BVS ರಾಯಚೂರು ಜಿಲ್ಲೆ

  • Home
  • BVS ರಾಯಚೂರು ಜಿಲ್ಲೆ

BVS ರಾಯಚೂರು ಜಿಲ್ಲೆ Contact information, map and directions, contact form, opening hours, services, ratings, photos, videos and announcements from BVS ರಾಯಚೂರು ಜಿಲ್ಲೆ, News & Media Website, .

04/03/2023

ಲಾವಣಿ ಪದ | ತಳ ಸಮುದಾಯಗಳ ಜನಪದ ಕಲೆ |Laavani padagalu| Kannada folk songs|Koppal|Prabuddha ಪ್ರಬುದ್ಧ|2023ಕೊಪ್ಪಳದಲಿ ನಡೆದ ತಳ ಸಮುದಾಯಗಳ ಕಲೆ ಪ್ರದರ್ಶನ ಕಾರ್ಯಕ್ರಮ....

22/01/2023
ಕನ್ನಡದ ಪ್ರಮುಖ ಸಾಹಿತಿ, ಸಾರಾ ಅಬೂಬಕ್ಕರ್ ಅವರಿಗೆ ಭಾವಪೂರ್ಣ ವಿದಾಯಗಳು.,
10/01/2023

ಕನ್ನಡದ ಪ್ರಮುಖ ಸಾಹಿತಿ, ಸಾರಾ ಅಬೂಬಕ್ಕರ್ ಅವರಿಗೆ ಭಾವಪೂರ್ಣ ವಿದಾಯಗಳು.,

ಬೌದ್ದ ಧರ್ಮದ ಸಂಪ್ರದಾಯದಂತೆ ವಿವಾಹವಾಗಿ ಮಾದರಿಯಾದ ಚಳುವಳಿಯ ಒಡನಾಡಿ, ಆಯುಷ್ಮಾನ್ ಸುರೇಶ ಬೈಲಮರ್ಚೆಡ್ ಮತ್ತು ಆಯುಷ್ಮತಿ ಸುಮಂಗಲಾ ಅವರಿಗೆ BVS...
09/01/2023

ಬೌದ್ದ ಧರ್ಮದ ಸಂಪ್ರದಾಯದಂತೆ ವಿವಾಹವಾಗಿ ಮಾದರಿಯಾದ ಚಳುವಳಿಯ ಒಡನಾಡಿ, ಆಯುಷ್ಮಾನ್ ಸುರೇಶ ಬೈಲಮರ್ಚೆಡ್ ಮತ್ತು ಆಯುಷ್ಮತಿ ಸುಮಂಗಲಾ ಅವರಿಗೆ BVS ವತಿಯಿಂದ ವಿವಾಹ ಮಹೋತ್ಸವದ ಶುಭಾಶಯಗಳು.

.

30/12/2022

ದಲಿತ, ಅಲ್ಪಸಂಖ್ಯಾತ ಮತ್ತು ಎಲ್ಲ ಶೋಷಿತ ಸಮುದಾಯದ ಯುವಜನರಿಗೆ ಇಷ್ಟು ಅರಿವಿದ್ದರೆ ಸಾಕು.
KL Chandrashekhar Aijoor ಬರೆದಿರುವುದು ಓದಿ, ಓದಿಸಿ:

ನಾನು ಸಾಮಾನ್ಯವಾಗಿ ಈ ತಲೆಮಾರಿನ ಯುವಜನತೆಯೊಂದಿಗೆ ಮಾತನಾಡುವಾಗ ಅದರಲ್ಲೂ ದಲಿತ, ಮುಸ್ಲಿಮ್, ಶೋಷಿತ ಸಮುದಾಯಗಳ ಹುಡುಗ ಹುಡುಗಿಯರೊಂದಿಗೆ ಮುಖಾಮುಖಿಯಾಗುವಾಗ ಹೇಳುವುದಿಷ್ಟೇ:

1. ಸ್ಟಡೀಸ್ ಅನ್ನು ಗಂಭೀರವಾಗಿ ತೆಗೆದುಕೊಳ್ಳಿ.

