Namma Athani

Namma Athani ಮಹೇಶ್ ಶರ್ಮಾ

https://youtu.be/Jd4dk-f5C0E
24/09/2022

https://youtu.be/Jd4dk-f5C0E

2022 souq market, it was soo much fun..pls subscribe to my channel..and share this video with your friends and family.. music from, www.pagal world.comvidyavox

https://www.facebook.com/nammabelagaavi/photos/a.519672609430889/726826608715487/
16/09/2021

https://www.facebook.com/nammabelagaavi/photos/a.519672609430889/726826608715487/

ಇದು ನಮ್ಮ ನಗರ
ಇದು ಕುಂದಾ ನಗರ
ಇದು ನಮ್ಮ ಬೆಳಗಾವಿ:

ಬೆಳಗಾವಿಯು (ಮುಂಚೆ ವೇಣು ಗ್ರಾಮ ಅಥವಾ ಬಿದಿರು ಗ್ರಾಮ ಎಂದು ಕರೆಯಲ್ಪಡುತ್ತಿತ್ತು) ಪುರಾತನವಾದ, ಸಾಂಸ್ಕೃತಿಕವಾಗಿ ವೈಭಯಯುತವಾದ ಹಾಗೂ ಐತಿಹಾಸಿಕ ಸ್ಥಳ ಬೆಳಗಾವಿ.
ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ ಈ ನಗರ, ಹತ್ತಿ ಹಾಗೂ ರೇಷ್ಮೆ ನೇಕಾರರ ಪ್ರದೇಶಗಳಿಂದ ಕೂಡಿದ್ದು, ಇಂದಿನ ಅಧುನಿಕ ವಿನ್ಯಾಸದ ಕಟ್ಟಡಗಳು ಹಾಗೂ ಮರ ಗಿಡಗಳು ಅಷ್ಟೇ ಅಲ್ಲದೆ ಬ್ರಿಟಿಷ್ ಕಾಲದ ದಂಡು ಪ್ರದೇಶಗಳನ್ನು ಒಳಗೊಂಡಿದೆ.
ಬೆಳಗಾವಿಯ ಕೋಟೆ, ದೇವಾಲಯಗಳು ಹಾಗೂ ಚರ್ಚ್ಗಳು ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ. ನಗರದ ಅಪೇಕ್ಷಣೀಯ ಪರಂಪರೆಯ ತಾಣಗಳು ಹೊಸ ಅನ್ವೇಷಣೆಗಳಿಗೆ ಅವಕಾಶದ ಹಾದಿಯನ್ನು ತೆರೆದಿವೆ. ಬೆಳಗಾವಿ ನಗರವು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ 02ನೆಯ ಶತಮಾನದ ಪ್ರಾಚೀನತೆಯ ಸಂಸ್ಕೃತಿಗಳಿಂದಾಗಿ ಹಾಗೂ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಾಮೀಪ್ಯತೆಯಿಂದಾಗಿ ಆ ರಾಜ್ಯಗಳ ಸಂಸ್ಕೃತಿಗಳೊಂದಿಗೆ ಸ್ಥಳೀಯ ಕನ್ನಡ ಸಂಸ್ಕೃತಿಯೂ ಸೇರಿ ಸಮ್ಮಿಳಿತಗೊಂಡು ಶ್ರೀಮಂತ ಸಾಂಸ್ಕೃತಿಕ ನಗರವಾಗಿ ಹೊರಹೊಮ್ಮಿದೆ.
ಅಲ್ಲದೇ ಭೌಗೋಳಿಕವಾಗಿ ನಗರವು ಮಲೆನಾಡು ಪ್ರದೇಶದಲ್ಲಿದ್ದು ವರ್ಷ ಪೂರ್ತಿ ಹಚ್ಚಹಸುರಿನಿಂದ ಕಂಗೊಳಿಸುತ್ತದೆ. ಶತಮಾನಗಳ ಕಾಲಾನಂತರ ಬೆಳಗಾವಿಯು ಇಂದು ಮಹತ್ವ ಪೂರ್ಣವಾದ ಹಾಗೂ ಪರಿಗಣಿಸುವಂತಹ ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆಯಾಗಿ ರೂಪಗೊಂಡಿದೆ ಬೆಳಗಾವಿಯು ಇಂದು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ನಗರವಾಗಿದೆ. 2011ರ ಜನಗಣತಿಯ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 47,79,661 ಜನಸಂಖ್ಯೆಯನ್ನು ಹೊಂದಿದೆ. ಬೆಳಗಾವಿ ನಗರವು ಮುಂಬಯಿ ಹಾಗೂ ಬೆಂಗಳೂರಿನಿಂದ ಸಮಾನಾಂತರ ದೂರದಲ್ಲಿರುವ ಮಧ್ಯವರ್ತಿ ನಗರವಾಗಿದೆ..

