋತ್ಸವ : ಕ್ಷೀರ, ನಾರಿಕೇಳ ಅಭಿಷೇಕ

ಉಡುಪಿಯ ಕಿದಿಯೂರು ಹೊಟೇಲ್ಸ್‌ನ ಕಾರಣಿಕ ಶ್ರೀ ನಾಗ ಸನ್ನಿಧಿಯಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ ಶ್ರೀ ನಾಗಸನ್ನಿಧಿಯಲ್ಲಿ ಸರ್ಪ ಸೂಕ್ತ ಹವನ, ತತ್ವ ಕಲಶಾರಾಧನೆ, ತತ್ವ ಹೋಮ, ಶ್ರೀ ನಾಗದೇವರಿಗೆ ಹಾಲು ಹಾಗೂ ಸೀಯಾಳಗಳಿಂದ ವಿಶೇಷ ಕ್ಷೀರ, ನಾರಿಕೇಳ ಅಭಿಷೇಕ, ತತ್ವ ಕಲಶಾಭಿಷೇಕ, ಮಹಾಪೂಜೆ ನಡೆಯಿತು.

ಬಳಿಕ ಬ್ರಹ್ಮ‌ಕಲಶ ಮಂಡಲ ಲೇಖನ, ಅಷ್ಟೋತ್ತರ ಶತಕಲಶ ಸಹಿತ ಬ್ರಹ್ಮಕುಂಭ ಸ್ಥಾಪನೆ, ವಾಸ್ತುಹೋಮ, ರಾಕ್ಷೋಘ್ನ ಹವನ, ದಿಕ್ಫಾಲಕ ಬಲಿ ನಡೆಯಿತು.ಈ ಸಂದರ್ಭ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ತುಲಾಭಾರ ಸೇವೆ ಜರಗಿತು.

Nagamandala Utsava Narikela Abhisheka Hotels Jayaram Achar Ritual Sookta Havan Kalasha Aradhane Homa Ksheera Narikela Abhisheka Kalasha Mandalalekhana Shataka Kalasha Kumbha Sthapana Homa Havan Balinadana Matha Vidyadheesha Teertha Swamiji Seva

30/01/2024

ಕಿದಿಯೂರು ನಾಗಮಂಡಲ ಪ್ರಯುಕ್ತ ಉತ್ತರ ಭಾರತ ಮಾದರಿಯ ಗಂಗಾರತಿ

ಉಡುಪಿಯ ಕಿದಿಯೂರು ನಾಗಮಂಡಲ ಉತ್ಸವ ಹಿನ್ನೆಲೆಯಲ್ಲಿ ಪವಿತ್ರ ಗಂಗಾರತಿ ನೆರವೇರಿತು. ಕಿದಿಯೂರು ನಾಗನ ಗುಡಿ ಸಮ್ಮುಖದಲ್ಲಿ ವಾರಣಾಸಿಯಿಂದ ಬಂದ ಅರ್ಚಕರು ಶಾಸ್ತ್ರೋತ್ರವಾಗಿ ಆರತಿಯನ್ನು ಬೆಳಗಿದರು. ಆರಂಭದಲ್ಲಿ ನಾಗದೇವರಿಗೆ ವಿಶೇಷ ಧೂಪಸೇವೆ ನಡೆಸಿ, ಆನಂತರ ಗಂಗೆಯ ತಟದಲ್ಲಿ ನಡೆಯುವ ಮಾದರಿಯ ಆರತಿಯನ್ನು ನಾಗದೇವರ ಸನ್ನಿಧಾನದ ಮುಂಭಾಗದಲ್ಲಿ ಬೆಳಗಲಾಯ್ತು.

