ಮಣ್ಣಿನಲ್ಲಿ ಸಿದ್ದವಾದ ವಿಶ್ವಕಪ್
ನಾಳೆ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೆ ಇಡೀ ದೇಶವೇ ಕಾತುರವಾಗಿದ್ದು ವಿವಿಧ ರೀತಿಯಲ್ಲಿ ಶುಭ ಹಾರೈಕೆಗಳನ್ನು ಜೊತೆಗೆ ನಮ್ಮ ಧಾರವಾಡ ಕಲಾವಿದರೊಬ್ಬರು ಮಣ್ಣಿನಲ್ಲಿ ವಿಶ್ವಕಪ್ ತಯಾರಿಸುವುದರ ಮೂಲಕ ವಿಶಿಷ್ಟವಾಗಿ ಹಾರೈಸಿದ್ದಾರೆ. ಪರಿಸರ ಸ್ನೇಹಿ ಮಂಜುನಾಥ್ ಹಿರೇಮಠ್ ಅವರು ೨೩ ಸೆ ಮೀ ನ ಉದ್ದದ್ದ ವಿಶ್ವಕಪ್ ಸಿದ್ಧಪಸಿ ಎಲ್ಲರ ಗಮನ ಸೆಳೆದಿದ್ದಾರೆ.
#rightklicknews
#rightklickkannada
#hublidarwadnews
#WorldCup23
#rightclick
#cricketlover
#FinalMatch
ಭಾರತ ವಿಶ್ವಕಪ್ ಗೆಲುವಿಗೆ ಮಹೇಶ ಟೆಂಗಿನಕಾಯಿ ಹಾರೈಕೆ
ನಾಳೆ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆಲವು ಸಾಧಿಸಲಿದೆ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಶುಭ ಹಾರೈಸಿದರು.
ನಗರದ ನೆಹರು ಮೈದಾನದಲ್ಲಿ ಅಭಿಮಾನಿಗಳೊಂದಿಗೆ ಕ್ರಿಕೆಟ್ ಆಡುವ ಮೂಲಕ ಬೆಂಬಲ ಸೂಚಿಸಿ, ಭಾರತ ಈಗಾಗಲೇ ೧೦ ಪಂದ್ಯಗಳನ್ನು ಗೆದ್ದಿದೆ ನಾಳಿನ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲೂ ಜಯಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
#rightklicknews
#hublidarwadnews
#rightclick
#rightklickkannada
#WorldCup23
#FinalMatch
#cricket
ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ….
ಬಿಜೆಪಿಯ ಹಿರಿಯ ಮತ್ತು ಕಿರಿಯ ಶಾಸಕರ ಸರ್ವಾನುಮತದಿಂದ ವಿರೋಧ ಪಕ್ಷದ ನಾಯಕರಾಗಿ ಆರ್. ಅಶೋಕ್ ಅವರನ್ನು ಆಯ್ಕೆಮಾಡಲಾಗಿದೆ. ಈ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಆರ್. ಅಶೋಕ್ ಅವರ ನಾಯಕತ್ವದಲ್ಲಿ ಬರುವ ಚಳಿಗಾಲ ಅಧಿವೇಶನದಲ್ಲಿ ಸಮರ್ಥವಾಗಿ ಮಾತನಾಡುತ್ತೇವೆ ಎಂದರು.ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ವಾಗಿದ್ದು ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ಪ್ರಶ್ನೆ ಮಾಡಲಾಗುತ್ತದೆ ಎಂದು ಹೇಳಿದರು.