2. ವಿದ್ಯಾರ್ಥಿ ಬದುಕಲ್ಲಿ ಮೋಜು ಮಸ್ತಿ ಮಾಡುವ ಪ್ರಿವಿಲೇಜ್ ಜಾತಿಗಳ ಸವಲತ್ತುಗಳು ನಿಮಗೆ ಇಲ್ಲದಿರುವುದರಿಂದ ನೀವು ಅಕಾಡೆಮಿಕ್ ಶಿಕ್ಷಣವನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು.

3. ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದೆ, ಕನಿಷ್ಠ ವಿಶ್ವವಿದ್ಯಾಲಯ ತಲುಪುವ P.G., Ph.D. ಮಟ್ಟದ ಶಿಕ್ಷಣವನ್ನು ಕಡ್ಡಾಯವಾಗಿ ಮಾಡಲೇಬೇಕು. ಈ ನಿಟ್ಟಿನಲ್ಲಿ ಹಾಸ್ಟೆಲ್ ಬದುಕು ನಿಮಗೆ ಹೊಸಹುಟ್ಟು ನೀಡಬಲ್ಲದು.

4. ನಿಮಗೆ ಬೇಕಿರಲಿ, ಇಲ್ಲದಿರಲಿ ಅನಿವಾರ್ಯವಾಗಿ ಶೈಕ್ಷಣಿಕ ಪದವಿಗಳನ್ನು ಪಡೆಯಲೇಬೇಕು.

5. ಶಿಕ್ಷಕ ವೃತ್ತಿಯನ್ನು ಕನಸಾಗಿಸಿಕೊಂಡವರು NET/SLET/KSET ಪರೀಕ್ಷೆಗಳನ್ನು P.G. ಮಾಡುವಾಗಲೇ ಅಥವಾ P.G. ಮುಗಿದ ಒಂದೆರಡು ವರ್ಷಗಳಲ್ಲಿ ಪಾಸು ಮಾಡಿಕೊಳ್ಳುವುದು ಒಳಿತು.

6. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಮೇಲಿನ ಹಿಡಿತ ಸಂಶೋಧನೆ ನಡೆಸುವಾಗ ಮತ್ತು ಸಂದರ್ಶನ ಎದುರಿಸುವಾಗ ನೆರವಿಗೆ ಬರುತ್ತದೆ.

7. ಪದವಿ, ಸ್ನಾತಕೋತ್ತರ ಪದವಿಗಳ ಜೊತೆಗೆ Add on course ರೂಪದಲ್ಲಿ Job oriented P.G. Diploma Courseಗಳನ್ನು ಮಾಡಿಕೊಳ್ಳಬೇಕು.

8. SSLC, PUC ನಂತರ ಟೈಪಿಂಗ್ ಮತ್ತು ಕಂಪ್ಯೂಟರ್ ಕೋರ್ಸ್'ಗಳನ್ನು ಕಡ್ಡಾಯ ಅನ್ನುವಂತೆ ಕಲಿಯಬೇಕು.

9. ಕನ್ನಡ ನಿಮಗೆ ಕರ್ನಾಟಕದಲ್ಲಿ ನೀರು ನೆರಳು ಕೊಡಬಹುದು, ಇಂಗ್ಲಿಷ್... ಇಡೀ ಗ್ಲೋಬನ್ನು ಅರಿಯಲು ನೆರವಾಗುತ್ತದೆ.

10. ಮನೆಯ ಬಡತನದ ಕಾರಣಕ್ಕೆ SSLC, PUCಗೆ ಶಿಕ್ಷಣ ನಿಲ್ಲಿಸಿದವರು IGNOU, KSOU ತರಹದ UGC ಮಾನ್ಯತೆ ನೀಡಿರುವ ದೂರಶಿಕ್ಷಣ ಕೇಂದ್ರಗಳಿಂದ ನೇರ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ (as a in house student ಆಗಿ) ಶಿಕ್ಷಣ ಮುಂದುವರೆಸುವುದು ಒಳಿತು.

