Tulunadu Mithra News

  • Home
  • Tulunadu Mithra News

Tulunadu Mithra News Contact information, map and directions, contact form, opening hours, services, ratings, photos, videos and announcements from Tulunadu Mithra News, News & Media Website, .

25/05/2024
24/04/2024

ಅತೀ ಹೆ‍‍ಚ್ಚು ಸಂಖ್ಯೆಯಲ್ಲಿ ಈ ಪೋಸ್ಟ್ ಶೇರ್ ಮಾಡಿ ಜನರಿಗೆ ಸತ್ಯ ತಿಳಿಸಿ ಇದು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಕರ್ತವ್ಯ..

03/11/2023

#ಮೊಹಮ್ಮದ್ ಶಮಿ

ನಿನಗೆ ಮತ್ತು ರೋಹಿತ್ ಶರ್ಮನಿಗೆ ಒಂದು ಮನ ತುಂಬಿದ ಚಪ್ಪಾಳೆ. ಹಿಟ್ ಮ್ಯಾನ್ ರೋಹಿತ್ ಶರ್ಮನಿಗಿಂತ ಒಂದು ಹಿಡಿ ಜಾಸ್ತಿಯೇ ಪ್ರಶಂಸೆ ನಿನಗೆ ಸಲ್ಲಬೇಕು.
ಕ್ರಿಕೆಟ್ ಬ್ಯಾಟ್ಸ್ ಮನ್ ಗಳ ಆಟ ಆಗಿ ಬಹಳ ದಿನವಾಯ್ತು. ಒಬ್ಬ ಬ್ಯಾಟ್ಸ್ ಮನ್ ಸತತ ಹತ್ತು ಮ್ಯಾಚ್ ಗಳಲ್ಲಿ ಸೊನ್ನೆ ಸುತ್ತಿದರೂ ನಡೆಯುತ್ತೆ. ಆದರೆ ಒಬ್ಬ ಬೌಲರ್, ಒಂದೇ ಒಂದು ಸಿಕ್ಸರ್ ಹೊಡೆಸಿಕೊಂಡು ಬಿಟ್ಟರೆ ಅವನ ಕ್ರಿಕೆಟ್ ಬದುಕೇ the End ಆಗಬಹುದು. ಅದೆಂಥ ಓವರ್ ಮಾಡಿದೆಯೋ ಮಹರಾಯ.

