13/12/2020
#ಅಂತರಾಷ್ಟ್ರೀಯ_ಮಟ್ಟದಲ್ಲಿ_ಜಿಲ್ಲೆಯ_ಮರ್ಯಾದೆ_ಹರಾಜು_ಹಾಕಿದ_ಪುಂಡರಿಗೆ_ತಕ್ಕ_ಶಾಸ್ತಿಯಾಗಲಿ..
ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ''ವಿಸ್ಟ್ರಾನ್'' ಕಂಪನಿಯನ್ನು ಒಂದಷ್ಟು ಕೊಬ್ಬಿದ,ದುರಹಂಕಾರಿ ಗೂಂಡಾಗಳು ಹಾಳುಗೆಡವಿ ಜಿಲ್ಲೆಗೆ ಕಪ್ಪುಚುಕ್ಕೆ ತಂದು,ಇಡೀ ಭಾರತ ದೇಶದಲ್ಲೇ ಸ್ತಾಪಿಸಿದ ಮೊದಲ ಐಪೋನ್ ತಯಾರಿಕಾ ಘಟಕವನ್ನು ಜಿಲ್ಲೆಗೆ ತಂದು ಜಿಲ್ಲೆಯಲ್ಲಿ ನಿರುದ್ಯೋಗಿ ಯುವಕ/ಯುವತಿಯರಿಗೆ ಜೀವನ ರೂಪಿಸುವ ಕನಸನ್ನು ಹೊತ್ತು,ಶ್ರಮ ವಹಿಸಿ ಜಿಲ್ಲೆಗೆ ಕಂಪನಿಯನ್ನು ತಂದ ಹಲವರ ಕನಸಿಗೆ ಎಳ್ಳು-ನೀರು ಬಿಟ್ಟಿದ್ದಾರೆ.
ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವಾಗಲೇ ಇಷ್ಟೊಂದು ಸೊಕ್ಕಿರಬೇಕಾದರೆ,ಒಂದು ವೇಳೆ ಕಂಪನಿಯ ಅಧಿಕೃತ ಕಾರ್ಮಿಕರಾಗಿದ್ದರೆ ಪರಿಸ್ಥಿತಿ ಏನು ಅಂತ.!!??
ಕಾರ್ಮಿಕರು ಅವರ ಹಕ್ಕುಗಳಿಗಾಗಿ,ಶ್ರಮಪಟ್ಟ ಹಣಕ್ಕಾಗಿ ಬೇಡಿಕೆಯಿಟ್ಟು ಹೋರಾಟದ ಹಾದಿಯನ್ನು ಆಯ್ದುಕೊಂಡಿದ್ದರೆ ಅವರಿಗೆ ನಾವೂ ಸಹ ಕೈ ಜೋಡಿಸಬಹುದಿತ್ತು ಆದರೆ ಕೇವಲ ಬಿಡಿಗಾಸಿಗಾಗಿ ಸಾವಿರಾರು ನಿರುದ್ಯೋಗಿಗಳಿಗೆ ಬೆಳಕಾಗಿದ್ದ,ಕೊಟ್ಯಾಂತರ ರೂಪಾಯಿಯಲ್ಲಿ ಆರಂಭಿಸಿದ್ದ,ಅನೇಖರು ಶ್ರಮ ವಹಿಸಿ ಜಿಲ್ಲೆಗೆ ಇಂತಹ ಕಂಪನಿಯನ್ನು ತಂದಿದ್ದವರ ಪರಿಶ್ರಮದ ಸಂಕೇತವಾಗಿದ್ದ ಕಂಪನಿಯನ್ನು ಹಾಳು ಮಾಡಿ,
ಕಂಪನಿಯ ಪ್ರಾರಂಭದ ನಂತರ ತಮ್ಮ ಜೀವನ ರೂಪಿಸಿಕೊಳ್ಳುತ್ತಿದ್ದವರ ಬಾಳಿಗೆ ಬೆಂಕಿ ಇಟ್ಟ ಸ್ವಹಿತಾಸಕ್ತಿಯ ದುರಹಂಕಾರಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ.