11. ಯಾವುದೇ ಕಾರಣಕ್ಕೂ ಖಚಿತ ಮಾಹಿತಿ ಇಲ್ಲದೆ ಹಾದಿಬೀದಿಗಳಲ್ಲಿರುವ study centreಗಳಲ್ಲಿ ದುಬಾರಿ ಶುಲ್ಕ ತೆತ್ತು ಶಿಕ್ಷಣಕ್ಕೆ ಪ್ರವೇಶ ಪಡೆಯದಿರಿ.

12. Ph.D. ಮಾಡುವಾಗ ಸಿಗಬಹುದಾದ UGC fellowship, JRF/SRF/RGNF fellowshipಗಳು, ICSSR scholarship ನಿಮ್ಮ ದುಡಿಮೆಯ ಕನಸು ಮತ್ತು ಮಹತ್ವಾಕಾಂಕ್ಷೆಗಳಿಗೆ ಹೊಸ ಜೀವ ತುಂಬಬಲ್ಲದು.

13. ಬದುಕಿಗಾಗಲಿ, ಶಿಕ್ಷಣಕ್ಕಾಗಲೀ short-cut ಎಂಬ ಕಳ್ಳದಾರಿಗಳು apply ಆಗುವುದಿಲ್ಲ. ಇದ್ದರದು ಕಳ್ಳದಾರಿಯೇ ಹೊರತು ಗುರಿ ಮುಟ್ಟಿಸುವ ಕಾಲುದಾರಿಯಾಗಲಿ, ಹೆದ್ದಾರಿಯಾಗಲಿ ಅಲ್ಲ.

14. UGC-NET ಪರೀಕ್ಷೆಗೆ ಗಂಭೀರವಾಗಿ ಓದಿದರೆ SLET/KSET ಪರೀಕ್ಷೆ ಪಾಸು ಮಾಡುವುದು ಸುಲಭ.

15. UPSC ಪರೀಕ್ಷೆಗಳ ಸಿದ್ಧತೆ KPSC ಆಯೋಜಿಸುವ ಪರೀಕ್ಷೆಗಳನ್ನು ಪಾಸುಮಾಡಲು ಅನುವು ಮಾಡಿಕೊಡುತ್ತದೆ.

16. ಒಂದು ಆರ್ಥಿಕ ಭದ್ರತೆಯ ಕೆಲಸ ಮಾತ್ರ ನಿಮ್ಮನ್ನಾಗಲೀ, ನಿಮ್ಮ ಕುಟುಂಬದ ಮಂದಿಯನ್ನಾಗಲೀ ಎಂಥಾ ಬಿಕ್ಕಟ್ಟಿನಿಂದಾದರೂ ಪಾರುಮಾಡಬಲ್ಲದು.

17. ಆಗೀಗಾ ಬದುಕು ತಂದೊಡ್ಡುವ ಸಮಸ್ಯೆಗಳಿಗೆ ಶಿಕ್ಷಣದ ಬೇರು ಗಟ್ಟಿಯಾಗಿದ್ದರೆ ಅದನ್ನು ದಿಟ್ಟವಾಗಿ ಎದುರಿಸಬಹುದು.

18. ಅಂಬೇಡ್ಕರ್ ಹೇಳಿದ study and struggleನ ಬೇರುಗಳು ಇರುವುದು 'ಶಿಕ್ಷಿತರಾಗಿ, ಸಂಘಟಿತರಾಗಿ ಮತ್ತು ಹೋರಾಡಿ' ಎಂಬ ತತ್ವದಲ್ಲಿ.

19. ಅಂಬೇಡ್ಕರ್ ಎಲ್ಲೂ 'quit your study and struggle' ಎಂದು ಕರೆಕೊಟ್ಟಿಲ್ಲ.

20. 'ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಸಲುವಾಗಿ ಅವರು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರು' ಎಂದು ಈಗಲೂ ಶಂಖ ಊದುವ ಬಹುತೇಕ ಮೇಲ್ಜಾತಿಗೆ ಸೇರಿದ ಲೇಖಕರು ಖಾಸಗಿ ಮತ್ತು ಸರ್ಕಾರಿ ಹುದ್ದೆಗಳ ಆಯಕಟ್ಟಿನ ಸ್ಥಾನಗಳಲ್ಲಿ ಬೆಚ್ಚಗಿರುತ್ತಾರೆ ಎಂಬುದನ್ನು ಮರೆಯದಿರೋಣ.