ಬೆಳಗಾವಿಗೆ ಸ್ವಾಗತ..
ನಮ್ಮ ಪೇಜ್‌ ಲೈಕ್‌ ಮಾಡೋದರ ಮೂಲಕ ಬೆಳಗಾವಿಗೆ ಮೆಚ್ಚುಗೆ ತಿಳಿಸಿ..
ಹಾಗೂ ನಿಮ್ಮ ಸ್ನೇಹಿತರಿಗೂ ಈ ಪೇಜ್‌ ಲೈಕ್‌ ಮಾಡಲು ತಿಳಿಸಿ.

ಧನ್ಯವಾದಗಳು.

_ಪೇಜ್‌ ಅಡ್ಮಿನ್‌.

13/09/2021
https://youtu.be/lKg9rbh_xp8
10/09/2021

https://youtu.be/lKg9rbh_xp8

This easy Ganesha chathurthi makeup can be created for any festivals..I loved this version of music with makeup, if you want to see same, please comment and ...

26/08/2021

ಮಲೆನಾಡಿನ ಉತ್ಪನ್ನಗಳ ಕುರಿತ ಈ ವಿಡಿಯೋ ನೋಡಿ.

All other products are soo good visit their website here:

https://rawgranules.in/

RawGranules

Raw Granules

Ashwini Devadiga

https://fb.watch/7D2M6VZ07u/

https://youtu.be/8dzjIfetiz0
25/08/2021

https://youtu.be/8dzjIfetiz0

ಸದ್ಗುರು ಪರಂಪರೆ ಬಗ್ಗೆ ಶ್ರೀಮತ್‌ ಪರಮಹಂಸ ಪರಿವ್ರಾಜಕಾಚಾರ್ಯ ಕುಂಡಲಿನಿ ಜ್ಞಾನಯೋಗಿ ಅವಧೂತ ದಂಡಿ ಸದ್ಗುರು ಆತ್ಮಾನಂದ ಸರಸ್ವತಿ .....

ಭಾರತದ ಸುಪ್ರೀಂ ಕೋರ್ಟ್‌ 2027ರಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಕಾಣಲಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಭಾರತದ ಮುಖ್ಯ ...
18/08/2021

ಭಾರತದ ಸುಪ್ರೀಂ ಕೋರ್ಟ್‌ 2027ರಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಕಾಣಲಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ, ನ್ಯಾಯಮೂರ್ತಿಗಳ ನೇಮಕಕ್ಕಾಗಿ ಒಟ್ಟು ಒಂಬತ್ತು ಜನರ ಹೆಸರನ್ನು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಒಂಬತ್ತು ಜನರಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಅವರು, ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಗುಜರಾತ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಬೆಲಾ ತ್ರಿವೇದಿ.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಒಂಬತ್ತು ನ್ಯಾಯಮೂರ್ತಿಗಳ ಸ್ಥಾನ ಖಾಲಿ ಇದೆ. ಇಂದು ನ್ಯಾಯಮೂರ್ತಿ ನವಿನ್‌ ಸಿನ್ಹಾ ನಿವೃತ್ತರಾಗಲಿದ್ದು, ಖಾಲಿ ಇರುವ ಸ್ಥಾನಗಳ ಸಂಖ್ಯೆ 10ಕ್ಕೆ ಹೆಚ್ಚಳವಾಗಲಿದೆ.