ಉತ್ತರಪ್ರದೇಶದ ಅಮ್ರೋಹದ ಸಾಧಾರಣ ರೈತ ಸಾಹಸಪುರದ ತೌಸಿಫ್ ಅಲಿ. ಅವರ ಮಗ ಮೊಹಮ್ಮದ್ ಶಮಿ. ಊರಿನ ಹೆಸರಲ್ಲೇ‌ ಸಾಹಸವಿದ್ದ ಮಣ್ಣಿನ ಮಗ ಅವನು. ಅಪ್ಪ ಕೂಡ ಫಾಸ್ಟ್ ಬೌಲರ್. ಮಗನನ್ನ ಭಾರತಕ್ಕಾಡಿಸಬೇಕೆಂಬ ಸಣ್ಣ‌ ಕನಸು. ತನ್ನೂರಿನಿಂದ 22 ಕಿಮೀ ದೂರದ ಮೊರಾದಾಬಾದ್ ನ ಕ್ರಿಕೆಟ್ ಕೋಚ್ ಬದ್ರುದ್ದೀನ್ ಸಿದ್ದಿಕಿ ಬಳಿ ಕರೆದುಕೊಂಡು ಬರ್ತಾರೆ. ಈ ಹುಡುಗನ ಆಟ ನೋಡಿ ಎಂದಿರುತ್ತಾರೆ.
15 ವರ್ಷದ ಹುಡುಗ ಅವನು. ಮುಂದಿನ ಒಂದು ವರ್ಷಕ್ಕೇ ಒಂದೇ ಒಂದು ದಿನವೂ ರಜೆಯಿಲ್ಲದಂತೆ, ಲೆಕ್ಕಕ್ಕಿಲ್ಲದಂತೆ ವಿಕೆಟ್ ಗಳನ್ನ ನುಚ್ಚು ನೂರು ಮಾಡಿದ್ದ. ಶಮಿಗೆ ಬೌಲ್ಡ್ ನ ಸೌಂಡ್ ಇಷ್ಟ. ಸಿದ್ದಿಕಿ ನಿಬ್ಬೆರಗಾಗಿದ್ದರು.
ಮುಂದೆ ಉತ್ತರ ಪ್ರದೇಶದ Under 19 ಸೆಲೆಕ್ಷನ್ ಗೆ ಕರೆದುಕೊಂಡು ಹೋಗುತ್ತಾರೆ. ಒಂದು ಕೆಟ್ಟ ರಾಜಕೀಯದಿಂದ ಶಮಿ ಸೆಲೆಕ್ಟ್ ಆಗಲ್ಲ. ಸಿದ್ದಿಕಿ, ಬಡಪಟ್ಟಿಗೆ ಜಗ್ಗುವ ಆಸಾಮಿನೇ‌ ಅಲ್ಲ. ಶಮಿ ಮುಂದಿನ ಒಂದು ವರ್ಷ ನಿನ್ನ ಕ್ರಿಕೆಟ್ ಜೀವನವನ್ನ ನಾನು ಹಾಳು ಮಾಡಲಾರೆ. ನಡೀ ಕೋಲ್ಕತ್ತಾಗೆ ಎಂದು ಬಿಡುತ್ತಾರೆ ಬದ್ರುದ್ದೀನ್ ಸಿದ್ದಿಕಿ.
15 ವರ್ಷದ ಹುಡುಗ ಶಮಿ. ಕೋಲ್ಕತ್ತಾಗೆ ಬಂದಿಳಿಯುತ್ತಾನೆ.
ಡಾಲ್ ಹೌಸಿ ಅಥ್ಲೆಟಿಕ್ ಕ್ಲಬ್ ಗೆ ಆಡುತ್ತಾನೆ.
ಕ್ರಿಕೆಟ್ ಅಸೋಸಿಯೇಷನ್ ಆಫ್‌ ಬೆಂಗಾಲ್ ನ ದೇಬಬ್ರತ ದಾಸ್ ಕಣ್ಣಿಗೆ ಬೀಳುತ್ತಾನೆ . ಬದುಕಲ್ಲಿ ಆಗಷ್ಟೇ ಸೂರ್ಯ ಮೂಡಿದ್ದ.
ಟೌನ್ ಕ್ಲಬ್ ಗೆ 75000 ರುಪಾಯಿಗಳ ಕಾಂಟ್ರಾಕ್ಟ್ ಗೆ ಆಡಿಸುತ್ತಾರೆ.
ನಂಬಿ, ಶಮಿಗೆ ಮನೆ ಇರಲಿಲ್ಲ. ದಾಸ್, ಮನೆಯ ಮಗನಂತೆ ಶಮಿಯನ್ನ ತಮ್ಮ ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ. ಅಪ್ಪನಂತ ಮನುಷ್ಯ. ಶಮಿ ಬೌಲಿಂಗ್ ನ ಅಪ್ಪಟ ಫ್ಯಾನ್.
ಶಮಿ ಚೆನ್ನಾಗಿ ಬೌಲ್‌ ಮಾಡಿದ ಹೊರತಾಗಿಯೂ ಅಂಡರ್ 22 ಕೋಲ್ಕತ್ತಾಗೆ ಆಯ್ಕೆ ಆಗಲ್ಲ. ದೇವರಂತ ಗುರು ದಾಸ್, ಅವನನ್ನ ಬೆಂಗಾಲ್ ನ ಸೆಲೆಕ್ಟರ್ ಸಮರ್ಬನ್ ಬ್ಯಾನರ್ಜಿ ಮುಂದೇನೆ ನಿಲ್ಲಿಸುತ್ತಾರೆ. ಈ ಹುಡಗನಿಗೆ ಅನ್ಯಾಯವಾಗಿದೆ. ನೋಡಿ ಇವನ ಬೌಲಿಂಗ್ ..ಇಷ್ಟವಾಗದಿದ್ದರೆ ಈ ಜನ್ಮದಲ್ಲಿ ಇವನು ಕ್ರಿಕೆಟ್ ಆಡೋದು ಬೇಡ ಎಂದಿರುತ್ತಾರೆ.
