City TV

City TV Bangalore's best channel

30/12/2022
30/12/2022

ಥಿಯೇಟರ್ ಮುಂದೆ ಯೋಗರಾಜ್ ಭಟ್ಟರು ತಮಟೆ ಹೇಗೆ ಬಾರಿಸಿದರು ನೀವೇ ನೋಡಿ

21/10/2022

ಥಿಯೇಟರ್ ನಲ್ಲಿ ಕುಣಿದು ಕುಪ್ಪಳಿಸಿದ ಹೆಡ್ ಬುಷ್ ಡಾಲಿ and ಟೀಮ್ |
Head Bush Dolly and the team who danced in the anupama theater| TV tv channel tv media tv news kannada

ನವದೆಹಲಿ (ಪಿಟಿಐ): ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್...
13/10/2022

ನವದೆಹಲಿ (ಪಿಟಿಐ): ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ಗುರುವಾರ ವಿಭಜಿತ ತೀರ್ಪು ನೀಡಿದೆ.

ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿಗಳನ್ನು ವಜಾಗೊಳಿಸಿದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರಿಗೆ ಅನುಮತಿ ನೀಡಿದರು.

"ಅಭಿಪ್ರಾಯ ಭಿನ್ನಾಭಿಪ್ರಾಯವಿದೆ" ಎಂದು ಪೀಠದ ನೇತೃತ್ವದ ನ್ಯಾಯಮೂರ್ತಿ ಗುಪ್ತಾ ಅವರು ತೀರ್ಪು ಪ್ರಕಟಿಸುವಾಗ ಆರಂಭದಲ್ಲಿ ಹೇಳಿದರು.

ವಿಭಜಿತ ತೀರ್ಪಿನ ದೃಷ್ಟಿಯಿಂದ, ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿಗಳನ್ನು ಸೂಕ್ತವಾದ ದೊಡ್ಡ ಪೀಠವನ್ನು ರಚಿಸುವುದಕ್ಕಾಗಿ ಭಾರತದ ಮುಖ್ಯ ನ್ಯಾಯಾಧೀಶರ ಮುಂದೆ ಇಡುವಂತೆ ಪೀಠವು ನಿರ್ದೇಶಿಸಿತು.

ತೀರ್ಪು ಪ್ರಕಟಿಸುವಾಗ, ನ್ಯಾಯಮೂರ್ತಿ ಧುಲಿಯಾ, ಹೈಕೋರ್ಟ್ ತಪ್ಪು ದಾರಿ ಹಿಡಿದಿದೆ ಮತ್ತು ಹಿಜಾಬ್ ಧರಿಸುವುದು ಅಂತಿಮವಾಗಿ "ಆಯ್ಕೆಯ ವಿಷಯವಾಗಿದೆ, ಹೆಚ್ಚೇನೂ ಇಲ್ಲ, ಕಡಿಮೆ ಇಲ್ಲ" ಎಂದು ಹೇಳಿದರು.

ಅವರು ತೀರ್ಪಿನಲ್ಲಿ ಅವರ ಮುಖ್ಯ ಒತ್ತು ವಿವಾದಕ್ಕೆ ಅನಿವಾರ್ಯವಲ್ಲದ ಅಗತ್ಯ ಧಾರ್ಮಿಕ ಆಚರಣೆಯ ಪರಿಕಲ್ಪನೆಯಾಗಿದೆ ಎಂದು ಹೇಳಿದರು.

ಹೆಣ್ಣು ಮಗುವಿನ ಶಿಕ್ಷಣದ ಮೇಲೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿದೆ ಎಂದು ಹೇಳಿದ ನ್ಯಾಯಮೂರ್ತಿ ಧುಲಿಯಾ, "ನಾವು ಅವಳ ಜೀವನವನ್ನು ಉತ್ತಮಗೊಳಿಸುತ್ತೇವೆಯೇ" ಎಂದು ಕೇಳಿದರು.

ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿಗಳನ್ನು ಅನುಮತಿಸುವಾಗ, ನ್ಯಾಯಮೂರ್ತಿ ಧುಲಿಯಾ ಅವರು ಶಾಲೆ ಮತ್ತು ಕಾಲೇಜುಗಳಲ್ಲಿ ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸುವ ರಾಜ್ಯ ಸರ್ಕಾರದ ಫೆಬ್ರವರಿ 5, 2022 ರ ಆದೇಶವನ್ನು ರದ್ದುಗೊಳಿಸಿದ್ದಾರೆ ಎಂದು ಹೇಳಿದರು.

ಮಾರ್ಚ್ 15 ರಂದು, ಕರ್ನಾಟಕದ ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ಒಂದು ವಿಭಾಗವು ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು, ಇದು ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ತೀರ್ಪು ನೀಡಿತ್ತು. ಇಸ್ಲಾಮಿಕ್ ನಂಬಿಕೆ.

29/08/2022

ರಾಮನಗರ ಕಣ್ವ ಡ್ಯಾಮ್

29/08/2022

ಮೈಸೂರು ಬೆಂಗಳೂರು ಹೆದ್ದಾರಿ ...

09/08/2022

ಕಾಟನ್ ಪೇಟೆಯ ಹಜ್ರತ್ ತವಕಲ್ ಮಸ್ತಾನ್ ದರ್ಗಾದಲ್ಲಿ ಮೊಹರಂ ಆಚರಣೆ...

04/08/2022

ಬೆಂಗಳೂರು ಮೈಸೂರು ರಸ್ತೆ

02/08/2022

ಮಳೆ ಅವಾಂತರ

02/08/2022

ಬೆಂಗಳೂರಿನಲ್ಲಿ ಸುರಿದ ಧಾರಕರ ಮಳೆಗೆ ರಸ್ತೆಯೆಲ್ಲ ಜಲಾವೃತ..ಸಂಚಾರ ಅಸ್ತವ್ಯಸ್ತ..

01/11/2021

Kannada Rajostava specia live

30/09/2021

ರಸ್ತೆ ಮಧ್ಯದಲ್ಲಿ ಹೊತ್ತಿ ಹುರಿದ ಎಲೆಕ್ಟ್ರಿಕ್ ಸ್ಕೂಟರ್ ...

08/09/2021

NAVAGRAHA JYOTHISYA LIVE CALL-7022 668899

25/07/2021

Himachal Pradesh falling rocks recorded in
Mobile ..

22/07/2021

ಜಗತ್ತನ್ನು ಸಂಕಷ್ಟಕ್ಕೆ ಸಿಲುಕಿಸಿದ ಚೀನಾ ದೇಶದ ಇಂದಿನ ಪರಿಸ್ಥಿತಿ*

04/07/2021

ಬೆಂಗಳೂರಿನಲ್ಲಿ ಧಾರಾಕಾರ ಮಳೆ ...

22/05/2021

Continue...

21/05/2021

Mucormycosis 'black fungus' maiming Covid patients in India

12/05/2021

For More Information Contact: 8123052548

ವಿಶ್ವ ಆರೋಗ್ಯ ಸಂಸ್ಥೆ ಕಳವಳ ಭಾರತದಲ್ಲಿ  ಬಿ-1617 ಕೊರೋನಾ ರೂಪಾಂತರಿ ಹೆಚ್ಚು ಅಪಾಯಕಾರಿ...ಭಾರತದಲ್ಲಿ ಕಂಡು ಬಂದಿರುವ ಕೋವಿಡ್ ರೂಪಾಂತರಿ (ಬಿ...
11/05/2021

ವಿಶ್ವ ಆರೋಗ್ಯ ಸಂಸ್ಥೆ ಕಳವಳ ಭಾರತದಲ್ಲಿ ಬಿ-1617 ಕೊರೋನಾ ರೂಪಾಂತರಿ ಹೆಚ್ಚು ಅಪಾಯಕಾರಿ...