ರಾಜಸ್ಥಾನದಲ್ಲಿ ಮಿಂಚುತ್ತಿರುವ ಕರ್ನಾಟಕದ ಐಪಿಎಸ್ ಅಧಿಕಾರಿಗೆ ರಾಷ್ಟ್ರಪತಿ ಪದಕ:ರಾಜಸ್ಥಾನದಲ್ಲಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿರುವ ಕರ್ನಾ...
17/08/2021

ರಾಜಸ್ಥಾನದಲ್ಲಿ ಮಿಂಚುತ್ತಿರುವ ಕರ್ನಾಟಕದ ಐಪಿಎಸ್ ಅಧಿಕಾರಿಗೆ ರಾಷ್ಟ್ರಪತಿ ಪದಕ:
ರಾಜಸ್ಥಾನದಲ್ಲಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿರುವ ಕರ್ನಾಟಕ ಮೂಲದ ಹಿರಿಯ ಐಪಿಎಸ್ ಅಧಿಕಾರಿ ಎಂ.ಎನ್. ದಿನೇಶ್ ಅವರಿಗೆ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ಪೊಲೀಸ್ ಪದಕ ನೀಡಿ ಗೌರವಿಸಲಾಗಿದೆ.

ಸೊಹ್ರಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಎಂ.ಎನ್. ದಿನೇಶ್ ಇದೀಗ ರಾಜಸ್ಥಾನದಲ್ಲಿ ಭ್ರಷ್ಟರನ್ನು ಜೈಲಿಗೆ ಕಳುಹಿಸುವ ಮೂಲಕ ರಾಜಸ್ಥಾನದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದ್ದಾರೆ.

ರಾಷ್ಟ್ರಪತಿ ಪದಕ ಗೌರವ ಸ್ವೀಕರಿಸಿದ ಹಿನ್ನೆಲೆಯಲ್ಲಿ ಒನ್‌ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಎಂ.ಎನ್. ದಿನೇಶ್ ಅವರು, ನನ್ನ ಸೇವೆ ಮೆಚ್ಚಿ ರಾಷ್ಟ್ರಪತಿ ಪದಕ ಗೌರವ ನೀಡಿರುವುದು ಅಭಿನಂದನಾರ್ಹ. ಈ ಮೊದಲೇ ನನಗೆ ಈ ಗೌರವ ಸಿಕ್ಕಬೇಕಿತ್ತು. ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣ ಬಾಕಿ ಇದ್ದಿದ್ದರಿಂದ ಸಿಕ್ಕಿರಲಿಲ್ಲ. ಇದೀಗ ಆ ಗೌರವ ಸಿಕ್ಕಿರುವುದು ಸಂತಸ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ʼಸಾರ್ವಜನಿಕʼರಿಗೆ ಬಂಪರ್‌ ಅಫರ್‌ : ಕುಳಿತಲ್ಲೇ ʼ15 ಲಕ್ಷʼ ಗೆಲ್ಲಿನೀವು ಮನೆಯಲ್ಲಿ ಕುಳಿತು ಲಕ್ಷಗಟ್ಟಲೆ ಸಂಪಾದಿಸಲು ಬಯಸ...
13/08/2021

ಕೇಂದ್ರ ಸರ್ಕಾರದಿಂದ ʼಸಾರ್ವಜನಿಕʼರಿಗೆ ಬಂಪರ್‌ ಅಫರ್‌ : ಕುಳಿತಲ್ಲೇ ʼ15 ಲಕ್ಷʼ ಗೆಲ್ಲಿ

ನೀವು ಮನೆಯಲ್ಲಿ ಕುಳಿತು ಲಕ್ಷಗಟ್ಟಲೆ ಸಂಪಾದಿಸಲು ಬಯಸಿದ್ರೆ, ನಿಮಗೆ ಬಂಪರ್‌ ಸುದ್ದಿ ಇಲ್ಲಿದೆ. ಹೌದು, ಕೇಂದ್ರ ಸರ್ಕಾರ (Central Government) ಸಾರ್ವಜನಿಕರಿಗೆ ಒಂದು ಸದಾವಕಾಶವನ್ನ ನೀಡಿದ್ದು, ಕೊಂಚ ಬುದ್ದಿ ಖರ್ಚು ಮಾಡುವ ಮೂಲಕ ಕುಳಿತಲ್ಲೇ 15 ಲಕ್ಷ ಎಣಿಸಬೋದು.

