Bidar 360

Bidar 360 Contact information, map and directions, contact form, opening hours, services, ratings, photos, videos and announcements from Bidar 360, Media/News Company, .
(2)

18/03/2023
ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು💛❤️💐
01/11/2022

ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು💛❤️💐

ಅಭಿನಂದನೆಗಳು💐💐
27/07/2021

ಅಭಿನಂದನೆಗಳು💐💐

ಗುರುಪೂರ್ಣಿಮದ ಶುಭಾಶಯಗಳು🙏🙏
24/07/2021

ಗುರುಪೂರ್ಣಿಮದ ಶುಭಾಶಯಗಳು🙏🙏

ಗ್ರಾಮ ಪಂಚಾಯಿತಿಗಳ ಚುನಾವಣಾ ಬೀದರ್ ಜಿಲ್ಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಹಂಚಿಕೆ ಕುರಿತು ಪ್ರಕಟಣೆ
16/01/2021

ಗ್ರಾಮ ಪಂಚಾಯಿತಿಗಳ ಚುನಾವಣಾ ಬೀದರ್ ಜಿಲ್ಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಹಂಚಿಕೆ ಕುರಿತು ಪ್ರಕಟಣೆ

ನಾಡಿನ ಸಮಸ್ತ ಜನತೆಗೆ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2020 ರ ಕೊರೊನಾ ಸಂಕಷ್ಟದ ದಿನಗಳು ಅಂತ್ಯವಾಗಲಿ. 2021 ರಲ್ಲಿ ಸುಖ, ಶಾಂತಿ, ಸಮೃದ್ಧಿ...
31/12/2020

ನಾಡಿನ ಸಮಸ್ತ ಜನತೆಗೆ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2020 ರ ಕೊರೊನಾ ಸಂಕಷ್ಟದ ದಿನಗಳು ಅಂತ್ಯವಾಗಲಿ. 2021 ರಲ್ಲಿ ಸುಖ, ಶಾಂತಿ, ಸಮೃದ್ಧಿಯ ಜೀವನ ನಿಮ್ಮದಾಗಲಿ ಎಂದು ಹಾರೈಸುತ್ತೇನೆ.

❤️❤️
29/12/2020

❤️❤️

😂😂
29/12/2020

😂😂

04/11/2020

This is epic 😂

LPG ವಿತರಣಾ ಸಂಸ್ಥೆ LPG ಸಿಲಿಂಡರ್‌ಗಳನ್ನು 5 ಕಿ.ಮೀ ವರೆಗೆ ಉಚಿತವಾಗಿ ತಲುಪಿಸಬೇಕು. Essential Commodities Act 2006ಪ್ರಕಾರ, 5-10 ಕಿ.ಮ...
24/10/2020

LPG ವಿತರಣಾ ಸಂಸ್ಥೆ LPG ಸಿಲಿಂಡರ್‌ಗಳನ್ನು 5 ಕಿ.ಮೀ ವರೆಗೆ ಉಚಿತವಾಗಿ ತಲುಪಿಸಬೇಕು. Essential Commodities Act 2006
ಪ್ರಕಾರ, 5-10 ಕಿ.ಮೀ.ವರೆಗಿನ ವಿತರಣೆಗೆ 20 ರೂ. ಮತ್ತು 10-15 ಕಿ.ಮೀ.ಗೆ 25 ರೂ. 15 ಕಿ.ಮೀ ಮೀರಿದ ವಿತರಣಾ ಶುಲ್ಕ 30 ರೂ ಆಗಿರಬೇಕು. ವಿತರಣಾ ಶುಲ್ಕವನ್ನು ಸಹ ಬಿಲ್‌ನಲ್ಲಿ ದಾಖಲಿಸಬೇಕು. ಸಿಲಿಂಡರ್‌ನ ತೂಕವನ್ನು ಅಳೆಯಲು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಸಹ ವಾಹನದಲ್ಲಿ ಇಡಬೇಕು. ಧೂಳಿನ ಕಾರಣದಿಂದಾಗಿ ಸಿಲಿಂಡರ್‌ನ ರಬ್ಬರ್ ತೊಳೆಯುವಿಕೆಯು ಹರಿದು ಹೋಗುವುದನ್ನು ತಪ್ಪಿಸಲು, ಖಾಲಿ ಸಿಲಿಂಡರ್‌ಗಳನ್ನು ಹಿಂದಿರುಗಿಸುವ ಮೊದಲು ಗ್ರಾಹಕರು ಕ್ಯಾಪ್ ಅನ್ನು ಕಡ್ಡಾಯವಾಗಿ ಬದಲಾಯಿಸಬೇಕಾಗುತ್ತದೆ. ಹಾನಿಗೊಳಗಾದ ಸಿಲಿಂಡರ್‌ಗಳು ಅಥವಾ ಕಡಿಮೆ ತೂಕದ ಸಿಲಿಂಡರ್‌ಗಳನ್ನು ಗ್ರಾಹಕರು ಕೋರಿಕೆಯ ಮೇರೆಗೆ ವಿನಿಮಯ ಮಾಡಿಕೊಳ್ಳಬಹುದು. ಸಂಗ್ರಾಹಕನು ಬುಕಿಂಗ್ ಮಾಡುವಾಗ ಕ್ಯೂ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಅವಶ್ಯಕತೆ ಮತ್ತು ದರಗಳನ್ನು ಸ್ಪಷ್ಟ ರೀತಿಯಲ್ಲಿ ಪ್ರದರ್ಶಿಸಬೇಕೆಂಬುದನ್ನು ಕಡ್ಡಾಯಗೊಳಿಸಿದೆ

