Shree Vykunta Vartaa

  • Home
  • Shree Vykunta Vartaa

Shree Vykunta Vartaa A monthly Spiritual and Educational magazine runs under Sri Venkateshwara Charitable Trust, located at Mandya.

 #ತುಂಬಾ_ಚೆನ್ನಾಗಿದೆ_ಓದಿ:   ಒಮ್ಮೆ ಭಕ್ತನೊಬ್ಬ ಗೋಸ್ವಾಮಿತುಳಸೀದಾಸರನ್ನು ಕೇಳುತ್ತಾನೆ..."ನೀವುಇಷ್ಟೆಲ್ಲ ರಾಮನಾಮ ಗುಣಗಾನಮಾಡಿದ್ದೀರಲ್ವಾ, ನ...
27/10/2023

#ತುಂಬಾ_ಚೆನ್ನಾಗಿದೆ_ಓದಿ:
ಒಮ್ಮೆ ಭಕ್ತನೊಬ್ಬ ಗೋಸ್ವಾಮಿ
ತುಳಸೀದಾಸರನ್ನು ಕೇಳುತ್ತಾನೆ...

"ನೀವು
ಇಷ್ಟೆಲ್ಲ ರಾಮನಾಮ ಗುಣಗಾನ
ಮಾಡಿದ್ದೀರಲ್ವಾ, ನಿಮಗೆ ಒಮ್ಮೆಯಾದರೂ
ಶ್ರೀರಾಮನ ದರ್ಶನ ಆಗಿದೆಯೇ?"

ಅದಕ್ಕೆ ತುಳಸೀದಾಸರು,
"ಖಂಡಿತವಾಗಿಯೂ ಆಗಿದೆ!" ಎಂದು
ಹೆಮ್ಮೆಯಿಂದ ಹೇಳುತ್ತಾರೆ.

ಭಕ್ತನು
"ಹಾಗಿದ್ದರೆ ನನಗೂ ಶ್ರೀರಾಮದರ್ಶನ
ಸಾಧ್ಯವಿದೆಯೇ?" ಎಂದು ಕೇಳುತ್ತಾನೆ.

ತುಳಸೀದಾಸರು "ಯಾಕಿಲ್ಲ? ನಿನಗೂ
ಶ್ರೀರಾಮದರ್ಶನ ಸಾಧ್ಯವಿದೆ! ಅದು ಬಹಳ
ಸುಲಭವಾಗಿಯೂ ಇದೆ. ನೀನು ಈ
ಪ್ರಪಂಚದಲ್ಲಿ ಯಾವುದೇ
ವ್ಯಕ್ತಿಯನ್ನಾದರೂ ನೋಡು, ಅಲ್ಲಿ ನಿನಗೆ
ರಾಮನೇ ಕಾಣುತ್ತಾನೆ!" ಎನ್ನುತ್ತಾರೆ.

ಭಕ್ತನಿಗೆ ಅರ್ಥವಾಗಲಿಲ್ಲ. "ಬಿಡಿಸಿ ಹೇಳಿ
ಸ್ವಾಮೀ" ಎಂದು ವಿನಂತಿಸಿದ.

ತುಳಸೀದಾಸರು ಹೇಳುತ್ತಾರೆ-
"ನೋಡು, ಇದಕ್ಕೊಂದು ಸುಲಭಸೂತ್ರ
ಇದೆ. ಈ ಪ್ರಪಂಚದಲ್ಲಿ ಯಾರದೇ
ಹೆಸರಿಗಾದರೂ ಸರಿ ಈ ಸೂತ್ರವನ್ನು
ಅಳವಡಿಸಿದರೆ ಕೊನೆಯಲ್ಲಿ ನಿನಗೆ ರಾಮನ
ಹೆಸರೇ ಸಿಗುತ್ತದೆ!"

ಭಕ್ತನಿಗೆ ಮತ್ತಷ್ಟು ಕುತೂಹಲ, ಅಚ್ಚರಿ.
ಯಾವುದು ಆ ಸೂತ್ರ? ಎಂದು ಕೇಳಿದ.

ಆಗ ತುಳಸೀದಾಸರು ಹೇಳುತ್ತಾರೆ:

ನಾಮ ಚತುರ್ಗುಣ ಪಂಚತತ್ತ್ವ ಮಿಲನ
ತಾಸಾಂ ದ್ವಿಗುಣ ಪ್ರಮಾಣ
ತುಲಸೀ ಅಷ್ಟಸೌಭಾಗ್ಯೇ ಅಂತ ಮೇ
ಶೇಷ ರಾಮ ಹೀ ರಾಮ ||

ಇದರ ಪ್ರಕಾರ, ಯಾರದೇ ಹೆಸರಾದರೂ ಸರಿ,
ಅದರಲ್ಲಿರುವ ಅಕ್ಷರಗಳನ್ನು ಎಣಿಸು. ಅದನ್ನು
ನಾಲ್ಕರಿಂದ ಗುಣಿಸು (ಚತುರ್ಗುಣ). ಅದಕ್ಕೆ
ಐದನ್ನು ಕೂಡಿಸು (ಪಂಚತತ್ತ್ವ ಮಿಲನ). ಆಗ
ಬಂದ ಸಂಖ್ಯೆಯನ್ನು ದುಪ್ಪಟ್ಟು ಮಾಡು
(ದ್ವಿಗುಣ ಪ್ರಮಾಣ). ಬಂದ ಉತ್ತರವನ್ನು
ಎಂಟರಿಂದ ಭಾಗಿಸು (ಅಷ್ಟಸೌಭಾಗ್ಯ).
ಭಾಗಲಬ್ಧ ಎಷ್ಟೇ ಇರಲಿ, ಶೇಷ
ಉಳಿಯುವುದು ಎರಡೇ. ಆ ಎರಡು
ಅಕ್ಷರಗಳೇ "ರಾಮ"!

