HemaLoka

HemaLoka ಸಂಚಾರಿ, ಆಸ್ತಿಕ, ಪರಿಸರ ಪ್ರಿಯ, ತಿಂಡಿಪೋತ. Level 8 Google Local Guide (>2.5cr pic views), free-spirited

25/06/2024

ನಮಸ್ಕಾರ🙏🏽😊
ಆನ್ಲೈನ್ ಬುಕ್ಕಿಂಗ್ ಇಲ್ಲದೇ ತಿರುಮಲ ಯಾತ್ರೆಯನ್ನು ಅಚ್ಚುಕಟ್ಟಾಗಿ ಮಾಡಿ ಬರಲು ಅನುಸರಿಸಬೇಕಾದ ಸರಳ ಪ್ರಕ್ರಿಯೆಗಳ ಸರಳವಾದ ವಿವರಣೆಯೊಂದಿಗೆ, ಶ್ರೀವಾರಿ ಮೆಟ್ಟಿಲುಗಳ ಮೂಲಕ ಒಂದು ವರ್ಚುವಲ್ ತಿರುಮಲ ಯಾತ್ರೆ ಮಾಡಿ ಬರೋಣ ಬನ್ನಿ😊 ಯೂಟ್ಯೂಬಲ್ಲಿ ನನ್ನ ಚಾನೆಲ್ HemaLokaದಲ್ಲಿ ಪೂರ್ಣ ವ್ಲಾಗ್ ಪ್ರಕಟಿಸಿದ್ದೇನೆ. ನಿಮಗೆ ಈ ವ್ಲಾಗ್ ಇಷ್ಟವಾದಲ್ಲಿ ದಯವಿಟ್ಟು ನನ್ನ ಚಾನೆಲ್ಲಿಗೆ subscribe ಮಾಡಿ, ಮತ್ತಷ್ಟು ಉತ್ತಮ ಕಂಟೆಂಟ್ ಮಾಡಲು ಆಶೀರ್ವದಿಸಿ😊🙏🏽
This short vlog could be very helpful for those who were unable to pre-book tickets online but still want to have a systematic Tirumala pilgrimage. This vlog explains simple processes that should be followed to ensure a smooth pilgrimage and also includes a virtual Tirumala Yaatrae.

ದಾವಣಗೆರೆ ದುರ್ಗಮ್ಮನ ಜಾತ್ರೆ ಸಮಯ ಇದು. ನನ್ನ ಇತ್ತೀಚಿನ ವ್ಲಾಗೊಂದ್ರಲ್ಲಿ ದಾವಣಗೆರೆ ಒಂದಷ್ಚು ಆಸಕ್ತಿಕರವಾದ ಹೋಟೆಲುಗಳನ್ನ ಪರಿಚಯಿಸ್ಸಿಕೊಂಡು...
18/03/2024

ದಾವಣಗೆರೆ ದುರ್ಗಮ್ಮನ ಜಾತ್ರೆ ಸಮಯ ಇದು.
ನನ್ನ ಇತ್ತೀಚಿನ ವ್ಲಾಗೊಂದ್ರಲ್ಲಿ ದಾವಣಗೆರೆ ಒಂದಷ್ಚು ಆಸಕ್ತಿಕರವಾದ ಹೋಟೆಲುಗಳನ್ನ ಪರಿಚಯಿಸ್ಸಿಕೊಂಡು ಹೋಗಿದ್ದೇನೆ. ದುರ್ಗಮ್ಮನ ದೇವಸ್ಥಾನದೊಂದಿಗೆ ಈ ವ್ಲಾಗು ಆರಂಭಗೊಂಡಿದ್ದು, ನಂತರದಲ್ಲಿ ನಗರದ ಒಂದಷ್ಚು ಜನಪ್ರಿಯ ಹೋಟ್ಲುಗಳತ್ತ ಸಾಗಿದೆ.

ದಾವಣಗೆರೆಗೆ 12 ವರ್ಷಗಳಿಂದಲೂ ಬರುತ್ತಲೇ ಇರುವ ನಾನು ಈ ಊರಿನ ಸಾಕಷ್ಟು ಜಾಗಗಳಲ್ಲಿ ...

