Namma Vijayapura

  • Home
  • Namma Vijayapura

Namma Vijayapura Bijapur, officially known as Vijayapura, is the district headquarters of Bijapur District of Karnataka state of India.

19/09/2020
19/09/2020
ಆಲಮಟ್ಟಿ: ಆಲಮಟ್ಟಿ ಜಲಾಶಯದಲ್ಲಿ ತೀವ್ರ ನೀರಿನ ಕೊರತೆ ಹಾಗೂ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿದ ಪ್ರಕಾರ ಕೃಷ್ಣಾ ಮೇಲ್ದಂಡೆ ಯೋಜನೆ ಅ...
25/02/2012

ಆಲಮಟ್ಟಿ: ಆಲಮಟ್ಟಿ ಜಲಾಶಯದಲ್ಲಿ ತೀವ್ರ ನೀರಿನ ಕೊರತೆ ಹಾಗೂ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿದ ಪ್ರಕಾರ ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲ ಕಾಲುವೆಗಳಿಗೂ ನೀರು ಹರಿಸುವ ಪ್ರಕ್ರಿಯೆ ಇದೇ 25ರ ಮಧ್ಯರಾತ್ರಿಯಿಂದ ಬಂದ್ ಆಗಲಿದೆ.

ಈ ಬಾರಿ ಹಿಂಗಾರಿ ಮಳೆ ಸಂಪೂರ್ಣ ಕೈಕೊಟ್ಟಿದ್ದರ ಫಲವಾಗಿ ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದರಿಂದ ಇದೇ ಮೊದಲ ಬಾರಿ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತಿದೆ ಎಂದು ಕೆ.ಬಿ.ಜೆ.ಎನ್‌ಎಲ್. ಮೂಲಗಳು ತಿಳಿಸಿವೆ.

ಇದೇ ಮೊದಲ ಬಾರಿಗೆ ನೀರು ಬಿಡುವ ಅವಧಿಯನ್ನು 30ರಿಂದ 45 ದಿನಗಳ ಕಾಲ ಮೊಟಕು ಗಳಿಸಲಾಗಿದೆ. ಪ್ರತಿ ವರ್ಷವೂ ಮಾರ್ಚ್ 31ರವರೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ತೀರ್ಮಾನ ಕೈಗೊಳ್ಳುತ್ತಿತ್ತು. ಆದರೂ ನೀರಿನ ಲಭ್ಯತೆಯ ಆಧಾರದ ಮೇಲೆ 15 ದಿನಗಳ ಕಾಲ ಮತ್ತೇ ಹೆಚ್ಚುವರಿಯಾಗಿ ನೀರನ್ನು ಕಾಲುವೆಗೆ ಹರಿಸಲಾಗುತ್ತಿತ್ತು.

ಈ ಬಾರಿ ಮುಂಗಾರು ಮಳೆ ನೆರೆಯ ಆತಂಕ ಸೃಷ್ಟಿಸಿದರೇ, ಹಿಂಗಾರು ಮಳೆ ಮಾತ್ರ ಸಂಪೂರ್ಣ ಕೈಕೊಟ್ಟಿತು. ಇದರಿಂದಾಗಿ 519.6 ಮೀ. ಎತ್ತರದ ಆಲಮಟ್ಟಿ ಜಲಾಶಯದಲ್ಲಿ 510.45 ಮೀ. ವರೆಗೆ ಮಾತ್ರ ನೀರಿನ ಸಂಗ್ರಹವಿದೆ.

ಅಂದರೇ 123 ಟಿ.ಎಂ.ಸಿ. ಅಡಿಯಷ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಕೇವಲ 32.14 ಟಿ.ಎಂ.ಸಿ. ಅಡಿಯಷ್ಟು ನೀರು ಇದ್ದು, ಅದರಲ್ಲಿ 17 ಟಿ.ಎಂ.ಸಿ ಅಡಿಯಷ್ಟು ನೀರು ಡೆಡ್ ಸ್ಟೋರೇಜ್ ನೀರಿದ್ದು, ಕುಡಿಯುವ ನೀರು ಹಾಗೂ ನೀರಾವರಿ ಸೇರಿದಂತೆ ಉಪಯೋಗಕ್ಕೆ ಕೇವಲ 14 ಟಿ.ಎಂ.ಸಿ ಅಡಿಯಷ್ಟು ನೀರು ಲಭ್ಯವಿದೆ.