ಭಕ್ತನಿಗೆ ಆಶ್ಚರ್ಯವೋ ಆಶ್ಚರ್ಯ. ಮೊದಲು
ತನ್ನ ಹೆಸರು "ನಿರಂಜನ" ಎಂದು ನಾಲ್ಕು
ಅಕ್ಷರಗಳು ಇದ್ದದ್ದಕ್ಕೆ ಸೂತ್ರವನ್ನು
ಅನ್ವಯಿಸಿದ. 4X4=16; 16+5=21;
21X2=42; 42/8= ಭಾಗಲಬ್ಧ 5. ಶೇಷ 2.

ತನ್ನ ಹೆಂಡತಿಯ ಹೆಸರು "ನಿರ್ಮಲಾ" ಎಂದು
ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ. 3X4=12;
12+5=17; 17X2=34; 34/8 =
ಭಾಗಲಬ್ಧ 4. ಶೇಷ 2.

ತನ್ನ ಮಗಳ ಹೆಸರು "ನಿಧಿ" ಎಂದು ಇದ್ದದ್ದಕ್ಕೆ
ಸೂತ್ರ ಅನ್ವಯಿಸಿದ. 2X4=8; 8+5=13;
13X2=26; 26/8 = ಭಾಗಲಬ್ಧ 3. ಶೇಷ
2.

ತನ್ನ ಪಕ್ಕದಮನೆಯವನ ಹೆಸರು "ನಿಖಿಲಾನಂದ"
ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ.
5X4=20; 20+5=25; 25X2=50; 50/8
= ಭಾಗಲಬ್ಧ 6. ಶೇಷ 2.

ಹೌದಲ್ವಾ! ಹೆಸರು ಯಾವುದೇ ಇದ್ದರೂ,
ಎಷ್ಟು ಅಕ್ಷರಗಳೇ ಇದ್ದರೂ
ಕೊನೆಯಲ್ಲುಳಿಯುವುದು ಎರಡಕ್ಷರ
"ರಾಮ" ಮಾತ್ರ! ಭಕ್ತನಿಗೆ ಬಹಳ
ಖುಷಿಯಾಯ್ತು.

ತುಳಸೀದಾಸರ
ಕಾಲಿಗೆರಗಿದ. ಇವತ್ತು ನನಗೆ
ಶ್ರೀರಾಮದರ್ಶನ ಮಾಡಿಸಿದಿರಿ. ಇನ್ನು
ಯಾವಾಗಲೂ ನಾನು ರಾಮನನ್ನೇ
ಕಾಣುತ್ತಿರುತ್ತೇನೆ ಎಂದು ಅಲ್ಲಿಂದ
ಹೊರಟುಹೋದ.

ಅಷ್ಟಾಗಿ, ತುಳಸೀದಾಸರು ಹೇಳಿದ
ಸೂತ್ರದಲ್ಲಿನ ಸಂಖ್ಯೆಗಳ ಮತ್ತು
ಗಣಿತಕ್ರಿಯೆಗಳ ಮಹತ್ವ ಏನು ಗೊತ್ತೇ?

ಚತುರ್ಗುಣ = ಧರ್ಮ, ಅರ್ಥ, ಕಾಮ, ಮೋಕ್ಷ
ಎಂಬ ನಾಲ್ಕು ಪುರುಷಾರ್ಥ.

ಪಂಚತತ್ತ್ವ = ಭೂಮಿ, ನೀರು, ಅಗ್ನಿ,
ವಾಯು, ಆಕಾಶ ಎಂಬ ಪಂಚಮಹಾಭೂತ.

ದ್ವಿಗುಣ = ಮಾಯೆ ಮತ್ತು ಬ್ರಹ್ಮ.

ಅಷ್ಟಸೌಭಾಗ್ಯ = ಅನ್ನ, ಅರ್ಥ, ಪ್ರಭುತ್ವ,
ಯೌವನ, ವೈಭವ, ಗೃಹ, ವಸ್ತ್ರ, ಆಭರಣ ಎಂಬ
ಎಂಟು ಸೌಭಾಗ್ಯಗಳು.

ಇವೆಲ್ಲದರೊಟ್ಟಿಗೆ ನಾವು ಜೀವನಜಂಜಾಟ
ನಡೆಸಿ, ಗುಣಿಸಿ, ಕೂಡಿಸಿ, ಭಾಗಿಸಿ, ಭೋಗಿಸಿ
ಕೊನೆಗೂ ಉಳಿಯುವ ಶೇಷ "ರಾಮ"
ಮಾತ್ರ!

ಜೈ ಶ್ರೀರಾಮ್
"ಭಗವತ್ ಗೀತೆ ನುಡಿ "

ಹುಟ್ಟಿದಾಗ ನೀ ಅಳುತ್ತಿದ್ದೆ,
ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

ಹುಟ್ಟಿದಾಗ ಹುಡುಕುವರು ನಿನಗೆ
ನೂರೆಂಟು ನಾಮ,
ಮಡಿದಮೇಲೆ ಶವ ಎಂದೇ
ನಿನ್ನ ನಾಮ.

ನೀನೇನನ್ನೂ ಗಳಿಸದೇ ಬಂದೆ,
ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.