ನಾಗನ ಗುಡಿ ಸಮೀಪದಲ್ಲಿ ವಿಶೇಷವಾಗಿ ರಚಿಸಲಾದ ವಿವಿಧ ವೇದಿಕೆಗಳಲ್ಲಿ ವಾರಾಣಾಸಿಯಿಂದ ಆಗಮಿಸಿರುವ ಅರ್ಚಕ ವೃಂದದವರು ಆರತಿ ಬೆಳಗಲು ವ್ಯವಸ್ಥೆ ಮಾಡಲಾಗಿತ್ತು. ಆಕರ್ಷಕ. ಸಾಮೂಹಿಕ ಗಂಗಾರತಿಯನ್ನು ಸಾವಿರಾರು ಜನ ಕಣ್ತುಂಬಿಕೊಂಡರು. ಜನವರಿ 26 ಕ್ಕೆ ವಿದ್ವಾಂಸ ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಭುವನೇಂದ್ರ ಕಿದಿಯೂರು ಕುಟುಂಬ ಸಂಪೂರ್ಣ ಸೇವೆ ಮಾಡಿಸುತ್ತಿದೆ. ಸ್ವಾಗತ ಸಮಿತಿ, ಸಾರ್ವಜನಿಕರ ಸಹಕಾರದಿಂದ ಜನವರಿ 31 ರಂದು ಅಷ್ಟಪವಿತ್ರ ನಾಗಮಂಡಲ ನೆರವೇರಲಿದೆ. ಸಾರ್ವಜನಿಕ ಅನ್ನಪ್ರಸಾದ ಸಂತರ್ಪಣೆ ನಡೆಯಲಿದೆ.


Arathi Festival Rituals Kidiyooru Celebration

30/01/2024

ನೀರಿನ ಟ್ಯಾಂಕ್‌ಗೆ ಬಿದ್ದ ಚಿರತೆ ರಕ್ಷಣೆ ಮಾಡಿದ ಅರಣ್ಯ ಇಲಾಖೆ

ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ನೀರಿನ ಟ್ಯಾಂಕ್‌ಗೆ ಬಿದ್ದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಚಂದಣದಲ್ಲಿ ಸಂಭವಿಸಿದೆ.
ರಾತ್ರಿ ಹೊತ್ತು ಈ ಚಿರತೆ ಆಹಾರ ಹುಡುಕುತ್ತಾ ಬಂದು, ನೀರಿನ ಟ್ಯಾಂಕ್‌ಗೆ ಬಿದ್ದಿದೆ. ಚಿರತೆ ಕಂಡು ಗ್ರಾಮಸ್ಥರು ಗಾಬರಿಗೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಊರವರು ಚಿರತೆ ನೋಡಲು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.
ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಹಿಡಿದಿದ್ದಾರೆ. ಸೆರೆಹಿಡಿದ ಚಿರತೆಯನ್ನು ಸ್ಥಳೀಯ ಅರಣ್ಯಕ್ಕೆ ರವಾನೆ ಮಾಡಲಾಯಿತು. ಬೈಂದೂರು ಅರಣ್ಯ ಇಲಾಖೆ ಉಪ ವಲಯ ಅಣ್ಯಾಧಿಕಾರಿ ಸಿದ್ದೇಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಚಿರತೆ‌ಯನ್ನು ಹಿಡಿದು ಕಾಡಿಗೆ ಬಿಟ್ಟ ಬಳಿಕ ಸ್ಥಳೀಯರು ನಿಟ್ಟುಸಿರು ಬಿಡುವಂತಾಯಿತು.

Rescue Tank Incident Department District

30/01/2024

ಗ್ಯಾಸ್ ಟ್ಯಾಂಕರ್ ಅಪಘಾತ - ತಪ್ಪಿದ ಭಾರೀ ಅನಾಹುತ

ಗ್ಯಾಸ್ ತುಂಬಿದ್ದ ಟ್ಯಾಂಕರೊಂದು ಅಪಘಾತಕ್ಕೀಡಾಗಿರುವ ಘಟನೆ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಸಂಭವಿಸಿದೆ.

ಮಂಗಳೂರಿನಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಗ್ಯಾಸ್ ತುಂಬಿದ್ದ ಬುಲೆಟ್ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ ಎದುರಿನಲ್ಲಿದ್ದ ರಾ.ಹೆ. ಸ್ವಚ್ಛಗೊಳಿಸುವ ವಾಹನಕ್ಕೆ ಡಿಕ್ಕಿ ಹೊಡೆಯಿತು. ಬಳಿಕ ಡಿವೈಡರ್ ದಾಟಿ ಚರಂಡಿ ಏರಿ ನಿಂತಿದೆ. ಪಕ್ಕದ ಹೊಂಡಕ್ಕೆ ಉರುಳಿದರೆ ಭಾರೀ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಕೂದಲೆಳೆಯಲ್ಲಿ ಅನಾಹುತ ತಪ್ಪಿದೆ.