ಕಾರ್ಮಿಕರಿಗೆ ಅನ್ಯಾಯವಾಗಿದ್ದರೆ ಅವನ್ನು ಕೆಲಸಕ್ಕೆ ಕಳುಹಿಸಿದ ಏಜೆನ್ಸಿಗಳನ್ನು ಕೇಳಲು ಯೋಗ್ಯತೆಯಿಲ್ಲದ ಪುಡಾರಿಗಳು ಉತ್ತರನ ಪೌರುಷದಂತೆ ಯುವತಿಯರ ಮುಂದೆ ತಮ್ಮ ಪ್ರತಾಪವನ್ನು ತೋರಿಸಲಿಕ್ಕೆ ಕಂಪನಿಯ ಗಾಜುಗಳನ್ನು,ಕೈಗೆ ಸಿಕ್ಕ ವಸ್ತುಗಳನ್ನು ಹೊಡೆದುರುಳಿಸಿದ್ದಾರೆ.ಇದರಿಂದ ಅವರಿಗಾದ ಅನ್ಯಾಯ ಸರಿಹೋಯಿತೇ..?? ಹಾಳು ಮಾಡಿದ ವಸ್ತುಗಳಿಗೆ,ಕಂಪನಿಗೆ ವಿಮಾಸೌಲಭ್ಯವಿರುತ್ತದೆ ಬಂಡವಾಳ ಹಾಕಿದ ಮಾಲಿಕನಿಗೆ ಯಾವುದೇ ತೊಂದರೆ,ನಷ್ಟ ಇಲ್ಲ ಆದರೆ ಹೊಡೆದುರುಳಿಸಿದವರಿಗೆ ಬಂದ ಭಾಗ್ಯವೇನು..!??!! ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದಾರಿಗಳಿವೆ ಗಲಾಟೆಯೊಂದೇ ಮಾರ್ಗವಲ್ಲ..!!
''ವಿಸ್ಟ್ರಾನ್ ಕಂಪನಿ'' ಸ್ಥಳೀಯರು ಪ್ರಾರಂಭ ಮಾಡಿರುವ ಪ್ರತೀ ಬೀದಿಯಲ್ಲೋ ,ನಗರಗಳಲ್ಲೋ ಅಥವಾ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲೋ ಇರುವ ಸಾಮಾನ್ಯ ಕಂಪನಿಯಲ್ಲ.ಇಡೀ ಭಾರತಕ್ಕೆ ಒಂದೇ ಕಂಪನಿ ಅದು ನಮ್ಮ ಹೆಮ್ಮೆಯ ಕೋಲಾರ ಜಿಲ್ಲೆಯಲ್ಲಿ.ಅಂತಹ ಕಂಪನಿಯನ್ನು ದೇಶಕ್ಕೆ ತಂದು ನಮ್ಮ ಜಿಲ್ಲೆಗೆ ನೀಡಿ ೧೦-೧೨ ಸಾವಿರ ಜನ ನಿರುದ್ಯೋಗಿ ಯುವಕರಿಗೆ ಕೆಲಸ ನೀಡುವಂತರ ಮಾಡಲು ಹಲವರು ಶ್ರಮಿಸಿದ್ದಾರೆ. ಅದರ ಹಿಂದಿನ ಪರಿಶ್ರಮವನ್ನು ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಎಂದು ಭಾವಿಸುತ್ತೇನೆ.
ಇನ್ನು ಕಾರ್ಮಿಕರ ಕಷ್ಟವನ್ನು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟವರು ಕೇಳಲಿಲ್ಲ ಎಂದು ವಾದ ಮಾಡುವವರು ಒಮ್ಮೆ ಯೋಚಿಸಿ,ಅಥವಾ ಸಾಧ್ಯವಾದರೆ ನಿಮ್ಮ ಬಳಿ ಸಮರ್ಪಕ ದಾಖಲೆಗಳಿದ್ದರೆ ತಿಳಿಸಿ. ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಯಾರನ್ನು ಬೇಟಿ ತಮ್ಮ ಅಹವಾಲನ್ನು ಹೇಳಿಕೊಂಡಿದ್ದಾರೆ ಅಂತ.
ಇದು ಕೋಲಾರದ ಸ್ವಾಭಿಮಾನ ಹೆಚ್ಚಿಸುವಂತಹ ,ತಾಕತ್ತು ಪ್ರದರ್ಶಿಸುವಂತಹ,ಕಾರ್ಮಿಕರ ಕಷ್ಟಗಳನ್ನು ಹೊರತಂದು ಅವುಗಳನ್ನು ಬಗೆಹರಿಸುವಂತಹದ್ದಲ್ಲ.
ಏಕೆಂದರೆ ಒಂದಷ್ಟು ಜನ ಕೆಲಸಕ್ಕೆ ಬಾರದ ನಾಲಾಯಕ್ ಗಳು ನಮ್ಮ ಜಿಲ್ಲೆಗೆ ಕಪ್ಪು ಚುಕ್ಕೆಯನ್ನು ತಂದಿಟ್ಟಿದ್ದಾರೆ.ಸರ್ಕಾರಗಳ ಪರಿಶ್ರಮದಿಂದ ಇಡೀ ದೇಶಕ್ಕೆ ಬಂದ ಕಂಪನಿಯನ್ನು ನಮ್ಮ ಜಿಲ್ಲೆಗೆ ಕೊಟ್ಟಿರುವುದಕ್ಕೆ ನಾವು ಹೆಮ್ಮೆ ಪಡಬೇಕು.