ವಿಜಾಪುರ ನಗರ ಸೇರಿದಂತೆ ಕೃಷ್ಣಾ ತೀರ ವ್ಯಾಪ್ತಿಯ ಗ್ರಾಮಗಳು, ರಾಯಚೂರ ಥರ್ಮಲ್ ಕೇಂದ್ರ, ನಾರಾಯಣಪುರ ಜಲಾಶಯ ವ್ಯಾಪ್ತಿಯ ತೀರ ಪ್ರದೇಶದ ಗ್ರಾಮಗಳು ಸೇರಿ ಎಲ್ಲೆಡೆಯೂ ಕುಡಿಯುವ ನೀರು ಅಗತ್ಯವಿದೆ. ಜೂನ್ ಅಂತ್ಯದವರೆಗಾದರೂ ನೀರು ಅಗತ್ಯವಾಗಿ ಜಲಾಶಯದಲ್ಲಿ ಸಂಗ್ರಹವಾಗಿರಬೇಕು. ಡೆಡ್ ಸ್ಟೋರೇಜ್ ನೀರಂತೂ ಜಲಚರ ಪ್ರಾಣಿಗಳ ಜೀವಿಸಲು ಹಾಗೂ ಆ ನೀರನ್ನು ಉಪಯೋಗಿಸಲು ಅಸಾಧ್ಯ ಎಂದು ಪರಿಗಣಿಸಲಾಗುತ್ತದೆ.

ಆತಂಕ ಸೃಷ್ಟಿ: ಇದರಿಂದಾಗಿ ಆಲಮಟ್ಟಿ ಜಲಾಶಯ ವ್ಯಾಪ್ತಿಯ ಆಲಮಟ್ಟಿ ಎಡದಂಡೆ, ಆಲಮಟ್ಟಿ ಬಲದಂಡೆ, ಮುಳವಾಡ ಪೂರ್ವ ಮತ್ತು ಮುಳವಾಡ ಪಶ್ಚಿಮ ಕಾಲುವೆ ವ್ಯಾಪ್ತಿಯ ರೈತರಲ್ಲಿ ಆತಂಕ ಮೂಡಿದೆ.
ಕಾಲುವೆಯ ನೀರನ್ನು ನಂಬಿ ಹಿಂಗಾರು ಬೆಳೆಯಾಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಾಗಿ ಶೇಂಗಾ, ಮೆಕ್ಕೆಜೋಳ, ಅಲಸಂಧಿ ಮೊದಲಾದ ಬೆಳೆಗಳನ್ನು ರೈತರು ಬೆಳೆದಿದ್ದಾರೆ.

ಆ ಎಲ್ಲಾ ಬೆಳೆಗೆ ಕಾಲುವೆಯ ನೀರಿನಿಂದ ಸಮೃದ್ಧಿಯಾಗಿ ಬೆಳೆಯುತ್ತಿವೆ. ಈ ಎಲ್ಲ ಬೆಳೆಗಳಿಗೆ ಕನಿಷ್ಠವಾದರೂ 30 ದಿನವಾದರೂ ನೀರು ಅಗತ್ಯ ಎಂದು ವಂದಾಲದ ರೈತ ಎಸ್.ಎಸ್. ಹೆಬ್ಬಾಳ ಹಾಗೂ ಮುದ್ದಾಪೂರದ ಎಸ್.ವಿ. ದಳವಾಯಿ ಅಭಿಪ್ರಾಯ ಪಡುತ್ತಾರೆ.

ಮುಂಗಾರು ಬೆಳೆಯಾಗಿ ಸೂರ್ಯಕಾಂತಿ, ತೊಗರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವ ರೈತರು, ಹಿಂಗಾರಿ ಬೆಳೆಯಾಗಿ ಶೇಂಗಾ ಹೆಚ್ಚಾಗಿ ಬೆಳೆಯುತ್ತಾರೆ. ಜನವರಿಯಲ್ಲಿ ಹಿಂಗಾರಿ ಬೆಳೆಯನ್ನು ನಾಟಿ ಮಾಡಿ ಏಪ್ರಿಲ್‌ನಲ್ಲಿ ಫಸಲು ಪಡೆಯುತ್ತಾರೆ. ಹೀಗಾಗಿ ನೀರಿನ ಅಗತ್ಯ ಈಗ ಹೆಚ್ಚು. ಬಿಸಿಲಿನ ಪ್ರಖರತೆ ಈ ಭಾಗದಲ್ಲಿ ಈಗಲೇ ಹೆಚ್ಚಾಗಿದ್ದು, ಇನ್ನೂ ಏಪ್ರಿಲ್, ಮೇ ದಲ್ಲಂತೂ ಬಿಸಿಲು ಹೆಚ್ಚಾಗಿ ಬೆಳೆ ಒಣಗುವ ಭೀತಿ ಆವರಿಸಿದೆ.

