Jijñāsā

Jijñāsā jijnasa is to created spread awareness about core subjets of sanatana dharma in short time span.it will help to create thirst for knowledge in society.

*ಇಂಡೊಲೊಜಿಯ ಇತಿಹಾಸ - ಭಾಗ -3*ಕಳೆದ ಸಂಚಿಕೆಯಲ್ಲಿ ಇಂಡೊಲೊಜಿಯ ವಿಮರ್ಶೆ ಮತ್ತು ಪ್ರತಿಕ್ರಿಯೆಯ ಅನಿವಾರ್ಯತೆಯನ್ನು ತಿಳಿದೆವು. ಒಂದು ವಿಷಯವನ್ನ...
05/10/2024

*ಇಂಡೊಲೊಜಿಯ ಇತಿಹಾಸ - ಭಾಗ -3*

ಕಳೆದ ಸಂಚಿಕೆಯಲ್ಲಿ ಇಂಡೊಲೊಜಿಯ ವಿಮರ್ಶೆ ಮತ್ತು ಪ್ರತಿಕ್ರಿಯೆಯ ಅನಿವಾರ್ಯತೆಯನ್ನು ತಿಳಿದೆವು. ಒಂದು ವಿಷಯವನ್ನು ವಿಮರ್ಶಿಸಬೇಕಾದರೆ ಆ ವಿಷಯದ ಇತಿಹಾಸದ ಆಳ ಮತ್ತು ಅಗಲಗಳನ್ನು ಚೆನ್ನಾಗಿ ತಿಳಿಯಬೇಕಾಗುತ್ತದೆ. ಆ ದೃಷ್ಟಿಯಿಂದ ಇಂಡೋಲಜಿಯ ಇತಿಹಾಸವನ್ನು ತಿಳಿಯಲು ಪ್ರಯತ್ನಿಸೋಣ.

ಇಂಡೋಲಜಿಯ ಮೂಲ ಓರಿಯಂಟಲ್ ಸ್ಟಡೀಸ್ ನಿಂದ ಪ್ರಾರಂಭವಾಗುತ್ತದೆ. ಈಗಲೂ ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಗಳು ಮೈಸೂರು,ಪುಣೆ, ಬರೋಡಾ ಮುಂತಾದ ಕಡೆಗಳಲ್ಲಿ ಇರುವುದನ್ನು ಗಮನಿಸಬಹುದು. (Oriental research institute ORI ,Mysore, Bhandarkar oriental research institute BORI ,Pune )

ಓರಿಯಂಟಲ್ ಸ್ಸ್ಟಡೀಸ್ ಎಂದರೇನು, ಅದರ ಅಸ್ತಿತ್ವಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಕಾಡುವುದು ಸಹಜ .

ಪಾಶ್ಚಾತ್ಯರು ಪೂರ್ವದ ದೇಶಗಳ ಭಾಷೆಗಳ ಅಧ್ಯಯನವನ್ನು ಮಾಡಲು ಬೆಳೆಸಿದ ಅಧ್ಯಯನ ಶಾಖೆಯನ್ನು ಓರಿಯಂಟಲ್ ಸ್ಟಡೀಸ್ ಎನ್ನುತ್ತಾರೆ.

ಅದು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕ್ರಿಶ್ಚಿಯನ್ ರಿಲಿಜನ್ ನ ಸರ್ವತೋಮುಖ ಪ್ರಭಾವ ಮತ್ತು ಹಿಡಿತವಿದ್ದ ಕಾಲ. ಆಗ ಕ್ರಿಶ್ಚಿಯನ್ ರಿಲಿಜನ್ ಯುರೋಪಿಗಿಂತ ಆಚೆಗೆ ವಿಸ್ತಾರವನ್ನೂ ಪ್ರಚಾರವನ್ನೂ ಪಡೆಯಬೇಕೆಂದು ಚರ್ಚ್ ತೀರ್ಮಾನಿಸಿತು. ಇದರ ಅಂಗವಾಗಿ 12ನೇ ಶತಮಾನದಲ್ಲಿ ಚರ್ಚ್ ನ ಪೋಪ್ ಐದನೆಯ ಹೊನೋರಿಯಸ್ (Pope, Honorius IV) ಪೆಗನ್ಗಳಿಗೆ ( ಪೇಗನ್ - ಕ್ರಿಶ್ಚಿಯನ್ ಅಲ್ಲದವರು) ಕ್ರಿಶ್ಚಿಯನ್ ರಿಲಿಜಿಯನ್ನಿನ ಬೋಧನೆಗಾಗಿ ಓರಿಯಂಟಲ್ ಭಾಷೆಗಳ( ಪೂರ್ವದ ದೇಶಗಳ ಭಾಷೆಗಳು) ಅಧ್ಯಯನಕ್ಕಾಗಿ ಪ್ರೋತ್ಸಾಹವನ್ನು ನೀಡಲು ಪ್ರಾರಂಭಿಸಿದನು.

ಇದರ ಕೆಲವೇ ವರ್ಷಗಳ ನಂತರ 1312 ರಲ್ಲಿ " Ecumenical Council of the Vatican " ಈ ರೀತಿಯಾಗಿ ಒಂದು ನಿರ್ಧಾರವನ್ನು ಹೊರಡಿಸಿತು - "The Holy Church should have an abundant number of Catholics well versed in the languages, especially in those of the infidels, so as to be able to instruct them in the sacred doctrine." (" ಚರ್ಚ್ ನಲ್ಲಿ ಅನೇಕ ಭಾಷೆಗಳನ್ನು ತಿಳಿದಿರುವ ಕ್ಯಾಥೊಲಿಕರು ಬಹಳ ಸಂಖ್ಯೆಯಲ್ಲಿ ಇರಬೇಕು, ಹಾಗೆಯೇ ಪೇಗನ್ ಗಳಿಗೆ ಅವರದ್ದೇ ಭಾಷೆಯಲ್ಲಿ ಬೋಧನೆ ನೀಡಲು ಸಾಧ್ಯವಾಗಬೇಕು.")

ಇದರ ಪರಿಣಾಮವಾಗಿ ಬೋಲೋಗ್ನ, ಆಕ್ಸ್ಫರ್ಡ್, ಪ್ಯಾರಿಸ್, ಸ್ಯಾಲಮಂಕ್ ವಿಶ್ವವಿದ್ಯಾಲಯಗಳಲ್ಲಿ ಹೀಬ್ರೂ ,ಅರೆಬಿಕ್ , ಕ್ಯಾಲ್ಡಿಯನ್ ಭಾಷೆಗಳ ಅಧ್ಯಯನಪೀಠವನ್ನು ಪ್ರಾರಂಭಿಸಿದರು.

ಅದಾದ ಒಂದು ಶತಮಾನದ ನಂತರ 1434 ರಲ್ಲಿ General Council of Basel ಇದೇ ಉದ್ದೇಶದೊಂದಿಗೆ ಮತ್ತೊಂದು ನಿರ್ಣಯವನ್ನು ಪ್ರಕಟಿಸಿತು -

All Bishops must sometimes each year send men well-grounded in the divine word to those parts where Jews and other infidels live, to preach and explain the truth of the Catholic faith in such a way that the infidels who hear them may come to recognize their errors. Let them compel them to hear their preaching. ("ಎಲ್ಲಾ ಬಿಷಪ್‌ಗಳು ಪ್ರತಿ ವರ್ಷವೂ ಕ್ರಿಶ್ಚಿಯನ್ ರಿಲಿಜನ್ ನಲ್ಲಿ ಆಳವಾದ ಅಧ್ಯಯನ ಹೊಂದಿರುವ ಪಂಡಿತರನ್ನು ಯಹೂದ್ಯರು ಮತ್ತು ಇತರ ನಾಸ್ತಿಕರು ವಾಸಿಸುವ ಭಾಗಗಳಿಗೆ ಕಳುಹಿಸಬೇಕು, ಅವರು ಕ್ಯಾಥೊಲಿಕ್ ರಿಲೀಜನ್ನಿನ ಸತ್ಯವನ್ನು ಬೋಧಿಸಿ, ವಿವರಿಸಲು ಸಾಧ್ಯವಾಗಬೇಕು. ನಾಸ್ತಿಕರು ತಮ್ಮ ಬೋಧನೆ ಕೇಳುವ ಮೂಲಕ ತಮ್ಮ ತಪ್ಪುಗಳನ್ನು ಅರಿತುಕೊಳ್ಳುವಂತೆ ಮಾಡಬೇಕು)."

ಶತಮಾನಗಳ ನಂತರ 1870 ರಲ್ಲಿ ನಡೆದ ಮೊದಲನೇ ವ್ಯಾಟಿಕನ್ ಕೌನ್ಸಿಲ್ ನಲ್ಲಿ( First Vatican Council) ಹಿಂದೂಯಿಸಮ್ ಅನ್ನು ಅಧಿಕೃತವಾಗಿ ನಿಂದನೆಯ ಪಟ್ಟಿಯಲ್ಲಿ ಸೇರಿಸಿದರು ಎಂದು ಚರ್ಚ್ ನ ಅಧಿಕೃತ ಪುಸ್ತಕವಾದ The Catholic Catechism ಎಂಬ ಪುಸ್ತಕದಲ್ಲಿ ಜಾನ್ ಹರ್ಡನ್ ಎಂಬ ಪಾದರಿ ದಾಖಲಿಸಿದ್ದಾನೆ.

ಇನ್ನು ಕ್ರಿಶ್ಚಿಯನೇತರ ವಿದ್ವಾಂಸರ ಭಾರತೀಯ ಅಧ್ಯಯನ ಪರಂಪರೆಯನ್ನು ಗಮನಿಸಿದರೆ ಗ್ರೀಕ್ ನಾಗರಿಕತೆಯ ಕಾಲದಿಂದಲೂ ಕುರುಹು ಸಿಗುತ್ತವೆ. ಮೌರ್ಯರ ಆಳ್ವಿಕೆಯ ಕಾಲದಲ್ಲಿ ಗ್ರೀಕ್ ರಾಜ ಸೇಲೆಸಿಡ್ಸ ನ ಪ್ರತಿನಿಧಿ ಮೆಗೆಸ್ತೀನ್ಸ (350 -290 B.C) ನು ನಾಲ್ಕು ವಿಭಾಗಗಳಲ್ಲಿ ಭಾರತದ ಕುರಿತಾಗಿ ಇಂಡಿಕಾ ಎಂಬ ಗ್ರಂಥವನ್ನು ಬರೆದಿದ್ದನು ಎಂದು ತಿಳಿಯುತ್ತದೆ . ಅದರ ಕೆಲವು ಭಾಗಗಳು ಮಾತ್ರ ಈಗ ಉಪಲಬ್ಧ ಇದೆ. ನಂತರ ಬರುವಂತಹ ಇಸ್ಲಾಮಿಕ್ ಆಳ್ವಿಕೆಯಲ್ಲಿ ಅನೇಕರು ಭಾರತವನ್ನು ಅಧ್ಯಯನ ಮಾಡಿದರು. ಅದರಲ್ಲಿ ಪ್ರಧಾನ ಮಹಮದ್ ಬಿನ್ ಅಹಮದ್ ಅಲ್ಬಿರೋನಿ. ಅವನು ತಾರಿಕ್ ಅಲ್ ಹಿಂದ್ ಎಂಬುವ ಪುಸ್ತಕವನ್ನು ಭಾರತದ ಸಂಸ್ಕೃತಿ ವಿಜ್ಞಾನ ಕಲೆ ಸಾಹಿತ್ಯವನ್ನು ಸೆರೆಹಿಡಿಯುವ ದೃಷ್ಟಿಯಿಂದ ಬರೆದನು.

ಅನೇಕ ಯಾತ್ರಿಕರು ಭಾರತದ ಕುರಿತಾಗಿ ಬರೆದಿದ್ದಾರೆ. "ಮಾರ್ಕೋ ಪೋಲೊ ಮತ್ತು ಇತರರು ಚೀನಾಗೆ ಹೋಗುವ ಮಾರ್ಗದಲ್ಲಿ ಅಥವಾ ಹಿಂತಿರುಗುವ ಮಾರ್ಗದಲ್ಲಿ ಭಾರತವನ್ನು ನೋಡಿದರು. ಡೊಮಿನಿಕನ್ ಧರ್ಮಪ್ರಚಾರಕ ಜೋರ್ಡಾನಸ್ 14ನೇ ಶತಮಾನದ ಆರಂಭದಲ್ಲಿ ಮಲಬಾರ ಕರಾವಳಿಯಲ್ಲಿ ಅನೇಕ ವರ್ಷಗಳನ್ನು ಕಳೆದು 'ದ ವಂಡರ್ಸ್ ಆಫ್ ಇಂಡಿಯಾ' ಎಂಬ ಪುಸ್ತಕವನ್ನು ಬರೆದನು. ನಿಕೋಲೊ ಡಿ' ಕಾಂಟಿ (1395-1469) ತನ್ನ ಕಥೆಯನ್ನು ಪೋಪ್ ನ ಕಾರ್ಯದರ್ಶಿ ಪೊಜ್ಜಿಯೋ ಬ್ರಾಚಿಯೋಲಿನಿಗೆ ಹೇಳಿದನು, ಮತ್ತು ಅವರು ಅದನ್ನು ತಮ್ಮ 'ಡೆ ವರೈಟೇಟೆ ಫಾರ್ಚೂನೇ' ಯಲ್ಲಿ ಪ್ರಕಟಿಸಿದರು. ರಷ್ಯಾದ ವ್ಯಾಪಾರಿ ಅಫನಾಸಿಜ್ ನಿಕಿಟಿನ್ ಸುಮಾರು 1470ರಲ್ಲಿ ಭಾರತಕ್ಕೆ ಭೇಟಿ ನೀಡಿದ ದಾಖಲಿಸಿದ ವರದಿ 1819ರಲ್ಲಿ ಪ್ರಕಟವಾಯಿತು .