#rightklicknews
#hublidarwadnews
#rightclick
#BJPGovernment
#bjpkarnataka
#RAshok
#BasavarajaBommai
#Congress
#KarnatakaCongress
ಭಾರತೀಯ ರೈಲ್ವೆ ವತಿಯಿಂದ ೧೧ ದಿನಗಳ ಗುಜರಾತ್ ಪ್ರವಾಸಿತಾಣಗಳ ವಿಶೇಷ ಪ್ಯಾಕೇಜ್
ನಗರದಲ್ಲಿಂದು ಟ್ರಾವಲ್ ಟೈಮ್ ನ ಪ್ರಧಾನ ವ್ಯವಸ್ಥಾಪಕರಾದ ವಿಘ್ನೇಶ ಜಿ. ಮಾತನಾಡಿ ವಿಶೇಷ ಪ್ಯಾಕೇಜ್ ನಲ್ಲಿ ಗುಜರಾತ್ ಪ್ರಸಿದ್ಧ ತೀರ್ಥಕ್ಷೇತ್ರಗಳಾದ ದ್ವಾರಕಾ, ಸೋಮನಾಥ ಜ್ಯೋತಿರ್ಲಿಂಗ, ನಿಷ್ಕಳಂಕ ಮಹಾದೇವ ಸಮುದ್ರ ದೇವಸ್ಥಾನ, ಉದಯಪುರ, ನಾಥ್, ಕನ್ ಕೊರಳಿ, ಸರ್ದಾರ್ ವಲ್ಲಭಾಯಿ ಪಟೇಲ್ ಏಕತಾ ಪ್ರತಿಮೆ ಸ್ಥಳಗಳಿಗೆ ಭಾರತೀಯ ರೈಲ್ವೆ ಮತ್ತು ಟ್ರಾವೆಲ್ ಟೈಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಟೈರಿಸ್ಂ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸ್ಲೀಪರ್ ಕೋಚ್ ಬಡ್ಜೆಟ್ ೧೯,೦೫೦, ಸ್ಲೀಪರ್ ಕೋಚ್ ಎಕಾನಮಿ ೨೩,೯೭೦ ರೂ., ತ್ರೀ ಎಸಿ ಕಂಫರ್ಟ್ ೩೨,೪೦೦ ರೂ., ಟೂ ಎಸಿ ಸ್ಟ್ಯಾಂಡರ್ಡ್ ೪೫,೪೦೦ ರೂ. ಪ್ಯಾಕೇಜ್ ಗಳೊಂದಿಗೆ ಆನಲೈನ್ ಬುಕ್ಕಿಂಗ್ ಗಾಗಿ www.railtourism.com, ಬುಕ್ಕಿಂಗ್ ಗಾಗಿ ೯೦೧೫೫ ೦೦೨೦೦ ಸಂಪರ್ಕಿಸಬಹುದು ಎಂದು ತಿಳಿಸಿದರು.
#rightklicknews
#hublidarwadnews
#rightclick
#indianrailways
#pakeges
#travel
#journey
#gujarat
#tourist
ಗ್ರಾಮೀಣ ಸಹಕಾರಿ ಸಪ್ತಾಹ…
ಗ್ರಾಮೀಣ ಭಾಗದಲ್ಲಿ ಸಹಕಾರಿ ಸಪ್ತಾಹವನ್ನು ಬಲಪಡಿಸುವ ಉದ್ದೇಶದಿಂದ ಸಚಿವ ಸಂತೋಷ ಲಾಡ್ ಅವರ ಆಶಯದಂತೆ ಕಲಘಟಗಿ ಪಟ್ಟಣದಲ್ಲಿ ಬೃಹತ್ ಸಹಕಾರಿ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಚಿವ ಸಂತೋಷ ಲಾಡ್ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬೆಳಗಾವಿ ವಲಯದ ಜಂಟಿ ನಿಬಂಧಕರಾದ ಸುರೇಶ್ ಗೌಡ ಪಾಟೀಲ್, ಸಹಕಾರಿ ಕ್ಷೇತ್ರಗಳ ನಿರ್ದೇಶಕರಾದ ಮಲ್ಲಿಕಾರ್ಜುನ ಹೊರಕೇರಿ, ಕೆಸಿಸಿ ಬ್ಯಾಂಕಿನಮುಖ್ಯಾಧಿಕಾರಿ ಕೆ.ಮುನಿಯಪ್ಪ ಮತ್ತು ಸಚಿವ ಸಂತೋಷ್ ಲಾಡ್ ಅವರ ಆಪ್ತ ಸಹಾಯಕರಾದ ಸೋಮಶೇಖರ್ ಬೆನ್ನುರ್, ಹರಿಶಂಕರ್ ಮಠದ್, ಹಾಗೂ ಬಾಳು ಖಾನಾಪುರ ಉಪಸ್ಥಿತರಿದ್ದರು.