ಚೀನಾ ದೇಶಕ್ಕೆ ಸೆಡ್ಡು ಹೊಡೆದು ಇಡೀ ಭಾರತದಲ್ಲೇ ಮೊದಲ ಪ್ರಾರಂಭ ಮಾಡಿರುವ ಕಂಪನಿ.ಅದರಲ್ಲೂ ಈ ಕಂಪನಿ ಪ್ರಾರಂಭವಾಗಿ ಕೇವಲ ೨ ವರ್ಷಗಳು ಮಾತ್ರ ಕಳೆದಿದೆ.
ಕಳೆದ ಒಂದು ವರ್ಷದಿಂದ ಕೊರೊನಾದಿಂದ ಇಡೀ ದೇಶ ಹೇಗೆ ನಲುಗಿದೆ ಎಂದು ಎಲ್ಲರಿಗೂ ಗೊತ್ತಿದೆ.ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲಾಗದೆ ಎಷ್ಟೋ ಕಂಪನಿಗಳು ಲಕ್ಷಾಂತರ ಜನ ಕಾರ್ಮಿಕರನ್ನು,ಉದ್ಯೋಗಿಗಳನ್ನು ಕೆಲಸದಿಂದ ಕಿತ್ತೆಸೆದಿರುವುದನ್ನು ನಾವು ನೋಡಿದ್ದೇವೆ.ಸರ್ಕಾರಿ ನೌಕರರಿಗೂ ಸರಿಯಾದ ವೇತನ ಸಿಗುತ್ತಿಲ್ಲ.ಸಂಕಷ್ಟಕ್ಕೆ ಸಿಲುಕಿದವರ ಕಷ್ಟ ಹೇಳತೀರದು.
ಆದರೆ ಪ್ರಾರಂಭ ಹಂತದಲ್ಲಿದ್ದರೂ ಕೂಡಾ ವಿಸ್ಟ್ರಾನ್ ಕಂಪನಿ ಅಂತಹ ಯಾವುದೇ ತಪ್ಪನ್ನು ಮಾಡಿಲ್ಲ.ಯಾವೊಬ್ಬ ಕಾರ್ಮಿಕರನ್ನೂ ಬೀದಿಗೆ ಬಿಟ್ಟಿಲ್ಲ.ಇಂತಹ ಸಂಕಷ್ಟದ ಸಂದರ್ಭದಲ್ಲೂ ಜಿಲ್ಲೆಯ ಸಾವಿರಾರು ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗ ನೀಡುವ ಮೂಲಕ ಹಾಗೂ ಕೆಲಸದಿಂದ ತೆಗೆಯದೆ ಅವರ ಕುಟುಂಬಗಳನ್ನು ಪೋಷಿಸಿದೆ.ಅದಕ್ಕಾಗಿ ಅವರಿಗೆ ನಾವು ಅಭಿನಂದಿಸಬೇಕಿತ್ತು ಆದರೆ ಒಂದಷ್ಟು ಅವಿವೇಕಿ,ಕೊಬ್ಬಿದ ಯುವಕರು ಪ್ರಾಮಾಣಿಕವಾಗಿ ದುಡಿಯುತ್ತಿದ್ದ,ಕಷ್ಟಗಳಿಗೆ ನೆರವಾಯ್ತು ಅಂತ ನಿಟ್ಟುಸಿರು ಬಿಟ್ಟಿದ್ದ ಸುಮಾರು ೧೨ ಸಾವಿರ ಜನ ನಿರುದ್ಯೋಗಿಗಳ ಬಾಳಿಗೆ ಕೊಳ್ಳಿ ಇಟ್ಟಿದೆ.
ನಮ್ಮ ಕೋಲಾರ ಜಿಲ್ಲೆಯ ಮರ್ಯಾದೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಳೆದವರು ಯಾರೇ ಆದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕಠಿಣ ಕ್ರಮ ಜರುಗಿಸಿ,ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳುಹಿಸದಂತೆ ಮಾಡಬೇಕಿದೆ ಮತ್ತು ದಾಂದಲೆ ಮಾಡಿದ ಆಯೋಗ್ಯರ ಪರವಾಗಿ ವಾದ ಮಾಡುವುದನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿಯತ್ತ ಯೋಚಿಸಿ..
- ಹೊಲ್ಲಂಬಳ್ಳಿ ಶಿವು..
ಸಂಪಾದಕರು,ಕೋಲಾರ ಕದಂಬ.
ಕನ್ನಡ ದಿನಪತ್ರಿಕೆ