16ನೇ ಶತಮಾನದಿಂದ 18ನೇ ಶತಮಾನದ ಆರಂಭದವರೆಗೆ ಕಾಲವು , ವಸಾಹಾತುಶಾಹಿಯ ಆರಂಭ ಮತ್ತು ಭಾರತ ಮತ್ತು ಯೂರೋಪ್ ನಡುವಿನ ನೇರ ವ್ಯಾಪಾರದ ಕಾಲವಾಗಿತ್ತು. ಇದು ಕ್ರಿಶ್ಚಿಯನ್ ರಿಲಿಜನ್ ಪ್ರಚಾರಕರು ಮತ್ತು ಪ್ರವಾಸಿಗರ ಕಾಲವಾಗಿತ್ತು. ಇಬ್ಬರೂ ವರದಿಗಳನ್ನು ದಾಖಲಿಸಿದ್ದಾರೆ. ಇವೆಲ್ಲವೂ ಬಹಳಷ್ಟ ದೋಷಗಳು ಮತ್ತು ತಪ್ಪು ತೀರ್ಮಾನಗಳಿಂದ ಪೂರ್ವಗ್ರಹಗಳಿಂದ ತುಂಬಿರುತ್ತವೆ, ಆದರೆ ಅನೇಕ ಆಸಕ್ತಿದಾಯಕ ವಿವರಗಳನ್ನೂ ಹೊಂದಿರುತ್ತವೆ.

ನಾನು ಮೊದಲೇ ತಿಳಿಸಿದಂತೆ ಕ್ರಿಶ್ಚನ್ ರಿಲಿಜನ್ ನ ಪ್ರಚಾರಕ್ಕಾಗಿ ಅನೇಕ ಮಿಷನರಿಗಳು ಭಾರತಕ್ಕೆ 16ನೇ ಶತಮಾನದಿಂದ ಭೇಟಿ ನೀಡಲು ಆರಂಭಿಸಿದ್ದವು. ಅವುಗಳಲ್ಲಿ ಪ್ರಮುಖರು ಭಾರತದ ಕುರಿತಾಗಿ ಪುಸ್ತಕಗಳನ್ನು ಬರೆದಿದ್ದಾರೆ.

16ನೇ ಶತಮಾನದಿಂದ, ಭಾರತದಲ್ಲಿ ಅನೇಕ ಕ್ಯಾಥೊಲಿಕ್ ಧರ್ಮಪ್ರಚಾರಕರು ಕಾರ್ಯನಿರ್ವಹಿಸುತ್ತಿದ್ದರು ಮತ್ತು ಅನೆಕರು ಸಾಹಿತ್ಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು. ಥಾಮಸ್ ಸ್ಟೀಫನ್ಸ್ (1549-1619) ಮರಾಠಿ ಪಂಡಿತರಾಗಿದ್ದನು. ಜ್ಯಾಕೊಪೊ ಫೆನಿಸಿಯೋ (1558-1632) ಹಿಂದು ಧರ್ಮದ ಕುರಿತು ಪುಸ್ತಕವನ್ನು ಬರೆದನು . ಸೆಬಾಸ್ಟಿಯನ್ ಮ್ಯಾನ್‌ರಿಕ್ (1590?-1669) ಅನೇಕ ತಿಳಿಯದ ಸ್ಥಳಗಳಿಗೆ ಭೇಟಿ ನೀಡಿ ವರದಿಯನ್ನು ಪ್ರಕಟಿಸಿದನು. ರಾಬರ್ಟೊ ಡಿ' ನೋಬಿಲಿ (1577-1656) ಭಾರತೀಯ ಆಚಾರಗಳನ್ನು ಅಳವಡಿಸಿಕೊಂಡು ಮದುರೈನಲ್ಲಿ ಕ್ರೈಸ್ತ ಗುರುವಾಗಿದ್ದನು. ಜರ್ಮನ್ನಿನ ಹೆನ್ರಿಚ್ ರೋತ್ (1610-1668) ಮೊದಲ ಪೀಳಿಗೆಯ ಸಂಸ್ಕೃತ ಪಂಡಿತರುಗಳಲ್ಲಿ ಒಬ್ಬರಾಗಿದ್ದನು . ಕಾನ್ಸ್ಟ್ಯಾಂಟಿನೋ ಬೆಸ್ಕಿ (1680-1747) ತಮಿಳು ಪಂಡಿತ ಹಾಗೂ ಲೇಖಕನಾಗಿದ್ದನು. ಇದೇ ರೀತಿ ಪ್ರೊಟೆಸ್ಟೆಂಟ್ ಪಾದ್ರಿಗಳು ಕೂಡ ಭಾರತಕ್ಕೆ ಬಂದು ರಿಲೀಜಿಯನ್ ಪ್ರಚಾರಕ್ಕಾಗಿ ಅನೇಕ ಪುಸ್ತಕಗಳನ್ನು ಭಾರತ ಮೇಲೆ ಬರೆದರು.

ಆದರೂ ಸಾಂಸ್ಥಿಕವಾಗಿ ಹಾಗೂ ಸಾಂಘಿಕವಾಗಿ ಭಾರತದ ಕುರಿತಾಗಿ ಅಧ್ಯಯನ ಪ್ರಾರಂಭವಾದದ್ದು ಬ್ರಿಟಿಷರ ಆಗಮನದ ನಂತರ 18ನೇ ಶತಮಾನದ ಪ್ರಾರಂಭದಲ್ಲಿ ಎಂದರೆ ತಪ್ಪಾಗಲಿಕ್ಕಿಲ್ಲ.

ಅದರ ಹಿನ್ನೆಲೆ ಮತ್ತು ವಿಸ್ತಾರವನ್ನು ಮುಂದಿನ ಸಂಚಿಕೆಯಲ್ಲಿ ವಿವರಿಸುತ್ತೇನೆ.

ಡಾ.ಶ್ರೀನಿಧಿ ಪ್ಯಾಟಿ

ಭಾಗ -1 https://srinidhipyati.blogspot.com/2024/08/wendy-doneger-1.html

ಭಾಗ -2

https://srinidhipyati.blogspot.com/2024/09/blog-post.html

ಇಂಡೊಲೊಜಿಯ ಇತಿಹಾಸ ಕಳೆದ ಸಂಚಿಕೆಯಲ್ಲಿ ವಿಮರ್ಶೆ ಮತ್ತು ಪ್ರತಿಕ್ರಿಯೆ ಅನಿವಾರ್ಯತೆಯನ್ನು ತಿಳಿದೆವು. ಒಂದು ವಿಷಯವನ್ನು ವಿಮರ್ಶಿ...

I have concluded my course on Western knowledge systems, covering the following aspects:1. Greek mythology and the emerg...
29/09/2024

I have concluded my course on Western knowledge systems, covering the following aspects:

1. Greek mythology and the emergence of pre-Socratic philosophy, including figures like Thales, Pythagoras, and Democritus.
2. Socratic and Platonic philosophy – the correspondence theory of reality, the concept of ideas (logos), and cosmology.
3. Aristotle – the division of Western knowledge system, Western logic, and the concept of ideas (logos).
4. Post-Aristotelian philosophy – Epicureanism, Stoicism, Neo-Platonism, the rise of the Roman Empire, and the end of Greek philosophy.
5. The rise of Christianity, focusing on St. Augustine and Christian theology.
6. The Renaissance and the rise of Western science.
7. Early modern philosophy – Rationalism with figures like René Descartes, Spinoza, and Leibniz.
8. Empiricism – John Locke, Hume
9. Immanuel Kant and his contributions to knowledge systems. Transcendental Esthetic,Transcendental Analytic, Transcendental Dialectic,Categories etc.
10. Introduction to The philosophy of language.

Special thanks to Dhananjaya Rao acharya for approaching me to conduct the course.
I would also like to extend my sincere appreciation to the MIT Institute for Indic Knowledge Studies team for introducing such an insightful course.
I hope this will help students broaden their perspectives and enhance their thinking.

My review article on Acharya Veeranarayana Pandurangi  Veeranarayana Pandurangi's commentary on *Purusha Sukta*, titled ...
13/09/2024

My review article on Acharya Veeranarayana Pandurangi Veeranarayana Pandurangi's commentary on *Purusha Sukta*, titled *Vishhnvarchana*, has been published in *Shodha Samhita*, a peer-reviewed UGC CARE-listed journal of Kavikulaguru Kalidasa Sanskrit University, Nagpur.

Special thanks to Prof. Veeranarayana Pandurangi Acharya for giving me the opportunity to review his commentary. I would also like to extend my heartfelt gratitude to Prof. Madhusudan Penna , a distinguished scholar and editor of *Shodha Samhita*, and to Dr. Renuka Bokare .

Interested can read the article using the link below

https://kksushodhasamhita.org/index.php/sdsa/article/view/1384/99

Indology ಇಂಡೊಲೊಜಿವೆಂಡಿ ಡೊನಿಗರ್ ನ (Wendy doneger)  ರಾಮಾಯಣ ಪ್ರಭಂಧ - ವಿಶ್ಲೇಷಣೆ ಮತ್ತು ವಿಮರ್ಶೆ.ವೆಂಡಿ ಡೊನಿಗರ್ ಅಮೇರಿಕನ್ ಇಂಡೊಲೊಜ...
29/08/2024

Indology ಇಂಡೊಲೊಜಿ

ವೆಂಡಿ ಡೊನಿಗರ್ ನ (Wendy doneger) ರಾಮಾಯಣ ಪ್ರಭಂಧ - ವಿಶ್ಲೇಷಣೆ ಮತ್ತು ವಿಮರ್ಶೆ.

ವೆಂಡಿ ಡೊನಿಗರ್ ಅಮೇರಿಕನ್ ಇಂಡೊಲೊಜಿಸ್ಟ್ ಆಗಿದ್ದು . ಚಿಕಾಗೋ ವಿಶ್ವವಿದ್ಯಾಲಯದಲ್ಲಿ ರಿಲಿಜಿಯಸ್ ಸ್ಟಡೀಸ್ ನ ಪ್ರಾಧ್ಯಾಪಕಿಯಾಗಿದ್ದರು.1978 ರಿಂದ ಅಲ್ಲಿ ಬೋಧನೆ ಮಾಡುತ್ತಿದ್ದಾರೆ. ಅವರು ಮೂವತ್ತೈದು ಪುಸ್ತಕಗಳನ್ನು ಬರೆದಿದ್ದಾರೆ, ಇದರಲ್ಲಿ "ದಿ ಹಿಂದೂಸ್; ಆನ್ ಆಲ್ಟರ್ನೇಟಿವ್ ಹಿಸ್ಟರಿ", "ದಿ ರಿಗ್-ವೇದ; ಆನ್ ಆಂಥಾಲಜಿ" ಇತ್ಯಾದಿ ಸೇರಿವೆ. "ದಿ ಹಿಂದೂಸ್; ಆನ್ ಆಲ್ಟರ್ನೇಟಿವ್ ಹಿಸ್ಟರಿ" ಶೀರ್ಷಿಕೆಯಡಿ ಹಿಂದೂ ಧರ್ಮದ ಮೇಲಿನ ಒಂದು ಪುಸ್ತಕವನ್ನು 2009 ರಲ್ಲಿ ಪೆಂಗ್ವಿನ್ ಪಬ್ಲಿಕೇಶನ್ ಪ್ರಕಟಿಸಿತು. ಇದು ದೋಷಗಳಿಗಂದ ಕೂಡಿದ್ದರಿಂದ ಹಿಂದೂಗಳಿಂದ ತೀವ್ರ ಟೀಕೆಗೊಳಗಾಯಿತು. ಪೆಂಗ್ವಿನ್ ಪ್ರಕಾಶನವು ವಾಸ್ತವದ ದೋಷಗಳು ಮತ್ತು ಜನರಿಂದ ಪ್ರತಿಭಟನೆ ಮತ್ತು ಮೊಕದ್ದಮೆ ಭಯದಿಂದ ಪುಸ್ತಕಗಳನ್ನು ಹಿಂದಕ್ಕೆ ಪಡೆದಿತು. , ತದನಂತರ ಅವರು ಹಿಂದೂ ಧರ್ಮದ ಮೇಲೆ On Hinduism ಎಂಬ ಮತ್ತೊಂದು ಪುಸ್ತಕವನ್ನು ಬರೆದರು, ಇದರಲ್ಲಿ ಅವರು ರಾಮಾಯಣದ ಬಗ್ಗೆ ಮತ್ತೆ ಅದೇ ಹಿಂದಿನ ಪುಸ್ತಕಗಳಲ್ಲಿ ಬರೆದ ತಪ್ಪನ್ನು ಮುಂದು ಮುಂದುವರೆಸಿದರು. ಈ ಲೇಖನ ಸರಣಿಯಲ್ಲಿ ಈ ಪುಸ್ತದದ ವಿಮರ್ಶೆಯನ್ನು ಮಾಡುತ್ತೆನೆ. ಅದಕ್ಕೂ ಪೂರ್ವಪೀಠಿಕೆಯಾಗಿ ಇಂಡಾಲಾಜಿಕಲ್ ಸ್ಟಡಿಯ ಇತಿಹಾಸ ಅದರ ಬೆಳೆವಣಿಗೆಯ ಕೆಲವೂಂದು ಅಂಶಗಳನ್ನು ವಿವರಿಸುತ್ತೆನೆ.