Essential Commodities Act 2006 ಪ್ರಕಾರ, LPG ದರಕ್ಕಿಂತ ಮತ್ತು ನಿಗದಿತ delivery charge ಗಿಂತ ಹೆಚ್ಚಿನ ಮೊತ್ತವನ್ನು delivery ಮಾಡುವವರು ಪಡೆದರೆ ಅದನ್ನು Criminal offence ಎಂದು ಪರಿಗಣಿಸಲಾಗುವುದು ಹಾಗು Police ದೂರನ್ನು ದಾಖಲಿಸಬಹುದು ಮತ್ತು LPG Agency ಯ ಪರವಾನಿಗೆ(liscence) ರದ್ದುಗೊಳಿಸಬಹುದು

Bharath Gas Helpline: 18002 24344
All India Oil Industry Helpline
Indian Oil Helpline: 1800 233 3555
Hindustan Petroleum: 1800 233 3555...

Media/news company

14/10/2020

ತುರ್ತು ಸಭೆ: ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ
===
ಭಾರಿ ಮಳೆ ಸಾಧ್ಯತೆ: ಬೀದರ ಜಿಲ್ಲೆಯಲ್ಲಿ
ಎರಡು ದಿನ ರೆಡ್ ಅಲರ್ಟ್ ಘೋಷಣೆ
====
ಬೀದರ ಅಕ್ಟೋಬರ್ 13 (ಕರ್ನಾಟಕ ವಾರ್ತೆ): ಬೀದರ ಸೇರಿದಂತೆ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಬೀದರ ಜಿಲ್ಲೆಯಲ್ಲಿ ಅಕ್ಟೋಬರ್ 13ರಿಂದ ಮುಂದಿನ 48 ಗಂಟೆಗಳ ಅವಧಿಯಲ್ಲಿ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಅಕ್ಟೋಬರ್ 13ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ತುರ್ತು ಸಭೆ ನಡೆಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್., ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರಾ ಗರೀಮಾ ಪನವಾರ, ಭುವನೇಶ ಪಾಟೀಲ ಅವರ ಸಮ್ಮುಖದಲ್ಲಿ ಬೀದರ, ಬಸವಕಲ್ಯಾಣ, ಔರಾದ್, ಭಾಲ್ಕಿ, ಹುಮನಾಬಾದ್, ಕಮಲನಗರ, ಚಿಟಗುಪ್ಪಾ ಮತ್ತು ಹುಲಸೂರ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಅಕ್ಟೋಬರ್ 13 ಮತ್ತು 14 ಎರಡು ದಿನಗಳು ಸೇರಿ ಬೀದರ ಜಿಲ್ಲೆಯಾದ್ಯಂತ ಮುಂದಿನ ಐದು ದಿನಗಳಲ್ಲಿ ಭಾರಿ ಪ್ರಮಾಣದ ಮಳೆ ಬೀಳುವ ಹಾಗೂ ಗರಿಷ್ಟ ಉಷ್ಣಾಂಶ 24-28 ಸೆಲ್ಸಿಯಸ್ ಕನಿಷ್ಟ ಉಷ್ಣಾಶ 18-19 ಸೆಲ್ಸಿಯಸ್ ಇರುವ ಮತ್ತು ಪ್ರತಿ ಗಂಟೆಗೆ ಗಾಳಿಯ ವೇಗವು 3-7 ಕಿ.ಮೀ ಚಲಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಇದೆ. ಈ ವಿಷಯವನ್ನು ಯಾರು ಕೂಡ ಲಘುವಾಗಿ ತೆಗೆದುಕೊಳ್ಳಬಾರದು. ಪೌರಾಯುಕ್ತರು, ತಹಸೀಲ್ದಾರ, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಮುಖ್ಯಾಧಿಕಾರಿಗಳು ಸೇರಿದಂತೆ ಜವಾಬ್ದಾರಿಯುತ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸದ್ಯದ ಪರಿಸ್ಥಿತಿಯ ಸನ್ನಿವೇಶ ಅರಿತು ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿನ ಕೆರೆ ಕಟ್ಟೆಗಳಿಂದ ತುಂಬುವ ಡ್ಯಾಮಗಳಲ್ಲಿನ ನೀರನ್ನು ಗೇಟಗಳಿಂದ ಹೊರಬಿಡುವ ಮುನ್ನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಡ್ಯಾಮ ಸುತ್ತಲಿನ ಜನರಿಗೆ ಕಡ್ಡಾಯ ಸೂಚನೆ ನೀಡಿಯೇ ನೀರು ಬಿಡಲು ಕ್ರಮವಹಿಸಬೇಕು. ಬಿಟ್ಟುಬಿಡದೇ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಸುಗಮ ಸಂಚಾರ ಹಾಗು ಭದ್ರತೆ ದೃಷ್ಟಿಯಿಂದ ಜಿಲ್ಲಾದ್ಯಂತ ಪೊಲೀಸ್ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಬೀದರ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ 24 ಗಂಟೆಗಳ ಸಮಯ ಅಧಿಕಾರಿಗಳು ಅಲರ್ಟ್ ಆಗಿರಬೇಕು. ಮೊಬೈಲ್ ಹಾಳಾಗಿದೆ ಎನ್ನುವ ಯಾವುದೇ ನೆಪ ಹೇಳಬಾರದು. ದೂರವಾಣಿ ಕರೆಗಳನ್ನು ಸ್ವೀಕರಿಸಿ ಸ್ಪಂದಿಸಬೇಕು. ಹಾನಿ ಸಂಭವಿಸಿದ ಕೂಡಲೇ ಮೇಲಧಿಕಾರಿಗಳಿಗೆ ತಿಳಿಸಿ ತುರ್ತಾಗಿ ವರದಿ ಮಾಡಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಇಂತಹ ತುರ್ತು ಸನ್ನಿವೇಶದಲ್ಲಿ ಸಿಬ್ಬಂದಿ ಕೂಡ ಕಾಳಜಿ ವಹಿಸಿ ಕೆಲಸ ಮಾಡಬೇಕು. ಯಾವ ಸಿಬ್ಬಂದಿ ಕೂಡ ಅನವಶ್ಯಕವಾಗಿ ರಜೆ ಮೇಲೆ ತೆರಳಬಾರದು. ಇಂತಹ ವಿಪತ್ತು ಎದುರಾದ ಸನ್ನಿವೇಶದಲ್ಲಿ ನಿರ್ಲಕ್ಷö್ಯವಹಿಸಿ ಜೀವಹಾನಿಯಾದರೆ ಪ್ರಯೋಜನವಿಲ್ಲ ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಅತಿವೃಷ್ಟಿಯಿಂದಾದ ಬೆಳೆ ಹಾನಿ, ಜೀವ ಹಾನಿ ಪ್ರಕರಣಗಳಿಗೆ ವಿಳಂಬವಿಲ್ಲದೇ ಪರಿಹಾರ ಕಲ್ಪಿಸಲು ಒತ್ತು ಕೊಡಬೇಕು. ಅತಿವೃಷ್ಟಿಯಿಂದಾಗಿ ಇದುವರೆಗೆ ಸಂಭವಿಸಿದ 60 ಜಾನುವಾರ ಹಾನಿ ಪ್ರಕರಣಗಳಲ್ಲಿ 52 ಪ್ರಕರಣಗಳಿಗೆ 9.39 ಲಕ್ಷ ರೂ.ದಷ್ಟು ಪರಿಹಾರ ನೀಡಿದ್ದು, ಬಾಕಿ 8 ಪ್ರಕರಣಗಳಿಗೆ ಕೂಡಲೇ ಪರಿಹಾರ ಕಲ್ಪಿಸಲು ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ಪೌರಾಯುಕ್ತರಿಗೆ ಸೂಚನೆ: ಈ ಮೊದಲೇ ತಿಳಿಸಿದ್ದರೂ ಬೀದರ ಸಿಟಿಯ ರಾಜಕಾಲುವೆಯ ಕೆಲವು ಕಡೆಗಳಲ್ಲಿ ಇದುವರೆಗೆ ಕಸ ತೆಗೆಯದೇ ಇರುವುದರಿಂದ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಮೂನ್ಸೂಚನೆ ಇರುವುದರಿಂದ ಬೀದರ ನಗರಾದ್ಯಂತ ಎಲ್ಲಾ ಕಡೆಗಳಲ್ಲಿನ ಗಟಾರುಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಅಲ್ಲಿನ ಕಸ ತೆಗೆಯುವ ಕಾರ್ಯಕ್ಕೆ ಮೊದಲಾದ್ಯತೆ ನೀಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ, ಬೀದರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶರಣಬಸಪ್ಪ ಕೋಟಪ್ಪಗೋಳ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ತಾರಾಮಣಿ ಜಿ.ಎಚ್., ತೋಟಗಾರಿಕೆ ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.