ಓ ಮಾನವಾ..
ಮಡಿದಾಗ ಮಣ್ಣಲ್ಲಿ ಮರಳಾಗಿ
ಹೊಗುವ ನೀನು
ನಿನ್ನದು ಎನ್ನಲು ನಿನಗೇನಿದೆ,

ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ
ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲು
ನಾನು ಯಾರು ?
ಏನಿದೇ ನನ್ನಲ್ಲಿ ?
ಚಿಂತಿಸುವವನಿಗೆ ದೃಷ್ಟಾಂತವಿದೆ.
-One of the best messages I have read.ಸಿದ್ದರಾಜುಗೌಡ rasi ಮಂಡ್ಯ 🙏

 #ಭಾರತೀಯ_ಮಹಿಳೆಯರಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಮಾಣ: ಫ್ರಿಡ್ಜ್‌ನಲ್ಲಿರುವ ವಸ್ತುಗಳನ್ನು ಶೀಘ್ರದಲ್ಲೇ ಬಳಸಿ...!!!* 🔥🔥🔥◆ ಫ್ರಿಜ್ ವಸ...
27/10/2023

#ಭಾರತೀಯ_ಮಹಿಳೆಯರಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಮಾಣ: ಫ್ರಿಡ್ಜ್‌ನಲ್ಲಿರುವ ವಸ್ತುಗಳನ್ನು ಶೀಘ್ರದಲ್ಲೇ ಬಳಸಿ...!!!* 🔥🔥🔥

◆ ಫ್ರಿಜ್ ವಸ್ತುಗಳು ಮತ್ತು ಕ್ಯಾನ್ಸರ್ ನಡುವಿನ ಸಂಬಂಧವೇನು? ಆದರೆ ಇದೆ....

◆ ಹಾಲಿನಿಂದ ಮೊಸರು ಬೆಣ್ಣೆ ತನಕ
◆ ಸಾಗೋದಿಂದ ಸೋಯಾ ಸಾಸ್‌ಗೆ ಹಿಟ್ಟು,
◆ ಈಜು, ◆ ರವೆ, ◆ ಉಪ್ಪಿನಕಾಯಿ,
◆ ಹಪ್ಪಳ ◆ ಮಸಾಲೆಗಳು, ◆ ಒಣ ಹಣ್ಣುಗಳು,
◆ ತರಕಾರಿಗಳು ಅಥವಾ ಇನ್ನು ಏನೇ ಇರಲಿ ಅದನ್ನು ಫ್ರಿಜಲ್ಲಿ ತುರ್ಕೊದು!

ಮಹಿಳೆಯರ ಈ ವರ್ತನೆ. ಅಷ್ಟೇ ಅಲ್ಲ, ಅರ್ಧ ತಿಂದ ಹಣ್ಣು,

◆ ನಿನ್ನೆಯಿಂದ ಉಳಿದ ದಾಲ್, ■ ತರಕಾರಿಗಳು, ■ ಎರಡು ದಿನಗಳ ಹಿಂದಿನ ಚಪಾತಿ ■ ಮಸಾಲೆ, ■ ಎಲ್ಲಾ ರೀತಿಯ ಬೇಳೆಕಾಳುಗಳು, ■ ವಿವಿಧ ಮಸಾಲಾ ಪ್ಯಾಕೆಟ್‌ಗಳು ಸಹ ತೆರೆದಿರುತ್ತವೆ, ■ ಉಳಿದಿರುವ ತಂಪು ಪಾನೀಯಗಳು, ■ ಸಿಹಿತಿಂಡಿಗಳು, ಸಾಮಗ್ರಿಗಳ ಹೊರೆ! ಇವೆಲ್ಲವೂ ನಿಮ್ಮ ಫ್ರಿಡ್ಜ್‌ನಲ್ಲಿ ಸುಖವಾಗಿ ಬದುಕುತ್ತಿವೆ ಎಂಬ ತಪ್ಪು ಕಲ್ಪನೆ ನಿಮ್ಮಲ್ಲಿದೆ. ಆದರೆ ಇಲ್ಲಿ ಕ್ಯಾನ್ಸರ್ ವೈರಸ್ ಸೃಷ್ಟಿಯಾಗುತ್ತಿದೆ. ಇದುಕ್ಕೂ ಫ್ರಿಡ್ಜ್ ಗೂ ಯಾವುದೇ ಲಾಕ್ಷಣಿಕ ಸಂಬಂಧವಿಲ್ಲ ಎಂದು ಅನೇಕರಿಗೆ ತೋರುತ್ತದೆ. ಆದರೆ, ಈ ರೀತಿ ವರ್ತಿಸುವ 1000 ಜನರನ್ನು ಅಧ್ಯಯನ ಮಾಡಿದ ನಂತರ, ಅವರಲ್ಲಿ 538 ಮಂದಿ ಕ್ಯಾನ್ಸರ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಕಂಡುಬಂದಿದೆ, ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಿದ್ದಾರೆ. ಆಶ್ಚರ್ಯವೆಂಬಂತೆ ಈ 538 ಸ್ಥಳಗಳಲ್ಲಿ ಮೇಲೆ ಹೇಳಿದಂತೆ ಫ್ರಿಜ್ ನಲ್ಲಿ ಸುಖದ ಲೋಕವೇ ನಡೆಯುತ್ತಿತ್ತು.

■ ಸಿಕ್ಕಾಪಟ್ಟೆ ಆಹಾರ ತಂದು ಫ್ರಿಜ್ ನಲ್ಲಿ ತುಂಬುವ ಬದಲು ನಿಮಗೆ ಬೇಕಾದುದನ್ನು ಮಾತ್ರ ತನ್ನಿ.
■ ಇಡ್ಲಿ, ದೋಸೆ, ■ ವಡಾ ಸಾಂಬಾರನ ತಾಜಾ ಹಿಟ್ಟು ತನ್ನಿ.. ಎಂಟು ದಿನದ್ದಲ್ಲ.

■ ಕಡಲೆ ಹಿಟ್ಟು,
■ ಜೋಳದ ಹಿಟ್ಟು,
■ ದ್ವಿದಳ ಧಾನ್ಯಗಳು
ಕೀಟಗಳಿಗೆ ಬಹಳ ಒಳಗಾಗುತ್ತವೆ. ಕಡಿಮೆ ತಂದು ಬಿಸಿಲಿನಲ್ಲಿ ಒಣಗಿಸಿ. ಎರಡು ದಿನಗಳಲ್ಲಿ ಸೇವಿಸುವಷ್ಟು ಹಣ್ಣು ಮತ್ತು ಎಲೆಗಳ ತರಕಾರಿಗಳನ್ನು ಮಾತ್ರ ತನ್ನಿ.