ಇಂಡೋಲಜಿ ಎಂದರೇನು?

ಭಾರತವು ಜ್ಞಾನದ ಜಾಗತಿಕ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ವಿಶ್ವದ ವಿವಿಧ ಭಾಗಗಳಿಂದ ಪಂಡಿತರನ್ನು ಆಕರ್ಷಿಸುತ್ತಿದ ಕಾಲವೂಂದಿತ್ತು. ಪರ್ಷಿಯನ್ ಸಾಮ್ರಾಜ್ಯದ ಕಾಲದಿಂದ ವಸಾಹತು(colonial) ಕಾಲದವರೆಗೆ, ಅನೇಕ ಪಂಡಿತರು ಭಾರತದ ಸಂಸ್ಕೃತಿ, ಸಾಹಿತ್ಯ ಮತ್ತು ನಾಗರಿಕತೆಯನ್ನು ಅಧ್ಯಯನ ಮಾಡಲು ತೀವ್ರ ಆಸಕ್ತಿ ತೋರಿಸಿದ್ದಾರೆ. ವಿವಿಧ ನಾಗರಿಕತೆಗಳು ಭಾರತೀಯ ಜ್ಞಾನದ ಪ್ರಕಾರಗಳನ್ನು ಅಧ್ಯಯನ ಮಾಡಿದ್ದು, ತಮ್ಮ ಸಂಸ್ಕೃತಿಗಳನ್ನು ಸಶಕ್ತಗೊಳಿಸಲು ಅದರ ಅನೇಕ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ. ಕೆಲವರು ಮೂಲವನ್ನು ಒಪ್ಪಿಕೊಂಡು ಅದನ್ನು ನಮೂದಿಸಿ ಕೃತಜ್ಞತೆಯನ್ನು ಸಮರ್ಪಿಸಿದ್ದಾರೆ , ಇತರರು ಜ್ಞಾನವನ್ನು ತಮ್ಮದೇ ಆವಿಷ್ಕಾರ ಎಂದು ತಮ್ಮದಾಗಿಸಿಕೊಂಡು ಕೃತಘ್ನರಾಗಿದ್ದಾರೆ. ಇನ್ನೂ ಕೆಲವರು ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿ ತಾವೆ ಆವಿಷ್ಕಾರಿಸಿದ್ದೆಂದು ಪ್ರಚಾರ ಮಾಡಿ , ಭಾರತೀಯರಿಗೆ ಅದನ್ನು ಹಂಚಿ ಸಂಪತ್ತನ್ನು ಸಂಪಾದಿಸಿದ್ದಾರೆ.



ಆಧುನಿಕ ವಸಾಹತುಶಾಹಿ ಯುಗದಲ್ಲಿ, ಪಾಶ್ಚಾತ್ಯರು ಆಡಳಿತಾತ್ಮಕ ಉದ್ದೇಶಗಳಿಗಾಗಿ ತಮ್ಮ ಕಾಲೋನಿಗಳನ್ನು(ತಮ್ಮ ಅಧಿನದಲ್ಲಿರುವ ದೇಶಗಳು) ಅಧ್ಯಯನ ಮಾಡಲು ಪ್ರಾರಂಭಿಸಿದರು. ಉದಾಹರಣೆಗೆ ಭಾರತದಲ್ಲಿ ಜನರ ವ್ಯಾಜಗಳನ್ನು ಪರಿಹರಿಸಬೇಕೆಂದರೆ ಇಲ್ಲಿಯ ಸಂಸ್ಕೃತಿ ಸಂಪ್ರದಾಯದ ಅರಿವು ಅನಿವಾರ್ಯ. ಈ ದೃಷ್ಟಿಯಿಂದ ಪ್ರಾರಂಭದಲ್ಲಿ ಭಾರತೀಯ ಸಂಸ್ಕೃತಿಯ ಪ್ರತೀಕಗಳಾದ ವೇದ- ವೇದಾಂತ- ಕಾವ್ಯ-ಸಾಹಿತ್ಯ-ಧರ್ಮಶಾಸ್ತ್ರ ಮೊದಲಾದ ಗ್ರಂಥಗಳ ಅಧ್ಯಯನವನ್ನು ನಡೆಸಿದರು. ಅದರ ಜೊತೆಗೆ ಕ್ರಿಶ್ಚಿಯಾನಿಟಿಯನ್ನು ಭಾರತಲ್ಲಿ ಹರಡುವುದಕ್ಕಾಗಿ ಪೂರ್ವಪಕ್ಷದ ದೃಷ್ಟಿಯಿಂದ ಅಧ್ಯಯನವನ್ನು ನಡೆಸಿದರು., ಇದು ಅಧುನಿಕ ಕಾಲದಲ್ಲಿ ಭಾರತೀಯ ಜ್ಞಾನ ಪರಂಪರೆಯ ಅಧ್ಯಯನದ ಉಗಮಕ್ಕೆ ಕಾರಣವಾಯಿತು. ಇದನ್ನು ಆಂಗ್ಲಭಾಷೆಯಲ್ಲಿ ಇಂಡೋಲೊಜಿ ಎಂಡು ವ್ಯವರಿಸುತ್ತಾರೆ. ವಸಾಹತುಶಾಹಿಗಳು (colonial masters) ತಮ್ಮ ಗುರಿಗಳನ್ನು ಸಾಧಿಸಲು ಭಾರತೀಯ ಗ್ರಂಥಗಳಲ್ಲಿ ತಾತ್ಸಾರ, ಭಾರತೀಯ ಪರಂಪರೆಯಲ್ಲಿ ಕಿಳಿರಿಮೆ ಉಂಟಾಗುವಂತೆ ಪುಸ್ತಕಗಳನ್ನು ಬರೆದರು , ಪಾಠಶಾಲೆಗಳನ್ನು ಕಿತ್ತು ,ಆಂಗ್ಲ ಶಿಕ್ಷಣಕ್ಕೆ ಒತ್ತುಕೊಟ್ಟು ಅಲ್ಲಿಯೂ ಇದನ್ನೆ ಬೊಧಿಸಿದರು. ಇದು ಯುವಪೀಳಿಗೆಯಲ್ಲಿ ತಮ್ಮ ಸಂಸ್ಕೃತಿ- ಸಂಸ್ಕೃತದ ವಿಷಯದಲ್ಲಿ ಯಲ್ಲಿ ಸಂಕೋಚವನ್ನು ಸೃಷ್ಟಿಸಿತು. ಈ ತಂತ್ರವು ಅವರ ಆಡಳಿತ ಮತ್ತು ಮಿಶಿನಿರಿಗಳ ಪ್ರಚಾರದ ಉದ್ದೇಶಗಳಿಗೆ ಸಹಾಯಕವಾಯಿತು.

ಆದಾಗ್ಯೂ, ಕೆಲವರು, ಮತೀಯ ದೃಷ್ಟಿಕೋಣಗಳನ್ನು ಬದಿಗಿಟ್ಟು, ಭಾರತೀಯ ಜ್ಞಾನ ವ್ಯವಸ್ಥೆಯನ್ನು ನಿರಪೇಕ್ಷವಾಗಿ ಅಧ್ಯಯನ ಮಾಡಿ ಪ್ರಾಮಾಣಿಕ ಕೊಡುಗೆಗಳನ್ನು ನೀಡಿದರು.

ವಸಾಹತುಶಾಹಿ ನಂತರದ (post colonial era) ಯುಗದಲ್ಲಿ , ವಿಶೇಷವಾಗಿ ಹಾರ್ವಾರ್ಡ್ ಮತ್ತು ಸ್ಟ್ಯಾಂಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ಇಂಡೋಲಾಜಿಯ ಅಧ್ಯಯನಗಳು ಮುಂದುವರಿದವು, ಅಲ್ಲಿ ದಕ್ಷಿಣ ಏಷ್ಯಾ ಅಧ್ಯಯನ(south Asian studies) ವಿಭಾಗಗಳಲ್ಲಿ ಪ್ರೊಫೆಸರ್ ಗಳು ಭಾರತೀಯ ಗ್ರಂಥಗಳ ವ್ಯಾಖ್ಯಾನ, ಅನುವಾದ ಕಾರ್ಯಗಳಲ್ಲಿ ತೊಡಗಿದ್ದರು. ಈ ಪಂಡಿತರಲ್ಲಿ ಅನೇಕರು ಮಾರ್ಕ್ಸಿಸ್ಟ್, ಸೊಷಯಿಲಿಸ್ಟ ಅಥವಾ ಇವೆಂಜೆಲಿಕಲ್ ಕ್ರಿಶ್ಚಿಯನ್ ಚಿಂತನೆಗಳಿಂದ ಪ್ರವಾವಿತರು . ಅದೆ ದೃಷ್ಟಿಕೋಣಗಳಿಂದ ಗ್ರಂಥಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ವಿಕೃತಗೊಳಿಸಿದರು, ಕೆಲವೊಮ್ಮೆ ಹಿತಾಸಕ್ತಿಗಳಿಂದ ಮತ್ತು ಕೆಲವೊಮ್ಮೆ ಅವರ ರಾಜಕೀಯ ಕಾರಣಗಳಿಂದ ಆಂಗ್ಲಭಾಷೆಯಲ್ಲಿ ಅನೇಕ ಗ್ರಂಥಗಳನ್ನು ರಚಿಸಿದರು. ದಿನ ಕಳೆದಂತೆ ಭಾರತೀಯ ಗ್ರಂಥಗಳ ವ್ಯಾಖ್ಯಾನವನ್ನು ಭಾರತೀಯ ಪಂಡಿತರಿಗಿಂತ ಹೇಚ್ಚು ಪ್ರಾಮಾಣಿಕವಾಗಿ ಮಾಡಿದ್ದೇವೆಂದು ,ತಮ್ಮ ಗ್ರಂಥಗಳಿಗೆ ಹೆಚ್ಚಿನ ಅಧ್ಯಕ್ಷ ಕೃತತೆಯಿಯೆಂದು ಜಗತ್ತನ್ನು ನಂಬಿಸುವ ಪರಿಸರವನ್ನು ಸೃಷ್ಟಿಸಿದರು.

ಇಂದೋಲಾಜಿಕ ಅಧ್ಯಯನದ ನಾಲ್ಕು ವಿಭಾಗಗಳನ್ನು ಅರ್ಥಮಾಡಿಕೊಳ್ಳುವುದು: ಅವಲೋಕನ

1. ಯುರೋಪಿಯನ್ ಅಧ್ಯಯನ( Colonial study)– ಈ ಹಂತವು ಮುಖ್ಯವಾಗಿ 18 ನೇ ಶತಮಾನದಲ್ಲಿ ಪ್ರಾರಂಭವಾಯಿತು ಮತ್ತು ಅದನ್ನು ಮುಖ್ಯವಾಗಿ ಜರ್ಮನ್ ಮತ್ತು ಬ್ರಿಟಿಷ್ ಪಂಡಿತರು ಮುನ್ನಡೆಸಿದರು. ಉದಾ-ವಿಲಿಯಂ ಜೋನ್ಸ, ಮ್ಯಾಕ್ಸ ಮುಲ್ಲರ್

2. ಪೋಸ್ಟ ಕೊಲೂನಿಯಲ್ ಸ್ಟಡಿ. (Post–Colonial study) ಈ ವಿಭಾಗವು ಮುಖ್ಯವಾಗಿ ಅಮೇರಿಕಾದ ವಿಶ್ವವಿದ್ಯಾಲಯಗಳ ಪಂಡಿತರನ್ನು ಒಳಗೊಂಡಿರುತ್ತದೆ, ಉದಾ- ರಾಬರ್ಟ್ ಗೋಲ್ಡ್‌ಮನ್ ಮತ್ತು ಶೆಲ್ಡನ್ ಪೊಲ್ಲಾಕ್.