28/09/2020

ನಮ್ಮ

ವಿಶ್ವ ಮೆಚ್ಚಿದ ನಾಯಕ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದ  #ಸನ್ಮಾನ್ಯ_ಶ್ರೀ_ನರೇಂದ್ರ_ಮೋದಿಜೀ ಅವರಿಗೆ  #70ನೇ_ಜನ್ಮದಿನದ_ಶುಭಾಶಯಗಳು  ...
16/09/2020

ವಿಶ್ವ ಮೆಚ್ಚಿದ ನಾಯಕ
ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದ
#ಸನ್ಮಾನ್ಯ_ಶ್ರೀ_ನರೇಂದ್ರ_ಮೋದಿಜೀ ಅವರಿಗೆ
#70ನೇ_ಜನ್ಮದಿನದ_ಶುಭಾಶಯಗಳು 🎂🎉🎁

16/09/2020

ರಾಜ್ಯದಲ್ಲಿ ಸೆ.19 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದಿನಿಂದ ಸೆ. 19 ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, 5 ದಿನಗಳ ಕಾಲ ಯೆಲ್ಲೊ ಅಲರ್ಟ್ ಘೋಷಿಸಲಾ ಗಾದೆ. ಇನ್ನು ಉತ್ತರ ಕರ್ನಾಟಕದ ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬೀದರ್ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿದ್ದು, ಇಂದಿನಿಂದ ಸೆ. 17 ರಂದು ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು

06/09/2020

ಕಂಗನಾ ಮೇಲೆ ಟಿಪ್ಪಣಿ ಮಾಡಿದ್ದ ಸಂಜಯ ರಾಹುತ್ ಗೆ ಸರಿಯಾಗಿ ಉಗಿದ ಅರ್ನಾಬ್ ಗೋಸ್ವಾಮಿ..!!
🔥🔥🔥

ಚೀನಾಗೆ ವಾನಿರ್ಂಗ್ ಕೊಟ್ಟ ರಾಜನಾಥ್ ಸಿಂಗ್.
05/09/2020

ಚೀನಾಗೆ ವಾನಿರ್ಂಗ್ ಕೊಟ್ಟ ರಾಜನಾಥ್ ಸಿಂಗ್.