ಭಾರತದಲ್ಲಿ ಕಂಡು ಬಂದಿರುವ ಕೋವಿಡ್ ರೂಪಾಂತರಿ (ಬಿ -1617) ಆತಂಕಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಸಂಸ್ಥೆಯ ಕೋವಿಡ್ ವಿಭಾಗದ ತಾಂತ್ರಿಕ ತಜ್ಞೆ ಡಾ. ಮರಿಯಾ ವ್ಯಾನ್ ಕರ್ಖೋವ್ ಅವರು ತಿಳಿಸಿದ್ದಾರೆ.ಭಾರತದಲ್ಲಿ ವೈರಸ್ ಪ್ರಸರಣದ ತೀವ್ರತೆಯ ಮಾಹಿತಿ ನಮಗಿದೆ. ಈ ಸಂಬಂಧ ಸ್ಥಳೀಯವಾಗಿ ಹಾಗೂ ವಿದೇಶಗಳಲ್ಲಿ ನಡೆಯುತ್ತಿರುವ ಅಧ್ಯಯನಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ನಮ್ಮೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಂಶೋಧನೆ ಮತ್ತು ಪ್ರಯೋಗಾಲಯಗಳಿಂದ ವಿವರಗಳನ್ನು ಸಂಗ್ರಹಿಸುತ್ತೇವೆ.
ಪ್ರಸ್ತುತ ನಮ್ಮಲ್ಲಿ ಪ್ರಾಥಮಿಕ ಮಾಹಿತಿ ಮಾತ್ರ ಇದೆ. ರೂಪಾಂತರಿಯ ಜೀನೋಮ್ ಬಗ್ಗೆ ಮತ್ತಷ್ಟು ಆಳವಾಗಿ ತಿಳಿದುಕೊಳ್ಳಬೇಕಾಗಿದೆ. ಭವಿಷ್ಯದಲ್ಲಿ ನಾವು ಹೆಚ್ಚಿನ ಸಂಖ್ಯೆಯ ಕೊರೋನಾ ವೈರಸ್‌ಗಳು ಹಾಗೂ ರೂಪಾಂತರಿಗಳನ್ನು ನೋಡಬೇಕಾಗಿದೆ. ಅವುಗಳ ಪ್ರಸರಣ ತಡೆಗಟ್ಟುವುದು, ರೋಗದ ತೀವ್ರತೆಯನ್ನು ಕಡಿಮೆ ಮಾಡುವುದು ಹಾಗೂ ಸಾವುಗಳನ್ನು ತಡೆಯುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.

ತಿರುಪತಿ ಮೃತ ಕೋವಿಡ್‌ ರೋಗಿಗಳ ಕುಟುಂಬಕ್ಕೆ ₹10 ಲಕ್ಷ ಪರಿಹಾರ...ತಿರುಪತಿಯ ರುಯಾ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ...
11/05/2021

ತಿರುಪತಿ ಮೃತ ಕೋವಿಡ್‌ ರೋಗಿಗಳ ಕುಟುಂಬಕ್ಕೆ ₹10 ಲಕ್ಷ ಪರಿಹಾರ...

ತಿರುಪತಿಯ ರುಯಾ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಮೃತಪಟ್ಟಿರುವ 11 ಜನ ಕೋವಿಡ್‌ ರೋಗಿಗಳ ಕುಟುಂಬಗಳಿಗೆ ತಲಾ ₹ 10 ಲಕ್ಷ ಪರಿಹಾರ ನೀಡುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌.ಜಗನ್ ಮೋಹನ್‌ ರೆಡ್ಡಿ ಮಂಗಳವಾರ ಘೋಷಿಸಿದರು.
ರಾಜ್ಯದಲ್ಲಿನ ಕೋವಿಡ್‌ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೊ ಕಾನ್ಫರೆನ್ಸ್‌ ವೇಳೆ ಅವರು ಘೋಷಣೆ ಮಾಡಿದರು.ನೌಕಾಪಡೆಯ ಪೂರ್ವ ಕಮಾಂಡ್‌ನ ಎಂಜಿನಿಯರ್‌ಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿ, ಆಮ್ಲಜನಕ ಪೂರೈಕೆ ವ್ಯವಸ್ಥೆಯನ್ನು ಪರಿಶೀಲಿಸಿ, ಕೆಲವು ಮಾರ್ಪಾಡುಗಳಿಗೆ ಸಲಹೆ ನೀಡಿದೆ ಎಂದು ಮೂಲಗಳು ಹೇಳಿವೆ.