3. ಎಡಪಂಥೀಯ ಇಂಡೊಲಾಜಿಕಲ್ ಅಧ್ಯಯನ – ಈ ವರ್ಗವು ಸೋಷಿಯಲಿಸಮ್ ಮತ್ತು ಮಾರ್ಕ್ಸಿಸಂ ಚಿಂತನೆಗಳಿಂದ ಪ್ರಭಾವಿತರಾದ ಪಂಡಿತರನ್ನು ಒಳಗೊಂಡಿರುತ್ತದೆ, ಉದಾ -ರೂಮಿಲಾ ಥಾಪರ್ ಮತ್ತು ಇರ್ಫಾನ್ ಹಬೀಬ್.

4. ಪಾರಂಪರಿಕ ಮತ್ತು ರಾಷ್ಟ್ರೀಯತಾವಾದಿ ಇಂಡೊಲಾಜಿಕಲ್ ಅಧ್ಯಯನ – ಈ ಗುಂಪು ಪಾರಂಪರಿಕ ಹಿನ್ನೆಲೆಯಿಂದ ಪಂಡಿತರನ್ನು ಮತ್ತು ರಾಷ್ಟ್ರೀಯತಾವಾದಿ ಪಂಡಿತರನ್ನು ಒಳಗೊಂಡಿರುತ್ತದೆ. ಉದಾ- ಧರ್ಮಪಾಲ್ , ಆರ್,ಸಿ ಮುಜುಂದಾರ್ ,ಪಾರಂಪರಿಕ ಪಂಡಿತರು.

ಮುಂದುವರಿಯುವುದು...

ಡಾ.ಶ್ರೀನಿಧಿ ಪ್ಯಾಟಿ

Indology ಇಂಡೊಲೊಜಿ ವ ೆಂಡಿ ಡೊನಿಗರ್ ನ (Wendy doneger) ರಾಮಾಯಣ ಪ್ರಭಂಧ - ವಿಶ್ಲೇಷಣೆ ಮತ್ತು ವಿಮರ್ಶೆ. ವೆಂಡಿ ಡೊನಿಗರ್ ಅಮೇರಿಕನ್ ಇಂಡೊಲೊಜ...

18/08/2024

Subscribe and Stay updated with more Spiritual Discourses. Please note : Unauthorised uploading of this video on any online portal will incite legal actionS...

ವೈಶಾಖ ಶುಕ್ಲಪಕ್ಷದ ಅಕ್ಷಯ ತೃತೀಯಾದಂದು ಶ್ರೇಷ್ಠ ಜ್ಞಾನಿಗಳಾದ ಪರಮಭಕ್ತರಾದ ಭಾಗವತ ಗ್ರಂಥಕ್ಕೆ "ಪದ ರತ್ನಾವಲಿ" ಎಂಬ ವ್ಯಾಖ್ಯಾನವನ್ನು ರಚಿಸಿದ ...
10/05/2024

ವೈಶಾಖ ಶುಕ್ಲಪಕ್ಷದ ಅಕ್ಷಯ ತೃತೀಯಾದಂದು ಶ್ರೇಷ್ಠ ಜ್ಞಾನಿಗಳಾದ ಪರಮಭಕ್ತರಾದ ಭಾಗವತ ಗ್ರಂಥಕ್ಕೆ "ಪದ ರತ್ನಾವಲಿ" ಎಂಬ ವ್ಯಾಖ್ಯಾನವನ್ನು ರಚಿಸಿದ ಶ್ರೀ ವಿಜಯಧ್ವಜತೀರ್ಥ ಶ್ರೀಪಾದಂಗಳವರ ಆರಾಧನಾ ದಿವಸ. ಅವರ ವೃಂದಾವನ ಪುಣ್ಯಕ್ಷೇತ್ರವಾದ ಶ್ರೀ ಕಣ್ವತೀರ್ಥದಲ್ಲಿದೆ. ಅವರ ಆರಾಧನಾ ನಿಮಿತ್ತವಾಗಿ
ಪಾರಾಯಣ ಮಾಡುವವರ ಅನುಕೂಲಕ್ಕಾಗಿ ವಿಶ್ವಪತಿ ತೀರ್ಥರು ರಚಿಸಿದ ವಿಜಯಧ್ವಜಾಷ್ಟಕ -

ಅಂಜನಾಸೂನುಸಾನ್ನಿಧ್ಯಾದ್ ವಿಜಯೇನ ವಿರಾಜಿತಮ್ | ಅಜಿತಪ್ರೀತಿಜನಕಂ ಭಜೇಹಂ ವಿಜಯಧ್ವಜಮ್ ||

ಶ್ರೀವಿಜಯಧ್ವಜಯೋಗಿಯತೀಶಂ ನೌಮಿ ನಿರಂತರಮಾನಮಿತಾಂಗ: | ವಾದಿಮದೇಭವಿದಾರಣದಕ್ಷಂ ವ್ಯಾಕೃತಭಾಗವತಂ ಪರಮಾಪ್ತಮ್ ||

ಜಯವಿಜಯೌ ದಂಡಧರೌ ಭೂಯೋ ಭೂಯೋSಭಿವಾದಯೇ ಮೂರ್ಧ್ನಾ | ಭಾಗವತೀ ಟೀಕಾ ಯಾಸೌ ವರ್ಣ್ಯಂತಃ ಪ್ರವೇಷ್ಟುಮೇತಸ್ಯಾ:||

ಮಧ್ವಾಧೋಕ್ಷಜಸಂಪ್ರದಾಯಕ-ಮಹಾಶಾಸ್ತ್ರಾರ್ಥಸಂವ್ಯಂಜಕಃ ಶ್ರೀಮದ್ಭಾಗವತಾಂಬುಧೌ ವ್ಯವಹರನ್ ತಾತ್ಪರ್ಯರತ್ನಾವಲೀಮ್ | ದೃಷ್ಟಾ ಭಾಗವತಾರ್ಥದೀಪ್ತಪದಕೈಃ ಶ್ರೀಕೃಷ್ಣಪಾದಾರ್ಚನಂ ಮಾ ತ್ಯಾಕ್ಷೀದ್ವಿಜಯಧ್ವಜೋ ಭಜ ಮನಸ್ತಂ ಕಣ್ವತೀರ್ಥಸ್ಥಿತಮ್ ||

ಯಸ್ಯ ವಾಕ್ಕಾಮಧೇನುರ್ನ: ಕಾಮಿತಾರ್ಥಾನ್ ಪ್ರಯಚ್ಛತಿ | ಭಜೇ ಮಹೇಂದ್ರಸಚ್ಚಿಷ್ಯಂ ಯೋಗೀಂದ್ರಂ ವಿಜಯಧ್ವಜಮ್

ಸರ್ವದುರ್ವಾದಿಮಾತಂಗದಲನೇ ಸಿಂಹವಿಕ್ರಮಮ್ | ವಂದೇ ಯತಿಕುಲಾಗ್ರಣ್ಯಂ ಯೋಗೀಂದ್ರಂ ವಿಜಯಧ್ವಜಂ||

ಮಧ್ವಾರಾಧಿತಸೀತೇತ-ರಾಮಚಂದ್ರಪದಾಂಬುಜೇ | ಚಂಚರೀಕಾಯಿತಂ ವಂದೇ ಯೋಗೀಂದ್ರಂ ವಿಜಯಧ್ವಜಮ್ ||

ಶ್ರೀಮದ್ಭಾಗವತಾಭಿಧಾನಸುರಭಿಃ ಯಟ್ಟೀಕಯಾ ವತ್ಸಯಾ |
ಸ್ಪೃಷ್ಟಾ ಶ್ಲೋಕಪಯೋಧರೈಃ ನಿಜಮಹಾಭಾವಂ ಪಯ: ಪ್ರಸ್ನುತೇ ||
ಲೋಕೇ ಸಜ್ಜನತಾಪಸಂಪ್ರಶಮನಾಯೋದೀರಿತಂ ಸೂರಿಭಿಃ |
ಶ್ರೀಮಂತಂ ವಿಜಯಧ್ವಜಂ ಮುನಿವರಂ ತಂ ಸನ್ನಮಾಮ್ಯನ್ವಹಮ್ ||

|| ಶ್ರೀವಿಶ್ವಪತಿತೀರ್ಥವಿರಚಿತಂ ಶ್ರೀವಿಜಯಧ್ವಜಾಷ್ಟಕಮ್ ||

*ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ*                               ಡಾ.ಶ್ರೀನಿಧಿ ಆಚ...
17/02/2024

*ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ*


ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ

ಅಯೋಧ್ಯಾಧಿಪತಿ ಶ್ರೀರಾಮಚಂದ್ರನ ಹಾಗೂ ಪರಮಪೂಜ್ಯ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ನನಗೆ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನಿಗೆ ಪೂಜ್ಯ ಶ್ರೀಪಾದಂಗಳವರ ನೇತೃತ್ವದಲ್ಲಿ ನಡೆಯುತ್ತಿರುವ ಅನೇಕ ಸೇವೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು . ಅದರ ಜೊತೆಗೆ ಪೂಜ್ಯ ಶ್ರೀಪಾದಂಗಳವರ ಅಚಲ ಶ್ರದ್ಧೆ ಹಾಗೂ ಭಕ್ತಿಯ ವಿಶ್ವರೂಪದರ್ಶನ ಮಾಡುವ ಯೋಗವು ದೊರೆಯಿತು . ಅಯೋಧ್ಯೆಯಲ್ಲಿ ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚಾದ ಚಳಿಯ ವಾತಾವರಣ. ನಮಗೆಲ್ಲರಿಗೂ ಸ್ವೆಟರ್,ಗ್ಲೌಸ್ ಗಳಿಲ್ಲದೆ ಒಡಾಡಲೂ ಸಾಧ್ಯವಾಗದ ಸ್ಥಿತಿ. ಅದರಲ್ಲೂ ಬೆಳಿಗ್ಗೆಯಂತೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಲಾಗದಷ್ಟು ಮಂಜಿನ ಮುಸುಕು. ಇಂತಹ ವಾತಾವರಣದಲ್ಲೂ ಶ್ರೀಪಾದಂಗಳವರು ಬೆಳೆಗ್ಗೆ ಎಂದಿನಂತೆ ಎದ್ದು, ಸ್ನಾನವನ್ನು ಮುಗಿಸಿ, ತಮ್ಮ ಜಪತಪತರ್ಪಣಾದಿಗಳಲ್ಲಿ ತೊಡಗಿಕೊಳ್ಳುತ್ತಿದ್ದನ್ನು ಕಂಡರೆ , ಶ್ರೀಪಾದರಿಗಿರುವ ಸಂನ್ಯಾಸಧರ್ಮದ ನಿಷ್ಠೆ ಹಾಗೂ ಅನುಷ್ಠಾನದಲ್ಲಿ ಶ್ರದ್ಧೆ ನಮ್ಮೆಲ್ಲರ ಅನುಭವಕ್ಕೆ ಬರುತ್ತದೆ . ಅನುಕೂಲ ವಾತಾವರಣದಲ್ಲೂ ನಿತ್ಯಾನುಷ್ಠಾನದಲ್ಲಿ ಆಲಸ್ಯತನನಿಂದ ಅಥವಾ ಸಣ್ಣಪುಟ್ಟ ಕಾರಣಗಳಿಂದ ವಿಳಂಬ ಪ್ರವೃತ್ತಿಯನ್ನು ಮಾಡುವ ಇಂದಿನ ಅನೇಕರಿಗೆ ೬೦ ವರ್ಷದ ಶ್ರೀಪಾದಂಗಳವರ ನಡೆ ಆದರ್ಶವಾಗಬೇಕು .