#rightklicknews
#rightclick
#hublidarwadnews
#hublidarwad
#santoshalad
#sahakaarisaptahaa
ಬರ ಪರಿಹಾರ ಶೀಘ್ರವಾಗಿ ಬಿಡುಗಡೆಗೊಳಿಸಿ:ಆಲ್ಕೋಡ್ ಹನುಮಂತಪ್ಪ
ರಾಜ್ಯದಲ್ಲಿ ಭೀಕರ ಬರಗಾಲದ ಹಿನ್ನಲೆಯಲ್ಲಿ ಬರಪೀಡತ ಪ್ರದೇಶಗಳಿಗೆ ಸರ್ಕಾರ ಹೆಕ್ಟರ್ ಜಮೀನಿಗೆ ೩೦ರಿಂದ ೪೦ ಸಾವಿರ ಪರಿಹಾರ ಧನವನ್ನು ನೀಡಬೇಕು ಎಂದು ಮಾಜಿ ಸಚಿವರಾದ ಆಲ್ಕೋಡ್ ಹನುಮಂತಪ್ಪ ಒತ್ತಾಯಮಾಡಿದರು.
ಕುಂದಗೋಳ ತಾಲೂಕಿನ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸರ್ಕಾರ ಬರದ ಕುರಿತು ಗಮನ ಹರಸಿ ಅಗತ್ಯವಾದ ಪರಿಹಾರ ಒದಗಿಸಬೇಕು.ಬೆಳೆವಿಮೆ ತುಂಬಿದ ರೈತರಿಗೆ ಇಲ್ಲಿಯವರೆಗೆ ಯಾವುದೇ ರೀತಿಯಲ್ಲಿ ಹಣ ಬಂದಿಲ್ಲ ಕೂಡಲೇ ವಿಮಾ ಕಂಪನಿಗಳು ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
#rightklicknews
#nammahubballidarwad
#rightclick
#StateGovernment
#KarnatakaGovernment
#KarnatakaCongress
ಧಾರವಾಡದಲ್ಲಿ ನ.20ರಿಂದ “ವಿಶ್ವಧರ್ಮ ಪ್ರವಚನ”ಕಾರ್ಯಕ್ರಮ
ಧಾರವಾಡದ ಪ್ರವಚನ ಸಮಿತಿಯಿಂದ ನವಂಬರ ೨೦ ರಿಂದ ಲಿಂಗಾಯತ ಟೌನ್ ಹಾಲ್ ನಲ್ಲಿ ಪ್ರತಿದಿನ ಸಾಯಂಕಾಲ ೬:೩೦ರಿಂದ ರಾತ್ರಿ ೮ರ ವರೆಗೆ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿವಶರಣ ಕಾಲಬಶೆಟ್ಟರ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬೈಲೂರು ನಿಷ್ಕಲ ಮಂಟಪ ಹಾಗೂ ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿಗಳಿಂದ ವಿಶ್ವಧರ್ಮ ಪ್ರವಚನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಭಕ್ತರ ಪುಣ್ಯ ಪ್ರವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಂದು ತಿಳಿಸಿದರು.
#rightklicknews
#nammahubballidarwad
#hublidharwadnews
#nijagunanandaswamiji
ವಿದ್ಯಾರ್ಥಿ ವಸತಿ ನಿಲಯಕ್ಕೆ ಭೇಟಿ ನೀಡಿದ ಸಚಿವ ಎಚ್.ಸಿ.ಮಹದೇವಪ್ಪ ಭೇಟಿ…!
ವಿದ್ಯಾನಗರಿ ಧಾರವಾಡಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಗೌರಿ ಶಂಕರ ವಿದ್ಯಾರ್ಥಿ ನಿಲಯದಲ್ಲಿ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗಾಗಿ ಒದಗಿಸಲಾದ ಸೌಲಭ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.ಇನ್ನು ತಮ್ಮ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಸಚಿವರ ಬಳಿ ಮನವಿಯನ್ನು ಸಲ್ಲಿಸಿದರು.
