13/08/2021
ಕೇಂದ್ರ ಸರ್ಕಾರದಿಂದ ʼಸಾರ್ವಜನಿಕʼರಿಗೆ ಬಂಪರ್ ಅಫರ್ : ಕುಳಿತಲ್ಲೇ ʼ15 ಲಕ್ಷʼ ಗೆಲ್ಲಿ
ನೀವು ಮನೆಯಲ್ಲಿ ಕುಳಿತು ಲಕ್ಷಗಟ್ಟಲೆ ಸಂಪಾದಿಸಲು ಬಯಸಿದ್ರೆ, ನಿಮಗೆ ಬಂಪರ್ ಸುದ್ದಿ ಇಲ್ಲಿದೆ. ಹೌದು, ಕೇಂದ್ರ ಸರ್ಕಾರ (Central Government) ಸಾರ್ವಜನಿಕರಿಗೆ ಒಂದು ಸದಾವಕಾಶವನ್ನ ನೀಡಿದ್ದು, ಕೊಂಚ ಬುದ್ದಿ ಖರ್ಚು ಮಾಡುವ ಮೂಲಕ ಕುಳಿತಲ್ಲೇ 15 ಲಕ್ಷ ಎಣಿಸಬೋದು.
ಹಣಕಾಸು ಸಚಿವಾಲಯ (Finance Ministry) ಈ ಹೊಸ ಸ್ಪರ್ಧೆಯನ್ನ ಆರಂಭಿಸಿದ್ದು, ಇದರಲ್ಲಿ ಸೃಜನಶೀಲ ಜನರು ಸಂಸ್ಥೆಯ ಹೆಸರು (Suggest Name), ಲೋಗೋ ವಿನ್ಯಾಸ (Suggest logo) ಮತ್ತು ಟ್ಯಾಗ್‌ಲೈನ್ (Suggest Tagline) ಅನ್ನು ಸರ್ಕಾರಕ್ಕೆ ಸೂಚಿಸಬೇಕು. ನೀವು ಸೂಚಿಸಿದ ಹೆಸರು, ಟ್ಯಾಗ್‌ಲೈನ್, ಲೋಗೋ ಸರ್ಕಾರಕ್ಕೆ ಇಷ್ಟಪಟ್ಟರೆ ನೀವು ಈ ಬಹುಮಾನ ಮೊತ್ತವನ್ನ ಗೆಲ್ಲಬಹುದು.
ಇತ್ತೀಚೆಗೆ My Gov India ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 15 ರವರೆಗೆ ಕಾಲಾವಕಾಶ ನೀಡಿದೆ. ಅದ್ರಂತೆ, ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಈ ಬಹುಮಾನವನ್ನ ಗೆಲ್ಲಬಹುದು.
ಸ್ಪರ್ಧೆ ಏನು ಗೊತ್ತಾ?
ಈ ಸ್ಪರ್ಧೆಯು ಅಭಿವೃದ್ಧಿ ಹಣಕಾಸು ಸಂಸ್ಥೆ (DFI) ಗಾಗಿ ನಡೆಸಲಾಗುತ್ತಿದೆ. ನೀವು ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯವು ಅಭಿವೃದ್ಧಿ ಹಣಕಾಸು ಸಂಸ್ಥೆಯ ಹೆಸರು, ಟ್ಯಾಗ್‌ಲೈನ್ ಮತ್ತು ಅದರ ಲಾಂಛನದ ವಿನ್ಯಾಸವನ್ನ ಸೂಚಿಸಬೇಕು. ಸೂಚನೆ ಅಂದ್ರೆ, ನೀವು ಸೂಚಿಸುವ ಹೆಸರು, ಲೋಗೋ ಮತ್ತು ಟ್ಯಾಗ್‌ಲೈನ್ ಅದರ ಕೆಲಸಕ್ಕೆ ಸಂಬಂಧಿಸಿರಬೇಕು.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗಿದ್ದು, ನೀವು ಡಿಎಫ್‌ಐ ಹೆಸರು, ಲೋಗೋ ಮತ್ತು ಟ್ಯಾಗ್‌ಲೈನ್ ಅನ್ನು ಸೂಚಿಸಲು ಬಯಸಿದ್ರೆ, ನೀವು ಸರ್ಕಾರದ MyGov.in ಪೋರ್ಟಲ್‌ಗೆ ಹೋಗಿ ಮತ್ತು ಈ ಸ್ಪರ್ಧೆಗೆ ನಿಮ್ಮ ನಮೂದುಗಳನ್ನ ಕಳುಹಿಸಬೇಕು. ಆದಾಗ್ಯೂ, ಈಗ ಹೆಚ್ಚು ಸಮಯವಿಲ್ಲ. ಹೆಸರು, ಲೋಗೋ ಮತ್ತು ಡಿಎಫ್‌ಐ ಟ್ಯಾಗ್‌ಲೈನ್ ಸೂಚಿಸಲು ನಿಮ್ಮ ನಮೂದುಗಳನ್ನ ಕಳುಹಿಸಲು ಕೊನೆಯ ದಿನಾಂಕ 15 ಆಗಸ್ಟ್ 2021 ಆಗಿದೆ. ಇನ್ನು ಅದರ ನಂತ್ರ ಸರ್ಕಾರ ತನ್ನ ವಿಜೇತರನ್ನು ಘೋಷಿಸುತ್ತದೆ.
ನೋಂದಣಿಯನ್ನ ಹೇಗೆ ಮಾಡಬಹುದು..?
ಈ ಸ್ಪರ್ಧೆಯಲ್ಲಿ ಭಾಗವಹಿಸಲು, ನೀವು ಮೊದಲು mygov.in ಪೋರ್ಟಲ್‌ಗೆ ಹೋಗಿ. ನಂತ್ರ ನೀವು ಇಲ್ಲಿ ಭಾಗವಹಿಸಲು ಲಾಗಿನ್ ಟ್ಯಾಬ್ ಮೇಲೆ . ಅಮೇಲೆ ನೋಂದಣಿ ವಿವರಗಳನ್ನ ಭರ್ತಿ ಮಾಡಬೇಕು. ನೋಂದಣಿ ನಂತರ, ನೀವು ನಿಮ್ಮ ನಮೂದು ಮಾಡಬೇಕು.
ಬಹುಮಾನದ ವಿವರಗಳು..!
ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿಯನ್ನ ನೀಡಲಾಗುವುದು.
ಹೆಸರು- ರೂ.5,00,000/-, ರೂ. 3,00,000/- ರೂ. 2,00,000/-
ಟ್ಯಾಗ್‌ಲೈನ್ - ರೂ.5,00,000/-, ರೂ. 3,00,000/- ರೂ. 2,00,000/-
ಲೋಗೋ - ರೂ.5,00,000/-, ರೂ. 3,00,000/- ರೂ. 2,00,000/-