ತಮ್ಮ ಅನುಷ್ಠಾನಗಳನ್ನು ಮುಗಿಸಿದ ತರುವಾಯ ಶ್ರೀಪಾದಂಗಳವರು ಸಂಸ್ಥಾನ ಪೂಜೆಯನ್ನು ನೆರವೇರಿಸಿ ಬಾಲರಾಮನಿಗೆ ತತ್ವಹೋಮ ಕಲಶಜಲದ ಸಂಪ್ರೋಕ್ಷಣೆಯನ್ನು ನೆರವೇರಿಸಲು ಶ್ರೀರಾಮನ ಮಂದಿರಕ್ಕೆ ತೆರಳುತ್ತಿದ್ದರು . ಪ್ರತಿಷ್ಠೆಯ ಅಂಗವಾಗಿ ೪೮ ದಿನ ನಡೆಯುವ ಮಂಡಲ ಪೂಜೆಯ ಭಾಗವಾಗಿ ತತ್ವಹೋಮವನ್ನು ಮಾಡುವುದು ಶಾಸ್ತ್ರಗಳು ವಿಧಿಸಿದ ಕ್ರಮ . ಸಮಾಜದ ಅನೇಕ ಹಿರಿಯ ವಿದ್ವಾಂಸರು ಹಾಗೂ ಪುರೋಹಿತರು ಪ್ರತಿದಿನ ಬೆಳಿಗ್ಗೆ ಗರ್ಭಗುಡಿಯ ಪಕ್ಕದಲ್ಲಿಯೇ ತತ್ವಹೋಮವನ್ನು ನೆರೆವೇರಿಸುತ್ತಿದ್ದರು . ಶ್ರೀಪಾದಂಗಳವರು ದೇವಸ್ಥಾನಕ್ಕೆ ಆಗಮಿಸಿ ಬಿಂಬದಲ್ಲಿ ತತ್ವನ್ಯಾಸ, ಮಾತೃಕಾನ್ಯಾಸಾದಿಗಳನ್ನು ನೆರೆವೇರಿಸಿ, ಕಲಶಜಲಪ್ರೋಕ್ಷಣೆಯನ್ನು ಮಾಡುತ್ತಿದ್ದರು . ತರುವಾಯ ಚಾಮರಸೇವೆಯನ್ನು ಮಾಡುತ್ತಿದ್ದರು . ಬೆಳ್ಳಿಯಿಂದ ನಿರ್ಮಿತವಾದ ಆ ಚಾಮರವು ಎರಡೂ ಕೈಗಳನ್ನು ಉಪಯೋಗಿಸಿದರೂ ಐದು ನಿಮಿಷಕ್ಕಿಂತ ಹೆಚ್ಚು ಹೊತ್ತು ಹಿಡಿಯಲು ಸಾಧ್ಯವಿಲ್ಲದಷ್ಟು ಭಾರವಾಗಿದೆ. ನನಗೆ ಪಲ್ಲಕ್ಕಿ ಉತ್ಸವದಲ್ಲಿ ಚಾಮರ ಸೇವೆಯ ಅವಕಾಶ ಸಿಕ್ಕಿದ್ದರಿಂದ ಇದು ನನ್ನ ವೈಯಕ್ತಿಕ ಅನುಭವವೂ ಹೌದು .ಆದರೆ ಶ್ರೀಪಾದಂಗಳವರು ಮಾತ್ರ ಒಂದೊಂದು ಕೈಗಳಲ್ಲಿ ಒಂದೊಂದು ಚಾಮರವನ್ನು ಹಿಡಿದು ಶ್ರೀರಾಮಚಂದ್ರನಿಗೆ ವಿವಿಧ ಸ್ತ್ರೋತ್ರಗಳಿಂದ ಅರ್ಧ ಗಂಟೆಗೂ ಹೆಚ್ಚು ಸಮಯ ಚಾಮರ ಸೇವೆಯನ್ನು ತದೇಕಚಿತ್ತದಿಂದ ನೆರೆವೇರಿಸುತ್ತಿದ್ದರು. ಇದು ಶ್ರೀಪಾದಂಗಳವರ ಅಚಲ ಭಕ್ತಿ, ಮನೋದಾರ್ಢ್ಯ ಹಾಗೂ ದೈಹಿಕ ದಾರ್ಢ್ಯಕ್ಕೆ ಕನ್ನಡಿಯಂತಿತ್ತು . ಭಾರತದ ಪ್ರಸಿದ್ಧ ತಾರೆ ಅಮಿತಾಭ್ ಬಚ್ಚನ ದರ್ಶನಕ್ಕೆ ಬಂದಾಗಲೂ ಶ್ರೀಪಾದಂಗಳವರು ಯಾವುದೇ ವ್ಯತ್ಯಾಸವಿಲ್ಲದೆ ಎಂದಿನಂತೆ ಶ್ರದ್ಧಾಭಕ್ತಿಯಿಂದ ಕಲಶಜಲಪ್ರೋಕ್ಷಣೆಯನ್ನು ನೆರೆವೆರಿಸುತ್ತಿದ್ದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಕಂಡ ಭಕ್ತರೊಬ್ಬರಲ್ಲಿ ಮೂಡಿದ ಉದ್ಗಾರ ಹೀಗಿತ್ತು " ಇದೇ ಅಲ್ಲವೇ ನಿಜವಾದ ಭಕ್ತಿ , ಇದನ್ನೇ ಅಲ್ಲವೇ ಶ್ರೀಮದಾಚಾರ್ಯರೂ ಉಪದೇಶಿಸಿದ್ದು "ಮಾಹಾತ್ಮ್ಯಜ್ಞಾನ ಪೂರ್ವಸ್ತು ಸುಧೃಢಃ ಸರ್ವತೋಧಿಕಃ ಸ್ನೇಹ ಭಕ್ತಿಃ ಎಂದು"

ಪ್ರತಿನಿತ್ಯವೂ ಪ್ರತಿಷ್ಠೆಯ ಅಂಗವಾಗಿ ಅನೇಕ ಹೋಮಗಳು ರಾಮಮಂದಿರದ ಆವರಣದಲ್ಲಿ ನೆರವೇರುತ್ತಿವೆ . ಅದಕ್ಕಾಗಿ ಸುಂದರವಾದ ಯಾಗಮಂಟಪವನ್ನು ರಾಮಜನ್ಮಭೂಮಿಯಲ್ಲಿ ಟ್ರಸ್ಟ್ ನವರು ನಿರ್ಮಿಸಿದ್ದಾರೆ . ಅಲ್ಲಿ ದೇಶದ ಅನೇಕ ಭಾಗಗಳಿಂದ ಸ್ಮಾರ್ತ,ಶೈವ, ವೈಷ್ಣವ ಭೇದವಿಲ್ಲದೇ ಎಲ್ಲ ಪುರೋಹಿತರು ಯಜ್ಞ ,ಪಾರಾಯಣ ಮುಂತಾದ ಸೇವೆಯಲ್ಲಿ ಭಾಗವಹಿಸುತ್ತಿದ್ದಾರೆ . ಶ್ರೀಪಾಂದಗಳವರು ಬಾಲರಾಮನ ಸೇವೆಯ ತರುವಾಯ ಈ ಯಾಗಮಂಟಪಕ್ಕೆ ಆಗಮಿಸಿ ಅಲ್ಲಿ ನೆರವೇರುವ ಅನೇಕ ಹೋಮಗಳ ಪೂರ್ಣಾಹುತಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ . ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ ಶ್ರೀಪಾದಂಗಳವರು ಕೇವಲ ಶ್ರೀರಾಮಮಂದಿರದ ಧಾರ್ಮಿಕ ವಿಧಿವಿಧಾನಗಳಿಗಲ್ಲದೆ , ಶ್ರೀರಾಮರಾಜ್ಯ ನಿರ್ಮಾಣದ ಕಾರ್ಯಕ್ಕೂ ಮಹತ್ವವನ್ನು ನೀಡುತ್ತಿದ್ದಾರೆ . ಅದಕ್ಕಾಗಿ ಸೇವೆಯೊಂದನ್ನು ರೂಪಿಸಿದ್ದಾರೆ . ಶ್ರೀರಾಮನ ಪ್ರೋಕ್ಷಣೆಗೆ ಉಪಯೋಗಿಸುವ ಕಲಶದ ಸೇವೆಯನ್ನು ಮಾಡಿಸುವ ಅತ್ಯಂತ ಪುಣ್ಯದ ಸೇವೆಯದು . ಐದು ಲಕ್ಷ ರೂಗಳನ್ನು ಈ ಸೇವೆಗಾಗಿ ಸಲ್ಲಿಸಿದರೆ ದೇವರ ಪ್ರೋಕ್ಷಣೆಗಾಗಿ ಬಳಿಸಿದ ಆ ಕಲಶವನ್ನು ಶ್ರೀಪಾದಂಗಳವರಿಂದ ಪ್ರಸಾದವಾಗಿ ಪಡೆಯಬಹುದು . ಹಾಗೂ ನೀವು ಸಲ್ಲಿಸಿದ ಸೇವಾಧನವೂ ಶ್ರೀರಾಮರಾಜ್ಯದ ನಿರ್ಮಾಣದ ಅಂಗವಾಗಿ ನಡೆಯುವ ದೀನರ ,ಆರ್ಥಿಕಸಂಕಷ್ಟದಲ್ಲಿರುವ ಬಡವರ ಉದ್ಧಾರಕ್ಕಾಗಿ ಬಳಕೆಯಾಗುತ್ತದೆ. "ನಾನಾ ಜನಸ್ಯ ಶುಶ್ರೂಷಾ ಕರ್ತವ್ಯಾ" ಎಂಬ ನುಡಿಯ ಅರ್ಥಬದ್ಧವಾದ ಅನುಷ್ಠಾನವೆಂದರೆ ಇದೇ ಅಲ್ಲವೇ!!!.

ನಂತರ ಯಾಗ ಮಂಟಪದಲ್ಲಿಯೇ ಶ್ರೀಪಾದಂಗಳವರು ಪೂರ್ಣಪ್ರಜ್ಞ ವಿದ್ಯಾಪೀಠದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸುಮಾರು ಒಂದೂವರೆ ಗಂಟೆಯಷ್ಟು ಕಾಲ ಪಾಠವನ್ನು ಮಾಡುತ್ತಿದ್ದರು . ಎಷ್ಟೇ ನಿಬಿಡವಾದ ದಿನಚರಿಯಿದ್ದರೂ ಶ್ರೀಪಾದಂಗಳಿಗಿರುವ ಪಾಠದಲ್ಲಿನ ನಿಷ್ಠೆ ಅವರಿಗಿರುವ ಮೌದ್ಗಲ್ಯ ಋಷಿಗಳ "ಸ್ವಾಧ್ಯಾಯ ಪ್ರವಚನ ಎವೇತಿ ನಾಕೋ ಮೌದ್ಗಲ್ಯಃ ತದ್ಧಿ ತಪಃ ತದ್ಧಿ ತಪಃ'' ವಾಣಿಯಲ್ಲಿನ ಶ್ರದ್ಧೆಯನ್ನು ಸಾರುತ್ತಿತ್ತು. .