ಹುಡುಗನ ಬೌಲಿಂಗ್ ನೋಡಿದ ಮೇಲೆ ಸಮರ್ಬನ್ ಬ್ಯಾನರ್ಜಿಗೆ ಸೆಲೆಕ್ಟ್‌ ಮಾಡದೇ ಇರಲು ಕಾರಣ ಉಳಿದಿರಲ್ಲ.
ಹುಡುಗ, ಬೆಂಗಾಲ್ ಅಂಡರ್ 19 ಟೀಂಗೆ ಆಡುತ್ತಾನೆ..ಮತ್ತೊಬ್ಬ ದೇವರು ಇವನನ್ನ‌ ಕಾಯಲು ಕಾದಿರುತ್ತಾನೆ.
ಮುಂದೆ ಇವನು ಮೋಹನ್ ಬಗಾನ್ ಕ್ಲಬ್ ಗೆ ಬೌಲ್‌ ಮಾಡುತ್ತಾನೆ.
ನೆಟ್ಸ್ ನಲ್ಲಿ ಸೌರವ್ ಗಂಗೂಲಿ ಎಂಬ ಅದ್ಭುತ ನಾಯಕನಿಗೆ ಇವನದ್ದೇ ಬೌಲಿಂಗ್. ಗ್ರೌಂಡ್, ಈಡನ್ ಗಾರ್ಡನ್ .
ಪ್ರತಿಭೆ ಯಾವ ಮೂಲೆಯಲ್ಲಿದ್ದರೂ ಹುಡುಕಿ ಟೀಂ ಇಂಡಿಯಾಗೆ ಆಡಿಸಿದವನು ಗಂಗೂಲಿ. ಇದು ನಿರ್ವಿವಾದ. ಶಮಿ ದಾದಾಗೆ ಹಿಡಿಸಿಬಿಟ್ಟ.
ಬಂಗಾಳದ ರಣಜಿಗೆ ಇವನನ್ನ ಆಡಿಸಿ ಎಂದಿದ್ದ. ಮುಂದಿನದನ್ನ ಶಮಿಯ ಪ್ರತಿಭೆ‌ ಮಾತ್ರ ನೋಡಿಕೊಂಡಿತು.
ಪಾಕಿಸ್ತಾನ ವಿರುದ್ದದ ಮೊದಲ‌ ಪಂದ್ಯದಲ್ಲಿ ಅವನು‌ ಎಸೆದ‌ ರಿವರ್ಸ್ ಸ್ವಿಂಗ್ ಗಳಿಗೆ ನಾಲ್ಕು ಓವರ್ ಗಳಲ್ಲಿ ಒಂದೇ ಒಂದು ರನ್ ಬಂದಿದ್ದರೆ ಕೇಳಿ.
ಶಮಿ ಒಂದು Upright seam ನೊಂದಿಗೆ ಆಫ್‌ಸ್ಟಂಪ್ ನ ಸ್ವಲ್ಪ ಆಚೆ ಈಚೆ ಬಾಲ್‌ ಎಸೆಯುತ್ತಾನೆ. ಸ್ವಲ್ಪ ರಿವರ್ಸ್ ಸ್ವಿಂಗ್ ಟಚ್ ಕೊಟ್ಟಿರುತ್ತಾನೆ. ಡಿಫೆಂಡ್ ಮಾಡಬೇಕಾ, ಹೊಡೆಯಬೇಕಾ ಎಂಬ ಗೊಂದಲಕ್ಕೆ ಕೆಡವುವ ಅಸ್ತ್ರ ಅದು. ಮಿಕ ಬಿದ್ದಿರುತ್ತೆ.
ಕ್ರಿಕೆಟ್ ನಲ್ಲಿ ರಿವರ್ಸ್ ಸ್ವಿಂಗ್ ಎಲ್ಲರಿಗೂ ಸಿದ್ಧಿಸೋ ಅಸ್ತ್ರ ಅಲ್ಲ. ಅದೊಂಥರ ವರ. ಮೊಹಮ್ಮದ್ ಶಮಿ, ನಿನ್ನ ಶ್ರಮ ನಿನ್ನ‌ ಕೈಬಿಟ್ಟಿಲ್ಲ.
ನೆನಪಿರಲಿ ಬ್ಯಾಟ್ಸ್ ಮನ್ cricket ಜೀವನಕ್ಕಿಂತ ಬೌಲರ್ ನ ಕ್ರಿಕೆಟ್ ಜೀವನ ತುಂಬ ಕಷ್ಟ.
ನಿನಗೆ ಒಂದು ಶುಭಾಶಯ ಶಮಿ.


Via: WhatsApp

19/07/2023
21/06/2023

ಡ್ರೈವರನ ಸಾಹಸಕ್ಕೆ ಒಂದು ಮೆಚ್ಚುಗೆ ಕೊಟ್ಟು ಶೇರ್ ಮಾಡಿ.

Address


Website

Alerts

Be the first to know and let us send you an email when Tulunadu Mithra News posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share