ರಾಂಚಿಯ ಟಾಟಾನಗರದಿಂದ ಬೆಂಗಳೂರು ರಾಜ್ಯಕ್ಕೆ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ...ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು...
11/05/2021

ರಾಂಚಿಯ ಟಾಟಾನಗರದಿಂದ ಬೆಂಗಳೂರು ರಾಜ್ಯಕ್ಕೆ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ...

ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು "ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು ಸೇವೆಯನ್ನು ಆರಂಭಿಸಿದ್ದು, ಸುಮಾರು 120 ಟನ್ ಆಕ್ಸಿಜನ್ ಹೊತ್ತ "ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು ಜೆಮ್‌ಶೆಡ್‌ಪುರ್‌ನಿಂದ ಸೋಮವಾರ ಹೊರಟಿತ್ತು. ಇಂದು ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಆಗಮಿಸಿದೆ.
ಕರ್ನಾಟಕದಲ್ಲಿ ಸೋಮವಾರ 39,305 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 596 ಜನರು ಮೃತಪಟ್ಟಿದ್ದಾರೆ. ರಾಜ್ಯದ ದೈನಂದಿನ ಆಕ್ಸಿಜನ್ ಕೋಟಾವನ್ನು 1200 ಟನ್ ಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿತ್ತು.
ಭಾರತೀಯ ರೈಲ್ವೆ ನೀಡಿರುವ ಮಾಹಿತಿಯಂತೆ 68 ರೈಲುಗಳು ಇದುವರೆಗೂ ಪ್ರಯಾಣವನ್ನು ಪೂರ್ಣಗೊಳಿಸಿವೆ. ಮಹಾರಾಷ್ಟ್ರಕ್ಕೆ 293 ಮೆಟ್ರಿಕ್ ಟನ್, ಉತ್ತರ ಪ್ರದೇಶಕ್ಕೆ 1,230 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಲಾಗಿದೆ.

ಮಧ್ಯಪ್ರದೇಶಕ್ಕೆ 271 ಮೆಟ್ರಿಕ್ ಟನ್, ಹರಿಯಾಣಕ್ಕೆ 555 ಮೆಟ್ರಿಕ್ ಟನ್, ತೆಲಂಗಾಣಕ್ಕೆ 123 ಮೆಟ್ರಿಕ್ ಟನ್, ದೆಹಲಿಗೆ 1679 ಮತ್ತು ತೆಲಂಗಾಣಕ್ಕೆ 40 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬಿ.ಎಸ್ ಯಡಿಯೂರಪ್ಪ, 120 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತ 6 ಕಂಟೇನರ್ ಗಳು ಬೆಂಗಳೂರಿಗೆ ಬಂದು ತಲುಪಿದೆ. ಕೊರೊನಾ ವಿರುದ್ಧ ಹೋರಾಡಲು ನಿರಂತರವಾಗಿ ಬೆಂಬಲ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಪಿಯೂಶ್ ಗೋಯಲ್, ಡಿ.ವಿ ಸದಾನಂದ ಗೌಡ, ಪ್ರಲ್ಹಾದ್ ಜೋಶಿ ಅವರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.

ಅರಿಶಿನ ಹಾಲು ಸೇವಿಸಿ ಗಂಟಲಿನ ಸೋಂಕು ನಿವಾರಣೆಯಾಗುತ್ತದೆ.ದೇಶಾದ್ಯಂತ ಕೊರೊನಾ ಸೋಂಕಿತರಿಗೆ ಕೋವಿಶೀಲ್ಡ್, ಹಾಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ...
11/05/2021

ಅರಿಶಿನ ಹಾಲು ಸೇವಿಸಿ ಗಂಟಲಿನ ಸೋಂಕು ನಿವಾರಣೆಯಾಗುತ್ತದೆ.