ನಮಸ್ಕಾರ!  ಊರು ಸುತ್ತಲು ಹೇಳಿ ಮಾಡಿಸಿದಂತಿರುವ ಚೆನ್ನೈನ ಅಧ್ಯಾಯವನ್ನು ನನ್ನ ವ್ಲಾಗಿಂಗ್ ಪಯಣದಲ್ಲಿ ಇದೀಗ ತಾನೇ ಆರಂಭಿಸಿದ್ದೇನೆ. ಈ ಊರಿನ ಸಂಸ...
21/02/2024

ನಮಸ್ಕಾರ! ಊರು ಸುತ್ತಲು ಹೇಳಿ ಮಾಡಿಸಿದಂತಿರುವ ಚೆನ್ನೈನ ಅಧ್ಯಾಯವನ್ನು ನನ್ನ ವ್ಲಾಗಿಂಗ್ ಪಯಣದಲ್ಲಿ ಇದೀಗ ತಾನೇ ಆರಂಭಿಸಿದ್ದೇನೆ. ಈ ಊರಿನ ಸಂಸ್ಕೃತಿ, ಪರಂಪರೆ ಮತ್ತು ಪಾಕಲೋಕವನ್ನು ಪರಿಚಯಿಸುವ ಹಾದಿಯಲ್ಲಿ ನಾನಿಟ್ಟ ಮೊದಲ ಹೆಜ್ಜೆ ಇದಾಗಿದೆ.

ಚೆನ್ನೈನ ಎರಡು ಪ್ರಮುಖ ದೇವಸ್ಥಾನಗಳು, ಚೇಪಾಕ್ ಕ್ರೀಡಾಂಗಣ ಮತ್ತು ಮೂರು ಊಟದ ಜಾಗಗಳನ್ನು ಈ ವ್ಲಾಗ್‌ನಲ್ಲಿ ನನ್ನ ವೀಕ್ಷಕರಿಗೆ ನನ್ನದೇ ಶೈಲಿಯಲ್ಲಿ ಪರಿಚಯಿಸಿದ್ದೇನೆ. ಸಮಯಾವಕಾಶವಾದಾಗ ನೋಡಿ, ಹೇಗಿದೆ ತಿಳಿಸಿ..
-----------------------------------------------------------------------
Namaskaara! I have just started the Chennai chapter in my vlogging journey. My first Chennai vlog features two of the most famous temples in the city, the historic Chepauk stadium, and three food places. Please watch it when time permits and let me know how it goes. If you have any feedback, feel free to share. Thank you!

ನಾನು ಕಳೆದ 15 ವರ್ಷಗಳಿಂದ ಚೆನ್ನೈಗೆ ಆಗಾಗ ಬಂದು ಹೋಗುತ್ತಿರುವೆ. ದೇಶದಲ್ಲೇ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೊಂದಿರುವ ಚ....

https://youtu.be/GNtyr-esn-s?si=TCniBDhxOslcK-WLಎಲ್ಲರಿಗೂ ನಮಸ್ಕಾರ🙏🏽😊 ಸುಳ್ಯ ಹಾಗೂ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿರುವ ದೇವಸ್ಥಾ...
02/02/2024

https://youtu.be/GNtyr-esn-s?si=TCniBDhxOslcK-WL
ಎಲ್ಲರಿಗೂ ನಮಸ್ಕಾರ🙏🏽😊 ಸುಳ್ಯ ಹಾಗೂ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿರುವ ದೇವಸ್ಥಾನಗಳು ಹಾಗೂ ದೈವ ಕೋಲದ ಕುರಿತು ವ್ಲಾಗ್ ಮೂಲಕ ನನ್ನದೇ ಧಾಟಿಯಲ್ಲಿ ಪರಿಚಯಿಸೋ ನನ್ನ ಬಹು ದಿನಗಳ ಆಸೆಗೆ ಇವತ್ತು ಮೂರ್ತ ರೂಪ ಕೊಟ್ಟಿದೀನಿ. ಬಿಡುವಾದಾಗ ನೋಡಿ 😊 ಸಾಧ್ಯವಾದರೆ ಹೇಗಿದೆ ತಿಳಿಸಿ😊

ಸದಾ ಹಸಿರಿನಿಂದ ಕಂಗೊಳಿಸುವ ಸುಳ್ಯ ಸೀಮೆ ನನಗೆ ಬಹಳ ಇಷ್ಟವಾದ ಪ್ರದೇಶ. ಇಲ್ಲಿನ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ನನ್ನದ...