21. ನಿಮ್ಮನ್ನು ವಿಚಲಿತಗೊಳಿಸುವ ಅಗ್ಗದ ರಂಜನೆಗೂ, ಸೇಡು-ಕೇಡಿಗೂ, ಹುಸಿ ಉದ್ರೇಕಕ್ಕೂ, ಅಪಾಯಕಾರಿ ಪ್ರಚೋದನೆಗೂ ಕಾರಣವಾಗಬಹುದಾದ ವ್ಯಕ್ತಿ, ವ್ಯವಸ್ಥೆಗಳಿಂದ ಆದಷ್ಟು ದೂರವಿರಿ.

22. ಹಸಿದ ವ್ಯಕ್ತಿ ಎದುರು ನಿಂತು 'ಉಪವಾಸದ ಮೂಲಕ ಹೋರಾಟ ಮಾಡು' ಅನ್ನುವುದು ಎಷ್ಟು ಕ್ರೌರ್ಯವೋ ಹಸಿದ ವ್ಯಕ್ತಿಯ ಕೈಗೆ 'ಹೋರಾಟ ಮಾಡಲೆಂದು ಗನ್ನು ಕೊಡುವುದು' ಕೂಡ ಅಷ್ಟೇ ಕ್ರೌರ್ಯ.

23. ನಿಮ್ಮ ಕುಟುಂಬದ ಮೊದಲ ತಲೆಮಾರಿನ ಮೊದಲ ವಿದ್ಯಾವಂತ ನೀವಾಗಿದ್ದರೆ ಮೇಲಿನ 22 ಅಂಶಗಳನ್ನು ಗಂಭೀರವಾಗಿ ಓದಿಕೊಳ್ಳಿ. ಉಳಿದ ಪ್ರಿವಿಲೇಜ್ ವರ್ಗದ ಜನ ಇದನ್ನು ಓದಿ ನಕ್ಕು ಕಂಡೂ ಕಾಣದಂತೆ ದಾಟಿಕೊಂಡು ಮುಂದೆ ಹೋಗಬಹುದು.

- ಕೆ.ಎಲ್. ಚಂದ್ರಶೇಖರ್ ಐಜೂರ್

*ಭಾರತೀಯ ವಿದ್ಯಾರ್ಥಿ ಸಂಘ, ಕರ್ನಾಟಕ (BVS) ವತಿಯಿಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮೂಡ್ನಾಕೂಡು ಚಿನ್ನಸ್ವಾಮಿ ಅವರಿಗೂ ...
22/12/2022

*ಭಾರತೀಯ ವಿದ್ಯಾರ್ಥಿ ಸಂಘ, ಕರ್ನಾಟಕ (BVS) ವತಿಯಿಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮೂಡ್ನಾಕೂಡು ಚಿನ್ನಸ್ವಾಮಿ ಅವರಿಗೂ ಮತ್ತು ಪದ್ಮರಾಜ ದಂಡಾವತಿ ಅವರಿಗೆ ಅಭಿನಂದನೆಗಳು.*

ಚಳುವಳಿಯ ಒಡನಾಡಿ ಮಂಜುನಾಥ ಸಾಸಲಮರಿ ಅವರ ಮದುವೆಗೆ ತಮ್ಮೆಲರಿಗೂ ಸುಸ್ವಾಗತ.
13/12/2022

ಚಳುವಳಿಯ ಒಡನಾಡಿ ಮಂಜುನಾಥ ಸಾಸಲಮರಿ ಅವರ ಮದುವೆಗೆ ತಮ್ಮೆಲರಿಗೂ ಸುಸ್ವಾಗತ.