ದೇಶಾದ್ಯಂತ ಕೊರೊನಾ ಸೋಂಕಿತರಿಗೆ ಕೋವಿಶೀಲ್ಡ್, ಹಾಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ. ಮನೆಯಲ್ಲಿಯೂ ಯೋಗ, ಪ್ರಾಣಾಯಾಮದ ಜತೆಗೆ ಅರಿಶಿನ ಹಾಲು ಸೇರಿದಂತೆ ಅನೇಕ ಮನೆಮದ್ದು ಮಾಡಿಕೊಳ್ಳಲು ಖುದ್ದಾಗಿ ವೈದ್ಯರೇ ಸಲಹೆ ನೀಡುತ್ತಿದ್ದಾರೆ.
ಕೊರೊನಾ ಅವಧಿಯಲ್ಲಿ ಅರಿಶಿನದ ಗುಣಮಟ್ಟವನ್ನು ಇಂದು ಇಡೀ ಜಗತ್ತು ದೃಢವಾಗಿ ಅರ್ಥಮಾಡಿಕೊಳ್ಳುತ್ತಿದೆ. ನಮ್ಮ ಋಷಿಮುನಿಗಳು ಇದನ್ನು ಶುಭ ಎಂದು ಕರೆಯುವ ಮೂಲಕ ನಮ್ಮ ಸಂಸ್ಕೃತಿಯ ಭಾಗವಾಗಿಸಿದ್ದರು.
ಇಂದು ಅದೇ ಅರಿಶಿನವು ಕೊರೊನಾ ವೈರಸ್ ವಿರುದ್ಧ ಗುರಾಣಿಯಾಗಿ ನಿಂತಿದೆ. ವಾಸ್ತವವಾಗಿ ಅರಿಶಿನವು ಸೂಪರ್ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬಯೋಟಿಕ್ ಮತ್ತು ಆಂಟಿ ವೈರಸ್ ಆಗಿದೆ. ಅರಿಶಿನವು ನಮ್ಮ ಅಡುಗೆಮನೆಯಲ್ಲಿ ಕರಗಿದ್ದು ಅರಿಶಿನವಿಲ್ಲದೆ ತರಕಾರಿಗಳು ಅಥವಾ ಬೇಳೆಕಾಳುಗಳನ್ನು ಬೇಯಿಸುವುದು ಉತ್ತಮ ಪಾಕವಿಧಾನವಲ್ಲ ಎಂದು ಪರಿಗಣಿಸಲಾಗಿದೆ.ಅರಿಶಿನವು ವೈದ್ಯಕೀಯ ಏಜೆಂಟ್ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಅರಿಶಿನವನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಅದರ ಔಷಧೀಯ ಗುಣಮಟ್ಟ ಹೆಚ್ಚಾಗುತ್ತದೆ. ಅರಿಶಿನವನ್ನು ಬೆಚ್ಚಗಿನ ನೀರಿನಲ್ಲಿ ಬೆರಸಿ ಕುಡಿಯುವುದರಿಂದ ಗಂಟಲಿನ ಸೋಂಕು ನಿವಾರಣೆಯಾಗುತ್ತದೆ.

ಸೋಮವಾರದಿಂದ ರಾಜ್ಯದಲ್ಲಿ 10 ದಿನ ಲಾಕ್​​ಡೌನ್​​ ಜಾರಿರಾಜ್ಯದಲ್ಲಿ ಕೊರೊನಾ ಎರಡನೇ ಅಲೆಗೆ ಬ್ರೇಕ್​ ಹಾಕಲು ಕ್ಲೋಸ್​​ ಡೌನ್ ಜಾರಿ ಮಾಡಿದ್ದ ಸರ್...
07/05/2021