ಈಚೆಗೆ ಏಪ್ರಿಲ್ ಅಂತ್ಯದವರೆಗೆ ನೀರು ಹರಿಸಲು ಆಗ್ರಹಿಸಿ ಕೃಷ್ಣಾ ಕಣಿವೆ ರೈತರು ಹೋರಾಟ ನಡೆಸಿ, ಶಾಸಕ ಎಸ್.ಕೆ. ಬೆಳ್ಳುಬ್ಬಿ ಅವರ ಭರವಸೆ ಮೇರೆಗೆ ಹಿಂದಕ್ಕೆ ಪಡೆದಿದ್ದಾರೆ. ಆದರೇ ಹೆಚ್ಚುವರಿಯಾಗಿ ನೀರು ಹರಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ.

ಜೂನ್ ಅಂತ್ಯದವರೆಗೆ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರಿನ ಪೂರೈಕೆ ಗಮನದಲ್ಲಿಟ್ಟುಕೊಂಡು ಜಲಾಶಯದಿಂದ ನೀರು ಬಿಡಬೇಕಾಗಿದೆ. ಈಗಲೂ ರೈತರ ಬೆಳೆ, ನೀರಿನ ಲಭ್ಯತೆ ನೋಡಿಕೊಂಡು ಕೇವಲ 8ರಿಂದ 10 ದಿನ ಹೆಚ್ಚುವರಿಯಾಗಿ ನೀರು ಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೈಸೂರು: ಆರತಕ್ಷತೆ ಬಳಿಕ ನಾಪತ್ತೆಯಾಗಿದ್ದ ವರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಅದೇ ಮುಹೂರ್ತಕ್ಕೆ ಬೇರೆ ಯುವಕನೊಂದಿಗೆ ಯುವ...
25/02/2012

ಮೈಸೂರು: ಆರತಕ್ಷತೆ ಬಳಿಕ ನಾಪತ್ತೆಯಾಗಿದ್ದ ವರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಅದೇ ಮುಹೂರ್ತಕ್ಕೆ ಬೇರೆ ಯುವಕನೊಂದಿಗೆ ಯುವತಿಯ ಮದುವೆಯಾದ ಸಿನಿಮೀಯ ಘಟನೆ ನಗರದಲ್ಲಿ ನಡೆದಿದೆ.

ಎಚ್.ಡಿ.ಕೋಟೆ ತಾಲ್ಲೂಕು ಹಳ್ಳದಮನುಗನಹಳ್ಳಿ ನಿವಾಸಿ ಮಂಜುನಾಥ್ ಅಲಿಯಾಸ್ ಮಂಜು (24) ಆತ್ಯಹತ್ಯೆ ಮಾಡಿಕೊಂಡವರು. ಇವರು ಮರಗೆಲಸ ವೃತ್ತಿ ಮಾಡುತ್ತ್ದ್ದಿದರು. ಇವರ ಮದುವೆ ನಗರದ ಹಿನಕಲ್ ನಿವಾಸಿ, ಶಿಕ್ಷಕಿ ಗೀತಾ ಅವರೊಂದಿಗೆ ನಿಶ್ಚಯವಾಗಿತ್ತು.

ವಿ.ವಿ ಮೊಹಲ್ಲಾದ ಕಾಳಿದಾಸ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಫೆ. 23 ಮತ್ತು 24ರಂದು ಇವರಿಬ್ಬರ ಮದುವೆಗೆ ಸಕಲ ಏರ್ಪಾಟು ಮಾಡಲಾಗಿತ್ತು. ಗುರುವಾರ ರಾತ್ರಿ ಗುರು ಹಿರಿಯರ ಸಮ್ಮುಖದಲ್ಲಿ ನಡೆದ ಆರತಕ್ಷತೆಯಲ್ಲಿ ಮಂಜು ಪಾಲ್ಗೊಂಡಿದ್ದರು. ಆದರೆ, ಮಧ್ಯರಾತ್ರಿ ಇದ್ದಕ್ಕಿದ್ದಂತೆ ಕಾಣೆಯಾದರು. ಸಂಬಂಧಿಕರು ಹುಡುಕಾಟ ನಡೆಸಿದರಾದರೂ ಸುಳಿವು ಸಿಕ್ಕಿರಲಿಲ್ಲ.