ಉಳಿದ ಹಾಲನ್ನು 48 ಗಂಟೆಗಳ ಒಳಗೆ ಬಳಸಿ ಉಳಿದದ್ದನ್ನು ಎಸೆಯಿರಿ! ಇಡಬೇಡಿ.

ಕೃಪೆ: ಡಾ. ಮಕರಂದ್ ಕರ್ಮಾಕರ್
*ಟಾಟಾ ಮೆಮೋರಿಯಲ್ ಆಸ್ಪತ್ರೆ, ಮುಂಬೈ*

ಈ ಸಂದೇಶವನ್ನು ಪ್ರತಿ ಮನೆಗೆ ಮತ್ತು ಮನೆಯಲ್ಲಿರುವ ಎಲ್ಲರಿಗೂ ತಲುಪಿಸಲು ವಿನಂತಿ. ಪ್ರೀತಿಪಾತ್ರರಿಗೆ ಕ್ಯಾನ್ಸರ್ ಬಂದು ಅಕಾಲದಲ್ಲಿ ಅಗಲಿದಾಗ ಆಗುವ ದುಃಖವನ್ನು ಅರ್ಥ ಮಾಡಿಕೊಳ್ಳಿ. 🙏*

ವಾಸ್ತವವಾಗಿ ಫ್ರಿಡ್ಜ್ ಅನ್ನೇ ಬಿಸಾಡುವುದು ಉತ್ತಮ..

ಅನುಭವಿ ವೈದ್ಯರತ್ತಿರ ಕೆಲವು ಸಲಹೆ ಪಡೆಯುವುದು ಉತ್ತಮ
#ಆರೋಗ್ಯವೇ_ಭಾಗ್ಯ 🙏
Rasi SiddaRajuGowda Mandya

rasi SiddarajuGowda Mandya🌹🙏 🙏🙏🙏🙏🙏🙏🙏
27/10/2023

rasi SiddarajuGowda Mandya
🌹🙏 🙏🙏🙏🙏🙏🙏🙏

 #ಚಂದ್ರ_ಗ್ರಹಣದ_ವಿಚಾರ_ಮಾಹಿತಿ*1)* ದಿನಾಂಕ 28-10-2023 , ಶನಿವಾರ  ಆಶ್ವಯುಜ ಮಾಸ ಶುಕ್ಲ ಪಕ್ಷ ಪೂರ್ಣಿಮಾ *ರಾಹುಗ್ರಸ್ತ ಚಂದ್ರ ಗ್ರಹಣ* ಇರು...
27/10/2023

#ಚಂದ್ರ_ಗ್ರಹಣದ_ವಿಚಾರ_ಮಾಹಿತಿ
*1)* ದಿನಾಂಕ 28-10-2023 , ಶನಿವಾರ ಆಶ್ವಯುಜ ಮಾಸ ಶುಕ್ಲ ಪಕ್ಷ ಪೂರ್ಣಿಮಾ *ರಾಹುಗ್ರಸ್ತ ಚಂದ್ರ ಗ್ರಹಣ* ಇರುತ್ತದೆ.
*3) ಗ್ರಹಣ ಸ್ಪರ್ಶ ಮಧ್ಯರಾತ್ರಿ 01-04 ಘಂಟೆ ಮೋಕ್ಷ ಕಾಲ ಮಧ್ಯ ರಾತ್ರಿ 02-24 ಘಂಟೆ
*4) ಆದ್ದರಿಂದ ಅಶ್ವಿನಿ ನಕ್ಷತ್ರ ಮೇಷ ರಾಶಿ ಇವರು ಮಧ್ಯ ರಾತ್ರಿಯ ಸುಮಾರು 01-44 ಘಂಟೆ ಹಿಡಿದ (ಸ್ಪರ್ಶ) ಸ್ನಾನ ನಂತರ ಒಂದು ಇಲ್ಲ ಅರ್ದ ಕೆಜಿ ಅಕ್ಕಿ , ಉದ್ದಿನಬೇಳೆ ಅರ್ಧ ಇಲ್ಲ ತಿಳಿದಷ್ಷು , ಬಿಳಿ ವಸ್ತ್ರ, ಚಂದ್ರ ಬಿಂಬ, ಇಷ್ಟ ದಕ್ಷಿಣೆ ತಾಂಬೂಲ ಸಮೇತ ಕೆಳಗಿನ ಶ್ಲೋಕ ಬರೆದ ಕಾಗದದ ಸಮೇತ ದೇವರ ಮುಂದೆ ಇಟ್ಟು ದೋಷ ನಿವಾರಣೆಗೆ ಒಳ್ಳೆಯ ಆರೋಗ್ಯ ಆಯುಷ್ಯ ಉತ್ತಮ ಅಭ್ಯುದಯ ಪ್ರಾರ್ಥಿಸಿರಿ.
5) ಗ್ರಹಣ ಮೋಕ್ಷ ನಂತರ ಸ್ನಾನ ಅವಶ್ಯ

6) ಮರುದಿನ ಭಾನುವಾರ ದಾನ ಮಾಡಿದ ಸಮಗ್ರ ಧಾನ್ಯ ಕಾಗದ ತಾಂಬೂಲ ದಕ್ಷಿಣೆ ನವಗ್ರಹ ಇಲ್ಲ ಯಾವುದಾದರೂ ದೇವಸ್ಥಾನ ಕೊಡಿರಿ.
*7) ಮಗು ಚಿಕ್ಕವರಾಗಿದ್ದರೆ ತಾಯಿ ಆರೋಗ್ಯ ಅನುಕೂಲ ನೋಡಿ ಮಾಡಬಹುದು*
*8) ಶ್ಲೋಕ "
*ಯೋ ಸೌ ವಜ್ರಧರೋ ದೇವಃ ಆದಿತ್ಯನಾಂ ಪ್ರಭುರ್ಮತಃ!*
*ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು!!*
*ಯೋಸೌ ದಂಡಧರೋ ದೇವಃ ಯಮೋ ಮಹಿಷವಾಹನಃ !*
*ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು!!*
*ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ!*
*ಚಂದ್ರ ಗ್ರಹೋಪರಾಗೋತ್ಥ* *ಗ್ರಹಪೀಡಾಂ ವ್ಯಪೋಹತು!!*

