Namma Bengaluru

  • Home
  • Namma Bengaluru

Namma Bengaluru Contact information, map and directions, contact form, opening hours, services, ratings, photos, videos and announcements from Namma Bengaluru, News & Media Website, .

21/08/2022
17/02/2022
https://youtu.be/tswxe6btv-wಕರ್ನಾಟಕ ವಿಧಾನಸಭೆ ನೇರ ಪ್ರಸಾರ ವೀಕ್ಷಣೆಗೆ ಈ ಲಿಂಕ್ ಕ್ಲಿಕ್ ಮಾಡಿ
13/09/2021

https://youtu.be/tswxe6btv-w

ಕರ್ನಾಟಕ ವಿಧಾನಸಭೆ ನೇರ ಪ್ರಸಾರ ವೀಕ್ಷಣೆಗೆ ಈ ಲಿಂಕ್ ಕ್ಲಿಕ್ ಮಾಡಿ

⠀ Assembly

"ಅಕ್ರಮ ಹಿಂದಿ ದಿವಸ್" ಬದಲು ಕರಾಳ ದಿನ ಆಚರಣೆ .! ಹಿಂದಿ ಪ್ರಶಸ್ತಿಯನ್ನು ದಕ್ಷಿಣ ಭಾರತೀಯರು ನಿರಾಕರಿಸಿ..!----ಪತ್ರಿಕಾ ಪ್ರಕಟಣೆಸೆಪ್ಟೆಂಬರ್...
13/09/2021

"ಅಕ್ರಮ ಹಿಂದಿ ದಿವಸ್" ಬದಲು ಕರಾಳ ದಿನ ಆಚರಣೆ .! ಹಿಂದಿ ಪ್ರಶಸ್ತಿಯನ್ನು ದಕ್ಷಿಣ ಭಾರತೀಯರು ನಿರಾಕರಿಸಿ..!
----

ಪತ್ರಿಕಾ ಪ್ರಕಟಣೆ

ಸೆಪ್ಟೆಂಬರ್ 14 ರಂದು ಕನ್ನಡಿಗರು ನಡೆಸುತ್ತಿರುವ ಹಿಂದಿ ಹೇರಿಕೆ ಬೇಡ ಅಭಿಯಾನದ ಅಂಗವಾಗಿ ಹಿಂದಿ ದಿವಸ್ ಹೆಸರಲ್ಲಿ ಒಕ್ಕೂಟ ಸರ್ಕಾರವು ಕೊಡುವ ಪ್ರಶಸ್ತಿಗಳನ್ನು ದಕ್ಷಿಣ ಭಾರತೀಯರು ನಿರಾಕರಿಸಬೇಕು ಎಂದು ಕರ್ನಾಟಕ ಜನಾಧಿಕಾರ ಪಕ್ಷದ ರಾಜ್ಯಾಧ್ಯಕ್ಷ ಹರೀಶ್ ಕುಮಾರ್ ಬಿ ಒತ್ತಾಯಿಸಿದ್ದಾರೆ. ಒಕ್ಕೂಟ ಸರ್ಕಾರ ನಡೆಸುತ್ತಿರುವ ಹಿಂದಿ ದಿವಸ್ ಕಾರ್ಯಕ್ರಮವೇ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿದ್ದು, ಇದೊಂದು "ಅಕ್ರಮ ಹಿಂದಿ ದಿವಸ್" ಕಾರ್ಯಕ್ರಮ ಎಂದು ಅವರು ಹೇಳಿದ್ದಾರೆ.

ಹಿಂದಿ ಭಾಷೆ ಮತ್ತು ಹಿಂದಿ ದಿವಸ್ ಅನ್ನು ಪ್ರೋತ್ಸಾಹಿಸಲು ಒಕ್ಕೂಟ ಸರ್ಕಾರವು 'ರಾಜಭಾಷಾ ಕೀರ್ತಿ ಪುರಸ್ಕಾರ' ಮತ್ತು 'ರಾಜಭಾಷಾ ಗೌರವ್ ಪುರಸ್ಕಾರ' ಎಂಬ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಗಳನ್ನು ಉದ್ದೇಶಪೂರ್ವಕವಾಗಿ ದಕ್ಷಿಣ ಭಾರತದ ಬ್ಯಾಂಕುಗಳು, ಒಕ್ಕೂಟ ಸರ್ಕಾರದ ಸಂಸ್ಥೆಗಳಿಗೆ ನೀಡುವ ಮೂಲಕ ಹಿಂದಿ ದಿವಸ್ ಅನ್ನು ಪ್ರೋತ್ಸಾಹಿಸುವ ತಂತ್ರಗಾರಿಕೆ ನಡೆಸುತ್ತಿದೆ. ಹಾಗಾಗಿ ಒಕ್ಕೂಟ ಸರ್ಕಾರದ ಈ ಕುತಂತ್ರವನ್ನು ದಕ್ಷಿಣ ಭಾರತೀಯರು, ಅದರಲ್ಲೂ ಕನ್ನಡಿಗರು ವಿಫಲಗೊಳಿಸಬೇಕು. ಸೆಪ್ಟೆಂಬರ್ 14 ರಂದು ಕರ್ನಾಟಕದಲ್ಲಿ ಕನ್ನಡಿಗರು ಕರಾಳ ದಿನ ಆಚರಿಸಲಿದ್ದಾರೆ ಎಂದು ಹರೀಶ್ ಕುಮಾರ್ ಬಿ ಹೇಳಿದ್ದಾರೆ.