02/12/2023
ಸೂರ್ಯೋದಯದ ಹೊಂಬಣ್ಣದಲ್ಲಿ ನಮ್ಮ ಧಾರವಾಡದ ಗ್ರಾಮೀಣ ಪರಿಸರ🥰Our Dhaarawaada’s countryside as seen during sunrise🥰                 ...
30/11/2023

ಸೂರ್ಯೋದಯದ ಹೊಂಬಣ್ಣದಲ್ಲಿ ನಮ್ಮ ಧಾರವಾಡದ ಗ್ರಾಮೀಣ ಪರಿಸರ🥰Our Dhaarawaada’s countryside as seen during sunrise🥰

ಆಡೋ ವಯಸ್ಸಲ್ಲಿ ಅಣ್ಣಾವ್ರ, ‘’ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು…” ಹಾಡು ಕೇಳಿ.. ಬೆಳೆಯೋ ವಯಸ್ಸಲ್ಲಿ ಆ ಹಾಡಿನ ಸಾಲುಗಳ ಅರ್ಥ ಮಾಡ್ಕೊಂಡು… ...
29/11/2023

ಆಡೋ ವಯಸ್ಸಲ್ಲಿ ಅಣ್ಣಾವ್ರ, ‘’ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು…” ಹಾಡು ಕೇಳಿ.. ಬೆಳೆಯೋ ವಯಸ್ಸಲ್ಲಿ ಆ ಹಾಡಿನ ಸಾಲುಗಳ ಅರ್ಥ ಮಾಡ್ಕೊಂಡು… ಪ್ರಬುದ್ಧ ವಯಸ್ಸಲ್ಲಿ ಅದೇ ಹಾಡು ನಮ್ಮ ಕನ್ನಡಿಗರ ಹೃನ್ಮನಗಳಲ್ಲಿ ಅದ್ಯಾವ ಮಟ್ಟದಲ್ಲಿ ಭಾವಪರಶತೆ ತರಿಸುತ್ತೆ ಅಂತ ಅರಿತು… ಕಿತ್ತೂರ ಚನ್ನಮ್ಮ ವೃತ್ತದ ಬಳಿ ಬಂದಾಗೆಲ್ಲಾ ಏನೋ ಒಂದು ಭಾವ ಸೆಳೆತ ಆಗೋದು.. ಇವತ್ಯಾಕೋ ನಮ್ಮ ನಾಡ ಧ್ವಜ (ಅದು ಕನ್ನಡ ಧ್ವಜ ಅಲ್ಲ… ಕರುನಾಡ ಧ್ವಜ) ಮತ್ತು ಚನ್ನಮ್ಮರನ್ನ ಒಂದೇ ಫ್ರೇಮಲ್ಲಿ ನೋಡಿದೊಡನೆಯೇ ಆ ಹಾಡಿನ ಸಾಲುಗಳು ಹಂಗೇ ಗುಂಯ್ಗುಟ್ಟುತ್ತಿವೆ🥰🙏🏽.
Live location..🥰 ನಾನು ಈ ಪೋಸ್ಟಾಕ್ತಾ ಇರೋದೇ ವೃತ್ತದ ಹುಲ್ಲುಹಾಸಿನ ಮೇಲೆ ಕುಳಿತು😍 ಮುಂದೆ ನೆನಪಾದಾಗೆಲ್ಲಾ ಇನ್ಸ್ಟಾಗ್ರಾಂ ತೆಗೆದು ಮತ್ತೆ ಮತ್ತೆ ನೋಡಿ ಖುಷಿ ಪಡೋದಕ್ಕೆ.

ನಮಸ್ತೇ🙏🏽😊ಶ್ರೀರಂಗಪಟ್ಟಣ ದಸರಾದ ಜಂಬೂ ಸವಾರಿಯನ್ನ ನೋಡಿಲ್ಲದೇ ಇದ್ದಲ್ಲಿ, ನಿಮಗಾಗಿ ಈ ವ್ಲಾಗ್ ಪ್ರಸ್ತುತ😊 ಹಂಪಿಯ ಮಹಾನವಮಿ ಸಂಭ್ರಮ ಮೈಸೂರು ದಸ...
04/11/2023