ಎಲ್ಲರಿಗೂ ಭಾರತದ ಸಂವಿಧಾನ ಸಮರ್ಪಣಾ ದಿನದ ಶುಭಾಶಯಗಳು.
26/11/2022

ಎಲ್ಲರಿಗೂ ಭಾರತದ ಸಂವಿಧಾನ ಸಮರ್ಪಣಾ ದಿನದ ಶುಭಾಶಯಗಳು.

https://youtu.be/5ate7ahbZn4
26/11/2022

https://youtu.be/5ate7ahbZn4

ರಚನೆ ಮತ್ತು ರಾಗಸಂಯೋಜನೆ-ಸೋಸಲೆಗಂಗಾಧರ | ಗಾಯನ-ಡಾಶಿವಕುಮಾರ್ಸಿದ್ದೇಶ್ ಬದನವಾಳು | ನಿರೂಪಣೆ - ಹರಿರಾಮ್.ಎ | ಸಂಗೀತ-ಎಂ.ಎಸ್.ಮಾರುತಿ

https://youtu.be/zFNJGXRf_G8
24/07/2022

https://youtu.be/zFNJGXRf_G8

ಯಾಕೆ ಮನವೆ ಮೂಕನಾದೆ|Yake manave mookanaade|in kannada|Naadoja Channaveerakanavi|Folk Singer Gouri|2022ರಚನೆ: ನಾಡೋಜ ಚನ್ನವೀರ ಕಣವಿ ಅವರು Singer: #ಗೌರಿಗೋನ...

27/05/2022



ಈ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಟಾಪರ್ ಸಹೋದರ ಅಮಿತ್‌ಮಾದರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
19/05/2022

ಈ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಟಾಪರ್ ಸಹೋದರ ಅಮಿತ್‌ಮಾದರ ಅವರಿಗೆ
ಹೃತ್ಪೂರ್ವಕ ಅಭಿನಂದನೆಗಳು.

http://dhunt.in/vvcQS
15/05/2022

http://dhunt.in/vvcQS

ಮೈಸೂರು (15-05-2022): ಭಾರತೀಯ ವಿದ್ಯಾರ್ಥಿ ಸಂಘ (ಬಿವಿಎಸ್) ವತಿಯಿಂದ ಇಂದು ಮೈಸೂರಿನ ಮಾನಸ ಗ...

19/04/2022

Onde baari nananodi| ಒಂದೆ ಬಾರಿ ನನ್ನ ನೋಡಿ ಮಂದನಗಿಹಾಂಗ ಬಿರಿ|Folk Singer Gouri|2022ರಚನೆ| ದ ರಾ ಬೇಂದ್ರೆ ಯವರುಹಾಡಿದವರು: Gouri Gonal

ಅವಮಾನಕ್ಕೆ ಅಂಜದೆ,ಸನ್ಮಾನಕ್ಕೆ ಆಸೆ ಪಡದೆ.ಬಡವರ ನೊಂದವರ ಧ್ವನಿಯಾದ ಅಶೋಕ ನಂಜಲದಿನ್ನಿ ಅಣ್ಣನವರಿಗೆ ದಲಿತ ಸಾಹಿತ್ಯ ಪರಿಷತ್ತು ಗುರುತಿಸಿ ಡಾ:ಬಿ...
19/04/2022

ಅವಮಾನಕ್ಕೆ ಅಂಜದೆ,ಸನ್ಮಾನಕ್ಕೆ ಆಸೆ ಪಡದೆ.ಬಡವರ ನೊಂದವರ ಧ್ವನಿಯಾದ ಅಶೋಕ ನಂಜಲದಿನ್ನಿ ಅಣ್ಣನವರಿಗೆ ದಲಿತ ಸಾಹಿತ್ಯ ಪರಿಷತ್ತು ಗುರುತಿಸಿ ಡಾ:ಬಿ ಆರ್ ಅಂಬೇಡ್ಕರ್ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಸಮಸ್ತ ಶೋಷಿತರನ್ನು ಗೌರವಿಸಿದಂತಾಗುತ್ತಿದೆ.ಹೊಗಳ ಬಂಟ ಸಾಹಿತಿಗಳಿಗೆ ಮನ್ನಣೆ ಸಿಗುತ್ತಿರುವ ಈ ಸಂದರ್ಭದಲ್ಲಿ ಸೂಕ್ಷ್ಮ ಮನಸಿನ ಹೋರಾಟಗಾರ,ಸಾಹಿತಿಯನ್ನು ಅಯ್ಕೆ ಮಾಡಿದ ದಲಿತ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳನ್ನು ಅರ್ಪಿಸುತ್ತೆನೆ.