ಭಾರತವು ಒಕ್ಕೂಟ ವ್ಯವಸ್ಥೆಯಾಗಿ ಆಡಳಿತ ಪ್ರಾರಂಭ ಮಾಡಿದ ದಿನದಿಂದಲೇ ನಮ್ಮ ದೇಶವನ್ನು ಭಾಷಾವಾರು ವಿಂಗಡಣೆ ಮಾಡಲಾಗಿದೆ. ಪ್ರತಿಯೊಂದು ರಾಜ್ಯಕ್ಕೂ ಅದರದ್ದೇ ಆದ ಭಾಷೆ ಇದೆ. ವಿವಿಧತೆಯಲ್ಲಿ ಏಕತೆಯೇ ಭಾರತದ ವೈಶಿಷ್ಟ್ಯವಾಗಿರುವಾಗ ಒಂದೇ ಭಾಷೆಯನ್ನು ಹೇರುವುದು ಸರಿಯಲ್ಲ ಎಂಬುದೇ ಹಿಂದಿ ಹೇರಿಕೆ ವಿರುದ್ಧದ ಕೂಗಿನ ನಿಜವಾದ ಉದ್ದೇಶ. ಸೆಪ್ಟೆಂಬರ್ 14 ರಂದು ಒಕ್ಕೂಟ ಸರ್ಕಾರವು ನಡೆಸುತ್ತಿರುವ "ಅಕ್ರಮ ಹಿಂದಿ ದಿವಸ್" ಆಚರಣೆಯೂ ಹಿಂದಿ ಹೇರಿಕೆಯ ಭಾಗವೇ ಆಗಿದೆ. ಆದ್ದರಿಂದಲೇ ಕನ್ನಡ ಸಂಘಟನೆಗಳೆಲ್ಲವೂ ಒಮ್ಮತದ ನಿರ್ಧಾರ ತೆಗೆದುಕೊಂಡು ಸೆಪ್ಟೆಂಬರ್ 14ನ್ನು ಕರಾಳ ದಿನ ಎಂದು ಆಚರಿಸಲು ನಿರ್ಧರಿಸಿದೆ.

ಒಕ್ಕೂಟ ಸರ್ಕಾರವು ಹಿಂದಿಗೆ ಪ್ರಾಧಾನ್ಯತೆ ಕೊಡುವುದರಿಂದ ದಕ್ಷಿಣ ಭಾರತೀಯರಿಗೆ ಅನ್ಯಾಯವಾಗುತ್ತಿದೆ. ಮುಖ್ಯವಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷಿಕರು ಈ ಕಾರಣದಿಂದಾಗಿಯೇ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾರೆ. ಒಕ್ಕೂಟ ಸರ್ಕಾರವು ದ್ರಾವಿಡ ರಾಜ್ಯಗಳನ್ನು ಅನುದಾನಕ್ಕಾಗಿ ಸತಾಯಿಸುತ್ತಲೇ ಬಂದಿದೆ. ನಮ್ಮದೇ ಜಿ ಎಸ್ಟಿ ಪಾಲಿನ ಹಣವನ್ನು ನೀಡಲು ಒಕ್ಕೂಟ ಸರ್ಕಾರ ಸಿದ್ದವಿಲ್ಲ. ಇವೆಲ್ಲಾ ಮನಸ್ಥಿತಿಯು ಒಕ್ಕೂಟ ಸರ್ಕಾರಕ್ಕೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತೀಯರ ಬಗೆಗಿರುವ ಧೋರಣೆಯನ್ನು ತೋರಿಸುತ್ತದೆ.