ಹಣಕಾಸು ಸಚಿವಾಲಯ (Finance Ministry) ಈ ಹೊಸ ಸ್ಪರ್ಧೆಯನ್ನ ಆರಂಭಿಸಿದ್ದು, ಇದರಲ್ಲಿ ಸೃಜನಶೀಲ ಜನರು ಸಂಸ್ಥೆಯ ಹೆಸರು (Suggest Name), ಲೋಗೋ ವಿನ್ಯಾಸ (Suggest logo) ಮತ್ತು ಟ್ಯಾಗ್‌ಲೈನ್ (Suggest Tagline) ಅನ್ನು ಸರ್ಕಾರಕ್ಕೆ ಸೂಚಿಸಬೇಕು. ನೀವು ಸೂಚಿಸಿದ ಹೆಸರು, ಟ್ಯಾಗ್‌ಲೈನ್, ಲೋಗೋ ಸರ್ಕಾರಕ್ಕೆ ಇಷ್ಟಪಟ್ಟರೆ ನೀವು ಈ ಬಹುಮಾನ ಮೊತ್ತವನ್ನ ಗೆಲ್ಲಬಹುದು.

ಇತ್ತೀಚೆಗೆ My Gov India ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 15 ರವರೆಗೆ ಕಾಲಾವಕಾಶ ನೀಡಿದೆ. ಅದ್ರಂತೆ, ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಈ ಬಹುಮಾನವನ್ನ ಗೆಲ್ಲಬಹುದು.

ಸ್ಪರ್ಧೆ ಏನು ಗೊತ್ತಾ?
ಈ ಸ್ಪರ್ಧೆಯು ಅಭಿವೃದ್ಧಿ ಹಣಕಾಸು ಸಂಸ್ಥೆ (DFI) ಗಾಗಿ ನಡೆಸಲಾಗುತ್ತಿದೆ. ನೀವು ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯವು ಅಭಿವೃದ್ಧಿ ಹಣಕಾಸು ಸಂಸ್ಥೆಯ ಹೆಸರು, ಟ್ಯಾಗ್‌ಲೈನ್ ಮತ್ತು ಅದರ ಲಾಂಛನದ ವಿನ್ಯಾಸವನ್ನ ಸೂಚಿಸಬೇಕು. ಸೂಚನೆ ಅಂದ್ರೆ, ನೀವು ಸೂಚಿಸುವ ಹೆಸರು, ಲೋಗೋ ಮತ್ತು ಟ್ಯಾಗ್‌ಲೈನ್ ಅದರ ಕೆಲಸಕ್ಕೆ ಸಂಬಂಧಿಸಿರಬೇಕು.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗಿದ್ದು, ನೀವು ಡಿಎಫ್‌ಐ ಹೆಸರು, ಲೋಗೋ ಮತ್ತು ಟ್ಯಾಗ್‌ಲೈನ್ ಅನ್ನು ಸೂಚಿಸಲು ಬಯಸಿದ್ರೆ, ನೀವು ಸರ್ಕಾರದ MyGov.in ಪೋರ್ಟಲ್‌ಗೆ ಹೋಗಿ ಮತ್ತು ಈ ಸ್ಪರ್ಧೆಗೆ ನಿಮ್ಮ ನಮೂದುಗಳನ್ನ ಕಳುಹಿಸಬೇಕು. ಆದಾಗ್ಯೂ, ಈಗ ಹೆಚ್ಚು ಸಮಯವಿಲ್ಲ. ಹೆಸರು, ಲೋಗೋ ಮತ್ತು ಡಿಎಫ್‌ಐ ಟ್ಯಾಗ್‌ಲೈನ್ ಸೂಚಿಸಲು ನಿಮ್ಮ ನಮೂದುಗಳನ್ನ ಕಳುಹಿಸಲು ಕೊನೆಯ ದಿನಾಂಕ 15 ಆಗಸ್ಟ್ 2021 ಆಗಿದೆ. ಇನ್ನು ಅದರ ನಂತ್ರ ಸರ್ಕಾರ ತನ್ನ ವಿಜೇತರನ್ನು ಘೋಷಿಸುತ್ತದೆ.