ಇದರಿಂದ ಟ್ಯಾಂಕರ್ ಚಾಲಕನ ಎರಡೂ ಕಾಲುಗಳು ತುಂಡಾಗಿವೆ. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

's Error Investigation to Kundapura Highway 66

23/01/2024

ಅಯೋಧ್ಯೆಯ ಬಾಲರಾಮನ ಸುಪ್ರಭಾತ ದರ್ಶನ

Darshan Mandir Rama Customs Place ENewsUdupi

20/01/2024

ಪುತ್ತಿಗೆ ಶ್ರೀಗಳ ಕುರಿತ 'ಸಪ್ತಸಾಗರದಾಚೆ' ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ

ಪರ್ಯಾಯ ಪುತ್ತಿಗೆ ಮಠ ಮತ್ತು ಕೊಡವೂರಿನ ಉಡುಪ ರತ್ನ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ ಛಾಯಾಚಿತ್ರ ಪ್ರದರ್ಶನ 'ಸಪ್ತ ಸಾಗರದಾಚೆ' ಪ್ರದರ್ಶನವನ್ನು ಜಪಾನಿನ ರಿಸ್ಸೋ ಕೊಸೈ ಕೋಯ್ ಸಂಸ್ಥೆಯ ನಿಯೋಜಿತ ಅಧ್ಯಕ್ಷೆ ರೆ.ಕೋಶೋ ನಿವಾನೋ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಉದ್ಘಾಟಿಸಿದರು.

ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ತಮ್ಮ ಅಮೆರಿಕ ಪ್ರವಾಸದಲ್ಲಿ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಕುರಿತು ನಿರ್ಮಿಸಿದ ಛಾಯಾ ಚಿತ್ರಗಳನ್ನು ಇಲ್ಲಿ ಪ್ರಸ್ತುತಪಡಸಲಾಗಿದೆ. ಫಿನಿಕ್ಸ್ ವೆಂಕಟ ಕೃಷ್ಣ ದೇವಸ್ಥಾನದಲ್ಲಿ ಯತಿಗಳ ನಿತ್ಯ ಪೂಜೆಯನ್ನು ಇಲ್ಲಿ ಛಾಯಾಚಿತ್ರಗಳ ಮೂಲಕ ಸೆರೆ ಹಿಡಿಯಲಾಗಿದ್ದು ಒಟ್ಟು 36 ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಸಾರ್ವಜನಿಕರು ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ.

Exhibition Matha Event Kosei Koyu Institute Venkat Krishna Devasthan 's Daily Worship 's Photographs Viewing

17/01/2024

ಜ 23 ರಿಂದ ರಾಮದೇವರ ಮಂಡಲೋತ್ಸವ : ಉಡುಪಿಯಿಂದ ಅಯೋಧ್ಯೆಯತ್ತ ರಜತ ಕಲಶಗಳು

Jubilee Abhisheka
Swamiji Tirtha Swamiji Rama Temple

15/01/2024

ಮಕರ ಸಂಕ್ರಾಂತಿ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಮೂರು ರಥಗಳ ಉತ್ಸವ

ಮಕರ ಸಂಕ್ರಾಂತಿ ಸಂಭ್ರಮ. ಈ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಮೂರು ತೇರುಗಳ ಉತ್ಸವ ನಡೆಯಿತು.ಮೊದಲು ರಥಬೀದಿಯಲ್ಲಿ ಬ್ರಹ್ಮರಥದಲ್ಲಿ ಕೃಷ್ಣನ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಸಣ್ಣರಥದಲ್ಲಿ ಮುಖ್ಯಪ್ರಾಣ ದೇವರು, ಗರುಡ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ದೇವರ ಮೂರ್ತಿಗಳನ್ನಿಟ್ಟು ಮಠಾಧೀಶರ ಸಹಿತ ಭಕ್ತರು ತೇರನ್ನು ಎಳೆದರು. ರಥೋತ್ಸವದ ವಿಶೇಷ ಆಕರ್ಷಣೆಯಾಗಿ ಸುಡುಮದ್ದು ಪ್ರದರ್ಶನ ನಡೆದಿದ್ದು ಭಕ್ತರು ರೋಮಾಂಚನಗೊಂಡರು.