ಸೋಮವಾರದಿಂದ ರಾಜ್ಯದಲ್ಲಿ 10 ದಿನ ಲಾಕ್​​ಡೌನ್​​ ಜಾರಿ

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಗೆ ಬ್ರೇಕ್​ ಹಾಕಲು ಕ್ಲೋಸ್​​ ಡೌನ್ ಜಾರಿ ಮಾಡಿದ್ದ ಸರ್ಕಾರ, ಕೊರೊನಾ ಸೋಂಕಿನ ಪ್ರಕರಣಗಳ ಹೆಚ್ಚಳದ ಕಾರಣದಿಂದ ಲಾಕ್​​ಡೌನ್​ ಜಾರಿ ಮಾಡಲು ನಿರ್ಧರಿಸಿದೆ.
ಮುಖ್ಯಮಂತ್ರಿಗಳ ಕಚೇರಿಯಿಂದ ಲಾಕ್​ಡೌನ್ ಕುರಿತ ಮಾಹಿತಿ ಲಭ್ಯವಾಗಿದ್ದು, ಸೋಮವಾರ (ಮೇ 10)ದಿಂದ 10 ದಿನಗಳ ಕಾಲ ಲಾಕ್​​ಡೌನ್ ಜಾರಿ ಆಗಲಿದೆ. ಲಾಕ್​​ಡೌನ್​​ ವೇಳೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಅಲ್ಲದೇ ಕ್ಲೋಸ್​ಡೌನ್​ ವೇಳೆ ನೀಡಲಾಗಿದ್ದ ಎಲ್ಲಾ ವಿನಾಯಿಗಳನ್ನು ರದ್ದು ಪಡಿಸಿ ಕಠಿಣ ನಿಯಮಗಳನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ.
ಇಂದು ಬೆಳಗ್ಗೆಯಷ್ಟೇ ನಗರದ ಅಣ್ಣಮ್ಮ ದೇವಿ ದರ್ಶನ ಪಡೆದ ಬಳಿಕ ಮಾತನಾಡಿದ್ದ ಸಿಎಂ ಬಿಎಸ್​ವೈ, ರಾಜ್ಯದಲ್ಲಿ ದಿನೇ ದಿನೇ ಕೇಸ್ ಜಾಸ್ತಿ ಆಗುತ್ತಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಮಾತನಾಡಿ, ಆರೋಗ್ಯ ಇಲಾಖೆ ಲಾಕ್​​ಡೌನ್​ ಮಾಡುವತ್ತ ಒಲವು ಹೊಂದಿದೆ. ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದರು.

ರಾಜ್ಯ ಸರ್ಕಾರದಿಂದ 'ಖಾಸಗಿ ಆಸ್ಪತ್ರೆ'ಗಳಲ್ಲಿ 'ಸಿಟಿ ಸ್ಕ್ಯಾನಿಂಗ್'ಗೆ ರೂ.1,500 ದರ ನಿಗದಿಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನಿಂಗ್ ಗೆ...
07/05/2021

ರಾಜ್ಯ ಸರ್ಕಾರದಿಂದ 'ಖಾಸಗಿ ಆಸ್ಪತ್ರೆ'ಗಳಲ್ಲಿ 'ಸಿಟಿ ಸ್ಕ್ಯಾನಿಂಗ್'ಗೆ ರೂ.1,500 ದರ ನಿಗದಿ

ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನಿಂಗ್ ಗೆ ರೂ.1,500 ದರವನ್ನು ನಿಗದಿಗೊಳಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಹಣ ಪಡೆದ್ರೇ.. ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.ಸರಕಾರಿ ವ್ಯವಸ್ಥೆ ಅಡಿ ಸ್ಕ್ಯಾನಿಂಗ್ ಅನ್ನು ಉಚಿತವಾಗಿ ಮಾಡಲಾಗುತ್ತಿದೆ. ಸಾರ್ವಜನಿಕರು ಸರಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದೂ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.

14ದಿನ ಕರ್ನಾಟಕ ಸಂಪೂರ್ಣ ಲಾಕ್ ಡೌನ್?ಪ್ರತಿದಿನ ಸುಮಾರು ಐವತ್ತು ಸಾವಿರ ಕೇಸುಗಳು ದಾಖಲಾಗುತ್ತಿರುವುದರಿಂದ ಕರ್ನಾಟಕ ಸರಕಾರ ಅತ್ಯಂತ ಕಠಿಣ ಕ್ರಮ...
07/05/2021

14ದಿನ ಕರ್ನಾಟಕ ಸಂಪೂರ್ಣ ಲಾಕ್ ಡೌನ್?