ಮಧ್ಯಾಹ್ನದ ಭಿಕ್ಷೆಯ ಸಮಯ. ಶ್ರೀಗಳು ಮಧ್ಯಾಹ್ನದ ಪೂಜೆ ,ತದಂಗ ಸ್ನಾನಕ್ಕಾಗಿ ಅಯೋಧ್ಯೆಯ ಪೇಜಾವರ ಮಠಕ್ಕೆ ತೆರಳುತ್ತಾರೆ .ಪೂಜೆ ಹಾಗು ಭಿಕ್ಷೆಯ ನಂತರ ಶ್ರೀರಾಮನ ದರುಶನಕ್ಕಾಗಿ ಬಂದ ಯಾತ್ರಾರ್ಥಿಗಳಿಗೆ ಮಂತ್ರಾಕ್ಷತೆ ಪ್ರದಾನ. ಮಧ್ಯಾಹ್ನ ಪುನಃ ಶ್ರೀರಾಮಮಂದಿರಕ್ಕೆ ಪಯಣ. ನಾಲ್ಕು ಗಂಟೆಗೆ ಪ್ರತಿನಿತ್ಯವೂ ಶ್ರೀಪಾದಂಗಳವರ ಪರಕಲ್ಪನೆಯಂತೆ ಜರಗುವ ಪಲ್ಲಕ್ಕಿ ಉತ್ಸವ . ಉತ್ತರ ಭಾರತದವರಿಗೆ ಈ ಉತ್ಸವ ಚಿರಪರಿಚಿತವಲ್ಲ . ಶ್ರೀರಾಮಮಂದಿರ ಉತ್ತರ ದಕ್ಷಿಣ ಭಾರತದ ಸಂಪ್ರದಾಯದ ಸೇತುವೆಯಂತೆ ಗೋಚರಿಸುತ್ತದೆ . ದೇವಸ್ಥಾನ ಉತ್ತರದ ನಾಗರ ಶೈಲಿ, ಶ್ರೀರಾಮಮೂರ್ತಿ ದಕ್ಷಿಣ ಶೈಲಿ . ಪ್ರಧಾನ ಪೂಜೆ ಉತ್ತರದ ರಮಾನಂದಿ ಸಂಪ್ರದಾಯದಂತೆ, ಮಂಡಲ ಪೂಜೆ ದಕ್ಷಿಣದ ಸಂಪ್ರದಾಯದಂತೆ, ಎಲ್ಲೂ ವಿರೋಧವಿಲ್ಲ, ವಿವಾದವಿಲ್ಲ ಭಾರತದ ಬಹುತ್ವವನ್ನು ಸಾರುತ್ತಾ ಉತ್ತರ ದಕ್ಷಿಣ ಎಂದು ಭಾರತವನ್ನು ವಿಭಜಿಸುವವರಿಗೆ ಉತ್ತರಕೊಡಲು ಸಜ್ಜಾಗಿ ನಿಂತಂತಿದೆ . ಶ್ರೀಗಳು ತಾವೇ ಶ್ರೀರಾಮಲಲ್ಲಾನ ಉತ್ಸವಮೂರ್ತಿಯನ್ನು ಕೈಯಿಂದ ಎತ್ತಿ ಪಲ್ಲಕ್ಕಿಯಲ್ಲಿ ಇರಿಸುತ್ತಾರೆ . ಹಿಂದೂಮ್ಮೆ ಕಠಿಣ ಪರಿಸ್ಥಿತಿಯಲ್ಲಿ ಗುರುಗಳಾದ ವಿಶ್ವೇಶತೀರ್ಥಶ್ರೀಪಾದರು ರಾಮಲಲ್ಲಾನ ಇನ್ನೊಂದು ಪ್ರತಿಮೆಯನ್ನು ಬಿಗಿದಪ್ಪಿ ಟೆಂಟಿನಲ್ಲಿ ಪ್ರತಿಷ್ಠಾಪಿಸಿದ್ದರ ಫಲವೆಂಬಂತೆ , ಅವರ ಶಿಷ್ಯರು ಪಡೆದ ಈ ಸೇವಾಭಾಗ್ಯವನ್ನು ಕಣ್ತುಂಬಿಸಿಕೊಳ್ಳುವ ಅವಕಾಶದಿಂದ ಭಾವುಕರಾಗುವರು ಇತಿಹಾಸಕ್ಕೆ ಸಾಕ್ಷಿಗಳಾದ ಕೆಲವರು , ಪಲ್ಲಕ್ಕಿಸೇವೆಯಲ್ಲಿ ಅಥವಾ ಯಾವುದಾದರೊಂದು ಸೇವೆಯಲ್ಲಿ ತಮಗೆ ಪಾಲುಸಿಗಲೆಂದು ಧುಮುಕಿ ಧಾವಂತಿಸುವವರು ಕೆಲವರು . ಪಂಚವಾದ್ಯಗಳ ಘೋಷ, ಚಂಡೆಯ ನಾದ, ತಾಳ ಜಾಘಂಟೆಗಳ ಸಪ್ಪಳ, ವೇದ ಸ್ತ್ರೋತ್ರಪಾರಾಯಣದ ಝೇಂಕಾರ, ಮೈಮರೆತು ಕುಣಿಯುವ ಭಕ್ತರ ಗುಂಪು, ಸಾಲು ಸಾಲಾಗಿ ಶ್ರೀರಾಮ ದರುಶನಕ್ಕೆ ಬರುವ ಭಕ್ತರ ಜೈ ಶ್ರೀರಾಮ ಎಂಬ ನಾಮದ ಘರ್ಜನೆ .ಹೀಗೆ ಅನೇಕ ಭಾವನೆಗಳ ಸಮಾಗಮದಿಂದ ವಾತಾವರಣದಲ್ಲೆಲ್ಲಾ ಭಕ್ತಿಯ ಪರಿಮಳದ ಕಂಪು ಸೂಸುತ್ತಿತ್ತು. ಪಲ್ಲಕ್ಕಿಗೆ ಹಾಗೂ ಶ್ರೀರಾಮನಿಗೆ ಯಾವುದೇ ಹಾನಿಯಾಗಬಾರದೆಂಬ ಕಾಳಜಿಯಿಂದ ಎಲ್ಲ ತರಹದ ಗುಂಪನ್ನು ಸಮಾಧಾನಿಸುತ್ತಾ ಮುನ್ನಡಡೆಸುವವರು ಶ್ರೀಗಳು . ಈ ಜಾಗದಲ್ಲಿ ನಿಂತು ಈ ಉತ್ಸವವನ್ನು ಆಚರಿಸಲು ಸಾಧ್ಯವಾಗಿದ್ದು ಪರಮಪೂಜ್ಯ ವಿಶ್ವೇಶತೀರ್ಥಶ್ರೀಪಾದಂಗಳವರ ದಣಿವರಿಯದ ಹೋರಾಟದಿಂದ. ಅವರಿಗೆ ಆ ಜಾಗದಲ್ಲಿ ಹೃದಯದಿಂದ ಲಕ್ಷ ಲಕ್ಷ ನಮಸ್ಕಾರಗಳನ್ನು ನಮಗರಿವಿಲ್ಲದಂತೆ ಸಲ್ಲಿಸುತ್ತೇವೆ. ಈ ಹೋರಾಟಕ್ಕಾಗಿ ಪ್ರಾಣತೆತ್ತ ಅನೇಕ ಕರಸೇವಕರವನ್ನು ಹೃದಯಾಳದಿಂದ ನಮಿಸುತ್ತೇವೆ. ಹೀಗೆ ಮೂರು ಪ್ರದಕ್ಷಿಣೆಯ ನಂತರ ತೊಟ್ಟಿಲಲ್ಲಿ ಭಗವಂತನನ್ನು ಶ್ರೀಗಳು ಕೂರಿಸುತಿದ್ದರು .
ನಂತರ ಅಷ್ಟಾವಧಾನದಲ್ಲಿ ಚತುರ್ವೇದ, ಇತಿಹಾಸ, ಪುರಾಣ, ಸಂಗೀತ, ಭರತನಾಟ್ಯ ,ಯಕ್ಷಗಾನ, ಮುಂತಾದ ಸೇವೆಗಳು ರಾಮಲಲ್ಲಾನಿಗೆ ಸಲ್ಲುತ್ತಿದ್ದವು. ಆಧ್ಯಾತ್ಮಿಕ ಲೋಕವೊಂದು ಸೃಜಿಸುತ್ತಿತ್ತು. ರಾಮಾಯಣವನ್ನು ಅಭ್ಯಸಿಸಿದವರಿಗೆ ಮಹರ್ಷೀ ವಾಲ್ಮೀಕಿಗಳು ವನವಾಸದ ನಂತರ ಪ್ರಜೆಗಳು ರಾಮನನ್ನು ಸ್ವಾಗತಿಸಿದ ಪರಿಯ ವರ್ಣನೆಯು ನೆನಪಿಗೆ ಬರುತ್ತದೆ. ಪೂಜ್ಯ ಶ್ರೀಪಾದಂಗಳವರ ಸೌಂದರ್ಯ ಪ್ರಜ್ಞೆ , ಸೂಕ್ಷ್ಮ ದೃಷ್ಟಿ , ವ್ಯವಸ್ಥೆಯ ಪಟುತ್ವ ಈ ಉತ್ಸವವು ಹತ್ತಾರು ವರ್ಷಗಳ ಕಾಲ ಭಕ್ತರ ಮನಸ್ಸಿನಲ್ಲಿ ಅಚ್ಚಾಗುವಂತೆ ಮಾಡುತ್ತದೆ. ಈ ಉತ್ಸವ ಇನ್ನೂ ಮುಂದುವರಿಯಬಾರದೇ ಎಂಬ ಸದಾಸೆಯನ್ನು ಹುಟ್ಟಿಸುತ್ತದೆ. ಧನ್ಯತಾಭಾವವು ಅಭಿವ್ಯಕ್ತವಾಗುತ್ತದೆ . ಶಂಖನಾದದೊಂದಿಗೆ ಉತ್ಸವ ಸಮಾಪ್ತವಾದಾಗ ಶ್ರೀಗಳು ಶ್ರೀರಾಮಲಲ್ಲಾನ ಉತ್ಸವಮೂರ್ತಿಯನ್ನು ಜೋಪಾನವಾಗಿ ಗರ್ಭಗುಡಿಯಲ್ಲಿ ತಂದಿರಿಸುತ್ತಿದ್ದರು. ಆಗ ನಮಗೆಲ್ಲರಿಗೂ ಶ್ರೀರಾಮನ ದರುಶನದ ಭಾಗ್ಯ. ಮಂದಸ್ಮಿತನಾದ ಬಾಲರಾಮ ದರ್ಶನ. ಐದುನೂರು ವರುಷದ ಪಾರಿಪಾಕರೂಪದ ಆ ದರುಶನ ಕ್ಷಣ ಎಂದೂ ಮುಗಿಯಬಾರದೆಂಬ ಭಾವವು ಚಿಗುರುತ್ತಿತ್ತು ,ಆದರೆ ಪೋಲೀಸರ ಸದ್ದಿಗೆ ಜಾಗೃತರಾಗಿ ವಾಸ್ತವ ಪ್ರಪಂಚಕ್ಕೆ ಮರಳಬೇಕಾಗಿತ್ತು .

ಶ್ರೀಪಾದಂಗಳವರದ್ದು ಈ ದಿನಚರಿ ಕೇವಲ ಒಂದು ದಿನದ್ದಲ್ಲ, 48 ದಿನವೂ ಇದೇ ರೀತಿ ಬಿಡುವಿಲ್ಲದ ದಿನಚರಿ.ಒಂದೆರಡು ದಿನ ಈ ದಿನಚರಿಯನ್ನು ಅನುಸರಿಸಿದರೆ ಮೂರನೆಯ ದಿನ ರಜೆಯನ್ನು ಬಯಸುತ್ತೇವೆ. ಅಂತಹದರಲ್ಲಿ ಅನೇಕ ವರ್ಷಗಳಿಂದ ಇದೇ ರೀತಿಯ ಬಿಡುವಿಲ್ಲದ ದಿನಚರಿಯನ್ನು ಪಾಲಿಸುತ್ತಿರುವ ಶ್ರೀಪಾದರ ಕರ್ತೃತ್ವ ಶಕ್ತಿಗೆ ನಮೋ ನಮಃ .

ಇಲ್ಲಿ ನಮೂದಿಸಲೇಕಾದ ಅಂಶಗಳು ಕೆಲವಿವೆ . ನಾವೆಲ್ಲಾ ಅನುಭವಿಸಿದ ಸಂಭ್ರಮದ ಹಿಂದೆ ಅನೇಕರ ಪರಿಶ್ರಮವಿತ್ತು . ಆಗಮಿಸುವವರಿಗೆಲ್ಲಾ ಮುಗುಳ್ನಗೆಯೊಂದಿಗೆ ವ್ಯವಸ್ಥೆ ಮಾಡುತ್ತಿದ್ದ, ಶಶಾಂಕ ಭಟ್ ಆಚಾರ್ಯರ ನೇತೃತ್ವ, ಲಕ್ಷೀನಾರಾಯಣ ಆಚಾರ್ಯ,ಸೋದೆ ಗುರುರಾಜ ಆಚಾರ್ಯ, ಪ್ರಸಾದ ಭಟ್, ಹಾಗೂ ಸುಧಾವಿದ್ಯಾರ್ಥಿಗಳ ತಂಡಕ್ಕೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಅಲ್ಪವೇ. ಸ್ವಾಮಿಗಳ ಆಜ್ಞೆಯಂತೆ ವಿಷಮ ಪರಿಸ್ಥಿತಿಯಲ್ಲಿ ಈ ಕಾರ್ಯವನ್ನು ನಿರ್ವಹಿಸುತ್ತಿರುವ ಅವರಿಗೆ ಗುರುಗಳ ಹಾಗೂ ಶ್ರೀರಾಮನ ಅನುಗ್ರಹವಾಗುವುದೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ .

ಕೊನೆಗೆ ಸ್ವಾಮಿಗಳ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಅಯೋಧ್ಯೆಯಿಂದ ತೆರಳುವಾಗ "ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ" ಎಂಬ ಹಾಡನ್ನು ಗುನುಗುತ್ತಾ , ಅದರ ನಿಜವಾದ ಭಾವವನ್ನು ಅರ್ಥೈಸಿಕೊಳ್ಳುತ್ತಾ ಯಾತ್ರೆಯನ್ನು ಮುಗಿಸಿದೆವು. https://youtu.be/MTmkYggAPPU?si=ivEd34JBBGGH_vOz

ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ

ನಾ ಕಂಡ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಚಲಭಕ್ತಿ - ಅಯೋಧ್ಯಾ ಯಾತ್ರೆಯ ಅನುಭವಕಥನ ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ ಅಯೋಧ್ಯಾಧಿ....