ಧರ್ಮರಾಜ ಗೋನಾಳ

ಭಾರತೀಯ ವಿದ್ಯಾರ್ಥಿ ಸಂಘ (BVS) ಮೈಸೂರು ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು                                                     ...
26/03/2022

ಭಾರತೀಯ ವಿದ್ಯಾರ್ಥಿ ಸಂಘ (BVS) ಮೈಸೂರು
ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು


#

ಮನುಷ್ಯ ತನಗಂಟಿರುವ ಮಾನಸಿಕ ರೋಗವನ್ನು ದೇವಸ್ಥಾನ ದೇವರಿಗೆ ಹಚ್ಚಿ, ದೇವರ ಹೆಸರಿನಲ್ಲಿ ಅಸ್ಪೃಶ್ಯತೆ ಆಚರಿಸುವುದು ಮಕ್ಕಳ ಮನಸಿನ ಮೇಲೆ ಆಗುವ ಪರಿ...
26/03/2022

ಮನುಷ್ಯ ತನಗಂಟಿರುವ ಮಾನಸಿಕ ರೋಗವನ್ನು ದೇವಸ್ಥಾನ ದೇವರಿಗೆ ಹಚ್ಚಿ, ದೇವರ ಹೆಸರಿನಲ್ಲಿ ಅಸ್ಪೃಶ್ಯತೆ ಆಚರಿಸುವುದು ಮಕ್ಕಳ ಮನಸಿನ ಮೇಲೆ ಆಗುವ ಪರಿಣಾಮ ಹಾಗೂ ಮೇಲ್ಜಾತಿ ಎನ್ನುವ ಆತ್ಮ ವಂಚಕ ಜಾತಿಯವರು ಬದಲಾಗಬೇಕಾದ ಬಗೆಯ ಬಗ್ಗೆ ಗೆಳೆಯ Avinash Chouhan ಅವರ ನಿರ್ದೇಶನದಲ್ಲಿ ಅದ್ಭುತವಾಗಿ ಚಿತ್ರ ಮೂಡಿಬಂದಿದೆ. ಮೂಲಸಮಸ್ಯೆಗಳನ್ನೆ ಮರೆ ಮಾಚಿ ಥೌಡು ಕುಟ್ಟುವ ಈ ಸಂಧರ್ಭದಲ್ಲಿ, ಅವಿನಾಶ ಅವರು ಕ್ರಿಯಾತ್ಮಕವಾಗಿ ಸಂಭಾಷಣೆ, ಚಿತ್ರಕಥೆ, ನಿರ್ದೇಶನದ ಮೂಲಕ ವಾಸ್ತವದ ಜಗತ್ತನ್ನು ಚಿತ್ರದಲ್ಲಿ ಕಟ್ಟಿದ್ದಾರೆ.

ಈ ಚಿತ್ರದಲ್ಲಿ ಗೌಡನ ಪಾತ್ರದಲ್ಲಿ ಕಾಣಿಸಿಕೊಂಡಿರುವ Shankar Metri K ಅಣ್ಣಾ ಮತ್ತು ಇನ್ನಿತರ ಗೆಳೆಯರಾದ Parashuram Walikar, ಚಂದ್ರು ನಡುಗಡ್ಡಿ,ಶರಣು ರೆಡ್ಡಿ, ತ್ರಿಮೂರ್ತಿ ಮಾದನೂರು ಅವರಿಗೆ ಹಾಗೂ ಈ ಸಿನಿಮಾವನ್ನು ನಿರ್ಮಾಣ ಮತ್ತು ನಿರ್ವಹಣೆ ಮಾಡಿದ ಸಹೋದರಿ Renushree Chouhan ಅವರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ.

#ಊರದೇವ್ರು


ಧರ್ಮರಾಜ ಗೋನಾಳ
https://youtu.be/IDQ4xGd0iH4

Ura Devaru | Kannada Short film TrailerShort film: Ura devaruLanguage: KannadaProduction: ARC Pictures Screenplay, EditingDirector: Avinasha Chouhan(33th Sho...