*ಇದನ್ನ ಕಾಗದ ಮೇಲೆ ಬರೆದು ಕೊಳ್ಳಿರಿ
Rasi SiddaRajuGowda Mandya 🙏

ಅಭಿನವ ಭಾರತಿ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿಗಳಿಂದ ಮಂಡ್ಯದಲ್ಲಿ ವಿಶ್ವ ಔಷಧಿ ತಜ್ಞರ ದಿನಾಚರಣೆಬೀದಿ ನಾಟಕ ಹೇಗಿತ್ತು
02/10/2022

ಅಭಿನವ ಭಾರತಿ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿಗಳಿಂದ ಮಂಡ್ಯದಲ್ಲಿ ವಿಶ್ವ ಔಷಧಿ ತಜ್ಞರ ದಿನಾಚರಣೆ

ಬೀದಿ ನಾಟಕ ಹೇಗಿತ್ತು

16/07/2022
"ಚಿರಶಾಂತಿ ಮಿ.ಕಬಿನಿ"ಈ ಗಜರಾಜನ ಬಗ್ಗೆ ನನಗೆ ಗೊತ್ತಿರಲಿಲ್ಲಈಗ ತಿಳಿಯಿತು ಆದರೆ ಗಜರಾಜ ಇಲ್ಲಹುಟ್ಟಿದ ಪ್ರತಿಯೊಂದು ಪ್ರಾಣಿಯೂಸಾಯಲೇಬೇಕುಆದರೆ ಸ...
12/06/2022

"ಚಿರಶಾಂತಿ ಮಿ.ಕಬಿನಿ"

ಈ ಗಜರಾಜನ ಬಗ್ಗೆ ನನಗೆ ಗೊತ್ತಿರಲಿಲ್ಲ
ಈಗ ತಿಳಿಯಿತು ಆದರೆ ಗಜರಾಜ ಇಲ್ಲ
ಹುಟ್ಟಿದ ಪ್ರತಿಯೊಂದು ಪ್ರಾಣಿಯೂ
ಸಾಯಲೇಬೇಕು
ಆದರೆ ಸತ್ತ ಮೇಲೆ ಮನಸ್ಸಿಗೆ ಹೆಚ್ಚು ನೋವಾಗುವುದಂತೂ ಸತ್ಯ..!

"ಮಿಸ್ಟರ್ ಕಬಿನಿ" ಎಂದೇ ಖ್ಯಾತವಾಗಿದ್ದ ಭೋಗೇಶ್ವರ ಎಂಬ ಹೆಸರಿನ ಏಷ್ಯಾದ ಅತಿ ಉದ್ದನೆಯ ದಂತವುಳ್ಳ ಆನೆಯಾಗಿದ್ದ ಗಜನಿವನು!
ಆದರೆ ಈಗಿಲ್ಲ ವಯೋಸಹಜ ಕಾಯಿಲೆಯಿಂದ ನಮ್ಮನ್ನು ಅಗಲಿದ್ದಾನೆ

ಗಜರಾಜ ನಿನ್ನ ಆತ್ಮವೆಲ್ಲಿದ್ದರೂ ಶಾಂತಿ ದೊರೆಯಲಿ😪
ಕಬಿನಿ ನದಿಯ ಸನಿಹದಲ್ಲೇ ಇದ್ದ ನಿನ್ನನ್ನು ಕಳೆದುಕೊಂಡ ಕಬಿನಿಯ ದುಃಖವಂತೂ ಹೇಳತೀರದಾಗಿದೆ
ಮತ್ತೊಮ್ಮೆ ನೀನು ಗಜನಾಗಿಯೇ ಕರ್ನಾಟಕದಲ್ಲಿ ಕಬಿನಿಯ ತೀರದಲ್ಲಿಯೇ ಹುಟ್ಟುವಂತಾಗಲಿ
ಭೋಗೇಶ್ವರ ನಿನಗೆ ಸ್ವರ್ಗದಲ್ಲಿ ದರ್ಶನ ನೀಡಲಿ ಆ ಮೂರು ಕಣ್ಣಿನ ಈಶ್ವರ
"ಚಿರಶಾಂತಿ ಓ ಮಿಸ್ಟರ್ ಕಬಿನಿ "

-ಶರತ್ ಕುಮಾರ್ ಬಿ ಎಸ್
ಶಿಕ್ಷಕರು,ಅಭಿನವ ಭಾರತಿ ಪ್ರೌಢ ಶಾಲೆ, ಮಂಡ್ಯ

11/06/2022

Saturday bhajana and satsang from Svvn school halebudanuru branch

21/05/2022

*ಮಳೆರಾಯ*
ಓ ರಾಯ ಮಳೆರಾಯ
ಸಾಕು ನಿಲ್ಲಿಸಯ್ಯ ನಿನ್ನ ಓಟವ
ಎಷ್ಟೂಂತ ಉಯ್ಯುವೆ ತೊಯ್ಯುವೆ
ಬಾ ಎನ್ನುವಾಗ ಬರಲೊಲ್ಲೆ
ಬೇಡ ಎನ್ನುವಾಗ ನಿಲ್ಲಲೊಲ್ಲೆ
ಏನಯ್ಯಾ ನಿನ್ನ ಲೀಲೆ

ಬೆಳಗಿಂದ ಸಂಜೆವರೆಗೆ
ಎಡೆಬಿಡದೆ ಬೀಳುತಿರುವೆ
ರಾತ್ರಿಯೂ ಬಂದು ಹೋಗುವೆ
ಸೂರ್ಯನಂತೂ ಇಣುಕಿನೋಡಿ
ಹಾಗೇ ಮರೆಯಾಗುತ್ತಾನೆ
ಏನಯ್ಯಾ ನಿನ್ನ ಲೀಲೆ

ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ
ನದಿಗಳು ಭೋರ್ಗರೆಯುತ್ತಿವೆ
ಜಲಾಶಯಗಳು ತುಂಬಿ ತುಳುಕಿವೆ
ಮೀನುಗಾರರಿಗೆ ಬಂದಿದೆ ಸಂಕಷ್ಟ
ಇನ್ನು ನಿಲ್ಲಿಸಿಲ್ಲ ನಿನ್ನ ಓಟ
ಏನಯ್ಯಾ ನಿನ್ನ ಲೀಲೆ

ಬೆಂಗಳೂರಿನ ರಸ್ತೆಗಳಾಗಿವೆ ಈಜುಕೊಳಗಳು
ಮಂಡ್ಯದಲ್ಲಿ ಒಡೆದಿವೆ ರಸ್ತೆಗಳು
ಕೆ.ಆರ್.ಪೇಟೆಲಿ ನೆಲಕ್ಕುರುರಳಿವೆ ತೆಂಗಿನ ಮರಗಳು
ಚಿತ್ರದುರ್ಗ ದಾವಣಗೆರೆ ಶಿವಮೊಗ್ಗ ನಗರಗಳು ಭಾಗಶಃ ನೀರಿನಿಂದ ತುಂಬಿ ಹೋಗಿವೆ
ಬಡವರ ಮನೆಗಳಂತೂ ಬಿದ್ದು ಹೋಗಿವೆ
ಏನಯ್ಯಾ ನಿನ್ನ ಲೀಲೆ

ರೈತರು ಬೆಳೆದ ಬೆಳೆ ನಾಶವಾಯ್ತು
ಟೊಮೋಟೋ ಬೆಲೆ ಗಗನಕ್ಕೆ ಹೋಯ್ತು
ಅಲ್ಲಲ್ಲಿ ಶಾಲೆಗಳಿಗೆ ರಜೆ ಘೋಷಣೆ
ಮಕ್ಕಳಿಗೇನೋ ಖುಷಿಯೋ ಖುಷಿ
ಪಾಲಕರಿಗೆ ತಟ್ಟುತ್ತಿದೆ ಬಿಸಿಯೋ ಬಿಸಿ
ಇನ್ನು ನಿಲ್ಲಿಸಿಲ್ಲ ನಿನ್ನ ಓಟ
ಏನಯ್ಯಾ ನಿನ್ನ ಲೀಲೆ
ಇನ್ನಾದರೂ ಸ್ವಲ್ಪ ತಗೋ ರೆಸ್ಟು
ಜನಗಳಿಗೆ ಸಿಗಲಿ ಸ್ವಲ್ಪ ಬೂಸ್ಟು

-ಶರತ್ ಕುಮಾರ್ ಬಿ ಎಸ್
ಶಿಕ್ಷಕರು,
ಅಭಿನವ ಭಾರತಿ ಪ್ರೌಢ ಶಾಲೆ, ಮಂಡ್ಯ.

*ಗೋಹತ್ಯೆ ನಿಷೇಧ*ಗೋಹತ್ಯೆ ನಿಷೇಧ ಖಾಯಿದೆ ನಿಜಕ್ಕೂ ಒಳ್ಳೆಯದೇ ಆಗಿದೆ| ಎಲ್ಲರೂ ಕಟಿಬದ್ಧವಾಗಿ ಇದನ್ನು ಪಾಲಿಸಬೇಕಾಗಿದೆ|ಎಲ್ಲಾ ದೇವಾನುದೇವತೆಗಳು...
04/05/2022

*ಗೋಹತ್ಯೆ ನಿಷೇಧ*

ಗೋಹತ್ಯೆ ನಿಷೇಧ ಖಾಯಿದೆ
ನಿಜಕ್ಕೂ ಒಳ್ಳೆಯದೇ ಆಗಿದೆ|
ಎಲ್ಲರೂ ಕಟಿಬದ್ಧವಾಗಿ ಇದನ್ನು ಪಾಲಿಸಬೇಕಾಗಿದೆ|

ಎಲ್ಲಾ ದೇವಾನುದೇವತೆಗಳು ನೆಲೆಸಿರುವ ಕಾಮಧೇನು ಈ ಗೋಮಾತೆ|
ಶತಮಾನಗಳಿಂದ ಪೂಜಿಸಲ್ಪಡುವಳು ನಮ್ಮ ಗೋಮಾತೆ |

ಇಟ್ಟರೆ ಸಗಣಿ ತಟ್ಟಿದರೆ ಬೆರಣಿ ಕರೆದರೆ ನೊರೆ ಹಾಲು ಕಾಯಿಸಿದರೆ ಬೆಣ್ಣೆ ತುಪ್ಪ |
ನೀನಾರಿಗಾದೆಯೋ ಎಲೆ ಮಾನವ ಎನ್ನುವಂತೆ |

ಗೋಮಾತೆಯಿಂದ ಪ್ರಯೋಜನಗಳು ಅಪಾರ |
ಆದರೂ ಕೆಲವರು ಗೋಮಾತೆಯ ಕೊಲ್ಲುವರು ಭರಪೂರ |

ಗೋಮಾತೆಯ ಶಾಪ ಖಂಡಿತ ಬಿಡದು ಅವರನ್ನು|
ಇನ್ನಾದರೂ ನಿಲ್ಲಲಿ ಗೋಹತ್ಯೆ ಮೂಡಲಿ ಎಲ್ಲರಲೂ ಐಕ್ಯತೆ |

-ಶರತ್ ಕುಮಾರ್.ಬಿ.ಎಸ್., ಶಿಕ್ಷಕರು
ಅಭಿನವ ಭಾರತಿ ಪ್ರೌಢಶಾಲೆ, ಮಂಡ್ಯ

19/04/2022

ಹಸಿದವರಿಗೆ ಗೊತ್ತು ಅನ್ನದ ಬೆಲೆ.
ಕಷ್ಟ ಪಟ್ಟವರಿಗೆ ಗೊತ್ತು ಜೀವನದ ಬೆಲೆ.
ಯಾಕಿಷ್ಟು ಮೆರೆವೆ ಮಣ್ಣಾಗಲಿಕ್ಕೆ !!!!
ಯಾಕಿಷ್ಟು ಉರಿಯುವೆ ಬೂದಿಯಾಗಲಿಕ್ಕೆ !!!!.