ಹಿಂದಿಯ ವ್ಯವಸ್ಥಿತ ಹೇರಿಕೆಯಿಂದಾಗಿ ಒಕ್ಕೂಟ ಸರ್ಕಾರದಲ್ಲಿ ಸೃಷ್ಟಿಯಾಗುವ ಲಕ್ಷಾಂತರ ಉದ್ಯೋಗಗಳಲ್ಲಿ ಕನ್ನಡಿಗರ ಪಾಲೇ ಇಲ್ಲವಾಗಿದೆ. ಈ ಉದ್ಯೋಗಗಳ ಪೈಕಿ ಬಹುತೇಕ ಪರೀಕ್ಷೆಗಳು ಇರುವುದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ. ಯುಪಿಎಸ್‌ಸಿ ಮೊದಲನೇ ಹಂತದ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುತ್ತವೆ. ಬ್ಯಾಂಕಿಂಗ್ ಮತ್ತು ರೈಲ್ವೇ ಉದ್ಯೋಗಗಳ ಪರೀಕ್ಷೆಯಲ್ಲಿ ಪ್ರಾದೇಶಿಕ ರಾಜ್ಯ ಭಾಷೆಯೂ ಇರಬೇಕು ಎಂಬ ಹೋರಾಟಕ್ಕೆ ಮಣಿಯುವ ಒಕ್ಕೂಟ ಸರ್ಕಾರವು ಈವರೆಗೂ ಅದನ್ನು ಕಾರ್ಯರೂಪಕ್ಕೆ ತಂದಿಲ್ಲ.

ಭಾಷೆ ಎಂದರೆ ಬರಿಯ ಶೋಕಿಯಲ್ಲ. ನುಡಿ ಎಂಬುದು ಬದುಕು. ನನಗೆ ಬೇಕಾದ ಭಾಷೆಯನ್ನು ನಾನು ಮಾತನಾಡುತ್ತೇನೆ ಎಂಬ ದಾಷ್ಟ್ಯವನ್ನು ಮನೆಯೊಳಗಷ್ಟೇ ಸೀಮಿತ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡ ಭಾಷೆ ಅನ್ನದ ಭಾಷೆ. ಇಲ್ಲಿನ ರೈತರು, ಕೂಲಿಕಾರ್ಮಿಕರಿಂದ ಹಿಡಿದು ಎಲ್ಲರೂ ಕನ್ನಡ ಭಾಷಿಕರೇ ಆಗಿದ್ದಾರೆ. ಒಕ್ಕೂಟ ಸರ್ಕಾರವು ಹಿಂದಿಯಲ್ಲಿ ಬ್ಯಾಂಕ್, ರೈಲ್ವೇ ಪರೀಕ್ಷೆ ನಡೆಸುವುದರಿಂದ ಕರ್ನಾಟಕದ ಬ್ಯಾಂಕುಗಳಲ್ಲಿ ಹಿಂದಿ ನೌಕರರು ತುಂಬಿ ಹೋಗಿದ್ದಾರೆ. ಈ ಹಿಂದಿ ನೌಕರರ ಜೊತೆಗೆ ಕರ್ನಾಟಕದ ಜನ ವ್ಯವಹಿಸುವುದಾದರೂ ಹೇಗೆ ? ಬೆರಳೆಣಿಕೆಯ ಸಿಬ್ಬಂದಿಗಾಗಿ ಕರ್ನಾಟಕದ ಜನರು ಹಿಂದಿ ಕಲಿಯಬೇಕೇ ? ಅಗತ್ಯವಿಲ್ಲದ ಭಾಷಾ ಹೇರಿಕೆಯ ಬಗ್ಗೆ ಇಷ್ಟು ಸರಳವಾದ ವಿಷಯ ಒಕ್ಕೂಟ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ ಎಂದಲ್ಲ. ಒಕ್ಕೂಟ ಸರ್ಕಾರವು ಒಂದು ಹುನ್ನಾರದ ಭಾಗವಾಗಿ ಈ ಹಿಂದಿ ಹೇರಿಕೆಯನ್ನು ವ್ಯವಸ್ಥಿತವಾಗಿ ಮಾಡುತ್ತಿದೆ.