ನಿನ್ನೆ ಮದ್ಯ ರಾತ್ರಿ 12.45 ಕ್ಕೆ ಅಂತಿಮವಾಗಿ ನಟ ಮತ್ತು ಪ್ರಗತಿಪರ ಹೋರಾಟಗಾರ ಚೇತನ ಅವರನ್ನು ವಯಲಿಕಾವಲ ಪೋಲಿಸ್ ಠಾಣೆಯಿಂದ ಶೆಶಾದ್ರಿಪುರಂ ಪೋ...
23/02/2022

ನಿನ್ನೆ ಮದ್ಯ ರಾತ್ರಿ 12.45 ಕ್ಕೆ ಅಂತಿಮವಾಗಿ ನಟ ಮತ್ತು ಪ್ರಗತಿಪರ ಹೋರಾಟಗಾರ ಚೇತನ ಅವರನ್ನು ವಯಲಿಕಾವಲ ಪೋಲಿಸ್ ಠಾಣೆಯಿಂದ ಶೆಶಾದ್ರಿಪುರಂ ಪೋಲಿಸ್ ರು ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿ ಇರುವ ನ್ಯಾಯಾಧೀಶರ ಮನೆಗೆ ಕರೆತಂದರು , ನ್ಯಾಯಾಧೀಶರು ವಿಚಾರಣೆ ಮಾಡಿದರು, ಹಿರಿಯ ವಕೀಲರಾದ ಬಾಲನ್ ಅವರು ವಾದ ಮಂಡಿಸಿದರು, ಆದರೆ ಉಪಯೋಗವಾಗಲಿಲ್ಲ, ಚೇತನ ಅವರನ್ನು ನ್ಯಾಯಾಂಗ ವಿಚಾರಣೆಗೆಂದು 14 ದಿನಗಳ ಮಟ್ಟಿಗೆ ಪೋಲಿಸ್ ಕಸ್ಟಡಿಗೆ ಒಪ್ಪಿಸಿದರು.

ಕೇಂದ್ರ ಕಾರ್ಯಗೃಹಲಾಯಕ್ಕೆ ಪೋಲಿಸರು ಚೇತನ ಅವರನ್ನು ತೆಗೆದುಕೊಂಡು ಹೋಗುವ ಮೋದಲು ಅವರ ಪತ್ನಿ ಮೇಘನಾ ಅವರು ಕಣ್ಣಿರು ಹಾಕಿದರು,ನಂತರ ಅವರು ಜೈಲಿನಲ್ಲಿ ಇದ್ದು ಓದಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ "Annihilation of cast" ಪುಸ್ತಕವನ್ನು ಕೋಟ್ಟರು, ಆ ಸಮಯದಲ್ಲಿ ಚೇತನ ಅವರ ಫೋಟೋ ವನ್ನು ಅವರ ಪತ್ನಿ ಮೇಘನಾ ಕ್ಲಿಕ್ಕಿಸಿದರು, ಅದರಲ್ಲಿ ನಾನು ಮತ್ತು ಹ.ರಾ.ಮಹೇಶ ಇರುವುದು.

ರಾತ್ರಿ ನಮ್ಮೋಟ್ಟಿಗೆ ವಕೀಲರಾದ ಅನಂತ ನಾಯಕ, ಹರಿರಾಮ, ಸುನೀಲ್ ಗುನ್ನಾಪುರ ಇತರೆ 8 ಜನ ವಕೀಲರ ತಂಡ ಇತ್ತು ಮತ್ತೆ ನಮ್ಮ ಭೀಮ್ ಆರ್ಮಿ ಸಂಘಟನೆಯ ಬ್ರಹ್ಮೆಂದ್ರ ,ಶಿವಣ್ಣಾ ಹಾಗೂ ಹಿರಿಯರಾದ RTI Activist ನರಸಿಂಹ ಮೂರ್ತಿ ಮತ್ತು ಇತರೆ 15 ಇಪ್ಪತ್ತು ಜನ ಇದ್ದರು.