28/03/2022

ಈ ವಿಡಿಯೋ ನೋಡಿ ಕೆಲವೊಂದು ಸಾಲುಗಳನ್ನು ಬರೆಯಬೇಕನಿಸಿತು.... ಯುಗಾದಿ ಹಬ್ಬ ಬರ್ತಾ ಇದೆ..ಎಲ್ಲಾ ಮನೆಗಳಲ್ಲಿ ಹಬ್ಬದ ತಯಾರಿ ನಡೆಯುತ್ತಾ ಇರುತ್ತೆ... ದುಡ್ಡು ಇರೋರು ಅರಾಮವಾಗಿ ಖುಷಿಯಾಗಿ ಹಬ್ಬಕ್ಕೆ ತಯಾರಾಗುತ್ತಾರೆ..‌ ಆದರೆ ಅವರ ಪಕ್ಕದಲ್ಲೇ ಬಡತನದಲ್ಲಿ ಬೇಯುತ್ತಿರುವ ಮತ್ತು ಜವಾಬ್ದಾರಿ ಇಲ್ಲದ ಗಂಡನನ್ನು ಪಡೆದ ಹೆಣ್ಣುಮಕ್ಕಳು...ತನ್ನ ಮನೇಲಿ ಏನೂ ಇಲ್ಲದಿದ್ದರೂ ಪಕ್ಕದ ಮನೆಯವರು ಏನಾದರೂ ಆಡಿಕೊಳ್ಳುತ್ತಾರೆ ಮತ್ತು ತನ್ನ ಮಕ್ಕಳು ನೋವು ಪಡಬಾರದು ಅಂತ...ಒಳಗೆ ಏನೂ ಇಲ್ಲದಿದ್ದರೂ ಹೊರಗೆ ಗೋಡೆಗೆ ಶೃಂಗಾರ ಮಾಡೆಲೆತ್ನಿಸುತ್ತಾರೆ.ಯಾವ ರೀತಿಯಲ್ಲಾದರೂ ಸರಿ ಅಂದರೆ ತಾನು ಮಾಡಿದ ಕೂಲಿ ಹಣದಲ್ಲಿ ಅಲ್ಪಸ್ವಲ್ಪ ಕೂಡಿಟ್ಟ ಹಣ ,ತವರು ಮನೆಯವರು ಬಂದಾಗ ಕೊಟ್ಟ ಹಣ, ಮುಂದೆ ಕೂಲಿ ಮಾಡುವೆ ಎನ್ನುವ ಧೈರ್ಯದಲ್ಲಿ ಸಾಲ ಪಡೆದು ಹಬ್ಬಕ್ಕೆ ತಯಾರಿ ಮಾಡುತ್ತಾರೆ... ತಮಗಿಲ್ಲದಿದ್ದರೂ ಮಕ್ಕಳಿಗೆ ಅಲ್ಪ ಬೆಲೆಯ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ... ಬಡತನದ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು... ದೇವರು ಈ ರೀತಿ ಹಬ್ಬ ಮಾಡಲು ಕಷ್ಟಪಡುವ ಅನೇಕ ಬಡವರಿಗೆ ಶಕ್ತಿ ನೀಡಲಿ....
(ವೀಡಿಯೊ ಕೃಪೆ -ಫೇಸ್ಬುಕ್ )

26/03/2022

ಸತ್ಸಂಗ, ಭಜನೆ, ಅಭಿನವ ಭಾರತಿ ಪ್ರೌಢ ಶಾಲೆ (ಕ. ಮಾ & ಆ.ಮಾ )ಮಂಡ್ಯ

24/03/2022
*ಗುರುಭಕ್ತಿ*  ಇಂದಿನ ಪೀಳಿಗೆಯ ವಿದ್ಯಾರ್ಥಿಗಳಲ್ಲಿ ನಶಿಸುತ್ತಿರುವ ಗುರುಭಕ್ತಿ ಶಿಕ್ಷಣ ವ್ಯವಸ್ಥೆಯ ಕಾರಣವೋ? ಇಲ್ಲವೇ ಪೋಷಕರ     ಮನೋಧೋರಣೆಯೋ?...
23/03/2022

*ಗುರುಭಕ್ತಿ*
ಇಂದಿನ ಪೀಳಿಗೆಯ
ವಿದ್ಯಾರ್ಥಿಗಳಲ್ಲಿ
ನಶಿಸುತ್ತಿರುವ ಗುರುಭಕ್ತಿ
ಶಿಕ್ಷಣ ವ್ಯವಸ್ಥೆಯ ಕಾರಣವೋ?
ಇಲ್ಲವೇ ಪೋಷಕರ
ಮನೋಧೋರಣೆಯೋ?
ಮಾಧ್ಯಮಗಳ ಪ್ರಭಾವವೋ?