Sankranti Krishna Matha Utsava Bheedi

12/01/2024

ಕುತ್ಪಾಡಿ ಕಾನಂಗಿ ಶ್ರೀಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದಲ್ಲಿ ರಾಮ ಮಂತ್ರ ಜಪ ಹಾಗೂ ಶ್ರೀ ರಾಮ ತಾರಕ ಹೋಮ

ಮರ್ಯಾದಾ ಪುರುಷೋತ್ತಮ ಅಯೋಧ್ಯಾ ಶ್ರೀ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಇಡೀ ದೇಶದಲ್ಲಿ ಉತ್ಸವ ನಡೆಯುತ್ತಿದೆ. ಗ್ರಾಮ ಗ್ರಾಮದ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ಶುರುವಾಗಿವೆ.
ಕುತ್ಪಾಡಿ ಕಾನಂಗಿ ಶ್ರೀಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮ ಮಂತ್ರ ಜಪ ಹಾಗೂ ಶ್ರೀ ರಾಮ ತಾರಕ ಹೋಮ ಶುರುವಾಗಿದೆ.
ಪ್ರತಿದಿನ ಶ್ರೀ ರಾಮ ನಾಮ ಸಂಕೀರ್ತನೆಯ ಭಜನಾ ಕಾರ್ಯಕ್ರಮ ಜರುಗಲಿದೆ. ಪ್ರತಿದಿನ ಕುಣಿತ ಭಜನೆ ಹಾಗೂ ದೀಪೋತ್ಸವ ಜರಗಲಿದೆ. ಕಾನಂಗಿ ದೇವಸ್ಥಾನ ಕುತ್ಪಾಡಿ 11 ದಿನಗಳ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದು, ಕುತ್ಪಾಡಿ ವಿದ್ವಾನ್ ಬಾಲಕೃಷ್ಣ ಭಟ್ ಹೋಮದ ನೇತೃತ್ವ ವಹಿಸಿದ್ದಾರೆ.

Sri Brahma Vishnu Maheshwara Devalaya Mantra Japa Rama Taraka Homa Sri Rama Mandir Inauguration. Process Kund Ceremony

12/01/2024

ಪರ್ಯಾಯ ಆರಂಭ : ಸರಕಾರದ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ.

ನಾಡ ಹಬ್ಬ ಪರ್ಯಾಯ ಮಹೋತ್ಸವಕ್ಕೆ ಉಡುಪಿಯ ಶ್ರೀ ಕೃಷ್ಣಮಠ, ರಥ ಬೀದಿ ಮತ್ತು ಉಡುಪಿ ನಗರ ಸಿದ್ಧಗೊಳ್ಳುತ್ತಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ ಮೈಸೂರು ದಸರಾ ಬಳಿಕ ಅತಿ ದೊಡ್ಡ ನಾಡಹಬ್ಬವೂ ಹೌದು. ಸಾಮಾನ್ಯವಾಗಿ ಸರಕಾರ ಪರ್ಯಾಯ ಮಹೋತ್ಸವಕ್ಕೆ ಅನುದಾನ ಬಿಡುಗಡೆ ಮಾಡುತ್ತದೆ. ನಗರದ ರಸ್ತೆ ರಿಪೇರಿ ಮತ್ತು ಮೂಲಭೂತ ಸೌಕರ್ಯಗಳಿಗಾಗಿ ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ.ಆದರೆ ಈ ಬಾರಿ ಸರಕಾರ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ನಗರಸಭೆಯ ಅನುದಾನದಲ್ಲೇ ನಗರದ ರಸ್ತೆ ರಿಪೇರಿ ಮತ್ತು ಮೂಲಭೂತ ಸೌಕರ್ಯಗಳನ್ನು ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಮಾಜಿ ಶಾಸಕ ರಘುಪತಿ ಭಟ್ ,ಉಡುಪಿ ಶಾಸಕರು ಮತ್ತು ಉಸ್ತುವಾರಿ ಸಚಿವರು ಸರಕಾರಕ್ಕೆ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಆದರೆ ಈತನಕ ಅನುದಾನ ಬಿಡುಗಡೆ ಆಗಿಲ್ಲ‌. ನಾವು ನಿರೀಕ್ಷೆಯಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.