ಅದೇ ಅಂತೀನಿ.. ನಾನ್ ಬಿಕಾಮ್ ಮಾಡಿದೋನಿಗೇ ಆಗಿಲ್ಲ ಇವ್ನು ಯಾರ್ ಗುರೂ ಇವ್ನು ?
05/09/2020

ಅದೇ ಅಂತೀನಿ.. ನಾನ್ ಬಿಕಾಮ್ ಮಾಡಿದೋನಿಗೇ ಆಗಿಲ್ಲ ಇವ್ನು ಯಾರ್ ಗುರೂ ಇವ್ನು ?

04/09/2020

BIG BREAKING BHALKI LIVE

02/09/2020

Every middle class family drama when buying a new bike‼️😭🤣

 #ಪ್ರೇಯಸಿ_ಸಾವಿನ_ಸತ್ಯ_ಅರಗಿಸಿಕೊಳ್ಳಾಗದೆ_ಆತ್ಮಹತ್ಯೆಗೆ_ಶರಣಾದ_ಪ್ರೇಮಿ.ಮಾನಸಿಕವಾಗಿ ಕುಗ್ಗಿ ಹೋಗಿದ್ದ ಯುವಕ, ಪ್ರೇಯಸಿ ಅಂತ್ಯ ಸಂಸ್ಕಾರ ಮಾಡಿ...
02/09/2020

#ಪ್ರೇಯಸಿ_ಸಾವಿನ_ಸತ್ಯ_ಅರಗಿಸಿಕೊಳ್ಳಾಗದೆ_ಆತ್ಮಹತ್ಯೆಗೆ_ಶರಣಾದ_ಪ್ರೇಮಿ.

ಮಾನಸಿಕವಾಗಿ ಕುಗ್ಗಿ ಹೋಗಿದ್ದ ಯುವಕ, ಪ್ರೇಯಸಿ ಅಂತ್ಯ ಸಂಸ್ಕಾರ ಮಾಡಿದ ಸ್ಮಶಾನದಲ್ಲಿನ ಮೊಬೈಲ್​ ಟವರ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ..

ಬೀದರ್: ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪ್ರೇಯಸಿಯ ಸಾವಿನ ಬಗೆಗಿನ ಸುದ್ದಿ ಅರಗಿಸಿಕೊಳ್ಳಲಾಗದೆ ಮಾನಸಿಕವಾಗಿ ನೊಂದ ಯುವಕನೊಬ್ಬ ಮೊಬೈಲ್​ ಟವರ್​​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹುಮನಾಬಾದ್ ಪಟ್ಟಣದಲ್ಲಿ ನಡೆದಿದೆ.
ಪ್ರೇಯಸಿ ಸಾವಿನ್ನಪ್ಪಿದ್ದಳೆಂದು ಆತ್ಮಹತ್ಯೆಗೆ ಶರಣಾದ ಪ್ರೇಮಿಪಟ್ಟಣದ ಹೊರವಲಯದ ವಾಂಜರಿ ಗ್ರಾಮದ ನಾಗೇಶ್ ರೆಡ್ಡಿ(24) ಮೃತ ಯುವಕ. ನಾಗೇಶ್​ ಪ್ರೀತಿಸುತ್ತಿದ್ದ ಯುವತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಳು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಯುವಕ, ಪ್ರೇಯಸಿ ಅಂತ್ಯ ಸಂಸ್ಕಾರ ಮಾಡಿದ ಸ್ಮಶಾನದಲ್ಲಿನ ಮೊಬೈಲ್​ ಟವರ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.ಇವರಿಬ್ಬರ ಪ್ರೀತಿ ವಿಚಾರ ಇತ್ತೀಚೆಗಷ್ಟೇ ಬಯಲಾಗಿತ್ತು. ಈ ನಡುವೆ ಯುವತಿ ಅನಾರೋಗ್ಯದಿಂದ ಸಾವನಪ್ಪಿದ್ದಳು. ಯುವತಿಯ ಅಗಲಿಕೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಲವ್ ಕಹಾನಿ ವೈರಲ್​ ಆಗಿದೆ.
ಸುದ್ದಿ ಕ್ರಪೆ :ಈ ಟಿವಿ ಭಾರತ ವರದಿಗಾರರು..

ವಿಷ್ಣುವಿನ ತಾಳ್ಮೆ  ಇರಲಿ ಆದರೆ ನರಸಿಂಹ ನ ಕೋಪ ಯಾವತ್ತು ಮರೀಬೇಡ🆎😍😍🔥🔥
27/08/2020

ವಿಷ್ಣುವಿನ ತಾಳ್ಮೆ ಇರಲಿ ಆದರೆ ನರಸಿಂಹ ನ ಕೋಪ ಯಾವತ್ತು ಮರೀಬೇಡ🆎😍😍🔥🔥

JAI Ganesha🙏🙏🙏🙏🙏
18/08/2020

JAI Ganesha🙏🙏🙏🙏🙏

18/08/2020

ದೇಶ ಪ್ರೇಮಕ್ಕೆ ಇದೇ ಸಾಕ್ಷಿ...