ಪ್ರತಿದಿನ ಸುಮಾರು ಐವತ್ತು ಸಾವಿರ ಕೇಸುಗಳು ದಾಖಲಾಗುತ್ತಿರುವುದರಿಂದ ಕರ್ನಾಟಕ ಸರಕಾರ ಅತ್ಯಂತ ಕಠಿಣ ಕ್ರಮಕ್ಕೆ ಮುಂದಾಗುವ ಸಾಧ್ಯತೆ ದಟ್ಟವಾಗಿದೆ. ಮುಖ್ಯಮಂತ್ರಿಗಳೂ ಈ ಬಗ್ಗೆ ಸುಳಿವನ್ನು ನೀಡಿದ್ದಾರೆ."ಇವತ್ತು ನಾಳೆಯಲ್ಲಿ ಈ ಸಂಬಂಧ ಅಧಿಕಾರಿಗಳ ಸಭೆಯನ್ನು ಕರೆದಿದ್ದೇನೆ. ಇನ್ನೂ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆಯಿದೆ. ಯಾವ ರೀತಿಯ ಕಠಿಣ ಕ್ರಮ ಎನ್ನುವುದನ್ನು ಸಭೆಯ ನಂತರ ಹೇಳುತ್ತೇನೆ"ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.ಜನತಾ ಕರ್ಫ್ಯೂವನ್ನು ಜನರು ಸರಿಯಾಗಿ ಪಾಲಿಸುತ್ತಿಲ್ಲ, ಕೊಡುವ ಎಚ್ಚರಿಕೆಗೂ ಜನರು ಸ್ಪಂದಿಸುತ್ತಿಲ್ಲ. ಹಾಗಾಗಿ, ಲಾಕ್ ಡೌನ್ ಅನಿವಾರ್ಯ ಆಗಬಹುದು. ಹಾಗಾಗಿ, ಇನ್ನೂ ಕಠಿಣ ಕ್ರಮ ತೆಗೆದುಕೊಳ್ಳಬಾರದು ಎಂದಿದ್ದರೆ ಜನರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಬಂದು ಸಹಕರಿಸಬೇಕು"ಎಂದು ಯಡಿಯೂರಪ್ಪ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಭಾರತದಿಂದ ಬರುವ ಪ್ರಯಾಣಿಕರಿಗೆ ಶ್ರೀಲಂಕಾ ನಿರ್ಬಂಧ..ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಬರ...
06/05/2021

ಭಾರತದಿಂದ ಬರುವ ಪ್ರಯಾಣಿಕರಿಗೆ ಶ್ರೀಲಂಕಾ ನಿರ್ಬಂಧ..

ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಬರುವ ಪ್ರಯಾಣಿಕರಿಗೆ ಶ್ರೀಲಂಕಾ ನಿರ್ಬಂಧ ವಿಧಿಸಿದೆ. ಲಂಕಾ ಅಷ್ಟೆ ಅಲ್ಲದೆ ಭಾರತದಿಂದ ಬರುವವರಿಗೆ ಬ್ರಿಟನ್, ಯುಎಇ, ಆಸ್ಟ್ರೇಲಿಯಾ, ಸಿಂಗಪೂರ್ ರಾಷ್ಟ್ರಗಳಲ್ಲಿ ನಿರ್ಬಂಧ ಜಾರಿಗೊಳಿಸಲಾಗಿದೆ.ಭಾರತದಲ್ಲಿ ಕೊರೋನಾ ತೀವ್ರವಾಗಿ ಹರಡುತ್ತಿರುವ ಪರಿಣಾಮ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಲಂಕಾ ತಿಳಿಸಿದೆ.
ಕಳೆದ 5 ದಿನಗಳಿಂದ ಲಂಕಾದಲ್ಲಿ ಪ್ರತಿ ದಿನ 2,000 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಇದು ಏಪ್ರಿಲ್ ತಿಂಗಳಲ್ಲಿ ದಿನವೊಂದಕ್ಕೆ ಸರಾಸರಿ 200 ರಷ್ಟಿತ್ತು. ಭಾರತೀಯರು ಪಶ್ಚಿಮ ಏಷ್ಯಾಗೆ ಹಾಗೂ ಸಿಂಗಪೂರ್ ಗಳಿಗೆ ತೆರಳುವುದಕ್ಕೆ ಶ್ರೀಲಂಕಾ ಮಾರ್ಗವನ್ನೇ ಬಳಸಬೇಕಾಗಿತ್ತು. ಇದಕ್ಕೂ ಮುನ್ನ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕೆಂಬ ನಿಯಮ ವಿಧಿಸಲಾಗಿತ್ತು.