H C Mahadevappa Karnataka Congress Hubli-Dharwad
#rightklicknews
#nammahubballidarwad
#hublidharwadnews
#hcmahadevappa
#darwad
#hostel
ಸಚಿವರಿಂದ ಬರ ಪರಿಶೀಲನೆ;ರೈತರಿಂದ ಅಹವಾಲು ಸ್ವೀಕರಿಸಿ ಹಿಂದಿರುಗಿದ ಸಚಿವ
ನವಲಗುಂದ:ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿದ್ದು, ಜಿಲ್ಲೆಯಾದ್ಯಂತ ಬರ ಪರಿಶೀಲನೆಗೆ ಮುಂದಾಗಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮಳೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಬರ ಸಮೀಕ್ಷೆ ವೇಳೆ ಮಳೆಬಂದ ಪರಿಣಾಮದಿಂದ ಪರಶೀಲನೆಯನ್ನು ಮೊಟಕುಗೊಳಿಸಿ ಗ್ರಾಮಪಂಚಾಯತಿಯಲ್ಲಿ ಗ್ರಾಮಸ್ಥರು ಹಾಗೂ ರೈತರ ಅಹವಾಲುಗಳನ್ನು ಸ್ವೀಕರಿಸಿದರು.
ಸಚಿವ ಸಂತೋಷ ಲಾಡ್,ಶಾಸಕ ಕೋನರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
#rightklicknews
#nammahubballidarwad
#hublidharwadnews
#rightklicknews
#santoshalad
#baraparashilane
#farmers
ಕಳ್ಳರ ಚಲನವಲನ ಕ್ಯಾಮರಾದಲ್ಲಿ ಸೆರೆ…!
ನವಲಗುಂದ:ನಗರದ ಹಲವುಕಡೆಗಳಲ್ಲಿ ಕಳ್ಳರ ಹಾವಳಿ ಜೋರಾಗಿದ್ದು,ಮನೆಯ ಮುಂದಗಡೆಗಲ್ಲಿ ಕಳ್ಳತನಕ್ಕೆ ಯತ್ನಿಸಿದ ದೃಶ್ಯಗಳು ಸಿ ಸಿ ಟಿ ವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮೂಲದ ರವಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಅವನೊಂದಿಗೆ ೩ ಜನರ ತಂಡ ಇದೆ ಎಂಬ ಮಾಹಿತಿ ಕಲೆ ಹಾಕಿದ್ದಾರೆ.
#rightklicknews
#nammahubballidarwad
#hublidharwadnews
#CCTVCamera
#CCTVFootage
#Crime
#CCTVFootage
ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ.
ಧಾರವಾಡ:ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಯಲ್ಲಿದ್ದ ಟಿವಿ ಫ್ರಿಡ್ಜ್ ಸೇರಿದಂತೆ ಇನ್ನಿತರ ದಿನ ಬಳಕೆ ವರ್ತುಗಳು ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಸಂಭವಿಸಿದೆ.
ಸುಲೇಮಾನ್ ಮೊರಬ ಎಂಬುವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದೆ ಇದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
#rightklicknews
#nammahubballidarwad
#hublidharwadnews
#darwad
ಪಾದಯಾತ್ರೆಯ ಯಾತ್ರಾರ್ಥಿಗಳನ್ನ ಭೇಟಿ ಮಾಡಿದ ಶಾಸಕ….!
ನವಲಗುಂದ:೧೧ನೇ ವರ್ಷದ ಕಾರ್ತಿಕ ಮಾಸದ ಪ್ರಯುಕ್ತವಾಗಿ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಪಾದಯಾತ್ರೆಯನ್ನು ಕೈಗೊಳ್ಳಲಾಯಿತು.
ಶಿರಕೋಳ ಗ್ರಾಮದಿಂದ ಪಂಢರಾಪುರಕ್ಕೆ ತೆರಳುವ ದಿಂಡಿ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎನ್ ಎಚ್ ಕೋನರೆಡ್ಡಿ ಪಾದಯಾತ್ರೆ ಮುಳ್ಕ ತೆರಳುವ ಭಕ್ತರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮದ ಗುರುಹಿರಿಯರು ಭಕ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
#rightklicknews
#nammahubballidarwad
#hublidharwadnews
#UpdateNews
#pandaripur
#Padayatre
#navalagunda
ಲೋಕಸಭಾ ಚುನಾವಣಿಗೆ ಮರಾಠ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಒತ್ತಾಯ….!