ಆನ್ಲೈನ್ ವ್ಯಾಪಾರದ ಕಥೆ.....😎
18/08/2020

ಆನ್ಲೈನ್ ವ್ಯಾಪಾರದ ಕಥೆ.....😎

05/08/2020

ಹಿಂದೂಗಳ ಹೆಮ್ಮೆ ಅಯೋಧ್ಯೆಯನ್ನು ಜಿಹಾದಿಗಳು ಅಡ್ಡದಾರಿಯಿಂದ ಕಿತ್ಕೊಂಡಿದ್ರು ಅದನ್ನು ಕಾನೂನಿನ ಮ‌ೂಲಕ ಮತ್ತು ಹಲವು ಸಂಘರ್ಷಗಳನ್ನು ಮಾಡಿ ಹಿಂದೂಗಳಿಗೆ ಮರಳಿಸಿದ ಮೋದಿಜೀ🚩🙏

14/04/2020

Read without miss 👇👇
Very important msg for life . Plz read👇

*ಕೊರೋನ ವೈರಸ್*

ಕೊರೊನ ಅದು ಪ್ರಾಣ ಇಲ್ಲದ ( RNA-RIBO NUCLEIC ACID )ಒಂದು ಪ್ರೋಟಿನ್ ಪದಾರ್ಥ ದ ವೈರಾಣ. ಇದರ ಮೇಲೆ ಕೊಬ್ಬಿನ ಪದಾರ್ಥವೊಂದು ಪೊರೆಯಾಗಿ ಏರ್ಪಟ್ಟು ಒಂದು ರೀತಿ ಪೌಡರ್ ಆಗಿರುತ್ತದೆ. ಕೊರೊನಾ ಪದದ ಅರ್ಥ‌ ಕಿರೀಟ ಈ ವೈರಾಣು ನೋಡಲು ಕಿರೀಟದಂತೆ ಇರುವುದರಿಂದ ಈ ಹೆಸರು ಬಂದಿದೆ ಎಂದು‌ ಹೇಳಲಾಗುತ್ತದೆ. ಇನ್ನು ಬೇರೆ ವೈರಾಣುಗಳಿಗಿಂತ ಕೊರೊನಾ ವೈರಾಣು ಸ್ವಲ್ಪ ಮಟ್ಟಿಗೆ ಭಾರವಾಗಿರುತ್ತದೆ. ಇದೇ ಕಾರಣಕ್ಕೆ ಇದು ಗಾಳಿಯಲ್ಲಿ ತೇಲುವುದಿಲ್ಲ. ( ಒಂದು ವೇಳೆ ಇದು ಗಾಳಿಯಲ್ಲಿ ಹಾರುವಂತಿದ್ದರೆ ಇಷ್ಟೊತ್ತಿಗೆ ಜಗತ್ತಿನ ಅರ್ಧ ಜನ ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿ ಇರುತಿತ್ತು ) ಕೊರೊ‌ನಾ ವೈರಾಣು ಬಹುತೇಕ ಭೂಮಿಯಲ್ಲೇ ಬಿದ್ದಿರುತ್ತದೆ. ಕೊರೊನಾ ನಿರ್ಜೀವ ಕಣ 14 ದಿನ ನಿರ್ಜೀವ ಕಣವಾಗಿಯೇ ಇರುತ್ತದೆ. ಇದಕ್ಕೆ ಜೀವ ಬರಬೇಕಾದರೆ ಯಾವುದಾದರೂ ಜೀವಕೋಶದ ಆಶ್ರಯ ಬೇಕೇ ಬೇಕು.

🌼 ದೇಹದ ಯಾವ ಭಾಗದಲ್ಲಿ ಇದಕ್ಕೆ ಜೀವ ಸಿಗುತ್ತದೆ ? 🌼

ನಮ್ಮ ದೇಹದ ಕಣ್ಣು, ಮೂಗು, ಬಾಯಿ ನಿರ್ಜೀವ ಕೊರೊನಾಗೆ ಜೀವ ತುಂಬುತ್ತವೆ. ಮೊದಲು ಕಣ್ಣಿನ ವಿಚಾರಕ್ಕೆ ಬರುವುದಾದರೆ ನಮ್ಮ ಕಣ್ಣಿನ ಕಿಸಿರು, ಜಿಬರೆ ಅಂತಾ ನಾವು ಏನು ಹೇಳುತ್ತೇವೆ. ಅದರ ಸಂಪರ್ಕಕ್ಕೆ ಬಂದರೆ ಕೊರೊನಾ ಜೀವ ಪಡೆಯುತ್ತದೆ. ಮತ್ತೆ ಮೂಗು ಸಹಾ ಕಿಲ್ಲರ್ ಕೊರೊನಾದ ಫೇವರೇಟ್ ಸ್ಥಳ. ಮೂಗಿನ ಸಿಂಬಳದ ( ಗೊಣ್ಣೆ ) ಪ್ರೋಟೀನ್ ಇದಕ್ಕೆ ಆಮ್ಲಜನಕ. ಇದರ ಜೊತೆಗೆ ನಮ್ಮ ಗಂಟಲ ಕಫವೇ ಇದಕ್ಕೆ ಅತಿ ಹೆಚ್ಚು ಆಶ್ರಯ ನೀಡುವ ಆ್ಯಕ್ಟೀವ್ ಮಾಡುವ ಹಾಟ್‌ಸ್ಪಾಟ್. ಈ ಮೂರರಲ್ಲಿ ಯಾವುದೇ ಕೊರೊನಾಗೆ ಸಿಕ್ಕಿದರೂ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಕಣಗಳಾಗಿ ವಿಭಜನೆಯಾಗಿ ಶ್ವಾಸಕೋಶ ಸೇರಿ ಬಿಡುತ್ತದೆ ಈ ಮಾರಿ.