ಇಸ್ರೋ ವಿಜ್ಞಾನಿಗಳ ಸಾಧನೆಗೊಂದು ನನ್ನ ಅಭಿನಂದನಾ ಲೇಖನ..        *ಇಸ್ರೋ ಮತ್ತು ತಿರುಪತಿ ತಿಮ್ಮಪ್ಪ*https://srinidhipyati.blogspot.com...
26/08/2023

ಇಸ್ರೋ ವಿಜ್ಞಾನಿಗಳ ಸಾಧನೆಗೊಂದು ನನ್ನ ಅಭಿನಂದನಾ ಲೇಖನ..
*ಇಸ್ರೋ ಮತ್ತು ತಿರುಪತಿ ತಿಮ್ಮಪ್ಪ*

https://srinidhipyati.blogspot.com/2023/08/blog-post.html

ಭಾರತೀಯ ವಿಜ್ಞಾನಿಗಳು ಅತ್ತ ಚಂದ್ರಯಾನ-3 ಯೋಜನೆಯ ಅಂತಿಮ ಹಂತದ ಪರೀಕ್ಷೇಗಳನ್ನು ನಡೆಸುತ್ತಾ ಯೋಜನೆಯ ಸಫಲತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದರು . ವಿಜ್ಞಾನಿಗಳ ಒಂದು ತಂಡ ಎಂದಿನಂತೆ ಯೋಜನೆಯ ಸಾಫಲ್ಯಕ್ಕಾಗಿ ತಿಮ್ಮಪ್ಪನನ್ನು ಪ್ರಾರ್ಥಿಸಲು ತಿರುಮಲದಲ್ಲಿದ್ದರು. ಉಪಕರಣದ ಒಂದು ಭಾಗವನ್ನು ತಿಮ್ಮಪ್ಪನ ಮುಂದಿಟ್ಟು ಯೋಜನೆ ಯಶಸ್ಸಿಗಾಗಿ ಅನುಗ್ರಹವನ್ನು ಪ್ರಾರ್ಥಿಸಿದರು . ಇದು ಪತ್ರಿಕೆಯಲ್ಲಿ ಪ್ರಕಟವಾಗಿದ್ದೆ ತಡ , ಮಂಗಳಯಾನಕ್ಕೂ ಚಂದ್ರಯಾನಕ್ಕೂ ವ್ಯತ್ಯಾಸವೂ ತಿಳಿಯದ ಸ್ವಯಂಘೋಷಿತ ಜೀವಪರ,ಪ್ರಗತಿಪರ, ಸಮಾಜದ ಸಾಕ್ಷಿಪ್ರಜ್ಞೆಯ ಬುದ್ದಿಜೀವಿಗಳು ಇದೊಂದು ಪ್ರತಿಗಾಮಿ ಚಿಂತನೆಯೆಂದೂ, ಭಾರತೀಯ ವಿಜ್ಞಾನಿಗಳಿಗೆ ತಮ್ಮ ಕೆಲಸದ ಮೇಲೆಯೆ ವಿಶ್ವಾಸವಿಲ್ಲವೆಂದೂ, ಮೌಡ್ಯವೆಂದೂ ಬೊಬ್ಬಿಡುತ್ತಾ, ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರರು ಈ ರೀತಿಯ ಮೌಡ್ಯಾಚಾರಣೆಯನ್ನು ನಿಲ್ಲಿಸುವಂತೆ ಕ್ರಮವಹಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪತ್ರವನ್ನು ಪ್ರಕಟಿಸಿಬಿಟ್ಟರು . ಒಂದೊಮ್ಮೆ ಇಸ್ರೋ ವಿಜ್ಞಾನಿಗಳು ಮಸಿದಿಗೊ, ಚರ್ಚಿಗೂ ಭೇಟಿಯಿತ್ತಿದ್ದರೆ ಇದೆ ಪ್ರಗತಿಪರ, ಜೀವಪರ ಚಿಂತಕರು ವಿಜ್ಞಾನಿಗಳನ್ನು ಹೊಗಳಿ ಅಟ್ಟಕ್ಕೆರಿಸುವುದರಲ್ಲಿ ಸಂಶಯವಿರಲಿಲ್ಲ. ಹಿಂದುವಿರೋಧಿಗಳಾದ ಈ ಬುದ್ದಿಜೀವಿಗಳು ಪ್ರಗತಿಪರರೆಂಬ ಮುಖವಾಡ ಧರಿಸಿ ಕೇವಲ ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸುತ್ತಿರುವುದು ಇದೆ ಮೊದಲಲ್ಲ. ಜನರಿಗೂ ಇದು ಅರ್ಥವಾಗಿದೆ .

ಆದರೆ ಇದೆಲ್ಲದ ಮಧ್ಯೆ ವಿಜ್ಞಾನಿಗಳಿಗೂ ದೇವರಿಗೂ,ವಿಜ್ಞಾನಕ್ಕೂ ದೇವರ ಅಸ್ತಿತ್ವಕ್ಕೂ ಏನಾದರು ಸಂಭಂಧವಿದೆಯೆ ? ವಿರೋಧವೆ ? ಸಮ್ಮತಿಯಿದೆಯೆ? ಎಂಬಿತ್ಯಾದಿ ಮೂಲಭೂತವಾದ ಪ್ರಶ್ನೆಗಳುದ್ಭವಿಸಬಹುದು . ವಿಜ್ಞಾನಕ್ಕೆ ದೇವರ ಅಸ್ತಿತ್ವವಾಗಲಿ , ನಿರಾಕರಣೆಯಾಗಲಿ ವಿಷಯವಲ್ಲ. ಯಾವುದು ವಿಜ್ಞಾನಕ್ಕೆ ವಿಷಯವಲ್ಲವೂ ಅದರ ಕುರಿತಾಗಿ ವಿಜ್ಞಾನವು ಮಾತನಾಡುವುದಿಲ್ಲ. ಹಾಗಾಗಿಯೆ ಅನೇಕ ಶ್ರೇಷ್ಠ ವಿಜ್ಞಾನಿಗಳು ದೇವರನ್ನು ನಂಬುವರಾಗಿದ್ದಾರೆ . ಪ್ರಗತಿಪರರು ಎಷ್ಟೆ ಪರಚಾಡಿದರು ಇವರೆಲ್ಲರಿಗಿಂತ ನೂರು ಪಟ್ಟು ಮೇಧಾವಿಗಳಾದ ವಿಜ್ಞಾನಿಗಳು ಭಾರತೀಯ ಸನಾತನ ತತ್ವಶಾಸ್ತ್ರವನ್ನು ಅಭ್ಯಸಿಸಿ ಕೋಂಡಾಡಿರುವುದನ್ನು ಅಲ್ಲೆಗೆಳೆಯಲು ಅವರಿಂದ ಸಾಧ್ಯವಾಗುವುದಿಲ್ಲ.

ಪರಮಾಣು ಬಾಂಬಿನ ಪಿತಾಮಹ 'ರೊಬರ್ಟ ಒಪನ್ಹೈಮರ್' ಭಗವದ್ಗೀತೆಯಿಂದ ಬಹಳ ಪ್ರಭಾವಿತನಾಗಿದ್ದನು . James A hijiya (professor of history , university of Massachusetts, Dartmouth) ಅವರು Procedings of The American Philosophical society ಎಂಬ ಪುಸ್ತಕದಲ್ಲಿ ಬರೆದ The Gita of J.Robert Oppenheimer ಎಂಬ ಲೇಖನದಲ್ಲಿ ಈ ಕುರಿತಾಗಿ ಅನೇಕ ವಿಷಯಗಳನ್ನು ದಾಖಲಿಸಿದ್ದಾರೆ . ಒಪನ್ಹೈಮರ್ ಯೌವನದಲ್ಲೆ Arthur W Ryder ಎನ್ನುವ ಸಂಸ್ಕೃತ ವಿದ್ವಾಂಸನ ಬಳಿ ಸಂಸ್ಕೃತವನ್ನು ಹಾಗೆ ಗೀತೆಯನ್ನು ಅಭ್ಯಸಿಸಿ , ಅದರ ಸರಳತೆ ಮತ್ತು ಅಗಾಧತೆಯಿಂದ ಆಶ್ಚರ್ಯಗೊಂಡು ತನ್ನ ತಮ್ಮನಿಗೆ ಬರೆದ ಪತ್ರದಲ್ಲಿ ಗೀತೆಯ ಕುರಿತಾಗಿ Very easy and quite marvelous ಎಂದು ಉದ್ಗಾರ ತೆಗೆದ . ನಂತರದ ದಿನಗಳಲ್ಲಿ ' the most beautiful philosophical song existing in any known tongue'' ಎಂದು ಗೀತೆಯನ್ನು ಕೊಂಡಾಡಿದ . ಅವನು ತನ್ನ ಮೇಜಿನ ಹತ್ತಿರ ಯಾವಾಗಲೂ ಭಗವದ್ಗೀತೆಯ ಒಂದು ಪ್ರತಿಯನ್ನು ಇರಿಸಿಕೊಳ್ಳುತ್ತಿದ್ದನಷ್ಟೆ ಅಲ್ಲದೆ , ತನ್ನ ಎಲ್ಲಾ ಮಿತ್ರರಿಗೂ ಗೀತೆಯ ಪ್ರತಿಯನ್ನು ಉಡುಗೊರೆಯಾಗಿ ನೀಡುತ್ತಿದ್ದ . ಅಮೇರಿಕ ಅಧ್ಯಕ್ಷ ರೂಸ್ವೆಲ್ಟ ನಿಧನಾಂತರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಗೀತೆಯ ಗೀತೆಯ 17ನೆಯ ಅಧ್ಯಾಯದ ಮೂರನೆಯ ಶ್ಲೋಕವನ್ನುದಾಹರಿಸಿದ. ಪರಮಾಣು ಬಾಂಬಿನ ತಯಾರಿಯ ಕಾಲದಲ್ಲೂ ಗೀತೆಯನ್ನು ಅಭ್ಯಸಿಸುತ್ತಿದ್ದ ಅವನಿಗೆ ಪರಮಾಣು ವಿಸ್ಪೋಟಗೊಂಡ ದೃಶ್ಯವು ಕಣ್ಣೆದಿರಿಗೆ ಬಂದಾಗ ಗೀತೆಯ ವಿಶ್ವರೂಪದರ್ಶನಯೋಗದ ವರ್ಣನೆಯು ಮನದಲ್ಲಿ ಸ್ಫುರಿಸಿದ್ದು ಸಹಜವೆ . 1963 ರಲ್ಲಿ 'Christian century' ನಿಯತಕಾಲಿಕೆಯಲ್ಲಿ ಅವನ ಜೀವನವನ್ನು ಪ್ರಭಾವಿಸಿದ ಹತ್ತು ಪುಸ್ತಕಗಳ ಬಗ್ಗೆ ಕೇಳಿದಾಗ ಭಗವದ್ಗೀತೆಯನ್ನು ಉದಾಹರಿಸಿದ. ಹಾಗಾದರೆ ಭಗವದ್ಗೀತೆಯ ಅಧ್ಯಯನವನ್ನು ಮಾಡುತ್ತಿದ್ದ ಒಪನ್ಹೈಮರ್ ಮೌಢ್ಯವನ್ನಾಚರಿಸುತ್ತಿದ್ದನೆ . ಅವನು ತನ್ನ ಮಿತ್ರರಿಗೆ ಭಗವದ್ಗೀತೆಯನ್ನು ನೀಡುತ್ತಿದ್ದದ್ದನ್ನು ಮೌಢ್ಯವೆಂದೂ ಹೇಳುವರೆ? ಭಾರತೀಯ ಮೂಲದ ಎಲ್ಲವನ್ನು ಮೌಢ್ಯವೆಂದು ವಿರೂಧಿಸುತ್ತಾ, ಅಭಾರತೀಯವಾದದ್ದೂ ಎಷ್ಟೆ ಕೊಳಕು, ಅವೈಜ್ಞಾನಿಕವಾಗಿದ್ದರೂ ಶ್ರೇಷ್ಠವೆಂದು ಬಿಂಬಿಸುತ್ತಾ, ವಿಜ್ಞಾನ ಮತ್ತು ವೈಜ್ಞಾನಿಕ ಮನೂಧರ್ಮದ ಎಳ್ಳಷ್ಟೂ ಜ್ಞಾನವಿಲ್ಲದಿದ್ದರೂ , ಎಲ್ಲಾ ವಿಷಯದಲ್ಲೂ ತಮ್ಮ ಅಭಿಪ್ರಾಯವನ್ನು ನೀಡುವ ಅಭಿಪ್ರಾಯವ್ಯಸನಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ .

Erwin Schrodinger ಕ್ವಾಂಟಮ್ ಫಿಸಿಕ್ಸ ಕ್ಷೇತ್ರದಲ್ಲಿ ಅದ್ಭುತ ಸಂಶೋದನೆಗೈದ ಈ ವಿಜ್ಞಾನಿಯು 1918 ರ ಆಸುಪಾಸಿನಲ್ಲಿ ಜೆರ್ಮನ್ ತತ್ವಶಾಸ್ತ್ರಜ್ಞನಾದ Arthur Schoenhauear ಲೇಖನಗಳ ಮೂಲಕ ಭಾರತೀಯ ತತ್ವಶಾಸ್ತ್ರದಿಂದ ಪ್ರಭಾವಕ್ಕೊಳಗಾಗಿದ್ದನು . ಇನ್ನೊಬ್ಬ ವಿಜ್ಞಾನಿ Niels Bohr ನ "I go to the Upanishad to ask question" (The Tao of physics, 1975) ಎಂಬ ಪ್ರಸಿದ್ದ ಹೇಳಿಕೆಯನ್ನು ಭಾರತದಲ್ಲಿ ನೀಡಿದ್ದರೆ ಈ ಬುದ್ದಿಜೀವಿಗಳು ಅವನನ್ನು ಮೌಢ್ಯಪರ ಎಂದು ಷರಾ ಬರೆದುಬಿಡುತಿದ್ದರು. ಹೀಗೆ ಅನೇಕ ಶ್ರೇಷ್ಠ ವಿಜ್ಞಾನಿಗಳು ಸಾಧಕರು ಭಾರತೀಯ ತತ್ವಶಾಸ್ತ್ರವನ್ನು ,ವಿಜ್ಞಾನವನ್ನು ಕೊಂಡಾಡಿದರೂ, ಅದು ಇವರ ಕಣ್ಣಿಗೆ ಬಿದ್ದರೂ ಇವರ ಮನಸ್ಥಿತಿ ಬದಲಾಗುವುದಿಲ್ಲ.

ಇನ್ನೂ ಕೆಲವರು ವಾದ ಮಾಡುವುದು ಹೀಗೆ – ಭಾರತವೂ ಧರ್ಮನಿರಪೇಕ್ಷ(Secular) ರಾಷ್ಟ್ರ , ದೇವಸ್ಥಾನಕ್ಕೆ ಹೋಗುವುದಾದರೆ, ಚರ್ಚಿಗೂ ,ಮಸೀದಿಗೂ ಹೋಗಲಿ , ಇಲ್ಲವಾದಲ್ಲಿ ಎಲ್ಲಿಗೂ ಹೋಗುವುದು ಬೇಡ. ದೇವಸ್ಥಾನಕ್ಕೆ ಮಾತ್ರ ಭೇಟಿ ನೀಡುವುದು ಭಾರತೀಯ ಧರ್ಮನಿರಪೇಕ್ಷತೆಗೆ(Secular) ವಿರುದ್ದವಾದ್ದು . ಇವರು ಅತಿ ಬುದ್ಧಿವಂತರು. ಇಂತಹವರಿಗೆ ಇಂತಹ ಪ್ರಸಂಗಗಳಲ್ಲಿ ಮಾತ್ರ ಧರ್ಮನಿರಪೇಕ್ಷತೆಯ(Secular) ನೆನಪು ಕಾಡುವುದು . ಆದರೆ ನಿಜವಾಗಿಯು ಧರ್ಮನಿರಪೇಕ್ಷ(Secular) ರಾಷ್ಟ್ರವಾದರೆ ದೇವಸ್ಥಾನಗಳನ್ನು ಮಾತ್ರ ಎಕೆ ಸರ್ಕಾರವು ತನ್ನ ಸುಪರ್ದಿಯಲ್ಲಿಟ್ಟುಕೊಂಡಿದೆ. ಮಸೀದಿಗೆ ,ಚರ್ಚಿಗಿರದ ನಿಯಮ ದೇವಸ್ಥಾನಗಳಿಗೆಕೆ ? ದೇವಸ್ಥಾನಗಳ ಆಡಳಿತವನ್ನು ಹಿಂದುಗಳಿಗೆ ಬಿಟ್ಟು ಕೊಡಲಿ ಆಗ ಮಾತನಾಡೋಣ . ಇನ್ನೂ ತಾರ್ಕಿಕವಾಗಿ ಯೋಚನೆ ಮಾಡಿದರೆ ಇಸ್ರೋ ಮಿಷನ್ ನಲ್ಲಿ ದೇವಸ್ಥಾನಗಳ ಪಾತ್ರವಿದೆ. NSSO ವರದಿ ಪ್ರಕಾರ ,ಭಾರತದಲ್ಲಿ ದೇವಸ್ಥಾನಗಳ ಹಣಕಾಸಿನ ವ್ಯವಹಾರ 3.02 ಲಕ್ಷ ಕೋಟಿ, ಅಥವಾ 40 ಬಿಲಿಯನ್ ಡಾಲರ್ , ಇದು ನಮ್ಮ ಒಟ್ಟಾರೆ ಜಿ.ಡಿ.ಪಿ ಯ 2.32 ಪ್ರತಿಶತ. ಕೇವಲ ಆರು ದೇವಸ್ಥಾನಗಳಿಂದ ಭಾರತ ಸರ್ಕಾರ ಇಪ್ಪತ್ತನಾಲ್ಕುಸಾವಿರಕೋಟಿಯಷ್ಟು ಹಣವನ್ನು ಸಂಪಾದಿಸುತ್ತದೆ . ಹಾಗಾದರೆ ಭಾರತ ಸರ್ಕಾರವು ಇಸ್ರೋಗೆ ನೀಡುವ ಅನುದಾನದಲ್ಲಿ ದೇವಸ್ಥಾನದ ಪಾಲೂ ಇದೆ . ವ್ಯಾವಹಾರಿಕವಾಗಿ ಯೋಚಿಸಿದರೂ ಇಸ್ರೋ ವಿಜ್ಞಾನಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದರಲ್ಲಿ ತಪ್ಪೇನಿಲ್ಲ. ಆದರೆ ವಿಜ್ಞಾನಿಗಳಾದರೂ ತಮ್ಮ ಸಕಲ ಪ್ರಯತ್ನವನ್ನು ಮಾಡಿ ನಿಜವಾದ ಶ್ರದ್ಧೆಯಿಂದ ಭೇಟಿ ನೀಡಿದ್ದರು. ಈ ಕುಹಕಿಗಳು ಕುಹಕವಾಡುವ ಸಮಯಕ್ಕೆ , ಉಡಾವಣೆಯು ಯಶಸ್ವಿಯಾಗಿ ರಾಕೆಟ್ ತನ್ನ ಪಥದಲ್ಲಿ ಯಾವುದೆ ವಿಘ್ನಗಳಿಲ್ಲದೆ ಮುನ್ನುಗ್ಗುತ್ತಿದ್ದರೆ , ಅದೇ ವಿಜ್ಞಾನಿಗಳು ಅದರ ಮುಂದಿನ ಹಂತದ ಸಫಲತೆಗಾಗಿ ಮತ್ತೆ ಹಗಲಿರುಳು ಶ್ರಮಿಸಲು ಪ್ರಾರಂಭಿಸಿದ್ದರು … ಅಗಸ್ಟ 23 ರ ಸಾಯಂಕಾಲ 6:04 ಸಮಯಕ್ಕೆ ಯಶಸ್ವಿಯಾದ landing ನಡೆದು ವಿಜ್ಞಾನಿಗಳೆಲ್ಲಾ ಸಂತೃಪ್ತಿಯ ,ಸಫಲತೆಯ ಭಾವವನ್ನನುಭವಿಸುತ್ತಿದ್ದರೆ ,ಯೋಜನೆಯ ಅಸಫಲತೆಯನ್ನೆ ಬಯಸುತ್ತಿದ್ದ ಬುದ್ಧಿಜೀವಿಗಳು ಹೇಪು ಮೋರೆಯಲ್ಲಿ ದೇಶದ ಸಂತೋಷದಲ್ಲಿ ಪಾಲ್ಗೊಳ್ಳಲೂ ಆಗದೆ , ವಿಫಲತೆಯನ್ನೆ ನೆಪ ಮಾಡಿಕೊಂಡು ಸನಾತನ ಧರ್ಮವನ್ನು ನಿಂದಿಸಿಲು ಮಾಡಿಕೊಂಡಿದ್ದ ತಯಾರಿಯು ವಿಫಲಗೊಂಡಿದ್ದಕ್ಕಾಗಿ ಶೋಕಪಡುತ್ತಿದ್ದರು...

ಇಸ್ರೋ ಮತ್ತು ತಿರುಪತಿ ತಿಮ್ಮಪ್ಪ ಭಾರತೀಯ ವಿಜ್ಞಾನಿಗಳು ಅತ್ತ ಚಂದ್ರಯಾನ-3 ಯೋಜನೆಯ ಅಂತಿಮ ಹಂತದ ಪರೀಕ್ಷೇಗಳನ್ನು ನಡೆಸುತ್ತಾ ಯೋಜನ...

ಶ್ರೀ ಮಹಿಪತಿ ದಾಸರ ಆರಾಧನಾ ವಿಶೇಷTitle :  Mayadolu Biddavarige Mahipatidasara Sandesha :Todaka Harava Madikolliro  | ಮಾಯದೊಳು...
03/12/2021

ಶ್ರೀ ಮಹಿಪತಿ ದಾಸರ ಆರಾಧನಾ ವಿಶೇಷ
Title : Mayadolu Biddavarige Mahipatidasara Sandesha :Todaka Harava Madikolliro | ಮಾಯದೊಳು ಬಿದ್ದವರಿಗೆ ಮಹಿಪತಿದಾಸರ ಸಂದೇಶ : ತೊಡಕ ಹರವ ಮಾಡಿಕೊಳ್ಳಿರೋ
Lyrics: Shri Mahipatidasaru / ಶ್ರೀಮಹಿಪತಿದಾಸರು
Discourses by : Vid Srinidhi Acharya Pyati / ವಿದ್ವಾನ್ ಶ್ರೀನಿಧಿ ಆಚಾರ್ಯ ಪ್ಯಾಟಿ
Sung By : Chi. Sarwajith / ಚಿ. ಸರ್ವಜಿತ್
https://youtu.be/zXF0yjcLn54
▶ JnanaSeve : Smt Usha Rao

JnanaGamya Prasarana presents "Todaka Harava Madikolliro" Discourses by Vid Srinidhi Acharya Pyati, Sung By : Chi. Sarwajith 𝄂 A Spiritual Discourses Serie...

ಕಾರ್ತಿಕ ಮಾಸದ ಶುಕ್ಲಪಕ್ಷದ ದಶಮೀ ವಿಜಯದಾಸರ ಆರಾಧನಾ ಪರ್ವಕಾಲ. ಸಮಕಾಲೀನ ಸಮಸ್ಯೆಗಳಲ್ಲಿ ಮಾನಸಿಕ ಖಿನ್ನತೆಯು ಅತಿ ದೊಡ್ಡದು. ಅದರ ನಿವಾರಣೆ ಆಧ್...
13/11/2021

ಕಾರ್ತಿಕ ಮಾಸದ ಶುಕ್ಲಪಕ್ಷದ ದಶಮೀ ವಿಜಯದಾಸರ ಆರಾಧನಾ ಪರ್ವಕಾಲ. ಸಮಕಾಲೀನ ಸಮಸ್ಯೆಗಳಲ್ಲಿ ಮಾನಸಿಕ ಖಿನ್ನತೆಯು ಅತಿ ದೊಡ್ಡದು. ಅದರ ನಿವಾರಣೆ ಆಧ್ಯಾತ್ಮ ನೆಲೆಯಲ್ಲಿ ಮಾತ್ರ ಸಾಧ್ಯ. ಅದನ್ನು ಹೇಗೆ ಸಾಧಿಸಬಹುದು ಎಂದು ವಿಜಯದಾಸರು ಈ ಸುಳಾದಿಯಲ್ಲಿ ನಮಗೆ ತಿಳಿಸಿಕೊಟ್ಟಿದ್ದಾರೆ. ಅವರ ಆರಾಧನಾ ಪರ್ವಕಾಲದಲ್ಲಿ ಅದರ ಕುರಿತಾದ ಲೇಖನ. ಭಾಗ-2

ಈ ಲೇಖನದ ಮೊದಲನೇ ಭಾಗವನ್ನು ಇಲ್ಲಿ ಓದಬಹುದು
https://srinidhipyati.blogspot.com/2020/11/paaqaagaaeva-eapapei-ajzaagaauaa.html

ವಿಜಯದಾಸರ ಸಪ್ನ ಸುಳಾದಿಯ ವಿಮರ್ಶೆಯನ್ನು ಇಲ್ಲಿ ಓದಬಹುದು
https://srinidhipyati.blogspot.com/2019/11/blog-post.html

ಮಾನಸಿಕ ಖಿನ್ನತೆಗೆ ವಿಜಯದಾಸರ ಪರಿಹಾರ -2 ಪರಮಾತ್ಮನ ಅಧೀನರಾದಮೇಲೆ ನಮ್ಮ ಜೀವನದ ಭಾರವನ್ನೆಲ್ಲಾ ಪರಮಾತ್ಮನೆ ಹೊರುತ್ತಾನೆ ಎಂಬ ನಂಬಿ...

Address


Website

Alerts

Be the first to know and let us send you an email when Jijñāsā posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share