ಹುಬ್ಬಳ್ಳಿ:ಮುಂಬರುವ ಲೋಕಸಭಾ ಚುನಾವಣಿಗೆ ಎರಡು ರಾಷ್ಟ್ರೀಯ ಪಕ್ಷಗಳು ಮರಾಠಾ ಸಮುದಾಯಕ್ಕೆ ಕನಿಷ್ಠ ೬ ಕ್ಷೇತ್ರಗಳಿಗೆ ಟಿಕೆಟ್ ನೀಡಬೇಕು ಎಂದು ಮರಾಠ ಮಹಾಒಕ್ಕೂಟದ ರಾಜ್ಯಧ್ಯಕ್ಷ ವಿ.ಎಸ್.ಶಾಮಸುಂದರ್ ಹೇಳಿದರು.
ನಾಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ ಚುನಾವಣಿಯಲ್ಲಿ ಬಿಜೆಪಿಗೆ ನಮ್ಮ ಶಕ್ತಿಯನ್ನು ತೋರಿಸಲಾಗಿದೆ. ಈ ಬಾರಿ ನಮ್ಮ ಸಮುದಾಯಕ್ಕೆ ಟಿಕೆಟ್ ನಿಡದೆ ಹೋದಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕ್ಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಉತ್ತರ ಕರ್ನಾಟಕ,ಬೀದರ್, ಬಾಗಲಕೋಟೆ ಕಡೆಗಳಲ್ಲಿ ಕಾಂಗ್ರೆಸ್ ಧಾರವಾಡ, ಬೆಳಗಾವಿ ಹಾಗೂ ಚಿಕ್ಕೋಡಿ, ಕ್ಷೇತ್ರಗಳಲ್ಲಿ ರಾಷ್ಟ್ರಿಯ ಪಕ್ಷಗಳಿಗಾಗಿ ದುಡಿದವರನು ಗುರುತಿಸಿ ಟಿಕೆಟ್ ನೀಡಬೇಕು.ಟಿಕೆಟ್ ನೀಡದೆ ಹೋದಲ್ಲಿ ಬಂಡಾಯದ ಬಿಸಿ ಮುಟ್ಟುತ್ತದೆ ಎಂದು ವಾರ್ನಿಗ್ ನೀಡಿದರು.
Bharatiya Janata Party (BJP) Karnataka Congress BJP
#rightklicknews
#nammahubballidarwad
#hublidharwadnews
#UpdateNews
#BharatiyaJanataParty
#KarnatakaCongress
ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ….!
ಕಲಘಟಗಿ:ಕರ್ನಾಟಕ ರಾಜ್ಯ ೫೦ವರ್ಷದ ಸಂಭ್ರಮಾಚರಣಿಯಲ್ಲಿ ತಾಲೂಕಿನ ಮುಕ್ಕಲ ಗ್ರಾಮದ ಅಂಬೇಡ್ಕರ ಪ್ರೌಢಶಾಲೆ ಮೈದಾನದಲ್ಲಿ ಹೊನಲು ಬೆಳಕು ಕಬಡ್ಡಿ ಪಂದ್ಯಾವಳಿ ನಡೆಸಲಾಯಿತು.
೪೫ಕೆಜಿ ತೂಕದ ಒಳಗಿನ ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗಿತ್ತು.ಇನ್ನು ತಾಲೂಕಿನ ವಿವಿಧ ಕಡೆಗಳಿಂದ ಕಬಡ್ಡಿ ತಂಡಗಳು ಭಾಗವಹಿಸಿದ್ದವು.
#rightklicknews
#nammahubballidarwad
#hublidharwadnews
#kabaddi
#sport
#kabaddiplayer
ಸರ್ಕಾರದಿಂದ ಸಿಗುವ ಸೌಲತ್ತು ನೀಡುವುದಾಗಿ ಭರವಸೆ ನೀಡಿದ ಶಾಸಕ…!
ನವಲಗುಂದ:ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯವ್ಯಕ್ತಿಗೆ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ನೀಡುವುದಾಗಿ ಶಾಸಕ ಎನ್ ಹೆಚ್ ಕೋನರೆಡ್ಡಿ ಅಭಯವನ್ನು ನೀಡಿದ್ದಾರೆ.