ನಮಸ್ತೇ🙏🏽😊
ಶ್ರೀರಂಗಪಟ್ಟಣ ದಸರಾದ ಜಂಬೂ ಸವಾರಿಯನ್ನ ನೋಡಿಲ್ಲದೇ ಇದ್ದಲ್ಲಿ, ನಿಮಗಾಗಿ ಈ ವ್ಲಾಗ್ ಪ್ರಸ್ತುತ😊 ಹಂಪಿಯ ಮಹಾನವಮಿ ಸಂಭ್ರಮ ಮೈಸೂರು ದಸರೆಯಾಗಿದ್ದೇ ಶ್ರೀರಂಗಪಟ್ಟಣದಲ್ಲಿ..! 414 ವರ್ಷಗಳ ಮೈಸೂರು ದಸರಾ ಇತಿಹಾಸ ಸರಿಸುಮಾರು ಅರ್ಧದಷ್ಟು ಕಾಲಾವಧಿ ಶ್ರೀರಂಗಪಟ್ಟಣದಲ್ಲೇ ಕಳೆದಿದೆ.. ಈ ಕುರಿತು ನನ್ನದೊಂದು ಪುಟ್ಟ ವ್ಲಾಗ್.. 😊

9 ನಿಮಿಷಗಳಷ್ಟೇ ಇರುವ ಈ ವ್ಲಾಗನ್ನು ಬಿಡುವಾದ ವೇಳೆ ನೋಡಿ ಹೇಳಿ ಹೇಗಿದೆಯೆಂದು.

ಮೈಸೂರಿನ ದಸರಾ ಆಚರಣೆಯು ಹಂಪಿಯ ಕರ್ಣಾಟ ಸಾಮ್ರಾಜ್ಯದ ಮಹಾನವಮಿ ಸಂಭ್ರಮದ ಮುಂದುವರೆದ ಭಾಗವಾಗಿದೆ. ಇಂದು ಮೈಸೂರು ದಸರಾ ಎಂದು ಕರೆಯಲ್...

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು🥰
01/11/2023

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು🥰

ದಸರಾ ಮಹೋತ್ಸವದ ಆಯೋಜನೆಯಲ್ಲಿ ತಳಮಟ್ಟದಲ್ಲಿ ಕೆಲಸ ಮಾಡೋ ಶ್ರಮಜೀವಿಗಳ ಪರಿಚಯದೊಂದಿಗೆ ನವರಾತ್ರಿಯ ಮಿನುಗಿನಲ್ಲಿ ಮಿಂದೇಳುತ್ತಿರುವ ಮೈಸೂರಿನ ಬೀದ...
23/10/2023

ದಸರಾ ಮಹೋತ್ಸವದ ಆಯೋಜನೆಯಲ್ಲಿ ತಳಮಟ್ಟದಲ್ಲಿ ಕೆಲಸ ಮಾಡೋ ಶ್ರಮಜೀವಿಗಳ ಪರಿಚಯದೊಂದಿಗೆ ನವರಾತ್ರಿಯ ಮಿನುಗಿನಲ್ಲಿ ಮಿಂದೇಳುತ್ತಿರುವ ಮೈಸೂರಿನ ಬೀದಿಗಳಲ್ಲಿ ಸುತ್ತಾಟ…🥰

ನನ್ನ ವ್ಲಾಗ್ ಪಯಣದಲ್ಲಿ ಮೊದಲ ಬಾರಿಗೆ ಮೈಸೂರು ದಸರಾ ಮಹೊತ್ಸವದ ವಿಷಯ ತೆಗೆದುಕೊಳ್ಳುವ ಸೌಭಾಗ್ಯ ಒದಗಿ ಬಂದಿದೆ. ದಸರೆಯ ಬೆಳಕಿನಲ್ಲಿ...

Best of my     clicks🥰😍 ಮೈಸೂರು ದಸರೆ ಸಂದರ್ಭದಲ್ಲಿ ನಾನು ಸೆರೆ ಹಿಡಿದ ಅತ್ಯುತ್ತಮ ಚಿತ್ರಗಳಿವು🥰😊
21/10/2023

Best of my clicks🥰😍 ಮೈಸೂರು ದಸರೆ ಸಂದರ್ಭದಲ್ಲಿ ನಾನು ಸೆರೆ ಹಿಡಿದ ಅತ್ಯುತ್ತಮ ಚಿತ್ರಗಳಿವು🥰😊

Missing     🥰🙏🏽😊 ಮಂಗಳೂರು ದಸರೆ ಬಹಳ ಮಿಸ್ ಆಗ್ತಿದೆ ಈ ಸಲ
19/10/2023

Missing 🥰🙏🏽😊 ಮಂಗಳೂರು ದಸರೆ ಬಹಳ ಮಿಸ್ ಆಗ್ತಿದೆ ಈ ಸಲ

Glimpses of Srirangapatna Dasara 2023. This event has been part of Mysuru royal heritage since 1610. After the capital o...
16/10/2023