Counting for the Festival Sri Krishna Matha Beedi City Funding Grant Repair Amenities Municipal Council MLA Raghupati Bhat Legislators Development Secretary

12/01/2024

ಪುತ್ತಿಗೆ ಪರ್ಯಾಯಕ್ಕೆ ಹೊರೆ ಕಾಣಿಕೆಗಳ ಮಹಾಪೂರ

Offering

11/01/2024

ಪರ್ಯಾಯ ಮಹೋತ್ಸವಕ್ಕೆ ಸಜ್ಜುಗೊಳ್ಳುತ್ತಿದೆ ಕೃಷ್ಣನಗರಿ

ಉಡುಪಿಯಲ್ಲಿ ಪುತ್ತಿಗೆ ಮಠದ ಪರ್ಯಾಯಕ್ಕೆ ತಯಾರಿಗಳು ಜೋರಾಗಿವೆ. ನಾಡ ಹಬ್ಬಕ್ಕೆ ಇಡೀ ನಗರವೇ ಶೃಂಗಾರಗೊಂಡಿದೆ. ಎಲ್ಲಿ ನೋಡಿದರೂ ಬಂಟಿಂಗ್ಸ್ ಬ್ಯಾನರ್‌ಗಳು, ಸ್ವಾಗತ ಗೋಪುರಗಳು ರಾರಾಜಿಸುತ್ತಿವೆ. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಪುರಪ್ರವೇಶ ಅದ್ಧೂರಿಯಾಗಿ ನಡೆದಿದ್ದು ಜನವರಿ 17 ಮತ್ತು 18 ರಂದು ಪರ್ಯಾಯ ಮಹೋತ್ಸವ ನಡೆಯಲಿದೆ.

Mahotsav Nagari M***a
Sugunendra Teertha Swamiji Celebrations Festival Utsava Krishna Pooja Events

11/01/2024

ಮಣಿಪಾಲದ ಮನೋಹರ್ ಅವರ ಟೆಲಿಸ್ಕೋಪ್ ಅಯೋಧ್ಯೆ ಭದ್ರತೆಗೆ ಬಳಕೆ

Technology Scientist
Mandir Manufacturing Institute of Technology Security Technology
Usage &D in Telescope Manufacturing
and Manipal College -Cost Telescopes

10/01/2024

ಕತಾರ್‌, ತೆಲಂಗಾಣ‌ನಲ್ಲಿ ಹಾರಲಿದೆ ಕುಡ್ಲದ ಕಥಕ್ಕಳಿ ಗಾಳಿಪಟ - ಅಯೋಧ್ಯೆಯಲ್ಲೂ ಅವಕಾಶ

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಹಾರಾಟದಲ್ಲಿ ಖ್ಯಾತಿ ಹೊಂದಿರುವ 'ಟೀಂ ಮಂಗಳೂರು' ಇದೀಗ ತೆಲಂಗಾಣ, ಕತಾರ್‌ನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಟೀಂ ಮಂಗಳೂರು ತಂಡದ ಬೃಹತ್ ಗಾತ್ರದ ಕಥಕ್ಕಳಿ ಗಾಳಿಪಟ ಹಾರಾಡಲಿದೆ.

ಹೌದು... ಟೀಂ ಮಂಗಳೂರು ತಂಡದ ಸರ್ವೇಶ್ ರಾವ್‌ರವರ ನೇತೃತ್ವದಲ್ಲಿ ಈ ಕಥಕ್ಕಳಿ ಗಾಳಿಪಟ ಬಾನಂಗಳದಲ್ಲಿ ಹಾರಾಡಲಿದೆ. ತೆಲಂಗಾಣದಲ್ಲಿ ಜನವರಿ 13-14ರಂದು ನಡೆಯುವ ಗಾಳಿಪಟ ಉತ್ಸವದಲ್ಲಿ ರಾಜ್ಯದ ಪರವಾಗಿ ಮಂಗಳೂರಿನ ಕಥಕ್ಕಳಿ ಗಾಳಿಪಟ ಹಾರಲಿದೆ. 12ಅಡಿ ಅಗಲ ಹಾಗೂ 38 ಅಡಿ ಉದ್ದವಿರುವ ಈ ಕಥಕ್ಕಳಿ ಗಾಳಿಪಟಕ್ಕೆ ಅಗತ್ಯವಿರುವ ರಿಪ್ ಸ್ಟಾಕ್ ನೈಲಾನ್ ಫ್ಯಾಬ್ರಿಕ್ ಮೆಟಿರಿಯಲ್ ಅನ್ನು ಇಂಗ್ಲೆಂಡ್ ನಿಂದ ತರಿಸಲಾಗಿದೆ. ಇದು ಪ್ಯಾರಚೂಟ್ ತಯಾರಿಯಲ್ಲಿ ಬಳಕೆಯಾಗುವ ಬಟ್ಟೆಯಾಗಿದೆ. ಗಾಳಿಪಟಕ್ಕೆ ಅಗ್ಯವಿರುವ ಬಿದಿರನ್ನು ಗೋವಾ ರತ್ನಗಿರಿಯ ವೆನ್ ರೂಲಾದಿಂದ ತರಿಸಲಾಗಿದೆ‌.