ಒಮ್ಮೆ ಇದು ಒಳ ಸೇರಿದರೆ ಶ್ವಾಸಕೋಶದ ರಕ್ತನಾಳಗಳನ್ನು ಆಕ್ರಮಿಸಿ ನಮ್ಮ ಶರೀರಕ್ಕೆ ಪ್ರಾಣವಾಯುವನ್ನು ನಿರೋಧಿಸುತ್ತದೆ. ಈ ಕಾರಣದಿಂದಾಗಿ ರೋಗಿಯ ಪ್ರಾಣ ವಾಯುವು ಲಭಿಸದೆ ಮರಣ ಹೊಂದುತ್ತಾ‌ನೆ. ಇದರ ಜೊತೆಗೆ ಇದರಿಂದ "ನೆಗಡಿ" ಹೆಚ್ಚಾಗಿ ಕಂಡುಬರುತ್ತದೆ. ರೋಗಿ ಸೀನಿದಾಗ, ಕೆಮ್ಮಿದಾಗ, ಆತನ ಸಿಮ್ಮಳ ಮೂಲಕ, ಕಫ ಮೂಲಕ, ಈ ರೋಗ ಕಣಗಳು ಎಲ್ಲೆಂದರೆ ಅಲ್ಲಿ ಬೀಳುತ್ತವೆ. ನಾವು ಹತ್ತಿರ ಇದ್ದರೆ ನಮ್ಮ ಮೇಲೂ ಬೀಳಬಹುದು. ಇಲ್ಲ ತುಂತುರು ಹನಿಯಾಗಿ ಬೇರೆ ಯಾವುದರ ಮೇಲಾದರೂ ಬೀಳಬಹುದು. ಇನ್ನು ಆಯಾ ಪದಾರ್ಥ ಲಕ್ಷಣಗಳ ಅನುಸಾರ ವಾತಾವರಣದ ತಾಪಮಾನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊರೊನಾ 4 ಘಂಟೆಯಿಂದ 24 ಘಂಟೆಯವರೆಗೊ ಶಕ್ತಿವಂತವಾಗಿ ಇರುತ್ತದೆ. ಅಂದರೆ ಸೂರ್ಯನ ತಾಪಮಾನಕ್ಕೆ ಇದರ ಮೇಲೆ ಇರುವ ಕೊಬ್ಬಿನ ಪೊರೆ ಕರಗಿ ಹೋಗಿ ವೈರಾಣು ಶಕ್ತಿ ಕಳೆದುಕೊಳ್ಳುತ್ತದೆ.

ಇಲ್ಲಿಯವರೆಗೂ ಈ ರೋಗ ವಿಜಯ ಕೇಕೆ ಹಾಕಿ ಬಂದ ದೇಶಗಳೆಲ್ಲವೂ ಸರಿ ಸುಮಾರು ಶೀತದ ಪ್ರದೇಶಗಳೇ. ತಾಪಮಾನ ಕಡಿಮೆ ಪ್ರದೇಶಗಳಲ್ಲಿ ಇದರ ಮೇಲೆ ಕೊಬ್ಬಿನ ಪೊರೆ ಕರಗುವ ಸಾಧ್ಯತೆ ಕಡಿಮೆ. ಇನ್ನು ಕೊರೊನಾ ತನ್ನಿಂದ ತಾನೇ ನಮ್ಮನ್ನು ಅಂಟಿಕೊಳ್ಳಲಾರದು. ಸರ್ವೇ ಸಾಮಾನ್ಯವಾಗಿ ನಾವೇ ಅವುಗಳನ್ನು ಸ್ಪರ್ಶಿಸುತ್ತೇವೆ. ನಮ್ಮ ಕೈ ಬೆರಳುಗಳಿಗೆ ಇದು ಅಂಟಿಕೊಳ್ಳಬಹುದು. ನಮ್ಮ ಕೈಗಳಿಂದ ನಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸಿದಾಗ ಇವು ಆ್ಯಕ್ಟೀವ್ ಆಗಿ ನಮ್ಮ ದೇಹದಲ್ಲಿ ಆಶ್ರಯ ಪಡೆಯುತ್ತವೆ.ಕಣ್ಣಿನ ಜಿಬಿರೆಯಲ್ಲಿ ಸೇರಿದರೆ ತಕ್ಷಣವೇ ಅದು ಕಣ್ಣಿನ ನೀರಾಗಿ ವೃದ್ದಿಗೊಂಡು ಮೂಗಿನ ಕಡೆ ಜಾರಿ ಮೂಗಿನ ದ್ವಾರವನ್ನು ತಲುಪುತ್ತದೆ. ಮೂಗಿನ ಸಿಂಬಳ ಬಾಯಿಯ ಕಫದ ಜೊತೆ ಸೇರಿದಾಗ ಗಂಟಲು ಅಲ್ಲಿಂದ ಶ್ವಾಸಕೋಶ ತಲುಪುತ್ತದೆ.