Glimpses of Srirangapatna Dasara 2023. This event has been part of Mysuru royal heritage since 1610. After the capital of the erstwhile kingdom was shifted back to Mysuru in 1799, this event lost its charm. However, in 2008, the then Minister of Kannada Culture of Karnataka Government Ms Shobha Karandlajae restarted the Srirangapatna Dasara. .
ಶ್ರೀರಂಗಪಟ್ಟಣ ದಸರಾ ೨೦೨೩ರ ದೃಶ್ಯಗಳು. ೧೬೧೦ರಿಂದ ೧೭೯೯ರವರೆಗೂ ನಾಡಹಬ್ಬ ದಸರಾವನ್ನು ಶ್ರೀರಂಗಪಟ್ಟಣದಲ್ಲೇ ಆಚರಿಸಲಾಗುತ್ತಿತ್ತು. ಆದರೆ ೧೮೦೦ರಿಂದ ಮೈಸೂರು ಸಂಸ್ಥಾನದ ರಾಜಧಾನಿ ಮತ್ತೆ ಮೈಸೂರು ನಗರಕ್ಕೆ ವರ್ಗಾವಣೆಯಾದ ಬಳಿಕ ಕಳೆಗಟ್ಟಿದ್ದ ಇಲ್ಲಿನ ದಸರೆಗೆ ೨೦೦೮ರಲ್ಲಿ ಕರ್ನಾಟಕ ಸರ್ಕಾರದ ಅಂದಿನ ಸಚಿವೆ ಶೋಭಾ ಕರಂದ್ಲಾಜೆ ಮರುಜೀವ ನೀಡಿದರು.

ಇಲ್ಲಿ ದಸರಾ ಜಂಬೂಸವಾರಿ ಆದ ಮೇಲಷ್ಟೇ ಮೈಸೂರಿನಲ್ಲಿ ದಸರಾ ಆಚರಣೆಗಳು ಪೂರ್ಣಪ್ರಮಾಣದಲ್ಲಿ ಕಳೆಗಟ್ಟೋದು.

ದಸರಾ ಕಾಯಕಯೋಗಿಗಳು!ಇಡೀ ಭಾರತ ಏನು...? ಜಗತ್ತೇ ಮೈಸೂರಿನತ್ತ ತಿರುಗಿ ನೋಡುವಂತೆ ಮಾಡುವ ದಸರೆಯ ಯಶಸ್ವೀ ಆಯೋಜನೆಯ ಹಿಂದಿನ ಅತಿ ದೊಡ್ಡ ಶಕ್ತಿ ಈ ...
12/10/2023

ದಸರಾ ಕಾಯಕಯೋಗಿಗಳು!
ಇಡೀ ಭಾರತ ಏನು...? ಜಗತ್ತೇ ಮೈಸೂರಿನತ್ತ ತಿರುಗಿ ನೋಡುವಂತೆ ಮಾಡುವ ದಸರೆಯ ಯಶಸ್ವೀ ಆಯೋಜನೆಯ ಹಿಂದಿನ ಅತಿ ದೊಡ್ಡ ಶಕ್ತಿ ಈ ಎಲೆಮರೆ ಕಾಯಿಗಳ ಅವಿರತ ಪರಿಶ್ರಮ!

ನಾಡ ಹಬ್ಬದ ಆಯೋಜನೆ ಹಿಂದೆ ರಾಜಕಾರಣಿಗಳು ಹಾಗೂ ಅಧಿಕಾರಶಾಹಿ ಸ್ತರಗಳ ಮಟ್ಟದ ಪರಿಶ್ರಮಕ್ಕೂ ಬೆಲೆ ನೀಡುತ್ತಾ; ನಾಡ ಹಬ್ಬಕ್ಕೆ ಅತಿಥಿಗಳನ್ನು ಬರಮಾಡಿಕೊಳ್ಳಲು ಮದುವಣಗಿತ್ತಿಯಂತೆ ಮೈಸೂರನ್ನು ಸ್ವಚ್ಛಗೊಳಿಸಿ, ಸಿಂಗರಿಸಿ, ಸಾರ್ವಜನಿಕ ಕಾನೂನು ಪಾಲನೆ ಖಾತ್ರಿ ಪಡಿಸುವ ನಿಟ್ಟಿನಲ್ಲಿ ಈ ಕಾಯಕ ಯೋಗಿಗಳು ನೆಲ ಮಟ್ಟದಲ್ಲಿ ಹಾಕುವ ದಣಿವರಿಯದ ಪರಿಶ್ರಮದ ತೂಕ ಮಿಕ್ಕೆಲ್ಲ ಸ್ತರಗಳಿಗಿಂತಲೂ ಮಿಗಿಲಾದದ್ದು.