ನೋಂದಣಿಯನ್ನ ಹೇಗೆ ಮಾಡಬಹುದು..?
ಈ ಸ್ಪರ್ಧೆಯಲ್ಲಿ ಭಾಗವಹಿಸಲು, ನೀವು ಮೊದಲು mygov.in ಪೋರ್ಟಲ್‌ಗೆ ಹೋಗಿ. ನಂತ್ರ ನೀವು ಇಲ್ಲಿ ಭಾಗವಹಿಸಲು ಲಾಗಿನ್ ಟ್ಯಾಬ್ ಮೇಲೆ . ಅಮೇಲೆ ನೋಂದಣಿ ವಿವರಗಳನ್ನ ಭರ್ತಿ ಮಾಡಬೇಕು. ನೋಂದಣಿ ನಂತರ, ನೀವು ನಿಮ್ಮ ನಮೂದು ಮಾಡಬೇಕು.

ಬಹುಮಾನದ ವಿವರಗಳು..!
ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿಯನ್ನ ನೀಡಲಾಗುವುದು.
ಹೆಸರು- ರೂ.5,00,000/-, ರೂ. 3,00,000/- ರೂ. 2,00,000/-
ಟ್ಯಾಗ್‌ಲೈನ್ - ರೂ.5,00,000/-, ರೂ. 3,00,000/- ರೂ. 2,00,000/-
ಲೋಗೋ - ರೂ.5,00,000/-, ರೂ. 3,00,000/- ರೂ. 2,00,000/-

ಅಥಣಿ ತಾಲೂಕಿನ ತೇಲಸಂಗ ಗ್ರಾಮದ ಹೊರಟ್ಟಿಯಲ್ಲಿ ಆರೂ ಮನೆಗಳಲ್ಲಿ ಕಳ್ಳರು ಕೈಚಳಕ ತೋರಿ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.ಅಕ್ಬರ...
14/03/2021

ಅಥಣಿ ತಾಲೂಕಿನ ತೇಲಸಂಗ ಗ್ರಾಮದ ಹೊರಟ್ಟಿಯಲ್ಲಿ ಆರೂ ಮನೆಗಳಲ್ಲಿ ಕಳ್ಳರು ಕೈಚಳಕ ತೋರಿ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಅಕ್ಬರ್ ಕರ್ಜಗಿ, ಗುರು ಜಮಖಂಡಿ, ಬಸೀರ್​ ಅಪರಾಜ, ಹನುಮಂತ ಜಮಖಂಡಿ, ಗುರು ಮಾದರ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮುಲ್ಲಾ ಕುಟುಂಬದ ಮನೆಯಲ್ಲಿ 6 ಲಕ್ಷ ರೂಪಾಯಿ ಹಾಗೂ 10 ಗ್ರಾಂ ಚಿನ್ನ, ವಿಠಲ ಮಂದಿರದಲ್ಲಿ ಒಂದೂವರೆ ಕೆಜಿ ಬೆಳ್ಳಿ ಕಿರೀಟ ಮತ್ತು 10 ಗ್ರಾಂ ದೇವಿಯ ಮಾಂಗಲ್ಯ ಸರವನ್ನು ಕಳ್ಳರು ದೋಚಿದ್ದಾರೆ.ದೇವಸ್ಥಾನಲ್ಲಿ ಕಳ್ಳತನ ಮಾಡಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದರಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಐಗಳಿ ಪೊಲೀಸ್​​ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಕಳೆದ ಎರಡು ತಿಂಗಳಿನಿಂದ ಹಲವು ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣ ದಾಖಲಾಗಿವೆ.