✳ ಕೊರೊನಾಗೆ ಚಿಕಿತ್ಸೆ ✳

ಕೊರೊನಾಗೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಮದ್ದು ಕಂಡು ಹಿಡಿದಿಲ್ಲ. ಆದರೆ ಕೊರೊನಾ ವೈರಾಣುವಿನ ಕೆಲವು ಬಲಹೀನತೆಗಳ ಆಧಾರದ ಮೇಲೆ ಅದನ್ನೇ ಅಸ್ತ್ರಗಳಾಗಿ ಬಳಸಿಕೊಂಡು ನಮ್ಮನ್ನು ನಾವು ರಕ್ಷಸಿಕೊಳ್ಳಬಹುದಾಗಿದೆ. ಕೊರೊನಾಗೆ ರಕ್ಷಣ ಕವಚ ಇದರ ಮೇಲೆ ಇರುವ ಕೊಬ್ಬಿನ ಪದಾರ್ಥ. ಈ ಕೊಬ್ಬಿನ ಅಂಶಗಳನ್ನು ನಾಶ ಮಾಡಿದರೆ ಇದನ್ನು ಸರ್ವನಾಶ ಮಾಡಬಹುದು. ಸಾಧಾರಣವಾಗಿ ಕೊಬ್ಬಿನ ಪದಾರ್ಥವು ಬೇಸಿಗೆಯ ಬಿಸಿಲಿಗೆ ಕರಗಿಹೋಗುತ್ತದೆ ಅಥವಾ ಸಾಬೂನಿನ ನೊರೆಗೆ ಕರಗುತ್ತದೆ. ( ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಕೈಗಳಿಗೆ ಅಥವಾ ಪಾತ್ರೆಗಳಿಗೆ ಹಿಡಿದ ಜಿಡ್ಡು ಕೊಬ್ಬಿನ ಪದಾರ್ಥವನ್ನು ತೊಲಗಿಸಲು ಸಾಬೂನು ಪದಾರ್ಥಗಳನ್ನು ಬಳಸುತ್ತೇವೆ )ಇದಕ್ಕೂ ಕೂಡ ಆದೇ ಮದ್ದು. ನಮ್ಮ ಶರೀರವನ್ನು ತಲೆ ಕೂದಲ ಸಮೇತ ಸುಮಾರು 40 ಡಿಗ್ರಿ ಸೆಂಟಿಗ್ರೇಡ್ ನೀರಿನಲ್ಲಿ, ಚೆನ್ನಾಗಿ ನೊರೆ ಬರುವ ಸಾಬೂನಿನಲ್ಲಿ ಪ್ರತಿ ದಿನ 2 ರಿಂದ 3 ಸಲ ಸ್ನಾನ ಮಾಡುವುದರಿಂದ ನಮ್ಮ ಶರೀರದ ಭಾಗಗಳಿಗೆ ಅಂಟಿಕೊಂಡಿರುವ ಈ ಕೊರೊನಾ ವೈರಾಣುವಿನ ಕೊಬ್ಬಿನ ಪದಾರ್ಥ ಕರಗಿಹೋಗಿ ಸರ್ವನಾಶವಾಗುತ್ತದೆ. ತದನಂತರ ಚೆನ್ನಾಗಿ ಕೊಬ್ಬರಿ ಎಣ್ಣೆಯನ್ನು ಶರೀರದ ಎಲ್ಲಾ ಭಾಗಗಳಿಗೆ ಹಚ್ಚಿದರೆ ಒಂದು ವೇಳೆ ನಮ್ಮ ಶರೀರದ ಭಾಗಗಳ ಮೇಲೆ ಈ ರೋಗ ಕಣಗಳು ಮತ್ತೆ ಬಿದ್ದರು ಅಲ್ಲೇ ಅಂಟ್ಟಿಕೊಂಡು ಹೊರಗೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೆ ಸ್ನಾನ ಮಾಡಿದಾಗ ಇದು ನಾಶವಾಗಿ ಹೋಗುತ್ತದೆ. ಇದರ ಜೊತೆಗೆ ನಾವು ಧರಿಸಿದ ಬಟ್ಟೆ, ಬಳಸಿದ ಕರ್ಚೀಪ್, ಸೇರಿ ಎಲ್ಲವನ್ನೂ ಸ್ವಚ್ಛವಾಗಿಟ್ಟುಕೊಂಡರೆ ಈ ವ್ಯಾಧಿ ಕಣಗಳ ಮೇಲೆ ಇದ್ದ ಕೊಬ್ಬು ಕರಗಿ ಅದರ ಶಕ್ತಿ ನಾಶವಾಗುತ್ತದೆ.