ಬಳಿಕ ಅವರು ಶುಕ್ರವಾರ ಬೆಳಿಗ್ಗೆ ಮೇಟಗಳ್ಳಿಯ ಬಿ.ಎಂ.ಶ್ರೀ ನಗರದ ರೈಲು ಹಳಿ ಸಮೀಪ ಮರದಲ್ಲಿ ನೇಣು ಹಾಕಿಕೊಂಡುದು ಪತ್ತೆಯಾಯಿತು.

ಮಂಜುನಾಥ್‌ಗೆ ಈ ಮೊದಲೇ ಹೆಬ್ಬಾಳು ನಿವಾಸಿ, ಜಯಾ ಅವರೊಂದಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಮದುವೆಯ ಹಿಂದಿನ ದಿನ ಜಯಾ ಕಲ್ಯಾಣ ಮಂಟಪಕ್ಕೆ ಆಗಮಿಸಿ ಮಂಜು ಜೊತೆ ನಗುಮೊಗದಿಂದಲೇ ಓಡಾಡಿಕೊಂಡು ಇದ್ದರು. ಇದನ್ನು ಗಮನಿಸಿದ ವಧುವಿನ ಸಂಬಂಧಿಕರು ಮಂಜುಗೆ ಈ ಬಗ್ಗೆ ಕೇಳಿದರು. ಇದರಿಂದ ಭಯಭೀತರಾದ ಮಂಜು ಕಲ್ಯಾಣ ಮಂಟಪದಿಂದ ನಾಪತ್ತೆಯಾದರು ಎಂದು ಮೇಟಗಳ್ಳಿ ಪೊಲೀಸರು ತಿಳಿಸಿದರು.

ಈ ನಡುವೆ ಮದುವೆಗೆ 15 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಅದೆಲ್ಲವನ್ನೂ ವಾಪಸು ಕೊಡಬೇಕು ಎಂದು ವಧುವಿನ ಸಂಬಂಧಿಕರು ಪಟ್ಟು ಹಿಡಿದರು. ಒಂದೆಡೆ ಮಗನನ್ನು ಕಳೆದುಕೊಂಡ ದುಃಖ, ಇನ್ನೊಂದೆಡೆ ವಧುವಿನ ಮನೆಯವರ ಆಕ್ರೋಶಕ್ಕೆ ತುತ್ತಾದ ವರನ ಪೋಷಕರು ಅಂತಿಮವಾಗಿ 4 ಲಕ್ಷ ರೂಪಾಯಿ ಕೊಡಲು ಒಪ್ಪಿಕೊಂಡರು.

ಇದಾದ ಬಳಿಕ ಹುಡುಗಿಯ ಸಂಬಂಧಿಕರೊಬ್ಬರು ಹೇಗಾದರೂ ಮಾಡಿ ಇದೇ ದಿನ ಮದುವೆ ಮಾಡಬೇಕು. ಇಲ್ಲವಾದರೆ ಹುಡುಗಿಯ ಬಾಳು ಹಾಳಾಗುತ್ತದೆ ಎಂದು ಸಲಹೆ ನೀಡಿದರು. ಬಳಿಕ ಹುಡುಗಿಯ ಹತ್ತಿರದ ಸಂಬಂಧಿ, ವೃತ್ತಿಯಿಂದ ಮರಗೆಲಸ ಮಾಡುತ್ತಿದ್ದ ಶಿವರಾಜ್ ಮುಂದೆ ಬಂದು ಗೀತಾಳಿಗೆ ಬಾಳು ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೀತಾ, `ಈ ಘಟನೆಯಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಶಿವರಾಜ್ ಬಾಳು ನೀಡಿರುವುದು ಸಂತಸವಾಗಿದೆ` ಎಂದರು. ಇದಕ್ಕೆ ದನಿಗೂಡಿಸಿದ ಶಿವರಾಜ್, `ಗೀತಾಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ` ಎಂದು ನಗುತ್ತಲೇ ಭರವಸೆ ನೀಡಿದರು.

Address


Alerts

Be the first to know and let us send you an email when Namma Vijayapura posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share