ಇಂದು ಪರಮಪೂಜ್ಯ ಅಮರೇಶ್ವರ ಮಹಾರಾಜರು ಸುಕ್ಷೇತ್ರ ಕವಲಗುಡ್ಡ ಇವರು ಅಥಣಿ ನಗರದ ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿರುವ ಶ್ರೀ ಬಸವಣ್ಣನವರ ಕಂಚಿನ ...
12/03/2021

ಇಂದು ಪರಮಪೂಜ್ಯ ಅಮರೇಶ್ವರ ಮಹಾರಾಜರು ಸುಕ್ಷೇತ್ರ ಕವಲಗುಡ್ಡ ಇವರು ಅಥಣಿ ನಗರದ ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿರುವ ಶ್ರೀ ಬಸವಣ್ಣನವರ ಕಂಚಿನ ಪುತ್ಥಳಿ ಕಾಮಗಾರಿಯನ್ನು ವೀಕ್ಷಿಸಿ ಹರ್ಷವ್ಯಕ್ತಪಡಿಸಿದರು ಆದಷ್ಟು ಬೇಗ ಕಾಮಗಾರಿ ಮುಗಿದು ಮೂರ್ತಿಯ ಪ್ರತಿಷ್ಠಾಪನೆ ಆಗಲಿ ಎಂದು ಹರಸಿ ಆಶೀರ್ವದಿಸಿದರು ಅವರಿಗೆ ಬಸವೇಶ್ವರ ಮೂರ್ತಿ ಪ್ರತಿಷ್ಠಾನ ಕಮಿಟಿಯ ಪರವಾಗಿ ಧನ್ಯವಾದಗಳು🙏🙏🙏🙏

ಅಥಣಿಯ ಮಹಾತಪಸ್ವಿ *ಮುರುಗೇಂದ್ರ ಮಹಾಶಿವಯೋಗಿಗಳ ಸುಕ್ಷೇತ್ರ ಶ್ರೀ ಗಚ್ಚಿನಮಠಕ್ಕೆ ರಾಜ್ಯ ಸರ್ಕಾರದ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕ...
12/03/2021

ಅಥಣಿಯ ಮಹಾತಪಸ್ವಿ *ಮುರುಗೇಂದ್ರ ಮಹಾಶಿವಯೋಗಿಗಳ ಸುಕ್ಷೇತ್ರ ಶ್ರೀ ಗಚ್ಚಿನಮಠಕ್ಕೆ ರಾಜ್ಯ ಸರ್ಕಾರದ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ* ಅವರು ಶರಣು ಸಂಸ್ಕೃತಿ ಉತ್ಸವದ ನಿಮಿತ್ಯವಾಗಿ ಭೇಟಿನೀಡಿ ಪರಮ ಪೂಜ್ಯ ಶ್ರೀ ಶಿವಯೋಗಿ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದರು.

ಈ ಸಮಯದಲ್ಲಿ ಸ್ವಾಮೀಜಿಗಳು ಪ್ರೀತಿಯಿಂದ ಮಾಡಿದ ಸನ್ಮಾನವನ್ನು ಸ್ವೀಕರಿಸಿ, ಸಚಿವರು ಅವರ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮಕ್ಕೆ 50000 (ಐವತ್ತು ಸಾವಿರ) ರೂ. ಗಳನ್ನು ಕಿರುದೇಣಿಗೆಯನ್ನು ನೀಡಿದರು.

ಈ ಸಮಯದಲ್ಲಿ ಶ್ರೀ ಉತ್ತಮ (ಅಣ್ಣಾ) ಪಾಟೀಲ, ಶ್ರೀ ಶಿವಾನಂದ ಬುರ್ಲಿ, ಶ್ರೀ ವಿನಾಯಕ ಬಾಗಡಿ, ಶ್ರೀ ರಾಮ ಸೋಡ್ಡಿ, ಶ್ರೀ ಕೃಷ್ಣಾ ಶಿಂದೆ, ಶ್ರೀ ಉದಯ ಪವಾರ ಹಾಗೂ ಹಲವಾರು ಮುಖಂಡರು ಉಪಸ್ಥಿತರಿದ್ದರು

Address


Website

Alerts

Be the first to know and let us send you an email when Namma Athani posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share