ಹಿಂದಿ ನಾಮ ಫಲಕ ತೆರವು, ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರೋಧ, ಬ್ಯಾಂಕ್/ ರೈಲ್ವೇ ಉದ್ಯೋಗಗಳಲ್ಲಿ ಕನ್ನಡದಲ್ಲೇ ಪರೀಕ್ಷೆ, ಕನ್ನಡಿಗರಿಗೇ ಉದ್ಯೋಗ ಸೇರಿದಂತೆ ಹಲವು ಚಳವಳಿಗಳನ್ನು ನಡೆಸಿರುವ ನಾವುಗಳು ಇದಕ್ಕಾಗಿ ಲಾಠಿ ಏಟು, ಜೈಲುವಾಸವನ್ನು ಅನುಭವಿಸಿದ್ದೇವೆ. ಒಕ್ಕೂಟ ಸರ್ಕಾರವು ಮತ್ತು ಅದರ ಬಾಲಂಗೋಚಿಯಂತೆ ವರ್ತಿಸುವ ರಾಜ್ಯ ಸರ್ಕಾರವು ಏನೇ ಮಾಡಿದರೂ ನಮ್ಮ ಹಿಂದಿ ಹೇರಿಕೆ ವಿರೋಧಿ ಚಳುವಳಿಯನ್ನು ತಡೆಯಲು ಸಾಧ್ಯವಿಲ್ಲ. ಕನ್ನಡಿಗರೆಲ್ಲಾ ಸೇರಿಕೊಂಡು ಸೆಪ್ಟೆಂಬರ್ 14 ರಂದು ಕರಾಳ ದಿನ ಎಂದು ಆಚರಿಸಲಿದ್ದಾರೆ ಎಂದು ಕನ್ನಡ ಹೋರಾಟಗಾರ ಹಾಗೂ ಕರ್ನಾಟಕ ಜನಾಧಿಕಾರ ಪಕ್ಷದ ರಾಜ್ಯಾಧ್ಯಕ್ಷ ಹರೀಶ್ ಕುಮಾರ್ ಬಿ ಹೇಳಿದ್ದಾರೆ.

ವಿಧಾನ ಮಂಡಲ ಅಧಿವೇಶನ; ಈ ವರ್ಷದಿಂದ ಉತ್ತಮ ಶಾಸಕ ಪ್ರಶಸ್ತಿ ಘೋಷಣೆ... , https://youtu.be/8f6sM7b3h1c
13/09/2021

ವಿಧಾನ ಮಂಡಲ ಅಧಿವೇಶನ; ಈ ವರ್ಷದಿಂದ ಉತ್ತಮ ಶಾಸಕ ಪ್ರಶಸ್ತಿ ಘೋಷಣೆ... ,

https://youtu.be/8f6sM7b3h1c

https://youtu.be/lKg9rbh_xp8
10/09/2021

https://youtu.be/lKg9rbh_xp8

This easy Ganesha chathurthi makeup can be created for any festivals..I loved this version of music with makeup, if you want to see same, please comment and ...

https://youtu.be/MhBTiy6aY-Q
02/09/2021

https://youtu.be/MhBTiy6aY-Q

ಸದ್ಗುರು ತತ್ವಗಳ ಬಗ್ಗೆ ಶ್ರೀಮತ್‌ ಪರಮಹಂಸ ಪರಿವ್ರಾಜಕಾಚಾರ್ಯ ಕುಂಡಲಿನಿ ಜ್ಞಾನಯೋಗಿ ಅವಧೂತ ದಂಡಿ ಸದ್ಗುರು ಆತ್ಮಾನಂದ ಸರಸ್ವತಿ .....

https://m.dailyhunt.in/news/india/kannada/kannada+dunia-epaper-kannadad/big+breaking+raajyadalli+shaale+aarambhakke+sark...
31/08/2021

https://m.dailyhunt.in/news/india/kannada/kannada+dunia-epaper-kannadad/big+breaking+raajyadalli+shaale+aarambhakke+sarkaaradindha+adhikruta+aadesha+se+6+rindha+6+7+8+ne+klaas+shuru-newsid-n311694336

ಬೆಂಗಳೂರು: ಶಾಲೆ ಆರಂಭಕ್ಕೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಸೆಪ್ಟೆಂಬರ್ 6 ರಿಂದ 6, 7, 8 ನೇ ತರಗತಿಗಳನ್ನು ಆರಂಭಿಸಲು ರಾಜ್ಯ...

https://youtu.be/6fUF-to16VA
31/08/2021

https://youtu.be/6fUF-to16VA

ಸದ್ಗುರು ತತ್ವಗಳ ಬಗ್ಗೆ ಶ್ರೀಮತ್‌ ಪರಮಹಂಸ ಪರಿವ್ರಾಜಕಾಚಾರ್ಯ ಕುಂಡಲಿನಿ ಜ್ಞಾನಯೋಗಿ ಅವಧೂತ ದಂಡಿ ಸದ್ಗುರು ಆತ್ಮಾನಂದ ಸರಸ್ವತಿ .....