ತಮ್ಮ ಗೃಹ ಕಚೇರಿಗೆ ಆಗಮಿಸಿದ ವೃದ್ಧರ ಅನಾರೋಗ್ಯದಿಂದ ಬಳಲುತ್ತಿದ್ದು ಅರವ ಅಹವಾಲನ್ನು ಸ್ವೀಕರಿಸಿ ಸರ್ಕಾರ ನೀಡುವ ಸೌಲಭ್ಯವನ್ನು ಪ್ರಾಮಾಣಿಕವಾಗಿ ಕೊಡಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
#rightklicknews
#nammahubballidarwad
#hublidharwadnews
#UpdateNews
#congressgovernment
#cmsiddaramaiah
#health
#nhkonareddy
ದಲಿತ ಸಂಘರ್ಷ ಸಮಿತಿ ಜಿಲ್ಲಾ ಮಟ್ಟದ ಸಮಾವೇಶ.....!
ಧಾರವಾಡ:ಡಿ.೭ ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಶಂಕರ ಮಾವಳ್ಳಿ ಮಾಹಿತಿ ನೀಡಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜದ ಜಾಗೃತಿಗಾಗಿ ಡಾ. ಬಿ ಆರ್ ಅಂಬೇಡ್ಕರ್ ಅವರ ವಿಚಾರಗಳು ಹಾಗು ಸಂವಿಧಾನದ ಆಶಯಗಳನ್ನುಉಳಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಸಮಾವೇಶ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
#rightklicknews
#nammahubballidarwad
#hublidharwadnews
#UpdateNews
#PressMeet
#darwadnews
ಪುರಸಭೆಯಲ್ಲಿ ಅಭಿವೃದ್ಧಿ ಕುರಿತು ಸಭೆ..
ಅಣ್ಣಿಗೇರಿ:ಪಟ್ಟಣದ ಪುರಸಭೆ ಕಚೇರಿಯಲ್ಲಿ ಸಾಮಾನ್ಯಸಭೆಯು ಮೆಹಬೂಬಿ ನವಲಗುಂದ ಅವರ ಅದ್ಯಕ್ಷತೆಯಲ್ಲಿ ಸಭೆ ಜರುಗಿತು.
ಒಳ ಚರಂಡಿ,ಬೀದಿದೀಪ,ರಸ್ತೆ ಕುಡಿಯುವ ನೀರಿನ ವ್ಯವಸ್ಥೆ ಇನ್ನಿತರ ಮೂಲಭೂತ ಸೌಕರ್ಯಗಳ ಕುರಿತು ಮಾಹಿತಿಗಳನ್ನು ಪಡೆಯಲಾಯಿತು. ಹಲಾವಾರು ಸಮಸ್ಯೆಗಳ ಕುರಿತು ಸಾರ್ವಜನಿಕರು ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು.
#rightklicknews
#nammahubballidarwad
#hublidharwadnews
#meeting
#pattanapanchayat
#UpdateNews
ರೈತರಿಗೆ ಶೀಘ್ರದಲ್ಲಿ ಬರ ಪರಿಹಾರ ಬಿಡುಗಡೆಗೆ ಆಗ್ರಹ…!
ಧಾರವಾಡ:ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ವೈಫಲ್ಯದಿಂದ ಬರಗಾಲ ಛಾಯೆ ಆವರಿಸಿದ್ದು ಸರ್ಕಾರ ಶೀಘ್ರದಲ್ಲಿ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡ್ರ ಆಗ್ರಹಿಸಿದರು.
ಧಾರಾವಾಡದಲ್ಲಿ ಸುದ್ದಿಘೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರಗಳಿಗೆ ರೈತರ ಕುರಿತು ಯಾವುದೇ ಕಾಳಜಿ ಇಲ್ಲ ಬೆಳೆಹಾನಿಯಿಂದ ರೈತರು ಬದಕು ಕಷ್ಟಕರವಾಗಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತವಾದ ಬರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
#rightklicknews
#nammahubballidarwad
#hublidharwadnews
#congressgovernment
#BJPGovernment
#rightklicknews
#formers
#agriculture
ಹಸುಗಳ ಹರಾಜು ಪ್ರಕ್ರಿಯೆಗೆ ಬಜರಂಗದಳ ವಿರೋಧ..!