ವಿದ್ಯಾರ್ಥಿಗಳಲ್ಲಿ ಗುರುಗಳ ಬಗ್ಗೆ
ಇಲ್ಲ ಕೊಂಚವೂ ಗೌರವ!
ಅಂದಿನ ವಿದ್ಯಾರ್ಥಿಗಳೆಲ್ಲಿ?ಇಂದಿನ
ವಿದ್ಯಾರ್ಥಿಗಳೆಲ್ಲಿ?
ಗುರು ಬರುವಾಗ ತಲೆಬಗ್ಗಿಸಿ ನಡೆಯುತ್ತಿದ್ದೆವು ನಾವು ಆಗ|
ಗುರು ಬರುತ್ತಿದ್ದರೂ ಕಾಣದ
ಹಾಗೆ ಹೋಗುವರು ಈಗ!
ಗುರು ದಂಡನೆಯ ಪ್ರಸಾದವೆನ್ನುತ್ತಿದ್ದರು ಆಗ|
ಗುರು ದಂಡನೆಯ ಪ್ರಮಾದವೆನ್ನುವರು ಈಗ|
ನಯ ವಿನಯ ಸಂಸ್ಕೃತಿಗಳಿಕೆಯೇ
ಮೊದಲ ಸ್ಥಾನದಲ್ಲಿ ಇರುತ್ತಿತ್ತು ಆಗ|
ಅಂಕ ಗಳಿಕೆಯೆ ಮೊದಲ ಸ್ಥಾನ ಪಡೆದಿಹುದು ಈಗ|

ಇಷ್ಟಾದರೂ ಗುರುಗಳನ್ನು ನೆನೆಸಿಕೊಳ್ಳುವುದಿಲ್ಲ ಈಗ| ಗುರುವೆಂಬ ದೈವ ರೂಪದ ಬೆಲೆ ಗೌರವ ಕಡಿಮೆಯಾಗುತ್ತಿರುವುದನ್ನು ನೋಡಿದರೆ ಸಹಿಸಿಕೊಳ್ಳಲಾಗುತ್ತಿಲ್ಲ ನನ್ನ ಮನಕ್ಕೀಗ|
ಬದಲಾಗಿಲ್ಲ ಕಾಲ, ಬದಲಾಗಿರುವುದು ಮನುಜರು ಕೇಳ|

- ಶರತ್ ಕುಮಾರ್. ಬಿ.ಎಸ್
ಶಿಕ್ಷಕರು
ಅಭಿನವ ಭಾರತಿ ಪ್ರೌಢ ಶಾಲೆ, ಮಂಡ್ಯ

ಅಭಿನಂದನೆಗಳು ನಿಸ್ವಾರ್ಥಿ , ಸರಳ , ಅಕ್ಷರ ಸಂತನಿಗೆ ದಕ್ಕಿದ ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿ.ಕಿತ್ತಳೆ ಹಣ್ಣು ಮಾರಾಟ ಮಾಡಿ ತನ್ನೂರಿಗೆ ಶಾಲ...
09/11/2021

ಅಭಿನಂದನೆಗಳು
ನಿಸ್ವಾರ್ಥಿ , ಸರಳ , ಅಕ್ಷರ ಸಂತನಿಗೆ ದಕ್ಕಿದ ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿ.

ಕಿತ್ತಳೆ ಹಣ್ಣು ಮಾರಾಟ ಮಾಡಿ ತನ್ನೂರಿಗೆ ಶಾಲೆ ನಿರ್ಮಿಸಿ ತಾಯಿ ಸರಸ್ವತಿಯ ಸೇವೆಯನ್ನು ಮಾಡುತ್ತಿರುವ ಅಕ್ಷರ ಸಂತ ಶ್ರೀ ಹರೇಕಳ ಹಾಜಬ್ಬ ಅವರು ಇಂದು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಅಭಿನಂದನೆಗಳು.

ಅಕ್ಷರ ಸಂತನಾಗಿ ಸಮಾಜ ಸೇವೆಯನ್ನು ಮಾಡುತ್ತಿರುವ ಹಾಜಬ್ಬ ಅವರು ನಮಗೆಲ್ಲ ಮಾದರಿ.
#ಪದ್ಮಶ್ರೀ

06/11/2021

ಸತ್ಸಂಗ, ಭಜನೆ. ಅಭಿನವ ಭಾರತಿ ಪ್ರೌಢ ಶಾಲೆ (ಕ.ಮಾ ಮತ್ತು ಆ.ಮಾ ) ಮಂಡ್ಯ.

23/10/2021
23/10/2021

Anantha dhyan mandira

ಶ್ರೀ ಲಕ್ಷ್ಮಿ ಮಾತ‌Rasi
05/10/2021

ಶ್ರೀ ಲಕ್ಷ್ಮಿ ಮಾತ

Rasi

ಓನಮಃ ಶಿವಾಯ
05/10/2021

ಓನಮಃ ಶಿವಾಯ

02/10/2021

ತಿರುಪತಿ 7 ಬೆಟ್ಟಗಳ ಸಂಪೂರ್ಣ ವಿವರಣೆ ಈ ವಿಡಿಯೋ ಗೋವಿಂದ ಗೋವಿಂದ ಗೋವಿಂದ🙏
🙏
🙏
🙏
🙏
siddarajugowda mandya

29/09/2021

ಬೆಳಕಿಗೋಸ್ಕರ ಮೈಸುಟ್ಟುಕೊಂಡ ಬತ್ತಿ ಯಾರಿಗೂ ಕಾಣಿಸಲಿಲ್ಲ.ಆ ಬೆಳಕಿಗೋಸ್ಕರ ಅಸ್ತಿತ್ವವನ್ನೇ ಕಳೆದುಕೊಂಡ ಎಣ್ಣೆ ಯಾರಿಗೂ ಕಾಣಿಸಲಿಲ್ಲ.ಆ ಬೆಳಕಿಗೋಸ್ಕರ ಆಶ್ರಯ ಕೊಟ್ಟ ಹಣತೆ ಯಾರಿಗೂ ಕಾಣಿಸಲಿಲ್ಲ.ಹಾಗೆಯೇ ಜೀವನ. ಕೆಲವು ಸಲ ನಮ್ಮ ಶ್ರಮ ಇನ್ನೊಬ್ಬರ ಖ್ಯಾತಿಗೆ ಕಾರಣವಾಗುತ್ತದೆ.
🙏ಶುಭೋದಯ💐
🌷ಶುಭ ಬುಧವಾರ🌷

Address


Alerts

Be the first to know and let us send you an email when Shree Vykunta Vartaa posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share