ಇವರ ಈ ಸೇವೆಗೆ ನಾವು ಕೊಡಬಹುದಾದ ಅತಿ ದೊಡ್ಡ ಗೌರವವೆಂದರೆ - ಸ್ವಚ್ಛ, ಸುಂದರ, ಸುರಕ್ಷಿತ ದಸರಾ ಆಯೋಜನೆಗೆ ಸಾರ್ವಜನಿಕ ಹೊಣೆಗಾರಿಕೆಗಳನ್ನು ಅರಿತು, ನಾಗರಿಕರಾಗಿ ನಮ್ಮಿಂದ ನಿರೀಕ್ಷಿತವಾದ ವರ್ತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮೆಲ್ಲರ ನಾಡಹಬ್ಬವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲು ನಮ್ಮ ಜವಾಬ್ದಾರಿ ಮೆರೆಯುವುದು.
Let's take a moment to appreciate the Karma Yogis whose thankless, unrelenting efforts are the primary reason behind the successful organization of every Dasara celebration in Mysuru.

With all due respect to the politicians and bureaucrats who facilitate things from the top level months before the start of the festivities, these unsung heroes are the ones who make it all happen at the ground level.

The best way to show respect to these tireless warriors is to exhibit the best of our civic sense, ensuring public participation in organizing a SAFE, CLEAN, HASSLE-FREE DASARA..

ದಸರಾ ಕುಸ್ತಿ ಕೂಟದ ಅತ್ಯಂತ ಪ್ರತಿಷ್ಠಿತ ಕಣವಾದ ವಜ್ರಮುಷ್ಠಿ ಕಾಳಗದಲ್ಲಿ ಕಳೆದ ವರ್ಷ ವಿಜಯಿಯಾಗಿ ಹೊರಹೊಮ್ಮಿದ ನಮ್ಮ ಚನ್ನಪಟ್ಟಣದ ಪ್ರವೀಣ ಜಟ್ಟ...
11/10/2023

ದಸರಾ ಕುಸ್ತಿ ಕೂಟದ ಅತ್ಯಂತ ಪ್ರತಿಷ್ಠಿತ ಕಣವಾದ ವಜ್ರಮುಷ್ಠಿ ಕಾಳಗದಲ್ಲಿ ಕಳೆದ ವರ್ಷ ವಿಜಯಿಯಾಗಿ ಹೊರಹೊಮ್ಮಿದ ನಮ್ಮ ಚನ್ನಪಟ್ಟಣದ ಪ್ರವೀಣ ಜಟ್ಟಿಯವರು ಈ ಬಾರಿಯೂ ಗೆದ್ದು ಬರಲೆಂದ ತಾಲ್ಲೂಕಿನ ಜನತೆಯ ಪರವಾಗಿ ಆಶಿಸುತ್ತಾ ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದೇನೆ😊🥰
ರಾಜ್ಯದ ಮುಂಚೂಣಿ ದಿನಪತ್ರಿಕೆಯೊಂದರಲ್ಲಿ ನಮ್ಮ ಚನ್ನಪಟ್ಟಣದ ಗರಡಿ ಇತಿಹಾಸದ ಕುರಿತು ಚೆನ್ನಗಿರಿಗೌಡ.ಬಿ.ಪಿ ಅವರು ಸೊಗಸಾಗಿ ಬರೆದಿದ್ದಾರೆ😊

ಅನಿರೀಕ್ಷಿತವಾಗಿ ಇಲ್ಲಿಗೆ ಹೋಗಿದ್ದು, ರೀಲ್ ಮಾಡಿದ್ದು ಸಹ ಅಷ್ಟೇ ಅನಿರೀಕ್ಷಿತವಾಗಿ😊 ಹಳೇ ಮದ್ರಾಸ್ ರೋಡಲ್ಲಿ ಚೆನ್ನೈಗೋಗ್ತಾ ಹಾಗೇ ಮುಳಬಾಗಿಲಲ್...
06/10/2023