ಧಾರವಾಡ:ಕೃಷಿವಿಶ್ವವಿದ್ಯಾಲಯದ ಹೈನುಗಾರಿಕೆ ಘಟಕದಲ್ಲಿನ ಹಸುಗಳ ಹರಾಜು ಪ್ರಕ್ರಿಯೆಗಳನ್ನು ನಿಲ್ಲಿಸುವಂತೆ ಬಜರಂಗದಳ ಕಾರ್ಯಕರ್ತರು ಮನವಿಯನ್ನು ಸಲ್ಲಿಸಿದರು.
ಕೃಷಿ ವಿಶ್ವವಿದ್ಯಾಲಯಕ್ಕೆ ಆಗಮಿಸಿದ ವಿಶ್ವ ಹಿಂದೂ ಬಜರಂಗ ದಳ ಕಾರ್ಯಕರ್ತರು ಕುಲಪತಿಗಳು ಹಾಗೂ ಸಂಬಂದಿತ ಅಧಿಕಾರಿಗಳಿಗೆ ಬಹಿರಂಗ ಹರಾಜು ಪ್ರಕ್ರಿಯೆ ತಡೆಯಬೇಕು.ರಾಜ್ಯದಲ್ಲಿ ಗೋ ಹತ್ಯೆನಿಷೇದಕಾಯ್ದೆ ಜಾರಿಯಲ್ಲಿದೆ. ಒಂದು ಕೋಮಿನವರು ರೈತರ ಹೆಸರಿನಲ್ಲಿ ಗೋವುಗಳನ್ನು ಖರೀದಿಸಿ ಕಸಾಯಿಖಾನೆಗೆ ಸಾಗಿಸುತ್ತಾರೆ ಎಂದು ಆರೋಪಿಸಿದರು.
ಗೋವುಗಳನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ಸಾಕಲು ಸಾದ್ಯವಿಲ್ಲಾಎಂದಾದರೆ ಉಚಿತವಾಗಿ ಗೋಶಾಲೆಗಳಿಗೆ ನೀಡಬೇಕು ಈ ರೀತಿ ಬಹಿರಂಗ ಹರಾಜು ಪ್ರಕ್ರಿಯೆ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಶ್ವಹಿಂದೂಪರಿಷತ್ ಬಜರಂಗದಳದ ಸಂಚಾಲಕ ಶಿವಾನಂದ ಸತ್ತಿಗೇರಿ, ಜಿಲ್ಲಾ ಸಂಚಾಲಕ ಸಿದ್ದು ಹಿರೇಮಠ,ನಗರ ಸಂಚಾಲಕ ಗುರುಶಾಂತ ಹಿರೇಮಠ
ಗ್ರಾಪಂ ಅಧ್ಯಕ್ಷ,ಉಪಾಧ್ಯಕ್ಷರಿಗೆ ಕಾರ್ಯಾಗಾರ….!
ಕುಂದಗೋಳ:ಎರಡನೇ ಅವಧಿಗೆ ನೂತನವಾಗಿ ಅಧಿಕಾರವಹಿಸಿಕೊಂಡ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಪಟ್ಟಣದ ತಾಲೂಕ ಪಂಚಾಯತಿ ಸಾಮರ್ಥ್ಯ ಸೌಧದಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಕರ್ತವ್ಯ ಜವಾಬ್ದಾರಿ ಮತ್ತು ಪಂಚಾಯತಿ ಮಟ್ಟದ ಕಾರ್ಯಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು.
ಗ್ರಾಮಸಭೆ, ನರೇಗಾಕಾಮಗಾರಿ,ಕಾಮಗಾರಿ ಅನುಷ್ಠಾನ,ತುರ್ತುಸಭೆ,ಸೇರಿದಂತೆ ಗ್ರಾಮ ಪಂಚಾಯತಿ ಮಟ್ಟದ ನಾನಾ ರೀತಿಯ ಮಜಲುಗಳನ್ನು ತಿಳಿಸುವ ಕಾರ್ಯ ನಡೆಯಿತು.
ತಾಲೂಕ ಮಟ್ಟದ ಪ್ರತಿ ಗ್ರಾಮಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿಗಳನ್ನು ಪಡೆದುಕೊಂಡರು.
Gramapanchayath
#rightklicknews
#nammahubballidarwad
#hublidharwadnews
#gramapanchayath
#meetings
#grampanchayatworks