ಕಲಾವಿದ, ಪರಿಸರವಾದಿ ದಿನೇಶ್ ಹೊಳ್ಳ ಅವರು ಕಥಕ್ಕಳಿ ಗಾಳಿಪಟಕ್ಕೆ ಅಗತ್ಯವಿರುವ ನಕಾಶೆ ರಚಿಸಿ, ಕಲರ್ ಕಾಂಬಿನೇಷನ್ ಅನ್ನು ಆಯ್ಕೆ ಮಾಡಿದ್ದಾರೆ. ಸರ್ವೇಶ್ ರಾವ್ ರವರ ನಿರ್ದೇಶನದಲ್ಲಿ ತಂಡವು ಈ ಗಾಳಿಪಟ ರಚಿಸಿದೆ. ತೆಲಂಗಾಣದ ಬಳಿಕ ಈ ಗಾಳಿಪಟ ಜನವರಿ 24 - ಫೆಬ್ರವರಿ 4ರವರೆಗೆ ಕತಾರ್ ನಲ್ಲಿ ಈ ಗಾಳಿಪಟ ಹಾರಲಿದೆ. ಜೊತೆಗೆ ಅಯೋಧ್ಯೆಯಲ್ಲಿಯೂ ಗಾಳಿಪಟ ಹಾರಾಟಕ್ಕೆ ಅವಕಾಶ ದೊರೆಯುವ ಸಾಧ್ಯತೆಯೂ ಇದೆಯಂತೆ.

ಟೀಂ ಮಂಗಳೂರು ತಂಡ ಸುಮಾರಷ್ಟು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಹಾರಾಟ ನಡೆಸಿದೆ. ಇವರಲ್ಲಿ ಕಥಕ್ಕಳಿ ಸೇರಿದಂತೆ ಯಕ್ಷಗಾನ, ಗರುಡ, ವಿಭೀಷಣ, ಬಟರ್ ಫ್ಲೈ ಮುಂತಾದ ಗಾಳಿಪಟಗಳು ಹಾರಾಟ ನಡೆಸಿದೆ. ಈವರೆಗೆ ಈ ತಂಡ ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ, ಟರ್ಕಿ, ಕಾಂಬೋಡಿಯ, ಉಕ್ರೇನ್, ಕುವೈತ್, ಥಾಯ್ಲ್ಯಾಂಡ್ ಮೊದಲಾದೆಡೆ ಸಾಂಪ್ರದಾಯಿಕ ಶೈಲಿಯ ಗಾಳಿಪಟ ಹಾರಿಸಿದೆ. ಈ ಬಾರಿ ಫೆಬ್ರವರಿ ಮಧ್ಯಭಾಗದ ಬಳಿಕ ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಟೀಂ ಮಂಗಳೂರು ತಂಡ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವನ್ನು ಆಯೋಜಿಸುವ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಡಿಸಿಯವರೂ ಸ್ಪಂದನೆ ನೀಡಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮಂಗಳೂರಿನಲ್ಲಿಯೂ ದೇಶ - ವಿದೇಶಗಳ ಗಾಳಿಪಟಗಳು ಹಾರಾಟ ನಡೆಸುವುದು ನಿಶ್ಚಿತ.

Kite Festival Flying Competitions
Mangalore
Kite Festival
Kite Festival
Kites -scale Kite Design Participation

10/01/2024

ಕೃಷ್ಣಮಠದಲ್ಲಿ ಸಪ್ತೋತ್ಸವ ಪ್ರಾರಂಭ : ಅಷ್ಟ ಮಠಾಧೀಶರು ಭಾಗಿ

Matha Celebration Festivals Culture Ceremonies Procession
Rituals Tradition Celebrations
Leaders Events

Address


Website

Alerts

Be the first to know and let us send you an email when ENews Udupi posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share