ಅನಿರೀಕ್ಷಿತವಾಗಿ ಇಲ್ಲಿಗೆ ಹೋಗಿದ್ದು, ರೀಲ್ ಮಾಡಿದ್ದು ಸಹ ಅಷ್ಟೇ ಅನಿರೀಕ್ಷಿತವಾಗಿ😊 ಹಳೇ ಮದ್ರಾಸ್ ರೋಡಲ್ಲಿ ಚೆನ್ನೈಗೋಗ್ತಾ ಹಾಗೇ ಮುಳಬಾಗಿಲಲ್ಲಿ ಉಪಹಾರ ಸವಿಯಲೆಂದು, ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿ ಮಾಡುತ್ತಿರುವ ಪ್ರಸಾದ್ ಹೋಟೆಲಿನ ದೋಸೆ ತಿನ್ನೋದಕ್ಕೆ ಹೋಗಿದ್ದೆ😊 ಹೇಗಿತ್ತು ಅಂತ ಪ್ರಾಮಾಣಿಕವಾದ ಅಭಿಪ್ರಾಯವನ್ನ ನನ್ನ ಮುಂಬರುವ ರೀಲೊಂದ್ರಲ್ಲಿ ತಿಳಿಸಿವೆ🥰 This one happened purely by accident. As I took the Old Madras road early in the morning, towards Chennai, I decided to drop by Mulabaagilu to see if the much-famous Dosaes of the town are really worth the hype they are getting these days. I will share my honest opinion on one of my upcoming reels.🥰

ಹೊರಜಗತ್ತಿಗೆ ಅಷ್ಟಾಗಿ ತಿಳಿಯದ ಚನ್ನಪಟ್ಟಣದ ಅದ್ಭುತ ಜಾಗಗಳ ಕುರಿತು ನನ್ನ ಎರಡನೇ ವ್ಲಾಗ್..! ಅಬ್ಬಾ ಅನಿಸುವ ದೇವಸ್ಥಾನಗಳ ಜೊತೆಗೆ ಚಿಕ್ಕಮಗಳೂರ...
06/10/2023

ಹೊರಜಗತ್ತಿಗೆ ಅಷ್ಟಾಗಿ ತಿಳಿಯದ ಚನ್ನಪಟ್ಟಣದ ಅದ್ಭುತ ಜಾಗಗಳ ಕುರಿತು ನನ್ನ ಎರಡನೇ ವ್ಲಾಗ್..! ಅಬ್ಬಾ ಅನಿಸುವ ದೇವಸ್ಥಾನಗಳ ಜೊತೆಗೆ ಚಿಕ್ಕಮಗಳೂರನ್ನು ನೆನಪಿಸುವ ಗುಡ್ಡ-ಗಾಡು ಜಾಗವನ್ನೂ ಈ ಬಾರಿ ತೋರಿದ್ದೇನೆ.. ಬಿಡುವಾದಾಗ ನೋಡಿ ಹೇಗಿದೆ ತಿಳಿಸಿ. ಇಷ್ಟವಾದಲ್ಲಿ ದಯವಿಟ್ಟು ನನ್ನ ಚಾನೆಲ್ಲಿಗೆ subscribe ಮಾಡಿ, ಬೆಲ್ ಬಟನ್ ಒತ್ತಿ. 😊🙏

ಗಂಗರು ಹಾಗೂ ಹೊಯ್ಸಳರ ಕಾಲಘಟ್ಟಗಳಲ್ಲಿ ಕನ್ನಡ ನಾಡಿನ ಉಪರಾಜಧಾನಿಯಾಗಿದ್ದ ಚನ್ನಪಟ್ಟಣವು ಮೈಸೂರು ಹಾಗೂ ಬೆಂಗಳೂರುಗಳು ನಗರಗಳಾಗಿ ರ...