❇ ಕೊನೆ ಮಾತು ❇

ಕೊರೊನಾ ವೈರಸ್‌ಗೆ ನಮ್ಮ ಬಳಿ ಮದ್ದಿಲ್ಲ. ಆದರೆ ಅದು ಬಾರದಂತೆ ತಡೆಯುವ ಮದ್ದು ನಮ್ಮ ಬಳಿ ಇದೆ. ಅದುವೇ ಸಾಮಾಜಿಕ ಅಂತರ. ಈ ಕಿಲ್ಲರ್ ಕೊರೊನಾ ವೈರಸ್ ಆರ್ಭಟ ತಣ್ಣಗಾಗುವವರೆಗೂ ಸಾವಧಾನದಿಂದ ವರ್ತಿಸೋಣ. ವೈದ್ಯರು ಹೇಳುವ ಎಲ್ಲಾ ನಿಯಮಗಳನ್ನು ಹಿಂದೆ ಮುಂದೆ ಯೋಚಿಸದೆ ಕಡ್ಡಾಯವಾಗಿ ಪಾಲಿಸೋಣ. ನೆನಪಿಡಿ ನೀವು ಒಬ್ಬರು ಆರೋಗ್ಯವಾಗಿದ್ದರೆ ಕನಿಷ್ಠ 10 ಸಾವಿರ ಜನರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಕನಿಷ್ಠ ಈ ಒಂದು ವಿಚಾರದಲ್ಲಾದರೂ ರಾಗ ದ್ವೇಷ ಅಸೂಯೆ ಹೊಟ್ಟೆ ಕಿಚ್ಚು ಒಣ ಪ್ರತಿಷ್ಠೆ ಕೀಳು ರಾಜಕೀಯ ಇತ್ಯಾದಿ ಇತ್ಯಾದಿಗಳನ್ನು ಬದಿಗಿಟ್ಟು ಮಹಾಮಾರಿಯ ವಿರುದ್ದ ಮಾನಸಿಕವಾಗಿ ಸದೃಢರಾಗಿ ಹೋರಾಡೋಣ. ಕೊರೋನಾ ಅಸುರವನ್ನು ಓಡಿಸೋಣ..

*BIDAR360

ಮನೆ ಇಲ್ಲದಿದ್ದರೇನು ದೇಶದ ಜೊತೆ ನಿಲ್ಲುವ ಸ್ವಚ್ಛ ಮನಸ್ಸು ಇದೆಯಲ್ಲಾ ಅಷ್ಟು ಸಾಕು.🙏
06/04/2020

ಮನೆ ಇಲ್ಲದಿದ್ದರೇನು ದೇಶದ ಜೊತೆ ನಿಲ್ಲುವ ಸ್ವಚ್ಛ ಮನಸ್ಸು ಇದೆಯಲ್ಲಾ ಅಷ್ಟು ಸಾಕು.🙏

25/03/2020

ದಯವಿಟ್ಟು ಸಂಪೂರ್ಣವಾಗಿ‌ ಕೇಳಿ....
ಇಟಲಿಯಿಂದ ಕನ್ನಡಿತಿಯೊಬ್ಬರು ಹೇಳುತ್ತಿರುವ ಎಚ್ಚರಿಕೆ ನುಡಿಗಳು..... #ಶೇರ್ ಮಾಡಿ


BIDAR360

24/03/2020

ನಿಜವಾಗಲೂ ಆ ಪ್ರಧಾನಸೇವಕನ ಮಾತಿನ ಕಳಕಳಿಗಳಿಗೆ ನನ್ನ ಅನಂತ ಅನಂತ ಪ್ರಣಾಮಗಳು🙏🏻🙏🏻🙏🏻

ದೇಶದ ಪ್ರಧಾನಿಯಾಗಿ ಅಲ್ಲ ನಿಮ್ಮೆಲ್ಲರ ಮನೆಯ ಸದಸ್ಯನಾಗಿ ಕೈ ಮುಗಿದು ಹೇಳುತ್ತಿದ್ದೇನೆ ಮುಂದಿನ ಮೂರು ವಾರಗಳ ಕಾಲ ನಿಮ್ಮೆಲ್ಲರ ಆರೋಗ್ಯಕ್ಕಾಗಿ ಮನೆಯಲ್ಲೇ ಇರಿ. ಲಕ್ಷ ಲಕ್ಷ ಕೋಟಿ ನಷ್ಟವಾದರು ಸರಿ ನನಗೆ ದೇಶದ ಆರ್ಥಿಕತೆಗಿಂತ ನಿಮ್ಮ ಆರೋಗ್ಯ ಮೊದಲು, ನೀವೆಲ್ಲರೂ ಆರೋಗ್ಯವಾಗಿದ್ದರೆ ಮುಂದೆ ಏನೂ ಬೇಕಾದರೂ ಸಾಧಿಸಬಹುದು ಎಂದು ದೇಶದ ಜನರಲ್ಲಿ ಎರಡೆರಡು ಸಲ‌ ಕೈ ಮುಗಿದು ಪ್ರಾರ್ಥಿಸಿದ್ದಾರೆ ಪ್ರಧಾನ ಸೇವಕ...ಭಾರತದ ಪ್ರತಿಯೊಂದು ಜೀವಕ್ಕೆ ಬೆಲೆ ಕೊಟ್ಟ ಪ್ರಧಾನ ಸೇವಕನ ಆ ಮಾತುಗಳ ಆಜ್ಞೆಯನ್ನ ದಯವಿಟ್ಟು ಎಲ್ಲರೂ ಪಾಲಿಸೋಣ...

Address


Website

Alerts

Be the first to know and let us send you an email when Bidar 360 posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share