26/08/2021

ಮಲೆನಾಡಿನ ಉತ್ಪನ್ನಗಳ ಕುರಿತ ಈ ವಿಡಿಯೋ ನೋಡಿ.

All other products are soo good visit their website here:

https://rawgranules.in/

RawGranules

Raw Granules

Ashwini Devadiga

https://fb.watch/7D2M6VZ07u/

ಭಾರತದ ಸುಪ್ರೀಂ ಕೋರ್ಟ್‌ 2027ರಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಕಾಣಲಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಭಾರತದ ಮುಖ್ಯ ...
18/08/2021

ಭಾರತದ ಸುಪ್ರೀಂ ಕೋರ್ಟ್‌ 2027ರಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಕಾಣಲಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ, ನ್ಯಾಯಮೂರ್ತಿಗಳ ನೇಮಕಕ್ಕಾಗಿ ಒಟ್ಟು ಒಂಬತ್ತು ಜನರ ಹೆಸರನ್ನು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಒಂಬತ್ತು ಜನರಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಅವರು, ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಗುಜರಾತ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಬೆಲಾ ತ್ರಿವೇದಿ.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಒಂಬತ್ತು ನ್ಯಾಯಮೂರ್ತಿಗಳ ಸ್ಥಾನ ಖಾಲಿ ಇದೆ. ಇಂದು ನ್ಯಾಯಮೂರ್ತಿ ನವಿನ್‌ ಸಿನ್ಹಾ ನಿವೃತ್ತರಾಗಲಿದ್ದು, ಖಾಲಿ ಇರುವ ಸ್ಥಾನಗಳ ಸಂಖ್ಯೆ 10ಕ್ಕೆ ಹೆಚ್ಚಳವಾಗಲಿದೆ.

ರಾಜಸ್ಥಾನದಲ್ಲಿ ಮಿಂಚುತ್ತಿರುವ ಕರ್ನಾಟಕದ ಐಪಿಎಸ್ ಅಧಿಕಾರಿಗೆ ರಾಷ್ಟ್ರಪತಿ ಪದಕ:ರಾಜಸ್ಥಾನದಲ್ಲಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿರುವ ಕರ್ನಾ...
17/08/2021

ರಾಜಸ್ಥಾನದಲ್ಲಿ ಮಿಂಚುತ್ತಿರುವ ಕರ್ನಾಟಕದ ಐಪಿಎಸ್ ಅಧಿಕಾರಿಗೆ ರಾಷ್ಟ್ರಪತಿ ಪದಕ:
ರಾಜಸ್ಥಾನದಲ್ಲಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿರುವ ಕರ್ನಾಟಕ ಮೂಲದ ಹಿರಿಯ ಐಪಿಎಸ್ ಅಧಿಕಾರಿ ಎಂ.ಎನ್. ದಿನೇಶ್ ಅವರಿಗೆ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ಪೊಲೀಸ್ ಪದಕ ನೀಡಿ ಗೌರವಿಸಲಾಗಿದೆ.

ಸೊಹ್ರಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಎಂ.ಎನ್. ದಿನೇಶ್ ಇದೀಗ ರಾಜಸ್ಥಾನದಲ್ಲಿ ಭ್ರಷ್ಟರನ್ನು ಜೈಲಿಗೆ ಕಳುಹಿಸುವ ಮೂಲಕ ರಾಜಸ್ಥಾನದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದ್ದಾರೆ.

ರಾಷ್ಟ್ರಪತಿ ಪದಕ ಗೌರವ ಸ್ವೀಕರಿಸಿದ ಹಿನ್ನೆಲೆಯಲ್ಲಿ ಒನ್‌ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಎಂ.ಎನ್. ದಿನೇಶ್ ಅವರು, ನನ್ನ ಸೇವೆ ಮೆಚ್ಚಿ ರಾಷ್ಟ್ರಪತಿ ಪದಕ ಗೌರವ ನೀಡಿರುವುದು ಅಭಿನಂದನಾರ್ಹ. ಈ ಮೊದಲೇ ನನಗೆ ಈ ಗೌರವ ಸಿಕ್ಕಬೇಕಿತ್ತು. ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣ ಬಾಕಿ ಇದ್ದಿದ್ದರಿಂದ ಸಿಕ್ಕಿರಲಿಲ್ಲ. ಇದೀಗ ಆ ಗೌರವ ಸಿಕ್ಕಿರುವುದು ಸಂತಸ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.

Address


Website

Alerts

Be the first to know and let us send you an email when Namma Bengaluru posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma Bengaluru:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share