ಮೈಸೂರಲ್ಲಿ  ಉತ್ತರ ಕರ್ನಾಟಕ ಶೈಲಿ ಮಿರ್ಚಿ - ಮಂಡಕ್ಕಿ ಸಿಗೋ ಈ ಜಾಗ ಎಲ್ಲಿದೆ ಅಂತ ಕೊನೋ ಫೋಟೋ ನೋಡೋ ಹೊತ್ತಿಗೆ ಪಕ್ಕಾ ಗೊತ್ತಾಗಿರುತ್ತೆ ನೋಡಿ😊...
04/10/2023

ಮೈಸೂರಲ್ಲಿ ಉತ್ತರ ಕರ್ನಾಟಕ ಶೈಲಿ ಮಿರ್ಚಿ - ಮಂಡಕ್ಕಿ ಸಿಗೋ ಈ ಜಾಗ ಎಲ್ಲಿದೆ ಅಂತ ಕೊನೋ ಫೋಟೋ ನೋಡೋ ಹೊತ್ತಿಗೆ ಪಕ್ಕಾ ಗೊತ್ತಾಗಿರುತ್ತೆ ನೋಡಿ😊😀 ನಮಗಂತೂ ಇಲ್ಲಿ ಸಿಗೋ ಟೊಮ್ಯಾಟೋ ಒಗ್ಗರೆಣೆ ಮಂಡಕ್ಕಿ ಬಲೇ ಇಷ್ಟ😋

If you've been loving the wanderlust-inducing content on HemExplores, please follow my pages on Instagram and Facebook t...
01/10/2023

If you've been loving the wanderlust-inducing content on HemExplores, please follow my pages on Instagram and Facebook to fuel your wanderlust and support me in creating more exciting content.

📸 Instagram:
👍 Facebook: HemaLoka
ಇದುವೆಗೂ ನನ್ನೆಲ್ಲಾ ಕಂಟೆಂಟ್‌ಗಳನ್ನು ನೀವು ನೋಡಿ ಆನಂದಿಸಿದ್ದೀರಿ ಎಂದು ಭಾವಿಸುತ್ತಾ... ದಯವಿಟ್ಟು ಫೇಸ್ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ನನ್ನ ಪೇಜ್ HemaLokaಗೆ ಚಂದಾದಾರರಾಗಿ ಇನ್ನಷ್ಟು ಉತ್ತಮವಾದ ಕಂಟೆಂಟ್ ನೀಡಲು ಬೆಂಬಲಿಸಿ ಎಂದು ವಿನಂತಿಸಿಕೊಳ್ಳುವೆ.

01/10/2023

ಪ್ರಿಯ ಮಿತ್ರರೇ... ನನ್ನ ಡಿಜಿಟಲ್ ಕಂಟೆಂಟ್‌ಅನ್ನು ಪ್ರಕಟಿಸಲೆಂದೇ HemaLoka ಎಂಬ ಪೇಜ್‌ಅನ್ನು ಸೃಷ್ಟಿಸಿದ್ದೇನೆ. ಇನ್ನು ಮುಂದೆ ನನ್ನ ಎಲ್ಲಾ ರೀಲುಗಳು ಹಾಗೂ ವಿಡಿಯೋಗಳನ್ನು ಆ ಪೇಜ್‌ನಲ್ಲಿಯೇ ಪ್ರಕಟಿಸಲಿದ್ದೇನೆ.

ಕಳೆದ ಒಂದು ತಿಂಗಳಿನಿಂದ ನಮ್ಮೂರು, ನಮ್ಮ ನಾಡನ್ನು ನನ್ನದೇ ಧಾಟಿಯಲ್ಲಿ ಸುಂದರವಾಗಿ ತೋರಿಸಬೇಕೆಂಬ ನನ್ನ ಆಸೆಗೆ ನಿಮ್ಮಿಂದ ಸಿಗುತ್ತಿರುವ ಬೆಂಬಲದಿಂದ ಪುನೀತನಾಗಿರುವೆ. ನಿಮ್ಮ ಈ ಬೆಂಬಲವನ್ನು ನನ್ನ ಕನಸಿನ ಲೋಕವಾದ HemaLokaದ ಸೃಷ್ಟಿಗೆ ಕೊಟ್ಟು, ಇನ್ನಷ್ಟು ಉತ್ತಮ ಕಂಟೆಂಟ್ ಮಾಡಲು ಪ್ರೋತ್ಸಾಹಿಸುವಿರೆಂದು ಆಶಿಸುತ್ತಾ.... ಸದಾ ನಿಮ್ಮ ಪ್ರೀತಿ-ವಿಶ್ವಾಸದ ಬಯಕೆಯೊಂದಿಗೆ ಈ ಸವಿನಯ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇನೆ.

Address

Kondapura Village, Kodambahalli Post

562138

Alerts

Be the first to know and let us send you an email when HemaLoka posts news and promotions. Your email address will not be used for any other purpose, and you can unsubscribe at any time.

Contact The Business

Send a message to HemaLoka:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share