ಅತಿಥಿ ಉಪನ್ಯಾಸಕರ ಬಾಳಿಗೆ ಬೆಂಕಿ ಇಟ್ಟ ಸರಕಾರ
03/02/2022

ಅತಿಥಿ ಉಪನ್ಯಾಸಕರ ಬಾಳಿಗೆ ಬೆಂಕಿ ಇಟ್ಟ ಸರಕಾರ

01/02/2022

ಭಾರತೀಯ ವಿದ್ಯಾರ್ಥಿ ಸಂಘ (BVS) ವತಿಯಿಂದ ಉಪನ್ಯಾಸ ಕಾರ್ಯಕ್ರಮ.
ವಿಷಯ: ಗಣರಾಜ್ಯೋತ್ಸವವನ್ನು ಆಚರಿಸುವ ನೈತಿಕತೆ ಸರ್ಕಾರಗಳಿಗೆ ಇದೆಯೇ?
ಉಪನ್ಯಾಸ: ಡಾ.ಶಿವಕುಮಾರ, ಪ್ರಸಿದ್ಧ IAS ತರಬೇತುದಾರರು, ದೆಹಲಿ & ಬೆಂಗಳೂರು.
ದಿನಾಂಕ: 01-02-2022 ರ ಮಂಗಳವಾರ ರಾತ್ರಿ 8.30 ಕ್ಕೆ ಫೇಸ್‌ಬುಕ್‌ ಲೈವ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.
(ಹೆಚ್ಚಿನ ಜನರಿಗೆ ಇದನ್ನು ಶೇರ್ ಮಾಡಿ)

ಸಹೋದರ ದುರುಗಪ್ಪ ಗುಡದೂರು ಇವರ ಕವನ ಸಂಕಲನ ಲೋಕಾರ್ಪಣೆಗೆ ಎಲ್ಲಾ ಸಹೃದಯಿಗಳಿಗೆ ಸ್ವಾಗತ
29/01/2022

ಸಹೋದರ ದುರುಗಪ್ಪ ಗುಡದೂರು ಇವರ ಕವನ ಸಂಕಲನ ಲೋಕಾರ್ಪಣೆಗೆ ಎಲ್ಲಾ ಸಹೃದಯಿಗಳಿಗೆ ಸ್ವಾಗತ

ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ, ಚಿಂತಕರು,ಸಾಹಿತಿಗಳು ಮತ್ತು ವಿದ್ಯಾರ್ಥಿ ಯುವಜನರ ಮಾರ್ಗದರ್...
28/01/2022

ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ, ಚಿಂತಕರು,ಸಾಹಿತಿಗಳು ಮತ್ತು ವಿದ್ಯಾರ್ಥಿ ಯುವಜನರ ಮಾರ್ಗದರ್ಶಕರಾದ ವೆಂಕಟೇಶ ಬೇವಿನಬೆಂಚಿ ಸರ್ ಅವರಿಗೆ BVS ರಾಯಚೂರು ವತಿಯಿಂದ ಹೃದಯ ಪೂರ್ವಕ ಅಭಿನಂದನೆಗಳು💐💐💐🌺🌺

#ವೆಂಕಟೇಶ_ಬೇವಿನಬೆಂಚಿ

BVS ವತಿಯಿಂದ ಇಂದು ಸಂವಿಧಾನೋತ್ಸವ ಕಾರ್ಯಕ್ರಮ. ಇದರ ಅಂಗವಾಗಿ ಮಧ್ಯಾಹ್ನ 12 ಗಂಟೆಗೆ ಸಂವಿಧಾನ ಗೀತಗಾಯನ ವಿಶೇಷ ಕಾರ್ಯಕ್ರಮ. ಕಾರ್ಯಕ್ರಮದ ಲೈವ್...
26/01/2022

BVS ವತಿಯಿಂದ ಇಂದು ಸಂವಿಧಾನೋತ್ಸವ ಕಾರ್ಯಕ್ರಮ. ಇದರ ಅಂಗವಾಗಿ ಮಧ್ಯಾಹ್ನ 12 ಗಂಟೆಗೆ ಸಂವಿಧಾನ ಗೀತಗಾಯನ ವಿಶೇಷ ಕಾರ್ಯಕ್ರಮ. ಕಾರ್ಯಕ್ರಮದ ಲೈವ್ BVS Karnataka page ನಲ್ಲಿ ವೀಕ್ಷಿಸಿ.*

Address


Website

Alerts

Be the first to know and let us send you an email when BVS ರಾಯಚೂರು ಜಿಲ್ಲೆ posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share