ಒಂದು ಬೆಡ್‍ಗೆ 50 ಸಾವಿರ ಲಂಚ...ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಪಾಲ್ಗೊಂಡವರು ಅಮಾಯಕರಿಂದ ಒಂದು ಬೆಡ್‍ಗೆ 40 ರಿಂದ 50 ಸಾವಿರ ಹಣ ಪೀಕುತ್ತಿದ್ದರ...
06/05/2021

ಒಂದು ಬೆಡ್‍ಗೆ 50 ಸಾವಿರ ಲಂಚ...

ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಪಾಲ್ಗೊಂಡವರು ಅಮಾಯಕರಿಂದ ಒಂದು ಬೆಡ್‍ಗೆ 40 ರಿಂದ 50 ಸಾವಿರ ಹಣ ಪೀಕುತ್ತಿದ್ದರೂ ಎಂಬ ಬೆಳಕಿಗೆ ಬಂದಿದೆ.ಒಂದು ಬೆಡ್‍ನಿಂದ ಸಿಗುತ್ತಿದ್ದ ಹಣದಲ್ಲಿ ಮಧ್ಯವರ್ತಿಗಳಿಗೆ ಶೇ.10 ರಷ್ಟು ಕಮಿಷನ್ ಸಿಗುತಿತ್ತು. ಉಳಿದ ಹಣವನ್ನು ವಾರ್ ರೂಮ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲ ವೈದ್ಯರು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಈ ದಂಧೆಯಲ್ಲಿ ಕೆಲ ವೈದ್ಯರೇ ಕಿಂಗ್‍ಪಿನ್‍ಗಳಾಗಿದ್ದುಅವರ ಸೂಚನೆಯಂತೆ ಕೆಲವು ವಾರ್ ರೂಮ್ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇವರ ಮಾತು ನಂಬಿ ಹಣ ನೀಡಲು ಸಮ್ಮತಿಸಿದವರಿಗೆ ಅನಾಯಾಸವಾಗಿ ಬೆಡ್ ಅಲಾಟ್ ಮಾಡಿಸಿಕೊಡುತ್ತಿದ್ದರು. ಇಲ್ಲದಿದ್ದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ಸಾಗಹಾಕುತ್ತಿದ್ದರು. ಈ ರೀತಿ ಬೆಡ್ ಸಿಗದೆ ಅದೆಷ್ಟೋ ಅಮಾಯಕ ಜೀವಗಳು ರಸ್ತೆಗಳಲ್ಲಿ ಶವಗಳಾಗಿ ಹೋದ ಉದಾಹರಣೆಗಳಿವೆ.ಅಮಾಯಕ ಜೀವಗಳೊಂದಿಗೆ ಚೆಲ್ಲಾಟವಾಡಿರುವ ಬೆಡ್‍ಬ್ಲಾಕಿಂಗ್ ದಂಧೆ ಕೇವಲ ದಕ್ಷಿಣ ವಲಯದಲ್ಲಿ ಮಾತ್ರ ನಡೆದಿರುವುದಲ್ಲ.ಎಲ್ಲಾ ಎಂಟು ವಲಯಗಳಲ್ಲೂ ನಡೆದಿದೆ.ಇದೀಗ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರಿಗೆ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಪಾಲ್ಗೊಂಡಿರುವ ವೈದ್ಯರು, ಮತ್ತಿತರ ಜಾತಕ ಲಭ್ಯವಾಗಿದ್ದು ಅವರಿಗೆಲ್ಲಾ ಶೀಘ್ರದಲ್ಲೇ ಹೆಡೆಮುರಿ ಕಟ್ಟುವ ಸಾಧ್ಯತೆಗಳಿವೆ.

Address


Website

Alerts

Be the first to know and let us send you an email when City TV posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share